Tag: uttar pradesh

  • ಕಾಶ್ಮೀರಿ ವ್ಯಾಪಾರಿಗಳಿಗೆ ಮನಬಂದಂತೆ ಥಳಿಸಿದ ಸಾಮಾಜಿಕ ಕಾರ್ಯಕರ್ತರು – ವಿಡಿಯೋ

    ಕಾಶ್ಮೀರಿ ವ್ಯಾಪಾರಿಗಳಿಗೆ ಮನಬಂದಂತೆ ಥಳಿಸಿದ ಸಾಮಾಜಿಕ ಕಾರ್ಯಕರ್ತರು – ವಿಡಿಯೋ

    ಲಕ್ನೋ: ಕಾಶ್ಮೀರ ಮೂಲದ ಇಬ್ಬರು ವ್ಯಾಪಾರಿಗಳಿಗೆ ಕೆಲ ಸಾಮಾಜಿಕ ಕಾರ್ಯಕರ್ತರು ನಡುರಸ್ತೆಯಲ್ಲೇ ಥಳಿಸಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಬುಧವಾರ ಸಂಜೆ ಸುಮಾರು 5 ಗಂಟೆ ಹೊತ್ತಿಗೆ ಲಕ್ನೋನ ಡಾಲಿಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ದೃಶ್ಯವನ್ನು ಕೆಲವರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    2 ಕಾಶ್ಮೀರಿ ವ್ಯಾಪಾರಿಗಳಿಗೆ ದೊಣ್ಣೆ ಹಿಡಿದು ಒಬ್ಬ ವ್ಯಕ್ತಿ ಥಳಿಸುತ್ತಿರುವ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ. ಕೇಸರಿ ಬಣ್ಣದ ಬಟ್ಟೆ ಧರಿಸಿದ್ದ ಗುಂಪೊಂದು ವ್ಯಾಪಾರಿಗಳಿಗೆ ಮನಬಂದಂತೆ ಥಳಿಸಿದ್ದಾರೆ. ಈ ವೇಳೆ ಯಾಕೆ ನಮ್ಮನ್ನು ಹೊಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ, ನೀವು ಕಾಶ್ಮೀರದವರು ಅದಕ್ಕೆ ನಿಮ್ಮನ್ನು ಹೊಡೆಯುತ್ತಿದ್ದೇವೆ ಅಂತ ಆರೋಪಿಗಳು ಉತ್ತರಿಸಿದ್ದಾರೆ. ಈ ವಿಡಿಯೋ ಆಧಾರದ ಮೇಲೆ ಈಗಾಗಲೇ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿ, ಉಗ್ರರು ಮಾಡಿರುವ ದಾಳಿಗೆ ಅಮಾಯಕರನ್ನು ಸಿಕ್ಷಿಸುವುದು ತಪ್ಪು. ಈ ರೀತಿ ಮಾಡಿ ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ. ಸುಮ್ಮನೆ ಅಮಾಯಕರಿಗೆ ತೊಂದರೆ ಕೊಡಬೇಡಿ ಅಂತ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಪ್ಪಲಿಯಲ್ಲಿ ಬಡಿದಾಡಿದ ಬಿಜೆಪಿಯ ಸಂಸದ ಮತ್ತು ಶಾಸಕ – ವಿಡಿಯೋ ವೈರಲ್

    ಚಪ್ಪಲಿಯಲ್ಲಿ ಬಡಿದಾಡಿದ ಬಿಜೆಪಿಯ ಸಂಸದ ಮತ್ತು ಶಾಸಕ – ವಿಡಿಯೋ ವೈರಲ್

    ಲಕ್ನೋ: ಸಭೆಯಲ್ಲಿ ಉತ್ತರಪ್ರದೇಶದ ಬಿಜೆಪಿ ಸಂಸದ ಮತ್ತು ಶಾಸಕರು ಚಪ್ಪಲಿಯಲ್ಲಿ ಬಡಿದಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರಾಜಧಾನಿ ಲಕ್ನೋದಿಂದ 200 ಕಿ.ಮೀ ದೂರದಲ್ಲಿರುವ ಕಬಿರ್ ನಗರದಲ್ಲಿ ಇಂದು ವಿವಿಧ ಯೋಜನೆ ಸಂಬಂಧ ಸಭೆಯನ್ನು ಆಯೋಜಿಸಿಲಾಗಿತ್ತು. ಈ ಸಭೆಯ ವರದಿಗೆ ಮಾಧ್ಯಮಗಳನ್ನು ಆಹ್ವಾನಿಸಲಾಗಿತ್ತು. ಕಾಮಗಾರಿಗಳ ಕುರಿತು ನಡೆದ ಸಭೆಯಲ್ಲಿ ಸಂಸದ ಶರದ್ ತ್ರಿಪಾಠಿ, ನಾನು ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ಶಂಕುಸ್ಥಾಪನಾ ಸಮಾರಂಭದ ವೇಳೆ ನನ್ನ ಹೆಸರನ್ನು ಕೈ ಬಿಟ್ಟಿದ್ದು ಯಾಕೆ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಶಾಸಕ ರಾಕೇಶ್ ಸಿಂಗ್ ಬಘೇಲ್ ಇದು ನನ್ನ ನಿರ್ಧಾರ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಜಗಳ ಆರಂಭವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಶರದ್ ತ್ರಿಪಾಠಿ  ಚಪ್ಪಲಿ ತೆಗೆದುಕೊಂಡು ಬಘೇಲ್ ಗೆ ಹೊಡೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಬಘೇಲ್ ಅವರು  ತ್ರಿಪಾಠಿ ಕುಳಿತ್ತಿದ್ದ ಸ್ಥಳಕ್ಕೆ ತೆರಳಿ ಹೊಡೆದಿದ್ದಾರೆ.

    ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಎಂಎನ್ ಪಾಂಡೆ ಪ್ರತಿಕ್ರಿಯಿಸಿ, ಇದು ನಿಜಕ್ಕೂ ಖಂಡನೀಯ. ಇಬ್ಬರನ್ನು ಲಕ್ನೋ ಬರುವಂತೆ ಸಮನ್ಸ್ ಜಾರಿ ಮಾಡಲಾಗಿದ್ದು, ಶಿಸ್ತು ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಲ್ವಾಮಾದಲ್ಲಿ ನಡೆದಿದ್ದು ದೊಡ್ಡ ಅಪಘಾತ: ಯುಪಿ ಡಿಸಿಎಂ

    ಪುಲ್ವಾಮಾದಲ್ಲಿ ನಡೆದಿದ್ದು ದೊಡ್ಡ ಅಪಘಾತ: ಯುಪಿ ಡಿಸಿಎಂ

    ಲಕ್ನೋ: ಪುಲ್ವಾಮಾದಲ್ಲಿ ನಡೆದಿದ್ದು ದೊಡ್ಡ ಅಪಘಾತ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿರುವ ವಿಡಿಯೋ ವೈರಲ್ ಆಗಿದೆ.

    ಫೆಬ್ರವರಿ 21ರಂದು ಕೇಶವ್ ಪ್ರಸಾದ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಹರಿಯಾಣದ ರೋಹ್ಟಕ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಪುಲ್ವಾಮಾ ದಾಳಿಯ ಭದ್ರತೆಯ ವೈಫಲ್ಯದಿಂದ ನಡೆದಿದೆ ಎಂದು ವಿಪಕ್ಷಗಳು ಆರೋಪಿಸುತ್ತವೆ. ಇಲ್ಲಿ ಭದ್ರತೆ ಲೋಪದ ಮಾತು ಬರಲ್ಲ. ಇದೊಂದು ದೊಡ್ಡ ಅಪಘಾತವಾಗಿದ್ದು, ನಮ್ಮ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದರು.

    ಪುಲ್ವಾಮಾದಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರರು ನಡೆಸಿರುವ ಆತ್ಮಾಹುತಿ ದಾಳಿಯಲ್ಲಿ ಸಿಆರ್ ಪಿಎಫ್ 40 ಸೈನಿಕರು ಹುತಾತ್ಮರಾಗಿದ್ದರು. ಇದಾದ ಬಳಿಕ ಭಾರತ ಪ್ರತಿಕಾರವಾಗಿ ಪಾಕ್ ಗಡಿ ಪ್ರವೇಶಿಸಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿತ್ತು. ವಿಪಕ್ಷಗಳು ಭಾರತೀಯ ವಾಯುಪಡೆ ನಡೆಸಿರುವ ದಾಳಿಗೆ ಸಾಕ್ಷಿ ನೀಡಬೇಕೆಂದು ಆಗ್ರಹಿಸಿದ್ದವು. ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪುಲ್ವಾಮಾದಲ್ಲಿ ನಡೆದಿದ್ದು ಅಪಘಾತ ಎಂಬ ಹೇಳಿಕೆ ನೀಡಿದ್ದರು. ದಿಗ್ವಿಜಯ್ ಸಿಂಗ್ ಹೇಳಿಕೆ ಬಿಜೆಪಿ ನಾಯಕರು ಕಿಡಿಕಾರಿದ್ದರು.

    ರಾಜೀವ್ ಗಾಂಧಿ ಹತ್ಯೆಯನ್ನು ಆಕ್ಸಿಡೆಂಟ್ ಅಂತಾ ಕರೆದ್ರೆ ಹೇಗಿರುತ್ತೆ? ಕಾಂಗ್ರೆಸ್ ಸೇನೆಯ ನೈತಿಕ ಸ್ಥೈರ್ಯ ಕುಗ್ಗಿಸೋ ಕೆಲಸ ಮಾಡ್ತಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕಿಡಿಕಾರಿದ್ದರು. ಇದೀಗ ಅವರದೇ ಪಕ್ಷದ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿಗಳಾಗಿರುವ ಕೇಶವ್ ಪ್ರಸಾದ್ ಹೇಳಿಕೆ ಬಿಜೆಪಿಗೆ ಮುಜುಗರವನ್ನುಂಟು ಮಾಡಿದೆ.

    ಪುಲ್ವಾಮಾ ಭೀಕರ ಉಗ್ರದಾಳಿಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ದಾಳಿಯ ಮಾಸ್ಟರ್‍ಮೈಂಡ್ ಜೈಷ್ ಸಂಘಟನೆಯ ಮಸೂದ್ ಅಜರ್ ಸಹೋದರ ಅಸ್ಗರ್ ಹಾಗೂ ಪುತ್ರನನ್ನು ಪಾಕಿಸ್ತಾನ ಸರ್ಕಾರ ಬಂಧಿಸಿದೆ. ಮಸೂದ್ ಸಹೋದರ ಅಸ್ಘರ್, ಹಾಗು ಪುತ್ರ ಹಂಝು ಅಜರ್‍ನನ್ನು ಪಾಕ್ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪುಲ್ವಾಮಾ ದಾಳಿಗೆ ಸಂಬಂಧಿಸಿ ಇದುವರೆಗೆ 44 ಮಂದಿಯನ್ನು ಬಂಧಿಸಿರುವುದಾಗಿ ಪಾಕ್ ಸರ್ಕಾರ ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಮೇಡ್ ಇನ್ ಅಮೇಥಿ’ ಎಕೆ203 ರೈಫಲ್ – ಉಗ್ರ ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ: ಪ್ರಧಾನಿ ಮೋದಿ

    ‘ಮೇಡ್ ಇನ್ ಅಮೇಥಿ’ ಎಕೆ203 ರೈಫಲ್ – ಉಗ್ರ ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ: ಪ್ರಧಾನಿ ಮೋದಿ

    ಅಮೇಥಿ: ರಾಹುಲ್ ಗಾಂಧಿ ಸ್ವಕ್ಷೇತ್ರ ಅಮೇಥಿಯ ಸಮಾವೇಶದಲ್ಲಿ ಪ್ರಧಾನಿ ಮೋದಿ ಘರ್ಜಿಸಿದ್ದು, ಇನ್ನು ಮುಂದೇ ಅಮೇಥಿ ಒಂದು ಕುಟುಂಬ ಬದಲು ‘ಮೇಡ್ ಇನ್ ಅಮೇಥಿ ಎಕೆ-203’ ಹೆಸರನಿಂದ ಗುರುತಿಸಲಾಗುತ್ತದೆ ಎಂದು ಹೇಳಿದ್ದಾರೆ.

