Tag: uttar pradesh

  • ಮದುವೆ, ಅಕ್ರಮ ಸಂಬಂಧ, ಚಿತ್ರಹಿಂಸೆ, ಗರ್ಭಪಾತ; ಪತಿಯ ಕಿರುಕುಳಕ್ಕೆ ನೊಂದಿದ್ದ ಗೃಹಿಣಿ ಸಾವು

    ಮದುವೆ, ಅಕ್ರಮ ಸಂಬಂಧ, ಚಿತ್ರಹಿಂಸೆ, ಗರ್ಭಪಾತ; ಪತಿಯ ಕಿರುಕುಳಕ್ಕೆ ನೊಂದಿದ್ದ ಗೃಹಿಣಿ ಸಾವು

    – ವಿವಾಹವಾದ 5 ತಿಂಗಳಲ್ಲೇ ಸಾವಿನ ಮನೆ ಸೇರಿದ ಮಹಿಳೆ

    ಲಕ್ನೋ: ಐದು ತಿಂಗಳ ಹಿಂದಷ್ಟೇ ಮರ್ಚೆಂಟ್ ನೇವಿ ಅಧಿಕಾರಿಯನ್ನು ಮದುವೆಗಿದ್ದ 32 ವರ್ಷದ ಮಹಿಳೆಯೊಬ್ಬಳು ಲಕ್ನೋದ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

    ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿಸಿದ್ದಾರೆ. ಆದರೆ, ಮಧು ಸಿಂಗ್ ಕುಟುಂಬ ಸದಸ್ಯರು, ವರದಕ್ಷಿಣೆಗಾಗಿ ಆಕೆಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆಂದು ಪತಿಯ ವಿರುದ್ಧ ಆರೋಪ ಮಾಡಿದ್ದಾರೆ. ನೇಣು ಬಿಗಿದುಕೊಂಡು ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷೆ ದೃಢಪಡಿಸಿದೆ. ಆರೋಪಿ ಅನುರಾಗ್ ಸಿಂಗ್‌ನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ

    ಈ ವರ್ಷ ಫೆ.25 ರಂದು ಮಧು, ವೈವಾಹಿಕ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಮೂಲಕ ಸಂಪರ್ಕ ಸಾಧಿಸಿ ಅನುರಾಗ್‌ನನ್ನು ವಿವಾಹವಾಗಿದ್ದರು. ಅನುರಾಗ್ ಹಾಂಗ್‌ಕಾಂಗ್ ಮೂಲದ ಹಡಗು ನಿರ್ವಹಣಾ ಸಂಸ್ಥೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ. ಮದುವೆಯ ಸಮಯದಲ್ಲಿ, 15 ಲಕ್ಷ ರೂ. ವರದಕ್ಷಿಣೆಯಾಗಿ ಬೇಡಿಕೆ ಇಟ್ಟಿದ್ದ ಎಂದು ಮಧು ಕುಟುಂಬವು ಆರೋಪಿಸಿದೆ. ಅವರ ಕುಟುಂಬ ಹಂಚಿಕೊಂಡ ವಾಟ್ಸಾಪ್ ಚಾಟ್‌ಗಳಲ್ಲಿ ಅನುರಾಗ್ 15 ಲಕ್ಷ ರೂ. ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ.

    ಮಧು ಅವರ ಕುಟುಂಬ ಸದಸ್ಯರು ಕೇವಲ 5 ಲಕ್ಷ ರೂ. ವರದಕ್ಷಿಣೆ ಕೊಡಬಹುದು ಎಂದು ಹೇಳಿದ್ದರು. ಆದರೆ, ಅನುರಾಗ್‌ ಇದಕ್ಕೆ ಒಪ್ಪಿರಲಿಲ್ಲ. ಮಧು ತಂದೆ ಫತೇ ಬಹದ್ದೂರ್ ಸಿಂಗ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ, ಮದುವೆಯ ನಂತರ ಅನುರಾಗ್ ಪದೇ ಪದೆ ಕರೆ ಮಾಡಿ ವರದಕ್ಷಿಣೆಗಾಗಿ ಒತ್ತಾಯಿಸುತ್ತಿದ್ದ ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮಹಿಳೆಯ ಬರ್ಬರ ಹತ್ಯೆ – ಕೊಲೆ ಬಳಿಕ ಆರೋಪಿಯೂ ನೇಣಿಗೆ ಶರಣು

    ಮದುವೆಯ ಒಂದು ತಿಂಗಳಲ್ಲೇ ನಮ್ಮ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅವಳು ತವರಿಗೆ ಬಂದಿದ್ದಳು. ನಂತರ ನಾವು ವರದಕ್ಷಿಣೆ ಕೊಟ್ಟೆವು. ಮಗಳು ಮತ್ತೆ ಗಂಡನ ಮನೆ ಸೇರಿದರು. ಆದರೆ, ಪದೇ ಪದೆ ಆಕೆಯನ್ನು ಗಂಡನ ಮನೆಯವರು ಹಿಂಸಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಅನುರಾಗ್ ವಿವಾಹೇತರ ಸಂಬಂಧ ಹೊಂದಿದ್ದಾನೆ. ಇತ್ತೀಚೆಗೆ ತನ್ನ ಮಾಜಿ ಗೆಳತಿಯೊಂದಿಗೆ ನಗರದ ಹೋಟೆಲ್‌ನಲ್ಲಿ ಒಂದು ರಾತ್ರಿ ಕಳೆದಿದ್ದಾನೆ ಎಂದು ಮಧು ತಂದೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ನನ್ನ ಮಗಳು ಗರ್ಭಿಣಿಯಾಗಿದ್ದಳು. ಗರ್ಭಪಾತ ಮಾಡಿಸುವಂತೆ ಪತಿ ಒತ್ತಾಯಿಸುತ್ತಿದ್ದ. ಮಧು ಸಾವನ್ನಪ್ಪುವ ನಾಲ್ಕು ದಿನಗಳ ಮೊದಲು, ಜು.31 ರಂದು ಹೋಟೆಲ್ ಬುಕಿಂಗ್‌ನ ವಿವರಗಳನ್ನು ಕುಟುಂಬ ಹಂಚಿಕೊಂಡಿದೆ. ಆ.3 ರಂದು, ಅನುರಾಗ್ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಮಧು ನಮಗೆ ತಿಳಿಸಿದ್ದಳು. ಮಾರನೆ ದಿನವೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಗಂಡನ ಮನೆಯಿಂದ ನಮಗೆ ಕರೆ ಬಂತು. ಇದು ಕೊಲೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

  • ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಪ್ರವಾಹ – 12 ಮಂದಿ ಸಾವು, ಪ್ರಯಾಗ್‌ರಾಜ್‌ ಬಹುತೇಕ ಮುಳುಗಡೆ

    ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಪ್ರವಾಹ – 12 ಮಂದಿ ಸಾವು, ಪ್ರಯಾಗ್‌ರಾಜ್‌ ಬಹುತೇಕ ಮುಳುಗಡೆ

    ಲಕ್ನೋ: ಮುಂಗಾರು (Monsoon) ಚುರುಕುಗೊಂಡಿದ್ದು, ಹವಾಮಾನ ಪರಿಸ್ಥಿತಿಯನ್ನೇ ಬುಡಮೇಲು ಮಾಡಿದೆ. ಉತ್ತರ ಪ್ರದೇಶದ (Uttar Pradesh) ಸೇರಿದಂತೆ ದೇಶದ ವಿವಿಧೆಡೆ ಮಳೆಯ ಆರ್ಭಟ ಜೋರಾಗಿದೆ. ಹೀಗಾಗಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಯುಪಿಯ 17 ಜಿಲ್ಲೆಗಳಲ್ಲಿ ಪ್ರವಾಹ (Flood) ಪರಿಸ್ಥಿತಿ ಉಂಟಾಗಿದ್ದು, ಈವರೆಗೆ 12 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

    ಮುಖ್ಯವಾಗಿ ಸಂಗಮ್‌ನಗರ ಎಂದೇ ಕರೆಯಲ್ಪಡುವ ಹಾಗೂ ಮಹಾ ಕುಂಭಮೇಳ ನಡೆದ ಪ್ರಯಾಗ್‌ರಾಜ್‌ನ (Prayagraj) ಬಹುತೇಕ ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿವೆ. ಅಲ್ಲದೇ ವಾರಣಾಸಿ ಸೇರಿದಂತೆ ಅನೇಕ ನಗರಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಇದನ್ನೂ ಓದಿ: ಕೆಲವರು ಅಧಿಕಾರ ಹಂಚಿಕೊಳ್ಳಲು ಒಪ್ಪಲ್ಲ – ಸಿದ್ದರಾಮಯ್ಯಗೆ ಟಾಂಗ್‌ ಕೊಟ್ರಾ ಡಿಕೆಶಿ?

    17 ಜಿಲ್ಲೆಗಳಲ್ಲಿ ಪ್ರವಾಹ
    ಭಾರೀ ಮಳೆಯಿಂದಾಗಿ ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಗಂಗಾ ನದಿ ತಟದಲ್ಲಿರುವ ಪ್ರದೇಶಗಳು ಮುಳುಗಡೆಯಾಗುತ್ತಿವೆ. ಪ್ರಯಾಗ್‌ರಾಜ್ ನಗರದ ಸಲೋರಿ, ರಾಜಪುರ, ದಾರಗಂಜ್, ಬಘಾಡಾ ಮುಂತಾದ ಪ್ರದೇಶಗಳು ಮುಳುಗಿಹೋಗಿವೆ. ಅದೇ ಸಮಯದಲ್ಲಿ, ಮಿರ್ಜಾಪುರ, ವಾರಣಾಸಿ, ಅಯೋಧ್ಯೆ, ಚಂದೌಲಿ, ಬಲ್ಲಿಯಾದ ಪರಿಸ್ಥಿತಿಯೂ ತೀರಾ ಹದಗೆಟ್ಟಿದೆ. ಅಲ್ಲದೇ ಲಕ್ನೋ, ರಾಯ್ ಬರೇಲಿ, ಅಮೇಥಿ, ಸುಲ್ತಾನ್ಪುರ್, ಬಹ್ರೈಚ್ ಮತ್ತು ಅಂಬೇಡ್ಕರ್ ನಗರದಲ್ಲೂ ಭಾರೀ ಮಳೆ ಮುಂದುವರಿದಿದ್ದು, ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಗ್ರೌಂಡ್‌ ಪೆನೆಟ್ರೇಟಿಂಗ್ ರೇಡಾರ್‌ನಿಂದ ಅಸ್ಥಿಪಂಜರ ಪತ್ತೆ ಕಾರ್ಯ ನಡೆಸಿ – ಎಸ್‌ಐಟಿಗೆ ದೂರುದಾರ ಹೊಸ ರಿಕ್ವೆಸ್ಟ್‌

    ಪ್ರಯಾಗ್‌ರಾಜ್‌ನಲ್ಲಿ ಹದಗೆಟ್ಟ ಪರಿಸ್ಥಿತಿ
    ಪ್ರಯಾಗ್‌ರಾಜ್‌ನಲ್ಲಿ ಗಂಗಾ-ಯಮುನಾ ಸಂಗಮದ ನಂತರ ಬರುವ ಪ್ರದೇಶಗಳು ಕೆಟ್ಟ ಸ್ಥಿತಿಯಲ್ಲಿವೆ. ಉಕ್ಕಿದ ಗಂಗೆ, ಯಮುನೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ NDRF, SDRF ತಂಡಗಳು ಈಗಾಗಲೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಉಳಿದಂತೆ ಜನರು ಸುರಕ್ಷಿತ ಸ್ಥಳಗಳಲ್ಲಿರುವಂತೆ ಸರ್ಕಾರ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಕೈದಿ ನಂ. 15528 – ಪ್ರಜ್ವಲ್‍ಗೆ 524 ರೂ. ದಿನಗೂಲಿ, ಕೆಲಸವೇನು ಗೊತ್ತಾ?

