Tag: uttar pradesh

  • ಅಡ್ಡವಾಗಿ ಕಾಲುಗಳು, ಮೂಲೆಯಲ್ಲಿ ತಲೆ – ಸೂಟ್‌ಕೇಸ್‌ನಲ್ಲಿ ಮಹಿಳೆಯ ಮೃತದೇಹ ಪತ್ತೆ

    ಅಡ್ಡವಾಗಿ ಕಾಲುಗಳು, ಮೂಲೆಯಲ್ಲಿ ತಲೆ – ಸೂಟ್‌ಕೇಸ್‌ನಲ್ಲಿ ಮಹಿಳೆಯ ಮೃತದೇಹ ಪತ್ತೆ

    ಲಕ್ನೋ: ಉತ್ತರಪ್ರದೇಶದ (Uttar Pradesh) ಘಾಜಿಯಾಬಾದ್‌ನ (ghaziabad) ಸೂಟ್‌ಕೇಸ್‌ವೊಂದರಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿದೆ.

    ಪೊಲೀಸರ ಮಾಹಿತಿ ಪ್ರಕಾರ, ಮಹಿಳೆಯ ವಯಸ್ಸು ಸುಮಾರು 25-28 ಎಂದು ಅಂದಾಜಿಸಲಾಗಿದ್ದು, ಸಿಂಧೂರ ಹಾಗೂ ಕಾಲು ಉಂಗುರ ಧರಿಸಿರುವುದು ಕಂಡುಬಂದಿದೆ ಎಂದಿದ್ದಾರೆ.ಇದನ್ನೂ ಓದಿ: ಆನೇಕಲ್‌ | ಆಟವಾಡ್ತಿದ್ದಾಗ ಕರೆಂಟ್ ಶಾಕ್‌ ತಗುಲಿ 11 ವರ್ಷದ ಬಾಲಕಿ ಸಾವು

    ಘಾಜಿಯಾಬಾದ್‌ನ ಲೋನಿ ಗಡಿ ಪ್ರದೇಶದ ಕಾಲುವೆಯಲ್ಲಿ ಮಹಿಳೆಯ ಛಿದ್ರಗೊಂಡ ಮೃತದೇಹ ಸೂಟ್‌ಕೇಸ್‌ವೊಂದರಲ್ಲಿ ಪತ್ತೆಯಾಗಿದೆ. ಈ ಕುರಿತು ಮಂಗಳವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

    ಸೂಟ್‌ಕೇಸ್‌ನಲ್ಲಿ ಕಾಲುಗಳನ್ನು ಅಡ್ಡಲಾಗಿ ಇರಿಸಲಾಗಿದ್ದು, ಕೈ ಹಾಗೂ ತಲೆಯನ್ನು ಮೂಲೆಯಲ್ಲಿ ಇರಿಲಾಗಿತ್ತು. ಸದ್ಯ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಮಹಿಳೆಯ ಗುರುತು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.

    ಇದಕ್ಕೂ ಮುನ್ನ ದೆಹಲಿಯ (Dehli) ನೆಹರೂ ವಿಹಾರ್‌ದಲ್ಲಿ 9 ವರ್ಷದ ಬಾಲಕಿಯ ಮೃತದೇಹ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇನ್ನೂ ಬಾಲಕಿ ಆ ದಿನ ತನ್ನ ಸಂಬಂಧಿಕರನ್ನು ಭೇಟಿಯಾಗಲು ಹೋಗಿದ್ದಳು. ಆದರೆ ಅವಳು ಎರಡು ಗಂಟೆ ಕಳೆದರೂ ಮನೆಗೆ ಹಿಂದಿರುಗಲಿಲ್ಲ. ಹೀಗಾಗಿ ನಾವು ಆಕೆಯನ್ನು ಹುಡುಕಲು ಪ್ರಾರಂಭಿಸಿದೆವು ಎಂದು ಕುಟುಂಬ ಮೂಲಗಳು ತಿಳಿಸಿವೆ.ಇದನ್ನೂ ಓದಿ: ಲವ್ವರ್‌ ಜೊತೆಯೇ ಓಡಿ ಹೋಗಬಹುದಿತ್ತು, ನನ್ನ ಅಣ್ಣನನ್ನು ಯಾಕೆ ಕೊಂದ್ಲು?- ಹತ್ಯೆಯಾದ ರಘುವಂಶಿ ಸಹೋದರಿ ಕಣ್ಣೀರು

  • 3 ವರ್ಷದ ಬಾಲಕಿಯ ಮೇಲೆ ರೇಪ್‌ – UP ಪೊಲೀಸರ ಗುಂಡಿಗೆ ಕಾಮಿ ದೀಪಕ್‌ ಬಲಿ

    3 ವರ್ಷದ ಬಾಲಕಿಯ ಮೇಲೆ ರೇಪ್‌ – UP ಪೊಲೀಸರ ಗುಂಡಿಗೆ ಕಾಮಿ ದೀಪಕ್‌ ಬಲಿ

    – ಕೃತ್ಯ ನಡೆದ 24 ಗಂಟೆಯಲ್ಲಿ ಎನ್‌ಕೌಂಟರ್‌

    ಲಕ್ನೋ: ತಾಯಿಯ ಜೊತೆ ಮಲಗಿದ್ದ ಮೂರು ವರ್ಷದ ಬಾಲಕಿಯನ್ನು ಅಪಹರಿಸಿ (Kidnap) ಅತ್ಯಾಚಾರಗೈದ (Rape) ಆರೋಪಿಯನ್ನು ಉತ್ತರ ಪ್ರದೇಶ ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ.

    ನಗರ ಪೊಲೀಸ್ ಠಾಣೆಗಳಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಆರೋಪಿ ದೀಪಕ್ ವರ್ಮಾ ಪೊಲೀಸ್‌ ಎನ್‌ಕೌಂಟರ್‌ಗೆ (Police Encounter) ಬಲಿಯಾಗಿದ್ದಾನೆ.