    ಅಮೇಥಿಯ ಸಮಾವೇಶದಲ್ಲಿ ಮಾತನಾಡಿದ ಅವರು, ರಷ್ಯಾದ ಸಹಭಾಗಿತ್ವದಲ್ಲಿ ಸ್ಥಾಪಿಸಲಾದ ಕಲಾಶ್ನಿಕೋವ್ ರೈಫಲ್ಸ್ ಘಟಕದಲ್ಲಿ ಅತ್ಯಾಧುನಿಕ ಎಕೆ-203 ರೈಫಲ್‍ಗಳನ್ನು ಉತ್ಪಾದಿಸಲಾಗುತ್ತಿದೆ. ಈ ಘಟಕ ಭಯೋತ್ಪಾದಕರು ಮತ್ತು ಮಾವೋವಾದಿಗಳ ವಿರುದ್ಧ ಹೋರಾಡಲು ನಮ್ಮ ಯೋಧರಿಗೆ ಹೊಸ ಶಕ್ತಿ ನೀಡುತ್ತದೆ ಎಂದು ಹೇಳಿದರು.

    ಇತ್ತ ಇಂದು ಕೂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ ನಡುವಿನ ರಫೇಲ್ ವಾರ್ ಮುಂದುವರಿಯಿತು. ಉತ್ತರ ಪ್ರದೇಶದ ರಾಹುಲ್ ಸ್ವಕ್ಷೇತ್ರ ಅಮೇಥಿಯ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶ ನಡೆಸಿದರು. ಅಲ್ಲದೇ ಉಗ್ರರ ಧಮನಕ್ಕೆ ಮೇಡ್ ಇನ್ ಅಮೇಥಿ ನಮ್ಮ ಯೋಧರಿಗೆ ಬಲ ನೀಡಲಿದೆ ಎಂದು ಟಾಂಗ್ ಕೊಟ್ಟರು.

    ಅಮೇಥಿಯಲ್ಲಿ ಕಾರ್ಖಾನೆ ಸ್ಥಾಪನೆ ಮಾಡಲು 2007ರಲ್ಲೆ ಶಂಕು ಸ್ಥಾಪನೆ ಮಾಡಿ 2010 ರಲ್ಲಿ ಕಾರ್ಯಾಣೆಯ ಕಾಮಗಾರಿ ಆರಂಭವಾಗಲಿದೆ ಎಂದಿದ್ದರು. ಆದರೆ ಅಂದು ಇಲ್ಲಿ ಯಾವ ಶಸ್ತ್ರಸ್ತ್ರಗಳನ್ನು ಉತ್ಪಾದನೆ ಮಾಡಬೇಕೆಂದು ಅಂದಿನ ಸರ್ಕಾರ ನಿರ್ಧಾರ ಮಾಡಿಯೇ ಇರಲಿಲ್ಲ ಎಂದು ಮೋದಿ ಆರೋಪಿಸಿದರು. ಇದೇ ವೇಳೆ ಕಾರ್ಖಾನೆ ಸ್ಥಾಪನೆ ಮಾಡಲು ಸಹಕಾರ ನೀಡಿದ್ದ ರಷ್ಯಾ ಅಧ್ಯಕ್ಷ ಪುಟಿನ್ ಅವರ ಕಾರ್ಯವನ್ನು ಮೆಚ್ಚಿ ಕೃತಜ್ಞನೆ ಸಲ್ಲಿಸಿದರು.

    7.62-39 ಎಂಎಂ ಕ್ಯಾಲಿಬರ್ ಎಕೆ-204 ಗನ್ ಗಳು ಎಕೆ-47 ಸರಣಿಯ ಅತ್ಯಾಧುನಿಕ ತಲೆಮಾರಿನ ಅಸ್ತ್ರಗಳಾಗಿವೆ. 7.50 ಲಕ್ಷ ಎಕೆ-203 ರೈಫಲ್ ಗಳ ಉತ್ಪಾದನೆಗೆ ರಷ್ಯಾ ಜತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಬಂದೂಕುಗಳನ್ನು ಭೂ ಸೇನೆ ಯೋಧರಿಗೆ ನೀಡಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅತ್ತಿಗೆಯನ್ನ ಪತ್ನಿಯಾಗಿ ನೋಡಲು ಇಚ್ಚಿಸಿದ ಬಾಮೈದನ ರುಂಡವೇ ಕಟ್!

    ಅತ್ತಿಗೆಯನ್ನ ಪತ್ನಿಯಾಗಿ ನೋಡಲು ಇಚ್ಚಿಸಿದ ಬಾಮೈದನ ರುಂಡವೇ ಕಟ್!

    ಲಕ್ನೋ: ವ್ಯಕ್ತಿಯೊಬ್ಬ ತನ್ನ ಅತ್ತಿಗೆಯ ಮೇಲೆ ಕಣ್ಣಾಕಿದ್ದು, ಕೊನೆಗೆ ಅಣ್ಣ ಮತ್ತು ಆತನ ಸ್ನೇಹಿತರಿಂದಲೇ ಕೊಲೆಯಾಗಿರುವ ಘಟನೆ ಉತ್ತರ ಪ್ರದೇಶದ ಬಿಜನೋರ್ ನಲ್ಲಿ ನಡೆದಿದೆ.

    ಕೆಲ ದಿನಗಳ ಹಿಂದೆ ಬಿಜನೋರ್ ತೋಟವೊಂದರಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದ್ದರು. ಮೃತ ವ್ಯಕ್ತಿಯನ್ನು ಕಮಿಲ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಕಮಿಲ್ ತನ್ನ ಅತ್ತಿಗೆಯನ್ನು ಪತ್ನಿಯಾಗಿ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದ. ಒಂದೆರೆಡು ಬಾರಿ ಅತ್ತಿಗೆ ಮೇಲೆ ಬಲತ್ಕಾರ ಸಹ ಮಾಡಿದ್ದನು. ಬಾಮೈದನ ಕಿರುಕುಳ ಹೆಚ್ಚಾಗುತ್ತಿದ್ದಂತೆ ಮಹಿಳೆ ತನ್ನ ಮೇಲಾಗುತ್ತಿರುವ ದೌರ್ಜನ್ಯವನ್ನು ಪತಿ ದಿಲ್‍ಶಾದ್‍ಗೆ ತಿಳಿಸಿದ್ದಾಳೆ. ಈ ಸಂಬಂಧ ಕಮಿಲ್ ಮತ್ತು ಆತನ ಅಣ್ಣನ ನಡುವೆ ಜಗಳ ಸಹ ನಡೆದಿದೆ. ತಮ್ಮನ ಅತಿರೇಕ ಹೆಚ್ಚಾಗುತ್ತಿದ್ದಂತೆ ದಿಲ್‍ಶಾದ್ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಕೊಲೆಯ ಸಂಚು ರೂಪಿಸಿದ್ದಾನೆ. ಪತಿಯ ಸಂಚಿಗೆ ಪತ್ನಿ ಸಹ ಸಾಥ್ ನೀಡಿದ್ದಾಳೆ.

    ದಿಲ್‍ಶಾದ್ ತನ್ನ ಸ್ನೇಹಿತರೊಂದಿಗೆ ಕೆಲವು ದಿನಗಳ ಹಿಂದೆ ಕಮಿಲ್ ನ ಕತ್ತು ಕತ್ತರಿಸಿ ಕೊಲೆ ಮಾಡಿ ಸಮೀಪದ ಖಾಲಿ ಜಮೀನಿನಲ್ಲಿ ಶವ ಬಿಸಾಡಿದ್ದರು. ಶವ ಪತ್ತೆಯಾದ ಬಳಿಕ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡು ಘಟನೆಯನ್ನು ವಿವರಿಸಿದ್ದಾರೆ. ದಿಲ್‍ಶಾದ್, ಆತನ ಪತ್ನಿ ಮತ್ತು ಓರ್ವನನ್ನು ಬಂಧಿಸಲಾಗಿದೆ. ಇನ್ನಿಬ್ಬರು ಪರಾರಿಯಾಗಿದ್ದು, ಬಂಧನಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಎಸ್.ಪಿ ಸಂಜೀವ್ ತ್ಯಾಗಿ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಸ್, ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್‌ ಜೊತೆಗೆ ನಮಗೆ ಸಂಪರ್ಕವಿತ್ತು: ಬಂಧಿತ ಕಾಶ್ಮೀರಿ ಉಗ್ರರು

    ಯಸ್, ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್‌ ಜೊತೆಗೆ ನಮಗೆ ಸಂಪರ್ಕವಿತ್ತು: ಬಂಧಿತ ಕಾಶ್ಮೀರಿ ಉಗ್ರರು

    ಲಕ್ನೋ: ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ದಾಳಿ ನಡೆಸಲು ಸ್ಕೆಚ್ ಹಾಕಿದ್ದ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘನಿ ಜೊತೆ ನಮಗೆ ಸಂಪರ್ಕ ಇತ್ತು ಎನ್ನುವುದನ್ನು ಇಬ್ಬರು ಉಗ್ರರು ಉತ್ತರ ಪ್ರದೇಶದ ಭಯೋತ್ಪದನಾ ನಿಗ್ರಹ ದಳ (ಎಟಿಎಸ್) ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.

    ಪುಲ್ವಾಮಾ ದಾಳಿ ಬಳಿಕ ಪೊಲೀಸರು ಶಂಕೆ ಆಧಾರದ ಹಿನ್ನೆಲೆಯಲ್ಲಿ ಕಾಶ್ಮೀರ ಕುಲ್ಗಾವ್ ಮೂಲದ ಶಹಾನವಾಜ್ ಮತ್ತು ಪುಲ್ವಾಮಾದ ಅಬ್ದುಲ್ ಮಲ್ಲಿಕ್ ರನ್ನು ಬಂಧಿಸಿದ್ದರು. ಬಂಧಿತರ ವಿಚಾರಣೆ ವೇಳೆ ಇಬ್ಬರು ನಿಷೇಧಿತ ಜೈಷ್-ಇ-ಮೊಹಮ್ಮದ್ ಸಂಘಟನೆಯ ಜೊತೆ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ.

    ತನಿಖಾ ಅಧಿಕಾರಿಗಳು ಭಯೋತ್ಪಾದಕರು ಹಾಗೂ ಶಂಕಿತ ನಡುವಿನ ನಡೆದ ಸಂಭಾಷಣೆಯಲ್ಲಿ ದೊಡ್ಡ ದಾಳಿ ನಡೆಸುವ ಹಾಗೂ ದಾಳಿ ನಡೆಸಲು ಬಳಸಬೇಕಾದ ವಸ್ತುಗಳ ಬಗ್ಗೆ ಮಾತನಾಡಿದ್ದೇವೆ ಎಂದು ತಿಳಿಸಿದ್ದು, ಫೋನಿನಲ್ಲಿ ಧ್ವನಿ ಸಂದೇಶ ರವಾನೆ ಮಾಡುವ ಮೂಲಕ ಮಾತುಕತೆ ನಡೆಸಿದ್ದಾರೆ.

