Tag: uttar pradesh

  • Uttar Pradesh | ಸ್ಕೂಲ್ ವ್ಯಾನ್‌ನಲ್ಲಿ 4 ವರ್ಷದ ಬಾಲಕಿ ಮೇಲೆ ರೇಪ್ – ಡ್ರೈವರ್ ಬಂಧನ

    Uttar Pradesh | ಸ್ಕೂಲ್ ವ್ಯಾನ್‌ನಲ್ಲಿ 4 ವರ್ಷದ ಬಾಲಕಿ ಮೇಲೆ ರೇಪ್ – ಡ್ರೈವರ್ ಬಂಧನ

    ಲಕ್ನೋ: ಸ್ಕೂಲ್ ವ್ಯಾನ್‌ನಲ್ಲಿ (School Van) 4 ವರ್ಷದ ಬಾಲಕಿ ಮೇಲೆ ಚಾಲಕ ಅತ್ಯಾಚಾರವೆಸಗಿದ ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದ್ದು, ಆರೋಪಿಯನ್ನು ಯುಪಿ ಪೊಲೀಸರು ಬಂಧಿಸಿದ್ದಾರೆ.

    ಮೊಹಮ್ಮದ್ ಆರಿಫ್ ಬಂಧಿತ ಶಾಲಾ ವಾಹನ ಚಾಲಕ. ಈ ಪ್ರಕರಣದ ತನಿಖೆಗಾಗಿ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಪೂರ್ವ ಪೊಲೀಸ್ ಉಪ ಆಯುಕ್ತ (DCP) ಶಶಾಂಕ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಟೇಕಾಫ್ ಆಗಿ 16 ನಿಮಿಷಕ್ಕೆ ಲ್ಯಾಂಡ್ ಆಯ್ತು ಏರ್ ಇಂಡಿಯಾ ವಿಮಾನ

    ಜುಲೈ 17 ರಂದು ಬಾಲಕಿಯ ತಾಯಿ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನ್ನ 4 ವರ್ಷದ ಮಗಳು ಶಾಲೆಯಲ್ಲಿ ಓದುತ್ತಿದ್ದು, ಸ್ಕೂಲ್ ವ್ಯಾನ್ ಚಾಲಕ ಆರಿಫ್ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಶಾಲಾ ಪ್ರಾಂಶುಪಾಲರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಾಯಿ ಆರೋಪಿಸಿದ್ದಾರೆ. ಇದನ್ನೂ ಓದಿ: ಕಲಬುರಗಿ ಜ್ಯುವೆಲರಿ ಶಾಪ್ ದರೋಡೆ ಕೇಸ್ – 30 ರೂ. ಫೋನ್ ಪೇ ಮಾಡಿ ಸಿಕ್ಕಿಬಿದ್ದ ಖದೀಮರು

    ನನ್ನ ಮಗಳು ಖಾಸಗಿ ಭಾಗದಲ್ಲಿ ನೋವಿನ ಬಗ್ಗೆ ನನಗೆ ತಿಳಿಸಿದ್ದಳು. ಅವಳನ್ನು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದಾಗ ಖಾಸಗಿ ಭಾಗದಲ್ಲಿ ಗಾಯಗಳಾಗಿರುವುದು ಕಂಡುಬಂದಿದೆ. ಈ ಕುರಿತು ನಾನು ಪ್ರಾಂಶುಪಾಲರಿಗೆ ದೂರು ನೀಡಿದ್ದೇನೆ. ಪ್ರಾಂಶುಪಾಲರು ಅದರ ಬಗ್ಗೆ ಮಾತನಾಡುವುದಾಗಿ ಹೇಳಿದರು. ಅಲ್ಲದೇ ದೂರು ನೀಡುವುದರಿಂದ ಮಗುವಿನ ಭವಿಷ್ಯ ಮತ್ತು ಶಾಲೆಯ ಖ್ಯಾತಿ ಹಾಳಾಗುತ್ತದೆ ಎಂದು ಹೇಳಿದ್ದರು. ಅದಾದ ಬಳಿಕವೂ ಎರಡು ದಿನ ಕಾದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಂತರ ಮತ್ತೆ ಚಾಲಕ ಕರೆ ಮಾಡಿ ಮಗಳನ್ನು ಶಾಲಾ ವಾಹನದಲ್ಲಿ ಕಳುಹಿಸುವಂತೆ ಕೇಳಿದಾಗ ಅವನ ಮೇಲೆ ಕೋಪಗೊಂಡೆ. ಈ ವೇಳೆ ಚಾಲಕ ನಮ್ಮ ಮೇಲೆ ದೌರ್ಜನ್ಯ ಎಸಗಿ ಅಪಹರಣದ ಬೆದರಿಕೆ ಹಾಕಿದ್ದಾನೆ. ಇಷ್ಟದರೂ ಶಾಲೆಯ ಆಡಳಿತ ಮಂಡಳಿ ಆತನ ವಿರುದ್ಧ ದೂರು ನೀಡದಂತೆ ಮನವಿ ಮಾಡಿದೆ. ಈ ಬಗ್ಗೆ ನನ್ನ ಬಳಿ ಎಲ್ಲಾ ಸಾಕ್ಷಿಗಳಿವೆ ಎಂದು ಬಾಲಕಿಯ ತಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಆರ್‌ಟಿ ಅರಣ್ಯದಲ್ಲಿ ಪ್ರವಾಸಿಗರಿಗೆ ತಾಯಿ ಚಿರತೆ, ಎರಡು ಮರಿಗಳ ದರ್ಶನ

    ತಾಯಿ ನೀಡಿದ ದೂರಿನ ಆಧಾರದ ಮೇಲೆ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುವುದಾಗಿ ಡಿಸಿಪಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪಾಟ್ನಾ ಆಸ್ಪತ್ರೆಯಲ್ಲಿ ಐಸಿಯುಗೆ ನುಗ್ಗಿ ಗ್ಯಾಂಗ್‌ಸ್ಟರ್‌ ಹತ್ಯೆ – ಐವರು ಆರೋಪಿಗಳು ಕೋಲ್ಕತ್ತಾದಲ್ಲಿ ಅರೆಸ್ಟ್‌

  • Uttar Pradesh | ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – 6 ಜನ ದುರ್ಮರಣ

    Uttar Pradesh | ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – 6 ಜನ ದುರ್ಮರಣ

    ಲಕ್ನೋ: ಲಾರಿಯೊಂದಕ್ಕೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಆರು ಜನ ಸಾವನ್ನಪ್ಪಿರುವ ಘಟನೆ ಮಥುರಾದ (Mathura) ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ (Yamuna Expressway) ನಡೆದಿದೆ.

    ಮೃತರನ್ನು ಹರ್ಲಾಲ್‌ಪುರ ಗ್ರಾಮದ ನಿವಾಸಿ ಧರ್ಮವೀರ್ ಸಿಂಗ್, ಅವರ ಮಕ್ಕಳಾದ ರೋಹಿತ್ ಮತ್ತು ಆರ್ಯನ್, ರೋಹಿತ್‌ನ ಸ್ನೇಹಿತ, ದಲ್ವೀರ್ ಹಾಗೂ ಅವರ ಸಹೋದರ ಪರಾಸ್ ಸಿಂಗ್ ತೋಮರ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಕಿಡ್ನಿ ವೈಫಲ್ಯದಿಂದ ಖ್ಯಾತ ಖಳನಟ ಫಿಶ್ ವೆಂಕಟ್‌ ನಿಧನ

    ಇಂದು (ಶನಿವಾರ) ಬೆಳಿಗ್ಗೆ ಈ ಅವಘಡ ಸಂಭವಿಸಿದೆ. ಇಕೋ ಕಾರಲ್ಲಿ ಧರ್ಮವೀರ್ ಸಿಂಗ್ ದೆಹಲಿಯಿಂದ ಆಗ್ರಾಕ್ಕೆ ತೆರಳುತ್ತಿದ್ದರು. ಈ ವೇಳೆ ಮುಂದೆ ಹೋಗುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಆರು ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 10 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಮತ್ತೊಂದು ಪ್ರಕರಣದಲ್ಲಿ ದೆಹಲಿಯಿಂದ (Dehli) ಮಧ್ಯಪ್ರದೇಶಕ್ಕೆ (Madhya Pradesh) ಹೋಗುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ 8 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಒಂದೇ ಗಂಟೆಯೊಳಗೆ ಎರಡು ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ರೌಡಿಶೀಟರ್ ಕೊಲೆ ಕೇಸ್; ಬಂಧನ ಭೀತಿ – ಕಳೆದೆರಡು ದಿನಗಳಿಂದ ಮನೆಯಲ್ಲಿಲ್ಲ ಬೈರತಿ ಬಸವರಾಜ್

  • ವರದಕ್ಷಿಣೆ ಕಿರುಕುಳ ಆರೋಪ – ದೇಹದ ಮೇಲೆ ಡೆತ್‌ನೋಟ್ ಬರೆದು ಮಹಿಳೆ ಆತ್ಮಹತ್ಯೆ

    ವರದಕ್ಷಿಣೆ ಕಿರುಕುಳ ಆರೋಪ – ದೇಹದ ಮೇಲೆ ಡೆತ್‌ನೋಟ್ ಬರೆದು ಮಹಿಳೆ ಆತ್ಮಹತ್ಯೆ

    ಲಕ್ನೋ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬಳು ತನ್ನ ದೇಹದ ಮೇಲೆಯೇ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ (Uttar Pradesh) ಬಾಗ್‌ಪತ್‌ನಲ್ಲಿ (Baghpat) ನಡೆದಿದೆ.

