Tag: uttar pradesh

  • ಶಾಪಿಂಗ್ ಕರೆದುಕೊಂಡು ಹೋಗಿಲ್ಲ ಎಂದು ಗೃಹಿಣಿ ಆತ್ಮಹತ್ಯೆ

    ಶಾಪಿಂಗ್ ಕರೆದುಕೊಂಡು ಹೋಗಿಲ್ಲ ಎಂದು ಗೃಹಿಣಿ ಆತ್ಮಹತ್ಯೆ

    ಲಕ್ನೋ: ಪತಿ ಶಾಪಿಂಗ್‍ಗೆ ಕರೆದುಕೊಂಡು ಹೋಗಿಲ್ಲ ಎಂದು ಮನನೊಂದು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಕೇವಿ ನಗರದಲ್ಲಿ ನಡೆದಿದೆ.

    23 ವರ್ಷದ ದೀಪಿಕಾ ಆತ್ಮಹತ್ಯೆಗೆ ಶರಣಾದ ಗೃಹಿಣಿ. ಒಂದು ವರ್ಷದ ಹಿಂದೆ ದೀಪಕ್ ದ್ವಿವೇದಿ ಅವರ ಜೊತೆ ಮದುವೆಯಾಗಿದ್ದರು. ದೀಪಕ್ ಶಿಕ್ಷಣ ಇಲಾಖೆಯೊಂದರಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದು, ತಂದೆ ತಾಯಿ ಮತ್ತು ತಮ್ಮನ ಜೊತೆ ವಾಸಿಸುತ್ತಿದ್ದರು.

    ದೀಪಿಕಾ ಅವರ ಸಂಬಂಧಿಯೊಬ್ಬರ ಮದುವೆ ಮುಂದಿನ ಫೆಬ್ರವರಿ ತಿಂಗಳಿನಲ್ಲಿ ನಿಶ್ಚಯವಾಗಿತ್ತು. ಮದುವೆಗಾಗಿ ಶಾಪಿಂಗ್ ಮಾಡಬೇಕಾಗಿದ್ದು, ಶನಿವಾರದಂದು ಪತಿ ದೀಪಕ್‍ನನ್ನು ಶಾಪಿಂಗ್ ಕರೆದುಕೊಂಡು ಹೋಗಿ ಎಂದು ದೀಪಿಕಾ ಕೇಳಿದ್ದಾರೆ. ಆದರೆ ಪತಿ ಆಫಿಸ್‍ನಲ್ಲಿ ಕೆಲಸವಿದೆ ಮುಂದಿನ ದಿನ ಅಂದರೆ ಭಾನುವಾರ ಶಾಪಿಂಗ್ ಹೋಗೋಣ ಎಂದು ಹೇಳಿದ್ದಾರೆ. ಇದರಿಂದ ಬೇಸರಗೊಂಡ ದೀಪಿಕಾ ಸಂಜೆ ಪತಿ ಮನೆಗೆ ಬಂದ ನಂತರ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಶನಿವಾರ ನನ್ನ ಪತ್ನಿ ಶಾಪಿಂಗ್ ಹೋಗೋಣ ಎಂದು ಹೇಳಿದ್ದಳು. ಆದರೆ ನಾನು ಕೆಲಸ ಇದ್ದ ಕಾರಣ ಭಾನುವಾರ ಹೋಗೋಣ ಎಂದು ಹೇಳಿದ್ದೆ. ಆದ್ದರಿಂದ ಅವಳು ಬೇಸರ ಮಾಡಿಕೊಂಡಿದ್ದಳು. ಸಂಜೆ ನಾನು ಆಫಿಸ್‍ನಿಂದ ಮನೆಗೆ ಬಂದಾಗ ಆಕೆ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು. ಎಷ್ಟು ಬಾಗಿಲು ಬಡಿದರೂ ತೆಗೆಯಲಿಲ್ಲ. ಫೋನ್ ಮಾಡಿದೆ. ಆದ್ರೆ ಕಟ್ ಮಾಡಿದಳು. ಕೊನೆಗೆ ನಾನು ಹೊರಗಡೆಯೇ ಮಲಗಿಕೊಂಡಿದ್ದೆ. ಬೆಳಗ್ಗೆ 6 ಗಂಟೆ ವೇಳೆಗೆ ನಾನು ಮತ್ತೆ ಫೋನ್ ಮಾಡಿದೆ. ಆದ್ರೆ ರೂಮಿನಿಂದ ಯಾವುದೇ ಶಬ್ದ ಕೇಳಿಸಲಿಲ್ಲ. ಬಾಗಿಲು ಬಡಿದರೂ ತೆಗೆಯಲಿಲ್ಲ. ಕೊನೆಗೆ ಬಾಗಿಲು ಮುರಿದು ಒಳಗೆ ಹೋದೆ. ಅವಳು ಫ್ಯಾನಿಗೆ ನೇಣು ಹಾಕಿಕೊಂಡಿದ್ದಳು. ನಾನು ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದೆ ಎಂದು ಪತಿ ದೀಪಕ್ ಹೇಳಿದ್ದಾರೆ.