    ಉತ್ತರ ಪ್ರದೇಶದ ಡಿಜಿಪಿ ಒಪಿ ಸಿಂಗ್ ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ವೇಳೆ ಆರೋಪಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಉತ್ತರ ಪ್ರದೇಶ ಪೊಲೀಸರು ಜಮ್ಮು ಕಾಶ್ಮೀರದ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ತನಿಖೆಯ ಮಾಹಿತಿಯನ್ನು ರವಾನಿಸಿದ್ದಾರೆ.

    ಬಹುಮುಖ್ಯ ಶಂಕಿತ ಶಹಾನವಾಜ್ ಕಳೆದ 18 ತಿಂಗಳಿನಿಂದ ಉಗ್ರರೊಂದಿಗೆ ಸಂಪರ್ಕದಲ್ಲಿರುವ ಬಗ್ಗೆ ಹೇಳಿದ್ದು, ಮತ್ತೊಬ್ಬ ಆರೋಪಿ ಅಬ್ದುಲ್ ಮಲ್ಲಿಕ್ ಕಳೆದ 6 ತಿಂಗಳ ಹಿಂದೆಯಷ್ಟೇ ಸಂಪರ್ಕಕ್ಕೆ ಬಂದಿರುವ ಬಗ್ಗೆ ತಿಳಿಸಿದ್ದಾಗಿ ಪೊಲೀಸ್ ಅಧಿಕಾರಿ ಅರುಣ್ ಮಾಹಿತಿ ನೀಡಿದ್ದಾರೆ. ಅಲ್ಲದೇ ಪುಲ್ವಾಮಾ ದಾಳಿಯ ಬಳಿಕ ಭಾರತ ಯೋಧರ ಎನ್‍ಕೌಂಟರ್ ನಲ್ಲಿ ಸಾವನ್ನಪ್ಪಿದ ಘಜಿ ಜೊತೆಗೆ ಸಂಪರ್ಕ ಇದ್ದಿದ್ದಾಗಿ ಶಹಾನವಾಜ್ ಒಪ್ಪಿಕೊಂಡಿದ್ದಾನೆ.

    ಈ ಇಬ್ಬರು ಯುವಕರನ್ನು ಜೈಶ್ ಸಂಘಟನೆ ಟಾಪ್ ಕಮಾಂಡರ್ ಗಳು ಸಂಘಟನೆಗೆ ಸೇರಿಸಿಕೊಳ್ಳಲು ಸಂಪರ್ಕಿಸಿದ್ದರು. ನಿಮ್ಮಿಂದ ಏನು ಮಾಡಲು ಸಾಧ್ಯ ಎಂದು ತಿಳಿಸಿ ಎಂಬ ಸಂದೇಶ ಹಾಗೂ ಕೃತ್ಯ ನಡೆಸಲು ಬೇಕಾದ ಆಯುಧಗಳನ್ನು ಎಲ್ಲಿ ಪಡೆಯಬೇಕು ಎಂಬ ಬಗ್ಗೆಯೂ ಮಾಹಿತಿ ಪಡೆದಿದ್ದರು. ಆದರೆ ಈ ಪ್ಲಾನ್ ಇನ್ನು ಪ್ರಗತಿಯಲ್ಲಿತ್ತು ಎಂದು ಐಜಿ ವಿವರಿಸಿದ್ದಾರೆ.

    ಬಂಧಿತರಿಬ್ಬರು ಧ್ವನಿ ಸಂದೇಶ ಮಾತ್ರವಲ್ಲದೇ ಬಿಬಿಎಂ ಮೇಸೆಂಜರ್ ಬಳಕೆ ಮಾಡಿ ಸಂವಹನ ನಡೆಸಿದ್ದು, ತಮ್ಮ ಗುರುತು ಪತ್ತೆ ಆಗದಿರಲು ಈ ತಂತ್ರ ಬಳಸಿದ್ದಾರೆ. ಸದ್ಯ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಕಾಶ್ಮೀರಕ್ಕೆ ಕರೆದೊಯ್ಯಲಾಗುತ್ತದೆ ಎಂದು ತಿಳಿಸಿದ್ದಾರೆ.

    ಶಹಾನವಾಜ್ ಬಿಎ ಮೊದಲ ವರ್ಷ ಹಾಗೂ ಕಂಪ್ಯೂಟರ್ ಕೋರ್ಸ್ ಪೂರ್ಣಗೊಳಿಸಿದ್ದಾನೆ. ಆತನ ತಂದೆ ಕಾರ್ಪೆಂಟರ್ ಆಗಿದ್ದು, ಸಹೋದರ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಅಬ್ದುಲ್ ಮಲ್ಲಿಕ್ 12ನೇ ತರಗತಿಯನ್ನು ಪಾಸ್ ಮಾಡಿದ್ದು, ಆತನ ತಂದೆ ರೈತರಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಇಬ್ಬರೊಂದಿಗೂ ಓದಿದ ಇತರೆ ವಿದ್ಯಾರ್ಥಿಗಳನ್ನು ಕೂಡ ತನಿಖೆಗೆ ಒಳಪಡಿಸಲು ಎಟಿಎಸ್ ನಿರ್ಧಾರ ಮಾಡಿದೆ.

    ಶಹಾನವಾಜ್ ಅಹ್ಮದ್ ಗ್ರೆನೇಡ್ ಸ್ಫೋಟದಲ್ಲಿ ಪರಿಣತನಾಗಿದ್ದಾನೆ. ಬಂಧಿತ ಶಾನವಾಜ್ ಪುಲ್ವಾಮಾ ದಾಳಿಯ ಹೊಣೆ ಹೊತ್ತಿರುವ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಹೊಸದಾಗಿ ನೇಮಕಗೊಂಡಿದ್ದಾನೆ. ಪುಲ್ವಾಮಾ ದಾಳಿಗೂ ಮುನ್ನ ಹಾಗೂ ನಂತರ ಬಂಧಿತ ಉಗ್ರರು ಉತ್ತರ ಪ್ರದೇಶಕ್ಕೆ ಬಂದಿದ್ದಾರೆ ಎಂದು ಹೇಳುವುದು ಕಷ್ಟ. ಉಗ್ರ ಸಂಘಟನೆಯ ಜೊತೆ ನಂಟು ಹೊಂದಿರುವುದಕ್ಕೆ ನಮಗೆ ಹಲವಾರು ಸಾಕ್ಷ್ಯಗಳು ಸಿಕ್ಕಿವೆ. ಆದರೆ ಅವುಗಳನ್ನು ಈಗ ಬಹಿರಂಗ ಪಡಿಸುವುದಿಲ್ಲ. ಈ ಸಂಬಂಧ ತನಿಖೆ ಆರಂಭವಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥ ಓ.ಪಿ. ಸಿಂಗ್ ಶುಕ್ರವಾರ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಲ್ವಾಮಾ ದಾಳಿ ಬಗ್ಗೆ ಕೇಳಿದ್ದಕ್ಕೆ ವೇದಿಕೆಯಲ್ಲಿ ಕಣ್ಣೀರಿಟ್ಟ ಯುಪಿ ಸಿಎಂ

    ಪುಲ್ವಾಮಾ ದಾಳಿ ಬಗ್ಗೆ ಕೇಳಿದ್ದಕ್ಕೆ ವೇದಿಕೆಯಲ್ಲಿ ಕಣ್ಣೀರಿಟ್ಟ ಯುಪಿ ಸಿಎಂ

    ಲಕ್ನೋ: ವಿದ್ಯಾರ್ಥಿಯೊಬ್ಬ ಪುಲ್ವಾಮಾ ದಾಳಿಯ ಬಗ್ಗೆ ಕೇಳಿದ್ದಕ್ಕೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ವೇದಿಕೆ ಮೇಲೆಯೇ ಕಣ್ಣೀರಿಟ್ಟಿದ್ದಾರೆ.

    ಲಕ್ನೋದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಎಂಜನಿಯರಿಂಗ್ ವಿದ್ಯಾರ್ಥಿಗಳ ಜೊತೆಗೆ ‘ಯುವ್ ಕೆ ಮನ್ ಕಿ ಬಾತ್’ ಸಂವಾದದಲ್ಲಿ ಶುಕ್ರವಾರ ನಡೆಸಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಎದ್ದು ನಿಂತು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪುಲ್ವಾಮಾ ಉಗ್ರರ ವಿರುದ್ಧ ಯಾವ ಕ್ರಮಕೈಗೊಳ್ಳುತ್ತಿದೆ. ಉಗ್ರ ಸಂಘಟನೆಗಳು ನಮ್ಮ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಕೇಳಿದ.

    ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ದಾಳಿ ಉಗ್ರರ ಮುಳುಗಡೆಯ ಸೂಚಕವಾಗಿದೆ. ಈ ಮೂಲಕ ಭಯೋತ್ಪಾದನೆ ಕೊನೆಗೊಳ್ಳುವ ಹಂತ ತಲುಪಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೇ ಅದಕ್ಕೆ ಅಂತ್ಯ ಹಾಡುತ್ತಾರೆ ಎಂದು ಸಿಎಂ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದರು.

    ಈ ಮೂಲಕ ಯೋಗಿ ಆದಿತ್ಯನಾಥ್ ವಿದ್ಯಾರ್ಥಿಗಳಿಂದ ಮೆಚ್ಚುಗೆಯನ್ನು ಪಡೆದರು. ಆದರೆ ಮುಂದಿನ ಪ್ರಶ್ನೆಗೆ ಕಾಯುತ್ತಿದ್ದ ಅವರು ಭಾವನಾತ್ಮಕವಾಗಿ ಕಾಣಿಸಿಕೊಂಡರು. ಬಳಿಕ ತಮ್ಮ ಜೇಬಿನಲ್ಲಿದ್ದ ಕರವಸ್ತ್ರವನ್ನು ತೆಗೆದುಕೊಂಡು ಮೂಗು ಒರೆಸಿಕೊಳ್ಳುತ್ತ ಕಣ್ಣೀರು ಸುರಿಸಿ, ಮತ್ತೆ ಮೈಕ್ ಹಿಡಿದು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾದರು.

    ಪುಲ್ವಾಮಾ ದಾಳಿಯಿಂದಾಗಿ ಭದ್ರತಾ ಪಡೆಗಳು ಕಾರ್ಯಾಚರಣೆ ಚುರುಕುಗೊಳಿಸಿದ್ದವು. ಇದರಿಂದಾಗಿ ಕೇವಲ 48 ಗಂಟೆಗಳೊಳಗೆ ಸಂಚು ರೂಪಿಸಿದ್ದ ಉಗ್ರರನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದರು.

    ಪುಲ್ವಾಮಾ ದಾಳಿಯಲ್ಲಿ 40ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದಾರೆ. ಇದರಲ್ಲಿ ಉತ್ತರ ಪ್ರದೇಶದ 12 ಯೋಧರು ಕೂಡ ಇದ್ದಾರೆ ಎಂದು ಹೇಳಿದರು.

    ಬಂಧನದಲ್ಲಿರುವ ಇಬ್ಬರು ಶಂಕಿತ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಸದಸ್ಯರ ಕುರಿತು ಪ್ರತಿಕ್ರಿಯೆ ನೀಡಿದ ಯೋಗಿ ಆದಿತ್ಯನಾಥ್ ಅವರು, ರಾಜ್ಯದಲ್ಲಿ ಉಗ್ರರ ಬಂಧನಕ್ಕಾಗಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದೆವೆ. ಈ ನಿಟ್ಟಿನಲ್ಲಿ ಇಬ್ಬರನ್ನು ಬಂಧಿಸಿದ್ದು, ಪುಲ್ವಾಮಾ ದಾಳಿಗೆ ಸಂಬಂಧಿಸಿದ ಮಾಹಿತಿಯನ್ನು ಅವರಿಂದ ಪಡೆಯಲಾಗುತ್ತಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುಪಿಯಲ್ಲಿ ಇಬ್ಬರು ಜೈಶ್ ಉಗ್ರರು ಅರೆಸ್ಟ್: ಹ್ಯಾಂಡ್‍ಗನ್, ಬುಲೆಟ್ ವಶ

    ಯುಪಿಯಲ್ಲಿ ಇಬ್ಬರು ಜೈಶ್ ಉಗ್ರರು ಅರೆಸ್ಟ್: ಹ್ಯಾಂಡ್‍ಗನ್, ಬುಲೆಟ್ ವಶ

    ಲಕ್ನೋ: ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಜೊತೆ ನಂಟು ಹೊಂದಿದ್ದ ಇಬ್ಬರು ಉಗ್ರರನ್ನು ಉತ್ತರ ಪ್ರದೇಶದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

    ಜಮ್ಮು-ಕಾಶ್ಮೀರದ ಕುಲ್ಗಾಮ್ ನಿವಾಸಿ ಶಹಾನವಾಜ್ ಅಹ್ಮದ್ ಮತ್ತು ಪುಲ್ವಾಮಾದ ಅಕಿಬ್ ಅಹ್ಮದ್ ಮಲೀಕ್ ಬಂಧಿತ ಉಗ್ರರು. ಶಹಾನವಾಜ್ ಅಹ್ಮದ್ ಗ್ರೆನೇಡ್ ಸ್ಫೋಟದಲ್ಲಿ ಪರಿಣತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥ ಓ.ಪಿ. ಸಿಂಗ್ ಅವರು, ಈ ಇಬ್ಬರು ಉಗ್ರರು ಭಯೋತ್ಪಾದನ ನಿಗ್ರಹ ದಳವು (ಎಟಿಎಸ್) ದಿಯೋಬಂದ್ ಹಾಗೂ ಶಹರಾನ್ಪೂರದಲ್ಲಿ ಬಂಧಿಸಿದೆ. ಆರೋಪಿಗಳ ಬಳಿ ಇದ್ದ ಹ್ಯಾಂಡ್‍ಗನ್ ಹಾಗೂ ಬುಲೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಬಂಧಿತ ಶಾನವಾಜ್ ಪುಲ್ವಾಮಾ ದಾಳಿಯ ಹೊಣೆ ಹೊತ್ತಿರುವ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಹೊಸದಾಗಿ ನೇಮಕಗೊಂಡಿದ್ದಾನೆ. ಪುಲ್ವಾಮಾ ದಾಳಿಗೂ ಮುನ್ನ ಹಾಗೂ ನಂತರ ಬಂಧಿತ ಉಗ್ರರು ಉತ್ತರ ಪ್ರದೇಶಕ್ಕೆ ಬಂದಿದ್ದಾರೆ ಎಂದು ಹೇಳುವುದು ಕಷ್ಟ. ಉಗ್ರ ಸಂಘಟನೆಯ ಜೊತೆ ನಂಟು ಹೊಂದಿರುವುದಕ್ಕೆ ನಮಗೆ ಹಲವಾರು ಸಾಕ್ಷ್ಯಗಳು ಸಿಕ್ಕಿವೆ. ಆದರೆ ಅವುಗಳನ್ನು ಈಗ ಬಹಿರಂಗ ಪಡಿಸುವುದಿಲ್ಲ. ಈ ಸಂಬಂಧ ತನಿಖೆ ಆರಂಭವಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥ ಓ.ಪಿ. ಸಿಂಗ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿ ಮೋದಿಯಿಂದ ನನಸಾಗಲಿದೆ ಮಾಯಾವತಿ ಕನಸು!

    ಪ್ರಧಾನಿ ಮೋದಿಯಿಂದ ನನಸಾಗಲಿದೆ ಮಾಯಾವತಿ ಕನಸು!

    ಲಕ್ನೋ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಅನೇಕ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅಡಿಗಲ್ಲು ಹಾಕಲಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ವಿರೋಧಿಗಳಲ್ಲಿ ಒಬ್ಬರಾಗಿರುವ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ನಾಯಕಿ ಮಾಯಾವತಿ ಅವರ ಕನಸನ್ನು ನನಸು ಮಾಡಲು ಮುಂದಾಗಲಿದ್ದಾರೆ.

    ಸಂತ ರವಿದಾಸರ ಜನ್ಮಸ್ಥಳದಲ್ಲಿ ಸ್ಮಾರಕವನ್ನು ನಿರ್ಮಿಸಬೇಕು ಎನ್ನುವ ಕನಸನ್ನು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಹೊಂದಿದ್ದರು. ಆದರೆ ಅದು ಕನಸಾಗಿಯೇ ಉಳಿದಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯ ಸ್ಥಾಪನೆಗೆ ಅಡಿಗಲ್ಲು ಹಾಕಲಿದ್ದಾರೆ.

    1997ರಲ್ಲಿ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಅವರು ವಾರಣಾಸಿಯಲ್ಲಿ ಸಂತ ರವಿದಾಸ್ ಅವರ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದ್ದರು. ಆದರೆ ಮೈತ್ರಿ ಪಕ್ಷವಾಗಿದ್ದ ಸಮಾಜವಾದಿ ಪಾರ್ಟಿ ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ರವಿದಾಸ್ ಸ್ಮಾರಕ ನಿರ್ಮಾಣವನ್ನು ಕೈಬಿಡಲಾಗಿತ್ತು. ಈ ಯೋಜನೆಯನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಕೈಗೆತ್ತಿಕೊಂಡಿದ್ದು ಮಂಗಳವಾರ ಶಂಕುಸ್ಥಾಪನಾ ಕಾರ್ಯ ನಡೆಯಲಿದೆ.

