Tag: uttar pradesh

  • ರೊಮ್ಯಾನ್ಸ್ ಗೆ ಒಪ್ಪದಿದ್ದಕ್ಕೆ ಕ್ಲಾಸ್‍ಮೇಟ್ ಮೇಲೆ ವಿದ್ಯಾರ್ಥಿಯಿಂದ ಶೂಟೌಟ್

    ರೊಮ್ಯಾನ್ಸ್ ಗೆ ಒಪ್ಪದಿದ್ದಕ್ಕೆ ಕ್ಲಾಸ್‍ಮೇಟ್ ಮೇಲೆ ವಿದ್ಯಾರ್ಥಿಯಿಂದ ಶೂಟೌಟ್

    ಲಕ್ನೋ: ಅಪ್ತಾಪ್ತ ವಿದ್ಯಾರ್ಥಿಯೊಬ್ಬ ರೊಮ್ಯಾನ್ಸ್  ಮಾಡಲು ಒಪ್ಪಲಿಲ್ಲ ಎಂದು ತನ್ನ ಕ್ಲಾಸ್‍ಮೆಟ್ ವಿದ್ಯಾರ್ಥಿನಿಯ ಮೇಲೆ ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.

    ಮಥುರಾ ರಸ್ತೆಮಾರ್ಗದ ಕಾಲೋನಿ ಸಮೀಪದಲ್ಲಿ 15 ವರ್ಷದ ವಿದ್ಯಾರ್ಥಿನಿ ಒಬ್ಬಳೆ ಶಾಲೆಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಅದೇ ಶಾಲೆಯ 16 ವರ್ಷದ ವಿದ್ಯಾರ್ಥಿಯೊಬ್ಬ ಆಕೆಯನ್ನು ರೊಮ್ಯಾನ್ಸ್ ಗೆ ಕರೆದಿದ್ದಾನೆ. ಇದಕ್ಕೆ ವಿದ್ಯಾರ್ಥಿನಿ ನಿರಾಕರಿಸಿದ್ದಾಳೆ.

    ರೊಮ್ಯಾನ್ಸ್ ಒಪ್ಪಲಿಲ್ಲ ಎಂದು ಕೋಪಗೊಂಡ ವಿದ್ಯಾರ್ಥಿ ಶಾಲೆಗೆ ಹೋಗುತ್ತಿದ್ದ ವೇಳೆ ಬೈಕ್‍ನಲ್ಲಿ ಬಂದು ಆಕೆಯ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಸದ್ಯಕ್ಕೆ ತೀವ್ರವಾಗಿ ಗಾಯಗೊಂಡ ವಿದ್ಯಾರ್ಥಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಆಕೆಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆ ಕುರಿತು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಬಾಲ ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.

    ಇದನ್ನು ಓದಿ: ಶಾಲೆಯಲ್ಲಿ ವಿದ್ಯಾರ್ಥಿನಿಯನ್ನು ಕೆಲ ಸೆಕೆಂಡ್ ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿ ಸಸ್ಪೆಂಡ್!

  • ಗೋವುಗಳ ಎಣಿಕೆಗಾಗಿ ಸರ್ವೆ ನಡೆಸಲು ಮುಂದಾದ ಯೋಗಿ ಸರ್ಕಾರ

    ಗೋವುಗಳ ಎಣಿಕೆಗಾಗಿ ಸರ್ವೆ ನಡೆಸಲು ಮುಂದಾದ ಯೋಗಿ ಸರ್ಕಾರ

    ಲಕ್ನೋ: ಉತ್ತರ ಪ್ರದೇಶ ರಾಜ್ಯದ ಯೋಗಿ ಆದಿತ್ಯನಾಥ್ ಸರ್ಕಾರ ಗೋವುಗಳ ಎಣಿಕೆಗಾಗಿ ಸರ್ವೆ ನಡೆಸಲು ಮುಂದಾಗಿದೆ. ಮಂಗಳವಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಕ್ಯಾಬಿನೇಟ್ ಮೀಟಿಂಗ್ ನಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.

    ಗೋವುಗಳ ಎಣಿಕೆಯ ಸಮೀಕ್ಷೆಗಾಗಿ ಯೋಗಿ ಸರ್ಕಾರ ಒಟ್ಟು 7.86 ಕೋಟಿ ರೂ. ಹಣವನ್ನು ಮೀಸಲಿರಿಸಿದೆ. ಗೋವುಗಳ ಸರ್ವೆ ಜೊತೆ ಜೊತೆಯಲ್ಲಿ ಎಮ್ಮೆ, ಹಂದಿ, ಮೇಕೆ ಮತ್ತು ಕುರಿಗಳ ಎಣಿಕೆ ಕಾರ್ಯ ನಡೆಯಲಿದೆ.