    ಅಲಂಬಾಗ್ ಮೆಟ್ರೋ ನಿಲ್ದಾಣದ ಬಳಿಯ ಸೇತುವೆಯ ಕೆಳಗೆ ತನ್ನ ತಾಯಿಯೊಂದಿಗೆ ಮಲಗಿದ್ದ ಮೂರು ವರ್ಷದ ಬಾಲಕಿ ಮಲಗಿದ್ದಳು. ಬಾಲಕಿಯನ್ನು ಅಪಹರಿಸಿದ ಬಳಿಕ ದೀಪಕ್ ವರ್ಮಾ ಬೆಳಗ್ಗೆ 3:30ಕ್ಕೆ ಸ್ಕೂಟರ್‌ನಲ್ಲಿ ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

     

    ಕೃತ್ಯ ಬೆಳಕಿಗೆ ಬಂದ ಬೆನ್ನಲ್ಲೇ ಆರೋಪಿ ಬಂಧನಕ್ಕೆ ಪೊಲೀಸ್‌ ತಂಡಗಳನ್ನು ರಚಿಸಲಾಗಿತ್ತು. ಅಷ್ಟೇ ಅಲ್ಲದೇ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿತ್ತು.

    ಸ್ಕೂಟರ್‌ನ ನೋಂದಣಿ ವಿವರಗಳು ಮತ್ತು ಸುಳಿವು ಆಧರಿಸಿ ಕಂಟೋನ್ಮೆಂಟ್‌ನ ದೇವಿ ಖೇಡಾ ಬಳಿ ಪೊಲೀಸರು ದೀಪಕ್‌ನನ್ನು ತಡೆದು ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆತ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

     

    ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಪ್ರಕಟಿಸಿದ್ದಾರೆ.

    ಬಾಲಕಿಯ ಖಾಸಗಿ ಭಾಗಗಳಿಗೆ ತೀವ್ರ ಗಾಯಗಳಾಗಿದ್ದು, ಲೋಕಬಂಧು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕಿಯ ಸ್ಥಿತಿ ಗಂಭೀರವಾಗಿದ್ದು ಗಣನೀಯ ಪ್ರಮಾಣದಲ್ಲಿ ರಕ್ತ ಸೋರಿಕೆಯಾಗಿದೆ. ವೈದ್ಯರು ಪ್ಲಾಸ್ಟಿಕ್‌ ಸರ್ಜರಿಯ ಅಗತ್ಯವಿದೆ ಎಂದು ಹೇಳಿದ್ದಾರೆ.

  • ಮೆಟ್ರೋ ನಿಲ್ದಾಣದ ಕೆಳಗೆ ಪೋಷಕರೊಟ್ಟಿಗೆ ಮಲಗಿದ್ದ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ

    ಮೆಟ್ರೋ ನಿಲ್ದಾಣದ ಕೆಳಗೆ ಪೋಷಕರೊಟ್ಟಿಗೆ ಮಲಗಿದ್ದ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ

    ಲಕ್ನೋ: ಮೆಟ್ರೋ ನಿಲ್ದಾಣದ (Metro Station) ಕೆಳಗೆ ಪೋಷಕರೊಟ್ಟಿಗೆ ಮಲಗಿದ್ದ ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರ ಪ್ರಕಾರ, ಬುಧವಾರ ತಡರಾತ್ರಿ ದಿನಗೂಲಿ ಕಾರ್ಮಿಕರ (Daily Wage Labourers) ಮಗಳಾದ ಬಾಲಕಿ ಮೆಟ್ರೋ ನಿಲ್ದಾಣದ ಕೆಳಗೆ ಮಲಗಿದ್ದಾಗ ಘಟನೆ ನಡೆದಿದೆ. ಆರೋಪಿಯು ಬಾಲಕಿ ಪೋಷಕರೊಟ್ಟಿಗೆ ಮಲಗಿದ್ದಾಗಲೇ ಹೊತ್ತೊಯ್ದು ಏಕಾಂತ ಸ್ಥಳದಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅತ್ಯಂತ ಕರಾಳ ದಿನ, ಡಿಸಿಎಂ ಅಪರಾಧಿ ಅನ್ನೋದು ರಾಜ್ಯಕ್ಕೆ ಗೊತ್ತಿದೆ: ಭಾಸ್ಕರ್‌ ರಾವ್‌ ಆಕ್ರೋಶ

    ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಉಪ ಪೊಲೀಸ್ ಆಯುಕ್ತ (ಕೇಂದ್ರ) ಆಶಿಶ್ ಕುಮಾರ್ ಶ್ರೀವಾಸ್ತವ್ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಬಾಲಕಿಯನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: Stampede Case | ಸಿಎಂ ಸೂಚನೆ ಬೆನ್ನಲ್ಲೇ ನಾಲ್ವರು ಅರೆಸ್ಟ್‌, ಉಳಿದವರು ಎಸ್ಕೇಪ್‌

    ಬಳಿಕ ಮಾತನಾಡಿರುವ ಡಿಸಿಪಿ, ಅಲಂಬಾಗ್ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಘಟನೆ ಬಳಿಕ ಆರೋಪಿಯನ್ನ ಬಂಧಿಸಲು ಐದು ವಿಶೇಷ ತಂಡಗಳನ್ನ ರಚಿಸಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ನಾನು ಚಡ್ಡಿ ಹಾಕಿದ್ನಾ.. ಇಲ್ವಾ ಅಂತ ಬಂದು ನೋಡಿದ್ರಾ? – ನೆಟ್ಟಿಗರ ಕಾಮೆಂಟ್‌ಗೆ ಖುಷಿ ಮುಖರ್ಜಿ ಬೋಲ್ಡ್‌ ಉತ್ತರ