    ಸಂತ ರವಿದಾಸ್ ಜಯಂತಿ ಮಂಗಳವಾರ ನಡೆಯಲಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಕೂಡ ಜಯಂತಿಯಲ್ಲಿ ಭಾಗವಹಿಸಿ ರವಿದಾಸ್ ಜನ್ಮಭೂಮಿ ಕ್ಷೇತ್ರ ವಿಕಾಸ ಪರಿಯೋಜನೆಗೆ ಅಡಿಗಲ್ಲು ಹಾಕಲಿದ್ದಾರೆ. ಈ ಯೋಜನೆ ಅಡಿಯಲ್ಲಿ ಪಾರ್ಕ್, ಒಂದು ಹಾಲ್ ಮತ್ತು ರವಿದಾಸ್ ಅವರ ಪ್ರತಿಮೆಯನ್ನು ನಿರ್ಮಿಸಲಾಗುತ್ತದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ವಾರಣಾಸಿಯ ಜಿಲ್ಲಾಧಿಕಾರಿ ಸುರೇಂದ್ರ ಸಿಂಗ್ ಅವರು, ಸಂತ ರವಿದಾಸ್ ಜನ್ಮಭೂಮಿ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ 46 ಕೋಟಿ ರೂ. ಮಂಜೂರು ಮಾಡಿದೆ. ಈ ಯೋಜನೆ ಎರಡು ಹಂತಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುತಾತ್ಮ ಯೋಧರ ಅಂತಿಮ ದರ್ಶನಕ್ಕೆ ಸೇರಿತು ಜನಸಾಗರ

    ಹುತಾತ್ಮ ಯೋಧರ ಅಂತಿಮ ದರ್ಶನಕ್ಕೆ ಸೇರಿತು ಜನಸಾಗರ

    – ದೆಹಲಿ ಸಮೀಪದ ರಾಜ್ಯಗಳಿಗೆ ತಲುಪಿತು ಯೋಧರ ಮೃತದೇಹ

    ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಯೋಧರ ಅಂತಿಮ ದರ್ಶನಕ್ಕೆ ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡದದಲ್ಲಿ ಜನಸಾಗರವೇ ಹರಿದುಬರುತ್ತಿದೆ. ಯೋಧರ ಮೃತದೇಹ ಸಾಗಿಸುವ ಮಾರ್ಗದ ಬದಿಯಲ್ಲಿ ಹೂವು, ತ್ರಿವರ್ಣ ಧ್ವಜ ಹಿಡಿದುಕೊಂಡು, ಕಣ್ಣೀರು ಸುರಿಸುತ್ತಾ ಗೌರವ ಸಲ್ಲಿಸಿದ್ದಾರೆ.

    ಯೋಧ ಅಜಿತ್ ಕುಮಾರ್ (35) ಮೃತದೇಹವು ಉತ್ತರ ಪ್ರದೇಶದ ಉನ್ನವೋಗೆ ಇಂದು ಬೆಳಗ್ಗೆ 7 ಗಂಟೆಗೆ ತಲುಪಿತು. ಅಜಿತ್ ಕುಮಾರ್ ಅವರ ಪತ್ನಿ, ಇಬ್ಬರು ಪುತ್ರಿಯರು, ಕುಟುಂಬಸ್ಥರು, ಸ್ಥಳೀಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ವೀರ ಯೋಧನ ಅಂತಿಮ ದರ್ಶನವನ್ನು ಪಡೆದ ಸ್ಥಳೀಯರು, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಅಜಿತ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ಗಂಗಾ ಘಾಟ್‍ನಲ್ಲಿ ನೆರವೇರಿಸಲು ಸಿದ್ಧತೆ ನಡೆದಿದೆ.

    ಯೋಧ ರಮೇಶ್ ಯಾದವ್ ಅವರ ಮೃತ ದೇಹವು ವಾರಣಾಸಿಯ ತೋಫಪುರ್ ಗೆ ಬೆಳಗ್ಗೆ 3.30 ಕ್ಕೆ ತಲುಪಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಾವಿರಾರು ಜನರು ತ್ರಿವರ್ಣ ಧ್ವಜವನ್ನು ಹಿಡಿದು ಅಂತ್ಯಕ್ರಿಯೆ ನಡೆಯುವ ಜಾಗದಲ್ಲಿ ನಿಂತು ವೀರ ಯೋಧನಿಗೆ ಗೌರವ ಸಲ್ಲಿಸುತ್ತಿದ್ದಾರೆ.

    ಸಿಆರ್‌ಪಿಎಫ್ ಯೋಧ ರೋಹಿತಾಷ್ ಲಾಂಬಾ ಅವರ ಮೃತ ದೇಹವು ರಾಜಸ್ಥಾನದ ಗೋವಿಂದಾಪುರ್ ಅವರ ಮನೆಗೆ ಬೆಳಗ್ಗೆ 8.40ಕ್ಕೆ ತಲುಪಿದೆ. ಸಾವಿರಾರು ಜನರು ವೀರ ಮರಣ ಹೊಂದಿದ ರೋಹಿತಾಷ್ ಲಾಂಬಾ ಅವರ ಕುಟುಂಬಸ್ಥರ ಜೊತೆಗೆ ಗೌರವ ಸಲ್ಲಿಸಿದರು.

    ಉತ್ತರಖಾಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಡೆಹ್ರಾಡೂನ್‍ಗೆ ಆಗಮಿಸಿದ ಹುತಾತ್ಮರಾದ ಸಿಆರ್‍ಪಿಎಫ್ ಎಎಸ್‍ಐ ಮೋಹನ್ ಲಾಲ್ ಅವರಿಗೆ ನಮನ ಸಲ್ಲಿಸಿದರು. ಈ ವೇಳೆ ಅಲ್ಲಿ ಸೇರಿದ್ದ ನೂರಾರು ಜನರು ಮೋಹಲ್ ಲಾಲ್ ಅವರಿಗೆ ಜಯ ಘೋಷನೆ ಕೂಗಿ, ಗೌರವ ನಮನ ಅರ್ಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv