Tag: uttar pradesh

  • ಕಾಶಿಯಲ್ಲಿ ಮುಸ್ಲಿಂ ಮಹಿಳೆಯರಿಂದ ʻಶ್ರೀರಾಮ ಆರತಿʼ – ಏಕತೆ ಸಂದೇಶ ಸಾರಿದ ರಾಮನವಮಿ ಆಚರಣೆ

    ಕಾಶಿಯಲ್ಲಿ ಮುಸ್ಲಿಂ ಮಹಿಳೆಯರಿಂದ ʻಶ್ರೀರಾಮ ಆರತಿʼ – ಏಕತೆ ಸಂದೇಶ ಸಾರಿದ ರಾಮನವಮಿ ಆಚರಣೆ

    – ಶ್ರೀರಾಮನ ಶ್ಲೋಕ ಪಠಿಸಿ ಆರತಿ ಬೆಳಗಿದ ಮುಸ್ಲಿಂ ಮಹಿಳೆಯರು

    ಲಕ್ನೋ: ಭಾರತೀಯ ಸಂಸ್ಕೃತಿಯ ಬುನಾದಿಯೇ ರಾಮಾಯಣ ಮಹಾಕಾವ್ಯ. ಯುಗಯುಗಾಂತರಗಳಿಂದ ಧರ್ಮದ ಬೇರಾಗಿ, ಜನಪದ ಜೀವನ ಸೂತ್ರವಾಗಿ, ಭರತಖಂಡದ ಮಾರ್ಗದರ್ಶಿಯಾಗಿದೆ. ರಾಮನ ಆದರ್ಶ, ಲಕ್ಷ್ಮಣನ ತ್ಯಾಗ, ಸೀತೆಯ ನಿಷ್ಠೆ, ಹನುಮಂತನ ಸ್ವಾಮಿ ಭಕ್ತಿ, ರಾಮರಾಜ್ಯದ ಕನಸುಗಳು ಇಂದಿಗೂ ಭಾರತೀಯ ವಿಚಾರಧಾರೆಯ ಸ್ಪೂರ್ತಿಸೆಲೆಯಾಗಿದೆ. ಹಾಗಾಗಿಯೇ ಪ್ರತಿ ವರ್ಷ ರಾಮನವಮಿ ಆಚರಣೆ ಮಾಡಲಾಗುತ್ತದೆ. ಇಂತಹ ಹಬ್ಬಗಳ ಆಚರಣೆಗಳಿಗೆ ಯಾವುದೇ ಧರ್ಮ, ಜಾತಿಯ ಭೇದವಿಲ್ಲ. ಅದರಲ್ಲೂ ಭಾರತದಲ್ಲಿ ವಿವಿಧ ಧರ್ಮದ ಜನ ಕೂಡ ಹಬ್ಬ ಆಚರಣೆ ಮಾಡುವ ಮೂಲಕ ಏಕತೆ, ಪ್ರೀತಿ ಸಂದೇಶ ಸಾರುತ್ತಿದ್ದಾರೆ. ಇದಕ್ಕೆ ವಾರಣಾಸಿಯಲ್ಲಿ (Varanasi) ನಡೆದ ಪ್ರಸಂಗ ಸಾಕ್ಷಿಯಾಗಿದೆ.

    RAMANAVAMI

    ಶ್ರೀರಾಮನವಮಿಯ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರು (Muslim Women) ಶ್ರೀರಾಮನ ಆರತಿ ನೆರವೇರಿಸುವ ಮೂಲಕ ಕೋಮು ಸೌಹಾರ್ಧತೆ, ಏಕತೆ, ಪ್ರೀತಿಯ ಸಂದೇಶ ಸಾರಿದ್ದಾರೆ. ಉರ್ದುವಿನಲ್ಲಿ ಬರೆದ ಶ್ಲೋಕಗಳನ್ನು ಪಠಣ ಮಾಡುತ್ತಾ ಬುರ್ಖಾ ಧರಿಸಿಯೇ ಶ್ರೀರಾಮನ ಆರತಿ ನೆರವೇರಿಸಿದ್ದಾರೆ. ಜೊತೆಗೆ ಜೈಶ್ರೀರಾಮ್‌ ಘೋಷಣೆಗಳನ್ನೂ ಕೂಗಿದ್ದಾರೆ. ಇದನ್ನೂ ಓದಿ: ಆಧ್ಯಾತ್ಮಿಕ ಶಕ್ತಿ ನೀಡುವ ಶ್ರೀರಾಮ ದೇವಾಲಯಗಳಿವು…!

    ಮುಸ್ಲಿಂ ಮಹಿಳಾ ಫೌಂಡೇಶನ್ ಮತ್ತು ವಿಶಾಲ ಭಾರತ ಸಂಸ್ಥಾನದ ಜಂಟಿ ಆಶ್ರಯದಲ್ಲಿ, ಲಮ್ಹಿಯ ಸುಭಾಷ್ ಭವನದಲ್ಲಿ ಶ್ರೀರಾಮ ಮಹಾ ಆರತಿ ಆಯೋಜಿಸಲಾಗಿತ್ತು. ಈ ವೇಳೆ ಮುಸ್ಲಿಂ ಮಹಿಳೆಯರು ಸಹ ರಂಗೋಲಿಯ ಮೇಲೆ ಜೈಶ್ರೀರಾಮ್‌ ಎಂದು ಬರೆದು ರಾಮಶ್ಲೋಕವನ್ನು ಪಠಿಸಿದ್ದಾರೆ. ಹಿಂದೂ ಮಹಿಳೆಯರೊಂದಿಗೆ ಸೇರಿ ರಾಮನವಮಿ ಆಚರಿಸುವ ಮೂಲಕ ಹಿಂದೂ-ಮುಸ್ಲಿಂ ಭಾಯಿ ಭಾಯಿ ಸಂದೇಶ ಸಾರಿದ್ದಾರೆ.  ಇದನ್ನೂ ಓದಿ: ದೇಶದ ಜನತೆಗೆ ಶ್ರೀರಾಮನವಮಿ ಶುಭಾಶಯ ತಿಳಿಸಿದ ಮೋದಿ

