Tag: Uttama prajaakeeya party

  • ನಟ ಉಪೇಂದ್ರ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣಾ ಆಯೋಗ

    ನಟ ಉಪೇಂದ್ರ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣಾ ಆಯೋಗ

    ನ್ನಡದ ರಿಯಲ್ ಸ್ಟಾರ್ ಉಪೇಂದ್ರ (Upendra) ರಾಜಕಾರಣಕ್ಕೆ ಎಂಟ್ರಿ ಕೊಟ್ಟು ಹಲವು ವರ್ಷಗಳೇ ಕಳೆದಿವೆ. ಉತ್ತಮ ಪ್ರಜಾಕೀಯ ಪಾರ್ಟಿ (Uttama Prajaakeeya Party) ಹೆಸರಿನಲ್ಲಿ ಅವರು ಪಕ್ಷವೊಂದನ್ನು ಶುರು ಮಾಡುವ ಮೂಲಕ ರಾಜ್ಯಾದ್ಯಂತ ಪ್ರವಾಸ ಕೂಡ ಮಾಡಿದ್ದಾರೆ. ಈ ಪಕ್ಷದಿಂದ ಈಗಾಗಲೇ ಪಂಚಾಯತಿ ಚುನಾವಣೆಯನ್ನು ಅವರು ಎದುರಿಸಿದ್ದರು. ಈ ಪಕ್ಷದಿಂದ ಪಂಚಾಯತಿ ಚುನಾವಣೆಯಲ್ಲಿ ಒಬ್ಬ ಸದಸ್ಯ ಕೂಡ ಗೆದ್ದಿದ್ದಾನೆ. ಆದರೆ, ಅಧಿಕೃತವಾಗಿ ಈ ಪಕ್ಷಕ್ಕೆ ಚಿಹ್ನೆ ಇರಲಿಲ್ಲ. ಇದೀಗ ಕೇಂದ್ರ ಚುನಾವಣೆ ಆಯೋಗ (Election Commission) ಪಕ್ಷಕ್ಕೆ ಚಿಹ್ನೆ ನೀಡಿದೆ.

    ಉಪೇಂದ್ರ ಅಧ್ಯಕ್ಷರಾಗಿರುವ ಉತ್ತಮ ಪ್ರಜಾಕೀಯ ಪಕ್ಷಕ್ಕೆ ‘ಆಟೋ’ವನ್ನು (Auto) ಚಿಹ್ನೆಯನ್ನಾಗಿ ಕೇಂದ್ರ ಚುನಾವಣೆ ಆಯೋಗ ನೀಡಿದೆ. ಈ ಮೂಲಕ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಅಧಿಕೃತ ಚಿಹ್ನೆ ದೊರೆತಿದೆ. ಹಲವು ವರ್ಷಗಳಿಂದ ತಮ್ಮದೇ ಆದ ಸಿದ್ಧಾಂತ ಮೂಲಕ ಉಪೇಂದ್ರ ತಮ್ಮ ಪಕ್ಷಕ್ಕೆ ಅಭ್ಯರ್ಥಿಗಳನ್ನು ಸೆಳೆಯುತ್ತಿದ್ದಾರೆ. ತಾವು ನೇರವಾಗಿ ಚುನಾವಣೆ ಎದುರಿಸದೇ ಇದ್ದರೂ, ತಮ್ಮ ಅಭ್ಯರ್ಥಿಗಳ ಮೂಲಕ ರಾಜಕೀಯ ಪಡಸಾಲೆಯಲ್ಲಿ ತಮ್ಮ ಕನಸುಗಳನ್ನು ಬಿತ್ತುತ್ತಿದ್ದಾರೆ. ಇದನ್ನೂ ಓದಿ:ಅಪ್ಪು ಹೆಸರಿನಲ್ಲಿ ಮಕ್ಕಳ ಚಿತ್ರೋತ್ಸವ: ಅದ್ಧೂರಿ ಚಾಲನೆ

    ಚುನಾವಣೆ ಎನ್ನುವುದು ಸುಲಭದ ತುತ್ತಲ್ಲ ಎಂದು ಉಪೇಂದ್ರಗೆ ಗೊತ್ತಿದ್ದರೂ, ವಿಭಿನ್ನ ಪ್ರಣಾಳಿಕೆಯ ಮೂಲಕ ಗಮನ ಸೆಳೆದಿದ್ದಾರೆ ಉಪೇಂದ್ರ. ಅವರ ಪ್ರಣಾಳಿಕೆಯ ಅಂಶಗಳು ಜನಪರವಾಗಿವೆ ನಿಜ. ಆದರೆ, ಅವುಗಳು ಜಾರಿಯಾಗುವುದು ತುಂಬಾ ಕಷ್ಟ. ಹಾಗಂತ ಉಪೇಂದ್ರ ಸುಮ್ಮನೆ ಕೂತಿಲ್ಲ. ಸಾಧ್ಯವಾದಷ್ಟು ಅವುಗಳನ್ನು ಜನರಿಗೆ ತಲುಪಿಸುವತ್ತ ನಾನಾ ರೀತಿಯಲ್ಲಿ ಕಸರತ್ತು ಮಾಡುತ್ತಿದ್ದಾರೆ.

    ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತ್ತೆ ಕಾರ್ಯೋನ್ಮುಖರಾಗಿರುವ ಅವರು, ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಭ್ಯರ್ಥಿಗಳಿಗಾಗಿ ಮೊನ್ನೆಯಷ್ಟೇ ಪರೀಕ್ಷೆಯನ್ನು ಮಾಡಿದ್ದಾರೆ. ತಮ್ಮ ಕನಸುಗಳಿಗೆ ಮತ್ತಷ್ಟು ಕಸುವು ನೀಡುವಂತಹ ಅಭ್ಯರ್ಥಿಗಳ ಹುಡುಕಾಟದಲ್ಲಿ ಸದ್ಯ ಅವರು ತಲ್ಲೀಣರಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಎಷ್ಟು ಹುರಿಯಾಳುಗಳನ್ನು ಅವರು ಹಾಕಲಿದ್ದಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • #UPPforKARNATAKA ಬಳಸಿ ಉಪ್ಪಿ ಫ್ಯಾನ್ಸ್‌ಗಳಿಂದ  ಟ್ವಿಟ್ಟರ್ ಟ್ರೆಂಡ್

    #UPPforKARNATAKA ಬಳಸಿ ಉಪ್ಪಿ ಫ್ಯಾನ್ಸ್‌ಗಳಿಂದ ಟ್ವಿಟ್ಟರ್ ಟ್ರೆಂಡ್

    ಬೆಂಗಳೂರು: ಇಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಫ್ಯಾನ್ಸ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡೋದಕ್ಕೆ ಹೊರಟಿದ್ದಾರೆ.

    ಉಪೇಂದ್ರ ಅವರಿಗಿರುವ ರಾಜಕೀಯ ಚಿಂತನೆ ಮತ್ತು ವಿಚಾರಧಾರೆಗಳನ್ನು ಇಟ್ಟುಕೊಂಡು ಟ್ರೆಂಡ್ ಮಾಡಲು ಮುಂದಾಗಿದ್ದಾರೆ. ಇಂದು ಬೆಳಗ್ಗೆ 04 ಗಂಟೆಯಿಂದ ರಾತ್ರಿ 12 ಗಂಟೆವರೆಗೂ ಟ್ವಿಟ್ಟರ್ ಟ್ರೆಂಡ್ ಮಾಡಲಿರುವ ಉಪ್ಪಿ ಫ್ಯಾನ್ಸ್, ಟ್ರೋಲ್ ಪೇಜ್, ಉತ್ತಮ ಪ್ರಜಾಕೀಯ ಪಕ್ಷದ ಬೆಂಬಲಿಗರು ಈ ಟ್ರೆಂಡ್‍ನಲ್ಲಿ ಭಾಗಿಯಾಗುತ್ತಿದ್ದಾರೆ.

    #UPPforKARNATAKA ಎಂಬ ಹ್ಯಾಶ್‍ಟ್ಯಾಗ್ ಬಳಸಿ ಟ್ವಿಟ್ಟರ್ ಟ್ರೆಂಡ್ ಕ್ರಿಯೇಟ್ ಮಾಡಲು ಉಪ್ಪಿ ಅಭಿಮಾನಿಗಳು ರೆಡಿಯಾಗಿದ್ದಾರೆ. ಉಪೇಂದ್ರ ಫ್ಯಾನ್ಸ್ ಗಳ ಈ ಒಂದು ಪ್ರಯತ್ನಕ್ಕೆ ಪ್ರಿಯಾಂಕ ಉಪೇಂದ್ರ ಕೂಡ ಸಾಥ್ ನೀಡುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ಉಪೇಂದ್ರ ಟ್ರೆಂಡ್ ಬಗ್ಗೆ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ.

    ಈ ವಿಚಾರವಾಗಿ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಉಪ್ಪಿ ಸತ್ ಪ್ರಜೆ, ದೇಶವನ್ನೇ ತನ್ನ ಮನೆ ಎಂದು ನೂರ್ಕಾಲ ನಡೆಸಿದ್ದ ರಾಜಮಹಾರಾಜರನ್ನು ಕೆಳಗಿಳಿಸಿ. ಪ್ರಜೆಯೇ ಪ್ರಭುವೆಂದು ಮೂರ್ಕಾಲಕ್ಕೊಬ್ಬ ಪ್ರಜೆಯನ್ನು ಪ್ರಭು ಮಾಡಿ. ಪ್ರಜಾಪ್ರಭುತ್ವದ ನಿಜ ಸತ್ವ ನೀ ರಾಜನೆಂಬುದ ಮರೆತೆಯಲ್ಲೊ ಕಣ್ಮುಚ್ಚಿ ಹಾಲ್ಕುಡಿವ ಮಾರ್ಜಾಲ ಎಂದು ಟ್ವೀಟ್ ಮಾಡಿದ್ದಾರೆ.

    ಇದರ ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಉಪ್ಪಿ, ಸತ್ ಪ್ರಜೆ, ಅವನಾರಡಿ ನೀನಾರಡಿ! ಅವತಿನ್ನುವುದು ಅನ್ನ, ನೀ ತಿನ್ನುವುದೂ ಅನ್ನ. ಪಂಚೇಂದ್ರಿಯಗಳು ಅವನಿಗುಂಟು ನಿನಗೂ ಉಂಟು. ಎಲ್ಲ ಸಮ ಎಂದು ಹುಟ್ಟಿಸಿದ ಆ ನಿನ್ನಪ್ಪ. ನೀ ಮಾತ್ರ ಆ ನಾಯಕ ಈ ನಾಯಕನಿಗೆ ನಾ ಭಕ್ತ ನಾ ಗುಲಾಮ ಅಂತ ಕುಂತ್ಯಲೋ ಬೆಪ್ಪ ಎಂದು ತಮ್ಮದೇ ಶೈಲಿಯಲ್ಲಿ ಟ್ವೀಟ್ ಮಾಡಿದ್ದಾರೆ.

  • ಸೆಲೆಕ್ಷನ್, ಕರೆಕ್ಷನ್, ರಿಜೆಕ್ಷನ್, ಪ್ರಮೋಷನ್ ಎಲ್ಲ ನಿಮ್ಮದೇ: ಉಪೇಂದ್ರ

    ಸೆಲೆಕ್ಷನ್, ಕರೆಕ್ಷನ್, ರಿಜೆಕ್ಷನ್, ಪ್ರಮೋಷನ್ ಎಲ್ಲ ನಿಮ್ಮದೇ: ಉಪೇಂದ್ರ

    -ಅಭ್ಯರ್ಥಿಗಳಿಗೆ ಕೇಳುವ  ಪ್ರಶ್ನೆಗಳನ್ನು ಬಿಚ್ಚಿಟ್ಟ ಉಪೇಂದ್ರ

    ಹುಬ್ಬಳ್ಳಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ 28 ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ. ಸೆಲೆಕ್ಷನ್, ಕರೆಕ್ಷನ್, ರಿಜೆಕ್ಷನ್ ಹಾಗೂ ಪ್ರಮೋಷನ್ ಅನ್ನು ಜನರೇ ಮಾಡಬೇಕು. ನಮ್ಮ ಪಕ್ಷದ ಅಭ್ಯರ್ಥಿಗಳಾದ ಮೇಲೆ ಯಾವ ರೀತಿ ಕೆಲಸ ಮಾಡ್ತೀರಿ ಎನ್ನುವ ಕುರಿತು 9 ಪ್ರಶ್ನೆಗಳನ್ನು ಮಾಡಲಾಗುವುದು. ಪಕ್ಷದ ನಿಯಮಗಳನ್ನು ಅಭ್ಯರ್ಥಿಗಳು ಪಾಲಿಸಬೇಕು ಎಂದು ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ತಿಳಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪೇಂದ್ರ, ನಮ್ಮ ಪಕ್ಷದಿಂದ ಸ್ಪರ್ಧೆ ಮಾಡುವ ವ್ಯಕ್ತಿಗಳು ಜನರ ಕೆಲಸಕ್ಕಾಗಿ ತಮ್ಮ ಸಂಪೂರ್ಣ ಸಮಯವನ್ನು ನೀಡಬೇಕು. ಜನರಿಗೆ ಮೊದಲ ಆದ್ಯತೆ ಕೊಡುವಂತಹ ಅಭ್ಯರ್ಥಿಗಳು ನಮ್ಮ ಪಕ್ಷಕ್ಕೆ ಬೇಕು. ರಾಜಕೀಯದಲ್ಲಿ ಬದಲಾವಣೆ ತರಬೇಕಾದ್ರೆ ಅದು ಜನರಿಂದ ಮಾತ್ರ ಸಾಧ್ಯ. ಕೇವಲ ಭರವಸೆ ನೀಡುವ ನಾಯಕರು ಬೇಕೋ ಅಥವಾ ಜನಪರವಾಗಿ ಕೆಲಸ ಮಾಡುವ ವ್ಯಕ್ತಿಗಳು ಬೇಕೋ ಅಂತ ಜನರು ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

    ಅಷ್ಟೇ ಅಲ್ಲದೆ, ದೊಡ್ಡ ಹೆಸರು ಗಳಿಸಿದವರು ಹಾಗೂ ಹಣದ ಬಲ ಇರುವವರು ಮಾತ್ರ ಹೆಚ್ಚಾಗಿ ರಾಜಕೀಯದಲ್ಲಿ ಇರುತ್ತಾರೆ. ಅಂತಹ ವ್ಯಕ್ತಿಗಳು ಜನಕ್ಕೆ ಬೇಡ, ಜನರ ಪರವಾಗಿ ಕೆಲಸ ಮಾಡಿ ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಜನನಾಯಕ ಬೇಕು. ಆದ್ದರಿಂದ ನಮ್ಮ ಪಕ್ಷದಿಂದ ಚುನಾವಣಾ ಕಣಕ್ಕೆ ಉತ್ತಮ ಅಭ್ಯರ್ಥಿಯನ್ನೇ ನಿಲ್ಲಿಸುತ್ತೇವೆ ಎಂದು ಉಪೇಂದ್ರ ಭರವಸೆ ನೀಡಿದ್ರು.

    ಅಭ್ಯರ್ಥಿಗೆ ಕೇಳುವ ಪ್ರಶ್ನಾವಳಿಗಳು:

    1. ವೈಯಕ್ತಿಕ ವಿವರ/ ಬಯೋ ಡೇಟಾ (ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಲಗತಿಸಿ)
    2. ಸಂಸದರಾದ ನಂತರ ನಮ್ಮ ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿ ಉಳಿಯಲು ನೀವು ಯೋಜಿಸುವ ಕ್ರಮಗಳು ಮತ್ತು ವಿಧಾನಗಳು ಯಾವುದು?
    3. ನಮ್ಮ ಅಗತ್ಯತೆಗಳು ಹಾಗೂ ನಿರೀಕ್ಷೆಗಳ ಬಗ್ಗೆ ನಿರಂತರವಾಗಿ ಮಾಹಿತಿಯನ್ನು ಸಂಗ್ರಹಿಸಲು ನೀವು ಹೇಗೆ ಯೋಜಿಸುತ್ತೀರಿ? (ಎಂ.ಪಿ ವ್ಯಾಪ್ತಿಯ ಒಳಗೆ)
    4. ನಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ನೀವು ಹೇಗೆ ಪರಿಹರಿಸುವಿರಿ? ಮತ್ತು ಅದನ್ನು ಹೇಗೆ ದೃಢೀಕರಿಸುವಿರಿ?
    5. ಸಂಸತ್ತಿನಲ್ಲಿ ಚರ್ಚಿಸಬೇಕಾದ ನಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪ್ರಸ್ತುತ ಪಡಿಸಲು ನೀವು ಹೇಗೆ ಸಿದ್ಧತೆಯನ್ನು ಮಾಡಿಕೊಳ್ಳುತ್ತೀರಾ?
    6. ನಿಮ್ಮ ಕಾರ್ಯಕ್ಷಮತೆಯ ವರದಿಯನ್ನು ನಮ್ಮ ಕ್ಷೇತ್ರದ ಜನರಿಗೆ ಮತ್ತು ಯು.ಪಿ.ಪಿ ಪಕ್ಷಕ್ಕೆ ಎಷ್ಟು ಸಮಯಕ್ಕೊಮ್ಮೆ ಹೇಗೆ ಪ್ರಸ್ತುತ ಪಡಿಸುವಿರಿ?
    7. ನೀವು ಭ್ರಷ್ಟಾಚಾರವಿಲ್ಲದೆ ಪ್ರಮಾಣಿಕವಾಗಿ ಕೆಲಸ ಮಾಡುತ್ತೀರಿ ಎಂದು ಹೇಗೆ ಸಾಭೀತುಪಡಿಸುವಿರಿ?
    8. ಈ ಕೆಲಸಕ್ಕಾಗಿ ಇತರರಿಂದ ನಿಮ್ಮನ್ನು ಪ್ರತ್ಯೇಕಿಸುವ ನಿಮ್ಮ ವಿಶಿಷ್ಟ ಕಾರ್ಯ ಶೈಲಿಯನ್ನು ಪಟ್ಟಿಮಾಡಿ
    9. ನೀವು ನೀಡಲು ಬಯಸುವ ಯಾವುದೇ ಸಲಹೆಗಳು

    https://www.youtube.com/watch?v=ZqLSa6pP7LU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv