Tag: uttar pradesh

  • ಬಲವಂತದ ಮದುವೆ; ವಿವಾಹವಾದ 2 ವಾರಗಳಲ್ಲೇ ಪ್ರಿಯಕರನ ಜೊತೆಗೆ ಸೇರಿ ಪತಿ ಹತ್ಯೆ ಮಾಡಿಸಿದ ಮಹಿಳೆ

    ಬಲವಂತದ ಮದುವೆ; ವಿವಾಹವಾದ 2 ವಾರಗಳಲ್ಲೇ ಪ್ರಿಯಕರನ ಜೊತೆಗೆ ಸೇರಿ ಪತಿ ಹತ್ಯೆ ಮಾಡಿಸಿದ ಮಹಿಳೆ

    ಲಕ್ನೋ: ಮದುವೆಯಾದ 2 ವಾರದಲ್ಲೇ ಮಹಿಳೆಯೊಬ್ಬರು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಗಳಾದ ಪ್ರಗತಿ ಯಾದವ್ ಮತ್ತು ಅನುರಾಗ್ ಯಾದವ್ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರ ಪ್ರೀತಿಯನ್ನು ಪೋಷಕರು ಒಪ್ಪಲಿಲ್ಲ. ಮಾ.5 ರಂದು ಪ್ರಗತಿಯನ್ನು ದಿಲೀಪ್ ಎಂಬಾತನ ಜೊತೆ ಬಲವಂತವಾಗಿ ಮದುವೆ ಮಾಡಿದರು.

    ಮದುವೆಯಾಗಿ ಕೇವಲ ಎರಡು ವಾರಗಳಷ್ಟೇ ಕಳೆದಿತ್ತು. ಮಹಿಳೆಯೊಬ್ಬರು ತನ್ನ ಪ್ರಿಯಕರನ ಜೊತೆ ಸೇರಿ, ಯೋಜನೆ ರೂಪಿಸಿ ಗಂಡನನ್ನು ಹತ್ಯೆ ಮಾಡಿಸಿದ್ದಾರೆ. ಪತಿ ಕೊಲೆ ಮಾಡಲು ವ್ಯಕ್ತಿಯೊಬ್ಬನಿಗೆ 2 ಲಕ್ಷ ರೂ. ಸುಪಾರಿ ಕೊಟ್ಟಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

    ಗುಂಡೇಟಿನಿಂದ ಗಾಯಗೊಂಡು ಹೊಲದಲ್ಲಿ ಬಿದ್ದಿದ್ದ ದಿಲೀಪ್‌ನನ್ನು ಪೊಲೀಸರು ಗುರುತಿಸಿದ್ದರು. ತಕ್ಷಣ ಆತನನ್ನು ಬಿಧುನಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟ ಕಾರಣ, ಸೈಫೈ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಮಧ್ಯಪ್ರದೇಶದ ಗ್ವಾಲಿಯರ್‌ಗೆ ಕರೆದೊಯ್ಯಲಾಯಿತು. ಕೊನೆಗೆ ಔರೈಯಾದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ದಿಲೀಪ್‌ ಕೊನೆಯುಸಿರೆಳೆದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ‌

    ಈ ಸಂಬಂಧ ಮೃತ ವ್ಯಕ್ತಿಯ ಸಹೋದರ ಸಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೃತನ ಪತ್ನಿ ಮತ್ತು ಆಕೆಯ ಪ್ರೇಮಿ ಮದುವೆಯ ನಂತರ ಭೇಟಿಯಾಗಲು ಸಾಧ್ಯವಾಗದ ಕಾರಣ, ಇಬ್ಬರೂ ಸೇರಿಕೊಂಡು ದಿಲೀಪ್‌ನನ್ನು ಕೊಲ್ಲಲು ನಿರ್ಧರಿಸಿದ್ದರೆಂಬುದು ತನಿಖೆಯಿಂದ ತಿಳಿದುಬಂದಿದೆ. ಇಬ್ಬರೂ ದಿಲೀಪ್‌ನನ್ನು ಕೊಲೆ ಮಾಡಲು ರಾಮಾಜಿ ಚೌಧರಿ ಎಂಬ ಗುತ್ತಿಗೆ ಕೊಲೆಗಾರನನ್ನು ನೇಮಿಸಿಕೊಂಡಿದ್ದರು. ಕೊಲೆ ಮಾಡಲು ಅವನಿಗೆ 2 ಲಕ್ಷ ರೂ.ಗಳನ್ನು ನೀಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ರಾಮಾಜಿ ಮತ್ತು ಇತರ ಕೆಲವರು, ದಿಲೀಪ್‌ನನ್ನು ಬೈಕ್‌ನಲ್ಲಿ ಹೊಲಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ನಂತರ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಮೂವರು ಆರೋಪಿಗಳನ್ನು ಗುರುತಿಸಿ ಪೊಲೀಸರು ಬಂಧಿಸಿದ್ದರು. ಆರೋಪಿಗಳಿಂದ ಎರಡು ಪಿಸ್ತೂಲ್‌ಗಳು, ನಾಲ್ಕು ಲೈವ್ ಕಾರ್ಟ್ರಿಡ್ಜ್‌ಗಳು, ಒಂದು ಬೈಕ್, ಎರಡು ಮೊಬೈಲ್ ಫೋನ್‌ಗಳು, ಒಂದು ಪರ್ಸ್, ಆಧಾರ್ ಕಾರ್ಡ್ ಮತ್ತು 3,000 ರೂ.ಗಳನ್ನು ವಶಪಡಿಸಿಕೊಂಡಿದ್ದರು.

  • ಪತಿಯನ್ನು ಪೀಸ್‌ ಪೀಸ್‌ ಮಾಡಿ ಕೊಂದ ಹಂತಕಿ – ಜೈಲಲ್ಲಿ ಪ್ರಿಯಕರನ ಜೊತೆ ಇರಲು ಬಿಡಿ ಎಂದ ಮುಸ್ಕಾನ್!

    ಪತಿಯನ್ನು ಪೀಸ್‌ ಪೀಸ್‌ ಮಾಡಿ ಕೊಂದ ಹಂತಕಿ – ಜೈಲಲ್ಲಿ ಪ್ರಿಯಕರನ ಜೊತೆ ಇರಲು ಬಿಡಿ ಎಂದ ಮುಸ್ಕಾನ್!

