Tag: uttar pradesh

  • ನಾಯಿ ಮರಿಯನ್ನು ರಕ್ಷಿಸಲು 6 ಗಂಟೆಯಲ್ಲಿ ಡ್ರೋಣ್ ಸಿದ್ಧಪಡಿಸಿದ ಟೆಕ್ಕಿ! ವಿಡಿಯೋ ನೋಡಿ

    ನಾಯಿ ಮರಿಯನ್ನು ರಕ್ಷಿಸಲು 6 ಗಂಟೆಯಲ್ಲಿ ಡ್ರೋಣ್ ಸಿದ್ಧಪಡಿಸಿದ ಟೆಕ್ಕಿ! ವಿಡಿಯೋ ನೋಡಿ

    ಲಕ್ನೋ: ಕೊಳಚೆ ನೀರು ಹರಿಯುವ ಕಾಲುವೆಯಲ್ಲಿ ನಾಯಿ ಮರಿಯೊಂದು ಬಿದ್ದು ಒದ್ದಾಡುತ್ತಿದ್ದನ್ನು ಕಂಡ ಟೆಕ್ಕಿಯೊಬ್ಬರು ಕೇವಲ 6 ಗಂಟೆಯಲ್ಲಿ ಡ್ರೋಣ್ ತಯಾರಿಸಿ ರಕ್ಷಿಸಿರುವ ಘಟನೆ ಲಕ್ನೋದಲ್ಲಿ ನಡೆದಿದೆ.

    ರಾಜ್ ಮಿಲಿಂದರ್ (27) ನಾಯಿ ಮರಿಯನ್ನು ರಕ್ಷಿಸಿದ ಟೆಕ್ಕಿ. ಬೆಳಗ್ಗೆ ವಾಕಿಂಗ್ ಮಾಡಲು ತೆರಳಿದ್ದ ರಾಜ್, ನಾಯಿ ಮರಿ ಮೋರಿಯಲ್ಲಿ ಬಿದ್ದು ಒದ್ದಾಡುವುದನ್ನು ಕಂಡು ರಕ್ಷಿಸಲು ಸ್ಥಳೀಯರ ಸಹಾಯ ಕೇಳಿದ್ದಾರೆ. ಆದರೆ ಯಾರು ಸಹಾಯ ಮಾಡಲು ನಿರಾಕರಿಸಿ ನಾಯಿ ಮರಿ ಅಲ್ಲಿಯೇ ಸಾಯಲಿ ಎಂದು ಹೇಳಿದ್ರಂತೆ. ಈ ವೇಳೆ ನಾಯಿ ಮರಿಯನ್ನು ರಕ್ಷಿಸಬೇಕು ಎಂದು ತೀರ್ಮಾನಿಸಿದ ರಾಜ್ ನೇರ ಲ್ಯಾಬ್‍ಗೆ ತೆರಳಿ ಡ್ರೋಣ್ ತಯಾರಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸುವ ರಾಜ್, ನಾಯಿ ಮರಿ ರಕ್ಷಿಸಲು ಸಹಾಯ ಕೇಳಿದ ವೇಳೆ ಎರಡು ದಿನಗಳಿಂದ ಮೋದಿಯಲ್ಲಿ ಅದು ಸಿಕ್ಕಿಕೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವಿಷಯ ತಿಳಿಯಿತು. ಅದ್ದರಿಂದ ಅದನ್ನು ರಕ್ಷಣೆ ಮಾಡಲು ನಿರ್ಧರಿಸಿ ಎಐ ಕಂಟ್ರೋಲ್ ಡ್ರೋಣ್ ತಯಾರಿಸಿದ್ದಾಗಿ ಹೇಳಿದ್ದಾರೆ.

    ಡ್ರೋಣ್ ಗೆ ರೊಬೋಟಿಕ್ ಕೈ ಜೋಡಿಸಲಾಗಿತ್ತು, ಬಳಿಕ ರಿಮೋಟ್ ಕಂಟ್ರೋಲ್ ಬಳಸಿ ಅದನ್ನು ನಿಯಂತ್ರಣ ಮಾಡಲಾಯಿತು. ಅಲ್ಲದೇ ಅದಕ್ಕೆ ಸ್ಮಾರ್ಟ್ ಸೆನ್ಸಾರ್ ಅಳವಡಿಸಲಾಗಿತ್ತು. ಇದರಿಂದ ನಾಯಿಯನ್ನು ರಕ್ಷಣೆ ಮಾಡಲು ಸಾಧ್ಯವಾಯಿತು. ಕೊಳಚೆ ಕಾಲುವೆಗೆ ಇಳಿದು ನಾಯಿ ಮರಿಯನ್ನು ರಕ್ಷಿಸುವುದು ಅಸಾಧ್ಯವಾಗಿತ್ತು. ಅದ್ದರಿಂದ ಅನಿವಾರ್ಯವಾಗಿ ಡ್ರೋಣ್ ಸಹಾಯ ಪಡೆಯಬೇಕಾಯಿತು ಎಂದು ಹೇಳಿದ್ದಾರೆ.

  • ಬಿರುಗಾಳಿ ಸಹಿತ ಮಳೆಗೆ ನಲುಗಿದ ಉತ್ತರಪ್ರದೇಶ, ರಾಜಸ್ಥಾನ : 68 ಮಂದಿ ಸಾವು

    ಬಿರುಗಾಳಿ ಸಹಿತ ಮಳೆಗೆ ನಲುಗಿದ ಉತ್ತರಪ್ರದೇಶ, ರಾಜಸ್ಥಾನ : 68 ಮಂದಿ ಸಾವು

    ನವದೆಹಲಿ: ರಾಜಸ್ಥಾನ ಹಾಗೂ ಉತ್ತರ ಪ್ರದೇಶದ ಕೆಲ ಭಾಗಗಳಲ್ಲಿ ಬುಧವಾರ ಸಂಜೆಯಿಂದ ಭಾರೀ ಪ್ರಮಾಣದ ಬಿರುಗಾಳಿ ಸಹಿತ ಮಳೆ ಆಗುತ್ತಿದ್ದು, ಕನಿಷ್ಟ 68 ಮಂದಿ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ.

    ವಾತಾವರಣದಲ್ಲಿ ಇದ್ದಕ್ಕಿದ ಹಾಗೆ ಉಂಟಾದ ಬದಲಾವಣೆ ಭಾರೀ ಪ್ರಮಾಣದ ಬಿರುಗಾಳಿ ಸಹಿತ ಮಳೆಗೆ ಕಾರಣ ಎನ್ನಲಾಗಿದ್ದು, ನೋಯ್ಡಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿದೆ.

    ಬಿರುಗಾಳಿ ಮಳೆಯ ತೀವ್ರತೆಗೆ ಹಲವು ಮರಗಳು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದೆ. ರಾಜಸ್ಥಾನದ ಪ್ರಮುಖ ಜಿಲ್ಲೆಗಳಾದ ಭರತಪುರ್, ಡೋಲ್‍ಪುರ್, ಅಲ್ವಾರ್ ನಲ್ಲಿ ಕ್ರಮವಾಗಿ 12, 10, 05 ಜನರು ಸಾವನ್ನಪ್ಪಿದ್ದಾರೆ ಎಂಬ ವರದಿಯಾಗಿದೆ. ಇನ್ನು ಆಗ್ರಾದ ಶೈಕ್ಷಣಿಕ ಕಟ್ಟಡವೊಂದು ಉರುಳಿದ್ದ ಪರಿಣಾಮ 23 ಮಂದಿ ಸಾವನ್ನಪ್ಪಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಅಲ್ಲದೇ ಅಕಾಲಿಕ ಮಳೆಗೆ ರೈತರು ಬೆಳೆದ ಸಾವಿರಾರು ಕೋಟಿ ರೂ. ಮೌಲ್ಯದ ಬೆಳೆಹಾನಿ ಸಂಭವಿಸಿದೆ.

    ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ರಕ್ಷಣಾ ಕಾರ್ಯ ತೀವ್ರಗೊಳಿಸಲು ಆದೇಶ ನೀಡಿದ್ದಾರೆ. ಇನ್ನು ರಾಜಸ್ಥಾನದಲ್ಲಿ ಉಂಟಾದ 27 ಸಾವಿನ ಘಟನೆಗಳ ವರದಿಯ ಬಳಿಕ ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಕುರಿತು ಟ್ವೀಟ್ ನಲ್ಲಿ ಪ್ರತಿಕ್ರಿಯಿಸುವ ರಾಜಸ್ಥಾನ ಸಿಎಂ ವಸುಂಧರ ರಾಜೆ, ರಕ್ಷಣಾ ಕಾರ್ಯಾಚರಣೆ ಆರಂಭಿಸಲು ಆದೇಶ ನೀಡಿರುವುದಾಗಿ ಬರೆದುಕೊಂಡಿದ್ದಾರೆ. ಉತ್ತರ ಪ್ರದೇಶ ಹಾಗೂ ರಾಜಸ್ಥಾನ ಎರಡು ಸರ್ಕಾರಗಳು ಘಟನೆಯಲ್ಲಿ ಸಾವನ್ನಪ್ಪಿದವ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರವನ್ನು ಘೋಷಣೆ ಮಾಡಿವೆ.

    ರಾಜಸ್ಥಾನ ಮಾತ್ರವಲ್ಲದೇ ಉತ್ತರ ಭಾರತದ ಹಲವೆಡೆ ಅಕಾಲಿಕ ಮಳೆಯಾಗಿದೆ. ಬಿಹಾರ, ಪಂಜಾಬ್ ನಲ್ಲೂ ಬಿರುಗಾಳಿ ಸಹಿತ ಮಾಹಿತಿ ಮಳೆಯಾಗಿದೆ. ಅಕಾಲಿಕ ಮಳೆಯ ಕಾರಣ ತೀವ್ರ ಪ್ರಮಾಣದಲ್ಲಿದ್ದ ತಾಪಮಾನ ಇಳಿಕೆಯಾಗಿದೆ.

  • ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಪೋಷಕರೇ ಕಾರಣ: ಯುಪಿ ಬಿಜೆಪಿ ಶಾಸಕ

    ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಪೋಷಕರೇ ಕಾರಣ: ಯುಪಿ ಬಿಜೆಪಿ ಶಾಸಕ

    ಲಕ್ನೋ: ಮೊಬೈಲ್ ಬಳಕೆ ಮಾಡುವ ಮಹಿಳೆಯರ ಮೇಲೆ ಅತ್ಯಾಚಾರವಾಗಿರುವ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಅಲ್ಲದೇ, ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಾಗುವುದಕ್ಕೆ ಪೋಷಕರೇ ಕಾರಣ ಎಂದು ಉತ್ತರಪ್ರದೇಶದ ಬಾಲಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    15 ವರ್ಷದ ಒಳಗಿನ ಮಕ್ಕಳನ್ನು ಕಟ್ಟುನಿಟ್ಟಾಗಿ ಬೆಳೆಸಬೇಕು. ಅಲ್ಲದೇ, ಅವರಿಗೆ ಮುಕ್ತವಾಗಿ ಸಂಚರಿಸಲು ಹಾಗೂ ಸ್ಮಾರ್ಟ್ ಫೋನ್ ಬಳಕೆಗೆ ಅವಕಾಶ ನೀಡಬಾರದು ಎಂದಿದ್ದಾರೆ.

    ಈ ಹಿಂದೆ ಉನ್ನವೋ ಅತ್ಯಾಚಾರ ಸಂತ್ರಸ್ತೆ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸಿದ್ದಾಳೆ ಎಂದು ಸುರೇಂದ್ರ ಸಿಂಗ್ ಹೇಳಿದ್ದರು.”ಈ ಹಿಂದೆ ಆಕೆ ಯುವಕನ ವಿರುದ್ಧ ಸುಳ್ಳು ಅತ್ಯಾಚಾರದ ಕೇಸ್ ದಾಖಲಿಸಿದ್ದಳು. ಈಕೆಯ ದೂರಿನ ಪರಿಣಾಮ ಆತ 6 ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸುವಂತಾಗಿತ್ತು” ಎಂದು ಹೇಳಿಕೆ ನೀಡಿದ್ದರು.

    ಕಳೆದ ಏಪ್ರಿಲ್‍ನಲ್ಲಿ ಉನ್ನಾವೋದ ಯುವತಿ ಮೇಲಿನ ಅತ್ಯಾಚಾರ ಆರೋಪದಡಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು ಬಂಧಿಸಲಾಗಿದೆ. ಸೆಂಗರ್ ಮತ್ತು ಅತ್ಯಾಚಾರ ಸಂತ್ರಸ್ತೆಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕಿದೆ. ತನಿಖೆ ನಂತರ ಸತ್ಯ ಹೊರ ಬರಲಿದೆ. ಆರೋಪ ಸಾಬೀತಾದರೆ ಶಿಕ್ಷೆ ವಿಧಿಸಬೇಕು ಎಂದರು.

    ಸೆಂಗರ್ ಮತ್ತು ಆತನ ಸಹಚರರು ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಮಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಸಂತ್ರಸ್ತೆಯ ಕುಟುಂಬಸ್ಥರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಅವರು ಆತ್ಮಹತ್ಯಗೆ ಯತ್ನಿಸಿದ್ದರು. ಕೂಡಲೇ ಯುವತಿ ಹಾಗೂ ಕುಟುಂಬದವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸರು ವಶಕ್ಕೆ ಪಡೆದಿದ್ದ ಸಂತ್ರಸ್ತೆಯ ತಂದೆ ತೀವ್ರ ಗಾಯದಿಂದಾಗಿ ಠಾಣೆಯಲ್ಲಿಯೇ ಮೃತಪಟ್ಟಿದ್ದರು.

    ತನಿಖೆಯ ಬಗ್ಗೆ ಸಾರ್ವಜನಿಕ ವಲಯದಿಂದ ಭಾರೀ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಏಪ್ರಿಲ್ 12 ರಂದು ಸಿಬಿಐಗೆ ವಹಿಸಿದೆ.

  • ಮನೆಗೆ ನುಗ್ಗಿ ಅಪ್ರಾಪ್ತ ಸಹೋದರನಿಗೆ ಥಳಿಸಿ, ಯುವತಿಯ ಮೇಲೆ ಗ್ಯಾಂಗ್‍ರೇಪ್

    ಮನೆಗೆ ನುಗ್ಗಿ ಅಪ್ರಾಪ್ತ ಸಹೋದರನಿಗೆ ಥಳಿಸಿ, ಯುವತಿಯ ಮೇಲೆ ಗ್ಯಾಂಗ್‍ರೇಪ್

    ಲಕ್ನೋ: ಅಪ್ರಾಪ್ತ ಸಹೋದರನ ಎದರುಗಡೆಯೇ ಯುವತಿಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಶಾಮ್ಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳನ್ನು ಉಮೇರ್ ಖಾನ್ ಮತ್ತು ಅಮಾನುಲ್ಲಾ ಅಂತಾ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

    ಸೋಮವಾರ ಸಂತ್ರಸ್ತೆ ಮನೆಗೆ ಆರೋಪಿಗಳಾದ ಉಮೇರ್ ಖಾನ್ ಮತ್ತು ಅಮಾನುಲ್ಲಾ ಇಬ್ಬರು ಕಾಮುಕರು ನುಗ್ಗಿದ್ದಾರೆ. ನಂತರ ಮನೆಯಲ್ಲಿದ್ದ ಅಪ್ರಾಪ್ತ ವಯಸ್ಸಿನ ಸಹೋದರಿಗೆ ಥಳಿಸಿ ಆತನ ಮುಂದೆಯೇ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ ಅತ್ಯಾಚಾರ ಎಸಗಿ ಇಬ್ಬರು ಪರಾರಿಯಾಗಿದ್ದಾರೆ.

    ಈ ಘಟನೆ ನಡೆದಾಗ ಆಕೆಯ ಪೋಷಕರು ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಬಳಿಕ ಪೋಷಕರು ಮನೆಗೆ ಬಂದಾಗ ಅವರಿಗೆ ನಡೆದ ವಿಚಾರವನ್ನು ತಿಳಿಸಿದ್ದಾರೆ. ಸಂತ್ರಸ್ತೆಯ ತಂದೆ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ದೂರು ದಾಖಲಾಗುತ್ತಿದ್ದಂತೆ ಈ ವಿಚಾರ ತಿಳಿದು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

  • 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದ 13ರ ಬಾಲಕ ಅರೆಸ್ಟ್!

    9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದ 13ರ ಬಾಲಕ ಅರೆಸ್ಟ್!

    ಲಕ್ನೋ: 13 ವರ್ಷದ ಬಾಲಕ ನೆರೆ ಮನೆಯ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಮೈನ್ಪುರ ನಗರದಲ್ಲಿ ನಡೆದಿದೆ.

    ಕಳೆದ ಎರಡು ದಿನಗಳ ಹಿಂದೆ ಬಾಲಕಿ ಒಬ್ಬಳೇ ಮನೆಯಲ್ಲಿದ್ದ ವೇಳೆ ಬಾಲಕ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಈ ಕುರಿತು ಪೋಷಕರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

    ಘಟನೆ ನಡೆದ ಎರಡು ದಿನಗಳ ಬಳಿಕ ಬಾಲಕಿಯ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ವೇಳೆ ಪೋಷಕರಿಗೆ ಘಟನೆಯ ಕುರಿತು ಮಾಹಿತಿ ನೀಡಿದ್ದಾಳೆ. ತಮ್ಮ ಮಗಳ ಮೇಲೆ ನಡೆದ ಕೃತ್ಯದ ಕುರಿತು ಮಾಹಿತಿ ಪಡೆದ ಪೋಷಕರು ತಕ್ಷಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

    ಬಾಲಕಿಯ ಪೋಷಕರು ನೀಡಿದ ದೂರಿನ ಅನ್ವಯ ಬಾಲಕನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಕಳೆದ ಕೆಲ ದಿಗಳ ಹಿಂದೆ ಉತ್ತರ ಪ್ರದೇಶದ ಸೀಧೀ ಜಿಲ್ಲೆಯಲ್ಲಿ ಮದುವೆಗೆ ತೆರಳಿದ್ದ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಅದೇ ಗ್ರಾಮದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಘಟನೆಯ ಕುರಿತು ಚಿಲಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

  • ಸಿನಿಮಾ ರೀತಿಯಲ್ಲಿ ವರನ ಪಕ್ಕ ಕೂತಿದ್ದ ವಧುಗೆ ಬೈಕಿನಿಂದ ಬಂದು ಹೂ ಮಾಲೆ ಹಾಕ್ದ!

    ಸಿನಿಮಾ ರೀತಿಯಲ್ಲಿ ವರನ ಪಕ್ಕ ಕೂತಿದ್ದ ವಧುಗೆ ಬೈಕಿನಿಂದ ಬಂದು ಹೂ ಮಾಲೆ ಹಾಕ್ದ!

    ಬಿಜ್ನಾರ್: ಬಾಲಿವುಡ್ ಸಿನಿಮಾದಲ್ಲಿ ಬರುವ ದೃಶ್ಯದ ಹಾಗೇ ಯುವಕನೊಬ್ಬ ಮದುವೆ ಮಂಟಕ್ಕೆ ಬೈಕ್ ನಲ್ಲಿ ಪ್ರವೇಶಿಸಿ ಮದುಮಗಳ ಕುತ್ತಿಗೆಗೆ ಹೂವಿನ ಹಾರ ಹಾಕಿರುವ ಘಟನೆ ಉತ್ತರ ಪ್ರದೇಶದ ಬಿಜ್ನಾರ್ ಪ್ರದೇಶದಲ್ಲಿ ನಡೆದಿದೆ.

     ಘಟನೆ ವೇಳೆ ಮದುವೆ ಮಂಟಪದಲ್ಲಿ ನೆರೆದಿದ್ದ ಎಲ್ಲರೂ ಕ್ಷಣಕಾಲ ಅಚ್ಚರಿಗೆ ಒಳಗಾಗಿದ್ದಾರೆ. ಬಳಿಕ ಹಸೆಮಣೆ ಮೇಲಿದ್ದ ಯುವತಿ ನೇರ ಯುವಕನ ಬಳಿ ಬಂದು ಹೂವಿನ ಹಾರ ಹಾಕಿದ್ದಾಳೆ. ಯುವಕನ ಈ ಸಾಹಸದ ಬಳಿಕ ನಡೆಯಬೇಕಿದ್ದ ಮದುವೆ ಮುರಿದು ಬಿದ್ದಿದೆ. ಇದರಿಂದ ಕೋಪಗೊಂಡ ವಧುವಿನ ಕಡೆಯ ಪೋಷಕರು ಯುವಕನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಅಂದಹಾಗೇ ಘಟನೆಯಲ್ಲಿ ಯುವಕ ಹಾಗೂ ವಧು ಇಬ್ಬರು ಒಂದೇ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಈ ವೇಳೆ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಬೇರೆ ಬೇರೆ ಜಾತಿಗೆ ಸೇರಿದ ಕಾರಣ ಇಬ್ಬರ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಬಳಿಕ ಯುವತಿಯ ಪೋಷಕರು ಮತ್ತೊಬ್ಬ ಯುವಕನೊಂದಿಗೆ ಮದುವೆಗೆ ಮಾಡಲು ತಯಾರಿ ನಡೆಸಿದ್ದರು. ಯುವತಿಯ ಮದುವೆಯನ್ನು ನಿಲ್ಲಿಸಲು ನಿರ್ಧರಿಸಿದ್ದ ಯುವಕ ಈ ಸಾಹಸಕ್ಕೆ ಕೈ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

  • ದೇಶದ ಮಹಿಳೆಯರ ಸುರಕ್ಷತೆ ಬಗ್ಗೆ ಮೋದಿ ಗಮನ ಹರಿಸಬೇಕು- ಐಎಂಎಫ್ ಮುಖ್ಯಸ್ಥೆ

    ದೇಶದ ಮಹಿಳೆಯರ ಸುರಕ್ಷತೆ ಬಗ್ಗೆ ಮೋದಿ ಗಮನ ಹರಿಸಬೇಕು- ಐಎಂಎಫ್ ಮುಖ್ಯಸ್ಥೆ

    ವಾಷಿಂಗ್ಟನ್: ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ 8 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಬಗ್ಗೆ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟೀನ್ ಲಗಾರ್ಡೆ ವೈಯಕ್ತಿಕವಾಗಿ ಆತಂಕ ವ್ಯಕ್ತಪಡಿಸಿದ್ದಾರೆ.

    ಜಮ್ಮು ಕಾಶ್ಮೀರದ ಕಥುವಾ ಮತ್ತು ಉತ್ತರ ಪ್ರದೇಶದ ಉನ್ನಾವೋ ದಲ್ಲಿ ನಡೆದ ಅತ್ಯಾಚಾರವನ್ನು ಖಂಡಿಸಿ ಭಾರತದಲ್ಲಿ ಉಗ್ರ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಪ್ರಮುಖರು ಮಹಿಳೆಯರ ಸುರಕ್ಷತೆ ಕುರಿತು ಹೆಚ್ಚು ಗಮನ ಕೊಡುತ್ತಾರೆ ಎಂದು ವೈಯಕ್ತಿಕವಾಗಿ ಭಾವಿಸಿದ್ದೇನೆ ಎಂದು ಹೇಳಿದ್ದಾರೆ.

    ಈ ಮಾತನ್ನು ನಾನು ಐಎಂಎಫ್ ಮುಖ್ಯಸ್ಥೆಯಾಗಿ ಹೇಳುತ್ತಿಲ್ಲ. ಇದು ನನ್ನ ವೈಯಕ್ತಿಕ ವಿಚಾರ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

    ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಸಭೆಯ ಮುನ್ನ ಭಾರತದ ಆರ್ಥಿಕ ಸುಧಾರಣೆಯ ಕುರಿತು ಪ್ರತಿಕ್ರಿಯಿಸಿದ ಅವರು ಆರ್ಥಿಕ ಸುಧಾರಣೆಯನ್ನು ಗಮನಿಸಿದ್ದೇವೆ, ಗಮನಿಸುತ್ತಿದ್ದೇವೆ. ಮುಂಬರುವ ತಿಂಗಳುಗಳಲ್ಲಿ ಹಲವು ರಾಜ್ಯಗಳ, ಲೋಕಸಭೆ ಚುನಾವಣೆಗಳು ನಡೆಯುವುದರಿಂದ ಆರ್ಥಿಕ ಸುಧಾರಣೆಯ ವೇಗ ಕಡಿಮೆಯಾಗಲಿದೆ. ದೀರ್ಘ ಕಾಲದ ಆರ್ಥಿಕ ಸುಧಾರಣೆಗೆ ಶಿಫಾರಸ್ಸು ಮಾಡಿದ ಪ್ರಮುಖ ಸುಧಾರಣ ಕ್ರಮಗಳನ್ನು ಗಮನಿಸುತ್ತಿದ್ದೇವೆ ಎಂದು ತಿಳಿಸಿದರು.

    ಚುನಾವಣಾ ವರ್ಷದಲ್ಲಿ ಆರ್ಥಿಕ ಸುಧಾರಣೆಯು ನಿರೀಕ್ಷೆಯಂತೆ ಬೆಳವಣಿಗೆಯಾಗುತ್ತದೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದ ಅವರು ಜಿಎಸ್‍ಟಿ, ಆರ್ಥಿಕ ಸುಧಾರಣೆಯ ಯಾವುದೇ ಕಾನೂನಿನ ಅನುಷ್ಠಾನ ಆಗಬಹುದು ಚುನಾವಣಾ ವರ್ಷದಲ್ಲಿ ಮಂದಗತಿಯಲ್ಲಿ ಸಾಗುತ್ತದೆ. 2018 ನೇ ಆರ್ಥಿಕ ವರ್ಷದಲ್ಲಿ ಭಾರತ 7.4% ರಷ್ಟು ಪ್ರಗತಿ ಸಾಧಿಸಲಿದೆ ಎಂದು ತಿಳಿಸಿದರು.

  • ಒಂದಕ್ಕಿಂತ ಹೆಚ್ಚು ಲಿಕ್ಕರ್ ಬಾಟಲ್ ತೆಗೆದುಕೊಂಡು ಯುಪಿ ಪ್ರವೇಶಿಸುವಂತಿಲ್ಲ-ನಿಯಮ ಮುರಿದರೆ 5 ವರ್ಷ ಜೈಲು!

    ಒಂದಕ್ಕಿಂತ ಹೆಚ್ಚು ಲಿಕ್ಕರ್ ಬಾಟಲ್ ತೆಗೆದುಕೊಂಡು ಯುಪಿ ಪ್ರವೇಶಿಸುವಂತಿಲ್ಲ-ನಿಯಮ ಮುರಿದರೆ 5 ವರ್ಷ ಜೈಲು!

    ಘಜಿಯಾಬಾದ್: ನೆರೆ ರಾಜ್ಯಗಳಿಂದ ಒಂದಕ್ಕಿಂತ ಹೆಚ್ಚು ಮದ್ಯದ ಬಾಟಲಿ ತೆಗೆದುಕೊಂಡು ಬಂದರೆ, 5 ವರ್ಷ ಜೈಲು ಹಾಗೂ 5 ಸಾವಿರ ರೂ. ದಂಡ ವಿಧಿಸುವ ಹೊಸ ನಿಯಮವನ್ನು ಉತ್ತರ ಪ್ರದೇಶದ ಸರ್ಕಾರ ಜಾರಿಗೊಳಿಸಿದೆ.

    ಈ ನಿಯಮವನ್ನು ಮುರಿದು ಒಂದಕ್ಕಿಂತ ಹೆಚ್ಚು ಬಾಟಲಿ ಮದ್ಯ ತೆಗೆದುಕೊಂಡು ಬಂದರೆ ಇದನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಯುಪಿ ನೆರೆಯ ರಾಜ್ಯದಲ್ಲಿ ಮದ್ಯದ ಬೆಲೆ ಕಡಿಮೆ ಇದರುವುರಿಂದ ಮಾರಾಟಗಾರರು ಹೆಚ್ಚು ಇತರೇ ರಾಜ್ಯಗಳಿಂದ ಮದ್ಯ ರವಾನೆ ಮಾಡಿಕೊಳ್ಳುತ್ತಿದ್ದರು. ಈ ಕ್ರಮಕ್ಕೆ ತಡೆ ನೀಡಲು ರಾಜ್ಯ ಸರ್ಕಾರ ಈ ಹೊಸ ನಿಯಮಗಳನ್ನು ರೂಪಿಸಿದೆ.

    ಈ ಕುರಿತು ಮಾಹಿತಿ ನೀಡಿರುವ ಅಬಕಾರಿ ಅಧಿಕಾರಿಯೊಬ್ಬರು 2017ರಲ್ಲೇ ಈ ಕುರಿತು ನಿಯಮ ರೂಪಿಸಲಾಗಿತ್ತು. ಒಬ್ಬ ವ್ಯಕ್ತಿಗೆ ಸೀಲ್ ಮಾಡಿದ ಒಂದು ಬಾಟಲ್ ಮದ್ಯವನ್ನು ಮಾತ್ರ ನೆರೆಯ ರಾಜ್ಯದಿಂದ ತೆಗೆದುಕೊಂಡು ಬರಲು ಅನುಮತಿ ನೀಡಲಾಗಿದೆ. ತೆರೆದ ಸಿಲ್ ಬಂದಿರುವ ಬಾಟಲ್‍ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಮಾಹಿತಿ ತಿಳಿಸಿದ್ದಾರೆ.

    ಮಾಧ್ಯಹ್ನದ ಬಳಿಕವೇ ಲಿಕ್ಕರ್ ಶಾಪ್ ಓಪನ್:
    ಮದ್ಯಪಾನ ಸೇವನೆ ಮಾಡುವವರ ಸಂಖ್ಯೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಉತ್ತರ ಪ್ರದೇಶ ಸರ್ಕಾರ ಮಧ್ಯಾಹ್ನದ ಬಳಿಕವೇ ಮದ್ಯದ ಅಂಗಡಿ ತೆರೆಯಲು ಅನುಮತಿ ನೀಡಿದ್ದು, ರಾತ್ರಿ 10 ಗಂಟೆ ವೇಳೆಗೆ ಬಂದ್ ಮಾಡಲು ಸೂಚಿಸಿದೆ.

  • ಬೋರ್ಡ್ ಎಕ್ಸಾಂನಲ್ಲಿ `ಐ ಲವ್ ಯೂ ಪೂಜಾ’ ಎಂದು ಬರೆದ ವಿದ್ಯಾರ್ಥಿ!

    ಬೋರ್ಡ್ ಎಕ್ಸಾಂನಲ್ಲಿ `ಐ ಲವ್ ಯೂ ಪೂಜಾ’ ಎಂದು ಬರೆದ ವಿದ್ಯಾರ್ಥಿ!

    ಲಕ್ನೋ: ವಿದ್ಯಾರ್ಥಿಯೊಬ್ಬ ತಾನು ಪ್ರೀತಿಯಲ್ಲಿ ಬಿದ್ದ ಕಾರಣ ಪರೀಕ್ಷೆಗೆ ಓದಲು ಸಾಧ್ಯವಾಗಿಲ್ಲ ಎಂದು ಉತ್ತರ ಪತ್ರಿಕೆಯಲ್ಲಿ ಬರೆದಿಟ್ಟು ಉತ್ತೀರ್ಣಗೊಳಿಸುವಂತೆ ಮನವಿ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆ ಮೌಲ್ಯ ಮಾಪನದ ವೇಳೆ ಬೆಳಕಿಗೆ ಬಂದಿದೆ.

    ಉತ್ತರ ಪ್ರದೇಶದ ಶಿಕ್ಷಣ ಕ್ಷೇತ್ರದಲ್ಲಿ ಕಟ್ಟುನಿಟ್ಟಿನ ಪರೀಕ್ಷೆ ನಡೆಸಲು ಸೂಚಿಸಿದ್ದ ಸಿಎಂ ಯೋಗಿ ಆದಿತ್ಯನಾಥ್ ಅದೇಶದ ಬಳಿಕ ಲಕ್ಷ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು. ಸದ್ಯ ಬೋರ್ಡ್ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಆಂಭವಾಗಿದ್ದು, ವಿದ್ಯಾರ್ಥಿಗಳು ವಿಚಿತ್ರ ಉತ್ತರಗಳನ್ನು ಬರೆದು ಪರೀಕ್ಷೆಯಲ್ಲಿ ಉತೀರ್ಣ ಮಾಡಲು ಕೇಳಿಕೊಂಡಿದ್ದಾರೆ.

    ಕೆಲ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯೊಂದಿಗೆ ಹಣವನ್ನು ಇಟ್ಟು ಉತೀರ್ಣ ಮಾಡಲು ಅಮಿಷ ಒಡ್ಡಿದ್ದಾರೆ. ಅಲ್ಲದೇ ತನಗೆ ತಾಯಿ ಇಲ್ಲ, ಈ ಬಾರಿ ಪರೀಕ್ಷೆಯಲ್ಲಿ ನಾನು ಅನುತ್ತೀರ್ಣವಾದರೆ ತಂದೆ ತನ್ನನ್ನು ಕೊಲೆ ಮಾಡುವುದಾಗಿ ಮತ್ತೊಬ್ಬ ವಿದ್ಯಾರ್ಥಿ ಬರೆದಿದ್ದಾನೆ. ರಸಾಯನಶಾಸ್ತ್ರ ಪರೀಕ್ಷೆಯಲ್ಲಿ ತನ್ನ ಪ್ರೇಮದ ಬಗ್ಗೆ ಬರೆದಿದ್ದು, ತಾನು ಪ್ರೀತಿ ಮಾಡುವ ಯುವತಿಯ ಹೆಸರು ಹಾಗೂ ಹೃದಯದ ಚಿಹ್ನೆ ಬರೆದಿಟ್ಟಿದ್ದಾನೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿಕ್ಷಕರೊಬ್ಬರು ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರ ಅನುಕಂಪ ಪಡೆಯಲು ಈ ರೀತಿ ಮಾಡಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಹಣ ಅಮಿಷ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    ಉತ್ತರ ಪ್ರದೇಶದ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗೆ ಮಾರ್ಚ್ 17 ರಿಂದ ಮಾಲ್ಯ ಮಾಪನ ಆರಂಭವಾಗಿದ್ದು, 248 ಕೇಂದ್ರಗಳಲ್ಲಿ ನಡೆಯುತ್ತಿದೆ. ಸುಮಾರು 5.5 ಕೋಟಿ ಉತ್ತರ ಪತ್ರಿಗಳನ್ನು 1.46 ಲಕ್ಷ ಶಿಕ್ಷಕರು ಮೌಲ್ಯ ಮಾಪನ ಮಾಡುತ್ತಿದ್ದಾರೆ.

    ಬೋರ್ಡ್ ಪರೀಕ್ಷೆಯ ಫಲಿತಾಂಶ ಏಪ್ರಿಲ್ ಮೂರನೇ ವಾರದಲ್ಲಿ ಬಿಡುಗಡೆಯಾಗುವ ಸಂಭವವಿದೆ ಎಂದು ಯುಪಿ ಶಿಕ್ಷಣ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆಯ ಸ್ಟ್ರಿಕ್ಟ್ ರೂಲ್ಸ್ ಗೆ ಹೆದರಿ 10 ಲಕ್ಷ ವಿದ್ಯಾರ್ಥಿಗಳು ಗೈರು!

  • ಯುಪಿಯಲ್ಲಿ 72 ಗಂಟೆಗಳಲ್ಲಿ 5 ಎನ್‍ಕೌಂಟರ್, ಇಬ್ಬರು ರೌಡಿಶೀಟರ್  ಗಳ ಹತ್ಯೆ

    ಯುಪಿಯಲ್ಲಿ 72 ಗಂಟೆಗಳಲ್ಲಿ 5 ಎನ್‍ಕೌಂಟರ್, ಇಬ್ಬರು ರೌಡಿಶೀಟರ್  ಗಳ ಹತ್ಯೆ

    ಲಕ್ನೋ: ಉತ್ತರ ಪ್ರದೇಶ ಪೊಲೀಸರು ಕಳೆದ 72 ಗಂಟೆಗಳಲ್ಲಿ 5 ಎನ್‍ಕೌಂಟರ್ ಗಳನ್ನು ನಡೆಸಿದ್ದು, ಇಬ್ಬರು ರೌಡಿಶೀಟರ್ ಗಳನ್ನು ಹತ್ಯೆ ಮಾಡಿದ್ದಾರೆ. ಅಲ್ಲದೇ ಎನ್‍ಕೌಂಟರ್ ವೇಳೆ ರೌಡಿಗಳಿಂದ ಎಕೆ-47 ಗನ್ ವಶಕ್ಕೆ ಪಡೆದಿದ್ದಾರೆ.

    ನೋಯ್ಡಾದ ಎನ್‍ಸಿಆರ್ ಘಜಿಯಾಬಾದ್ ಪ್ರದೇಶದಲ್ಲಿ ಎನ್‍ಕೌಂಟರ್ ನಡೆದಿದ್ದು, ಈ ವೇಳೆ ರೌಡಿಶೀಟರ್ ಶರವಣ್ ಚೌದರಿ ಮೃತಪಟ್ಟಿದ್ದಾನೆ. ಶರವಣ್ ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು. ಈತ ದೆಹಲಿ ಹಾಗೂ ನೋಯ್ಡಾದಲ್ಲಿ ಕೊಲೆ ಪ್ರಕರಣಗಳನ್ನು ಎದುರಿಸುತ್ತಿದ್ದ ಎಂದು ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ. ಇದನ್ನೂ ಓದಿ: ಜಾಮೀನು ಸಿಕ್ಕರೂ 5,500 ಕ್ರಿಮಿನಲ್‍ಗಳು ಯುಪಿ ಜೈಲಿನಿಂದ ಹೊರಬರುತ್ತಿಲ್ಲ!

    ಮತ್ತೊಂದು ಎನ್‍ಕೌಂಟರ್ ನಲ್ಲಿ ಪೊಲೀಸ್ ಹಾಗೂ ಆರೋಪಿಯ ನಡುವೆ ಗುಂಡಿನ ಚಕಾಮಕಿ ನಡೆದಿದ್ದು, ಅಶನ್ ಎಂಬ ಆರೋಪಿಯನ್ನು ಹತ್ಯೆ ಮಾಡಲಾಗಿದೆ. ಈತನ ವಿರುದ್ಧ ದರೋಡೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿತ್ತು. ಭಾನುವಾರ ರಾತ್ರಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಮಾಹಿತಿ ಪಡೆದ ಪೊಲೀಸರು ಎಲ್ಲಾ ಚೆಕ್ ಪೋಸ್ಟ್ ಗಳಿಗೆ ಮಾಹಿತಿ ರವಾನಿಸಿದ್ದರು. ಈ ವೇಳೆ ಬೈಕ್ ಮೇಲೆ ಆಗಮಿಸಿದ ಆರೋಪಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತಿ ದಾಳಿ ನಡೆಸಿದ ವೇಳೆ ಆರೋಪಿಗಳು ಬಲಿಯಾಗಿದ್ದಾನೆ. ಆರೋಪಿಗಳಿಂದ ದರೋಡೆ ಮಾಡಲಾಗಿದ್ದ ಹಣ ಹಾಗೂ 9ಎಂಎಂ ಹ್ಯಾಂಡ್ ಗನ್ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ನನ್ನ ಅರೆಸ್ಟ್ ಮಾಡಿ, ಎನ್‍ಕೌಂಟರ್ ನಲ್ಲಿ ಸಾಯಲು ಇಷ್ಟವಿಲ್ಲ- ಯುಪಿ ಪೊಲೀಸರಿಗೆ ಕೊಲೆ ಆರೋಪಿ ಶರಣು

    ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಎನ್‍ಕೌಂಟರ್ ಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ನೀತಿಗಳನ್ನು ಪ್ರತಿ ಪಕ್ಷಗಳು ಟೀಕಿಸುತ್ತಿದ್ದು, `ಎನ್‍ಕೌಂಟರ್ ರಾಜ್’ ಎಂದು ಕಿಡಿಕಾರಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ರೌಡಿಗಳನ್ನು ಮಟ್ಟ ಹಾಕಲು ಪೊಲೀಸರಿಗೆ ಪರಮಾಧಿಕಾರವನ್ನು ನೀಡಿದ್ದಾರೆ.  ಇದನ್ನೂ ಓದಿ: ಯೋಗಿ ಸರ್ಕಾರದ ಎನ್‍ಕೌಂಟರ್ ಎಫೆಕ್ಟ್- ಸೈಕಲ್ ಶಾಪ್, ಹಣ್ಣಿನ ವ್ಯಾಪಾರ, ರಿಕ್ಷಾ ಚಾಲನೆ ಆರಂಭಿಸಿದ ರೌಡಿಶೀಟರ್ ಗಳು