Tag: uttar pradesh

  • ನಮಗೆ ಯಾರಾದ್ರು ತೊಂದರೆ ಕೊಟ್ಟರೆ, ಸುಮ್ಮನೆ ಬಿಡಲ್ಲ: ಪಾಕ್‌ ವಿರುದ್ಧ ಗುಡುಗಿದ ಯೋಗಿ ಆದಿತ್ಯನಾಥ್‌

    ನಮಗೆ ಯಾರಾದ್ರು ತೊಂದರೆ ಕೊಟ್ಟರೆ, ಸುಮ್ಮನೆ ಬಿಡಲ್ಲ: ಪಾಕ್‌ ವಿರುದ್ಧ ಗುಡುಗಿದ ಯೋಗಿ ಆದಿತ್ಯನಾಥ್‌

    ಲಕ್ನೋ: ನಮಗೆ ಯಾರಾದ್ರು ತೊಂದರೆ ಕೊಟ್ಟರೆ, ನಾವು ಸುಮ್ಮನೆ ಬಿಡಲ್ಲ ಎಂದು ಪಾಕಿಸ್ತಾನಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಎಚ್ಚರಿಕೆ ನೀಡಿದ್ದಾರೆ.

    ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯವನ್ನು ಶ್ಲಾಘಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಲಕ್ನೋದಲ್ಲಿ ‘ಭಾರತ್ ಶೌರ್ಯ ತಿರಂಗ ಯಾತ್ರೆ’ಯನ್ನು ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ಭಾರತದ ದಾಳಿಗೆ ವಿಲವಿಲ – ಪಾಕ್‌ನಲ್ಲಿ ಮದರಸಾಗಳ ಮೇಲೆ ನಾಗರಿಕರಿಂದಲೇ ಕಲ್ಲು ತೂರಾಟ

    ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿ, ಅವರಿಗೆ ಕಠಿಣ ಸಂದೇಶ ರವಾನಿಸಿದ್ದಾರೆ.

    ನಮ್ಮ ಸೈನಿಕರು ‘ನಾವು ಯಾರಿಗೂ ತೊಂದರೆ ನೀಡುವುದಿಲ್ಲ. ಆದರೆ ಯಾರಾದರೂ ನಮಗೆ ತೊಂದರೆ ನೀಡಿದರೆ ನಾವು ಅವರನ್ನು ಬಿಡುವುದಿಲ್ಲ’ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಸೈನಿಕರ ಶೌರ್ಯ, ತ್ಯಾಗ ಹಾಡಿಹೊಗಳಿದ ರಷ್ಯಾ ಮಹಿಳೆ

    ಅಮಾನವೀಯ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಎಂ ಯೋಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಇಡೀ ಜಗತ್ತು ಈಗ ಭಾರತೀಯ ಸೈನಿಕರ ಶೌರ್ಯವನ್ನು ಗುರುತಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಆಪರೇಷನ್ ಸಿಂಧೂರಗಾಗಿ ನಾವು ಪ್ರಧಾನಿಗೆ ಧನ್ಯವಾದ ಹೇಳುತ್ತೇವೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಅನಾಗರಿಕ ಕೃತ್ಯವನ್ನು ಇಡೀ ದೇಶ ಮತ್ತು ಜಗತ್ತು ಖಂಡಿಸಿತ್ತು. ಭಯೋತ್ಪಾದನೆಯನ್ನು ಪೋಷಿಸುವ ಪಾಕಿಸ್ತಾನ ಈ ಇಡೀ ಘಟನೆಯಲ್ಲಿ ಮೌನವಾಗಿತ್ತು. ಪಾಕಿಸ್ತಾನ ತನ್ನ ಕ್ರಮದಿಂದ ಪಾಠ ಕಲಿಯದ ನಂತರ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ಪ್ರಾರಂಭಿಸಿತು. ಮೊದಲ ದಿನ 100 ಕ್ಕೂ ಹೆಚ್ಚು ಭಯೋತ್ಪಾದಕರು ಹತ್ಯೆಯಾದರು. ಈ ಭಯೋತ್ಪಾದಕರಿಗೆ ಅವರ ದುಷ್ಕೃತ್ಯಗಳಿಗೆ ಶಿಕ್ಷೆ ವಿಧಿಸಿದ ರೀತಿಯನ್ನು ಇಡೀ ಜಗತ್ತು ನೋಡಿದೆ. ಭಾರತೀಯ ಸೈನಿಕರ ಶೌರ್ಯವನ್ನು ಒಪ್ಪಿಕೊಂಡಿದೆ ಎಂದು ಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ಮರಾಠಿಯಲ್ಲಿ ಮಾತಾಡು, ಇಲ್ಲದಿದ್ರೆ ಹಣ ಕೊಡಲ್ಲ; ಪಿಜ್ಜಾ ಡೆಲಿವರಿ ಬಾಯ್‌ಗೆ ದಂಪತಿ ಧಮ್ಕಿ

    ಬಿಜೆಪಿ ಇಡೀ ದೇಶದಲ್ಲಿ ತಿರಂಗ ಯಾತ್ರೆಯನ್ನು ಆಯೋಜಿಸುತ್ತಿದೆ. ಈ ತಿರಂಗ ಭಾರತದ ಗೌರವ, ಪ್ರತಿಷ್ಠೆ ಮತ್ತು ಹೆಮ್ಮೆಯ ಸಂಕೇತವಾಗಿದೆ. ಈ ತಿರಂಗ ಭಾರತದ ಶೌರ್ಯ ಮತ್ತು ಧೈರ್ಯದ ಸಂಕೇತವಾಗಿದೆ. ಈ ತಿರಂಗ ಮತ್ತು ನಮ್ಮ ಸೈನಿಕರಿಗೆ ನಮ್ಮ ಗೌರವವನ್ನು ತೋರಿಸಲು, ಪ್ರಧಾನಿ ಮೋದಿಜಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ವೇದಿಕೆಯಾಗಲಿದೆ ಎಂದು ಮಾತನಾಡಿದ್ದಾರೆ.

  • ʻಆಪರೇಷನ್‌ ಸಿಂಧೂರʼದಲ್ಲಿ ಬ್ರಹ್ಮೋಸ್‌ ಕ್ಷಿಪಣಿ ಪಾತ್ರ ದೊಡ್ಡದು, ಅನುಮಾನವಿದ್ರೆ ಪಾಕ್‌ನ ಕೇಳಿ: ಯೋಗಿ ಆದಿತ್ಯನಾಥ್

    ʻಆಪರೇಷನ್‌ ಸಿಂಧೂರʼದಲ್ಲಿ ಬ್ರಹ್ಮೋಸ್‌ ಕ್ಷಿಪಣಿ ಪಾತ್ರ ದೊಡ್ಡದು, ಅನುಮಾನವಿದ್ರೆ ಪಾಕ್‌ನ ಕೇಳಿ: ಯೋಗಿ ಆದಿತ್ಯನಾಥ್

    – ಪಾಕಿಸ್ತಾನ ನೆಟ್ಟಗಾಗದ ನಾಯಿ ಬಾಲ ಇದ್ದಂತೆ; ತಿವಿದ ಸಿಎಂ

    ಲಕ್ನೋ: ಆಪರೇಷನ್ ಸಿಂಧೂರ್ ಸಮಯದಲ್ಲಿ ಬ್ರಹ್ಮೋಸ್ ಕ್ಷಿಪಣಿಯ (BrahMos Missile) ಶಕ್ತಿ ಸಾಮರ್ಥ್ಯ ಸ್ಪಷ್ಟವಾಗಿತ್ತು. ಈ ಕಾರ್ಯಾಚರಣೆಯಲ್ಲಿ ಬ್ರಹ್ಮೋಸ್‌ ಕ್ಷಿಪಣಿಯ ಪಾತ್ರ ದೊಡ್ಡದಿದೆ. ಈ ಬಗ್ಗೆ ಯಾರಿಗಾದ್ರೂ ಅನುಮಾನ ಇದ್ದರೆ, ಪಾಕಿಸ್ತಾನವನ್ನ ಕೇಳಿ ಅಂತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಹೇಳಿದ್ದಾರೆ.