    – ಮಾದಕ ವಸ್ತುವಿಗಾಗಿ ಜೈಲಲ್ಲಿ ಪರದಾಟ, ಮೌನಕ್ಕೆ ಶರಣಾದ ಹಂತಕರು

    ಲಕ್ನೋ: ಪತಿಯನ್ನು (Husband)  ಕೊಂದು ಜೈಲುಪಾಲಾಗಿರುವ ಮುಸ್ಕಾನ್ ರಸ್ತೋಗಿ ಮತ್ತು ಅವಳ ಪ್ರೇಮಿ ಸಾಹಿಲ್ ಶುಕ್ಲಾ ಜೈಲಿನಲ್ಲಿ ಒಟ್ಟಿಗೆ ಇರಲು ಬಯಸಿದ್ದರು. ಆದರೆ ಜೈಲು ಕೈಪಿಡಿಯ ಪ್ರಕಾರ ಅದು ಸಾಧ್ಯವಿಲ್ಲದ ಕಾರಣ ಇಬ್ಬರನ್ನೂ ಬೇರೆ ಬೇರೆ ಸೆಲ್‌ನಲ್ಲಿ ಇರಿಸಲಾಗಿದೆ ಎಂದು ಮೀರತ್‌ನ (Meerut) ಚೌಧರಿ ಚರಣ್ ಸಿಂಗ್ ಜೈಲಿನ ಹಿರಿಯ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

    ವೈದ್ಯಕೀಯ ಪರೀಕ್ಷೆಯಲ್ಲಿ ಅವರಿಬ್ಬರು ಮಾದಕ ವ್ಯಸನಿಗಳೆಂದು ತಿಳಿದುಬಂದಿದೆ. ಇಬ್ಬರೂ ಮಾದಕ ವಸ್ತುವಿಗಾಗಿ ಜೈಲಲ್ಲಿ ಹಂಬಲಿಸುತ್ತಿದ್ದಾರೆ. ಇಬ್ಬರೂ ಸಹ ಕೈದಿಗಳ ಜೊತೆ ಮಾತನಾಡದೇ ಸೆಲ್‌ನಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಜೈಲಿನಲ್ಲಿರುವ ವ್ಯಸನ ಮುಕ್ತ ಕೇಂದ್ರದಲ್ಲಿ ಇಬ್ಬರಿಗೂ ಕೌನ್ಸೆಲಿಂಗ್ ನೀಡಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜೈಲು ಸಿಬ್ಬಂದಿಗೆ ಅವರ ಮೇಲೆ ನಿಗಾ ಇಡಲು ತಿಳಿಸಲಾಗಿದೆ. ಮುಸ್ಕಾನ್ ಜೈಲಿಗೆ ಬಂದ ಮೊದಲ ದಿನ ಏನನ್ನೂ ತಿನ್ನಲಿಲ್ಲ. ಈಗ ಊಟ ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಆರೋಪಿಗಳ ಕುಟುಂಬದವರು ಯಾರೂ ಅವರನ್ನು ಭೇಟಿ ಮಾಡಲು ಇನ್ನೂ ಬಂದಿಲ್ಲ. ಮುಸ್ಕಾನ್ ಅವರ ಕುಟುಂಬ ಆಕೆಯ ಪರವಾಗಿ ವಕೀಲರನ್ನು ನೇಮಿಸುವುದಿಲ್ಲ ಎಂದು ಜೈಲು ಅಧಿಕಾರಿಗಳಿಗೆ ತಿಳಿಸಿದ್ದರು. ಪ್ರಕರಣವನ್ನು ವಾದಿಸಲು ಸರ್ಕಾರಿ ವಕೀಲರನ್ನು ನೇಮಿಸಬೇಕು ಎಂದು ವಿನಂತಿಸಿದ್ದರು ಎನ್ನಲಾಗಿದೆ.

    ಕಳೆದ ವಾರ ಬಂಧನಕ್ಕೊಳಗಾದ ನಂತರ ಇಬ್ಬರೂ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ತನಿಖೆಯ ಭಾಗವಾಗಿ ವಿವರವಾದ ವಿಚಾರಣೆಗಾಗಿ ಅವರ ಕಸ್ಟಡಿಗೆ ಕೋರುವುದಾಗಿ ಮೀರತ್ ಪೊಲೀಸರು ತಿಳಿಸಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಕಳೆದ ವಾರ ಮುಸ್ಕಾನ್ ಮತ್ತು ಸಾಹಿಲ್‌ನನ್ನು ಬಂಧಿಸಲಾಗಿತ್ತು. ಸೌರಭ್ ಕಳೆದ ತಿಂಗಳು ಮನೆಗೆ ಬಂದಿದ್ದರು. ಮಾ.4 ರಂದು ಸೌರಭ್‌ಗೆ ಮಾದಕ ವಸ್ತು ನೀಡಿ ನಂತರ ಇರಿದು ಕೊಲ್ಲಲಾಗಿತ್ತು. ನಂತರ ಅವಳು ಮತ್ತು ಸಾಹಿಲ್ ಮೃತದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಹಾಕಿ ಸಿಮೆಂಟ್‌ನಿಂದ ಸೀಲ್‌ ಮಾಡಿದ್ದರು. ನಂತರ ಇಬ್ಬರೂ ಹಿಮಾಚಲ ಪ್ರದೇಶಕ್ಕೆ ತೆರಳಿದ್ದರು.

    ಸೌರಭ್ ಮತ್ತು ಮುಸ್ಕಾನ್ 2016 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಆರು ವರ್ಷದ ಮಗಳಿದ್ದಾಳು. ಸೌರಭ್ ಕುಟುಂಬದೊಂದಿಗೆ ಮುಸ್ಕಾನ್‌ನ ಸಂಬಂಧ ಹಾಳಾಗಿತ್ತು. ಇದರಿಂದ ದಂಪತಿಗಳು ಬಾಡಿಗೆ ಮನೆ ಮಾಡಿಕೊಂಡಿದ್ದರು. 2019ರಲ್ಲಿ ಸೌರಭ್ ತನ್ನ ಹೆಂಡತಿಗೆ ಸಾಹಿಲ್ ಜೊತೆಗಿನ ಸಂಬಂಧದ ಬಗ್ಗೆ ತಿಳಿದಿತ್ತು. ಬಳಿಕ ವಿಚ್ಛೇದನಕ್ಕೆ ಯೋಚಿಸಿದ್ದರು. ಆದರೆ ಮಗಳ ಭವಿಷ್ಯದ ಬಗ್ಗೆ ಯೋಚಿಸಿ ಹಿಂದೆ ಸರಿದಿದ್ದರು. ಬಳಿಕ ಲಂಡನ್‌ಗೆ ತೆರಳಿ ಕೆಲಸ ಮಾಡುತ್ತಿದ್ದರು. ಸೌರಭ್‌ ಕುಟುಂಬಸ್ಥರು ಹಣಕ್ಕಾಗಿ ಮುಸ್ಕಾನ್‌ ಅವರನ್ನು ಮದುವೆಯಾಗಿದ್ದಳು ಎಂದು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

  • ಪತಿಯನ್ನು ಕೊಂದು ಪೀಸ್ ಪೀಸ್ ಮಾಡಿ ಡ್ರಮ್‌ನಲ್ಲಿ ಮುಚ್ಚಿಟ್ಟ ಪತ್ನಿ

    ಪತಿಯನ್ನು ಕೊಂದು ಪೀಸ್ ಪೀಸ್ ಮಾಡಿ ಡ್ರಮ್‌ನಲ್ಲಿ ಮುಚ್ಚಿಟ್ಟ ಪತ್ನಿ

    – ಪತ್ನಿ, ಪ್ರಿಯಕರ ಅರೆಸ್ಟ್

    ಲಕ್ನೋ: ಪತ್ನಿ ಆಕೆಯ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು, ದೇಹವನ್ನು ಪೀಸ್ ಪೀಸ್ ಮಾಡಿ, ಡ್ರಮ್‌ನಲ್ಲಿ ತುಂಬಿ ಸಿಮೆಂಟ್ ಹಾಕಿ ಮುಚ್ಚಿಟ್ಟಿರುವ ಘಟನೆ ಉತ್ತರಪ್ರದೇಶದ (Uttar Pradesh) ಬ್ರಹ್ಮಪುರಿಯ ಇಂದಿರಾ ನಗರದಲ್ಲಿ ನಡೆದಿದೆ.

    ಖಾಸಗಿ ಹಡಗು ಕಂಪನಿಯ ಉದ್ಯೋಗಿ ಸೌರಭ್ ರಜಪೂತ್(29) ಕೊಲೆಯಾದ ಪತಿ. ಮೃತ ಸೌರಭ್ ಮಾ. 4ರಂದು ನಾಪತ್ತೆಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಪೊಲೀಸರು ಅನುಮಾನದಿಂದ ಪತ್ನಿ ಮುಸ್ಕಾನ್(27)ನನ್ನ ವಿಚಾರಣೆ ನಡೆಸಿದ್ದರು. ಈ ವೇಳೆ ಆಕೆ ಪ್ರಿಯಕರ ಸಾಹಿಲ್(25) ಜೊತೆ ಸೇರಿ ಸೌರಭ್‌ನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಮ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ರಂಜಾನ್‌ ಹಬ್ಬದ ಸಮಯದಲ್ಲಿ 1 ತಿಂಗಳು ಉಪವಾಸ ಮಾಡುವುದೇಕೆ? ಖರ್ಜೂರ ತಿಂದು ಉಪವಾಸ ಮುರಿಯುವುದರ ಹಿಂದಿನ ಕಾರಣವೇನು?

    ಮಾ. 4ರಂದು ಸೌರಭ್‌ನನ್ನ ಮುಸ್ಕಾನ್ ಹಾಗೂ ಸಾಹಿಲ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ನಂತರ ಆತನ ದೇಹವನ್ನು ಪೀಸ್ ಪೀಸ್ ಆಗಿ ಕತ್ತರಿಸಿ, ಡ್ರಮ್‌ನೊಳಗೆ ಹಾಕಿ ಸಿಮೆಂಟ್‌ನಿಂದ ಮುಚ್ಚಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.

    ಕೊಲೆ ಮಾಡಿದ ಬಳಿಕ ಮುಸ್ಕಾನ್, ಸೌರಭ್‌ನ ಫೋನ್‌ನಿಂದ ಕುಟುಂಬಸ್ಥರಿಗೆ ಮೆಸೇಜ್ ಕಳುಹಿಸುವ ಮೂಲಕ ಪ್ರಕರಣದ ದಾರಿ ತಪ್ಪಿಸಲು ಪ್ರಯತ್ನಿದ್ದಳು. ಬಳಿಕ ಆಕೆ ಪ್ರಿಯಕರ ಸಾಹಿಲ್ ಜೊತೆ ಸುತ್ತಾಡಲು ತೆರಳಿದ್ದಳು. ಸದ್ಯ ಆರೋಪಿಗಳಾದ ಮುಸ್ಕಾನ್ ಹಾಗೂ ಸಾಹಿಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್- 286 ದಿನಗಳ ಅಂತರಿಕ್ಷ ವಾಸ ಅಂತ್ಯ

    ಸೌರಭ್ 2016ರಲ್ಲಿ ಗೌರಿಪುರದ ಮುಸ್ಕಾನ್ ರಸ್ತೋಗಿಯನ್ನು ಪ್ರೇಮ ವಿವಾಹವಾಗಿದ್ದರು. ಕುಟುಂಬಸ್ಥರು ಇವರಿಬ್ಬರ ವಿವಾಹದಿಂದ ಅಸಮಾಧಾನಗೊಂಡಿದ್ದರಿಂದ ಸೌರಭ್ ಹಾಗೂ ಮುಸ್ಕಾನ್, 3 ವರ್ಷದ ಪುತ್ರಿಯೊಂದಿಗೆ ಇಂದಿರಾನಗರದ ಬಾಡಿಗೆ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  • ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಸೀಮಾ ಹೈದರ್‌ಗೆ ಹೆಣ್ಣು ಮಗು ಜನನ!

    ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಸೀಮಾ ಹೈದರ್‌ಗೆ ಹೆಣ್ಣು ಮಗು ಜನನ!

    ನೋಯ್ಡಾ: ಗೇಮಿಂಗ್ ಆ್ಯಪ್ ಮೂಲಕ ಪರಿಚಯವಾಗಿ, ಸ್ನೇಹ ಪ್ರೀತಿಗೆ ತಿರುಗಿ, ಪ್ರಿಯಕರನಿಗಾಗಿ ಗಂಡನನ್ನು ಬಿಟ್ಟು 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ (Seema Haider) ಹೆಣ್ಣು ಮಗುವಿಗೆ (Girl Baby) ಜನ್ಮ ನೀಡಿದ್ದಾರೆ.