  • ಸರಯೂ ನದಿಗೆ ಬಿದ್ದ ಕಾರು – ದೇವಸ್ಥಾನಕ್ಕೆ ಹೊರಟ್ಟಿದ್ದ 11 ಜನ ಮಸಣಕ್ಕೆ; ಮೋದಿ ಸಂತಾಪ

    ಸರಯೂ ನದಿಗೆ ಬಿದ್ದ ಕಾರು – ದೇವಸ್ಥಾನಕ್ಕೆ ಹೊರಟ್ಟಿದ್ದ 11 ಜನ ಮಸಣಕ್ಕೆ; ಮೋದಿ ಸಂತಾಪ

    – ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ

    ಲಕ್ನೋ: ಬೊಲೆರೊ ಕಾರು ಸರಯೂ ನದಿಗೆ (Saryu canal) ಬಿದ್ದು 11 ಜನರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ಸಂಭವಿಸಿದೆ. ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ .

    ಉತ್ತರ ಪ್ರದೇಶದ ಗೊಂಡಾಯಲ್ಲಿ (Gonda) ಘಟನೆ ನಡೆದಿದೆ. ಮೃತರು ಸಿಹಗಾಂವ್‌ನಿಂದ ಖರ್ಗುಪುರದ ಪೃಥ್ವಿನಾಥ ದೇವಸ್ಥಾನದಲ್ಲಿ (Prithvi Nath Temple) ಪ್ರಾರ್ಥನೆ ಸಲ್ಲಿಸಲು ಹಾಗೂ ಪವಿತ್ರ ನೀರು ಅರ್ಪಿಸಲು ಬೊಲೆರೊ ಕಾರಿನಲ್ಲಿ ಹೊರಟಿದ್ದರು. ಬೆಲ್ವಾ ಬಹುತಾ ಬಳಿ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ಚಾಲಕ ಸೇರಿದಂತೆ 15 ಜನರಿದ್ದ ಕಾರು ಸರಯೂ ನದಿಗೆ ಬಿದ್ದಿದೆ. ಇದನ್ನೂ ಓದಿ: ಜಾಮೀನಿನ ಮೇಲೆ ಹೊರಗೆ ಬಂದು ಸಂತ್ರಸ್ತೆಗೆ ಗುಂಡು ಹಾರಿಸಿದ ರೇಪ್‌ ಆರೋಪಿ

    ಕಾರು ನದಿಗೆ ಬೀಳುತ್ತಿದ್ದಂತೆ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಆನಂತರ ಗ್ರಾಮಸ್ಥರು ಮತ್ತು ರಕ್ಷಣಾ ತಂಡದ ಸಹಾಯದಿಂದ 11 ಮೃತದೇಹಗಳನ್ನ ಹೊರತೆಗೆದಿದ್ದಾರೆ. ಇನ್ನುಳಿದ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಘಟನೆಯ ತನಿಖೆ ಪ್ರಾರಂಭವಾಗಿದೆ.

    ಪಿಎಂ, ಸಿಎಂ ಸಂತಾಪ
    ಘಟನೆ ಕುರಿಯು ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇದನ್ನೂ ಓದಿ: 77ನೇ ವಸಂತಕ್ಕೆ ಕಾಲಿಟ್ಟ ಸಿದ್ದರಾಮಯ್ಯಗೆ ಕನ್ನಡದಲ್ಲೇ ಶುಭ ಹಾರೈಸಿದ ತಮಿಳುನಾಡು ಸಿಎಂ

  • ವರ್ತೂರ್‌ ಪ್ರಕಾಶ್‌ ಕಿಡ್ನ್ಯಾಪ್‌ ಕೇಸಲ್ಲಿ ಆರೋಪಿಯಾಗಿದ್ದ ಭೂಗತ ಪಾತಕಿ ರವಿ ಪೂಜಾರಿ ಸಹಚರ ಬಂಧನ

    ವರ್ತೂರ್‌ ಪ್ರಕಾಶ್‌ ಕಿಡ್ನ್ಯಾಪ್‌ ಕೇಸಲ್ಲಿ ಆರೋಪಿಯಾಗಿದ್ದ ಭೂಗತ ಪಾತಕಿ ರವಿ ಪೂಜಾರಿ ಸಹಚರ ಬಂಧನ

    ಕೋಲಾರ: ಭೂಗತ ಪಾತಕಿ ರವಿ ಪೂಜಾರಿ (Ravi Pujari) ಸಹಚರನನ್ನು ಕೋಲಾರ ಪೊಲೀಸರ ತಂಡ ಉತ್ತರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

    ಆರೋಪಿ ಕವಿರಾಜ್‌ನನ್ನು ಯುಪಿಯ ನೋಯ್ಡಾ ನಗರದಲ್ಲಿ ಬಂಧಿಸಲಾಗಿದೆ. ದೇಶಾದ್ಯಂತ ವಿವಿಧ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ. ಇದನ್ನೂ ಓದಿ: ಜಮ್ಮು ಕಾಶ್ಮೀರ ಭೂಕುಸಿತ – ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌, ಪುತ್ರ ಸಾವು

    ​ಮಾಜಿ ಸಚಿವ ವರ್ತೂರ್ ಪ್ರಕಾಶ್​ ಕಿಡ್ನ್ಯಾಪ್​ ಪ್ರಕರಣ ಸೇರಿ 14 ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ದೆಹಲಿ, ಉತ್ತರಾಖಂಡ​, ಉತ್ತರ ಪ್ರದೇಶದಲ್ಲಿ ಹುಡುಕಾಡಿ ಆರೋಪಿಯನ್ನು ಬಂಧಿಸಲಾಗಿದೆ.

    ಕೋಲಾರ ಸೆನ್​ ಸಿಪಿಐ ಎಸ್​.ಆರ್.ಜಗದೀಶ್​ ನೇತೃತ್ವದ ತಂಡದಿಂದ ಕವಿರಾಜ್​ ಬಂಧನವಾಗಿದೆ. ಬಂಧಿತ ಆರೋಪಿಯನ್ನು ಕೋಲಾರ ಸತ್ರ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ. ಇದನ್ನೂ ಓದಿ: ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕ ಬಾವಿಯಲ್ಲಿ ಶವವಾಗಿ ಪತ್ತೆ

  • Uttar Pradesh | ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಯ ಕಿಡ್ನ್ಯಾಪ್ – ದೃಶ್ಯ ಸಿಸಿಟಿವಿಯಲ್ಲಿ ಸೆರೆ

    Uttar Pradesh | ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಯ ಕಿಡ್ನ್ಯಾಪ್ – ದೃಶ್ಯ ಸಿಸಿಟಿವಿಯಲ್ಲಿ ಸೆರೆ

    – ವಿದ್ಯಾರ್ಥಿನಿ ರಕ್ಷಣೆ, ಆರೋಪಿ ಪೊಲೀಸರ ವಶಕ್ಕೆ

    ಲಕ್ನೋ: ಕಾಲೇಜಿಗೆ ಬಂದಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು (Student) 19 ವರ್ಷದ ಯುವಕನೊಬ್ಬ ಕಿಡ್ನ್ಯಾಪ್ (Kidnap) ಮಾಡಿದ ಘಟನೆ ಉತ್ತರ ಪ್ರದೇಶದ (Uttar Pradesh) ನೋಯ್ಡಾದ (Noida) ಸೆಕ್ಟರ್-24 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಗಿಜೋರ್ ಪ್ರದೇಶದ ಸೆಕ್ಟರ್-53ರ ಖಾಸಗಿ ಶಾಲೆಯ ಮುಂಭಾಗ ವಿದ್ಯಾರ್ಥಿನಿಯನ್ನು ಅಪಹರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಕಿಡ್ನ್ಯಾಪ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಲವಂತವಾಗಿ ಕಾರಿನೊಳಗೆ ವಿದ್ಯಾರ್ಥಿನಿಯನ್ನ ಹತ್ತಿಸುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೂಡಲೇ ಅಲರ್ಟ್ ಆಗಿ ಕಾರ್ಯಾಚರಣೆ ಮಾಡಿದ ನೋಯ್ಡಾ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೃಥ್ಲಾ ವೃತ್ತದ ಬಳಿ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ನಾರಾಯಣಪುರ ಜಲಾಶಯದಿಂದ 1.45 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ

    ಆರೋಪಿ ಮೋನೊ ಯಾದವ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು, ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ ಆರೋಪಿ ಕಿಡ್ನ್ಯಾಪ್ ಮಾಡಲು ಬಳಸಿದ ಕಾರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.‌ ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ: ಎಸ್‌ಐಟಿ ತನಿಖೆ ವಿಚಾರದಲ್ಲಿ ಸರ್ಕಾರದ ಎಚ್ಚರಿಕೆ ಹೆಜ್ಜೆ

  • ಪೊಲೀಸಪ್ಪನ ಪತ್ನಿಗೆ ಅತ್ತೆ, ಮಾವನಿಂದ ಕಿರುಕುಳ – ವಿಡಿಯೋ ಹರಿಬಿಟ್ಟು ಮಹಿಳೆ ಆತ್ಮಹತ್ಯೆ

    ಪೊಲೀಸಪ್ಪನ ಪತ್ನಿಗೆ ಅತ್ತೆ, ಮಾವನಿಂದ ಕಿರುಕುಳ – ವಿಡಿಯೋ ಹರಿಬಿಟ್ಟು ಮಹಿಳೆ ಆತ್ಮಹತ್ಯೆ

    ಲಕ್ನೋ: ಅತ್ತೆ-ಮಾವ ನೀಡುತ್ತಿದ್ದ ಕಿರುಕುಳ ಸಹಿಸಲಾಗದೇ ಪೊಲೀಸ್ ಕಾನ್‌ಸ್ಟೇಬಲ್ ಪತ್ನಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಲಕ್ನೋದಲ್ಲಿ (Lucknow) ನಡೆದಿದೆ.

    ಪೊಲೀಸ್ ಕಾನ್‌ಸ್ಟೇಬಲ್ ಅನುರಾಗ್ ಸಿಂಗ್ ಅವರ ಪತ್ನಿ ಸೌಮ್ಯ ಕಶ್ಯಪ್ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.ಇದನ್ನೂ ಓದಿ: ಇಂದು ಮದ್ದೂರಿನಲ್ಲಿ ಬೃಹತ್ ಸಾಧನಾ ಸಮಾವೇಶ – 1,146.76 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ

    ಮೂಲಗಳ ಪ್ರಕಾರ, ಬಕ್ಷಿ ಕಾ ತಲಾಬ್ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್‌ವೊಬ್ಬರು ಇನ್‌ಸ್ಟಾದಲ್ಲಿ ವಿಡಿಯೋ ರೀಲ್ಸ್ ನೋಡುವಾಗ ಮೃತ ಪೊಲೀಸ್ ಕಾನ್‌ಸ್ಟೇಬಲ್ ಪತ್ನಿ ಹರಿಬಿಟ್ಟ ವಿಡಿಯೋ ಗಮನಿಸಿದ್ದಾರೆ. ನಂತರ ಪ್ರಕರಣ ಬೆಳಕಿಗೆ ಬಂದಿದೆ.

    ವಿಡಿಯೋದಲ್ಲಿ, ಅತ್ತೆ, ಮಾವ ಹಾಗೂ ಮೈದುನ ಮೂವರು ಸೇರಿ ನನಗೆ ಕಿರುಕುಳ ನೀಡುತ್ತಿದ್ದಾರೆ. ನನ್ನ ಗಂಡನನ್ನು ನನ್ನಿಂದ ಬೇರ್ಪಡಿಸಿ, ಅವರಿಗೆ ಬೇರೆ ಮದುವೆ ಮಾಡಲು ಬಯಸುತ್ತಿದ್ದಾರೆ. ಅದೇ ಕಾರಣಕ್ಕೆ ನನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ. ಜೊತೆಗೆ ಮೈದುನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

    ಘಟನೆ ಸಂಬಂಧ ಉತ್ತರ ಲಕ್ನೋ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಅಧಿಕಾರಿ ಜಿತೇಂದ್ರ ದುಬೆ ಅವರು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೃಢಪಡಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಇದನ್ನೂ ಓದಿ: UP | ಅವಸಾನೇಶ್ವರ ಮಹಾದೇವ ದೇವಾಲಯದಲ್ಲಿ ಕಾಲ್ತುಳಿತ – ಇಬ್ಬರು ಭಕ್ತರು ಸಾವು, 29 ಮಂದಿಗೆ ಗಾಯ

  • UP | ಅವಸಾನೇಶ್ವರ ಮಹಾದೇವ ದೇವಾಲಯದಲ್ಲಿ ಕಾಲ್ತುಳಿತ – ಇಬ್ಬರು ಭಕ್ತರು ಸಾವು, 29 ಮಂದಿಗೆ ಗಾಯ

    UP | ಅವಸಾನೇಶ್ವರ ಮಹಾದೇವ ದೇವಾಲಯದಲ್ಲಿ ಕಾಲ್ತುಳಿತ – ಇಬ್ಬರು ಭಕ್ತರು ಸಾವು, 29 ಮಂದಿಗೆ ಗಾಯ

    ಲಕ್ನೋ: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿರುವ (Barabanki) ದೇವಾಲಯವೊಂದರಲ್ಲಿ ಕಾಲ್ತುಳಿತ (Stampede) ಸಂಭವಿಸಿದೆ. ಇಬ್ಬರು ಭಕ್ತರು ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

    ಪವಿತ್ರ ಶ್ರಾವಣ ಮಾಸದ ಹಿನ್ನೆಲೆ ಇಂದು (ಸೋಮವಾರ) ಬಾರಾಬಂಕಿಯಲ್ಲಿರುವ ಪ್ರಾಚೀನ ಅವಸಾನೇಶ್ವರ ಮಹಾದೇವ ದೇವಾಲಯದಲ್ಲಿ (Awsaneshwar Mahadev Temple) ಭಕ್ತರು ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ಈ ವೇಳೆ ಕೆಲ ಕೋತಿಗಳು ಓವರ್‌ಹೆಡ್ ವಿದ್ಯುತ್ ತಂತಿಗಳ ಮೇಲೆ ಹಾರಿವೆ. ಇದರಿಂದ ವಿದ್ಯುತ್‌ ತಂತಿ ತುಂಡಾಗಿ ತಗಡಿನ ಶೆಡ್‌ ಮೇಲೆ ಬಿದ್ದಿದ್ದು ದುರಂತಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕಠಿಣ ಸಂದರ್ಭದಲ್ಲೂ ಅಭಿವೃದ್ಧಿಯ ದೀಪ ಬೆಳಗಿಸಬಹುದು – ಮಾಜಿ ಮಾವೋವಾದಿಗಳ ಮೀನು ಕೃಷಿಗೆ ಮೋದಿ ಶ್ಲಾಘನೆ

    ಕೆಲವರಿಗೆ ನೇರವಾಗಿ ವಿದ್ಯುತ್‌ ಶಾಕ್‌ ತಗುಲಿದೆ. ಇದರಿಂದ ಇತರ ಭಕ್ತರಲ್ಲೂ ಆತಂಕ ಹೆಚ್ಚಾಗಿ ನೂಕು ನುಗ್ಗಲು ಶುರುವಾಗಿ, ಕಾಲ್ತುಳಿತ ಉಂಟಾಗಿದೆ. ಕಾಲ್ತುಳಿತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 29 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನ ಸಮೀಪದ ತ್ರಿವೇದಿಗಂಜ್ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಶಶಾಂಕ್ ತ್ರಿಪಾಠಿ ತಿಳಿಸಿದ್ದಾರೆ.  ಇದನ್ನೂ ಓದಿ: Mann ki Baat: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾಗೆ ಮೋದಿ ಪ್ರಶಂಸೆ

    ಘಟನೆ ತಿಳಿದ ಸಿಎಂ ಯೋಗಿ ಆದಿತ್ಯನಾಥ್‌ ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಗಾಯಾಳುಗಳಿಗೆ ತ್ವರಿತ ಪರಿಹಾರ ಮತ್ತು ಸರಿಯಾದ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.  ಇದನ್ನೂ ಓದಿ: ಆಪರೇಷನ್‌ ಸಿಂಧೂರ | ಲೋಕಸಭೆಯಲ್ಲಿಂದು 16 ಗಂಟೆಗಳ ಮ್ಯಾರಥಾನ್‌ ಚರ್ಚೆ, ಪ್ರಧಾನಿ ಮೋದಿ ಭಾಗಿ

  • ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಹರ್ಷವರ್ಧನ್ ಜೈನ್ ಬಂಧನ – 45 ಲಕ್ಷ ಹಣ, ಐಷಾರಾಮಿ ಕಾರುಗಳು ವಶಕ್ಕೆ

    ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಹರ್ಷವರ್ಧನ್ ಜೈನ್ ಬಂಧನ – 45 ಲಕ್ಷ ಹಣ, ಐಷಾರಾಮಿ ಕಾರುಗಳು ವಶಕ್ಕೆ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿರುವ (Ghaziabad) ಒಂದು ಭವ್ಯವಾದ ಬಂಗಲೆ… ಬಂಗಲೆಯಲ್ಲಿ ಐಷಾರಾಮಿ ಕಾರುಗಳು… ಪಶ್ಚಿಮ ಆರ್ಕ್ಟಿಕಾ, ಸಬ್ರೋಗಾ, ಪೌಲ್ವಿಯಾ ಮತ್ತು ಲೊಡೋನಿಯಾದಂತಹ ರಾಷ್ಟ್ರಗಳ ರಾಯಭಾರಿ ಕಚೇರಿ (Fake Embassy) ಎಂದು ವಂಚನೆ ಮಾಡ್ತಿದ್ದ ಶಂಕಿತ ಹರ್ಷವರ್ಧನ್ ಜೈನ್‌ನನ್ನು ಯುಪಿ ಎಸ್‌ಟಿಎಫ್ ಭೇದಿಸಿ, ಬಂಧಿಸಿದೆ.

    ದಾಳಿಯಲ್ಲಿ ಹಲವಾರು ನಕಲಿ ಅಂಚೆಚೀಟಿಗಳು, ಪಾಸ್‌ಪೋರ್ಟ್‌ಗಳು, ರಾಜತಾಂತ್ರಿಕ ನೋಂದಣಿ ಫಲಕಗಳು, ವಿದೇಶಿ ಮತ್ತು ದೇಶೀಯ ನಗದು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಸಂಸತ್‌ ಭವನ ಪಕ್ಕದ ಮಸೀದಿಯಲ್ಲಿ ಎಸ್ಪಿ ಸಂಸದರೊಟ್ಟಿಗೆ ಅಖಿಲೇಶ್‌ ಯಾದವ್‌ ಸಭೆ – ಕೆರಳಿದ ಬಿಜೆಪಿ

    ಆರೋಪಿಯು ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ಹಲವಾರು ಕಾರುಗಳನ್ನು ಹೊಂದಿದ್ದ. ಜೊತೆಗೆ ಪ್ರಧಾನಿ, ರಾಷ್ಟ್ರಪತಿ ಮತ್ತು ಇತರ ಗಣ್ಯರೊಂದಿಗೆ ತಮ್ಮ ಮಾರ್ಫ್ ಮಾಡಿದ ಛಾಯಾಚಿತ್ರಗಳನ್ನು ಬಳಸಿಕೊಂಡು ಜನರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿರೋದು ಬೆಳಕಿಗೆ ಬಂದಿದೆ. ದೇಶದಲ್ಲಿ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ದಲ್ಲಾಳಿ ಮಾಡುವುದು ಮತ್ತು ಶೆಲ್ ಕಂಪನಿಗಳ ಮೂಲಕ ಹವಾಲಾ ದಂಧೆಯನ್ನು ನಡೆಸುವುದು ಪತ್ತೆಯಾಗಿದೆ.

    ಹರ್ಷವರ್ಧನ್ ಚಂದ್ರಸ್ವಾಮಿ ಮತ್ತು ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ ಅವರೊಂದಿಗೆ ಈ ಹಿಂದೆ ಸಂಪರ್ಕ ಹೊಂದಿದ್ದ ಎಂದು ತನಿಖೆಗಳು ಬಹಿರಂಗಪಡಿಸಿವೆ. 2011 ರಲ್ಲಿ, ಆತನ ಬಳಿ ಅಕ್ರಮ ಸ್ಯಾಟಲೈಟ್ ಫೋನ್ ಕೂಡ ಪತ್ತೆಯಾಗಿತ್ತು, ಇದಕ್ಕಾಗಿ ಕವಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಇಂದಿನಿಂದ ನಾಲ್ಕು ದಿನ ಪ್ರಧಾನಿ ಮೋದಿ ವಿದೇಶ ಪ್ರವಾಸ; ಬ್ರಿಟನ್, ಮಾಲ್ಡೀವ್ಸ್‌ಗೆ ಭೇಟಿ

    ವಶಪಡಿಸಿಕೊಂಡ ವಸ್ತುಗಳು:
    1. ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ನಾಲ್ಕು ಕಾರ್‌ಗಳು
    2. 12 ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳು
    3. ವಿದೇಶಾಂಗ ಸಚಿವಾಲಯದ ಮುದ್ರೆಯೊಂದಿಗೆ ನಕಲಿ ದಾಖಲೆಗಳು
    4. ಎರಡು ನಕಲಿ ಪ್ಯಾನ್ ಕಾರ್ಡ್‌ಗಳು
    5. ವಿವಿಧ ದೇಶಗಳು ಮತ್ತು ಕಂಪನಿಗಳ ಮೂವತ್ನಾಲ್ಕು ಸೀಲುಗಳು
    6. ಎರಡು ನಕಲಿ ಪ್ರೆಸ್ ಕಾರ್ಡ್‌ಗಳು
    7. 44.7 ಲಕ್ಷ ರೂ. ನಗದು
    8. ವಿವಿಧ ದೇಶಗಳಿಂದ ಬಂದ ವಿದೇಶಿ ಕರೆನ್ಸಿ
    9. ವಿವಿಧ ಕಂಪನಿಗಳ ದಾಖಲೆಗಳು
    10. ಹೆಚ್ಚುವರಿ ಹದಿನೆಂಟು ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳು ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ.

  • 8ರ ಬಾಲಕನ ಕಿಡ್ನ್ಯಾಪ್‌ ಮಾಡಿ 80 ಲಕ್ಷಕ್ಕೆ ಬೇಡಿಕೆ – ಯುಪಿ ಉದ್ಯಮಿಯ ಮಗ ರಾಜಸ್ಥಾನದಲ್ಲಿ ಶವವಾಗಿ ಪತ್ತೆ

    8ರ ಬಾಲಕನ ಕಿಡ್ನ್ಯಾಪ್‌ ಮಾಡಿ 80 ಲಕ್ಷಕ್ಕೆ ಬೇಡಿಕೆ – ಯುಪಿ ಉದ್ಯಮಿಯ ಮಗ ರಾಜಸ್ಥಾನದಲ್ಲಿ ಶವವಾಗಿ ಪತ್ತೆ

    ಜೈಪುರ್‌: ಉತ್ತರ ಪ್ರದೇಶದ (Uttar Pradesh) ಉದ್ಯಮಿಯೊಬ್ಬರ 8 ವರ್ಷದ ಮಗನನ್ನು ಅಪಹರಿಸಿ 80 ಲಕ್ಷಕ್ಕೆ ಬೇಡಿಕೆ ಇಟ್ಟು, ಬಳಿಕ ಕೊಲೆ ಮಾಡಿ ರಾಜಸ್ಥಾನದ (Rajasthan) ಮಾನಿಯಾ ಗ್ರಾಮದಲ್ಲಿ ಹೂತು ಹಾಕಲಾಗಿದೆ.

    ಸಾವಿಗೀಡಾದ ಬಾಲಕ, ಅಭಯ್ ಸಾರಿಗೆ ಸಂಸ್ಥೆಯ ಮಾಲೀಕ ವಿಜಯ್ ಪ್ರತಾಪ್ ಅವರ ಮಗನಾಗಿದ್ದು, 1ನೇ ತರಗತಿಯಲ್ಲಿ ಓದುತ್ತಿದ್ದ. ಆತ ಏಪ್ರಿಲ್‌ನಲ್ಲಿ ಆಗ್ರಾದ (Agra) ಶಾಲೆಯಲ್ಲಿ ಆಟ ಆಡುವಾಗ ನಾಪತ್ತೆಯಾಗಿದ್ದ. ಇದಾದ ಒಂದೆರಡು ದಿನದಲ್ಲಿ ಮನೆಗೆ ಒಂದು ಪತ್ರ ಬಂದಿತ್ತು. ಅದರಲ್ಲಿ ನಿಮ್ಮ ಮಗನನ್ನು ಅಪಹರಿಸಿದ್ದೇವೆ ಎಂದು 80 ಲಕ್ಷ ರೂ.ಗೆ ಬೇಡಿಕೆ ಇಡಲಾಗಿತ್ತು. ಇದನ್ನೂ ಓದಿ: ಅಹಮದಾಬಾದ್ ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆ

    ಈಗ ಅಪಹರಣಕ್ಕೊಳಗಾದ ಬಾಲಕನ ಶವ ಪತ್ತೆಯಾಗಿದ್ದು, ರಾಜಸ್ಥಾನ ಪೊಲೀಸರು ಈ ಬಗ್ಗೆ ಆಗ್ರಾದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣದ ಹಿಂದಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ. ಎಲ್ಲಾ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಸಹಾಯಕ ಪೊಲೀಸ್ ಆಯುಕ್ತ ಅಮರದೀಪ್ ಲಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಇನ್ಸ್ಟಾದಲ್ಲಿ ಆಂಟಿಗೆ ಪ್ರೀತಿಸುವಂತೆ ಟಾರ್ಚರ್ – ಬುದ್ಧಿ ಹೇಳೋಕೆ ಬಂದವನ ಕತ್ತು ಕೊಯ್ದ ಪಾಗಲ್ ಪ್ರೇಮಿ!

    ಉತ್ತರ ಪ್ರದೇಶದ ಪೊಲೀಸರು ಬಾಲಕನ ಮನೆಯ ಬಳಿಯ ದಿನಸಿ ಅಂಗಡಿಯ ಮಾಲೀಕನ ಮೇಲೆ ಅನುಮಾನ ವ್ಯಕ್ತಪಡಿಸಿ ವಶಕ್ಕೆ ಪಡೆದಿದ್ದರು. ಆತ ಮಗುವನ್ನು ಹತ್ಯೆ ಮಾಡಿ, ಹೂತು ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

  • ಐಸಿಸ್‌ ಮಾದರಿಯಲ್ಲಿ ಧಾರ್ಮಿಕ ಮತಾಂತರ ದಂಧೆ – 6 ರಾಜ್ಯಗಳಲ್ಲಿ 10 ಮಂದಿ ಅರೆಸ್ಟ್‌, ಬೃಹತ್‌ ಜಾಲ ಭೇದಿಸಿದ UP ಪೊಲೀಸ್‌

    ಐಸಿಸ್‌ ಮಾದರಿಯಲ್ಲಿ ಧಾರ್ಮಿಕ ಮತಾಂತರ ದಂಧೆ – 6 ರಾಜ್ಯಗಳಲ್ಲಿ 10 ಮಂದಿ ಅರೆಸ್ಟ್‌, ಬೃಹತ್‌ ಜಾಲ ಭೇದಿಸಿದ UP ಪೊಲೀಸ್‌

    – ಭಾರತದಲ್ಲಿ ಮತಾಂತರಕ್ಕೆ ಅಮೆರಿಕ, ಕೆನಾಡ ಸೇರಿದಂತೆ ವಿದೇಶಗಳಿಂದ ಫಂಡಿಂಗ್‌

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಸ್ವಯಂ ಘೋಷಿತ ದೇವಮಾನವ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಮತಾಂತರದ ಸೀಕ್ರೆಟ್‌ ಬಯಲಾದ ಬೆನ್ನಲ್ಲೇ ಉತ್ತರ ಪ್ರದೇಶದ ಪೊಲೀಸರು ಮತ್ತೊಂದು ಮತಾಂತರದ ಬೃಹತ್‌ ಜಾಲವನ್ನ ಭೇದಿಸಿದ್ದಾರೆ.

    ಹೌದು. ಅಂತಾರಾಷ್ಟ್ರೀಯ ಹಣಕಾಸು ನೆರವು ಪಡೆದು ಐಸಿಸ್‌ ಮಾದರಿಯಲ್ಲಿ ಮತಾಂತರ (ISIS-Style’ Religious Conversion) ದಂಧೆ ನಡೆಸುತ್ತಿದ್ದ ಬೃಹತ್‌ ಜಾಲ ಭೇದಿಸಿರುವ ಪೊಲೀಸರು 6 ವಿಭಿನ್ನ ರಾಜ್ಯಗಳಲ್ಲಿ 10 ಮಂದಿಯನ್ನ ಬಂಧಿತರನ್ನ ಗೋವಾದ ಆಯೇಷಾ (ಅಲಿಯಾಸ್ ಎಸ್.ಬಿ. ಕೃಷ್ಣ), ಕೋಲ್ಕತ್ತಾದ ಅಲಿ ಹಸನ್ (ಅಲಿಯಾಸ್ ಶೇಖರ್ ರಾಯ್) ಮತ್ತು ಒಸಾಮಾ, ಆಗ್ರಾದ ರೆಹಮಾನ್ ಖುರೇಷಿ, ಖಲಾಪರ್, ಮುಜಫರ್‌ನಗರದ ಅಬ್ಬು ತಾಲಿಬ್, ಡೆಹ್ರಾಡೂನ್‌ನ ಅಬುರ್ ರೆಹಮಾನ್, ದೆಹಲಿಯ ಮುಸ್ತಫಾ (ಅಲಿಯಾಸ್ ಮನೋಜ್), ಜೈಪುರದ ಮೊಹಮ್ಮದ್ ಅಲಿ ಮತ್ತು ಜುನೈದ್ ಖುರೇಷಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: Uttar Pradesh | ಸ್ಕೂಲ್ ವ್ಯಾನ್‌ನಲ್ಲಿ 4 ವರ್ಷದ ಬಾಲಕಿ ಮೇಲೆ ರೇಪ್ – ಡ್ರೈವರ್ ಬಂಧನ

    ಬೆನ್ನುಬಿದ್ದದ್ದು ಹೇಗೆ?
    ಕಳೆದ ಮಾರ್ಚ್‌ ತಿಂಗಳಲ್ಲಿ 33 ಮತ್ತು 18 ವರ್ಷದ ಇಬ್ಬರು ಸಹೋದರಿಯರು ಕಾಣೆಯಾಗಿದ್ದರು. ಈ ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಅವರನ್ನು ತಮ್ಮ ಧರ್ಮ ಬದಲಾಯಿಸಲು ಒತ್ತಾಯಿಸಲಾಗಿದೆ ಜೊತೆಗೆ ಮೂಲಭೂತ ವಾದಕ್ಕೆ ಒಳಗಾಗುತ್ತಿದ್ದಾರೆ ಎಂಬುದು ಗೊತ್ತಾಯಿತು. ಅಲ್ಲದೇ ‘ಲವ್ ಜಿಹಾದ್’ ಮತ್ತು ಮೂಲಭೂತವಾದದಲ್ಲಿ ತೊಡಗಿರುವ ಗ್ಯಾಂಗ್ ಈ ಸಹೋದರಿಯರನ್ನ ಗುರಿಯಾಗಿಸಿಕೊಂಡಿದೆ ಎಂಬುದನ್ನೂ ಕಂಡುಕೊಂಡರು. ಇಲ್ಲಿಂದ ತನಿಖೆ ಶುರು ಮಾಡಿದ ಪೊಲೀಸರು ದಂಧೆಯನ್ನ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರ ಗುಂಪು ಐಸಿಸ್‌ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಂದಿಗೆ ಮಾತನಾಡಿದ ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾಜೀವ್ ಕೃಷ್ಣ, ಮತಾಂತರ ದಂಧೆ ತಡೆಯುವ ನಿಟ್ಟಿನಲ್ಲಿ ಪೊಲೀಸರು ʻಮಿಷನ್ ಅಸ್ಮಿತಾʼಕಾರ್ಯಾಚರಣೆ ಆರಂಭಿಸಿದ್ದು, ಮತಾಂತರ ಸಿಂಡಿಕೇಟ್‌ನ ಪ್ರಮುಖರಾದ ಮೊಹಮ್ಮದ್ ಉಮರ್ ಗೌತಮ್ ಮತ್ತು ಮುಫ್ತಿ ಜಹಾಂಗೀರ್ ಆಲಂ ಖಾಸ್ಮಿನನ್ನ ವಿಶೇಷ ತಂಡ ಬಂಧಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿಯನ್ನ TRF ನಡೆಸಿದೆ ಅನ್ನೋದಕ್ಕೆ ಸಾಕ್ಷಿ ತೋರಿಸಿ – ಉಗ್ರ ಸಂಘಟನೆಗೆ ಪಾಕ್‌ ನೇರ ಬೆಂಬಲ

    ಛಂಗೂರ್ ಬಾಬಾ ನೇತೃತ್ವದ ಸಿಂಡಿಕೇಟ್ ವಿಚಾರಣೆಯನ್ನ ಎಸ್ ಐಟಿ ಮತ್ತು ವಿಶೇಷ ಕಾರ್ಯಪಡೆ ಮುಂದುವರೆಸಿವೆ. ಲವ್ ಜಿಹಾದ್, ಅಕ್ರಮವಾಗಿ ಮತಾಂತರ ದಂಧೆ ನಡೆಸುವವರು, ತೀವ್ರವಾದಿಗಳು ಮತ್ತು ಜಾಗತಿಕ ಮಟ್ಟದಲ್ಲಿರುವ ಜಿಹಾದಿಗಳ ಜೊತೆಗೆ ಸೇರಿಕೊಂಡು ರಾಷ್ಟ್ರದ ಭದ್ರತೆಗೆ ಧಕ್ಕೆ ತರಲು ಪ್ರಯತ್ನಿಸುವ ಜಾಲದೊಂದಿಗೆ ಕೈ ಜೋಡಿಸುತ್ತಿರುವುದು ಕಂಡುಬಂದಿದೆ. ಈ ಸಂಬಂಧ ಆರು ರಾಜ್ಯಗಳಾದ್ಯಂತ 10 ಜನರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಅಮೆರಿಕ, ಕೆನಡಾದಿಂದ ಫಂಡಿಂಗ್‌
    ಪ್ರಕರಣದ ತನಿಖೆ ನಡೆಸುತ್ತಿದ್ದಂತೆ ಇನ್ನಷ್ಟು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿವೆ. ಈ ಕುರಿತು ಮಾಹಿತಿ ನೀಡಿರುವ ಆಗ್ರಾ ಪೊಲೀಸ್‌ ಆಯುಕ್ತ, ಈ ಮತಾಂತರ ದಂಧೆಗೆ ಅಮೆರಿಕ ಮತ್ತು ಕೆನಡಾ ಸೇರಿದಂತೆ ವಿದೇಶಗಳಿಂದ ಹಣೆ ಹೊಳೆಯೇ ಹರಿದುಬಂದಿದೆ. ಸದ್ಯಕ್ಕೆ ಅಮೆರಿಕ ಮತ್ತು ಕೆನಡಾದ ಹಣದ ಮೂಲದ ಬಗ್ಗೆ ಸುಳಿವು ಸಿಕ್ಕಿದೆ. ಉಳಿದ ದೇಶಗಳಿಂದ ಹಣ ಸಂದಾಯವಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಪುಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ – ಕೆಲಸದ ಒತ್ತಡವೇ ಕಾರಣ ಅಂತ ಡೆತ್ ನೋಟ್ ಬರೆದಿಟ್ಟು ಸೂಸೈಡ್

    ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಉತ್ತರ ಪ್ರದೇಶ ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆ ವಿಶೇಷ ಕಾರ್ಯಪಡೆ (STF) ಮತ್ತು ಭಯೋತ್ಪಾದನಾ ನಿಗ್ರಹ ದಳ (ATS) ಸೇರಿದಂತೆ ವಿಶೇಷ ಘಟಕಗಳನ್ನು ಕರೆಸಿಕೊಂಡಿದ್ದಾರೆ. ಇದನ್ನೂ ಓದಿ: 10 ವರ್ಷಗಳಿಂದ ಭಾರತದಲ್ಲಿ ಮಂಗಳಮುಖಿ ವೇಷದಲ್ಲಿದ್ದ ಅಬ್ದುಲ್ ಕಲಾಂ ಅರೆಸ್ಟ್‌