    ಈ ವೇಳೆ ವಿಶಾಲ ಭಾರತ ಸಂಸ್ಥಾನದ ಡಾ.ನಜ್ಮಾ ಪರ್ವೀನ್ ಮಾತನಾಡಿ, ರಾಮನವಮಿ ನಮ್ಮ ದೇಶದ ಸಂಸ್ಕೃತಿಯ ಭಾಗವಾಗಿದೆ. ಪ್ರೀತಿಯ ಸಂದೇಶ ನೀಡಲು, ಸಂಸ್ಕೃತಿ ಅನುಸರಿಸಲು ಏಕೆ ಹಿಂಜರಿಕೆ ಬೇಕು. ಈ ದೇಶ ನಮ್ಮದು, ನಮ್ಮ ಪೂರ್ವಜರು ಇಲ್ಲಿಂದಲೇ ಬಂದವರು, ರಾಮ್ ಜಿ ಕೂಡ ನಮ್ಮವರೇ. ಅವರ ಆರತಿ ಮಾಡುವುದರಲ್ಲಿ ನಮಗೆ ಹೆಮ್ಮೆ ಇದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ಸಂಸದ ಸಾಗರ್ ಖಂಡ್ರೆ ಮನೆ ವಿದ್ಯುತ್ ಸಂಪರ್ಕ ಕಡಿತ – ಅಪಾರ್ಟ್‌ಮೆಂಟ್ ಮ್ಯಾನೇಜರ್ ವಿರುದ್ಧ ಎಫ್‌ಐಆರ್

  • ರಾಮನವಮಿ | 50 ಲಕ್ಷ ಭಕ್ತರಿಂದ ಅಯೋಧ್ಯೆ ಶ್ರೀರಾಮನ ದರ್ಶನ ಸಾಧ್ಯತೆ

    ರಾಮನವಮಿ | 50 ಲಕ್ಷ ಭಕ್ತರಿಂದ ಅಯೋಧ್ಯೆ ಶ್ರೀರಾಮನ ದರ್ಶನ ಸಾಧ್ಯತೆ

    ಲಕ್ನೋ: ರಾಮನವಮಿ (Ram Navami) ಹಿನ್ನೆಲೆ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ (Ram Mandir) ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇಂದು ಒಂದೇ ದಿನ ಐವತ್ತು ಲಕ್ಷ ಭಕ್ತರು ಬಾಲರಾಮನ ದರ್ಶನ ಪಡೆಯುವ ಸಾಧ್ಯತೆಯಿದೆ.

    ಅಯೋಧ್ಯೆಯಲ್ಲಿ (Ayodhya) ಜನದಟ್ಟಣೆ ಹಿನ್ನೆಲೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕುಂಭಮೇಳದ ಮಾದರಿಯಲ್ಲಿ ಭದ್ರತೆ, ಡ್ರೋನ್ ಕಣ್ಗಾವಲು ಕಲ್ಪಿಸಲಾಗಿದೆ. ರಾಮನವಮಿ ಹಿನ್ನೆಲೆ ಪ್ರಭು ಶ್ರೀರಾಮನಿಗೆ ವಿಶೇಷ ಪೂಜೆ ನಡೆಯಲಿದೆ. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ ಇಂದು ಉದ್ಘಾಟನೆ

    ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಎಲ್ಲಾ ವಿಶೇಷ ಪಾಸ್‌ಗಳನ್ನು ರದ್ದುಗೊಳಿಸಲಾಗಿದೆ. ದೇವಸ್ಥಾನ, ಸರಯೂ ನದಿ ಸೇರಿ ಎಲ್ಲ ಕಡೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ದೇಶದ ಜನತೆಗೆ ಶ್ರೀರಾಮನವಮಿ ಶುಭಾಶಯ ತಿಳಿಸಿದ ಮೋದಿ

    ಮಧ್ಯಾಹ್ನದ ವೇಳೆಗೆ ಬಾಲರಾಮನ ವಿಗ್ರಹದ ಹಣೆ ಮೇಲೆ ಸೂರ್ಯ ರಶ್ಮಿ ಬೀಳಲಿದ್ದು, ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ .ಸಂಜೆ ಸರಯೂ ನದಿ ತೀರದ ರಾಮಕೀ ಪೌಡಯಲ್ಲಿ ಎರಡು ಲಕ್ಷ ಹಣತೆಗಳು ಬೆಳಗಲಿದೆ. ಇದನ್ನೂ ಓದಿ: ಶ್ರೀ ರಾಮನವಮಿ ಇತಿಹಾಸ, ಆಚರಣೆಯ ಮಹತ್ವವೇನು?

  • ಪತ್ನಿಗೆ ಅಕ್ರಮ ಸಂಬಂಧ ಶಂಕೆ – ಸುತ್ತಿಗೆಯಿಂದ ಇಂಜಿನಿಯರ್‌ ತಲೆ ಒಡೆದು ಹತ್ಯೆಗೈದ ಪತಿ

    ಪತ್ನಿಗೆ ಅಕ್ರಮ ಸಂಬಂಧ ಶಂಕೆ – ಸುತ್ತಿಗೆಯಿಂದ ಇಂಜಿನಿಯರ್‌ ತಲೆ ಒಡೆದು ಹತ್ಯೆಗೈದ ಪತಿ

    ಲಕ್ನೋ: ಪತ್ನಿಗೆ (Wife) ಅಕ್ರಮ ಸಂಬಂಧ ಇದೆ ಎಂದು ಶಂಕಿಸಿ ವ್ಯಕ್ತಿಯೊಬ್ಬ ಪತ್ನಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆಗೈದ ಘಟನೆ ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿ ನಡೆದಿದೆ.

    ಹತ್ಯೆಯಾದ ಮಹಿಳೆಯನ್ನು ಆಸ್ಮಾ ಖಾನ್ (42) ಎಂದು ಗುರುತಿಸಲಾಗಿದೆ, ಹತ್ಯೆಗೈದ ಆರೋಪಿಯನ್ನು ನೂರುಲ್ಲಾ ಹೈದರ್ ಎಂದು ಗುರುತಿಸಲಾಗಿದೆ. ಹತ್ಯೆಯಾದ ಮಹಿಳೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ನೋಯ್ಡಾದ ಸೆಕ್ಟರ್ 62ರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಬಿಹಾರ ಮೂಲದವನಾಗಿದ್ದು, ಎಂಜಿನಿಯರಿಂಗ್ ಪದವೀಧರನಾಗಿದ್ದೂ ಸಹ ನಿರುದ್ಯೋಗಿಯಾಗಿದ್ದ ಎಂದು ತಿಳಿದುಬಂದಿದೆ. ಇಬ್ಬರು 2005 ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಪ್ರಜೆಗೆ ಚಾಕುವಿನಿಂದ ಇರಿದು ಕೊಲೆ

    ಘಟನೆಯ ಬಳಿಕ ದಂಪತಿಯ ಮಗ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ. ಆರೋಪಿ ಹೈದರ್ ತನ್ನ ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂದು ಶಂಕಿಸಿ ಪದೇ ಪದೇ ಗಲಾಟೆ ಮಾಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

    ಮಹಿಳೆಯ ಸೋದರ ಮಾವ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ದಂಪತಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ. ಮಗ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಮಗಳು 8 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವರು ಹಲವಾರು ದಿನಗಳಿಂದ ಜಗಳವಾಡುತ್ತಿದ್ದರು. ಆದರೆ ಅವನು ಕೊಲೆ ಮಾಡುವ ನಿರ್ಧಾರ ಮಾಡುತ್ತಾನೆ ಎಂದು ನಾವು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಾಸನ | ಜಗಳ ಬಿಡಿಸಲು ಹೋದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ

  • Greater Noida| ಕೂಲರ್ ನಿರ್ಮಾಣದ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ – 3 ಕಾರ್ಖಾನೆಗಳು ಭಸ್ಮ

    Greater Noida| ಕೂಲರ್ ನಿರ್ಮಾಣದ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ – 3 ಕಾರ್ಖಾನೆಗಳು ಭಸ್ಮ

    ಲಕ್ನೋ: ಕೂಲರ್ ನಿರ್ಮಾಣದ ಫ್ಯಾಕ್ಟರಿಯಲ್ಲಿ (Cooler Manufacturing Factory) ಏಕಾಏಕಿ ಭಾರೀ ಬೆಂಕಿ ಕಾಣಿಸಿಕೊಂಡ ಘಟನೆ ಗ್ರೇಟರ್ ನೋಯ್ಡಾದ (Greater Noida) ಇಕೋಟೆಕ್ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿದೆ.

    ಘಟನೆಯಲ್ಲಿ ಮೂರು ಕಾರ್ಖಾನೆಗಳು ಸಟ್ಟು ಭಸ್ಮವಾಗಿದೆ. 30 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ವಿಜಯೇಂದ್ರನ ಚಮಚಾಗಳಿದ್ರೆ ಪ್ರಶ್ನೆ ಕೇಳ್ಬೇಡಿ – ಮಾಧ್ಯಮಗಳ ಮುಂದೆ ಸಿಡಿಮಿಡಿಗೊಂಡ ಯತ್ನಾಳ್

    ಸೋಮವಾರ ಮಧ್ಯಾಹ್ನ 1:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಉಳಿದ ಕಾರ್ಖಾನೆಗಳಿಗೆ ಬೆಂಕಿ ಹಬ್ಬಿದೆ. ಘಟನೆಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಅಲ್ಲದೇ ಕಾರ್ಖಾನೆಯ ಒಳಗೆ ಯಾರೂ ಸಿಲುಕಿಕೊಂಡಿಲ್ಲ ಎಂದು ಇಕೋಟೆಕ್ ಪೊಲೀಸ್ ಠಾಣೆಯ ಉಸ್ತುವಾರಿ ಅನಿಲ್ ಕುಮಾರ್ ಪಾಂಡೆ ತಿಳಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅವಘಢ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಐಪಿಎಲ್‌ನಿಂದ ಬ್ಯಾನ್‌ ಮಾಡಿ – ರಿಯಾನ್‌ ಪರಾಗ್‌ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್‌

    ಸದ್ಯ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಘಟನಾ ಸ್ಥಳದಿಂದ ದಟ್ಟವಾದ ಕಪ್ಪು-ಬೂದು ಹೊಗೆ ಹೊರಬರುತ್ತಿರುವುದನ್ನು ಕಾಣಬಹುದು. ಇದನ್ನೂ ಓದಿ: ಈ ವರ್ಷ ಉದ್ಘಾಟನೆಯಾಗಲ್ಲ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ: ನಿತಿನ್ ಗಡ್ಕರಿ ಮಾಹಿತಿ

  • ಮೀರತ್‌ ಮಾದರಿ ಪೀಸ್‌ ಪೀಸ್‌ ಮಾಡಿ ಡ್ರಮ್‌ಗೆ ತುಂಬಿಬಿಡ್ತೀನಿ – ಮಚ್ಚು ಹಿಡಿದು ಗಂಡನಿಗೆ ಎಚ್ಚರಿಕೆ ಕೊಟ್ಟ ʻಮಚ್ಚೇಶ್ವರಿʼ!

    ಮೀರತ್‌ ಮಾದರಿ ಪೀಸ್‌ ಪೀಸ್‌ ಮಾಡಿ ಡ್ರಮ್‌ಗೆ ತುಂಬಿಬಿಡ್ತೀನಿ – ಮಚ್ಚು ಹಿಡಿದು ಗಂಡನಿಗೆ ಎಚ್ಚರಿಕೆ ಕೊಟ್ಟ ʻಮಚ್ಚೇಶ್ವರಿʼ!

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಮೀರತ್‌ನಲ್ಲಿ (Meerut) ನಡೆದ ಭೀಕರ ಹತ್ಯೆಯಂತೆಯೇ, ನಿನ್ನನ್ನು ಕತ್ತರಿಸಿ ಡ್ರಮ್‌ನಲ್ಲಿ ಹಾಕಿಬಿಡ್ತೀನಿ ಎಂದು ಮಹಿಳೆಯೊಬ್ಬಳು ಮಚ್ಚು ಹಿಡಿದು ತನ್ನ ಪತಿಗೆ (Husband) ಬೆದರಿಕೆ ಹಾಕಿದ್ದಾಳೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

    ಗೊಂಡಾದ ಜಲ ನಿಗಮದಲ್ಲಿ ಕೆಲಸ ಮಾಡುತ್ತಿರುವ ಝಾನ್ಸಿ ಮೂಲದ ಜೂನಿಯರ್ ಎಂಜಿನಿಯರ್ (ಜೆಇ) ಧರ್ಮೇಂದ್ರ ಕುಶ್ವಾಹ ಮೇಲೆ ಪತ್ನಿ (Wife) ಮಾಯಾ ಮೌರ್ಯ ಮತ್ತು ಆಕೆಯ ಪ್ರೇಮಿ ನೀರಜ್ ಮೌರ್ಯ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಗಂಡನ ತಲೆ ಕಡಿದ ಶವವನ್ನು ಬೆಡ್ ಬಾಕ್ಸ್‌ನಲ್ಲಿಟ್ಟು ನಿದ್ದೆ ಮಾಡಿದ್ದಳು ಪತ್ನಿ – ಮೀರತ್ ಕೊಲೆ ಪ್ರಕರಣದ ರಹಸ್ಯ ಬಯಲು 

    2016ರಲ್ಲಿ ಕುಶ್ವಾಹ ಅವರು ಬಸ್ತಿ ಜಿಲ್ಲೆಯ ನಿವಾಸಿ ಮಾಯಾ ಮೌರ್ಯ ಅವರನ್ನು ಪ್ರೇಮ ವಿವಾಹವಾಗಿದ್ದರು. ಬಳಿಕ ಕುಶ್ವಾಹ 2022 ರಲ್ಲಿ ಮಾಯಾಳ ಹೆಸರಿನಲ್ಲಿ ಭೂಮಿಯನ್ನು ಖರೀದಿಸಿದ್ದರು. ನಂತರ ಮಾಯಾ ಸಂಬಂಧಿ ನೀರಜ್ ಮೌರ್ಯ ಅವರಿಗೆ ಆ ಜಾಗದಲ್ಲಿ ಮನೆ ನಿರ್ಮಾಣದ ಕೆಲಸವನ್ನು ವಹಿಸಿದ್ದರು. ಇದಾದ ಬಳಿಕ ಮಾಯಾ ಹಾಗೂ ನೀರಜ್‌ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದಳು. ಕೋವಿಡ್ -19 ಸಮಯದಲ್ಲಿ ನೀರಜ್ ಪತ್ನಿಯ ಮರಣದ ನಂತರ ಅವರ ಸಂಬಂಧ ಇನ್ನೂ ಹೆಚ್ಚಾಗಿತ್ತು. 2024 ರಂದು ಮಾಯಾ ಮತ್ತು ನೀರಜ್‌ ಖಾಸಗಿ ಕ್ಷಣಗಳನ್ನು ಕುಶ್ವಾಹ ಗಮನಿಸಿ ಗಲಾಟೆ ಮಾಡಿದ್ದರು. ಈ ವೇಳೆ ಅವರ ಮೇಲೆ ಹಲ್ಲೆ ಮಾಡಿ, ಮಾಯಾ ಮನೆ ತೊರೆದಿದ್ದಳು.

    2024ರ ಆಗಸ್ಟ್‌ನಲ್ಲಿ ನೀರಜ್ ಜೊತೆಗೆ ಬಂದಿದ್ದ ಮಾಯಾ ಮನೆಯ ಬೀಗ ಮುರಿದು 15 ಗ್ರಾಂ ಚಿನ್ನದ ಸರ ಮತ್ತು ನಗದು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಕುಶ್ವಾಹ ಸೆಪ್ಟೆಂಬರ್ 2024ರಲ್ಲಿ ದೂರು ದಾಖಲಿಸಿದ್ದರು. ಇನ್ನೂ, ಇದೇ ತಿಂಗಳ 29ರಂದು ಮಾಯಾ ಮತ್ತು ನೀರಜ್ ತನ್ನ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಇತ್ತೀಚೆಗೆ ಮೀರತ್‌ನಲ್ಲಿ ನಡೆದ ವ್ಯಕ್ತಿಯ ಕೊಲೆ ಮಾದರಿಯಲ್ಲೇ ನನ್ನನ್ನು ಹತ್ಯೆಗೈದು ಡ್ರಮ್‌ನಲ್ಲಿ ಪ್ಯಾಕ್ ಮಾಡುತ್ತೇನೆ ಎಂದು ಮಾಯಾ ಬೆದರಿಕೆ ಹಾಕಿದ್ದಾಳೆ ಎಂದು ಕುಶ್ವಾಹ ಆರೋಪಿಸಿದ್ದಾರೆ.

    ಇದರ ಬೆನ್ನಲ್ಲೇ ಮಾಯಾ, ತನ್ನ ಪತಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಕಿರುಕುಳ ನೀಡುತ್ತಿದ್ದಾರೆ ಮತ್ತು ನಾಲ್ಕು ಬಾರಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾಳೆ. ಇದನ್ನೂ ಓದಿ: Exclusive | ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಕೇಸ್‌ – ಆಡಿಯೋದಲ್ಲಿ ಬಯಲಾಯ್ತು ಸಂಚಿನ ರಹಸ್ಯ

  • ಪ್ರಯಾಗ್‍ರಾಜ್‍ನಲ್ಲಿ ಗುಂಡಿಕ್ಕಿ ಏರ್ ಫೋರ್ಸ್ ಎಂಜಿನಿಯರ್ ಹತ್ಯೆ

    ಪ್ರಯಾಗ್‍ರಾಜ್‍ನಲ್ಲಿ ಗುಂಡಿಕ್ಕಿ ಏರ್ ಫೋರ್ಸ್ ಎಂಜಿನಿಯರ್ ಹತ್ಯೆ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ (Prayagraj) ಭಾರತೀಯ ವಾಯುಪಡೆಯ (Indian Air Force) ಸಿವಿಲ್ ಎಂಜಿನಿಯರ್‌ ಮೇಲೆ ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ.

    ಹತ್ಯೆಗೀಡಾದ ಅಧಿಕಾರಿಯನ್ನು ಎಸ್‌ಎನ್ ಮಿಶ್ರಾ (51) ಎಂದು ಗುರುತಿಸಲಾಗಿದೆ. ಪ್ರಯಾಗ್‌ರಾಜ್‌ನ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಮಲಗಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಅಪರಿಚಿತ ದುಷ್ಕರ್ಮಿಯೊಬ್ಬ ಕಿಟಕಿಯ ಮೂಲಕ ಗುಂಡು ಹಾರಿಸಿದ್ದಾನೆ ಎಂದು ಪುರಾಮುಫ್ತಿ ಸ್ಟೇಷನ್ ಹೌಸ್ ಅಧಿಕಾರಿ (ಎಸ್‌ಎಚ್‌ಒ) ಮನೋಜ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಛತ್ತೀಸ್‌ಗಢ | ಭದ್ರತಾಪಡೆಗಳೊಂದಿಗೆ ಗುಂಡಿನ ಚಕಮಕಿ – 16 ನಕ್ಸಲರ ಹತ್ಯೆ

    ಗುಂಡು ಅವರ ಎದೆಗೆ ತಗುಲಿತ್ತು. ಅವರನ್ನು ತಕ್ಷಣ ಸೇನಾ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಿಶ್ರಾ ಅವರಿಗೆ ಪತ್ನಿ, ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ. ಕುಟುಂಬದಿಂದ ದೂರು ದಾಖಲಾದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭೂಕಂಪದಿಂದಾಗಿ ಆಸ್ಪತ್ರೆ ನಾಮಾವಶೇಷ – ಬ್ಯಾಂಕಾಕ್‌ನ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

  • ಹಾಸ್ಟೆಲ್‌ನಲ್ಲಿ ಅಗ್ನಿ ಅವಘಡ – ಜೀವ ಉಳಿಸಿಕೊಳ್ಳಲು 2ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿನಿಯರು

    ಹಾಸ್ಟೆಲ್‌ನಲ್ಲಿ ಅಗ್ನಿ ಅವಘಡ – ಜೀವ ಉಳಿಸಿಕೊಳ್ಳಲು 2ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿನಿಯರು

    ಲಕ್ನೋ: ಗರ್ಲ್ಸ್ ಹಾಸ್ಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಹಾಸ್ಟೆಲ್ ಒಳಗೆ ಸಿಲುಕಿಕೊಂಡಿದ್ದ ಇಬ್ಬರು ಹುಡುಗಿಯರು ಜೀವ ಉಳಿಸಿಕೊಳ್ಳಲು ಎರಡನೇ ಮಹಡಿಯಿಂದ ಜಿಗಿದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಗ್ರೇಟರ್‌ ನೋಯ್ಡಾದಲ್ಲಿ  ನಡೆದಿದೆ.

    ಗ್ರೇಟರ್ ನೋಯ್ಡಾದ (Greater Noida) ನಾಲೆಡ್ಜ್ ಪಾರ್ಕ್- 3ರಲ್ಲಿರುವ ಅನ್ನಪೂರ್ಣ ಗರ್ಲ್ಸ್ ಹಾಸ್ಟೆಲ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಎಸಿ ಸ್ಫೋಟಗೊಂಡ ಪರಿಣಾಮ ಹಾಸ್ಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಮೊದಲು ನನಗೆ ತಲೆ ಸುತ್ತುತ್ತಿದೆ ಎಂದು ಭಾವಿಸಿದ್ದೆ – ಥೈಲ್ಯಾಂಡ್‌ ಭೂಕಂಪದ ಭಯಾನಕ ಚಿತ್ರಣ ಬಿಚ್ಚಿಟ್ಟ ಕನ್ನಡಿಗ

    ಹಾಸ್ಟೆಲ್‌ನ ಎರಡನೇ ಮಹಡಿಯಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಹುಡುಗಿಯರನ್ನು ಸ್ಥಳೀಯರು ಏಣಿಯ ಸಹಾಯದಿಂದ ರಕ್ಷಿಸಿದರು. ಆದರೆ, ಒಬ್ಬ ಹುಡುಗಿ ಏಣಿಗೆ ಕಾಲಿಡಲು ಪ್ರಯತ್ನಿಸುತ್ತಿದ್ದಾಗ ಕೆಳಕ್ಕೆ ಬಿದ್ದಳು. ಬಿದ್ದ ವಿದ್ಯಾರ್ಥಿನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಕತ್ತಿಯಿಂದ ಹೊಡೆದು ನಾಲ್ವರ ಭೀಕರ ಹತ್ಯೆ

    ಗುರುವಾರ ಸಂಜೆ 5 ಗಂಟೆ ಸುಮಾರಿಗೆ, ನಾಲೆಡ್ಜ್ ಪಾರ್ಕ್ -3 ರಲ್ಲಿರುವ ಅನ್ನಪೂರ್ಣ ಗರ್ಲ್ಸ್ ಹಾಸ್ಟೆಲ್‌ನಲ್ಲಿ (Girl’s Hostel) ಬೆಂಕಿ ಕಾಣಿಸಿಕೊಂಡಿದೆ ಎಂದು ನಮಗೆ ಮಾಹಿತಿ ಸಿಕ್ಕಿತು. ನಮ್ಮ ತಂಡ ತಕ್ಷಣ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಿಯಂತ್ರಿಸಿತು ಎಂದು ಅಗ್ನಿಶಾಮಕ ಅಧಿಕಾರಿ ಪ್ರದೀಪ್ ಕುಮಾರ್ ಚೌಬೆ ಮಾಹಿತಿ ನೀಡಿದರು. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಭಾರೀ ಭೂಕಂಪ – 40ಕ್ಕೂ ಹೆಚ್ಚು ಕಾರ್ಮಿಕರು ನಾಪತ್ತೆ, ಗಗನಚುಂಬಿ ಕಟ್ಟಡಗಳು ನೆಲಸಮ!

  • ರಸ್ತೆಯಲ್ಲಿ ನಮಾಜ್ ಮಾಡಿದ್ರೆ ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸೆನ್ಸ್ ರದ್ದು: ಮಿರತ್‌ ಪೊಲೀಸರಿಂದ ಎಚ್ಚರಿಕೆ

    ರಸ್ತೆಯಲ್ಲಿ ನಮಾಜ್ ಮಾಡಿದ್ರೆ ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸೆನ್ಸ್ ರದ್ದು: ಮಿರತ್‌ ಪೊಲೀಸರಿಂದ ಎಚ್ಚರಿಕೆ

    ಲಕ್ನೋ: ಈದ್-ಉಲ್-ಫಿತರ್ ಮತ್ತು ರಂಜಾನ್‌ನ (Ramzan) ಕೊನೆಯ ಶುಕ್ರವಾರದಂದು ರಸ್ತೆಗಳಲ್ಲಿ ನಮಾಜ್ ಮಾಡಿದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಉತ್ತರ ಪ್ರದೇಶದ (Uttar Pradesh) ಮಿರತ್‌ (Meerut) ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

    ರಸ್ತೆಗಳಲ್ಲಿ ನಮಾಜ್‌ ಮಾಡಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಅಂತಹವರ ಪಾಸ್‌ಪೋರ್ಟ್‌ (Passport) ಹಾಗೂ ಚಾಲನಾ ಪರವಾನಗಿಯನ್ನೂ (Driving Licence) ರದ್ದುಗೊಳಿಸಬಹುದು ಎಂದು ಮೀರತ್ ಪೊಲೀಸ್ ಅಧೀಕ್ಷಕ (ನಗರ) ಆಯುಷ್ ವಿಕ್ರಮ್ ಸಿಂಗ್ ಎಚ್ಚರಿಸಿದ್ದಾರೆ. ಸ್ಥಳೀಯ ಮಸೀದಿಗಳು ಅಥವಾ ಗೊತ್ತುಪಡಿಸಿದ ಈದ್ಗಾಗಳಲ್ಲಿ ಈದ್ ಪ್ರಾರ್ಥನೆ ಸಲ್ಲಿಸಬೇಕು ಮತ್ತು ಯಾರೂ ರಸ್ತೆಗಳಲ್ಲಿ ನಮಾಜ್ ಮಾಡಬಾರದು ಎಂದಿದ್ದಾರೆ.ಇದನ್ನೂ ಓದಿ: ಜಮ್ಮು-ಕಾಶ್ಮೀರದ ಕಥುವಾದಲ್ಲಿ ಎನ್‌ಕೌಂಟರ್‌ – ನಾಲ್ವರು ಪೊಲೀಸರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ

    ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ನಾಯಕ ಜಯಂತ್ ಸಿಂಗ್ ಚೌಧರಿ, ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರೆ ಅಂತವರ ಪಾಸ್‌ಪೋರ್ಟ್‌ ಮತ್ತು ಪರವಾನಗಿಗಳನ್ನು ರದ್ದುಗೊಳಿಸಬಹುದು. ನ್ಯಾಯಾಲಯದಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಇಲ್ಲದೆ ಹೊಸ ಪಾಸ್‌ಪೋರ್ಟ್ ಪಡೆಯುವುದು ಕಷ್ಟಕರವಾಗುತ್ತದೆ. ನ್ಯಾಯಾಲಯದಿಂದ ವ್ಯಕ್ತಿಗಳು ದೋಷಮುಕ್ತರಾಗುವವರೆಗೆ ಅಂತಹ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

    ಮೀರತ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ವಿಪಿನ್ ಟಾಡಾ ಪ್ರತಿಕ್ರಿಯಿಸಿ, ಹಬ್ಬದ ಸಮಯದಲ್ಲಿ, ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿಗಳನ್ನು ಹರಡಿದರೆ ಅಥವಾ ಅಶಾಂತಿಯನ್ನು ಉಂಟು ಮಾಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾವು ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇಡುತ್ತಿದ್ದೇವೆ. ಕೋಮು ಸಾಮರಸ್ಯವನ್ನು ಹಾಳು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

    ಭದ್ರತೆಗಾಗಿ ಹಿಂದಿನ ಅನುಭವಗಳ ಆಧಾರದ ಮೇಲೆ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ ಮತ್ತು ಅಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಶಾಂತಿಯನ್ನು ಕಾಪಾಡಲು ಮತ್ತು ಮುಂಬರುವ ಹಬ್ಬಗಳನ್ನು ಸುಗಮವಾಗಿ ಆಚರಿಸಲು ಆಡಳಿತವು ಪ್ರಮುಖ ನಾಗರಿಕರು ಮತ್ತು ಧಾರ್ಮಿಕ ನಾಯಕರೊಂದಿಗೆ ಸಭೆ ನಡೆಸಲಾಗಿದೆ. ಕೆಲವೆಡೆ ಡ್ರೋನ್‌ಗಳನ್ನು ನಿಯೋಜಿಸಲಾಗುವುದು. ಎಲ್ಲಾ ಸೂಕ್ಷ್ಮ ಸ್ಥಳಗಳಲ್ಲಿ ಮಫ್ತಿಯಲ್ಲಿ ಅಧಿಕಾರಿಗಳನ್ನು ಸಹ ನಿಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ 50 ಕೋಟಿ ರೂ.ನಿಗದಿ: ಸಚಿವ ರಾಜಣ್ಣ

  • Uttar Pradesh | ಪತ್ನಿಯ ಅಕ್ರಮ ಸಂಬಂಧ ತಿಳಿದು ಪ್ರಿಯಕರನೊಂದಿಗೇ ಮದ್ವೆ ಮಾಡಿಸಿದ ಪತಿ

    Uttar Pradesh | ಪತ್ನಿಯ ಅಕ್ರಮ ಸಂಬಂಧ ತಿಳಿದು ಪ್ರಿಯಕರನೊಂದಿಗೇ ಮದ್ವೆ ಮಾಡಿಸಿದ ಪತಿ

    – ಎರಡು ಮಕ್ಕಳನ್ನು ತಾನೇ ನೋಡಿಕೊಳ್ಳುವುದಾಗಿ ತಿಳಿಸಿದ ಗಂಡ

    ಲಕ್ನೋ: ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ಪತಿ, ಆಕೆಯನ್ನು ಪ್ರಿಯಕರನ ಜೊತೆ ಮದುವೆ ಮಾಡಿಸಿದ ವಿಚಿತ್ರ ಪ್ರಸಂಗ ಉತ್ತರ ಪ್ರದೇಶದ (Uttar Pradesh) ಸಂತ ಕಬೀರ್ ನಗರ (Sant Kabir Nagar) ಜಿಲ್ಲೆಯಲ್ಲಿ ನಡೆದಿದೆ.

    2017ರಲ್ಲಿ ಬಬ್ಲೂ ಹಾಗೂ ರಾಧಿಕಾ ವಿವಾಹವಾಗಿದ್ದು, ದಂಪತಿಗೆ ಏಳು ಹಾಗೂ ಒಂಬತ್ತು ವರ್ಷದ ಇಬ್ಬರು ಮಕ್ಕಳಿದ್ದಾರೆ. ತಮ್ಮ ಜೀವನೋಪಾಯಕ್ಕಾಗಿ ಬಬ್ಲೂ ಹೆಚ್ಚಿನ ಸಮಯ ಮನೆಯಿಂದ ದೂರವಿದ್ದು, ಕೆಲಸ ಮಾಡುತ್ತಿದ್ದರು. ಈ ವೇಳೆ ರಾಧಿಕಾ ಅದೇ ಹಳ್ಳಿಯ ಓರ್ವ ಯುವಕನನ್ನು ಇಷ್ಟಪಡಲು ಪ್ರಾರಂಭಿಸಿದ್ದಳು. ಬಳಿಕ ಇದು ಪ್ರೀತಿಗೆ ತಿರುಗಿ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು.ಇದನ್ನೂ ಓದಿ:ಯತ್ನಾಳ್‌ ಉಚ್ಛಾಟನೆ ಬೆನ್ನಲ್ಲೇ ಬಿಜೆಪಿಯ ಮತ್ತೊಬ್ಬ ಮುಖಂಡ ರಾಜೀನಾಮೆ – ಬೆಂಬಲಿಗರಿಂದ ಪ್ರತಿಭಟನೆಗೆ ಸಜ್ಜು!

    ದೀರ್ಘಕಾಲದಿಂದ ನಡೆದಿದ್ದ ಈ ಅಕ್ರಮ ಸಂಬಂಧದ ಬಗ್ಗೆ ಒಂದು ದಿನ ಬಬ್ಲೂ ಕುಟುಂಬದವರಿಗೆ ತಿಳಿಯಿತು. ಬಳಿಕ ವಿಷಯ ತಿಳಿದ ಬಬ್ಲೂ ರಾಧಿಕಾಗೆ ಒಂದು ಆಯ್ಕೆ ನೀಡಿದನು. ಪ್ರಿಯಕರ ಅಥವಾ ಪತಿ ಎಂಬ ಆಯ್ಕೆ ನೀಡಿದಾಗ ರಾಧಿಕಾ ಪ್ರಿಯಕರನನ್ನು ಆರಿಸಿಕೊಂಡಳು. ಇದನ್ನು ಒಪ್ಪಿದ ಬಬ್ಲೂ ಪ್ರಿಯಕರನೊಂದಿಗೆ ಮದುವೆ ನಿಶ್ಚಯಿಸಿ, ಹಳ್ಳಿಯ ಜನರಿಗೆ ತಿಳಿಸಿದ.

    ಇದಕ್ಕೂ ಮುನ್ನ ಮೊದಲು ನ್ಯಾಯಾಲಯಕ್ಕೆ ತೆರಳಿ ರಾಧಿಕಾ ಹಾಗೂ ಆಕೆಯ ಪ್ರಿಯಕರನ ಮದುವೆ ಮಾಡಿಸಿ, ಬಳಿಕ ದೇವಸ್ಥಾನಕ್ಕೆ ಕರೆದುಕೊಂಡು ಬಂದು ಹೂಮಾಲೆ ಬದಲಿಸಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಹಕರಿಸಿದರು. ಇನ್ನೂ ಬಬ್ಲೂ ತನ್ನ ಎರಡು ಮಕ್ಕಳನ್ನು ತಾನೇ ನೋಡಿಕೊಳ್ಳುವುದಾಗಿಯೂ ತಿಳಿಸಿದ್ದಾರೆ.ಇದನ್ನೂ ಓದಿ:ಹಾಲಿನ ದರ ಏರಿಕೆ – ಇಂದು ಕ್ಯಾಬಿನೆಟ್‌ನಲ್ಲಿ ತೀರ್ಮಾನ, 2-3 ರೂ. ಹೆಚ್ಚಳ ಸಾಧ್ಯತೆ?

  • ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲಿಮರೂ ಸುರಕ್ಷಿತ – ಯೋಗಿ ಆದಿತ್ಯನಾಥ್‌

    ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲಿಮರೂ ಸುರಕ್ಷಿತ – ಯೋಗಿ ಆದಿತ್ಯನಾಥ್‌

    – 100 ಮುಸ್ಲಿಂ ಕುಟುಂಬಗಳ ನಡ್ವೆ 50 ಹಿಂದೂ ಕುಟುಂಬಗಳಿದ್ದರೂ ಸೇಫಾಗಿರಲ್ಲ ಎಂದ ಸಿಎಂ

    ಲಕ್ನೋ: ಉತ್ತರ ಪ್ರದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದರೆ ಮುಸ್ಲಿಮರೂ (Muslims) ಸುರಕ್ಷಿತವಾಗಿರುತ್ತಾರೆ ಎಂದು ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಹೇಳಿದರು.

    ಪಾಡ್‌ಕಾಸ್ಟ್‌ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಎಲ್ಲಾ ಧರ್ಮದ ಜನರು ಸುರಕ್ಷಿತವಾಗಿದ್ದಾರೆ. ಹಿಂದೂಗಳು (Hindus) ಸೇಫಾಗಿದ್ದರೆ, ಮುಸ್ಲಿಮರೂ ಸೇಫಾಗಿರುತ್ತಾರೆ. 100 ಹಿಂದೂ ಕುಟುಂಬಗಳ ನಡುವೆ ಒಂದು ಮುಸ್ಲಿಂ ಕುಟುಂಬ ಭದ್ರವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: Bengaluru | ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಕೊಲೆ – ಪೊಲೀಸರ ಮುಂದೆ ಶರಣಾದ ಪತಿ

    ಉತ್ತರ ಪ್ರದೇಶದಲ್ಲಿ (Uttar Pradesh) ಎಲ್ಲಾ ಧರ್ಮದ ಜನ ಸುರಕ್ಷಿತವಾಗಿದ್ದಾರೆ. ಅವರಿಗೆ ಎಲ್ಲಾ ಧಾರ್ಮಿಕ ಪದ್ದತಿಗಳನ್ನು ಆಚರಿಸುವ ಸ್ವಾತಂತ್ರ್ಯವಿದೆ. 100 ಹಿಂದೂ ಕುಟುಂಬಳ ನಡುವೆ ಒಂದು ಮುಸ್ಲಿಂ ಕುಟುಂಬ ಭದ್ರವಾಗಿದೆ. ಆದ್ರೆ 100 ಮುಸ್ಲಿಂ ಕುಟುಂಬಗಳ ನಡುವೆ 50 ಹಿಂದೂ ಕುಟುಂಬಗಳಿದ್ದರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಹಿಂದೂ ಆಡಳಿತಗಾರರು ಇತರರ ಮೇಲೆ ಅಧಿಪತ್ಯ ಸ್ಥಾಪಿಸಿದ ಉದಾಹರಣೆ ವಿಶ್ವ ಇತಿಹಾಸದಲ್ಲಿ ಇಲ್ಲ. ಇದಕ್ಕೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವೇ ಕಾರಣ, ಇದಕ್ಕೂ ಮುನ್ನ ಪಾಕಿಸ್ತಾನದಲ್ಲೂ ಈ ಉದಾಹರಣೆ ಇತ್ತು. ಅಫ್ಘಾನಿಸ್ತಾನದಲ್ಲೂ ಏನಾಯ್ತು ಅನ್ನೋದು ನಮಗೆ ಗೊತ್ತಿದೆ ಎಂದು ಹೇಳಿದರು.

    2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಒಂದೇ ಒಂದು ಕೊಮುಗಲಭೆ ನಡೆದಿಲ್ಲ ಎಂದ ಸಿಎಂ ಯೋಗಿ, ಉತ್ತರ ಪ್ರದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದರೆ ಮುಸ್ಲಿಮರೂ ಸುರಕ್ಷಿತ. ನಾನು ಒಬ್ಬ ಸಾಮಾನ್ಯ ಪ್ರಜೆ, ಉತ್ತರ ಪ್ರದೇಶದ ಪ್ರಜೆ. ಎಲ್ಲರ ಸಂತೋಷಕ್ಕಾಗಿ ಹಾರೈಸುವ ʻಯೋಗಿʼ ನಾನು. ಎಲ್ಲರ ಬೆಂಬಲದಿಂದ ಅಭಿವೃದ್ಧಿ ಸಾಧ್ಯ ಅಂತ ನಂಬುವವನು ನಾನು. ಸನಾತನ ಧರ್ಮವು ವಿಶ್ವದ ಅತ್ಯಂತ ಪುರಾತನ ಧರ್ಮವಾಗಿದೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: Exclusive | ರನ್ಯಾ ಗೋಲ್ಡ್ ಸ್ಮಗ್ಲಿಂಗ್‌ ಕೇಸ್‌ – ಮೊದಲು ಚಿನ್ನ ಸಾಗಿಸಿದ್ದು ದಕ್ಷಿಣಾ ಆಫ್ರಿಕಾದಿಂದ ದುಬೈಗೆ!

    ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ:
    ಸಂದರ್ಶನದ ವೇಳೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ ಆದಿತ್ಯನಾಥ್, ಒಂದು ಭಾರತ ಶ್ರೇಷ್ಠ ಭಾರತ ಆಗಬೇಕಲ್ಲವೇ? ಅವರು ದಶಕಗಳಿಂದ ಏನು ಮಾಡುತ್ತಿದ್ದರು ಎಂದು ಕೇಳಬೇಕು? ಅವರು ಯಾಕೆ ರಾಮ ಮಂದಿರ ನಿರ್ಮಾಣ ಮಾಡಲಿಲ್ಲ? ರಾಹುಲ್ ಗಾಂಧಿ ತನ್ನ ಅಜ್ಜ, ಅಜ್ಜಿ ಮತ್ತು ತಂದೆಯನ್ನು ಕೇಳಬೇಕಿತ್ತು? ಆ ಸಮಯದಲ್ಲಿ ಅವರು ಅದನ್ನು ಏಕೆ ಮಾಡಲಿಲ್ಲ? ಇಡೀ ಭಾರತ ಮೋದಿಜಿಯವರ ಬೆಂಬಲವನ್ನು ಪಡೆಯುತ್ತಿದೆ. ಅವರು ಯಾವಾಗಲೂ ಅಯೋಧ್ಯೆ ವಿವಾದವನ್ನು ವಿವಾದವಾಗಿಯೇ ಉಳಿಯಲು ಬಯಸುತ್ತಿದ್ದರು. ತಮ್ಮ ಜೀವನದುದ್ದಕ್ಕೂ ಕಾಶಿಯ ಕಿರಿದಾದ ಬೀದಿಗಳಲ್ಲಿ ಗಾಂಧೀಜಿಯವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ 1916 ರಲ್ಲಿ, ಗಾಂಧೀಜಿ ಕಾಶಿಯ ಕಿರಿದಾದ ಬೀದಿಗಳ ಬಗ್ಗೆ ಕಠಿಣವಾದ ಟೀಕೆಯನ್ನು ಮಾಡಿದ್ದರು ಎಂಬುದನ್ನು ತಿಳಿಬೇಕು ಎಂದು ನುಡಿದರು.

    ಕಾಂಗ್ರೆಸ್‌ ನಾಯಕರ ಭಾರತ್‌ ಜೋಡೋ ರಾಷ್ಟ್ರವ್ಯಾಪ್ತಿ ಅಭಿಯಾನ ವಾಸ್ತವವಾಗಿ ʻಭಾರತ್‌ ತೋಡೋ ಅಭಿಯಾನʼ. ದೇಶದ ಹೊರಗೆ ಹೋಗಿ ಭಾರತವನ್ನು ಟೀಕಿಸುತ್ತಾರೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಹನಿಟ್ರ್ಯಾಪ್‌ ಪ್ರಕರಣ ತನಿಖೆಗೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ಸುಪ್ರೀಂ