Tag: uttar pradesh

  • ಮದುವೆಗೆ ಹೋದವರು ಮಸಣ ಸೇರಿದ್ರು- ರಸ್ತೆ ಅಪಘಾತಕ್ಕೆ 8 ಮಂದಿ ಬಲಿ

    ಮದುವೆಗೆ ಹೋದವರು ಮಸಣ ಸೇರಿದ್ರು- ರಸ್ತೆ ಅಪಘಾತಕ್ಕೆ 8 ಮಂದಿ ಬಲಿ

    ಲಕ್ನೋ: ಮದುವೆ ಮುಗಿಸಿ ತಡರಾತ್ರಿ ಮನೆಗೆ ತೆರೆಳುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿ 8 ಮಂದಿ ಸಾವನ್ನಪ್ಪಿ, 12 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್- ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಲೆಹ್ರವಾನ ಗ್ರಾಮದ ಸಮೀಪ ಈ ಅಪಘಾತ ಸಂಭವಿಸಿದೆ. ತಡರಾತ್ರಿ ಮದುವೆಗೆ ಹೋದವರು ಬರುತ್ತಿದ್ದ ವಾಹನ ಹಾಗೂ ಮಿನಿ- ಗೂಡ್ಸ್ ಕಾರಿಯರ್ ನಡುವೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನ ನಜ್ಜುಗುಜ್ಜಾಗಿ ಹೋಗಿದ್ದು, ಸ್ಥಳದಲ್ಲೇ 8 ಮಂದಿ ಅಸುನೀಗಿದ್ದಾರೆ. ಹಾಗೆಯೇ 12 ಮಂದಿ ಇನ್ನೂ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ಸಂಭಾಲದ ಎಸ್‍ಪಿ ಯಮುನಾ ಪ್ರಸಾದ್ ತಿಳಿಸಿದ್ದಾರೆ.

    ನಾವು ಮದುವೆ ಕಾರ್ಯಕ್ರಮ ಮುಗಿಸಿಕೊಂಡು ತಡರಾತ್ರಿ ಊರಿಗೆ ಮರಳುತ್ತಿದ್ದೇವು. ಈ ವೇಳೆ ಈ ದುರ್ಘಟನೆ ನಡೆದಿದೆ ಎಂದು ಗಾಯಗೊಂಡ ವ್ಯಕ್ತಿಯೊಬ್ಬರು ಕಣ್ಣಿರಿಟ್ಟಿದ್ದಾರೆ.

    ಸದ್ಯ ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಅಪಘಾತ ಬಗ್ಗೆ ತಿಳಿದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತಾಪ ಸೂಚಿಸಿದ್ದು, ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವ ಭರವಸೆ ನೀಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಶಾಲಾ ಶೌಚಾಲಯದಲ್ಲಿ ಸ್ಫೋಟ- ಇಬ್ಬರು ಮಕ್ಕಳು ಸಾವು

    ಶಾಲಾ ಶೌಚಾಲಯದಲ್ಲಿ ಸ್ಫೋಟ- ಇಬ್ಬರು ಮಕ್ಕಳು ಸಾವು

    ಪ್ರಯಾಗರಾಜ್: ಬಳಸದೆ ಇದ್ದ ಶಾಲಾ ಶೌಚಾಲಯದಲ್ಲಿ ಇದ್ದಕ್ಕಿಂದಂತೆ ಸ್ಫೋಟ ಸಂಭವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಓರ್ವ ಬಾಲಕ ಗಂಭೀರ ಗಾಯಗೊಂಡ ಘಟನೆ ಉತ್ತರಪ್ರದೇಶದ ಪ್ರಯಾಗರಾಜ್‍ನಲ್ಲಿ ನಡೆದಿದೆ.

