Tag: uttar pradesh

  • ಭಾರತದ ಮೊದಲ ಆನೆ ಆಸ್ಪತ್ರೆ ಉದ್ಘಾಟನೆ – ವಿಶೇಷತೆಗಳೇನು?

    ಭಾರತದ ಮೊದಲ ಆನೆ ಆಸ್ಪತ್ರೆ ಉದ್ಘಾಟನೆ – ವಿಶೇಷತೆಗಳೇನು?

    ಲಕ್ನೋ: ದೇಶದಲ್ಲಿ ಆನೆಗಳಿಗಾಗಿಯೇ ಮೊದಲ ಬಾರಿಗೆ ಪ್ರತ್ಯೇಕ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಾಗಿದ್ದು, ಆನೆಗಳ ಚಿಕಿತ್ಸೆಗೆ ಬೇಕಾದ ಆಧುನಿಕ ಸೌಲಭ್ಯಗಳನ್ನು ಆಸ್ಪತ್ರೆ ಹೊಂದಿದೆ.

    ಉತ್ತರಪ್ರದೇಶದ ಆಗ್ರಾದ ಬಳಿಯ ಚುರ್ಮುರಾ ಗ್ರಾಮದಲ್ಲಿ ಆಸ್ಪತ್ರೆ ಉದ್ಘಾಟನೆಯಾಗಿದೆ. ಗಾಯಗೊಂಡ, ಅನಾರೋಗ್ಯ ಪೀಡಿತ ಆನೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಚುರ್ಮುರಾ ಗ್ರಾಮದ ಬಳಿ ಇರುವ ಆನೆ ಸಂರಕ್ಷಣಾ ಕೇಂದ್ರದ ಹತ್ತಿರದಲ್ಲೇ ಈ ವಿಶೇಷ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ.

    ಯಾವ ಸೌಲಭ್ಯ ಸಿಗಲಿದೆ?
    ಆನೆಗಳಿಗಾಗಿಯೇ ಪ್ರತ್ಯೇಕವಾಗಿ ನಿರ್ಮಿಸಿರುವ ದೇಶದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆದಿರುವ ಈ ಕೇಂದ್ರದಲ್ಲಿ ವೈರ್ ಲೆಸ್ ಡಿಜಿಟಲ್ ಎಕ್ಸ್ ರೇ, ಲೇಸರ್ ಚಿಕಿತ್ಸೆ, ಡೆಂಟಲ್ ಎಕ್ಸ್ ರೇ, ಥರ್ಮಲ್ ಇಮೇಜಿಂಗ್, ಅಲ್ಟ್ರಾಸೋನೋಗ್ರಫಿ, ಹೈಡ್ರೋಥೆರಪಿ ಸೇವೆಗಳು ಲಭ್ಯವಿದ್ದು, ಪ್ರತೇಕ ವಾರ್ಡ್ ಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ ಗಾಯವಾಗಿ ಮೇಲೆಳದ ಸ್ಥಿತಿ ನಿರ್ಮಾಣವಾಗುವ ವೇಳೆ ಮೇಲೆತ್ತುವ ವೈದ್ಯಕೀಯ ಉಪಕರಣಗಳನ್ನು ಕೂಡ ಈ ಆಸ್ಪತ್ರೆ ಒಳಗೊಂಡಿದೆ.

    ಕೇವಲ ಆನೆಗಳ ಚಿಕಿತ್ಸೆ ಮಾತ್ರವಲ್ಲದೇ ಆನೆಗಳ ಚಟುವಟಿಕೆ, ಅವುಗಳ ಚಿಕಿತ್ಸಾ ವಿಧಾನ ಬಗ್ಗೆ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆನೆಗಳ ಆರೋಗ್ಯ ಹಾಗೂ ಸಂರಕ್ಷಣಾ ದೃಷ್ಟಿಯಿಂದ ಸ್ಥಾಪನೆ ಮಾಡಲಾಗಿರುವ ಆಸ್ಪತ್ರೆ ಹೊಸ ಮೈಲುಗಲ್ಲಾಗಿದ್ದು, ಆಸ್ಪತ್ರೆಗಳಲ್ಲಿ ನೀಡಲಾಗಿರುವ ಸೌಲಭ್ಯಗಳು ಆನೆಗಳ ಬಗ್ಗೆ ಉತ್ತಮ ಕಾಳಜಿ ವಹಿಸಲು ಸಹಕಾರಿ ಆಗಲಿದೆ ಎಂದು ಎಸ್‍ಒಎಸ್ ಎನ್‍ಜಿಒ ಸಂಸ್ಥೆ ಸಿಇಒ ಕಾರ್ತಿಕ್ ಸತ್ಯನಾರಾಯಣ್ ಹೇಳಿದ್ದಾರೆ. ಅಂದಹಾಗೇ ಎಸ್‍ಒಎಸ್ ಸಂಸ್ಥೆ 2010 ರಲ್ಲಿ ಅನೆಗಳ ಸಂರಕ್ಷಣಾ ಕೇಂದ್ರವನ್ನು ಆರಂಭಸಿದ್ದು, ಈ ಕೇಂದ್ರದಲ್ಲಿ ವಿಶೇಷ ಚಿಕಿತ್ಸೆ ಅಗತ್ಯಿರುವ 20 ಆನೆಗಳು ಚಿಕಿತ್ಸೆ ಪಡೆಯುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • 12 ದಿನದ ಹಸುಗೂಸನ್ನ ತಾಯಿಯ ಕೈಯಿಂದ ಕಿತ್ತುಕೊಂಡು ಕೊಂದ ಕೋತಿ

    12 ದಿನದ ಹಸುಗೂಸನ್ನ ತಾಯಿಯ ಕೈಯಿಂದ ಕಿತ್ತುಕೊಂಡು ಕೊಂದ ಕೋತಿ

    ಲಕ್ನೋ: 12 ದಿನದ ಹಸುಗೂಸನ್ನ ಕೋತಿಯೊಂದು ತಾಯಿಯಿಂದ ಕಿತ್ತುಕೊಂಡು ಕೊಂದಿರುವ ಘಟನೆ ಆಗ್ರಾದ ಕಚ್ಚಾರಾ ಥೋಕ್ ಕಾಲೋನಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

    ಸೋಮವಾರ ಸಂಜೆ ತಾಯಿ ನೇಹಾ ಮಗುವಿಗೆ ಹಾಲುಣಿಸುತ್ತಿದ್ದರು. ಮನೆಯ ಮುಖ್ಯ ದ್ವಾರದಿಂದ ಕೋತಿ ಮನೆಗೆ ನುಗ್ಗಿದೆ, ಮಗುವಿಗೆ ಹಾಲು ಕುಡಿಸುತ್ತಿದ್ದ ತಾಯಿಯ ಬಳಿ ಹೋಗಿ ಮಗುವಿನ ಕತ್ತನ್ನ ಹಿಡಿದುಕೊಂಡು ಅಲ್ಲಿಂದ ಪರಾರಿಯಾಗಿದೆ ಎಂದು ಮೃತ ಮಗುವಿನ ತಂದೆ ಯೋಗೇಶ್ ಹೇಳಿದ್ದಾರೆ.