    ದೀಪಿಕಾ ಸಣ್ಣ ಪುಟ್ಟ ವಿಚಾರಗಳಿಗೂ ಬೇಸರ ಮಾಡಿಕೊಂಡು ರೂಂಗೆ ಹೋಗಿ ಬಾಗಿಲು ಹಾಕಿಕೊಳ್ತಿದ್ದರು. ಊಟ ಕೂಡ ಬಿಡುತ್ತಿದ್ದರು ಎನ್ನಲಾಗಿದೆ. ದೀಪಿಕಾ ಕುಟುಂಬಸ್ಥರು ಮರಣೋತ್ತರ ಪರೀಕ್ಷೆಗೆ ನಿರಾಕರಿಸಿದ್ದರು. ಆದ್ರೆ ಪೊಲೀಸರು ಮಾತನಾಡಿದ ನಂತರ ಒಪ್ಪಿಕೊಂಡರು. ಮೃತರ ಸಂಬಂಧಿಕರು ಅತ್ತೆ ಮನೆಯವರ ವಿರುದ್ಧ ಸದ್ಯಕ್ಕೆ ಯಾವುದೇ ಆರೋಪ ಮಾಡಿಲ್ಲ ಎಂದು ವರದಿಯಾಗಿದೆ.

  • ಶಾಲಾ ಆವರಣದಲ್ಲೇ 1ನೇ ಕ್ಲಾಸ್ ಬಾಲಕಿಯ ಮೇಲೆ 5ನೇ ತರಗತಿಯ ವಿದ್ಯಾರ್ಥಿಗಳಿಂದ ಗ್ಯಾಂಗ್ ರೇಪ್

    ಶಾಲಾ ಆವರಣದಲ್ಲೇ 1ನೇ ಕ್ಲಾಸ್ ಬಾಲಕಿಯ ಮೇಲೆ 5ನೇ ತರಗತಿಯ ವಿದ್ಯಾರ್ಥಿಗಳಿಂದ ಗ್ಯಾಂಗ್ ರೇಪ್

    ಲಕ್ನೋ: ಸರ್ಕಾರಿ ಶಾಲೆಯ ಹೊರ ಆವರಣದಲ್ಲೇ 5ನೇ ತರಗತಿಯ 3 ವಿದ್ಯಾರ್ಥಿಗಳು 1ನೇ ತರಗತಿ ಓದುತ್ತಿದ್ದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಶಾಲೆಯ ಹೊರ ಆವರಣದಲ್ಲಿ 5ನೇ ತರಗತಿಯ ಮೂವರು ವಿದ್ಯಾರ್ಥಿಗಳು ಸಂತ್ರಸ್ತೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬಾಲಕಿಯ ಕಿರುಚಾಟ ಕೇಳಿ ಅದೇ ದಾರಿಯಲ್ಲಿ ಹೋಗುತ್ತಿದ್ದವರು ಸಹಾಯ ಮಾಡಲು ಓಡಿ ಬಂದಿದ್ದಾರೆ. ಈ ವೇಳೆ ಬಾಲಾರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಈ ವಿಚಾರದ ಬಗ್ಗೆ ತಿಳಿದ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

    ಸಂತ್ರಸ್ತೆಯ ತಂದೆ ಶಿಕ್ಷಕರು ಸರಿಯಾಗಿ ಮಕ್ಕಳನ್ನು ನೋಡಿಕೊಳ್ಳದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಆದರೆ ಶಾಲೆಯ ಪ್ರಾಧ್ಯಾಪಕ ಈ ಬಗ್ಗೆ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

    ಈ ಘಟನೆ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾದ ಮೇಲೆ ಶಿಕ್ಷಣ ಇಲಾಖೆ ಇಬ್ಬರು ಶಿಕ್ಷಕರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಇಬ್ಬರು ಶಿಕ್ಷಕರನ್ನು ಶಿಕ್ಷ ಮಿತ್ರ ಯೋಜನೆಯಡಿ ಅತಿಥಿ ಶಿಕ್ಷಕರಾಗಿ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು ಎಂದು ಶಿಕ್ಷಣಾಧಿಕಾರಿ ಅಜಿತ್ ಕುಮಾರ್ ಹೇಳಿದರು.

  • ಅಸೂಯೆ, ಕೀಳರಿಮೆಯಿಂದ ಎಂಜಿನಿಯರ್ ಹೆಂಡ್ತಿಯನ್ನೇ ಕೊಂದೇ ಬಿಟ್ಟ!

    ಅಸೂಯೆ, ಕೀಳರಿಮೆಯಿಂದ ಎಂಜಿನಿಯರ್ ಹೆಂಡ್ತಿಯನ್ನೇ ಕೊಂದೇ ಬಿಟ್ಟ!

    ನೋಯ್ಡಾ: ಪತಿ ಅಸೂಯೆಯಿಂದ 24 ವರ್ಷದ ಎಂಜಿನಿಯರಿಂಗ್ ಹೆಂಡತಿಯನ್ನು ಕೊಂದಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ರಿಚ ಸಿಸೋಡಿಯಾ (24) ಕೊಲೆಯಾದ ದುರ್ದೈವಿ. ಈ ಘಟನೆ ಬುಧವಾರ ಸಂಜೆ ನಡೆದಿದ್ದು, ರಿಚ ಆರೋಪಿ ಕುಲ್‍ದೀಪ್ ರಾಘವ್‍ನಿಂದ ಹಲ್ಲೆಗೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದು, ನಗರದ ಕೈಲಾಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಉತ್ತರ ಪ್ರದೇಶ ಮೂಲದ ರಿಚ ಎರಡು ವರ್ಷದ ಹಿಂದೆ ಕುಲ್‍ದೀಪ್ ರಾಘವ್ ನನ್ನು ಮದುವೆಯಾಗಿದ್ದರು. ರಿಚ ಎಂಜಿನಿಯರಿಂಗ್ ಮಾಡಿದ್ದು, ನೋಯ್ಡಾದಲ್ಲಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ರಾಘವ್ 2011 ರಲ್ಲಿ ಬಿ.ಟೆಕ್ ಪದವಿಯನ್ನು ಮುಗಿಸಿದ್ದರು. ಆದರೂ ಯಾವುದೇ ಕೆಲಸ ಇರದೆ ಕೊನೆಗೆ ತನ್ನ ತಂದೆಯ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು.

    ಇವರಿಬ್ಬರ ಮಧ್ಯೆ ಕೆಲಸದ ವಿಚಾರವಾಗಿ ಆಗಾಗ ಜಗಳ, ವಾದ ನಡೆಯುತ್ತಿತ್ತು. ಬುಧವಾರ ಕೂಡ ಇದೇ ವಿಚಾರಕ್ಕೆ ಜಗಳ ಮಾಡಿದ್ದು, ಜಗಳ ವಿಕೋಪಕ್ಕೆ ತಿರುಗಿ ರಾಘವ್ ತನ್ನ ತಾಳ್ಮೆಯನ್ನು ಕಳೆದುಕೊಂಡು ಹರಿತವಾದ ಚಾಕುವಿನಿಂದ ರಿಚ ಮೇಲೆ ಹಲ್ಲೆ ಮಾಡಿದ್ದಾನೆ.

    ಹಲ್ಲೆಗೊಳಾಗದ ರಿಚಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ತೀವ್ರವಾಗಿ ಗಾಯಗೊಂಡಿದ್ದರಿಂದ ರಿಚಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಿಚಾ ದೇಹದಲ್ಲಿ ಅನೇಕ ಗಾಯಗಳಾಗಿದ್ದು, ಮೂವರು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ರಿಚಾ ಕುಟುಂಬದವರು ಆರೋಪಿಸುತ್ತಿದ್ದಾರೆ.

    ಆರೋಪಿ ಪತ್ನಿಯನ್ನು ಕೊಲೆ ಮಾಡಿ ತಲೆ ಮರಿಸಿಕೊಂಡಿದ್ದನು. ನಂತರ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ರಾಘವ್ ರಿಚ ನನ್ನ ಕೆಲಸದ ಬಗ್ಗೆ ಅಸೂಯೆ ಹಾಗೂ ಕೀಳರಿಮೆಯನ್ನು ಹೊಂದಿದ್ದಳು ಎಂದು ಆರೋಪಿಸಿದ್ದಾನೆ.

    ಈ ಪ್ರಕರಣ ಸಂಬಂಧ ಪೊಲೀಸರು ಕುಲ್‍ದೀಪ್ ತಂದೆಯನ್ನು ವಶಪಡಿಸಿಕೊಂಡು ವಿಚಾರಣೆ ಮಾಡುತ್ತಿದ್ದು, ದಂಪತಿ ಇಬ್ಬರು ಕೀಳರಿಮೆಯ ಭಾವನೆ ಹೊಂದಿದ್ದರು. ಆದ್ದರಿಂದ ಈ ಫಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಬುಲೆಟ್ ಗಾಯದ ಗುರುತುಗಳೊಂದಿಗೆ ಬಾಕ್ಸರ್ ಮೃತದೇಹ ಪತ್ತೆ

    ಬುಲೆಟ್ ಗಾಯದ ಗುರುತುಗಳೊಂದಿಗೆ ಬಾಕ್ಸರ್ ಮೃತದೇಹ ಪತ್ತೆ

    ನೋಯ್ಡಾ: ರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಬಾಕ್ಸರ್‍ ವೊಬ್ಬರು ಬುಲೆಟ್ ಗಾಯದ ಗುರುತುಗಳೊಂದಿಗೆ ತನ್ನ ಫ್ಲಾಟ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಹೇಳಿದ್ದಾರೆ.

    ಜಿತೇಂದ್ರ ಮನ್ (27) ಎಂಬವರ ಮೃತ ದೇಹ ನೋಯ್ಡಾದ ಅವರ ಅಪಾರ್ಟ್‍ಮೆಂಟ್ ನಲ್ಲಿ ದೊರೆತಿದೆ. ಜೂನಿಯರ್ ಲೆವೆಲ್ ಬಾಕ್ಸರ್ ಆಗಿದ್ದ ಜಿತೇಂದ್ರ 2006 ರಲ್ಲಿ ಭಾರತವನ್ನ ಪ್ರತಿನಿಧಿಸಿದ್ದರು. ಹರಿಯಾಣ ರಾಜ್ಯ ಬಾಕ್ಸರ್ ಅಸೋಸಿಯೇಷನ್ ನಲ್ಲಿ ನೋಂದಣಿಯಾಗಿದ್ದರು. ಏಳು ತಿಂಗಳ ಹಿಂದೆ ಗಾಯದ ಸಮಸ್ಯೆಯಿಂದ ಜಿತೇಂದ್ರ ಅವರು ಬಾಕ್ಸಿಂಗ್ ನಿಂದ ದೂರ ಉಳಿದು ಜಿಮ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದ್ರೆ ಕಳೆದ ಎರಡು ದಿನಗಳಿಂದ ಜಿಮ್ ಗೂ ಹೋಗಿರಲಿಲ್ಲ. ಜೊತೆಗೆ ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು.

    ಜಿತೇಂದ್ರ ಅವರ ಕುಟುಂಬ ದೆಹಲಿಯಲ್ಲಿ ವಾಸವಿದ್ದು, ಕಳೆದ ಐದು ದಿನಗಳಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಅನುಮಾನಗೊಂಡು ಆಪಾರ್ಟ್ ಮೆಂಟ್ ಬಳಿ ಬಂದು ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

    ಜಿತೇಂದ್ರ ಅವರ ಫ್ಲಾಟ್ ಹೊರಗಡೆಯಿಂದ ಲಾಕ್ ಮಾಡಲಾಗಿತ್ತು. ಹೀಗಾಗಿ ಬಾಗಿಲು ಒಡೆದು ಒಳಪ್ರವೇಶಿಸಿದ ಸಮಯದಲ್ಲಿ ಜಿತೇಂದ್ರ ರಕ್ತದ ಮಾಡುವಿನಲ್ಲಿ ಬಿದ್ದಿದ್ದನ್ನು ಕುಟುಂಬಸ್ಥರು ನೋಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸುನಿತಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಅವರ ಮೃತ ದೇಹವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದು, ತನಿಖೆಯನ್ನು ಮುಂದುವರೆಸುವುದಾಗಿ ಪೊಲೀಸ್ ಉಪ ಅಧೀಕ್ಷಕ ಅಮೀತ್ ಕಿಶೋರ್ ತಿಳಿಸಿದ್ದಾರೆ. ಘಟನೆಯ ಕುರಿತು ಐಪಿಸಿ ಸೆಕ್ಷನ್ 302(ಕೊಲೆ) ರಡಿ ಸೂರಜ್‍ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 10 ರೂ. ಆಸೆ ತೋರಿಸಿ 7ರ ಬಾಲಕಿಯ ಮೇಲೆ ಪೇದೆಯಿಂದಲೇ ರೇಪ್

    10 ರೂ. ಆಸೆ ತೋರಿಸಿ 7ರ ಬಾಲಕಿಯ ಮೇಲೆ ಪೇದೆಯಿಂದಲೇ ರೇಪ್

    ನೋಯ್ಡಾ: ಏಳು ವರ್ಷದ ಬಾಲಕಿಯ ಮೇಲೆ ಪೊಲೀಸ್ ಪೇದೆಯೇ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ಸುಭಾಷ್ ಸಿಂಗ್ (45) ಎಂಬ ಪೊಲೀಸ್ ಪೇದೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯಾಗಿದ್ದು, ನೋಯ್ಡಾದ ಬುದ್ಧ ನಗರ ತೆರಿಗೆ ಇಲಾಖೆ ಬಳಿ ಕಾರ್ಯನಿರ್ವಹಣೆಗೆ ನಿಯೋಜಿಸಿದ್ದ ವೇಳೆ ಕೃತ್ಯ ಎಸಗಿದ್ದಾನೆ.

    ಬುಧವಾರ ಬೆಳಗ್ಗೆ ಘಟನೆ ನಡೆದಿದ್ದು, ನೋಯ್ಡಾದ ಸೂರಜ್‍ಪುರ ಬಳಿ ಬಾಲಕಿಯನ್ನು ತನ್ನ ಆರ್ಪಾಟ್ ಮೆಂಟ್‍ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಬಾಲಕಿ ಕಿರುಚಿಕೊಂಡಿದ್ದು, ಬಾಲಕಿಯ ಅಳು ಕೇಳಿದ ಸಾರ್ವಜನಿಕರು ಆಕೆಯನ್ನು ರಕ್ಷಿಸಿದ್ದಾರೆ. ಆದರೆ ಈ ವೇಳೆ ಪೊಲೀಸ್ ಪೇದೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮರುದಿನ ಬೆಳಗ್ಗೆ 4 ಗಂಟೆ ವೇಳೆ ಆರೋಪಿ ಸುಭಾಷ್ ಮನೆಗೆ ವಾಪಸ್ ಆಗಿದ್ದು, ಇದನ್ನು ಗಮಸಿದ ಸಾರ್ವಜನಿಕರು ಆತನ್ನು ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಪೊಲೀಸ್ ಪೇದೆಗೆ ಜನರು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ಥೆಯ ತಾಯಿ ಆರೋಪಿಯ ವಿರುದ್ಧ ಬುಧವಾರ ಸಂಜೆ ದೂರು ನೀಡಿದ್ದು, ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಲಾಗಿದೆ ಎಂದು ಸೂರಜ್‍ಪುರ ಪೊಲೀಸ್ ಠಾಣೆ ಅಧಿಕಾರಿ ಅಖಿಲೇಶ್ ಪ್ರಧಾನ್ ಹೇಳಿದರು.

    ಅತ್ಯಾಚಾರಕ್ಕೆ ಒಳಗಾದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ನೋಯ್ಡಾದ ಮೆಡಿಕಲ್ ಆಸ್ಪತ್ರಗೆ ದಾಖಲಿಸಲಾಗಿದ್ದು, ವೈದ್ಯರ ವರದಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

  • ಪಿಎಚ್‍ಡಿ ಸಂಶೋಧನಾ ವಿದ್ಯಾರ್ಥಿ ಈಗ ಹಿಜ್ಬುಲ್ ಉಗ್ರ!

    ಪಿಎಚ್‍ಡಿ ಸಂಶೋಧನಾ ವಿದ್ಯಾರ್ಥಿ ಈಗ ಹಿಜ್ಬುಲ್ ಉಗ್ರ!

