Tag: uttar pradesh

  • ಶಿಕ್ಷಕನ ಕ್ರೌರ್ಯಕ್ಕೆ ವಿದ್ಯಾರ್ಥಿ ಬಲಿ!

    ಶಿಕ್ಷಕನ ಕ್ರೌರ್ಯಕ್ಕೆ ವಿದ್ಯಾರ್ಥಿ ಬಲಿ!

    ಲಕ್ನೋ: ಶಿಕ್ಷಕನೊಬ್ಬನ ಕ್ರೌರ್ಯಕ್ಕೆ 8 ವರ್ಷದ ವಿದ್ಯಾರ್ಥಿ ಬಲಿಯಾದ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ.

    ಅರ್ಬಾಜ್ (8) ಮೃತ ದುರ್ದೈವಿ. ಸಾದಿಮಾದಾನ್‍ಪುತ್ ಗ್ರಾಮದ ಖಾಸಗಿ ಶಾಲೆಯಲ್ಲಿ ಘಟನೆ ನಡೆದಿದ್ದು, ಹಲ್ಲೆ ಮಾಡಿದ ಶಿಕ್ಷಕ ಜೈರಾಜ್ ವಿರುದ್ಧ ಮೃತ ವಿದ್ಯಾರ್ಥಿ ಪೋಷಕರು ದೂರು ನೀಡಿದ್ದಾರೆ.

    ಆಗಿದ್ದೇನು?: ಶಿಕ್ಷಕ ಜೈರಾಜ್ ಗುರುವಾರ ಅರ್ಬಾಜ್ ಮೇಲೆ ಹಲ್ಲೆ ಮಾಡಿದ್ದ. ಪರಿಣಾಮ ಅರ್ಬಾಜ್ ಅಸ್ವಸ್ಥಗೊಂಡಿದ್ದು, ಆತನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅರ್ಬಾಜ್ ಶುಕ್ರವಾರ ಮೃತಪಟ್ಟಿದ್ದಾನೆ. ಬಳಿಕ ಅರ್ಬಾಜ್ ಪೋಷಕರು ಶಿಕ್ಷಕ ಜೈರಾಜ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಲ್. ಬಿ.ಕುಮಾರ್ ಪಾಲ್ ತಿಳಿಸಿದ್ದಾರೆ.

    ಈ ಕುರಿತು ಎಫ್‍ಐಆರ್ ದಾಖಲಿಸಿಕೊಂಡು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 850 ರೈತರ ಸಾಲಮನ್ನಾ ಮಾಡಲು ಮುಂದಾದ್ರು ಬಿಗ್ ಬಿ!

    850 ರೈತರ ಸಾಲಮನ್ನಾ ಮಾಡಲು ಮುಂದಾದ್ರು ಬಿಗ್ ಬಿ!

    ಮುಂಬೈ: ಬಾಲಿವುಡ್ ನಟ ಬಿಗ್ ಬಿ ಅಮಿತಾ ಬಚ್ಚನ್ ಅವರು ಉತ್ತರ ಪ್ರದೇಶದ 850 ಮಂದಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ.

    ನಮ್ಮ ದೇಶಕ್ಕೆ ಅವರು ಜೀವನವನ್ನೇ ತ್ಯಾಗ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ 44 ಕುಟುಂಬಗಳು 112 ಘಟಕಗಳಾಗಿ ವೈವಿಧ್ಯಗೊಂಡಿದ್ದು, ಹೀಗಾಗಿ ಸಣ್ಣ ರೀತಿಯಲ್ಲಿ ಸಹಾಯ ಮಾಡಲಾಗಿದೆ. ದೇಶದ ಇನ್ನಿತರ ಭಾಗಗಳಲ್ಲಿಯೂ ಹೆಚ್ಚಿನ ಅಗತ್ಯಗಳಿದ್ದು ಅವುಗಳನ್ನು ಪೂರೈಸಬೇಕಿದೆ ಎಂದರು.

    ಬಚ್ಚನ್ ಅವರು ಈ ಹಿಂದೆ ಮಹಾರಾಷ್ಟ್ರದ 350 ಕ್ಕೂ ಹೆಚ್ಚು ರೈತರ ಸಾಲವನ್ನು ಪಾವತಿ ಮಾಡುವ ಮೂಲಕ ಅವರುಗಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಅಮಿತಾಬ್ ತಡೆಗಟ್ಟಿದ್ದರು. ಅಷ್ಟೇ ಅಲ್ಲದೇ ಆಂಧ್ರ ಮತ್ತು ವಿದರ್ಭದ ರೈತರ ಸಾಲಮನ್ನಾ ಕೂಡ ಮಾಡಲಾಗಿತ್ತು. ಇದೀಗ ಉತ್ತರಪ್ರದೇಶದ ರೈತರ ಸಾಲಮನ್ನಾ ಮಾಡಲು ಸುಮಾರು 850 ರೈತರ ಪಟ್ಟಿಯನ್ನು ಗುರುತಿಸಲಾಗಿದೆ ಮತ್ತು 5.5 ಕೋಟಿ ರೂಪಾಯಿಗಳಷ್ಟು ಸಾಲವನ್ನು ತೀರಿಸುವುದಕ್ಕೆ ಸಂಬಂಧಿಸಿದ ಬ್ಯಾಂಕ್‍ಗಳೊಂದಿಗೆ ಮಾತನಾಡಲಿದ್ದೇನೆ ಎಂದು ತಮ್ಮ ಬ್ಲಾಗ್‍ನಲ್ಲಿ ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.

    ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಜಿತ್ ಸಿಂಗ್ ಅವರಿಗೆ ಸಹಾಯ ಮಾಡಲಾಗುವುದು ಎಂದು ಅವರು ಬರೆದುಕೊಂಡಿದ್ದಾರೆ. ಬಲವಂತದಿಂದ ವೇಶ್ಯಾವೃತ್ತಿಗೆ ತಳ್ಳಲ್ಪಟ್ಟ ಮಹಿಳೆಯರ ರಕ್ಷಣೆಗಾಗಿ ದುಡಿಯುತ್ತಿರುವ ಸಾಮಾಜಿಕ ಕಾರ್ಯಕರ್ತ ಅಜಿತ್ ಸಿಂಗ್ ಅವರಿಗೆ ನನ್ನ ಕೊಡುಗೆ ಸಲ್ಲುತ್ತದೆ ಎಂದು ಅವರು ಹೇಳಿದ್ದಾರೆ.

    ಈ ಹಿಂದೆ ಬಿಗ್ ಬೀ ಮಹಾರಾಷ್ಟ್ರದ 350 ರೈತರಿಗೆ ಸಾಲಮನ್ನಾ ಮಾಡಲು ಸಹಾಯ ಮಾಡಿದ್ದರು. ಇದೀಗ ಉತ್ತರ ಪ್ರದೇಶದ 850 ರೈತರಿಗೆ ಸಹಾಯ ಮಾಡಲು ಮುಂದಾಗಿರುವುದು ಹೆಮ್ಮೆಯ ವಿಷಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಟ್ಟಿಗೆ ಎಸೆದು ವ್ಯಕ್ತಿಯನ್ನು ಹತ್ಯೆಗೈದ ಕೋತಿಗಳು!

    ಇಟ್ಟಿಗೆ ಎಸೆದು ವ್ಯಕ್ತಿಯನ್ನು ಹತ್ಯೆಗೈದ ಕೋತಿಗಳು!

    ಲಕ್ನೋ: ಕೋತಿಗಳು ಇಟ್ಟಿಗೆ ಕಲ್ಲು ಎಸೆದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಾಘಪತ್‍ನ ಟಿಕ್ರಿ ಪ್ರದೇಶದಲ್ಲಿ ನಡೆದಿದೆ.

    ಧರ್ಮಪಾಲ್ ಸಿಂಗ್(72) ಮಂಗಗಳ ದಾಳಿಗೆ ಬಲಿಯಾದ ವ್ಯಕ್ತಿ. ಪೊಲೀಸರ ಪ್ರಕಾರ ಸಿಂಗ್ ಅವರು ಒಣ ಕಟ್ಟಿಗೆಯ ತುಂಡುಗಳನ್ನು ಸಂಗ್ರಹಿಸುತ್ತಿರುವಾಗ ಮಂಗಗಳು ಅವರ ಮೇಲೆ ಇಟ್ಟಿಗೆಯ ತುಂಡುಗಳನ್ನು ಎಸೆದಿವೆ. ಇದರ ಪರಿಣಾಮ ಸಿಂಗ್ ಅವರ ತಲೆ ಮತ್ತು ಎದೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ಈ ಘಟನೆ ಕುರಿತು ಸಿಂಗ್ ಅವರ ಕುಟುಂಬಸ್ಥರು ಮಂಗಗಳ ಮೇಲೆ ದೂರು ದಾಖಲಿಸಲು ಮುಂದಾಗಿದ್ದು, ಆದರೆ ಪೊಲೀಸರು ಈ ಅವಘಡ ಆಕಸ್ಮಿಕ ಘಟನೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಿಂದಾಗಿ ಕೋಪಗೊಂಡ ಕುಟುಂಬಸ್ಥರು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.

     

    ಧರ್ಮಪಾಲ್ ಅವರ ಸಹೋದರ ಕೃಷ್ಣಪಾಲ್ ಸಿಂಗ್ ಪ್ರತಿಕ್ರಿಯಿಸಿ, 20 ಕ್ಕೂ ಅಧಿಕ ಇಟ್ಟಿಗೆ ಕಲ್ಲುಗಳನ್ನು ಮಂಗಗಳು ಎಸೆದಿದ್ದು, ಧರ್ಮಪಾಲ್ ತಲೆ ಎದೆ ಮತ್ತು ಕಾಲಿನ ಭಾಗಕ್ಕೆ ಬಿದ್ದಿದೆ. ಈ ಘಟನೆ ಮಂಗಗಳಿಂದಲೇ ಆಗಿದ್ದು, ಅವುಗಳ ಮೇಲೆ ದೂರು ದಾಖಲಿಸದೇ ಪೊಲೀಸರು ಅದನ್ನು ಆಕಸ್ಮಿಕ ಘಟನೆ ಎಂದು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ ಇದರಿಂದಾಗಿ ನಮಗೆ ನ್ಯಾಯ ಸಿಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಮಂಗಗಳ ಹಾವಳಿಯಿಂದ ಇಡೀ ಹಳ್ಳಿಯೇ ನರಕಯಾತನೆಯನ್ನು ಅನುಭವಿಸುವಂತಾಗಿದೆ. ಇದೀಗ ಧರ್ಮಪಾಲ್ ಅವರ ಜೀವವನ್ನೇ ಕಸಿದುಕೊಂಡಿದೆ. ಇದೇ ರೀತಿ ಗ್ರಾಮಸ್ಥರು ಕೂಡ ಇಲ್ಲಿನ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ಎಂದು ಸ್ಥಳೀಯರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

    ಡೊಘಾಟ್ ಪೊಲೀಸ್ ಠಾಣೆಯ ಅಧಿಕಾರಿ ಚಿತ್ವಾನ್ ಸಿಂಗ್ ಪ್ರತಿಕ್ರಿಯಿಸಿ, ಕೋತಿಗಳ ವಿರುದ್ಧ ನಾವು ಹೇಗೆ ಪ್ರಕರಣ ದಾಖಲಿಸಬಹುದು? ಇದು ಅಪಹಾಸ್ಯಕ್ಕೆ ದಾರಿ ಮಾಡಿ ಕೊಡುತ್ತದೆ. ನಾವು ಖಂಡಿತವಾಗಿಯೂ ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದೇವೆ ಹಾಗೂ ಈ ಪ್ರಕರಣ ಕುರಿತು ಡೈರಿಯಲ್ಲಿ ನೊಂದಾಯಿಸಿದ್ದೇವೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೂ ಕೂಡ ಒಳಪಡಿಸಲಾಗಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಸ್‍ಐಗೆ ಮನಬಂದಂತೆ ಥಳಿಸಿದ ಬಿಜೆಪಿ ಮುಖಂಡ- ವಿಡಿಯೋ ವೈರಲ್

    ಎಸ್‍ಐಗೆ ಮನಬಂದಂತೆ ಥಳಿಸಿದ ಬಿಜೆಪಿ ಮುಖಂಡ- ವಿಡಿಯೋ ವೈರಲ್

    ಲಕ್ನೋ: ಪೊಲೀಸ್ ಸಬ್-ಇನ್‍ಸ್ಪೆಕ್ಟರ್ ಒಬ್ಬರನ್ನು ಉತ್ತರ ಪ್ರದೇಶದ ಬಿಜೆಪಿ ಮುಖಂಡನೊಬ್ಬ ಮನಬಂದಂತೆ ಥಳಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೀರತ್ ರೆಸ್ಟೋರೆಂಟ್‍ವೊಂದರಲ್ಲಿ ಎಸ್‍ಐ ಮತ್ತು ಬಿಜೆಪಿ ಕೌನ್ಸಿಲರ್ ಮನೀಶ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆದು, ಮನೀಶ್ ಎಸ್‍ಐಗೆ ಮನ ಬಂದಂತೆ ಥಳಿಸಿದ್ದಾನೆ.

    ಏನಿದು ಘಟನೆ?
    ಶುಕ್ರವಾರ ರಾತ್ರಿ ಮೋಹಿಯುದ್ದಿನ್ ಪುರ್ ಠಾಣೆಯ ಉಸ್ತುವಾರಿಯಾದ ಎಸ್‍ಐ ಸುಖ್‍ಪಾಲ್ ಸಿಂಗ್ ಪವಾರ್, ಅದೇ ನಗರದ ವಕೀಲೆಯ ಜೊತೆಗೆ ರೆಸ್ಟೋರೆಂಟ್‍ಗೆ ಬಂದಿದ್ದಾರೆ. ಆರ್ಡರ್ ಮಾಡಿ ಹಲವು ಸಮಯ ಕಳೆದರೂ ಊಟವನ್ನ ತಂದುಕೊಡದ ಕಾರಣ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆದಿದೆ.

    ಸಿಬ್ಬಂದಿ ಜೊತೆ ಜಗಳವಾಡುತ್ತಿದ್ದನ್ನು ಗಮನಿಸಿದ ರೆಸ್ಟೋರೆಂಟ್ ಮಾಲೀಕನಾದ ಮನೀಶ್ ಕುಮಾರ್, ಎಸ್‍ಐ ಸುಖ್‍ಪಾಲ್ ಜೊತೆ ಮಾತಿಗಿಳಿದಿದ್ದಾನೆ. ನೋಡ ನೋಡುತ್ತಿದ್ದಂತೆ ಎಸ್‍ಐಗೆ ಹಿಗ್ಗಾ-ಮುಗ್ಗಾ ಥಳಿಸಿದ ಮನೀಶ್, ಎಸ್‍ಐ ಅವರನ್ನ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬಿಜೆಪಿ ಕೌನ್ಸಿಲರ್ ಮನೀಶ್ ವಿರುದ್ಧ ಪೊಲೀಸರು ಸೆಕ್ಷನ್ 395 (ಗೂಂಡಾಗಿರಿ) 354 (ಮಹಿಳೆಯ ಮೇಲೆ ಹಲ್ಲೆ) ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಮಾಲೀಕನನ್ನು ಬಂಧಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟೀಂ ಇಂಡಿಯಾ ಬೌಲರ್ ಮನೆಯಲ್ಲಿ ದರೋಡೆಗೆ ಯತ್ನಿಸಿದ್ದ 6 ಮಂದಿ ಅರೆಸ್ಟ್

    ಟೀಂ ಇಂಡಿಯಾ ಬೌಲರ್ ಮನೆಯಲ್ಲಿ ದರೋಡೆಗೆ ಯತ್ನಿಸಿದ್ದ 6 ಮಂದಿ ಅರೆಸ್ಟ್

    ಆಗ್ರಾ: ಟೀಂ ಇಂಡಿಯಾ ಯುವ ವೇಗಿ ದೀಪಕ್ ಚಹಾರ್ ಮನೆಯಲ್ಲಿ 6 ಮಂದಿ ದುಷ್ಕರ್ಮಿಗಳು ದರೋಡೆಗೆ ಯತ್ನಿಸಿ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ಆಗ್ರಾದ ಮನಸರೋವರ ಕಾಲೋನಿಯಲ್ಲಿ ನಡೆದಿದೆ.

    ವೇಗಿ ಚಹಾರ್ ಅವರ ತಾಯಿ ಒಬ್ಬರೇ ಮನೆಯಲ್ಲಿ ಇದ್ದ ವೇಳೆ ಘಟನೆ ನಡೆದಿದ್ದು, ದರೋಡೆಕೋರರು ಮನೆಯ ಬಾಗಿಲು ತೆರೆಯಲು ಯತ್ನಿಸಿದ ವೇಳೆ ಎಚ್ಚತ್ತ ಅವರು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಈ ಕುರಿತು ಮಾಹಿತಿ ಪಡೆದ ಶಾಹಜಂಗ್ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

    ರೂಪ್ ಕಿಶೋರ್, ರಾಜ್‍ಕುಮಾರ್, ವಿಜಯ್ ಕುಶ್ವಾಹ, ದಶರಥ್, ದೀನ್‍ದಯಾಳ್ ಮತ್ತು ರಾಕೇಶ್ ಬಂಧಿತ ಆರೋಪಿಗಳಿದ್ದಾರೆ. 6 ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 412 ಅನ್ವಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ದರೋಡೆ ಮಾಡಲು ಯತ್ನಿಸುವ ಮುನ್ನ ಆರೋಪಿಗಳು ಸಿಸಿಟಿವಿ ಕೇಬಲ್ ಕೂಡ ಕತ್ತರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 2 ಪಿಸ್ತೂಲ್, ಆಟೋ ರಿಕ್ಷಾ, 5 ಕಂಪ್ಯೂಟರ್ ಮಾನಿಟರ್ಸ್ ಹಾಗೂ ಇತರೇ ಮನೆಗಳಲ್ಲಿ ಕಳ್ಳತನ ಮಾಡಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳು ಈಗಾಗಲೇ ಈ ಪ್ರದೇಶದಲ್ಲಿ 9 ಕಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಅಂದಹಾಗೇ ಚಹರ್ 2018 ರ ಏಷ್ಯಾಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಪರ ಪಾರ್ದಾಪಣೆ ಮಾಡಿದ್ದರು. ಅಫ್ಘಾನಿಸ್ತಾನದ ವಿರುದ್ಧದ ಮೊದಲ ಪಂದ್ಯವಾಡಿದ ಚಹರ್ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮೊದಲ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಈ ಪಂದ್ಯವನ್ನು ಟೀಂ ಇಂಡಿಯಾ 37 ರನ್ ಅಂತರದಲ್ಲಿ ಗೆದ್ದಿತ್ತು. ಚಹರ್ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಭಾಗವಹಿಸಿದ್ದರು.

    ವಿಂಡೀಸ್ ವಿರುದ್ಧದ ಮೊದಲ 2 ಏಕದಿನ ಪಂದ್ಯಗಳಿಗೆ ಆಯ್ಕೆ ಆಗಿದ್ದ ಶಾರ್ದೂಲ್ ಠಾಕೂರ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗೆ ಉಳಿದಿದ್ದು, ಉಮೇಶ್ ಯಾದವ್ ಈ ಸ್ಥಾನದಲ್ಲಿ ಏಕದಿನ ಕ್ರಿಕೆಟ್‍ಗೆ ಕಮ್ ಬ್ಯಾಕ್ ಮಾಡಿದ್ದು, ಚಹರ್ ತಂಡಕ್ಕೆ ಆಯ್ಕೆ ಆಗುವುದರಲ್ಲಿ ವಿಫಲರಾಗಿದ್ದಾರೆ. ಇದರೊಂದಿಗೆ ಖಲೀಲ್ ಅಹ್ಮದ್, ಮೊಹಮ್ಮದ್ ಶಮಿ ತಂಡಕ್ಕೆ ಆಯ್ಕೆ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶೀಘ್ರವೇ ಅಲಹಾಬಾದ್ ಹೆಸರು ಪ್ರಯಾಗ್‍ರಾಜ್ ಆಗುತ್ತೆ: ಯೋಗಿ

    ಶೀಘ್ರವೇ ಅಲಹಾಬಾದ್ ಹೆಸರು ಪ್ರಯಾಗ್‍ರಾಜ್ ಆಗುತ್ತೆ: ಯೋಗಿ

    ಲಕ್ನೋ: ಅಲಹಾಬಾದ್ ಜಿಲ್ಲೆಯ ಹೆಸರನ್ನ ಶೀಘ್ರವೇ ಪ್ರಯಾಗ್‍ರಾಜ್ ಎಂದು ಬದಲಿಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

    ಮುಂದಿನ ವರ್ಷ ನಡೆಯಲಿರುವ ಮಹಾ ಕುಂಭ ಮೇಳದ ಚರ್ಚೆಯಲ್ಲಿ ಮಾತನಾಡಿದ ಯೋಗಿ ಅವರು, ನನಗೆ ಅಖಾಡ ಪರಿಷದ್ ಮತ್ತು ಇತರೆ ಕೆಲವರು ಅಲಹಾಬಾದ್ ಜಿಲ್ಲೆಯಲ್ಲಿ ಪ್ರಯಾಗ್‍ರಾಜ್ ಎಂದು ಬದಲಿಸುವಂತೆ ಪ್ರಸ್ತಾವನೆ ನೀಡಿದ್ದಾರೆ. ರಾಜ್ಯಪಾಲರದ ರಾಮ್ ನಾಯಕ್ ಸಹ ಈ ನಿರ್ಧಾರಕ್ಕೆ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಶೀಘ್ರವೇ ಸರ್ಕಾರ ಅಲಹಾಬಾದ್ ಹೆಸರನ್ನು ಪ್ರಯಾಗ್‍ರಾಜ್ ಎಂದು ಬದಲಿಸಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

    ಕುಂಭ ಮೇಳದ ತಯಾರಿಯ ಬಗ್ಗೆ ಮಾತನಾಡಿದ ಮುಖ್ಯ ಮಂತ್ರಿಯವರು, ಜಗತ್ತಿನ ಮೂಲೆ ಮೂಲೆಯಿಂದ ಭಕ್ತರು ಈ ಕುಂಭ ಮೇಳದಲ್ಲಿ ಭಾಗವಹಿಸಲಿದ್ದಾರೆ. ದೇಶದ 6 ಲಕ್ಷ ಹಳ್ಳಿಗಳಿಂದ ಭಕ್ತರು ಭಾಗವಹಿಸಲಿದ್ದು, ಡಿಸೆಂಬರ್ ತಿಂಗಳಿನೊಳಗೆ ಎಲ್ಲಾ ಉಳಿದ ಕೆಲಸಗಳನ್ನ ಮುಗಿಸಲಿದ್ದೇವೆ ಎಂದು ತಿಳಿಸಿದರು.

    ಕುಂಭ ಮೇಳಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲು ಹಾಲಿನ ಬೂತ್ ಗಳು, ಎಟಿಎಂ ಮೆಷಿನ್‍ಗಳು, ನೀರಿನ ಟ್ಯಾಂಕರ್ ಗಳು, ಬ್ಯಾಂಕ್ ಗಳು, ಮೊಬೈಲ್ ಟವರ್‍ಗಳನ್ನ ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಪ್ರಯಾಗ್ ಎನ್ನುವುದು ಕುಂಭಮೇಳ ನಡೆಯುವ ಪವಿತ್ರ ಪ್ರದೇಶವಾಗಿದೆ. ಇದು ಗಂಗೆ, ಯಮುನೆ ಮತ್ತು ಸರಸ್ವತಿ ನದಿಗಳ ಸಂಗಮಸ್ಥಳ. ಈ ಕಾರಣಕ್ಕಾಗಿ ಅಲಹಾಬಾದ್ ಅನ್ನು `ಪ್ರಯಾಗ್‍ರಾಜ್’ ಎಂದು ನಾಮಕರಣ ಮಾಡುತ್ತಿದ್ದೇವೆ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಈಗಾಗಲೇ ಕುಂಭ ಮೇಳದ ಬ್ಯಾನ ರ್‍ಗಳಲ್ಲಿ ಅಲಹಾಬಾದ್ ಬದಲು ಪ್ರಯಾಗ್‍ರಾಜ್ ಎಂದು ಬರೆಯಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೇಟಿ ಬಚಾವೋ, ಬೇಟಿ ಪಡಾವೋ ಕ್ಯಾಂಪೇನ್ ಮುಗಿಸಿ ಮನೆಗೆ ಬಂದ ವಿದ್ಯಾರ್ಥಿನಿ ಸಾವು!

    ಬೇಟಿ ಬಚಾವೋ, ಬೇಟಿ ಪಡಾವೋ ಕ್ಯಾಂಪೇನ್ ಮುಗಿಸಿ ಮನೆಗೆ ಬಂದ ವಿದ್ಯಾರ್ಥಿನಿ ಸಾವು!

    ಲಕ್ನೋ: ಬೇಟಿ ಬಚಾವೋ ಬೇಟಿ ಪಡಾವೋ ಕ್ಯಾಂಪೇನ್ ಮುಗಿಸಿ, ಮನೆಗೆ ಮರಳಿದ 9ನೇ ತರಗತಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಹಾರ್ಡೊಯ್ ನಲ್ಲಿ ನಡೆದಿದೆ.

    ಸುಪ್ರಿಯಾ ಶರ್ಮಾ ಮೃತ ವಿದ್ಯಾರ್ಥಿನಿ. ಕ್ಯಾಂಪೇನ್ ಬಳಿಕ ಮನೆಗೆ ಹಿಂತಿರುಗಿದ್ದ ಸುಪ್ರಿಯಾಗೆ ಜ್ವರ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಆಕೆಯ ಪೋಷಕರು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಸುಪ್ರಿಯಾ ಮೃತಪಟ್ಟಿದ್ದಾಳೆ.

    ಏನಿದು ಘಟನೆ?:
    ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನದ ನಿಮಿತ್ತ ಹಾರ್ಡೋರ್ ದಲ್ಲಿ ಗುರುವಾರ ಬೇಟಿ ಬಚಾವೋ, ಬೇಟಿ ಪಡಾವೋ ಕ್ಯಾಂಪೇನ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 11 ಸಾವಿರ ಶಾಲಾ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಆಯೋಜಕರು ವಿದ್ಯಾರ್ಥಿನಿಯರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರಲಿಲ್ಲ. ಅಷ್ಟೇ ಅಲ್ಲದೆ ಸೂಕ್ತ ವ್ಯವಸ್ಥೆ ಕೂಡ ಮಾಡಿರಲಿಲ್ಲ. ಮನೆಗೆ ಮರಳಿದ ಸುಪ್ರಿಯಾಗೆ ಜ್ವರ ಕಾಣಿಸಿಕೊಂಡಿತ್ತು. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ಸುಪ್ರಿಯಾ ಪೋಷಕರು ದೂರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯುಪಿ ಪೊಲೀಸರ ಗುಂಡೇಟಿಗೆ ಬಲಿಯಾದ ಆಪಲ್ ಉದ್ಯೋಗಿಯ ಪತ್ನಿಗೆ ಸರ್ಕಾರಿ ಉದ್ಯೋಗ!

    ಯುಪಿ ಪೊಲೀಸರ ಗುಂಡೇಟಿಗೆ ಬಲಿಯಾದ ಆಪಲ್ ಉದ್ಯೋಗಿಯ ಪತ್ನಿಗೆ ಸರ್ಕಾರಿ ಉದ್ಯೋಗ!

    ಲಕ್ನೋ: ಪೊಲೀಸ್ ಪೇದೆಯ ಗುಂಡಿನ ದಾಳಿಗೆ ಬಲಿಯಾದ ಆಪಲ್ ಕಂಪನಿಯ ಸೇಲ್ಸ್ ಮಾನೇಜರ್ ವಿವೇಕ್ ತಿವಾರಿ ಪತ್ನಿ ಕಲ್ಪನಾ ಅವರನ್ನು ಲಕ್ನೋ ಮಹಾನಗರ ಪಾಲಿಕೆಯ ವಿಶೇಷ ಅಧಿಕಾರಿಯನ್ನಾಗಿ ಉತ್ತರ ಪ್ರದೇಶ ಸರ್ಕಾರ ನೇಮಕ ಮಾಡಿದೆ.

    ಉತ್ತರ ಪ್ರದೇಶದ ಡಿಸಿಎಂ ದಿನೇಶ್ ಶರ್ಮಾ ಅವರು ಸರ್ಕಾರಿ ಕೆಲಸದ ನೇಮಕ ಪತ್ರವನ್ನು ಕಲ್ಪನಾ ತಿವಾರಿ ಅವರಿಗೆ ನೀಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿದ ದಿನೇಶ್ ಶರ್ಮಾ, ಈ ದುರಂತ ಘಟನೆಯ ನಂತರ ತಿವಾರಿ ಅವರ ಕುಟುಂಬದೊಂದಿಗೆ ನಾನು ಸತತವಾಗಿ ಸಂಪರ್ಕದಲ್ಲಿ ಇದ್ದೇನೆ. ವಿವೇಕ್ ಅವರು ಶ್ರಮಜೀವಿ. ಈಗಾಗಲೇ ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಿದ್ದು, ಇಬ್ಬರು ಮಕ್ಕಳು ಸೇರಿದಂತೆ ತಿವಾರಿ ಅವರ ತಾಯಿಗೆ ತಲಾ 5 ಲಕ್ಷ ರೂ ಕೊಟ್ಟಿದ್ದೇವೆ. ತಿವಾರಿ ಪತ್ನಿ ಕಲ್ಪನಾ ಅವರನ್ನು ಮಹಾನಗರ ಪಾಲಿಕೆಯ ವಿಶೇಷ ಅಧಿಕಾರಿಯಾಗಿ ನೇಮಕ ಮಾಡಿಕೊಂಡಿದ್ದೇವೆ” ಎಂದು ಹೇಳಿದರು. ಇದನ್ನು ಓದಿ: `ನನ್ನ ಎಲ್ಲ ಬೇಡಿಕೆಯನ್ನು ಆದಿತ್ಯನಾಥ್ ಒಪ್ಪಿಕೊಂಡಿದ್ದಾರೆ’- ಖಾಕಿಗಳ ಗುಂಡೇಟಿಗೆ ಬಲಿಯಾದ ಆಪಲ್ ಸಿಬ್ಬಂದಿಯ ಪತ್ನಿ

    ನೇಮಕಾತಿ ಪತ್ರವನ್ನ ಪಡೆದ ಕಲ್ವನಾ ತಿವಾರಿ ಮಾಧ್ಯಮಗಳೊಂದಿಗೆ ಮಾತನಾಡಿ, “ಡಿಸಿಎಂ ಅವರು ನನಗೆ ನೇಮಕಾತಿ ಪತ್ರವನ್ನ ಕೊಟ್ಟಿದ್ದಾರೆ. ಸರ್ಕಾರ ಮಾಡಿದ ಎಲ್ಲಾ ಭರವಸೆಗಳನ್ನ ಪೂರೈಸುವುದಾಗಿ ಮಾತುಕೊಟ್ಟಿದೆ. ತಮ್ಮ ನ್ಯಾಯಕ್ಕಾಗಿ ಎಲ್ಲಾ ರೀತಿಯ ತನಿಖೆಗಳನ್ನ ಸೂಕ್ತವಾಗಿ ನಡೆಸಲಾಗುತ್ತಿದೆ. ಇದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ” ಎಂದು ಹೇಳಿದರು.

    ಆಪಲ್ ಕಂಪೆನಿಯ ಸೇಲ್ಸ್ ಮ್ಯಾನೇಜರ್ ವಿವೇಕ್ ತಿವಾರಿ ಮೇಲೆ ಪೊಲೀಸರು ಗುಂಡೇಟಿಗೆ ಬಲಿಯಾಗಿದ್ದರು. ಈ ಶೂಟೌಟ್ ಪ್ರಕರಣ ದೇಶಾದ್ಯಂತ ಸುದ್ದಿ ಮಾಡಿತ್ತು. ಈ ಘಟನೆ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕಲ್ಪನಾ ಭೇಟಿ ಮಾಡಿದ್ದರು. ಈ ಸಂದರ್ಭಲ್ಲಿ ಯೋಗಿ ಆದಿತ್ಯನಾಥ್ ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆಗೆ ಉದ್ಯೋಗ, ವಿವೇಕ್ ತಾಯಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬ್ಲೂ ಫಿಲ್ಮ್ ನೋಡಿ 12ರ ಬಾಲಕನಿಂದ ಹೀನ ಕೃತ್ಯ

    ಬ್ಲೂ ಫಿಲ್ಮ್ ನೋಡಿ 12ರ ಬಾಲಕನಿಂದ ಹೀನ ಕೃತ್ಯ

    ಲಕ್ನೋ: 12 ವರ್ಷದ ಬಾಲಕ ನೆರೆಮನೆಯಲ್ಲಿ ವಾಸಿಸುತ್ತಿದ್ದ 5 ವರ್ಷದ ಬಾಲಕಿಯ ಮೇಲೆ ಆತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಪ್ರದೇಶದಲ್ಲಿ ನಡೆದಿದೆ.

    ಬರೇಲಿ ದೇವರಾನಿಯಾ ಪ್ರದೇಶದ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಾಲಕಿಗೆ ಚಾಕೋಲೆಟ್ ನೀಡುವ ಆಸೆ ತೋರಿ ತನ್ನ ಮನೆಗೆ ಕರೆದೊಯ್ದ ಅತ್ಯಾಚಾರ ಎಸಗಿದ್ದು, ಇಬ್ಬರ ಮನೆಯಲ್ಲಿ ಪೋಷಕರು ಕೆಲಸಕ್ಕೆ ತೆರಳಿದ ವೇಳೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಆರೋಪಿ ಕೃತ್ಯದ ಬಗ್ಗೆ ಬಾಲಕಿ ಶುಕ್ರವಾರ ತನ್ನ ತಾಯಿಗೆ ಹೇಳಿದ್ದು, ಬಳಿಕ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಬಾಲಕಿಯ ವೈದ್ಯಕೀಯ ಪರೀಕ್ಷೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದು, ಆರೋಪಿ ಬಾಲಕನನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಿದ್ದಾರೆ.

    ಘಟನೆ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಎಸ್‍ಪಿ ಸತೀಶ್ ಕುಮಾರ್, ಘಟನೆ ಗುರುವಾರ ಸಂಜೆ ವೇಳೆ ನಡೆದಿದ್ದು, ಆರೋಪಿ ಬಾಲಕ ಚಾಕೋಲೇಟ್ ನೀಡುತ್ತೇನೆ ಎಂದು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲದೇ ಬಾಲಕನ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದು, ಸ್ನೇಹಿತರ ಮೊಬೈಲ್‍ನಲ್ಲಿ ಇಂತಹ ದೃಶ್ಯಗಳನ್ನು ನೋಡಿ ಕೃತ್ಯ ಎಸಗಿದ್ದಾಗಿ ತಿಳಿಸಿದ್ದಾನೆ ಎಂದು ಎಸ್‍ಪಿ ವಿವರಿಸಿದ್ದಾರೆ.

    ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ವೈದ್ಯಕೀಯ ಪರೀಕ್ಷೆ ವರದಿ ಲಭ್ಯವಾದ ಬಳಿಕ ಮತ್ತಷ್ಟು ಮಾಹಿತಿ ಲಭಿಸಲಿದೆ. ಸದ್ಯ ಬಾಲಕನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರದಕ್ಷಿಣೆಯಾಗಿ ಬೈಕ್ ನೀಡದ್ದಕ್ಕೆ ಪತ್ನಿಗೆ ಫೋನ್ ಮಾಡಿ ತಲಾಖ್ ಕೊಟ್ಟ!

    ವರದಕ್ಷಿಣೆಯಾಗಿ ಬೈಕ್ ನೀಡದ್ದಕ್ಕೆ ಪತ್ನಿಗೆ ಫೋನ್ ಮಾಡಿ ತಲಾಖ್ ಕೊಟ್ಟ!

    ಲಕ್ನೋ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತ್ರಿವಳಿ ತಲಾಖ್ ನಿಷೇಧಿಸುವ ಸುಗ್ರೀವಾಜ್ಞೆಗೆ ಅಂಕಿತ ಹಾಕಿ ಒಂದು ತಿಂಗಳು ಕೂಡ ಕಳೆದಿಲ್ಲ. ಇದರ ಬೆನ್ನಲ್ಲೇ ವರದಕ್ಷಿಣೆ ನೀಡಲಿಲ್ಲ ಅಂತಾ ಪತಿಯೊಬ್ಬ ಫೋನ್ ಮಾಡಿ ಪತ್ನಿಗೆ ತಲಾಖ್ ನೀಡಿದ್ದಾನೆ.

    ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸೌದಿ ಅರೆಬಿಯಾದಲ್ಲಿ ಕೆಲಸ ಮಾಡುತ್ತಿರುವ ಪತಿ, ಅಲ್ಲಿಂದಲೇ ಪತ್ನಿಗೆ ತಲಾಖ್ ನೀಡಿದ್ದಾನೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಕುರಿತು ಪೊಲೀಸರು ಗುರುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ವರದಕ್ಷಿಣೆ ನೀಡುವಂತೆ ಅಳಿಯನ ಸಂಬಂಧಿಕರು ನನ್ನ ಮಗಳಿಗೆ ಕಿರುಕುಳ ಕೊಟ್ಟಿದ್ದಾರೆ. ತಕ್ಷಣವೇ ಹಣ ನೀಡುವಂತೆ ಕೇಳಿದ್ದರು. ಮದುವೆಯ ಬಳಿಕ ಉದ್ಯೋಗಕ್ಕಾಗಿ ಅಳಿಯ ಸೌದಿ ಅರೆಬಿಯಾಕ್ಕೆ ತೆರಳಿದ್ದಾನೆ. ಈ ವೇಳೆ ವರದಕ್ಷಿಣೆ ನೀಡುವಂತೆ ಆತನ ಸಂಬಂಧಿಕರು ಮಗಳಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದರು. ಹೀಗಾಗಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದೇವು ಎಂದು ಸಂತ್ರಸ್ತೆಯ ತಾಯಿ ರೇಷ್ಮಾ ತಿಳಿಸಿದ್ದಾರೆ.

    ನಮ್ಮಿಂದ ವರದಕ್ಷಿಣೆ ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಅಷ್ಟೇ ಅಲ್ಲದೆ ನಮ್ಮ ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ದಕ್ಕೆ ಕೋಪಗೊಂಡ ಅಳಿಯ, ಸೌದಿ ಅರೆಬಿಯಾದಲ್ಲಿ ಇದ್ದುಕೊಂಡೇ ಮಗಳಿಗೆ ಫೋನ್ ಮಾಡಿ ತಲಾಖ್ ಹೇಳಿ ವಿಚ್ಛೇದನ ಹೇಳಿದ್ದಾನೆ ಎಂದು ಆರೋಪಿದ್ದಾರೆ.

    ವರದಕ್ಷಿಣೆ ಕೇಳಿದ್ದೇಷ್ಟು?
    8 ತಿಂಗಳ ಹಿಂದಷ್ಟೇ ಮದುವೆಯಾಗಿದ್ದು, ಆಗ 50 ಸಾವಿರ ರೂ. ಹಾಗೂ ಒಂದು ಬೈಕ್ ನೀಡುವಂತೆ ಬೇಡಿಕೆ ಇಟ್ಟಿದ್ದ. ಆದರೆ ನಮ್ಮಿಂದ ಆತನ ಬೇಡಿಕೆಯನ್ನು ಈಡೇರಿಸಲು ಆಗಲಿಲ್ಲ. ಮದುವೆಯ ಬಳಿಕ ಪತಿ ಉದ್ಯೋಗಕ್ಕಾಗಿ ಸೌದಿ ಅರೆಬಿಯಾಗೆ ಹೋಗಿದ್ದ. ಈ ವೇಳೆ ಪತಿಯ ಸಂಬಂಧಿಕರು ಕಿರುಕುಳ ನೀಡುತ್ತಿದ್ದರು ಎಂದು ಸಂತ್ರಸ್ತೆ ನೂರಿ ಆರೋಪಿಸಿದ್ದಾರೆ.

    ಈ ಸಂಬಂಧ ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಕಾಯ್ದೆ ಹಾಗೂ ಸಂಬಂಧಿಸಿದ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂತಹದ್ದೇ ಪ್ರಕರಣವೊಂದು ಹೈದರಾಬಾದ್‍ನಲ್ಲಿ ನಡೆದಿದ್ದು, ಪತಿ 62 ವರ್ಷದ ಪತಿಯೊಬ್ಬ ಹುಮ ಸೈರಾ (29) ಪತ್ನಿಗೆ ವಾಟ್ಸಪ್ ಮೂಲಕ ತಲಾಕ್ ನೀಡಿದ್ದ. ಇದನ್ನು ಓದಿ: ವಾಟ್ಸಪ್ ಮೂಲಕ 29ರ ಪತ್ನಿಗೆ ತಲಾಖ್ ಕೊಟ್ಟ 62ರ ಪತಿ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv