Tag: uttar pradesh

  • ನಾಗ ಸಾಧುಗಳು ಯಾರು? ನೇಮಕಾತಿ ಹೇಗೆ ನಡೆಯುತ್ತೆ? ದೀಕ್ಷೆ ಪೂರ್ಣಗೊಳ್ಳುವುದು ಯಾವಾಗ?

    ನಾಗ ಸಾಧುಗಳು ಯಾರು? ನೇಮಕಾತಿ ಹೇಗೆ ನಡೆಯುತ್ತೆ? ದೀಕ್ಷೆ ಪೂರ್ಣಗೊಳ್ಳುವುದು ಯಾವಾಗ?

    ಪ್ರಯಾಗರಾಜ್: ಮಹಾ ಕುಂಭಮೇಳದಲ್ಲಿ (Maha Kumbh Mela) ನಾಗ ಸಾಧುಗಳ (Naga Sadhus) ದೀಕ್ಷೆಗಾಗಿ ಅಭ್ಯರ್ಥಿಗಳ ವಿಶಿಷ್ಟ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.

    ಸನಾತನ ಧರ್ಮಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಉದ್ದೇಶದಿಂದ ವಿವಿಧ ಅಖಾರಗಳಲ್ಲಿ ನಾಗಗಳು ಸಿದ್ಧರಾಗಿರುವ ಸಾವಿರಾರು ಯುವ ಸನ್ಯಾಸಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದು ಅಖಾರಗಳು ಈಗಾಗಲೇ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿವೆ.

    ನಾಗಗಳು ಅಂದರೆ ಯಾರು?
    ‘ನಾಗ’ ಎಂಬ ಪದವು ಪ್ರಾಚೀನ ಕಾಲದಲ್ಲಿ ಭಾರತದ ಕಾಡುಗಳು ಮತ್ತು ಬೆಟ್ಟಗಳಲ್ಲಿ ಅಲೆದಾಡುತ್ತಿದ್ದ ಹಾವಿನ ಆರಾಧಕರ ಪ್ರಾಚೀನ ಬುಡಕಟ್ಟು ಜನಾಂಗವನ್ನು ಸೂಚಿಸುತ್ತದೆ. ನಾಗ ಸಾಧುಗಳು ಶಿವನೇ (Shiva) ದೇವರೆಂದು ನಂಬುತ್ತಾರೆ.

    ನಾಗಾ ಸಾಧುಗಳಾಗುವ ಮೊದಲ ಹೆಜ್ಜೆ ಯಾವುದೆಂದರೆ ಮಾರ್ಗದರ್ಶನ ಮಾಡುವ ಗುರುವನ್ನು ಹುಡುಕಬೇಕಾಗುತ್ತದೆ. ಗುರು ಸಿಕ್ಕಿದ ಬಳಿಕ ಕಠಿಣ ತರಬೇತಿ ಮತ್ತು ಶಿಸ್ತಿನ ಅವಧಿಗೆ ಒಳಗಾಗಬೇಕಾಗುತ್ತದೆ. ಇದರಲ್ಲಿ ಧ್ಯಾನ, ಯೋಗ ಮತ್ತು ಇತರ ಆಧ್ಯಾತ್ಮಿಕ ಅಭ್ಯಾಸಗಳು ಸೇರಿವೆ. ಕಟ್ಟುನಿಟ್ಟಾದ ಬ್ರಹ್ಮಚರ್ಯ ನಿಯಮಗಳನ್ನು ಪಾಲಿಸಬೇಕು ಮತ್ತು ಲೌಕಿಕ ಸುಖಗಳಿಂದ ದೂರವಿರಬೇಕಾಗುತ್ತದೆ.

    ರಹಸ್ಯ ಸಂದರ್ಶನ:
    ಅಖಾರ ಸೇರಲು ನೋಂದಣಿ ಫಾರಂ ನೀಡಲಾಗುತ್ತದೆ. ನಾಗ ಸಾಧುಗಳಾಲು ಇಚ್ಛಿಸಿದ ವ್ಯಕ್ತಿಗಳನ್ನು ರಹಸ್ಯವಾಗಿ ಸಂದರ್ಶಿಸಲಾಗುತ್ತಿದೆ. ಜುನಾ, ಶ್ರೀ ನಿರಂಜನಿ, ಶ್ರೀ ಮಹಾನಿರ್ವಾಣಿ, ಆವಾಹನ್, ಅಟಲ್ ಮತ್ತು ಆನಂದ್ ಅಖಾರಗಳಲ್ಲಿನ ಎಲ್ಲಾ ಮಾನದಂಡಗಳನ್ನು ಪೂರೈಸಿದವರನ್ನು ನಾಗ ಸನ್ಯಾಸದ ದೀಕ್ಷೆ ನೀಡಲಾಗುತ್ತದೆ. ಇದನ್ನೂ ಓದಿ: ನನ್ನ ಹಲವು ಪ್ರಶ್ನೆಗಳಿಗೆ ಸನಾತನ ಧರ್ಮದಲ್ಲಿ ಉತ್ತರ ಸಿಕ್ಕಿತು – ಕುಂಭಮೇಳದಲ್ಲಿ ಆಫ್ರಿಕಾದ ಸಾಧು

    ಪಿಂಡ ಪ್ರದಾನ ಮಾಡುತ್ತಾರೆ ಯಾಕೆ?
    ನಾಗ ಸಾಧುಗಳ ದೀಕ್ಷೆ ಪಡೆಯುತ್ತಿರುವ ಮೊದಲ ಬ್ಯಾಚ್‌ ಸದಸ್ಯರಿಗೆ ಗಂಗಾ ನದಿಯ ದಡದಲ್ಲಿ ಆಚರಣೆಯನ್ನು ನಡೆಸಲಾಗಿದೆ. ಪ್ರತಿ ಅಖಾರದಲ್ಲಿ ವಿಭಿನ್ನ ದಿನಗಳಲ್ಲಿ ದೀಕ್ಷೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ. ಶನಿವಾರ ಜುನಾ ಅಖಾರದಲ್ಲಿ ಸನ್ಯಾಸಿಗಳಿಗೆ ಕೇಶ ಮುಂಡನ ಮಾಡಲಾಗಿದೆ. ಈ ಸನ್ಯಾಸಿಗಳು ತಮ್ಮ ಪಿಂಡ ಪ್ರದಾನ ಮಾಡಬೇಕಾಗುತ್ತದೆ. ಹಿಂದೂ ಧರ್ಮದದಲ್ಲಿ ತಮ್ಮ ಮನೆಯವರು, ಕುಟುಂಬಸ್ಥರು ಅಗಲಿದಾಗ ಅವರಿಗೆ ಗೌರವ ಸಲ್ಲಿಸುವ ಪರಿಯನ್ನು ಪಿಂಡ ಪ್ರದಾನ ಎನ್ನಲಾಗುತ್ತದೆ. ಆದರೆ ನಾಗಗಳಾದವರು ಜೀವಂತವಾಗಿದ್ದರೂ, ಭೌತಿಕ ಪ್ರಪಂಚದೊಂದಿನ ಸಂಬಂಧವನ್ನು ಕಡಿತಗೊಳಿಸಬೇಕಾಗುತ್ತದೆ. ಸಂಬಂಧ ಕಡಿತಗೊಳಿಸುವ ಸಲುವಾಗಿ ತಮ್ಮ ಪಿಂಡವನ್ನೇ ಪ್ರದಾನ ಮಾಡುತ್ತಾರೆ.

    ನಾಗಾದೀಕ್ಷೆ ಪೂರ್ಣಗೊಳ್ಳುವುದು ಯಾವಾಗ?
    ಕೇಶ ಮುಂಡನ ಮತ್ತು ಪಿಂಡ ದಾನದ ನಂತರ ಮೌನಿ ಅಮಾವಾಸ್ಯೆಯ ಅಮೃತ ಸ್ನಾನ ಹಬ್ಬದ ರಾತ್ರಿ ನಾಗ ಸಾಧುವಾಗಲು ಸಂಪೂರ್ಣ ದೀಕ್ಷೆಯನ್ನು ನಡೆಸಲಾಗುತ್ತದೆ. ಎಲ್ಲಾ ಅಭ್ಯರ್ಥಿಗಳು ಧರ್ಮದ ಧ್ವಜದ ಅಡಿಯಲ್ಲಿ ವಿವಸ್ತ್ರವಾಗಿ ನಿಲ್ಲುತ್ತಾರೆ. ಆಚಾರ್ಯ ಮಹಾಮಂಡಲೇಶ್ವರರು ಅವರನ್ನು ವಿಧಿವಿಧಾನಗಳೊಂದಿಗೆ ನಾಗರಾಗಲು ದೀಕ್ಷೆ ನೀಡುತ್ತಾರೆ. ಸಭಾಪತಿ (ಸಮಾರಂಭದ ಅಧ್ಯಕ್ಷತೆ ವಹಿಸುವ ವ್ಯಕ್ತಿ) ಅವರಿಗೆ ಅಖಾರದ ನಿಯಮಗಳು ಮತ್ತು ನಿಯಮಗಳ ಬಗ್ಗೆ ತಿಳಿಸುತ್ತಾರೆ ಮತ್ತು ಪ್ರತಿಜ್ಞೆಯನ್ನು ಬೋಧಿಸುತ್ತಾರೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ಎಲ್ಲರನ್ನೂ ಅಮೃತ ಸ್ನಾನಕ್ಕೆ ಕಳುಹಿಸಲಾಗುತ್ತದೆ. ಅಮೃತ ಸ್ನಾನದ ರಾತ್ರಿಯಂದು ಇವರ ನಾಗಾದೀಕ್ಷೆ ಪೂರ್ಣಗೊಳ್ಳುತ್ತದೆ. ಇದನ್ನೂ ಓದಿ: ಕುಂಭಮೇಳದಲ್ಲಿ 7 ಅಡಿ ಎತ್ತರದ ರಷ್ಯಾದ ಬಾಬಾ – ‘ಪರಶುರಾಮನ ಅವತಾರ’ ಎಂದ ಭಕ್ತರು

    ಮೂರು ಹಂತಗಳಲ್ಲಿ ಪರಿಶೀಲನೆ:
    ಜುನಾ ಅಖಾರದಲ್ಲಿ ಸುಮಾರು 2,000 ಜನರಿಗೆ ನಾಗ ಸನ್ಯಾಸಕ್ಕೆ ದೀಕ್ಷೆ ನೀಡಿದರೆ ಶ್ರೀ ನಿರಂಜನಿ ಅಖಾರದಲ್ಲಿ ಸುಮಾರು 1,100 ಮಂದಿಯನ್ನು ನಾಗಾ ಸನ್ಯಾಸಿಗಳನ್ನಾಗಿ ಮಾಡಲಾಗುತ್ತದೆ. ಅದೇ ರೀತಿಯಾಗಿ ಶ್ರೀ ಮಹಾನಿರ್ವಾಣಿ, ಅಟಲ್, ಆನಂದ್ ಮತ್ತು ಆವಾಹನ ಅಖಾರಗಳಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಗಿದೆ.

    ಅರ್ಜಿದಾರರನ್ನು ಮೂರು ಹಂತಗಳಲ್ಲಿ ಸಂಪೂರ್ಣವಾಗಿ ಅವರ ವಿವರವನ್ನು ಪರಿಶೀಲಿಸಲಾಗುತ್ತದೆ. ಈ ಪರಿಶೀಲನಾ ಪ್ರಕ್ರಿಯೆ ಆರು ತಿಂಗಳ ಮೊದಲೇ ಆರಂಭವಾಗುತ್ತದೆ. ಅಖಾರದ ಠಾಣಾಪತಿ ಅಷ್ಟಕೋಶಲ್ ಮಹಂತ್, ಅಭ್ಯರ್ಥಿಯ ವಿವರ ಮತ್ತು ಆತನ ಚಟುವಟಿಕೆಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸುತ್ತಾರೆ. ಪರಿಶೀಲನೆ ನಡೆಸಿದ ಬಳಿಕ ವರದಿಯನ್ನು ಅಖಾರದ ಆಚಾರ್ಯ ಮಹಾಮಂಡಲೇಶ್ವರರಿಗೆ ನೀಡಲಾಗುತ್ತದೆ. ಆಚಾರ್ಯ ಮಹಾಮಂಡಲೇಶ್ವರರು ಅಖಾರದ ಪಂಚರಿಂದ ಮತ್ತೆ ಪರಿಶೀಲನೆ ನಡೆಸುತ್ತಾರೆ.

    ಅರ್ಜಿಗಳ ಪರಿಶೀಲನೆಯ ಸಮಯದಲ್ಲಿ ಜುನಾ ಅಖಾರ 53 ಮಂದಿಯನ್ನು ಮತ್ತು ನಿರಂಜನಿ ಅಖಾರ 22 ಜನರನ್ನು ಅನರ್ಹಗೊಳಿಸಿದೆ.

  • ಮಹಾ ಕುಂಭಮೇಳ ವೈಭವ – ಇಂಚಿಂಚಿಗೂ ಹದ್ದಿನ ಕಣ್ಣು, 2,700 ಎಐ ಕ್ಯಾಮೆರಾ ಕಣ್ಗಾವಲು

    ಮಹಾ ಕುಂಭಮೇಳ ವೈಭವ – ಇಂಚಿಂಚಿಗೂ ಹದ್ದಿನ ಕಣ್ಣು, 2,700 ಎಐ ಕ್ಯಾಮೆರಾ ಕಣ್ಗಾವಲು

    – 37,000 ಪೋಲಿಸರು, 14,000 ಹೋಮ್‌ಗಾರ್ಡ್ ನಿಯೋಜನೆ

    ಪ್ರಯಾಗ್‌ರಾಜ್: ಇಂದಿನಿಂದ 44 ದಿನಗಳ ಕಾಲ ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆಯುವ ಮಹಾ ಕುಂಭಮೇಳಕ್ಕೆ (Maha Kumbh Mela 2025) ವಿದ್ಯುಕ್ತ ಚಾಲನೆ ದೊರತಿದ್ದು, ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆಯಾಗಿ ಭಿಗಿ ಭದ್ರತೆ ನಿಯೋಜಿಸಲಾಗಿದೆ.

    ತಯಾರಿ ಹೇಗಿದೆ?
    10,000 ಹೆಕ್ಟೇರ್‌ಗಳ ವಿಶಾಲ ಪ್ರದೇಶದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ಮಹಾ ಕುಂಭಮೇಳದ ಯಶಸ್ಸಿಗಾಗಿ ಉತ್ತರ ಪ್ರದೇಶದ ಸರ್ಕಾರ ಈಗಾಗಲೇ 9,000 ಕೋಟಿ ರೂ. ಅನುದಾನ ನೀಡಿದೆ. ಕೋಟ್ಯಂತರ ಭಕ್ತರಿಗಾಗಿ ವಿಶಾಲವಾದ ಪ್ರದೇಶದಲ್ಲಿ 1.5 ಲಕ್ಷ ಟೆಂಟ್‌ಗಳನ್ನು ನಿರ್ಮಿಸಲಾಗಿದ್ದು, ಭಕ್ತಾಧಿಗಳ ಸಂಚಾರಕ್ಕಾಗಿ 30 ಕಿರು ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. 400 ಕಿಮೀಗೂ ಹೆಚ್ಚು ತಾತ್ಕಾಲಿಕ ರಸ್ತೆಗಳನ್ನು ರಚಿಸಲಾಗಿದೆ. 69,000 ಬೀದಿ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಭಕ್ತರಿಗೆ ರಾತ್ರಿ ವೇಳೆಯೂ ಸೂಕ್ತವಾದ ರಕ್ಷಣೆ ಇರಲಿದೆ. ಇದನ್ನೂ ಓದಿ: ಲಾಸ್‌ ಏಂಜಲೀಸ್‌ ಕಾಡ್ಗಿಚ್ಚು – ಸಾವಿನ ಸಂಖ್ಯೆ 24ಕ್ಕೆ ಏರಿಕೆ, ಟ್ರಂಪ್‌ ತೀವ್ರ ಅಸಮಾಧಾನ

    ಕುಂಭ ಮೇಳದ ಪುಣ್ಯ ಸ್ನಾನದ ವೇಳೆ ಯಾವುದೇ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನದಿಯ ಉದ್ದಕ್ಕೂ 12 ಕಿಲೋ ಮೀಟರ್ ಘಾಟ್‌ಗಳನ್ನು ನಿರ್ಮಿಸಲಾಗಿದೆ. ಈಗಾಗಲೇ 1.5 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಮಹಾ ಕುಂಭ ಮೇಳ ಹಿನ್ನೆಲೆಯಲ್ಲಿ ನಗರದ 29 ದೇವಾಲಯಗಳನ್ನು ನವೀಕರಿಸಲಾಗಿದೆ. 1,800 ಹೆಕ್ಟೇರ್ ಪ್ರದೇಶವನ್ನು ವಾಹನಗಳ ಪಾರ್ಕಿಂಗ್‌ಗಾಗಿ ಕಾಯ್ದಿರಿಸಲಾಗಿದೆ. ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ – ಲಕ್ಷಾಂತರ ನಾಗ ಸಾಧುಗಳಿಂದ ಶಾಹಿ ಸ್ನಾನ

    ಭದ್ರತೆ ಹೇಗಿದೆ? 
    ಮಹಾಕುಂಭ ಮೇಳಕ್ಕೆ ಹೈ ಸೆಕ್ಯೂರಿಟಿ ನಿಯೋಜಸಿದ್ದು, ಎಲ್ಲೆಲ್ಲೂ ಹದ್ದಿನ ಕಣ್ಣು ಇರಿಸಲಾಗಿದೆ. ಎನ್‌ಎಸ್‌ಜಿ, ಯುಪಿ ಪೊಲೀಸ್, ಯುಪಿ ಎಟಿಎಸ್ ಮತ್ತು ಪಿಎಸಿಗಳಿಂದ ಭದ್ರತೆ ಒದಗಿಸಲಾಗಿದೆ. ಗಾಳಿ, ನೆಲ ಅಥವಾ ನೀರಿನ ಮೂಲಕ ಯಾವುದೇ ದಾಳಿಗಳು ನಡೆದರೂ ಪ್ರತಿರೋಧಕ್ಕೆ ಸಿದ್ಧವಾಗಿದ್ದು, ದೇವಸ್ಥಾನ ಹಾಗೂ ನಾಗ ಸಾಧುಗಳ ಅಖಾಡಗಳಿಗೆ ಚಕ್ರವ್ಯೂಹದ ಭದ್ರತೆ ಒದಗಿಸಲಾಗಿದೆ. ಇದನ್ನೂ ಓದಿ: ಮಹಾ ಕುಂಭಮೇಳದ ವಿಕಸನ ಹೇಗಾಯ್ತು? ಅದರ ಮಹತ್ವ!

    ಏಳು ನಿರ್ಣಾಯಕ ಮಾರ್ಗಗಳಲ್ಲಿ 102 ಚೆಕ್‌ಪೋಸ್ಟ್‌ಗಳ ನಿರ್ಮಾಣ ಮಾಡಲಾಗಿದೆ. ವಿಮಾನ ನಿಲ್ದಾಣ, ರೈಲ್ವೆ, ಬಸ್ ನಿಲ್ದಾಣಗಳ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ. ಮಹಾಕುಂಭ ನಡೆಯುವ ಪ್ರದೇಶದಲ್ಲಿ ದೇವಸ್ಥಾನಗಳು, ನಾಗಸಾಧುಗಳ ಅಖಾಡಗಳಿಗೆ ಚಕ್ರವ್ಯೂಹ ಎಂದು ಕರೆಯಲ್ಪಡುವ ಬಹು-ಹಂತದ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. 37,000 ಪೋಲಿಸರನ್ನು ಹಾಗೂ 14,000 ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ – ಓರ್ವ ಆರೋಪಿ ಅರೆಸ್ಟ್‌

    ಉತ್ತರ ಪ್ರದೇಶ ಪೊಲೀಸರ ಜೊತೆಗೆ ರಾಜ್ಯ ಭಯೋತ್ಪಾದನಾ ನಿಗ್ರಹ ದಳ, ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಮತ್ತು ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ ಇಂದ ಭದ್ರತೆ ಒದಗಿಸಲಾಗಿದೆ. ಪೊಲೀಸರು ನೀರೊಳಗಿನ ಡ್ರೋನ್‌ಗಳು ಮತ್ತು ಎಐ-ಸಕ್ರಿಯಗೊಳಿಸಿದ ಕ್ಯಾಮೆರಾಗಳು ಸೇರಿದಂತೆ ಸುಧಾರಿತ ತಂತ್ರಜ್ಞಾನವನ್ನು ಸಹ ಬಳಸುತ್ತಿದ್ದಾರೆ. ಕುಂಭ ಪ್ರದೇಶದ ಸುತ್ತಲೂ ಒಟ್ಟು 2,700 ಎಐ (ಕೃತಕ ಬುದ್ಧಿಮತ್ತೆ) ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ. ಇದನ್ನೂ ಓದಿ: ಇಂದಿನಿಂದ ಮಹಾ ಕುಂಭಮೇಳ – ನಾಗಸಾಧುಗಳು, ಅಘೋರಿಗಳ ಸಮಾಗಮ, ಏನೆಲ್ಲಾ ವಿಶೇಷತೆಗಳಿವೆ?

    113 ನೀರೊಳಗಿನ ಡ್ರೋನ್‌ಗಳು ಜಲಮಾರ್ಗಗಳನ್ನು ಮೇಲ್ವಿಚಾರಣೆ ಮಾಡುತ್ತವೆ. ಈ ಡ್ರೋನ್‌ಗಳಿಗೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ತಂತ್ರಜ್ಞಾನ ಹೊಂದಿರುವ ರಿಸ್ಟ್ ಬ್ಯಾಂಡ್‌ಗಳನ್ನು ಒದಗಿಸಲಾಗಿದೆ. ಇದರ ಸಹಾಯದಿಂದ ಮೇಳದಲ್ಲಿ ಯಾರಾದರೂ ಕಳೆದು ಹೋದಲ್ಲಿ ಅವರನ್ನು ಈ ತಂತ್ರಜ್ಞಾನದ ಮೂಲಕ ಟ್ರ‍್ಯಾಕ್ ಮಾಡಲಾಗುತ್ತದೆ. ಇದನ್ನೂ ಓದಿ: 10 ರೂ.ಗಾಗಿ ನಿವೃತ್ತ IAS ಅಧಿಕಾರಿಗೆ ಬಸ್‌ ಕಂಡಕ್ಟರ್‌ನಿಂದ ಹಲ್ಲೆ

  • ಮಹಾ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ – ಲಕ್ಷಾಂತರ ನಾಗ ಸಾಧುಗಳಿಂದ ಶಾಹಿ ಸ್ನಾನ

    ಮಹಾ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ – ಲಕ್ಷಾಂತರ ನಾಗ ಸಾಧುಗಳಿಂದ ಶಾಹಿ ಸ್ನಾನ

    ಪ್ರಯಾಗ್‌ರಾಜ್: 144 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳವಾದ ಮಹಾ ಕುಂಭಮೇಳಕ್ಕೆ (Maha Kumbh Mela 2025) ಪ್ರಯಾಗ್‌ರಾಜ್‌ನಲ್ಲಿ ವಿದ್ಯುಕ್ತ ಚಾಲನೆ ದೊರೆತಿದೆ.

    ಇಂದಿನಿಂದ 44 ದಿನಗಳ ಕಾಲ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ (Prayagraj) ಮಹಾಕುಂಭ ಸಂಭ್ರಮ ನಡೆಯಲಿದೆ. ಮಹಾ ಕುಂಭಮೇಳಕ್ಕೆ ಇಂದು ಬೆಳಗ್ಗಿನಜಾವ ಮೊದಲ ಶಾಹಿ ಸ್ನಾನ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ನಾಗ ಸಾಧುಗಳು ಶಾಹಿ ಸ್ನಾನದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮಹಾ ಕುಂಭಮೇಳ – ನಾಗಸಾಧುಗಳು, ಅಘೋರಿಗಳ ಸಮಾಗಮ, ಏನೆಲ್ಲಾ ವಿಶೇಷತೆಗಳಿವೆ?

    ಫೆಬ್ರವರಿ 26ರ ಮಹಾ ಶಿವರಾತ್ರಿವರೆಗೂ ಮಹಾಕುಂಭ ಮೇಳ ನಡೆಯಲಿದೆ. 40 ಕೋಟಿಗೂ ಅಧಿಕ ಜನರು ಭಾಗಿಯಾಗುವ ನಿರೀಕ್ಷೆಯಿದೆ. ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನ ನಡೆಯಲಿದ್ದು, ಉತ್ತರ ಪ್ರದೇಶ ಸರ್ಕಾರದಿಂದ ಸಂಪೂರ್ಣ ತಯಾರಿ ನಡೆದಿದೆ. ಮಹಾಕುಂಭ ಮೇಳದಲ್ಲಿ ಆರು ಶಾಹಿ ಸ್ನಾನ ನಡೆಯಲಿದೆ. ಪುಣ್ಯಸ್ನಾನಕ್ಕೆ ಸರ್ಕಾರದಿಂದ ಸಕಲ ವ್ಯವಸ್ಥೆಯಾಗಿದೆ. ಅವಘಡಗಳು ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಿದೆ. ಇದನ್ನೂ ಓದಿ: 10 ರೂ.ಗಾಗಿ ನಿವೃತ್ತ IAS ಅಧಿಕಾರಿಗೆ ಬಸ್‌ ಕಂಡಕ್ಟರ್‌ನಿಂದ ಹಲ್ಲೆ

    ಸಂಗಮದಲ್ಲಿ ಶಾಹಿಸ್ನಾನ
    ಜನವರಿ 13-ಪೌಷ ಪೂರ್ಣಿಮಾ ಸ್ನಾನ (ಉದ್ಘಾಟನಾ ದಿನ)
    ಜನವರಿ 15 – ಮಕರ ಸಂಕ್ರಾಂತಿ ಸ್ನಾನ
    ಜನವರಿ 29 – ಮೌನಿ ಅಮಾವಾಸ್ಯೆ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ)
    ಫೆಬ್ರವರಿ 3 – ವಸಂತ ಪಂಚಮಿ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ)
    ಫೆಬ್ರವರಿ 12 – ಮಾಘಿ ಪೂರ್ಣಿಮಾ ಸ್ನಾನ
    ಫೆಬ್ರವರಿ 26 – ಮಹಾ ಶಿವರಾತ್ರಿ ಸ್ನಾನ (ಸಮಾಪ್ತಿಯ ದಿನ)

    ನದಿಯ ಉದ್ದಕ್ಕೂ 12 ಕಿಲೋ ಮೀಟರ್ ಘಾಟ್‌ಗಳ ನಿರ್ಮಾಣ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಎನ್‌ಡಿಆರ್‌ಎಫ್ ಪಡೆಯಿಂದ ನೀರನ ಮೇಲೆ ಅಂಬುಲೆನ್ಸ್ ನಿರ್ಮಾಣ ಮಾಡಲಾಗಿದೆ. ಐಸಿಯು ಸೌಲಭ್ಯ ಹೊಂದಿರುವ ಅಂಬುಲೆನ್ಸ್‌ಗಳನ್ನು ನದಿ ನೀರಿನ ಮೇಲೆ ನಿಲ್ಲಿಸಲಾಗಿದೆ. ಅಂಬುಲೆನ್ಸ್‌ಗಳಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಹಾಸಿಗೆಗಳ ಜೊತೆಗೆ ಆಮ್ಲಜನಕ ಮತ್ತು ವೆಂಟಿಲೇಟರ್‌ಗಳ ಸೌಲಭ್ಯ ಕಲ್ಪಿಸಲಾಗಿದೆ. ನದಿಯಲ್ಲಿ ಸ್ನಾನ ಮಾಡುವವರ ಸುರಕ್ಷತೆಗಾಗಿ 800 ಪ್ರಾದೇಶಿಕ ಸಶಸ್ತ್ರ ಕಾನ್ಸ್‌ಟೇಬಲ್, 150 ಎಸ್‌ಡಿಆರ್‌ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ – ಓರ್ವ ಆರೋಪಿ ಅರೆಸ್ಟ್‌

  • ಮಹಾ ಕುಂಭಮೇಳದ ಆರಂಭ ಹೇಗಾಯ್ತು? ಅದರ ಮಹತ್ವ ಏನು?

    ಮಹಾ ಕುಂಭಮೇಳದ ಆರಂಭ ಹೇಗಾಯ್ತು? ಅದರ ಮಹತ್ವ ಏನು?

    ಕುಂಭಮೇಳವು ಪ್ರತಿ ಮೂರು ವರ್ಷಗಳಿಗೊಮ್ಮೆ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ನಡೆಯುತ್ತದೆ. ಪ್ರತಿ 12 ವರ್ಷಗಳಿಗೊಮ್ಮೆ ಪ್ರಯಾಗರಾಜ್‌ನಲ್ಲಿ ಮಹಾಕುಂಭವನ್ನು ಆಯೋಜಿಸಲಾಗುತ್ತದೆ. ಆದರೆ ಈ ಬಾರಿಯ ಮಹಾಕುಂಭ ಮೇಳ ಬಹಳ ವಿಶೇಷವಾಗಿದ್ದು, 144 ವರ್ಷಗಳ ಬಳಿಕ ಈ ಕುಂಭಮೇಳ ನಡೆಯುತ್ತಿದೆ.

    ಕುಂಭಮೇಳ ಇದು ಪ್ರತಿ 3 ವರ್ಷಗಳಿಗೊಮ್ಮೆ ನಡೆಯುವ ಒಂದು ರೀತಿಯ ಜಾತ್ರೆ. ಇದನ್ನು ಕುಂಭ ಎಂದು ಕರೆಯಲಾಗುತ್ತದೆ. ಹರಿದ್ವಾರ ಮತ್ತು ಪ್ರಯಾಗ್ರಾಜ್‌ನಲ್ಲಿ ಪ್ರತಿ 6 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಅರ್ಧ ಕುಂಭ ಎಂದು ಕರೆಯಲಾಗುತ್ತದೆ. ಪ್ರಯಾಗರಾಜ್‌ಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಪೂರ್ಣ ಕುಂಭಮೇಳ ಎಂದು ಕರೆಯಲಾಗುತ್ತದೆ. 144 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಮಹಾಕುಂಭಮೇಳ ಎಂದು ಕರೆಯಲಾಗುತ್ತದೆ.

    ಈ ಬಾರಿ ಪ್ರಯಾಗರಾಜ್‌ದಲ್ಲಿ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಮಹಾಕುಂಭಮೇಳ ನಡೆಯಲಿದೆ. ಸದ್ಯ ಮಹಾಕುಂಭ ಮೇಳಕ್ಕೆ ದೇಶವೇ ಭರದಿಂದ ಸಂಭ್ರಮದಿಂದ ಸಜ್ಜಾಗುತ್ತಿದೆ. 12 ವರ್ಷಗಳ ನಂತರ ಬರುವ ಮಹಾಕುಂಭ ಮೇಳ ಇದಾಗಿದ್ದು, ನಡೆಯಲಿರುವ ಮಹಾ ಕುಂಭಮೇಳಕ್ಕೆ 40-45 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಮಹಾಕುಂಭ ಮೇಳ ಕೇವಲ ಉತ್ಸವ ಮಾತ್ರವಲ್ಲ ಸಾವಿರಾರು ವರ್ಷಗಳ ಐತಿಹ್ಯ, ಪುರಾತನ ಇತಿಹಾಸ ಹೊಂದಿರುವ ಉತ್ಸಾಹಭರಿತ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ಈ ಉತ್ಸವವು ಪ್ರಾಚೀನ ಹಿಂದೂ ಪುರಾಣ ಮತ್ತು ಭಾರತದ ಶ್ರೀಮಂತ ಧಾರ್ಮಿಕ ಪರಂಪರೆಯ ಸಾಕ್ಷಿಯಾಗಿದೆ.