    “ತಾಯಿ ನೇಹಾಳಿಗೆ ಏನಾಗುತ್ತಿದೆ ಎಂದು ಅರಿವಾಗುತ್ತಿದ್ದಂತೆ ಕೋತಿ ನಮ್ಮ ಮಗನನ್ನು ಕಿತ್ತುಕೊಂಡು ಹೋಗಿದೆ. ನೆರೆ ಮನೆಯವರೆಲ್ಲರು ಮಂಗವನ್ನ ಬೆನ್ನಟ್ಟಿ ಹೋದಾಗ ನಮ್ಮ ಮಗನನನ್ನು ನೆರೆ ಮನೆಯ ಟೆರೆಸ್ ಮೇಲೆ ಬಿಟ್ಟು ಹೋಗಿದೆ. ಮಗ ಆರುಶ್ ದೇಹದಿಂದ ರಕ್ತ ಹರಿಯುತ್ತಿತ್ತು. ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ ವೈದ್ಯರು ತೀವ್ರ ಗಾಯವಾದ ಹಿನ್ನಲೆಯಲ್ಲಿ ಮಗು ಮೃತ ಪಟ್ಟಿದೆ ಎಂಬುದಾಗಿ ತಿಳಿಸಿದರು” ಎಂದು ಯೋಗೇಶ್ ಹೇಳಿದ್ದಾರೆ.

    ಸ್ಥಳಿಯರ ಪ್ರಕಾರ, ಈ ಕೋತಿಯೂ ನೇಹಾ ಮತ್ತು ಯೋಗೇಶ್ ಅವರ ಮಗುವನ್ನ ಕಿತ್ತುಕೊಳ್ಳುವ 15 ನಿಮಿಷಗಳ ಹಿಂದೆ 14 ವರ್ಷದ ಬಾಲಕಿಯ ಮೇಲೆಯೂ ಆಕ್ರಮಣ ಮಾಡಿದೆ. ಬಾಲಕಿಯು ಸಣ್ಣ-ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಹೇಳಿದ್ದಾರೆ. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದ ಯೋಗೇಶ್ ಅವರಿಗೆ 12 ದಿನದ ಆರುಶ್ ಒಬ್ಬನೇ ಮಗನಾಗಿದ್ದು, ಮದುವೆಯಾಗಿ 2 ವರ್ಷದ ನಂತರ ಆರುಶ್ ಜನಿಸಿದ್ದ.

    ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ರಂಕಾಟ ಪೊಲೀಸ್ ಠಾಣೆಯ ಎಸ್‍ಐ ಅಟ್ಬಿರ್ ಸಿಂಗ್, ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗ ಕಳಿಸಿದ್ದು, ಅವರ ಕುಂಟುಬಕ್ಕೆ ಆದಷ್ಟು ಬೇಗ ಮೃತ ದೇಹವನ್ನು ಹಸ್ತಾಂತರ ಮಾಡಲಾಗುವುದು. ಮಗುವಿನ ತಲೆಗೆ ತೀವ್ರ ಗಾಯವಾಗಿರುವುದನ್ನ ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ.

    ಎರಡು ತಿಂಗಳ ಹಿಂದೆ, ಕೋತಿ ಇದೇ ರೀತಿಯ ಇನ್ನೊಂದು ಮಗುವಿನ ಮೇಲೆ ಆಕ್ರಮಣ ಮಾಡಿತ್ತು. ಘಟನೆಯಲ್ಲಿ ಸಣ್ಣ-ಪುಟ್ಟ ಗಾಯಗಳಿಂದ ಮಗು ಪ್ರಾಣಾಪಾಯದಿಂದ ಪಾರಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಹಳ್ಳಿಯ ಜನರಿಗೆ ತೀವ್ರ ತಲೆ ನೋವಾಗಿರುವ ಈ ಮಂಗಳ ಕಾಟವೂ ಅತಿರೇಕಕ್ಕೇರಿದ್ದು, ರಸ್ತೆಯಲ್ಲಿ ಬೈಕ್ ಓಡಿಸುತ್ತಿದ್ದ ಯುವಕನ ಮೇಲೆ ಮಂಗಗಳ ಗುಂಪೊಂದು ದಾಳಿ ಮಾಡಿದೆ. ಯುವಕ ತನ್ನ ಬೈಕ್ ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಹೊಡೆದು ಸಾವನ್ನಪ್ಪಿದ್ದಾನೆ. ಈ ಮಂಗಗಳ ಕಾಟದಿಂದ ಪರಿಹಾರ ನೀಡಿ ಎಂದು ಸ್ಥಳೀಯರು ಪೊಲೀಸರಲ್ಲಿ ಬೇಡಿಕೆ ಇಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮರುನಾಮಕರಣ ಬೆನ್ನಲ್ಲೇ ಅಯೋಧ್ಯಾದಲ್ಲಿ ಮದ್ಯ, ಮಾಂಸಹಾರ ನಿಷೇಧಕ್ಕೆ ಯೋಗಿ ಸರ್ಕಾರ ಚಿಂತನೆ

    ಮರುನಾಮಕರಣ ಬೆನ್ನಲ್ಲೇ ಅಯೋಧ್ಯಾದಲ್ಲಿ ಮದ್ಯ, ಮಾಂಸಹಾರ ನಿಷೇಧಕ್ಕೆ ಯೋಗಿ ಸರ್ಕಾರ ಚಿಂತನೆ

    ಲಕ್ನೋ: ಫೈಜಾಬಾದ್ ನಗರವನ್ನು ಅಯೋಧ್ಯಾ ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಮದ್ಯ ಹಾಗೂ ಮಾಂಸಹಾರ ಮಾರಾಟವನ್ನು ನಿಷೇಧ ಮಾಡಲು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಸ್ಥಳೀಯ ಶ್ರೀಗಳಿಂದ ಜಿಲ್ಲೆಯಲ್ಲಿ ಮದ್ಯ ಹಾಗೂ ಮಾಂಸಹಾರ ನಿಷೇಧ ಮಾಡುವಂತೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸರ್ಕಾರದ ಈ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಉತ್ತರ ಪ್ರದೇಶ ಸರ್ಕಾರದ ವಕ್ತಾರ ಶ್ರೀಕಾಂತ್ ಶರ್ಮಾ, ಸ್ಥಳೀಯ ಶ್ರೀಗಳು ಸರ್ಕಾರ ಮುಂದಿಟ್ಟಿರುವ ಬೇಡಿಕೆ ಬಗ್ಗೆ ನಮಗೆ ಅರಿವಿದೆ. ಸರ್ಕಾರ ಕಾನೂನಾತ್ಮಕವಾಗಿ ಮದ್ಯ ಹಾಗೂ ಮಾಂಸಮಾರಾಟ ನಿಷೇಧ ಮಾಡಲಿದೆ ಎಂದು ತಿಳಿಸಿದ್ದಾರೆ.

    ಅಯೋಧ್ಯಾ ನಗರ ಧಾರ್ಮಿಕ ಕೇಂದ್ರವಾಗಿದ್ದು, ಇಂತಹ ನಗರದಲ್ಲಿ ಮದ್ಯ ಹಾಗೂ ಮಾಂಸ ಮಾರಾಟ ಮಾಡಬಾರದು. ಇವುಗಳನ್ನು ನಿಷೇಧ ಮಾಡುವುದು ನಗರದ ಜನತೆಗೆ ಆರೋಗ್ಯಕರ ಜೀವನ ಶೈಲಿ ಮಾಡಲು ಕಾರಣವಾಗಲಿದೆ. ಇದರಿಂದ ನಗರದ ಸ್ವಚ್ಛತೆ ಹೆಚ್ಚಾಗಲಿದ್ದು, ಮಾಲಿನ್ಯ ಕಡಿಮೆ ಮಾಡಿ ಶುದ್ಧತೆಯ ಭಾವನೆ ಮೂಡಿಸುತ್ತದೆ ಎಂದು ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.

    ಸತ್ಯೇಂದ್ರ ದಾಸ್ ಅವರ ಹೇಳಿಕೆಗೆ ಹಲವು ಶ್ರೀಗಳು ತಮ್ಮ ಸಹಮತಿಯನ್ನು ವ್ಯಕ್ತಪಡಿಸಿದ್ದು, ಇಡೀ ಜಿಲ್ಲೆಗೆ ಅನ್ವಯ ಆಗುವಂತೆ ಇದನ್ನು ನಿಷೇಧ ಮಾಡಬೇಕು ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಾಬ್ರಿ ಮಸೀದಿ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಮೊಹಮ್ಮದ್ ಇಕ್ಭಾಲ್ ಅನ್ಸಾರಿ ಅವರು ಈ ಕುರಿತು ರಾಜ್ಯ ಸರ್ಕಾರವೇ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

    ಆಯೋಧ್ಯಾನಗರದಲ್ಲಿ ಮದ್ಯ ಮತ್ತು ಮಾಂಸಹಾರ ಮಾರಾಟ ನಿಷೇಧ ಕ್ರಮದ ಕುರಿತು ಸಾರ್ವಜನಿಕರ ವಲಯದಿಂದ ಮಿಶ್ರಾ ಪ್ರತಿಕ್ರಿಯೆ ಕೇಳಿಬಂದಿದ್ದು, ಎರಡು ಉದ್ಯಮಗಳಲ್ಲಿ ತೊಡಗಿರುವವರು ಸರ್ಕಾರ ಚಿಂತನೆ ತಪ್ಪು. ಈಗಾಗಲೇ ನಗರದಲ್ಲಿ 200 ರಿಂದ 250 ಮಾಂಸ ಮಾರಾಟ ಮಳಿಗೆಗಳಿದ್ದು, ಕೇವಲ ಹೆಸರು ಬದಲಿಸಿದ ಮಾತ್ರಕ್ಕೆ ಇಂತಹ ನಿರ್ಧಾರ ಮಾಡುವುದು ಉತ್ತಮವಲ್ಲ. ಇದರಿಂದ ನಮ್ಮಂತಹ ಕುಟುಂಬಗಳು ಆದಾಯವನ್ನು ಕಳೆದುಕೊಳ್ಳಲಿದೆ. ಸರ್ಕಾರ ಈ ನಿರ್ಧಾರ ಕೈಗೊಂಡರೆ ನಮಗೇ ಸೂಕ್ತ ಉದ್ಯೋಗ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರೈಲಿನಲ್ಲಿ ಸಿಗರೇಟ್ ಸೇದಬೇಡಿ ಅಂದಿದಕ್ಕೆ ಗರ್ಭಿಣಿಯ ಕೊಲೆಗೈದ ಪಾಪಿ

    ರೈಲಿನಲ್ಲಿ ಸಿಗರೇಟ್ ಸೇದಬೇಡಿ ಅಂದಿದಕ್ಕೆ ಗರ್ಭಿಣಿಯ ಕೊಲೆಗೈದ ಪಾಪಿ

    ಉತ್ತರ ಪ್ರದೇಶ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಸಹಪ್ರಯಾಣಿಕನಿಗೆ ಇಲ್ಲಿ ಸಿಗರೇಟ್ ಸೇದಬೇಡಿ ಅಂದಿದ್ದಕ್ಕೆ ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಶುಕ್ರವಾರ ಶಹಜಹಾನ್‍ಪುರ್‍ನಲ್ಲಿ ನಡೆದಿದೆ.