    ಜಿಲ್ಲೆಯ ದುಬಾವಲ್ ಗ್ರಾಮದಲ್ಲಿರುವ ಶಾಲೆಯ ಶೌಚಾಲಯವನ್ನು ಬಳಸುತ್ತಿರಲಿಲ್ಲ. ಆದ್ದರಿಂದ ಆ ಸ್ಥಳವನ್ನು ವಸ್ತುಗಳನ್ನು ಇಡಲು ಉಪಯೋಗಿಸಲಾಗುತ್ತಿತ್ತು. ಹೀಗೆ ಸಾಸಿವೆ ಎಣ್ಣೆಯ ಡಬ್ಬಗಳಲ್ಲಿ ಸ್ಫೋಟಕ ಇರಿಸಿ ಶಾಲೆಯ ಶೌಚಾಲಯದಲ್ಲಿ ಸಂಗ್ರಹಿಸಲಾಗಿತ್ತು. ಆದರ ಮಂಗಳವಾರ ಮೂವರು ಮಕ್ಕಳು ಆಟವಾಡುತ್ತ ಶಾಲೆಯ ಶೌಚಾಲಯದ ಬಳಿ ತೆರೆಳಿದ್ದಾಗ ಸಂಗ್ರಹಿಸಿಟ್ಟಿದ್ದ ಸ್ಫೋಟಕಗಳು ಬ್ಲಾಸ್ಟ್ ಆಗಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಓರ್ವ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಎಸ್‍ಪಿ ನರೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.

    ಮೃತ ಮಕ್ಕಳನ್ನು ದುಬಾವಲ್ ಗ್ರಾಮದ ನಿವಾಸಿ ಶಿವ ಪೂಜನ್ ಬಿಂದ್ ಅವರ ಮಗ ವಿಜಯ್ ಶಂಕರ್(4) ಮತ್ತು ಮಗಳು ಸೋನಮ್(6) ಎಂದು ಗುರುತಿಸಲಾಗಿದೆ. ಹಾಗೆಯೇ ಗಾಯಗೊಂಡ ಬಾಲಕನನ್ನು ರಾಣಿ ನೆಹರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೆಯೇ ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಶೌಚಾಲಯದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿ ಇಡಲು ಕಾರಣವೇನು ಎನ್ನುವುದನ್ನ ಪತ್ತೆ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪತಿ ಕಣ್ಮುಂದೆ ಪತ್ನಿ ಮೇಲೆ ಗ್ಯಾಂಗ್ ರೇಪ್- ದೂರು ನಿರಾಕರಿಸಿದ ಯುಪಿ ಪೊಲೀಸ್

    ಪತಿ ಕಣ್ಮುಂದೆ ಪತ್ನಿ ಮೇಲೆ ಗ್ಯಾಂಗ್ ರೇಪ್- ದೂರು ನಿರಾಕರಿಸಿದ ಯುಪಿ ಪೊಲೀಸ್

    – ಪತಿ ಜೊತೆಗೆ ಸೆಕ್ಸ್ ಮಾಡ್ಸಿ ವಿಡಿಯೋ ಹರಿಬಿಟ್ಟ ಕಾಮುಕರು

    ಲಕ್ನೋ: ಪತಿಯ ಎದುರೇ ಪತ್ನಿಯನ್ನು ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ರಾಮ್‍ಪುರ್ ಜಿಲ್ಲೆಯಲ್ಲಿ ಜೂನ್ 11ರಂದು ನಾಲ್ವರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಸಂಬಂಧ ದಂಪತಿ ಪೊಲೀಸರಿಗೆ ಯಾವುದೇ ದೂರು ನೀಡಿರಲಿಲ್ಲ. ಆದರೆ ಈಗ ಪತಿಯೊಂದಿಗೆ ಸೆಕ್ಸ್ ಮಾಡಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಂತ್ರಸ್ತೆ ಪೊಲೀಸ್ ಮೆಟ್ಟಿಲೇರಿದ್ದಾಳೆ.

    ಆಗಿದ್ದೇನು?:
    ಪತಿಯೊಂದಿಗೆ ಬರುತ್ತಿದ್ದಾಗ ನಾಲ್ಕು ಜನರ ಗುಂಪು ನಮ್ಮನ್ನು ತಡೆಯಿತು. ಬಳಿಕ ಪತಿಯ ಮೇಲೆ ಹಲ್ಲೆ ಮಾಡಿ, ಮರಕ್ಕೆ ಕಟ್ಟಿ ಹಾಕಿದ್ದರು. ಈ ವೇಳೆ ನಾಲ್ವರು ಸೇರಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾರೆ.