    ಗ್ರೇಟರ್ ನೋಯ್ಡಾದಲ್ಲಿರುವ (Greater Noida) ಆಸ್ಪತ್ರೆಯೊಂದರಲ್ಲಿ ಸೀಮಾ ಹೈದರ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ದಂಪತಿಯ ವಕೀಲ ಎ.ಪಿ.ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗ| ಪೊಲೀಸರ ಕಾರ್ಯಾಚರಣೆ – ಅಕ್ರಮ ಕಬ್ಬಿಣ ಸಾಗಣೆ ದಂಧೆಯಲ್ಲಿ ತೊಡಗಿದ್ದ 6 ಮಂದಿಯ ಬಂಧನ

    ಸೀಮಾ ಹೈದರ್ ಆನ್‌ಲೈನ್ ಗೇಮಿಂಗ್ ಮೂಲಕ ಸಚಿನ್ ಎಂಬುವವರನ್ನು ಭೇಟಿಯಾಗಿದ್ದರು. ಬಳಿಕ ಅವರ ಸ್ನೇಹ ಪ್ರೀತಿಗೆ ಚಿಗುರಿತ್ತು. ಇದನ್ನೂ ಓದಿ: ಹನಿಟ್ರ್ಯಾಪ್ ಖೆಡ್ಡಾಗೆ ಬಿದ್ರಾ ಪ್ರಭಾವಿ ಸಚಿವ?- ಸಿಡಿ ರಾಜಕಾರಣಕ್ಕೆ ಕಾಂಗ್ರೆಸ್ ನಾಯಕರ ಆಕ್ರೋಶ

    ಸೀಮಾಗೆ ಆಗಲೇ ಮದುವೆಯಾಗಿ ನಾಲ್ಕು ಮಕ್ಕಳಿದ್ದರು. ಪ್ರೀತಿಸಿದವನಿಗಾಗಿ ಸೀಮಾ ಗಂಡನನ್ನು ಬಿಟ್ಟು ಮಕ್ಕಳನ್ನು ಕರೆದುಕೊಂಡು ಭಾರತಕ್ಕೆ ಬಂದು ಸಚಿನ್ ಮೀನಾರನ್ನು ಮದುವೆಯಾಗಿದ್ದರು. ಕಳೆದ ವರ್ಷ ತಾನು ಗರ್ಭಿಣಿಯಾಗಿರುವ ಬಗ್ಗೆ ಸೀಮಾ ವಿಡಿಯೋ ಮೂಲಕ ಹೇಳಿಕೊಂಡಿದ್ದರು. ಇದನ್ನೂ ಓದಿ: ತುಮಕೂರು| ಜಯಮಂಗಲಿ ನದಿಯಲ್ಲಿ ಈಜಲು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು

  • ದಾವಣಗೆರೆ| ಬ್ಯಾಂಕ್ ದರೋಡೆಗೆ ಬಂದಿದ್ದ ಯುಪಿ ಗ್ಯಾಂಗ್ ಮೇಲೆ ಪೊಲೀಸರಿಂದ ಫೈರಿಂಗ್ – ನಾಲ್ವರು ಅರೆಸ್ಟ್

    ದಾವಣಗೆರೆ| ಬ್ಯಾಂಕ್ ದರೋಡೆಗೆ ಬಂದಿದ್ದ ಯುಪಿ ಗ್ಯಾಂಗ್ ಮೇಲೆ ಪೊಲೀಸರಿಂದ ಫೈರಿಂಗ್ – ನಾಲ್ವರು ಅರೆಸ್ಟ್

    ದಾವಣಗೆರೆ: ಬ್ಯಾಂಕ್ (Bank) ದರೋಡೆಗೆ ಬಂದಿದ್ದ ಉತ್ತರ ಪ್ರದೇಶದ (Uttar Pradesh) ನಾಲ್ವರು ದರೋಡೆಕೋರರನ್ನು ದಾವಣಗೆರೆ (Davanagere) ಪೊಲೀಸರು ಹೊನ್ನಾಳಿ ತಾಲೂಕಿನ ಅರಬಘಟ್ಟದಲ್ಲಿ ಬಂಧಿಸಿದ್ದಾರೆ.

    ದರೋಡೆಕೋರರ ಗ್ಯಾಂಗ್ ಬ್ಯಾಂಕ್ ದರೋಡೆಗೆ ಆಗಮಿಸಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಹೊನ್ನಾಳಿ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ, 7 ಜನ ಹರಿಹರದ ಕಡೆಯಿಂದ ನ್ಯಾಮತಿ ಕಡೆಗೆ ಎರಡು ಕಾರುಗಳಲ್ಲಿ ಹೋಗುತ್ತಿದ್ದರು. ಇವರನ್ನು ಹೊನ್ನಾಳಿ ಬಳಿಯ ಚೆಕ್‍ಪೋಸ್ಟ್‌ನಲ್ಲಿ ಪೊಲೀಸರು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಅವರು ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಕಾರನ್ನು ಬೆನ್ನಟ್ಟಿದ ಪೊಲೀಸರು ಅರಬಘಟ್ಟ ಬಳಿ ತಡೆದಿದ್ದಾರೆ. ಆಗ ಅರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಅಲ್ಲದೇ ಕಾನ್ಸ್‌ಟೇಬಲ್‌ ಅನಂದ್ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಮಂಗಳೂರು| ಐದನೇ ಮಹಡಿಯಿಂದ ಬಿದ್ದು ಬಾಲಕ ಸಾವು

    ದರೋಡೆಕೋರರು ದಾಳಿ ನಡೆಸುತ್ತಿದ್ದಂತೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್‌ ರವಿಯವರು ಅರೋಪಿ ಗುಡ್ಡು ಅಲಿಯಾನ್ ಗುಡು ಖಾಲಿಯಾ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಅಲ್ಲದೇ ಆತನ ಜೊತೆಗಿದ್ದ ಉತ್ತರ ಪ್ರದೇಶ ಮೂಲದ ಹಸ್ರತ್ ಅಲಿ, ಅಸಾಂ ಯಾನೆ ಟನ್ ಟನ್, ಕಮರುನ್ ಯಾನೆ ಬಾಬು ಸೆರಲಿಯನ್ನು ಬಂಧಿಸಿದ್ದಾರೆ. ಗ್ಯಾಂಗ್‍ನ ನಟೋರಿಯಸ್ ಲೀಡರ್ ರಾಜಾರಾಮ್, ಬಾಬುಷಾ, ಹಾಗೂ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಆಪೀಜ್ ಪರಾರಿಯಾಗಿದ್ದಾರೆ. ಪರಾರಿಯಾದ ಅರೋಪಿಗಳ ಬಂಧನಕ್ಕೆ ಎರಡು ತಂಡ ರಚಿಸಲಾಗಿದೆ.

    ಕಳೆದ ಕೆಲ ತಿಂಗಳ ಹಿಂದೆ ನ್ಯಾಮತಿಯಲ್ಲಿ ನಡೆದ ಎಸ್‍ಬಿಐ ಬ್ಯಾಂಕ್‍ನ ದರೋಡೆಗೂ ಇವರಿಗೂ ಸಂಬಂಧ ಇದೆ ಎಂದು ಶಂಕೆ ವ್ಯಕ್ತವಾಗುತ್ತಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿರುವ ಮಚ್ಚು, ಬುಲೆಟ್, ಎರಡು ಕಾರುಗಳು, ಮಂಕಿ ಕ್ಯಾಪ್‍ಗಳನ್ನು ಎಸ್‍ಪಿ ಉಮಾ ಪ್ರಶಾಂತ್ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಮಂಗಳೂರು| ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಬೇಟೆ – 75 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ

  • ಲಿವ್‌ ಇನ್‌ನಲ್ಲಿದ್ದಾಗ ಕೊಟ್ಟಿದ್ದ ಹಣ, ಒಡವೆ ಕೊಡು ಎಂದವನಿಗೆ ಥಳಿಸಿ ವಿಷ ಕುಡಿಸಿದ ಮಾಜಿ ಪ್ರೇಯಸಿ!

    ಲಿವ್‌ ಇನ್‌ನಲ್ಲಿದ್ದಾಗ ಕೊಟ್ಟಿದ್ದ ಹಣ, ಒಡವೆ ಕೊಡು ಎಂದವನಿಗೆ ಥಳಿಸಿ ವಿಷ ಕುಡಿಸಿದ ಮಾಜಿ ಪ್ರೇಯಸಿ!

    ಲಕ್ನೋ: ಲಿವ್‍ಇನ್ ರಿಲೇಶನ್‍ಶಿಪ್‌ನಲ್ಲಿದ್ದಾಗ (Live In Relationship) ಕೊಟ್ಟಿದ್ದ ಹಣ ಹಾಗೂ ಆಭರಣಗಳನ್ನು ಹಿಂತಿರುಗಿಸುವಂತೆ ಒತ್ತಾಯಿಸಿದ ಯುವಕನಿಗೆ ಆತನ ಮಾಜಿ ಪ್ರೇಯಸಿ ಹಾಗೂ ಆಕೆಯ ಸಹಚರರು ಥಳಿಸಿ ವಿಷ ಕುಡಿಯುವಂತೆ ಒತ್ತಾಯಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ (Uttar Pradesh) ಹಮೀರ್‌ಪುರದಲ್ಲಿ ನಡೆದಿದೆ.

    ಹಮೀರ್‌ಪುರದ ನಿವಾಸಿ ಶೈಲೇಂದ್ರ ಗುಪ್ತಾ ಹಲ್ಲೆಗೊಳಗಾದ ದುರ್ದೈವಿ ಎಂದು ಗುರುತಿಸಲಾಗಿದೆ. ಆತ ಮಹೋಬಾದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತ ನಾಲ್ಕು ವರ್ಷಗಳ ಹಿಂದೆ ಪರಿಚಯವಾಗಿದ್ದ ಕಾಲಿಪಹರಿ ಗ್ರಾಮದ ಮಹಿಳೆಯೊಂದಿಗೆ ಲಿವ್ ಇನ್ ಸಂಬಂಧದಲ್ಲಿದ್ದ. ಈ ಸಮಯದಲ್ಲಿ ಮಹಿಳೆಗೆ ಲಕ್ಷಾಂತರ ರೂ. ಮೌಲ್ಯದ ದುಬಾರಿ ಆಭರಣಗಳನ್ನು ಕೊಡಿಸಿದ್ದ. ಅಲ್ಲದೇ 4 ಲಕ್ಷ ರೂ. ನಗದು ಹಣ ನೀಡಿದ್ದ. ಇತ್ತೀಚೆಗೆ ಮಹಿಳೆ ಬೇರೊಬ್ಬನ ಸಂಪರ್ಕದಲ್ಲಿದ್ದಳು. ಬಳಿಕ ಶೈಲೇಂದ್ರ ಹಾಗೂ ಮಹಿಳೆ ದೂರವಾಗಿದ್ದರು.

    ಇದಾದ ಬಳಿಕ ಶೈಲೇಂದ್ರ ಹಿಂದೆ ನೀಡಿದ್ದ ಹಣ ಮತ್ತು ಆಭರಣಗಳನ್ನು ಹಿಂದಿರುಗಿಸುವಂತೆ ಮಹಿಳೆಗೆ ಒತ್ತಾಯಿಸುತ್ತಿದ್ದ. ಹಣ ಮತ್ತು ಆಭರಣ ಮರಳಿ ಪಡೆಯಲು ಅವರ ಮನೆಗೆ ತೆರಳಿದ್ದಾಗ, ಮಹಿಳೆ, ಆಕೆಯ ಸಹಚರರಾದ ಸದಾಬ್ ಬೇಗ್, ದೀಪಕ್ ಮತ್ತು ಹ್ಯಾಪಿ ಎಂಬವರ ಜೊತೆ ಸೇರಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ವಿಷ ಸೇವಿಸುವಂತೆ ಒತ್ತಾಯಿಸಿದ್ದಾರೆ. ದಾಳಿಯ ನಂತರ, ಯುವಕನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ತನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಮತ್ತು ಹಣ ಒಡವೆ ಹಿಂದಿರುಗಿಸುವಂತೆ ಒತ್ತಾಯಿಸಿದರೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಾಜಿ ಪ್ರೇಯಸಿಯ ವಿರುದ್ಧ ಶೈಲೇಂದ್ರ ಆರೋಪಿಸಿದ್ದಾನೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ರೈತ ಮುಖಂಡ ರಾಕೇಶ್ ಟಿಕಾಯತ್ ಕಾರು ಅಪಘಾತ – ಸೀಟ್‌ ಬೆಲ್ಟ್‌ ಹಾಕಿದ್ದಕ್ಕೆ ಬಚಾವ್‌

    ರೈತ ಮುಖಂಡ ರಾಕೇಶ್ ಟಿಕಾಯತ್ ಕಾರು ಅಪಘಾತ – ಸೀಟ್‌ ಬೆಲ್ಟ್‌ ಹಾಕಿದ್ದಕ್ಕೆ ಬಚಾವ್‌

    ಲಕ್ನೋ: ರೈತ ಚಳುವಳಿಯ ಪ್ರಮುಖ ನಾಯಕ ರಾಕೇಶ್ ಟಿಕಾಯತ್ (Rakesh Tikait) ಅವರ ಕಾರು ಉತ್ತರ ಪ್ರದೇಶದ (Uttar Pradesh) ಮುಜಫರ್ ಪುರ್ – ಮಿರಾಪುರ ಬೈಪಾಸ್ ರಸ್ತೆಯಲ್ಲಿ (Accident) ಅಪಘಾತಕ್ಕೀಡಾಗಿದೆ. ಅವರು ಸೀಟ್‌ ಬೆಲ್ಟ್‌ ಹಾಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

    ಅವರ ಕಾರು ರಸ್ತೆ ದಾಟುತ್ತಿದ್ದಾಗ ನೀಲಗೈಗೆ (Nilgai) ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಏರ್‌ಬ್ಯಾಗ್‌ಗಳು ಓಪನ್‌ ಆಗಿದ್ದು, ಕಾರಿನಲ್ಲಿದ್ದವರು ಬಚಾವ್‌ ಆಗಿದ್ದಾರೆ. ಶುಕ್ರವಾರ ಸಂಜೆ 7:20ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ನೀಲಗೈಗೆ ಕಾರು ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಜಖಂ ಆಗಿದೆ.

    ಅಪಘಾತದ ಬಗ್ಗೆ ಪ್ರತಿಕ್ರಿಯಿಸಿರುವ ಟಿಕಾಯತ್‌ ಅವರು, ಅಪಘಾತದ ಸಮಯದಲ್ಲಿ ನಮಗೆ ಏನೂ ಅರ್ಥವಾಗಲಿಲ್ಲ. ಅದು ಕ್ಷಣಾರ್ಧದಲ್ಲಿ ಸಂಭವಿಸಿತು. ನನಗೆ ಪ್ರಜ್ಞೆ ಬಂದಾಗ ಕಾರಿನ ಏರ್‌ಬ್ಯಾಗ್‌ ತೆರೆದಿತ್ತು. ಕಾರಿನಲ್ಲಿದ್ದವರೆಲ್ಲ ಸುರಕ್ಷಿತರಾಗಿದ್ದೇವೆ ಎಂದು ಹೇಳಿದ್ದಾರೆ.

    ವಾಹನ ಚಾಲನೆ ಹಾಗೂ ಸೀಟ್‌ ಬೆಲ್ಟ್‌ ಧರಿಸುವುದರ ಮಹತ್ವದ ಬಗ್ಗೆ ಮಾತನಾಡಿ, ವಾಹನ ಚಾಲನೆ ಸಮಯದಲ್ಲಿ ಕಡ್ಡಾಯವಾಗಿ ಎಲ್ಲರೂ ಸೀಟ್ ಬೆಲ್ಟ್ ಧರಿಸಬೇಕು. ವಾಹನ ಚಾಲನೆ ಮಾಡುವಾಗ, ವೇಗ 100 KM/hಗಿಂತ ಕಡಿಮೆ ಇರಬೇಕು ಎಂದು ಒತ್ತಿ ಹೇಳಿದ್ದಾರೆ.

  • ಗುಜರಾತ್ | ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಸರಣಿ ಅಪಘಾತ – ಓರ್ವ ಮಹಿಳೆ ಸಾವು, 7 ಜನರಿಗೆ ಗಾಯ

    ಗುಜರಾತ್ | ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಸರಣಿ ಅಪಘಾತ – ಓರ್ವ ಮಹಿಳೆ ಸಾವು, 7 ಜನರಿಗೆ ಗಾಯ

    ಗಾಂಧಿನಗರ : ಇಲ್ಲಿನ ವಡೋದರಾದಲ್ಲಿ (Vadodara) ಯುವಕನೊಬ್ಬ ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ 2 ಸ್ಕೂಟರ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದು, 7 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.

    ಉತ್ತರ ಪ್ರದೇಶದ ವಾರಣಾಸಿ ನಿವಾಸಿ ರಕ್ಷಿತ್ ಚೌರಾಸಿಯಾ (20) ವಡೋದರಾದ ವಿಶ್ವ ವಿದ್ಯಾಲಯವೊಂದರ ವಿದ್ಯಾರ್ಥಿ ಬಂಧಿತ ಆರೋಪಿ.

    ಯುವಕ ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ 2 ಸ್ಕೂಟರ್‌ಗಳಿಗೆ ಡಿಕ್ಕಿ ಹೊಡೆದಿದ್ದ. ಡಿಕ್ಕಿಯ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, 7 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಮೃತ ಮಹಿಳೆಯನ್ನು ಹೇಮಾನಿ ಪಾಟೀಲ್ ಎಂದು ಗುರುತಿಸಲಾಗಿದೆ. ಹೇಮಾನಿ ಪಾಟೀಲ್ ಮಗಳೊಂದಿಗೆ ಹೋಳಿ ಹಬ್ಬದ ಹಿನ್ನೆಲೆ ಬಣ್ಣ ತರಲು ಹೋಗಿದ್ದಾಗ ಈ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ಬಳಿಕ ಯುವಕ ಕಾರಿನಿಂದ ಇಳಿದು ದರ್ಪದಿಂದಲೇ ನಡೆದುಕೊಂಡು ಹೋಗಿದ್ದ. ಈ ವೇಳೆ ಸ್ಥಳೀಯರು ಆತನನ್ನು ಹಿಡಿದು ಥಳಿಸಿದ್ದರು. ಇದನ್ನೂ ಓದಿ: 178 ಜನರನ್ನು ಹೊತ್ತು ಹಾರುತ್ತಿದ್ದ ಅಮೇರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ – 12 ಜನಕ್ಕೆ ಗಾಯ

    ಯುವಕನ ಜೊತೆ ಆತನ ಸ್ನೇಹಿತ ಮಿತ್ ಚೌಹಾಣ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ಅಪಘಾತದ ಬಳಿಕ ಆತ ಕಾರಿನಿಂದ ಇಳಿದು ನಾನು ಏನು ಮಾಡಿಲ್ಲ. ಆತನೇ ಕಾರು ಚಲಾಯಿಸುತ್ತಿದ್ದ ಎಂದು ಸ್ಥಳೀಯರ ಬಳಿ ಹೇಳಿದ್ದಾನೆ. ಮಿತ್ ಚೌಹಾಣ್ ವಡೋದರಾದಲ್ಲಿ ವಾಸಿಸುವ ಮತ್ತು ಖಾಸಗಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿರುವ ಮಿತ್ ಚೌಹಾಣ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅಪ್ಪು ಸರ್ ಫ್ಯಾನ್ಸ್‌ಗೆ ಇವತ್ತು ಹಬ್ಬ: ಪುನೀತ್‌ ರೀ-ರಿಲೀಸ್‌ ಸಿನಿಮಾ ಬಗ್ಗೆ ಅನುಶ್ರೀ ಮಾತು

    ಅಪಘಾತದ ರಭಸಕ್ಕೆ ಕಾರಿನ ಮುಂಭಾಗವು ತೀವ್ರವಾಗಿ ಹಾನಿಗೊಳಗಾಗಿದೆ. ಆರೋಪಿ ರಕ್ಷಿತ್ ರಸ್ತೆಯ ಉದ್ದಕ್ಕೂ ನಡೆಯುತ್ತಾ `ಓಂ ನಮಃ ಶಿವಾಯ’ ಎಂದು ಜಪಿಸಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಬೈಕಲ್ಲಿ ಬಂದು ನೀರು ಕೇಳಿದ್ರು, ಬಳಿಕ ವಿಷದ ಇಂಜೆಕ್ಷನ್‌ ಚುಚ್ಚಿ ಸಾಯಿಸಿದ್ರು – ಯುಪಿಯಲ್ಲಿ ಬಿಜೆಪಿ ಮುಖಂಡನ ಹತ್ಯೆ!

    ಬೈಕಲ್ಲಿ ಬಂದು ನೀರು ಕೇಳಿದ್ರು, ಬಳಿಕ ವಿಷದ ಇಂಜೆಕ್ಷನ್‌ ಚುಚ್ಚಿ ಸಾಯಿಸಿದ್ರು – ಯುಪಿಯಲ್ಲಿ ಬಿಜೆಪಿ ಮುಖಂಡನ ಹತ್ಯೆ!

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಬಿಜೆಪಿ (BJP) ಮುಖಂಡರೊಬ್ಬರನ್ನು ಮೂವರು ಅಪರಿಚಿತರು ವಿಷದ ಇಂಜೆಕ್ಷನ್‌ ಚುಚ್ಚಿ ಹತ್ಯೆಗೈದಿದ್ದಾರೆ.

    ಮೃತರನ್ನು ಗುಲ್ಫಮ್ ಸಿಂಗ್ ಯಾದವ್ (Gulfam Singh Yadav) ಎಂದು ಗುರುತಿಸಲಾಗಿದೆ. ಮೂವರು ವ್ಯಕ್ತಿಗಳು ಗುಲ್ಫಮ್ ಸಿಂಗ್ ಯಾದವ್ ಅವರನ್ನು ಭೇಟಿಯಾಗಲು ಸೋಮವಾರ ಮಧ್ಯಾಹ್ನ ಬೈಕ್‌ನಲ್ಲಿ ಬಂದಿದ್ದರು. ಬಳಿಕ ಅವರೊಂದಿಗೆ ಕುಳಿತು ಮಾತನಾಡಿ, ಯೋಗ ಕ್ಷೇಮ ವಿಚಾರಿಸಿದ್ದಾರೆ. ಬಳಿಕ ದುಷ್ಕರ್ಮಿಗಳು ಕುಡಿಯಲು ನೀರು ಕೇಳಿದ್ದಾರೆ. ನೀರು ನೀಡಿ ಮಲಗಿದಾಗ ಸಿಂಗ್‌ ಅವರ ಹೊಟ್ಟೆಗೆ ವಿಷದ ಇಂಜೆಕ್ಷನ್‌ ಚುಚ್ಚಿ ಪಾರಾರಿಯಾಗಿದ್ದಾರೆ.

    ಇದರಿಂದ ಭಯಭೀತರಾದ ಗುಲ್ಫಮ್ ಸಿಂಗ್ ಮನೆಯಿಂದ ಹೊರಬಂದು ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ವೈದ್ಯರ ಶಿಫಾರಸಿನ ಮೇರೆಗೆ ಯಾದವ್ ಅವರನ್ನು ಅಲಿಘರ್‌ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕೃಷ್ಣ ಕುಮಾರ್ ಬಿಷ್ಣೋಯ್ ಹೇಳಿದ್ದಾರೆ.

    ಘಟನಾ ಸ್ಥಳದಿಂದ ಪೊಲೀಸರು ಖಾಲಿ ಸಿರಿಂಜ್ ಮತ್ತು ಹೆಲ್ಮೆಟ್ ಸೇರಿದಂತೆ ಪ್ರಮುಖ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹಂತಕರ ಪತ್ತೆಗೆ ನಾಲ್ಕು ತಂಡಗಳನ್ನು ನಿಯೋಜಿಸಲಾಗಿದೆ. ರಸ್ತೆಗಳಲ್ಲಿ ಅಳವಡಿಸಲಾದ ಸಿಸಿಟಿವಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ. ಪೊಲೀಸರಿಗೆ ಕೆಲವು ಸುಳಿವುಗಳು ಸಿಕ್ಕಿವೆ ಮತ್ತು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಸಂಭಾಲ್‌ನ ಜುನಾವರಿ ಬ್ಲಾಕ್ ಪ್ರದೇಶದ ದವ್ತ್ರಾ ಹಿಮಾಚಲ ಗ್ರಾಮದ ನಿವಾಸಿ ಗುಲ್ಫಮ್ ಸಿಂಗ್ ಯಾದವ್, ಲೆಕ್ಕಪರಿಶೋಧಕ ಹುದ್ದೆಯನ್ನು ತೊರೆದು ರಾಜಕೀಯಕ್ಕೆ ಪ್ರವೇಶಿಸಿದ್ದರು. ತಮ್ಮ ಪ್ರಾಮಾಣಿಕ ಬಲದಿಂದ ಬಿಜೆಪಿಯಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದರು. 1976 ರಲ್ಲಿ ಬದೌನ್ ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಜಿಲ್ಲಾ ಉಸ್ತುವಾರಿ ಹುದ್ದೆಯನ್ನು ಅಲಂಕರಿಸಿದ್ದರು. 2004 ರಲ್ಲಿ, ಸಾರ್ವಜನಿಕರ ಒತ್ತಾಯದ ಮೇರೆಗೆ ಅವರು ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ವಿರುದ್ಧ ಕಣಕ್ಕಿಳಿದಿದ್ದರು. ಯಾದವ್‌ ಅವರ ಪತ್ನಿ ಗ್ರಾಮದ ಮುಖ್ಯಸ್ಥರಾಗಿದ್ದು, ಉತ್ತರ ಪ್ರದೇಶದ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು.

    ಈ ಕೊಲೆಗೆ ಸಂಬಂಧಿಸಿದಂತೆ ಕಾಂಗ್ರೆಸ್, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಡಬಲ್ ಎಂಜಿನ್ ಬಿಜೆಪಿ ಸರ್ಕಾರದಲ್ಲಿ, ಬಿಜೆಪಿ ನಾಯಕನೊಬ್ಬರನ್ನು ಅವರ ಮನೆಯೊಳಗೆ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಇದು ʻರಾವಣ ರಾಜ್ಯʼ ಎಂದು ವ್ಯಂಗ್ಯವಾಡಿದೆ.

  • ಹೋಳಿ ವರ್ಷಕ್ಕೊಮ್ಮೆ ಬರುತ್ತೆ, ಶುಕ್ರವಾರ 52 ಬಾರಿ ಬರತ್ತೆ ಆ ದಿನ ಮನೆಯಲ್ಲಿರಿ: ಪೊಲೀಸ್‌ ಅಧಿಕಾರಿ ಮಾತಿಗೆ ಯೋಗಿ ಬೆಂಬಲ

    ಹೋಳಿ ವರ್ಷಕ್ಕೊಮ್ಮೆ ಬರುತ್ತೆ, ಶುಕ್ರವಾರ 52 ಬಾರಿ ಬರತ್ತೆ ಆ ದಿನ ಮನೆಯಲ್ಲಿರಿ: ಪೊಲೀಸ್‌ ಅಧಿಕಾರಿ ಮಾತಿಗೆ ಯೋಗಿ ಬೆಂಬಲ

    ಲಕ್ನೋ: ಹೋಳಿ (Holi) ಹಬ್ಬದ ಸಮಯದಲ್ಲಿ ಮುಸ್ಲಿಮರು ಮನೆಯೊಳಗೆ ಇರಬೇಕು ಎಂದು ಸೂಚಿಸಿದ್ದ ಸಂಭಾಲ್ ಪೊಲೀಸ್ ಅಧಿಕಾರಿಯನ್ನು ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಬೆಂಬಲಿಸಿದ್ದಾರೆ.

    ಈ ವರ್ಷದ ಹೋಳಿ ಹಬ್ಬ ಮಾ.14ರ ಶುಕ್ರವಾರ ಬರುತ್ತದೆ. ಅದೇ ದಿನ ರಂಜಾನ್ ತಿಂಗಳಿನ ಮುಸ್ಲಿಮರ ಪ್ರಾರ್ಥನೆ ಸಹ ಇದೆ. ಹೋಳಿ ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ ಆದರೆ ಶುಕ್ರವಾರ (ನಮಾಜ್‌ಗಾಗಿ) ಒಂದು ವರ್ಷದಲ್ಲಿ 52 ಬಾರಿ ಬರುತ್ತದೆ. ಹೋಳಿ ಆಚರಣೆಗಳು ಕಡಿಮೆಯಾಗುವವರೆಗೆ ಮನೆಯೊಳಗೆ ಇರಬೇಕೆಂದು ನಾನು ಸಲಹೆ ನೀಡುತ್ತೇನೆ ಎಂದು ಶಾಂತಿ ಸಮಿತಿ ಸಭೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಅನುಜ್ ಚೌಧರಿ ಹೇಳಿದ್ದರು.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಯೋಗಿ ಆದಿತ್ಯನಾಥ್, ಹಬ್ಬಗಳ ಸಮಯದಲ್ಲಿ ನಾವು ಪರಸ್ಪರರ ಭಾವನೆಗಳನ್ನು ಗೌರವಿಸಬೇಕು. ಪ್ರತಿ ಶುಕ್ರವಾರ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ಆದರೆ ಹೋಳಿ ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ. ನಮಾಜ್ ವಿಳಂಬ ಮಾಡಬಹುದು. ನಮಾಜ್‌ಗಾಗಿ ಮಸೀದಿಗೆ ಹೋಗುವುದು ಕಡ್ಡಾಯವಲ್ಲ ಎಂದು ಅವರು ಹೇಳಿದ್ದಾರೆ.

    ಇನ್ನೂ ಹೋಳಿ ದಿನ ಶುಕ್ರವಾರದ ನಮಾಜ್‌ನ್ನು ಮಧ್ಯಾಹ್ನ 2 ಗಂಟೆಯ ನಂತರ ನಡೆಸಲು ನಿರ್ಧರಿಸಿದ್ದಕ್ಕಾಗಿ ಧಾರ್ಮಿಕ ನಾಯಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

    ಉತ್ತರ ಪ್ರದೇಶದ ವಿರೋಧ ಪಕ್ಷ ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ಸಂಭಾಲ್ ಪೊಲೀಸ್ ಅಧಿಕಾರಿಯ ಹೇಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸರ್ಕಾರದ ಅಧಿಕಾರಿಗಳು ಬಿಜೆಪಿಯ ಏಜೆಂಟ್‌ಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಸಮಾಜವಾದಿ ಪಕ್ಷದ ಸಂಸದ ಮತ್ತು ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರು ಸಂಭಾಲ್‌ನಲ್ಲಿ ಗಲಭೆಯನ್ನು ರೂಪಿಸಿದವರು ಚೌಧರಿ, ಹಿಂಸಾಚಾರದ ಸಮಯದಲ್ಲಿ ಜನರನ್ನು ಪ್ರಚೋದಿಸಿದ ಪೊಲೀಸರಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ? ಆಡಳಿತ ಬದಲಾದಾಗಲೆಲ್ಲಾ ಅಂತಹವರು ಜೈಲಿನಲ್ಲಿರುತ್ತಾರೆ ಎಂದು ಎಚ್ಚರಿಸಿದ್ದಾರೆ.

    ಸಂಭಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪೆನ್ಸಿಯಾ ಅವರಿಂದಲೂ ಡಿಎಸ್ಪಿ ಟೀಕೆಗೆ ಗುರಿಯಾಗಿದ್ದು, ಯಾವುದೇ ಅಧಿಕಾರಿ ತಮ್ಮ ಅಥವಾ ಎಸ್ಪಿ ಅನುಮತಿಯಿಲ್ಲದೆ ಸಾರ್ವಜನಿಕ ಹೇಳಿಕೆಗಳನ್ನು ನೀಡಬಾರದು ಎಂದು ನಿರ್ದೇಶನ ನೀಡಿದ್ದಾರೆ. ಜಿಲ್ಲಾಡಳಿತದ ಪ್ರಮುಖ ಆದ್ಯತೆ ಶಾಂತಿಯನ್ನು ಕಾಪಾಡುವುದು. ಯಾವುದೇ ಅಧಿಕಾರಿ ಯಾವುದೇ ಗುಂಪಿನ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂದು ಸೂಚಿಸಿದ್ದಾರೆ.