Tag: uttar pradesh

  • ಹರಾಜಿನಲ್ಲಿ ಖರೀದಿಸಿದ ಯುವತಿಯನ್ನ ಮದ್ವೆಯಾದ-ಅರ್ಧ ಹಣ ಪಾವತಿಸದಕ್ಕೆ ಪತ್ನಿಯನ್ನ ಕರ್ಕೊಂಡ ಹೋಗಿದಕ್ಕೆ ಆತ್ಮಹತ್ಯೆಗೆ ಶರಣಾದ

    ಹರಾಜಿನಲ್ಲಿ ಖರೀದಿಸಿದ ಯುವತಿಯನ್ನ ಮದ್ವೆಯಾದ-ಅರ್ಧ ಹಣ ಪಾವತಿಸದಕ್ಕೆ ಪತ್ನಿಯನ್ನ ಕರ್ಕೊಂಡ ಹೋಗಿದಕ್ಕೆ ಆತ್ಮಹತ್ಯೆಗೆ ಶರಣಾದ

    ಲಕ್ನೋ: ಹೆಣ್ಣು ಮಕ್ಕಳನ್ನು ಹರಾಜಿನಲ್ಲಿ ಮಾರಾಟ ಮಾಡುವ ಪದ್ಧತಿ ಉತ್ತರ ಪ್ರದೇಶದಲ್ಲಿ ಬಾಗ್ಪಾಟ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಯುವಕನೊಬ್ಬ ಹರಾಜಿನಲ್ಲಿ ಯುವತಿಯೊಬ್ಬಳನ್ನು 22 ಸಾವಿರ ರೂ ನೀಡಿ ಖರೀದಿಸಿ ಮದುವೆಯಾಗಿದ್ದಾನೆ. ಆದರೆ ಹರಾಜಿನ ವೇಳೆ ಪೂರ್ತಿ ಹಣ ನೀಡದ ಕಾರಣ ಯುವತಿಯನ್ನು ಮತ್ತೆ ವಾಪಸ್ ಕರೆದುಕೊಂಡು ಹೋದ ವೇಳೆ ಆತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕನ ಪೋಷಕರು ಪೊಲೀಸರಿಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಘಟನೆ ನಾಲ್ಕು ದಿನಗಳ ಹಿಂದೆ ನಡೆದಿದ್ದು, ಮೃತ ಯುವಕ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ನಿರ್ವಹಸುತ್ತಿದ್ದನು. ಕಳೆದ ಕೆಲ ದಿನಗಳ ಹಿಂದೆ ಹೆಣ್ಣು ಮಕ್ಕಳ ಹರಾಜಿನಲ್ಲಿ ಭಾಗವಹಿಸಿದ್ದ ಈತ 22 ಸಾವಿರ ರೂ. ಗಳಿಗೆ ಯುವತಿಯನ್ನು ಖರೀದಿಸಿ ಮದುವೆಯಾಗಿದ್ದನು. ಆದರೆ ಯುವತಿ ಖರೀದಿಯ ವೇಳೆ 17 ಸಾವಿರ ರೂ. ಮಾತ್ರ ಪಾವತಿಸಿದ್ದ ಆತ ಮದುವೆ ನಂತರ ಉಳಿದ ಹಣ ನೀಡುವುದಾಗಿ ತಿಳಿಸಿದ್ದ. ಆದರೆ ನಿಗದಿತ ವೇಳೆಯಲ್ಲಿ ಹಣ ನೀಡದ ಕಾರಣ ಯುವತಿ ಮಾರಾಟ ಮಾಡಿದ್ದ ಮುಕೇಶ್ ಮತ್ತು ಮೊನು ಎಂಬ ವ್ಯಕ್ತಿಗಳು ಆಕೆಯನ್ನು ವಾಪಸ್ ಕರೆದುಕೊಂಡು ಹೋಗಿದ್ದಾರೆ. ಇದರಿಂದ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಪ್ರಸ್ತುತ ಘಟನೆ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಮಹಿಳೆ ಕೈಯನ್ನು ಮರಕ್ಕೆ ಕಟ್ಟಿ ಹೊಡೆದ ಗಂಡ- ಮೂಖಪ್ರೇಕ್ಷಕರಾಗಿ ನಿಂತಿದ್ದ ಜನ

    ಮಹಿಳೆ ಕೈಯನ್ನು ಮರಕ್ಕೆ ಕಟ್ಟಿ ಹೊಡೆದ ಗಂಡ- ಮೂಖಪ್ರೇಕ್ಷಕರಾಗಿ ನಿಂತಿದ್ದ ಜನ

    ಲಕ್ನೋ: ಮಹಿಳೆಯ ಕೈಯನ್ನು ಮರಕ್ಕೆ ಕಟ್ಟಿ ಆಕೆಯ ಗಂಡ ಮನಬಂದಂತೆ ಹೊಡೆಯುತ್ತಿದ್ದರೆ, ಪ್ರತಿ ಹೊಡೆತ ಅವಳ ಮೈ ಮೇಲೆ ಬಿದ್ದಾಗಲು ಅವಳು ನೋವಿನಿಂದ ಚೀರುತಿದ್ದಳು. ಅಮಾನವೀಯವಾಗಿ ಮಹಿಳೆಗೆ ಹೊಡೆಯುವುದನ್ನ ವೀಕ್ಷಿಸಲು ತುಂಬಾ ಕಷ್ಟವಾಗುತ್ತದೆ. ಆದ್ರೆ ಅಲ್ಲಿದ್ದ ನೂರಾರು ಜನ ಅದರಲ್ಲೂ ಹೆಚ್ಚಾಗಿ ಪುರುಷರು ನಗುತ್ತಾ ನೋಡುತ್ತಿದ್ದರು ಮತ್ತು ಯಾರು ಕೂಡ ಮಹಿಳೆಯ ಸಹಾಯಕ್ಕೆ ಬರಲಿಲ್ಲ.

    ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ಇದೇ ತಿಂಗಳ ಆರಂಭದಲ್ಲಿ ಈ ಘಟನೆ ನಡೆದಿದೆ. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆಗೆ ಹೊಡೆಯಲು ಆ ಗ್ರಾಮದ ಪಂಚಾಯ್ತಿಯೇ ಆದೇಶ ನೀಡಿತ್ತು ಎಂದು ವರದಿಯಾಗಿದೆ. ಈ ಗ್ರಾಮ ರಾಷ್ಟ್ರರಾಜಧಾನಿ ದೆಹಲಿಯಿಂದ  60 ಕಿಲೋಮೀಟರ್ ದೂರದಲ್ಲಿದೆ.

    ಗ್ರಾಮಸ್ಥರೊಬ್ಬರು ಈ ದೃಶ್ಯವನ್ನು ಸೆರೆಹಿಡಿದಿದ್ದು, ಕಳೆದ ವಾರದಿಂದ ವಿಡಿಯೋ ವೈರಲ್ ಆಗಿದೆ. ಈ ಕೃತ್ಯ ನಡೆದ ಸಂದರ್ಭದಲ್ಲಿ ನೂರಾರು ಜನರು ಆ ಭಾಗದಲ್ಲಿ ಸುತ್ತುವರೆದಿದ್ದರು ಮತ್ತು ಒಂದು ನಿಮಿಷಕ್ಕೂ ಹೆಚ್ಚು ಹೊತ್ತು ಆ ಮಹಿಳೆಗೆ ಹೊಡೆಯುವುದನ್ನು ನೋಡುತ್ತಾ ನಿಂತಿದ್ದರು. ಈ ಹೀನ ಕೃತ್ಯವನ್ನ ನೋಡುತ್ತಿದ್ದರೂ ಆ ಮಹಿಳೆಯ ರಕ್ಷಣೆಗೆ ಯಾರೂ ಬರಲಿಲ್ಲ.

    ಸೈಕಲ್ ಟ್ಯೂಬ್‍ನಿಂದ ಮಹಿಳೆಗೆ ಆಕೆಯ ಪತಿ ಈ ಶಿಕ್ಷೆಯನ್ನು ನೀಡುತ್ತಿದ್ದ. ಅಂತ್ಯದಲ್ಲಿ ಆ ಮಹಿಳೆ ಪ್ರಜ್ಞೆ ಕಳೆದುಕೊಳ್ಳುತ್ತಾರೆ. ಈ ಬಗ್ಗೆ ಬುಧವಾರದಂದು ದೂರು ದಾಖಲಾದ ನಂತರ ಮಹಿಳೆಯ ಗಂಡನ ಸೇರಿದಂತೆ ಮೂರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಘಟನೆ ಬಗ್ಗೆ ಗುರುವಾರದಂದು ನಮಗೆ ಮಾಹಿತಿ ತಿಳಿದುಬಂದಿದೆ. ಆ ಮಹಿಳೆಯನ್ನು ಕರೆಸಿ ಮಾತನಾಡಿ ನಂತರ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮಹಿಳೆಯ ಪತಿ ಮತ್ತು ಪಂಚಾಯ್ತಿಯ ಮುಖ್ಯಸ್ಥರು ಹಾಗು ಅವರ ಮಗನನ್ನು ಬಂಧಿಸಲಾಗಿದೆ. 20 ರಿಂದ 25 ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ರಂಜನ್ ಹೇಳಿದ್ದಾರೆ.

  • 3 ಲಕ್ಷ ರೂ. ಹಣದ ಬ್ಯಾಗ್ ಎಗರಿಸಿದ 12 ಪೋರ – ವಿಡಿಯೋ ನೋಡಿ

    3 ಲಕ್ಷ ರೂ. ಹಣದ ಬ್ಯಾಗ್ ಎಗರಿಸಿದ 12 ಪೋರ – ವಿಡಿಯೋ ನೋಡಿ

    ರಾಯ್ ಪುರ: 12 ವರ್ಷದ ಬಾಲಕನೊಬ್ಬ ಜನರ ನಡುವೆಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಿಂದ ಮೂರು ಲಕ್ಷ ರೂ. ಹಣ ಹೊಂದಿದ್ದ ಬ್ಯಾಗ್ ಕಳ್ಳತನ ನಡೆಸಿದ ಘಟನೆ ಉತ್ತರ ಪ್ರದೇಶದ ರಾಯ್ ಪುರದಲ್ಲಿ ನಡೆದಿದೆ.