     

    ಧಾರ್ಮಿಕ ನಂಬಿಕೆ:
    ಪ್ರತಿ 144 ವರ್ಷಗಳಿಗೊಮ್ಮೆ ಪ್ರಯಾಗರಾಜ್‌ನಲ್ಲಿ ಮಹಾಕುಂಭವನ್ನು ಆಯೋಜಿಸಲಾಗುತ್ತದೆ. 144 ಹೇಗೆ? 12 ರಿಂದ 12 ನ್ನು ಗುಣಿಸಿದಾಗ 144 ಆಗುತ್ತದೆ. ವಾಸ್ತವವಾಗಿ, ಕುಂಭ ಕೂಡ ಹನ್ನೆರಡು. ಅದರಲ್ಲಿ ನಾಲ್ಕು ಭೂಮಿಯಲ್ಲಿವೆ, ಉಳಿದ ಎಂಟು ಸ್ವರ್ಗದಲ್ಲಿವೆ ಎನ್ನುವ ನಂಬಿಕೆಯಿದೆ. ಆದ್ದರಿಂದ ಪ್ರತಿ 144 ವರ್ಷಗಳಿಗೊಮ್ಮೆ ಮಹಾಕುಂಭವನ್ನು ಪ್ರಯಾಗರಾಜ್‌ನಲ್ಲಿ ಆಯೋಜಿಸಲಾಗುತ್ತದೆ. ಮಹಾ ಕುಂಭದ ಮಹತ್ವವನ್ನು ಇತರ ಕುಂಭಗಳಿಗಿಂತ ಹೆಚ್ಚು ಎಂದು ಪರಿಗಣಿಸಲಾಗುತ್ತದೆ.

    ಗ್ರಹಗಳ ಒಗ್ಗೂಡುವಿಕೆಯ ಮೂಲಕ ಕುಂಭಮೇಳದ ಸ್ಥಳವನ್ನು ನಿರ್ಧರಿಸಲಾಗುತ್ತದೆ. ಗುರು, ಸೂರ್ಯ ಮತ್ತು ಚಂದ್ರರ ಸ್ಥಾನವನ್ನು ಗಣನೆಗೆ ತೆಗೆದುಕೊಂಡು ಅದು ಇರುವ ರಾಶಿಚಕ್ರ ಚಿಹ್ನೆಯನ್ನು ಪರಿಶೀಲಿಸಲಾಗುತ್ತದೆ. ಗುರುವು ಸೂರ್ಯನ ಸುತ್ತ ಒಂದು ಸುತ್ತು ಬರಲು ಸುಮಾರು 12 ವರ್ಷಗಳನ್ನು ತೆಗೆದುಕೊಳ್ಳುವುದರಿಂದ, ಕುಂಭಮೇಳವನ್ನು 12 ವರ್ಷಗಳ ಅವಧಿಯಲ್ಲಿ ನಾಲ್ಕು ಬಾರಿ ಆಚರಿಸಲಾಗುತ್ತದೆ.

    ಇತಿಹಾಸ:
    ಹಿಂದೂ ಪುರಾಣಗಳ ಪ್ರಕಾರ ಕುಂಭಮೇಳದಲ್ಲಿ ದೇವರುಗಳು ಭೂಮಿಗೆ ಇಳಿದು ಭಕ್ತರನ್ನು ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ. 8ನೇ ಶತಮಾನದ ಹಿಂದೂ ತತ್ವಜ್ಞಾನಿ ಆದಿ ಶಂಕರಾಚಾರ್ಯರು ಆಧ್ಯಾತ್ಮಿಕ ನಾಯಕರು ಮತ್ತು ತಪಸ್ವಿಗಳ ನಿಯಮಿತ ಸಭೆಗಳನ್ನು ಉತ್ತೇಜಿಸಿದರು. ಇದುವೇ ಕುಂಭಮೇಳ ನಡೆಸಲು ಪ್ರೇರಣೆ ನೀಡಿತು ಎನ್ನಲಾಗಿದೆ.

    ಮಹಾಕುಂಭ ಮೇಳದ ಇತಿಹಾಸವು ಸಮುದ್ರ ಮಂಥನ ಹಿಂದೂ ಪುರಾಣವನ್ನು ಉಲ್ಲೇಖಿಸುತ್ತದೆ. ಸಮುದ್ರ ಮಂಥನದ ಸಮಯದಲ್ಲಿ ಭಗವಾನ್ ವಿಷ್ಣು ಮೋಹಿನಿಯ ವೇಷದಲ್ಲಿ ಅಮೃತದ ಪಾತ್ರೆಯನ್ನು ಹೊತ್ತೊಯ್ದಾಗ, ದೇವತೆಗಳು ಮತ್ತು ದಾನವರ ನಡುವಿನ ಹೋರಾಟದಲ್ಲಿ ಅಮೃತದ ನಾಲ್ಕು ಹನಿಯು ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಬಿದ್ದಿತು ಹೀಗೆ ಈ ನಾಲ್ಕು ಸ್ಥಳಗಳು ಪವಿತ್ರ ತೀರ್ಥಸ್ಥಳಗಳಾದವು. ಈ ತೀರ್ಥಸ್ಥಳಗಳ ಮೂಲಕ ಹರಿಯುವ ನದಿಗಳಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ.

    ಗುಪ್ತರ ಆಡಳಿತ ಸಮಯದಲ್ಲಿ ಪವಿತ್ರ ನದಿಗಳ ಉದ್ದಕ್ಕೂ ದೇವಾಲಯಗಳು ಮತ್ತು ಸ್ನಾನ ಘಟ್ಟಗಳನ್ನು ನಿರ್ಮಿಸಿದಾಗ ಕುಂಭಮೇಳವು ಹೆಚ್ಚಿನ ಜನಸಮೂಹವನ್ನು ಆಕರ್ಷಿಸಲು ಪ್ರಾರಂಭಿಸಿತು. 12 ನೇ ಶತಮಾನದಿಂದ ಕುಂಭಮೇಳವು ರಾಜಮನೆತನದ ಪ್ರೋತ್ಸಾಹದೊಂದಿಗೆ ಒಂದು ಕಾರ್ಯಕ್ರಮವಾಗಿ ಪರಿಣಮಿಸಿದೆ. ಮೊಘಲ್ ಚಕ್ರವರ್ತಿಗಳು, ವಿಶೇಷವಾಗಿ ಚಕ್ರವರ್ತಿ ಅಕ್ಬರ್ ಆಳ್ವಿಕೆಯಲ್ಲಿ, ಕುಂಭಮೇಳಕ್ಕೆ ಹೆಚ್ಚಿನ ಗೌರವ ನೀಡಲಾಯಿತು.

    ಸ್ವಾತಂತ್ರ್ಯಾನಂತರ ಜನವರಿ 1954 ರಲ್ಲಿ ಭಾರತೀಯ ಅಧಿಕಾರಿಗಳು ಮೊದಲ ಕುಂಭಮೇಳವನ್ನು ಆಯೋಜಿಸಿದ್ದರು. 1966 ರಲ್ಲಿ, ಐದನೇ ಪ್ರಮುಖ ಸ್ನಾನ ದಿನವಾದ ಮಾಘ ಪೂರ್ಣಿಮೆಯಂದು 7 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದರು ಎಂದು ವರದಿಯಾಗಿದೆ.

    1975 ರಿಂದ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಲಾಗಿದ್ದರೂ, 1977 ರಲ್ಲಿ 12 ಕುಂಭಮೇಳಗಳು ಪೂರ್ಣಗೊಂಡಿದ್ದವು. 2019 ರಲ್ಲಿ, ಪ್ರಯಾಗ್‌ರಾಜ್‌ನಲ್ಲಿ ನಡೆದ ಅರ್ಧ ಕುಂಭದಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಯಿತು, ಅದರಲ್ಲಿ ಶಾಹಿ ಸ್ನಾನದಲ್ಲಿ ಕಿನ್ನಾರ್ ಅಖಾಡವನ್ನು ಸೇರಿಸಲಾಯಿತು.

  • ಇಂದಿನಿಂದ ಮಹಾ ಕುಂಭಮೇಳ – ನಾಗಸಾಧುಗಳು, ಅಘೋರಿಗಳ ಸಮಾಗಮ, ಏನೆಲ್ಲಾ ವಿಶೇಷತೆಗಳಿವೆ?

    ಇಂದಿನಿಂದ ಮಹಾ ಕುಂಭಮೇಳ – ನಾಗಸಾಧುಗಳು, ಅಘೋರಿಗಳ ಸಮಾಗಮ, ಏನೆಲ್ಲಾ ವಿಶೇಷತೆಗಳಿವೆ?

    – ಸಂಪೂರ್ಣ ಪರಿಸರ ಸ್ನೇಹಿ ಕುಂಭಮೇಳ, ಒಂದು ದೇಶ-ಒಂದು ಚುನಾವಣೆ ಉಪನ್ಯಾಸ

    ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳಗಳಲ್ಲಿ ಒಂದಾದ ಮಹಾ ಕುಂಭಮೇಳ (MahaKumbh 2025) ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಇಂದಿನಿಂದ ಆರಂಭವಾಗಿದೆ. ಬರೋಬ್ಬರಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಅಧ್ಯಾತ್ಮ ವಿಸ್ಮಯವೇ ಜರುಗಲಿದೆ. ಈ ಧಾರ್ಮಿಕ ಮೇಳದಲ್ಲಿ ಕೋಟಿಗಟ್ಟಲೇ ಸಾಧು-ಸಂತರು ನಾಗಸಾಧುಗಳು, ಅಘೋರಿಗಳು, ಭಕ್ತರು (Devotees) ಆಗಮಿಸುವುದು ಇಲ್ಲಿನ ವಿಶೇಷ.

    ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳ ಈ ಬಾರಿ ಅತೀ ವಿಶೇಷವಾಗಿದೆ. ಏಕೆಂದರೆ ಪ್ರಯಾಗ್‌ ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದರೆ, ಸಮೀಪದಲ್ಲೇ ಇರುವ ಅಯೋಧ್ಯೆಯಲ್ಲಿ ಮೊದಲ ವಾರ್ಷಿಕೋತ್ಸವ ಸಂಭ್ರಮ ನಡೆಯುತ್ತಿದೆ. ಭಾರತ ಅಷ್ಟೇ ಅಲ್ಲದೇ ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಗಂಗಾ, ಯಮುನಾ, ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಇಲ್ಲಿ ಸ್ನಾನ ಮಾಡಿದ್ರೆ, ಪಾಪನಾಶ, ಮೋಕ್ಷ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ. ಈಗಾಗಲೇ ಕಳೆದ 2 ದಿನಗಳಲ್ಲಿ 85 ಲಕ್ಷ ಮಂದಿ ಸ್ನಾನ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದ ಈ ಬಾರಿ ಕುಂಭಮೇಳ ಅತ್ಯಂತ ವಿಶೇಷವಾಗಿದೆ. ಅಲ್ಲದೇ ಈ ಕುಂಭಮೇಳದಲ್ಲಿ ಏನೇನು ವಿಶೇಷತೆಗಳಿವೆ ಎಂಬುದನ್ನು ತಿಳಿಯಬೇಕಾದ್ರೆ ಮುಂದೆ ಓದಿ…

    ಇಂದಿನಿಂದ ಕುಂಭಮೇಳ ಆರಂಭ
    ಈ ಹಿಂದೆ 2013ರಲ್ಲಿ ಮಹಾ ಕುಂಭಮೇಳ ನಡೆದಿತ್ತು. ಇದೀಗ 2025ರ ಜ.13ರಿಂದ ಆರಂಭವಾಗಿದೆ. ಫೆ.26ರ ಶಿವರಾತ್ರಿ ದಿನದಂದು ಈ ಕುಂಭಮೇಳ ಸಂಪನ್ನಗೊಳ್ಳಲಿದೆ. ಜ.14ರಂದು ಮಕರ ಸಂಕ್ರಾಂತಿ, ವಸಂತ, ಪಂಚಮಿ, ಹೀಗೆ 5 ಬಾರಿ ಪುಣ್ಯಸ್ನಾನ ಪ್ರಯಾಗ್‌ರಾಜ್‌ನಲ್ಲಿರುವ ತ್ರಿವೇಣಿ ಸಂಗಮದಲ್ಲಿ ನಡೆಯಲಿದೆ.

    ಸಂಪೂರ್ಣ ಪರಿಸರ ಸ್ನೇಹಿ ಕುಂಭಮೇಳ
    ಈ ಬಾರಿಯ ಮಹಾಕುಂಭಮೇಳದಲ್ಲಿ ಒಂದೇ ಒಂದು ಪ್ಲಾಸ್ಟಿಕ್‌ ಬಳಸದೇ ಸಂಪೂರ್ಣ ಪರಿಸರ ಸ್ನೇಹಿಯಾಗಿ ಆಚರಿಸಲು ಉದ್ದೇಶಿಸಲಾಗಿದೆ. ಸ್ವಚ್ಛತೆ ಮತ್ತು ಶುದ್ಧತೆ ಕಾಪಾಡುವುದಕ್ಕಾಗಿ ಬರೋಬ್ಬರಿ 1,500 ಪೌರ ಕಾರ್ಮಿಕರು ಹಗಲಿರುಳು ದುಡಿಯುತ್ತಿದ್ದಾರೆ. ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಸರಾಗವಾಗಿ ಸಾಗಲು 50ಕ್ಕೂ ಹೆಚ್ಚು ತಾತ್ಕಾಲಿಕ ಬ್ರಿಡ್ಜ್‌ಗಳನ್ನ ನಿರ್ಮಿಸಲಾಗಿದೆ. ಅಲ್ಲದೇ 1.5 ಲಕ್ಷ ಶೌಚಾಲಯ, ಸ್ನಾನಗೃಹಗಳನ್ನು ನಿರ್ಮಿಸಲಾಗಿದೆ. ಏಕಕಾಲಕ್ಕೆ ಸಾವಿರಾರು ಜನರು ತಂಗಲು ಅನುಕೂಲವಾಗುವಂತೆ ಅಲ್ಲಲ್ಲಿ ಟೆಂಟ್‌ಗಳನ್ನ ನಿರ್ಮಿಸಿರುವುದು ವಿಶೇಷ.

    ಒಂದು ದೇಶ-ಒಂದು ಚುನಾವಣೆ ಉಪನ್ಯಾಸ
    ಕುಂಭಮೇಳ ನಡೆಯುವ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಹರಿದ್ವಾರ ಮೂಲದ ಸಂಘಟನೆಯೊಂದು ʻಒಂದು ದೇಶ ಒಂದು ಚುನಾವಣೆ’ ಸೇರಿ ಒಟ್ಟು 7 ವಿಷಯಗಳ ಬಗ್ಗೆ ಉಪನ್ಯಾಸ ಆಯೋಜಿಸಿದೆ. ಜ. 12ರಂದು ಉಪನ್ಯಾಸ ಆರಂಭಗೊಂಡಿದ್ದು, ಮೊದಲ ದಿನ ಸ್ವಾಮಿ ವಿವೇಕಾನಂದರ ಬಗ್ಗೆ ಉಪನ್ಯಾಸ ನೀಡಲಾಗಿದೆ. ʻಒಂದು ದೇಶ ಒಂದು ಚುನಾವಣೆ’ ವಿಷಯದ ಬಗ್ಗೆ ಜ.18ರಂದು ಉಪನ್ಯಾಸ ನಿಗದಿಯಾಗಿದೆ. ಮಹಾಕುಂಭಮೇಳ ನಡೆಯುವ ಸ್ಥಳದಲ್ಲಿ ಒಟ್ಟು ಏಳು ಉಪನ್ಯಾಸಗಳ ಸರಣಿ ನಡೆಯಲಿವೆ. ಜನವರಿ 18ರಂದು ಒಂದು ‘ದೇಶ ಒಂದು ಚುನಾವಣೆ- ವಿಕಸಿತ ಭಾರತದ ವೇಳೆಯಲ್ಲಿ ಆರ್ಥಿಕ, ರಾಜಕೀಯ ಸುಧಾರಣೆ’ ಎನ್ನುವ ವಿಷಯದ ಬಗ್ಗೆ ಭಾಷಣ ನಡೆಯಲಿದೆ. ಈ ವಿಷಯದ ಬಗ್ಗೆ ಮಾತನಾಡಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಆಹ್ವಾನ ನೀಡಲಾಗಿದ್ದು, ಅವರು ಕುಂಭಮೇಳ ನಡೆಯುವ ಸ್ಥಳಕ್ಕೆ ಬಂದು ಭಾಷಣ ಮಾಡಲಿದ್ದಾರೆ. ಇದರೊಂದಿಗೆ ಜಾಗತಿಕ ಭಯೋತ್ಪಾದನೆ, ಭಾರತದ ಸಮಗ್ರತೆ ಮತ್ತು ಸವಾಲುಗಳು, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ, ಸಾಮಾಜಿಕ ಮಾಧ್ಯಮದಲ್ಲಿ ಗೌಪ್ಯತೆ ಮತ್ತು ಸುರಕ್ಷತೆ ಮುಂತಾದ ವಿಷಯಗಳ ಬಗ್ಗೆ ಉಪನ್ಯಾಸ ಇರಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

    15 ಲಕ್ಷಕ್ಕೂ ಹೆಚ್ಚು ವಿದೇಶಿಯರು ಭಾಗಿ ನಿರೀಕ್ಷೆ
    ಮಹಾಕುಂಭ ಮೇಳದಲ್ಲಿ 15 ಲಕ್ಷಕ್ಕೂ ಹೆಚ್ಚು ವಿದೇಶಿಯರು ಭಾಗವಹಿಸುವ ನೀರಿಕ್ಷೆ ಇದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ ಭಾನುವಾರ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವಾಲಯವು ಆಯುರ್ವೇದ ಚಿಕಿತ್ಸೆ, ಯೋಗ ಮತ್ತು ಪಂಚಕರ್ಮದಂತಹ ಸೌಲಭ್ಯಗಳನ್ನು ಒದಗಿಸಲು ಟೆಂಟ್‌ಗಳನ್ನು ಸ್ಥಾಪಿಸಿದೆ.

    ಸಂಗಮ ನಗರಿ ಸೃಷ್ಟಿ
    45 ದಿನಗಳ ಕಾಲ ನಡೆಯಲಿರುವ ಕುಂಭಮೇಳದಲ್ಲಿ ಬರೋಬ್ಬರಿ 45 ಕೋಟಿ ಜನ ಬಂದು ಹೋಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರ ತಯಾರಿ ಮಾಡಿಕೊಂಡಿದೆ. ಗಂಗೆ, ಯಮುನೆ, ಸರಸ್ವತ ನದಿಗಳ ತ್ರಿವೇಣಿ ಸಂಗಮದಲ್ಲಿ ʻಸಂಗಮನಗರಿʼ ಎಂಬ ನಗರವನ್ನೇ ಸೃಷ್ಟಿಸಿದೆ.

    ಸಂಗಮದಲ್ಲಿ ಶಾಹಿಸ್ನಾನ
    ಜನವರಿ 13-ಪೌಷ ಪೂರ್ಣಿಮಾ ಸ್ನಾನ (ಉದ್ಘಾಟನಾ ದಿನ)
    ಜನವರಿ 15 – ಮಕರ ಸಂಕ್ರಾಂತಿ ಸ್ನಾನ
    ಜನವರಿ 29 – ಮೌನಿ ಅಮಾವಾಸ್ಯೆ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ)
    ಫೆಬ್ರವರಿ 3 – ವಸಂತ ಪಂಚಮಿ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ)
    ಫೆಬ್ರವರಿ 12 – ಮಾಘಿ ಪೂರ್ಣಿಮಾ ಸ್ನಾನ
    ಫೆಬ್ರವರಿ 26 – ಮಹಾ ಶಿವರಾತ್ರಿ ಸ್ನಾನ (ಸಮಾಪ್ತಿಯ ದಿನ)

    ಕುಂಭ ದಿನಾಂಕವನ್ನು ಹೇಗೆ ನಿರ್ಧರಿಸಲಾಗುತ್ತದೆ?
    ಕುಂಭಮೇಳದ ಸ್ಥಳ ಮತ್ತು ದಿನಾಂಕವನ್ನು ನಿರ್ಧರಿಸಲು, ಜ್ಯೋತಿಷಿಗಳು ಮತ್ತು ವಿವಿಧ ಅಖಾರಗಳ (ಪಂಗಡಗಳ ಗುಂಪುಗಳು) ನಾಯಕರು ಭೇಟಿಯಾಗಿ ಗುರು ಮತ್ತು ಸೂರ್ಯನ ಸ್ಥಾನಗಳನ್ನು ಪರಿಶೀಲಿಸುತ್ತಾರೆ. ಗುರು ಮತ್ತು ಸೂರ್ಯ ಇಬ್ಬರೂ ಹಿಂದೂ ಜ್ಯೋತಿಷ್ಯದಲ್ಲಿ ಪ್ರಮುಖ ಗ್ರಹಗಳಾಗಿವೆ ಮತ್ತು ಕುಂಭಮೇಳದ ಸಮಯ ಮತ್ತು ಸ್ಥಳವನ್ನು ಅವುಗಳ ಸ್ಥಾನಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

  • ಹೆಲ್ಮೆಟ್ ಹಾಕದಿದ್ರೆ ಪೆಟ್ರೋಲ್ ಇಲ್ಲ; ಸಾವು-ನೋವು ತಡೆಗೆ ಯುಪಿ ಸರ್ಕಾರ ಸಜ್ಜು

    ಹೆಲ್ಮೆಟ್ ಹಾಕದಿದ್ರೆ ಪೆಟ್ರೋಲ್ ಇಲ್ಲ; ಸಾವು-ನೋವು ತಡೆಗೆ ಯುಪಿ ಸರ್ಕಾರ ಸಜ್ಜು

    ಲಕ್ನೋ: ಹೆಲ್ಮೆಟ್ ಹಾಕದಿದ್ದರೆ ಪೆಟ್ರೋಲ್ ಇಲ್ಲ ಅಂತ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರ ಹೊಸ ರೂಲ್ಸ್ ಜಾರಿ ಮಾಡಿದೆ.

    ರಸ್ತೆ ಅಪಘಾತ ಕಡಿಮೆ ಮಾಡುವ ಮತ್ತು ದ್ವಿಚಕ್ರ ವಾಹನಗಳ ಅಪಘಾತದಿಂದ ಸಂಭವಿಸುವ ಸಾವು-ನೋವಿನ ಪ್ರಮಾಣ ಕಡಿಮೆ ಮಾಡಲು ಸಾರಿಗೆ ಇಲಾಖೆ ಈ ನೂತನ ಕ್ರಮ ಕೈಗೊಂಡಿದೆ.

    ಬೈಕ್ ಸವಾರ ಮಾತ್ರವಲ್ಲ, ಹಿಂಬದಿ ಸವಾರರೂ ಹೆಲ್ಮೆಟ್ ಧರಿಸಿರಬೇಕು. ಇಲ್ಲದಿದ್ದರೆ ಪೆಟ್ರೋಲ್ ಹಾಕಬೇಡಿ ಅಂತ ಉತ್ತರ ಪ್ರದೇಶದ ಎಲ್ಲಾ ಪೆಟ್ರೋಲ್ ಬಂಕ್‌ಗಳಿಗೆ ಸಾರಿಗೆ ಇಲಾಖೆ ಪತ್ರ ಬರೆದಿದೆ. ಅಲ್ಲದೇ, 75 ಡಿಸಿಗಳಿಗೆ ಈ ಬಗ್ಗೆ ನಿಗಾವಹಿಸುವಂತೆ ಆದೇಶಿಸಿದೆ.

    ಈ ತಿಂಗಳ ಆರಂಭದಲ್ಲಿ ರಾಜ್ಯದಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಪರಿಶೀಲನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೀಡಿದ ನಿರ್ದೇಶನಗಳನ್ನು ಇದು ಎತ್ತಿ ತೋರಿಸುತ್ತದೆ.

    ರಾಜ್ಯದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಿಂದ 25,000-26,000 ಜೀವಗಳು ಬಲಿಯಾಗುತ್ತಿವೆ ಎಂದು ಮುಖ್ಯಮಂತ್ರಿ ಗಮನಿಸಿದ್ದರು.

  • ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಮಂದಿರ ಅಲಂಕಾರಕ್ಕೆ 50 ಕ್ವಿಂಟಾಲ್‌ ಹೂವು

    ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಮಂದಿರ ಅಲಂಕಾರಕ್ಕೆ 50 ಕ್ವಿಂಟಾಲ್‌ ಹೂವು

    – ದಿನಕ್ಕೆ 2 ಬಾರಿ ಅಗ್ನಿಹೋತ್ರ ಮಂತ್ರ, 6 ಲಕ್ಷ ಶ್ರೀರಾಮ ಸ್ತೋತ್ರ ಪಠಣ

    ಲಕ್ನೋ: ಅಯೋಧ್ಯೆ ರಾಮಮಂದಿರದ (Ram Mandir) ವಾರ್ಷಿಕೋತ್ಸವ ಸಂಭ್ರಮ ಮನೆ ಮಾಡಿದೆ. ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿ 1 ವರ್ಷ ತುಂಬಿದ ಹಿನ್ನೆಲೆ ಅಯೋಧ್ಯೆಯಲ್ಲಿ 3 ದಿನಗಳ ಕಾಲ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ. ಇನ್ನೂ ಮೂರು ದಿನಗಳ ಕಾಲ ಅಯೋಧ್ಯೆಯಲ್ಲಿ (Ayodhya) ಹಬ್ಬದ ವಾತಾವರಣ ಇರಲಿದೆ.

    ಮೊದಲ ವಾರ್ಷಿಕೋತ್ಸವದ ಹಿನ್ನೆಲೆ ರಾಮಮಂದಿರ ಅಲಂಕಾರಕ್ಕೆ 50 ಕ್ವಿಂಟಾಲ್‌ ಹೂಗಳನ್ನ ಬಳಸಲಾಗಿದೆ. ಬಾಲರಾಮನ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಭದ್ರತಾ ದೃಷ್ಟಿಯಿಂದ ಎಲ್ಲೆಡೆ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಇದನ್ನೂ ಓದಿ: ಅಯೋಧ್ಯೆಯ ಶ್ರೀರಾಮನ ಮೂರ್ತಿಗೆ `ರಾಮಲಲ್ಲಾʼ ಅಂತ ಕರೆಯುವುದೇಕೆ?

    ದಿನಕ್ಕೆ 2 ಬಾರಿ ಅಗ್ನಿಹೋತ್ರ ಮಂತ್ರ ಪಠಣ:
    ಇಂದಿನಿಂದ ಮೂರು ದಿನಗಳ ಕಾಲ ಹಲವು ಕಾರ್ಯಕ್ರಮಗಳು ನಡೆಯಲಿದೆ. ಇದರ ಭಾಗವಾಗಿ ಶುಕ್ಲ ಯಜುರ್ವೇದದಿಂದ ಅಗ್ನಿಹೋತ್ರ ಮಂತ್ರಪಠಣ ಮಾಡಲಾಗುತ್ತದೆ. ಬೆಳಗ್ಗೆ 8 ರಿಂದ 11 ಹಾಗೂ ಮಧ್ಯಾಹ್ನ 2 ರಿಂದ 5 ಗಂಟೆವರೆಗೆ ಮಂತ್ರ ಪಠಣ ಮಾಡಲಾಗುತ್ತದೆ. ಇದರೊಂದಿಗೆ ಲಕ್ಷ ರಾಮ ರಕ್ಷಾ ಸ್ತೋತ್ರ ಮತ್ತು ಹನುಮಾನ್ ಚಾಲೀಸಾ ಹಾಗೂ 6 ಲಕ್ಷ ಶ್ರೀ ರಾಮ ಮಂತ್ರದ ಪಠಣ ಮಾಡಲಾಗುತ್ತದೆ. ಮಂದಿರದ ನೆಲಮಾಳಿಗೆಯಲ್ಲಿ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ 5 ಗಂಟೆವರೆಗೆ ರಾಗ ಸೇವೆ, ಸಂಜೆ 6 ಗಂಟೆಗೆ ಅಭಿನಂದನಾ ಗೀತ ಸೇವೆ ಶ್ರೀರಾಮನಿಗೆ ಅರ್ಪಣೆಯಾಗಲಿದೆ. ಮೊದಲ ಮಹಡಿಯಲ್ಲಿ ಸಂಗೀತ ಮಾನಸ ಪಠಣ ನಡೆಯಲಿದೆ.

    ಶುಭ ಯೋಗಗಳು ಹಾಗೂ ದ್ವಾದಶಿ ತಿಥಿಯು 2025ರಲ್ಲಿ ಜನವರಿ 11 ರಂದು ಬಂದಿರುವುದರಿಂದ ಅಯೋಧ್ಯೆ ರಾಮ ಮಂದಿರದ ವಾರ್ಷಿಕ ಪ್ರಾಣ ಪ್ರತಿಷ್ಠಾಪನೆಯನ್ನು ಜನವರಿ 22ರ ಬದಲಾಗಿ ಜನವರಿ 11ರಂದು ಆಚರಿಸಲಾಗುತ್ತಿದೆ. ಈಗಾಗಲೇ ಅಯೋಧ್ಯೆಯ ರಾಮ ಮಂದಿರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಒಂದೊಂದೇ ಕಾರ್ಯಕ್ರಮಗಳು ನೆರವೇರುತ್ತಿವೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಇಂದಿನಿಂದ ಮೂರು ದಿನ ಹಲವು ಕಾರ್ಯಕ್ರಮ

    ಇಂದಿನಿಂದ 3 ದಿನ ಏನೇನು ಕಾರ್ಯಕ್ರಮ?
    * ಜ.11ರ ಮೊದಲ ದಿನ ಪ್ರತಿಷ್ಠಾ ದ್ವಾದಶಿಯ ಆರಂಭಿಕ ದಿನ, ಕಳೆದ ವರ್ಷದ ‘ಪ್ರಾಣ ಪ್ರತಿಷ್ಠೆ’ ಕಾರ್ಯಕ್ರಮದಂತೆಯೇ ಕಾರ್ಯಕ್ರಮ ಆರಂಭ
    * ‘ಪಂಚಾಮೃತ’ ಮತ್ತು ಸರಯೂ ಜಲದ ಅಭಿಷೇಕವನ್ನು ಒಳಗೊಂಡಂತೆ ಅಭಿಷೇಕ ಸಮಾರಂಭ ಬೆಳಗ್ಗೆ 10 ಗಂಟೆಗೆ ಶುರು
    * ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ರಾಮಲಲ್ಲಾಗೆ ಅಭಿಷೇಕ
    * ಮಧ್ಯಾಹ್ನ 12.20ಕ್ಕೆ ಪ್ರಾಥಮಿಕ ಆರತಿ
    * ಚಿನ್ನದ ಮತ್ತು ಬೆಳ್ಳಿಯ ಎಳೆಗಳಿಂದ ದೆಹಲಿಯಲ್ಲಿ ತಯಾರಿಸಿದ ವಿಶಿಷ್ಟ ಪೀತಾಂಬರಿಯಿಂದ ರಾಮಲಲ್ಲಾ ಮೂರ್ತಿಯ ಅಲಂಕಾರ
    * ಬಳಿಕ 3 ದಿನ ಕಾಲ ಮಂಟಪ ಮತ್ತು ಯಜ್ಞಶಾಲೆಯಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಹೋಮಗಳು, ಶಾಸ್ತ್ರೀಯ ಸಾಂಸ್ಕೃತಿಕ ಪ್ರದರ್ಶನಗಳು, ವಿವಿಧ ಆಚರಣೆಗಳು ಮತ್ತು ದೈನಂದಿನ ರಾಮಕಥಾ ಪ್ರವಚನಗಳು ಏರ್ಪಾಡು
    * 110 ಗಣ್ಯರು, ಜನಸಾಮಾನ್ಯರು ಸೇರಿ 5,000 ಜನರಿಗೆ ಕಾರ್ಯಕ್ರಮ ವೀಕ್ಷಿಸಲು ಅವಕಾಶ

  • ಅಯೋಧ್ಯೆಯ ಶ್ರೀರಾಮನ ಮೂರ್ತಿಗೆ `ರಾಮಲಲ್ಲಾʼ ಅಂತ ಕರೆಯುವುದೇಕೆ?

    ಅಯೋಧ್ಯೆಯ ಶ್ರೀರಾಮನ ಮೂರ್ತಿಗೆ `ರಾಮಲಲ್ಲಾʼ ಅಂತ ಕರೆಯುವುದೇಕೆ?

    ಲಕ್ನೋ: ಶ್ರೀರಾಮ ಜನ್ಮಭೂಮಿಯಲ್ಲಿ ಬಾಲರಾಮನ ಮೂರ್ತಿ (Ram Idol) ಪ್ರತಿಷ್ಠಾಪನೆಯಾಗಿ 1 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ 3 ದಿನಗಳ ಕಾಲ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ. ಇಡೀ ನಗರವನ್ನು ಹೂವಿನಿಂದ ಅಲಂಕರಿಸಲಾಗಿದ್ದು, ಬಾಲರಾಮನ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.

