Tag: uttar pradesh

  • Prayagraj Kumbh Mela | 1500 ಕೋಟಿ ರೂ. ಖರ್ಚು ಮಾಡಿದ್ದಕ್ಕೆ UP ಆರ್ಥಿಕತೆಗೆ 3 ಲಕ್ಷ ಕೋಟಿ ಲಾಭ: ಯೋಗಿ

    Prayagraj Kumbh Mela | 1500 ಕೋಟಿ ರೂ. ಖರ್ಚು ಮಾಡಿದ್ದಕ್ಕೆ UP ಆರ್ಥಿಕತೆಗೆ 3 ಲಕ್ಷ ಕೋಟಿ ಲಾಭ: ಯೋಗಿ

    ಲಕ್ನೋ: ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆದ ಮಹಾ ಕುಂಭಮೇಳದಿಂದ (Maha Kumbh Mela) ಉತ್ತರ ಪ್ರದೇಶದ ಆರ್ಥಿಕತೆಗೆ 3 ಲಕ್ಷ ಕೋಟಿ ರೂ. ಲಾಭವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌ (Yogi Adityanath) ಹೇಳಿದ್ದಾರೆ.

    ಇಂದು ಲಕ್ನೋದಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಸಮ್ಮುಖದಲ್ಲಿ 114 ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ನಡೆಯಿತು. ಇದನ್ನೂ ಓದಿ: ನಮ್ಮ ಮಕ್ಕಳು ಲವ್‌ ಜಿಹಾದ್‌ಗೆ ತುತ್ತಾಗಿದ್ದಾರೆ, ಸಹಾಯ ಮಾಡಿ: ಶ್ರೀರಾಮಸೇನೆಯ ಸಹಾಯ ಕೇಳಿದ ಪೊಲೀಸ್‌ ಅಧಿಕಾರಿಗಳು

    ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅದಿತ್ಯನಾಥ್‌, ನಮಗೆ ಪ್ರತಿ 6 ವರ್ಷಗಳಿಗೊಮ್ಮೆ ಕುಂಭ ಮತ್ತು ಪ್ರತಿ 12 ವರ್ಷಗಳಿಗೊಮ್ಮೆ ಮಹಾಕುಂಭವನ್ನು ಆಯೋಜಿಸುವ ಅವಕಾಶ ಸಿಗುತ್ತದೆ. ನಾವು ಮಾಡುವ ಎಲ್ಲಾ ಚಟುವಟಿಕೆಗಳು ನಮ್ಮ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತವೆ ಎಂದರು.


    ಕುಂಭಮೇಳವನ್ನು ಆಯೋಜಿಸಲು ಒಟ್ಟು 1500 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಕ್ಕೆ ಪ್ರತಿಯಾಗಿ ನಮ್ಮ ಆರ್ಥಿಕತೆ 3 ಲಕ್ಷ ಕೋಟಿ ರೂ.ಗಳ ಲಾಭ ಪಡೆದಿದೆ. 1,500 ಕೋಟಿ ರೂ. ಹಣವನ್ನು ಕುಂಭಮೇಳಕ್ಕೆ ಮಾತ್ರ ಖರ್ಚು ಮಾಡಿಲ್ಲ. ಪ್ರಯಾಗ್‌ರಾಜ್ ನಗರದ ನವೀಕರಣಕ್ಕೆ ಖರ್ಚು ಮಾಡಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.

  • ಮಹಾ ಕುಂಭಮೇಳದಲ್ಲಿ ನಾಲ್ಕು ಗಿನ್ನಿಸ್ ದಾಖಲೆಗೆ ತಯಾರಿ

    ಮಹಾ ಕುಂಭಮೇಳದಲ್ಲಿ ನಾಲ್ಕು ಗಿನ್ನಿಸ್ ದಾಖಲೆಗೆ ತಯಾರಿ

    ಪ್ರಯಾಗ್‌ರಾಜ್: ಕಳೆದೊಂದು ತಿಂಗಳಿಂದ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಧಾರ್ಮಿಕ ಉತ್ಸವ ಮಹಾ ಕುಂಭಮೇಳದಲ್ಲಿ (Maha Kumbh Mela) ನಾಲ್ಕು ಹೊಸ ದಾಖಲೆಗಳನ್ನು ಮಾಡಲು ಉತ್ತರ ಪ್ರದೇಶ (Uttar Pradesh) ಸರ್ಕಾರ ತಯಾರಿ ಮಾಡಿಕೊಂಡಿದ್ದು, ಇದಕ್ಕಾಗಿ ಗಿನ್ನಿಸ್ ಬುಕ್ ಆಫ್ ವಲ್ಡ್ ರೆಕಾರ್ಡ್ (Guinness World Records) ತಂಡವೂ ಪ್ರಯಾಗ್‌ರಾಜ್ ತಲುಪಿದೆ.

    ಇಲ್ಲಿಯವರೆಗೆ ತ್ರಿವೇಣಿ ಸಂಗಮದಲ್ಲಿ 48 ಕೋಟಿಗೂ ಹೆಚ್ಚು ಜನರು ಪುಣ್ಯ ಸ್ನಾನ ಮಾಡಿದ್ದಾರೆ. ಇದು ಈಗಾಗಲೇ ವಿಶ್ವದ ಅತಿದೊಡ್ಡ ದಾಖಲೆಯಾಗಿದೆ. ಇದರ ನಡುವೆ ಫೆ.14 ರಿಂದ 17ರ ನಡುವೆ ನಾಲ್ಕು ಹೊಸ ದಾಖಲೆಗಳನ್ನು ನಿರ್ಮಿಸಲು ಸ್ಥಳೀಯ ಆಡಳಿತ ಸಜ್ಜಾಗಿದೆ. ಇದನ್ನೂ ಓದಿ: ಮಹಾ ಕುಂಭಮೇಳದಿಂದ ಹಿಂದಿರುಗುವಾಗ ಹೃದಯಾಘಾತದಿಂದ ವ್ಯಕ್ತಿ ಸಾವು

    ಮೊದಲ ದಿನ ಫೆಬ್ರವರಿ 14 ರಂದು 15,000 ನೈರ್ಮಲ್ಯ ಕಾರ್ಮಿಕರು ಸಂಗಮ ಪ್ರದೇಶದಲ್ಲಿ ಗಂಗಾ ನದಿಯ ದಡದ 10 ಕಿ.ಮೀ ಉದ್ದವನ್ನು ಏಕಕಾಲದಲ್ಲಿ ಸ್ವಚ್ಛಗೊಳಿಸಲಿದ್ದಾರೆ. 2019ರ ಕುಂಭಮೇಳದಲ್ಲಿ 10 ಸಾವಿರ ನೈರ್ಮಲ್ಯ ಕಾರ್ಮಿಕರು ಒಟ್ಟಾಗಿ ಗುಡಿಸುವ ಮೂಲಕ ದಾಖಲೆ ನಿರ್ಮಿಸಿದ್ದರು. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ರಮೇಶ್ ಜಾರಕಿಹೊಳಿ ಭಾಗಿ – ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ

    ಫೆಬ್ರವರಿ 15 ರಂದು 300 ಉದ್ಯೋಗಿಗಳು ನದಿಗೆ ಇಳಿದು ಸ್ವಚ್ಛತಾ ಅಭಿಯಾನವನ್ನು ವೇಗಗೊಳಿಸಲಿದ್ದಾರೆ. ಫೆಬ್ರವರಿ 16 ರಂದು ತ್ರಿವೇಣಿ ಮಾರ್ಗದಲ್ಲಿ 1000 ಇ-ರಿಕ್ಷಾಗಳನ್ನು ಓಡಿಸಿದ ದಾಖಲೆಯೂ ನಿರ್ಮಾಣವಾಗಲಿದೆ. ಫೆಬ್ರವರಿ 17 ರಂದು 10 ಸಾವಿರ ಜನರ ಕೈ ಮುದ್ರೆಗಳನ್ನು ತೆಗೆದುಕೊಳ್ಳುವ ದಾಖಲೆಯನ್ನು ಸಹ ಮಾಡಲಾಗುವುದು. ನಾಲ್ಕು ದಾಖಲೆಗಳನ್ನು ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮೇಳದ ಅಧಿಕಾರಿ ವಿಜಯ್ ಕಿರಣ್ ಆನಂದ್ ತಿಳಿಸಿದ್ದಾರೆ. ಇದನ್ನೂ ಓದಿ: ಮೆಟ್ರೋ ದರ ಬದಲಾವಣೆ, ಶೀಘ್ರವೇ ಪರಿಷ್ಕೃತ ಪಟ್ಟಿ ಪ್ರಕಟ: ಬಿಎಂಆರ್‌ಸಿಎಲ್‌

    2019ರಲ್ಲಿ ಮೂರು ದಾಖಲೆ:
    2019ರ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಮೂರು ದಾಖಲೆಗಳನ್ನು ಮಾಡಲಾಗಿದ್ದು, ಇವು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿವೆ. ಇದರಲ್ಲಿ 500ಕ್ಕೂ ಹೆಚ್ಚು ಶಟಲ್ ಬಸ್‌ಗಳನ್ನು ಓಡಿಸುವ ಮೂಲಕ ಅತಿದೊಡ್ಡ ಸಾರಿಗೆ ವ್ಯವಸ್ಥೆಯನ್ನು ನಿರ್ವಹಿಸುವ ದಾಖಲೆಯನ್ನು ಸೃಷ್ಟಿಸಲಾಯಿತು. ಇದನ್ನೂ ಓದಿ: ದತ್ತಪೀಠ ವಿವಾದ; ಭೂ ದಾಖಲೆಗಳ ಆಧಾರದ ಮೇಲೆ ವಿವಾದ ಬಗೆಹರಿಯಲಿ: ಸಿ.ಟಿ ರವಿ

    ಎರಡನೇ ದಾಖಲೆಯು 10,000 ನೈರ್ಮಲ್ಯ ಕಾರ್ಮಿಕರನ್ನು ನೇಮಿಸಿಕೊಳ್ಳುವ ಮೂಲಕ ಅತಿದೊಡ್ಡ ನೈರ್ಮಲ್ಯ ಮತ್ತು ತ್ಯಾಜ್ಯ ವಿಲೇವಾರಿ ವ್ಯವಸ್ಥೆಗೆ ಸಂಬಂಧಿಸಿತ್ತು. ಮೂರನೆಯದಾಗಿ, 7,500 ಜನರ ಕೈ ಮುದ್ರಣಗಳನ್ನು ತೆಗೆದುಕೊಳ್ಳಲಾಗಿತ್ತು. ಈ ಬಾರಿ ಕೈಮುದ್ರೆ ಮತ್ತು ಸ್ವಚ್ಛತಾ ವ್ಯವಸ್ಥೆಗೆ ಸಂಬಂಧಿಸಿದ ಎರಡು ದಾಖಲೆಗಳನ್ನು ಮುರಿಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸುವ ಉದ್ದೇಶ ಹೊಂದಿದೆ. ಇದನ್ನೂ ಓದಿ: UnSold ಪ್ಲೇಯರ್‌, ಟೂರ್ನಿ ಅರ್ಧದಲ್ಲೇ ಆರ್‌ಸಿಬಿ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಪಾಟಿದಾರ್‌ಗೆ ನಾಯಕ ಪಟ್ಟ ಸಿಕ್ಕಿದ್ದು ಹೇಗೆ?

  • ಕಾರು ಅಪಘಾತದಲ್ಲಿ ರಿಷಭ್‌ ಪಂತ್‌ ಉಳಿಸಿದ್ದ ವ್ಯಕ್ತಿ ಪ್ರೇಯಸಿ ಜೊತೆ ಆತ್ಮಹತ್ಯೆಗೆ ಯತ್ನ – ಪ್ರಿಯತಮೆ ಸಾವು

    ಕಾರು ಅಪಘಾತದಲ್ಲಿ ರಿಷಭ್‌ ಪಂತ್‌ ಉಳಿಸಿದ್ದ ವ್ಯಕ್ತಿ ಪ್ರೇಯಸಿ ಜೊತೆ ಆತ್ಮಹತ್ಯೆಗೆ ಯತ್ನ – ಪ್ರಿಯತಮೆ ಸಾವು

    – ಪ್ರೀತಿಸಿದ್ದ ಜೋಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

    ಲಕ್ನೋ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಿಷಭ್‌ ಪಂತ್‌ (Rishabh Pant) ಉಳಿಸಿದ್ದ ವ್ಯಕ್ತಿ ಮತ್ತು ಆತನ ಪ್ರೇಯಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿತ್ತು. ಈ ವೇಳೆ ಪ್ರಿಯತಮೆ ಮೃತಪಟ್ಟಿದ್ದಾಳೆ.

    2022 ರಲ್ಲಿ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಅವರ ಕಾರು ಅಪಘಾತವಾಗಿತ್ತು. ಅವರ ಜೀವವನ್ನು ಉಳಿಸಿದ್ದ 25 ವರ್ಷದ ಯುವಕ ರಜತ್ ಕುಮಾರ್, ಫೆ.9 ರಂದು ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಬುಚ್ಚಾ ಬಸ್ತಿ ಎಂಬ ಹಳ್ಳಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ.

    ಕುಮಾರ್ ಮತ್ತು 21 ವರ್ಷದ ಗೆಳತಿ ಮನು ಕಶ್ಯಪ್ ಇವರಿಬ್ಬರ ಪ್ರೀತಿಗೆ ಕುಟುಂಬಗಳು ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ, ಇಬ್ಬರೂ ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ಕಶ್ಯಪ್ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾಳೆ. ಕುಮಾರ್ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾನೆ.

    ಬೇರೆ ಬೇರೆ ಜಾತಿಯವರಾದ ಕಾರಣ ಮನೆಯವರು ಒಪ್ಪಿರಲಿಲ್ಲ. ಎರಡೂ ಕುಟುಂಬಗಳು ಬೇರೆಡೆ ವಿವಾಹಗಳನ್ನು ನಿಶ್ಚಯ ಮಾಡಿಕೊಂಡಿದ್ದವು. ಇದು ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದೆ. ಕುಮಾರ್‌ ವಿರುದ್ಧ ಕಶ್ಯಪ್‌ ತಾಯಿ ಗಂಭೀರ ಆರೋಪ ಮಡಿದ್ದಾರೆ.

    2022ರ ಡಿಸೆಂಬರ್‌ನಲ್ಲಿ ರಿಷಭ್‌ ಪಂತ್‌ ದೆಹಲಿಯಿಂದ ಉತ್ತರಾಖಂಡಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿತ್ತು. ಆಗ ಕ್ರಿಕೆಟಿಗನನ್ನು ರಕ್ಷಿಸುವಲ್ಲಿ ಕುಮಾರ್‌ ಪ್ರಮುಖ ಪಾತ್ರ ವಹಿಸಿದ್ದ.

  • ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ – ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

    ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ – ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

    ಲಕ್ನೋ: ಜೆಇಇ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ 18 ವರ್ಷದ ಇಂಜಿನಿಯರ್ ವಿದ್ಯಾರ್ಥಿನಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.

    ಅದಿತಿ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

    ಅದಿತಿ ಉತ್ತರ ಪ್ರದೇಶದ ಗೋರಖ್‌ಪುರದ ಕ್ಯಾಂಟ್ ಪೊಲೀಸ್ ಠಾಣೆಯಿರುವ ಮೊಮೆಂಟಮ್ ಕೋಚಿಂಗ್ ಸೆಂಟರ್‌ನ ವಿದ್ಯಾರ್ಥಿಯಾಗಿದ್ದಳು. 2 ವರ್ಷಗಳಿಂದ ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಾ, ಸತ್ಯದೀಪ ವಿದ್ಯಾರ್ಥಿ ನಿಲಯದಲ್ಲಿದ್ದಳು.

    ಜೆಇಇ ಪರೀಕ್ಷೆಯಲ್ಲಿ ಫೇಲ್ ಆದ ಬಳಿಕ ಬುಧವಾರ ಬೆಳಗ್ಗೆ ಮನೆಗೆ ಕರೆಮಾಡಿ ತಂದೆಯ ಬಳಿ ಮೊಬೈಲ್ ಫೋನ್‌ಗೆ ರಿಚಾರ್ಜ್ ಮಾಡುವಂತೆ ಹೇಳಿದ್ದಳು. ಅದೇ ಸಮಯದಲ್ಲಿ, ಅದಿತಿಯ ರೂಮ್‌ಮೇಟ್ ಹೊರಗೆ ಹೋಗಿದ್ದರು.

    ಹೊರಗಡೆ ಹೋಗಿದ್ದ ರೂಮ್‌ಮೇಟ್ ವಾಪಾಸಾಗಿದ್ದು, ರೂಮ್ ಬಾಗಿಲು ಬಡಿದಿದ್ದಾಳೆ. ಈ ವೇಳೆ ಅದಿತಿ ಯಾವುದೇ ಪ್ರತಿಕ್ರಿಯೆ ನೀಡದಿದ್ದರಿಂದ ಅನುಮಾನಗೊಂಡು ಕಿಟಕಿಯಿಂದ ಒಳಗೆ ನೋಡಿದಾಗ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ. ಬಳಿಕ ಆಕೆಯ ರೂಮ್‌ಮೇಟ್ ಹಾಸ್ಟೆಲ್ ವಾರ್ಡನ್‌ಗೆ ವಿಷಯ ತಿಳಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಡೆತ್‌ನೋಟ್‌ನಲ್ಲೇನಿತ್ತು?
    ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ. ನಿಮ್ಮ ಆಸೆಯನ್ನು ನನ್ನಿಂದ ಈಡೇರಿಸಲಾಗಲಿಲ್ಲ. ಇಲ್ಲಿಗೆ ನನ್ನ ನಿಮ್ಮ ಸಂಬಂಧವನ್ನು ಕೊನೆಗೊಳಿಸುತ್ತಿದ್ದೇನೆ. ನೀವು ನನಗೆ ಬೇಕಾದಷ್ಟು ಪ್ರೀತಿ ನೀಡಿದ್ದೀರಿ. ದಯವಿಟ್ಟು ಅಳಬೇಡಿ. ನಿಮ್ಮ ಕನಸುಗಳನ್ನು ಈಡೇರಿಸಲು ನನ್ನಿಂದ ಸಾಧ್ಯವಾಗಲಿಲ್ಲ. ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಿ. ಅವಳು ನಿಮ್ಮ ಕನಸುಗಳನ್ನು ಈಡೇರಿಸುತ್ತಾಳೆ. ನಿಮ್ಮ ಪ್ರೀತಿಯ ಅದಿತಿ ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅದಿತಿಯ ಪೋಷಕರಿಗೆ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿನಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರವೇ ಸಾವಿನ ನಿಖರ ಕಾರಣ ತಿಳಿದುಬರಲಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ತ್ಯಾಗಿ ತಿಳಿಸಿದ್ದಾರೆ.

  • ಮಹಾ ಕುಂಭಮೇಳದಲ್ಲಿ ದ್ರೌಪದಿ ಮುರ್ಮು ಪುಣ್ಯಸ್ನಾನ – ದೇಶದ ಒಳಿತಿಗೆ ಪ್ರಾರ್ಥನೆ

    ಮಹಾ ಕುಂಭಮೇಳದಲ್ಲಿ ದ್ರೌಪದಿ ಮುರ್ಮು ಪುಣ್ಯಸ್ನಾನ – ದೇಶದ ಒಳಿತಿಗೆ ಪ್ರಾರ್ಥನೆ

    ಪ್ರಯಾಗ್‌ರಾಜ್: 144 ವರ್ಷಗಳ ಬಳಿಕ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ (Maha Kumbh Mela) ಪಾಲ್ಗೊಂಡ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಂದು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.

    ಪ್ರಯಾಗ್‌ರಾಜ್‌ಗೆ (Prayagraj) ಬಂದಿಳಿದ  ದ್ರೌಪದಿ ಮುರ್ಮು ಅವರನ್ನು ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಬರಮಾಡಿಕೊಂಡರು. ಇದನ್ನೂ ಓದಿ: ವಿಷ ಕುಡಿಯುವ ಪ್ರತಿಭಟನೆಗೆ ಕಿಯೋನಿಕ್ಸ್ ವೆಂಡರ್ಸ್ ಕರೆ – ಕಚೇರಿ ಎದುರು ಹೈಡ್ರಾಮಾ

    ರಾಷ್ಟçಪತಿ ದ್ರೌಪದಿ ಮುರ್ಮು 8 ಗಂಟೆಗಳ ಕಾಲ ಪ್ರಯಾಗ್‌ರಾಜ್‌ನಲ್ಲಿ ಸಮಯ ಕಳೆಯಲಿದ್ದಾರೆ. ಅಕ್ಷಯವತ್ ಹಾಗೂ ಹನುಮಾನ್ ಮಂದಿರಕ್ಕೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಡಿಜಿಟಲ್ ಕುಂಭ ಅನುಭವ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ. ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಏರಿಕೆಯಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗುತ್ತೆ: ರಾಮಲಿಂಗಾ ರೆಡ್ಡಿ

    ಭಾನುವಾರ ತ್ರಿವೇಣಿ ಸಂಗಮದಲ್ಲಿ ಸುಮರು 8.4 ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಮಹಾ ಕುಂಭಮೇಳ ಶುರುವಾದಾಗಿನಿಂದ ಇಲ್ಲಿಯವರೆಗೆ 42 ಕೋಟಿಗೂ ಅಧಿಕ ಜನರು ತ್ರಿವೇಣಿಯಲ್ಲಿ ಮಿಂದೆದ್ದಿದ್ದಾರೆ.  ಇದನ್ನೂ ಓದಿ: ಡಿಕೆಶಿ ಪುಣ್ಯಸ್ನಾನ – ಎಷ್ಟು ಪಾಪ ಕಳೀತು ಅಂತ ಖರ್ಗೆ ವರದಿ ಪಡೆಯಬೇಕು: ಯತ್ನಾಳ್ ಲೇವಡಿ

  • ಮಹಾ ಕುಂಭ ಮೇಳದಲ್ಲಿ 3ನೇ ಬಾರಿ ಅಗ್ನಿ ಅವಘಡ – ಭಕ್ತರು ಸೇಫ್‌

    ಮಹಾ ಕುಂಭ ಮೇಳದಲ್ಲಿ 3ನೇ ಬಾರಿ ಅಗ್ನಿ ಅವಘಡ – ಭಕ್ತರು ಸೇಫ್‌

    ಪ್ರಯಾಗ್‌ರಾಜ್‌: ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮತ್ತೊಂದು ಅಗ್ನಿ ಅವಘಡ (Maha Kumbh Fire) ಸಂಭವಿಸಿದೆ.

    ಮಹಾಕುಂಭ ನಗರದ (Maha Kumbh Nagar) ಸೆಕ್ಟರ್‌ 18ರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: 2027ಕ್ಕೆ ಚಂದ್ರಯಾನ-4, 2026ಕ್ಕೆ ಗಗನಯಾನ: ಜಿತೇಂದ್ರ ಸಿಂಗ್‌

    ಸೆಕ್ಟರ್‌ 18ರ‌ ತುಳಸಿ ಚೌರಾಹಾ ಬಳಿಕ ಕ್ಯಾಂಪ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಖಾಕ್ ಚೌಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಯೋಗೇಶ್ ಚತುರ್ವೇದಿ ತಿಳಿಸಿದ್ದಾರೆ. ಇದನ್ನೂ ಓದಿ: ಕುಂಭಮೇಳದಲ್ಲಿ ಡಿಕೆಶಿ ಪುತ್ರಿ – ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಐಶ್ವರ್ಯ

    3ನೇ ಅವಘಡ:
    ಮಹಾ ಕುಂಭಮೇಳದಲ್ಲಿ 3ನೇ ಬಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಕಳೆದ ಜನವರಿ 30 ರಂದು ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಕನಿಷ್ಠ 15 ಟೆಂಟ್‌ಗಳು ಭಸ್ಮವಾಗಿದ್ದವು. ಇಂದು 3ನೇ ಬಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಇದನ್ನೂ ಓದಿ: RBI: 5 ವರ್ಷಗಳ ಬಳಿಕ ರೆಪೊ ದರ ಕಡಿತ ಮಾಡಿದ ಆರ್‌ಬಿಐ

    39.7 ಕೋಟಿ ಜನರಿಂದ ಪುಣ್ಯಸ್ನಾನ:
    ಫೆಬ್ರವರಿ 26ರ ವರೆಗೆ ನಡೆಯಲಿರುವ ಮಹಾ ಕುಂಭಮೇಳದಲ್ಲಿ 15 ಲಕ್ಷ ಮಂದಿ ವಿದೇಶಿಯರು ಸೇರಿದಂತೆ 45 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ನಿರೀಕ್ಷೆ ಹೊಂದಲಾಗಿತ್ತು. ಆದ್ರೆ ಯುಪಿ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಈಗಾಗಲೇ, 39.7 ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ.

  • ಬಸಂತ ಪಂಚಮಿ – ಪ್ರಯಾಗ್‌ರಾಜ್‌ನಲ್ಲಿ ಸೋಮವಾರ 3 ಕೋಟಿ ಭಕ್ತರಿಂದ ಪವಿತ್ರ ಸ್ನಾನ

    ಬಸಂತ ಪಂಚಮಿ – ಪ್ರಯಾಗ್‌ರಾಜ್‌ನಲ್ಲಿ ಸೋಮವಾರ 3 ಕೋಟಿ ಭಕ್ತರಿಂದ ಪವಿತ್ರ ಸ್ನಾನ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ (Maha Kumbh Mela) ಪವಿತ್ರ ಬಸಂತ ಪಂಚಮಿ  ಹಿನ್ನೆಲೆ ಸೋಮವಾರ ಕನಿಷ್ಠ ಮೂರು ಕೋಟಿ ಜನರು ಪವಿತ್ರ ಸ್ನಾನ ಮಾಡುವ ನಿರೀಕ್ಷೆಯಿದೆ.

    ಬಸಂತ ಪಂಚಮಿ (Basant Panchami) ಹಿನ್ನೆಲೆ ಪ್ರಯಾಗ್‌ರಾಜ್‌ನಲ್ಲಿ ಮೂರನೇ ಅಮೃತ ಸ್ನಾನಕ್ಕೆ ಸಕಲ ಸಿದ್ಧತೆ ನಡೆದಿದೆ. ಮೌನಿ ಅಮಾವಾಸ್ಯೆಯಂದು ಮಹಾ ಕುಂಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ 30 ಮಂದಿ ಸಾವನ್ನಪ್ಪಿದ್ದು, 90ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದ ಹಿನ್ನೆಲೆ ಸೋಮವಾರ ನಡೆಯುವ ಅಮೃತ ಸ್ನಾನದ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ. ತ್ರಿವೇಣಿ ಸಂಗಮದ ಘಾಟ್‌ಗಳ ಮೇಲೆ ನಿಗಾ ವಹಿಸಿರುವ ಪೊಲೀಸರು ಯಾವುದೇ ಅವಘಡಗಳಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ಇದನ್ನೂ ಓದಿ: ಕಾಲ್ತುಳಿತ ಪ್ರಕರಣ – ಮರಣೋತ್ತರ ಪರೀಕ್ಷೆ ನಡೆಸದೇ ಯುಪಿ ಸರ್ಕಾರದಿಂದ ಡೆತ್ ಸರ್ಟಿಫಿಕೇಟ್

    ಮಹಾಕುಂಭದ ಎಲ್ಲಾ 25 ಸೆಕ್ಟರ್‌ಗಳು ಹಾಗೂ 30 ಪಾಂಟೂನ್ ಸೇತುವೆಗಳು ಮತ್ತು ಪ್ರಮುಖ ಬ್ಯಾರಿಕೇಡ್ ವಲಯಗಳ ಮೇಲ್ವಿಚಾರಣೆ ನಡೆಸಲಾಗಿದೆ. ಕಂಟ್ರೋಲ್ ರೂಂ ಮೂಲಕ ಕುಂಭ ಕಮಾಂಡ್ ತಂಡದಿಂದ ಮೇಲ್ವಿಚಾರಣೆ ನಡೆಸಲಾಗಿದೆ. 3,000ಕ್ಕೂ ಅಧಿಕ ಕ್ಯಾಮೆರಾ ಮೂಲಕ ನಿಗಾ ಇರಿಸಲಾಗಿದೆ. ಸ್ನಾನದ ನಂತರ ಘಾಟ್‌ಗಳಲ್ಲಿ ಕಾಲಹರಣ ಮಾಡದಂತೆ, ಊಟೋಪಚಾರ ಮಾಡದಂತೆ ಸರ್ಕಾರದಿಂದ ಮನವಿ ಮಾಡಲಾಗಿದೆ. ಸ್ನಾನದ ಬಳಿಕ ಘಾಟ್‌ನಿಂದ ನಿರ್ಗಮಿಸಿ ಗೊತ್ತುಪಡಿಸಿದ ಸ್ಥಳಗಳಲ್ಲಿ ಊಟೊಪಚಾರಕ್ಕೆ ಸಲಹೆ ನೀಡಲಾಗಿದೆ. ಇದನ್ನೂ ಓದಿ: ಭಾರತಕ್ಕೆ ರನ್‌ಗಳ ʻಅಭಿಷೇಕʼ – ಇಂಗ್ಲೆಂಡ್‌ ವಿರುದ್ಧ 4-1 ಅಂತರದಲ್ಲಿ ಸರಣಿ ಜಯ