    ಈ ಸಂಬಂಧ ಸಂತ್ರಸ್ತೆ ಆರೋಪಿಸಿದ್ದರೂ ಪೊಲೀಸರು ಮಾತ್ರ ದೂರು ಸ್ವೀಕರಿಸಲು ಹಿಂದೇಟು ಹಾಕಿದ್ದರು ಎಂದು ವರದಿಯಾಗಿದೆ. ಆದರೆ ತಡವಾಗಿ ಸಂತ್ರಸ್ತೆ ದೂರು ಸ್ವೀಕರಿಸಿದ ಪೊಲೀಸರು, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಸಬ್ ಇನ್‍ಸ್ಪೆಕ್ಟರ್ ಬ್ರಿಜೇಶ್ ಕುಮಾರ್ ಅವರು, ದಂಪತಿಗಳೇ ತಮ್ಮ ಸೆಕ್ಸ್ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಇತ್ತೀಚೆಗಷ್ಟೇ ಅತ್ಯಾಚಾರ ಸಂತ್ರಸ್ತೆಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿರಲಿಲ್ಲ. ಇದರಿಂದ ಮನನೊಂದ ಮಹಿಳೆ ಅತ್ಯಾಚಾರಕ್ಕೆ ಒಳಗಾದ ಮರುದಿನವೇ ಆತ್ಮಹತ್ಯೆಗೆ ಶರಣಾಗಿದ್ದರು.

  • ವಂಚಿಸಿದ್ದ ಪ್ರಿಯಕರನ ಮೇಲೆ ಬಿಸಿ ಎಣ್ಣೆ ಎರಚಿದ ಪ್ರೇಯಸಿ

    ವಂಚಿಸಿದ್ದ ಪ್ರಿಯಕರನ ಮೇಲೆ ಬಿಸಿ ಎಣ್ಣೆ ಎರಚಿದ ಪ್ರೇಯಸಿ

    ಲಕ್ನೋ: ತನ್ನನ್ನು ಪ್ರೀತಿಸಿ ಕೊನೆಗೆ ಬೇರೆ ಹುಡುಗಿಯನ್ನು ಮದುವೆ ಆಗಲು ಮುಂದಾಗಿದ್ದ ಪ್ರಿಯಕರ ಮೇಲಿದ್ದ ಸಿಟ್ಟಿಗೆ ಯುವತಿಯೊಬ್ಬಳು ಆತನ ಮೇಲೆ ಬಿಸಿ ಬಿಸಿ ಸಾಸಿವೆ ಎಣ್ಣೆ ಎರಚಿ ತನ್ನ ಕೋಪವನ್ನು ತೀರಿಸಿಕೊಂಡಿದ್ದಾಳೆ.

    ಭಾನುವಾರದಂದು ಉತ್ತರಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಅನುಪ್‍ಷಹರ ನಿವಾಸಿ ಉಮೇಶ್ ಜೋಶಿ ಎಂದು ಗುರುತಿಸಲಾಗಿದೆ. ಉಮೇಶ್ ಒಬ್ಬಳು ಯುವತಿಯನ್ನು ಪ್ರೀತಿಸಿ ಆಕೆಗೆ ಕೈ ಕೊಟ್ಟು ಬೇರೊಬ್ಬಳ ಜೊತೆ ಮದುವೆ ಮಾಡಿಕೊಳ್ಳುತ್ತಿದ್ದನು. ಈ ಬಗ್ಗೆ ಮೋಸ ಹೋದ ಯುವತಿಗೆ ತಿಳಿದು ಆಕೆ ರೊಚ್ಚಿಗೆದ್ದು, ಉಮೇಶ್ ಮದುವೆ ದಿನವೇ ಆತನ ಮೇಲೆ ಬಿಸಿ ಬಿಸಿ ಸಾವಿವೆ ಎಣ್ಣೆ ಹಾಕಿ ಹಲ್ಲೆ ಮಾಡಿದ್ದಾಳೆ.

    ಇದರಿಂದ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದ್ಯ ಚೇತರಿಸಿಕೊಂಡಿದ್ದಾನೆ. ಈ ಬಗ್ಗೆ ಯುವಕನ ತಾಯಿ ಮಾತನಾಡಿ, ನನ್ನ ಮಗನ ಮದುವೆಯನ್ನು ತಡೆದು, ಆತನ ಜೊತೆ ತಾನು ಮದುವೆಯಾಗಲು ಯುವತಿ ಪ್ರಯತ್ನಿಸುತ್ತಿದ್ದಳು. ಆದರೆ ಉಮೇಶ್ ಇದಕ್ಕೆ ಒಪ್ಪದೆ ನಾವು ನೋಡಿದ ಹುಡುಗಿ ಜೊತೆ ಮದುವೆಗೆ ಸಿದ್ಧನಾದ. ಇದಕ್ಕೆ ಆರೋಪಿ ನನ್ನ ಮಗನ ಮೇಲೆ ಹಲ್ಲೆ ನಡೆಸಿದ್ದಾಳೆ. ಆಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಘಟನೆ ಬಳಿಕ ಯುವತಿಯನ್ನು ವಶಕ್ಕೆ ಪಡೆದ ಪೊಲೀಸರು ಆಕೆಯ ಮೇಲೆ ಐಪಿಸಿ ಸೆಕ್ಷನ್ 327 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • 2005ರ ಅಯೋಧ್ಯೆ ಉಗ್ರರ ದಾಳಿ ಪ್ರಕರಣ: ನಾಲ್ವರಿಗೆ ಜೀವಾವಧಿ, ಓರ್ವ ಖುಲಾಸೆ

    2005ರ ಅಯೋಧ್ಯೆ ಉಗ್ರರ ದಾಳಿ ಪ್ರಕರಣ: ನಾಲ್ವರಿಗೆ ಜೀವಾವಧಿ, ಓರ್ವ ಖುಲಾಸೆ

    ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 2005ರಂದು ನಡೆದ ಉಗ್ರರ ದಾಳಿ ಪ್ರಕರಣ ತೀರ್ಪು ಹೊರಬಂದಿದ್ದು, ನಾಲ್ವರು ಆರೋಪಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.

    ಅಲಹಾಬಾದ್ ಜಿಲ್ಲೆಯ ಪ್ರಯಾಗ್‍ರಾಜ್ ವಿಶೇಷ ನ್ಯಾಯಾಲಯವು ಇಂದು ತೀರ್ಪು ನೀಡಿದೆ. ಈ ಮೂಲಕ ಹದಿನಾಲ್ಕು ವರ್ಷಗಳ ಬಳಿಕ ಆರೋಪಿಗಳು ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಪ್ರಕರಣ ಐದು ಜನರ ಪೈಕಿ ಮೊಹಮ್ಮದ್ ಅಜೀಜ್ ವಿರುದ್ಧದ ಆರೋಪವನ್ನು ಖುಲಾಸೆಗೊಳಿಸಿ ಕೋರ್ಟ್ ತೀರ್ಪು ನೀಡಿದೆ.

    ಇರ್ಫಾನ್, ಆಶೀಖ್ ಇಕ್ಬಾಲ್ ಅಲಿಯಾಸ್ ಫಾರೂಕ್, ಶಕೀಲ್ ಅಹ್ಮದ್ ಹಾಗೂ ಮೊಹಮ್ಮದ್ ನಸೀಂ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ದಿನೇಶ್ ಚಂದ್ರ ಅವರು ಆರೋಪಿಗಳಿಗೆ ತಲಾ 2.40 ಲಕ್ಷ ರೂ. ದಂಡ ವಿಧಿಸಿದ್ದಾರೆ.

    ಏನಿದು ಪ್ರಕರಣ?:
    ಅಯೋಧ್ಯೆಯಲ್ಲಿ 2005, ಜುಲೈ 5 ರಂದು ಲಷ್ಕರ್ ಎ- ತೋಯ್ಬಾ ಉಗ್ರ ಸಂಘಟನೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಇಬ್ಬರು ಸಾರ್ವಜನಿಕರು ಸಾವನ್ನಪ್ಪಿದ್ದರು. ನಮ್ಮ ಭದ್ರತಾ ಪಡೆಯ ಸಿಬ್ಬಂದಿ ಐವರು ಉಗ್ರರರನ್ನು ಹೊಡೆದುರಳಿಸಿದ್ದರು. ಅಷ್ಟೇ ಅಲ್ಲದೆ 7 ಮಂದಿ ಸಿಆರ್‍ಪಿಎಫ್ ಯೋಧರು ಗಾಯಗೊಂಡಿದ್ದರು.

    ಉಗ್ರನ ಕೈನಲ್ಲಿ ಸಿಕ್ಕ ಮೊಬೈಲ್ ಆಧಾರದ ಮೇಲೆ 14 ವರ್ಷಗಳ ಹಿಂದೆಯೇ ಐವರನ್ನು ಪೊಲೀಸರು ಬಂಧಿಸಿದ್ದರು. ತೀರ್ಪಿನ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಈ ಕುರಿತು ಜೂನ್ 11ರಂದು ವಿಚಾರಣೆ ಪೂರ್ಣಗೊಳಿಸಿದ್ದ ಪ್ರಯಾಗ್‍ರಾಜ್ ವಿಶೇಷ ನ್ಯಾಯಾಲಯವು ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು.

  • 13ರ ಪೋರನ ಮೇಲೆ ನಾಲ್ವರಿಂದ ಗ್ಯಾಂಗ್ ರೇಪ್

    13ರ ಪೋರನ ಮೇಲೆ ನಾಲ್ವರಿಂದ ಗ್ಯಾಂಗ್ ರೇಪ್

    ಲಕ್ನೋ: ಅಪ್ರಾಪ್ತ ಬಾಲಕನ ಮೇಲೆ ನಾಲ್ಕು ಜನ ಪುರುಷರು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಉತ್ತರ ಪ್ರದೇಶದ ಶಹಜಹಾನ್‍ಪುರದ ಪುವಾಯಾ ಎಂಬಲ್ಲಿ ನಡೆದಿದೆ.

    ಶನಿವಾರ ಸಂಜೆ 13 ವರ್ಷದ ಬಾಲಕನನ್ನು ನಾಲ್ವರು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು, ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಘಟನೆ ಕುರಿತು ಬಾಲಕ ಮನೆಯವರ ಬಳಿ ವಿವರಿಸಿದ್ದು, ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ರೆಹಮಾನ್, ರವಿ, ಗುಲ್ಲಿ ಹಾಗೂ ವಾಸಿಮ್ ಎಂಬ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಜಸ್ವೀರ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಘಟನೆ ಬಳಿಕ ನಾಪತ್ತೆಯಾಗಿರುವ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಬಂಧನಕ್ಕಾಗಿ ಬಲೆ ಬೀಸಲಾಗಿದೆ. ಅತ್ಯಾಚಾರಕ್ಕೊಳಗಾದ ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಸ್ವೀರ್ ಸಿಂಗ್ ತಿಳಿಸಿದ್ದಾರೆ.

  • ಯೋಗಿ ಸರ್ಕಾರವನ್ನು ವಜಾಗೊಳಿಸಿ ಎಂದಿದ್ದ ಪೊಲೀಸ್ ವಜಾ

    ಯೋಗಿ ಸರ್ಕಾರವನ್ನು ವಜಾಗೊಳಿಸಿ ಎಂದಿದ್ದ ಪೊಲೀಸ್ ವಜಾ

    ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ವಜಾಗೊಳಿಸಿ ಎಂದು ಒತ್ತಾಯಿಸಿದ್ದ ಪೊಲೀಸ್ ಪೇದೆಯನ್ನು ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.

    ಮನಿಷ್ ಯಾದವ್ ವಜಾಗೊಂಡ ಪೊಲೀಸ್ ಕಾನ್‍ಸ್ಟೇಬಲ್. ಮನಿಷ್ ಯಾದವ್ ಇಟಾವಾ ಮೂಲದರಾಗಿದ್ದು, ನೋಯ್ಡಾದಲ್ಲಿ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ವೃತ್ತಿ ನಿರ್ವಹಿಸುತ್ತಿದ್ದರು. ಆದರೆ ಶನಿವಾರ ಸಮಾಜವಾದಿ ಪಕ್ಷದ (ಎಸ್‍ಪಿ) ಕೆಂಪು ಟೋಪಿ ಹಾಕಿಕೊಂಡು, ‘ಯೋಗಿ ಸರ್ಕಾರವನ್ನು ವಜಾಗೊಳಿಸಿ’ ಎಂಬ ಪತ್ರಗಳನ್ನು ಸಾರ್ವಜನಿಕರಿಗೆ ಹಂಚುತ್ತ ಜಿಲ್ಲಾಧಿಕಾರಿ ಕಚೇರಿಗೆ ಹೋಗಿದ್ದರು.

    ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬಳಿಕ ಮಾತನಾಡಿದ ಮನಿಷ್ ಯಾದವ್ ಅವರು, ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಸರ್ಕಾರವು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದ್ದರು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ನೋಯ್ಡಾ ಜಿಲ್ಲಾಧಿಕಾರಿ ಜೆ.ಬಿ.ಸಿಂಗ್ ಅವರು, ಮನಿಷ್ ಯಾದವ್ ನನ್ನನ್ನು ಭೇಟಿಯಾಗಿಲ್ಲ. ಅವರ ಬಗ್ಗೆ ಮಾಧ್ಯಮಗಳಿಂದ ಕೇಳಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.

    ಪೇದೆ ಮನಿಷ್ ಯಾದವ್ ಅವರನ್ನು ವಜಾಗೊಳಿಸಿ ಪೊಲೀಸ್ ಮಹಾ ನಿರ್ದೇಶಕ ಒ.ಪಿ.ಸಿಂಗ್ ಆದೇಶ ಹೊರಡಿಸಿದ್ದಾರೆ. ಇತ್ತ ಕಾನ್‍ಸ್ಟೇಬಲ್ ಕುಟುಂಬಸ್ಥರು, ಮನಿಷ್ ಯಾದವ್ ಅವರು ಮಾನಸಿಕವಾಗಿ ತೊಂದರೆಗಿಡಾಗಿದ್ದಾರೆ. ಹೀಗಾಗಿ ಈ ಘಟನೆ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

  • ಚಾಕಲೇಟ್ ಆಸೆ ತೋರಿಸಿ 7ರ ಬಾಲೆಯನ್ನು ರೇಪ್ ಮಾಡಿ, ಕೊಲೆಗೈದ 48ರ ಕಾಮುಕ

    ಚಾಕಲೇಟ್ ಆಸೆ ತೋರಿಸಿ 7ರ ಬಾಲೆಯನ್ನು ರೇಪ್ ಮಾಡಿ, ಕೊಲೆಗೈದ 48ರ ಕಾಮುಕ

    ಲಕ್ನೋ: 48 ವರ್ಷದ ವ್ಯಕ್ತಿಯೊಬ್ಬ 7 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಪಪ್ಪು ರೈ ಅತ್ಯಾಚಾರ ಎಸಗಿದ ಕಾಮುಕ. ಗೋರಖ್‍ಪುರ್ ಜಿಲ್ಲೆಯಲ್ಲಿ ಶುಕ್ರವಾರ ಘಟನೆ ನಡೆದಿದ್ದು, ಆರೋಪಿಯನ್ನು ಸಿಕ್ರಿಗಂಜ್ ಪೊಲೀಸರು ಬಂಧಿಸಿದ್ದಾರೆ.

    ಪಪ್ಪು ಕೊಲೆಯಾದ ಬಾಲಕಿಯ ತಂದೆಗೆ ಪರಿಚಯವಿರುವ ವ್ಯಕ್ತಿ. ಶುಕ್ರವಾರ ಬಾಲಕಿಗೆ ಚಾಕಲೇಟ್ ಕೊಡಿಸುವ ಆಸೆ ತೋರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಬಾಲಕಿ ಅಳಲು ಆರಂಭಿಸುತ್ತಿದ್ದಂತೆ ಆಕೆಯನ್ನು ಹೊಡೆದು ಕೊಲೆ ಮಾಡಿ, ಮೃತ ದೇಹವನ್ನು ಬೀಸಾಡಿ ಹೋಗಿದ್ದಾನೆ.

    ಇತ್ತ ಬಾಲಕಿ ನಾಪತ್ತೆಯಾದ ಕುರಿತು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಪಪ್ಪುನನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿ ತನ್ನ ತಪ್ಪು ಒಪ್ಪಿಕೊಂಡು ಕೃತ್ಯ ಎಸಗಿದ ಜಾಗಕ್ಕೆ ಪೊಲೀಸರನ್ನು ಕರೆದುಕೊಂಡು ಹೋಗಿದ್ದನು. ಆಗ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

    ಆರೋಪಿ ಪಪ್ಪು ವಿರುದ್ಧ ಪೊಸ್ಕೊ ಸೇರಿದಂತೆ ಐಪಿಸಿ ಸೆಕ್ಷನ್ 364 (ಅಪಹರಣ), 376 (ಅತ್ಯಾಚಾರ) ಹಾಗೂ 302 (ಕೊಲೆ) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

    ಮುಗ್ಧ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಉತ್ತರ ಪ್ರದೇಶದ ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ.

  • ಗನ್ ತೋರಿಸಿ ಅಪ್ರಾಪ್ತ ಅಕ್ಕ-ತಂಗಿ ಮೇಲೆ ಗ್ಯಾಂಗ್‍ರೇಪ್

    ಗನ್ ತೋರಿಸಿ ಅಪ್ರಾಪ್ತ ಅಕ್ಕ-ತಂಗಿ ಮೇಲೆ ಗ್ಯಾಂಗ್‍ರೇಪ್

    ಲಕ್ನೋ: ಗದ್ದೆಗೆ ಹೋಗಿದ್ದ ಇಬ್ಬರು ಅಪ್ರಾಪ್ತೆಯರಿಗೆ ದುಷ್ಕರ್ಮಿಗಳು ಗನ್ ತೋರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಮುಜಾಫರ್ ನಗರ ಸಮೀಪದ ಕೆಸರ್ವಾ ಗ್ರಾಮದಲ್ಲಿ ನಡೆದಿದೆ.

    ಕೆಸರ್ವಾ ಗ್ರಾಮದಲ್ಲಿ ಮಂಗಳವಾರದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಂಗಳವಾರ ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ತಾಯಿಯನ್ನು ನೋಡಲು 13 ಮತ್ತು 15 ವರ್ಷದ ವಯಸ್ಸಿನ ಅಕ್ಕ- ತಂಗಿ ತೆರೆಳಿದ್ದರು. ಈ ವೇಳೆ ಮಾರ್ಗ ಮಧ್ಯದಲ್ಲಿ ಬಾಲಕಿಯರನ್ನು ಅಡ್ಡಗಟ್ಟಿದ್ದ ನಾಲ್ವರು ದುಷ್ಕರ್ಮಿಗಳು, ಅವರಿಗೆ ಗನ್ ತೋರಿಸಿ ಹೆದರಿಸಿದ್ದಾರೆ. ಬಳಿಕ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ದುಷ್ಟತನ ಮೆರೆದಿದ್ದಾರೆ.

    ಕಬ್ಬಿನಗದ್ದೆಯಲ್ಲಿಯೇ ನಾಲ್ವರು ದುಷ್ಕರ್ಮಿಗಳು ಸೇರಿ ಗನ್ ತೋರಿಸಿ ಬಾಲಕಿಯರಿಬ್ಬರನ್ನು ಬೆದರಿಸಿ ಸಾಮೂಹಿಕ ಅತ್ಯಾಚಾರ ಮಾಡಿ ಪರಾರಿಯಾಗಿದ್ದಾರೆ. ಬಳಿಕ ಸಂತ್ರಸ್ತೆಯರು ಈ ಬಗ್ಗೆ ತಮ್ಮ ಪೋಷಕರ ಬಳಿ ಹೇಳಿದ್ದಾರೆ. ಕೂಡಲೇ ಪೋಷಕರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ನಾಲ್ಕು ಮಂದಿಯ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

    ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗ್ರಾಮೀಣ ಪ್ರದೇಶದಲ್ಲಿ ಗಸ್ತು ಹೆಚ್ಚಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