    ಚೀನತ್ ದೇವಿ (45) ಮೃತ ದುರ್ದೈವಿ. ಕೊಲೆ ಮಾಡಿದ ಆರೋಪಿಯನ್ನು ಸೋನು ಯಾದವ್ ಎಂದು ಗುರುತಿಸಲಾಗಿದೆ. ಚೀನತ್ ತನ್ನ ಕುಟುಂಬಸ್ಥರೊಡನೆ ಛತ್ ಪೂಜೆಗೆಂದು ಬಿಹಾರ್ ಗೆ ಪಂಜಾಬ್-ಬಿಹಾರ್ ಜಲಿಯಾನ್ವಾಲ ಎಕ್ಸಪ್ರೆಸ್‍ನ ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಅದೇ ರೈಲಿನಲ್ಲಿ ಸೋನು ಯಾದವ್ ಕೂಡ ಪ್ರಯಾಣಿಸುತ್ತಿದ್ದನು.

    ಈ ವೇಳೆ ಸೋನುಗೆ ರೈಲಿನಲ್ಲಿ ಸಿಗರೇಟ್ ಸೇದಬೇಡಿ ಎಂದು ಮಹಿಳೆ ಹೇಳಿದ್ದಾಳೆ. ಇದರಿಂದ ಇಬ್ಬರ ನಡುವೆ ಜಗಳ ನಡೆದು ಕೋಪಗೊಂಡ ಸೋನು ಮಹಿಳೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಜಿಆರ್‍ಪಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪತ್ನಿಯ ಸ್ಮರಣಾರ್ಥ ಮಿನಿ ತಾಜ್‍ಮಹಲ್ ನಿರ್ಮಿಸುತ್ತಿದ್ದಾತ ಅಪಘಾತಕ್ಕೆ ಬಲಿ

    ಪತ್ನಿಯ ಸ್ಮರಣಾರ್ಥ ಮಿನಿ ತಾಜ್‍ಮಹಲ್ ನಿರ್ಮಿಸುತ್ತಿದ್ದಾತ ಅಪಘಾತಕ್ಕೆ ಬಲಿ

    ಬುಲಂದರ್: ಮೃತ ಪತ್ನಿಯ ನೆನಪಿಗಾಗಿ ಮಿನಿ ತಾಜ್ ಮಹಲ್ ನಿರ್ಮಿಸುತ್ತಿದ್ದ ಉತ್ತರಪ್ರದೇಶದ ಫೈಜುಲ್ ಹಸನ್ ಖಾದ್ರಿ (83) ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

    ಈ ಕುರಿತು ಮಾಧ್ಯಮವೊಂದು ವರದಿ ಮಾಡಿದ್ದು, 83 ವರ್ಷದ ಹಸನ್ ಖಾದ್ರಿ ತಮ್ಮ ಮನೆಯ ಎದುರು ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಖಾದ್ರಿ ಕುಟುಂಬಸ್ಥರು, ಗುರುವಾರ ರಾತ್ರಿ 10.30ರ ವೇಳೆ ಮನೆಯ ಮುಂದಿನ ರಸ್ತೆಯಲ್ಲಿ ಓಡಾಡುತ್ತಿದ್ದ ಅವರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆ ದಾಖಲು ಮಾಡಲಾಯಿತು. ಆದರೆ ಶುಕ್ರವಾರ ಬೆಳಗ್ಗೆ 11 ಗಂಟೆ ವೇಳೆಗೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಅವರು ಸೈಕಲ್‍ನಿಂದ ಬಿದ್ದು ಗಾಯಗೊಂಡಿದ್ದರು. ಆ ಬಳಿಕ ಅವರು ನಡೆದುಕೊಂಡೆ ಹೋಗುತ್ತಿದ್ದರು ಎಂದು ತಿಳಿಸಿದ್ದಾರೆ.

    ಅಂದಹಾಗೇ ನಿವೃತ್ತ ಪೋಸ್ಟ್‍ಮನ್ ಆಗಿದ್ದ ಖಾದ್ರಿ ಅವರು 2011 ರಲ್ಲಿ ಮಿನಿ ತಾಜ್ ಮಹಲ್ ನಿರ್ಮಿಸಲು ಆರಂಭಿಸಿದ್ದರು. ಆದರೆ ಆರ್ಥಿಕ ಕಾರಣಗಳಿಂದ ಅವರ ಕಾರ್ಯಕ್ಕೆ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಅದರೂ ತಮ್ಮ ಛಲ ಬಿಡದೆ ನಿರ್ಮಾಣ ಕಾರ್ಯವನ್ನು ಮುಂದುವರೆಸಿದ್ದರು. ಖಾದ್ರಿ ಅವರ ಸುದ್ದಿ ತಿಳಿದಿದ್ದ ಅಂದಿನ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಸರ್ಕಾರದ ವತಿಯಿಂದ ಹಣ ಸಹಾಯ ಮಾಡಲು ಮುಂದಾಗಿದ್ದರು. ಆದರೆ ಇದನ್ನು ನಿರಾಕರಿಸಿದ ಖಾದ್ರಿ ತಮ್ಮ ಹಳ್ಳಿಯಲ್ಲಿ ಹೆಣ್ಣು ಮಕ್ಕಳ ಶಾಲೆ ನಿರ್ಮಾಣ ಮಾಡಲು ಈ ಹಣವನ್ನು ಉಪಯೋಗ ಮಾಡುವಂತೆ ತಿಳಿಸಿದ್ದರು.

    ಅಲ್ಲದೇ ತಮ್ಮ ಭೂಮಿಯನ್ನು ಶಾಲೆ ನಿರ್ಮಾಣಕ್ಕೆ ದಾನ ಮಾಡಿ ಎಂದು ಹೇಳುವ ಮೂಲಕ ಮಾದರಿಯಾಗಿದ್ದರು. ಹಲವರು ಮಂದಿ ಖಾದ್ರಿ ಅವರ ಕಾರ್ಯ ಮೆಚ್ಚಿ ಹಣದ ಸಹಾಯ ನೀಡಲು ಮುಂದಾದರು ಅದನ್ನು ತಿರಸ್ಕರಿಸಿ ತಮ್ಮ ಹಣದಲ್ಲೇ ಸೌಧ ನಿರ್ಮಾಣ ಮಾಡಲು ದೃಢ ಸಂಕಲ್ಪ ಮಾಡಿದ್ದರು. 2014ರಂದು ಕಟ್ಟಡಕ್ಕೆ ರೂಪಕೊಟ್ಟಿದ್ದರು. ಖಾದ್ರಿ ಅವರು ತಾಜಾಮುಲ್ಲಿ ಬೇಗಂ ಜೊತೆಗೆ 1953ರಲ್ಲಿ ವಿವಾಹವಾಗಿದ್ದರು. ಆದರೆ 2011 ರಲ್ಲಿ ಬೇಗಂ ಗಂಟಲು ಕ್ಯಾನ್ಸರ್ ಗೆ ತುತ್ತಾಗಿ ಅಗಲಿದ್ದರು.

    ಸದ್ಯ ಖಾದ್ರಿಯ ಅವರ ಕನಸ್ಸನನ್ನು ಅವರ ಸೋದರ ಅಳಿಯ ಪೂರ್ಣಗೊಳಿಸುವುದಾಗಿ ತಿಳಿಸಿದ್ದು, ಸೌಧ ಆಸಲಿ ತಾಜ್ ಮಹಲ್‍ಯಂತಯೇ ಕಾಣಲು ಬೇಕಾದ ಕಲ್ಲಿನ ಅಗತ್ಯವಿದೆ. ಖಾದ್ರಿ ಅವರ ಕೋರಿಕೆಯಂತೆ ಅವರ ಪತ್ನಿಯ ಪಕ್ಕದಲ್ಲೇ ಸಮಾಧಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬುಲಂದರ್ ಪೊಲೀಸ್ ಅಧಿಕಾರಿ ಯೋಗೇಂದ್ರ ಸಿಂಗ್, ಖಾದ್ರಿ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸದೆ ನೀಡಲು ಕುಟುಂಬಸ್ಥರು ಮನವಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಹೋರಾಟಗಾರರಂತೆ ರಾಮನ ಪ್ರತಿಮೆಯನ್ನು ದೇಶದೆಲ್ಲೆಡೆ ನಿರ್ಮಿಸೋದು ಸರಿಯಲ್ಲ: ಅಯೋಧ್ಯೆ ದೇವಾಲಯದ ಹಿರಿಯ ಅರ್ಚಕ

    ಹೋರಾಟಗಾರರಂತೆ ರಾಮನ ಪ್ರತಿಮೆಯನ್ನು ದೇಶದೆಲ್ಲೆಡೆ ನಿರ್ಮಿಸೋದು ಸರಿಯಲ್ಲ: ಅಯೋಧ್ಯೆ ದೇವಾಲಯದ ಹಿರಿಯ ಅರ್ಚಕ

    ಲಕ್ನೋ: ಅಯೋಧ್ಯೆಯಲ್ಲಿ ಅತಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣ ಮಾಡಬೇಕೆಂಬ ಯೋಗಿ ಸರ್ಕಾರದ ಕನಸಿನ ಯೋಜನೆಗೆ ಈಗ ವಿರೋಧ ವ್ಯಕ್ತವಾಗಿದೆ. ವಿವಾದ ಸ್ಥಳದಲ್ಲಿ ತಾತ್ಕಾಲಿಕವಾಗಿ ನಿರ್ಮಾಣಗೊಂಡಿರುವ ರಾಮನ ದೇವಾಲಯದ ಹಿರಿಯ ಅರ್ಚಕರು ಈ ಯೋಜನೆಯನ್ನು ವಿರೋಧಿಸಿದ್ದಾರೆ.

    ಕಳೆದ 25 ವರ್ಷಗಳಿಂದ ರಾಮನ ಜನ್ಮಭೂಮಿ ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿರುವ ಮಹಾಂತ್ ಸತ್ಯೇಂದ್ರ ದಾಸ್ ಪ್ರತಿಕ್ರಿಯಿಸಿ, ರಾಮನ ಪ್ರತಿಮೆಯನ್ನು ದೇವಾಲಯದಲ್ಲಿ ನಿರ್ಮಿಸಿದರೆ ವಿರೋಧವಿಲ್ಲ, ಆದರೆ ಹೊರಾಂಗಣದಲ್ಲಿ ಪ್ರತಿಮೆ ನಿರ್ಮಿಸಿದರೆ ಅದನ್ನು ನೋಡಿಕೊಳ್ಳುವವರು ಯಾರು? ಪ್ರತಿನಿತ್ಯ ರಾಮನಿಗೆ ಪೂಜೆ ಸಲ್ಲಿಸುವವರು ಯಾರು ಇದು ಸರಿಯಲ್ಲ ಎಂದು ಸತ್ಯೇಂದ್ರ ದಾಸ್ ಪ್ರಶ್ನಿಸಿದ್ದಾರೆ.

    ಈ ಯೋಜನೆ ರಾಜಕೀಯ ಆಟವಲ್ಲ. ರಾಜಕಾರಣಿಗಳು, ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಯನ್ನು ದೇಶದೆಲ್ಲೆಡೆ ನಿರ್ಮಿಸಿದ್ದಾರೆ, ಅವೆಲ್ಲವು ಈಗ ಯಾವ ಸ್ಥಿತಿಯಲ್ಲಿವೆ ಎಂದು ಎಲ್ಲರಿಗೂ ಗೊತ್ತು. ರಾಮನಿಗೂ ಅದೇ ಸ್ಥಿತಿ ಬರುವುದು ಬೇಡ ಎಂದು ಸತ್ಯೇಂದ್ರ ದಾಸ್ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

    ವಿರೋಧದ ಮಧ್ಯೆಯು ಸರ್ಕಾರ ಈ ಯೋಜನೆ ಮಾಡಬೇಕೆಂದು ಮುಂದಾದರೆ ಕೆಲವು ಸಲಹೆಯನ್ನು ಪಾಲಿಸಬೇಕು. ರಾಮನ ಮೂರ್ತಿಯನ್ನು ಅತೀ ಎತ್ತರವಾಗಿ ನಿರ್ಮಿಸಬೇಡಿ, ಪ್ರತಿಮೆಯನ್ನು ಸರಿಯಾಗಿ ನಿರ್ವಹಿಸುವ ರೀತಿ ನಿರ್ಮಿಸಿ ಎಂದು ಸಲಹೆ ನೀಡಿದರು.

