Tag: Uttar Pradesh Election

  • UPಯಲ್ಲಿ ಮತ ಎಣಿಕೆಗೂ ಮುನ್ನ ಚುನಾವಣಾ ಆಯೋಗಕ್ಕೆ ಎಸ್‌ಪಿ ಪತ್ರ

    UPಯಲ್ಲಿ ಮತ ಎಣಿಕೆಗೂ ಮುನ್ನ ಚುನಾವಣಾ ಆಯೋಗಕ್ಕೆ ಎಸ್‌ಪಿ ಪತ್ರ

    ಲಕ್ನೋ: ವಾರಣಾಸಿಯಲ್ಲಿ ಇವಿಎಂ ದುರ್ಬಳಕೆಯಾಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಆರೋಪಕ್ಕೆ ಸಂಬಂಧಿಸಿದಂತೆ, ಚುನಾವಣಾ ಆಯೋಗಕ್ಕೆ ಸಮಾಜವಾದಿ ಪಕ್ಷ ಪತ್ರವೊಂದನ್ನು ಬರೆದಿದೆ.

    ಎಲ್ಲಾ ಕ್ಷೇತ್ರಗಳಿಗೆ ಮತ ಎಣಿಕೆ ಪ್ರಕ್ರಿಯೆಯನ್ನು ವೆಬ್‌ಕಾಸ್ಟಿಂಗ್‌ ಮಾಡಬೇಕು. ಅದಕ್ಕೆ ಸಂಬಂಧಿಸಿದ ಲಿಂಕ್‌ ಅನ್ನು ಚುನಾವಣಾ ಆಯೋಗ, ಮುಖ್ಯ ಚುನಾವಣಾ ಆಯುಕ್ತರು, ಮತಗಟ್ಟೆ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಎಸ್‌ಪಿ ಒತ್ತಾಯಿಸಿದೆ. ಇದನ್ನೂ ಓದಿ: EVM ಪ್ರೋಟೋಕಾಲ್‍ನಲ್ಲಿ ಲೋಪ: ಚುನಾವಣಾಧಿಕಾರಿಯ ವೀಡಿಯೋ ಹಂಚಿಕೊಂಡ ಎಸ್‍ಪಿ

    ಇದರಿಂದ ರಾಜಕೀಯ ಪಕ್ಷಗಳು ಎಣಿಕೆ ಪ್ರಕ್ರಿಯೆಯನ್ನು ಲೈವ್‌ ವೀಕ್ಷಿಸಬಹುದು. ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ಸ್ವತಂತ್ರವಾಗಿ ನಡೆಸಬಹುದು ಎಂದು ಮನವಿಯಲ್ಲಿ ಉಲ್ಲೇಖಿಸಿದೆ.

    ವಾರಣಾಸಿಯ ಮತಗಟ್ಟೆಯಿಂದ ಇವಿಎಂಗಳನ್ನು ಸಾಗಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿತ್ತು. ಸ್ಥಳೀಯ ಅಭ್ಯರ್ಥಿಗಳ ಗಮನಕ್ಕೂ ತಾರದೇ ಇವಿಎಂಗಳನ್ನು ಅಧಿಕಾರಿಗಳು ಸಾಗಾಟ ಮಾಡುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಗಂಭೀರ ಆರೋಪ ಮಾಡಿದ್ದರು. ಇದನ್ನೂ ಓದಿ: ವಾರಣಾಸಿಯಲ್ಲಿ EVM ಕಳವು: ಅಖಿಲೇಶ್‌ ಯಾದವ್‌ ಗಂಭೀರ ಆರೋಪ

    ಸಮಾಜವಾದಿ ಪಕ್ಷ ಅಯೋಧ್ಯೆಯಲ್ಲಿ ಜಯಗಳಿಸಲಿದೆ. ಹೀಗಾಗಿ ಭಯದಿಂದ ಬಿಜೆಪಿ ಈ ರೀತಿಯ ಕೆಲಸ ಮಾಡಿಸುತ್ತಿದೆ ಎಂದು ಯಾದವ್‌ ಆರೋಪಿಸಿದ್ದರು. ಆದರೆ ಈ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ. ಇದನ್ನೂ ಓದಿ: ಬಾಂಗ್ಲಾ ವಿದ್ಯಾರ್ಥಿಗಳ ರಕ್ಷಣೆ – ಮೋದಿಗೆ ಧನ್ಯವಾದ ತಿಳಿಸಿದ ಹಸೀನಾ

  • ಚುನಾವಣೋತ್ತರ ಸಮೀಕ್ಷೆ- ಉತ್ತರ ಪ್ರದೇಶದಲ್ಲಿ ಬಿಜೆಪಿ ಮೇಲುಗೈ

    ಚುನಾವಣೋತ್ತರ ಸಮೀಕ್ಷೆ- ಉತ್ತರ ಪ್ರದೇಶದಲ್ಲಿ ಬಿಜೆಪಿ ಮೇಲುಗೈ

    ನವದೆಹಲಿ: ಉತ್ತರ ಪ್ರದೇಶದಲ್ಲಿ ಕಡೇ ಹಂತದ ಮತದಾನ ಪ್ರಕ್ರಿಯೆ ಇಂದು ಮುಕ್ತಾಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ. ಪಂಚರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್‌, ಗೋವಾ, ಮಣಿಪುರ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ತೀವ್ರ ಕುತೂಹಲ ಮೂಡಿಸಿರುವ ಉತ್ತರ ಪ್ರದೇಶದಲ್ಲಿ ಚುನಾವಣೆ ಸಮೀಕ್ಷೆ ಪ್ರಕಾರ ಬಿಜೆಪಿ ಗೆಲುವು ಸಾಧಿಸಲಿದೆ.

    ಉತ್ತರ ಪ್ರದೇಶ– ವಿವಿಧ ಸಮೀಕ್ಷೆಗಳ ಫಲಿತಾಂಶ

    ರಿಪಬ್ಲಿಕ್‌ ಟಿ.ವಿ
    ಬಿಜೆಪಿ 240
    ಕಾಂಗ್ರೆಸ್‌ 4
    ಎಸ್‌ಪಿ+ 140
    ಬಿಎಸ್‌ಪಿ 17

    ಪಿ-ಮಾರ್ಕ್‌
    ಬಿಜೆಪಿ-240
    ಎಸ್‌ಪಿ+-140
    ಬಿಎಸ್‌ಪಿ-17
    ಕಾಂಗ್ರೆಸ್-04
    ಇತರೆ-02

    ಪೋಲ್‌ಸ್ಟ್ರೈಟ್‌
    ಬಿಜೆಪಿ-211ರಿಂದ 225
    ಎಸ್‌ಪಿ+-146-160
    ಬಿಎಸ್‌ಪಿ-14-24
    ಕಾಂಗ್ರೆಸ್-4-06 ‌
    ಇತರೆ-00

    ಸಿಎನ್‌ಎನ್‌ ನ್ಯೂಸ್‌ 18
    ಬಿಜೆಪಿ 262–277
    ಕಾಂಗ್ರೆಸ್‌ 3–8
    ಎಸ್‌ಪಿ+ 119–134
    ಬಿಎಸ್‌ಪಿ 7–15

    ಇಟಿಜಿ ರಿಸರ್ಚ್‌
    ಬಿಜೆಪಿ 230–245
    ಕಾಂಗ್ರೆಸ್‌ 2–6
    ಎಸ್‌ಪಿ+ 150–165
    ಬಿಎಸ್‌ಪಿ 5–10

    ನ್ಯೂಸ್‌ ಎಕ್ಸ್‌– ಪೋಲ್‌ಸ್ಟರ್‌
    ಬಿಜೆಪಿ 211–245
    ಕಾಂಗ್ರೆಸ್‌ 4–6
    ಎಸ್‌ಪಿ+ 146–160
    ಬಿಎಸ್‌ಪಿ 14–24

  • ಬಿಜೆಪಿ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ನಡೆಸಿದರು: ಮಮತಾ ಬ್ಯಾನರ್ಜಿ

    ಬಿಜೆಪಿ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ನಡೆಸಿದರು: ಮಮತಾ ಬ್ಯಾನರ್ಜಿ

    ಲಕ್ನೋ: ಬಿಜೆಪಿ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದಾರೆ.

    ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಪರವಾಗಿ ಮಮತಾ ಬ್ಯಾನರ್ಜಿ ಪ್ರಚಾರ ನಡೆಸುತ್ತಿದ್ದಾರೆ. ಗುರುವಾರ ವಾರಣಾಸಿಯಲ್ಲಿ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಭಾರತೀಯರು ಸಿಲುಕಿರುವಾಗ, ಮೋದಿ ಯುಪಿ ಚುನಾವಣಾ ಸಭೆಗಳಲ್ಲಿ ನಿರತರಾಗಿದ್ದಾರೆ: ಮಮತಾ ಬ್ಯಾನರ್ಜಿ ಕಿಡಿ

    ಈ ಹಿಂದೆಯೂ ನನ್ನ ಮೇಲೆ ಹಲವಾರು ಬಾರಿ ದಾಳಿ ನಡೆದಿದೆ. ದೊಣ್ಣೆಯಿಂದ ಹೊಡೆದಿದ್ದಾರೆ. ಆದರೆ ನಾನು ಎಂದಿಗೂ ತಲೆ ಬಾಗಿಲ್ಲ. ನಾನು ಹೇಡಿಯಲ್ಲ, ಹೋರಾಟಗಾರ್ತಿ ಎಂದು ತಿಳಿಸಿದ್ದಾರೆ.

    ನಾನು ವಾರಣಾಸಿಗೆ ಬಂದಾಗ ಬಿಜೆಪಿ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬೆಳವಣಿಗೆ ಬಿಜೆಪಿ ಅಧಿಕಾರ ಕಳೆದುಕೊಳ್ಳುವುದನ್ನು ಸೂಚಿಸುತ್ತದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನವಾಬ್ ಮಲಿಕ್ ED ಕಸ್ಟಡಿ ಅವಧಿ ವಿಸ್ತರಣೆ – ಮಾ. 7ರವರೆಗಿಲ್ಲ ಬಿಡುಗಡೆ ಭಾಗ್ಯ

    ಸಮಾಜವಾದಿ ಪಕ್ಷದ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ಬ್ಯಾನರ್ಜಿ ಅವರು ಬಲಪಂಥೀಯ ಗುಂಪು, ಹಿಂದೂ ಯುವ ವಾಹಿನಿಯ ಪ್ರತಿಭಟನೆ ಬಿಸಿ ಎದುರಿಸಿದರು. ಸುಮಾರು ಎರಡು ದಶಕಗಳ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸ್ಥಾಪಿಸಿದ ಬಲಪಂಥೀಯ ಗುಂಪಿನ ಸದಸ್ಯರು, ಗಂಗಾ ಆರತಿಯಲ್ಲಿ ಪಾಲ್ಗೊಳ್ಳಲು ದಶಾಶ್ವಮೇಧ ಘಾಟ್‌ಗೆ ಪ್ರಯಾಣಿಸುತ್ತಿದ್ದಾಗ ಮಮತಾ ಬ್ಯಾನರ್ಜಿ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದ್ದರು.

  • ಅರಮನೆಯಲ್ಲಿ ಐಷಾರಾಮಿ ಜೀವನ ನಡೆಸುವ ರಾಜವಂಶಸ್ಥರಿಗೆ ಬಡವರ ಕಷ್ಟ ಅರ್ಥವಾಗಲ್ಲ: ಮೋದಿ

    ಅರಮನೆಯಲ್ಲಿ ಐಷಾರಾಮಿ ಜೀವನ ನಡೆಸುವ ರಾಜವಂಶಸ್ಥರಿಗೆ ಬಡವರ ಕಷ್ಟ ಅರ್ಥವಾಗಲ್ಲ: ಮೋದಿ

    ಲಕ್ನೋ: ರಾಜವಂಶಸ್ಥರು ಅರಮನೆಗಳಲ್ಲಿ ವೈಭೋಗದ ಜೀವನ ನಡೆಸುತ್ತಾರೆ. ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಾರೆ. ಅವರಿಗೆ ಬಡವರ ಕಷ್ಟ ಅರ್ಥವಾಗಲ್ಲ ಎಂದು ಹೇಳಿದರು.

    ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಘಾಜಿಪುರದ ರ‍್ಯಾಲಿಯಲ್ಲಿ ಮಾತನಾಡಿದ ಅವರು, 100 ವರ್ಷಗಳಲ್ಲೇ ಅತ್ಯಂತ ಭೀಕರ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಸರ್ಕಾರ ಉಚಿತವಾಗಿ ಪಡಿತರ ನೀಡುವ ಮೂಲಕ ಯಾರು ಸಹ ಖಾಲಿ ಹೊಟ್ಟೆಯಲ್ಲಿ ಮಲಗಲು ಬಿಟ್ಟಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬೆಳಗ್ಗೆಯಿಂದ ವಾಟ್ಸಪ್ ಸಂದೇಶಕ್ಕೆ ತಮ್ಮನಿಂದ ಉತ್ತರ ಬಂದಿಲ್ಲ: ವಿದ್ಯಾರ್ಥಿ ಸಹೋದರ

    ಘಾಜಿಪುರ ಈ ದೇಶಕ್ಕೆ ಅನೇಕ ಮಹಾನ್‌ ವ್ಯಕ್ತಿಗಳನ್ನು ನೀಡಿದೆ ಎಂದು ಸ್ಮರಿಸಿದ ಪ್ರಧಾನಿ ಮೋದಿ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಆಗಿ ಸೇವೆ ಸಲ್ಲಿಸುತ್ತಿರುವ ಘಾಜಿಪುರ ಮೂಲದ ಮನೋಜ್‌ ಸಿನ್ಹಾ ಅವರ ಹೆಸರನ್ನು ಪ್ರಸ್ತಾಪಿಸಿದರು.

    ಪ್ರತಿಯೊಂದು ಮತವೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಲು ಸಹಕಾರಿಯಾಗಲಿದೆ. ಅಭಿವೃದ್ಧಿ ಕೆಲಸ ಮಾಡಲು ನಮಗೆ ಹೊಸ ಶಕ್ತಿ ನೀಡಿದಂತಾಗುತ್ತದೆ. ಪ್ರತಿ ಮತವೂ ಪರಿವಾರವಾದಿ ಪಕ್ಷಗಳಿಗೆ ತಕ್ಕ ಉತ್ತರ ನೀಡಲಿದೆ ಎಂದರು. ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನ ನಿಲ್ಲಲ್ಲ: ಮೋದಿ

    ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಫೆ.10ರಿಂದ ವಿವಿಧ ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಮಾ.7ರಂದು ಘಾಜಿಪುರ ಜಿಲ್ಲೆಗೆ ಮತದಾನ ನಡೆಯಲಿದೆ.

  • ಸೇನೆಯಲ್ಲಿ ನೇಮಕಾತಿ ಆರಂಭಿಸಿ ಎಂದು ಕೂಗಿ ರಕ್ಷಣಾ ಸಚಿವರ ಭಾಷಣಕ್ಕೆ ಯುವಕರು ಅಡ್ಡಿ

    ಸೇನೆಯಲ್ಲಿ ನೇಮಕಾತಿ ಆರಂಭಿಸಿ ಎಂದು ಕೂಗಿ ರಕ್ಷಣಾ ಸಚಿವರ ಭಾಷಣಕ್ಕೆ ಯುವಕರು ಅಡ್ಡಿ

    ಲಕ್ನೋ: ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಸಮಾರಂಭವೊಂದರಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಭಾಷಣ ಮಾಡುವಾಗ, ʻಸೇನೆಯಲ್ಲಿ ಉದ್ಯೋಗಾವಕಾಶ ಕೊಡಿʼ ಎಂದು ಯುವಕರ ಗುಂಪೊಂದು ಕೂಗಿ ಭಾಷಣಕ್ಕೆ ಅಡ್ಡಿಪಡಿಸಿರುವ ಪ್ರಸಂಗ ನಡೆದಿದೆ.

    ಗೊಂಡಾ ಜಿಲ್ಲೆಯಲ್ಲಿ ರ‍್ಯಾಲಿ ಆಯೋಜಿಸಲಾಗಿತ್ತು. ಭಾಷಣಕ್ಕೆ ವೇದಿಕೆ ಸಿದ್ಧವಾಗಿತ್ತು. ರಾಜನಾಥ್‌ ಸಿಂಗ್‌ ಅವರು ಮಾತನಾಡಲು ಆರಂಭಿಸಿದಾಗ, ಯುವಕರ ಗುಂಪು ಘೋಷಣೆ ಕೂಗಿ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ. ಸೇನೆಯಲ್ಲಿ ನೇಮಕ ಮಾಡಿಕೊಳ್ಳಿ ಎಂದು ಯುವಕ ಕೂಗಿ ಕೇಳಿದ್ದಾರೆ.  ಇದನ್ನೂ ಓದಿ: ಉಕ್ರೇನ್‍ನ ಸಮುದ್ರ, ಭೂ-ಆಧಾರಿತ ಪ್ರದೇಶದ ಮೇಲೆ ರಷ್ಯಾ ದಾಳಿ!

    ʼಸೇನಾ ಭಾರತಿ ಚಲು ಕರೋ (ಸೇನೆಯಲ್ಲಿ ನೇಮಕಾತಿ ಆರಂಭಿಸಿ), ಹಮಾರಿ ಮನ್‌ಜೆ ಪೂರಿ ಕರೋ (ನಮ್ಮ ಬೇಡಿಕೆಯನ್ನು ಈಡೇರಿಸಿ) ಎಂದು ಯುವಕರು ಘೋಷಣೆ ಮೂಲಕ ಬೇಡಿಕೆ ಇಟ್ಟಿದ್ದಾರೆ. ಯುವಕರ ಬೇಡಿಕೆಯನ್ನು ಅರಿತ ರಕ್ಷಣಾ ಸಚಿವರು, ಚಿಂತಿಸಬೇಡಿ.. ಶೀಘ್ರವೇ ಕ್ರಮವಹಿಸುತ್ತೇವೆ ಎಂದು ಭರವಸೆಯ ನುಡಿಯನ್ನಾಡಿ, ಯುವಕರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾರೆ.

    ನಿಮ್ಮ ಚಿಂತೆ ನಮಗೂ ಇದೆ. ಕೊರೊನಾ ಸಾಂಕ್ರಾಮಿಕ ಕಾರಣದಿಂದಾಗಿ ಕೆಲವು ತೊಂದರೆಗಳಿವೆ ಎಂದು ಯುವಕರಿಗೆ ಮನವರಿಕೆ ಮಾಡಲು ಸಚಿವರು ಯತ್ನಿಸಿದ್ದಾರೆ. ಸಚಿವರಿಂದ ಈ ಮಾತು ಬರುತ್ತಿದ್ದಂತೆ, ಯುವಕರೆಲ್ಲರೂ ಭಾರತ್‌ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಪಂಜಾಬ್ ಚುನಾವಣೆಗೂ ಮುನ್ನಾ ದಿನ 12,430 ಹೊಸ ಸ್ಮಾರ್ಟ್ ತರಗತಿ ಉದ್ಘಾಟಿಸಿದ ಕೇಜ್ರಿವಾಲ್

    ಬಿಜೆಪಿ ಕಳೆದ ವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ರಾಜ್ಯದ ಪ್ರತಿ ಕುಟುಂಬದ ಕನಿಷ್ಠ ಒಬ್ಬ ಸದಸ್ಯನಿಗೆ ಉದ್ಯೋಗ ಅಥವಾ ಸ್ವಯಂ ಉದ್ಯೋಗ ಅವಕಾಶಗಳ ಭರವಸೆ ನೀಡಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಈಗಾಗಲೇ ಆರಂಭವಾಗಿದ್ದು, ವಿವಿಧ ಹಂತಗಳಲ್ಲಿ ಮತದಾನ ನಡೆಯಲಿದೆ. ಮಾ.10 ರಂದು ಫಲಿತಾಂಶ ಪ್ರಕಟವಾಗಲಿದೆ.

  • ಸಮಾಜವಾದಿ ಪಕ್ಷದವರು ರಾಮಭಕ್ತರಿಗೆ ಗುಂಡು ಹಾರಿಸಲಿಲ್ಲವೇ: ಜೆಪಿ ನಡ್ಡಾ ಪ್ರಶ್ನೆ

    ಸಮಾಜವಾದಿ ಪಕ್ಷದವರು ರಾಮಭಕ್ತರಿಗೆ ಗುಂಡು ಹಾರಿಸಲಿಲ್ಲವೇ: ಜೆಪಿ ನಡ್ಡಾ ಪ್ರಶ್ನೆ

    ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ವಿರೋಧ ಪಕ್ಷಗಳ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕಿಡಿಕಾರಿದ್ದಾರೆ.

    ಸುಲ್ತಾನಪುರದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಜೆಪಿ ನಡ್ಡಾ, ಸಮಾಜವಾದಿ ಪಕ್ಷದವರು ರಾಮಭಕ್ತರ ಮೇಲೆ ಗುಂಡು ಹಾರಿಸಲಿಲ್ಲವೇ? ರಾಮ ಜನ್ಮಭೂಮಿ ವಿವಾದವನ್ನು ಕಾಂಗ್ರೆಸ್‌ ಪಕ್ಷದವರು ಮುಂದೂಡಿರಲಿಲ್ಲವೇ? ಬಿಜೆಪಿಗೆ ಲಾಭವಾಗುತ್ತೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಆಯೋಧ್ಯೆ ರಾಮಮಂದಿರ ನಿರ್ಧಾರವನ್ನು ತಡೆ ಹಿಡಿಯಲು ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಹೇಳುತ್ತಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮುಲಾಯಂ ಸಿಂಗ್ ಯಾದವ್ ಮನಃಪೂರ್ವಕವಾಗಿ ಸಮಾಜವಾದಿ ಪಕ್ಷದೊಂದಿಗಿಲ್ಲ: ಬಿಜೆಪಿ

    ತ್ರಿವಳಿ ತಲಾಕ್‌ ನಿಷೇಧಿಸಲು ಸುಪ್ರೀಂ ಕೋರ್ಟ್‌ ಆದೇಶಿಸಿತು. ಅದನ್ನು ತೆಗೆಯುವಷ್ಟು ತಾಕತ್ತು ಯಾವ ರಾಜಕೀಯ ಪಕ್ಷಕ್ಕೂ ಇರಲಿಲ್ಲ. ಇದನ್ನು ಹೋಗಲಾಡಿಸಲು ಮತ್ತು ಮುಸ್ಲಿಂ ಸಹೋದರಿಯರಿಗೆ ಸ್ವಾತಂತ್ರ್ಯ ನೀಡಲು ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಸುಪ್ರೀಂ ಆದೇಶವನ್ನು ತಂದರು ಎಂದು ತಿಳಿಸಿದ್ದಾರೆ.

    ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಫೆ.10 ರಿಂದ ಆರಂಭವಾಗಿದ್ದು, ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾ.10 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: 2023ರ ಹೊತ್ತಿಗೆ ರಾಮಮಂದಿರ ಉದ್ಘಾಟನೆಗೆ ಸಿದ್ಧ: ಯೋಗಿ ಆದಿತ್ಯನಾಥ್‌

  • ಬಾಂಬ್‌ ಸ್ಫೋಟ ಪ್ರಕರಣದ ಅಪರಾಧಿಯ ಸಂಬಂಧಿ ಜೊತೆ ಅಖಿಲೇಶ್‌ ಮತಯಾಚನೆ: ಯೋಗಿ ಆದಿತ್ಯನಾಥ್

    ಬಾಂಬ್‌ ಸ್ಫೋಟ ಪ್ರಕರಣದ ಅಪರಾಧಿಯ ಸಂಬಂಧಿ ಜೊತೆ ಅಖಿಲೇಶ್‌ ಮತಯಾಚನೆ: ಯೋಗಿ ಆದಿತ್ಯನಾಥ್

    ಲಕ್ನೋ: 2008ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿಯೊಬ್ಬನ ಮನೆಯ ಸಂಬಂಧಿ ಜೊತೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಮತಯಾಚಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆರೋಪಿಸಿದ್ದಾರೆ.

    ಅಹಮದಾಬಾದ್‌ ನ್ಯಾಯಾಲಯವು 2008ರ ಸರಣಿ ಸ್ಫೋಟ ಪ್ರಕರಣದಲ್ಲಿ 38 ಭಯೋತ್ಪಾದಕರಿಗೆ ಶಿಕ್ಷೆಯ ಪ್ರಮಾಣ ಘೋಷಿಸಿತು. ಅಪರಾಧಿಗಳಿಗೆ ಮರಣ ದಂಡನೆ ಮತ್ತು ಜೀವಾವಧಿ ಶಿಕ್ಷೆ ನೀಡಿತು. ಅವರಲ್ಲಿ ಉತ್ತರ ಪ್ರದೇಶದ ಕೆಲವು ಭಯೋತ್ಪಾದಕರೂ ಇದ್ದಾರೆ. ಅವರಲ್ಲಿ ಒಬ್ಬ ಅಪರಾಧಿಯ ಕುಟುಂಬದ ಸದಸ್ಯನೊಬ್ಬ ಎಸ್‌ಪಿ ಮುಖ್ಯಸ್ಥರೊಂದಿಗೆ ಪಕ್ಷಕ್ಕೆ ಮತ ಕೇಳುತ್ತಿರುವುದು ಕಂಡುಬಂದಿದೆ ಎಂದು ಯೋಗಿ ತಿಳಿಸಿದ್ದಾರೆ. ಇದನ್ನೂ ಓದಿ: ಅಹ್ಮದಾಬಾದ್ ಸರಣಿ ಬಾಂಬ್ ಸ್ಫೋಟ – 38 ಮಂದಿಗೆ ಮರಣ ದಂಡನೆ, 11 ಮಂದಿಗೆ ಜೀವಾವಧಿ ಶಿಕ್ಷೆ

    ಸಮಾಜವಾದಿ ಪಕ್ಷವನ್ನು ಬೆಂಬಲಿಸುವುದು ಎಂದರೆ ಭಯೋತ್ಪಾದಕರಿಗೆ ಬೆಂಬಲ ನೀಡಿದಂತೆ. ಎಲ್ಲವೂ ಬದಲಾಗಿದೆ ಆದರೆ ಮುಲಾಯಂ ಸಿಂಗ್‌ ಯಾದವ್‌ ಸ್ಥಾಪಿಸಿದ ಪಕ್ಷವು ಹಾಗೆಯೇ ಉಳಿದಿದೆ ಎಂದು ಟೀಕಿಸಿದ್ದಾರೆ.

    ಹಿಂದಿನ ಸರ್ಕಾರಗಳ ಆಡಳಿತದಲ್ಲಿ ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಬಡವರು ಹಸಿವಿನಿಂದ ಸಾಯುತ್ತಿದ್ದರು. ಜಂಗಲ್‌ ರಾಜ್‌ ಇತ್ತು. ಅಪರಾಧಿಗಳು ಅಧಿಕಾರ ನಡೆಸುತ್ತಿದ್ದರು. ಪೊಲೀಸ್‌ ಠಾಣೆಗಳನ್ನು ರೌಡಿಶೀಟರ್‌ಗಳು ನಿಯಂತ್ರಿಸುತ್ತಿದ್ದರು. ಉದ್ಯಮಗಳನ್ನು ನಾಶಪಡಿಸಲಾಗಿತ್ತು. ಯುವಕರು ನಿರುದ್ಯೋಗಿಗಳಾಗಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮತಗಟ್ಟೆಯಲ್ಲಿ ತೊಂದರೆಯಾಗಿದ್ದಕ್ಕೆ ಕ್ಷಮೆ ಕೇಳಿದ ತಮಿಳು ನಟ ವಿಜಯ್

    bomb blast

    ಅಹಮದಾಬಾದ್‌ ಸರಣಿ ಸ್ಫೋಟ ಪ್ರಕರಣದ ವಿಚಾರಣೆ ನಿನ್ನೆ ನಡೆಸಲಾಯಿತು. ಸ್ಫೋಟದಲ್ಲಿ 56 ಜನರ ಸಾವಿಗೆ ಕಾರಣವಾದ 36 ಅಪರಾಧಿಗಳಿಗೆ ಮರಣ ದಂಡನೆ, 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್‌ ತೀರ್ಪು ನೀಡಿದೆ.

  • ನಾವು ಕಬ್ಬಿನ ಬಗ್ಗೆ ಮಾತಾಡಿದ್ರೆ, ಅವ್ರು ಜಿನ್ನಾ ಕುರಿತು ಮಾತನಾಡ್ತಾರೆ: ಕಾಂಗ್ರೆಸ್‌ ವಿರುದ್ಧ ಯೋಗಿ ವಾಗ್ದಾಳಿ

    ನಾವು ಕಬ್ಬಿನ ಬಗ್ಗೆ ಮಾತಾಡಿದ್ರೆ, ಅವ್ರು ಜಿನ್ನಾ ಕುರಿತು ಮಾತನಾಡ್ತಾರೆ: ಕಾಂಗ್ರೆಸ್‌ ವಿರುದ್ಧ ಯೋಗಿ ವಾಗ್ದಾಳಿ

    ಲಕ್ನೋ: ಸಮಾಜವಾದಿ ಪಕ್ಷ (ಎಸ್‌ಪಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಕಾಂಗ್ರೆಸ್‌ ಇರುವುದು ತಮ್ಮ ಕುಟುಂಬದವರ ರಕ್ಷಣೆಗಾಗಿ ಮತ್ತು ರಾಜಪ್ರಭುತ್ವವನ್ನು ಪ್ರೋತ್ಸಾಹಿಸಲು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಿಡಿಕಾರಿದ್ದಾರೆ.

    ಶಹಜಹನ್‌ಪುರದಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಡಬಲ್‌ ಎಂಜಿನ್‌ ಸರ್ಕಾರ ಡಬಲ್‌ ವೇಗದಲ್ಲಿ ಕೆಲಸ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬದೊಳಗೆ ಹೊಸ ಜಿಲ್ಲೆಗಳ ರಚನೆ: ಜಗನ್ ಮೋಹನ್ ರೆಡ್ಡಿ

    ಎಸ್‌ಪಿ, ಬಿಜೆಪಿ, ಕಾಂಗ್ರೆಸ್‌ ತಮ್ಮ ಕುಟುಂಬದವರಿಗಾಗಿ ಇದೆ. ನಾವು ರಾಷ್ಟ್ರವಾದದ ಬಗ್ಗೆ ಮಾತನಾಡಿದರೆ ಅವರು ಜಾತಿವಾದದ ಬಗ್ಗೆ ಮಾತನಾಡುತ್ತಾರೆ. ನಾವು ಅಭಿವೃದ್ಧಿ ಕುರಿತು ಮಾತನಾಡಿದರೆ, ಅವರು ಧರ್ಮ ಮತ್ತು ಸ್ಮಶಾನಗಳ ಬಗ್ಗೆ ಮಾತನಾಡುತ್ತಾರೆ. ನಾವು ಕಬ್ಬಿನ ಬಗ್ಗೆ ಮಾತನಾಡಿದರೆ ಅವರು ಜಿನ್ನಾ ಬಗ್ಗೆ ಮಾತನಾಡುತ್ತಾರೆ ಎಂದು ಕುಟುಕಿದ್ದಾರೆ.

    ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಕೋವಿಡ್‌-19 ಲಸಿಕೆ ಅಪಪ್ರಚಾರ ಮಾಡುವವರು, ಅಪರಾಧವನ್ನು ಉತ್ತೇಜಿಸುವ, ಮಾಫಿಯಾ ರಾಜ್‌ಗೆ ಪ್ರೋತ್ಸಾಹ ನೀಡುವವರಿಗೆ ಮತ ಹಾಕಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ತಮ್ಮದೇ ಆದ ನೈತಿಕ ಜವಾಬ್ದಾರಿ ಇದೆ: ಆಶಿಶ್ ಮಿಶ್ರಾ ಜಾಮೀನಿಗೆ ಪ್ರಿಯಾಂಕಾ ಕಿಡಿ

    ಮಾಜಿ ಸಿಎಂ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ (ಅಖಿಲೇಶ್‌ ಯಾದವ್‌) ಎಲ್ಲಿ ಅಭಿವೃದ್ಧಿ ಮಾಡಿದ್ದಾರೆ ಎಂದು ನಾನು ಕೇಳಿದೆ. ಅವರು ಸ್ಮಶಾನಗಳ ಗೋಡೆಗಳನ್ನು ಮಾಡಿದ್ದಾರಂತೆ. ಇಂದು ಬಿಜೆಪಿ 1 ಕೋಟಿ ಯುವಕರಿಗೆ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ಗಳನ್ನು ವಿತರಿಸುತ್ತಿರುವಾಗ, ಸಮಾಜವಾದಿ ಪಕ್ಷವು ಈ ಗ್ಯಾಜೆಟ್‌ಗಳನ್ನು ಯುವಕರಿಗೆ ವಿತರಿಸಬಾರದು ಎಂದು ಚುನಾವಣಾ ಆಯೋಗಕ್ಕೆ ವರದಿ ನೀಡಿದೆ. ಚಿಂತಿಸಬೇಡಿ, ನಾವು ಮತ್ತೆ ಅಧಿಕಾರಕ್ಕೆ ಬಂದರೆ ಖಂಡಿತಾ ನೀಡುತ್ತೇವೆ. ಅದನ್ನು 2 ಕೋಟಿ ಯುವಕರಿಗೆ ವಿತರಿಸುತ್ತೇವೆ. ನಮ್ಮ ಯುವಕರು ಬುದ್ಧವಂತರಾಗುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಅಧಿಕಾರಕ್ಕೆ ಬಂದ್ರೆ ಟ್ರಿಪಲ್‌ ರೈಡಿಂಗ್‌ಗೆ ಅವಕಾಶ: SBSP ಭರವಸೆ

    ಅಧಿಕಾರಕ್ಕೆ ಬಂದ್ರೆ ಟ್ರಿಪಲ್‌ ರೈಡಿಂಗ್‌ಗೆ ಅವಕಾಶ: SBSP ಭರವಸೆ

    ಲಕ್ನೋ: ಪಂಚರಾಜ್ಯಗಳ ಚುನಾವಣೆಯ ಕೇಂದ್ರಬಿಂದುವಾಗಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ತಮ್ಮ ಪ್ರಣಾಳಿಕೆಗಳಲ್ಲಿ ಭರವಸೆಗಳ ಮಹಾಪೂರವನ್ನೇ ಹರಿಸಿವೆ. ಈ ನಡುವೆ ಸಮಾಜವಾದಿ ಪಕ್ಷದೊಂದಿಗೆ (ಎಸ್‌ಪಿ) ಮೈತ್ರಿ ಸಾಧಿಸಿರುವ ಸುಹೆಲ್‌ದೇವ್‌ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ) ಅಚ್ಚರಿ ಮೂಡಿಸುವಂತಹ ಭರವಸೆಯೊಂದನ್ನು ನೀಡಿದೆ.

    ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಬೈಕ್‌ಗಳಲ್ಲಿ ಟ್ರಿಪಲ್‌ ರೈಡ್‌ಗೆ ಅನುಮತಿ ನೀಡಲಾಗುವುದು ಎಂದು ಎಸ್‌ಬಿಎಸ್‌ಪಿ ಅಧ್ಯಕ್ಷ ಹಾಗೂ ಯುಪಿ ಮಾಜಿ ಸಚಿವ ಓಂ ಪ್ರಕಾಶ್‌ ರಾಜ್‌ಭರ್‌ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಬ್ರಿಟಿಷರು ಬಿಜೆಪಿ ರೂಪದಲ್ಲಿ ಮತ್ತೆ ಭಾರತಕ್ಕೆ ಬಂದಿದ್ದಾರೆ: ಲಾಲೂ ಪ್ರಸಾದ್ ಯಾದವ್

    ಬೈಕ್‌ಗಳಲ್ಲಿ ಟ್ರಪಲ್‌ ರೈಡ್‌ಗೆ ಅನುಮತಿ ನೀಡುತ್ತೇವೆ. ಅಂತಹವರಿಗೆ ಯಾವುದೇ ದಂಡ ವಿಧಿಸುವುದಿಲ್ಲ ಎಂದು ರಾಜ್‌ಭರ್‌ ತಿಳಿಸಿದ್ದಾರೆ.

    ಸೀಮಿತ ಆಸನ ಸಾಮರ್ಥ್ಯವಿರುವ ರೈಲುಗಳ ಕೋಚ್‌ಗಳಲ್ಲಿ ನೂರಾರು ಜನರು ಪ್ರಯಾಣಿಸುತ್ತಾರೆ. ಅವರಿಗೆ ಸರ್ಕಾರವಾಗಲಿ ಅಥವಾ ರೈಲ್ವೆ ವಿಭಾಗದವರಾಗಲಿ ದಂಡ ಹಾಕುತ್ತಾರೆಯೇ ಎಂದು ರಾಜ್‌ಭರ್‌ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಹಿಜಬ್‌ ವಿವಾದ ಇಲ್ಲ, ನಿಷೇಧ ಪ್ರಸ್ತಾಪವೂ ಇಲ್ಲ: ಗೃಹ ಸಚಿವ

    ಫೆ.10ರಿಂದ ವಿವಿಧ ಹಂತಗಳಲ್ಲಿ ಉತ್ತರ ಪ್ರದೇಶ ಚುನಾವಣೆ ನಡೆಯಲಿದೆ. ಮಾರ್ಚ್‌ 10ಕ್ಕೆ ಚುನಾವಣಾ ಫಲಿತಾಂಶ ಹೊರ ಬೀಳಲಿದೆ.

  • ನಕಲಿ ಸಮಾಜವಾದ: ಅಖಿಲೇಶ್‌ ಯಾದವ್‌ ಪಕ್ಷದ ವಿರುದ್ಧ ಮೋದಿ ವಾಗ್ದಾಳಿ

    ನಕಲಿ ಸಮಾಜವಾದ: ಅಖಿಲೇಶ್‌ ಯಾದವ್‌ ಪಕ್ಷದ ವಿರುದ್ಧ ಮೋದಿ ವಾಗ್ದಾಳಿ

    ಲಕ್ನೋ: ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿದ್ದು, ಪ್ರಬಲ ಪ್ರತಿಸ್ಪರ್ಧಿಯಾಗಿರುವ ಸಮಾಜವಾದಿ ಪಕ್ಷವನ್ನು ಗುರಿಯಾಗಿಸಿ ಬಿಜೆಪಿ ಟೀಕಾಪ್ರಹಾರ ನಡೆಸುತ್ತಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ಸಮಾಜವಾದಿ ಪಕ್ಷ ಮತದಾರರನ್ನು ಪ್ರೇರೇಪಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.

    ಇದು ನಕಲಿ ಸರ್ಕಾರ ವರ್ಸಸ್‌ ಗರೀಬ್‌ ಕ ಸರ್ಕಾರ (ಬಡವರ ಸರ್ಕಾರ) ನಡುವಿನ ಹೋರಾಟ. ಯುಪಿ ರಾಜ್ಯ ಸರ್ಕಾರ, ಬಡವರಿಗೆ ಮನೆ, ಹಿಂದುಳಿದ ವರ್ಗಗಳಿಗಾಗಿ ಯೋಜನೆಗಳು, ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ಎಕ್ಸ್‌ಪ್ರೆಸ್‌ವೇಗಳು, ಹೆಣ್ಣುಮಕ್ಕಳ ವಿವಾಹಕ್ಕೆ ನೆರವು ಮುಂತಾದ ಸೇವಾಕಾರ್ಯಗಳನ್ನು ಮಾಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ ಖಾತೆಯಲ್ಲಿ ರಾಜ್ಯಪಾಲರನ್ನು ಬ್ಲಾಕ್ ಮಾಡಿದ ಮಮತಾ ಬ್ಯಾನರ್ಜಿ

    ಈಚಿನ ದಿನಗಳಲ್ಲಿ ಜನರು ಬಹಳಷ್ಟು ಕನಸು ಕಾಣುತ್ತಿದ್ದಾರೆ. ಕೆಲವರು ಮಾತ್ರ ನಿದ್ರೆ ಮಾಡುತ್ತಲೇ ಕನಸು ಕಾಣುತ್ತಿದ್ದಾರೆ. ಆದರೆ ಯೋಗಿ ಆದಿತ್ಯನಾಥ್‌ ಅವರು ಎಚ್ಚರವಾಗಿದ್ದಾರೆ. ಯುಪಿ ಅಭಿವೃದ್ಧಿಗಾಗಿ ಬದ್ಧರಾಗಿದ್ದಾರೆ ಎಂದು ಮೋದಿ ಬಣ್ಣಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ದೊಡ್ಡ ಸವಾಲಾಗಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌, ರಾಜ್ಯದಲ್ಲಿ ಸರ್ಕಾರ ರಚಿಸುವುದಾಗಿ ಹೇಳಲು ಭಗವಾನ್‌ ಕೃಷ್ಣ ಪ್ರತಿದಿನ ರಾತ್ರಿ ಕನಸಿನಲ್ಲಿ ಬರುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಅವರು ಟಾಂಗ್‌ ನೀಡಿದ್ದಾರೆ. ಇದನ್ನೂ ಓದಿ: ಆರ್ಥಿಕ ಲಾಭಕ್ಕಾಗಿ ಮದ್ಯ ಮಾರಾಟಕ್ಕೆ ಆದ್ಯತೆ ನೀಡುತ್ತಿರುವುದು ದುರದೃಷ್ಟಕರ: ಅಣ್ಣಾ ಹಜಾರೆ