  • ಕೋರ್ಟ್ ಆವರಣದಲ್ಲೇ ಯುಪಿ ವಕೀಲ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯ ಬರ್ಬರ ಹತ್ಯೆ

    ಕೋರ್ಟ್ ಆವರಣದಲ್ಲೇ ಯುಪಿ ವಕೀಲ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯ ಬರ್ಬರ ಹತ್ಯೆ

    ಆಗ್ರಾ: ಉತ್ತರ ಪ್ರದೇಶದ ವಕೀಲರ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯಾಗಿ 2 ದಿನಗಳ ಹಿಂದೆ ಆಯ್ಕೆಯಾಗಿದ್ದ ಧರ್ವೇಶ್ ಯಾದವ್ ಅವರನ್ನು ಕೋರ್ಟ್ ಆವರಣದಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ಸಹೋದ್ಯೋಗಿ ವಕೀಲನೇ ಧರ್ವೆಶ್ ಅವರನ್ನು ಗುಂಡು ಹಾರಿಸಿ ಕೊಲೆ ಮಾಡಿ ಬಳಿಕ ಆದೇ ಪಿಸ್ತೂಲಿನಿಂದ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೊಲೆ ಮಾಡಿದ ವಕೀಲನನ್ನು ಮನೀಶ್ ಶರ್ಮಾ ಎಂದು ಗುರುತಿಸಲಾಗಿದ್ದು ಕೊಲೆ ಮಾಡಿರುವುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮನೀಶ್ ಶರ್ಮಾನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು ಸ್ಥಿತಿ ಗಂಭೀರವಾಗಿದೆ.

    2 ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಧರ್ವೇಶ್ ಯಾದವ್ ಅವರು ಅಧ್ಯಕ್ಷೆಯಾಗಿ ಆಯ್ಕೆ ಆಗುವ ಮೂಲಕ ಉತ್ತರ ಪ್ರದೇಶದಲ್ಲಿ ಇತಿಹಾಸ ಸೃಷ್ಟಿಸಿದ್ದರು. ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ಧರ್ವೇಶ್ ಯಾದವ್ ಅವರಿಗೆ ಇಂದು ಆಗ್ರಾ ನ್ಯಾಯಾಲಯದ ಅವರಣದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಸುಮಾರು ಮಧ್ಯಾಹ್ನ 2.30ಕ್ಕೆ ಈ ಕಾರ್ಯಕ್ರಮಕ್ಕೆ ಧರ್ವೇಶ್ ಯಾದವ್ ಅವರು ಬಂದಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕ್ರಮದ ಮಧ್ಯದಲ್ಲಿ ಎದ್ದುನಿಂತ ಮನೀಶ್ ಶರ್ಮಾ 3 ಸುತ್ತಿನ ಗುಂಡಿನ ದಾಳಿ ಮಾಡಿದ್ದಾನೆ. ನಂತರ ಅವನು ಕೂಡ ಗುಂಡು ಹಾರಿಸಿಕೊಂಡಿದ್ದಾನೆ.

    ಕೂಡಲೇ ಧರ್ವೆಶ್ ಅವರನ್ನು ಹತ್ತಿರದ ಪುಷ್ಪಾಂಜಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತೀವ್ರ ಗಾಯಗೊಂಡಿದ್ದ ಧರ್ವೇಶ್ ಯಾದವ್ ಅವರು ಸಾವನ್ನಪ್ಪಿದ್ದಾರೆ.

    ಮನೀಶ್ ಶರ್ಮಾ ಅನುಮತಿ ಪಡೆದ ರಿವಾಲ್ವರ್ ಬಳಕೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಾರ್ ಕೌನ್ಸಿಲ್ ಕೃತ್ಯವನ್ನು ಖಂಡಿಸಿದ್ದು 50 ಲಕ್ಷ ರೂ. ಹಣವನ್ನು ಉತ್ತರ ಪ್ರದೇಶ ಸರ್ಕಾರ ಧರ್ವೇಶ್ ಯಾದವ್ ಅವರ ಕುಟುಂಬಕ್ಕೆ ನೀಡಬೇಕೆಂದು ಆಗ್ರಹಿಸಿದೆ.