Tag: uttar pradesh

  • ದೆಹಲಿ To ಬಿಹಾರ್ ಸೈಕಲ್ ಜರ್ನಿ – ಮನೆಗೆ ಹೋಗುವ ಖುಷಿಯಲ್ಲಿದ್ದ ಕಾರ್ಮಿಕ ಮಸಣ ಸೇರಿದ

    ದೆಹಲಿ To ಬಿಹಾರ್ ಸೈಕಲ್ ಜರ್ನಿ – ಮನೆಗೆ ಹೋಗುವ ಖುಷಿಯಲ್ಲಿದ್ದ ಕಾರ್ಮಿಕ ಮಸಣ ಸೇರಿದ

    – ದಾರಿ ಮಧ್ಯೆಯೇ ಸುಸ್ತಾಗಿ ಸಾವನ್ನಪ್ಪಿದ
    – ಕಾರ್ಮಿಕನ ಜೊತೆಗಿದ್ದವರು ಈಗ ಕ್ವಾರಂಟೈನ್

    ಲಕ್ನೋ: ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ದೇಶಾದ್ಯಂತ ಜಾರಿಮಾಡಿದ್ದ ಲಾಕ್‍ಡೌನ್ ವಿಸ್ತರಿಸಲಾಗಿದೆ. ಲಾಕ್‍ಡೌನ್‍ನಿಂದ ಕೆಲಸ ಅರಸಿ ನಗರಗಳಿಗೆ ಬಂದಿದ್ದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲಾಗದೆ ಪರದಾಡುತ್ತಿದ್ದಾರೆ. ಈ ನಡುವೆ ಸೈಕಲ್ ಏರಿ ಮನೆ ಸೇರುವ ಖುಷಿಯಲ್ಲಿದ್ದ ಬಿಹಾರ್ ಮೂಲದ ವಲಸೆ ಕಾರ್ಮಿಕನೋರ್ವ ಮಸಣ ಸೇರಿದ್ದಾನೆ.

    ಬೀಹಾರ್ ಮೂಲದ ಧರಮ್‍ವೀರ್(32) ದೆಹಲಿಗೆ ಕೆಲಸ ಅರಸಿ ಬಂದಿದ್ದನು. ಆದರೆ ಲಾಕ್‍ಡೌನ್‍ನಿಂದ ತನ್ನ ಊರಿಗೆ ವಾಪಸ್ ಹೋಗಲು ಆಗದೇ ಪರದಾಡುತ್ತಿದ್ದನು. ಈ ವೇಳೆ ಏಪ್ರಿಲ್ 28ರಂದು ತನ್ನ ಜೊತೆಗಿದ್ದ ಇತರೆ ಕಾರ್ಮಿಕರ ಜೊತೆಗೂಡಿ ದೆಹಲಿಯಿಂದ ಸೈಕಲ್‍ನಲ್ಲಿಯೇ ಬಿಹಾರ್ ಸೇರಲು ನಿರ್ಧರಿಸಿ, ದೆಹಲಿಯಿಂದ ಬಿಹಾರ್ ರಾಜ್ಯದತ್ತ ಪ್ರಯಣ ಆರಂಭಿಸಿದನು. ಆದರೆ ಮನೆ ಸೇರುವ ಖುಷಿಯಲ್ಲಿದ್ದ ಕಾರ್ಮಿಕ ಮಾರ್ಗ ಮಧ್ಯೆ ದೆಹಲಿ-ಉತ್ತರಪ್ರದೇಶ ಹೆದ್ದಾರಿಯಲ್ಲಿ ಜಹಜಾನ್‍ಪುರದ ಬಳಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ:  100 ಕಿ.ಮೀ ಏಕಾಂಗಿಯಾಗಿ ಸೈಕಲ್ ಸವಾರಿ- ವಾಪಸ್ ಪತ್ನಿಯ ಜೊತೆ ಬಂದ

    ಶುಕ್ರವಾರ ರಾತ್ರಿ ಜಹಜಾನ್‍ಪುರದ ಬಳಿ ಬರುತ್ತಿದ್ದಂತೆ ಧರಮ್‍ವೀರ್ ಬಹಳ ಸುಸ್ತಾಗಿದ್ದನು. ಹೀಗಾಗಿ ಆತನ ಜೊತೆಗಿದ್ದ ಇತರೆ ಕಾರ್ಮಿಕರು ಹಾಗೂ ಆತ ಸ್ವಲ್ಪಹೊತ್ತು ವಿಶ್ರಾಂತಿ ಪಡೆಯಲು ರಸ್ತೆ ಬದಿಯಲ್ಲಿ ನಿಂತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಧರಮ್‍ವೀರ್ ಸುಸ್ತಾಗಿ ಕೆಳಗೆ ಬಿದ್ದಿದ್ದು, ಆತನನ್ನು ಜೊತೆಗಿದ್ದವರು ಹತ್ತಿರದ ಆಸ್ಪತ್ರಗೆ ಕರೆದೊಯ್ದರು. ಆದರೆ ಅಷ್ಟರಲ್ಲಿ ಕಾರ್ಮಿಕ ಸಾವನ್ನಪ್ಪಿದ್ದನು.

    ದೆಹಲಿಯಿಂದ ಬಂದಿದ್ದ ಹಿನ್ನೆಲೆ ಆಸ್ಪತ್ರೆ ಸಿಬ್ಬಂದಿ ಧರಮ್‍ವೀರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಕೊರೊನಾ ಪರೀಕ್ಷೆ ಕೂಡ ಮಾಡಿದ್ದಾರೆ. ಅಲ್ಲದೆ ಆತನ ಜೊತೆಗಿದ್ದ ಕಾರ್ಮಿಕರನ್ನು ಆಸ್ಪತ್ರೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದ್ದು, ಎಲ್ಲರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಕಾರ್ಮಿಕರಿಗೆ ಸೋಂಕು ತಗುಲಿದೆಯಾ? ಇಲ್ಲವಾ ಎಂಬುದು ಪರೀಕ್ಷಾ ವರದಿ ಬಂದಮೇಲೆ ತಿಳಿಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

  • ತಂದೆಯನ್ನು ಅಂಬುಲೆನ್ಸ್‌ನಲ್ಲಿ ರೋಗಿಯಂತೆ ಮಲಗಿಸಿ ದೆಹಲಿಗೆ ಹೋಗಿ ಮದುವೆಯಾದ

    ತಂದೆಯನ್ನು ಅಂಬುಲೆನ್ಸ್‌ನಲ್ಲಿ ರೋಗಿಯಂತೆ ಮಲಗಿಸಿ ದೆಹಲಿಗೆ ಹೋಗಿ ಮದುವೆಯಾದ

    – ಮನೆಗೆ ವಾಪಸ್ ಬಂದು ಪತ್ನಿ ಸಮೇತ ಪೊಲೀಸರಿಗೆ ಅತಿಥಿಯಾದ

    ಲಕ್ನೋ: ಲಾಕ್‍ಡೌನ್ ನಡುವೆ ತಂದೆಯನ್ನು ಅಂಬುಲೆನ್ಸ್‌ನಲ್ಲಿ ರೋಗಿಯಂತೆ ಮಲಗಿಸಿಕೊಂಡು ಉತ್ತರ ಪ್ರದೇಶದಿಂದ ದೆಹಲಿಗೆ ಪ್ರಯಾಣಿಸಿ ಅಲ್ಲಿ ವಿವಾಹವಾಗಿ ವಾಪಸ್ ಬಂದಿರುವ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಿದೆ.

    26 ವರ್ಷದ ಅಹ್ಮದ್ ತನ್ನ ತಂದೆಗೆ ಅನಾರೋಗ್ಯ ಎಂದು ಹೇಳಿ ಬಾಡಿಗೆ ಅಂಬುಲೆನ್ಸ್ ತೆಗೆದುಕೊಂಡಿದ್ದಾನೆ. ನಂತರ ಅವರ ತಂದೆಯನ್ನು ಅಂಬುಲೆನ್ಸ್‌ನಲ್ಲಿ ಮಲಗಿಸಿ ಅವರಿಗೆ ಡ್ರಿಪ್ಸ್ ಹಾಕಿ ಉತ್ತರ ಪ್ರದೇಶದಿಂದ ದೆಹಲಿಗೆ ಪ್ರಯಾಣಿಸಿದ್ದಾನೆ. ಚೆಕ್‍ಪೋಸ್ಟ್ ವೇಳೆ ಅಡ್ಡಗಟ್ಟಿದ ಪೊಲಿಸರಿಗೆ ತಂದೆಯನ್ನು ತೋರಿಸಿ ವಂಚಿಸಿದ್ದಾನೆ. ಜೊತೆಗೆ ದೆಹಲಿಗೆ ಹೋಗಿ ಅಲ್ಲಿ ಮದುವೆಯಾಗಿ ಪುನಃ ಹೆಂಡತಿಯ ಸಮೇತ ಮಂಗಳವಾರ ಉತ್ತರ ಪ್ರದೇಶದ ತನ್ನ ಮನೆಗೆ ಮರಳಿದ್ದಾನೆ.

    ಸಿಕ್ಕಿ ಬಿದ್ದಿದ್ದು ಹೇಗೆ?
    ಅಹ್ಮದ್ ದೆಹಲಿಯ ಹುಡುಗಿಯನ್ನು ಮದುವೆ ಮಾಡಿಕೊಂಡು ಬಂದಿದ್ದು, ನೆರೆಹೊರೆಯವರಿಗೆ ಗೊತ್ತಾಗಿದೆ. ಆ ಹೊತ್ತಿಗಾಗಲೇ ಅವರು ವಾಸವಿದ್ದ ಖತೌಲಿ ಪ್ರದೇಶ ಐದು ಕೊರೊನಾ ಪಾಸಿಟಿವ್ ಪ್ರಕರಣಗಳಿಂದ ಕೊರೊನಾ ಹಾಟ್‍ಸ್ಟಾಟ್ ಆಗಿ ನಿರ್ಮಾಣವಾಗಿತ್ತು. ಈ ನಡುವೆ ದೆಹಲಿಯಿಂದ ವಾಪಸ್ ಬಂದ ಇವರನ್ನು ಕಂಡ ಅಕ್ಕಪಕ್ಕದವರು ಗಾಬರಿಗೊಂಡು ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.

    ನೆರೆಹೊರೆಯವರಿಂದ ಮಾಹಿತಿ ಪಡೆದ ನಂತರ ಪೊಲೀಸ್ ಇಲಾಖೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಇಸ್ಲಾಂ ನಗರ ಪ್ರದೇಶದ ಖತೌಲಿಯಲ್ಲಿರುವ ಅಹ್ಮದ್ ಮನೆಗೆ ಬಂದಿದ್ದಾರೆ. ನಂತರ ಅಧಿಕಾರಿಗಳು ವಧು ಮತ್ತು ವರ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರಿಂದ ಕೊರೊನಾ ಪರೀಕ್ಷೆಗೆ ಮಾದರಿಗಳನ್ನು ಸಂಗ್ರಹಿಸಿ, ಅವರೆಲ್ಲರನ್ನೂ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಕ್ವಾರಂಟೈನ್ ಘಟಕಕ್ಕೆ ಬಿಟ್ಟಿದ್ದಾರೆ.

    ಮೊದಲ ಪ್ಲಾನ್ ವಿಫಲ
    ಈ ಪ್ಲಾನ್‍ಗೂ ಮೊದಲು ಇನ್ನೊಂದು ಪ್ಲಾನ್ ಮಾಡಿದ್ದ ಅಹ್ಮದ್ ಅಪ್ಪನ ಜೊತೆ ಸೇರಿಕೊಂಡು ಮುಜಫರ್ ನಗರದಿಂದ ಗಂಗಾ ಕಲುವೆಯ ಮೇಲೆ ದೆಹಲಿಗೆ ಹೋಗಲು ಪ್ರಯತ್ನ ಮಾಡಿದ್ದರು. ಆದರೆ ಅಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ತಡೆದು ಅವರನ್ನು ವಾಪಸ್ ಮನೆಗೆ ಕಳುಹಿಸಿಕೊಟ್ಟಿದ್ದರು. ಇದಾದ ನಂತರ ಅಹ್ಮದ್ ಅಂಬುಲೆನ್ಸ್‌ನಲ್ಲಿ ಹೋಗುವ ಪ್ಲಾನ್ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

    ಅಂಬುಲೆನ್ಸ್‌ನಲ್ಲಿ ದೆಹಲಿಗೆ ಹೋದ ಅವರು ಅಲ್ಲಿನ ನಿಖಾ ಸಮಾರಂಭದಲ್ಲಿ ಮದುವೆಯಗಿದ್ದಾರೆ. ನಂತರ ವಧುವನ್ನು ಕರೆದುಕೊಂಡು ಮನಗೆ ವಾಪಸ್ ಆಗಿದ್ದಾರೆ. ಈ ಸಂಬಂಧ ಅಂಬುಲೆನ್ಸ್ ಚಾಲಕ ಮೆಹ್ತಾಬ್ ಮೇಲೂ ದೂರು ದಾಖಲಾಗಿದೆ.

  • ಆಸ್ಪತ್ರೆಗೆ ದಾಖಲಾಗಲು ಫುಟ್‍ಪಾತ್‍ನಲ್ಲಿ ಕಾದು ಕುಳಿತ 69 ಕೊರೊನಾ ಸೋಂಕಿತರು

    ಆಸ್ಪತ್ರೆಗೆ ದಾಖಲಾಗಲು ಫುಟ್‍ಪಾತ್‍ನಲ್ಲಿ ಕಾದು ಕುಳಿತ 69 ಕೊರೊನಾ ಸೋಂಕಿತರು

    ಲಕ್ನೋ: ಕೊರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡರೆ ಸಾಕು ಅವರನ್ನು ಕ್ವಾರಂಟೈನ್ ಮಾಡಿ, ನಿಗಾ ವಹಿಸಲಾಗುತ್ತದೆ. ಆದರೆ ಉತ್ತರ ಪ್ರದೇಶದಲ್ಲಿ 69 ಕೊರೊನಾ ಪೀಡಿತರು ಆಸ್ಪತ್ರೆಗೆ ದಾಖಲಾಗಲು ಫುಟ್‍ಪಾತ್‍ನಲ್ಲಿ ಕಾದು ಕುಳಿತ ಘಟನೆಯೊಂದು ಬೆಳಕಿಗೆ ಬಂದಿದೆ.

    ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಸೈಫೈ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಫ್ಲೂ ಹೊರರೋಗಿ ವಿಭಾಗದ ಗೇಟ್‍ಗಳ ಬಳಿ ಈ ದೃಶ್ಯ ಕಂಡುಬಂದಿತ್ತು.

    69 ಕೊರೊನಾ ಸೋಂಕಿತ ರೋಗಿಗಳನ್ನು ಗುರುವಾರ ಪಶ್ಚಿಮ ಉತ್ತರ ಪ್ರದೇಶದ ನಗರದಿಂದ ಸೈಫೈ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಹೀಗಾಗಿ ಆಗ್ರಾದಿಂದ 116 ಕಿ.ಮೀ ದೂರದಲ್ಲಿರುವ ಈ ಆಸ್ಪತ್ರೆಗೆ ಸರ್ಕಾರಿ ಬಸ್ಸಿನಲ್ಲಿ ರೋಗಿಗಳನ್ನು ಕರೆತರಲಾಗಿತ್ತು. ಆದರೆ ಈ ವೇಳೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳನ್ನು ಆಸ್ಪತ್ರೆಯಲ್ಲಿ ಮೀಸಲಾದ ವಾರ್ಡಿಗೆ ದಾಖಲಿಸಲು ತಡ ಮಾಡಿದರು. ಹೀಗಾಗಿ ರೋಗಿಗಳು ಆಸ್ಪತ್ರೆಗೆ ದಾಖಲಾಗಲು ಫುಟ್‍ಪಾತ್‍ನಲ್ಲಿ ಕಾದು ಕುಳಿತ್ತಿದ್ದರು.

    ಹೀಗೆ ರಸ್ತೆಯಲ್ಲಿ ಕೊರೊನಾ ಸೋಂಕಿತರು ಕಾದು ಕುಳಿತಿರುವ ದೃಶ್ಯವನ್ನು ಕಂಡ ಸ್ಥಳೀಯರು ಅದನ್ನು ವಿಡಿಯೋ ಮಾಡಿ ಎಲ್ಲೆಡೆ ಹರಿಬಿಟ್ಟಿದ್ದಾರೆ. ಈ ರೋಗಿಗಳು ಕೇವಲ ಮಾಸ್ಕ್ ಮಾತ್ರ ಧರಿಸಿದ್ದು, ಬೇರೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

    ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ವಿಚಾರ ಹೆಚ್ಚು ಸುದ್ದಿಯಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವವಿದ್ಯಾನಿಲಯದ ಉಪಕುಲಪತಿ, ಇದರಲ್ಲಿ ನಮ್ಮ ಆಸ್ಪತ್ರೆ ಸಿಬ್ಬಂದಿ ತಪ್ಪಿಲ್ಲ. ಇಲ್ಲಿ ಸಂವಹನದ ಕೊರತೆಯಾಗಿದೆ. ಬುಧವಾರ ಈ ರೋಗಿಗಳನ್ನು ನಮ್ಮ ಆಸ್ಪತ್ರೆಗೆ ವರ್ಗಾಯಿಸಬೇಕಿತ್ತು. ಆದರೆ ಗುರುವಾರ ಅವರನ್ನು ಕರೆದುಕೊಂಡು ಬರಲಾಗಿದೆ. ಈ ಬಗ್ಗೆ ನಮ್ಮ ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ಇರಲಿಲ್ಲ. ಆದರೆ ರೋಗಿಗಳು ಆಸ್ಪತ್ರೆಗೆ ಬಂದಿದ್ದಾರೆ ಎಂದು ತಿಳಿದ ತಕ್ಷಣ ನಾವು ಕ್ರಮ ತೆಗೆದುಕೊಂಡೆವು. ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದ ಕಾರಣಕ್ಕೆ ಅವರ ಆರೋಗ್ಯದ ಮಾಹಿತಿ ಪಡೆದು ಆಸ್ಪತ್ರೆಗೆ ದಾಖಲಿಸಿಕೊಳ್ಳುವುದು ತಡವಾಗಿದೆ. ಒಂದು ವೇಳೆ ಇದರಲ್ಲಿ ನಮ್ಮ ಸಿಬ್ಬಂದಿ ಲೋಪವಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

  • ಉತ್ತರ ಪ್ರದೇಶದಲ್ಲಿ ಜೂನ್ 30ರವರೆಗೆ ಸಭೆ, ಸಮಾರಂಭ ನಡೆಸುವಂತಿಲ್ಲ

    ಉತ್ತರ ಪ್ರದೇಶದಲ್ಲಿ ಜೂನ್ 30ರವರೆಗೆ ಸಭೆ, ಸಮಾರಂಭ ನಡೆಸುವಂತಿಲ್ಲ

    ಲಕ್ನೋ: ಕೊರೊನಾ ವೈರಸ್ ನಿಯಂತ್ರಣ ಸಂಬಂಧ ಜೂನ್ 30ರವರೆಗೆ ರಾಜ್ಯದಲ್ಲಿ ಯಾವುದೇ ಸಭೆ, ಸಾರ್ವಜನಿಕ ಸಮಾರಂಭಗಳನ್ನು ನಡೆಸಲು ಅನುಮತಿ ನೀಡದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಕೋವಿಡ್ -19 ಬಗ್ಗೆ ರಾಜ್ಯದ 11 ಸಮಿತಿಗಳ ಅಧ್ಯಕ್ಷರ ಜೊತೆ ಸಭೆ ನಡೆಸಿದ ಬಳಿಕ ಈ ಮಹತ್ವದ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ. ಈ ವೇಳೆ ಜನ ರಂಜಾನ್ ತಿಂಗಳಿನಲ್ಲಿ ಜನರು ಮನೆಯಲ್ಲೇ ಪ್ರಾರ್ಥನೆ ನಡೆಸಬೇಕೆಂದು ಸಿಎಂ ಮನವಿ ಮಾಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದ ವ್ಯಕ್ತಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಕಡಿಮೆ ಪ್ರಕರಣ ಇರುವ ಜಿಲ್ಲೆಗಳಲ್ಲೂ ಲಾಕ್‍ಡೌನ್ ಸರಿಯಾಗಿ ಆಗಬೇಕೆಂದು ಸಿಎಂ ಸೂಚಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ 1,621 ಮಂದಿಗೆ ಕೊರೊನಾ ಬಂದಿದ್ದು, 247 ರೋಗಿಗಳು ಗುಣಮುಖವಾಗಿದ್ದಾರೆ. 25 ಮಂದಿ ಸಾವನ್ನಪ್ಪಿದ್ದಾರೆ.

  • ಕೊರೊನಾ ಭೀಕರತೆ ನಡುವೆಯೂ ಕಾಮುಕರ ಅಟ್ಟಹಾಸ – 13ರ ಬಾಲಕಿ ಮೇಲೆ ಗ್ಯಾಂಗ್ ರೇಪ್

    ಕೊರೊನಾ ಭೀಕರತೆ ನಡುವೆಯೂ ಕಾಮುಕರ ಅಟ್ಟಹಾಸ – 13ರ ಬಾಲಕಿ ಮೇಲೆ ಗ್ಯಾಂಗ್ ರೇಪ್

    – ನೀಚ ಕೃತ್ಯವನ್ನು ಸೆರೆಹಿಡಿದ ಕೀಚಕರು
    – 6 ಮಂದಿ ಬಂಧನ

    ಲಕ್ನೋ: ವಿಶ್ವವ್ಯಾಪಿ ಹರಡಿರುವ ಕೊರೋನಾ ವೈರಸ್‍ಗೆ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ರಾಷ್ಟ್ರವನ್ನೂ ಕಾಡುತ್ತಿರುವ ಮಹಾಮಾರಿ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್‍ಡೌನ್ ಜಾರಿಮಾಡಲಾಗಿದೆ. ಆದರೆ ಕಾಮುಕರ ಅಟ್ಟಹಾಸ ಮಾತ್ರ ನಿಂತಿಲ್ಲ. 13 ವರ್ಷದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ನೀಚ ಕೃತ್ಯವೊಂದು ಬೆಳಕಿಗೆ ಬಂದಿದೆ.

    ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಮಿಸ್ರಿಖ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ನೀಚ ಕೃತ್ಯ ನಡೆದಿದೆ. ಬುಧವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಬಾಲಕಿ ಮೂತ್ರ ವಿಸರ್ಜನೆಗೆ ಮನೆಯಿಂದ ಆಚೆ ಹೋಗಿದ್ದಳು. ಈ ವೇಳೆ ಆಕೆಯನ್ನು 6 ಮಂದಿ ಕಾಮುಕರು ಅಪಹರಿಸಿ, ಶಾಲೆಯ ಕಟ್ಟಡದೊಳಗೆ ಎಳೆದೊಯ್ದರು. ಅಲ್ಲಿ ಇಬ್ಬರು ಯುವಕರು ಬಾಲಕಿ ಮೇಲೆ ಅತ್ಯಾಚಾರ ಎಸೆಗಿದ್ದು, ಉಳಿದ ನಾಲ್ಕು ಮಂದಿ ಈ ನೀಚ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ.

    ಹೇಗೋ ಬಾಲಕಿ ಈ ಕಾಮುಕರಿಂದ ತಪ್ಪಿಸಿಕೊಂಡು ಬಂದು ಮನೆ ಸೇರಿದ್ದು, ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಬಳಿಕ ಈ ಬಗ್ಗೆ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಬಾಲಕಿಯ ಮನೆಯ ಪಕ್ಕದಲ್ಲೇ ಆರೋಪಿಗಳಲ್ಲಿ ಇಬ್ಬರು ಯುವಕರು ವಾಸವಿದ್ದರು. ಈ ಇಬ್ಬರು ಯುವಕರು ತಮ್ಮ ನಾಲ್ವರು ಸ್ನೇಹಿತರ ಜೊತೆಗೂಡಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾರೆ. ಮೊದಲು ಇಬ್ಬರು ಯುವಕರು ಅತ್ಯಾಚಾರವೆಸೆಗಿದ್ದು ಈ ದೃಶ್ಯವನ್ನು ಮೊಬೈಲ್‍ನಲ್ಲಿ 4 ಮಂದಿ ಚಿತ್ರೀಕರಣ ಮಾಡಿದ್ದಾರೆ. ಆ ಬಳಿಕ ಅವರೂ ಕೂಡ ಬಾಲಕಿಯನ್ನು ಅತ್ಯಾಚಾರಗೈದಿದ್ದಾರೆ. ಅಷ್ಟೇ ಅಲ್ಲದೇ ಈ ಬಗ್ಗೆ ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಹಾಕಿದ್ದಾರೆ. ಈಗಾಗಲೇ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇತ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಮಸೀದಿಯಲ್ಲಿ ಅಡಗಿಕೊಂಡಿದ್ದ ಪ್ರೊಫೆಸರ್ ಸೇರಿದಂತೆ 30 ಮಂದಿ ತಬ್ಲಿಘಿಗಳು ಅರೆಸ್ಟ್

    ಮಸೀದಿಯಲ್ಲಿ ಅಡಗಿಕೊಂಡಿದ್ದ ಪ್ರೊಫೆಸರ್ ಸೇರಿದಂತೆ 30 ಮಂದಿ ತಬ್ಲಿಘಿಗಳು ಅರೆಸ್ಟ್

    – ದೆಹಲಿ ಸಭೆಗೆ ಹಾಜರಾಗಿದ್ದ ಆರೋಪಿಗಳು
    – ಬಂಧಿತರಲ್ಲಿ 16 ವಿದೇಶಿಯರು

    ಲಕ್ನೋ: ದೆಹಲಿಯಲ್ಲಿ ಕಳೆದ ತಿಂಗಳು ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿ ಮಸೀದಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಅಲಹಾಬಾದ್ ವಿಶ್ವವಿದ್ಯಾಲಯದ ಪ್ರೊಫೆಸರ್, 16 ವಿದೇಶಿಯರನ್ನು ಸೇರಿದಂತೆ ಒಟ್ಟು 30 ಮಂದಿಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

    ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರೊಫೆಸರ್ ಮೊಹಮ್ಮದ್ ಶಾಹಿದ್, ಲಾಕ್‍ಡೌನ್ ಘೋಷಿಸಿದ ನಂತರವೂ ಪ್ರಯಾಗರಾಜ್‍ನ ಮಸೀದಿಯಲ್ಲಿ ತಮ್ಮ `ಅಕ್ರಮ’ ವಾಸ್ತವ್ಯವನ್ನು ಏರ್ಪಡಿಸಿದ್ದರು. ಈ ಮೂಲಕ ವಿದೇಶಿಗರಿಗೆ ಉದ್ದೇಶಪೂರ್ವಕವಾಗಿ ಸಹಾಯ ಮಾಡಿದ್ದರು. ಹೀಗಾಗಿ ಅವರನ್ನು ಪ್ರಯಾಗರಾಜ್ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

    ತಬ್ಲಿಘಿ ಕಾರ್ಯಕ್ರಮಕ್ಕೆ ಹಾಜರಾದ ಜಮಾತಿಗಳ ಉಪಸ್ಥಿತಿಯನ್ನು ಜಿಲ್ಲಾಡಳಿತಕ್ಕೆ ತಿಳಿಸಿಲ್ಲ ಎಂಬ ಆರೋಪ ಪ್ರೊ. ಮೊಹಮ್ಮದ್ ಶಾಹಿದ್ ಮೇಲಿದೆ. ಬಂಧಿತ 16 ವಿದೇಶಿ ಪ್ರಜೆಗಳಲ್ಲಿ ಒಂಬತ್ತು ಮಂದಿ ಥೈಲ್ಯಾಂಡ್ ಮೂಲದವರು ಮತ್ತು ಆರು ಜನರು ಇಂಡೋನೇಷ್ಯಾದವರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಅಷ್ಟೇ ಅಲ್ಲದೆ ಬಂಧಿತ ಆರೋಪಿಗಳಲ್ಲಿ ಕೇರಳ ಮತ್ತು ಪಶ್ಚಿಮ ಬಂಗಾಳದ ತಲಾ ಒಬ್ಬರಿದ್ದಾರೆ.

    ಪೊಲೀಸ್ ಮೂಲಗಳ ಪ್ರಕಾರ, ಎಲ್ಲಾ ಜಮಾತಿಗಳು ಶಹಗಂಜ್‍ನ ಅಬ್ದುಲ್ಲಾ ಮಸೀದಿ ಮತ್ತು ಪ್ರಯಾಗರಾಜ್‍ನ ಕರೇಲಿ ಪ್ರದೇಶದ ಹೇರಾ ಮಸೀದಿಯೊಳಗೆ ಅಡಗಿಕೊಂಡಿದ್ದರು. ಹೆಚ್ಚಿನ ತನಿಖೆಯಲ್ಲಿ ಎಲ್ಲಾ ವಿದೇಶಿಯರು, ವಿಶೇಷವಾಗಿ ಇಂಡೋನೇಷಿಯನ್ನರು ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಭೇಟಿ ನೀಡಿದ್ದರೂ ಧಾರ್ಮಿಕ ಉಪದೇಶದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

    ಆರೋಪಿಗಳಿಗೆ ಪ್ರಯಾಗರಾಜ್‍ಗೆ ಭೇಟಿ ನೀಡಲು ಅನುಮತಿ ಇರಲಿಲ್ಲ. ಆದರೂ ಅವರು ನಗರಕ್ಕೆ ಭೇಟಿ ನೀಡಿದ್ದಷ್ಟೇ ಅಲ್ಲದೆ ಮಸೀದಿಯಲ್ಲಿ ಅಡಗಿಕೊಂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಈ ಸಂಬಂಧ ಶಹಗಂಜ್ ಪೊಲೀಸ್ ಠಾಣೆಯಲ್ಲಿ ಎಲ್ಲಾ ವಿದೇಶಿಯರು ಮತ್ತು ಪ್ರೊಫೆಸರ್ ಶಾಹಿದ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಈವರೆಗೆ ಪ್ರಯಾಗರಾಜ್‍ನಲ್ಲಿ ಕೇವಲ ಒಂದು ಕೋವಿಡ್-19 ಸೋಂಕಿತರಿದ್ದು, ಚಿಕಿತ್ಸೆಯ ನಂತರ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ಶೇಕಡಾ 79ರಷ್ಟು ಕೊರೊನಾ ವೈರಸ್ ರೋಗಿಗಳು ತಬ್ಲಿಘಿ ಜಮಾತ್‍ಗೆ ಸಂಬಂಧಿಸಿದವರೇ ಆಗಿದ್ದಾರೆ.

  • ಪಡಿತರಕ್ಕಾಗಿ ಕ್ಯೂನಲ್ಲಿ ನಿಂತಿದ್ದ ಮಹಿಳೆ ಕುಸಿದು ಬಿದ್ದು ಸಾವು

    ಪಡಿತರಕ್ಕಾಗಿ ಕ್ಯೂನಲ್ಲಿ ನಿಂತಿದ್ದ ಮಹಿಳೆ ಕುಸಿದು ಬಿದ್ದು ಸಾವು

    – ಕ್ಯೂನಲ್ಲಿ ಹೆಚ್ಚು ಹೊತ್ತು ನಿಂತು ಸುಸ್ತಾಗಿದ್ದರು
    – ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ

    ಲಕ್ನೋ: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಸರ್ಕಾರ ನೀಡುತ್ತಿರುವ ಉಚಿತ ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಯೊಂದರ ಮುಂದೆ ಕ್ಯೂನಲ್ಲಿ ನಿಂತಿದ್ದ ಮಹಿಳೆಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ.

    ಶುಕ್ರವಾರ ಈ ಘಟನೆ ನಡೆದಿದ್ದು ಇಮದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಕ್ಯೂನಲ್ಲಿ ನಿಂತಿದ್ದ ವೇಳೆ ಮಹಿಳೆ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಜಿಲ್ಲಾ ವಿತರಣಾ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿದ್ದೇವು. ಆದರೆ ಅಷ್ಟರಲ್ಲಿ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಸಾವಿಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ ಎಂದು ಜಿಲ್ಲಾಧಿಕಾರಿ ಕುಮಾರ್ ಪ್ರಶಾಂತ್ ತಿಳಿಸಿದ್ದಾರೆ.

    ಸದ್ಯ ಪೊಲೀಸರು ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆದರೆ ಹೃದಯಾಘಾತದಿಂದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳೀಯರು ಕೂಡ ಹೀಗೆ ಹೇಳುತ್ತಿದ್ದಾರೆ. ಇನ್ನೂ ಕೆಲವರು ನ್ಯಾಯಬೆಲೆ ಅಂಗಡಿಯಲ್ಲಿ ಸರಿಯಾಗಿ ಇಂಟರ್‌ನೆಟ್ ಸಿಗುತ್ತಿರಲಿಲ್ಲ. ಆದ್ದರಿಂದ ಪಡಿತರ ವಿತರಣೆ ತಡವಾಯ್ತು. ಬಹುಶಃ ಇದರಿಂದಲೇ ಮಹಿಳೆ ಸುಸ್ತಾಗಿ ಕುಸಿದು ಬಿದ್ದಿದ್ದರು ಎಂದು ತಿಳಿಸಿದ್ದಾರೆ.

    ಈ ಹಿನ್ನೆಲೆ ಈ ಪ್ರಕರಣ ಸಂಬಂಧ ತನಿಖೆ ನಡೆಸಲು ಸೂಚಿಸಲಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಈ ಬಗ್ಗೆ ಸ್ಪಷ್ಟವಾಗಲಿದೆ ಎಂದು ಡಿಸಿ ಹೇಳಿದ್ದಾರೆ.

  • ನಿನಗೆ ಕೊರೊನಾ ಬಂದಿದೆ ಎಂದ ಸ್ನೇಹಿತನಿಗೆ ಗುಂಡು ಹಾರಿಸಿದ

    ನಿನಗೆ ಕೊರೊನಾ ಬಂದಿದೆ ಎಂದ ಸ್ನೇಹಿತನಿಗೆ ಗುಂಡು ಹಾರಿಸಿದ

    – ಲುಡೋ ಆಡುವಾಗ ಎಡವಟ್ಟು

    ಲಕ್ನೋ: ನಿನಗೆ ಕೊರೊನಾ ಬಂದಿದೆ ಎಂದು ತಮಾಷೆ ಮಾಡಿದ ಸ್ನೇಹಿತ ಮೇಲೆ ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಜಾರ್ಚಾ ಪ್ರದೇಶದಲ್ಲಿ ನಡೆದಿದೆ.

    ಕೊರೊನಾ ವೈರಸ್ ಎಷ್ಟರ ಮಟ್ಟಿಗೆ ಜನರಲ್ಲಿ ಭಯ ತರಿಸಿದೆ ಎಂದರೆ ನಮ್ಮ ಜೊತೆಯಲ್ಲಿ ಇರುವವರು ಯಾರೇ ಅನೇಕ ಬಾರಿ ಕೆಮ್ಮಿದರೆ ಅವರನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ಬಂದಿದೆ. ಹಾಗೆಯೇ ಲುಡೋ ಆಡುವಾಗ ಕೆಮ್ಮಿದ ಗೆಳಯನನ್ನು ಕೊರೊನಾ ಬಂದಿದೆ ಎಂದು ಕೀಟಲೆ ಮಾಡಿದವನು ಈಗ ಗುಂಡಿನ ಏಟು ತಿಂದು ಆಸ್ಪತ್ರೆ ಸೇರಿದ್ದಾನೆ.

    ಗುಂಡಿನ ಏಟು ತಿಂದು ಆಸ್ಪತ್ರೆಗೆ ಸೇರಿದವನನ್ನು ಪ್ರತೀಕ್ ಮತ್ತು ಗುಂಡು ಹಾರಿಸಿದವನನ್ನು ಸುರೇಶ್ ಎಂದು ಗುರುತಿಸಲಾಗಿದೆ. ಪ್ರತೀಕ್ ಮತ್ತು ಸುರೇಶ್ ಸ್ನೇಹಿತರಾಗಿದ್ದು, ಮಂಗಳವಾರ ರಾತ್ರಿ 9 ಗಂಟೆಗೆ ಇನ್ನಿಬ್ಬರು ಸ್ನೇಹಿತರ ಜೊತೆ ಸೇರಿಕೊಂಡು ಲುಡೋ ಆಡಲು ಅವರ ಏರಿಯಾದಲ್ಲಿ ಇದ್ದ ಒಂದು ದೇವಸ್ಥಾನಕ್ಕೆ ಹೋಗಿದ್ದರು. ಲೂಡೋ ಆಡವಾಗ ಸುರೇಶ್ ಹಲವು ಬಾರಿ ಕೆಮ್ಮಿದ್ದಾನೆ.

    ಸುರೇಶ್ ಕೆಮ್ಮಿದ್ದನ್ನು ನೋಡಿ ಪ್ರತೀಕ್, ತುಂಬ ಕೆಮ್ಮುತ್ತಿದ್ದಾನೆ. ಅವನಿಗೆ ಕೊರೊನಾ ಸೋಂಕು ತಗುಲಿರಬಹುದು ಎಂದು ತಮಾಷೆ ಮಾಡಿದ್ದಾನೆ. ಈ ತಮಾಷೆ ವಿಕೋಪಗೆ ಹೋಗಿದೆ. ಕೆಮ್ಮಿದಾಗಲೆಲ್ಲ ಕೊರೊನಾ ಕೊರೊನಾ ಅನ್ನುತ್ತಿದ್ದ ಪ್ರತೀಕ್ ಕೋಪಗೊಂಡ ಸುರೇಶ್ ತನ್ನ ಬಳಿ ಇದ್ದ ಪಿಸ್ತೂಲ್‍ನಿಂದ ಶೂಟ್ ಮಾಡಿದ್ದಾನೆ. ನಂತರ ಗನ್ ಶಬ್ದ ಕೇಳಿದ ಸುತ್ತಮುತ್ತಲಿನ ಜನರು ದೇವಸ್ಥಾನದ ಬಳಿ ಬಂದಿದ್ದಾರೆ.

    ಜನರು ಬರುವುದನ್ನು ಕಂಡ ಸುರೇಶ್ ಅಲ್ಲಿಂದ ಪರಾರಿಯಾಗಿದ್ದಾನೆ. ಕಾಲಿಗೆ ಗುಂಡು ಬಿದ್ದು ನರಳುತ್ತಿದ್ದ ಪ್ರತೀಕ್ ನನ್ನು ಸ್ಥಳೀಯರು ನೋಯ್ಡಾದ ಕೈಲಾಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿ ಆರೋಪಿ ಸುರೇಶ್‍ಗಾಗಿ ಶೋಧಕಾರ್ಯ ಮಾಡುತ್ತಿದ್ದಾರೆ.

  • ಲಾಕ್‍ಡೌನ್‍ನಲ್ಲಿ ಹುಟ್ಟಿದ ಮಗುವಿಗೆ ‘ಸ್ಯಾನಿಟೈಸರ್’ ಎಂದು ಹೆಸರಿಟ್ಟ ಹೆತ್ತವರು

    ಲಾಕ್‍ಡೌನ್‍ನಲ್ಲಿ ಹುಟ್ಟಿದ ಮಗುವಿಗೆ ‘ಸ್ಯಾನಿಟೈಸರ್’ ಎಂದು ಹೆಸರಿಟ್ಟ ಹೆತ್ತವರು

    ಲಕ್ನೋ: ಎಲ್ಲೆಡೆ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಈ ಲಾಕ್‍ಡೌನ್ ಅವಧಿಯಲ್ಲಿ ಜನಿಸಿದ ಮಗುವಿಗೆ ಪೋಷಕರು ‘ಸ್ಯಾನಿಟೈಸರ್’ ಎಂದು ನಾಮಕರಣ ಮಾಡಿದ್ದಾರೆ.

    ಉತ್ತರ ಪ್ರದೇಶದ ಸಹರನ್ಪುರ ಜಿಲ್ಲೆಯ ವಿಜಯ್ ವಿಹಾರದ ನಿವಾಸಿಯಾಗಿರುವ ಓಂ ವೀರ್ ಸಿಂಗ್ ತಮ್ಮ ಮಗುವಿಗೆ ಸ್ಯಾನಿಟೈಸರ್ ಎಂದು ಹೆಸರಿಟ್ಟಿದ್ದಾರೆ. ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ವಿರುದ್ಧ ಹೋರಾಡುವ ಸಾಮರ್ಥ್ಯ ಸ್ಯಾನಿಟೈಸರ್ ಗೆ ಇದೆ. ಈ ಸೋಂಕು ಹರಡುತ್ತಿರುವುದನ್ನು ತಡೆಗಟ್ಟಲು ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಈ ಅವಧಿಯಲ್ಲಿ ನನ್ನ ಮಗ ಹುಟ್ಟಿದ್ದಾನೆ. ಹೀಗಾಗಿ ಮಗನಿಗೆ ಸ್ಯಾನಿಟೈಸರ್ ಎಂದು ಹೆಸರಿಟ್ಟಿದ್ದೇನೆ ಎಂದು ಓಂ ವೀರ್ ಸಿಂಗ್ ಹೇಳಿದ್ದಾರೆ.

    ಭಾನುವಾರ ಈ ಮಗು ಜನಿಸಿದ್ದು, ಪೋಷಕರು ಮಗುವಿಗೆ ಸ್ಯಾನಿಟೈಸರ್ ಎಂದು ಹೆಸರಿಡುತ್ತೇವೆ ಎಂದು ಹೇಳಿದ್ದಾಗ ಆಸ್ಪತ್ರೆಯಲ್ಲಿದ್ದ ಎಲ್ಲಾ ವೈದ್ಯಕೀಯ ಸಿಬ್ಬಂದಿ ನಕ್ಕಿದ್ದರು. ಈ ಹಿಂದೆ ಗೋರಖ್ ಪುರದಲ್ಲಿಯೂ ಹೀಗೆ ವಿಚಿತ್ರ ನಾಮಕರಣ ಮಾಡಿದ ಘಟನೆ ನಡೆದಿತ್ತು. ಜನತಾ ಕರ್ಫ್ಯೂ ದಿನ ಜನಿಸಿದ ಹೆಣ್ಣು ಮಗುವಿಗೆ ಪೋಷಕರು ‘ಕೊರೊನಾ’ ಎಂದೇ ನಾಮಕರಣ ಮಾಡಿದ್ದರು.

    ಆ ಬಳಿಕ ಲಾಕ್‍ಡೌನ್ ಅವಧಿಯಲ್ಲಿ ಮಗು ಜನಿಸಿದ್ದಕ್ಕೆ ಮಗುವಿಗೆ ‘ಲಾಕ್‍ಡೌನ್’ ಎಂದು ಪೋಷಕರು ನಾಮಕರಣ ಮಾಡಿದ್ದರು. ಆ ಬಳಿಕ ರಾಮ್‍ಪುರದಲ್ಲಿ ಜನಿಸಿದ್ದ ಮಗುವೊಂದಕ್ಕೆ ‘ಕೋವಿಡ್’ ಎಂದೇ ಹೆತ್ತವರು ಹೆಸರಿಟ್ಟಿದ್ದ ಸುದ್ದಿ ಹೆಚ್ಚು ಸದ್ದು ಮಾಡಿತ್ತು.

  • ಮತ್ತೆ ತಬ್ಲಿಘಿಗಳ ಹುಚ್ಚಾಟ – ಗಾಜಿಯಾಬಾದ್ ಬಳಿಕ ಕಾನ್ಪುರ, ಲಕ್ನೋದಿಂದ ದೂರು

    ಮತ್ತೆ ತಬ್ಲಿಘಿಗಳ ಹುಚ್ಚಾಟ – ಗಾಜಿಯಾಬಾದ್ ಬಳಿಕ ಕಾನ್ಪುರ, ಲಕ್ನೋದಿಂದ ದೂರು

    ಲಕ್ನೋ: ಕ್ಯಾರೆಂಟೈನ್‍ನಲ್ಲಿ ಇರಿಸಲಾಗಿರುವ ತಬ್ಲಿಘಿ ಜಮಾತ್‍ನ ಜನರು ದುರ್ವತೆ ಕೈಬಿಡುವಂತೆ ಕಾಣುತ್ತಿಲ್ಲ. ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ವೈದ್ಯಕೀಯ ಸಿಬ್ಬಂದಿಯೊಂದಿಗೆ ಅವರು ಕೆಟ್ಟದಾಗಿ ವರ್ತಿಸಿ, ಅಶ್ಲೀಲತೆ ಮೆರೆದಿದ್ದರು. ಇದರಿಂದಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ತಬ್ಲಿಘಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಇಷ್ಟಾದರೂ ತಬ್ಲಿಘಿಗಳು ತಮ್ಮ ಕೆಟ್ಟ ಚಾಳಿಯನ್ನು ಮುಂದುರಿಸಿದ್ದು, ಗಾಜಿಯಾಬಾದ್ ಬೆನ್ನಲ್ಲೇ ಲಕ್ನೋ ಮತ್ತು ಕಾನ್ಪುರದಿಂದ ಇದೇ ರೀತಿಯ ದೂರುಗಳು ಬಂದಿವೆ ಎಂದು ವರದಿಯಾಗಿದೆ.

    ಕಾನ್ಪುರ:
    ಕಾನ್ಪುರದ ಲಾಲಾ ಲಜಪತ್ ರೈ ಆಸ್ಪತ್ರೆಯಲ್ಲಿ ತಬ್ಲಿಘಿ ಜಮಾತ್‍ನ 22 ಮಂದಿಯನ್ನು ಕ್ವಾರೆಂಟೈನ್‍ನಲ್ಲಿ ಇಡಲಾಗಿದೆ. ಆಸ್ಪತ್ರೆಯು ಗಣೇಶ್ ಶಂಕರ್ ವಿದ್ಯಾ ವೈದ್ಯಕೀಯ ಕಾಲೇಜಿನ ಅಡಿ ಬರುತ್ತದೆ. ಕಾಲೇಜಿನ ಪ್ರಾಂಶುಪಾಲರಾದ ಆರತಿ ಲಾಲ್ ಚಂದಾನಿ, `ತಬ್ಲಿಘಿ ಜಮಾತ್‍ನಲ್ಲಿ ಭಾಗವಹಿಸಿದ್ದ 22 ಜನರನ್ನು ಕ್ಯಾರೆಂಟೈನ್ ವಾರ್ಡಿಗೆ ದಾಖಲಿಸಲಾಗಿದೆ. ಆದರೆ ಅವರು ವೈದ್ಯಕೀಯ ಸಿಬ್ಬಂದಿಯೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಬಲರಾಂಪುರ:
    ಲಕ್ನೋದ ಮಸೀದಿಯಲ್ಲಿ ಸಹರಾನ್‍ಪುರದ 12 ಜನರು ಸೋಂಕಿಗೆ ಒಳಗಾಗಿದ್ದಾರೆ. ಅವರನ್ನು ಬಲರಾಂಪುರ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇಲ್ಲಿಯೂ ಅವರು ಅಸಭ್ಯ ವರ್ತನೆ, ನೌಕರರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡುವುದು, ಸಿಬ್ಬಂದಿಯನ್ನು ನಿಂದಿಸುವುದನ್ನು ಮಾಡುತ್ತಿದ್ದಾರೆ. ಸೋಂಕಿತರು ಸಿಬ್ಬಂದಿ, ರೋಗಿಗಳನ್ನು ತಬ್ಬಿಕೊಳ್ಳುತ್ತಿದ್ದಾರೆ. ಆಹಾರ ಮತ್ತು ಕುಡಿಯುವ ನೀರನ್ನು ಮಿತಿಯಿಲ್ಲದೆ ಕೇಳುತ್ತಿದ್ದಾರೆ. ಈ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡಿದ್ದರಿಂದ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಜೊತೆಗೆ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಕುಶಿನಗರ:
    ಉತ್ತರ ಪ್ರದೇಶದ ಕುಶಿನಗರದ ಜಮೀನಿನಲ್ಲಿ ಅಡಗಿ ಕುಳಿತಿದ್ದ 14 ಮಂದಿ ತಬ್ಲಿಘಿಗಳನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ನೇಪಾಳಕ್ಕೆ ಪಲಾಯನ ಬೆಳೆಸುವ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಪೊಲೀಸರು ಎಲ್ಲರನ್ನೂ ಕ್ವಾರಂಟೈನ್‍ಗೆ ಕಳುಹಿಸಿದ್ದಾರೆ.

    ಮುಸ್ಲಿಂ ಧರ್ಮಗುರು ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹ್ಲಿ ಮತ್ತು ಶಿಯಾ ಧರ್ಮಗುರು ಮೌಲಾನಾ ಸೈಫ್ ರಿಜ್ವಿ ಅವರು ನಿಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಿ ಎಂದು ತಬ್ಲಿಘಿ ಜಮಾತ್ ಜನರಿಗೆ ಸಲಹೆ ನೀಡಿದ್ದರು. ಮೌಲಾನಾ ಖಾಲಿದ್ ರಶೀದ್ ಶನಿವಾರ ವಿಡಿಯೋ ಬಿಡುಗಡೆ ಮಾಡಿ, ‘ನಿಮ್ಮ ನಡವಳಿಕೆಯಿಂದ ಮುಸ್ಲಿಂ ಸಮುದಾಯದ ಹೆಸರನ್ನು ಕಳಂಕಿತಗೊಳಿಸಲಾಗುತ್ತಿದೆ. ಸಮಾಜದಲ್ಲಿ ಕೊರೊನಾದ ಅಪಾಯ ಹೆಚ್ಚುತ್ತಿದೆ. ಶಿಸ್ತಿನಿಂದ ಸರ್ಕಾರದ ಆದೇಶಗಳನ್ನು ಪಾಲಿಸಿ’ ಎಂದು ಕೇಳಿಕೊಂಡಿದ್ದರು.