Tag: uttar pradesh

  • ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದವಳು 2 ವರ್ಷದ ಬಳಿಕ ಪ್ರತ್ಯಕ್ಷ – ಕಾನೂನು ಕುಣಿಕೆಯಿಂದ ಪತಿ, ಅತ್ತೆ, ಮಾವ ಪಾರು!

    ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದವಳು 2 ವರ್ಷದ ಬಳಿಕ ಪ್ರತ್ಯಕ್ಷ – ಕಾನೂನು ಕುಣಿಕೆಯಿಂದ ಪತಿ, ಅತ್ತೆ, ಮಾವ ಪಾರು!

    ಲಕ್ನೋ: 2023ರಲ್ಲಿ ಉತ್ತರ ಪ್ರದೇಶದಲ್ಲಿ (Uttar Pradesh) ವರದಕ್ಷಿಣೆ (Dowry) ಕಿರುಕುಳ ನೀಡಿ ಮಹಿಳೆಯೊಬ್ಬಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಮಹಿಳೆ 2 ವರ್ಷದ ಬಳಿಕ ಪತ್ತೆಯಾಗಿದ್ದು, ಪ್ರಕರಣದಲ್ಲಿ ಸಿಲುಕಿದ್ದ ಮಹಿಳೆಯ ಪತಿ, ಆಕೆಯ ಅತ್ತೆ ಹಾಗೂ ಮಾವ ಸೇರಿದಂತೆ 6 ಮಂದಿ ಕಾನೂನಿನ ಕುಣಿಕೆಯಿಂದ ಪಾರಾಗಿದ್ದಾರೆ.

    2023 ರಲ್ಲಿ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಪತಿಯ ಮನೆಯಿಂದ 20 ವರ್ಷದ ಮಹಿಳೆ ನಾಪತ್ತೆಯಾಗಿದ್ದಳು. ಈ ಸಂಬಂಧ 2023ರ ಅಕ್ಟೋಬರ್‌ 23 ರಂದು ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ತೀವ್ರ ಹುಡುಕಾಟದ ಬಳಿಕವೂ ಆಕೆ ಪತ್ತೆ ಆಗದೇ ಇದ್ದಿದ್ದರಿಂದ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಆಕೆಯ ಪೋಷಕರು ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಆರೋಪಿಸಿದ್ದರು. ಬಳಿಕ ವರದಕ್ಷಿಣೆ ಕಿರುಕುಳ ನೀಡಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ಸಹ ನೀಡಿದ್ದರು. ಇದನ್ನೂ ಓದಿ: ಹೊನ್ನಾವರ | ಮನೆಕೆಲಸದಾಕೆ ಮುಂದೆ ಬೆತ್ತಲಾಗಿ ಓಡಾಟ, ಸೆಕ್ಸ್‌ಗೆ ಒತ್ತಾಯ – ಮಾಲೀಕನ ವಿರುದ್ಧ ಎಫ್‌ಐಆರ್‌

    ತನಿಖೆ ನಡೆಸಿದ್ದ ಪೊಲೀಸರಿಗೆ ಮಹಿಳೆಯ ಯಾವ ಕುರುಹುಗಳು ಪತ್ತೆಯಾಗಿರಲಿಲ್ಲ. ನ್ಯಾಯಾಲಯದ ಆದೇಶದಂತೆ ಮಹಿಳೆಯ ಪತಿ ಹಾಗೂ 6 ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಈಗ ಮಹಿಳೆ ಮಧ್ಯಪ್ರದೇಶದಲ್ಲಿ ಪ್ರತ್ಯಕ್ಷಳಾಗಿದ್ದಾಳೆ.

    ಮಹಿಳೆ ಮಧ್ಯಪ್ರದೇಶದಲ್ಲಿ ಏನು ಮಾಡುತ್ತಿದ್ದಳು ಮತ್ತು ಇಷ್ಟು ದಿನ ಆಕೆ ಕುಟುಂಬಸ್ಥರನ್ನು ಏಕೆ ಸಂಪರ್ಕಿಸಲಿಲ್ಲ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈಗಾಗಲೇ ನ್ಯಾಯಾಲಯದಲ್ಲಿ ನಡೆಯುತ್ತಿರುವ ವರದಕ್ಷಿಣೆ ಹತ್ಯೆ ಪ್ರಕರಣದ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕೆಲಸ ಉಳಿಸಿಕೊಳ್ಳಲು ಹಸುಗೂಸನ್ನು ಕಾಡಿಗೆ ಎಸೆದ ದಂಪತಿ

  • 35ರ ಮಹಿಳೆ ಮದುವೆಯಾದ 75ರ ವೃದ್ಧ – ರಾತ್ರಿ ಒಟ್ಟಿಗೆ ಸಮಯ ಕಳೆದ್ರು; ಮರುದಿನವೇ ವೃದ್ಧ ಸಾವು

    35ರ ಮಹಿಳೆ ಮದುವೆಯಾದ 75ರ ವೃದ್ಧ – ರಾತ್ರಿ ಒಟ್ಟಿಗೆ ಸಮಯ ಕಳೆದ್ರು; ಮರುದಿನವೇ ವೃದ್ಧ ಸಾವು

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಕುಚ್‌ಮುಚ್‌ ಗ್ರಾಮದಲ್ಲಿ 75ರ ವೃದ್ಧನೊಬ್ಬ 35 ವರ್ಷದ ಮಹಿಳೆಯನ್ನು ಮದುವೆಯಾಗಿ, ಮಾರನೆ ದಿನವೇ ಮೃತಪಟ್ಟಿರುವ ಘಟನೆ ನಡೆದಿದೆ.

    ಜೌನ್‌ಪುರ ಜಿಲ್ಲೆಯ ಕುಚ್‌ಮುಚ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆ ವ್ಯಕ್ತಿ ವರ್ಷದ ಹಿಂದಷ್ಟೇ ತನ್ನ ಮೊದಲ ಪತ್ನಿಯನ್ನು ಕಳೆದುಕೊಂಡಿದ್ದ. ಅಂದಿನಿಂದ ಒಂಟಿಯಾಗಿದ್ದ. ವೃದ್ಧನಿಗೆ ಮಕ್ಕಳಿರಲಿಲ್ಲ. ಜೊತೆಗೆ ಯಾರಾದರು ಇರಬೇಕೆಂಬ ಆಶಯದೊಂದಿಗೆ ತನಿಗಿಂತ ಅರ್ಧ ವಯಸ್ಸಿನ ಕಿರಿಯವಳನ್ನು ವಿವಾಹವಾಗಿದ್ದ. ಆದರೆ, ಮದುವೆಯಾದ ಮಾರನೇ ದಿನವೇ ವೃದ್ಧಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಫಿಲಿಪಿನ್ಸ್‌ನಲ್ಲಿ ಪ್ರಬಲ ಭೂಕಂಪ – 31 ಮಂದಿ ಸಾವು

    ಮೊದಲ ಪತ್ನಿ ತೀರಿಕೊಂಡ ಮೇಲೆ ಮತ್ತೊಂದು ಮದುವೆಯಾಗುವಂತೆ ಕುಟುಂಬಸ್ಥರು ಸಲಹೆ ನೀಡಿದ್ದರು. ಅದರಂತೆ ಜಲಾಲ್ಪುರ ಪ್ರದೇಶದ ನಿವಾಸಿ 35 ವರ್ಷದ ಮನ್ಭವತಿ ಅವರನ್ನು ವಿವಾಹವಾದರು. ಸ್ಥಳೀಯ ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ಜೋಡಿ ಮದುವೆಯಾದರು.

    ಮದುವೆ ಬಳಿಕ ಮನ್ಭವತಿ, ನನ್ನ ಪತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಮನೆಯ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು. ಮದುವೆಯ ಮೊದಲ ರಾತ್ರಿ ಇಬ್ಬರೂ ಒಟ್ಟಿಗೆ ಸಮಯ ಕಳೆದಿದ್ದರು. ಇದನ್ನೂ ಓದಿ: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು

    ಆದರೆ, ಬೆಳಗ್ಗೆ ಹೊತ್ತಿಗೆ ಸಂಗ್ರರಾಮ್ ಅವರ ಆರೋಗ್ಯ ಹದಗೆಟ್ಟಿತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ವೃದ್ಧ ಮೃತಪಟ್ಟಿದ್ದರು. ಈ ಹಠಾತ್ ಸಾವು ಗ್ರಾಮದಲ್ಲಿ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

    ದೆಹಲಿಯಲ್ಲಿ ವಾಸಿಸುವ ಸೋದರಳಿಯರು ಸೇರಿದಂತೆ ಮೃತರ ಸಂಬಂಧಿಕರು, ತಾವು ಬರುವವರೆಗೂ ಅಂತ್ಯಕ್ರಿಯೆ ವಿಧಿಗಳನ್ನು ನಡೆಸದಂತೆ ಸೂಚಿಸಿದ್ದಾರೆ.

  • ‘ಐ ಲವ್ ಮುಹಮ್ಮದ್’ ಅಭಿಯಾನಕ್ಕೆ 5 ದಿನಗಳ ಪ್ಲ್ಯಾನಿಂಗ್ – ಯುಪಿ ಪೊಲೀಸರ ತನಿಖೆಯಲ್ಲಿ ಬಯಲು

    ‘ಐ ಲವ್ ಮುಹಮ್ಮದ್’ ಅಭಿಯಾನಕ್ಕೆ 5 ದಿನಗಳ ಪ್ಲ್ಯಾನಿಂಗ್ – ಯುಪಿ ಪೊಲೀಸರ ತನಿಖೆಯಲ್ಲಿ ಬಯಲು

    – ಮೌಲಾನಾ ತೌಕೀರ್ ರಝಾ ಖಾನ್ ಸೇರಿ 50 ಮಂದಿ ವಶಕ್ಕೆ

    ಲಕ್ನೋ: ‘ಐ ಲವ್ ಮುಹಮ್ಮದ್’ (I Love Muhammad) ಪೋಸ್ಟರ್‌ಗಳ ಮೇಲಿನ ಆಡಳಿತಾತ್ಮಕ ಕ್ರಮವನ್ನು ವಿರೋಧಿಸಿ ಶುಕ್ರವಾರದ ಪ್ರಾರ್ಥನೆಯ ನಂತರ ಉತ್ತರ ಪ್ರದೇಶದ ಬರೇಲಿಯಲ್ಲಿ (Bareilly) ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ಮೌಲಾನಾ ತೌಕೀರ್ ರಝಾ ಖಾನ್ (Maulana Tauqeer Raza) ಸೇರಿದಂತೆ ಐವತ್ತು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

    ಹಿಂಸಾಚಾರಕ್ಕೆ ಐದು ದಿನ ಮೊದಲೇ ಸಂಚು ನಡೆದಿತ್ತು ಎಂದು ಪೊಲೀಸರ ಆರಂಭಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪಿತೂರಿಯಲ್ಲಿ ಭಾಗಿಯಾಗಿರುವ ಎಲ್ಲಾ ವ್ಯಕ್ತಿಗಳನ್ನು ಗುರುತಿಸಿರುವ ಪೊಲೀಸರು, ಗಲಭೆಕೋರರು ಮತ್ತು ಅಶಾಂತಿಯಲ್ಲಿ ಭಾಗಿಯಾಗಿರುವ ಸಂಘಟಕರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ‘ಐ ಲವ್ ಮುಹಮ್ಮದ್’ಗೆ ಟಕ್ಕರ್ – ಬಿಜೆಪಿ ಯುವ ಮೋರ್ಚಾದಿಂದ `ಐ ಲವ್ ಯೋಗಿ ಆದಿತ್ಯನಾಥ್’, `ಐ ಲವ್ ಬುಲ್ಡೋಜರ್’ ಕ್ಯಾಂಪೇನ್

    ಹೆಚ್ಚುವರಿಯಾಗಿ ಎಲ್ಲಾ ಶಂಕಿತರ ಕರೆ ವಿವರ ದಾಖಲೆಗಳ ಪರಿಶೀಲನೆಗೆ ಮುಂದಾದ ಪೊಲೀಸರು, ಘರ್ಷಣೆಗಳು ನಡೆದ ಪ್ರದೇಶಗಳಿಂದ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಗಲಭೆಕೋರರನ್ನು ಗುರುತಿಸುತ್ತಿದ್ದಾರೆ. ಅಲ್ಲದೇ ನಗರದ ಮೂರರಿಂದ ನಾಲ್ಕು ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಇದನ್ನೂ ಓದಿ: ಯುಪಿಯಲ್ಲಿ ‘ಐ ಲವ್ ಮುಹಮ್ಮದ್’ ವಿವಾದ ಉಲ್ಬಣ – ಪ್ರತಿಭಟನೆ ವೇಳೆ ಕಲ್ಲೆಸೆತ, ಪೊಲೀಸರಿಂದ ಲಾಠಿಚಾರ್ಜ್‌

    ಘಟನೆಯ ಬಳಿಕ ಬರೇಲಿಯಲ್ಲಿ ಮಾರುಕಟ್ಟೆಗಳು ಮುಚ್ಚಲ್ಪಟ್ಟಿದ್ದು, ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ವದಂತಿಗಳನ್ನು ನಂಬಬೇಡಿ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದಾವಣಗೆರೆ | ದೇವಸ್ಥಾನದ ಮುಂದೆ ತಲ್ವಾರ್‌ ಹಿಡಿದು ಓಡಾಡಿದ ಅನ್ಯಕೋಮಿನ ಯುವಕ – ವೀಡಿಯೋ ವೈರಲ್

    ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶವನ್ನು ಯಾರು ಆಳುತ್ತಿದ್ದಾರೆ ಎಂದು ಮೌಲಾನ ಮರೆತಿದ್ದಾರೆ. ಅವರು ನಗರವನ್ನು ತಡೆಯುವುದಾಗಿ ಬೆದರಿಕೆ ಹಾಕುತ್ತಿದ್ದರು. 2017ಕ್ಕಿಂತ ಮುಂಚೆ ಇಂತಹ ಘಟನೆಗಳು ಸಜಹವಾಗಿದ್ದವು, ನಾವು ಅಂಥವರಿಗೆ ಪಾಠವನ್ನು ಕಲಿಸಿದ್ದೇವೆ. ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಉತ್ತರ ನೀಡುತ್ತಿದ್ದೇವೆ ಎಂದು ಖಾರವಾಗಿ ಉತ್ತರಿಸಿದ್ದಾರೆ. ಇದನ್ನೂ ಓದಿ: Madhya Pradesh | ತಾಯಿ ಎದುರೇ 5 ವರ್ಷದ ಮಗುವಿನ ಶಿರಚ್ಛೇದ

  • ‘ಐ ಲವ್ ಮುಹಮ್ಮದ್’ಗೆ ಟಕ್ಕರ್ – ಬಿಜೆಪಿ ಯುವ ಮೋರ್ಚಾದಿಂದ `ಐ ಲವ್ ಯೋಗಿ ಆದಿತ್ಯನಾಥ್’, `ಐ ಲವ್ ಬುಲ್ಡೋಜರ್’ ಕ್ಯಾಂಪೇನ್

    ‘ಐ ಲವ್ ಮುಹಮ್ಮದ್’ಗೆ ಟಕ್ಕರ್ – ಬಿಜೆಪಿ ಯುವ ಮೋರ್ಚಾದಿಂದ `ಐ ಲವ್ ಯೋಗಿ ಆದಿತ್ಯನಾಥ್’, `ಐ ಲವ್ ಬುಲ್ಡೋಜರ್’ ಕ್ಯಾಂಪೇನ್

    – ಬರೇಲಿಯಲ್ಲಿ ಹಿಂಸಾತ್ಮಕ ಪ್ರತಿಭಟನೆ; ಲಾಠಿಚಾರ್ಜ್

    ಲಕ್ನೋ: ಉತ್ತರ ಪ್ರದೇಶದಲ್ಲಿ (Uttar Pradesh) `ಐ ಲವ್ ಮುಹಮ್ಮದ್’ (I Love Muhammad) ಅಭಿಯಾನ ಉಲ್ಬಣಗೊಂಡ ಬೆನ್ನಲ್ಲೇ ಬಿಜೆಪಿ ಯುವ ಮೋರ್ಚಾ (BJP Yuva Morcha) ಟಕ್ಕರ್ ಕೊಡಲು `ಐ ಲವ್ ಯೋಗಿ ಆದಿತ್ಯನಾಥ್’ ಅಭಿಯಾನ ಪ್ರಾರಂಭಿಸಿದೆ.

    `ಐ ಲವ್ ಯೋಗಿ ಆದಿತ್ಯನಾಥ್’ (I Love Yogi Adityanath), ‘ಐ ಲವ್ ಬುಲ್ಡೋಜರ್’ (I Love Bulldozer) ಹೆಸರಿನಲ್ಲಿ ಬಿಜೆಪಿ ಯುವ ಮೋರ್ಚಾ ಅಭಿಯಾನ ಆರಂಭಿಸಿದ್ದು, ಲಕ್ನೋದ (Lucknow) ಪ್ರಮುಖ ರಸ್ತೆಗಳಲ್ಲಿ ಬ್ಯಾನರ್ ಅಳವಡಿಸಲಾಗಿದೆ. ಸಿಎಂ ಮತ್ತು ಬುಲ್ಡೋಜರ್ ಕ್ರಮವನ್ನು ಸಮರ್ಥಿಸಿಕೊಂಡು ಬಿಜೆಪಿ ಯುವ ಮೋರ್ಚಾ ನಾಯಕರು ಫ್ಲೆಕ್ಸ್ ಅಳವಡಿಸಿದ್ದಾರೆ. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಮಿತ್ ತ್ರಿಪಾಠಿ ನೇತೃತ್ವದಲ್ಲಿ ಫ್ಲೆಕ್ಸ್ ಅಳವಡಿಸಲಾಗಿದೆ. ಇದನ್ನೂ ಓದಿ: ಯುಪಿಯಲ್ಲಿ ‘ಐ ಲವ್ ಮುಹಮ್ಮದ್’ ವಿವಾದ ಉಲ್ಬಣ – ಪ್ರತಿಭಟನೆ ವೇಳೆ ಕಲ್ಲೆಸೆತ, ಪೊಲೀಸರಿಂದ ಲಾಠಿಚಾರ್ಜ್‌

    ಬರೇಲಿಯಲ್ಲಿ ಹಿಂಸಾತ್ಮಕ ಪ್ರತಿಭಟನೆ; ಲಾಠಿಚಾರ್ಜ್
    `ಐ ಲವ್ ಮುಹಮ್ಮದ್’ ಫ್ಲೆಕ್ಸ್ ವಿಚಾರವಾಗಿ ಕಾನ್ಪುರದಲ್ಲಿ ಮೊದಲು ವಿವಾದ ಆರಂಭವಾಗಿತ್ತು. ಶುಕ್ರವಾರ ಬರೇಲಿಯಲ್ಲಿ ನಡೆದ ಪ್ರತಿಭಟನೆ ಹಿಂಸತ್ಮಾಕ ಸ್ವರೂಪ ಪಡೆದುಕೊಂಡಿತ್ತು. ಶುಕ್ರವಾರದ ಪ್ರಾರ್ಥನೆ ಬಳಿಕ ಪ್ರತಿಭಟನೆ ಶುರುವಾಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದಾಗ ಲಾಠಿಚಾರ್ಜ್ ಮಾಡಲಾಗಿದೆ. ಪರಿಸ್ಥಿತಿ ಉದ್ವಿಗ್ನವಾದ ಹಿನ್ನೆಲೆ ಭದ್ರತೆ ಆರ್‌ಎಎಫ್ ಮತ್ತು ಪಿಎಸಿ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಮನೆಯಲ್ಲಿ ಹಣ ಕದಿಯುತ್ತಿದ್ದಳೆಂದು 13 ವರ್ಷದ ಮಗಳನ್ನೇ ಕತ್ತು ಹಿಸುಕಿಕೊಂದ ಕಟುಕ ತಂದೆ

    ಸೆ.4 ರಂದು ‘ಐ ಲವ್ ಮುಹಮ್ಮದ್’ ಪೋಸ್ಟರ್ ಹೊಂದಿರುವ ಟೆಂಟ್ ಅನ್ನು ಪೊಲೀಸರು ತೆಗೆಸಿದ್ದರು. ನಂತರ ಕಾನ್ಪುರದಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಧ್ವನಿ ಎತ್ತಲು ಮತ್ತು ಜ್ಞಾಪಕ ಪತ್ರವನ್ನು ಸಲ್ಲಿಸಲು ಧರ್ಮಗುರುವೊಬ್ಬರು ಕರೆ ನೀಡಿದ್ದರು. ಶುಕ್ರವಾರದ ಪ್ರಾರ್ಥನೆಯ ನಂತರ ಬರೇಲಿಯ ಇಸ್ಲಾಮಿಯಾ ಮೈದಾನದ ಬಳಿ ಭಾರಿ ಜನಸಮೂಹ ಜಮಾಯಿಸಿತ್ತು. ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸ್‌ ದಾಖಲಾಗುತ್ತಿದ್ದಂತೆ ಬ್ಯಾಂಕ್‌ನಿಂದ 55 ಲಕ್ಷ ವಿತ್‌ಡ್ರಾ ಮಾಡಿದ ಸ್ವಾಮಿ ಚೈತನ್ಯಾನಂದ

    ಕೆಲವರು ಆಕ್ಷೇಪಾರ್ಹ ಘೋಷಣೆಗಳನ್ನು ಕೂಗುತ್ತಿದ್ದಂತೆ ಜನಸಮೂಹ ಹೆಚ್ಚುತ್ತಲೇ ಇತ್ತು. ಕೆಲವು ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ನಂತರ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದರು. ಇದನ್ನೂ ಓದಿ: ರಾಹುಲ್, ಪ್ರಿಯಾಂಕಾ ಬಾಂಧವ್ಯದ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ಕೈಲಾಶ್

    ಸೆ.4 ರಂದು ಕಾನ್ಪುರದಲ್ಲಿ ಈದ್-ಎ-ಮಿಲಾದ್-ಉನ್-ನಬಿ ಮೆರವಣಿಗೆಯ ಸಂದರ್ಭದಲ್ಲಿ, ಮಾರ್ಗದುದ್ದಕ್ಕೂ ಟೆಂಟ್‌ನಲ್ಲಿ ‘ಐ ಲವ್ ಮುಹಮ್ಮದ್’ ಪೋಸ್ಟರ್ ಹಾಕಲಾಗಿತ್ತು. ಇದು ಗಲಾಟೆಗೆ ಕಾರಣವಾಗಿದೆ.

  • ಮನೆಯಲ್ಲಿ ಹಣ ಕದಿಯುತ್ತಿದ್ದಳೆಂದು 13 ವರ್ಷದ ಮಗಳನ್ನೇ ಕತ್ತು ಹಿಸುಕಿಕೊಂದ ಕಟುಕ ತಂದೆ

    ಮನೆಯಲ್ಲಿ ಹಣ ಕದಿಯುತ್ತಿದ್ದಳೆಂದು 13 ವರ್ಷದ ಮಗಳನ್ನೇ ಕತ್ತು ಹಿಸುಕಿಕೊಂದ ಕಟುಕ ತಂದೆ

    – ಮಗಳನ್ನ ಕೊಂದು ಸಂಬಂಧಿಕರ ಮನೆಗೆ ಹೋಗಿದ್ದಾಳೆಂದು ಕಥೆ ಕಟ್ಟಿದ್ದ

    ಲಕ್ನೋ: ಮನೆಯಲ್ಲಿ ಹಣ ಕದಿಯುತ್ತಿದ್ದಳೆಂದು ಕಟುಕ ತಂದೆಯೊಬ್ಬ ತನ್ನ 13 ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ (UP’s Bulandshahr) ಜಿಲ್ಲೆಯಲ್ಲಿ ನಡೆದಿದೆ.

    ಘಟನೆ ಸಂಬಂಧ 40 ವರ್ಷದ ಆರೋಪಿ ತಂದೆ ಅಜಯ್‌ ಶರ್ಮಾನನ್ನ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿ ಸೋನಮ್ (13) ಮೃತಪಟ್ಟ ಮಗಳು. ಇವರು ಬಿಚೌಲಾ ಗ್ರಾಮದ (Bichaula village) ನಿವಾಸಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸ್‌ ದಾಖಲಾಗುತ್ತಿದ್ದಂತೆ ಬ್ಯಾಂಕ್‌ನಿಂದ 55 ಲಕ್ಷ ವಿತ್‌ಡ್ರಾ ಮಾಡಿದ ಸ್ವಾಮಿ ಚೈತನ್ಯಾನಂದ

    ಶುಕ್ರವಾರ ಸಂಜೆ ಹೊತ್ತಿಗೆ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕಿಯ ಮೃತದೇಹ ಪತ್ತೆಯಾಗಿದ್ದಾಗಿ ಬುಲಂದ್‌ಶಹರ್ ಪೊಲೀಸರಿಗೆ ಮಾಹಿತಿ ಬಂದಿತು. ಅನುಪ್‌ಶಹರ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಸೇತುವೆ ಕೆಳಗಿನ ಪೊದೆಯಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ತನಿಖೆ ನಡೆಸಿದಾಗ ತಂದೆಯೇ ಆರೋಪಿ ಅನ್ನೋದು ಗೊತ್ತಾಗಿದೆ. ವಿಚಾರಣೆ ವೇಳೆ ಆರೋಪಿ ಕೂಡ ತಪ್ಪೊಪ್ಪಿಕೊಂಡಿದ್ದಾನೆ.

    ಮೃತ ಸೋಮನ್‌ ಗುರುವಾರ ಎಂದಿನಂತೆ ಶಾಲೆಗೆ ಹೋಗಿದ್ದಳು. ಪ್ರತಿದಿನ ಶಾಲೆ ಮುಗಿದ ಬಳಿಕ ಆಕೆಯ ನಾನೇ ಮನೆಗೆ ಕರೆದುಕೊಂಡು ಹೋಗ್ತಿದ್ದೆ. ಆದ್ರೆ ಗುರುವಾರ ಆಕೆಯನ್ನ ಮನೆಗೆ ಕರೆದೊಯ್ಯುವ ಬದಲು ತನ್ನ ಹೊಲಕ್ಕೆ ಕರೆದುಕೊಂಡು ಹೋಗಿದ್ದೆ. ಅಲ್ಲೇ ಮಗಳಿಗೆ ಸ್ಕಾಫ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದೇನೆ. ಬಳಿಕ ಶವವನ್ನ ಹತ್ತಿರದ ಕಾಲುವೆಗೆ ಎಸೆದಿದ್ದೇನೆಂದು ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಬೆಂಗಳೂರಲ್ಲಿ ಲಾಂಗ್‌ ಹಿಡಿದು ಅಟ್ಟಹಾಸ ಮೆರೆದಿದ್ದ ಪುಂಡರ ಗ್ಯಾಂಗ್‌ – ಐವರು ಅರೆಸ್ಟ್‌

    ಪೊಲೀಸರ ಪ್ರಕಾರ, ಆರೋಪಿ ತನ್ನ ಮಗಳು ಮನೆಯಿಂದ ಹಣ ಕದಿಯುತ್ತಿದ್ದಳು. ಇದರಿಂದ ಗಂಡ – ಹೆಂಡ್ತಿ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಹಾಗಾಗಿ ನಾನೇ ಮಗಳನ್ನ ಕೊಂದೆ. ಕೊಂದ ಬಳಿಕ ಮಗಳು ಸಂಬಂಧಿಕರ ಮನೆಗೆ ಹೋಗಿದ್ದಾಳೆ, 3-4 ದಿನ ಅಲ್ಲೇ ಇರುತ್ತಾಳೆಂದು ಹೆಂಡತಿಗೆ ಹೇಳಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಭಯೋತ್ಪಾದನೆ ವೈಭವೀಕರಿಸುತ್ತಿದೆ, ವಿಶ್ವವೇದಿಕೆಯಲ್ಲಿ ಸುಳ್ಳು ಹರಡುತ್ತಿದೆ – ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು

  • ಯುಪಿಯಲ್ಲಿ ‘ಐ ಲವ್ ಮುಹಮ್ಮದ್’ ವಿವಾದ ಉಲ್ಬಣ – ಪ್ರತಿಭಟನೆ ವೇಳೆ ಕಲ್ಲೆಸೆತ, ಪೊಲೀಸರಿಂದ ಲಾಠಿಚಾರ್ಜ್‌

    ಯುಪಿಯಲ್ಲಿ ‘ಐ ಲವ್ ಮುಹಮ್ಮದ್’ ವಿವಾದ ಉಲ್ಬಣ – ಪ್ರತಿಭಟನೆ ವೇಳೆ ಕಲ್ಲೆಸೆತ, ಪೊಲೀಸರಿಂದ ಲಾಠಿಚಾರ್ಜ್‌

    ಲಕ್ನೋ: ಉತ್ತರ ಪ್ರದೇಶದಲ್ಲಿ ‘ಐ ಲವ್‌ ಮುಹಮ್ಮದ್‌’ (I Love Muhammad) ಉಲ್ಬಣಗೊಂಡಿದೆ. ರಾಯಬರೇಲಿಯಲ್ಲಿ (Bareilly) ಪ್ರತಿಭಟನೆ ವೇಳೆ ಕಲ್ಲೆಸೆತವಾಗಿದ್ದು, ಪೊಲೀಸರು ಲಾಠಿಚಾರ್ಜ್‌ ನಡೆಸಿದ್ದಾರೆ.

    ಶುಕ್ರವಾರದ ಪ್ರಾರ್ಥನೆ ಬಳಿಕ ಪ್ರತಿಭಟನೆ ಶುರುವಾಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದಾಗ ಲಾಠಿಚಾರ್ಜ್ ಮಾಡಲಾಗಿದೆ. ಪರಿಸ್ಥಿತಿ ಉದ್ವಿಗ್ನವಾದ ಹಿನ್ನೆಲೆ ಭದ್ರತೆ ಆರ್‌ಎಎಫ್ ಮತ್ತು ಪಿಎಸಿ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಸೆಕ್ಷನ್‌ 498 ಎ ಅತ್ಯಂತ ಕಠಿಣ ಸೆಕ್ಷನ್‌, ಹಲವು ಸುಳ್ಳು ಕೇಸ್‌ಗಳನ್ನು ರದ್ದು ಮಾಡಿದ್ದೇವೆ: ಸುಪ್ರೀಂ

    ಸೆ.4 ರಂದು ‘ಐ ಲವ್ ಮುಹಮ್ಮದ್’ ಪೋಸ್ಟರ್ ಹೊಂದಿರುವ ಟೆಂಟ್ ಅನ್ನು ಪೊಲೀಸರು ತೆಗೆಸಿದ್ದರು. ನಂತರ ಕಾನ್ಪುರದಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಧ್ವನಿ ಎತ್ತಲು ಮತ್ತು ಜ್ಞಾಪಕ ಪತ್ರವನ್ನು ಸಲ್ಲಿಸಲು ಧರ್ಮಗುರುವೊಬ್ಬರು ಕರೆ ನೀಡಿದ್ದರು. ಶುಕ್ರವಾರದ ಪ್ರಾರ್ಥನೆಯ ನಂತರ ಬರೇಲಿಯ ಇಸ್ಲಾಮಿಯಾ ಮೈದಾನದ ಬಳಿ ಭಾರಿ ಜನಸಮೂಹ ಜಮಾಯಿಸಿತ್ತು.

    ಕೆಲವರು ಆಕ್ಷೇಪಾರ್ಹ ಘೋಷಣೆಗಳನ್ನು ಕೂಗುತ್ತಿದ್ದಂತೆ ಜನಸಮೂಹ ಹೆಚ್ಚುತ್ತಲೇ ಇತ್ತು. ಕೆಲವು ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ನಂತರ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದರು.

    ಉನ್ನತ ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಬರೇಲಿಯಲ್ಲಿ ಸಾಮಾನ್ಯ ಸ್ಥಿತಿಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬರೇಲಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: ಭಾರತದ 38 ಬ್ಯಾಂಕುಗಳ ಮೂರು ಲಕ್ಷ ವಹಿವಾಟುಗಳ ದತ್ತಾಂಶ ಲೀಕ್?

    ಸೆ.4 ರಂದು ಕಾನ್ಪುರದಲ್ಲಿ ಈದ್-ಎ-ಮಿಲಾದ್-ಉನ್-ನಬಿ ಮೆರವಣಿಗೆಯ ಸಂದರ್ಭದಲ್ಲಿ, ಮಾರ್ಗದುದ್ದಕ್ಕೂ ಟೆಂಟ್‌ನಲ್ಲಿ ‘ಐ ಲವ್ ಮುಹಮ್ಮದ್’ ಪೋಸ್ಟರ್ ಹಾಕಲಾಗಿತ್ತು. ಇದು ಗಲಾಟೆಗೆ ಕಾರಣವಾಗಿದೆ.

  • ಗಾಜಿಯಾಬಾದ್‌ ಎನ್‌ಕೌಂಟರ್‌ – ಕಳ್ಳನ ಕಾಲುಮುರಿದು ಬಂಧಿಸಿದ ಮಹಿಳಾ ಪೊಲೀಸರ ತಂಡ

    ಗಾಜಿಯಾಬಾದ್‌ ಎನ್‌ಕೌಂಟರ್‌ – ಕಳ್ಳನ ಕಾಲುಮುರಿದು ಬಂಧಿಸಿದ ಮಹಿಳಾ ಪೊಲೀಸರ ತಂಡ

    – ಯುಪಿಯಲ್ಲಿ ಮೊದಲ ಬಾರಿಗೆ ಮಹಿಳಾ ಪೊಲೀಸರ ತಂಡದಿಂದ ಎನ್‌ಕೌಂಟರ್‌

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ (Ghaziabad) ಮೊದಲ ಬಾರಿಗೆ ಮಹಿಳಾ ಪೊಲೀಸರ ತಂಡ (Women Cop Team) ಎನ್‌ಕೌಂಟರ್ (Encounter) ನಡೆಸಿ ಕಳ್ಳನನ್ನು ಬಂಧಿಸಿದೆ.



    ಬಂಧಿತನನ್ನು ಜಿತೇಂದ್ರ (22) ಎಂದು ಗುರುತಿಸಲಾಗಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಆರೋಪಿಯನ್ನು ಪೊಲೀಸ್ ಚೆಕ್‌ಪಾಯಿಂಟ್‌ನಲ್ಲಿ ತಡೆದಿದ್ದಾರೆ. ಈ ವೇಳೆ ಈತ ಸ್ಕೂಟರ್‌ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾನೆ. ಈತನನ್ನು ಮಹಿಳಾ ಪೊಲೀಸರ ತಂಡ ಬೆನ್ನಟ್ಟಿದೆ. ಆಗ ತಪ್ಪಿಸಿಕೊಳ್ಳುವ ಭರದಲ್ಲಿ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ವೇಷದಲ್ಲಿ ಬಂದು ಶ್ರೀಗಂಧಕ್ಕೆ ಕೊಡಲಿ – 33 ತುಂಡುಗಳು ವಶ, ಆರೋಪಿ ಅರೆಸ್ಟ್

    ಪೊಲೀಸರು ಆತನಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಈ ವೇಳೆ ತನ್ನ ಬಳಿ ಇದ್ದ ನಾಡ ಪಿಸ್ತೂಲಿನಿಂದ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಪ್ರತಿದಾಳಿ ನಡೆಸಿದ ಪೊಲೀಸರು ಆತನ ಕಾಲಿಗೆ ಗುಂಡೇಟು ನೀಡಿ ಬಂಧಿಸಿದ್ದಾರೆ. ಜೀತೇಂದ್ರ ಕಳ್ಳತನ, ದರೋಡೆ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.

    ವಿಚಾರಣೆಯ ಸಮಯದಲ್ಲಿ, ದೆಹಲಿ-ಎನ್‌ಸಿಆರ್‌ನಲ್ಲಿ ಬೈಕ್‌ಗಳು ಮತ್ತು ಸ್ಕೂಟರ್‌ಗಳನ್ನು ಕದ್ದಿದ್ದಾಗಿ ಒಪ್ಪಿಕೊಂಡಿದ್ದಾನೆ. ಈತ ಜನರಿಂದ ಫೋನ್‌ಗಳು ಕಸಿದು ಪರಾರಿಯಾಗುತ್ತಿದ್ದ. ಪಿಸ್ತೂಲ್, ಸ್ಕೂಟರ್, ಫೋನ್ ಮತ್ತು ಟ್ಯಾಬ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