    ಲಕ್ನೋದಲ್ಲಿ ರಕ್ಷಣಾ ಕೈಗಾರಿಕಾ ಕಾರಿಡಾರ್‌ನಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ʻಆಪರೇಷನ್ ಸಿಂಧೂರʼ (Operation Sindoor) ಕಾರ್ಯಾಚರಣೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಪಾತ್ರವನ್ನು ಖಚಿತಪಡಿಸಿದರು. ಇದನ್ನೂ ಓದಿ: 300 ಕೋಟಿ ವೆಚ್ಚದ ʻಬ್ರಹ್ಮೋಸ್ʼ ಕ್ಷಿಪಣಿ ಉತ್ಪಾದನಾ ಘಟಕ ಉದ್ಘಾಟನೆ; ವಾರ್ಷಿಕ 100 ಮಿಸೈಲ್‌ ಉತ್ಪಾದನೆ ಗುರಿ

    ಇದೇ ವೇಳೆ ಭಯೋತ್ಪಾದನೆ ಕುರಿತು ಮಾತನಾಡಿದ ಅವರು, ಪಾಕಿಸ್ತಾನ (Pakistan) ಎಂದಿಗೂ ನೆಟ್ಟಗಾಗದ ನಾಯಿಯ ಬಾಲ ಇದ್ದಂತೆ, ಅವರಿಗೆ ಅವರದ್ದೇ ಭಾಷೆಯಲ್ಲೇ ಉತ್ತರಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಅಣ್ವಸ್ತ್ರಗಳಿರೋ ಬೆಟ್ಟದ ಮೇಲೆ ದಾಳಿ – ಬೆದರಿದ ಪಾಕ್‌, ಅಮೆರಿಕಕ್ಕೂ ಶಾಕ್‌!

    ಮುಂದೆ ನಡೆಯುವ ಯಾವುದೇ ಭಯೋತ್ಪಾದನಾ ಕೃತ್ಯವನ್ನು ಯುದ್ಧ ಕೃತ್ಯವೆಂದೇ ಪರಿಗಣಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಭಯೋತ್ಪಾದನೆಯನ್ನ ಸಂಪೂರ್ಣವಾಗಿ ಹತ್ತಿಕ್ಕುವವರೆಗೆ ಇಂತಹ ಸಮಸ್ಯೆಗಳನ್ನ ಪರಿಹರಿಸಲಾಗುವುದಿಲ್ಲ. ಆದ್ದರಿಂದ ಮೋದಿಯವರ ನಾಯಕತ್ವದಲ್ಲಿ ನಾವೆಲ್ಲರೂ ಒಂದೇ ಧ್ವನಿಯಲ್ಲಿ ಭಯೋತ್ಪಾದನೆ ಹತ್ತಿಕ್ಕುವ ನಿಟ್ಟಿನಲ್ಲಿ ಹೋರಾಡಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಆಪರೇಷನ್ ಸಿಂಧೂರ | ಲಷ್ಕರ್ ಮುಖ್ಯಸ್ಥ ಸೇರಿ 140 ಉಗ್ರರು ಉಡೀಸ್

    ಏನಿದು ಆಪರೇಷನ್‌ ಸಿಂಧೂರ?
    ಕಳೆದ ಏಪ್ರಿಲ್‌ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿರುವ ಬೈಸರನ್‌ ಕಣಿವೆಯಲ್ಲಿ ಸೈನಿಕರ ಸೋಗಿನಲ್ಲಿ ಬಂದ ನಾಲ್ವರು ಉಗ್ರರು 26 ಪ್ರವಾಸಿಗರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲೇಬೇಕೆಂದು ಪಣ ತೊಟ್ಟಿದ್ದ ಭಾರತ ಮೇ 7ರ ರಾತ್ರಿ ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರ (PoK)ದ ಮೇಲೆ ʻಆಪರೇಷನ್‌ ಸಿಂಧೂರʼ ಹೆಸರಿನಡಿ ದಾಳಿ ನಡೆಸಿತ್ತು. ಈ ವೇಳೆ ಜೈಶ್‌ ಎ ಮೊಹಮ್ಮದ್‌, ಲಷ್ಕರ್‌ ಎ ತೋಯ್ಬಾ ಉಗ್ರ ಸಂಘಟನೆಗಳ ಪ್ರಧಾನ ಕಚೇರಿ ಸೇರಿದಂತೆ 9 ಅಡಗುತಾಣಗಳ ಮೇಲೆ ದಾಳಿ ನಡೆಸಿತ್ತು.

  • 300 ಕೋಟಿ ವೆಚ್ಚದ ʻಬ್ರಹ್ಮೋಸ್ʼ ಕ್ಷಿಪಣಿ ಉತ್ಪಾದನಾ ಘಟಕ ಉದ್ಘಾಟನೆ; ವಾರ್ಷಿಕ 100 ಮಿಸೈಲ್‌ ಉತ್ಪಾದನೆ ಗುರಿ

    300 ಕೋಟಿ ವೆಚ್ಚದ ʻಬ್ರಹ್ಮೋಸ್ʼ ಕ್ಷಿಪಣಿ ಉತ್ಪಾದನಾ ಘಟಕ ಉದ್ಘಾಟನೆ; ವಾರ್ಷಿಕ 100 ಮಿಸೈಲ್‌ ಉತ್ಪಾದನೆ ಗುರಿ

    – ಇನ್ನೊಂದೇ ವರ್ಷದಲ್ಲಿ ನೆಕ್ಸ್ಟ್‌ ಜನರೇಷನ್‌ ʻಬ್ರಹ್ಮೋಸ್‌ʼ ಮಿಸೈಲ್‌ ಸಿದ್ಧ

    ನವದೆಹಲಿ: ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ತೀವ್ರಗೊಂಡಿರುವ ಹೊತ್ತಿನಲ್ಲೇ ಭಾರತ ರಕ್ಷಣಾ ವಲಯದ ಸಾಮರ್ಥ್ಯ ಬಲಪಡಿಸುವ ನಿಟ್ಟಿನಲ್ಲಿ ಬಹುದೊಡ್ಡ ಹೆಜ್ಜೆಯನ್ನಿಟ್ಟಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ಅವರಿಂದು ಉತ್ತರ ಪ್ರದೇಶದ ಲಕ್ನೋದಲ್ಲಿರುವ ಡಿಫೆನ್ಸ್‌ ಕಾರಿಡಾರ್‌ನಲ್ಲಿ ನಿರ್ಮಿಸಲಾಗಿರುವ ʻಬ್ರಹ್ಮೋಸ್ʼ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಉತ್ಪಾದನಾ ಘಟಕವನ್ನು (BrahMos Production Unit) ವರ್ಚುವಲ್‌ ಮೂಲಕ ಉದ್ಘಾಟಿಸಿದರು.