  • ಕೂಲರ್‌ಗಾಗಿ ಬೀಗರ ಮಧ್ಯೆ ಜಗಳ – ಕುರ್ಚಿ ಎಸೆದು ಅಟ್ಟಾಡಿಸಿದ ವಿಡಿಯೋ ವೈರಲ್

    ಕೂಲರ್‌ಗಾಗಿ ಬೀಗರ ಮಧ್ಯೆ ಜಗಳ – ಕುರ್ಚಿ ಎಸೆದು ಅಟ್ಟಾಡಿಸಿದ ವಿಡಿಯೋ ವೈರಲ್

    ಲಕ್ನೋ: ಕೂಲರ್‌ಗಾಗಿ ವರ ಹಾಗೂ ವಧುವಿನ ಕಡೆಯವರು ಕುರ್ಚಿ ಎಸೆದು ಜಗಳವಾಡಿದ ಘಟನೆ ಉತ್ತರಪ್ರದೇಶದ (Uttar Pradesh) ಝಾನ್ಸಿಯಲ್ಲಿ (Jhansi) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಮೇ 28ರಂದು ಝಾನ್ಸಿಯ ನಂದನ್‌ಪುರ ಪ್ರದೇಶದಲ್ಲಿ ಆವಾಸ್ ವಿಕಾಸ್ ನಿವಾಸಿ ಸೋನು ಹಾಗೂ ಸಪ್ನಾ ಎಂಬುವವರ ಮದುವೆ ಸಮಾರಂಭವೊಂದರಲ್ಲಿ ಈ ಘಟನೆ ನಡೆದಿದ್ದು, ಕುರ್ಚಿಯಿಂದ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಇದನ್ನೂ ಓದಿ: ಕ್ಲಾಸ್‌ರೂಮ್‌ನಲ್ಲೇ ಅಪ್ರಾಪ್ತ ವಿದ್ಯಾರ್ಥಿ ಜೊತೆ ಸೆಕ್ಸ್‌ – ಶಿಕ್ಷಕಿ ಬಂಧನ

    ಎಲ್ಲಾ ಕಾರ್ಯಕ್ರಮಗಳು ಮುಗಿದ ಬಳಿಕ ರಾತ್ರಿ ವೇಳೆ ಅತಿಥಿಗಳು ಊಟಕ್ಕೆಂದು ಕುಳಿತಿದ್ದರು. ಇದೇ ವೇಳೆ ಆರಾಮಕ್ಕೆಂದು ಇರಿಸಿದ್ದ ಕೂಲರ್‌ನ ಮುಂದೆ ವರ ಹಾಗೂ ವಧು ಬಂದು ಕುಳಿತುಕೊಂಡರು. ಅವರು ಕುಳಿತಿದ್ದೇ ತಡ ವರನ ಕಡೆಯವರು ಚೂರು ಗಾಳಿಯೂ ಹಾದುಹೋಗದಂತೆ ಕೂಲರ್‌ಗೆ ಅಡ್ಡವಾಗಿ ಕುಳಿತರು. ಈ ಸಮಯದಲ್ಲಿ ಸ್ವಲ್ಪ ಆಕಡೆ ಸರಿದು ಕುಳಿತುಕೊಳ್ಳಲು ಹೇಳಿದಾಗ ಇಬ್ಬರ ಮಧ್ಯೆ ವಾಗ್ವಾದ ಶುರುವಾಯಿತು.

    ಮಾತು ತಾರಕಕ್ಕೇರಿ ವರ ಹಾಗೂ ವಧುವಿನ ಕಡೆಯವರ ಮಧ್ಯೆ ಜಗಳ ಪ್ರಾರಂಭವಾಯಿತು. ಕುರ್ಚಿಗಳನ್ನು ಎಸೆದು ಅಟ್ಟಾಡಿಸಿಕೊಂಡು ಹೊಡೆದಾಡಿ, ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದರು. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬರುವಷ್ಟರಲ್ಲಿ ಜಗಳ ಕಡಿಮೆಯಾಗಿತ್ತು.

    ಮಾರನೇ ದಿನ (ಮೇ 29) ವಧುವಿನ ಕುಟುಂಬಸ್ಥರು ಘಟನೆಯ ವೀಡಿಯೊಗಳೊಂದಿಗೆ ಎಸ್‌ಎಸ್‌ಪಿ ಕಚೇರಿಗೆ ಭೇಟಿ ನೀಡಿದರು. ಈ ಕುರಿತು ವಧುವಿನ ಸಹೋದರ ಮೋಹಿತ್ ಮಾತನಾಡಿ, ನಾವು ಆಹಾರ ಬಡಿಸುತ್ತಿದ್ದಾಗ ಕೆಲವು ಹುಡುಗರು ಕೂಲರ್‌ನ ಮುಂದೆ ಕುಳಿತರು. ವರ ಹಾಗೂ ವಧುವಿಗೆ ಸ್ವಲ್ಪ ಗಾಳಿ ಹೋಗಲು ಬಿಡಿ ಎಂದು ಕೇಳಿದಾಗ ಜಗಳ ಪ್ರಾರಂಭಿಸಿದರು ಎಂದು ಹೇಳಿದ್ದಾರೆ.ಇದನ್ನೂ ಓದಿ: ನಾವು ಭಿಕ್ಷೆ ಪಾತ್ರೆ ಹಿಡಿದು ಬರುತ್ತೇವೆಂದು ಚೀನಾದಂಥ ಮಿತ್ರರಾಷ್ಟ್ರಗಳು ನಿರೀಕ್ಷಸಲ್ಲ: ಪಾಕ್‌ ಪ್ರಧಾನಿ

  • ಮದ್ವೆಗೆ ಹುಡ್ಗಿ ನೋಡಲು ಹೋಗಿದ್ದ ಯುವಕ – ಇಷ್ಟವಿಲ್ಲ ಅಂದಿದ್ದಕ್ಕೆ ಹುಡುಗಿ ತಲೆಗೆ ಗುಂಡಿಟ್ಟ..!