    ಆರೋಪಿಯೂ ಭಾನುವಾರ (ಸೆ.21) ಫೋನ್ ಮತ್ತು ಟ್ಯಾಬ್ ಕದ್ದಿದ್ದ. ದ್ವಿಚಕ್ರ ವಾಹನವನ್ನು ಕಳೆದ ವರ್ಷ ದೆಹಲಿಯಲ್ಲಿ ಕದ್ದಿದ್ದಾಗಿ ಜೀತೇಂದ್ರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಲಿವ್ ಇನ್ ಗೆಳತಿಯ ಕೊಂದು ನದಿಗೆಸೆದ ಪ್ರಿಯಕರ – ಶವದ ಜೊತೆ ಸೆಲ್ಫಿ ಕ್ಲಿಕ್ಕಿಸಿ ವಿಕೃತಿ ಮೆರೆದವ ಅಂದರ್‌

  • ಅನೈತಿಕ ಸಂಬಂಧ ಶಂಕೆ – ಪತ್ನಿಯನ್ನು ಮಕ್ಕಳೆದುರೇ ಚಾಕು ಇರಿದು ಕೊಂದ ಪತಿ

    ಅನೈತಿಕ ಸಂಬಂಧ ಶಂಕೆ – ಪತ್ನಿಯನ್ನು ಮಕ್ಕಳೆದುರೇ ಚಾಕು ಇರಿದು ಕೊಂದ ಪತಿ

    ಲಕ್ನೋ: ವ್ಯಕ್ತಿಯೊಬ್ಬ ತನ್ನ ಪತ್ನಿ (wife) ಸಹೋದ್ಯೋಗಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆಕೆಗೆ ಚಾಕು ಇರಿದು ಕೊಂದ ಪ್ರಕರಣ ಉತ್ತರ ಪ್ರದೇಶದ (Uttar Pradesh) ಗೌತಮ್ ಬುದ್ಧ ನಗರ ಜಿಲ್ಲೆಯ ದಾದ್ರಿಯಲ್ಲಿ ನಡೆದಿದೆ.

    ಕೊಲೆಯಾದ (Murder) ಮಹಿಳೆಯನ್ನು ಚಂಚಲ್ ಶರ್ಮಾ(28) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಸೋನು ಶರ್ಮಾ (36) ಎಂದು ಗುರುತಿಸಲಾಗಿದೆ. ಚಂಚಲ್ ಶರ್ಮಾ ಪಿಜ್ಜಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಸಹೋದ್ಯೋಗಿ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ, ಕೆಲಸ ಬಿಡುವಂತೆ ಆತ ಒತ್ತಾಯ ಮಾಡಿದ್ದ. ಆದರೆ ಮಹಿಳೆ ಕುಟುಂಬದ ನಿರ್ವಹಣೆಗಾಗಿ ಕೆಲಸ ಬಿಡಲು ನಿರಾಕರಿಸಿದ್ದಳು. ಇದನ್ನೂ ಓದಿ: ಲಿವ್ ಇನ್ ಗೆಳತಿಯ ಕೊಂದು ನದಿಗೆಸೆದ ಪ್ರಿಯಕರ – ಶವದ ಜೊತೆ ಸೆಲ್ಫಿ ಕ್ಲಿಕ್ಕಿಸಿ ವಿಕೃತಿ ಮೆರೆದವ ಅಂದರ್‌

    ಇದೇ ವಿಚಾರವಾಗಿ ಸೋನು, ಪತ್ನಿ ಜೊತೆ ಭಾನುವಾರ (ಸೆ.21) ಗಲಾಟೆ ಮಾಡಿದ್ದ. ಬಳಿಕ ಮುಖವನ್ನು ಬಟ್ಟೆಯಿಂದ ಮುಚ್ಚಿ ಚಾಕುವಿನಿಂದ ಹಲ್ಲೆ ಮಾಡಿದ್ದ. ಆಕೆಯ ಕಿರುಚಾಟ ಕೇಳಿ ಏಳು ವರ್ಷದ ಮಗಳು ಮತ್ತು ಐದು ವರ್ಷದ ಮಗ ಎದ್ದು ತಪ್ಪಿಸಲು ಯತ್ನಿಸಿದ್ದರು. ಆದರೆ ಅವರನ್ನು ದೂರ ತಳ್ಳಿ ಕೊಲೆ ಮಾಡಿದ್ದ.

    ಕೊಲೆಗೈದ ಬಳಿಕ ಅಲ್ಲಿಂದ ಪರಾರಿಯಾಗಿದ್ದ ಆರೋಪಿ, ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ದುಷ್ಕರ್ಮಿಗಳಿಂದ ಪ್ರಿಯಕರನ ಹತ್ಯೆ – ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿ

  • ಲಿವ್ ಇನ್ ಗೆಳತಿಯ ಕೊಂದು ನದಿಗೆಸೆದ ಪ್ರಿಯಕರ – ಶವದ ಜೊತೆ ಸೆಲ್ಫಿ ಕ್ಲಿಕ್ಕಿಸಿ ವಿಕೃತಿ ಮೆರೆದವ ಅಂದರ್‌

    ಲಿವ್ ಇನ್ ಗೆಳತಿಯ ಕೊಂದು ನದಿಗೆಸೆದ ಪ್ರಿಯಕರ – ಶವದ ಜೊತೆ ಸೆಲ್ಫಿ ಕ್ಲಿಕ್ಕಿಸಿ ವಿಕೃತಿ ಮೆರೆದವ ಅಂದರ್‌

    ಲಕ್ನೋ: ಇನ್‌ಸ್ಟಾಗ್ರಾಮ್‌ನಲ್ಲಿ ಅರಳಿದ ಪ್ರೀತಿ ಪ್ರಿಯತಮೆಯ ಭೀಕರ ಕೊಲೆಯಲ್ಲಿ ಕೊನೆಯಾದ ಪ್ರಕರಣ ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ನಡೆದಿದೆ.

    ಕೊಲೆಯಾದ ಯುವತಿಯನ್ನು ಆಕಾಂಕ್ಷಾ (20) ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿಯನ್ನು ಸೂರಜ್ ಕುಮಾರ್ ಉತ್ತಮ್ ಎಂದು ಗುರುತಿಸಲಾಗಿದೆ. ಇಬ್ಬರೂ ಲಿವ್‌ ಇನ್‌ (Live in Relationship) ಸಂಬಂಧದಲ್ಲಿದ್ದರು. ಯುವತಿಗೆ ಮತ್ತೊಬ್ಬನಿಗೆ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಆರೋಪಿ ಹತ್ಯೆಗೈದಿದ್ದಾನೆ. ಎರಡು ತಿಂಗಳ ಹಿಂದೆಯೇ ಈ ಕೊಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದಾವಣಗೆರೆ | ಡಿವೋರ್ಸ್ ವಿವಾದ – ಕೋರ್ಟ್‍ನಲ್ಲೇ ಪತ್ನಿಗೆ ಚಾಕು ಇರಿದ ಪತಿ

    ಜುಲೈ 21 ರಂದು ಯುವತಿ ಬೇರೊಬ್ಬನ ಜೊತೆ ಮಾತಾಡುತ್ತಿದ್ದಾಳೆ ಎಂದು ಆರೋಪಿ ಗಲಾಟೆ ಮಾಡಿದ್ದ. ಈ ವೇಳೆ ಆಕೆಯ ತಲೆಯನ್ನು ಗೋಡೆಗೆ ಅಪ್ಪಳಿಸಿ, ಬಳಿಕ ಕತ್ತು ಹಿಸುಕಿ ಕೊಲೆಗೈದಿದ್ದ. ನಂತರ ತನ್ನ ಸ್ನೇಹಿತ ಆಶಿಶ್ ಕುಮಾರ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದ. ಬಳಿಕ ಇಬ್ಬರು ಸೇರಿ ಆಕಾಂಕ್ಷಾಳ ಮೃತದೇಹವನ್ನು ಬ್ಯಾಗಿನಲ್ಲಿ ತುಂಬಿಸಿ 100 ಕಿ.ಮೀ ದೂರದಲ್ಲಿರುವ ಬಂಡಾಗೆ ಬೈಕ್‌ನಲ್ಲಿ ತೆರಳಿ ಯಮುನಾ ನದಿಗೆ ಎಸೆದಿದ್ದರು. ಇದಕ್ಕೂ ಮುನ್ನ ಸೂರಜ್ ಉತ್ತಮ್ ಶವ ತುಂಬಿದ ಬ್ಯಾಗ್‌ನೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಎಂದು ತಿಳಿದುಬಂದಿದೆ.

    ಆ.8ರಂದು ಯುವತಿಯ ತಾಯಿ ಆಕಾಂಕ್ಷ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಳು. ದೂರಿನಲ್ಲಿ ಸೂರಜ್ ಉತ್ತಮ್ ತನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ಉಲ್ಲೇಖಿಸಿದ್ದರು. ದೂರಿನ ಅನ್ವಯ ಇತ್ತೀಚೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಸೆಲ್ಫಿ ಬಗ್ಗೆಯೂ ಹೇಳಿದ್ದು, ಆತನ ಮೊಬೈಲ್‌ನಿಂದ ಫೋಟೋ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಆರೋಪಿ ಹಾಗೂ ಆತನಿಗೆ ಸಹಕರಿಸಿದ ಸ್ನೇಹಿತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    ಸೂರಜ್ ಕುಮಾರ್ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ. ಆಕಾಂಕ್ಷಾ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಇಬ್ಬರ ನಡುವೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಪರಿಚಯವಾಗಿ ಪ್ರೀತಿ ಚಿಗುರೊಡೆದಿತ್ತು. ನಂತರ ಕಾನ್ಪುರದ ಬಾರಾದಲ್ಲಿ ತನ್ನ ಸಹೋದರಿಯೊಂದಿಗೆ ವಾಸಿಸುತ್ತಿದ್ದ ಆಕಾಂಕ್ಷಾ, ಅಲ್ಲಿಂದ ಬಂದು ಹನುಮಂತ್ ವಿಹಾರ್‌ನ ಬಾಡಿಗೆ ಮನೆಯಲ್ಲಿ ಉತ್ತಮ್ ಜೊತೆ ವಾಸವಾಗಿದ್ದಳು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ದುಷ್ಕರ್ಮಿಗಳಿಂದ ಪ್ರಿಯಕರನ ಹತ್ಯೆ – ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿ

  • ದುಷ್ಕರ್ಮಿಗಳಿಂದ ಪ್ರಿಯಕರನ ಹತ್ಯೆ – ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿ

    ದುಷ್ಕರ್ಮಿಗಳಿಂದ ಪ್ರಿಯಕರನ ಹತ್ಯೆ – ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿ

    ಲಕ್ನೋ: ದುಷ್ಕರ್ಮಿಗಳು ತನ್ನ ಪ್ರಿಯಕರನನ್ನು ಹತ್ಯೆ ಮಾಡಿದ್ದಕ್ಕೆ ಮನನೊಂದು ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಚಿಲ್ಕಾನಾದಲ್ಲಿ ನಡೆದಿದೆ.

    ಚಿಲ್ಕಾನಾ ಪ್ರದೇಶದ ನಿವಾಸಿ ಅಂಕಿತಾ (18) ಆತ್ಮಹತ್ಯೆಗೆ ಶರಣಾದ ಯುವತಿ ಎಂದು ತಿಳಿದು ಬಂದಿದೆ. ಶುಕ್ರವಾರ ಆಕೆಯ ಪ್ರಿಯಕರನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇದರಿಂದ ನೊಂದಿದ್ದ ಯುವತಿ ಶನಿವಾರ (ಸೆ.20) ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದನ್ನೂ ಓದಿ: ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿ ಅಪಮಾನ – ಮಹಿಳೆ ಪೊಲೀಸರ ವಶಕ್ಕೆ

    ಯುವತಿಯ ಪ್ರಿಯಕರ ಮಹಿಲ್‌ (22) ಕೊಲೆಯಲ್ಲಿ ಅಂಕಿತಾ ಅವರ ಸಂಬಂಧಿಕರು ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆತನ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಈ ಸಂಬಂಧ ಅಂಕಿತಾಳ ಇಬ್ಬರು ಅಪ್ರಾಪ್ತ ಸಹೋದರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗಣೇಶ ವಿಗ್ರಹಕ್ಕೆ ಅಪಮಾನ – ಕಿಡಿಗೇಡಿ ಮಹಿಳೆಗಾಗಿ ಚಿಕ್ಕಮಗಳೂರಲ್ಲಿ ಹುಡುಕಾಟ