    ರಕ್ಷಣಾ ವಲಯದ ಸಾಮರ್ಥ್ಯ ಹೆಚ್ಚಿಸಲು ನಿರ್ಮಿಸಲಾಗಿರುವ ಈ ಘಟಕವು ವಾರ್ಷಿಕವಾಗಿ 80 ರಿಂದ 100 ಕ್ಷಿಪಣಿಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ʻಬ್ರಹ್ಮೋಸ್’ (BrahMos) ವಿಶ್ವದ ಅತ್ಯಂತ ವೇಗದ ಮತ್ತು ವಿನಾಶಕಾರಿ ಕ್ಷಿಪಣಿಗಳಲ್ಲಿ ಒಂದಾಗಿದೆ ಎಂಬುದೇ ವಿಶೇಷ. ಹಾಗಾಗಿ ಕ್ಷಿಪಣಿ ಉತ್ಪಾದನಾ ಘಟಕವು ಉತ್ತರ ಪ್ರದೇಶದ ರಕ್ಷಣಾ ವಲಯಕ್ಕೆ ಮಾತ್ರವಲ್ಲದೇ, ಇಡೀ ಭಾರತದ ರಕ್ಷಣಾ ವಲಯಕ್ಕೆ ಬಲ ತುಂಬಲಿದೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರ ಮುಂದುವರಿಯುತ್ತದೆ – ಭಾರತೀಯ ವಾಯುಸೇನೆ ಅಧಿಕೃತ ಘೋಷಣೆ

    2018ರ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ರಕ್ಷಣಾ ಕೈಗಾರಿಕಾ ಕಾರಿಡಾರ್ ಉಪಕ್ರಮದ ಭಾಗವಾಗಿ ಉತ್ಪಾದನಾ ಘಟಕವನ್ನು ಘೋಷಿಸಲಾಯಿತು. ಇದಕ್ಕೆ 2021 ರಲ್ಲಿ ಅಡಿಪಾಯ ಹಾಕಲಾಗಿತ್ತು. ಇದು ಭಾರತ ಸರ್ಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ರಷ್ಯಾದ ಸರ್ಕಾರಿ ಸಂಸ್ಥೆ NPO ಮಶಿನೋಸ್ಟ್ರೋನಿನ್ಯಾ ನಡುವಿನ ಜಂಟಿ ಉದ್ಯಮವಾಗಿದೆ. ಇದರಲ್ಲಿ ಭಾರತದ ಪಾಲು ಶೇ.50.5 ಮತ್ತು ರಷ್ಯಾದ ಪಾಲು ಶೇ.49.5 ರಷ್ಟಿದೆ ಎಂದು ವರದಿಗಳು ತಿಳಿಸಿವೆ.  

    ಈ ಘಟಕವನ್ನು ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದಕ್ಕಾಗಿ ಯುಪಿ ರಾಜ್ಯ ಸರ್ಕಾರವು ಲಕ್ನೋದಲ್ಲಿ 80 ಹೆಕ್ಟೇರ್‌ ಭೂಮಿಯನ್ನು ಉಚಿತವಾಗಿ ನೀಡಿದೆ. ಸುಮಾರು 3 ವರ್ಷಗಳ ದಾಖಲೆ ಸಮಯದ ಬಳಿಕ ಘಟಕ ನಿರ್ಮಾಣ ಪೂರ್ಣಗೊಂಡಿದ್ದು, ರಾಜ್ಯದ ಮೊದಲ ಹೈಟೆಕ್ ರಕ್ಷಣಾ ಉತ್ಪಾದನಾ ಕೇಂದ್ರ ಇದಾಗಲಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ | ಲಷ್ಕರ್ ಮುಖ್ಯಸ್ಥ ಸೇರಿ 140 ಉಗ್ರರು ಉಡೀಸ್

    ಈ ಘಟಕದಲ್ಲಿ ಬ್ರಹ್ಮೋಸ್‌ ಕ್ಷಿಪಣಿ ಜೊತೆಗೆ ಇತರ ರಕ್ಷಣಾ ಉತ್ಪನ್ನಗಳು ಹಾಗೂ ಏರೋಸ್ಪೇಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳನ್ನೂ ತಯಾರಿಸಲಾಗುತ್ತದೆ. ಸುಮಾರು 500 ಮುಖ್ಯ ಇಂಜಿನಿಯರ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿ ಕೆಲಸ ನಿರ್ವಹಿಸಲಿದ್ದು, ಸಾವಿರಾರು ಮಂದಿ ಸಹ ಸಿಬ್ಬಂದಿಗಳೂ ಸಹ ಇರಲಿದ್ದಾರೆ. ಇದನ್ನೂ ಓದಿ: 6 ವರ್ಷಗಳ ಬಳಿಕ ಪುಲ್ವಾಮಾ ದಾಳಿಯಲ್ಲಿ ತನ್ನ ಪಾತ್ರ ಒಪ್ಪಿಕೊಂಡ ಕುತಂತ್ರಿ ಪಾಕ್‌

    1 ವರ್ಷದಲ್ಲಿ ನೆಕ್ಸ್ಟ್‌ ಜನರೇಷನ್‌ ಮಿಸೈಲ್‌ ಸಿದ್ಧ:
    ಸದ್ಯಕ್ಕೆ ವಾರ್ಷಿಕವಾಗಿ 80 ರಿಂದ 100 ಬ್ರಹ್ಮೋಸ್‌ ಮಿಸೈಲ್‌ ತಯಾರಿಸುವ ಗುರಿಯನ್ನು ಘಟಕ ಹಾಕಿಕೊಂಡಿದೆ. ಜೊತೆಗೆ ಇನ್ನೊಂದು ವರ್ಷದಲ್ಲಿ ಮುಂದಿನ ತಲೆಮಾರಿನ ಕ್ಷಿಪಣಿ ಸಿದ್ಧಪಡಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಪ್ರಸ್ತುತ ಬ್ರಹ್ಮೋಸ್ ಕ್ಷಿಪಣಿ 2,900 ಕೆಜಿ ತೂಗುತ್ತದೆ. ಆದ್ರೆ ಮುಂದಿನ ಪೀಳಿಗೆಯ ಬ್ರಹ್ಮೋಸ್‌ ಕ್ಷಿಪಣಿ 1,290 ಕೆಜಿ ತೂಕ ಹೊಂದಿರಲಿದ್ದು, ದಾಳಿಯ ವ್ಯಾಪ್ತಿಯು 300 ಕಿಮೀ ಗಿಂತಲೂ ಹೆಚ್ಚಿರಲಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: Ceasefire | ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಕರೆಯುವಂತೆ ಕಾಂಗ್ರೆಸ್‌ ಆಗ್ರಹ

    ಪಾಕ್‌ಗೆ ನಡುಕ ಶುರುವಾಗಿದ್ದೇಕೆ?
    2022ರ ಮಾರ್ಚ್‌ 9ರ ಸಂಜೆಯ ವೇಳೆ ಹರಿಯಾಣದ ಸಿರ್ಸಾದಿಂದ ಬ್ರಹ್ಮೋಸ್‌ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ ಕೇವಲ 3 ನಿಮಿಷ 44 ಸೆಕೆಂಡ್‌ನಲ್ಲಿ 124 ಕಿಮೀ ಕ್ರಮಿಸಿ ಪಾಕಿಸ್ತಾನದ ಭೂ ಪ್ರದೇಶದ ಒಳಗಡೆ ಬಿದ್ದಿತ್ತು. ಈ ಘಟನೆಯಿಂದ ಯಾವುದೇ ಸಾವು, ನೋವು ಸಂಭವಿಸದೇ ಇದ್ದರೂ ಈ ಕ್ಷಿಪಣಿಯನ್ನು ತಡೆಯಲು ಪಾಕಿಸ್ತಾನದಿಂದ ಸಾಧ್ಯವಾಗಿರಲಿಲ್ಲ. ಇದೀಗ ಯುದ್ಧದ ಛಾಯೆ ಕವಿದಿರುವ ಹೊತ್ತಿನಲ್ಲೇ ಭಾರತ ಬ್ರಹ್ಮೋಸ್‌ ಕ್ಷಿಪಣಿ ಘಟಕ ಉದ್ಘಾಟಿಸುತ್ತಿರುವುದು ಪಾಕ್‌ಗೆ ನಡುಕ ಉಂಟಾಗುವಂತೆ ಮಾಡಿದೆ. ಇದನ್ನೂ ಓದಿ: ಪಾಕ್‌ನ ಶೆಲ್‌ ತುಣುಕು ಅಮ್ಮನ ಮುಖವನ್ನೇ ಸೀಳಿತು – ʻಪಬ್ಲಿಕ್‌ ಟಿವಿʼ ಬಳಿ ಬಾರಾಮುಲ್ಲಾ ಜನರ ಅಳಲು

  • ಡುಮ್ಮ ಅಂದಿದ್ದಕ್ಕೆ ಅತಿಥಿಗಳಿಗೆ ಗುಂಡಿಕ್ಕಿದ ಭೂಪ

    ಡುಮ್ಮ ಅಂದಿದ್ದಕ್ಕೆ ಅತಿಥಿಗಳಿಗೆ ಗುಂಡಿಕ್ಕಿದ ಭೂಪ

    ಲಕ್ನೋ (ಗೋರಖ್‌ಪುರ): ತನ್ನನ್ನು ಡುಮ್ಮ, ಬೊಬ್ಬು ಎಂದು ಕರೆದಿದ್ದಕ್ಕೆ ಕೋಪಗೊಂಡ ಯುವಕ, ಇಬ್ಬರು ಅತಿಥಿಗಳ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರ (Gorakhpur) ಜಿಲ್ಲೆಯಲ್ಲಿ ನಡೆದಿದೆ.

    ಘಟನೆ ನಡೆದ ಮರುದಿನ ಖಜ್ನಿ ಪೊಲೀಸ್ ಠಾಣೆಯಲ್ಲಿ (Khajni police Station) ದೂರು ದಾಖಲಾಗಿದ್ದು, ನಂತರ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಬೆಲ್‌ಘಾಟ್ ಪ್ರದೇಶದ ನಿವಾಸಿ ಅರ್ಜುನ್ ಚೌಹಾಣ್ ಬಂಧಿತ ಆರೋಪಿ. ಇದನ್ನೂ ಓದಿ: ನಾಗ್ರೋಟಾದಲ್ಲಿ ಭಾರತೀಯ ಸೇನೆ & ಶಂಕಿತ ಉಗ್ರರ ನಡುವೆ ಗುಂಡಿನ ಚಕಮಕಿ

    ಅಷ್ಟಕ್ಕೂ ಆಗಿದ್ದೇನು?
    ಅರ್ಜುನ್‌ ಇತ್ತೀಚೆಗೆ ತನ್ನ ಚಿಕ್ಕಪ್ಪನೊಂದಿಗೆ ದೇವಸ್ಥಾನವೊಂದರಲ್ಲಿ ನಡೆಯುತ್ತಿದ್ದ ಔತಣಕೂಟಕ್ಕೆ ಹೋಗಿದ್ದ. ಈ ವೇಳೆ ಮಂಜರಿಯಾದ ಅನಿಲ್ ಚೌಹಾಣ್ ಮತ್ತು ಶುಭಮ್ ಚೌಹಾಣ್ ಎಂಬ ಇಬ್ಬರು ಅತಿಥಿಗಳು ತಾನು ಡುಮ್ಮ, ಬೊಜ್ಜು ಅಂತ ಸಿಕ್ಕಾಪಟ್ಟೆ ಅಪಹಾಸ್ಯ ಮಾಡುತ್ತಿದ್ದರು. ಇದರಿಂದ ಕೋಪಗೊಂಡ ಅರ್ಜುನ್‌ ತನ್ನ ಸ್ನೇಹಿತ ಆಸಿಫ್‌ ಖಾನ್‌ ಜೊತೆಗೆ ಆ ಇಬ್ಬರು ಅತಿಥಿಗಳನ್ನ ಹಿಂಬಾಲಿಸಿದ್ದ. ಗೋರಖ್‌ಪುರದ ತೆನುವಾ ಟೋಲ್ ಪ್ಲಾಜಾ ಬಳಿ ಕಾರು ನಿಲ್ಲಿಸಿ, ಇಬ್ಬರನ್ನೂ ಹೊರಗೆಳೆದು ಗುಂಡು ಹಾರಿಸಿ ಪರಾರಿಯಾಗಿದ್ದ ಎಂದು ದಕ್ಷಿಣ ಎಸ್ಪಿ ಜಿತೇಂದ್ರ ಕುಮಾರ್‌ ತಿಳಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ಭಯೋತ್ಪಾದಕ ದಾಳಿಯನ್ನು ಚೀನಾ ಖಂಡಿಸುತ್ತದೆ: ಅಜಿತ್‌ ದೋವಲ್‌ಗೆ ಫೋನ್‌ ಕರೆಯಲ್ಲಿ ಚೀನಾ ಸ್ಪಷ್ಟನೆ

    ಗುಂಡೇಟು ಬಿದ್ದಿದ್ದ ಇಬ್ಬರನ್ನೂ ಅಲ್ಲಿನ ದಾರಿಹೋಕರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದರು, ಹೆಚ್ಚುವರಿ ಚಿಕಿತ್ಸೆಗಾಗಿ ಅವರನ್ನ ಗೋರಖ್‌ ಪುರ ಜಿಲ್ಲಾ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಸದ್ಯ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಶುಭಂ ಚೌಹಾಣ್ ಅವರ ತಂದೆಯ ದೂರಿನ ಆಧಾರದ ಮೇಲೆ, ಎಫ್‌ಐಆರ್ ದಾಖಲಿಸಲಾಗಿದ್ದು, ಶುಕ್ರವಾರ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಪದ್ಮಶ್ರೀ ಪುರಸ್ಕೃತ ಡಾ.ಸುಬ್ಬಣ್ಣ ಅಯ್ಯಪ್ಪನ್ ನಿಗೂಢ ಸಾವು – ಕಾವೇರಿ ನದಿಯಲ್ಲಿ ಶವ ಪತ್ತೆ

  • ಗಡಿಯಲ್ಲಿ ಬುಲ್ಡೋಜರ್ ಘರ್ಜನೆ – 28 ಮದರಸಾ, 9 ಮಸೀದಿ, 6 ದೇವಾಲಯ, 1 ಈದ್ಗಾ ನೆಲಸಮ

    ಗಡಿಯಲ್ಲಿ ಬುಲ್ಡೋಜರ್ ಘರ್ಜನೆ – 28 ಮದರಸಾ, 9 ಮಸೀದಿ, 6 ದೇವಾಲಯ, 1 ಈದ್ಗಾ ನೆಲಸಮ

    ಲಕ್ನೋ: ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಸೂಚನೆ ಮೇರೆಗೆ ಉತ್ತರ ಪ್ರದೇಶದ ನೇಪಾಳ ಗಡಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಧಾರ್ಮಿಕ ಕಟ್ಟಡಗಳ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ (Bulldozers Actions) ನಡೆಸಲಾಗಿದೆ.

    ಸ್ಥಳೀಯ ಜಿಲ್ಲಾ ಮತ್ತು ಪೊಲೀಸ್ ಆಡಳಿತವು ಶ್ರಾವಸ್ತಿ, ಬಲರಾಮ್‌ಪುರ, ಬಹ್ರೈಚ್, ಮಹಾರಾಜ್‌ಗಂಜ್ ಮತ್ತು ಲಖಿಂಪುರ ಜಿಲ್ಲೆಗಳಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿವಿಧೆಡೆ 28 ಮದರಸಾಗಳು (Madrasas), 9 ಮಸೀದಿಗಳು (Mosques), 6 ದೇವಾಲಯಗಳು, 1 ಈದ್ಗಾವನ್ನ ನೆಲಸಮಗೊಳಿಸಲಾಗಿದೆ. ಇದನ್ನೂ ಓದಿ: ಭಾರತ-ಪಾಕ್ ಉದ್ವಿಗ್ನ ಸ್ಥಿತಿ; ದೆಹಲಿ ಏರ್‌ಪೋರ್ಟ್‌ನಲ್ಲಿ 138 ವಿಮಾನ ಹಾರಾಟ ರದ್ದು

    ಅಕ್ರಮ ಮದರಸಾಗಳು ಧ್ವಂಸ
    ರಾಜ್ಯದಲ್ಲಿ ನಡೆದ ಅತಿದೊಡ್ಡ ಬುಲ್ದೋಜರ್‌ ಕಾರ್ಯಾಚರಣೆ ಇದಾಗಿದ್ದು, ಶ್ರಾವಸ್ತಿ ಜಿಲ್ಲೆಯ ಭಗವಾನ್‌ಪುರ ಭೈಸಾಹಿ, ಮಹಾರಾಜ್‌ಗಂಜ್‌, ಪೋಖರ್ಭಿಂಡಾ, ತಹಸಿಲ್, ಸೀತಾಲಪುರ ಗ್ರಾಮಗಳು ಸೇರಿದಂತೆ ವಿವಿಧೆಡೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ 28 ಮದರಸಾಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೇ ಕೆಲ ಮದರಸಾಗಳಿಗೆ ಬೀಗ ಜಡಿಯಲಾಗಿದೆ. ಜೊತೆಗೆ ಬಲರಾಮ್‌ಪುರ, ಬಹ್ರೈಚ್, ಮಹಾರಾಜ್‌ಗಂಜ್ ಮತ್ತು ಲಖಿಂಪುರ ಖೇರಿಗಳಲ್ಲಿನ 9 ಮಸೀದಿಗಳು, 6 ದೇವಾಲಯಗಳು ಮತ್ತು 1 ಈದ್ಗಾ ವನ್ನ ತೆರವುಗೊಳಿಸಲಾಗಿದೆ ಎಂದು ಶ್ರಾವಸ್ತಿ ಜಿಲ್ಲಾಡಳಿತ ತಿಳಿಸಿದೆ. ಇದನ್ನೂ ಓದಿ:  ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಬೃಹತ್‌ ಕಾರ್ಯಾಚರಣೆ – 74 ಬುಲ್ಡೋಜರ್, 200 ಟ್ರಕ್, 1800 ಕಾರ್ಮಿಕರು, 3000 ಪೊಲೀಸರ ಬಳಕೆ

    ಕಳೆದ ಏ.22ರಂದು ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಬೆನ್ನಲ್ಲೇ ಗುಜರಾತ್‌ನಲ್ಲಿ (Gujarat) ಅಕ್ರಮ ವಲಸಿಗರ ವಿರುದ್ಧ ಬೃಹತ್‌ ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗಿತ್ತು. ದೇಶದಲ್ಲೇ ನಡೆದ ಅತಿ ದೊಡ್ಡ ಬುಲ್ಡೋಜರ್‌ ಕಾರ್ಯಾಚರಣೆ ಇದಾಗಿತ್ತು. 74 ಬುಲ್ಡೋಜರ್‌ಗಳು, 200 ಟ್ರಕ್‌ಗಳು, 1,800 ಕಾರ್ಮಿಕರು, 3000 ಪೊಲೀಸ್‌ ಅಧಿಕಾರಿಗಳು ಆಪರೇಷನ್‌ನ ಭಾಗವಾಗಿದ್ದರು. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ಕೇಸ್ | NIAಗೆ ವಹಿಸಲು ರಾಜ್ಯಪಾಲರಿಗೆ ಮನವಿ, ಕರಾವಳಿಗೆ ಪಾಕ್ ಸಂಪರ್ಕವಿದೆ: ಅಶೋಕ್

  • ಮೇ 11ರಂದು ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕ ಉದ್ಘಾಟನೆ – ಪಾಕ್‌ಗೆ ಶುರುವಾಯ್ತು ನಡುಕ

    ಮೇ 11ರಂದು ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕ ಉದ್ಘಾಟನೆ – ಪಾಕ್‌ಗೆ ಶುರುವಾಯ್ತು ನಡುಕ

    ನವದೆಹಲಿ: ಭಾರತದ ʻಆಪರೇಷನ್‌ ಸಿಂಧೂರʼಕ್ಕೆ (Operation Sindoor) ತತ್ತರಿಸಿರುವ ಪಾಕ್‌ ಪ್ರತಿದಾಳಿಗೆ ಹೊಂಚು ಹಾಕಿದೆ. ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ದೇಶದ ಕಾರ್ಯತಂತ್ರ ಸಾಮರ್ಥ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತ ಬಹುದೊಡ್ಡ ಹೆಜ್ಜೆಯನ್ನಿಟ್ಟಿದೆ. ಶಕ್ತಿಶಾಲಿ ಅಸ್ತ್ರವಾದ ಬ್ರಹ್ಮೋಸ್‌ ಕ್ಷಿಪಣಿ ಉತ್ಪಾದನಾ ಘಟಕ (BrahMos Missile Manufacturing Unit) ಲಕ್ನೋದಲ್ಲಿ ತಲೆಎತ್ತಿದ್ದು, ಮೇ 11ರಂದು ಉದ್ಘಾಟಿಲಾಗುತ್ತಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

    ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ʻಬ್ರಹ್ಮೋಸ್ʼ ವಿಶ್ವದ ಅತ್ಯಂತ ವೇಗದ ಮತ್ತು ವಿನಾಶಕಾರಿ ಕ್ಷಿಪಣಿಗಳಲ್ಲಿ ಒಂದಾಗಿದೆ ಎಂಬುದೇ ವಿಶೇಷ. ಹಾಗಾಗಿ ಕ್ಷಿಪಣಿ ಉತ್ಪಾದನಾ ಘಟಕವು ಉತ್ತರ ಪ್ರದೇಶದ ರಕ್ಷಣಾ ವಲಯಕ್ಕೆ ಮಾತ್ರವಲ್ಲದೇ, ಇಡೀ ಭಾರತದ ರಕ್ಷಣಾ ವಲಯಕ್ಕೆ ಬಲ ತುಂಬಲಿದೆ. ಇದನ್ನೂ ಓದಿ: ಬಾಲಾಕೋಟ್‌, ಬ್ರಹ್ಮೋಸ್‌ ಬಳಿಕ ʻಆಪರೇಷನ್‌ ಸಿಂಧೂರʼ – ಪಾಕ್‌ ನಂಬಿದ್ದ ʻಮೇಡ್‌ ಇನ್‌ ಚೈನಾʼ ರೆಡಾರ್‌ ಫೇಲ್‌

    ಇದು ಭಾರತ ಸರ್ಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ರಷ್ಯಾದ ಸರ್ಕಾರಿ ಸಂಸ್ಥೆ NPO ಮಶಿನೋಸ್ಟ್ರೋನಿನ್ಯಾ ನಡುವಿನ ಜಂಟಿ ಉದ್ಯಮವಾಗಿದೆ. ಇದರಲ್ಲಿ ಭಾರತದ ಪಾಲು ಶೇ.50.5 ಮತ್ತು ರಷ್ಯಾದ ಪಾಲು ಶೇ.49.5 ರಷ್ಟಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: JEM ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ ಕುಟುಂಬದ 10 ಜನ ಸೇರಿ 14 ಮಂದಿ ಹತ್ಯೆ

    ಈ ಕುರಿತು ಮಾಹಿತಿ ನೀಡಿರುವ UPEIDAನ ಹೆಚ್ಚುವರಿ ಸಿಇಓ ಹರಿ ಪ್ರತಾಪ್ ಶಾಹಿ (Shrihari Pratap Shahi), ಈ ಘಟಕವನ್ನು ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದಕ್ಕಾಗಿ ಯುಪಿ ರಾಜ್ಯ ಸರ್ಕಾರವು ಲಕ್ನೋದಲ್ಲಿ 80 ಹೆಕ್ಟೇರ್‌ ಭೂಮಿಯನ್ನು ಉಚಿತವಾಗಿ ನೀಡಿದೆ. ಸುಮಾರು ಮೂರು ವರ್ಷಗಳ ದಾಖಲೆ ಸಮಯದ ಬಳಿಕ ಘಟಕ ನಿರ್ಮಾಣ ಪೂರ್ಣಗೊಂಡಿದ್ದು, ರಾಜ್ಯದ ಮೊದಲ ಹೈಟೆಕ್ ರಕ್ಷಣಾ ಉತ್ಪಾದನಾ ಕೇಂದ್ರ ಇದಾಗಲಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: Operation Sindoor – ಪಾಕ್‌ ಉಗ್ರರ 9 ನೆಲೆಗಳ ಮೇಲೆ ಏರ್‌ಸ್ಟ್ರೈಕ್‌

    ಮುಂದುವರಿದು… ಈ ಘಟಕದಲ್ಲಿ ಬ್ರಹ್ಮೋಸ್‌ ಕ್ಷಿಪಣಿ ಜೊತೆಗೆ ಇತರ ರಕ್ಷಣಾ ಉತ್ಪನ್ನಗಳು ಹಾಗೂ ಏರೋಸ್ಪೇಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳನ್ನೂ ತಯಾರಿಸಲಾಗುತ್ತದೆ. ಸುಮಾರು 500 ಮುಖ್ಯ ಇಂಜಿನಿಯರ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿ ಕೆಲಸ ನಿರ್ವಹಿಸಲಿದ್ದು, ಸಾವಿರಾರು ಮಂದಿ ಸಹ ಸಿಬ್ಬಂದಿಗಳೂ ಸಹ ಇರಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ʼಆಪರೇಷನ್‌ ಸಿಂಧೂರ್‌ʼ ಟ್ರೇಡ್‌ ಮಾರ್ಕ್‌ಗಾಗಿ ರಿಲಯನ್ಸ್‌ ಸೇರಿ ಹಲವರಿಂದ ಅರ್ಜಿ 

    ಪಾಕ್‌ಗೆ ಏಕೆ ನಡುಕ?
    2022ರ ಮಾರ್ಚ್‌ 9ರ ಸಂಜೆಯ ವೇಳೆ ಹರ್ಯಾಣದ ಸಿರ್ಸಾದಿಂದ ಬ್ರಹ್ಮೋಸ್‌ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ ಕೇವಲ 3 ನಿಮಿಷ 44 ಸೆಕೆಂಡ್‌ನಲ್ಲಿ 124 ಕಿ.ಮೀ ಕ್ರಮಿಸಿ ಪಾಕಿಸ್ತಾನದ ಭೂ ಪ್ರದೇಶದ ಒಳಗಡೆ ಬಿದ್ದಿತ್ತು. ಈ ಘಟನೆಯಿಂದ ಯಾವುದೇ ಸಾವು, ನೋವು ಸಂಭವಿಸದೇ ಇದ್ದರೂ ಈ ಕ್ಷಿಪಣಿಯನ್ನು ತಡೆಯಲು ಪಾಕಿಸ್ತಾನದಿಂದ ಸಾಧ್ಯವಾಗಿರಲಿಲ್ಲ. ಇದೀಗ ಯುದ್ಧದ ಛಾಯೆ ಕವಿದಿರುವ ಹೊತ್ತಿನಲ್ಲೇ ಭಾರತ ಬ್ರಹ್ಮೋಸ್‌ ಕ್ಷಿಪಣಿ ಘಟಕ ಉದ್ಘಾಟಿಸುತ್ತಿರುವುದು ಪಾಕ್‌ಗೆ ನಡುಕ ಉಂಟಾಗುವಂತೆ ಮಾಡಿದೆ. ಇದನ್ನೂ ಓದಿ: 9 ಉಗ್ರ ಅಡಗು ತಾಣಗಳ ಮಟಾಶ್ – ಯಾವ್ಯಾವ ಪ್ರದೇಶದಲ್ಲಿ ಯಾವ ಉಗ್ರ ಸಂಘಟನೆ ಇತ್ತು? ಅವುಗಳ ಪಾತ್ರ ಏನು?

  • ಸರ್ಕಾರಿ ಕಚೇರಿಗಳಿಗೆ ಸಗಣಿ ಲೇಪಿಸಿ – ಯೋಗಿ ಆದಿತ್ಯನಾಥ್ ಸೂಚನೆ

    ಸರ್ಕಾರಿ ಕಚೇರಿಗಳಿಗೆ ಸಗಣಿ ಲೇಪಿಸಿ – ಯೋಗಿ ಆದಿತ್ಯನಾಥ್ ಸೂಚನೆ

    ಲಕ್ನೋ: ಹೈನುಗಾರಿಕಾ ವಲಯ ಅಭಿವೃದ್ಧಿಗಾಗಿ ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಹೊಸ ಯೋಜನೆಗೆ ಕೈ ಹಾಕಿದ್ದಾರೆ. ಎಲ್ಲಾ ಸರ್ಕಾರಿ ಕಟ್ಟಡದ ಗೋಡೆಗಳಿಗೆ ಹಸು ಸಗಣಿ ಲೇಪಿಸಲು ಸೂಚನೆ ನೀಡಿದ್ದಾರೆ. ಸದ್ಯ ಇದು ರಾಜಕೀಯ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

    ಯೋಗಿ ಆದಿತ್ಯನಾಥ್ ಆದೇಶದ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಎಕ್ಸ್‌ನಲ್ಲಿ ಟೀಕೆ ಮಾಡಿದ್ದಾರೆ. ಗೋಬರ್‍ನಾಮ್ ಬಿಜೆಪಿ ಸರ್ಕಾರದ ಹೊಸ ಸಾಧನೆ ಎಂದು ವ್ಯಂಗ್ಯವಾಡಿದ್ದಾರೆ. ಅಖಿಲೇಶ್ ಯಾದವ್ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ, ಸಮಾಜವಾದಿ ಪಕ್ಷದ ಮುಖ್ಯಸ್ಥರಿಗೆ ಗೋಮಯ ಮತ್ತು ಜಾನುವಾರುಗಳ (Cow) ಬಗ್ಗೆ ದ್ವೇಷವಿದೆ ಎಂದು ಟೀಕಿಸಿದ್ದಾರೆ.

    ಉತ್ತರ ಪ್ರದೇಶದಾದ್ಯಂತ ಸುಮಾರು 7,693 ಗೋಶಾಲೆಗಳಲ್ಲಿ ಇರಿಸಲಾಗಿರುವ 12 ಲಕ್ಷಕ್ಕೂ ಹೆಚ್ಚು ಬಿಡಾಡಿ ದನಗಳಿಂದ ಪ್ರತಿದಿನ ಬೃಹತ್ ಪ್ರಮಾಣದ ಹಸುವಿನ ಸಗಣಿ ಮತ್ತು ಮೂತ್ರ ದೊರೆಯುತ್ತದೆ. ಇದರಿಂದಾಗಿ ಗೋಶಾಲೆಗಳು ಸ್ವಾವಲಂಬಿಯಾಗಲು ಸಹಾಯ ಮಾಡಿದಂತಾಗುತ್ತದೆ. ನೈಸರ್ಗಿಕ ಸಂಪನ್ಮೂಲವನ್ನು ಬಳಸಲು ಹೆಚ್ಚಿನ ಮತ್ತು ಹೊಸ ಮಾರ್ಗಗಳನ್ನು ಕಂಡುಹಿಡಿಯಲು ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.

    ಉತ್ತರ ಪ್ರದೇಶ ಸರ್ಕಾರವು ಬಿಡಾಡಿ ದನಗಳ ಮೇವಿಗೆ ವಾರ್ಷಿಕವಾಗಿ 2,000 ಕೋಟಿ ರೂ. ಹಣ ಖರ್ಚು ಮಾಡುತ್ತದೆ.

  • ಲವ್ವರ್‌ ಜೊತೆ ಪೋಷಕರಿಗೆ ಸಿಕ್ಕಿಬಿದ್ದ ಯುವಕ – ಪಬ್ಲಿಕ್‌ನಲ್ಲೇ ಜೋಡಿಗೆ ಬಿತ್ತು ಗೂಸಾ

    ಲವ್ವರ್‌ ಜೊತೆ ಪೋಷಕರಿಗೆ ಸಿಕ್ಕಿಬಿದ್ದ ಯುವಕ – ಪಬ್ಲಿಕ್‌ನಲ್ಲೇ ಜೋಡಿಗೆ ಬಿತ್ತು ಗೂಸಾ

    – ಮಗನಿಗೆ ಚಪ್ಪಲಿಯಿಂದ ಹೊಡೆದ ತಂದೆ
    – ಯುವತಿಯ ಜಡೆ ಹಿಡಿದು ಎಳೆದಾಡಿದ ತಾಯಿ

    ಲಕ್ನೋ: ಪ್ರೇಯಸಿಯೊಂದಿಗೆ ಚೌಮಿನ್ ಸವಿಯುತ್ತಿದ್ದ ವೇಳೆ ಪೋಷಕರಿಗೆ ಸಿಕ್ಕಿಬಿದ್ದ ಯುವಕ ಹಾಗೂ ಯುವತಿಯ ಪೋಷಕರು ಸಾರ್ವಜನಿಕವಾಗಿ ಥಳಿಸಿದ ಘಟನೆ ಉತ್ತರಪ್ರದೇಶದ (Uttar Pradesh) ಕಾನ್ಪುರದಲ್ಲಿ (Kanpur) ನಡೆದಿದೆ.

    ಗುಜೈನಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಮ್‌ಗೋಪಾಲ್ ಛೇದಕದಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕವಾಗಿ ಥಳಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೋಹಿತ್ (21) ಆತನ 19 ವರ್ಷದ ಪ್ರೇಯಸಿಯೊಂದಿಗೆ ಚೌಮಿನ್ ತಿನ್ನತ್ತಿದ್ದ ವೇಳೆ ಯುವಕನ ಪೋಷಕರಾದ ಶಿವಕರನ್ ಹಾಗೂ ಸುಶೀಲಾ ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಅವರಿಬ್ಬರ ಪ್ರೀತಿ ಬೆಳಕಿಗೆ ಬಂದಿದ್ದು, ಪ್ರೀತಿಯನ್ನು ನಿರಾಕರಿಸಿದ ಪೋಷಕರು ಸಾರ್ವಜನಿಕವಾಗಿ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಶ್ರಫ್‌ ಹತ್ಯೆ ವಿಚಾರ ಪ್ರಸ್ತಾಪಿಸಿ ಸಚಿವರಿಗೆ ಮುಸ್ಲಿಂ ಮುಖಂಡರಿಂದ ಕ್ಲಾಸ್‌ – ಟೇಬಲ್‌ ಬಡಿದು ಆಕ್ರೋಶ

    ಘಟನೆ ಬಳಿಕ ಕೌನ್ಸಿಲಿಂಗ್ ಮಾಡಿ ಪೊಲೀಸರು ಜೋಡಿಯನ್ನು ಬೇರ್ಪಡಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಜೋಡಿಗೆ ತಾಯಿ ಸುಶೀಲಾ ಹೊಡೆದಿದ್ದಾರೆ. ಸ್ಥಳೀಯ ನಿವಾಸಿಗಳು ಮತ್ತು ದಾರಿಹೋಕರು ಇಬ್ಬರನ್ನೂ ಬೇರ್ಪಡಿಸಲು ಪ್ರಯತ್ನಿಸಿದ ವೇಳೆ ಯುವತಿಯ ಕೂದಲನ್ನು ಹಿಡಿದು ಹಲ್ಲೆ ನಡೆಸಿದ್ದಾರೆ. ಅಲ್ಲದೇ ರೋಹಿತ್‌ನ ತಂದೆ ಕೂಡ ಆತನಿಗೆ ಚಪ್ಪಲಿಯಿಂದ ಹೊಡೆದಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಯುರೋಪಿಯನ್ ದೇಶಗಳಿಂದ ಪಾಕ್‌ಗೆ ಶಾಕ್ – ಪಾಕಿಸ್ತಾನ ವಾಯು ಪ್ರದೇಶದಲ್ಲಿ ವಿಮಾನ ಹಾರಾಟಕ್ಕೆ ಹಿಂದೇಟು

  • ನಾನು ಭಾರತದ ಸೊಸೆ, ಇಲ್ಲೇ ಇರುತ್ತೇನೆ: ಸೀಮಾ ಹೈದರ್

    ನಾನು ಭಾರತದ ಸೊಸೆ, ಇಲ್ಲೇ ಇರುತ್ತೇನೆ: ಸೀಮಾ ಹೈದರ್

    ಲಕ್ನೋ: ನಾನು ಪಾಕಿಸ್ತಾನದ ಮಗಳಾಗಿದ್ದೆ. ಆದರೆ ಈಗ ನಾನು ಭಾರತದ ಸೊಸೆಯಾಗಿದ್ದೇನೆ ಎಂದು ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಸೀಮಾ ಹೈದರ್ (Seema Haider) ಹೇಳಿದ್ದಾರೆ.