    ಮದ್ವೆಗೆ ಹುಡ್ಗಿ ನೋಡಲು ಹೋಗಿದ್ದ ಯುವಕ – ಇಷ್ಟವಿಲ್ಲ ಅಂದಿದ್ದಕ್ಕೆ ಹುಡುಗಿ ತಲೆಗೆ ಗುಂಡಿಟ್ಟ..!

    ಲಕ್ನೋ: ಮಗ ಅಥವಾ ಮಗಳು ಅರೇಂಜ್ ಮ್ಯಾರೇಜ್ (Arrange Marriage) ಆಗ್ತಿದ್ದಾರೆ ಅಂದ್ರೆ ಮನೆಮಂದಿಗೆ ತುಂಬಾನೇ ಖುಷಿ, ಏಕೆಂದ್ರೆ ನಾವೇ ಇಷ್ಟಪಟ್ಟ ಸಂಬಂಧದೊಂದಿಗೆ ಮದುವೆಯಾಗುತ್ತಿದ್ದಾರೆ, ಇಲ್ಲಿ ಜಾತಿ, ಸಂಪ್ರದಾಯ ಅಂತ ತೊಂದರೆ ಇರುವುದಿಲ್ಲ, ಇನ್ನು ಜಾತಕ ನೋಡಿಸಿದಾಗಲಂತೂ ತುಂಬಾ ಹೊಂದಾಣಿಕೆ ಕಂಡು ಬಂದಿರುತ್ತದೆ, ಮನೆಯವರಿಗೆ ಖುಷಿಯೋ ಖುಷಿ. ಆದ್ರೆ ಹುಡುಗಿ ನೋಡುವ ಶಾಸ್ತ್ರಕ್ಕೆ ಹೋದಾಗ ಆಕೆ ತನನ್ನ ನಿರಾಕರಿಸಿದ್ದಕ್ಕೆ ಹಣೆಗೆ ಗುಂಡು ಹಾರಿಸಿ ಯುವಕ ಎಸ್ಕೇಪ್‌ ಆಗಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಮೈನ್‌ಪುರಿನಲ್ಲಿ ನಡೆದಿದೆ.

    ಹೌದು.. ಎರಡು ಕುಟುಂಬಸ್ಥರು ಹುಡುಗ – ಹುಡುಗಿ ನೋಡುವ ಶಾಸ್ತ್ರ ಇಟ್ಟುಕೊಂಡಿದ್ದರು. ಇಬ್ಬರಿಗೂ ಒಪ್ಪಿಗೆಯಾದ್ರೆ ಮದುವೆ (Marriage) ನಿಶ್ಚಯ ಮಾಡಿಯೇ ಬಿಡೋಣ ಅಂತ ನಿರ್ಧರಿಸಿದ್ದರು, ಆದ್ರೆ ಅಲ್ಲಿ ನಡೆದಿದ್ದೇ ಬೇರೆ. ಹುಡುಗಿ ತನಗೆ ಹುಡುಗ ಇಷ್ಟವಿಲ್ಲ ಅಂತ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಹುಡುಗ ತಲೆಗೆ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ: ಟ್ರಂಪ್‌ ನೀತಿಯನ್ನು ಟೀಕಿಸಿದ ಬೆನ್ನಲ್ಲೇ DOGE ಮುಖ್ಯಸ್ಥ ಪಟ್ಟದಿಂದ ಇಳಿದ ಮಸ್ಕ್‌

    ಹುಡುಗಿಯ ತಲೆಗೆ ಗುಂಡು ಹಾರಿಸಿ (Gun Shoot) ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ ಯುವಕನನ್ನ ಸಗಾಮೈ ಪೊಲೀಸ್ ಠಾಣೆಯ ಎಲಾವ್ ಗ್ರಾಮದ ನಿವಾಸಿ ಅಮುಕ್ ಮಗ ರಾಜೇಶ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಇಬ್ಬರು ಕನ್ನಡಿಗರು ಸೇರಿ 26 ಮೃತ ಪ್ರವಾಸಿಗರ ನೆನಪಿಗೆ ಪಹಲ್ಗಾಮ್‌ನಲ್ಲಿ ಸ್ಮಾರಕ – ಒಮರ್ ಅಬ್ದುಲ್ಲಾ

    ಗುಂಡು ಹಾರಿಸಿದ ನಂತರ, ಆರೋಪಿ ಪಿಸ್ತೂಲ್, ಬೈಕ್ ಮತ್ತು ಮೊಬೈಲ್ ಅನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಭೋಗಾಂವ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹುಡುಗಿ ಕುಟುಂಬಸ್ಥರಿಂದ ಹೇಳಿಕೆ ಪಡೆದಿದ್ದಾರೆ. ನಂತರ ಸ್ಥಳದಿಂದ ಒಂದು ಪಿಸ್ತೂಲ್, ಮೊಬೈಲ್ ಫೋನ್ ಮತ್ತು ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.

    ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಪಾಕ್‌ ಪರ ಬೇಹುಗಾರಿಕೆ – 7 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ರಾಜಸ್ಥಾನದ ಸರ್ಕಾರಿ ನೌಕರ ಅರೆಸ್ಟ್‌

  • ಬಿಷ್ಣೋಯ್ ಗ್ಯಾಂಗ್‌ನ ಶಾರ್ಪ್‌ಶೂಟರ್‌ ನವೀನ್ ಕುಮಾರ್ ಎನ್‌ಕೌಂಟರ್

    ಬಿಷ್ಣೋಯ್ ಗ್ಯಾಂಗ್‌ನ ಶಾರ್ಪ್‌ಶೂಟರ್‌ ನವೀನ್ ಕುಮಾರ್ ಎನ್‌ಕೌಂಟರ್

    ಲಕ್ನೋ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಶಾರ್ಪ್‌ಶೂಟರ್‌ ನವೀನ್ ಕುಮಾರ್‌ನನ್ನು ಉತ್ತರಪ್ರದೇಶ (Uttar Pradesh) ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.

    ಬಿಷ್ಣೋಯ್ ಗ್ಯಾಂಗ್‌ನ (Bishnoi Gang) ಪ್ರಮುಖ ಸದಸ್ಯ, ಗಾಜಿಯಾಬಾದ್‌ನ ಲೋನಿ ನಿವಾಸಿ ನವೀನ್ ಕುಮಾರ್‌ನನ್ನು ಬುಧವಾರ ತಡರಾತ್ರಿ ಹಾಪುರ್‌ನ ಥಾನಾ ಕೊಟ್ವಾಲಿ ಪ್ರದೇಶದಲ್ಲಿ ಉತ್ತರಪ್ರದೇಶ ಪೊಲೀಸರು ಎನ್‌ಕೌಂಟರ್ ಮಾಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಇಬ್ಬರು ಕನ್ನಡಿಗರು ಸೇರಿ 26 ಮೃತ ಪ್ರವಾಸಿಗರ ನೆನಪಿಗೆ ಪಹಲ್ಗಾಮ್‌ನಲ್ಲಿ ಸ್ಮಾರಕ – ಒಮರ್ ಅಬ್ದುಲ್ಲಾ

    ಕೊತ್ವಾಲಿಯಲ್ಲಿ ಬಿಷ್ಣೋಯ್ ಗ್ಯಾಂಗ್ ಇರುವ ಖಚಿತ ಮಾಹಿತಿಯನ್ನಾಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಬಿಷ್ಣೋಯ್ ಗ್ಯಾಂಗ್ ಪೊಲೀಸರ ಮೇಲೆ ಪ್ರತಿದಾಳಿ ಮಾಡಿದ್ದರು. ಇದರಲ್ಲಿ ಗ್ಯಾಂಗ್‌ನ ಶಾರ್ಪ್‌ಶೂಟರ್‌ ನವೀನ್ ಕುಮಾರ್‌ಗೆ ಗಂಭೀರ ಗಾಯಗಳಾಗಿದದವು. ಆತನ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಟ್ರಂಪ್‌ ನೀತಿಯನ್ನು ಟೀಕಿಸಿದ ಬೆನ್ನಲ್ಲೇ DOGE ಮುಖ್ಯಸ್ಥ ಪಟ್ಟದಿಂದ ಇಳಿದ ಮಸ್ಕ್‌

    ನವೀನ್ ಮೇಲೆ ದೆಹಲಿಯ ಥಾನಾ ಫರ್ಶ್ ಬಜಾರ್‌ನಲ್ಲಿ ಕೊಲೆ ಸೇರಿ 20ಕ್ಕೂ ಪ್ರಕರಣ ದಾಖಲಾಗಿದ್ದವು. ಈ ಹಿಂದೆ ದೆಹಲಿಯಲ್ಲಿ ಪ್ರಕರಣದಲ್ಲಿ ನವೀನ್ ಜೈಲು ಶಿಕ್ಷೆ ಅನುಭವಿಸಿದ್ದ. ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ, ನೋಯ್ಡಾ ಘಟಕ ಮತ್ತು ದೆಹಲಿ ಪೊಲೀಸರ ವಿಶೇಷ ಘಟಕದ ಜಂಟಿ ತಂಡಗಳು ಸೇರಿ ಕಾರ್ಯಾಚರಣೆ ಮಾಡಿದೆ.

  • ಯುಪಿಯಲ್ಲಿ ರೇಪಿಸ್ಟ್, ಕೊಲೆಗಾರರ ವಿರುದ್ಧ ‘ಆಪರೇಷನ್ ಲಂಗ್ಡಾ’ – 11 ಕ್ರಿಮಿನಲ್ಸ್ ಕಾಲಿಗೆ ಗುಂಡೇಟು

    ಯುಪಿಯಲ್ಲಿ ರೇಪಿಸ್ಟ್, ಕೊಲೆಗಾರರ ವಿರುದ್ಧ ‘ಆಪರೇಷನ್ ಲಂಗ್ಡಾ’ – 11 ಕ್ರಿಮಿನಲ್ಸ್ ಕಾಲಿಗೆ ಗುಂಡೇಟು

    – ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿರುವವರ ಬೇಟೆಗಿಳಿದ ಯೋಗಿ ಸರ್ಕಾರ

    ಲಕ್ನೋ: ಉತ್ತರ ಪ್ರದೇಶದಲ್ಲಿ `ಆಪರೇಷನ್ ಬುಲ್ಡೋಜರ್’ ಬಳಿಕ ಈಗ `ಆಪರೇಷನ್ ಲಂಗ್ಡಾ’ (Operation Langda) ಸದ್ದು ಮಾಡಿದೆ. ರಾಜ್ಯದಲ್ಲಿ ಕ್ರಿಮಿನಲ್‌ಗಳು, ರೇಪಿಸ್ಟ್‌ಗಳು, ಕೊಲೆಗಾರರು, ದರೋಡೆಕೋರರ ವಿರುದ್ಧ ಸಮರ ಸಾರಿರುವ ಉತ್ತರ ಪ್ರದೇಶ ಪೊಲೀಸರು 8 ನಗರಗಳಲ್ಲಿ 24 ಗಂಟೆಯಲ್ಲಿ 11 ಜನರಿಗೆ ಗುಂಡೇಟು ಹೊಡೆದಿದ್ದಾರೆ.

    ಅಪರಾಧ ಕೃತ್ಯ ನಿಯಂತ್ರಣಕ್ಕೆ ಪೊಲೀಸರು ಆರಂಭಿಸಿರುವ ವಿಶೇಷ ಕಾರ್ಯಾಚರಣೇಯೇ ಆಪರೇಷನ್ ಲಂಗ್ಡಾ. ಪದೇ ಪದೇ ಅಪರಾಧ ಕೃತ್ಯ ಎಸಗುವವರು, ಕ್ರಿಮಿನಲ್‌ಗಳು, ರೌಡಿಗಳು, ಪರೋಡಿಗಳಿಗೆ ಗುಂಡೇಟು ಹೊಡೆಯುವ ಮೂಲಕ ಪೊಲೀಸರು ಭೀತಿ ಹುಟ್ಟಿಸಿದ್ದಾರೆ. ಆಪರೇಷನ್ ಲಂಗ್ಡಾ ಕಾರ್ಯಾಚರಣೆಯಲ್ಲಿ ಕ್ರಿಮಿನಲ್ಸ್‌ಗಳನ್ನು ಕೊಲ್ಲುವುದಿಲ್ಲ. ಬದಲಿಗೆ ಅವರ ಕಾಲಿಗೆ ಗುಂಡೇಟು ಹೊಡೆದು ಅರೆಸ್ಟ್ ಮಾಡಲಾಗುತ್ತದೆ. ಇದನ್ನೂ ಓದಿ: Hassan | ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು

    ಬಂಧಿತರೆಲ್ಲರೂ ಉತ್ತರ ಪ್ರದೇಶ ಪೊಲೀಸರ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿರುವವರೇ ಆಗಿದ್ದಾರೆ. ಈ ಎನ್‌ಕೌಂಟರ್ ವೇಳೆ ಕೆಲ ಕ್ರಿಮಿನಲ್‌ಗಳು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ವಿದೇಶಕ್ಕೆ ಶೂಟಿಂಗ್‌ಗೆ ತೆರಳಲು ಅನುಮತಿ ಕೋರಿ ದರ್ಶನ್ ಅರ್ಜಿ – ಮೇ 30ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

    ಗುಂಡೇಟು ತಿಂದವರು ಯಾರು?
    * ಲಖನೌದಲ್ಲಿ ರೇಪ್ ಆರೋಪಿ.
    * ಘಾಜಿಯಾಬಾದ್‌ನಲ್ಲಿ ಕೊಲೆಗಾರ.
    * ಶಾಮ್ಲಿಯಲ್ಲಿ ಗೋವು ಅಕ್ರಮ ಸಾಗಾಟಗಾರ.
    * ಝಾನ್ಸಿಯಲ್ಲಿ ಕ್ರಿಮಿನಲ್.
    * ಬುಲಂದ್‌ಶಹರ್‌ನಲ್ಲಿ ಅತ್ಯಾಚಾರಿ.
    * ಬಾಘಪತ್‌ನಲ್ಲಿ ದರೋಡೆಕೋರ.
    * ಬಲಿಯಾದಲ್ಲಿ ಎಸ್ಕೇಪ್ ಆಗ್ತಿದ್ದ ಕ್ರಿಮಿನಲ್.
    * ಆಗ್ರಾದಲ್ಲಿ ಕಳ್ಳ.
    * ಜಲೌನ್‌ನಲ್ಲಿ ದರೋಡೆಕೋರ.
    * ಉನ್ನಾವೋದಲ್ಲಿ ರೌಡಿಶೀಟರ್.

  • ಪಾರ್ಕಿಂಗ್‌ ವಿಚಾರಕ್ಕೆ ಕಿರಿಕ್‌ – ನೆರೆಮನೆಯವನ ಮೂಗು ಕಚ್ಚಿದ ಭೂಪ!

    ಪಾರ್ಕಿಂಗ್‌ ವಿಚಾರಕ್ಕೆ ಕಿರಿಕ್‌ – ನೆರೆಮನೆಯವನ ಮೂಗು ಕಚ್ಚಿದ ಭೂಪ!

    ಲಕ್ನೋ: ಪಾರ್ಕಿಂಗ್ (Parking) ಸ್ಥಳದ ವಿಚಾರಕ್ಕೆ ನಡೆದ ವಾಗ್ವಾದದಲ್ಲಿ ಫ್ಲಾಟ್ ಮಾಲೀಕನೊಬ್ಬ ನೆರೆಮನೆಯ ವ್ಯಕ್ತಿಯ ಮೂಗನ್ನು ಕಚ್ಚಿದ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ನಡೆದಿದೆ. ಈ ದೃಶ್ಯ ಅಪಾರ್ಟ್‌ಮೆಂಟ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕಾನ್ಪುರದ ನರಮೌದಲ್ಲಿರುವ ರತನ್ ಪ್ಲಾನೆಟ್ ಅಪಾರ್ಟ್‌ಮೆಂಟ್ ಆವರಣದಲ್ಲಿ ಈ ಘಟನೆ ನಡೆದಿದೆ. ಅಪಾರ್ಟ್‌ಮೆಂಟ್ ಸೊಸೈಟಿಯ ಕಾರ್ಯದರ್ಶಿಯಾಗಿರುವ ರೂಪೇಂದ್ರ ಸಿಂಗ್ ಯಾದವ್ ಮೇಲೆ ಕ್ಷಿತಿಜ್ ಮಿಶ್ರಾ ಹಲ್ಲೆ ಮಾಡಿದ್ದಾನೆ. ತನಗೆ ಮೀಸಲಿಟ್ಟಿರುವ ಸ್ಥಳದಲ್ಲಿ ಬೇರೆ ಕಾರು ನಿಲ್ಲಿಸಿದ್ದಕ್ಕೆ ಮಿಶ್ರಾ ಗಲಾಟೆ ಮಾಡಿ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು 10 ಬಾರಿ ಇರಿದು ಕೊಂದ ಪತಿ

    ಸಿಸಿಟಿವಿಯಲ್ಲಿ ಮಿಶ್ರಾ, ಯಾದವ್ ಅವರ ಕುತ್ತಿಗೆ ಹಿಡಿದು ಮೂಗು ಕಚ್ಚುವುದು ಸೆರೆಯಾಗಿದೆ. ಅಲ್ಲದೇ ದಾಳಿ ವೇಳೆ, ಯಾದವ್ ಎಡವಿ ಬಿದ್ದಿರುವುದು ಮತ್ತು ಅವರ ಶರ್ಟ್ ರಕ್ತಸಿಕ್ತವಾಗಿರುವುದನ್ನು ದೃಶ್ಯದಲ್ಲಿ ಗಮನಿಸಬಹುದಾಗಿದೆ.

    ಘಟನೆಯ ಸ್ವಲ್ಪ ಸಮಯದ ಬಳಿಕ ಯಾದವ್ ಅವರನ್ನು, ಮಕ್ಕಳು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಈ ಸಂಬಂಧ ಬಿಥೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಕಾರವಾರ: ಕಡಲ ತೀರಕ್ಕೆ ತೇಲಿಬಂದ ಹಡಗಿನ ರಾಫ್ಟ್‌ – ಕೇರಳ ಕೊಚ್ಚಿಯಲ್ಲಿ ಮುಳುಗಿದ್ದ ಹಡಗಿನದ್ದಾ?

  • ಪಾಕಿಸ್ತಾನದ ಪರ ಬೇಹುಗಾರಿಕೆ – ಉತ್ತರ ಪ್ರದೇಶದ ಉದ್ಯಮಿ ಬಂಧನ

    ಪಾಕಿಸ್ತಾನದ ಪರ ಬೇಹುಗಾರಿಕೆ – ಉತ್ತರ ಪ್ರದೇಶದ ಉದ್ಯಮಿ ಬಂಧನ

    ಲಕ್ನೋ: ಪಾಕಿಸ್ತಾನದ(Pakistan) ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ(Uttara Pradesh) ರಾಂಪುರದ ಉದ್ಯಮಿಯನ್ನು(Businessman) ಬಂಧಿಸಲಾಗಿದೆ.

    ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್‌ಗಾಗಿ ಗಡಿಯಾಚೆಗಿನ ಕಳ್ಳಸಾಗಣೆ ಮತ್ತು ಬೇಹುಗಾರಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಆಧಾರದ ಮೇಲೆ ಶಹಜಾದ್‌ನನ್ನು ಉತ್ತರಪ್ರದೇಶದ ಎಸ್‌ಟಿಎಫ್(Special Task Force) ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಹಿಳೆ ಕೊಲೆ ಮಾಡಿ ಬೈಕ್ ಅಪಘಾತವೆಂದು ಬಿಂಬಿಸಿದ ಪತಿ, ಮಾವ, ಅತ್ತೆ ಅರೆಸ್ಟ್

    ಶಹಜಾದ್, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದ. ಅಲ್ಲದೇ ಒಂದು ವರ್ಷದಲ್ಲೇ ಹಲವು ಬಾರಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದ. ಗಡಿಯುದ್ದಕ್ಕೂ ಮೇಕಪ್ ವಸ್ತು, ಬಟ್ಟೆ, ಮಸಾಲೆ ಪದಾರ್ಥಗಳು ಮತ್ತು ಇನ್ನಿತರ ವಸ್ತುಗಳನ್ನು ಕಳ್ಳಸಾಗಾಟ ಮಾಡುತ್ತಿದ್ದ ಎಂದು ಎಸ್‌ಟಿಎಫ್ ತಿಳಿಸಿದೆ. ಇದನ್ನೂ ಓದಿ: ಏರೋಸ್ಪೇಸ್ ಎಂಜಿನಿಯರ್ ಸಾವು ಕೇಸ್‌ಗೆ ಟ್ವಿಸ್ಟ್ – 2 ಮಕ್ಕಳ ತಂದೆಯೊಂದಿಗೆ ಪ್ರೇಮ ವೈಫಲ್ಯ

    ಶಹಜಾದ್ ಭಾರತದಲ್ಲಿನ ಐಎಸ್‌ಐ ಏಜೆಂಟ್‌ಗಳಿಗೆ ಹಣ ಮತ್ತು ಭಾರತೀಯ ಸಿಮ್ ಕಾರ್ಡ್‌ಗಳನ್ನು ಒದಗಿಸುತ್ತಿದ್ದ. ರಾಮ್‌ಪುರ ಜಿಲ್ಲೆ ಮತ್ತು ಉತ್ತರ ಪ್ರದೇಶದ ಇತರ ಭಾಗಗಳಿಂದ ಜನರನ್ನು ಐಎಸ್‌ಐಗಾಗಿ ಕೆಲಸ ಮಾಡಲು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ. ಅಲ್ಲದೇ ಐಎಸ್‌ಐಗೆ ತೆರಳುತ್ತಿದ್ದ ಜನರ ವೀಸಾದ ವ್ಯವಸ್ಥೆಯನ್ನು ಐಎಸ್‌ಐ ಏಜೆಂಟ್‌ಗಳೇ ಮಾಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಮಾನ್ಯತಾ ಟೆಕ್‌ ಪಾರ್ಕ್‌ ಜಲಾವೃತ – ಪರ್ಯಾಯ ಮಾರ್ಗ ಬಳಸುವಂತೆ ಮನವಿ

    ಕೆಲದಿನಗಳ ಹಿಂದೆಯಷ್ಟೇ ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ್ದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಬಂಧಿಸಲಾಗಿತ್ತು. `ಟ್ರಾವೆಲ್ ವಿಥ್ ಜೆಒ’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆಸುತ್ತಿದ್ದ ಜ್ಯೋತಿ ಮಲ್ಹೋತ್ರಾ, ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನಿ ಸಿಬ್ಬಂದಿಗೆ ಭದ್ರತೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ನೀಡುತ್ತಿದ್ದಳು ಎಂಬ ಆರೋಪದಡಿ ಬಂಧಿಸಲಾಗಿದೆ.

  • ಶ್ರದ್ಧಾ ವಾಕರ್ ಮಾದರಿ ಮಾಜಿ ಸೈನಿಕನ ಹತ್ಯೆ – ಪ್ರಿಯಕರನ ಜೊತೆ ಸೇರಿ ಪತಿಗೆ ಚಟ್ಟ ಕಟ್ಟಿದ ಪತ್ನಿ

    ಶ್ರದ್ಧಾ ವಾಕರ್ ಮಾದರಿ ಮಾಜಿ ಸೈನಿಕನ ಹತ್ಯೆ – ಪ್ರಿಯಕರನ ಜೊತೆ ಸೇರಿ ಪತಿಗೆ ಚಟ್ಟ ಕಟ್ಟಿದ ಪತ್ನಿ

    ಲಕ್ನೋ: 2022ರಲ್ಲಿ ದೆಹಲಿಯಲ್ಲಿ ನಡೆದಿದ್ದ ಲಿವ್‌ ಇನ್‌ ಗೆಳತಿ ಶ್ರದ್ಧಾವಾಕರ್‌ (Shraddha walkar) ಹತ್ಯೆ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಇದೀಗ ಅದೇ ರೀತಿಯ ಪ್ರಕರಣ ಉತ್ತರ ಪ್ರದೇಶದ (Uttar Pradesh) ಬಾಲಿಯಾ ಜಿಲ್ಲೆಯಲ್ಲಿ ನಡೆದಿದೆ.

    ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಮಾಜಿ ಸೈನಿಕ (Ex-Army Soldier) ಪತಿಯನ್ನ ಹತ್ಯೆ ಮಾಡಿದ್ದಲ್ಲದೇ ದೇಹವನ್ನ 6 ತುಂಡುಗಳಾಗಿ ಕತ್ತರಿಸಿ ವಿವಿಧ ಸ್ಥಳಗಳಲ್ಲಿ ಎಸೆದಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 50 ವರ್ಷದ ಮಹಿಳೆ, ಆಕೆಯ ಪ್ರಿಯಕರ ಮತ್ತು ಇಬ್ಬರು ಸಹಚರರನ್ನ ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಏನಿದು ಕೇಸ್‌?
    ಉತ್ತರ ಪ್ರದೇಶದ ಬಹದ್ದೂರ್‌ ಪುರ ನಿವಾಸಿಯಾಗಿರುವ ಆರೋಪಿ ಮಹಿಳೆ ಮಾಯಾದೇವಿ ಪ್ರಿಯಕರ ಅನಿಲ್‌ ಯಾದವ್‌ ಜೊತೆ ಸೇರಿ ತನ್ನ ಮಾಜಿ ಸೈನಿಕ ಪತಿ ದೇವೇಂದ್ರ ಕುಮಾರ್‌ನನ್ನ ಹತ್ಯೆ ಮಾಡಿದ್ದಾಳೆ. ಈ ಪ್ರಕರಣದಲ್ಲಿ ಇವರಿಬ್ಬರಿಗೆ ಸಹಾಯ ಮಾಡಿದ್ದಕ್ಕಾಗಿ ಸತೀಶ್ ಯಾದವ್ ಮತ್ತು ಮಿಥಿಲೇಶ್ ಇಬ್ಬರು ಸಹಚರರನ್ನೂ ಬಂಧಿಸಲಾಗಿದೆ.

    ಏನಾಗಿತ್ತು?
    ಪೊಲೀಸರ ಮಾಹಿತಿ ಪ್ರಕಾರ, ಕಳೆದ ಮೇ 10 ರಂದು ಉತ್ತರ ಪ್ರದೇಶದ ಖರೀದ್‌ ಗ್ರಾಮದಲ್ಲಿ ಕತ್ತರಿಸಿದ ಶವ ಪತ್ತೆಯಾಗಿತ್ತು. ಒಂದು ಕಡೆ ಕೈ-ಕಾಲುಗಳು ತುಂಡಾಗಿ ಬಿದ್ದಿರುವುದು ಕಂಡುಬಂದಿತ್ತು. 2 ದಿನಗಳ ನಂತರ ಹತ್ತಿರದ ಬಾವಿಯಲ್ಲಿ ತಲೆ, ಕೈಕಾಲುಗಳಿಲ್ಲದ ದೇಹ ಪತ್ತೆಯಾಗಿತ್ತು. ಆದ್ರೆ ಮೃತ ವ್ಯಕ್ತಿಯ ತಲೆ ಇನ್ನೂ ಪತ್ತೆಯಾಗಿಲ್ಲ. ಅದಕ್ಕಾಗಿ ಡೈವರ್‌ಗಳಿಂದ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

    ಇತ್ತ ಪತಿಯನ್ನ ಕೊಂದಿದ್ದ ಮಾಯಾದೇವಿ ಠಾಣೆಗೆ ಬಂದು ನಾಪತ್ತೆ ಆಗಿದ್ದಾರೆಂದು ದೂರು ನೀಡಿದ್ದಳು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಪ್ರಾಥಮಿಕ ವಿಚಾರಣೆ ವೇಳೆ ಮಾಯಾದೇವಿ, ನನ್ನ ಪತಿ ಮಗಳನ್ನು ಕರೆದುಕೊಂಡು ಬರಲು ಬಿಹಾರದ ಬಕ್ಸಾರ್ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದರು, ವಾಪಸ್‌ ಮನೆಗೆ ಬರಲಿಲ್ಲ. ಅವರ ಫೋನ್‌ ಕೂಡ ಸ್ವಿಚ್‌ ಆಫ್‌ ಆಗಿದೆ ಅಂತ ಕಥೆ ಕಟ್ಟಿದ್ದಳು. ಆದ್ರೆ ಮೃತದೇಹ ಪತ್ತೆಯಾದ ನಂತರ ಅನುಮಾನಗೊಂಡ ಪೊಲೀಸರು ಮತ್ತೆ ಪತ್ನಿಯನ್ನ ವಿಚಾರಣೆಗೆ ಒಳಪಡಿಸಿದಾಗ ನಾಟಕ ಬಯಲಾಯಿತು.

    ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಲ್ಲದೇ ಪತಿಯ ತಲೆಯನ್ನ ಘಾಘರ್‌ ನದಿಯಲ್ಲಿ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.