    ಮನೀಷಾ (28) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಆಕೆ ತೋಳು, ಕಾಲು ಹಾಗೂ ಹೊಟ್ಟೆಯ ಮೇಲೆ ನನ್ನ ಸಾವಿಗೆ ಪತಿ ಹಾಗೂ ಅತ್ತೆಯೇ ಕಾರಣ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಿಮಿಷಾ ಪ್ರಿಯಾರನ್ನ ಸುರಕ್ಷಿತವಾಗಿ ವಾಪಸ್ ಕರೆತರಲು ಶಕ್ತಿಮೀರಿ ಪ್ರಯತ್ನ – ‘ಸುಪ್ರೀಂ’ಗೆ ಕೇಂದ್ರದಿಂದ ಮಾಹಿತಿ

    ಮನೀಷಾ 2023ರಲ್ಲಿ ನೋಯ್ಡಾ (Noida) ನಿವಾಸಿ ಕುಂದನ್ ಅವರನ್ನು ವಿವಾಹವಾಗಿದ್ದರು. ಮದುವೆಯಾದ ಕೆಲ ತಿಂಗಳಲ್ಲೇ ಪತಿ ಹಾಗೂ ಅತ್ತೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಬರೆದಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ವಿದ್ಯುತ್ ಶಾಕ್‍ಗೆ ನವವಿವಾಹಿತ ಲೈನ್‍ಮೆನ್ ಬಲಿ

    ಅಲ್ಲದೇ ಮನೀಷಾ ವೀಡಿಯೋ ಮೂಲಕವು ಕಿರುಕುಳದ ಕ್ರೂರತೆ ಬಗ್ಗೆ ವಿವರಿಸಿದ್ದಾರೆ. ಈ ವೀಡಿಯೋ ಕ್ಲಿಪ್‌ನಲ್ಲಿ ಮನೀಷಾ ಅಳುತ್ತಾ ತನ್ನ ಪತಿ, ಅವರ ತಾಯಿ, ತಂದೆ ಮತ್ತು ಸಹೋದರ ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಮದುವೆ ಸಂದರ್ಭದಲ್ಲಿ ಮನೀಷಾ ಕುಟುಂಬಸ್ಥರು 20 ಲಕ್ಷ ರೂ. ಖರ್ಚು ಮಾಡಿದ್ದರು. ಅಲ್ಲದೇ ವರದಕ್ಷಿಣೆಯಾಗಿ ಬುಲೆಟ್ ಬೈಕ್ ಸಹ ನೀಡಿದ್ದರು. ಆದರೆ ಪತಿ ಮನೆಯವರು ಪದೇ ಪದೇ ಕಾರು ಮತ್ತು ಹಣವನ್ನು ಕೇಳುತ್ತಿದ್ದರು ಎಂದಿದ್ದಾರೆ.

    ಅತ್ತೆ ಮತ್ತು ಪತಿ ತನ್ನನ್ನು ಹೊಡೆಯುತ್ತಿದ್ದರು. ಅಲ್ಲದೇ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ವರದಕ್ಷಿಣೆ ಬೇಡಿಕೆಗಳಿಗೆ ಮಣಿಯದಿದ್ದಾಗ, ಅತ್ತೆ ಮತ್ತು ಪತಿ ವಿದ್ಯುತ್ ಸ್ಪರ್ಶಿಸಿ ಕೊಲ್ಲಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ದರ್ಶನ್‌ಗೆ ನೋ ಟೆನ್ಷನ್ – ಜಾಲಿ ಮೂಡಲ್ಲಿ ಥಾಯ್ಲೆಂಡ್‌ನಲ್ಲಿ ಬಿಂದಾಸ್‌ ಪಾರ್ಟಿ

    ಕಿರುಕುಳದಿಂದ ಬೇಸತ್ತಿದ್ದ ಮನೀಷಾ, ಜುಲೈ 2024ರಲ್ಲಿ ತವರು ಮನೆಗೆ ಬಂದಿದ್ದರು. ಕಳೆದ 4 ದಿನಗಳ ಹಿಂದೆ ವಿಚ್ಛೇದನ ಬಗ್ಗೆ ಮನೀಷಾ ಕುಟುಂಬಸ್ಥರು ಚರ್ಚಿಸಿದ್ದರು. ಅತ್ತೆ ಮತ್ತು ಪತಿ ವರದಕ್ಷಿಣೆ ವಸ್ತುಗಳನ್ನು ಹಿಂದಿರುಗಿಸುವವರೆಗೆ ವಿಚ್ಛೇದನ ಪತ್ರಗಳಿಗೆ ಸಹಿ ಹಾಕುವುದಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.

  • ಉತ್ತರ ಪ್ರದೇಶ| 8ರ ಬಾಲಕಿಯ ರೇಪ್‌ & ಕೊಲೆ ಕೇಸ್‌ – ಆರೋಪಿ ಎನ್‌ಕೌಂಟರ್‌ಗೆ ಬಲಿ

    ಉತ್ತರ ಪ್ರದೇಶ| 8ರ ಬಾಲಕಿಯ ರೇಪ್‌ & ಕೊಲೆ ಕೇಸ್‌ – ಆರೋಪಿ ಎನ್‌ಕೌಂಟರ್‌ಗೆ ಬಲಿ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಫರೂಕಾಬಾದ್‌ನಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ (Rape) ಎಸಗಿ ಕೊಲೆಗೈದ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್‌ (Encounter) ನಡೆಸಿ ಹತ್ಯೆ ಮಾಡಿದ್ದಾರೆ.

    ಈ ಹಿಂದೆ ಕೊಲೆ, ಸುಲಿಗೆ, ಅಪಹರಣ ಎಸಗಿದ್ದ ಆರೋಪ ಹೊಂದಿದ್ದ ಮನು(55) ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಆರೋಪಿ ಪ್ಲಾಸ್ಟಿಕ್ ಹೆಕ್ಕುವ ಕೆಲಸ ಮಾಡುತ್ತಿದ್ದ ಮನು ಜೂನ್‌ 27 ರಿಂದ ನಾಪತ್ತೆಯಾಗಿದ್ದ. ಈತನ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನವನ್ನು ಘೋಷಿಸಲಾಗಿತ್ತು.

    ಮೊಹಮ್ಮದಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ಬಂಧನಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಆತ ಪೊಲೀಸರ ಮೇಲೆ ದೇಶೀಯ ನಿರ್ಮಿತ ಪಿಸ್ತೂಲಿನಿಂದ ದಾಳಿ ನಡೆಸಿದ್ದಾನೆ. ಈ ವೇಳೆ ಪೊಲೀಸರು ಸ್ವಯಂ ರಕ್ಷಣೆಗೆ ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಸಮಯದಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

    ಏನಿದು ಕೇಸ್?
    ಜೂನ್ 28 ರಂದು, ಮೈನ್‌ಪುರಿಯ ಭೋಗಾಂವ್ ಪೊಲೀಸ್ ಠಾಣೆ ಪ್ರದೇಶದ ಅಲಿಪುರ್ ಖೇಡಾ ಬಳಿಯ ಹೊಲದಲ್ಲಿ 8 ವರ್ಷದ ಬಾಲಕಿಯ ಶವ ಪತ್ತೆಯಾಗಿತ್ತು. ಇದನ್ನೂ ಓದಿ: ಯುಪಿಯಲ್ಲಿ ಯೋಗಿ ಆದಿತ್ಯನಾಥ್‌ ಸಿಎಂ ಆದ ನಂತರ 15,000 ಎನ್‌ಕೌಂಟರ್‌ 238 ಮಂದಿ ಹತ್ಯೆ

    ಮೃತ ಬಾಲಕಿ ಮೊಹಮ್ಮದಾಬಾದ್ ಪೊಲೀಸ್ ಠಾಣೆ ಪ್ರದೇಶದ ನೀವ್ಕರೋರಿ ಬಳಿಯ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದಳು. ಜೂನ್‌ 27 ರಂದು ಬಾಲಕಿ ಮಾವಿನ ಹಣ್ಣು ತಿನ್ನಲು ತೋಟಕ್ಕೆ ಹೋಗಿದ್ದಳು. ತೋಟಕ್ಕೆ ಹೋಗಿದ್ದ ಬಾಲಕಿ ಮರಳಿ ಮನೆಗೆ ಬಂದಿರಲಿಲ್ಲ.

    ನಾಪತ್ತೆ ದೂರು ದಾಖಲಾದ ನಂತರ ಪೊಲೀಸರು ತನಿಖೆಗೆ ಇಳಿದಾಗ 55 ವರ್ಷದ ವ್ಯಕ್ತಿ ಸೈಕಲ್‌ನಲ್ಲಿ ಹೋಗುತ್ತಿರುವುದನ್ನು ಮತ್ತು ಆತನ ಹಿಂದೆ ಬಾಲಕಿ ನಡೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮರುದಿನ ಮೈನ್‌ಪುರಿ ಜಿಲ್ಲೆಯ ಭೋಗಾಂವ್ ಪೊಲೀಸ್ ಠಾಣೆ ಪ್ರದೇಶದ ದೇವಿಪುರದ ಹೊಲದಲ್ಲಿ ಸುಮಾರು 35 ಕಿ.ಮಿ. ದೂರದಲ್ಲಿರುವ ಕಾಲುವೆಯ ದಡದಲ್ಲಿ ಹುಡುಗಿಯ ಶವ ಪತ್ತೆಯಾಗಿತ್ತು.

    ಮೈನ್‌ಪುರಿ ಪೊಲೀಸರು ಫರೂಕಾಬಾದ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೋಷಕರು ಪತ್ತೆಯಾದ ಶವ ಕಾಣೆಯಾದ ತಮ್ಮ ಮಗಳು ಎಂದು ಗುರುತಿಸಿತ್ತು. ಮೃತದೇಹವನ್ನು ಗ್ರಾಮಕ್ಕೆ ಕರೆ ತಂದಾಗ ಗ್ರಾಮಸ್ಥರು ಭಾರೀ ಪ್ರತಿಭಟನೆ ನಡೆಸಿದ್ದರು. ಫರೂಕಾಬಾದ್-ದೆಹಲಿ ರಸ್ತೆಯನ್ನು ನಿರ್ಬಂಧಿಸಲಾಗಿತ್ತು. ಪ್ರಕರಣ ದಾಖಲಾದ ನಂತರ ಆರೋಪಿ ಮನು ನಾಪತ್ತೆಯಾಗಿದ್ದ. ನಾಪತ್ತೆಯಾದ ಬೆನ್ನಲ್ಲೇ ಪೊಲೀಸರು ಈತನ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂ. ನಗದು ಬಹುಮಾನ ಘೋಷಿಸಿದ್ದರು.

  • ಯುಪಿಯಲ್ಲಿ ಯೋಗಿ ಆದಿತ್ಯನಾಥ್‌ ಸಿಎಂ ಆದ ನಂತರ 15,000 ಎನ್‌ಕೌಂಟರ್‌ – 238 ಮಂದಿ ಹತ್ಯೆ

    ಯುಪಿಯಲ್ಲಿ ಯೋಗಿ ಆದಿತ್ಯನಾಥ್‌ ಸಿಎಂ ಆದ ನಂತರ 15,000 ಎನ್‌ಕೌಂಟರ್‌ – 238 ಮಂದಿ ಹತ್ಯೆ

    ಲಕ್ನೋ: ಯೋಗಿ ಆದಿತ್ಯನಾಥ್‌ (Yogi Adityanath) ಮುಖ್ಯಮಂತ್ರಿ ಆದ ಬಳಿಕ ಉತ್ತರ ಪ್ರದೇಶದಲ್ಲಿ (Uttara Pradesh) ಇದುವರೆಗೆ 15,000 ಎನ್‌ಕೌಂಟರ್‌ಗಳಾಗಿವೆ. ಆ ಪೈಕಿ 238 ಮಂದಿ ಹತ್ಯೆಯಾಗಿದ್ದಾರೆ.

    2017 ರಿಂದ ಉತ್ತರ ಪ್ರದೇಶ ಪೊಲೀಸರು ಸುಮಾರು 15,000 ಎನ್‌ಕೌಂಟರ್‌ಗಳನ್ನು ದಾಖಲಿಸಿದ್ದಾರೆ. ಇದರಲ್ಲಿ 30,000 ಕ್ಕೂ ಹೆಚ್ಚು ಅಪರಾಧಿಗಳನ್ನು ಬಂಧಿಸಲಾಗಿದೆ. 9,000 ಕ್ಕೂ ಹೆಚ್ಚು ಜನರ ಕಾಲಿಗೆ ಗುಂಡೇಟು ಬಿದ್ದಿದೆ. ಪರಾರಿಯಾಗಲು ಪ್ರಯತ್ನಿಸಿದವರು, ಮತ್ತೆ ಮತ್ತೆ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡವರನ್ನು ಗುರಿಯಾಗಿಸಿ ನಡೆಸಿದ ಕಾರ್ಯಾಚರಣೆಗಳಲ್ಲಿ 238 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇದು ಸೂಕ್ಷ್ಮ ವಿಷಯ, ಭಾರತ ಅಗತ್ಯವಿರುವ ಎಲ್ಲಾ ಸಹಾಯ ನೀಡುತ್ತಿದೆ: ಕೇರಳ ನರ್ಸ್‌ ಪ್ರಕರಣದ ಬಗ್ಗೆ MEA ಪ್ರತಿಕ್ರಿಯೆ

    ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನದಂತೆ ಇಲಾಖೆಯು ಅಪರಾಧಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ ಎಂದು ಪೊಲೀಸ್ ಮಹಾನಿರ್ದೇಶಕ ರಾಜೀವ್ ಕೃಷ್ಣ ತಿಳಿಸಿದ್ದಾರೆ.

    ಕಳೆದ ಎಂಟು ವರ್ಷಗಳಲ್ಲಿ 14,973 ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಇದರ ಪರಿಣಾಮವಾಗಿ 30,694 ಅಪರಾಧಿಗಳನ್ನು ಬಂಧಿಸಲಾಗಿದೆ. ಅವರಲ್ಲಿ ಪೊಲೀಸರ ಮೇಲೆ ದಾಳಿ ಮಾಡಿದ 9,467 ಜನರ ಕಾಲಿಗೆ ಗುಂಡು ಹಾರಿಸಲಾಗಿದೆ. ಆದರೆ, 238 ಜನರು ಎನ್‌ಕೌಂಟರ್‌ಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸಿಎಂ ನಿತೀಶ್ ಕುಮಾರ್ ಪಕ್ಷದ ನಾಯಕನ ಬರ್ಬರ ಹತ್ಯೆ – ನಾಲ್ಕೇ ದಿನಗಳಲ್ಲಿ 2ನೇ ರಾಜಕೀಯ ಹತ್ಯೆ