    ಅಯೋಧ್ಯೆಯಲ್ಲಿ ಕನ್ನಡಿಗ ಅರುಣ್‌ ಯೋಗಿರಾಜ್‌ (Arun Yogiraj) ಅವರ ಕೆತ್ತನೆಯಲ್ಲಿ ಮೂಡಿಬಂದಿರುವ ಈ ಶಿಲ್ಪವನ್ನು ʻರಾಮಲಲ್ಲಾʼ ಅಂತಲೂ ಕರೆಯುತ್ತಾರೆ. ಅಷ್ಟಕ್ಕೂ ಆ ಹೆಸರಿನಿಂದ ಕರೆಯುವುದು ಏಕೆ ಅನ್ನೋ ಚುಟುಕು ಮಾಹಿತಿ ಇಲ್ಲಿದೆ….

    ಉತ್ತರ ಭಾರತದ ಆಡುಭಾಷೆಯಲ್ಲಿ ಎಳೆಯ ಗಂಡು ಮಕ್ಕಳನ್ನು ಮುದ್ದಾಗಿ ಲಲ್ಲಾ (Ramlalla), ಲಲ್ಲನ್ ಎಂದು ಕರೆಯುತ್ತಾರೆ. ಶ್ರೀರಾಮ ಅಯೋಧ್ಯೆಯಲ್ಲಿ (Ayodhya) ಹುಟ್ಟಿ ಬೆಳೆದವನು. ಅಯೋಧ್ಯೆಯಲ್ಲಿರುವ ಮೂರ್ತಿ ಕೂಡ ಎಳೆಯ ವಯಸ್ಸಿನ ಶ್ರೀರಾಮನದ್ದು ಎಂದು ಹೇಳಲಾಗಿದೆ. ಹೀಗಾಗಿ ಈ ಬಾಲರೂಪಿ ರಾಮನನ್ನು ಭಕ್ತರು ಪ್ರೀತಿಯಿಂದ ಕರೆಯುವ ಹೆಸರು ʻರಾಮಲಲ್ಲಾʼ.

    ಇಂದಿನಿಂದ 3 ದಿನ ಏನೇನು ಕಾರ್ಯಕ್ರಮ?
    * ಜ.11ರ ಮೊದಲ ದಿನ ಪ್ರತಿಷ್ಠಾ ದ್ವಾದಶಿಯ ಆರಂಭಿಕ ದಿನ, ಕಳೆದ ವರ್ಷದ ‘ಪ್ರಾಣ ಪ್ರತಿಷ್ಠಾ’ ಕಾರ್ಯಕ್ರಮದಂತೆಯೇ ಕಾರ್ಯಕ್ರಮ ಆರಂಭ
    * ‘ಪಂಚಾಮೃತ’ ಮತ್ತು ಸರಯೂ ಜಲದ ಅಭಿಷೇಕವನ್ನು ಒಳಗೊಂಡಂತೆ ಅಭಿಷೇಕ ಸಮಾರಂಭ ಬೆಳಗ್ಗೆ 10 ಗಂಟೆಗೆ ಶುರು
    * ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ರಾಮಲಲ್ಲಾಗೆ ಅಭಿಷೇಕ
    * ಮಧ್ಯಾಹ್ನ 12.20ಕ್ಕೆ ಪ್ರಾಥಮಿಕ ಆರತಿ
    * ಚಿನ್ನದ ಮತ್ತು ಬೆಳ್ಳಿಯ ಎಳೆಗಳಿಂದ ದೆಹಲಿಯಲ್ಲಿ ತಯಾರಿಸಿದ ವಿಶಿಷ್ಟ ಪೀತಾಂಬರಿಯಿಂದ ರಾಮಲಲ್ಲಾ ಮೂರ್ತಿಯ ಅಲಂಕಾರ
    * ಬಳಿಕ 3 ದಿನ ಕಾಲ ಮಂಟಪ ಮತ್ತು ಯಜ್ಞಶಾಲೆಯಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಹೋಮಗಳು, ಶಾಸ್ತ್ರೀಯ ಸಾಂಸ್ಕೃತಿಕ ಪ್ರದರ್ಶನಗಳು, ವಿವಿಧ ಆಚರಣೆಗಳು ಮತ್ತು ದೈನಂದಿನ ರಾಮಕಥಾ ಪ್ರವಚನಗಳು ಏರ್ಪಾಡು
    * 110 ಗಣ್ಯರು, ಜನಸಾಮಾನ್ಯರು ಸೇರಿ 5,000 ಜನರಿಗೆ ಕಾರ್ಯಕ್ರಮ ವೀಕ್ಷಿಸಲು ಅವಕಾಶ

    ವಾರ್ಷಿಕೋತ್ಸವ ಇಂದೇ ಏಕೆ?
    2024ರಲ್ಲಿ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯನ್ನು ಜನವರಿ 22ರಂದು ನಡೆಸಲಾಯಿತು. ಆದರೆ, ಈ ವರ್ಷ ಅಂದರೆ 2025ರಲ್ಲಿ ಅಯೋಧ್ಯೆ ರಾಮ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವವನ್ನು ಜನವರಿ 11 ರಂದು ಶನಿವಾರ ಆಚರಿಸಲಾಗುತ್ತಿದೆ. ಯಾಕೆಂದರೆ, ವೈದಿಕ ಸನಾತನ ಸಂಸ್ಕೃತಿಯ ಕ್ಯಾಲೆಂಡರ್‌ ಪ್ರಕಾರ, 2025ರಲ್ಲಿ ಪುಷ್ಯ ಮಾಸದ ಕೂರ್ಮ ದ್ವಾದಶಿಯು ಜನವರಿ 11 ರಂದು ಬರಲಿದೆ. ಕೂರ್ಮ ದ್ವಾದಶಿಯ ಆಧಾರದ ಮೇಲೆ ಅಯೋಧ್ಯೆ ರಾಮ ಮಂದಿರದ ಪ್ರತಿಷ್ಠಾಪನಾ ಮಹೋತ್ಸವವನ್ನು ಆಚರಿಸಲಾಗುವುದು. ಈ ವರ್ಷ ಅಂದರೆ 2025ರ ಅಯೋಧ್ಯೆ ರಾಮನ ಪ್ರಾಣ ಪ್ರತಿಷ್ಠಾಪನೆಯು ಸಂಪೂರ್ಣವಾಗಿ ಒಂದು ವರ್ಷವನ್ನು ಪೂರೈಸಲಿದೆ.

    2025ರ ಜನವರಿ 11ರಂದು ಶನಿವಾರ ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯು ಇರಲಿದೆ. ಈ ದಿನ ಅಯೋಧ್ಯೆ ರಾಮನ ಪ್ರಾಣ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವ ಆಚರಿಸಲಾಗುವುದು. ಈ ಶುಭ ದ್ವಾದಶಿ ತಿಥಿಯಂದು ಹತ್ತು ಶುಭ ಯೋಗಗಳು ಏಕಕಾಲದಲ್ಲಿ ರೂಪುಗೊಳ್ಳುತ್ತಿವೆ.

  • ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಇಂದಿನಿಂದ ಮೂರು ದಿನ ಹಲವು ಕಾರ್ಯಕ್ರಮ

    ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಇಂದಿನಿಂದ ಮೂರು ದಿನ ಹಲವು ಕಾರ್ಯಕ್ರಮ

    ಲಕ್ನೋ: ಅಯೋಧ್ಯೆಯನ್ನು ಪ್ರಭು ಶ್ರೀರಾಮನ ಜನ್ಮಸ್ಥಳವೆಂದು ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. 2024ರಲ್ಲಿ ಅಂದರೆ, ಕಳೆದ ವರ್ಷವಷ್ಟೇ ಅಯೋಧ್ಯೆಯಲ್ಲಿ ರಾಮ ದೇವಾಲಯದ (Ayodhya Ram temple) ನಿರ್ಮಾಣ ಕಾರ್ಯ ಪೂರ್ಣಗೊಂಡು ಲಕ್ಷಾಂತರ ಜನರು ಇಲ್ಲಿನ ರಾಮನ ದರ್ಶನ ಪಡೆದುಕೊಂಡಿದ್ದಾರೆ. ಅಯೋಧ್ಯೆಯಲ್ಲಿನ ರಾಮ ಮಂದಿರವು ಹಿಂದೂ ಧರ್ಮೀಯರ ಜೀವಾಳವಾಗಿದೆ. ಇದೀಗ ಅಯೋಧ್ಯೆಯ ಬಾಲ ರಾಮನ ಪ್ರತಿಷ್ಠಾಪನೆಯಾಗಿ ವರ್ಷ ತುಂಬಿದೆ. ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವದ ಸಂಭ್ರಮ ಇಂದಿನಿಂದ ಮೂರು ದಿನಗಳ ಕಾಲ ಜರುಗಲಿದೆ.

    ಶುಭ ಯೋಗಗಳು ಹಾಗೂ ದ್ವಾದಶಿ ತಿಥಿಯು 2025ರಲ್ಲಿ ಜನವರಿ 11 ರಂದು ಬಂದಿರುವುದರಿಂದ ಅಯೋಧ್ಯೆ ರಾಮ ಮಂದಿರದ ವಾರ್ಷಿಕ ಪ್ರಾಣ ಪ್ರತಿಷ್ಠಾಪನೆಯನ್ನು ಜನವರಿ 22ರ ಬದಲಾಗಿ ಜನವರಿ 11ರಂದು ಆಚರಿಸಲಾಗುತ್ತಿದೆ. ಈಗಾಗಲೇ ಅಯೋಧ್ಯೆಯ ರಾಮ ಮಂದಿರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಒಂದೊಂದೇ ಕಾರ್ಯಕ್ರಮಗಳು ನೆರವೇರುತ್ತಿವೆ. ಇದನ್ನೂ ಓದಿ: ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗಳಿಗೆ ಬಾಂಬ್ ಬೆದರಿಕೆ – ವಿದ್ಯಾರ್ಥಿ ಅರೆಸ್ಟ್

    ಇಂದಿನಿಂದ 3 ದಿನ ಏನೇನು ಕಾರ್ಯಕ್ರಮ?
    * ಜ.11ರ ಮೊದಲ ದಿನ ಪ್ರತಿಷ್ಠಾ ದ್ವಾದಶಿಯ ಆರಂಭಿಕ ದಿನ, ಕಳೆದ ವರ್ಷದ ‘ಪ್ರಾಣ ಪ್ರತಿಷ್ಠಾ’ ಕಾರ್ಯಕ್ರಮದಂತೆಯೇ ಕಾರ್ಯಕ್ರಮ ಆರಂಭ
    * ‘ಪಂಚಾಮೃತ’ ಮತ್ತು ಸರಯೂ ಜಲದ ಅಭಿಷೇಕವನ್ನು ಒಳಗೊಂಡಂತೆ ಅಭಿಷೇಕ ಸಮಾರಂಭ ಬೆಳಗ್ಗೆ 10 ಗಂಟೆಗೆ ಶುರು
    * ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ರಾಮಲಲ್ಲಾಗೆ ಅಭಿಷೇಕ
    * ಮಧ್ಯಾಹ್ನ 12.20ಕ್ಕೆ ಪ್ರಾಥಮಿಕ ಆರತಿ
    * ಚಿನ್ನದ ಮತ್ತು ಬೆಳ್ಳಿಯ ಎಳೆಗಳಿಂದ ದೆಹಲಿಯಲ್ಲಿ ತಯಾರಿಸಿದ ವಿಶಿಷ್ಟ ಪೀತಾಂಬರಿಯಿಂದ ರಾಮಲಲ್ಲಾ ಮೂರ್ತಿಯ ಅಲಂಕಾರ
    * ಬಳಿಕ 3 ದಿನ ಕಾಲ ಮಂಟಪ ಮತ್ತು ಯಜ್ಞಶಾಲೆಯಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಹೋಮಗಳು, ಶಾಸ್ತ್ರೀಯ ಸಾಂಸ್ಕೃತಿಕ ಪ್ರದರ್ಶನಗಳು, ವಿವಿಧ ಆಚರಣೆಗಳು ಮತ್ತು ದೈನಂದಿನ ರಾಮಕಥಾ ಪ್ರವಚನಗಳು ಏರ್ಪಾಡು
    * 110 ಗಣ್ಯರು, ಜನಸಾಮಾನ್ಯರು ಸೇರಿ 5,000 ಜನರಿಗೆ ಕಾರ್ಯಕ್ರಮ ವೀಕ್ಷಿಸಲು ಅವಕಾಶ

    ವಾರ್ಷಿಕೋತ್ಸವ ಇಂದೇ ಏಕೆ?
    2024ರಲ್ಲಿ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯನ್ನು ಜನವರಿ 22ರಂದು ನಡೆಸಲಾಯಿತು. ಆದರೆ, ಈ ವರ್ಷ ಅಂದರೆ 2025ರಲ್ಲಿ ಅಯೋಧ್ಯೆ ರಾಮ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವವನ್ನು ಜನವರಿ 11 ರಂದು ಶನಿವಾರ ಆಚರಿಸಲಾಗುತ್ತಿದೆ. ಯಾಕೆಂದರೆ, ವೈದಿಕ ಸನಾತನ ಸಂಸ್ಕೃತಿಯ ಕ್ಯಾಲೆಂಡರ್‌ ಪ್ರಕಾರ, 2025ರಲ್ಲಿ ಪುಷ್ಯ ಮಾಸದ ಕೂರ್ಮ ದ್ವಾದಶಿಯು ಜನವರಿ 11 ರಂದು ಬರಲಿದೆ. ಕೂರ್ಮ ದ್ವಾದಶಿಯ ಆಧಾರದ ಮೇಲೆ ಅಯೋಧ್ಯೆ ರಾಮ ಮಂದಿರದ ಪ್ರತಿಷ್ಠಾಪನಾ ಮಹೋತ್ಸವವನ್ನು ಆಚರಿಸಲಾಗುವುದು. ಈ ವರ್ಷ ಅಂದರೆ 2025ರ ಅಯೋಧ್ಯೆ ರಾಮನ ಪ್ರಾಣ ಪ್ರತಿಷ್ಠಾಪನೆಯು ಸಂಪೂರ್ಣವಾಗಿ ಒಂದು ವರ್ಷವನ್ನು ಪೂರೈಸಲಿದೆ.

    ಪ್ರಾಣ ಪ್ರತಿಷ್ಠಾಪನೆಯ ದಿನ ರೂಪುಗೊಂಡ ಶುಭ ಯೋಗಗಳು:
    2025ರ ಜನವರಿ 11ರಂದು ಶನಿವಾರ ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯು ಇರಲಿದೆ. ಈ ದಿನ ಅಯೋಧ್ಯೆ ರಾಮನ ಪ್ರಾಣ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವ ಆಚರಿಸಲಾಗುವುದು. ಈ ಶುಭ ದ್ವಾದಶಿ ತಿಥಿಯಂದು ಹತ್ತು ಶುಭ ಯೋಗಗಳು ಏಕಕಾಲದಲ್ಲಿ ರೂಪುಗೊಳ್ಳುತ್ತಿವೆ. ಇದನ್ನೂ ಓದಿ: ಕುಂಭಮೇಳದಲ್ಲಿ ಭಾಗಿಯಾಗ್ತಾರೆ ಆ್ಯಪಲ್ ಸಹ-ಸಂಸ್ಥಾಪಕ ಸ್ವೀವ್‌ ಜಾಬ್ಸ್‌ ಪತ್ನಿ

    * ಈ ದಿನದ ನಕ್ಷತ್ರ – ಮೃಗಶಿರ ನಕ್ಷತ್ರ ಈ ದಿನದ ಶುಭ ಯೋಗಗಳು
    * ಶುಕ್ಲಯೋಗ
    * ಬ್ರಹ್ಮ ಯೋಗ
    * ಬಾಲವ ಯೋಗ
    * ಕೌಲವ ಯೋಗ
    * ತೈತಿಲ ಯೋಗ
    * ರೋಹಿಣಿ ಯೋಗ
    * ಸರ್ವಾರ್ಥ ಸಿದ್ಧಿ ಯೋಗ
    * ಅಮೃತ ಸಿದ್ಧಿ ಯೋಗ
    * ಕೈಲಾಸ ಯೋಗ
    * ನಂದಿ ಯೋಗ

  • ಹಣಕ್ಕಾಗಿ ಪತ್ನಿಯ ರೇಪ್ – ಗೆಳೆಯರಿಗೆ ಚಾನ್ಸ್ ಕೊಟ್ಟ ಭೂಪ ಪತಿರಾಯ

    ಹಣಕ್ಕಾಗಿ ಪತ್ನಿಯ ರೇಪ್ – ಗೆಳೆಯರಿಗೆ ಚಾನ್ಸ್ ಕೊಟ್ಟ ಭೂಪ ಪತಿರಾಯ

    – ಸೌದಿಯಲ್ಲಿ ಕುಳಿತು ವೀಡಿಯೋ ನೋಡಿದ ಪತಿ

    ಲಕ್ನೋ: ಹಣದ ಆಸೆಗಾಗಿ ತನ್ನ ಹೆಂಡತಿಯನ್ನು ಅತ್ಯಾಚಾರ ಮಾಡಲು ಸ್ನೇಹಿತರಿಗೆ ಅನುಮತಿಸಿದ ಘಟನೆಯೊಂದು ಉತ್ತರ ಪ್ರದೇಶದ (Uttar Pradesh) ಬುಲಂದ್‌ಶಹರ್‌ನಲ್ಲಿ ನಡೆದಿದೆ.

    ಸಂತ್ರಸ್ತೆಯನ್ನು ಉತ್ತರ ಪ್ರದೇಶ ಮೂಲದ 35 ವರ್ಷದ ಮಹಿಳೆ ಗುರುತಿಸಲಾಗಿದೆ.ಇದನ್ನೂ ಓದಿ:

    2010ರಲ್ಲಿ ಬುಲಂದ್‌ಶಹರ್ ಮೂಲದ ವ್ಯಕ್ತಿಯ ಜೊತೆ ಮಹಿಳೆಯ ವಿವಾಹವಾಗಿದ್ದು, ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಮಹಿಳೆ ಗರ್ಭಿಣಿಯಾಗಿದ್ದು, ಪತಿ ಸೌದಿ ಅರೇಬಿಯಾದಲ್ಲಿ (Saudi Arabia) ಆಟೋಮೊಬೈಲ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ. ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಭಾರತಕ್ಕೆ ಬರುತ್ತಾರೆ ಎಂದು ತಿಳಿಸಿದ್ದರು.

    ತನ್ನ ಮೇಲಾದ ದೌರ್ಜನ್ಯದ ವಿರುದ್ಧ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ನನ್ನ ಪತಿಯ ಸ್ನೇಹಿತರಿಬ್ಬರು ಆತ್ಯಾಚಾರ ಎಸಗಿದ್ದಾರೆ. ಹಣದ ಆಸೆಗಾಗಿ ನನ್ನ ಪತಿ ಇಬ್ಬರು ಸ್ನೇಹಿತರಿಗೆ ಆತ್ಯಾಚಾರ ಮಾಡುವಂತೆ ಅನುಮತಿ ನೀಡಿದ್ದ. ಜೊತೆಗೆ ಆ ಇಬ್ಬರು ಕೃತ್ಯದ ವಿಡಿಯೋಗಳನ್ನು ಸಹ ರೆಕಾರ್ಡ್ ಮಾಡಿದ್ದಾರೆ. ನನ್ನ ಪತಿ ಸೌದಿ ಅರೇಬಿಯಾದಲ್ಲಿ ಕುಳಿತು ವಿಡಿಯೋಗಳನ್ನು ನೋಡುತ್ತಿದ್ದ ಎಂದು ಆರೋಪಿಸಿದ್ದಾರೆ.

    ಮೂರು ವರ್ಷಗಳ ಹಿಂದೆ ಆಕೆಯ ಪತಿ ಮನೆಗೆ ಬಂದಿದ್ದು, ಆ ಸಮಯದಲ್ಲಿಯೂ ತನ್ನ ಇಬ್ಬರು ಸ್ನೇಹಿತರಿಗೆ ಅತ್ಯಾಚಾರ ಮಾಡಲು ಅವಕಾಶ ನೀಡಿದ್ದ. ಆತ ಸೌದಿಯಲ್ಲಿದ್ದಾಗಲೂ, ಭಾರತಕ್ಕೆ ಬಂದರೂ ಕೂಡ ಅತ್ಯಾಚಾರ ಮುಂದುವರೆದಿತ್ತು. ಈ ಬಗ್ಗೆ ಕೇಳಿದಾಗ ತನಗೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದ. ಹೀಗಾಗಿ ನನ್ನ ಮಕ್ಕಳ ಸಲುವಾಗಿ ನಾನು ಮೌನವಾಗಿದ್ದೆ ಎಂದು ದೂರಿನಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾರೆ.

    ಈ ಕುರಿತು ಮಹಿಳೆಯ ಸಹೋದರ ಮಾತನಾಡಿದ್ದು, ಇತ್ತೀಚೆಗೆ ತನ್ನ ಸಹೋದರಿಯ ಪತಿ ಮನೆಗೆ ಬಂದಾಗ ಆಕೆಯ ಸಂಬಂಧದ ಬಗ್ಗೆ ತಿಳಿದುಬಂದಿದೆ ಎಂದಿದ್ದಾರೆ.

    ಸದ್ಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಮಹಿಳೆಯ ಪತಿ ಹಾಗೂ ಆತನ ಸ್ನೇಹಿತರನ್ನು ಬಂಧಿಸಬೇಕಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.ಇದನ್ನೂ ಓದಿ:

    :