    ನವದೆಹಲಿ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯೊಬ್ಬ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿರುವ ಆಘಾತಕಾರಿ ವಿಚಾರ ಈಗ ಬೆಳಕಿಗೆ ಬಂದಿದೆ.

    ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿರುವ ಜಮ್ಮು ಮತ್ತು ಕಾಶ್ಮೀರ ಮೂಲಕ ಮನ್ನನ್ ವಾನಿ ಎಂಬಾತ ಉಗ್ರ ಘಟನೆ ಸೇರ್ಪಡೆಯಾಗಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದು, ಈ ಕುರಿತು ಫೋಟೋವೊಂದು ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿತ್ತು. ಫೋಟೋ ಪ್ರಕರಟವಾದ ಬಳಿಕ ವಿವಿ ಆತನನ್ನು ಈಗ ಕಿತ್ತುಹಾಕಿದೆ.

    ಕಾಶ್ಮೀರದಲ್ಲಿ ಉಪನ್ಯಾಸಕರಾಗಿರುವ ಬಶೀರ್ ಅಹ್ಮದ್ ವಾನಿಯವರ ಪುತ್ರ ಮನ್ನನ್ ವಾನಿ ಜನವರಿ 5 ರಂದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದಾನೆಂಬ ಸಂದೇಶವೊಂದು ಫೋಟೋ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಕೆಲ ದಿನಗಳಿಂದ ಮನ್ನನ್ ವಾನಿ ಸಹ ಕೆಲ ದಿನಗಳಿಂದ ಕಣ್ಮರೆಯಾಗಿದ್ದು ಈ ಹಿನ್ನಲೆಯಲ್ಲಿ ಉತ್ತರಪ್ರದೇಶ ಪೊಲೀಸರು ಆತನ ರೂಮಿನ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದ್ದಾರೆ.

    ಸಾಂಧರ್ಬಿಕ ಚಿತ್ರ

    ಸಾಮಾಜಿಕ ಜಾಲತಾಣದಲ್ಲಿರುವ ಫೋಟೋದಲ್ಲಿ ಮನ್ನನ್ ವಾನಿ ಕೈಯಲ್ಲಿ ಎಕೆ.47 ಹಿಡಿದುಕೊಂಡಿದ್ದಾನೆ. ಇದರ ಹಿನ್ನೆಲೆಯಲ್ಲಿ ವಿವಿ ಆವರಣದಲ್ಲಿನ ಮನ್ನನ್ ವಾನಿ ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದ ಕೊಠಡಿಯನ್ನು ಸೀಲ್ ಮಾಡಿದ್ದಾರೆ.

    ವಿಶ್ವವಿದ್ಯಾಲಯದ ಅಧಿಕಾರಿ ಎಂ ಮೊಹ್ಸಿನ್ ಖಾನ್ ಅವರು, ಮೆನ್ನನ್ ವಿವಿಯ 1985ರ ಶಿಸ್ತುಪಾಲನ ನಿಯಮಗಳನ್ನು ಉಲ್ಲಂಘನೆ ಮಾಡಿದ ಸಂದರ್ಭದಲ್ಲಿ ವಿವಿ ಉಪಕುಲಪತಿಗಳಿಗೆ ದೂರು ನೀಡಿದ್ದರು. ಇದರ ಅನ್ವಯ ಕುಲಪತಿಗಳು ಮೆನ್ನನ್ ಮೇಲೆ ತನಿಖೆ ನಡೆಸಲು ಆದೇಶ ನೀಡಿದ್ದರು.

    ಮೆನ್ನನ್ ವಾನಿ 2012-13 ನೇ ಸಾಲಿನಲ್ಲಿ ವಿಶ್ವವಿದ್ಯಾಲಯಕ್ಕೆ ಎಂಎಸ್ಸಿ ಪದವಿಗೆ ಪ್ರವೇಶ ಪಡೆದಿದ್ದು ನಂತರ 2014 ರಲ್ಲಿ ಭೂವಿಜ್ಞಾನ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಆಯ್ಕೆ ಆಗಿದ್ದ.

    ವಿವಿ ಅಧಿಕಾರಿ ಓಮರ್ ಪೀರ್ಜಾದಾ ತಿಳಿಸಿರುವಂತೆ ಮೆನ್ನನ್ ಜನವರಿ 2 ರಿಂದ ಕಾಣೆಯಾಗಿದ್ದಾನೆ. ಅಲ್ಲದೇ ವಿವಿ ಹಾಸ್ಟೆಲ್ ಸಿಬ್ಬಂದಿ ನೀಡಿರುವ ಮಾಹಿತಿ ಪ್ರಕಾರ ಆತ ನಾಪತ್ತೆ ಆಗುವ 5 ದಿನಗಳ ಮುನ್ನ ಹಾಸ್ಟೆಲ್ ನಲ್ಲಿ ಊಟ ಮಾಡುವುದನ್ನು ಬಿಟ್ಟಿದ್ದ. ಆದರೆ ಹಾಸ್ಟೆಲ್ ನಲ್ಲಿ ಆತನ ರೂಮ್ ನಲ್ಲಿದ್ದ ವಿದ್ಯಾರ್ಥಿ ಆತನ ಕುರಿತು ಯಾವುದೇ ದೂರು ನೀಡಿಲ್ಲ. ಹಾಸ್ಟೆಲ್ 237 ಕೊಠಡಿಯಲ್ಲಿ ಮೆನ್ನನ್ ವಾಸಿಸುತ್ತಿದ್ದ, ಆತನ ರೂಮ್ ಮೇಲೆ ದಾಳಿ ನಡೆಸಿದ ಕುರಿತ ಪ್ರಕ್ರಿಯೆಯನ್ನು ವಿಡಿಯೋ ಮಾಡಲಾಗಿದೆ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.

    ಸೇನೆಯ ವಿರುದ್ಧ ಪೋಸ್ಟ್: ಈ ಹಿಂದೆ ಮನ್ನನ್ ವಾನಿ ಶ್ರೀನಗರದ ತನ್ನ ಮನೆಗೆ ಮರಳುತ್ತಿದ್ದಾಗ ಸೇನಾ ಪಡೆಗಳು ಕಿರುಕುಳ ನೀಡಿದ್ದ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ. ಕಾರಿನಲ್ಲಿ ತೆರಳುವ ವೇಳೆ ಸೇನಾ ಅಧಿಕಾರಿಗಳು ತನ್ನ ಗುರುತು ಸಾಬೀತು ಪಡೆಸುವಂತೆ ಕೇಳಿದ್ದರೂ, ಅಲ್ಲದೇ ನೀನು ಏಕೆ ಉದ್ದ ಕೂದಲು ಬಿಟ್ಟಿದ್ದೀಯ, ಗಡ್ಡವನ್ನು ಏಕೆ ಕತ್ತರಿಸಿಲ್ಲ ಎಂದು ನನ್ನ ಶೂ, ಬಟ್ಟೆಯ ಬಗ್ಗೆ ಪ್ರಶ್ನಿಸಿ ನನ್ನನ್ನು ಉಗ್ರರ ರೀತಿ ನಡೆಸಿಕೊಂಡರು ಎಂಬುದಾಗಿ ಬರೆದುಕೊಂಡಿದ್ದ.

    ಪೋಲಿಸ್ ಎಸ್‍ಪಿ ಅತುಲ್ ಶ್ರೀವಾಸ್ತವ ತಿಳಿಸುವಂತೆ, ಮೆನನ್ ಸಹಪಾಠಿ ಸಹ ಜಮ್ಮು ಕಾಶ್ಮೀರದ ಮೂಲದನಾಗಿದ್ದು, ಕಳೆದ ನಾಲ್ಕು ತಿಂಗಳ ಹಿಂದೆ ಮನೆಗೆ ಹೋಗಿದ್ದ ಆತ ಇದುವರೆಗೆ ಹಿಂದಿರುಗಿಲ್ಲ ಎಂದು ತಿಳಿಸಿದ್ದಾರೆ.

    ವಿಶ್ವವಿದ್ಯಾಲಯವು ಪ್ರಕರಣದ ಸಮಗ್ರ ತನಿಖೆ ನಡೆಸಲು ಸಂಪೂರ್ಣ ಸಹಕಾರ ನೀಡಲಿದ್ದು, ಹಾಸ್ಟೆಲ್‍ಗಳ ಮೇಲೆ ವಿವಿ ಸಂಪೂರ್ಣ ನಿಯಂತ್ರಣ ಹೊಂದಿದೆ. ಹಲವು ಬಾರಿ ಮಧ್ಯ ರಾತ್ರಿ ವಿವಿ ಅಧಿಕಾರಿಗಳು ಹಾಸ್ಟೆಲ್ ಮೇಲೆ ದಾಳಿ ನಡೆಸಿ ವಿದ್ಯಾರ್ಥಿಗಳು ಆಕ್ರಮ ಚಟುವಟಿಕೆಗಳ ಮೇಲೆ ನಿಗಾವಹಿಸಲಾಗಿತ್ತು ಎಂದು ವಿವಿ ಶಿಸ್ತುಪಾಲನ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ಮೆನ್ನನ್ ಇದುವರೆಗೂ ಉಗ್ರಸಂಘಟನೆಗೆ ಸೇರ್ಪಡೆಗೊಂಡಿದ್ದಾನಾ ಅಥವಾ ಇಲ್ಲವಾ ಎಂಬುವುದು ಖಚಿತವಾಗಿಲ್ಲ. ಪ್ರಸ್ತುತ ನಾಪತ್ತೆ ಆಗಿರುವ ಮೆನ್ನನ್ ಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಸಾಂಧರ್ಬಿಕ ಚಿತ್ರ
  • ಕಬ್ಬಿನ ಗದ್ದೆಯಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ -ಆರೋಪಿ ಪರಾರಿ

    ಕಬ್ಬಿನ ಗದ್ದೆಯಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ -ಆರೋಪಿ ಪರಾರಿ

    ಲಕ್ನೋ: 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಬಡಾನ್ ಜಿಲ್ಲೆಯ ಅಲಾಪುರ್ ಗ್ರಾಮದಲ್ಲಿ ನಡೆದಿದೆ.

    ಆರೋಪಿ ಮೊಹಮ್ಮದ್ ಸೊಹ್ರಾಬ್ ಎಂದು ಗುರುತಿಸಲಾಗಿದ್ದು, ಭಾನುವಾರ ಬಾಲಕಿ ತಮ್ಮ ಮನೆ ಮುಂದೆ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಆರೋಪಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.

    ಕುಟುಂಬದ ಸದಸ್ಯರು ಆಟವಾಡುತ್ತಿದ್ದ ಬಾಲಕಿ ಇನ್ನು ಮನೆಗೆ ಬರಲಿಲ್ಲ ಎಂದು ಎಲ್ಲ ಕಡೆಯೂ ಹುಡುಕಾಡಿದ್ದಾರೆ. ಕೊನೆಗೆ ಬಾಲಕಿ ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಪತ್ತೆಯಾಗಿದ್ದಾಳೆ.

    ಪೊಲೀಸರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ ಆರೋಪಿ ಅತ್ಯಾಚಾರ ಎಸಗಿ ಎಲ್ಲೋ ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • 12ನೇ ತರಗತಿಯ ಹುಡುಗಿಯನ್ನ ಅಪಹರಿಸಿ ಗ್ಯಾಂಗ್‍ರೇಪ್ ಮಾಡಿ ಕೊಂದೇಬಿಟ್ರು!

    12ನೇ ತರಗತಿಯ ಹುಡುಗಿಯನ್ನ ಅಪಹರಿಸಿ ಗ್ಯಾಂಗ್‍ರೇಪ್ ಮಾಡಿ ಕೊಂದೇಬಿಟ್ರು!

    ಲಕ್ನೋ: 12 ನೇ ತರಗತಿಯ ಹುಡುಗಿಯನ್ನ ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರ್‍ನಲ್ಲಿ ನಡೆದಿದೆ.

    ಜನವರಿ 2 ರಂದು ಸಂಜೆ ಟ್ಯೂಷನ್‍ಗೆ ಹೋಗಿ ಮನೆಗೆ ಹಿಂದಿರುಗಿ ಬರುವ ಸಂದರ್ಭದಲ್ಲಿ ನಾಪತ್ತೆಯಾಗಿದ್ದಳು. ಆದರೆ ಎರಡು ದಿನಗಳ ಬಳಿಕ ಅಂದರೆ ಮಂಗಳವಾರ ರಾತ್ರಿ ಹುಡುಗಿಯ ಮೃತ ದೇಹ ಬುಲಂದ್‍ಶಹರ್‍ನ ಕೆರೆಯಲ್ಲಿ ಪತ್ತೆಯಾಗಿದೆ.

    ದುಷ್ಕರ್ಮಿಗಳು ಹುಡುಗಿಯನ್ನ  ಕಿಡ್ನಾಪ್ ಮಾಡುವ ದೃಶ್ಯ ಸಿಸಿವಿಟಿಯಲ್ಲಿ ಸೆರೆಯಾಗಿದ್ದು, ಹುಡುಗಿ ಸೈಕಲ್ ಹಿಡಿದು ಮನೆಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಅಲ್ಟೋ ಕಾರಲ್ಲಿ ಬಂದ ದುಷ್ಕರ್ಮಿಗಳು ಆಕೆಯನ್ನು ಎಳೆದು ಕಾರಿನಲ್ಲಿ ಕೂರಿಸಿಕೊಂಡು ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಕಂಡುಬಂದಿದೆ.

    ಹುಡುಗಿ ಅಪಹರಣವಾದ ಎರಡು ದಿನಗಳ ಬಳಿಕ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯನ್ನು ಕೊಲೆ ಮಾಡುವ ಮೊದಲು ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿ ನಂತರ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಇನ್ನು ಖಚಿತವಾಗಿಲ್ಲ. ಹುಡುಗಿಯ ಶವವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ.

    ಈ ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸ್ ತಂಡ ತನಿಖೆ ನಡೆಸುತ್ತಿದೆ. ಈ ಪ್ರಕರಣದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಮೇಲ್ವೀಚಾರಣೆ ನಡೆಸುತ್ತಿದ್ದಾರೆ ಎಂದು ಎಸ್‍ಪಿ ಪ್ರವೀಣ್ ರಂಜನ್ ಸಿಂಗ್ ತಿಳಿಸಿದರು. ಉತ್ತರ ಪ್ರದೇಶ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಶಂಕಿತರ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಸೈನಿಕರು ಪ್ರತಿದಿನ ಸಾಯ್ತಾರೆ, ಸೈನಿಕರು ಸಾಯದಿರೋ ದೇಶ ಇದ್ಯಾ?: ಬಿಜೆಪಿ ಸಂಸದ

    ಸೈನಿಕರು ಪ್ರತಿದಿನ ಸಾಯ್ತಾರೆ, ಸೈನಿಕರು ಸಾಯದಿರೋ ದೇಶ ಇದ್ಯಾ?: ಬಿಜೆಪಿ ಸಂಸದ

    ಲಕ್ನೋ: ಇತ್ತೀಚೆಗೆ ಸಿಆರ್‍ಪಿಎಫ್ ತರಬೇತಿ ಕೇಂದ್ರದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಈ ಬಗ್ಗೆ ಉತ್ತರ ಪ್ರದೇಶ ರಾಜ್ಯದ ರಾಮ್‍ಪುರ ಕ್ಷೇತ್ರದ ಬಿಜೆಪಿ ಸಂಸದ ನೇಪಾಳ ಸಿಂಗ್ ಪ್ರತಿಕ್ರಿಯಿಸುವ ವೇಳೆ ಭಾರತೀಯ ಸೈನಿಕರಿಗೆ ಅವಮಾನಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ.

    ಸೈನಿಕರು ಪ್ರತಿದಿನ ಸಾಯ್ತಾರೆ. ಎಲ್ಲಿಯಾದ್ರೂ ಯುದ್ಧದಲ್ಲಿ ಸೈನಿಕರು ಸಾಯದೇ ಇರುವ ದೇಶವಿದ್ಯಾ? ಗ್ರಾಮಗಳಲ್ಲಿ ಗಲಾಟೆ ಆದಾಗ ಯಾರಿಗಾದ್ರೂ ಗಾಯ ಆಗೇ ಆಗುತ್ತದೆ. ಜೀವವನ್ನು ಉಳಿಸಬಲ್ಲ ಸಾಧನ ಏನಾದ್ರೂ ಇದ್ರೆ ಹೇಳಿ. ಬುಲೆಟ್ ವಿಫಲಗೊಳಿಸುವ ಯಾವುದಾದ್ರೂ ಸಾಧನ ಇದ್ರೆ ಹೇಳಿ. ಅದನ್ನ ಜಾರಿಗೆ ತರೋಣ ಎಂದು ಹೇಳಿದ್ದಾರೆ.

    ಇತ್ತ ಸಂಸದರ ಹೇಳಿಕೆಗೆ ಆಕ್ರೋಶ ವ್ಯಕ್ತವಾದ ಕೂಡಲೇ ನಾನು ಸೇನೆಗೆ ಅವಮಾನಿಸುವಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಒಂದು ವೇಳೆ ನನ್ನ ಮಾತುಗಳಿಂದ ಯಾರಿಗಾದ್ರೂ ದುಃಖವಾದ್ರೆ ನಾನು ಎಲ್ಲರಲ್ಲಿಯೂ ಕ್ಷಮೆ ಕೇಳುತ್ತೇನೆ ಅಂತಾ ನೇಪಾಳ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

  • ಪ್ರೀತಿಸಿ ಮದ್ವೆಯಾದ 20 ದಿನದಲ್ಲೇ ಟ್ರೇನಿ ಐಐಎಸ್ ಅಧಿಕಾರಿ ಸಾವು

    ಪ್ರೀತಿಸಿ ಮದ್ವೆಯಾದ 20 ದಿನದಲ್ಲೇ ಟ್ರೇನಿ ಐಐಎಸ್ ಅಧಿಕಾರಿ ಸಾವು

    ಲಕ್ನೋ: ಪ್ರೀತಿಸಿ ಮದುವೆಯಾದ 20 ದಿನದಲ್ಲೇ ಟ್ರೇನಿ ಐಐಎಸ್ ಅಧಿಕಾರಿಯೊಬ್ಬರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಇಟವಾದಲ್ಲಿ ನಡೆದಿದೆ.

    2015ರ ಬ್ಯಾಚ್‍ನ ಟ್ರೇನಿ ಐಐಎಸ್(ಇಂಡಿಯನ್ ಇನ್ಫರ್‍ಮೇಷನ್ ಸರ್ವೀಸ್) ಅಧಿಕಾರಿ ದೀಪಕ್ ಸೆಕ್ಸೆನಾ ಮೃತ ದುರ್ದೈವಿ. ಇಟವಾ ಜಿಲ್ಲೆಯ ಸಮೀಪದ ಲಕ್ನೋ-ಆಗ್ರಾ ಹೆದ್ದಾರಿಯಲ್ಲಿ ಅಪಘಾತವಾಗಿ ಶನಿವಾರ ಸಾವನ್ನಪ್ಪಿದ್ದಾರೆ.

    ದೀಪಕ್ ಸೆಕ್ಸೆನಾ ಶನಿವಾರ ಸಂಜೆ ತಮ್ಮ ತಾಯಿ, ಪತ್ನಿಯೊಂದಿಗೆ ಕಾರಿನಲ್ಲಿ ದೆಹಲಿಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಮಾರ್ಗ ಮಧ್ಯೆ ಕಾರಿನ ಟೈರ್ ಏಕಾಏಕಿ ಸ್ಫೋಟಗೊಂಡಿದ್ದು, ಕಾರು ಹಲವು ಬಾರಿ ಪಲ್ಟಿ ಹೊಡೆಡು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಕಾರು ಪಲ್ಟಿ ಹೊಡೆದಿದ್ದನ್ನು ಕಂಡು ಹೆದ್ದಾರಿ ಪಕ್ಕದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಜನ ಸ್ಥಳಕ್ಕೆ ಓಡಿ ಬಂದಿದ್ದಾರೆ. ನಂತರ ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ವಿಷಯ ತಿಳಿದು ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ್ರು. ಆದರೆ ಅಷ್ಟರಲ್ಲಿ ದೀಪಕ್ ಮೃತಪಟ್ಟಿದ್ದು, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ದೀಪಕ್ ತಾಯಿ, ಪತ್ನಿ ಮತ್ತು ಚಾಲಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಮೃತ ದೀಪಕ್ ಇದೇ ಡಿಸೆಂಬರ್ 12ರಂದು ತಮ್ಮ ಗೆಳತಿ ಸಾಕ್ಷಿ ಜೊತೆ ಮದುವೆ ಆಗಿದ್ದರು. ಐದು ವರ್ಷಗಳ ಹಿಂದೆ ದೀಪಕ್ ಮತ್ತು ಸಾಕ್ಷಿ ಪರಿಚಯವಾಗಿದ್ದು, ಬಳಿಕ ಪರಿಚಯ ಪ್ರೇಮಕ್ಕೆ ತಿರುಗಿ ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಆದರೆ ಈಗ ಈ ಅಪಘಾತದಿಂದ ಎರಡೂ ಕುಟುಂಬಗಳ ದುಃಖ ಮುಗಿಲು ಮುಟ್ಟಿದೆ.