    ಪಶ್ಚಿಮ ಉತ್ತರ ಪ್ರದೇಶದ ಮೀರತ್ ವಲಯದಲ್ಲಿ ಅತಿ ಹೆಚ್ಚು ಕೃತ್ಯಗಳು ನಡೆದಿವೆ. ಅಲ್ಲಿ 7,969 ಅಪರಾಧಿಗಳನ್ನು ಬಂಧಿಸಲಾಗಿದ್ದು, 2,911 ಮಂದಿ ಗಾಯಗೊಂಡಿದ್ದಾರೆ. ಆಗ್ರಾ ವಲಯದಲ್ಲಿ 5,529 ಅಪರಾಧಿಗಳನ್ನು ಬಂಧಿಸಲಾಗಿದ್ದು, 741 ಮಂದಿ ಗಾಯಗೊಂಡಿದ್ದಾರೆ. ಬರೇಲಿ ವಲಯದಲ್ಲಿ 4,383 ಅಪರಾಧಿಗಳನ್ನು ಬಂಧಿಸಲಾಗಿದ್ದು, 921 ಮಂದಿ ಗಾಯಗೊಂಡಿದ್ದಾರೆ. ವಾರಣಾಸಿ ವಲಯದಲ್ಲಿ ಪೊಲೀಸರು 2,029 ಅಪರಾಧಿಗಳನ್ನು ಬಂಧಿಸಲಾಗಿದ್ದು, 620 ಮಂದಿ ಗಾಯಗೊಂಡಿದ್ದಾರೆ ಎಂದು ಡಿಜಿಪಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಕಮಿಷನರೇಟ್ ಪ್ರದೇಶಗಳಲ್ಲಿ ಗೌತಮ್ ಬುದ್ಧ ನಗರದಲ್ಲಿ ಅತಿ ಹೆಚ್ಚು ಬಂಧನಗಳು ದಾಖಲಾಗಿವೆ. 1,983 ಅಪರಾಧಿಗಳು ಸಿಕ್ಕಿಬಿದ್ದಿದ್ದು, 1,180 ಜನರು ಗಾಯಗೊಂಡಿದ್ದಾರೆ. ಗಾಜಿಯಾಬಾದ್ ಕಮಿಷನರೇಟ್‌ನಲ್ಲಿ 1,133 ಜನರನ್ನು ಬಂಧಿಸಲಾಗಿದ್ದು, 686 ಜನರು ಗಾಯಗೊಂಡಿದ್ದಾರೆ. ಆಗ್ರಾ ಕಮಿಷನರೇಟ್‌ನಲ್ಲಿ 1,060 ಅಪರಾಧಿಗಳನ್ನು ಬಂಧಿಸಲಾಗಿದ್ದು, 271 ಜನರು ಗಾಯಗೊಂಡಿದ್ದಾರೆ ಎಂದು ವಿವರಿಸಿದ್ದಾರೆ.

  • ಲವ್ ಜಿಹಾದ್‌ಗೆ 1,000 ಮುಸ್ಲಿಂ ಯುವಕರನ್ನು ನೇಮಿಸಿದ್ದ ಛಂಗೂರ್ ಬಾಬಾ!

    ಲವ್ ಜಿಹಾದ್‌ಗೆ 1,000 ಮುಸ್ಲಿಂ ಯುವಕರನ್ನು ನೇಮಿಸಿದ್ದ ಛಂಗೂರ್ ಬಾಬಾ!

    – ಬಡವರು, ವಿಧವೆಯರು, ದುರ್ಬಲ ಮನಸ್ಥಿತಿಯ ಯುವತಿಯರೇ ಟಾರ್ಗೆಟ್
    – ಮುಸ್ಲಿಂ ರಾಷ್ಟ್ರಗಳಿಂದ 500 ಕೋಟಿ ರೂ. ಫಂಡಿಂಗ್

    ಲಕ್ನೋ: ಉತ್ತರ ಪ್ರದೇಶದ ಸ್ವಯಂ ಘೋಷಿತ ದೇವಮಾನವ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ (Chhangur Baba), ಹಿಂದೂ ಯುವತಿಯರಿಗೆ ಬಲೆ ಬೀಸಿ ಲವ್ ಜಿಹಾದ್ (Love Jihad) ನಡೆಸಲು 1,000 ಮುಸ್ಲಿಂ ಯುವಕರನ್ನು ನೇಮಿಸಿದ್ದ ಸ್ಫೋಟಕ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಬಡವರು, ವಿಧವೆಯರು ಮತ್ತು ದುರ್ಬಲ ಮನಸ್ಥಿತಿಯ ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಮತಾಂತರ ನಡೆಸಲಾಗುತ್ತಿತ್ತು. ಇದಕ್ಕೆ ಕಳೆದ ಮೂರು ವರ್ಷದಲ್ಲಿ ಮುಸ್ಲಿಂ ರಾಷ್ಟ್ರಗಳಿಂದ ಸುಮಾರು 500 ಕೋಟಿ ರೂ. ಪಡೆದಿದ್ದ. ಯುವಕರನ್ನು ಬಳಸಿಕೊಂಡು ಬಡ ಕುಟುಂಬದ ಯುವತಿಯರಿಗೆ, ವಿಧವೆಯರಿಗೆ ಪ್ರೇಮ, ವಿವಾಹ, ಮನೆ ಎಂಬ ಆಸೆಗಳನ್ನು ಒಡ್ಡಿ ಮತಾಂತರಿಸಲಾಗುತ್ತಿತ್ತು. ಇದನ್ನೂ ಓದಿ: ಮಾದಕದ್ರವ್ಯ ಮಾರಾಟ – ಪ್ರಿಯಾಂಕ್‌ ಖರ್ಗೆ ಆಪ್ತ ಅರೆಸ್ಟ್‌

    ಇನ್ನು ಹಿಂದೂ ಯುವತಿಯರನ್ನು ಮತಾಂತರಿಸಿದ್ದಕ್ಕಾಗಿ ಛಂಗೂರ್ ಬಾಬಾ ಭಾರತ-ನೇಪಾಳ ಗಡಿಯಲ್ಲಿ ಉತ್ತರ ಪ್ರದೇಶದ ಏಳು ಜಿಲ್ಲೆಗಳ ಮುಸ್ಲಿಂ ಪುರುಷರಿಗೆ ಹಣ ಪಾವತಿಯನ್ನೂ ಮಾಡಿದ್ದಾನೆ. ಛಂಗೂರ್ ಬಾಬಾ ಜೊತೆಗೆ ಆತನ ಸಹಚರ ನೀತು ಅಲಿಯಾಸ್ ನಸ್ರೀನ್‌ನನ್ನು ಸಹ ಬಂಧಿಸಿ ಏಳು ದಿನಗಳ ಎಟಿಎಸ್ ಕಸ್ಟಡಿಗೆ ಕಳುಹಿಸಲಾಗಿದೆ. ವಿದೇಶದಿಂದ ಬಂದ ಹಣವನ್ನು ನೀತು ನಸ್ರೀನ್ ನಿರ್ವಹಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 60 ವರ್ಷಗಳ ಕನಸು ನನಸು | ಇಂದು ಸಿಗಂದೂರು ಸೇತುವೆ ಲೋಕಾರ್ಪಣೆ – ಬ್ರಿಡ್ಜ್‌ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

    ವಿದೇಶಿ ಫಂಡಿಂಗ್ ಪತ್ತೆಹಚ್ಚಲು ಮತ್ತು ಹೆಚ್ಚಿನ ಸಂಪರ್ಕಗಳನ್ನು ಪತ್ತೆಹಚ್ಚುವ ಸಲುವಾಗಿ ಗುಪ್ತಚರ ಬ್ಯೂರೋ (IB) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ನವೀನ್ ಅಲಿಯಾಸ್ ಜಮಾಲುದ್ದೀನ್ ಮತ್ತು ಛಂಗೂರ್ ಬಾಬಾ ಮಗ ಮೆಹಬೂಬ್‌ನನ್ನು ಈಗಾಗಲೇ ಬಂಧಿಸಲಾಗಿದ್ದು, ಲಕ್ನೋ ಜಿಲ್ಲಾ ಜೈಲಿನಲ್ಲಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿದರೆ ಏನಾಗುತ್ತೆ?

    ಐಎಸ್‌ಐ ಜೊತೆ ನಂಟಿಗೆ ಯತ್ನ:
    ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರ ಮತಾಂತರ ಮಾತ್ರವಲ್ಲದೇ ಛಂಗೂರ್ ಬಾಬಾ ನೇಪಾಳಕ್ಕೆ ತೆರಳಿದ್ದು, ಪಾಕ್ ಜೊತೆಗಿನ ಸಂಬಂಧವನ್ನು ಬಲಪಡಿಸಲು ಅಲ್ಲಿನ ಪಾಕ್ ರಾಯಭಾರ ಕಚೇರಿಯಲ್ಲಿ ಸಭೆ ನಡೆಸಿ ಐಎಸ್‌ಐ ಅಧಿಕಾರಿಗಳನ್ನು ಭೇಟಿ ಮಾಡಲು ಯತ್ನಿಸಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಬಿಹಾರ; ನಡುರಸ್ತೆಯಲ್ಲೇ ವಕೀಲನಿಗೆ ಗುಂಡಿಕ್ಕಿ ಹತ್ಯೆ

    ಮತಾಂತರಕ್ಕೆ ಕೋಡ್‌ವರ್ಡ್ ಬಳಕೆ:
    ಛಂಗೂರ್ ಬಾಬಾ ತಾನು ಮಾಡುತ್ತಿರುವ ಕೃತ್ಯ ಯಾರಿಗೂ ತಿಳಿಯಬಾರದೆಂಬ ಕಾರಣಕ್ಕೆ ಪ್ರತ್ಯೇಕ ಕೋಡ್‌ವರ್ಡ್‌ಗಳನ್ನು ಬಳಸುತ್ತಿದ್ದ. ಪ್ರಾಜೆಕ್ಟ್, ಮಿಟ್ಟಿ ಪಲಟ್ನಾ, ಕಾಜಲ್ ಲಗಾನಾ ಹಾಗೂ ದರ್ಶನ್ ಎಂಬ ಕೋಡ್‌ವರ್ಡ್‌ಗಳ ಮೂಲಕ ಯುವತಿಯರ ಮತಾಂತರ ನಡೆಯುತ್ತಿತ್ತು. ಇದನ್ನೂ ಓದಿ: ದೆಹಲಿಯಲ್ಲಿ ಕಾಣೆಯಾಗಿದ್ದ ಯುವತಿಯ ಮೃತದೇಹ ಯಮುನಾ ನದಿಯಲ್ಲಿ ಪತ್ತೆ

  • ಮತಾಂತರಕ್ಕೆ ‘ಮಿಟ್ಟಿ, ಕಾಜಲ್‌, ದರ್ಶನ್‌’ ಅಂತ ಕೋಡ್‌ ವರ್ಡ್‌ ಬಳಸುತ್ತಿದ್ದ ಛಂಗೂರ್‌ ಬಾಬಾ

    ಮತಾಂತರಕ್ಕೆ ‘ಮಿಟ್ಟಿ, ಕಾಜಲ್‌, ದರ್ಶನ್‌’ ಅಂತ ಕೋಡ್‌ ವರ್ಡ್‌ ಬಳಸುತ್ತಿದ್ದ ಛಂಗೂರ್‌ ಬಾಬಾ

    ಲಕ್ನೋ: ಮತಾಂತರ ಮಾಸ್ಟರ್‌ಮೈಂಡ್‌ ಛಂಗೂರ್‌ ಬಾಬಾನ (Chhangur Baba) ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಿದೆ. ಮತಾಂತರಕ್ಕಾಗಿ ಹಲವಾರು ಕೋಡ್‌ ವರ್ಡ್‌ಗಳನ್ನು ಬಳಸಿರುವುದು ಬಯಲಾಗಿದೆ.

    ‘ಪ್ರಾಜೆಕ್ಟ್, ಮಿಟ್ಟಿ ಪಲಟ್ನಾ, ಕಾಜಲ್ ಲಗಾನಾ ಮತ್ತು ದರ್ಶನ’ ಇವು ಜಮಾಲುದ್ದೀನ್‌ ಅಲಿಯಾಸ್‌ ಛಂಗೂರ್‌ ಬಾಬಾ ಬಳಸುತ್ತಿದ್ದ ಕೋಡ್‌ ವರ್ಡ್‌ಗಳು. ಹೆಚ್ಚಾಗಿ ಮಹಿಳೆಯರನ್ನು, ಪ್ರೋತ್ಸಾಹ ಧನ, ಆರ್ಥಿಕ ನೆರವು, ಮದುವೆಯ ಭರವಸೆ, ಬೆದರಿಕೆ ಮೂಲಕ ಮತಾಂತರಕ್ಕೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಮತಾಂತರ ಮಾಸ್ಟರ್‌ಮೈಂಡ್‌ ಛಂಗುರ್ ಬಾಬಾನ 5 ಕೋಟಿ ಮೌಲ್ಯದ ಮನೆ ಉಡೀಸ್‌ – ಬುಲ್ಡೋಜರ್‌ನಿಂದ ನೆಲಸಮ

    ಮಹಿಳೆಯರ ಮತಾಂತರಕ್ಕೆ ಪ್ರಾಜೆಕ್ಟ್‌, ಮಿಟ್ಟಿ ಪಲಟ್ನಾ ಎಂದರೆ ಧಾರ್ಮಿಕ ಮತಾಂತರ. ಕಾಜಲ್‌ ಲಗಾನಾ ಎಂದರೆ ಕುಶಲತೆ, ದರ್ಶನ ಎಂದರೆ ಸಂತ್ರಸ್ತೆ ಎಂದು ಸಂತ್ರಸ್ತರು ಎಂದು ಛಂಗೂರ್‌ ಬಾಬಾ ಉಲ್ಲೇಖಿಸುತ್ತಿದ್ದ.

    ಈ ವಿವರಗಳನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಶನಿವಾರ ಬಹಿರಂಗಪಡಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ಛಂಗೂರ್ ಬಾಬಾಗೆ ಸಂಬಂಧಿಸಿದ 18 ಬ್ಯಾಂಕ್ ಖಾತೆಗಳಿಂದ 68 ಕೋಟಿ ರೂ.ಗಳ ವಹಿವಾಟು ನಡೆದಿದೆ. ಮೂರು ತಿಂಗಳ ಅವಧಿಯಲ್ಲಿ ಈ ಖಾತೆಗಳಲ್ಲಿ ಸುಮಾರು 7 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ. ಇದನ್ನೂ ಓದಿ: ಸೈಕಲ್‌ನಲ್ಲಿ ತಾಯತ ಮಾರುತ್ತಿದ್ದ ಧಾರ್ಮಿಕ ಮತಾಂತರ ಗ್ಯಾಂಗ್‌ನ ಜಮಾಲುದ್ದೀನ್‌ ಈಗ 106 ಕೋಟಿ ರೂ. ಒಡೆಯ

    ಜು.5 ರಂದು, ಧಾರ್ಮಿಕ ಮತಾಂತರ ಮಾಸ್ಟರ್‌ಮೈಂಡ್ ಛಂಗೂರ್ ಬಾಬಾ ಮತ್ತು ಆತನ ಸಹಾಯಕಿ ನೀತು ಅಲಿಯಾಸ್ ನಸ್ರೀನ್ ಇಬ್ಬರನ್ನೂ ಬಂಧಿಸಲಾಯಿತು. ಈ ಇಬ್ಬರು ನೇಪಾಳದ ಗಡಿಯಲ್ಲಿರುವ ಬಲರಾಂಪುರ ಜಿಲ್ಲೆಯ ಮಾಧಪುರ ನಿವಾಸಿಗಳು. ಜಲಾಲುದ್ದೀನ್ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದ್ದು, ಪೊಲೀಸರು ಆತನ ಬಂಧನಕ್ಕೆ 50,000 ರೂ. ನಗದು ಬಹುಮಾನ ಘೋಷಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

  • ಮತಾಂತರ ಮಾಸ್ಟರ್‌ಮೈಂಡ್‌ ಛಂಗುರ್ ಬಾಬಾನ 5 ಕೋಟಿ ಮೌಲ್ಯದ ಮನೆ ಉಡೀಸ್‌ – ಬುಲ್ಡೋಜರ್‌ನಿಂದ ನೆಲಸಮ

    ಮತಾಂತರ ಮಾಸ್ಟರ್‌ಮೈಂಡ್‌ ಛಂಗುರ್ ಬಾಬಾನ 5 ಕೋಟಿ ಮೌಲ್ಯದ ಮನೆ ಉಡೀಸ್‌ – ಬುಲ್ಡೋಜರ್‌ನಿಂದ ನೆಲಸಮ

    – ಮುಸ್ಲಿಂ ರಾಷ್ಟ್ರಗಳಿಂದ ಮತಾಂತರಕ್ಕೆ ಬಂದಿತ್ತಂತೆ 500 ಕೋಟಿ ರೂ.

    ಲಕ್ನೋ: ಮತಾಂತರಕ್ಕೆ ಛಂಗುರ್‌ ಬಾಬಾ (Chhangur Baba) ಅಯೋಧ್ಯೆಯಲ್ಲಿ (Ayodhya) ಅತಿ ಹೆಚ್ಚು ಖರ್ಚು ಮಾಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ.

    ಧಾರ್ಮಿಕ ಮತಾಂತರದ (Religious Conversion) ಮಾಸ್ಟರ್‌ಮೈಂಡ್‌ ಬಾಬಾನಿಗೆ ಮುಸ್ಲಿಂ ರಾಷ್ಟ್ರಗಳಿಂದ ಮತಾಂತರಕ್ಕಾಗಿ 500 ಕೋಟಿ ರೂ. ಹಣ ಬರುತ್ತಿತ್ತು. 200 ಕೋಟಿ ರೂ. ಅಧಿಕೃತವಾಗಿ ಬಂದಿದೆ. ಬಾಕಿ 300 ಕೋಟಿ ಹಣ ಅಕ್ರಮ ಹವಾಲಾ ಮೂಲಕ ಬಂದಿದೆ.

    ಇದರಲ್ಲಿ 200 ಕೋಟಿ ರೂ.ಗಳನ್ನು ಅಧಿಕೃತವಾಗಿ ಮೌಲ್ಯೀಕರಿಸಲಾಗಿದೆ. ಆದರೆ 300 ಕೋಟಿ ರೂ. ಅಕ್ರಮ ಹವಾಲಾ ಮಾರ್ಗಗಳನ್ನು ಬಳಸಿಕೊಂಡು ನೇಪಾಳದ ಮೂಲಕ ರವಾನಿಸಲಾಗಿದೆ. ನೇಪಾಳದ ಗಡಿ ಜಿಲ್ಲೆಗಳಾದ ಕಠ್ಮಂಡು, ನವಲ್ಪರಾಸಿ, ರೂಪಂದೇಹಿ ಮತ್ತು ಬಂಕೆಗಳಲ್ಲಿ 100 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಈ ಹಣವನ್ನು ಭಾರತದಲ್ಲಿ ಧಾರ್ಮಿಕ ಮತಾಂತರಕ್ಕೆ ಬಳಸಲು ಉದ್ದೇಶಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಆರ್ಥಿಕ ನೆರವು, ವಿವಾಹದ ಭರವಸೆ ನೀಡಿ ಹಿಂದೂಗಳನ್ನ ಇಸ್ಲಾಂಗೆ ಮತಾಂತರ – ಮಾಸ್ಟರ್‌ ಮೈಂಡ್‌ ಸೇರಿ ಇಬ್ಬರು ಅರೆಸ್ಟ್‌

    ಈ ಖಾತೆಗಳಿಗೆ ಪಾಕಿಸ್ತಾನ, ದುಬೈ, ಸೌದಿ ಅರೇಬಿಯಾ ಮತ್ತು ಟರ್ಕಿ ಸೇರಿದಂತೆ ಮುಸ್ಲಿಂ ಬಹುಸಂಖ್ಯಾತ ದೇಶಗಳಿಂದ ಹಣ ಬಂದಿದೆ. ನೇಪಾಳದ ಏಜೆಂಟರು ಈ ಹಣವನ್ನು ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯ ಮಾಧಪುರದ ಛಂಗೂರ್‌ಗೆ ವರ್ಗಾಯಿಸಲು ಸಹಾಯ ಮಾಡಿದ್ದರು. ಅವರು 4-5% ಕಮಿಷನ್ ಪಡೆದರು. ಅನೇಕ ಸಂದರ್ಭಗಳಲ್ಲಿ, ನಗದು ಠೇವಣಿ ಯಂತ್ರಗಳನ್ನು (CDM ಗಳು) ಬಳಸಿ ಹಣವನ್ನು ಠೇವಣಿ ಮಾಡಲಾಗುತ್ತಿತ್ತು.

    ಈ ಹಣವನ್ನು ಬಲರಾಂಪುರ್, ಶ್ರಾವಸ್ತಿ, ಬಹ್ರೈಚ್ ಮತ್ತು ಲಖಿಂಪುರಗಳಿಗೆ ತರಲಾಯಿತು. ಅಲ್ಲಿ ಸ್ಥಳೀಯ ಹಣ ವಿನಿಮಯಕಾರರು ನೇಪಾಳಿ ಕರೆನ್ಸಿಯನ್ನು ಭಾರತೀಯ ರೂಪಾಯಿಗಳಿಗೆ ಪರಿವರ್ತಿಸುತ್ತಿದ್ದರು. ಬಿಹಾರ ಜಿಲ್ಲೆಗಳಾದ ಮಧುಬನಿ, ಸಿತಾಮರ್ಹಿ, ಪುರ್ನಿಯಾ, ಕಿಶನ್‌ಗಂಜ್, ಚಂಪಾರಣ್ ಮತ್ತು ಸುಪೌಲ್‌ನ ಏಜೆಂಟ್‌ಗಳು ನೇಪಾಳದಿಂದ ಹಣವನ್ನು ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ.

    ಅಯೋಧ್ಯಾ ಜಿಲ್ಲೆಗೆ ಅತಿ ಹೆಚ್ಚು ಹಣ ಬಂದಿದ್ದು, ಅಲ್ಲಿ ಹಿಂದೂ ಹುಡುಗಿಯರನ್ನು ಇತರ ಧರ್ಮಗಳಿಗೆ ಮತಾಂತರಿಸಲಾಗಿದೆ ಎಂದು ಆರೋಪಿಸಲಾಗಿದೆ. ಛಂಗೂರ್ ಮತ್ತು ಆತನ ಸಹಾಯಕರಿಗೆ ಸಂಬಂಧಿಸಿದ 40 ಬ್ಯಾಂಕ್ ಖಾತೆಗಳನ್ನು ಅಧಿಕಾರಿಗಳು ಪರಿಶೀಲಿಸಲು ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ಸೈಕಲ್‌ನಲ್ಲಿ ತಾಯತ ಮಾರುತ್ತಿದ್ದ ಧಾರ್ಮಿಕ ಮತಾಂತರ ಗ್ಯಾಂಗ್‌ನ ಜಮಾಲುದ್ದೀನ್‌ ಈಗ 106 ಕೋಟಿ ರೂ. ಒಡೆಯ

    ಭಯೋತ್ಪಾದನಾ ನಿಗ್ರಹ ದಳವು 10 ವರ್ಷಗಳ ಆದಾಯ ತೆರಿಗೆ ದಾಖಲೆಗಳನ್ನು ಸಹ ಕೇಳಿದೆ. ತನಿಖಾಧಿಕಾರಿಗಳು ನವೀನ್ ರೋಹ್ರಾ ಎಂಬಾತನ ಆರು ಖಾತೆಗಳಲ್ಲಿ 34.22 ಕೋಟಿ ರೂ. ಮತ್ತು ನಸ್ರೀನ್ ಎಂಬ ಮಹಿಳೆಯ ಖಾತೆಗಳಲ್ಲಿ 13.90 ಕೋಟಿ ರೂ.ಗಳನ್ನು ಪತ್ತೆಹಚ್ಚಿದ್ದಾರೆ. ಶಾರ್ಜಾ, ದುಬೈ ಅಥವಾ ಯುಎಇಯಲ್ಲಿರುವ ಛಂಗೂರ್‌ನ ಶಂಕಿತ ವಿದೇಶಿ ಬ್ಯಾಂಕ್ ಖಾತೆಗಳನ್ನು ಇನ್ನೂ ಪರಿಶೀಲಿಸುತ್ತಿದ್ದೇವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

    ಬಲರಾಂಪುರದಲ್ಲಿ ಛಂಗೂರ್ ನಿರ್ಮಿಸಿದ 5 ಕೋಟಿ ರೂ. ಮೌಲ್ಯದ ಮಹಲನ್ನು ಸಂಪೂರ್ಣವಾಗಿ ಕೆಡವಲಾಗಿದೆ. ಇದನ್ನು ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ. ಅಮೃತಶಿಲೆಯ ಭದ್ರತಾ ಗೇಟ್ ಹೊಂದಿದ್ದ 40 ಕೋಣೆಗಳ ಬಂಗಲೆಯನ್ನು 10 ಬುಲ್ಡೋಜರ್‌ಗಳನ್ನು ಬಳಸಿ ಮೂರು ದಿನಗಳಲ್ಲಿ ಕೆಡವಲಾಯಿತು.