    2012ರ ಸರ್ವೆ ಪ್ರಕಾರ ಉತ್ತರ ಪ್ರದೇಶ ರಾಜ್ಯದ ಜನಸಂಖ್ಯೆ 2.5 ಕೋಟಿಯಿದ್ದರೆ, 3.6 ಕೋಟಿ ಎಮ್ಮೆಗಳು, 1.55 ಕೋಟಿ ಕುರಿಗಳು ಮತ್ತು 13.34 ಲಕ್ಷ ಹಂದಿಗಳು ಇದ್ದವು ಎಂದು ಅಂಕಿ ಅಂಶಗಳು ಹೇಳುತ್ತವೆ. ಈ ಬಾರಿ ನಡೆಯುವ ಸರ್ವೆ ಮೂಲಕ ಸದ್ಯ ಎಷ್ಟು ಹಸುಗಳು ಮತ್ತು ಕರುಗಳು ರಾಜ್ಯದಲ್ಲಿವೆ ಎಂಬುದು ನಿಖರವಾಗಿ ತಿಳಿಯಲಿದೆ ಎಂದು ರಾಜ್ಯ ಸರ್ಕಾರದ ವಕ್ತಾರರೊಬ್ಬರು ತಿಳಿಸಿದ್ದಾರೆ.

    ಇನ್ನೂ ಇದೇ ಕ್ಯಾಬಿನೆಟ್ ನಲ್ಲಿ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲು ಚಿಂತನೆ ನಡೆಸಲಾಗಿದೆ. ಪ್ರಾಣಿಗಳ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮೇಳದಲ್ಲಿ ಎಲ್ಲ ಸಾಕು ಪ್ರಾಣಿಗಳಿಗೆ ಉಚಿತ ಚಿಕಿತ್ಸೆಯೊಂದಿಗೆ ವಿಮೆಯನ್ನು ಮಾಡಿಸಲಾಗುತ್ತದೆ. ವಿಮೆಯ ಪ್ರೀಮಿಯಂನ್ನು ಹಸುಗಳು ಮಾಲೀಕರು ಪಡೆದುಕೊಳ್ಳಲಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ವಕ್ತಾರರಾದ ಸಿದ್ಧಾರ್ಥನಾಥ್ ಸಿಂಗ್ ಹೇಳಿದ್ದಾರೆ.

  • ಫಸ್ಟ್ ನೈಟ್‍ನಲ್ಲೇ ಅತ್ತಿಗೆ ಮೇಲೆ ಮೈದುನ, ಸ್ನೇಹಿತ ಸೇರಿ ಗ್ಯಾಂಗ್‍ರೇಪ್- ವಿಚಾರ ತಿಳಿದು ಪತಿಯಿಂದ ತಲಾಖ್!

    ಫಸ್ಟ್ ನೈಟ್‍ನಲ್ಲೇ ಅತ್ತಿಗೆ ಮೇಲೆ ಮೈದುನ, ಸ್ನೇಹಿತ ಸೇರಿ ಗ್ಯಾಂಗ್‍ರೇಪ್- ವಿಚಾರ ತಿಳಿದು ಪತಿಯಿಂದ ತಲಾಖ್!

    ಲಕ್ನೋ: ಮೊದಲ ರಾತ್ರಿಯಂದೇ ಪತಿಯ ತಮ್ಮ ಮತ್ತು ಆತನ ಸ್ನೇಹಿತ ಸೇರಿ ಅತ್ತಿಗೆಯ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಬುಲಂದ್‍ಶಹರ್‍ನ ಕೊಟ್ಟಾಲಿ ಗ್ರಾಮದಲ್ಲಿ ನಡೆದಿದೆ.

    ಮದುವೆಯ ಮೊದಲ ರಾತ್ರಿಯಂದು ಪತಿಯ ಸಹೋದರ ಹಾಗೂ ಆತನ ಗೆಳೆಯ ಸೇರಿ ಅತ್ತಿಗೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಅಷ್ಟೇ ಅಲ್ಲದೇ ಈ ವಿಚಾರವನ್ನು ಯಾರಿಗೂ ಹೇಳಬಾದರು ಎಂದು ಚಾಕು ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ.

    ಸಂತ್ರಸ್ತೆ ಈ ಎಲ್ಲಾ ವಿಚಾರವನ್ನು ಪತಿಗೆ ತಿಳಿಸಿದ್ದಾರೆ. ಆದರೆ ಪತಿ ಪತ್ನಿಯ ಸಹಾಯಕ್ಕೆ ನಿಲ್ಲದೆ, ಆಕೆಯ ದೂರನ್ನ ನಿರ್ಲಕ್ಷ್ಮದಿಂದ ನೋಡಿದ್ದಾನೆ. ಅಲ್ಲದೆ ಇದಕ್ಕೆ ಪ್ರತಿಯಾಗಿ ತ್ರಿವಳಿ ತಲಾಖ್ ನೀಡಿದ್ದಾನೆ.

    ಡಿಸೆಂಬರ್ 1 ರಂದು ನನ್ನ ಮಗಳನ್ನು ಮದುವೆ ಮಾಡಿಕೊಟ್ಟಿದ್ದವು. ಅಂದು ಸಂಜೆ ಪತಿ ಮನೆಗೆ ಕರೆದುಕೊಂಡು ಹೋಗಿದ್ದರು. ಆಗ ಮೈದುನ ಹಾಗೂ ಸ್ನೇಹಿತ ಸೇರಿ ಈಕೆಯೊಂದಿಗೆ ತಪ್ಪು ಕೆಲಸ ಮಾಡಿದ್ದಾರೆ. ಪತಿ ತ್ರಿವಳಿ ತಲಾಖ್ ನೀಡಿದ್ದು, ಮರುದಿನ ಗ್ರಾಮಕ್ಕೆ ತಂದು ಬಿಟ್ಟುಹೋಗಿದ್ದಾರೆ. ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡಿರುವುದಾಗಿ ಎಸ್‍ಪಿ ಪ್ರವೀಣ್ ರಂಜನ್ ಸಿಂಗ್ ಹೇಳಿದ್ದಾರೆ.

     

  • 50 ಸಹಪಾಠಿಗಳ ಮುಂದೆ ಅಪ್ರಾಪ್ತೆಯನ್ನು ಪಾಗಲ್ ಪ್ರೇಮಿ ಚಾಕುವಿನಿಂದ ಇರಿದು ಕೊಂದೇಬಿಟ್ಟ!

    50 ಸಹಪಾಠಿಗಳ ಮುಂದೆ ಅಪ್ರಾಪ್ತೆಯನ್ನು ಪಾಗಲ್ ಪ್ರೇಮಿ ಚಾಕುವಿನಿಂದ ಇರಿದು ಕೊಂದೇಬಿಟ್ಟ!

    ಲಕ್ನೋ: ಅಪ್ರಾಪ್ತ ಪ್ರೇಯಸಿಯನ್ನ ಆಕೆಯ 50 ಸಹಪಾಠಿಗಳು ಮತ್ತು ಶಿಕ್ಷಕರ ಮುಂದೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.

    16 ವರ್ಷದ ಬಾಲಕಿಯ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆಕೆಯನ್ನು ಕೊಲೆಗೈದ ಅಮರ್‍ಪಾಲ್ ಸಿಂಗ್(24) ನಂತರ ರೈಲಿನ ಹಳಿಯಲ್ಲಿ ಮಲಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಈ ಸಂದರ್ಭದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಕಳೆದ ಕೆಲ ದಿನಗಳಿಂದ ಬಾಲಕಿ ಹಾಗೂ ಅಮರ್‍ಪಾಲ್ ನಡುವೆ ಪ್ರೇಮ ಸಂಬಂಧವಿದ್ದು, ಇಬ್ಬರು ಫೋನ್‍ನಲ್ಲಿ ಗಂಟೆಗಟ್ಟಲೇ ಮಾತನಾಡುತ್ತಿದ್ದರು. ಆದರೆ ಇವರಿಬ್ಬರ ವಿವಾಹಕ್ಕೆ ಬಾಲಕಿಯ ಪೋಷಕರು ಒಪ್ಪಿಕೊಂಡಿರಲಿಲ್ಲ. ಪೋಷಕರ ವಿರೋಧಕ್ಕೆ ಕೋಪಗೊಂಡಿದ್ದ ಆರೋಪಿ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದ.

    ಬುಧವಾರ ಬಾಲಕಿ ಶಾಲೆಯನ್ನು ಮುಗಿಸಿಕೊಂಡು 50 ಮಂದಿ ತನ್ನ ಸಹಪಾಠಿಗಳು ಮತ್ತು ಶಿಕ್ಷಕರ ಜೊತೆ ಮನೆಗೆ ತೆರಳುತ್ತಿದ್ದಳು. ಈ ಸಂದರ್ಭದಲ್ಲಿ ಗಂಗೇರು ಗ್ರಾಮದ ಬಳಿ ಆರೋಪಿ ಬಾಲಕಿಯ ಮೇಲೆ ದಾಳಿ ಮಾಡಿದ್ದಾನೆ. ಈ ವೇಳೆ ಶಿಕ್ಷಕಿಯೊಬ್ಬರು ಬಾಲಕಿಯನ್ನು ಕಾಪಾಡಲು ಮುಂದಾಗಿದ್ದಾರೆ. ಆದರೆ ಅವರಿಗೂ ಈ ಘಟನೆಯಲ್ಲಿ ಗಾಯಗಳಾಗಿವೆ. ಬಾಲಕಿ ನಮ್ಮ ಮನೆಯಲ್ಲಿ ಮದುವೆಗೆ ಒಪ್ಪಲ್ಲ ಎಂದು ಹೇಳಿದ್ದಾಳೆ. ಆದರೆ ಆರೋಪಿ ಯಾರ ಮಾತನ್ನು ಕೇಳಿಸಿಕೊಳ್ಳದೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರೇಯಸಿಯನ್ನು ಕೊಲೆ ಬಳಿಕ ತಾನು ಆತ್ಯಹತ್ಯೆ ಮಾಡಿಕೊಳ್ಳಲು ಮೊದಲೇ ನಿರ್ಧಾರ ಮಾಡಿಕೊಂಡಿದ್ದ ಅಮರ್‍ಪಾಲ್ ಸಿಂಗ್ ರೈಲಿನ ಹಳಿ ಮೇಲೆ ಮಲಗಿ ಸಾಯಲು ಪ್ರಯತ್ನಿಸುತ್ತಿದ್ದ. ಅಷ್ಟರಲ್ಲಿ ಪೊಲೀಸರು ಆತನನ್ನು ಕಾಪಾಡಿ ಬಂಧಿಸಿದ್ದಾರೆ.

    ಆರೋಪಿ ಅಮರ್‍ಪಾಲ್ ನನಗೆ ಜೀವನವೇ ಬೇಡವಾಗಿದೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳಲು ರೈಲು ಹಳಿಯ ಹತ್ತಿರ ಹೋಗಿದ್ದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾನೆ. ಜುಲೈನಲ್ಲಿ ಬಾಲಕಿ ಹಲವಾರು ದಿನಗಳ ಕಾಲ ಶಾಲೆಗೆ ಹಾಜರಾಗಿರಲಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

  • ವರದಕ್ಷಿಣೆ ಕೊಡದಿದ್ದಕ್ಕೆ ಪತ್ನಿಗೆ ತಲಾಖ್ ಹೇಳಿ ನಾದಿನಿ ಜೊತೆ ಎಸ್ಕೇಪ್!

    ವರದಕ್ಷಿಣೆ ಕೊಡದಿದ್ದಕ್ಕೆ ಪತ್ನಿಗೆ ತಲಾಖ್ ಹೇಳಿ ನಾದಿನಿ ಜೊತೆ ಎಸ್ಕೇಪ್!

    ಲಕ್ನೋ: ದೇಶಾದ್ಯಂತ ತ್ರಿವಳಿ ತಲಾಖ್ ವಿರುದ್ಧ ಭಾರೀ ಚರ್ಚೆ ನಡೆಯುತ್ತಿದೆ. ಆದರೆ ವ್ಯಕ್ತಿಯೊಬ್ಬ ವರದಕ್ಷಿಣೆ ನೀಡಿಲ್ಲ ಎಂದು ಪತ್ನಿಗೆ ತಲಾಖ್ ಹೇಳಿದ್ದು ಮಾತ್ರವಲ್ಲದೇ ನಾದಿನಿ ಜೊತೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಡಿಯೋಬಾಂಡ್ ಪಠಾಣ್‍ಪುರ ಕಾಲೊನಿಯಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಸಂತ್ರಸ್ತ ಮಹಿಳೆ ನೂರ್‍ಜಹನ್ ಬೇಗಂ (27) ಭಾನುವಾರ ಪೊಲೀಸರಿಗೆ ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

    ಏನಿದು ಪ್ರಕರಣ?
    ಕಳೆದ ಮೂರು ವರ್ಷಗಳ ಹಿಂದೆ ನೂರ್‍ಜಹನ್ ತಮ್ಮ ಪಕ್ಕದ ನಿವಾಸಿ ಅರ್ಷದ್ ಅಹ್ಮದ್‍ನ ಜೊತೆ ಮದುವೆಯಾಗಿದ್ದರು. ಈ ದಂಪತಿಗೆ ಒಂದು ಹೆಣ್ಣು ಮಗು ಕೂಡ ಇದೆ. ಮದುವೆಯ ಬಳಿಕ ಪತಿ ವರದಕ್ಷಿಣೆ ತರುವಂತೆ ಪ್ರತಿದಿನ ಪೀಡಿಸುತ್ತಿದ್ದನು. ನನ್ನ ತಂದೆಯವರು ಆತನ ಬೇಡಿಕೆಗಳನ್ನು ಈಡೇರಿಸುತ್ತಲೇ ಬಂದಿದ್ದರು. ಆದರೆ ಡಿಸೆಂಬರ್ 7ರಂದು ಅರ್ಷದ್ ನನ್ನ ಜೊತೆ ಕ್ರೂರವಾಗಿ ನಡೆದುಕೊಂಡು ಜೀವಂತವಾಗಿ ಸುಟ್ಟು ಹಾಕಲು ಯತ್ನಿಸಿದ್ದ. ಈ ವೇಳೆ ನನ್ನ ಅದೃಷ್ಟ ಚೆನ್ನಾಗಿ ಇದ್ದರಿಂದ ನೆರೆಹೊರೆಯವರು ಬಂದು ನನ್ನನ್ನು ಕಾಪಾಡಿದರು. ನಂತರ ಪತಿ ನನಗೆ ತಲಾಖ್ ನೀಡಿ, ನನ್ನ ಆಭರಣಗಳನ್ನು ತೆಗೆದುಕೊಂಡು ನನ್ನ ತಂಗಿಯ ಜೊತೆ ಓಡಿ ಹೋಗಿದ್ದಾನೆ ಎಂದು ನೂರ್‍ಜಹನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ಸಂಬಂಧ ದೂರು ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಯೋಬಾಂಡ್ ಪೊಲೀಸರ ಬಳಿ ಮನವಿ ಮಾಡಿದ್ದೆ. ಆದರೆ ಅವರು ಪ್ರಕರಣ ದಾಖಲಿಸಲು ಒಪ್ಪಿಕೊಳ್ಳಲಿಲ್ಲ ಎಂದು ನೂರ್‍ಜಹನ್ ಆರೋಪಿಸಿದ್ದಾರೆ.

    ಮಹಿಳೆ ದೂರು ನೀಡಿದ್ದು, ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಈ ಸಂಬಂಧ ತನಿಖೆ ಆದ ಮೇಲೆ ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸಹರಾನ್ಪುರದ ಸೀನಿಯರ್ ಸೂಪರಿಟೆಂಡೆಂಟ್ ಪೊಲೀಸ್ ಬಬ್ಲೂ ಕುಮಾರ್ ಹೇಳಿದ್ದಾರೆ.

     

     

  • ಮೋದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದಕ್ಕೆ ಪತ್ನಿಗೆ ತಲಾಕ್ ನೀಡಿದ ಪತಿ!

    ಮೋದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದಕ್ಕೆ ಪತ್ನಿಗೆ ತಲಾಕ್ ನೀಡಿದ ಪತಿ!

    ಲಕ್ನೋ: ಉತ್ತರ ಪ್ರದೇಶದ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಭಾಗವಹಿಸಿದಕ್ಕೆ ಪತಿ ತ್ರಿವಳಿ ತಲಾಕ್ ನೀಡಿದ್ದಾನೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

    ಉತ್ತರ ಪ್ರದೇಶ ಮುಸ್ಲಿಂ ಮಹಿಳೆ ಫಿರಾ ಎಂಬವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತ್ರಿವಳಿ ತಲಾಕ್ ನಿಷೇಧ ಕ್ರಮವನ್ನ ಬೆಂಬಲಿಸಲು ಮೋದಿ ಅವರು ನಡೆಸಿದ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

    ಆದರೆ, ಫಿರಾ ಪತಿ ಡ್ಯಾನಿಶ್ ಸಂಬಂಧಿ ಮಹಿಳೆಯೊಂದಿಗೆ ಆಕ್ರಮ ಸಂಬಂಧ ಹೊಂದಿದ್ದು, ಮಗುವನ್ನು ಸಹ ಹೊಂದಿದ್ದಾರೆ. ಇದರಿಂದ ಆತ ಪ್ರತಿದಿನವೂ ತನಗೆ ತಲಾಕ್ ನೀಡುವಂತೆ ಹಿಂಸೆ ನೀಡುತ್ತಿದ್ದ. ಅಲ್ಲದೇ ನಾನು ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಭಾಗವಹಿಸಿ ವಾಪಸ್ ಬಂದ ನಂತರ ಮೋದಿ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ನನ್ನ ಮಗುವಿನೊಂದಿಗೆ ನಮ್ಮಿಬ್ಬರನ್ನು ಹೊಡೆದು ಮನೆಯಿಂದ ಹೊರ ಹಾಕಿರುವುದಾಗಿ ತಿಳಿಸಿದ್ದಾರೆ.

    ಆದರೆ ಪತ್ನಿಯ ಆರೋಪವನ್ನು ನಿರಾಕರಿಸಿರುವ ಡ್ಯಾನಿಶ್, ತನ್ನ ಪತ್ನಿ ಆಕ್ರಮ ಸಂಬಂಧ ಹೊಂದಿದ್ದಳು. ಆಕೆ ಜಿನ್ಸ್ ಪ್ಯಾಂಟ್ ಧರಿಸುತ್ತಿದ್ದಳು. ಅಲ್ಲದೇ ಆಕೆಯ ಚಿಕ್ಕಪ್ಪ ನನಗೆ ತೊಂದರೆ ನೀಡುತ್ತಿದ್ದ ಮತ್ತು ಹಲ್ಲೆಗೈದಿದ್ದಾನೆ. ನಾನು ತಲಾಕ್ ನೀಡುವುದಕ್ಕೂ ಮೋದಿ ರ‍್ಯಾಲಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

  • ಮೊಬೈಲ್ ಗೇಮ್ ಪ್ರಭಾವದಿಂದ ತಾಯಿ, ಸಹೋದರಿಯನ್ನೇ ಕೊಂದ ಅಪ್ರಾಪ್ತ ಬಾಲಕ

    ಮೊಬೈಲ್ ಗೇಮ್ ಪ್ರಭಾವದಿಂದ ತಾಯಿ, ಸಹೋದರಿಯನ್ನೇ ಕೊಂದ ಅಪ್ರಾಪ್ತ ಬಾಲಕ

    ಅಹಮದಾಬಾದ್: ಹಿಂಸಾತ್ಮಕ ಮೊಬೈಲ್ ಗೇಮ್ ಆಡಲು ಆಡಿಕ್ಟ್ ಆಗಿದ್ದ ಅಪ್ರಾಪ್ತ ಬಾಲಕನೊಬ್ಬ, ಗೇಮ್ ಪ್ರೇರಣೆಯಿಂದ ಸ್ವತಃ ತಾಯಿ ಹಾಗೂ ಸಹೋದರಿನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶ ನೋಯ್ಡಾದಲ್ಲಿ ನಡೆದಿದೆ.

    ತಾಯಿ ಅಂಜಲಿ ಹಾಗೂ 11 ವರ್ಷದ ಸಹೋದರಿ ಕನ್ನಿಕಾ ಮೃತ ದುರ್ದೈವಿಗಳಾಗಿದ್ದು, ಇಬ್ಬರನ್ನು ಬ್ಯಾಟ್‍ನಿಂದ ಹೊಡೆದು ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ.

    ತನ್ನ ತಾಯಿ ಹಾಗೂ ಸಹೋದರಿಯನ್ನು ಕೊಲೆ ಮಾಡಿದ ನಂತರ ಬಾಲಕ ಮನೆಯಿಂದ 2 ಲಕ್ಷ ರೂ ಹಾಗೂ ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದ. ಆದರೆ ಮೊಬೈಲ್ ಕರೆಯ ನೆಟ್‍ವರ್ಕ್ ಆಧರಿಸಿ ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ನೋಯ್ಡಾಗೆ ವಾಪಸ್ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತಾನು ಮಾಡಿದ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದಾನೆ ಎಂದು ಬಿಸ್ರಾಕ್ ಪೊಲೀಸ್ ಠಾಣೆ ಅಧಿಕಾರಿ ಅಜಯ್ ಶರ್ಮಾ ತಿಳಿಸಿದ್ದಾರೆ.

    ಕೊಲೆಗೆ ಕಾರಣ ಏನೆಂಬುದರ ಕುರಿತು ವಿಚಾರಣೆ ನಡೆಸಿಲಾಗುತ್ತಿದೆ. ಸಂಪೂರ್ಣ ತನಿಖೆ ನಡೆಸಿದ ಬಳಿಕ ಕೃತ್ಯದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸದ್ಯ ಕೊಲೆಯಾದ ಇಬ್ಬರ ಶವ ಪರೀಕ್ಷೆ ಪೂರ್ಣಗೊಂಡಿದ್ದು, ಅಂಜಲಿ ಅವರ ತಲೆಯಲ್ಲಿ 7 ಹಾಗೂ ಕನ್ನಿಕಾ ತಲೆಯಲ್ಲಿ 5 ಗಾಯದ ಗುರುತುಗಳು ಪತ್ತೆಯಾಗಿವೆ. ಘಟನೆ ಸೋಮವಾರ ರಾತ್ರಿ 8 ರಿಂದ 11 ರ ಸಮಯದಲ್ಲಿ ನಡೆದಿರುವ ಕುರಿತು ಶವ ಪರೀಕ್ಷೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಬಾಲಕನನ್ನು ವಿಚಾರಣೆ ನಡೆಸಿರುವ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಆತ ತನ್ನ ಓದಿನಲ್ಲಿ ಹಿಂದಿದ್ದ. ಅಲ್ಲದೇ ಮೊಬೈಲ್ ಫೋನ್ ನಲ್ಲಿ ಕ್ರೈಂ ಗ್ಯಾಂಗ್‍ಸ್ಟರ್ ಗೇಮ್ ಆಡುವುದಕ್ಕೆ ಅಡಿಕ್ಟ್ ಆಗಿದ್ದ. ಘಟನೆ ನಡೆದ ದಿನ ಆತನ ತಾಯಿ ಓದುವ ಬಗ್ಗೆ ಆತನನ್ನು ಬೈದಿದ್ದರು ಎಂದು ತಿಳಿದು ಬಂದಿದೆ.

  • ಯೋಗಿಯನ್ನು ವರಿಸಿದ ಅಂಗನವಾಡಿ ಕಾರ್ಯಕರ್ತೆ!

    ಯೋಗಿಯನ್ನು ವರಿಸಿದ ಅಂಗನವಾಡಿ ಕಾರ್ಯಕರ್ತೆ!

    ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅಂಗನವಾಡಿ ಕಾರ್ಯಕರ್ತೆ ಒಬ್ಬರು ವಿವಾಹವಾಗಿದ್ದಾರೆ.

    ಸುದ್ದಿ ಓದಿ ಕನ್‍ಫ್ಯೂಸ್ ಆಗಬೇಡಿ. ರಾಜ್ಯ ಸರ್ಕಾರದ ಗಮನ ಸೆಳೆಯಲು ಅಂಗನವಾಡಿ ಕಾರ್ಯಕರ್ತೆಯೊಬ್ಬರು ಯೋಗಿ ಆದಿತ್ಯನಾಥ್ ಅವರನ್ನು ವಿವಾಹವಾಗಿದ್ದಾರೆ. ಕಳೆದ ಕೆಲ ದಿನಗಳಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಉತ್ತರಪ್ರದೇಶದ ಅಂಗನವಾಡಿ ಕಾರ್ಯಕರ್ತೆಯರು ಸೀತಾಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ಮಹಿಳಾ ಅಂಗನವಾಡಿ ಕರ್ಮಚಾರಿ ಸಂಘದ ಜಿಲ್ಲಾಧ್ಯಕ್ಷೆ ನೀತು ಸಿಂಗ್ ಅವರು ಆದಿತ್ಯನಾಥ್ ಅವರನ್ನು ವರಿಸಿದ್ದಾರೆ.

    ಪ್ರತಿಭಟನಾ ನಿರತ ಸಾವಿರಾರು ಕಾರ್ಯಕರ್ತೆಯರ ಮಧ್ಯೆ ಯೋಗಿ ಆದಿತ್ಯನಾಥ್ ಅವರ ಭಾವಚಿತ್ರಕ್ಕೆ ಹಾರ ಹಾಕಿ ಅವರನ್ನು ವಿವಾಹವಾಗಿದ್ದಾರೆ. ಈ ಬಗ್ಗೆ ನೀತು ಸಿಂಗ್ ಪ್ರತಿಕ್ರಿಯಿಸಿ, ಶುಕ್ರವಾರ ಯೋಗಿ ಆದಿತ್ಯನಾಥ್ ಅವರು ಸೀತಾಪುರಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಅವರು ನಮ್ಮ ಸಮಸ್ಯೆಯನ್ನು ಬಗೆಹರಿಸುವ ಸಾಧ್ಯತೆಯಿದೆ. ಸಮಸ್ಯೆ ಬಗೆಹರಿದರೆ 4 ಲಕ್ಷ ಮಹಿಳಾ ಕಾರ್ಯಕರ್ತೆಯರಿಗೆ ಸಹಾಯವಾಗಲಿದೆ ಎಂದು ಹೇಳಿದರು.

    ಅಂಗನವಾಡಿ ಕಾರ್ಯಕರ್ತೆಯರು ನಮ್ಮ ಸಮಸ್ಯೆಯನ್ನು ಬಗೆ ಹರಿಸಲು ಹೊಸದಾಗಿ ಆಡಳಿತಕ್ಕೆ ಬಂದಿರುವ ಬಿಜೆಪಿ ಸರ್ಕಾರಕ್ಕೆ 4 ತಿಂಗಳ ಡೆಡ್ ಲೈನ್ ನೀಡಿದ್ದರು. ಈ ಅವಧಿ ಮುಗಿದ ಹಿನ್ನೆಲೆಯಲ್ಲಿ ಕಾರ್ಯಕರ್ತೆಯರು ಪ್ರತಿಭಟನೆಗೆ ಇಳಿದಿದ್ದಾರೆ.ಇದನ್ನೂ ಓದಿ: 15 ಸರ್ಕಾರಿ ರಜೆಗಳನ್ನ ರದ್ದು ಮಾಡಿದ ಯೋಗಿ ಆದಿತ್ಯನಾಥ್

    ಗುಜರಾತ್ ನಲ್ಲಿ ಯೋಗಿ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಅವರು ಗುರುವಾರ ಗುಜರಾತ್ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

  • ಸಿನಿಮಾಗೆ ಕರೆದುಕೊಂಡು ಹೋಗಿ ಥಿಯೇಟರ್‍ನಲ್ಲೇ ಯುವತಿ ಮೇಲೆ ಗ್ಯಾಂಗ್‍ರೇಪ್

    ಸಿನಿಮಾಗೆ ಕರೆದುಕೊಂಡು ಹೋಗಿ ಥಿಯೇಟರ್‍ನಲ್ಲೇ ಯುವತಿ ಮೇಲೆ ಗ್ಯಾಂಗ್‍ರೇಪ್

    ಲಕ್ನೋ: ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದ್ದ ಸಂದರ್ಭದಲ್ಲಿಯೇ 16 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರಪ್ರದೇಶದ ಮಿರತ್ ಜಿಲ್ಲೆಯಲ್ಲಿ ನಡೆದಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಇಬ್ಬರನ್ನು ಆರೋಪಿಗಳನ್ನು ಬಂಧಿಸಿದ್ದಾರೆ. ಎರಡು ತಿಂಗಳ ಹಿಂದೆ ಆರೋಪಿಯು ಸಂತ್ರಸ್ತೆಯ ಜೊತೆ ಫೋನ್ ಮೂಲಕ ಸ್ನೇಹ ಬೆಳೆಸಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ನಡೆದಿದ್ದೇನು?: ಮಂಗಳವಾರ ಸಂತ್ರಸ್ತೆಗೆ ಪರಿಚಿತನಾಗಿದ್ದ ಆರೋಪಿ ಶಾಪಿಂಗ್ ಮಾಡಿಸುವುದಾಗಿ ಹೇಳಿ ಮವಾನಾ ಬಳಿ ಯುವತಿಯನ್ನ ಕರೆಸಿಕೊಂಡಿದ್ದಾನೆ. ಶಾಪಿಂಗ್ ಮಾಡಿದ ನಂತರ ಸಿನಿಮಾ ನೋಡಲು ಥಿಯೇಟರ್‍ಗೆ ಕರೆದುಕೊಂಡು ಹೋಗಿದ್ದಾನೆ. ಇವನು ಹೋಗುವಷ್ಟರಲ್ಲಿ ಮತ್ತೊಬ್ಬ ಆರೋಪಿ ಚಿತ್ರಮಂದಿರಕ್ಕೆ ಬಂದಿದ್ದ. ಚಿತ್ರ ಪ್ರದರ್ಶನ ಆರಂಭವಾಗುತ್ತಿದ್ದಂತೆಯೇ ಯುವತಿಯನ್ನು ಬಾಲ್ಕನಿಗೆ ಕರೆದೊಯ್ದು ಅಲ್ಲಿ ಇಬ್ಬರೂ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಯುವತಿಯನ್ನು ಬೈಕ್‍ನಲ್ಲಿ ಮುಜಾಫರ್ ನಗರಕ್ಕೆ ಕರೆದೊಯ್ದು ಬಿಟ್ಟಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬೈಕ್ ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

     

  • ಕಾಂಗ್ರೆಸ್‍ನಿಂದ ಕರ್ನಾಟಕ ವಿಧಾನಸಭಾ ಚುನಾವಣೆ ಬಹಿಷ್ಕಾರ?

    ಕಾಂಗ್ರೆಸ್‍ನಿಂದ ಕರ್ನಾಟಕ ವಿಧಾನಸಭಾ ಚುನಾವಣೆ ಬಹಿಷ್ಕಾರ?

    ನವದೆಹಲಿ: ಗುಜರಾತ್ ಬೆನ್ನಲ್ಲೇ ಕರ್ನಾಟಕದಲ್ಲಿ ಇನ್ನೈದು ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಚುನಾವಣೆಯನ್ನು ಬಹಿಷ್ಕರಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಇವಿಎಂ ಬಳಕೆ ಮಾಡಿದರೆ ಚುನಾವಣೆ ಬಹಿಷ್ಕಾರಕ್ಕೆ ಚಿಂತನೆ ನಡೆಸಿದ್ದು ಮತ್ತೆ ಬ್ಯಾಲೆಟ್ ಪೇಪರ್ ಚುನಾವಣೆಗೆ ಕಾಂಗ್ರೆಸ್ ಪಟ್ಟು ಹಿಡಿದಿದೆ. ಸೋಮವಾರದ ದೆಹಲಿ ಭೇಟಿ ವೇಳೆ ಸಿದ್ದರಾಮಯ್ಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಈ ವಿಚಾರವನ್ನು ಮನವರಿಕೆ ಮಾಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ.

    ಇವಿಎಂ ಬಳಕೆ ಕರ್ನಾಟಕದಿಂದಲೇ ರದ್ದಾಗಬೇಕು. ಬ್ಯಾಲೆಟ್ ಪೇಪರ್ ಬಳಕೆ ಮಾಡದೇ ಇದ್ದಲ್ಲಿ ಚುನಾವಣೆಯನ್ನು ಬಹಿಷ್ಕರಿಸಲು ರಾಷ್ಟ್ರಮಟ್ಟದ ವಿಪಕ್ಷಗಳು ಚರ್ಚೆ ನಡೆಸಿವೆ ಅಂತ ತಿಳಿದುಬಂದಿದೆ.

    ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಇವಿಎಂಗಳ ದುರ್ಬಳಕೆಯಾಗಿದೆ. ಯಾರೇ ವೋಟ್ ಮಾಡಿದ್ರು ಅದು ಬಿಜೆಪಿಗೆ ಹೋಗ್ತಿದೆ ಅಂತ ಬಿಎಸ್‍ಪಿ ಅಧಿನಾಯಕಿ ಮಾಯಾವತಿ ಗಂಭೀರ ಆರೋಪ ಮಾಡಿದ್ದರು. ( ಇದನ್ನೂ ಓದಿ: ಚುನಾವಣೆ ಸಮಯದಲ್ಲಿ ರಾಜ್ಯಕ್ಕೆ ಅಮಿತ್ ಶಾ ಆಗಮನಕ್ಕೆ ನಿಷೇಧ? )

    ಬಳಿಕ ಎಎಪಿ, ಎಡಪಕ್ಷಗಳೂ ದನಿಗೂಡಿಸಿದ್ದವು. ಅದರಲ್ಲೂ ಆಪ್ ಅಂತು ಚುನಾವಣಾ ಆಯೋಗಕ್ಕೆ ಸವಾಲು ಎಸೆದಿತ್ತು. ಅಷ್ಟೇ ಅಲ್ಲದೆ ವಿಶೇಷ ಅಧಿವೇಶನ ನಡೆಸಿ ಡಮ್ಮಿ ಇವಿಎಂ ಬಳಸಿ ಹೇಗೆಲ್ಲಾ ದುರ್ಬಳಕೆ ಮಾಡಬಹುದು ಅನ್ನೋದರ ಡೆಮೋ ತೋರಿಸಿತ್ತು. ಈ ವಿವಾದ ವ್ಯಾಪಕ ಚರ್ಚೆಯಾದ ಬೆನ್ನಲ್ಲಿ ಕೇಂದ್ರ ಚುನಾವಣಾ ಆಯೋಗವೇ ರಾಜಕೀಯ ಪಕ್ಷಗಳಿಗೆ ಪಂಥಾಹ್ವಾನ ನೀಡಿ, ಪರೀಕ್ಷೆ ನಡೆಸಿತ್ತು. ಆದ್ರೆ, ಉತ್ತರ ಪ್ರದೇಶ ಚುನಾವಣೆಗೆ ಬಳಸಿ ಇವಿಎಂ ಕೊಡದಿದ್ದ ಕಾರಣ ಆಪ್ ದೂರ ಉಳಿದಿತ್ತು.

    ನಂತರ ತಣ್ಣಗಾಗಿದ್ದ ಇವಿಎಂ ದುರ್ಬಳಕೆ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಫಲಿತಾಂಶದ ಬಳಿಕ ಮತ್ತೆ ಸುದ್ದಿಗೆ ಬಂದಿದೆ. ಇವಿಎಂ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಇವಿಎಂ ಬಳಕೆ ಮಾಡದೆ ನಡೆದ ಚುನಾವಣೆಯಲ್ಲಿ ಬೇರೆ ಪಕ್ಷದವರು ಮತ್ತು ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಈಗ ಮತ್ತೊಮ್ಮೆ ಮಾಯಾವತಿ, ಅಖಿಲೇಶ್, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಲಾಲೂ ಪ್ರಸಾದ್ ಹಾಗೂ ಸೀತಾರಾಂ ಯಚೂರಿ ಸೇರಿದಂತೆ ವಿಪಕ್ಷ ನಾಯಕರು ದನಿಯೇರಿಸಿದ್ದಾರೆ. ಈ ಸಂಬಂಧ, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲು ಸಜ್ಜಾಗಿದ್ದಾರೆ ಅಂತ ತಿಳಿದು ಬಂದಿದೆ.