    ರಾಮ ಮಂದಿರವನ್ನು ಪುನರ್ನಿರ್ಮಾಣ ಮಾಡುವ ಕುರಿತು ಮಾತನಾಡಿದ ಅರ್ಚಕರು, ರಾಮನಿಗೆ ದೇವಾಲಯ ಬೇಕೆಂದರೆ ಅವನೇ ಅದರ ಕುರಿತು ನೋಡಿಕೊಳ್ಳುತ್ತಾನೆ. ಇಲ್ಲವಾದರೆ ತಾತ್ಕಾಲಿಕ ದೇವಾಲಯದಲ್ಲಿಯೇ ಪೂಜೆ ಪಡೆಯುತ್ತಾನೆ. ಎಲ್ಲವೂ ರಾಮನ ಇಚ್ಚೆ. ಬಾಬ್ರಿ ಮಸೀದಿ ಪ್ರಕರಣದಿಂದ ಹೆಚ್ಚು ನೋವಾಗಿರುವುದು ಮುಸ್ಲಿಂ ಧರ್ಮದವರಿಗಲ್ಲ ಹಿಂದೂಗಳಿಗೆ. ಈ ಎಲ್ಲಾ ಯೋಜನೆ ಒಂದು ರಾಜಕೀಯ ನಾಟಕ. ರಾಮನ ನೆಲೆ ಇರುವುದು ದೇವಾಲಯದ ಒಳಗಡೆ, ಹೊರಗೆ ಅಲ್ಲ ಎಂದು ಹೇಳಿ ಪ್ರತಿಮೆ ನಿರ್ಮಾಣ ಯೋಜನೆಯನ್ನು ವಿರೋಧಿಸಿದ್ದಾರೆ.

    ಸಿಎಂ ಯೋಗಿ ಆದಿತ್ಯನಾಥ್ ಅವರು ನವೆಂಬರ್ 6 ರಂದು ಅಯೋಧ್ಯೆಯಲ್ಲಿ ನಡೆಯುವ ದೀಪೋತ್ಸವದಂದು ಅಥವಾ ಮರುದಿನ ದೀಪಾವಳಿಯ ಶುಭದಿನದಂದು ಶ್ರೀರಾಮನ ಪ್ರತಿಮೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ನಡೆಸುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಸ್ತೆ ಅಪಘಾತದಿಂದ ಹಸುಗಳ ರಕ್ಷಣೆಗೆ ಉ.ಪ್ರ ಪೊಲೀಸರಿಂದ ಹೊಸ ಪ್ರಯೋಗ

    ರಸ್ತೆ ಅಪಘಾತದಿಂದ ಹಸುಗಳ ರಕ್ಷಣೆಗೆ ಉ.ಪ್ರ ಪೊಲೀಸರಿಂದ ಹೊಸ ಪ್ರಯೋಗ

    ಲಕ್ನೋ: ರಸ್ತೆ ಅಪಘಾತದಿಂದ ಹಸುಗಳನ್ನು ರಕ್ಷಿಸಲು ಉತ್ತರ ಪ್ರದೇಶ ಪೊಲೀಸರು ಹೊಸ ವಿಧಾನವೊಂದು ಅಳವಡಿಸಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ಪಡೆದುಕೊಂಡಿದೆ.

    ಹೌದು, ಹಸುಗಳ ಕುತ್ತಿಗೆ ಹಾಗೂ ಕೊಂಬುಗಳಿಗೆ ಉತ್ತರ ಪ್ರದೇಶ ಪೊಲೀಸರು ರೇಡಿಯಂ ಬ್ಯಾಂಡ್ ಸುತ್ತುತ್ತಿದ್ದಾರೆ. ಈ ಮೂಲಕ ದೂರದಿಂದಲೇ ಚಾಲಕರು ಮುಂದೆ ಯಾವುದೋ ವಸ್ತು ಅಥವಾ ಪ್ರಾಣಿ ಇದೆ ಎಂದು ಅರಿತು ನಿಧಾನವಾಗಿ ಬರಲು ಸಾಧ್ಯವಾಗುತ್ತದೆ.

    ರಾತ್ರಿಯ ವೇಳೆ ರಸ್ತೆ ಅಪಘಾತದಲ್ಲಿ ಹಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿವೆ. ಇದನ್ನು ನಿಯಂತ್ರಿಸಲು ಈ ಕಾರ್ಯಕ್ಕೆ ಮುಂದಾಗಿದ್ದೇವೆ. ರೇಡಿಯಂ ಬ್ಯಾಂಡ್ ಸುತ್ತುವುದರಿಂದ ರಸ್ತೆ ಅಪಘಾತದಲ್ಲಿ ಹಸುಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಪೊಲೀಸ್ ಅಧೀಕ್ಷಕ ಧರಮವೀರ್ ಸಿಂಗ್ ತಿಳಿಸಿದ್ದಾರೆ.

    ಈಗಾಗಲೇ ಚಳಿಗಾಲ ಆರಂಭವಾಗಿದ್ದು, ರಾತ್ರಿ ಹಾಗೂ ಬೆಳಗ್ಗೆ ಮಂಜು ಮುಸುಕಿದ ವಾತಾವರಣವಿರುತ್ತದೆ. ಹಸುಗಳ ಕುತ್ತಿಗೆ ಹಾಗೂ ಕೊಂಬುಗಳ ಮೇಲೆ ಇರುವ ರೇಡಿಯಂ ಬ್ಯಾಂಡ್‍ಗಳು ವಾಹನದ ಬೆಳಕಿಗೆ ಮಿಂಚುವುದರಿಂದ ಚಾಲಕರು ಅನಾಹುತ ತಪ್ಪಿಸಬಹುದು. ಕೆಲವೊಮ್ಮೆ ಹಸುಗಳನ್ನು ರಕ್ಷಿಸಲು ಹೋಗಿ, ಇಲ್ಲವೇ ಡಿಕ್ಕಿ ಹೊಡೆದು ಭಾರೀ ಅನಾಹುತ ಸಂಭವಿಸಿದ ಘಟನೆಗಳು ನಡೆದಿವೆ. ಉತ್ತರ ಪ್ರದೇಶ ಪೊಲೀಸ ವಿನೂತನ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/oICBEP3E52g

  • ದೀಪಾವಳಿ ಬಳಿಕ ರಾಮಮಂದಿರ ನಿರ್ಮಾಣ ಕಾರ್ಯಾರಂಭ : ಯೋಗಿ ಆದಿತ್ಯನಾಥ್

    ದೀಪಾವಳಿ ಬಳಿಕ ರಾಮಮಂದಿರ ನಿರ್ಮಾಣ ಕಾರ್ಯಾರಂಭ : ಯೋಗಿ ಆದಿತ್ಯನಾಥ್

    ಲಕ್ನೋ: ರಾಮ ಮಂದಿರ ವಿಚಾರಣೆಗೆ ತ್ವರಿತಗೊಳಿಸುವಂತೆ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜನವರಿಗೆ ಮುಂದೂಡುತ್ತಿದಂತೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡುವಂತೆ ಆಗ್ರಹ ಹೆಚ್ಚಾಗುತ್ತಿದೆ. ಇದೇ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಾಮಮಂದಿರ ನಿರ್ಮಾಣ ಕಾರ್ಯಾರಂಭದ ಕುರಿತು ಹೇಳಿಕೆ ನೀಡಿದ್ದಾರೆ.

    ರಾಜಸ್ಥಾನದ ಬಿಕಾನೆರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯೋಗಿ ಆದಿತ್ಯನಾಥ್ ಈ ಕುರಿತು ಪರೋಕ್ಷವಾಗಿ ಹೇಳಿಕೆ ಸೂಚನೆ ನೀಡಿದ್ದಾರೆ. ರಾಷ್ಟ್ರೀಯ ಮಾಧ್ಯಮವೊಂದು ಈ ಕುರಿತು ವರದಿ ಮಾಡಿದ್ದು, ಈ ಬಾರಿ ರಾಮನ ಹೆಸರಿನಲ್ಲಿ ದೀಪ ಹಚ್ಚಿ, ರಾಮ ಮಂದಿರದ ಕಾರ್ಯ ಶೀಘ್ರವೇ ಆರಂಭವಾಗಲಿದೆ. ದೀಪಾವಳಿ ಬಳಿಕವೇ ಕಾರ್ಯಾರಂಭವಾಗಲಿದೆ ಎಂದು ಹೇಳಿದ್ದಾರೆ.

    ಇತ್ತ ರಾಮ ಮಂದಿರ ನಿರ್ಮಾಣ ನನ್ನ ಜೀವನದ ಕನಸು ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದು, ರಾಮ ಜನ್ಮಭೂಮಿ ಯಾತ್ರೆಯಲ್ಲಿ ಭಾಗವಹಿಸಿದ್ದು ನನಗೆ ಈಗಲೂ ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ.

    ರಾಮ ಜನ್ಮ ಭೂಮಿ ಯಾತ್ರೆ ಸಂಬಂಧ ಪ್ರಕರಣದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ.ಅಡ್ವಾಣಿ ಹಾಗೂ ನಾನು ಈಗಲೂ ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿದ್ದೇವೆ. ಇದಕ್ಕೆ ನಮಗೆ ಹೆಮ್ಮೆ ಇದೆ. ರಾಮ ಮಂದಿರ ನಿರ್ಮಾಣದ ಕಾರ್ಯಕ್ಕೆ ನಾನು ಏನು ಮಾಡಲು ಸಿದ್ಧ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.

    2010ರಲ್ಲಿ ಅಯೋಧ್ಯೆ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಹಾಗೂ ವಿವಾದ ಕುರಿತ ವಿಚಾರಣೆ ಶೀಘ್ರ ಆರಂಭ ಮಾಡುವಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅ.29 ರಂದು ಜನವರಿಗೆ ಮುಂದೂಡಿತ್ತು.

    ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗಾಯ್, ನ್ಯಾ. ಎಸ್‍ಕೆ ಕೌಲ್, ಕೆಎಂ ಜೋಸೆಫ್ ನೇತೃತ್ವದ ತ್ರಿಸದಸ್ಯ ಪೀಠ ಇಂದು ಅರ್ಜಿಯ ವಿಚಾರಣೆ ನಡೆಸಿ ನಮಗೆ ನಮ್ಮದೇ ಆದ ಆದ್ಯತೆಗಳಿವೆ ಎಂದು ಅಭಿಪ್ರಾಯ ಪಟ್ಟಿತ್ತು. ಅಲ್ಲದೇ ಅಯೋಧ್ಯೆ ಬಗ್ಗೆ ಪ್ರತಿನಿತ್ಯ ವಿಚಾರಣೆ ನಡೆಬೇಕೇ? ಬೇಡವೇ ಎನ್ನುವ ಬಗ್ಗೆ ತೀರ್ಮಾನ ಜನವರಿಯಲ್ಲೇ ಕೈಗೊಳ್ಳಬಹುದು ಎಂದು ತಿಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೂರೂವರೆ ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಶಾಲಾ ಬಸ್ ಚಾಲಕ!

    ಮೂರೂವರೆ ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಶಾಲಾ ಬಸ್ ಚಾಲಕ!

    ಲಕ್ನೋ: ಮೂರೂವರೆ ವರ್ಷದ ವಿದ್ಯಾರ್ಥಿನಿಯ ಮೇಲೆ ಶಾಲೆಯ ಬಸ್ ಚಾಲಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಚಾಲಕನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಶಾಲೆಯ ಆಡಳಿತ ಮಂಡಳಿ ಅಮಾನವೀಯತೆ ಮೆರೆದಿದೆ.

    ಏನಿದು ಪ್ರಕರಣ?:
    ಸಂತ್ರಸ್ತ ಬಾಲಕಿ ನೋಯಿಡಾದ ಖಾಸಗಿ ಶಿಶುವಿಹಾರಕ್ಕೆ ಬಸ್‍ನಲ್ಲಿ ಹೋಗುತ್ತಿದ್ದಳು. ಎಂದಿನಂತೆ ಅಕ್ಟೋಬರ್ 9ರಂದು ಬಾಲಕಿ ಬಸ್‍ನಲ್ಲಿ ಮನೆಗೆ ಮರಳುತ್ತಿದ್ದಾಗ ಚಾಲಕ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಗಾಬರಿಗೊಂಡಿದ್ದ ಬಾಲಕಿ ಬಸ್‍ನಿಂದ ಇಳಿದು, ಅಳುತ್ತಲೇ ತಂದೆಯನ್ನು ಸೇರಿಕೊಂಡಿದ್ದಾಳೆ ಎಂದು ಸಂತ್ರಸ್ತ ಬಾಲಕಿ ತಾಯಿ ಹೇಳಿದ್ದಾರೆ.

    ಮಗಳನ್ನು ಸಂತೈಸಿ ಕೇಳಿದಾಗ, ಚಾಲಕ ಎಸಗಿದ ಕೃತ್ಯ ವಿವರಿಸಿದ್ದಾಳೆ. ಅಷ್ಟೇ ಅಲ್ಲದೆ ಆತನು ವಿಡಿಯೋ ಮಾಡಿಕೊಂಡು, ಯಾರಿಗೂ ಹೇಳಬೇಡ ಅಂತಾ ಎಚ್ಚರಿಕೆ ನೀಡಿ, ಹಲ್ಲೆ ಮಾಡಿದ್ದಾನೆಂದು ಮಗಳು ಕಣ್ಣಿರಿಟ್ಟಿದ್ದಾಳೆ ಎಂದು ಸಂತ್ರಸ್ತ ಬಾಲಕಿ ಪೋಷಕರು ದೂರಿದ್ದಾರೆ.

    ಈ ಸಂಬಂಧ ಚಾಲಕನ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಶಾಲೆಯ ಆಡಳಿತ ಮಂಡಳಿಗೆ ದೂರು ದಾಖಲಾಗಿತ್ತು. ಆದರೆ ಅವರು ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಳ್ಳಲಿಲ್ಲ. ಹೀಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತ ಬಾಲಕಿ ಕುಟುಂಬಸ್ಥರು ಗುರುವಾರ ದೂರು ನೀಡಿದ್ದಾರೆ ಎಂದು ಗೌತಮ್ ಬುದ್ಧನಗರ ಗ್ರಾಮಾಂತರ ಪೊಲೀಸ್ ಅಧೀಕ್ಷಕ ವಿನೀತ್ ಜೈಸ್ವಾಲ್ ತಿಳಿಸಿದ್ದಾರೆ.

    ಈ ಸಂಬಂಧ ಚಾಲಕನ ವಿರುದ್ಧ ಪೊಕ್ಸೋ ಕಾಯ್ದೆ ಅಡಿ ಸುರಜ್‍ಪುರ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಬಾಲಕಿಯನ್ನು ಶುಕ್ರವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಇತ್ತ ಆರೋಪಿ ಚಾಲಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • `15 ದಿನ ಮೊದಲ ಪತಿಯ ಜೊತೆ 15 ದಿನ ಎರಡನೆಯ ಪತಿ ಜೊತೆ ಸಂಸಾರ ಮಾಡು’

    `15 ದಿನ ಮೊದಲ ಪತಿಯ ಜೊತೆ 15 ದಿನ ಎರಡನೆಯ ಪತಿ ಜೊತೆ ಸಂಸಾರ ಮಾಡು’

    – ಉತ್ತರ ಪ್ರದೇಶ ಪಂಚಾಯತ್ ನಿಂದ ವಿಚಿತ್ರ ಆದೇಶ

    ಲಕ್ನೋ: 15 ದಿನ ಮೊದಲ ಪತಿಯ ಜೊತೆ ಇನ್ನುಳಿದ 15 ದಿನ ಎರಡನೆಯ ಪತಿ ಜೊತೆ ಸಂಸಾರ ಮಾಡು ಎಂದು ವಿಚಿತ್ರವಾದ ತೀರ್ಪನ್ನ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಪಂಚಾಯತ್ ನೀಡಿದೆ.

    2012 ರಲ್ಲಿ ಮಹಿಳೆಯೊಬ್ಬರು ಲಾಯಕ್ ಎಂಬುವ ವ್ಯಕ್ತಿಯನ್ನ ಮದುವೆಯಾಗಿ, ಒಂದು ಮಗುವನ್ನ ಪಡೆದಿದ್ದರು. ಮಗು ಜನಿಸಿದ ಕೆಲವು ತಿಂಗಳಿನಲ್ಲಿ ವರದಕ್ಷಿಣೆಯ ಕಾರಣದಿಂದ ಲಾಯಕ್ ತನ್ನ ಪತ್ನಿಗೆ 2015ರಲ್ಲಿ ವಿಚ್ಛೇದನ ನೀಡಿದ್ದ.

    ಗಂಡನಿಂದ ಬೇರೆಯಾದ ಮಹಿಳೆ ಮಗುವಿನೊಂದಿಗೆ ತನ್ನ ತವರು ಮನೆಗೆ ಹಿಂದಿರುಗಿದ್ದಳು. 2017 ರಲ್ಲಿ ಮನೆಯವರು ಆಕೆಗೆ ಅದೇ ಊರಿನ ವ್ಯಕ್ತಿಯ ಜೊತೆ ಎರಡನೇ ಮದುವೆ ಮಾಡಿದ್ದರು. ಆದರೆ ಮೊದಲನೆಯ ಪತಿಯಾದ ಲಾಯಕ್ ಮಗುವನ್ನ ತನ್ನಿಂದ ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾನೆ ಎಂದು ಮಹಿಳೆ ದೂರಿದ್ದಾರೆ.

    ಈ ವಿಚಾರವಾಗಿ ಪೊಲೀಸರಿಗೆ ದೂರು ಸಲ್ಲಿಸಿದರೂ ಯಾವುದೇ ಸಹಾಯ ದೊರಕದ ಕಾರಣ, ಸ್ಥಳೀಯ ಪಂಚಾಯತ್ ನ ಮೊರೆ ಹೋಗಿದ್ದರು. ಈಕೆಯ ದೂರನ್ನು ಪರಿಗಣಿಸಿ ಕಾಪ್ ಪಂಚಾಯತ್ 15 ದಿನ ಮೊದಲ ಪತಿಯ ಜೊತೆ ಇನ್ನುಳಿದ 15 ದಿನ ಎರಡನೆಯ ಪತಿಯ ಜೊತೆ ಸಂಸಾರ ಮಾಡು ಎಂದು ವಿಚಿತ್ರವಾದ ಆದೇಶವನ್ನು ನೀಡಿದೆ.

    ಈ ಆದೇಶದ ಬಳಿಕ ಮಹಿಳೆ ಸಾಮಾಜಿಕ ಕಾರ್ಯಕರ್ತರ ಮೊರೆ ಹೋಗಿದ್ದು, ಅವರು ಪೊಲೀಸರಿಂದ ಸಹಾಯ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv