Tag: uttar pradesh

  • ಕಾರಿನಲ್ಲಿ ಹೆಲ್ಮೆಟ್ ಹಾಕದ್ದಕ್ಕೆ ಚಾಲಕನ ಮೇಲೆ ಬಿತ್ತು ದಂಡ

    ಕಾರಿನಲ್ಲಿ ಹೆಲ್ಮೆಟ್ ಹಾಕದ್ದಕ್ಕೆ ಚಾಲಕನ ಮೇಲೆ ಬಿತ್ತು ದಂಡ

    ಲಕ್ನೋ: ಉತ್ತರ ಪ್ರದೇಶದ ಆಲಿಘರ್‌ನಲ್ಲಿ ಟ್ರಾಫಿಕ್ ಪೊಲೀಸರು ಕಾರು ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿದ್ದು, ಆ ಚಾಲಕ ಹೆಲ್ಮೆಟ್ ಹಾಕಿಕೊಂಡೇ ಈಗ ಕಾರು ಚಲಾಯಿಸುತ್ತಿದ್ದಾರೆ.

    ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎಂದು ಸಂಚಾರಿ ನಿಯಮಗಳಲ್ಲಿ ಜಾರಿಯಲ್ಲಿ ಇರುವುದು ಎಲ್ಲರಿಗೂ ತಿಳಿದಿದೆ ಆದರೆ ಉತ್ತರ ಪ್ರದೇಶದಲ್ಲಿ ಕಾರಿನಲ್ಲಿ ಹೆಲ್ಮೆಟ್ ಹಾಕಿಲ್ಲ ಎಂದು ಪೊಲೀಸರು ಚಾಲಕನಿಗೆ ದಂಡ ಹಾಕಿದ್ದಾರೆ. ಕಾರು ಚಾಲಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕೆಂಬ ನಿಯಮವಿದೆ ಆದರೆ ಹೆಲ್ಮೆಟ್ ಧರಿಸಬೇಕೆಂಬ ನಿಯಮ ಇಲ್ಲದಿದ್ದರೂ ಪೊಲೀಸರು ದಂಡ ಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ಚಾಲಕ ಈಗ ದಿನವೂ ಹೆಲ್ಮೆಟ್ ಹಾಕಿಕೊಂಡೇ ಕಾರು ಚಲಾಯಿಸುತ್ತಿದ್ದಾರೆ.

    ಆಲಿಘರ್‌ನ ಪಿಯುಷ್ ವರ್ಶ್ನಿ ಅವರು ಕಾರಿನಲ್ಲಿ ಹೆಲ್ಮೆಟ್ ಹಾಕದಿದ್ದಕ್ಕೆ ದಂಡ ಕಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಗಸ್ಟ್ 27ರಂದು ಕಾರು ಚಲಾಯಿಸುವಾಗ ಹೆಲ್ಮೆಟ್ ಧರಿಸಿಲ್ಲವೆಂದು ಟ್ರಾಫಿಕ್ ಪೊಲೀಸರು ನನಗೆ 500 ರೂ. ದಂಡ ವಿಧಿಸಿ, ಇ-ಚಲನ್ ನೀಡಿದ್ದರು. ಇ-ಚಲನ್‍ನಲ್ಲಿ ನನ್ನ ಕಾರಿನ ಸಂಖ್ಯೆ ಇತ್ತು. ಆದ್ದರಿಂದ ಮತ್ತೆ ದಂಡ ಹಾಕಬಹುದೆಂಬ ಭಯದಿಂದ ನಾನು ಹೆಲ್ಮೆಟ್ ಹಾಕಿಕೊಂಡೇ ಕಾರು ಒಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

    ಕಾರು ಚಲಾಯಿಸುವಾಗ ಹೆಲ್ಮೆಟ್ ಧರಿಸಿಲ್ಲ ಎಂದು ಸಂಚಾರಿ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ. ಇ-ಚಲನ್ ಮೇಲೆ ತನ್ನ ಕಾರಿನ ಸಂಖ್ಯೆ ಇದೆ ಎಂದು ಪಿಯುಷ್ ಪೊಲೀಸರಿಗೆ ದೂರು ನೀಡಿದ್ದಾರೆ. ಸಂಚಾರಿ ಪೊಲೀಸರ ಎಡವಟ್ಟಾಗಿದ್ದು, ಚಲನ್ ಪರಿಶೀಲನೆ ಮಾಡುತ್ತೇವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಸಂಬಂಧ ದೂರು ದಾಖಲಾದ ಬಳಿಕ ಪೊಲೀಸರು ಇ-ಚಲನ್ ಪರಿಶೀಲನೆ ಮಾಡಿದ್ದು, ತಪ್ಪಾಗಿ ದತ್ತಾಂಶ ನಮೂದಾಗಿರುವುದು ಬೆಳಕಿಗೆ ಬಂದಿದೆ. ಈ ಚಲನ್ ತಪ್ಪೆಂದು ಗೊತ್ತಾದ ಬಳಿಕ ಅದನ್ನು ಸರಿಪಡಿಸಿದ್ದೇವೆ ಎಂದು ಸಂಚಾರಿ ಪೊಲೀಸ್ ವರಿಷ್ಠಾಧಿಕಾರಿ ಅಜಿಜುಲ್ ಹಖ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

    ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ದೇಶದಲ್ಲೆಡೆ ದಂಡ ವಿಧಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. 80 ಸಾವಿರದವರೆಗೂ ದಂಡ ವಿಧಿಸಿರುವ ಉದಾಹರಣೆಗಳಿವೆ. ಈ ಹೊಸ ನಿಯಮದಿಂದ ಸಂಚಾರಿ ನಿಯಮ ಉಲ್ಲಂಘಿಸುವವರ ಜೇಬಿಗೆ ಭಾರೀ ಪ್ರಮಾಣದಲ್ಲಿ ಕತ್ತರಿ ಬೀಳುತ್ತಿದ್ದು, ನಿಯಮ ಜಾರಿಗೆ ಬಂದ ಕೆಲವೇ ದಿನಗಳಲ್ಲಿ ಸಂಚಾರಿ ಪೊಲೀಸರು ಒಂದೇ ದಿನದಲ್ಲಿ ಲಕ್ಷಾಂತರ ರೂ. ದಂಡವನ್ನು ಸಂಗ್ರಹಿಸುತ್ತಿದ್ದಾರೆ.