    ಈಗಾಗಲೇ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಸಭೆ ನಡೆಸಿದ್ದಾರೆ. ಈ ಹಿಂದೆ ಯಶಸ್ವಿ ಕುಂಭಮೇಳ ನಿಭಾಯಿಸಿದ್ದ ಇಬ್ಬರು ಅಧಿಕಾರಿಗಳಿಗೆ ವಿಶೇಷ ಜವಾಬ್ದಾರಿ ವಹಿಸಲಾಗಿದೆ. ಇದನ್ನೂ ಓದಿ: ಕೇರಳಕ್ಕೆ ಅನುದಾನ ಬೇಕಿದ್ರೆ ʻ ಹಿಂದುಳಿದ ರಾಜ್ಯʼ ಎಂದು ಘೋಷಿಸಲಿ: ಜಾರ್ಜ್‌ ಕುರಿಯನ್‌

  • Maha Kumbh 2025 – 77 ದೇಶಗಳ ರಾಜತಾಂತ್ರಿಕರು ಸೇರಿ 30 ಕೋಟಿ ಭಕ್ತರಿಂದ ಪುಣ್ಯಸ್ನಾನ

    Maha Kumbh 2025 – 77 ದೇಶಗಳ ರಾಜತಾಂತ್ರಿಕರು ಸೇರಿ 30 ಕೋಟಿ ಭಕ್ತರಿಂದ ಪುಣ್ಯಸ್ನಾನ

    ಪ್ರಯಾಗ್‌ರಾಜ್: ಇಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿಂದು (Maha Kumbh Mela) 77 ದೇಶಗಳ ರಾಜತಾಂತ್ರಿಕರು (Diplomats) ಪುಣ್ಯ ಸ್ನಾನ ಮಾಡಿದ್ದಾರೆ.

    ಕುಂಭಮೇಳದಲ್ಲಿ ಈವರೆಗೂ 30 ಕೋಟಿ ಭಕ್ತರು ಪವಿತ್ರಸ್ನಾನ ಮಾಡಿದ್ದಾರೆ. ಈ 19 ದಿನದಲ್ಲಿ ಒಂದು ಲಕ್ಷ ಮಂದಿ 650ಕ್ಕೂ ಹೆಚ್ಚು ವಿಮಾನಗಳಲ್ಲಿ ಪ್ರಯಾಗ್‌ರಾಜ್‌ಗೆ ಬಂದು ಹೋಗಿದ್ದಾರೆ. ಇದನ್ನೂ ಓದಿ: ದೆಹಲಿ ಚುನಾವಣೆಗೆ 4 ದಿನ ಇರುವಾಗಲೇ ಶಾಕ್‌ – ಆಪ್‌ನ 8 ಮಂದಿ ನಿರ್ಗಮಿತ ಶಾಸಕರು ಬಿಜೆಪಿ ಸೇರ್ಪಡೆ

    ಕುಂಭಮೇಳದ ಕಾರಣ ಅಯೋಧ್ಯೆಗೆ 10 ದಿನದಲ್ಲಿ 70 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದಾರೆ. ನಿತ್ಯ ಸರಾಸರಿ 7 ಲಕ್ಷ ಮಂದಿ ಬಾಲರಾಮನ ದರ್ಶನ ಮಾಡಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ಎಲ್ಲಾ ಥರದಲ್ಲಿ ಅನ್ಯಾಯ ಆಗಿದೆ: ಡಿಕೆಶಿ

  • ಅತ್ಯಾಚಾರ ಪ್ರಕರಣ; ಕಾಂಗ್ರೆಸ್‌ ಸಂಸದ ರಾಕೇಶ್‌ ರಾಥೋಡ್‌ ಬಂಧನ

    ಅತ್ಯಾಚಾರ ಪ್ರಕರಣ; ಕಾಂಗ್ರೆಸ್‌ ಸಂಸದ ರಾಕೇಶ್‌ ರಾಥೋಡ್‌ ಬಂಧನ

    ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಕಾಂಗ್ರೆಸ್ (Congress) ಸಂಸದ ರಾಕೇಶ್ ರಾಥೋಡ್ (Rakesh Rathore) ಅವರನ್ನು ಗುರುವಾರ ಬಂಧಿಸಲಾಗಿದೆ.

    ಉತ್ತರ ಪ್ರದೇಶದ ಸೀತಾಪುರದ ಲೋಕಸಭಾ ಸಂಸದ ರಾಥೋಡ್‌ರನ್ನು ಬಂಧಿಸಿ ಭಾರೀ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇದನ್ನೂ ಓದಿ: ಚಂಡೀಗಢ ಮೇಯರ್‌ ಚುನಾವಣೆ ಗೆದ್ದ ಬಿಜೆಪಿ; ಎಎಪಿ-ಕಾಂಗ್ರೆಸ್‌ ಮೈತ್ರಿಗೆ ಮುಖಭಂಗ

    ಕಳೆದ ನಾಲ್ಕು ವರ್ಷಗಳಿಂದ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಶೋಷಣೆ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಜ.17 ರಂದು ಪೊಲೀಸರು, ರಾಥೋಡ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

    ದೂರುದಾರ ಮಹಿಳೆ ಕರೆ ವಿವರಗಳು ಮತ್ತು ಕರೆ ರೆಕಾರ್ಡಿಂಗ್‌ಗಳನ್ನು ಸಹ ಪೊಲೀಸರಿಗೆ ಒದಗಿಸಿದ್ದಾರೆ. ಇದಕ್ಕೂ ಮುನ್ನ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಆರೋಪಿ ರಾಥೋಡ್‌ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನೂ ಓದಿ: ಕ್ಲಾಸ್‌ ರೂಂನಲ್ಲೇ ವಿದ್ಯಾರ್ಥಿ ಜೊತೆ ಪ್ರೊಫೆಸರ್‌ ವಿವಾಹ – ವೀಡಿಯೋ ವೈರಲ್‌

  • ಮಹಾ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ 30 ಮಂದಿ ಬಲಿ – ಇಂದು ಪ್ರಯಾಗ್‌ರಾಜ್‌ಗೆ ಯೋಗಿ ಭೇಟಿ

    ಮಹಾ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ 30 ಮಂದಿ ಬಲಿ – ಇಂದು ಪ್ರಯಾಗ್‌ರಾಜ್‌ಗೆ ಯೋಗಿ ಭೇಟಿ

    – ಬಸಂತ ಪಂಚಮಿ ತಯಾರಿ ಪರಿಶೀಲನೆ

    ಲಕ್ನೋ: ಮಹಾ ಕುಂಭಮೇಳದಲ್ಲಿ (Maha Kumbh Mela) ಕಾಲ್ತುಳಿತಕ್ಕೆ (Stampede) 30 ಮಂದಿ ಸಾವು ಕಂಡ ಹಿನ್ನೆಲೆ ಇಂದು ಪ್ರಯಾಗರಾಜ್‌ಗೆ (Prayagraj) ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

    ಫೆ.3ರಂದು ಬಸಂತ ಪಂಚಮಿ ಹಿನ್ನೆಲೆ ಮತ್ತೊಂದು ಅಮೃತ ಸ್ನಾನ ನಡೆಯಲಿದೆ. ಈ ಹಿನ್ನೆಲೆ ಯೋಗಿ ಆದಿತ್ಯನಾಥ್ (Yogi Adityanath) ತಯಾರಿ ಪರಿಶೀಲನೆ ನಡೆಸಲಿದ್ದಾರೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ಕ್ರಿಕೆಟ್‌ ಟೂರ್ನಿ – ಪಬ್ಲಿಕ್‌ ವಾರಿಯರ್ಸ್‌ ಚಾಂಪಿಯನ್‌

    ಫೆ.1ರಂದು 50ಕ್ಕೂ ಹೆಚ್ಚು ದೇಶಗಳ ಉಪಾಧ್ಯಕ್ಷರು ಹಾಗೂ ರಾಯಭಾರಿಗಳು ಆಗಮಿಸಲಿದ್ದಾರೆ. ಫೆ.5ರಂದು ಪ್ರಧಾನಿ ನರೇಂದ್ರ ಮೋದಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲಿದ್ದಾರೆ. ಈ ಹಿನ್ನೆಲೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸುವ ಸಲುವಾಗಿ ಯೋಗಿ ಖುದ್ದು ಪ್ರಯಾಗ್‌ರಾಜ್‌ಗೆ ತೆರಳಿ ವ್ಯವಸ್ಥೆಗಳ ಪರಿಶೀಲನೆ ನಡೆಸಲಿದ್ದಾರೆ. ಇದನ್ನೂ ಓದಿ: ರಾಯಚೂರಲ್ಲಿ ಅಮಾನವೀಯ ಘಟನೆ – ಮರಕ್ಕೆ ಕಟ್ಟಿ ಮಹಿಳೆ ಮೇಲೆ ಮನಬಂದಂತೆ ಹಲ್ಲೆ

    ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯ ಬಗ್ಗೆ ಭಾರೀ ಬೇಸರ ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದಾರೆ. ಅದರೊಂದಿಗೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಘಟನೆಯಲ್ಲಿ ಒಟ್ಟು 30 ಮಂದಿ ಸಾವು ಕಂಡಿದ್ದನ್ನು ಖಚಿತಪಡಿಸಿದ್ದು, 60 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಕಾಲ್ತುಳಿತದಲ್ಲಿ ಮೃತಪಟ್ಟ ವ್ಯಕ್ತಿಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಇದನ್ನೂ ಓದಿ: ಕುಂಭಮೇಳ ಕಾಲ್ತುಳಿತ ದುರಂತ – ಕನ್ನಡಿಗರ ನೆರವಿಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