Tag: uttar pradesh

  • ಅಪ್ರಾಪ್ತೆಯನ್ನ ಅತ್ಯಾಚಾರಗೈದು ಕೊಂದ ಕಾಮುಕನನ್ನು 20 ನಿಮಿಷದಲ್ಲಿ ಪತ್ತೆಹಚ್ಚಿದ ಶ್ವಾನ

    ಅಪ್ರಾಪ್ತೆಯನ್ನ ಅತ್ಯಾಚಾರಗೈದು ಕೊಂದ ಕಾಮುಕನನ್ನು 20 ನಿಮಿಷದಲ್ಲಿ ಪತ್ತೆಹಚ್ಚಿದ ಶ್ವಾನ

    ಲಕ್ನೋ: ಅಪ್ರಾಪ್ರೆಯನ್ನು ಅತ್ಯಾಚಾರ ಮಾಡಿ, ಕೊಲೆಗೈದಿದ್ದ ಕಾಮುಕನನ್ನು ಶ್ವಾನವೊಂದು ಕೇವಲ 20 ನಿಮಿಷದಲ್ಲಿ ಪತ್ತೆ ಮಾಡಿ ಉತ್ತರ ಪ್ರದೇಶ ಪೊಲೀಸರಿಗೆ ಸಹಾಯ ಮಾಡಿದೆ.

    ಉತ್ತರ ಪ್ರದೇಶದ ಅಝಮ್‍ಗಢ ಜಿಲ್ಲೆಯಲ್ಲಿ 5 ವರ್ಷದ ಬಾಲಕಿಯನ್ನು ಮನೆಯಿಂದ ಅಪಹರಿಸಿ, ಅತ್ಯಾಚಾರಗೈದು ಕೊಲೆ ಮಾಡಲಾಗಿತ್ತು. ಶುಕ್ರವಾರ ಬೆಳಗ್ಗೆ ಬಾಲಕಿಯ ಮೃತದೇಹ ಆಕೆಯ ಮನೆಯಿಂದ 400 ಮೀ ದೂರದಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಾ ಆರೋಪಿಗಾಗಿ ಬಲೆ ಬೀಸಿದ್ದರು. ಇದನ್ನೂ ಓದಿ:ಮಲಗಿದ್ದ ಶ್ವಾನಕ್ಕೆ ಹಿಗ್ಗಾಮುಗ್ಗ ಥಳಿಸಿದ ಸೆಕ್ಯೂರಿಟಿಗಾರ್ಡ್

    ಈ ಪ್ರಕರಣ ಭೇದಿಸಲು ಪೊಲೀಸರಿಗೆ ಶ್ವಾನವೊಂದು ಸಹಾಯ ಮಾಡಿದೆ. 4 ವರ್ಷದ ಫ್ಯಾಂಟಮ್ ಹೆಸರಿನ ಶ್ವಾನ ಗಡಿ ಭದ್ರತಾ ಪಡೆಯ ತರಬೇತಿ ಕೇಂದ್ರದ ಶ್ವಾನ ಶಾಲೆಯಲ್ಲಿ ತರಬೇತಿ ಪಡೆಯುತ್ತಿದೆ. ಈ ಶ್ವಾನ ಈ ಹಿಂದೆ ಪೊಲೀಸರಿಗೆ ಹಲವು ಪ್ರಕರಣಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಲು ಸಹಾಯ ಮಾಡಿದೆ. ಹೀಗಾಗಿ ಪೊಲೀಸರು ಸೋಮವಾರ ಫ್ಯಾಂಟಮ್ ಅನ್ನು ಕರೆದುಕೊಂಡು ಘಟನಾ ಸ್ಥಳಕ್ಕೆ ಭೇಟಿಕೊಟ್ಟಿದ್ದರು. ಈ ವೇಳೆ ಸ್ಥಳ ಹಾಗೂ ಅಲ್ಲಿ ಬಿದ್ದಿದ್ದ ಆರೋಪಿಯ ಬಟ್ಟೆಯ ಚೂರನ್ನು ಮೂಸಿದ ಶ್ವಾನ, ನೇರವಾಗಿ ಆರೋಪಿ ವಾಸಿಸುವ ಮನೆಗೆ ಪೊಲೀಸರನ್ನು ಕರೆಕೊಂಡು ಹೋಯಿತು. ಇದನ್ನೂ ಓದಿ:ಮನೆಗೆ ನುಗ್ಗಿ ಅಪ್ರಾಪ್ತೆಯನ್ನು ಅತ್ಯಾಚಾರಗೈದು ಬೆಂಕಿ ಹಚ್ಚಿದ ಕಾಮುಕ

    ಬಾಲಕಿ ಮೃತದೇಹ ಪತ್ತೆಯಾಗಿದ್ದ ಸ್ಥಳದಿಂದ ಸುಮಾರು 250 ಮೀ. ದೂರದಲ್ಲಿ ಆರೋಪಿ ವಾಸಿಸುತ್ತಿದ್ದನು. ಹೀಗಾಗಿ ಕೇವಲ 20 ನಿಮಿಷದಲ್ಲಿ ಶ್ವಾನವು ಆರೋಪಿ ಯಾರು ಎನ್ನುವುದನ್ನು ಪತ್ತೆಹಚ್ಚಿದೆ. ಆರೋಪಿಯನ್ನು ರಾಮ ಪರ್ವೇಶ್ ಚೌಹಾನ್(25) ಎಂದು ಗುರುತಿಸಲಾಗಿದೆ. ಇದನ್ನೂ ಓದಿ:ಅಪ್ರಾಪ್ತೆ ಮೇಲೆ ತಂದೆಯಿಂದಲೇ ಅತ್ಯಾಚಾರ- 8 ವರ್ಷ ಬಳಿಕ ಆರೋಪಿ ಅರೆಸ್ಟ್

    ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಹೇಗೆ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಲೆಗೈದೆ ಎನ್ನುವುದನ್ನು ಪೊಲೀಸರಿಗೆ ವಿವರಿಸಿದ್ದಾನೆ. ಬಾಲಕಿ ಪೋಷಕರೊಂದಿಗೆ ಮನೆಯ ಮಹಡಿ ಮೇಲೆ ಮಲಗಿದ್ದಳು. ಆಕೆಯನ್ನು ನಾನು ಅಪಹರಿಸಿಕೊಂಡು ಬಂದು ಅತ್ಯಾಚಾರ ಮಾಡಿದೆ. ಬಳಿಕ ಆಕೆಯನ್ನು ಕೊಲೆಗೈದು ಸ್ಥಳದಿಂದ ಎಸ್ಕೇಪ್ ಆದೆ ಎಂದು ಆರೋಪಿ ಹೇಳಿದ್ದಾನೆ.

    ಸದ್ಯ ಈ ಸಂಬಂಧ ಆರೋಪಿ ವಿರುದ್ಧ ಕೊಲೆ, ಅತ್ಯಾಚಾರ ಪ್ರಕರಣ ಹಾಗೂ ಎಸ್‍ಸಿ/ಎಸ್‍ಸಿಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಪತ್ತೆಹಚ್ಚುವಲ್ಲಿ ಸಹಾಯ ಮಾಡಿದ ಶ್ವಾನದ ಕಾರ್ಯಕ್ಕೆ ಪೊಲೀಸರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಟ್ಯೂಷನ್ ನೆಪದಲ್ಲಿ 1ನೇ ತರಗತಿ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದ ಶಿಕ್ಷಕ

    ಟ್ಯೂಷನ್ ನೆಪದಲ್ಲಿ 1ನೇ ತರಗತಿ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದ ಶಿಕ್ಷಕ

    – ಶಾಲಾ ಶೌಚಾಲಯದಲ್ಲಿ ಕೃತ್ಯವೆಸೆಗಿದ
    – ಅಣ್ಣನಿಗೆ ಚಾಕಲೇಟ್ ಆಸೆ ತೋರಿಸಿ ತಂಗಿ ಮೇಲೆ ರೇಪ್

    ಲಕ್ನೋ: ಟ್ಯೂಷನ್ ಹೇಳಿ ಕೊಡುವ ನೆಪದಲ್ಲಿ ಕಾಮುಕ ಶಿಕ್ಷಕನೋರ್ವ 6 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರಗೈದ ಹೀನಾಯ ಘಟನೆ ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯಲ್ಲಿ ನಡೆದಿದೆ.

    ಬಾಂಡಾ ಜಿಲ್ಲೆಯ ಟಿಂಡ್ವಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಖಾಸಗಿ ಶಾಲೆಯ ಶಿಕ್ಷಕ ಕಿಶನ್ ಮಿಶ್ರಾ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಶಿಕ್ಷಕ. ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಯಲ್ಲಿ 1ನೇ ತರಗತಿ ವಿದ್ಯಾರ್ಥಿನಿ ಮೇಲೆ ಶಿಕ್ಷಕ ಅತ್ಯಾಚಾರ ಮಾಡಿದ್ದಾನೆ. ಇದನ್ನೂ ಓದಿ:ಮನೆಗೆ ನುಗ್ಗಿ ಅಪ್ರಾಪ್ತೆಯನ್ನು ಅತ್ಯಾಚಾರಗೈದು ಬೆಂಕಿ ಹಚ್ಚಿದ ಕಾಮುಕ

    ಶುಕ್ರವಾರ ಸಂಜೆ ಶಾಲೆ ಮುಗಿದ ಬಳಿಕ ಟ್ಯೂಷನ್ ಹೇಳಿ ಕೊಡುವ ನೆಪದಲ್ಲಿ ಬಾಲಕಿ ಹಾಗೂ ಆಕೆಯ ಅಣ್ಣನನ್ನು ಶಿಕ್ಷಕ ಶಾಲೆಯಲ್ಲಿ ಉಳಿಸಿಕೊಂಡಿದ್ದನು. ಸುಮಾರು 5 ಗಂಟೆ ವೇಳೆಗೆ ಇಬ್ಬರನ್ನು ಮನೆಗೆ ಹೋಗುವಂತೆ ಶಿಕ್ಷಕ ಹೇಳಿದ್ದಾನೆ.

    ಅಣ್ಣಾ, ತಂಗಿ ಮನೆಗೆ ತೆರಳುತ್ತಿದ್ದ ವೇಳೆ ಬಾಲಕಿಗೆ ಚಾಕಲೇಟ್ ತೆಗೆದುಕೊಂಡು ಬಾ ಎಂದು ಹೇಳಿ ಅಂಗಡಿಗೆ ಕಳುಹಿಸಿ, ಬಳಿಕ ಬಾಲಕಿಯನ್ನು ಪುಸಲಾಯಿಸಿ ಶಾಲಾ ಶೌಚಾಲಯಕ್ಕೆ ಶಿಕ್ಷಕ ಕರೆದುಕೊಂಡು ಹೋಗಿ ಆಕೆಯನ್ನು ಅತ್ಯಾಚಾರಗೈದಿದ್ದಾನೆ. ಈ ವೇಳೆ ಹೇಗೋ ಬಾಲಕಿ ಕಾಮುಕ ಶಿಕ್ಷಕನಿಂದ ತಪ್ಪಿಸಿಕೊಂಡು ಮನೆಗೆ ಸೇರಿದ್ದಳು. ಇದನ್ನೂ ಓದಿ:ಅಪ್ರಾಪ್ತೆ ಮೇಲೆ ತಂದೆಯಿಂದಲೇ ಅತ್ಯಾಚಾರ- 8 ವರ್ಷ ಬಳಿಕ ಆರೋಪಿ ಅರೆಸ್ಟ್

    ಮನೆಗೆ ಬಂದ ಬಾಲಕಿ ತಾಯಿಯ ಬಳಿ ನಡೆದ ವಿಚಾರವನ್ನು ಹೇಳಿದ್ದಾಳೆ. ಹೀಗಾಗಿ ಶನಿವಾರ ಬಾಲಕಿ ತಾಯಿ ಪೊಲೀಸರಿಗೆ ಶಿಕ್ಷಕನ ವಿರುದ್ಧ ದೂರು ಕೊಟ್ಟಿದ್ದರು. ತಾಯಿ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸದ್ಯ ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ. ಈಗಾಗಲೇ ವಿದ್ಯಾರ್ಥಿನಿಯ ವೈದ್ಯಕೀಯ ಪರೀಕ್ಷೆ ನಡೆದಿದ್ದು, ವರದಿ ಬರಬೇಕಿದೆ.

  • ಚಳಿಯಿಂದ ಗೋವುಗಳನ್ನು ರಕ್ಷಿಸಲು ಕೋಟು ಖರೀದಿಸಲು ಮುಂದಾದ ಅಯೋಧ್ಯಾ ಪಾಲಿಕೆ

    ಚಳಿಯಿಂದ ಗೋವುಗಳನ್ನು ರಕ್ಷಿಸಲು ಕೋಟು ಖರೀದಿಸಲು ಮುಂದಾದ ಅಯೋಧ್ಯಾ ಪಾಲಿಕೆ

    ಅಯೋಧ್ಯೆ: ನಗರದ ಗೋವುಗಳ ಆಶ್ರಯ ತಾಣದಲ್ಲಿ ಇರುವ ಗೋವುಗಳನ್ನು ಚಳಿಯಿಂದ ರಕ್ಷಿಸಲು ಅಯೋಧ್ಯೆ ಮಹಾನಗರ ಪಾಲಿಕೆ ಹೊಸ ಉಪಾಯ ಕಂಡುಕೊಂಡಿದೆ. ಗೋವುಗಳಿಗಾಗಿ ಸೆಣಬಿನ ಕೋಟುಗಳನ್ನು ಖರೀದಿಸಲು ಪಾಲಿಕೆ ಮುಂದಾಗಿದೆ.

    ನಗರ ನಿಗಮ ಆಯುಕ್ತರಾದ ನೀರಜ್ ಶುಕ್ಲಾ ಈ ಬಗ್ಗೆ ಮಾತನಾಡಿ, ನಾವು ಗೋವುಗಳ ಕೋಟುಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿದ್ದೇವೆ. ಈ ಯೋಜನೆಯನ್ನು ಮೂರು-ನಾಲ್ಕು ಹಂತಗಳಲ್ಲಿ ಜಾರಿಗೆ ತರಲಾಗುವುದು. ಮೊದಲು ನಾವು ಬೈಶಿಂಗ್‍ಪುರ ಗೋವುಗಳ ಆಶ್ರಯ ತಾಣದಿಂದ ಪ್ರಾರಂಭಿಸುತ್ತಿದ್ದೇವೆ. ಇಲ್ಲಿ 700 ಎತ್ತುಗಳು ಮತ್ತು ಸುಮಾರು 1,200 ಹಸುಗಳು, ಕರುಗಳು ಇವೆ. ನಾವು ಮೊದಲಿಗೆ ಕರುಗಳಿಗೆ 100 ಕೋಟುಗಳನ್ನು ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

    ನವೆಂಬರ್ ಅಂತ್ಯದಲ್ಲಿ ಮೊದಲ ಹಂತದ ಕೋಟು ವಿತರಣೆ ಯೋಜನೆ ನಡೆಯಲಿದೆ. ಈ ಕೋಟುಗಳಿಗೆ ಒಂದಕ್ಕೆ 250ರಿಂದ 300 ರೂ. ಬೆಲೆ ಇದೆ. ಕರುಗಳಿಗಾಗಿ 3 ಪದರದ ಕೋಟುಗಳನ್ನು ತಯಾರಿಸಲಾಗುತ್ತಿದೆ. ಸೆಣಬನ್ನು ಹೊರತುಪಡಿಸಿ ಈ ಕೋಟುಗಳ ಒಳಗಿನ ಪದರದಲ್ಲಿ ಮೃದು ಬಟ್ಟೆಯಿಟ್ಟು ಹೊಲಿಯಲು ಹೇಳಿದ್ದೇವೆ. ಇದರಿಂದ ಕರುಗಳಿಗೆ ಬೆಚ್ಚಗಾಗುತ್ತದೆ ಎಂದು ಶುಕ್ಲಾ ಅವರು ಹೇಳಿದರು.

    ಹಸು ಹಾಗೂ ಹೋರಿಗಳಿಗೆ ಬೇರೆ ಬೇರೆ ಡಿಸೈನ್‍ನ ಕೋಟುಗಳನ್ನು ತಯಾರಿಸಲಾಗುತ್ತದೆ. ಹೋರಿಗಳಿಗೆ ಕೇವಲ ಸೆಣಬಿನಿಂದ ತಯಾರಿಸಿದ ಕೋಟುಗಳನ್ನು ನೀಡಲಾಗುತ್ತದೆ. ಆದರೆ ಹಸುಗಳಿಗೆ 2 ಪದರದ ಸೆಣಬಿನ ಕೋಟು ನೀಡಲಾಗುತ್ತದೆ. ಅಲ್ಲದೆ ಹೆಚ್ಚು ಚಳಿ ಇದ್ದಾಗ ಆಶ್ರಯ ತಾಣದ ನೆಲದ ಮೇಲೆ ಭತ್ತದ ಹುಲ್ಲಿಗೆ ಬೆಂಕಿ ಹಾಕಿ ಗೋವುಗಳಿಗೆ ಬೆಚ್ಚಗೆ ಆಗುವಂತೆ ಮಾಡಲು ಯೋಚಿಸಿದ್ದೇವೆ ಎಂದರು.

    ನಾವು ಗೋವುಗಳ ರಕ್ಷಣೆ, ಸೇವೆಗೆ ಹೆಚ್ಚು ಗಮನ ಕೊಡುತ್ತೇವೆ. ನಗರದ ಹಲವೆಡೆ ಗೋವುಗಳ ಆಶ್ರಯ ತಾಣಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದೇವೆ. ಅವುಗಳನ್ನು ರಾಜ್ಯದಲ್ಲೇ ಉತ್ತಮ ಗೋವು ಆಶ್ರಯ ತಾಣಗಳನ್ನಾಗಿ ಮಾಡುತ್ತೇವೆ ಎಂದು ಮೇಯರ್ ರಿಷಿಕೇಶ್ ಉಪಧ್ಯಾಯ ಹೇಳಿದರು.

  • ಮನೆಗೆ ನುಗ್ಗಿ ಅಪ್ರಾಪ್ತೆಯನ್ನು ಅತ್ಯಾಚಾರಗೈದು ಬೆಂಕಿ ಹಚ್ಚಿದ ಕಾಮುಕ

    ಮನೆಗೆ ನುಗ್ಗಿ ಅಪ್ರಾಪ್ತೆಯನ್ನು ಅತ್ಯಾಚಾರಗೈದು ಬೆಂಕಿ ಹಚ್ಚಿದ ಕಾಮುಕ

    ಲಕ್ನೋ: 16 ವರ್ಷದ ಆಪ್ರಾಪ್ತೆಯನ್ನು ನೆರೆ ಮನೆ ವ್ಯಕ್ತಿ ಅತ್ಯಾಚಾರಗೈದು, ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಸಂಭಾಲ್ ಜಿಲ್ಲೆಯ ನಖ್ಸಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನಖ್ಸಾ ನಿವಾಸಿ ಝೀಷನ್ ಕೃತ್ಯವೆಸೆಗಿದ ಆರೋಪಿ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಬಾಲಕಿ ಮನೆಯ ಪಕ್ಕದಲ್ಲಿಯೇ ಆರೋಪಿ ವಾಸಿಸುತ್ತಿದ್ದನು. ಗುರುವಾರ ರಾತ್ರಿ ಬಾಲಕಿಯ ತಾಯಿ ಮತ್ತು ಸಹೋದರ ಕಾರ್ಯಕ್ರಮಕ್ಕೆ ಹೋಗಿದ್ದರು. ಹೀಗಾಗಿ ಬಾಲಕಿ ಒಬ್ಬಳೇ ಮನೆಯಲ್ಲಿ ಇದ್ದಳು. ಇದನ್ನೂ ಓದಿ:ದಲಿತ ಯುವಕನನ್ನು ಪ್ರೀತಿಸಿದ ಮಗಳನ್ನು ಜೀವಂತ ಸುಟ್ಟ ತಾಯಿ

    ಆಗ ಆರೋಪಿ ಏಕಾಏಕಿ ಬಾಲಕಿ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸೆಗಿದ್ದಾನೆ. ಬಳಿಕ ಈ ಬಗ್ಗೆ ದೂರು ಕೊಡುವುದಾಗಿ ಆರೋಪಿಗೆ ಬಾಲಕಿ ಹೆದರಿಸಿದಾಗ, ಭಯದಿಂದ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಇದನ್ನೂ ಓದಿ:ನಾಲ್ಕರ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಮನೆಗೆ ಬೆಂಕಿ ಹಚ್ಚಿದ ಮೂರು ಮಕ್ಕಳ ತಂದೆ

    ಈ ವೇಳೆ ಬಾಲಕಿಯ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಮನೆ ಬಳಿ ಬರುತ್ತಿದ್ದಂತೆ ಆರೋಪಿ ಎಸ್ಕೇಪ್ ಆಗಿದ್ದಾನೆ. ತಕ್ಷಣ ಬಾಲಕಿಯನ್ನು ರಕ್ಷಿಸಿದ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ರವಾನಿಸಿದರು. ಘಟನೆಯಲ್ಲಿ ಶೇ. 70ರಷ್ಟು ಬಾಲಕಿಯ ದೇಹದ ಭಾಗ ಸುಟ್ಟು ಹೋಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.

    ಬಾಲಕಿ ಕುಟುಂಬ ಶುಕ್ರವಾರ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಆರೋಪಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಐಪಿಸಿ ಸೆಕ್ಷನ್ 376, 307, 452 ಹಾಗೂ 506ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿಯನ್ನು ಶುಕ್ರವಾರ ಪೊಲೀಸರು ಕೋರ್ಟಿಗೆ ಹಾಜರುಪಡಿಸಿದ್ದು, ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ನಾಲ್ಕರ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಮನೆಗೆ ಬೆಂಕಿ ಹಚ್ಚಿದ ಮೂರು ಮಕ್ಕಳ ತಂದೆ

    ನಾಲ್ಕರ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಮನೆಗೆ ಬೆಂಕಿ ಹಚ್ಚಿದ ಮೂರು ಮಕ್ಕಳ ತಂದೆ

    ಲಕ್ನೋ: ನಾಲ್ಕು ವರ್ಷದ ಬಾಲಕಿಯನ್ನು ಅತ್ಯಚಾರಗೈದು, ಆಕೆಯ ಮನೆಗೆ ಬೆಂಕಿ ಹಚ್ಚಿ 35 ವರ್ಷದ ವ್ಯಕ್ತಿಯೊಬ್ಬ ವಿಕೃತ ಮೆರೆದಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ.

    ರೈತನನ್ನು ಪೊಲೀಸರು ಬಂಧಿಸಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೊಕ್ಸೊ) ಕಾಯ್ದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‍ಗಳಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ರಾತ್ರಿ ವೇಳೆ ನಾಲ್ಕು ವರ್ಷದ ನನ್ನ ಮಗಳಿಗೆ ಕ್ಯಾಂಡಿ ಆಸೆ ತೋರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಚಾರ ಎಸಗಿದ್ದಾನೆ. 35 ವರ್ಷದ ಆರೋಪಿ ಮಗಳನ್ನು ರಕ್ತದ ಮಡುವಿನಲ್ಲಿ ಮಲಗಿಸಿದ್ದ ಎಂದು ಬಾಲಕಿ ತಂದೆ(ಕೂಲಿ ಕಾರ್ಮಿಕ) ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

    ಇಷ್ಟಾದರೂ ಸಹ ಬಾಲಕಿ ತನ್ನ ಮನೆಯ ದಾರಿಯನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದು, ಮನೆಗೆ ಬಂದು ತನ್ನ ಪೋಷಕರಿಗೆ ಘಟನೆ ಕುರಿತು ವಿವರಿಸಿದ್ದಾಳೆ. ಆಗ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಆರೋಪಿ ಕುಟುಂಬಸ್ಥರಿಗೆ 200 ರೂ. ನೀಡಿ ಸಮಾಧಾನ ಮಾಡಲು ಮುಂದಾಗಿದ್ದಾನೆ. ಇದನ್ನು ಬಾಲಕಿ ಕುಟುಂಬಸ್ಥರು ನಿರಾಕರಿಸಿದ್ದು, ಭೀಕರ ಅಪರಾಧವನ್ನು ಮನ್ನಿಸುವುದಿಲ್ಲ. ನಿನ್ನ ಆಮಿಷ ಬೇಕಾಗಿಲ್ಲ ಎಂದು ಆತನ ವಿವರಣೆಯನ್ನು ಕೇಳದೆ ಮುಂದೆ ಸಾಗಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

    ನಂತರ ರೊಚ್ಚಿಗೆದ್ದ ಆರೋಪಿಯು ಅವರ ಮನೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದು, ಕೂಡಲೇ ನೆರೆಹೊರೆಯವರು ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ನಂತರ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

    ಪೊಕ್ಸೊ ಕಾಯ್ದೆಯೊಂದಿಗೆ ಐಪಿಸಿ ಸೆಕ್ಷನ್ 376(ಅತ್ಯಾಚಾರ) ಹಾಗೂ 436(ಬೆಂಕಿ ಹಚ್ಚುವುದು) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಆರೋಪಿಯು ವಿವಾಹಿತ ವ್ಯಕ್ತಿಯಾಗಿದ್ದು, ಮೂವರು ಮಕ್ಕಳನ್ನು ಹೊಂದಿದ್ದಾನೆ ಎಂದು ಪ್ರಕರಣ ತಿಳಿದ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆರೋಪಿಯ ಹೆಂಡತಿ ಮತ್ತು ಮಕ್ಕಳು ಒಂದು ತಿಂಗಳ ಕಾಲ ಅವರ ಅಳಿಯಂದಿರ ಊರಿಗೆ ಹೋಗಿದ್ದರು. ಅಪ್ರಾಪ್ತ ಬಾಲಕಿಯ ಪೋಷಕರು ಕೂಲಿ ಕಾರ್ಮಿಕರಾಗಿದ್ದಾರೆ.

  • ಯೋಧರಿಗಾಗಿ ‘ಐರನ್ ಮ್ಯಾನ್’ ಸೂಟ್ ತಯಾರಿಸಿದ ದೇಶಭಕ್ತ

    ಯೋಧರಿಗಾಗಿ ‘ಐರನ್ ಮ್ಯಾನ್’ ಸೂಟ್ ತಯಾರಿಸಿದ ದೇಶಭಕ್ತ

    ಲಕ್ನೋ: ಯೋಧರೆಂದರೆ ಎಲ್ಲರಿಗೂ ವಿಶೇಷ ಗೌರವಿರುತ್ತದೆ. ದೇಶವಾಸಿಗಳಿಗಾಗಿ, ದೇಶಕ್ಕಾಗಿ ಶತ್ರುಗಳೊಂದಿಗೆ ಹೋರಾಡಿ ಜೀವತ್ಯಾಗ ಮಾಡುವ ಯೋಧರಿಗಾಗಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಗುಂಡೇಟನ್ನು ತಡೆಯಬಲ್ಲ ವಿಶೇಷ ‘ಐರನ್ ಮ್ಯಾನ್’ ಸೂಟ್ ತಯಾರಿಸಿದ್ದಾರೆ.

    ವಾರಣಾಸಿಯ ಶಾಮ್ ಚೌರಾಸಿಯಾ ಅವರು ಈ ಐರನ್ ಮ್ಯಾನ್ ಸೂಟನ್ನು ಯೋಧರಿಗಾಗಿ ತಯಾರಿಸಿದ್ದಾರೆ. ಶಾಮ್ ಅವರು ಅಶೋಕ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ ಆ್ಯಂಡ್ ಮ್ಯಾನೇಜ್ಮೆಂಟ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಭಾರತೀಯ ಸೇನೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಸೂಟ್ ತಯಾರು ಮಾಡಿದ್ದಾರೆ. ಯೋಧರು ದೇಶದ ಸೂಪರ್ ಹೀರೋಗಳು ಎಂದು ವಿಶೇಷ ರೀತಿಯಲ್ಲಿ ಪ್ರೀತಿ ಮೆರೆದಿದ್ದಾರೆ. ಇದನ್ನೂ ಓದಿ:ಸ್ವದೇಶಿ ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿ- ವಿಶೇಷತೆ ಏನು? ಬೆಲೆ ಎಷ್ಟು?

    ಈ ಐರನ್ ಮ್ಯಾನ್ ಸೂಟ್ ಲೋಹದಿಂದ ತಯಾರಿಸಿದ ಕವಚವಾಗಿದ್ದು, ಇದು ಭಾರತೀಯ ಯೋಧರನ್ನು ಭಯೋತ್ಪಾದಕರು ಹಾಗೂ ಶತ್ರುಗಳಿಂದ ರಕ್ಷಿಸಲಿದೆ. ಸದ್ಯ ಶ್ಯಾಮ್ ಅವರು ಡೆಮೋ ಪೀಸ್ ತಯಾರಿಸಿದ್ದಾರೆ. ಇದು ಟಿನ್‍ನಿಂದ ಮಾಡಲಾಗಿದೆ. ಈ ಕವಚ ಯುದ್ಧದ ಸಂದರ್ಭದಲ್ಲಿ ಯೋಧರಿಗೆ ಬಹಳ ಸಹಾಯವಾಗಲಿದೆ. ಇದರಲ್ಲಿ ಗೇರ್ಸ್ ಹಾಗೂ ಮೋಟರ್ ಗಳನ್ನು ಅಳವಡಿಸಲಾಗಿದೆ. ಅಲ್ಲದೇ ಇದರಲ್ಲೊಂದು ಮೊಬೈಲ್ ಕನೆಕ್ಷನ್, ಸೆನ್ಸರ್ ಗಳನ್ನೂ ಅಳವಡಿಸಲಾಗಿದೆ. ಈ ಸೆನ್ಸರ್ ಶತ್ರುಗಳು ದಾಳಿ ನಡೆಸುವ ಮುನ್ನ ಯೋಧರನ್ನು ಎಚ್ಚರಿಸುತ್ತದೆ ಎಂದು ಶ್ಯಾಮ್ ತಿಳಿಸಿದ್ದಾರೆ.

    ಸದ್ಯ ನಾನು ಡೆಮೋ ಪೀಸ್ ತಯಾರಿಸಿದ್ದೇನೆ. ಹಣ ಅಭಾವ ಇರುವುದರಿಂದ ಇದನ್ನು ಅಭಿವೃದ್ಧಿಗೊಳಿಸಲು ಕೊಂಚ ಸಮಯವಾಗುತ್ತಿದೆ. ಆದರೆ ನಾನು ಯೋಧರಿಗಾಗಿ ಐರನ್ ಮ್ಯಾನ್ ಸೂಟನ್ನು ಇನ್ನಷ್ಟು ಅಭಿವೃದ್ಧಿಗೊಳಿಸುತ್ತೇನೆ. ಹಾಲಿವುಡ್ ಚಿತ್ರಗಳಲ್ಲಿ ಐರನ್ ಮ್ಯಾನ್ ನೋಡಿ ನನಗೆ ಈ ಐಡಿಯಾ ಬಂತು. ಇದು ನಮ್ಮ ದೇಶ ಕಾಯುವ ಹೆಮ್ಮೆಯ ಯೋಧರಿಗಾಗಿ ನನ್ನದೊಂದು ಪುಟ್ಟ ಪ್ರಯತ್ನ ಎಂದು ಶ್ಯಾಮ್ ಹೇಳಿದ್ದಾರೆ.

    ಶತ್ರುನಾಶಕ್ಕೆ ಇದು ಸಹಾಯಕಾರಿ, ಯೋಧರ ಶಕ್ತಿಯನ್ನು ಇದು ಮತ್ತಷ್ಟು ಹೆಚ್ಚಿಸುತ್ತದೆ. ಹೀಗಾಗಿ ಸರ್ಕಾರಿ ಏಜೆನ್ಸಿ ಈ ಬಗ್ಗೆ ಗಮನವಹಿಸಬೇಕು. ಯೋಧರಿಗಾಗಿ ಇವುಗಳನ್ನು ತಯಾರಿಸಲು ಯೋಜನೆ ಹಾಕಿಕೊಳ್ಳಬೇಕು ಎಂದು ಡಿಆರ್‌ಡಿಒ ಹಾಗೂ ಇತರೆ ಸರ್ಕಾರಿ ಏಜೆನ್ಸಿ ಬಳಿ ವಿನಂತಿಸಿದ್ದಾರೆ.

    https://twitter.com/MohitMohit114/status/1196650627968970752

  • ಆಗ್ರಾ ಹೆಸರನ್ನು ಬದಲಿಸಲು ಮುಂದಾದ ಯೋಗಿ ಸರ್ಕಾರ

    ಆಗ್ರಾ ಹೆಸರನ್ನು ಬದಲಿಸಲು ಮುಂದಾದ ಯೋಗಿ ಸರ್ಕಾರ

    ಲಕ್ನೋ: ಅಲಹಬಾದ್, ಫೈಜಾಬಾದ್ ನಂತರ ಇದೀಗ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಆಗ್ರಾ ಹೆಸರನ್ನು ಬದಲಿಸಲು ಚಿಂತನೆ ನಡೆಸಿದೆ.

    ಈ ಹಿಂದೆ ರಾಜ್ಯ ಸರ್ಕಾರ ಅಲಹಬಾದ್ ಹೆಸರನ್ನು ಪ್ರಯಾಗ್‍ರಾಜ್, ಫೈಜಾಬಾದನ್ನು ಅಯೋಧ್ಯೆ ಹಾಗೂ ಮೊಘಲ್ಸರಾಯ್ ಹೆಸರನ್ನು ದೀನ್ ದಯಾಳ್ ಉಪಾಧ್ಯಾಯ ನಗರ ಎಂದು ಬದಲಿಸಿತ್ತು. ಹೆಸರು ಬದಲಾಯಿಸುವ ಪರ್ವ ಮತ್ತೆ ಮುಂದುವರಿದಿದ್ದು, ಇದೀಗ ಆಗ್ರಾ ಹೆಸರನ್ನು ಅಗ್ರವಾನ್ ಎಂದು ಬದಲಿಸಲು ಮುಂದಾಗಿದೆ.

    ಈ ಕುರಿತು ಅಂಬೇಡ್ಕರ್ ವಿಶ್ವವಿದ್ಯಾಲಯದ ಇತಿಹಾಸ ವಿಭಾಗಕ್ಕೆ ಸಂಶೋಧನೆ ನಡೆಸಲು ತಿಳಿಸಿದ್ದು, ಹೆಸರಿನ ಐತಿಹಾಸಿಕ ಅಂಶವನ್ನು ವಿಶ್ಲೇಷಿಸಲು ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಪ್ರಸ್ತಾಪ ಬರುತ್ತಿದ್ದಂತೆ ಸಂಶೋಧನೆ ನಡೆಸಲು ಪ್ರಾರಂಭಿಸಿದ್ದೇವೆ ಎಂದು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.

    ಆಗ್ರಾ ನಗರವನ್ನು ಬೇರೆ ಹೆಸರಿನಿಂದ ಕರೆಯಲಾಗುತಿತ್ತೆ ಈ ಕುರಿತು ಪುರಾವೆಗಳನ್ನು ಸಂಗ್ರಹಿಸಿ ಎಂದು ರಾಜ್ಯ ಸರ್ಕಾರ ನಮಗೆ ಪತ್ರ ಬರೆದಿದೆ. ಈ ಕುರಿತು ನಾವು ಸಂಶೋಧನೆ ಪ್ರಾರಂಭಿಸಿದ್ದೇವೆ. ಸಂಶೋಧನೆ ನಂತರ ಉತ್ತರಿಸುತ್ತೇವೆ ಎಂದು ವಿಭಾಗದ ಮುಖ್ಯಸ್ಥ ಪ್ರೊ.ಸುಗಮ್ ಆನಂದ್ ತಿಳಿಸಿದ್ದಾರೆ.

    ತಾಜ್‍ಮಹಲ್ ಇರುವ ನಗರದ ಮೂಲ ಹೆಸರು ಅಗ್ರವಾನ್ ಎಂದು ಕೆಲವು ಇತಿಹಾಸಕಾರರು ನಂಬಿದ್ದರಿಂದ ಹೆಸರು ಬದಲಾಯಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಅಗ್ರವಾನ್ ಎಂಬ ಹೆಸರು ಆಗ್ರಾ ಎಂದು ಹೇಗೆ ಬದಲಾಯಿತು, ಯಾವ ಸಂದರ್ಭದಲ್ಲಿ ಆಯಿತು ಎಂಬುದನ್ನು ಅಧ್ಯಯನದಿಂದ ಪತ್ತೆ ಮಾಡುವಂತೆ ಸರ್ಕಾರ ಇತಿಹಾಸಕಾರರು ಹಾಗೂ ತಜ್ಞರನ್ನು ಕೇಳಿದೆ.

    ಈ ಹಿಂದೆ ನಿಧನರಾದ ಬಿಜೆಪಿ ಶಾಸಕ ಜಗನ್ ಪ್ರಸಾದ್ ಗರ್ಗ್ ಅವರು ಆದಿತ್ಯನಾಥ್ ಅವರಿಗೆ ಪತ್ರ ಬರೆದು, ಆಗ್ರಾ ಎಂಬ ಹೆಸರನ್ನು ಅಗ್ರವಾನ್ ಎಂದು ಮರುನಾಮಕರಣ ಮಾಡುವಂತೆ ಕೋರಿದ್ದರು.

    ತಾಜ್ ಮಹಲ್ ನಗರವಾಗಿ ಆಗ್ರಾ ವಿಶ್ವದಾದ್ಯಂತ ಪ್ರಸಿದ್ಧವಾಗಿರುವ ಕಾರಣ ಹೆಸರು ಬದಲಾಯಿಸುವುದನ್ನು ಅನೇಕರು ವಿರೋಧಿಸಿದ್ದಾರೆ. ಪ್ರವಾಸೋದ್ಯಮ ಹಾಗೂ ವ್ಯಾಪಾರ ತಜ್ಞರು ಸಹ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಗ್ರಾವನ್ನು ತಾಜ್‍ಮಹಲ್ ನಗರವೆಂದು ವಿಶ್ವಾದ್ಯಂತ ಕರೆಯಲಾಗುತ್ತದೆ. ಹೆಸರು ಬದಲಾಯಿಸುವುದರಿಂದ ಗೊಂದಲ ಉಂಟಾಗುತ್ತದೆ ಎಂದು ಟ್ರಾವೆಲ್ ಮತ್ತು ಟೂರ್ ಆಪರೇಟರ್ ರಾಕೇಶ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.

  • ಕಿರುಕುಳದಿಂದ ಯುವತಿಯನ್ನು ರಕ್ಷಿಸಿದ ಗುಂಪಿನಿಂದಲೇ ಗ್ಯಾಂಗ್ ರೇಪ್

    ಕಿರುಕುಳದಿಂದ ಯುವತಿಯನ್ನು ರಕ್ಷಿಸಿದ ಗುಂಪಿನಿಂದಲೇ ಗ್ಯಾಂಗ್ ರೇಪ್

    ಲಕ್ನೋ: ಲೈಂಗಿಕ ಕಿರುಕುಳ ನೀಡುತ್ತಿದ್ದವನಿಂದ ಯುವತಿಯನ್ನು ರಕ್ಷಿಸಿದ 6 ಮಂದಿ ಯುವಕರೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕ್ರೂರ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ಬುಧವಾರದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನೋಯ್ಡಾದ 21 ವರ್ಷದ ಯುವತಿ ತನ್ನ ಕುಟುಂಬವನ್ನು ಸಾಕಲು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಳು. ಆಕೆಗೆ ವ್ಯಕ್ತಿಯೋರ್ವನ ಪರಿಚಯವಾಗಿತ್ತು. ಆ ವ್ಯಕ್ತಿ ನಿನಗೆ ಕೆಲಸ ಕೊಡಿಸುತ್ತೇನೆ, ಆ ಬಗ್ಗೆ ಮಾತನಾಡಬೇಕು ಎಂದು ಬುಧವಾರ ರಾತ್ರಿ 7 ಗಂಟೆ ವೇಳೆಗೆ ಪಾರ್ಕ್ ವೊಂದರಲ್ಲಿ ಆತನನ್ನು ಭೇಟಿಯಾಗುವಂತೆ ಯುವತಿಗೆ ಹೇಳಿದ್ದನು. ಆತನ ಮಾತು ನಂಬಿ ಯುವತಿ ಪಾರ್ಕಿಗೆ ಹೋಗಿದ್ದಳು. ಆದರೆ ಅಲ್ಲಿ ವರಸೆ ಬದಲಿಸಿದ ವ್ಯಕ್ತಿ ಆಕೆಯ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದನು. ಇದನ್ನೂ ಓದಿ:ಬಾಲಕಿಯನ್ನು ಮಂಚಕ್ಕೆ ಕಟ್ಟಿ 16ರ ಬಾಲಕನಿಂದ ರೇಪ್

    ಈ ವೇಳೆ ಸ್ಥಳದಲ್ಲಿದ್ದ 6 ಮಂದಿ ಯುವಕರು ಯುವತಿಯ ಸಹಾಯಕ್ಕೆ ಬಂದು, ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಅಲ್ಲಿಂದ ಓಡಿಸಿದರು. ಬಳಿಕ ಯವತಿ ಮೇಲೆ ತಾವೇ ಸಾಮೂಹಿಕ ಅತ್ಯಾಚಾರ ನಡೆಸಿ ವಿಕೃತಿ ಮೆರೆದಿದ್ದರು. ಘಟನೆ ಬಳಿಕ ಯುವತಿ ಈ ಸಂಬಂಧ ಮೂರ್ನಾಲ್ಕು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೂ ಯಾರು ದೂರು ತೆಗೆದುಕೊಂಡಿಲ್ಲ. ಕೊನೆಗೆ ಶುಕ್ರವಾರ ಪೊಲೀಸರು ಯುವತಿಯ ದೂರು ಪಡೆದು, ಈ ಸಂಬಂಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಪತ್ನಿ ಮನೆಯಲಿಲ್ಲ, ಬಂದು ಅಡುಗೆ ಮಾಡು’- ನಡುರಾತ್ರಿ ವಿದ್ಯಾರ್ಥಿನಿಗೆ ಪ್ರೊಫೆಸರ್ ಮೆಸೇಜ್

    ಸದ್ಯ ಯುವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 354, 376 ಮತ್ತು 511 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ:ಫೇಸ್‍ಬುಕ್‍ನಲ್ಲಿ ಪರಿಚಯ- ನಂತ್ರ ಚಾಟಿಂಗ್, ಮೀಟಿಂಗ್, ಚೀಟಿಂಗ್

    ಆರೋಪಿಗಳ ಬಗ್ಗೆ ನಿಖರ ಮಾಹಿತಿ ಇಲ್ಲ, ಅಲ್ಲದೆ ಅವರ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣ ಕೂಡ ಇಲ್ಲ. ಹೀಗಾಗಿ ಅವರನ್ನು ಪತ್ತೆಹಚ್ಚುವುದು ಕಷ್ಟದ ಕೆಲಸವಾಗಿದೆ. ಸದ್ಯ ಆರೋಪಿಗಳಲ್ಲಿ ಮೂವರು ಘಟನೆ ನಡೆದ ಸ್ಥಳದ ಸುತ್ತಮುತ್ತಲು ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ.

    ಅಲ್ಲದೆ ಆರೋಪಿಗಳೆಲ್ಲರೂ 20ರಿಂದ 25 ವರ್ಷದ ವಯಸ್ಸಿನವರು, ಅವರನ್ನು ಹುಡುಕಿ ಕೊಟ್ಟವರಿಗೆ 25 ಸಾವಿರ ಬಹುಮಾನ ಹಣನವನ್ನು ಕೂಡ ಪೊಲೀಸರು ಘೋಷಿಸಿದ್ದಾರೆ. ಸದ್ಯ ಈ ಸಂಬಂಧ ತನಿಖೆ ಮುಂದುವರಿದಿದೆ.

  • ಮಹಿಳಾ ಅಧಿಕಾರಿ ಮೇಲೆ ಕುರ್ಚಿಯಿಂದ ಹಲ್ಲೆಗೈದ ವಿದ್ಯಾರ್ಥಿಗಳು- ವಿಡಿಯೋ

    ಮಹಿಳಾ ಅಧಿಕಾರಿ ಮೇಲೆ ಕುರ್ಚಿಯಿಂದ ಹಲ್ಲೆಗೈದ ವಿದ್ಯಾರ್ಥಿಗಳು- ವಿಡಿಯೋ

    ಲಕ್ನೋ: ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡಿರುತ್ತೇವೆ. ಆದರೆ ವಿದ್ಯಾರ್ಥಿಗಳೇ ಅಧಿಕಾರಿಯ ಮೇಲೆ ಕುರ್ಚಿಯಿಂದ ಹಲ್ಲೆ ಮಾಡಿದ ಘಟನೆ ಉತ್ತರ ಪ್ರದೇಶದ ರಾಯ್‍ಬರೇಲಿ ಜಿಲ್ಲೆಯ ಚಕ್ ಧೌರಹ್ರಾದ ಗಾಂಧಿ ಸೇವಾ ನಿಕೇತನ್ ಆಶ್ರಮದಲ್ಲಿ ನಡೆದಿದೆ.

    ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿಯ ಮೇಲೆ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಆಶ್ರಮದ ಆಡಳಿತ ಮಂಡಳಿ ಆದೇಶದ ಮೇರೆಗೆ ವಿದ್ಯಾರ್ಥಿಗಳ ಗುಂಪೊಂದು ಅವರನ್ನು ನಿಂದಿಸಿ, ಥಳಿಸಿದೆ ಎಂದು ಆರೋಪಿಸಲಾಗಿದೆ.

    ನಾನು ಗಾಂಧಿ ಸೇವಾ ನಿಕೇತನ್ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದೇನೆ. ಸಂಸ್ಥೆಯ ವ್ಯವಸ್ಥಾಪಕರು ನನಗೆ ಹೊಡೆಯುವಂತೆ ಹಾಗೂ ನಿಂದಿಸುವಂತೆ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿದ್ದಾರೆ. ಮಕ್ಕಳು ನನಗೆ ಕುರ್ಚಿಗಳಿಂದ ಹೊಡೆದು, ಕಪಾಳಮೋಕ್ಷ ಮಾಡಿದ್ದಾರೆ. ಈ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ದೂರು ನೀಡುತ್ತಿದ್ದೇನೆ ಎಂದು ಮಹಿಳಾ ಅಧಿಕಾರಿ ಮಮತಾ ದುಬೆ ಆರೋಪಿಸಿದ್ದಾರೆ.

    ಈ ಘಟನೆ ಆಶ್ರಮದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆಶ್ರಮದ ಸಿಬ್ಬಂದಿ ಯಾಕೆ ಹೊಡೆಸುವ ಉದ್ದೇಶ ಹೊಂದಿದ್ದರು. ಆಶ್ರಮದ ವ್ಯವಸ್ಥಾಪಕರು ವಿದ್ಯಾರ್ಥಿಗಳನ್ನು ಏಕೆ ಕೆರಳಿಸಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

    ಆಶ್ರಮದ ಆಡಳಿತ ಮಂಡಳಿ ಯಾಕೆ ಈ ರೀತಿ ಮಾಡುತ್ತಿದೆ ಎಂಬ ಚಿಂತೆ ನನ್ನನ್ನು ಕಾಡುತ್ತಿದೆ. ಎರಡು ದಿನಗಳ ಹಿಂದೆ ವಾಶ್ ರೂಂನ ಬಾಗಿಲು ಲಾಕ್ ಆಗಿತ್ತು. ಇದನ್ನೂ ಸಹ ವಿದ್ಯಾರ್ಥಿಗಳೇ ಮಾಡಿದ್ದರು ಎಂದು ದುಬೆ ಆತಂಕ ವ್ಯಕ್ತಪಡಿಸಿದ್ದಾರೆ.

    ವಾಶ್ ರೂಂನಲ್ಲಿ ಲಾಕ್ ಮಾಡಿದ್ದರ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಮಕ್ಕಳು ಏನು ಬೇಕಾದರೂ ಮಾಡಬಹುದು ಎಂದರು. ಇದಾದ ಎರಡು ದಿನಗಳ ನಂತರ ನನ್ನನ್ನು ವಿದ್ಯಾರ್ಥಿಗಳು ಹೊಡೆದಿದ್ದಾರೆ. ಈ ಕುರಿತು ಜಿಲ್ಲಾಡಳಿತಕ್ಕೂ ದೂರು ನೀಡಿದ್ದೇನೆ ಎಂದು ದುಬೆ ತಿಳಿಸಿದರು.

    ಈ ಹಿಂದೆ ಅನೇಕ ಬಾರಿ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ದುಬೆ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಯಾವುದೇ ಹೇಳಿಕೆ ನೀಡಿಲ್ಲ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • ಕುಡಿಯುವಾಗ ತಡೆದಿದ್ದಕ್ಕೆ ಪತ್ನಿಯ ರುಂಡ ಕತ್ತರಿಸಿ ಠಾಣೆಗೆ ತಂದ

    ಕುಡಿಯುವಾಗ ತಡೆದಿದ್ದಕ್ಕೆ ಪತ್ನಿಯ ರುಂಡ ಕತ್ತರಿಸಿ ಠಾಣೆಗೆ ತಂದ

    – ಪಾತ್ರೆಯಲ್ಲಿ ರುಂಡ ಇಟ್ಟುಕೊಂಡು ಪೊಲೀಸರಿಗೆ ಶರಣಾದ
    – ಹತ್ಯೆಗೈದು ಮನೆ ಬಿಟ್ಟು ಪರಾರಿಯಾಗಿದ್ದ ಪತಿ

    ಲಕ್ನೋ: ಮದ್ಯ ಕುಡಿಯುವಾಗ ತಡೆದಿದ್ದಕ್ಕೆ ಪತಿಯೊಬ್ಬ ಪತ್ನಿಯ ರುಂಡವನ್ನೇ ಕತ್ತರಿಸಿ ಕೊಲೆ ಗೈದು, ಪೊಲೀಸ್ ಠಾಣೆಗೆ ಬಂದು ಶರಣಾದ ಭಯಾನಕ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಸೋಮವಾರ ಆರೋಪಿ ಪತ್ನಿಯ ರುಂಡವನ್ನು ಹಿಡಿದು ತಂದು ಪೊಲೀಸರಿಗೆ ಶರಣಾಗಿದ್ದಾನೆ. ಆಗ್ರಾದ ಕಚ್ಪುರದಲ್ಲಿ ಈ ಭಯಾನಕ ಘಟನೆ ನಡೆದಿದೆ. ಕಚ್ಪುರ ನಿವಾಸಿ ನರೇಶ್(30) ಪತ್ನಿ ಶಾಂತಿ(30) ರುಂಡ ಕತ್ತರಿಸಿ ಕೊಲೆ ಮಾಡಿದ್ದಾನೆ. ಮೆಕ್ಯಾನಿಕ್ ಆಗಿರುವ ನರೇಶ್ ಸದಾ ಪತ್ನಿ ಬಳಿ ಒಂದಲ್ಲಾ ಒಂದು ಕಾರಣಕ್ಕೆ ಜಗಳವಾಡುತ್ತಲೇ ಇರುತ್ತಿದ್ದನು. ದಶಕಗಳ ಹಿಂದೆ ಮದುವೆಯಾದ ದಂಪತಿಗೆ ಮೂವರು ಹೆಣ್ಣುಮಕ್ಕಳು ಹಾಗೂ ಓರ್ವ ಮಗನಿದ್ದಾನೆ. ಇದನ್ನೂ ಓದಿ:ಹೃತಿಕ್ ರೋಶನ್ ಮೇಲೆ ಕ್ರಶ್ – ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ

    ಆದರೆ ಭಾನುವಾರ ರಾತ್ರಿ ಮಕ್ಕಳು ಮಲಗಿದ್ದ ವೇಳೆ ನರೇಶ್ ಮದ್ಯ ಕುಡಿಯುತ್ತಿದ್ದನು. ಆಗ ಶಾಂತಿ ಆತನನ್ನು ಕುಡಿಯಬೇಡಿ ಎಂದು ತಡೆದಿದ್ದಳು. ಮೊದಲೇ ಕುಡಿದ ನಶೆಯಲ್ಲಿದ್ದ ನರೇಶ್ ಪತ್ನಿ ಮಾತಿಗೆ ಕೋಪಗೊಂಡು, ಆಕೆಯನ್ನು ಎಳೆದುಕೊಂಡು ಕೋಣೆಗೆ ಹೋಗಿದ್ದಾನೆ. ಅಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸಿದ, ನಂತರ ಹರಿತವಾದ ವಸ್ತುವಿನಿಂದ ಆಕೆ ತಲೆ ಕತ್ತರಿಸಿ ಕೊಲೆ ಮಾಡಿದ್ದಾನೆ. ಬಳಿಕ ಪತ್ನಿಯ ರುಂಡವನ್ನು ಪಾತ್ರೆಯೊಂದರಲ್ಲಿ ಇಟ್ಟುಕೊಂಡು ಕೋಣೆಗೆ ಬೀಗ ಹಾಕಿ ಮನೆಬಿಟ್ಟು ಪರಾರಿಯಾಗಿದ್ದ.

    ಮರುದಿನ ಬೆಳಗ್ಗೆ ಮಕ್ಕಳು ಎದ್ದು ತಾಯಿ ಕಾಣಲಿಲ್ಲ ಎಂದು ಹುಡುಕಲು ಆರಂಭಿಸಿದರು. ಈ ವೇಳೆ ಬೀಗ ಒಡೆದು ಕೋಣೆಯನ್ನು ತೆರೆದಾಗ ರಕ್ತದ ಮಡುವಿನ ಮಧ್ಯೆ ತಲೆ ಇಲ್ಲದ ಸ್ಥಿತಿಯಲ್ಲಿ ಹೆಣವಾಗಿ ಅಮ್ಮ ಬಿದ್ದಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಈ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಮನೆಗೆ ಬಂದ ಸಂಬಂಧಿಗಳು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಇದನ್ನೂ ಓದಿ:ಕಾಮದಾಸೆಯಿಂದ ಸೊಸೆಯನ್ನೇ ಚುಚ್ಚಿ ಕೊಂದ ಮಾವ

    ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ವಿಧಿವಿಜ್ಞಾನ ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ, ಆರೋಪಿ ಕೊಲೆ ಮಾಡಿದ ಬಳಿಕ ನೆಲದ ಮೇಲೆ ಬಿದ್ದ ರಕ್ತದ ಕಲೆಗಳನ್ನು ಒರೆಸಲು ಯತ್ನಿಸಿದ್ದನು ಎಂಬುದು ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ನರೇಶ್ ಪತ್ನಿಯ ರುಂಡ ಹಿಡಿದು ತಂದು ಠಾಣೆಗೆ ಶರಣಾಗಿದ್ದಾನೆ. ತಕ್ಷಣ ಆತನ್ನನ್ನು ಬಂಧಿಸಿ, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.