  • ಜಿಡಿಪಿ ಇಳಿಕೆಗೆ ಚಿದಂಬರಂ ಕಾರಣ – ಪತ್ರ ಬರೆದು ಐಎಎಫ್ ಮಾಜಿ ಅಧಿಕಾರಿ ಆತ್ಮಹತ್ಯೆ

    ಜಿಡಿಪಿ ಇಳಿಕೆಗೆ ಚಿದಂಬರಂ ಕಾರಣ – ಪತ್ರ ಬರೆದು ಐಎಎಫ್ ಮಾಜಿ ಅಧಿಕಾರಿ ಆತ್ಮಹತ್ಯೆ

    ಲಕ್ನೋ: ಅಸ್ಸಾಂ ಮೂಲದ ನಿವೃತ್ತ ವಾಯುಪಡೆಯ ಅಧಿಕಾರಿಯೊಬ್ಬರು ಉತ್ತರ ಪ್ರದೇಶದ ಅಲಹಾಬಾದ್‍ನ ಹೋಟೆಲ್‍ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದಿನ ಭಾರತದ ಆರ್ಥಿಕ ಪರಿಸ್ಥಿತಿಗೆ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಕಾರಣ ಎಂದು ಪತ್ರ ಬರೆದಿದ್ದಾರೆ.

    55 ವರ್ಷದ ನಿವೃತ್ತ ವಾಯುಪಡೆಯ ಅಧಿಕಾರಿ ಬಿಜಾನ್ ದಾಸ್ ಅಲಹಾಬಾದ್‍ನ ಖುಲ್ದಾಬಾದ್ ಪ್ರದೇಶದ ಹೋಟೆಲ್ ರೂಮ್‍ನಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಸೆಪ್ಟೆಂಬರ್ 6 ರಿಂದ ಬಿಜಾನ್ ದಾಸ್ ಅವರು ಪ್ರಯಾಗ್‍ನ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು. ಆದರೆ ಭಾನುವಾರ ತಮ್ಮ ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಇಡೀ ದಿನ ದಾಸ್ ಕೋಣೆಯಿಂದ ಹೊರಗೆ ಬಂದಿಲ್ಲ ಎಂದು ಕೆಲಸ ಮಾಡುವವರು ಮ್ಯಾನೇಜರ್ ಅವರಿಗೆ ತಿಳಿಸಿದ್ದಾರೆ. ಸಂಜೆಯಾದರೂ ಬಾರದೇ ಇದ್ದಾಗ ಸಿಬ್ಬಂದಿ ಕೋಣೆಯ ಕಿಟಿಕಿಯಿಂದ ನೋಡಿದಾಗ ಅವರು ಸೀಲಿಂಗ್ ಫ್ಯಾನ್‍ಗೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ.

    ನಂತರ ಒಳಗೆ ಹೋಗಿ ನೋಡಿದಾಗ ಅವರಿಗೆ ಡೆತ್ ನೋಟ್ ಸಿಕ್ಕಿದೆ. 5 ಪುಟಗಳ ಸುದೀರ್ಘ ಪತ್ರ ಬರೆದಿರುವ ಮಾಜಿ ಐಎಎಫ್ ಅಧಿಕಾರಿ ಬಿಜಾನ್ ದಾಸ್, ಆ ಪತ್ರದಲ್ಲಿ ದೇಶದ ಪ್ರಸ್ತುತ ಆರ್ಥಿಕ ಸ್ಥಿತಿಗೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ದೂಷಿಸಿದ್ದಾರೆ ಮತ್ತು ಮಂದಗತಿಗೆ ಸಾಗುತ್ತಿರುವ ಭಾರತದ ಆರ್ಥಿಕ ಪರಿಸ್ಥಿತಿಗೆ ಮೋದಿ ಸರ್ಕಾರವನ್ನು ದೂಷಿಸಬಾರದು ಎಂದು ಹೇಳಿದ್ದಾರೆ.

    ನಾವು ಈ ಹಿಂದೆ ಮಾಡಿರುವ ತಪ್ಪುಗಳು ನಮ್ಮ ದೇಶದ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿವೆ. ಇದ್ದರಿಂದ ಈಗಿನ ದೇಶದ ಆರ್ಥಿಕ ಪರಿಸ್ಥಿತಿಗೆ ಮೋದಿ ಅವರ ಸರ್ಕಾರ ಹೊಣೆಯಲ್ಲ. ಈ ಸರ್ಕಾರವನ್ನು ದೂಷಿಸುವುದು ತಪ್ಪು. ನೋಟ್ ಬ್ಯಾನ್ ಮತ್ತು ಜಿಎಸ್‍ಟಿ ಆರ್ಥಿಕತೆಯ ಮೇಲೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಈಗ ಸೃಷ್ಟಿಯಾಗಿರುವ ಸಮಸ್ಯೆ ತಾತ್ಕಾಲಿಕ. ಈಗಿನ ಆರ್ಥಿಕ ಪರಿಸ್ಥಿತಿಗೆ ಹಿಂದಿನ ಸರ್ಕಾರ ಮತ್ತು ಆಗಿನ ಹಣಕಾಸು ಸಚಿವ ಕಾರಣ ಎಂದು ಪತ್ರದಲ್ಲಿ ಬರೆದಿದ್ದಾರೆ.

    ಈ ಪತ್ರದಲ್ಲಿ ತನ್ನ ವೈಯಕ್ತಿಕ ವೈಫಲ್ಯಗಳ ಬಗ್ಗೆ ಬರೆದಿರುವ ಬಿಜಾನ್ ದಾಸ್ ಅವರು, ತಮ್ಮ ಚಿಕ್ಕ ಮಗನಿಗಾಗಿ ನಾನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಅವನು ಗಾಯಕ ಮತ್ತು ರಿಯಾಲಿಟಿ ಶೋ ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಭಾಗವಹಿಸಿದ್ದನು. ಗಾಯಕನಾಗುವ ಕನಸುಗಳನ್ನು ಪೂರ್ಣ ಮಾಡಲು ತಮ್ಮ ಮಗ ವಿವೇಕ್ ದಾಸ್ ಅವರಿಗೆ ಸಹಾಯ ಮಾಡುವಂತೆ ಪಿಎಂ ಮೋದಿಯವರನ್ನು ಬಿಜನ್ ದಾಸ್ ಕೇಳಿಕೊಂಡಿದ್ದಾರೆ.

    ತನ್ನ ಮಗ ತನ್ನ ದೇಹವನ್ನು ನೋಡಬೇಕೆಂದು ನಾನು ಬಯಸುವುದಿಲ್ಲವಾದ್ದರಿಂದ ತನ್ನ ಶವಸಂಸ್ಕಾರಕ್ಕಾಗಿ ತನ್ನ ಕುಟುಂಬವನ್ನು ಕರೆಯದಂತೆ ಅಲಹಾಬಾದ್ ಆಡಳಿತವನ್ನು ಕೋರಿಕೊಂಡಿದ್ದಾರೆ. ನನ್ನ ಶವವನ್ನು ಅಲಹಾಬಾದ್‍ನಲ್ಲಿಯೇ ಹೂಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಪೊಲೀಸರು ಕುಟುಂಬವನ್ನು ಸಂಪರ್ಕಿಸಿದ್ದಾರೆ.

    ಈ ಪತ್ರದ ಜೊತೆಗೆ ಸ್ವಂತ ಶವ ಸಂಸ್ಕಾರಕ್ಕಾಗಿ 1500 ರೂ ಮತ್ತು ರೂಮ್‍ಗೆ ಬಾಕಿ ಕೊಡಬೇಕಾದ 500 ರೂಗಳನ್ನು ಬಿಜಾನ್ ದಾಸ್ ಇಟ್ಟಿದ್ದಾರೆ. ಭಾರತದ ಆರ್ಥಿಕ ಸ್ಥಿತಿ ಸರಿ ಇಲ್ಲದ ಕಾರಣದಿಂದಾಗಿ ಅಂತ್ಯಸಂಸ್ಕಾರ ಮಾಡುವವರಿಗೆ ಹೆಚ್ಚಿನ ಹಣವನ್ನು ನೀಡಲು ಸಾಧ್ಯವಿಲ್ಲ ಎಂದು ದಾಸ್ ಪತ್ರದಲ್ಲಿ ಬರೆದಿದ್ದಾರೆ.

  • 8ರ ಬಾಲಕಿ ಮೇಲೆ 6ನೇ ತರಗತಿ ವಿದ್ಯಾರ್ಥಿ ಸೇರಿ ಮೂವರಿಂದ ಗ್ಯಾಂಗ್ ರೇಪ್

    8ರ ಬಾಲಕಿ ಮೇಲೆ 6ನೇ ತರಗತಿ ವಿದ್ಯಾರ್ಥಿ ಸೇರಿ ಮೂವರಿಂದ ಗ್ಯಾಂಗ್ ರೇಪ್

    ಲಕ್ನೋ: 8 ವರ್ಷದ ಬಾಲಕಿ ಮೇಲೆ 6ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಹಾಗೂ ಆತನ ಇಬ್ಬರು ಸಹೋದರರು ಸೇರಿ ಅತ್ಯಾಚಾರ ಮಾಡಿರುವ ಅಮಾನುಷ ಘಟನೆ ಬೆಳಕಿಗೆ ಬಂದಿದೆ.

    ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಬಾಗ್ಪಾಟ್ ಪ್ರದೇಶದ ರಾಮಲಾ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ 6ನೇ ತರಗತಿ ವಿದ್ಯಾರ್ಥಿ ಹಾಗೂ ಆತನ ಸಹೋದರರು ಸೇರಿ, 3ನೇ ತರಗತಿ ಬಾಲಕಿ ಮೇಲೆ ಶಾಲೆಯ ಶೌಚಾಲಯದಲ್ಲೇ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

    ಈ ಸಂಬಂಧ ಬಾಲಕಿಯ ತಂದೆ ಆರೋಪಿಗಳ ವಿರುದ್ಧ ದೂರು ನೀಡಲು ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿದ್ದರು. ಆದರೆ ಅಲ್ಲಿ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲು ಪೊಲೀಸರು 15 ದಿನಗಳ ಕಾಲ ನಿರಾಕರಿಸಿದ್ದರು. ಹಾಗೆಯೇ ಸ್ಟೇಷನ್ ಹೌಸ್ ಅಧಿಕಾರಿಯನ್ನು ಕೂಡ ಈ ಪ್ರಕರಣವನ್ನು ಕೈಬಿಡುವಂತೆ ಬಾಲಕಿಯ ತಂದೆಗೆ ಒತ್ತಾಯಿಸಿದ್ದರು ಎನ್ನಲಾಗಿದೆ.

    ಸೋಮವಾರದಂದು ಬಾಲಕಿ ಆರೋಗ್ಯದಲ್ಲಿ ಏರುಪೇರಾದಾಗ ಈ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಬೇಜವಾಬ್ಧಾರಿ ಮೆರೆದ ಸ್ಟೇಷನ್ ಹೌಸ್ ಅಧಿಕಾರಿಯನ್ನು ಕರ್ತವ್ಯದಿಂದ ವಜಾಗೊಳಿಸಿದ್ದಾರೆ. ಸದ್ಯ ಸಂತ್ರಸ್ತ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

    ಈ ಬಗ್ಗೆ ಬಾಗ್ಪತ್ ಎಸ್‍ಪಿ ಪ್ರತಾಪ್ ಗೋಪೇಂದ್ರ ಯಾದವ್ ಮಾತನಾಡಿ, ಘಟನೆ 6ನೇ ತರಗತಿಯ ಓದುತ್ತಿರುವ ವಿದ್ಯಾರ್ಥಿಯ ಅಣ್ಣ ಈ ಕೃತ್ಯವೆಸೆಗಿದ್ದಾನೆ ಎನ್ನಲಾಗಿದೆ. ಆದರೆ ಬಾಲಕಿಯ ತಂದೆ ವಿದ್ಯಾರ್ಥಿ ಜೊತೆಗೆ ಅವನ ಇನ್ನಿಬ್ಬರು ಸಹೋದರರ ಹೆಸರನ್ನೂ ಕೂಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ತನಿಖೆ ನಂತರವೇ ನಿಜಾಂಶ ತಿಳಿಯಲಿದೆ ಎಂದು ಹೇಳಿದರು.

    ಸದ್ಯ ಈ ಸಂಬಂಧ ಮೂವರು ಆರೋಪಿಗಳ ವಿರುದ್ಧವೂ ಐಪಿಸಿ ಸೆಕ್ಷನ್ 376ರ(ಅತ್ಯಾಚಾರ) ಅಡಿಯಲ್ಲಿ ಹಾಗೂ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಮಂಗಳವಾರದಂದು ಬಾಲಕಿಯನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ. ಒಮ್ಮೆ ಬಾಲಕಿ ಚೇತರಿಸಿಕೊಂಡ ಬಳಿಕ ಆಕೆಯ ಹೇಳಿಕೆ ಪಡೆದು, ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಎಸ್‍ಪಿ ತಿಳಿಸಿದರು.

  • ಊಟಕ್ಕೆ ರೊಟ್ಟಿ ಮಾಡಿಲ್ಲವೆಂದು ಸಹೋದರಿಗೇ ಗುಂಡಿಕ್ಕಿ ಕೊಂದ

    ಊಟಕ್ಕೆ ರೊಟ್ಟಿ ಮಾಡಿಲ್ಲವೆಂದು ಸಹೋದರಿಗೇ ಗುಂಡಿಕ್ಕಿ ಕೊಂದ

    ಲಕ್ನೋ: ಊಟಕ್ಕೆ ರೊಟ್ಟಿ ಮಾಡಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಯುವಕನೊಬ್ಬ ತನ್ನ ಸಹೋದರಿಯನ್ನು ಗುಂಡಿಕ್ಕಿ ಕೊಂದು ವಿಕೃತಿ ಮೆರೆದಿರುವ ಘಟನೆ ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದಿದೆ.

    ಲಖಿಂಪುರ್ ಖೇರಿಯ ಬರ್ಖೇಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬರ್ಖೇಡಾ ಗ್ರಾಮದ ನಿವಾಸಿ ಸೋನು ಸಿಂಗ್ ತನ್ನ ಸೋದರ ಸಂಬಂಧಿ ಸುಮನ್‍ನನ್ನು ಗುಂಡಿಕ್ಕಿ ಕೊಲೆಗೈದಿದ್ದಾನೆ. ಎರಡು ದಿನಗಳ ಹಿಂದೆ ಸುಮನ್ ತನ್ನ ಅತ್ತೆಯ ಮನೆಗೆ ಬಂದಿದ್ದಳು. ಈ ವೇಳೆ ಸೋನುಗೆ ಅಡುಗೆ ಮಾಡಿ ಊಟ ಬಡಿಸುತ್ತಿದ್ದಳು. ಕುಡಿದು ಮನೆಗೆ ಬಂದಿದ್ದ ಸೋನುಗೆ ಆ ಅಡುಗೆ ಇಷ್ಟವಿರಲಿಲ್ಲ. ಆಗ ಆತ ರೊಟ್ಟಿ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದನು. ಈ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು, ಮಾತಿಗೆ ಮಾತು ಬೆಳೆದು ಜಗಳವಾಗಿದೆ.

    ಇಷ್ಟಕ್ಕೆ ಕೋಪಗೊಂಡ ಸೋನು ಮನೆಯಲಿದ್ದ ತನ್ನ ತಂದೆಯ ಲೈಸನ್ಸ್ ಇರುವ ಬಂದೂಕನ್ನು ತೆಗೆದುಕೊಂಡು ಸೋದರಿಯ ತಲೆಗೆ ಗುಂಡು ಹೊಡೆದಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾಳೆ. ಒಂದು ವರ್ಷದ ಹಿಂದೆಯಷ್ಟೇ ಸುಮನ್ ವಿವಾಹವಾಗಿದ್ದರು.

    ಕೆಲವು ವರ್ಷಗಳ ಹಿಂದೆ ಸುಮನ್ ತಂದೆ ತೀರಿಹೋಗಿದ್ದರು. ಆ ಬಳಿಕ ಸುಮನ್‍ ತನ್ನ ಸೋದರ ಸಂಬಂಧಿ ಸೋನುವನ್ನೇ ತನ್ನ ನಿಜವಾದ ಸಹೋದರನಂತೆ ನೋಡಿಕೊಳ್ಳುತ್ತಿದ್ದರು. ಆದರೆ ಸೋನು ಸುಮನ್‍ರನ್ನು ಹತ್ಯೆ ಮಾಡುವಷ್ಟು ಕಟುಕನಾಗುತ್ತಾನೆ ಎಂದು ಯಾರೂ ಊಹೆ ಕೂಡ ಮಾಡಿರಲಿಲ್ಲ.

    ಘಟನೆಯ ಬಳಿಕ ಆರೋಪಿ ಸೋನು ಪರಾರಿ ಆಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಸೋನು ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಬಿಜೆಪಿ ಮುಖಂಡನಿಂದ ಸೊಸೆಗೆ ಲೈಂಗಿಕ ಕಿರುಕುಳ!

    ಬಿಜೆಪಿ ಮುಖಂಡನಿಂದ ಸೊಸೆಗೆ ಲೈಂಗಿಕ ಕಿರುಕುಳ!

    ಲಕ್ನೋ: ಬಿಜೆಪಿ ಮುಖಂಡನೊಬ್ಬ ತನ್ನ ಸೊಸೆಗೆ ಲೈಂಗಿಕ ಕಿರಿಕುಳ ನೀಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್‍ನಗರ ಜಿಲ್ಲೆಯ ಜನಸತ್ ಪಟ್ಟಣದಲ್ಲಿ ನಡೆದಿದೆ.

    ಬಿಜೆಪಿ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಮಹೇಶ್ ಚಂದ್ ಶರ್ಮಾ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಮಗ ಮತ್ತು ಸೊಸೆಯ ನಡುವಿನ ಆಸ್ತಿ ವಿವಾದದಿಂದಾಗಿ ಈ ಪ್ರಕರಣದಲ್ಲಿ ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ನಾನು ಲೈಂಗಿಕ ಕಿರುಕುಳ ನೀಡಿಲ್ಲ ಎಂದು ಮಹೇಶ್ ಚಂದ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.

    ಮಹೇಶ್ ಚಂದ್ ಶರ್ಮಾ ವಿರುದ್ಧ ಸೊಸೆ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 354(ಮಹಿಳೆಯ ಮುಗ್ದತೆ ದುರುಪಯೋಗ ಪಡಿಸಿಕೊಂಡು ಆಕೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಫೋರ್ಸ್) ಅಡಿ ಶುಕ್ರವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮತ್ತೊಂದು ಪ್ರಕರಣದಲ್ಲಿ, ಜನಸತ್ ಪೊಲೀಸ್ ಠಾಣೆ ಪ್ರದೇಶದ ಹಳ್ಳಿಯಲ್ಲಿ ಐವರು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದು, ಪ್ರಶ್ನಿಸಿದ ಆಕೆಯ ಕುಟುಂಬದ ಸದಸ್ಯರನ್ನೂ ಸಹ ಥಳಿಸಿದ್ದಾರೆ. ಪರಾರಿಯಾಗಿದ್ದ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಚಿನ್ಮಯಾನಂದ ಕೇಸ್: ಕಾಣೆಯಾಗಿದ್ದ ವಿದ್ಯಾರ್ಥಿನಿ ರಾಜಸ್ಥಾನದಲ್ಲಿ ಪತ್ತೆ

    ಚಿನ್ಮಯಾನಂದ ಕೇಸ್: ಕಾಣೆಯಾಗಿದ್ದ ವಿದ್ಯಾರ್ಥಿನಿ ರಾಜಸ್ಥಾನದಲ್ಲಿ ಪತ್ತೆ

    ಲಕ್ನೋ: ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಾಪತ್ತೆಯಾದ ವಿದ್ಯಾರ್ಥಿಯನ್ನು ರಾಜಸ್ಥಾನದಲ್ಲಿ ಪತ್ತೆ ಮಾಡಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಇಂದು ತಿಳಿಸಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಯುಪಿ ಪೊಲೀಸರು, ಶಹಜಹಾನ್ಪುರ್ ಪ್ರಕರಣಕ್ಕೆ ಸಂಬಂಧಿಸಿದ ವಿದ್ಯಾರ್ಥಿಯನ್ನು ತನ್ನ ಸ್ನೇಹಿತನೊಂದಿಗೆ ರಾಜಸ್ಥಾನದ ಶಹಜಹಾನ್ಪುರ್ ನಲ್ಲಿ ಪತ್ತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಈ ಪ್ರಕರಣದ ಬಗ್ಗೆ ಮಾತನಾಡಿರುವ ಯುಪಿ ಪೊಲೀಸ್ ಮುಖ್ಯಸ್ಥರು ನಾವು ಚಿನ್ಮಯಾನಂದ್ ಆಶ್ರಮದ ಮೇಲೆ ದಾಳಿ ನಡೆಸಿದ್ದೇವೆ. ನಮ್ಮ ಪೊಲೀಸರು ಅವರ ಆಶ್ರಮದಲ್ಲಿ ಹಲವಾರು ಜನರೊಂದಿಗೆ ಮಾತನಾಡಿ ತನಿಖೆ ಮಾಡಿದ್ದಾರೆ. ನಾವು ಆಕೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳವ ಕಡೆ ಮೊದಲ ಗಮನ ನೀಡುತ್ತೇವೆ ಎಂದು ಹೇಳಿದ್ದಾರೆ.

    ವಿದ್ಯಾರ್ಥಿಯ ಬಗ್ಗೆ ಸುಪ್ರೀಂ ಕೋರ್ಟಿಗೆ ಮಾಹಿತಿ ನೀಡಿರುವ ಉತ್ತರ ಪ್ರದೇಶದ ಸರ್ಕಾರ, ಪೊಲೀಸ್ ತಂಡದೊಂದಿಗೆ ವಿದ್ಯಾರ್ಥಿಯನ್ನು ಶಹಜಹಾನ್ಪುರಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ ಮತ್ತು ಈಗ ಫತೇಪುರ್ ಸಿಕ್ರಿಯಲ್ಲಿದ್ದಾಳೆ. ನಾವು ಅಧಿಕಾರಿಗಳಿಗೆ ಆಕೆಗೆ ಭದ್ರತೆ ನೀಡುವಂತೆ ಹೇಳಿದ್ದೇವೆ. ಸ್ನೇಹಿತನ ಜೊತೆ ವಿದ್ಯಾರ್ಥಿನಿಯನ್ನು ಇಂದು ದೆಹಲಿಗೆ ಕರೆದುಕೊಂಡು ಬರಲಾಗುತ್ತದೆ ಎಂದು ತಿಳಿಸಿದೆ.

    ನಡೆದಿದ್ದೇನು?
    ಮಾಜಿ ಕೇಂದ್ರ ಸಚಿವರೊಬ್ಬರು ಕಿರುಕುಳ ನೀಡುತ್ತಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ ವಿದ್ಯಾರ್ಥಿನಿ ಒಂದು ದಿನದ ನಂತರ, ಆಗಸ್ಟ್ 24 ರಿಂದ ಚಿನ್ಮಯಾನಂದ್ ಅವರ ಟ್ರಸ್ಟ್ ನಡೆಸುತ್ತಿರುವ ಕಾಲೇಜಿನಿಂದ ಕಾಣೆಯಾಗಿದ್ದಳು. ಆದರೆ ವಿಡಿಯೋದಲ್ಲಿ ಎಲ್ಲೂ ಸ್ವಾಮಿ ಚಿನ್ಮಯಾನಂದ್ ಅವರ ಹೆಸರನ್ನು ಹೇಳದ ವಿದ್ಯಾರ್ಥಿ ಕೇವಲ ಸಂತ ಸಮುದಾಯದ ಹಿರಿಯ ನಾಯಕ ಎಂದು ಮಾತ್ರ ಹೇಳಿದ್ದಳು.

    ಆದರೆ ವಿದ್ಯಾರ್ಥಿ ಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ನಂತರ ಆಕೆಯ ವಿಡಿಯೋ ಆಧರಿಸಿ, ಆಕೆಯ ತಂದೆ ಅವಳು ಅಧ್ಯಯನ ಮಾಡುತ್ತಿದ್ದ ಕಾಲೇಜಿನ ಮುಖ್ಯಸ್ಥರಾಗಿರುವ ಮಾಜಿ ಕೇಂದ್ರ ಸಚಿವರಾದ ಚಿನ್ಮಯಾನಂದ್ ಅವರ ವಿರುದ್ಧ ಆಗಸ್ಟ್ 27 ರಂದು ದೂರು ನೀಡಿದ್ದರು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಸಂಘ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಸಂತ್ರಸ್ತೆ ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದು, ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಈ ಸಂಬಂಧ ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಸ್ವೀಕಾರ ಮಾಡಿದ ಸುಪ್ರೀಂ ಬಾಲಕಿಯನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಯುಪಿ ಸರ್ಕಾರಕ್ಕೆ ಆದೇಶ ನೀಡಿತ್ತು.

  • ಖಾಸಗಿ ತರಬೇತಿ ವಿಮಾನ ಪತನ – ಆರು ಮಂದಿ ಬಚಾವ್

    ಖಾಸಗಿ ತರಬೇತಿ ವಿಮಾನ ಪತನ – ಆರು ಮಂದಿ ಬಚಾವ್

    ಲಕ್ನೋ: ಲ್ಯಾಂಡಿಂಗ್ ಸಮಯದಲ್ಲಿ ಚಕ್ರಕ್ಕೆ ವಿದ್ಯುತ್ ವಯರ್ ಸಿಕ್ಕಿಹಾಕಿಕೊಂಡ ಪರಿಣಾಮ ಖಾಸಗಿ ತರಬೇತಿ ವಿಮಾನ ಪತನಗೊಂಡಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ 6 ಮಂದಿ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಧಾನಿಪುರ ವಾಯುನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ. ಇಂದು ಬೆಳಗ್ಗೆ ವಾಯುನೆಲೆಯಲ್ಲಿ ವಿಟಿ-ಎವಿವಿ ವಿಮಾನ ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ಚಕ್ರಗಳಿಗೆ ವಿದ್ಯುತ್ ವಯರ್‌ಗಳು ಸಿಕ್ಕಿಹಾಕಿಕೊಂಡ ಪರಿಣಾಮ ವಿಮಾನ ಪತನವಾಗಿದೆ.

    ನಿರ್ವಹಣೆ ಸಂಬಂಧ ವಿಮಾನವನ್ನು ಧಾನಿಪುರದಲ್ಲಿ ಲ್ಯಾಂಡಿಂಗ್ ಮಾಡಲಾಗುತ್ತಿತ್ತು. ವಿಮಾನ ಪತನಗೊಂಡ ಬಳಿಕ ಅದರಲ್ಲಿ ಇದ್ದವರು ವಿಮಾನದಿಂದ ಹೇಗೋ ಹೊರಬಂದಿದ್ದಾರೆ. ನಂತರ ಕೆಲ ನಿಮಿಷಗಳಲ್ಲಿಯೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಸುಟ್ಟುಹೋಗಿದೆ. ಈ ಬಗ್ಗೆ ತಿಳಿದ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

  • ವರದಕ್ಷಿಣೆ ನೀಡದ ಮಾವನ ಕಿವಿ ಕತ್ತರಿಸಿ, ಅತ್ತೆಯ ಮೂಗು ಕಚ್ಚಿದ ಅಳಿಯ

    ವರದಕ್ಷಿಣೆ ನೀಡದ ಮಾವನ ಕಿವಿ ಕತ್ತರಿಸಿ, ಅತ್ತೆಯ ಮೂಗು ಕಚ್ಚಿದ ಅಳಿಯ

    ಲಕ್ನೋ: ವರದಕ್ಷಿಣೆ ನೀಡಿಲ್ಲ ಎಂಬ ಕಾರಣ ಅಳಿಯನೊಬ್ಬ ಮಾವನ ಕಿವಿ ಕತ್ತರಿಸಿ ಅತ್ತೆಯ ಮೂಗು ಕಚ್ಚಿದ ಘಟನೆ ಉತ್ತರ ಪ್ರದೇಶದ ಬರೇಲಿಯ ನಕಾಟಿಯಾ ಪ್ರದೇಶದಲ್ಲಿ ನಡೆದಿದೆ.

    ಹಲ್ಲೆ ಮಾಡಿದ ಅಳಿಯನನ್ನು ಮೊಹಮ್ಮದ್ ಅಶ್ಫಾಕ್ ಎಂದು ಗುರುತಿಸಲಾಗಿದ್ದು, ಹಲ್ಲೆಗೊಳಗಾದ ಅತ್ತೆ ಮಾವನನ್ನು, ಗಂಥಾ ರೆಹಮಾನ್ ಮತ್ತು ಗುಲ್ಶನ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಗುಲ್ಶನ್ ಅವರನ್ನು ಹೆಚ್ಚಿನ ಚಿಕೆತ್ಸೆಗಾಗಿ ದೆಹಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

    ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ (ಎಫ್‍ಸಿಐ) ನಾಲ್ಕನೇ ಹಂತದ ಉದ್ಯೋಗಿಯಾಗಿರುವ ಗಂಥಾ ರೆಹಮಾನ್ ಅವರ ತನ್ನ ಪುತ್ರಿ ಚಾಂದ್ ಬಿ ಅವರನ್ನು ಒಂದು ವರ್ಷದ ಹಿಂದೆ ಬರೇಲಿಯ ರೀಯಲ್ ಎಸ್ಟೇಟ್ ವ್ಯಾಪಾರಿಯಾದ ಮೊಹಮ್ಮದ್ ಅಶ್ಫಾಕ್‍ನಿಗೆ ಕೊಟ್ಟು ವಿವಾಹ ಮಾಡಿದ್ದಾರೆ. ಈ ಸಮಯದಲ್ಲಿ ರೆಹಮಾನ್ ತನ್ನ ಮಗಳಿಗೆ 10 ಲಕ್ಷ ರೂಪಾಯಿ ವರದಕ್ಷಿಣೆಯನ್ನು ಕೂಡ ನೀಡಿದ್ದಾರೆ. ಆದರೆ ಚಾಂದ್ ಬಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಆಕೆಯ ಗಂಡ 5 ಲಕ್ಷ ರೂ. ಹೆಚ್ಚು ವರದಕ್ಷಿಣೆ ನೀಡುವಂತೆ ಹೇಳಿದ್ದಾನೆ. ಆದರೆ ರೆಹಮಾನ್ ಇದನ್ನು ನಿರಾಕರಿಸಿದಾಗ, ಅಶ್ಫಾಕ್ ಭಾನುವಾರ ಚಂದ್ ಬಿಯನ್ನು ಥಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ವಿಷಯವನ್ನು ತಿಳಿದು ರೆಹಮಾನ್ ಮತ್ತು ಗುಲ್ಶನ್ ಜೊತೆಯಲ್ಲಿ ಮಗಳ ಮನೆಗೆ ಬಂದಿದ್ದಾರೆ. ಈ ವೇಳೆ ಎರಡು ಕುಟುಂಬದ ನಡುವೆ ಈ ವಿಚಾರಕ್ಕೆ ಮಾತುಕತೆ ನಡೆದಿದೆ. ಈ ವೇಳೆ ಕೋಪಗೊಂಡ ಅಶ್ಫಾಕ್ ಮತ್ತು ಅವರ ಕುಟುಂಬದವರು, ರೆಹಮಾನ್ ಮತ್ತು ಗುಲ್ಶನ್ ಅವರನ್ನು ಥಳಿಸಿದ್ದಾರೆ. ಈ ಜಗಳದಲ್ಲಿ ಅಶ್ಫಾಕ್ ಅತ್ತೆ ಗುಲ್ಶನ್ ಅವರ ಮೂಗು ಕಚ್ಚಿದ್ದಾನೆ ಮತ್ತು ಮಾವ ರೆಹಮಾನ್ ಅವರ ಕಿವಿಯನ್ನು ಚಾಕುವಿನಿಂದ ಕತ್ತರಿಸಿದ್ದಾನೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ಅವನಿಶ್ ಸಿಂಗ್, ಈ ಪ್ರಕರಣಕ್ಕೆ ಸಂಬಧಿಸಿದಂತೆ ಐಪಿಸಿ ಸೆಕ್ಷನ್ 323, 326 ಮತ್ತು 504ರ ಅಡಿಯಲ್ಲಿ ಅಶ್ಫಾಕ್ ಕುಟುಂಬದ ಐದು ಜನರ ಮೇಲೆ ಎಫ್‍ಐಆರ್ ದಾಖಲಾಗಿದೆ. ಅವರು ತಪ್ಪಿಸಿಕೊಂಡಿದ್ದು ಶೀಘ್ರದಲ್ಲೇ ಅವರನ್ನು ಬಂಧಿಸಲಿದ್ದೇವೆ ಎಂದು ಹೇಳಿದ್ದಾರೆ.

  • 6 ವರ್ಷದ ಬಾಲಕಿ ಮೇಲೆ ಅಪ್ರಾಪ್ತ ಸಹೋದರರಿಂದ ಗ್ಯಾಂಗ್ ರೇಪ್

    6 ವರ್ಷದ ಬಾಲಕಿ ಮೇಲೆ ಅಪ್ರಾಪ್ತ ಸಹೋದರರಿಂದ ಗ್ಯಾಂಗ್ ರೇಪ್

    ಲಕ್ನೋ: 6 ವರ್ಷದ ಬಾಲಕಿಯನ್ನು ಇಬ್ಬರು ಅಪ್ರಾಪ್ತ ವಯಸ್ಸಿನ ಸಹೋದರರು ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ.

    ಬಾಲಕಿಯು 1ನೇ ತರಗತಿಯವಳಾಗಿದ್ದು, ಮಂಗಳವಾರ ಮಧ್ಯಾಹ್ನ ಆರೋಪಿ ಮನೆಯ ಬಳಿ ಆಡುತ್ತಿರುವಾಗ ಕಾಣಿಯಾಗಿದ್ದಳು. ಮಗಳು ಕಾಣದಿದ್ದಾಗ ಕುಟುಂಬಸ್ಥರು ಹುಡುಕಲು ಪ್ರಾರಂಭಿಸಿದ್ದಾರೆ. ಆದರೆ, ಎಷ್ಟು ಹುಡುಕಿದರೂ ಸಹ ಬಾಲಕಿ ಪತ್ತೆಯಾಗಿಲ್ಲ. ಆಗ ಪೊಲೀಸರಿಗೆ ದೂರು ನೀಡಿದ್ದಾರೆ.

    ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಸಂಜೆಯಿಂದ ಬಾಲಕಿಯನ್ನು ಹುಡುಕಲು ಪ್ರಾರಂಭಿಸಿದ್ದಾರೆ. ರಾತ್ರಿಯಾದರೂ ಬಾಲಕಿ ಪತ್ತೆಯಾಗಿಲ್ಲ. ಬುಧವಾರ ಬೆಳಗ್ಗೆ ಆರೋಪಿಗಳ ತಾಯಿ ಪೊಲೀಸರ ಬಳಿ ಶರಣಾಗಿದ್ದು, ಮಕ್ಕಳು ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿದನ್ನು ಕಂಡು ಶವವನ್ನು ಎಸೆಯಲು ನಾನೇ ಸಹಾಯ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ.

    ಆರೋಪಿಗಳ ಮನೆಯಿಂದ ಸುಮಾರು 200 ಮೀ. ದೂರದಲ್ಲಿದ್ದ ಬಾಲಕಿಯ ದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಆರೋಪಿ ಬಾಲಕರನ್ನು ವಿಚಾರಣೆ ನಡೆಸಿದ್ದು, ಕ್ಯಾಂಡಿ ಆಮೀಷ ಒಡ್ಡಿ ಬಾಲಕಿಯನ್ನು ಕರೆದುಕೊಂಡು ಹೋಗಲಾಗಿತ್ತು ಎಂದು ಒಪ್ಪಿಕೊಂಡಿರುವುದಾಗಿ ಫೋಲ್‍ಬೆಹದ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಶ್ಯಾಮ್ ನರಿಯನ್ ಸಿಂಗ್ ತಿಳಿಸಿದ್ದಾರೆ.

    ಆರೋಪಿಗಳು 15 ಹಾಗೂ 12 ವರ್ಷದವರು, ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಶಾಲೆಯನ್ನು ಬಿಟ್ಟಿದ್ದಾರೆ. ಇವರ ತಂದೆ-ತಾಯಿ ಕಾರ್ಮಿಕರಾಗಿದ್ದು, ಬಾಲಕರು ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರು ಇಬ್ಬರು ಸಹೋದರರು ಹಾಗೂ ತಾಯಿಯನ್ನು ಬಂಧಿಸಲಾಗಿದೆ. ಮೂವರ ವಿರುದ್ಧ ಪೋಕ್ಸೋ ಕಾಯ್ದೆಯ ಸೆಕ್ಷನ್ 302(ಕೊಲೆ) ಹಾಗೂ 201(ಸಾಕ್ಷ್ಯ ನಾಶ) ಅಡಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • 150 ವೈದ್ಯಕೀಯ ವಿದ್ಯಾರ್ಥಿಗಳ ತಲೆ ಬೋಳಿಸಿ ರ‍್ಯಾಗಿಂಗ್‌

    150 ವೈದ್ಯಕೀಯ ವಿದ್ಯಾರ್ಥಿಗಳ ತಲೆ ಬೋಳಿಸಿ ರ‍್ಯಾಗಿಂಗ್‌

    ಲಕ್ನೋ: 150 ವೈದ್ಯಕೀಯ ಕಿರಿಯ ವಿದ್ಯಾರ್ಥಿಗಳನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ತಲೆ ಬೋಳಿಸಿ ರ‍್ಯಾಗಿಂಗ್‌ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಉತ್ತರ ಪ್ರದೇಶದ ಸೈಫೈ ಎಂಬ ನಗರದಲ್ಲಿರುವ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆದಿದ್ದು, 150ಕ್ಕೂ ಹೆಚು ವಿದ್ಯಾರ್ಥಿಗಳು ತಲೆ ಬೋಳಿಸಿ ಬಿಳಿ ಬಣ್ಣದ ಬಟ್ಟೆ ತೊಟ್ಟು ಹಿರಿಯ ವಿದ್ಯಾರ್ಥಿಗಳಿಗೆ ನಮಸ್ಕಾರ ಮಾಡುತ್ತಿರುವುದನ್ನು ವಿಡಿಯೋ ಮಾಡಲಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಘಟನೆ ಮಂಗಳವಾರ ನಡೆದಿದ್ದು, ಒಟ್ಟು ಮೂರು ವಿಡಿಯೋಗಳು ವೈರಲ್ ಆಗಿವೆ. ಮೊದಲನೇ ವಿಡಿಯೋದಲ್ಲಿ ವಿದ್ಯಾರ್ಥಿಗಳು ತಲೆ ಬೋಳಿಸಿಕೊಂಡು ಬಿಳಿ ಬಟ್ಟೆ ಧರಿಸಿ ಒಂದೇ ಸಾಲಿನಲ್ಲಿ ಓಡುತ್ತಿರುತ್ತಾರೆ. ನಂತರ ಎರಡನೇ ವಿಡಿಯೋದಲ್ಲಿ ಅವರು ಹಿರಿಯ ವಿದ್ಯಾರ್ಥಿಗಳಿಗೆ ತಲೆ ಭಾಗಿ ನಮಸ್ಕಾರ ಮಾಡುತ್ತಿರುವುದು ಕಂಡು ಬಂದಿದೆ. ಕೊನೆಯ ವಿಡಿಯೋದಲ್ಲಿ ಇದನ್ನು ಗಮನಿಸಿದ ಸಂಸ್ಥೆಯ ಸೆಕ್ಯುರಿಟಿ ಗಾರ್ಡ್ ಕೂಡ ಇದನ್ನು ನೋಡಿಕೊಂಡು ಏನೂ ಮಾಡದೇ ಸುಮ್ಮನೆ ನಿಂತಿರುವುದು ಕಂಡು ಬಂದಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ರಾಜ್ ಕುಮಾರ್, ಸಂಸ್ಥೆಯು ರ‍್ಯಾಗಿಂಗ್‌  ತಡೆಯಲು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಯಾರಾದರು ರ್‍ಯಾಂಗ್ ಮಾಡಿದರೆ ವಿದ್ಯಾರ್ಥಿಗಳು ಅದರ ಬಗ್ಗೆ ವಿರೋಧಿ ಸಮಿತಿಗೆ ಅಥವಾ ಅವರ ವಾರ್ಡನ್ ಗಳಿಗೆ ದೂರು ನೀಡಬಹುದು. ಈ ಹಿಂದೆ ಇದೇ ರೀತಿಯ ಮಾಡಿದಕ್ಕೆ ಕೆಲ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

    ಈ ವಿಚಾರದಲ್ಲೂ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈ ರ‍್ಯಾಗಿಂಗ್‌ನಲ್ಲಿ ಭಾಗಿಯಾದ ಕೆಲ ವಿದ್ಯಾರ್ಥಿಗಳನ್ನು ಆಗಲೇ ಅಮಾನತು ಮಾಡಿದ್ದೇವೆ. ಜೂನಿಯರ್ ವಿದ್ಯಾರ್ಥಿಗಳು ಇದರ ಬಗ್ಗೆ ಅತಂಕ ಪಡಬೇಕಿಲ್ಲ ಎಂದು ಭರವಸೆ ನೀಡಿದ್ದಾರೆ. ಸೈಫೈ ಗ್ರಾಮವು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ತವರು ಗ್ರಾಮವಾಗಿದೆ.

    ಕಳೆದ ತಿಂಗಳು 14 ವರ್ಷದ ಹೈದರಾಬಾದ್ ಬಾಲಕನೊಬ್ಬ ತನ್ನ ಸಹಪಾಠಿಗಳು ರ್‍ಯಾಂಗ್ ಮಾಡಿದರು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ. ಇದೇ ರೀತಿ ಕಳೆದ ಮಾರ್ಚ್ ನಲ್ಲಿ ತಮಿಳುನಾಡಿನ ಇಬ್ಬರು ಕಾಲೇಜು ವಿದ್ಯಾರ್ಥಿಗಳು ತಮ್ಮ ಸಿನಿಯರ್ಸ್ ರ್‍ಯಾಂಗ್ ಮಾಡಿದರು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಭಾರತದಾದ್ಯಂತ ವಿದ್ಯಾರ್ಥಿಗಳು ಮತ್ತು ಸಂಸ್ಥೆಗಳು ನೀಡಿದ ರ್‍ಯಾಗಿಂಗ್ ದೂರುಗಳ ಸಂಖ್ಯೆ 2015 ರಲ್ಲಿ 423 ಇತ್ತು ಆದರೆ ಎರಡು ವರ್ಷಗಳ ನಂತರ 901 ಕ್ಕೆ ಏರಿದೆ ಎಂದು ಕಳೆದ ವರ್ಷ ಸಂಸತ್ತಿನಲ್ಲಿ ಅಂದಿನ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.