  • ಯೋಗಿ ಮಾತಿಗೂ ಕಿಮ್ಮತ್ತಿಲ್ಲ – ವಿದ್ಯಾರ್ಥಿನಿಗೆ ಶುಲ್ಕ ವಿನಾಯ್ತಿ ಕೊಡಲು ನಿರಾಕರಿಸಿ‌ದ RSS ಮೂಲದ ಶಿಕ್ಷಣ ಸಂಸ್ಥೆ

    ಯೋಗಿ ಮಾತಿಗೂ ಕಿಮ್ಮತ್ತಿಲ್ಲ – ವಿದ್ಯಾರ್ಥಿನಿಗೆ ಶುಲ್ಕ ವಿನಾಯ್ತಿ ಕೊಡಲು ನಿರಾಕರಿಸಿ‌ದ RSS ಮೂಲದ ಶಿಕ್ಷಣ ಸಂಸ್ಥೆ

    – ಆರ್ಥಿಕ ಸಮಸ್ಯೆಯಿಂದ 18,000 ರೂ. ಶುಲ್ಕ ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿನಿ

    ಲಕ್ನೋ: ಐಎಎಸ್‌ ಅಧಿಕಾರಿ (IAS Officer) ಆಗಬೇಕೆಂಬ ಕನಸು ಹೊತ್ತ 7ನೇ ತರಗತಿ ಬಾಲಕಿಯೊಬ್ಬಳು ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ ವಿಷಯ ಈಗ ಉತ್ತರ ಪ್ರದೇಶದಲ್ಲಿ (Uttar Pradesh) ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದೇ ವಿಷಯವನ್ನ ಅಸ್ತ್ರವಾಗಿ ಬಳಸಿಕೊಂಡಿರುವ ಪ್ರತಿ ಪಕ್ಷಗಳು ಸಿಎಂ ಯೋಗಿ ಅವರ ಮಾತಿಗೂ ಕಿಮ್ಮತ್ತಿಲ್ಲದಂತಾಯ್ತಾ ಎಂಬ ಪ್ರಶ್ನೆ ಎತ್ತಿವೆ.

    ವಿದ್ಯಾರ್ಥಿನಿಯ ಸಮಸ್ಯೆ ಏನು?
    ಉತ್ತರ ಪ್ರದೇಶದ 7ನೇ ತರಗತಿ ವಿದ್ಯಾರ್ಥಿನಿ (Student) ಪಂಖುರಿ ತ್ರಿಪಾಠಿ ಅವರ ತಂದೆ ರಾಜೀವ್ ಕುಮಾರ್ ತ್ರಿಪಾಠಿ ಕೆಲ ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಕಾಲಿಗೆ ಗಂಭೀರ ಪೆಟ್ಟು ಮಾಡಿಕೊಂಡರು. ಇದರಿಂದ ಅವರು ತಮ್ಮ ಕೆಲಸ ಕಳೆದುಕೊಳ್ಳಬೇಕಾಯ್ತು. ಇದು ಕುಟುಂಬದ ಆರ್ಥಿಕತೆಯ ಮೇಲೂ ಪರಿಣಾಮ ಬೀರಿತು. ಕೊನೆಗೆ ಬಾಲಕಿಯ ಶಾಲಾ ಶುಲ್ಕ ಪಾವತಿಸುವುದಕ್ಕೂ ಹಣವಿಲ್ಲದಷ್ಟು ಸಮಸ್ಯೆ ಎದುರಾಯಿತು. ನಂತರ ಬಾಲಕಿಯ ಕುಟುಂಬಸ್ಥರು ಆರ್ಥಿಕ ಸಹಾಯಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಅವರ ಮೊರೆ ಹೋದರು. ಆಗ ಯೋಗಿ ಮಗುವಿನ ಶಿಕ್ಷಣಕ್ಕೆ ಯಾವುದೇ ಅಡೆತಡೆ ಎದುರಾಗುವುದಿಲ್ಲ ಎಂದು ಭರವಸೆ ನೀಡಿ ಕಳುಹಿಸಿದ್ದರು. ಆದ್ರೆ ಬಾಲಕಿ ಶಾಲೆಗೆ ಹೋದಾಗ ನಡೆದಿದ್ದೇ ಬೇರೆ. ಶಾಲಾ ಆಡಳಿತ ಮಂಡಳಿ ಆ ವಿದ್ಯಾರ್ಥಿನಿಯ ಶುಲ್ಕವನ್ನ ಯಾವುದೇ ಕಾರಣಕ್ಕೂ ಮನ್ನಾ ಮಾಡೋದಿಲ್ಲ ಎಂದು ನಿರಾಕರಿಸಿತು. ಇದನ್ನೂ ಓದಿ: ಅಧಿಕೃತ ನಿವಾಸದಿಂದ ತಕ್ಷಣವೇ ಚಂದ್ರಚೂಡ್ ತೆರವಿಗೆ ಕೇಂದ್ರಕ್ಕೆ ಸುಪ್ರೀಂ ಪತ್ರ

    ಬಳಿಕ ಘಟನೆ ರಾಜಕೀಯ ತಿರುವು ಪಡೆದುಕೊಂಡಿತು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ತೀವ್ರವಾಗಿ ಖಂಡಿಸಿದ್ರು. ಅಲ್ಲದೇ ಮಗುವಿನ ಶಿಕ್ಷಣಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಆದ್ರೆ ಬಾಲಕಿ ಕುಟುಂಬ ಮುಖ್ಯಮಂತ್ರಿಗಳು ನಮಗೆ ಸಹಾಯ ಮಾಡುತ್ತಾರೆಂಬ ನಂಬಿಕೆಯಿದೆ ಎಂದು ಹೇಳಿದೆ.  ಇದನ್ನೂ ಓದಿ: ಭಾಷೆ ಹೆಸರಲ್ಲಿ ಜನರನ್ನು ವಿಭಜಿಸಬಾರದು: ಮರಾಠಿ-ಹಿಂದಿ ಸಂಘರ್ಷ ಬಗ್ಗೆ ಕಂಗನಾ ಪ್ರತಿಕ್ರಿಯೆ

    ಪ್ರತಿ ತಿಂಗಳು 1,650 ರೂ. ಶುಲ್ಕ ಪಾವತಿ 
    ಬಾಲಕಿ ಪಂಖುರಿ ತ್ರಿಪಾಠಿ ಗೋರಖ್‌ಪುರದ ಪಕ್ಕಿಬಾಗ್‌ನಲ್ಲಿರುವ ಸರಸ್ವತಿ ಶಿಶು ಮಂದಿರದಲ್ಲಿ 7ನೇ ತರಗತಿ ಓದುತ್ತಿದ್ದಾಳೆ. ಆರ್‌ಎಸ್‌ಎಸ್ ಶಿಕ್ಷಣ ವಿಭಾಗ ವಿದ್ಯಾಭಾರತಿ ಫೌಂಡೇಷನ್‌ ನಡೆಸುತ್ತಿರುವ ಈ ಶಾಲೆಯು 7ನೇ ತರಗತಿ ವಿದ್ಯಾರ್ಥಿಗಳಿಗೆ ಮಾಸಿಕ 1,650 ರೂ. ಶುಲ್ಕ ವಿಧಿಸುತ್ತದೆ. ಪಂಖುರಿ ಸುಮಾರು 18,000 ರೂ. ಬಾಕಿ ಪಾವತಿಸಬೇಕಾಗಿದೆ. ಆದ್ರೆ ತಂದೆ ಕೆಲಸ ಕಳೆದುಕೊಂಡು ಕುಟುಂಬ ಆರ್ಥಿಕ ಸಂಕಷ್ಟಕ್ಕೀಡಾಗಿದ್ದರಿಂದ ಸಹಾಯಕ್ಕಾಗಿ ಸಿಎಂ ಮೊರೆ ಹೋಗಿದ್ದರು. ಇದನ್ನೂ ಓದಿ: ಕ್ಯಾಬ್‌ ಚಾಲಕರನ್ನೇ ಟಾರ್ಗೆಟ್‌ ಮಾಡಿ ಹತ್ಯೆ – 24 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸರಣಿ ಹಂತಕ ಅರೆಸ್ಟ್

    ನನ್ನಪ್ಪ ಅಲ್ಲೇ ಕುಸಿದುಬಿದ್ದರು; ಬಾಲಕಿ ಕಣ್ಣೀರು
    ಘಟನೆ ಕುರಿತು ಮಾತನಾಡಿದ ಬಾಲಕಿ ಪಂಖುರಿ, ನಾನು ಶುಲ್ಕ ವಿನಾಯ್ತಿ ಮಾಡುವಂತೆ ಸಹಾಯ ಕೇಳಿ ಮುಖ್ಯಮಂತ್ರಿಗಳ ಬಳಿ ಹೋಗಿದ್ದೆ. ಅವರು ನನೆ ಚಾಕೊಲೇಟ್‌ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದ್ರೆ ನಾನು ನನ್ನಪ್ಪನೊಂದಿಗೆ ಶಾಲೆಗೆ ಹೋದಾಗ ಅವರು ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದ್ರು. ಶುಲ್ಕ ಮನ್ನಾ ಮಾಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ನಿಮ್ಮ ತರನೇ ಉಳಿದವರು ಶುಲ್ಕ ವಿನಾಯ್ತಿ ಕೊಡಿ ಅಂದ್ರೆ ಶಾಲೆ ಹೇಗೆ ನಡೆಸೋದು, ಶಿಕ್ಷಕರಿಗೆ ಹಣ ನೀಡಬೇಕಲ್ಲವಾ? ಅಂತೆಲ್ಲ ರೇಗಿದ್ರು. ಅವರ ಮಾತುಗಳನ್ನ ಕೇಳಿ ನನ್ನಪ್ಪ ಅಲ್ಲೇ ಕುಸಿದುಬಿದ್ದರು. ಯಾರೂ ಕೂಡ ಅವರೊಟ್ಟಿಗೆ ಈ ರೀತಿ ಮಾತನಾಡಿರಲಿಲ್ಲ ಎಂದು ಬಾಲಕಿ ಕಣ್ಣೀರಿಟ್ಟಳು.

    ಅಲ್ಲದೇ ನಮಗೆ ಇನ್ನೂ ಮುಖ್ಯಮಂತ್ರಿಗಳ ಮೇಲೆ ನಂಬಿಕೆಯಿದೆ. ಅವರು ನಮಗೆ ಸಹಾಯ ಮಾಡೇ ಮಾಡುತ್ತಾರೆ, ನಾನು ಓದಿ ಐಎಎಸ್‌ ಅಧಿಕಾರಿ ಆಗೇ ಆಗುತ್ತೇನೆ ಎಂದು ಬಾಲಕಿ ಶಪಥ ಮಾಡಿದ್ದಾಳೆ. ಇದನ್ನೂ ಓದಿ: PSI ಪರೀಕ್ಷೆಯಲ್ಲಿ ಫೇಲ್‌, ಆದ್ರೂ 2 ವರ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದ ಐನಾತಿ ಮಹಿಳೆ ಅಂದರ್‌

    ಘಟನೆ ಬಳಿಕ ಶಾಲಾ ಆಡಳಿತ ಮಂಡಳಿಗೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಆದ್ರೆ ಈವರೆಗೆ ಶಾಲಾ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಗಳು ತಿಳಿಸಿವೆ.

  • ಆರ್ಥಿಕ ನೆರವು, ವಿವಾಹದ ಭರವಸೆ ನೀಡಿ ಹಿಂದೂಗಳನ್ನ ಇಸ್ಲಾಂಗೆ ಮತಾಂತರ – ಮಾಸ್ಟರ್‌ ಮೈಂಡ್‌ ಸೇರಿ ಇಬ್ಬರು ಅರೆಸ್ಟ್‌

    ಆರ್ಥಿಕ ನೆರವು, ವಿವಾಹದ ಭರವಸೆ ನೀಡಿ ಹಿಂದೂಗಳನ್ನ ಇಸ್ಲಾಂಗೆ ಮತಾಂತರ – ಮಾಸ್ಟರ್‌ ಮೈಂಡ್‌ ಸೇರಿ ಇಬ್ಬರು ಅರೆಸ್ಟ್‌

    – ಬಡವರು, ಅಸಹಾಯಕ ಕಾರ್ಮಿಕರು, ವಿಧವೆಯರೇ ಟಾರ್ಗೆಟ್‌

    ಲಕ್ನೋ: ಆರ್ಥಿಕ ನೆರವು, ವಿವಾಹ ಸೇರಿದಂತೆ ಹತ್ತು ಹಲವು ಭರವಸೆಗಳನ್ನ ಹಿಂದೂಗಳನ್ನ ಇಸ್ಲಾಂಗೆ ಮತಾಂತರ ಮಾಡುತ್ತಿದ್ದ ಧಾರ್ಮಿಕ ಮತಾಂತರ ತಂಡದ (Religious Conversion Gang) ಮಾಸ್ಟರ್‌ ಮೈಂಡ್‌ ಮತ್ತು ಆತನ ಸಹಾಯಕನನ್ನ ಉತ್ತರ ಪ್ರದೇಶ ಪೊಲೀಸರ (Uttar Pradesh Police) ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.

    ಜಲಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಮತ್ತು ಸಹಯಾಕ ನೀತು ಅಲಿಯಾಸ್ ನಸ್ರೀನ್ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಬ್ಬರು ಬಲರಾಂಪುರ ಜಿಲ್ಲೆಯ ಮಧಪುರ ನಿವಾಸಿಗಳೆಂದು ತಿಳಿದುಬಂದಿದೆ. ಇದನ್ನೂ ಓದಿ: ʻಆಪರೇಷನ್ ಸಿಂಧೂರʼ ಯಶಸ್ಸಿನ ಬೆನ್ನಲ್ಲೇ 1 ಲಕ್ಷ ಕೋಟಿ ಮೊತ್ತದ ರಕ್ಷಣಾ ಯೋಜನೆಗಳಿಗೆ ಮೋದಿ ಸರ್ಕಾರ ಅಸ್ತು

    ಜಲಾಲುದ್ದೀನ್ ವಿರುದ್ಧ ಉತ್ತರ ಪ್ರದೇಶ ಕೋರ್ಟ್‌ (UP Court) ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಈ ಬೆನ್ನಲ್ಲೇ ಆತನ ಸುಳಿವು ನೀಡಿದವರಿಗೆ ಯುಪಿ ಪೊಲೀಸರು 50,000 ರೂ. ನಗದು ಬಹುಮಾನ ಘೋಷಿಸಿದ್ದರು ಎಂದು ವರದಿಗಳು ತಿಳಿಸಿವೆ. ಸದ್ಯ ಇಬ್ಬರನ್ನು ಬಂಧಿಸಿರುವ ಪೊಲೀಸರು ಲಕ್ನೋ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

    ಬಿಎನ್‌ಎಸ್‌ ಹಾಗೂ ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ, 2021ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಹಿಂದೂ ಮತ್ತು ಇತರ ಮುಸ್ಲಿಮೇತರ ಸಮುದಾಯದ ಜನರನ್ನು ಇಸ್ಲಾಂಗೆ ಮತಾಂತರ ಮಾಡಲು ಸಂಘಟಿತವಾಗಿ ಕೆಲಸ ಮಾಡುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಕಳಪೆ ಹೆಲ್ಮೆಟ್‌ಗೆ ಕೇಂದ್ರ ತಡೆ – BIS ಪ್ರಮಾಣೀಕರಿಸಿದ ISI ಗುರುತಿನ ಹೆಲ್ಮೆಟ್‌ ಕಡ್ಡಾಯ

    ಮುಖ್ಯವಾಗಿ ಬಡವರು, ಅಸಹಾಯಕ ಕಾರ್ಮಿಕರು, ದುರ್ಬಲ ವರ್ಗದವರು ಮತ್ತು ವಿಧವೆಯರಿಗೆ ಪ್ರೋತ್ಸಾಹ ಧನ, ಆರ್ಥಿಕ ನೆರವು ಹಾಗೂ ವಿವಾಹದ ಭರವಸೆ ನೀಡಿ ಮತಾಂತರಗೊಳಿಸುತ್ತಿದ್ದರು. ಅದು ಸಾಧ್ಯವಾಗದೇ ಇದ್ದಾಗ ಬೆದರಿಸಿ ಬಲವಂತವಾಗಿ ಮತಾಂತರ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದು ಮತಾಂತರದ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಹೇಳಲಾಗಿದೆ.

    ಇದೇ ಪ್ರಕರಣದಲ್ಲಿ ಕಳೆದ ಏಪ್ರಿಲ್‌ 8ರಂದು ಇಬ್ಬರು ಆರೋಪಿಗಳನ್ನ ಬಂಧಿಸಲಾಗಿತ್ತು. ಉಳಿದ ಇಬ್ಬರನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದಲೈಲಾಮಾ ಉತ್ತರಾಧಿಕಾರಿ ಸಂಘರ್ಷ- ದಲೈಲಾಮಾ ಜೊತೆ ಭಾರತದ ಸಂಬಂಧ ಹೇಗಿತ್ತು; ಚೀನಾ ಎಚ್ಚರಿಕೆ ಏನು?