    ಪಹಲ್ಗಾಮ್ ದಾಳಿ ಬಳಿಕ ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಹಲವಾರು ಮಹತ್ವದ ನಿರ್ಧಾರ ಕೈಗೊಂಡಿದೆ. ಅಲ್ಲದೇ 48 ಗಂಟೆಗಳಲ್ಲಿ ಪಾಕ್ ಪ್ರಜೆಗಳು (Pakistan Citizens) ಭಾರತ ಬಿಟ್ಟು ತೊಲಗುವಂತೆ ಸೂಚನೆ ನೀಡಿದೆ. ಈ ಬೆನ್ನಲ್ಲೇ ಪ್ರಿಯಕರನಿಗೋಸ್ಕರ 4 ಮಕ್ಕಳೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಸೀಮಾ ಹೈದರ್ ಮಾತನಾಡಿರುವ ವೀಡಿಯೋವೊಂದು ವೈರಲ್ ಆಗಿದೆ. ಇದನ್ನೂ ಓದಿ: ಲಂಡನ್‌ನಲ್ಲಿ ಭಾರತೀಯರ ಪ್ರತಿಭಟನೆ ವೇಳೆ ಕತ್ತು ಕೊಯ್ಯುವ ಸನ್ನೆ ಮಾಡಿದ ಪಾಕ್ ಅಧಿಕಾರಿ

    ನಾನು ಪಾಕಿಸ್ತಾನಕ್ಕೆ ಹೋಗಲು ಬಯಸುವುದಿಲ್ಲ. ನಾನು ಭಾರತದಲ್ಲಿ ಉಳಿಯಲು ಅವಕಾಶ ನೀಡುವಂತೆ ಪ್ರಧಾನಿ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡುತ್ತೇನೆ. ಸಚಿನ್ ಮೀನಾ ಅವರನ್ನು ಮದುವೆಯಾದ ಬಳಿಕ ನಾನು ಹಿಂದೂ ಧರ್ಮವನ್ನು ಅಳವಡಿಸಿಕೊಂಡಿದ್ದೇನೆ. ನನಗೆ ಭಾರತದಲ್ಲಿಯೇ ಇರಲು ಬಿಡಿ ಎಂದು ಸೀಮಾ ವೀಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಇರಾನ್‌ನ ಪೋರ್ಟ್ ಸಿಟಿಯಲ್ಲಿ ಬಾಂಬ್ ಸ್ಫೋಟ – ನಾಲ್ವರು ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ

    ಸೀಮಾ ಇನ್ನು ಮುಂದೆ ಪಾಕಿಸ್ತಾನಿ ಪ್ರಜೆಯಲ್ಲ. ಅವರು ಗ್ರೇಟರ್ ನೋಯ್ಡಾ ನಿವಾಸಿ ಸಚಿನ್ ಮೀನಾ ಅವರನ್ನು ವಿವಾಹವಾಗಿದ್ದಾರೆ. ಅಲ್ಲದೇ ಇತ್ತೀಚಿಗೆ ಮಗುವಿಗೆ ಜನ್ಮ ನೀಡಿದರು. ಅವರ ಪೌರತ್ವ ಈಗ ಅವರ ಭಾರತೀಯ ಪತಿಯೊಂದಿಗೆ ಸಂಪರ್ಕ ಹೊಂದಿದೆ. ಆದ್ದರಿಂದ ಕೇಂದ್ರದ ನಿರ್ದೇಶನವು ಅವರಿಗೆ ಅನ್ವಯಿಸಬಾರದು ಎಂದು ವಕೀಲ ಎಪಿ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್‌ಗೆ ಶೋಕಸಾಗರದ ವಿದಾಯ

    ಸೀಮಾ ಹೈದರ್ ಯಾರು?
    ಪಾಕಿಸ್ತಾನದ ಸಿಂಧ್‌ನ 27 ವರ್ಷದ ಮಹಿಳೆ ಸೀಮಾ ಹೈದರ್ ತನ್ನ ಪ್ರೇಮಕಥೆಯಿಂದಾಗಿ ಸುದ್ದಿಯಾಗಿದ್ದರು. ಕೋವಿಡ್-19 ಸಮಯದಲ್ಲಿ, ಆನ್‌ಲೈನ್ ಗೇಮ್ ಪಬ್‌ಜಿ ಮೂಲಕ ಭಾರತದ 22 ವರ್ಷದ ಸಚಿನ್ ಮೀನಾ ಅವರೊಂದಿಗೆ ಸಂಪರ್ಕ ಬೆಳೆಸಿದ್ದರು. ಅವರ ಸ್ನೇಹ ಬಳಿಕ ಪ್ರೀತಿಗೆ ಮಾರ್ಪಟ್ಟಿತು. ಸೀಮಾ ಮೇ 2023ರಲ್ಲಿ ದುಬೈ ಮತ್ತು ನೇಪಾಳದ ಮೂಲಕ 4 ಮಕ್ಕಳೊಂದಿಗೆ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ದರು. ಬಳಿಕ ಪ್ರಿಯಕರ ಸಚಿನ್‌ನನ್ನು ಮದುವೆಯಾಗಿ ಅವರೊಂದಿಗೆ ಗ್ರೇಟರ್ ನೋಯ್ಡಾದಲ್ಲಿ ನೆಲೆಸಿದ್ದಾರೆ. ಇತ್ತೀಚಿಗಷ್ಟೇ ಸಚಿನ್ ಹಾಗೂ ಸೀಮಾ ದಂಪತಿಗೆ ಹೆಣ್ಣು ಮಗು ಜನಿಸಿದೆ. ಇದನ್ನೂ ಓದಿ: ಐಶ್ವರ್ಯ ಗೌಡ ಮನೆ ಮೇಲೆ ಇಡಿ ದಾಳಿ – 2.25 ಕೋಟಿ ನಗದು ಪತ್ತೆ

  • Uttar Pradesh| ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ – ಮೂವರು ಕಾರ್ಮಿಕರು ದುರ್ಮರಣ

    Uttar Pradesh| ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ – ಮೂವರು ಕಾರ್ಮಿಕರು ದುರ್ಮರಣ

    ಲಕ್ನೋ: ಪಟಾಕಿ ಕಾರ್ಖಾನೆಯಲ್ಲಿ (Firecracker Factory) ಏಕಾಏಕಿ ಸ್ಫೋಟ ಸಂಭವಿಸಿದ ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ (Uttar Pradesh) ಸಹರಾನ್‌ಪುರದಲ್ಲಿ (Saharanpur) ಶನಿವಾರ ನಡೆದಿದೆ.

    ಇಲ್ಲಿನ ನಿಹಾಲ್ ಖೇಡಿ ಗ್ರಾಮದಲ್ಲಿ ಬೆಳಗಿನ ಜಾವ 4:30ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಸ್ಫೋಟದ ಶಬ್ದ ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಪ್ರತಿಧ್ವನಿಸಿದೆ. ಘಟನೆ ಸಂಭವಿಸಿದ ವೇಳೆ ಕಾರ್ಖಾನೆಯಲ್ಲಿ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಸಹರಾನ್‌ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೀಶ್ ಬನ್ಸಾಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಡುರಸ್ತೆಯಲ್ಲೇ ಧಗಧಗನೇ ಹೊತ್ತಿ ಉರಿದ ಕಾರು

    ಸ್ಫೋಟದ ಬಗ್ಗೆ ಮಾಹಿತಿ ದೊರೆತ ತಕ್ಷಣ ಪೊಲೀಸ್ ಸಿಬ್ಬಂದಿ, ವಿಧಿವಿಜ್ಞಾನ ತಂಡ ಮತ್ತು ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ಧಾವಿಸಿತು. ಸ್ಫೋಟದ ತೀವ್ರತೆಗೆ ಕಟ್ಟಡ ಕುಸಿದು ಬಿದ್ದಿದೆ. ಘಟನೆ ಸಂಬಂಧ ಕಾರ್ಖಾನೆಯ ಮೂವರು ನಿರ್ವಾಹಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಬನ್ಸಾಲ್ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಅನೇಕ ಅಕ್ರಮ ಪಟಾಕಿ ಕಾರ್ಖಾನೆಗಳು ನಡೆಯುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ನಮ್ಮ ಧರ್ಮ ಯಾರನ್ನ ಕೊಲ್ಲಲೂ ಅನುಮತಿಸಲ್ಲ – ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಕ್ಕೆ ಮುಸ್ಲಿಮರ ಒತ್ತಾಯ