    ಬಾಲಕ ತನ್ನ ಕೈ ಚಳಕ ತೋರುವ ವೇಳೆ ಪೊಲೀಸ್ ಸಿಬ್ಬಂದಿ ಸಹ ಬ್ಯಾಂಕ್ ನಲ್ಲೇ ಇದ್ದರು ಬಾಲಕ ಕಳ್ಳತನ ಕೃತ್ಯ ನಡೆಸಿದ್ದಾನೆ. ವ್ಯಾಪಾರಿಯೊಬ್ಬರು ತಮ್ಮ ಹಣಕಾಸಿನ ವ್ಯವಹಾರದ ವಿಚಾರವಾಗಿ ಬ್ಯಾಂಕ್ ಗೆ ಹಣ ತುಂಬಲು ಬಂದಿದ್ದರು. ಈ ವೇಳೆ ಹಣದ ಬ್ಯಾಗ್ ಪಕ್ಕ ಇಟ್ಟು ಫೋನ್ ಮಾತನಾಡುತ್ತಿದ್ದ ವೇಳೆ ಕೆಂಪು ಬಣ್ಣದ ಶರ್ಟ್ ಧರಿಸಿದ್ದ ಬಾಲಕ ಹಣವಿದ್ದ ಬ್ಯಾಗ್ ನೊಂದಿಗೆ ಎಸ್ಕೇಪ್ ಆಗಿದ್ದಾನೆ.

    ಬಾಲಕ ಈ ಕೃತ್ಯ ಬ್ಯಾಂಕ್ ನ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು, ದೃಶ್ಯಗಳನ್ನು ಅಧರಿಸಿ ತನಿಖೆ ಆರಂಭಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

  • ಯುಪಿಯಲ್ಲಿ ಸೈಕಲ್ ಕೇಕೆ, ಪ್ರಧಾನಿ ಮೋದಿಗೆ ಎಚ್ಚರಿಕೆ – ಮಹಾ ಮೈತ್ರಿಗೆ ಇದು ವೇದಿಕೆ!

    ಯುಪಿಯಲ್ಲಿ ಸೈಕಲ್ ಕೇಕೆ, ಪ್ರಧಾನಿ ಮೋದಿಗೆ ಎಚ್ಚರಿಕೆ – ಮಹಾ ಮೈತ್ರಿಗೆ ಇದು ವೇದಿಕೆ!

    ಮೋದಿ.. ಮೋದಿ.. ಯೋಗಿ.. ಯೋಗಿ.. ಇದು ಬಿಜೆಪಿ ಕಾರ್ಯಕರ್ತರ ಅಬ್ಬರಿಸಿ ಬೊಬ್ಬರಿದು ಘೋಷಣೆ ಕೂಗುತ್ತಿದ್ದ ಪರಿ. ಆದರೆ ಇವತ್ತು ಈ ಘೋಷಣೆ ಕೂಗು ತಗ್ಗಿ ಹೋಗಿತ್ತು. ಆನೆಯ ಸಹಾಯದಿಂದ ಸೈಕಲ್ ಸವಾರಿ ಮಾಡಿದವರಿಗೆ ಶಿಳ್ಳೆ, ಚಪ್ಪಾಳೆಯ ಸ್ವಾಗತ ಸಿಕ್ಕಿದೆ.

    ಪ್ರಧಾನಿ ಮೋದಿಯ ಆಶ್ವಮೇಧ ಕುದುರೆಯನ್ನು ಕಟ್ಟಿಹಾಕಲು ವಿಪಕ್ಷಗಳು ಒಂದಾಗಬೇಕು ಎನ್ನುವ ಕೂಗಿಗೆ ಪುಷ್ಠಿ ಸಿಕ್ಕಿದೆ. ಇದಕ್ಕೆಲ್ಲಾ ಕಾರಣ ಗಟ್ಟಿ ಕೇತ್ರಗಳಲ್ಲೇ ಬಿಜೆಪಿ ಮಕಾಡೆ ಮಲಗಿದೆ. ಉತ್ತರಪ್ರದೇಶದ ಗೋರಖ್‍ಪುರ್, ಫೂಲ್‍ಪುರ್ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ನೆಲಕೆಚ್ಚಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ನಡೆಸಿದ ಯೋಗಿ ಆರ್ಭಟ ನಿಂತಿದೆ. ಈ ಉಪಚುನಾವಣೆಗಳಲ್ಲಿನ ಸೋಲು ಮೋದಿ, ಯೋಗಿಯ ಜಬರ್ದಸ್ತ್ ಹವಾವನ್ನೇ ಪ್ರಶ್ನಿಸುವಂತಾಗಿದೆ.

    ಅಂದಿದ್ದ ಹವಾ, ಈಗ ಎಲ್ಲೋಯ್ತು ಶಿವಾ ಅನ್ನೋ ಪ್ರಶ್ನೆಗಳ ಸುರಿಮಳೆ ಜೋರಾಗಿವೆ. ಹಾಗಾದ್ರೆ ಈ ಉಪಚುನಾವಣೆ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿನಾ? ಮೋದಿಯ ನಾಗಲೋಟಕ್ಕೆ ಬ್ರೇಕ್ ಹಾಕಲು ಮಿತ್ರಪಕ್ಷಗಳನ್ನು ಕಾಂಗ್ರೆಸ್ ಗುಡ್ಡೆ ಹಾಕುತ್ತಾ ಎನ್ನುವ ಲೆಕ್ಕಚಾರಗಳು ಭರ್ಜರಿಯಾಗಿಯೇ ನಡೆದಿವೆ.

    ಈ ನಡುವೆ ಉಪಚುನಾವಣೆಯ ಫಲಿತಾಂಶದಿಂದ ಕಾಂಗ್ರೆಸ್‍ನ ಶಕ್ತಿಯೇನೂ ವೃದ್ಧಿಯಾಗಿಲ್ಲ. ಆದರೂ ಮೈತ್ರಿ ರಾಜಕಾರಣ ಗಟ್ಟಿಗೊಳಿಸಲು ಕೈಗೆ ವೇದಿಕೆ ಸಿಕ್ಕಂತಾಗಿದೆ. ಎಸ್‍ಪಿ, ಬಿಎಸ್‍ಪಿ ಕಾಂಬಿನೇಶನ್ ಫೈಟ್‍ನಿಂದಾಗಿಯೇ ಬಿಜೆಪಿ ಸೋಲಿಗೆ ಕಾರಣವಾಗಿರೋದು ಸ್ಪಷ್ಟವಾಗಿದ್ದು, ಇದೇ ಮೈತ್ರಿ ಮುಂದಿನ ಲೋಕಸಭಾ ಚುನಾವಣೆಗೆ ಮುಂದುವರಿದರೆ ಬಿಜೆಪಿಗೆ ಕಷ್ಟ ಎನ್ನುವ ಚರ್ಚೆಗಳು  ನಡೆಯಲು ಆರಂಭಿಸಿದೆ. ಅಷ್ಟೇ ಅಲ್ಲ ರಾಷ್ಟ್ರ ರಾಜಕಾರಣದ ದಿಕ್ಸೂಚಿಗೆ ಮುನ್ನುಡಿ ಬರೆದಿದ್ದು, ನಿನ್ನೆಯಷ್ಟೇ ಸೋನಿಯಾಗಾಂಧಿ 20 ಮಿತ್ರ ಪಕ್ಷಗಳ ಜತೆ ಭೋಜನ ಕೂಟ ನಡೆಸಿ ಮೈತ್ರಿ ಕಸರತ್ತು ಆರಂಭಿಸಿದ್ದಾರೆ. ಹಾಗಾಗಿಯೇ ಮೋದಿ ದುಷ್ಮನ್‍ಗಳೆಲ್ಲಾ ಒಂದಾದರೆ 2019ರ ಲೋಕಸಭಾ ಚುನಾವಣೆಯಲ್ಲಿ ಹಾದಿ ಕಠಿಣ ಎನ್ನುವ ಲೆಕ್ಕಾಚಾರಗಳು ಜೋರಾಗಿದೆ.

    ಕರ್ನಾಟಕ ಚುನಾವಣೆಯಲ್ಲೂ ಮೋದಿ, ಶಾ ಜೋಡಿ ಎಚ್ಚರಿಕೆಯ ಹೆಜ್ಜೆಯ ಇಡಬೇಕಾಗಿದ್ದು, ಕಾಂಗ್ರೆಸ್‍ನಿಂದ ಜೆಡಿಎಸ್ ಪಕ್ಷವನ್ನು ದೂರ ಇರುವಂತೆಯೇ ನೋಡಿಕೊಳ್ಳುವುದನ್ನು ಕಲಿಯಬೇಕಿದೆ. ಇಲ್ಲದಿದ್ದರೇ ಗಂಡಾಂತರ ಗ್ಯಾರಂಟಿ ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ವಿಶ್ಲೇಷಣೆ ಆರಂಭವಾಗಿದೆ.

    2014ರಿಂದ ಇಲ್ಲಿ ತನಕ ಕೆಲ ಸಣ್ಣ ಸಣ್ಣ ಸೋಲುಗಳನ್ನು ಹೊರತುಪಡಿಸಿದರೆ ಮೋದಿಗೆ ವಿಜಯದ ಮೇಲೆ ವಿಜಯ ದಕ್ಕಿದ್ದು ದೊಡ್ಡ ಸಾಧನೆಯೇ ಸರಿ. ಆದರೆ ಇದೇ ಹವಾದ ಉತ್ತರ ಪ್ರದೇಶದ ಉಪಚುನಾವಣೆಗಳ ಸೋಲಿನಿಂದ ಕಡಿಮೆಯಾಗಲು ಶುರುವಾಯ್ತಾ? ಕರ್ನಾಟಕ ಚುನಾವಣೆ ಮೋದಿ, ಶಾ ಪಾಲಿನ ಅತಿದೊಡ್ಡ ಅಗ್ನಿ ಪರೀಕ್ಷೆಯಲ್ಲವಾ? ಮೈತ್ರಿ ರಾಜಕಾರಣ ಮೋದಿಯ ಮಾಂತ್ರಿಕ ರಾಜಕಾರಣಕ್ಕೆ ಪೆಟ್ಟು ನೀಡುತ್ತಾ ಎಂಬೆಲ್ಲಾ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

  • ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುಖಭಂಗ- ಬಿಹಾರದಲ್ಲಿ ಆರ್ ಜೆಡಿಗೆ ಗೆಲುವು

    ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುಖಭಂಗ- ಬಿಹಾರದಲ್ಲಿ ಆರ್ ಜೆಡಿಗೆ ಗೆಲುವು

    ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಮೈತ್ರಿ ಮಾತುಕತೆಗೆ ಪ್ರತಿಪಕ್ಷಗಳು ಮುಂದಾಗುತ್ತಿರುವ ಬೆನ್ನಲ್ಲೇ ಉಪಚುನಾವಣೆಯಲ್ಲಿ ಸಿಹಿ ಸುದ್ದಿ ಸಿಕ್ಕಿದೆ.

    ಆಡಳಿತಾರೂಢ ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದೆ. ಫೂಲ್ಪುರ್ ಎಸ್‍ಪಿಯ ನಾಗೇಂದ್ರ ಪ್ರತಾಪ್ ಬಿಜೆಪಿಯ ಅಭ್ಯರ್ಥಿ ವಿರುದ್ಧ 59,613 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

    ಗೋರಖ್‍ಪುರ್ ದಲ್ಲಿ ಸಮಾಜವಾದಿ ಅಭ್ಯರ್ಥಿ 26,954 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. 25ನೇ ಸುತ್ತಿನ ಮತ ಎಣಿಕೆಯ ವೇಳೆ ಎಸ್‍ಪಿಯ ಪ್ರವೀಣ್ ಕುಮಾರ್ ನಿಶಾದ್ ಅವರಿಗೆ 3,77,146 ಮತಗಳು ಬಿದ್ದರೆ, ಬಿಜೆಪಿಯ ಉಪೇಂದ್ರ ದತ್ತಾ ಶುಕ್ಲಾ ಅವರಿಗೆ 3,54,192 ಮತಗಳು ಬಿದ್ದಿವೆ.

    ಫೂಲ್ಪುರ್ ದಲ್ಲಿ 28 ಸುತ್ತಿನ ಮತ ಎಣಿಕೆಯ ವೇಳೆ ಬಿಜೆಪಿಯ ಕೌಶಲೇಂದ್ರ ಸಿಂಗ್ ಪಟೇಲ್ ಅವರಿಗೆ 2,57,821 ಮತಗಳು ಬಿದ್ದಿದ್ದರೆ, ಎಸ್‍ಪಿಯ ನಾಗೇಂದ್ರ ಪ್ರತಾಪ್ ಸಿಂಗ್ ಅವರಿಗೆ 3,05,172 ಮತಗಳು ಬಿದ್ದಿತ್ತು.

    ಗೋರಖ್‍ಪುರ ಕ್ಷೇತ್ರ ಬಿಜೆಪಿಯ ಭದ್ರ ಕೋಟೆಯಾಗಿದ್ದು ಮಹಂತ್ ಅವೈದ್ಯದನಾತ್ ಅವರು ಪ್ರತಿನಿಧಿಸಿದ್ದರು. ಆ ಕ್ಷೇತ್ರದಲ್ಲಿ 1998 ರಲ್ಲಿ ಆದಿತ್ಯನಾಥ್ ಅವರು 2014ರವರೆಗೆ ನಿರಂತರ ಗೆಲುವು ಸಾಧಿಸಿಕೊಂಡು ಬಂದಿದ್ದರು. ಈ ಎರಡು ಕ್ಷೇತ್ರದಲ್ಲಿ ಬಿಎಸ್‍ಬಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಎಸ್‍ಪಿ ಅಭ್ಯರ್ಥಿಗೆ ಬೆಂಬಲ ನೀಡಿತ್ತು.

    ಆರ್ ಜೆಡಿಗೆ ಗೆಲುವು
    ಬಿಹಾರದ ಅರಾರಿಯಾ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ-ಜೆಡಿಯು ಮೈತ್ರಿ ಅಭ್ಯರ್ಥಿ ಸೋತಿದ್ದು ವಿಪಕ್ಷ ಆರ್ ಜೆಡಿ ಅಭ್ಯರ್ಥಿ ಗೆದ್ದಿದ್ದಾರೆ. 2014ರ ಚುನಾವಣೆಯಲ್ಲೂ ಆರ್ ಜೆಡಿ ಇಲ್ಲಿ ಗೆದ್ದುಕೊಂಡಿತ್ತು.

     

     

  • ಅಪಘಾತಕ್ಕೀಡಾದ ಯುವಕನ ಕಾಲು ಕತ್ತರಿಸಿ, ತಲೆದಿಂಬು ಮಾಡಿದ ವೈದ್ಯ!

    ಅಪಘಾತಕ್ಕೀಡಾದ ಯುವಕನ ಕಾಲು ಕತ್ತರಿಸಿ, ತಲೆದಿಂಬು ಮಾಡಿದ ವೈದ್ಯ!

    ಲಕ್ನೋ: ರಸ್ತೆ ಅಪಘಾತದಲ್ಲಿ ತುಂಡಾದ ಅರ್ಧ ಕಾಲನ್ನೇ ರೋಗಿಗೆ ದಿಂಬುವಿನಂತೆ ಬಳಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಝಾನ್ಸಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಉತ್ತರಪ್ರದೇಶದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರಿಂದ ಯುವಕನ ಕಾಲನ್ನೇ ಕತ್ತರಿಸಬೇಕೆಂದು ವೈದ್ಯರು ಹೇಳಿದ್ದರು. ಕಾಲು ಕತ್ತರಿಸಿದ ವೈದ್ಯರು ಗಾಯಾಳುವಿಗೆ ತಲೆಗೆ ದಿಂಬು ಸಿಗದ ಹಿನ್ನೆಲೆಯಲ್ಲಿ ಕತ್ತರಿಸಿದ ಕಾಲನ್ನೇ ಆತನ ತಲೆದಿಂಬಾಗಿ ಬಳಸಿದ್ದಾರೆ.

    ಝಾನ್ಸಿ ಜಿಲ್ಲೆಯ ಮೌರಾನಿಪುರ್ ಪ್ರದೇಶದಲ್ಲಿ ಶನಿವಾರ ಶಾಲಾ ಬಸ್ಸೊಂದು ಟ್ರ್ಯಾಕ್ಟರ್ ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿತ್ತು. ಇದರಲ್ಲಿ ಬಸ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಧ್ಯಾನ್‍ಶ್ಯಾಮ್ ಕಾಲು ಭಾಗಶಃ ತುಂಡಾಗಿದೆ. ಅಲ್ಲದೇ ಬಸ್‍ನಲ್ಲಿದ್ದ 25 ವಿದ್ಯಾರ್ಥಿಗಳು ಕೂಡ ಗಾಯಗೊಂಡಿದ್ದಾರೆ.

    ಅಪಘಾತದಲ್ಲಿ ಗಾಯಗೊಂಡ ಧ್ಯಾನ್‍ಶ್ಯಾಮ್‍ರನ್ನು ಸುಮಾರು 45 ಕಿ.ಮೀ ದೂರವಿರುವ ಝಾನ್ಸಿಯ ಸರ್ಕಾರಿ ಮಹಾರಾಣಿ ಲಕ್ಷ್ಮೀಭಾಯಿ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಧ್ಯಾನ್‍ಶ್ಯಾಮ್‍ಗೆ ಚಿಕಿತ್ಸೆ ನೀಡಿದ ವೈದ್ಯರು ಉಳಿದ ಅರ್ಧ ಕಾಲಿನ ತುಂಡನ್ನು ಆತನ ತಲೆಯ ಕೆಳಗಡೆ ದಿಂಬುವಿನಂತೆ ಇಟ್ಟಿದ್ದಾರೆ.

    ಆಸ್ಪತ್ರೆಯ ಸಿಬ್ಬಂದಿಯ ಈ ನಡತೆಗೆ ಧ್ಯಾನ್‍ಶ್ಯಾಮ್ ಸಂಬಂಧಿಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಘಟನೆ ಬಗ್ಗೆ ಅಧಿಕಾರಿಗಳು ತನಿಖೆಗೆ ಮಾಡುವಂತೆ ಆದೇಶಿದ್ದಾರೆ.

    ಧ್ಯಾನ್‍ಶ್ಯಾಮ್ ಪ್ರಕರಣದ ಬಗ್ಗೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಅಷ್ಟೇ ಅಲ್ಲದೇ ಆಸ್ಪತ್ರೆ ತುರ್ತು ವೈದ್ಯಕೀಯ ಅಧಿಕಾರಿ ಡಾ. ಮಹೇಂದ್ರ ಪಾಲ್ ಸಿಂಗ್, ಹಿರಿಯ ನಿವಾಸಿ ಡಾ. ಅಲೋಕ್ ಅಗರ್ವಾಲ್ ಮತ್ತು ದಾದಿಯರು ದೀಪಾ ನಾರಂಗ್ ಮತ್ತು ಶಶಿ ಶ್ರೀವಾಸ್ತವರನ್ನು ಅಮಾನತುಗೊಳಿಸುವಂತೆ ಆದೇಶಿಸಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಅಶುತೋಷ್ ಟಂಡನ್ ಹೇಳಿದ್ದಾರೆ.

  • ತವರು ಮನೆಯಿಂದ ಹೆಂಡ್ತಿ ಬಾರದಕ್ಕೆ ಮಗಳಿಗೆ ಬೆಂಕಿ ಹಚ್ಚಿದ ತಂದೆ!

    ತವರು ಮನೆಯಿಂದ ಹೆಂಡ್ತಿ ಬಾರದಕ್ಕೆ ಮಗಳಿಗೆ ಬೆಂಕಿ ಹಚ್ಚಿದ ತಂದೆ!

    ಲಕ್ನೌ: ಪತ್ನಿ ತವರು ಮನೆಯಿಂದ ಬರಲಿಲ್ಲ ಎಂದು ತಂದೆಯೊಬ್ಬ ತನ್ನ 9 ವರ್ಷದ ಮಗಳಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ಮೈನುಪುರಿಯಲ್ಲಿ ನಡೆದಿದೆ.

    ಸತೇಂದ್ರ ರಾಥೋಡ್ ಈ ಕೃತ್ಯವೆಸಗಿದ ಆರೋಪಿ. ತವರು ಮನೆಯಿಂದ ಪತ್ನಿ ಬಂದಿಲ್ಲ ಎಂದು ಕೋಪಗೊಂಡು ಮಗಳ ಮೈಮೇಲೆ ಸೀಮೆಎಣ್ಣೆ ಸುರಿದು ಜೀವಂತವಾಗಿ ಸುಡಲು ಯತ್ನಿಸಿದ್ದಾನೆ. ಮನೆಯ ಮುಂದೆಯೇ ಬೆಂಕಿ ಹಚ್ಚಿದ್ದು, ಬಾಲಕಿ ಕೂಗಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದಾರೆ.

    ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇನ್ನೂ ಬಾಲಕಿಯ ತಾಯಿ ತನ್ನ ತವರು ಮನೆಯಿಂದ ಹಿಂತಿರುಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗಳ ಜೊತೆ ಇದ್ದು ಆಕೆಯ ಆರೈಕೆ ಮಾಡುತ್ತಿದ್ದಾರೆ.

    ಪತ್ನಿಯ ಮೇಲಿನ ಕೋಪಕ್ಕೆ ಮಗಳಿಗೆ ಬೆಂಕಿ ಹಚ್ಚಿದ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

  • ಸರ್ಕಾರ ಕಾನೂನು ರೂಪಿಸುವವರೆಗೂ ಮಕ್ಕಳನ್ನು ಹಡೆಯುತ್ತಲೇ ಇರು ಎಂದು ಪತ್ನಿಗೆ ಹೇಳಿದ್ದೀನಿ: ಬಿಜೆಪಿ ಶಾಸಕ

    ಸರ್ಕಾರ ಕಾನೂನು ರೂಪಿಸುವವರೆಗೂ ಮಕ್ಕಳನ್ನು ಹಡೆಯುತ್ತಲೇ ಇರು ಎಂದು ಪತ್ನಿಗೆ ಹೇಳಿದ್ದೀನಿ: ಬಿಜೆಪಿ ಶಾಸಕ

    ಮುಜಾಫರ್ ನಗರ್ : ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರ ನಿರ್ದಿಷ್ಟ ಕಾನೂನು ರೂಪಿಸುವವರೆಗೂ ನೀನು ಮಕ್ಕಳನ್ನು ಹಡೆಯುವುದನ್ನು ನಿಲ್ಲಿಸಬೇಡ ಎಂದು ಪತ್ನಿಗೆ ಹೇಳಿದ್ದೇನೆ ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಬಿಜೆಪಿ ಶಾಸಕರೊಬ್ಬರು ವಿವಾದಕ್ಕೆ ಕಾರಣರಾಗಿದ್ದಾರೆ.

    ಖತೌಲಿ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ್ ಸೈನಿ ಶುಕ್ರವಾರ ಈ ಹೇಳಿಕೆಯನ್ನು ನೀಡಿದ್ದಾರೆ. ಮುಜಾಫರ್ ನಗರದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮಗೆ ಇಬ್ಬರು ಮಕ್ಕಳು ಸಾಕು ಎಂದು ನನ್ನ ಪತ್ನಿ ಹೇಳಿದ್ದಾಳೆ. ಆದರೆ ಸರ್ಕಾರ ಜನಸಂಖ್ಯಾ ನಿಯಂತ್ರಣ ಕಾನೂನು ರೂಪಿಸುವವರೆಗೂ ಮಕ್ಕಳನ್ನು ಹಡೆಯುತ್ತಾ ಇರಲು ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

    ನಾವು ಇಬ್ಬರು ಮಕ್ಕಳು ಸಾಕು ಎಂಬ ನಿಯಮವನ್ನು ಒಪ್ಪಿಕೊಂಡಿದ್ದೇವೆ. ಆದರೆ ಇತರರು ಅದನ್ನು ಒಪ್ಪಿಕೊಂಡಿಲ್ಲ. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಹಿಂದೂಗಳು ಮಕ್ಕಳಿಗೆ ಜನ್ಮ ನೀಡುವುದನ್ನು ನಿಲ್ಲಿಸಬಾರದು. ನನ್ನ ಪತ್ನಿ ನಮಗೆ ಮೂರನೇ ಮಗು ಬೇಡವೆಂದು ಹೇಳಿದ್ದಳು. ಆದರೆ ನಾನು 4 ರಿಂದ 5 ಮಕ್ಕಳನ್ನು ಪಡೆಯೋಣವೆಂದು ಹೇಳಿದ್ದೇನೆ ಎಂದು ಜನಸಂಖ್ಯಾ ನಿಯಂತ್ರಣ ವಿಷಯದ ಕುರಿತು ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

    ಶಾಸಕರು ವಿವಾದತ್ಮಾಕ ಹೇಳಿಕೆ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿದ್ದು, ಕಳೆದ ವರ್ಷ ಜನವರಿಯಲ್ಲಿ ಹಿಂದೂಸ್ತಾನ ಹಿಂದೂಗಳದ್ದು ಮಾತ್ರ, ಇತರರು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿದ್ದರು. ಅಲ್ಲದೇ ಹೊಸ ವರ್ಷದ ಆಚರಣೆ ಕ್ರೈಸ್ತ ಸಮುದಾಯದ ಹಬ್ಬ. ಇದರಿಂದ ಹಿಂದೂಗಳು ದೂರವಿರಿ ಎಂದು ಹೇಳಿದ್ದರು. ಫೆಬ್ರವರಿ 14ರ ಪ್ರೇಮಿಗಳ ದಿನವನ್ನು ಆಚರಿಸಬೇಡಿ ಎಂದು ಯುವಕರಿಗೆ ಕರೆ ನೀಡಿದ್ದರು.

     

  • ಯುಪಿ ಬಜೆಟ್ 2018: ಮದರಸಾಗಳ ಆಧುನೀಕರಣಕ್ಕೆ 404 ಕೋಟಿ ರೂ. ಅನುದಾನ

    ಯುಪಿ ಬಜೆಟ್ 2018: ಮದರಸಾಗಳ ಆಧುನೀಕರಣಕ್ಕೆ 404 ಕೋಟಿ ರೂ. ಅನುದಾನ

    -ಹಿಂದಿನ ಬಜೆಟ್‍ಗಿಂತಲೂ 282 ಕೋಟಿ ರೂ. ಹೆಚ್ಚಳ

    ಉತ್ತರಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಮದರಸಾಗಳ ಆಧುನೀಕರಣ (ಇಸ್ಲಾಮಿಕ್ ಶಾಲೆಗಳು) ಕ್ಕೆ ತಮ್ಮ ಬಜೆಟ್ ನಲ್ಲಿ ಹೆಚ್ಚಿನ ಪ್ರಮುಖ್ಯತೆ ನೀಡಿ 404 ಕೋಟಿ ರೂ. ಗಳನ್ನು ಮೀಸಲಿಟ್ಟಿದ್ದಾರೆ. ಕಳೆದ ಬಾರಿ ಬಜೆಟ್ ಅಲ್ಪಸಂಖ್ಯಾತರಿಗೆ ನೀಡಿದ ಅನುದಾನಕ್ಕಿಂತಲೂ ಶೇ.10 ರಷ್ಟು ಮೊತ್ತವನ್ನು ಹೆಚ್ಚಿಸಿದ್ದಾರೆ.

    ಈ ಬಾರಿಯ ಯುಪಿ ಸರ್ಕಾರ ಬಜೆಟ್ ನಲ್ಲಿ ಒಟ್ಟಾರೆ 2,757 ಕೋಟಿ ರೂ. ಅಲ್ಪ ಸಂಖ್ಯಾತರ ಅಭಿವೃದ್ಧಿ ಮತ್ತು ಕಲ್ಯಾಣ ಇಲಾಖೆಗೆ ನೀಡಿದೆ.

    ರಾಜ್ಯ ಸರ್ಕಾರ ಕ್ರಮ ಸ್ವಾಗತಾರ್ಹ ಕ್ರಮವಾಗಿದೆ. ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಆಧುನಿಕ ಶಿಕ್ಷಣ ಒದಗಿಸಲು ಮತ್ತು ಮೂಲಸೌಕರ್ಯವನ್ನು ನೀಡಲು ಈ ಹಣವನ್ನು ಬಳಸಿಕೊಳ್ಳಲಾಗುವುದು ಎಂದು ಲಕ್ನೋ-ಸಿಟಾಪುರ ಹೆದ್ದಾರಿಯಲ್ಲಿ ಮದರಸಾ ಮುಖ್ಯಸ್ಥ ಮೊಹದ್ ಫಾರೂಕ್ ಹೇಳಿದ್ದಾರೆ.

    ಈಗಾಗಲೇ ಸಿಎಂ ಯೋಗಿ ನೇತ್ರತ್ವದ ಸರ್ಕಾರ ಮದರಸಾಗಳಲ್ಲಿ ಎನ್‍ಸಿಇಆರ್ ಟಿ ಪಠ್ಯಕ್ರಮ ಹಾಗೂ ಉನ್ನತ ಮಾಧ್ಯಮಿಕ ಶಿಕ್ಷಣದಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಕಡ್ಡಾಯವಾಗಿ ಭೋದಿಸಲು ಆದೇಶ ನೀಡಿದೆ.

    ಮದರಸಾ ನೋಂದಣಿ ಯೋಜನೆಯಡಿ ಯುಪಿ ಸರ್ಕಾರ ಪ್ರತ್ಯೇಕ 215 ಕೋಟಿ ರೂ. ನೀಡಲು ಮುಂದಾಗಿದೆ. ಈವರೆಗೆ ರಾಜ್ಯ ಸರ್ಕಾರ ಈ ಯೋಜನೆ ಅಡಿ ಪ್ರಾಥಮಿಕವಾಗಿ 246 ಆಲಿಯಾ ಮಟ್ಟ ಶಾಲೆಗಳನ್ನು ಗುರುತಿಸಲಾಗಿದೆ.

    ಈ ಹಿಂದೆ ಅಧಿಕಾರ ವಹಿಸಿದ್ದ ಅಖಿಲೇಶ್ ಯಾದವ್ ಸರ್ಕಾರಕ್ಕೆ ಹೊಲಿಕೆ ಮಾಡಿದರೆ ಕಳೆದ ವರ್ಷ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಮೊದಲು ಅಲ್ಪಸಂಖ್ಯಾತರಿಗೆ ನೀಡಿದ ಅನುದಾನದಲ್ಲಿ ಕಡಿತಗೊಳಿಸಿತ್ತು. ಆದರೆ ಕಳೆದ ಬಾರಿ ನೀಡಿದ್ದ 2,475.61 ಕೋಟಿ ರೂ. ಮೊತ್ತವನ್ನು ಈ ಬಾರಿ 282 ಕೋಟಿ ರೂ. ಗೆ ಹೆಚ್ಚಿಸುವ ಮೂಲಕ ಒಟ್ಟಾರೆ 2,757 ಕೋಟಿ ರೂ.ಗಳನ್ನು ನೀಡಿದ್ದಾರೆ.

    ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿವಿಧ ವಿದ್ಯಾರ್ಥಿ ವೇತನ ಯೋಜನೆಗಳ ಮೂಲಕ 1,500 ಕೋಟಿ ರೂ.ಗಳನ್ನು ನೀಡಲಾಗುತ್ತದೆ. ಅಲ್ಲದೇ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಇನ್ನುಳಿದಂತೆ ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಮದುವೆಗಾಗಿ 74 ಕೋಟಿ. ರೂಗಳನ್ನು ನೀಡಲಾಗಿದೆ.

    ಉತ್ತರ ಪ್ರದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.20 ರಷ್ಟು ಅಲ್ಪಸಂಖ್ಯಾತರಿದ್ದಾರೆ. ಈ ಬಜೆಟ್ ನಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ನೀಡಿರುವ 800 ಕೋಟಿ ರೂ. ಮೀಸಲಿಟಿದ್ದು ಉತ್ತಮ ಕ್ರಮ. ಆದರೆ ರಾಜ್ಯಸರ್ಕಾರ ಐಟಿಐ, ಐಐಟಿ, ವೈದ್ಯಕೀಯ ಮತ್ತು ಮ್ಯಾನೇಜ್‍ಮೆಂಟ್ ಸಂಸ್ಥೆಗಳಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಿದರೆ ಹೆಚ್ಚು ಸಂತೋಷ ನೀಡುತ್ತಿತ್ತು ಎಂದು ಯುವ ಉದ್ಯಮಿ ಫೌಜನ್ ಆಲ್ವಿ ಹೇಳಿದ್ದಾರೆ.