Tag: uttar pradesh

  • ಯೋಗಿ ನಿವಾಸಕ್ಕೆ ನಿಯೋಜಿಸಿದ್ದ ಭದ್ರತಾ ಸಿಬ್ಬಂದಿ ಶವ ರೈಲ್ವೇ ಹಳಿ ಮೇಲೆ ಪತ್ತೆ!

    ಯೋಗಿ ನಿವಾಸಕ್ಕೆ ನಿಯೋಜಿಸಿದ್ದ ಭದ್ರತಾ ಸಿಬ್ಬಂದಿ ಶವ ರೈಲ್ವೇ ಹಳಿ ಮೇಲೆ ಪತ್ತೆ!

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ನಿವಾಸಕ್ಕೆ ನಿಯೋಜಿಸಲಾಗಿದ್ದ ಸಿಬ್ಬಂದಿಯೊಬ್ಬರ ಶವ ರೈಲ್ವೆ ಹಳಿ ಮೇಲೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಸಿಬ್ಬಂದಿಯನ್ನು ಘಾಜಿಯಾಬಾದ್‌ನ 47ನೇ ಬೆಟಾಲಿಯನ್, ಎಚ್-ದಲ್ ಪಿಎಸಿಗೆ ಸೇರಿದ ಅಂಕುರ್ ಕುಮಾರ್ (26) ಎಂದು ಗುರುತಿಸಲಾಗಿದೆ. ಅವರ ಮೃತದೇಹ ಭಾನುವಾರ ಮುಂಜಾನೆ 6:30ರ ಸುಮಾರಿಗೆ ಗುಲಾ ಫಾಟಕ್ ಬಳಿ ಪತ್ತೆಯಾಗಿದೆ. ಮೃತದೇಹ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಮೊಬೈಲ್ ಫೋನ್ ಹತ್ತಿರದಲ್ಲಿ ಕಂಡುಬಂದಿದ್ದು, ಕರೆ ಮಾಡಿದಾಗ, ರಿಂಗ್‌ ಆಗಿದ್ದರಿಂದ ಶವದ ಗುರುತು ಪತ್ತೆಹಚ್ಚಲು ಸಹಕಾರಿ ಆಯಿತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ದಕ್ಷಿಣ) ಅಂಶಿಕಾ ವರ್ಮಾ ತಿಳಿಸಿದ್ದಾರೆ.

    ಮೃತ ಅಂಕುರ್‌ ಕುಮಾರ್ ಅವರು ಮುಜಾಫರ್‌ನಗರದ ಸಿಖೇಡಾ ಪೊಲೀಸ್ ಠಾಣೆ ಪ್ರದೇಶದ ಮನೋಹರ ಗ್ರಾಮದ ನಿವಾಸಿ ರಾಕೇಶ್ ಕುಮಾರ್ ಅವರ ಪುತ್ರ.‌ ಅವರನ್ನು ಲಕ್ನೋದಲ್ಲಿರುವ (Lucknow) ಮುಖ್ಯಮಂತ್ರಿ ನಿವಾಸದಲ್ಲಿ ನಿಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಅಂಕುರ್‌ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • 11 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆ ಅರೆಸ್ಟ್‌

    11 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆ ಅರೆಸ್ಟ್‌

    ಲಕ್ನೋ: ತನ್ನ 11 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ (UP Mahrajganj) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಗುರುವಾರ ರಾತ್ರಿ ಸಂತ್ರಸ್ತೆಯ ತಾಯಿ ತನ್ನ ತವರು ಮನೆಗೆ ಹೋಗಿದ್ದಾಗ ಘಟನೆ ನಡೆದಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ (Kotwali Police Station) ಎಸ್‌ಹೆಚ್‌ಒ ಸತ್ಯೇಂದ್ರ ಕುಮಾರ್ ರೈ ತಿಳಿಸಿದ್ದಾರೆ. ದನ್ನೂ ಓದಿ: ಐಶ್ವರ್ಯಗೌಡ ವಂಚನೆ ಕೇಸ್‌ಗೆ ಟ್ವಿಸ್ಟ್ – ವಿನಯ್ ಕುಲಕರ್ಣಿ ಕಾರು ಚಾಲಕನ ವಿಚಾರಣೆ

    ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿರುವುದಲ್ಲದೇ ಯಾರಿಗಾದ್ರೂ ಹೇಳಿದ್ರೆ, ವಿಷ ನೀಡಿ ಸಾಯಿಸುವುದಾಗಿ ಬೆದರಿಕೆ ಸಹ ಹಾಕಿದ್ದಾನೆ. ಆದ್ರೆ ತಾಯಿ ತವರು ಮನೆಯಿಂದ ಬಂದ ಬಳಿಕ ಬಾಲಕಿ ಈ ವಿಷಯ ಹೇಳಿಕೊಂಡಿದ್ದಾಳೆ. ನಂತರ ಬಾಲಕಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ದನ್ನೂ ಓದಿ:  ತೇಜಸ್ವಿ ಸೂರ್ಯ, ಶಿವಶ್ರೀ ರಿಸೆಪ್ಷನ್ – ಸಿಎಂ, ಡಿಸಿಎಂ ಸೇರಿದಂತೆ ಗಣ್ಯರಿಂದ ನವದಂಪತಿಗೆ ಶುಭಹಾರೈಕೆ

    ಮಹಿಳೆಯ ದೂರಿನ ಆಧಾರದ ಮೇಲೆ, ಆರೋಪಿ ತಂದೆಯನ್ನ ಬಂಧಿಸಲಾಗಿದೆ ಮತ್ತು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರೈ ಹೇಳಿದ್ದಾರೆ. ದನ್ನೂ ಓದಿ: ಹಾಸನ| ಪಾಳು ಬಿದ್ದಿದ್ದ ಕಟ್ಟಡ ಕುಸಿತ – ಬೀದಿಬದಿ ವ್ಯಾಪಾರ ಮಾಡ್ತಿದ್ದ ನಾಲ್ವರು ದುರ್ಮರಣ

  • ಬಂಧಿತ ಖಲಿಸ್ತಾನಿ ಉಗ್ರ ಮಹಾಕುಂಭ ಮೇಳದಲ್ಲಿ ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದ

    ಬಂಧಿತ ಖಲಿಸ್ತಾನಿ ಉಗ್ರ ಮಹಾಕುಂಭ ಮೇಳದಲ್ಲಿ ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದ

    – ಕೃತ್ಯ ಎಸಗಿ ಪೋರ್ಚುಗಲ್‌ಗೆ ಪರಾರಿಯಾಗಲು ಪ್ಲ್ಯಾನ್‌
    – ಗುಪ್ತಚರ ಇಲಾಖೆಯ ಖಚಿತ ಮಾಹಿತಿಯಿಂದ ಇಂದು ಅರೆಸ್ಟ್‌

    ಲಕ್ನೋ: ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆ ಐಎಸ್‌ಐ (ISI) ಜೊತೆ ಸಂಪರ್ಕ ಹೊಂದಿದ್ದ ಖಲಿಸ್ತಾನಿ ಉಗ್ರ ಮಹಾಕುಂಭ ಮೇಳದಲ್ಲಿ (Maha Kumbh Mela) ದುಷ್ಕೃತ್ಯ ಎಸಗಲು ಸಂಚು ರೂಪಿಸಿದ್ದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಬಂಧನಕ್ಕೆ ಒಳಗಾಗಿರುವ ಉಗ್ರ ಮಸಿಹ್ ಕುಂಭ ಮೇಳದಲ್ಲಿ ಕೃತ್ಯ ಎಸಗಲು ಮುಂದಾಗಿದ್ದ. ಆದರೆ ತೀವ್ರ ಭದ್ರತಾ ತಪಾಸಣೆಯಿಂದಾಗಿ ಈತ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ ಎಂದು ಉತ್ತರ ಪ್ರದೇಶ (Uttar Pradesh) ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

     

    ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ಮಹಾಕುಂಭದ ಸಮಯದಲ್ಲಿ ದಾಳಿ ನಡೆಸಿದ ನಂತರ ಪೋರ್ಚುಗಲ್‌ಗೆ ಪಲಾಯನ ಮಾಡುವ ಉದ್ದೇಶ ಹೊಂದಿದ್ದ. ಆದರೆ ಪೊಲೀಸರ ಜಾಗರೂಕತೆಯಿಂದಾಗಿ ಆತನ ಯೋಜನೆಗಳು ವಿಫವಾಗಿತ್ತು. ಮಹಾಕುಂಭದ ಸಿದ್ಧತೆಗಳ ಸಮಯದಲ್ಲಿ ಮಸಿಹ್ ಲಕ್ನೋ ಮತ್ತು ಕಾನ್ಪುರಕ್ಕೆ ಭೇಟಿ ನೀಡಿದ್ದ ಎಂದು ಹೇಳಿದರು.

    ಮಹಾಕುಂಭ ಪ್ರಾರಂಭವಾಗುವ ಮೊದಲು ಶಾಂತಿಯನ್ನು ಭಂಗಗೊಳಿಸುವ ಪ್ರಯತ್ನಗಳ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಮಾಹಿತಿಯ ಮೇರೆಗೆ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಮತ್ತು ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ ಮಸಿಹ್‌ನನ್ನು ಇಂದು ಕೌಶಂಬಿಯಿಂದ ಬಂಧಿಸಲಾಯಿತು ಎಂದು ತಿಳಿಸಿದರು. ಇದನ್ನೂ ಓದಿ: ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ ಖಲಿಸ್ತಾನಿ ಉಗ್ರ ಯುಪಿಯಲ್ಲಿ ಅರೆಸ್ಟ್

    ಭಯೋತ್ಪಾದಕ ಮಸಿಹ್ ಪಾಕಿಸ್ತಾನದ ಐಎಸ್‌ಐ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಗಡಿಯಾಚೆಗಿನ ಹ್ಯಾಂಡ್ಲರ್‌ಗಳಿಂದ ಡ್ರೋನ್‌ಗಳ ಮೂಲಕ ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪಡೆಯುತ್ತಿದ್ದ. ಮಾಹಿತಿಯ ಪ್ರಕಾರ ಮಸಿಹ್‌ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ನ ಜರ್ಮನಿ ಮೂಲದ ಮಾಡ್ಯೂಲ್‌ನ ಮುಖ್ಯಸ್ಥ ಸ್ವರ್ಣ್ ಸಿಂಗ್ ಅಲಿಯಾಸ್ ಜೀವನ್ ಫೌಜಿಗಾಗಿ ಕೆಲಸ ಮಾಡುತ್ತಿದ್ದ.

    ಬಂಧನಕ್ಕೆ ಒಳಗಾದ ಉಗ್ರನಿಂದ 3 ಸಕ್ರಿಯ ಹ್ಯಾಂಡ್ ಗ್ರೆನೇಡ್‌ಗಳು, 2 ಸಕ್ರಿಯ ಡಿಟೋನೇಟರ್‌ಗಳು, 13 ಕಾರ್ಟ್ರಿಡ್ಜ್‌ಗಳು ಮತ್ತು 1 ವಿದೇಶಿ ನಿರ್ಮಿತ ಪಿಸ್ತೂಲ್ ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಉತ್ತರ ಪ್ರದೇಶ ಎಸ್‌ಟಿಎಫ್ ಮತ್ತು ಪಂಜಾಬ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಗುರುವಾರ ಮುಂಜಾನೆ ಕೌಶಂಬಿ (Kaushambi) ಜಿಲ್ಲೆಯಲ್ಲಿ ಉಗ್ರನನ್ನು ಬಂಧಿಸಿದ್ದರು.

  • ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ ಖಲಿಸ್ತಾನಿ ಉಗ್ರ ಯುಪಿಯಲ್ಲಿ ಅರೆಸ್ಟ್

    ಪಾಕಿಸ್ತಾನದ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದ ಖಲಿಸ್ತಾನಿ ಉಗ್ರ ಯುಪಿಯಲ್ಲಿ ಅರೆಸ್ಟ್

    ಲಕ್ನೋ: ಪಾಕಿಸ್ತಾನದ ಐಎಸ್‌ಐ (Pakistan ISI) ಜೊತೆ ಸಂಪರ್ಕ ಹೊಂದಿದ್ದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ನ (BKI) ಸಕ್ರಿಯ ಭಯೋತ್ಪಾದಕನನ್ನು ಉತ್ತರ ಪ್ರದೇಶ ಎಸ್‌ಟಿಎಫ್ ಮತ್ತು ಪಂಜಾಬ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಗುರುವಾರ ಮುಂಜಾನೆ ಕೌಶಂಬಿ (Kaushambi) ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

    ಪಂಜಾಬ್‌ನ ಅಮೃತಸರದ ರಾಮದಾಸ್ ಪ್ರದೇಶದ ಕುರ್ಲಿಯನ್ ಗ್ರಾಮದ ನಿವಾಸಿಯಾಗಿದ್ದ ಭಯೋತ್ಪಾದಕ ಲಾಜರ್ ಮಸಿಹ್‌ನನ್ನು ಕೌಶಂಬಿಯ ಕೊಖ್ರಾಜ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಗುರುವಾರ ಬೆಳಗಿನ ಜಾವ 3:20ರ ಸುಮಾರಿಗೆ ಬಂಧಿಸಲಾಯಿತು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಯುಪಿ ವಿಶೇಷ ಕಾರ್ಯಪಡೆ, ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಭ್ ಯಶ್ ತಿಳಿಸಿದ್ದಾರೆ. ಇದನ್ನೂ ಓದಿ: 1 ಕೆಜಿ ಚಿನ್ನ ಸಾಗಾಟಕ್ಕೆ ರನ್ಯಾಗೆ 4ರಿಂದ 5 ಲಕ್ಷ ಕಮಿಷನ್ – ನಟಿ ಕೇವಲ ಪಾತ್ರಧಾರಿ, ಅಸಲಿ ಕಿಂಗ್‌ಪಿನ್ ಬೇರೆ!

    ಬಂಧಿತ ಭಯೋತ್ಪಾದಕ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ನ (ಬಿಕೆಐ) ಜರ್ಮನಿ ಮೂಲದ ಮಾಡ್ಯೂಲ್ ಮುಖ್ಯಸ್ಥ ಸ್ವರ್ಣ್ ಸಿಂಗ್ ಅಲಿಯಾಸ್ ಜೀವನ್ ಫೌಜಿಗಾಗಿ ಕೆಲಸ ಮಾಡುತ್ತಿದ್ದ. ಅಲ್ಲದೇ ಪಾಕಿಸ್ತಾನ ಮೂಲದ ಐಎಸ್‌ಐ ಕಾರ್ಯಕರ್ತರೊಂದಿಗೆ ನೇರ ಸಂಪರ್ಕದಲ್ಲಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜನೌಷಧಿ ಮಾದರಿಯಲ್ಲೇ ಜಾನುವಾರುಗಳಿಗೆ ‘ಪಶು ಔಷಧಿ’ ಯೋಜನೆ – ಕೇಂದ್ರ ಸಂಪುಟ ಅನುಮೋದನೆ

    ಬಂಧಿತ ಉಗ್ರ ಕೆಲವು ಸ್ಫೋಟಕ ವಸ್ತುಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವಲ್ಲಿ ಯುಪಿ ಎಸ್‌ಟಿಎಫ್ ಯಶಸ್ವಿಯಾಗಿದೆ. ವಶಪಡಿಸಿಕೊಂಡ ವಸ್ತುಗಳ ಪೈಕಿ ಮೂರು ಸಕ್ರಿಯ ಹ್ಯಾಂಡ್ ಗ್ರೆನೇಡ್, ಎರಡು ಸಕ್ರಿಯ ಡಿಟೋನೇಟರ್, ಒಂದು ವಿದೇಶಿ ನಿರ್ಮಿತ ಪಿಸ್ತೂಲ್ ಮತ್ತು ವಿದೇಶಿ ನಿರ್ಮಿತ 13 ಕಾರ್ಟ್ರಿಡ್ಜ್ಗಳು ಸೇರಿವೆ. ಇದಲ್ಲದೆ, ಬಿಳಿ ಬಣ್ಣದ ಸ್ಫೋಟಕ ಪುಡಿ, ಗಾಜಿಯಾಬಾದ್ ವಿಳಾಸ ಹೊಂದಿರುವ ಆಧಾರ್ ಕಾರ್ಡ್, ಸಿಮ್ ಕಾರ್ಡ್ ಇಲ್ಲದ ಒಂದು ಮೊಬೈಲ್ ಫೋನ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಏರಿಕೆ ಎಫೆಕ್ಟ್ – ಬೆಂಗ್ಳೂರಲ್ಲಿ ಟ್ರಾಫಿಕ್ ಜೊತೆಗೆ ವಾಯುಮಾಲಿನ್ಯವೂ ಹೆಚ್ಚಳ

    ಬಂಧಿತ ಉಗ್ರ ಸೆಪ್ಟೆಂಬರ್ 24, 2024ರಂದು ಪಂಜಾಬ್‌ನಲ್ಲಿ ನ್ಯಾಯಾಂಗ ಬಂಧನದಿಂದ ತಪ್ಪಿಸಿಕೊಂಡಿದ್ದ ಎಂದು ಎಡಿಜಿಪಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 137 ಅಕ್ರಮ ವಲಸಿಗರು ಪತ್ತೆ, ಕಠಿಣ ಕ್ರಮ ಕೈಗೊಳ್ಳಲಾಗಿದೆ: ಪರಮೇಶ್ವರ್

  • ಕುಂಭಮೇಳ: ಯುಪಿಯ ಮೂರು ಹೆದ್ದಾರಿಗಳಲ್ಲಿ 40 ಲಕ್ಷ ದಾಖಲೆಯ ವಾಹನಗಳ ಸಂಚಾರ

    ಕುಂಭಮೇಳ: ಯುಪಿಯ ಮೂರು ಹೆದ್ದಾರಿಗಳಲ್ಲಿ 40 ಲಕ್ಷ ದಾಖಲೆಯ ವಾಹನಗಳ ಸಂಚಾರ

    * ಜನವರಿ-ಫೆಬ್ರವರಿ ಅವಧಿಯಲ್ಲಿ ಬರೋಬ್ಬರಿ 40 ಲಕ್ಷ ವಾಹನಗಳ ಓಡಾಟ

    ಲಕ್ನೋ: ಮಹಾ ಕುಂಭಮೇಳದ (Maha Kumbh) ಅವಧಿಯಲ್ಲಿ ರಾಜ್ಯದ ಮೂರು ಎಕ್ಸ್‌ಪ್ರೆಸ್‌ವೇಗಳ ಮೂಲಕ ಹಾದು ಹೋಗುವ ವಾಹನಗಳ ಸಂಖ್ಯೆಯಲ್ಲಿ ದಾಖಲೆ ಸೃಷ್ಟಿಯಾಗಿದೆ. ಈ ವರ್ಷದ ಜನವರಿ-ಫೆಬ್ರವರಿ ಅವಧಿಯಲ್ಲಿ ಮೂರು ಹೆದ್ದಾರಿಗಳಲ್ಲಿ 40 ಲಕ್ಷ ವಾಹನಗಳು ಸಂಚರಿಸಿವೆ.

    ಯುಪಿ ಎಕ್ಸ್‌ಪ್ರೆಸ್‌ವೇಸ್ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (ಯುಪಿಇಐಡಿಎ) ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇ, ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಮತ್ತು ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಮೂಲಕ 40 ಲಕ್ಷಕ್ಕೂ ಹೆಚ್ಚು ವಾಹನಗಳು ಹಾದು ಹೋಗಿವೆ. ಈ ಅವಧಿಯಲ್ಲಿ 564 ರಸ್ತೆ ಅಪಘಾತಗಳು ಸಂಭವಿಸಿದ್ದು, 40 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ, ಕೊಲೆಯಂಥ ಒಂದೇ ಒಂದು ಕೇಸ್‌ ವರದಿಯಾಗಿಲ್ಲ: ಯೋಗಿ ಆದಿತ್ಯನಾಥ್‌

    ಜನವರಿ 1 ರಿಂದ ಫೆಬ್ರವರಿ 28 ರವರೆಗೆ ದಾಖಲೆಯ 28.40 ಲಕ್ಷ ವಾಹನಗಳು ಆಗ್ರಾ ಲಕ್ನೋ ಎಕ್ಸ್‌ಪ್ರೆಸ್‌ವೇ ಮೂಲಕ ಹಾದು ಹೋಗಿವೆ. ಇದೇ ಅವಧಿಯಲ್ಲಿ 2024 ರಲ್ಲಿ ಸುಮಾರು 17 ಲಕ್ಷ ಮತ್ತು 2023 ರಲ್ಲಿ 16 ಲಕ್ಷದಷ್ಟು ವಾಹನಗಳು ಸಂಚರಿಸಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇಕಡಾ 70 ರಷ್ಟು ಹೆಚ್ಚಿನ ವಾಹನಗಳು ಓಡಿವೆ.

    ಜನವರಿ-ಫೆಬ್ರವರಿಯಲ್ಲಿ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಮೂಲಕ ಸುಮಾರು 15.10 ಲಕ್ಷ ವಾಹನಗಳು ಹಾದು ಹೋಗಿವೆ. 2024 ರಲ್ಲಿ ಸುಮಾರು 10 ಲಕ್ಷ ವಾಹನಗಳು ಮತ್ತು 2023 ರಲ್ಲಿ 7 ಲಕ್ಷ ವಾಹನಗಳು ಈ ಎಕ್ಸ್‌ಪ್ರೆಸ್‌ವೇ ಮೂಲಕ ಹಾದು ಹೋಗಿದ್ದವು. ಮಹಾ ಕುಂಭಮೇಳದ ಸಮಯದಲ್ಲಿ 2.87 ಲಕ್ಷ ವಾಹನಗಳು ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಮೂಲಕ ಹಾದುಹೋದವು. ಇದನ್ನೂ ಓದಿ: ಮೋದಿಗೂ ಅಚ್ಚುಮೆಚ್ಚು ತಾವರೆ ಬೀಜ – ದಿನ ಬಳಸೋದ್ರಿಂದ ಆರೋಗ್ಯಕ್ಕೆ ಆಗೋ ಪ್ರಯೋಜನವೇನು?

    ವಾಹನಗಳ ಸಂಖ್ಯೆಯಲ್ಲಿ ಅನಿರೀಕ್ಷಿತ ಹೆಚ್ಚಳದಿಂದಾಗಿ, ಅತಿ ವೇಗ ಮತ್ತು ಅಪಘಾತಗಳು ಹೆಚ್ಚಾಗಿದ್ದು ಚಾಲನೆಯಲ್ಲಿ ಅಜಾಗರೂಕತೆ ಕಂಡುಬಂದಿದೆ. ಇದರ ಪರಿಣಾಮವಾಗಿ 564 ಅಪಘಾತಗಳಲ್ಲಿ 40 ಸಾವುಗಳು ಸಂಭವಿಸಿದ್ದು, 524 ಗಾಯಗಳಾಗಿವೆ. ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಅತಿವೇಗಕ್ಕಾಗಿ 8.45 ಲಕ್ಷಕ್ಕೂ ಹೆಚ್ಚು ಚಲನ್‌ಗಳನ್ನು ನೀಡಲಾಗಿದೆ. ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಈ ಸಂಖ್ಯೆ 6.64 ಲಕ್ಷ ಕಾರ್‌ಗಳಿಗೆ ದಂಡ ವಿಧಿಸಿದೆ.

  • ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ, ಕೊಲೆಯಂಥ ಒಂದೇ ಒಂದು ಕೇಸ್‌ ವರದಿಯಾಗಿಲ್ಲ: ಯೋಗಿ ಆದಿತ್ಯನಾಥ್‌

    ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ, ಕೊಲೆಯಂಥ ಒಂದೇ ಒಂದು ಕೇಸ್‌ ವರದಿಯಾಗಿಲ್ಲ: ಯೋಗಿ ಆದಿತ್ಯನಾಥ್‌

    – 130 ದೋಣಿಗಳನ್ನು ಹೊಂದಿದ್ದ ಕುಟಂಬವೊಂದು 30 ಕೋಟಿ ಲಾಭ ಗಳಿಸಿದೆ ಎಂದ ಸಿಎಂ

    ಲಕ್ನೋ: ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ (Maha Kumbh Mela) 130 ದೋಣಿಗಳನ್ನು ಹೊಂದಿರುವ ಕುಟುಂಬ 30 ಕೋಟಿ ರೂ. ಲಾಭ ಗಳಿಸಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ತಿಳಿಸಿದ್ದಾರೆ. ಆ ಮೂಲಕ ಕುಂಭಮೇಳವನ್ನು ಟೀಕಿಸಿದ್ದ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

    ವಿಧಾನಸಭೆಯಲ್ಲಿ ಅಂಗೀಕರಿಸಲಾದ 2025-26ನೇ ಸಾಲಿನ ರಾಜ್ಯ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಿಪಕ್ಷಗಳಿಗೆ ಸಿಎಂ ಚಾಟಿ ಬೀಸಿದ್ದಾರೆ. ಜನರು ನಿಮ್ಮ ಮಾತು ಕೇಳುತ್ತಿಲ್ಲ. ನಿಮ್ಮ ಕೌಂಟ್‌ಡೌನ್‌ ಶುರುವಾಗಿದೆ ಎಂದು ತಿವಿದಿದ್ದಾರೆ. ಇದನ್ನೂ ಓದಿ: ಮೋದಿಗೂ ಅಚ್ಚುಮೆಚ್ಚು ತಾವರೆ ಬೀಜ – ದಿನ ಬಳಸೋದ್ರಿಂದ ಆರೋಗ್ಯಕ್ಕೆ ಆಗೋ ಪ್ರಯೋಜನವೇನು?

    ಪ್ರಯಾಗ್‌ರಾಜ್‌ನ ದೋಣಿ ಚಾಲಕರನ್ನು ಶೋಷಿಸಲಾಗಿದೆ ಎಂಬ ಸಮಾಜವಾದಿ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನಾನು ದೋಣಿ ಚಾಲಕನ ಕುಟುಂಬದ ಯಶಸ್ಸಿನ ಕಥೆಯನ್ನು ಹೇಳುತ್ತಿದ್ದೇನೆ. ಅವರ ಬಳಿ 130 ದೋಣಿಗಳಿವೆ. 45 ದಿನಗಳಲ್ಲಿ (ಮಹಾ ಕುಂಭ) ಅವರು 30 ಕೋಟಿ ರೂ. ಲಾಭ ಗಳಿಸಿದ್ದಾರೆ. ಇದರರ್ಥ ಪ್ರತಿ ದೋಣಿಯಿಂದ 23 ಲಕ್ಷ ರೂ. ಗಳಿಸಿದ್ದಾರೆ. ಪ್ರತಿದಿನ ಅವರು ಒಂದು ದೋಣಿಯಿಂದ 50,000-52,000 ರೂ. ಗಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ ಅಥವಾ ಕೊಲೆಯ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ. ಅರವತ್ತಾರು ಕೋಟಿ ಜನರು ಆಗಮಿಸಿ ಭಾಗವಹಿಸಿದರು. ಕುಂಭಮೇಳದಲ್ಲಿ ಪಾಲ್ಗೊಂಡು ಸಂತೋಷದಿಂದ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದ ವ್ಯವಸ್ಥೆ ಬಗ್ಗೆ ಡಿಕೆಶಿ ಶ್ಲಾಘನೆ – ಯುಪಿ ವಿಧಾನಸಭೆಯಲ್ಲಿ ಯೋಗಿ ಮಾತು

    ಮಹಾ ಕುಂಭಮೇಳಕ್ಕೆ 7,500 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿತ್ತು. ಇದರಿಂದ ದಾಖಲೆಯ 3 ಲಕ್ಷ ಕೋಟಿ ರೂಪಾಯಿ ವ್ಯವಹಾರ ಆಗಿದೆ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಸಮರ್ಥಿಸಿಕೊಂಡಿದ್ದಾರೆ.

    ಈ ಕಾರ್ಯಕ್ರಮವು ಹೋಟೆಲ್ ಉದ್ಯಮದಲ್ಲಿ 40,000 ಕೋಟಿ ರೂ., ಆಹಾರ ಮತ್ತು ದಿನನಿತ್ಯದ ಅಗತ್ಯ ವಸ್ತುಗಳಲ್ಲಿ 33,000 ಕೋಟಿ ರೂ., ಸಾರಿಗೆಯಲ್ಲಿ 1.5 ಲಕ್ಷ ಕೋಟಿ ರೂ., ಧಾರ್ಮಿಕ ಕೊಡುಗೆಗಳಲ್ಲಿ 20,000 ಕೋಟಿ ರೂ., ದೇಣಿಗೆಗಳಲ್ಲಿ 660 ಕೋಟಿ ರೂ., ಟೋಲ್ ತೆರಿಗೆಯಲ್ಲಿ 300 ಕೋಟಿ ರೂ., ಇತರ ಆದಾಯದಲ್ಲಿ 66,000 ಕೋಟಿ ರೂ. ಗಳಿಸಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯಿಂದ ಗುಜರಾತ್ ವಂತಾರದಲ್ಲಿ ವನ್ಯಜೀವಿ ಪುನವರ್ಸತಿ ಸಂರಕ್ಷಣಾ ಕೇಂದ್ರ ಉದ್ಘಾಟನೆ

  • ಮಹಾ ಕುಂಭಮೇಳದ ವ್ಯವಸ್ಥೆ ಬಗ್ಗೆ ಡಿಕೆಶಿ ಶ್ಲಾಘನೆ – ಯುಪಿ ವಿಧಾನಸಭೆಯಲ್ಲಿ ಯೋಗಿ ಮಾತು

    ಮಹಾ ಕುಂಭಮೇಳದ ವ್ಯವಸ್ಥೆ ಬಗ್ಗೆ ಡಿಕೆಶಿ ಶ್ಲಾಘನೆ – ಯುಪಿ ವಿಧಾನಸಭೆಯಲ್ಲಿ ಯೋಗಿ ಮಾತು

    ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಹಾಕುಂಭ (Maha Kumbh Mela) ಆಯೋಜನೆಯ ಕುರಿತು ಸಮಾಜವಾದಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು, ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹೇಳಿಕೆಯನ್ನು ಉಲ್ಲೇಖಿಸಿ ಅಖಿಲೇಶ್ ಯಾದವ್ ಅವರನ್ನು ತೀವ್ರ ತರಾಟೆಗೆ ತಗೆದುಕೊಂಡಿದ್ದಾರೆ.

    ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಂತಹ ಅನೇಕ ನಾಯಕರು ಮಹಾಕುಂಭ ಮೇಳದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಿ, ಆದರ ಆಯೋಜನೆಯ ಕುರಿತು ಶ್ಲಾಘಿಸಿ ಮಾತನಾಡಿದ್ದಾರೆ. ಆದರೆ, ನೀವೂ ಅಖಿಲೇಶ್ ಯಾದವ್ ಸಹ ಅಲ್ಲಿಗೆ ಹೋಗಿದ್ದೀರಿ. ಅದು ನಿಮ್ಮ ನಂಬಿಕೆ. ಆದರೆ ಚಿಕ್ಕಪ್ಪ ಹೋಗಲು ಸಾಧ್ಯವಾಗಲಿಲ್ಲ. ಆದ್ದರಿಂದ ನೀವು ನಿಮ್ಮ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಅವರನ್ನು ಮೆಚ್ಚಿಸಲು ಈ ರೀತಿಯ ಹೇಳಿಕೆ ನೀಡಿದ್ದೀರಾ ಎಂದು ಕಿಡಿಕಾರಿದರು.

    45 ದಿನದಲ್ಲಿ 66.30 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ. ಮಹಾಕುಂಭಮೇಳದಲ್ಲಿ ಮೂರೂವರೆ ಲಕ್ಷ ಕೋಟಿ ರೂಪಾಯಿಯ ವಹಿವಾಟು ನಡೆದಿದೆ. 130 ದೋಣಿಗಳ ನಾವಿಕರು 30 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ. ಕುಂಭಮೇಳದ ಅಚ್ಚುಕಟ್ಟು ವ್ಯವಸ್ಥೆ ಬಗ್ಗೆ ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್, ನನಗೆ ಕರೆ ಮಾಡಿ ಶ್ಲಾಘಿಸಿದ್ದಾರೆ ಎಂದು ಸದನಕ್ಕೆ ಸಿಎಂ ಯೋಗಿ ಮಾಹಿತಿ ನೀಡಿದ್ದಾರೆ.

    ಇನ್ನು ಮಹಾಶಿವರಾತ್ರಿಯ ದಿನ ಮಾತನಾಡಿದ ಡಿಕೆಶಿ, ಮಹಾ ಕುಂಭಮೇಳದಲ್ಲಿ ನನ್ನ ಅನುಭವ ಅತ್ಯುತ್ತಮವಾಗಿತ್ತು. ಮಹಾ ಕುಂಭಮೇಳದ ಆಯೋಜನೆಯನ್ನು ನಾನು ಸ್ವಾಗತಿಸುತ್ತೇನೆ. ಇದು ಸಾಮಾನ್ಯವಾದ ಕೆಲಸವಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರನ್ನು ನಿಭಾಯಿಸುವುದು ಸುಲಭವಲ್ಲ. ಒಂದೆರಡು ಸಣ್ಣಪುಟ್ಟ ತೊಂದರೆಗಳು ಆಗಿರಬಹುದು. ತಪ್ಪು ಹುಡುಕಲು ಹೋಗುವುದಿಲ್ಲ. ಧರ್ಮದಲ್ಲಿ ಭಕ್ತ ಹಾಗೂ ಭಗವಂತನ ನಡುವೆ ಸಂಬಂಧವಿರುತ್ತದೆ ಎಂದು ಹೇಳಿದ್ದರು.

  • ವಿಧಾನಸಭೆಯೊಳಗೆ ಪಾನ್ ಮಸಾಲ ಅಗಿದು, ಉಗಿದ ಶಾಸಕ – ಸ್ವಚ್ಛಗೊಳಿಸಿದ ಸ್ಪೀಕರ್‌

    ವಿಧಾನಸಭೆಯೊಳಗೆ ಪಾನ್ ಮಸಾಲ ಅಗಿದು, ಉಗಿದ ಶಾಸಕ – ಸ್ವಚ್ಛಗೊಳಿಸಿದ ಸ್ಪೀಕರ್‌

    – ಉಗುಳಿದ ಶಾಸಕರನ್ನ ವಿಡಿಯೋನಲ್ಲಿ ನೋಡಿದ್ದೇನೆ, ತಪ್ಪೊಪ್ಪಿಕೊಳ್ಳಿ ಅಂತ ವಾರ್ನಿಂಗ್‌

    ಲಕ್ನೋ: ಉತ್ತರ ಪ್ರದೇಶದ ವಿಧಾನಸಭೆಯಲ್ಲಿಂದು (Uttar Pradesh Assembly) ವಿಚಿತ್ರ ಪ್ರಸಂಗವೊಂದು ನಡೆದಿದೆ. ಸ್ಪೀಕರ್‌ ಸತೀಶ್‌ ಮಹಾನಾ ಅವರು, ಕೆಲ ಸದಸ್ಯರು ಪಾನ್‌ ಮಸಾಲ ಸೇವಿಸಿದ ಬಳಿಕ ವಿಧಾನಸಭೆಯ ಸಭಾಂಗಣದಲ್ಲೇ ಉಗುಳಿರುವ (Spitting Pan Masala) ವಿಚಾರವನ್ನು ಪ್ರಸ್ತಾಪಿಸಿದರು. ಅಲ್ಲದೇ ಉಗುಳಿದ ಕಲೆಗಳನ್ನು ತಾವೇ ಸ್ವಚ್ಛಗೊಳಿಸಿರುವುದಾಗಿಯೂ ಹೇಳಿದರು.

    ಕಲಾಪ ಆರಂಭಕ್ಕೂ ಮುನ್ನವೇ ಮಾತನಾಡಿದ ಸ್ಪೀಕರ್‌, ಇಂದು ಬೆಳಗ್ಗೆ ಮಾನ್ಯ ಸದಸ್ಯರೊಬ್ಬರು ನಮ್ಮ ವಿಧಾನಸೌಧದ ಈ ಸಭಾಂಗಣದಲ್ಲಿ ಪಾನ್‌ ಮಸಾಲ ಸೇವಿಸಿದ ನಂತರ ಉಗುಳಿದ್ದಾರೆ ಎಂಬ ಮಾಹಿತಿ ಬಂತು. ಹಾಗಾಗಿ ನಾನಿಲ್ಲಿಗೆ ಬಂದು ಅದನ್ನು ಸ್ವಚ್ಛಗೊಳಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ʻಕೈʼ ಕಾರ್ಯಕರ್ತೆ ಹಿಮಾನಿ ಹತ್ಯೆ ಕೇಸ್‌ – ಮೃತದೇಹ ಸೂಟ್‌ಕೇಸ್‌ನಲ್ಲಿ ಹಾಕಿ ಆರೋಪಿ ಎಳೆದೊಯ್ಯುವ ಸಿಸಿಟಿವಿ ದೃಶ್ಯ ಪತ್ತೆ

    ಮುಂದುವರಿದು.. ನಾನು ಉಗುಳಿದ ಶಾಸಕರನ್ನು ವಿಡಿಯೋನಲ್ಲಿ ನೋಡಿದ್ದೇನೆ. ಆದ್ರೆ ಯಾರನ್ನೂ ಅವಮಾನಿಸಲು ಬಯಸುವುದಿಲ್ಲ, ಹಾಗಾಗಿ ನಾನು ಅವರ ಹೆಸರನ್ನೂ ಪ್ರಸ್ತಾಪಿಸುವುದಿಲ್ಲ. ಇನ್ಮುಂದೆ ಯಾರಾದ್ರೂ ಈ ರೀತಿ ಮಾಡುವುದು ಕಂಡರೆ ಅದನ್ನು ತಡೆಯಬೇಕು ಅಂತ ನಾನು ಎಲ್ಲಾ ಸದರಿಗೆ ಇತ್ತಾಯಿಸುತ್ತೇನೆ. ಈ ಸಭೆಯಲ್ಲಿ ಸ್ವಚ್ಛವಾಗಿಡುವುದು ನಮ್ಮ ಜವಾಬ್ದಾರಿ. ತಪ್ಪು ಮಾಡಿ ಪ್ರಶ್ನೆಯಲ್ಲಿರುವ ಶಾಸಕರು ಅವರಾಗಿಯೇ ಈ ತಪ್ಪು ಮಾಡಿದ್ದಾರೆಂದು ಹೇಳಿದ್ರೆ ಒಳ್ಳೆಯದು, ಇಲ್ಲದಿದ್ದರೆ ನಾನೇ ಅವರನ್ನು ಕರೆಯುತ್ತೇನೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: PUBLiC TV Impact | ಸಿಎಂ ಮನೆ ಬಳಿಯಿದ್ದ ವ್ಯಾಪಾರ ರಹಿತ ವಲಯ ಬೋರ್ಡ್ ತೆಗೆದ ಪಾಲಿಕೆ

    ಕಳೆದ ಫೆ.20 ರಂದು ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಅವರು 2025-26 ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದರು. ಸಿಎಂ ಯೋಗಿ ಆದಿತ್ಯನಾಥ್‌ ರಾಜ್ಯದ ಬಜೆಟ್ 2024-25ರ ಬಜೆಟ್‌ಗಿಂತ ಶೇ. 9.8 ರಷ್ಟು ಹೆಚ್ಚಾಗಿದೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ ಎಂದು ಪ್ರತಿಪಾದಿಸಿದ್ದರು. ಇದನ್ನೂ ಓದಿ: ವಿಜಯಪುರ ಕಾನ್ಸ್‌ಟೇಬಲ್‌ ಭಾವುಕ ಪೋಸ್ಟ್‌ – ಆತನಿಂದ ರಜೆಗೆ ಯಾವ್ದೇ ಮನವಿ ಬಂದಿಲ್ಲ: ಎಸ್ಪಿ ಸ್ಪಷ್ಟನೆ

  • ಮುದ್ದಿನ ಬೆಕ್ಕು ಸಾವು – ಮೃತದೇಹದ ಜೊತೆ 2 ದಿನ ಕಳೆದು ಮಹಿಳೆ ನೇಣಿಗೆ ಶರಣು

    ಮುದ್ದಿನ ಬೆಕ್ಕು ಸಾವು – ಮೃತದೇಹದ ಜೊತೆ 2 ದಿನ ಕಳೆದು ಮಹಿಳೆ ನೇಣಿಗೆ ಶರಣು

    ಲಕ್ನೋ: ಮುದ್ದಿನ ಬೆಕ್ಕು ಸಾವಿನಿಂದ ಕಂಗೆಟ್ಟು, ಎರಡು ದಿನ ಮೃತದೇಹದ ಜೊತೆಗೇ ಕಾಲ ಕಳೆದಿದ್ದ ಮಹಿಳೆ ಮೂರನೇ ದಿನ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ.

    ಅಮ್ರೋಹದ ಹಸನ್‌ಪುರ ನಿವಾಸಿ 32 ವರ್ಷದ ಪೂಜಾ ಮೃತ ಮಹಿಳೆ. ಎಂಟು ವರ್ಷಗಳ ಹಿಂದೆ ಪೂಜಾ ದೆಹಲಿಯ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು. ಎರಡು ವರ್ಷ ಸಂಸಾರ ನಡೆಸಿ ವಿಚ್ಛೇದನ ಪಡೆದಿದ್ದರು. ಬಳಿಕ ತಾಯಿ ಗಜ್ರಾ ದೇವಿಯೊಂದಿಗೆ ವಾಸವಾಗಿದ್ದರು.

    ಒಂಟಿತನವನ್ನು ನಿಭಾಯಿಸಲು ಪೂಜಾ ಬೆಕ್ಕೊಂದನ್ನು ಸಾಕಿಕೊಂಡಿದ್ದರು. ಬೆಕ್ಕು ಸಾವಿಗೀಡಾದಾಗ ತುಂಬಾ ದುಃಖಿತರಾಗಿದ್ದರು. ಆಕೆಯ ತಾಯಿ ಪ್ರಾಣಿಯನ್ನು ಹೂಳಲು ಸೂಚಿಸಿದಾಗ, ಪೂಜಾ ನಿರಾಕರಿಸಿದ್ದಳು. ಅದು ಮತ್ತೆ ಬದುಕಿ ಬರುತ್ತದೆ ಎಂದು ತಾಯಿ ಜೊತೆ ವಾದಿಸಿದ್ದಳು. ಪೂಜಾ ಎರಡು ದಿನ ಬೆಕ್ಕಿನ ಮೃತದೇಹದ ಜೊತೆ ಕಾಲ ಕಳೆದಿದ್ದಳು. ಕೊನೆಗೆ ಅದು ಬದುಕಿ ಬರಲಿಲ್ಲ ಎಂದು ದುಃಖಿಸಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ತನ್ನ ಕೋಣೆಯಲ್ಲಿ ಪೂಜೆ ನೇಣಿಗೆ ಶರಣಾದಳು. ಆಕೆ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ಬೆಕ್ಕಿನ ಮೃತದೇಹವು ಇತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

  • ಮಹಾ ಕುಂಭಮೇಳದಿಂದ UP ರಸ್ತೆ ಸಾರಿಗೆ ಸಂಸ್ಥೆಗೆ ಬಂಫರ್ – 45 ದಿನಗಳಲ್ಲಿ ವರ್ಷದ ಆದಾಯ

    ಮಹಾ ಕುಂಭಮೇಳದಿಂದ UP ರಸ್ತೆ ಸಾರಿಗೆ ಸಂಸ್ಥೆಗೆ ಬಂಫರ್ – 45 ದಿನಗಳಲ್ಲಿ ವರ್ಷದ ಆದಾಯ

    – 38.76 ಲಕ್ಷ ಕೋಟಿ ಆದಾಯ ಸಂಗ್ರಹ

    ಪ್ರಯಾಗ್‌ರಾಜ್: ಮಹಾಕುಂಭಮೇಳದಿಂದಾಗಿ (Maha Kumbh Mela) ಉತ್ತರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆ ಭಾರೀ ಆದಾಯ ಗಳಿಸಿದೆ. ಒಂದು ವರ್ಷಕ್ಕೆ ಸಂಗ್ರಹವಾಗಬಹುದಾದ ಆದಾಯ ಕಳೆದ 45 ದಿನಗಳಲ್ಲಿ ಗಳಿಸಿದೆ.

    ಕುಂಭಮೇಳದ ಕೇವಲ 45 ದಿನಗಳಲ್ಲಿ ವಾರಣಾಸಿ ವಿಭಾಗದಿಂದ 29.02 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ ಇದರಿಂದಾಗಿ 38 ಕೋಟಿ 76 ಲಕ್ಷ ರೂ. ಆದಾಯಗಳಿಸಿದೆ. ಇದರಲ್ಲಿ ಗ್ರಾಮೀಣ ಡಿಪೋ ಅತಿ ಹೆಚ್ಚು ಅದಾಯ ಸಂಗ್ರಹಿಸಿವೆ. ಇದನ್ನೂ ಓದಿ: ಬದರಿನಾಥದಲ್ಲಿ ಹಿಮಪಾತ, 47 ಕಾರ್ಮಿಕರ ರಕ್ಷಣೆ – ಮೂವರ ಸ್ಥಿತಿ ಗಂಭೀರ, ಮೋದಿಯಿಂದ ಅಗತ್ಯ ನೆರವಿನ ಭರವಸೆ

    2024ರ ವಾರ್ಷಿಕ ಆದಾಯ 30 ಕೋಟಿ 76 ಲಕ್ಷ 22 ಸಾವಿರ ರೂ. ಗಳಷ್ಟಿತ್ತು ಎಂದು ರೋಡ್‌ವೇಸ್ ವಾರಣಾಸಿ (Varanasi) ಪ್ರದೇಶದ ಪ್ರಾದೇಶಿಕ ವ್ಯವಸ್ಥಾಪಕ ಪರಶುರಾಮ್ ಪಾಂಡೆ ತಿಳಿಸಿದ್ದಾರೆ. ಈ ಮಹಾಕುಂಭ ಮೇಳದ ಕೇವಲ 45 ದಿನಗಳಲ್ಲಿ 38 ಕೋಟಿ 76 ಲಕ್ಷ ರೂಪಾಯಿ ಆದಾಯ ಬಂದಿದೆ.

    2024 ರಲ್ಲಿ 24 ಲಕ್ಷ 42 ಸಾವಿರ ಪ್ರಯಾಣಿಕರು ಪ್ರಯಾಣಿಸಿದ್ದರು. ಈ ಮಹಾ ಕುಂಭಮೇಳ ಅವಧಿಯಲ್ಲಿ 29.02 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದರು. ವಾರಣಾಸಿ ಗ್ರಾಮೀಣ ಡಿಪೋದಿಂದ ಗರಿಷ್ಠ ಸಂಖ್ಯೆಯ ಪ್ರಯಾಣಿಕರು ಅಂದರೆ 5.50 ಲಕ್ಷ ಪ್ರಯಾಣಿಸಿದ್ದಾರೆ ಇದರಿಂದ ಆದಾಯ 7.41 ಕೋಟಿ ರೂ ಬಂದಿತ್ತು. ಇದನ್ನೂ ಓದಿ: ಮಂಡ್ಯ ವಿವಿ ವಿಲೀನಗೊಳಿಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ – ಬಿಜೆಪಿ, ಜೆಡಿಎಸ್ ಪ್ರತಿಭಟನೆ

    ಕ್ಯಾಂಟ್ ಡಿಪೋ 3.23 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು 5.13 ಕೋಟಿ ರೂ. ಆದಾಯ ಗಳಿಸಿದೆ‌. ಕಾಶಿ ಡಿಪೋ 3.40 ಲಕ್ಷ ಪ್ರಯಾಣಿಕರನ್ನು ಸಾಗಿಸಿ 5.81 ಕೋಟಿ ರೂ. ಆದಾಯ ಗಳಿಸಿದೆ. ಇದರೊಂದಿಗೆ ಚಂದೌಲಿ ಡಿಪೋದ ಆದಾಯ 2.45 ಕೋಟಿ ರೂ.ಗಳಾಗಿದ್ದು, 1.86 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇದನ್ನೂ ಓದಿ: ತುಮಕೂರು | ಮನೆ ಮುಂದಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ – ಭಯಭೀತರಾದ ಗ್ರಾಮಸ್ಥರು

    ಘಾಜಿಪುರ ಡಿಪೋದಿಂದ 3.14 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು, 4.55 ಕೋಟಿ ರೂ. ಆದಾಯ ಗಳಿಸಿದೆ. ಜೌನ್‌ಪುರದ ಆದಾಯ 5.63 ಕೋಟಿ ರೂ.ಗಳಾಗಿದ್ದು, 5.33 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಸೋನಭದ್ರ ಡಿಪೋದಿಂದ 3.41 ಲಕ್ಷ ಪ್ರಯಾಣಿಕರ ಸಂಚಾರ ಮಾಡಿದ್ದು 4.37 ಕೋಟಿ ರೂ. ಆದಾಯ ಬಂದಿದೆ‌. ವಿಂಧ್ಯನಗರ ಡಿಪೋದ ಆದಾಯ 3.39 ಕೋಟಿ ರೂ.ಗಳಾಗಿದ್ದು, 2.15 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ.