Tag: UT Khader

  • ದಾಖಲಾತಿ ಇಟ್ಟುಕೊಂಡು ಬಿಜೆಪಿಯವ್ರು ಆರೋಪ ಮಾಡಲಿ – ಖಾದರ್‌ ಪರ ರಾಮಲಿಂಗಾರೆಡ್ಡಿ ಬ್ಯಾಟಿಂಗ್

    ದಾಖಲಾತಿ ಇಟ್ಟುಕೊಂಡು ಬಿಜೆಪಿಯವ್ರು ಆರೋಪ ಮಾಡಲಿ – ಖಾದರ್‌ ಪರ ರಾಮಲಿಂಗಾರೆಡ್ಡಿ ಬ್ಯಾಟಿಂಗ್

    ಬೆಂಗಳೂರು: ಸ್ಪೀಕರ್ ವಿರುದ್ಧ ದಾಖಲಾತಿ ಇಟ್ಟುಕೊಂಡು ಬಿಜೆಪಿಯವರು (BJP) ಆರೋಪ ಮಾಡಬೇಕು. ಮಾಧ್ಯಮಗಳ ಮುಂದೆ ಆರೋಪ ಮಾಡೋದು ಸರಿಯಲ್ಲ ಎಂದು ಸ್ಪೀಕರ್ ಯು.ಟಿ ಖಾದರ್ ಪರವಾಗಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಬ್ಯಾಟಿಂಗ್ ಮಾಡಿದ್ದಾರೆ.

    ಬಿಜೆಪಿ ನಾಯಕರು ಸ್ಪೀಕರ್ ಖಾದರ್ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿರುವ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಖಾದರ್ ಅವರ ಮೇಲೆ ಆರೋಪ ಮಾಡಿದ್ದಾರೆ. ಕಾಗೇರಿ ಅವರು ಹಿಂದೆ ಸ್ಪೀಕರ್, ಸಚಿವರು ಆಗಿದ್ದವರು. ಯಾವುದೇ ಅಕ್ರಮ ಆಗಿಲ್ಲ. ಪಾರದರ್ಶಕವಾಗಿದೆ ಅಂತ ಖಾದರ್ ಹೇಳಿದ್ದಾರೆ. ಸಾಕ್ಷಿ ಸಮೇತ ಕಾಗೇರಿ ಅವರು ಖಾದರ್ ಅವರಿಗೆ, ರಾಜ್ಯಪಾಲರಿಗೆ ದಾಖಲೆ ಕೊಡಲಿ. ದಾಖಲೆ ಇಟ್ಟು ಆರೋಪ ಮಾಡಲಿ. ಕೇವಲ ಮಾಧ್ಯಮದಲ್ಲಿ ಮಾತಾಡೋದು ಸರಿಯಲ್ಲ ಎಂದರು.

  • ಬಾರ್ಬಡೋಸ್ ಸಂಸತ್ತಿಗೆ ಹೊರಟ್ಟಿ, ಖಾದರ್ ಭೇಟಿ

    ಬಾರ್ಬಡೋಸ್ ಸಂಸತ್ತಿಗೆ ಹೊರಟ್ಟಿ, ಖಾದರ್ ಭೇಟಿ

    ಬ್ರಿಡ್ಜ್‌ಟೌನ್‌: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಮತ್ತು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ (UT Khader) ಬಾರ್ಬಡೋಸ್  ಸಂಸತ್ತಿಗೆ (Barbados Parliament) ಭೇಟಿ ನೀಡಿದ್ದಾರೆ.

    68ನೇ ಅಂತರರಾಷ್ಟ್ರೀಯ ಕಾಮನ್‌ವೆಲ್ತ್ (Commonwealth) ಸಂಸದೀಯ ಸಮ್ಮೇಳನದಲ್ಲಿ ಭಾಗವಹಿಸಲು ಬಾರ್ಬಡೋಸ್‌ಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಬಸವರಾಜ ಹೊರಟ್ಟಿ ಯು.ಟಿ.ಖಾದರ್ ಅವರು ಬಾರ್ಬಡೋಸ್ ಸಂಸತ್ತಿಗೆ ಭೇಟಿ ನೀಡಿದರು. ಇದನ್ನೂ ಓದಿ: ಗಾಜಾ ಯುದ್ಧ ಅಂತ್ಯ | ಇಸ್ರೇಲ್‌ನ 7 ಒತ್ತೆಯಾಳುಗಳನ್ನ ಬಿಡುಗಡೆ ಮಾಡಿದ ಹಮಾಸ್

    ಬಾರ್ಬಡೋಸ್ ಸಂಸತ್ತಿನ ಸಭಾಧ್ಯಕ್ಷರ ಪೀಠವು ಭಾರತದಿಂದ ಕೊಡಲ್ಪಟ್ಟಿದೆ. ಇದು ಭಾರತ ಮತ್ತು ಬಾರ್ಬಡೋಸ್ ನಡುವಿನ ಸ್ನೇಹ ಮತ್ತು ಸಂಸತ್ತೀಯ ಸಹಕಾರದ ಸಂಕೇತವಾಗಿದೆ.

    ಈ ಸಮ್ಮೇಳನವು ಬಾರ್ಬಡೋಸ್ ಶಾಸಕಾಂಗದ ಕಾರ್ಯನಿರ್ವಹಣೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಅಂತರ-ಸಂಸದೀಯ ಸಂಬಂಧಗಳನ್ನು ಬಲಪಡಿಸಲು ಮಹತ್ವದ ಅವಕಾಶವನ್ನು ಒದಗಿಸಿತು.

  • ನಾಸಾ ಬಾಹ್ಯಾಕಾಶ ಕೇಂದ್ರ ಕಚೇರಿಗೆ ಭೇಟಿ ನೀಡಿದ ಬಸವರಾಜ ಹೊರಟ್ಟಿ, ಯುಟಿ ಖಾದರ್‌

    ನಾಸಾ ಬಾಹ್ಯಾಕಾಶ ಕೇಂದ್ರ ಕಚೇರಿಗೆ ಭೇಟಿ ನೀಡಿದ ಬಸವರಾಜ ಹೊರಟ್ಟಿ, ಯುಟಿ ಖಾದರ್‌

    ಬೆಂಗಳೂರು: ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ನಾಸಾ (NASA) ಬಾಹ್ಯಾಕಾಶ ಕೇಂದ್ರಕ್ಕೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಹಾಗೂ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ (UT Khader) ಭೇಟಿ ನೀಡಿದ್ದಾರೆ.

    ಬಾರ್ಬಡೋಸ್‌ನಲ್ಲಿ ನಡೆಯುವ 68ನೇ ಅಂತರಾಷ್ಟ್ರೀಯ ಕಾಮನ್ವೆಲ್ತ್ ಸ್ಪೀಕರ್ಸ್ ಕಾನ್ಫರೆನ್ಸ್ ನಲ್ಲಿ ಭಾಗವಹಿಸಲು ತೆರಳಿರುವ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಸಭಾಧ್ಯಕ್ಷ ಯು.ಟಿ.ಖಾದರ್ ರವರು ಅಧ್ಯಯನ ಪ್ರವಾಸದ ಭಾಗವಾಗಿ ಅಮೇರಿಕಾದಲ್ಲಿರುವ NASA ಕಛೇರಿಗೆ ಭೇಟಿ ನೀಡಿದರು. ಇದನ್ನೂ ಓದಿ:  4 ವರ್ಷದಿಂದ ಗೋಕರ್ಣ ಮಹಾಬಲೇಶ್ವರ ದೇವರಿಗಿಲ್ಲ ಭಕ್ತರಿಂದ ವಿಶೇಷ ಪೂಜೆ

  • ವಿಧಾನಸೌಧದಲ್ಲಿ ನಾಯಿಗಳ ರಕ್ಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ: ಯು.ಟಿ ಖಾದರ್

    ವಿಧಾನಸೌಧದಲ್ಲಿ ನಾಯಿಗಳ ರಕ್ಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ: ಯು.ಟಿ ಖಾದರ್

    ಬೆಂಗಳೂರು: ವಿಧಾನಸೌಧದಲ್ಲಿರೋ ನಾಯಿಗಳ ರಕ್ಷಣೆ ಸಂಬಂಧ ಸರ್ಕಾರಕ್ಕೆ ವಿವರವಾದ ಮಾಹಿತಿ ಜೊತೆಗೆ ಪ್ರಸ್ತಾವನೆ ಕಳಿಸಿದ್ದೇವೆ. ಸರ್ಕಾರ ನಮಗೆ ಅನುಮತಿ ಕೊಟ್ಟರೆ ನಾಯಿಗಳಿಗೆ ಪ್ರತ್ಯೇಕ ನಿರ್ವಹಣೆ ಮಾಡೋ ಬಗ್ಗೆ ತೀರ್ಮಾನ ಮಾಡ್ತೀವಿ ಎಂದು ಸ್ಪೀಕರ್ ಯು.ಟಿ.ಖಾದರ್ (U T Khader) ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಧಾನಸೌಧದಲ್ಲಿ 53 ನಾಯಿಗಳು (Dogs) ಇವೆ. ನಾಯಿಗಳು ವಿಧಾನಸೌಧದ ಒಳಗೆ ಬಾರದಂತೆ ತಡೆಯಲು ಗೇಟ್ ವ್ಯವಸ್ಥೆ ಇಲ್ಲ. ಶಾಸಕರು ವಾಕಿಂಗ್ ಮಾಡಬೇಕಾದ್ರೆ, ಜನರು ವಿಸಿಟ್ ಮಾಡಿದಾಗ ತೊಂದರೆ ಆಗ್ತಿದೆ. ಹೀಗಾಗಿ ನಾವು ಅವುಗಳ ರಕ್ಷಣೆಗೆ ಶೆಡ್ ನಿರ್ಮಾಣ ಮಾಡೋ ಪ್ಲ್ಯಾನ್ ಇದೆ ಎಂದಿದ್ದಾರೆ. ಇದನ್ನೂ ಓದಿ: ಅಭಿಮಾನ್ ಸ್ಟುಡಿಯೋ ಮುಟ್ಟುಗೋಲಿಗೆ ಸರ್ಕಾರ ಆದೇಶ – ಅನಿರುದ್ಧ ರಿಯಾಕ್ಷನ್ ಏನು?

    ಖಾಸಗಿ ಎಸ್‌ಜಿಒಗೆ ಕೊಟ್ಟು ಇವುಗಳಲ್ಲಿ ಸಾಕುವ ವ್ಯವಸ್ಥೆ ಮಾಡುವ ತೀರ್ಮಾನವಾಗಿ ಚರ್ಚೆ ಆಗಿವೆ.ನಾಯಿಗಳ ರಕ್ಷಣೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನ ಸರ್ಕಾರಕ್ಕೆ ರವಾನೆ ಮಾಡಿದ್ದೇವೆ. ಸರ್ಕಾರ ಅದಕ್ಕೆ ಒಪ್ಪಿಗೆ ಕೊಟ್ಟರೆ ಅನುಷ್ಟಾನ ಮಾಡ್ತೇವೆ ಎಂದು ತಿಳಿಸಿದ್ದಾರೆ.

  • ಎಸ್‌ಐಟಿ ತನಿಖೆ ಮುಗಿಯೋವರೆಗೂ ಧಾರ್ಮಿಕ ಸ್ಥಳದ ಪಾವಿತ್ರತೆ ಎಲ್ಲರೂ ಕಾಪಾಡಬೇಕು: ಯು.ಟಿ. ಖಾದರ್

    ಎಸ್‌ಐಟಿ ತನಿಖೆ ಮುಗಿಯೋವರೆಗೂ ಧಾರ್ಮಿಕ ಸ್ಥಳದ ಪಾವಿತ್ರತೆ ಎಲ್ಲರೂ ಕಾಪಾಡಬೇಕು: ಯು.ಟಿ. ಖಾದರ್

    ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ (Dharmasthala Mass Burials) ಎಸ್‌ಐಟಿ (SIT) ತನಿಖೆ ನಡೆಯುತ್ತಿದೆ. ತನಿಖೆ ಮುಗಿಯೋವರೆಗೂ ಧಾರ್ಮಿಕ ಸ್ಥಳದ ಪಾವಿತ್ರತೆ ಎಲ್ಲರೂ ಕಾಪಾಡಬೇಕು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ (UT Khader) ತಿಳಿಸಿದ್ದಾರೆ.

    ಧರ್ಮಸ್ಥಳ ಪ್ರಕರಣದ ಬಗ್ಗೆ ವಿಧಾನಸೌಧಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಧರ್ಮಸ್ಥಳ ಕೇಸ್ ಬಗ್ಗೆ ಈಗಾಗಲೇ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಮಂಗಳವಾರ ವಿಪಕ್ಷಗಳು ಚರ್ಚೆಗೆ ಅವಕಾಶ ಕೇಳಿತ್ತು. ಶೂನ್ಯವೇಳೆಯಲ್ಲಿ ಅವಕಾಶ ಕೊಟ್ಟಿದ್ದೆ. ಸರ್ಕಾರವೂ ಅದಕ್ಕೆ ಉತ್ತರ ಕೊಟ್ಟಿದೆ. ಮತ್ತಷ್ಟು ಚರ್ಚೆಗೆ ಅವಕಾಶ ಬೇಕು ಅಂತ ಕೇಳಿದ್ದಾರೆ. ನಾನು ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ ಎಂದರು. ಇದನ್ನೂ ಓದಿ: Delhi | ಈಜು ತರಗತಿಗೆ ಹೋಗಿದ್ದ ವೇಳೆ ಇಬ್ಬರು ಬಾಲಕಿಯರ ಮೇಲೆ ಗ್ಯಾಂಗ್ ರೇಪ್

    ಧರ್ಮಸ್ಥಳ ಕೇಸ್‌ನಲ್ಲಿ ಎಸ್‌ಐಟಿ ತನಿಖೆ ಮಾಡುತ್ತಿದೆ. ಎಸ್‌ಐಟಿ ತನಿಖೆ ಮಾಡೋದಕ್ಕೆ ಬಿಡಬೇಕು. ತನಿಖೆ ಮುಗಿಯೋ ಮುನ್ನವೇ ನಾವೇ ತೀರ್ಪು ಕೊಡೋದು ಸರಿಯಲ್ಲ. ಧಾರ್ಮಿಕ ಸ್ಥಳದ ಪಾವಿತ್ರತೆಯನ್ನ ಕಾಪಾಡೋದು ನಮ್ಮ ಕರ್ತವ್ಯ. ಈ ವಿಚಾರದಲ್ಲಿ ಯಾರೂ ಸ್ವಯಂ ಅಭಿಪ್ರಾಯ ಕೊಡಬಾರದು ಎಂದು ತಿಳಿಸಿದರು. ಇದನ್ನೂ ಓದಿ: ಹರ್ ಘರ್ ತಿರಂಗ ಅಭಿಯಾನ – ಮನೆಯ ಮೇಲೆ ಧ್ವಜಾರೋಹಣ ಮಾಡಿದ ಅಮಿತ್ ಶಾ

    ಎಸ್‌ಐಟಿ ತನಿಖೆ ಆಗೋವರೆಗೂ ಎಲ್ಲರೂ ಸಮಾಧಾನವಾಗಿ ಇರಬೇಕು. ನಾವು ಸಮಾನತೆ, ಸೋದರ ಭಾವನೆಯಲ್ಲಿ ಇರೋರು. ಹೀಗಾಗಿ ತನಿಖೆ ಆಗೋ ಮುನ್ನ ಯಾರೂ ಮಾತಾಡೋದು ಬೇಡ. ಸದನದಲ್ಲಿ ಧರ್ಮಸ್ಥಳದ ವಿಚಾರವಾಗಿ ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: Karwar | ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆ ಮೇಲೆ ಇ.ಡಿ ದಾಳಿ

  • ಲೋಕಸಭಾಧ್ಯಕ್ಷ ಓಂ ಬಿರ್ಲಾರನ್ನು ಭೇಟಿ ಮಾಡಿದ ಯು.ಟಿ.ಖಾದರ್

    ಲೋಕಸಭಾಧ್ಯಕ್ಷ ಓಂ ಬಿರ್ಲಾರನ್ನು ಭೇಟಿ ಮಾಡಿದ ಯು.ಟಿ.ಖಾದರ್

    ನವದೆಹಲಿ: ಕರ್ನಾಟಕ ವಿಧಾನಸಭಾಧ್ಯಕ್ಷ ಯುಟಿ ಖಾದರ್ (UT Khader) ಫರೀದ್ ಲೋಕಸಭಾಧ್ಯಕ್ಷ ಓಂ ಬಿರ್ಲಾ (Om Birla) ಅವರನ್ನು ಇಂದು ದೆಹಲಿಯಲ್ಲಿ (New Delhi) ಭೇಟಿ ಮಾಡಿ 11ನೇ ಕಾಮನ್ ವೆಲ್ತ್ ಸಂಸದೀಯ ಸಂಘ ಭಾರತ ವಲಯದ ಸಮ್ಮೇಳನವನ್ನು 2025ರ ಸೆಪ್ಟೆಂಬರ್ 9 ಮತ್ತು 10ರಂದು ನಡೆಸಲು ಕರ್ನಾಟಕವನ್ನು ಆಯ್ಕೆ ಮಾಡಿದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

    ಸಮ್ಮೇಳನದಲ್ಲಿ ಭಾರತದ ಎಲ್ಲಾ ರಾಜ್ಯಗಳ ಪೀಠಾಸೀನ ಅಧಿಕಾರಗಳು ಭಾಗವಹಿಸುವುದಲ್ಲದೇ ಪ್ರಪ್ರಥಮ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಕಾಮನ್ ವೆಲ್ತ್ ದೇಶಗಳ ಪೀಠಾಸೀನಾಧಿಕಾರಿಗಳನ್ನು ಆಹ್ವಾನಿಸುವ ಕುರಿತು ಮತ್ತು ಸಮ್ಮೇಳನದಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು ಸಹ ಸಮಾಲೋಚನೆ ನಡೆಸಿದರು. ಇದನ್ನೂ ಓದಿ: Rain Alert | ಹಾಸನ ಜಿಲ್ಲೆಯ 3, ಉತ್ತರ ಕನ್ನಡ ಜಿಲ್ಲೆಯ 2 ತಾಲೂಕಿನ ಶಾಲೆಗಳಿಗೆ ಗುರುವಾರ ರಜೆ

    ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು 2025ರ ಸೆಪ್ಟೆಂಬರ್ 8ರಂದು ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮೇಲೆ ಹಮ್ಮಿಕೊಳ್ಳುವ ಬಗ್ಗೆ ಹಾಗೂ ಕರ್ನಾಟಕ ವಿಧಾನಸಭೆಯಲ್ಲಿ ಇತ್ತೀಚೆಗೆ ಜಾರಿಗೆ ತಂದಿರುವ ಅನೇಕ ಪ್ರಗತಿ ಪರ ಬದಲಾವಣೆಗಳನ್ನು ಸಹ ಲೋಕಸಭಾಧ್ಯಕ್ಷರ ಗಮನಕ್ಕೆ ತಂದಿದ್ದಾರೆ. ಬೆಂಗಳೂರು, ಅಂತರಾಷ್ಟ್ರೀಯವಾಗಿ ಸಿಲಿಕಾನ್ ಸಿಟಿಯಾಗಿರುವುದರಿಂದ ಇಂತಹ ಸಮ್ಮೇಳನಗಳನ್ನು ನಡೆಸುತ್ತಿರುವುದು ಅತ್ಯಂತ ಸೂಕ್ತ ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಹೇಳಿದ್ದಾರೆ. ಇದನ್ನೂ ಓದಿ: ಇರಾನ್‌ ಮೇಲೆ ಅಮೆರಿಕ ದಾಳಿ ಸಂಪೂರ್ಣ ಯಶಸ್ವಿಯಾಗಿಲ್ಲ – ಟ್ರಂಪ್ ಮುಜುಗರಕ್ಕೆ ಕಾರಣವಾದ ಗುಪ್ತಚರ ವರದಿ

    ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಸಭೆಯ ಕಾರ್ಯದರ್ಶಿ ಎಂಕೆ ವಿಶಾಲಾಕ್ಷಿ, ಲೋಕಸಭಾ ಸಚಿವಾಲಯದ ಅಧಿಕಾರಿಗಳು ಹಾಜರಿದ್ದರು. ಇದನ್ನೂ ಓದಿ: Honeymoon Murder | ಕೊನೆಗೂ ತಮ್ಮಿಬ್ಬರ ಸಂಬಂಧ ಒಪ್ಪಿಕೊಂಡ ಸೋನಂ ರಘುವಂಶಿ – ರಾಜ್

  • ಅಧ್ಯಯನ ಪ್ರವಾಸ: ಮಲೇಶಿಯಾದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್

    ಅಧ್ಯಯನ ಪ್ರವಾಸ: ಮಲೇಶಿಯಾದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್

    ಬೆಂಗಳೂರು: ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ (UT Khadar) ಮಲೇಶಿಯಾ (Malaysia) ದೇಶದಲ್ಲಿ  ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ.

    ಕಾಮನ್‌ವೆಲ್ತ್ ಸಂಸದೀಯ ಸಂಘ, ವಿಧಾನ ಸಭೆಯ ಸಭಾಧ್ಯಕ್ಷರು ಹಾಗೂ ಕರ್ನಾಟಕ ಶಾಖೆಯ ಜಂಟಿ ಅಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರು ಇಂದು ಜನಪ್ರತಿನಿಧಿಗಳ ಸಭೆಯ (ದಿವಾನ್ ರಖ್ಯತ್) ಸಭಾಧ್ಯಕ್ಷರು ಮತ್ತು ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್, ಮಲೇಶಿಯಾದ ಜಂಟಿ ಅಧ್ಯಕ್ಷರಾದ ಡಾ.ಜೋಹರಿ ಬಿನ್ ಅಬ್ದುಲ್ ಅವರನ್ನು ಕೌಲಾಲಾಂಪುರದಲ್ಲಿರುವ ಸಂಸತ್ ಭವನದಲ್ಲಿ ಭೇಟಿ ಮಾಡಿದರು.ಇದನ್ನೂ ಓದಿ: ಬೈಕ್ ಟ್ಯಾಕ್ಸಿಗೆ ಬ್ರೇಕ್ – ಒಂದೇ ದಿನದಲ್ಲಿ 103 ವಾಹನಗಳು ಸೀಜ್

    ಈ ಸಂದರ್ಭದಲ್ಲಿ ಸಭಾಪತಿ ಯು.ಟಿ.ಖಾದರ್ ಅವರು ಸಂಸದೀಯ ವ್ಯವಹಾರಗಳು ಹಾಗೂ ಪ್ರಜಾಪ್ರಭುತ್ವ ತತ್ವಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿದರು.

    ಅಲ್ಲದೇ ಭವಿಷ್ಯದಲ್ಲಿ ಕರ್ನಾಟಕ ಹಾಗೂ ಮಲೇಶಿಯಾದ ರಾಜಕೀಯ, ಸಂಸದೀಯ ವ್ಯವಹಾರಗಳು ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಕಾಯ್ದುಕೊಳ್ಳುವ ಬಗ್ಗೆ ಸಹ ಚರ್ಚಿಸಿದರು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಇತರೆ ಅಧಿಕಾರಿಗಳು ಹಾಜರಿದ್ದರು.ಇದನ್ನೂ ಓದಿ: ಇಡಿ ತನಿಖೆಗೆ ನನ್ನ ಸಹೋದರ ಡಿ.ಕೆ ಸುರೇಶ್ ಸಹಕಾರ ಕೊಡ್ತಾರೆ: ಡಿಕೆಶಿ

  • ಗೈಡೆಡ್ ಟೂರ್ ಶುರು – ಇಂದಿನಿಂದ ವಿಧಾನಸೌಧ ವೀಕ್ಷಣೆಗೆ ಮುಕ್ತ ಅವಕಾಶ; ಯಾರಿಗೆ ಉಚಿತ, ಯಾರಿಗೆ ಟಿಕೆಟ್‌ ಖಚಿತ?

    ಗೈಡೆಡ್ ಟೂರ್ ಶುರು – ಇಂದಿನಿಂದ ವಿಧಾನಸೌಧ ವೀಕ್ಷಣೆಗೆ ಮುಕ್ತ ಅವಕಾಶ; ಯಾರಿಗೆ ಉಚಿತ, ಯಾರಿಗೆ ಟಿಕೆಟ್‌ ಖಚಿತ?

    ಬೆಂಗಳೂರು: ರಾಜ್ಯದ ಶಕ್ತಿಸೌಧ ವಿಧಾನಸೌಧ (Vidhana Soudha) ಇಂದಿನಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ. ಹೀಗಾಗಿ ಶಕ್ತಿಸೌಧವನ್ನ ದೂರದಿಂದಲೇ ನೋಡಿ.. ಫೋಟೋ ಕ್ಲಿಕ್ಕಿಸಿ ಸಂತಸಪಟ್ಟುಕೊಳ್ಳುತ್ತಿದ್ದ ಜನರಿಗೆ ಹತ್ತಿರದಿಂದಲೇ ನೋಡುವ ಅವಕಾಶ ಸಿಕ್ಕಿದೆ. ಭವ್ಯ ವಿಧಾನಸೌಧ ವೀಕ್ಷಣೆಗೆ ರಾಜ್ಯ ಸರ್ಕಾರ ʻಗೈಡೆಡ್ ಟೂರ್ʼ (Guided Tour) ಹೆಸರಿನಲ್ಲಿ ಪ್ರವಾಸ ಭಾಗ್ಯ ಕಲ್ಪಿಸಿದೆ.

    ನಿತ್ಯ 25 ರಿಂದ 30 ಸದಸ್ಯರ 10 ಬ್ಯಾಚ್‌ಗಳಿಗೆ ವೀಕ್ಷಣೆಗೆ ಅವಕಾಶ ಇರುತ್ತದೆ. ಇಂದಿನಿಂದ ಗೈಡೆಡ್‌ ಟೂರ್‌ ಶುರುವಾಗಿದ್ದು, ಪ್ರವಾಸಿಗರಿಗೆ ವಿಧಾನಸೌಧದ ಮಹತ್ವ, ಇತಿಹಾಸ, ಪರಂಪರೆ, ಅಧಿವೇಶನ ಸಭಾಂಗಣ, ಭವ್ಯ ಮೆಟ್ಟಿಲುಗಳ ವಿವರಣೆ ಕೊಡುವ ಕೆಲಸವನ್ನ ಮಾರ್ಗದರ್ಶಿಗಳು ಮಾಡುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ – ಬೋನ್ ಅಳವಡಿಸಿ ಪತ್ತೆ ಕಾರ್ಯಾಚರಣೆ

    ಗುರುತಿನ ಚೀಟಿ ಕಡ್ಡಾಯ?
    ವಿಧಾನಸೌಧದ ಮಹತ್ವವನ್ನು ಪ್ರವಾಸಿಗರಿಗೆ ತಿಳಿಸಿಕೊಡಲು ಸದ್ಯ 10 ಗೈಡ್‌ಗಳನ್ನ ನೇಮಕ ಮಾಡಿಕೊಳ್ಳಲಾಗಿದ್ದು, ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ವಿವರಣೆ ನೀಡಲಾಗುತ್ತದೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ, ಹೊರ ದೇಶಗಳ ಪ್ರವಾಸಿಗರೂ ವಿಧಾನಸೌಧ ವೀಕ್ಷಣೆಗೆ ಬರ್ತಿದ್ದಾರೆ. ವಿಧಾನಸೌಧ ಪ್ರವಾಸಕ್ಕೆ ಪ್ರತಿ ಬ್ಯಾಚ್‌ಗೂ ಒಂದೂವರೆ ಗಂಟೆ ಸಮಯ, ಒಂದೂವರೆ ಕಿಮೀ ನಡಿಗೆ ಇರಲಿದೆ. ವಿಕಾಸಸೌಧದ ಎಂಟ್ರಿ ಗೇಟ್ (ನಂಬರ್ 3) ಮೂಲಕ ಟೂರ್ ಆರಂಭವಾಗಲಿದೆ. 20 ನಿಮಿಷ ಮುಂಚೆ ಟೂರ್ ಆರಂಭಕ್ಕೂ ಮುನ್ನ ಹಾಜರಿರಬೇಕು, ಟಿಕೆಟ್ ಬುಕ್ ಮಾಡಿದವರು ಸರ್ಕಾರ ವಿತರಿಸಿರುವ ಯಾವುದಾದರೂ ಗುರುತಿನ ಚೀಟಿ ತರಬೇಕು. ವಿಧಾನಸೌಧ ಟೂರ್ ವೇಳೆ ನಿಗದಿತ ಸ್ಥಳದಲ್ಲಿ ಮಾತ್ರ ಫೋಟೋ ತೆಗೆಯಲು ಅವಕಾಶ.

    ಟಿಕೆಟ್‌ ದರ ಎಷ್ಟು?
    ಪ್ರತೀ ಪ್ರವಾಸಿಗರಿಗೂ ತಲಾ 50 ರೂ. ಟಿಕೆಟ್‌ ನಿಗದಿ ಮಾಡಲಾಗಿದೆ. ಇನ್ನೂ 15 ವರ್ಷದೊಳಗಿನ ಮಕ್ಕಳು, ಎಸ್‌ಎಸ್‌ಎಲ್‌ಸಿ ವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರಲಿದೆ. ಇದನ್ನೂ ಓದಿ: ಚಿನ್ನಾಭರಣಕ್ಕಾಗಿ ಕಂಟ್ರಾಕ್ಟರ್ ಹತ್ಯೆ ಕೇಸ್ – ಓರ್ವ ಅಪ್ರಾಪ್ತ ಸೇರಿ ಇಬ್ಬರ ಬಂಧನ

    ಕಳೆದ ವಾರವಷ್ಟೇ ಸ್ಪೀಕರ್ ಯು.ಟಿ ಖಾದರ್ ಹಾಗೂ ಸಭಾಪತಿ ಹೊತಟ್ಟಿಯವರು ಗೈಡೆಡ್‌ ಟೂರ್‌ಗೆ ಚಾಲನೆ ನೀಡಿದ್ದರು. ಬೆಂದಕಾಳೂರಿನ ಹೆಗ್ಗುರುತು, ರಾಜ್ಯದ ಆಡಳಿತ ಶಕ್ತಿಸೌಧ ಅಂತನೇ ಕರೆಯಿಸಿಕೊಳ್ಳುವ ವಿಧಾನಸೌಧ ಈಗ ಪ್ರವಾಸಿ ತಾಣ. ಇಲ್ಲಿಯವರೆಗೂ ಕೇವಲ ಗೇಟ್ ಹೊರಭಾಗದಿಂದ, ರಸ್ತೆಯಿಂದ ಕಾಣಿಸುತ್ತಿದ್ದ ವಿಧಾನಸೌಧ ಇನ್ಮುಂದೆ ಪ್ರವಾಸಿ ಸ್ಥಳ ಆಗಲಿದೆ. ಗೈಡೆಡ್ ಟೂರ್ ಹೆಸರಲ್ಲಿ ಸಾರ್ವಜನಿಕರ ವೀಕ್ಷಣೆಗೆ ಸರ್ಕಾರ ಅವಕಾಶ ನೀಡಿದೆ‌. ಇನ್ಮುಂದೆ ವಿಧಾನಸೌಧದ ಒಳಗೆ ಹೋಗಿ ಭವ್ಯ ಐತಿಹಾಸಿಕ ಕಟ್ಟಡವನ್ನು ಕಣ್ತುಂಬಿಕೊಳ್ಳಬಹುದು. ಇದನ್ನೂ ಓದಿ: Bengaluru | ಮಗುವನ್ನು ನೋಡಿಕೊಳ್ಳಲು ಬಂದ ಯುವತಿ 30 ನಿಮಿಷದಲ್ಲಿ 32,000 ರೂ. ಪಡೆದು ಎಸ್ಕೇಪ್

  • 18 ಬಿಜೆಪಿ ಶಾಸಕರ ಅಮಾನತು ವಾಪಸ್, ವನವಾಸ ಅಂತ್ಯ; ಸ್ಪೀಕರ್ ನೇತೃತ್ವದ ಸಭೆಯಲ್ಲಿ ನಿರ್ಣಯ

    18 ಬಿಜೆಪಿ ಶಾಸಕರ ಅಮಾನತು ವಾಪಸ್, ವನವಾಸ ಅಂತ್ಯ; ಸ್ಪೀಕರ್ ನೇತೃತ್ವದ ಸಭೆಯಲ್ಲಿ ನಿರ್ಣಯ

    ಬೆಂಗಳೂರು: ಕಳೆದ ಅಧಿವೇಶನದಲ್ಲಿ ಸದನದಿಂದ ಅಮಾನತ್ತಾದ ಬಿಜೆಪಿಯ 18 ಶಾಸಕರಿಗೆ ಕೊನೆಗೂ ಸಂಡೇ ಸ್ಪೆಷಲ್ ರೂಪದಲ್ಲಿ ಗುಡ್‌ನ್ಯೂಸ್ ಸಿಕ್ಕಿದೆ. 2 ತಿಂಗಳ ನಂತರ ಶಾಸಕರ ಅಮಾನತು ಆದೇಶ ವಾಪಸ್ ಪಡೆಯಲಾಗಿದೆ. ಇಂದು ಸಂಜೆ ವಿಧಾನಸೌಧದಲ್ಲಿ ಸ್ಪೀಕರ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಕಾನೂನು ಸಚಿವ ಹೆಚ್‌.ಕೆ ಪಾಟೀಲ್‌, ವಿಪಕ್ಷ ನಾಯಕ ಆರ್. ಅಶೋಕ್ ಸಭೆ ನಡೆಸಿ ಅಮಾನತು ಆದೇಶ ವಾಪಸ್ ಪಡೆಯುವ ನಿರ್ಣಯ ಮಾಡಲಾಯ್ತು.

    ಕಳೆದ ಮಾ.21 ರಂದು ಸದನದಲ್ಲಿ ಹನಿಟ್ರ್ಯಾಪ್ ಪ್ರಕರಣ ಮುಂದಿಟ್ಕೊಂಡು ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದ್ರು. ಈ ವೇಳೆ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ್ದಾರೆಂಬ ಕಾರಣಕ್ಕೆ, ಬಿಜೆಪಿಯ 18 ಶಾಸಕರನ್ನ ಸ್ಪೀಕರ್ ಯು.ಟಿ ಖಾದರ್ 6 ತಿಂಗಳ ಕಾಲ ಅಮಾನತುಗೊಳಿಸಿ‌ ಆದೇಶ‌ ಹೊರಡಿಸಿದ್ದರು. ಈ ಸಂಬಂಧ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ರು. ಆದೇಶ ವಾಪಸ್‌ಗೆ ಆಗ್ರಹಿಸಿ ಸ್ಪೀಕರ್‌ಗೆ ಪತ್ರ ಬರೆದಿದ್ರು. ರಾಜ್ಯಪಾಲರಿಗೂ ದೂರು ಕೊಟ್ಟಿದ್ರು. ಕೋರ್ಟ್ ಮೆಟ್ಟಲೇರಲು ಮುಂದಾಗಿದ್ರು. ಸಾಕಷ್ಟು ಒತ್ತಡ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕಳೆದ ಸಚಿವ ಸಂಪುಟ ಸಭೆಯಲ್ಲಿ ಅಮಾನತು ಆದೇಶ ವಾಪಸ್‌ಗೆ ಒಲವು ವ್ಯಕ್ತವಾಯಿತು. ಇಂದು ಸರ್ಕಾರದ ಜತೆ ಚರ್ಚಿಸಿ ಸ್ಪೀಕರ್ ಖಾದರ್ ತಮ್ಮ ವಿವೇಚನಾಧಿಕಾರ ಬಳಸಿ ಅಮಾನತು ಆದೇಶ ವಾಪಸ್ ಪಡೆದಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಅಶೋಕ್‌, ನಾಳೆ (ಸೋಮವಾರ) ಸ್ಪೀಕರ್ ಅವರು ಹಜ್ ಯಾತ್ರೆಗೆ ಹೋಗಲಿದ್ದಾರೆ. ಅದ್ದರಿಂದ ನಾಳೆ ಸ್ಪೀಕರ್ ಅಧಿಕಾರಿಗಳ ಸಭೆ ಕರೆದು ಆದೇಶ ಹೊರಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.

    ಅಮಾನತುಗೊಂಡಿದ್ದ ಶಾಸಕರು
    1. ಅಶ್ವಥ್ ನಾರಾಯಣ, ಮಲ್ಲೇಶ್ವರ
    2. ಎಸ್.ಆರ್ ವಿಶ್ವನಾಥ್, ಯಲಹಂಕ
    3. ಮುನಿರತ್ನ, ಆರ್‍ಆರ್ ನಗರ
    4. ಬೈರತಿ ಬಸವರಾಜು, ಕೆಆರ್ ಪುರ
    5. ಸುರೇಶ್ ಗೌಡ, ತುಮಕೂರು ಗ್ರಾ.
    6. ಚನ್ನಬಸಪ್ಪ, ಶಿವಮೊಗ್ಗ
    7. ಸಿ.ಕೆ. ರಾಮಮೂರ್ತಿ, ಜಯನಗರ
    8. ಧೀರಜ್ ಮುನಿರಾಜು, ದೊಡ್ಡಬಳ್ಳಾಪುರ
    9. ಬಿ.ಪಿ. ಹರೀಶ್, ಹರಿಹರ
    10. ಯಶ್ಪಾಲ್ ಸುವರ್ಣ, ಉಡುಪಿ
    11. ಭರತ್ ಶೆಟ್ಟಿ, ಮಂಗಳೂರು
    12. ಉಮಾನಾಥ್ ಕೋಟ್ಯಾನ್, ಮೂಡುಬಿದರೆ
    13. ಎಂ.ಆರ್ ಪಾಟೀಲ್, ಕುಂದಗೋಳ
    14. ಶೈಲೇಂದ್ರ ಬೆಲ್ದಾಳೆ, ಬೀದರ್ ದಕ್ಷಿಣ
    15. ಶರಣು ಸಲಗಾರ್, ಬಸವಕಲ್ಯಾಣ
    16. ಬಸವರಾಜ ಮತ್ತಿಮೂಡ್, ಕಲಬುರಗಿ ಗ್ರಾ.
    17. ಚಂದ್ರು ಲಮಾಣಿ, ಶಿರಹಟ್ಟಿ
    18. ದೊಡ್ಡನಗೌಡ ಪಾಟೀಲ್, ಕುಷ್ಟಗಿ

    ಅಮಾನತು ಅವಧಿಯಲ್ಲಿ ಏನೆಲ್ಲ ನಿಷಿದ್ಧ ಆಗಿತ್ತು?
    * ಅಮಾನತು ಅವಧಿಯಲ್ಲಿ ಶಾಸಕರು ವಿಧಾನಸಭೆಯ ಸಭಾಂಗಣ, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸುವಂತಿರಲಿಲ್ಲ.
    * ಅಮಾನತುಗೊಂಡ ಸದಸ್ಯರಾಗಿರುವ ವಿಧಾನಮಂಡಲದ/ವಿಧಾನ ಸಭೆಯ ಸ್ಥಾಯಿ ಸಮಿತಿಗಳ ಸಭೆಗಳಲ್ಲಿಯೂ ಭಾಗವಹಿಸುವಂತಿರಲಿಲ್ಲ.
    * ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಅವರುಗಳ ಹೆಸರಿನಲ್ಲಿ ಯಾವುದೇ ವಿಷಯವನ್ನು ನಮೂದು ಮಾಡುವಂತಿರಲ್ಲ.
    * ಅಮಾನತ್ತಿನ ಅವಧಿಯಲ್ಲಿ ಶಾಸಕರು ನೀಡುವ ಯಾವುದೇ ಸೂಚನೆಗಳನ್ನು ಸ್ವೀಕರಿಸಲಾಗುವುದಿಲ್ಲ.
    * ಅಮಾನತ್ತಿನ ಅವಧಿಯಲ್ಲಿ ನಡೆಯುವ ಸಮಿತಿಗಳ ಚುನಾವಣೆಯಲ್ಲಿ ಶಾಸಕರು ಮತದಾನ ಮಾಡುವಂತಿರಲಿಲ್ಲ.
    * ಅಮಾನತ್ತಿನ ಅವಧಿಯಲ್ಲಿ ಶಾಸಕರು ಯಾವುದೇ ದಿನ ಭತ್ಯೆಯನ್ನು ಪಡೆಯಲು ಅರ್ಹರಿರಲಿಲ್ಲ.

  • ಬಿಜೆಪಿ ಶಾಸಕರ ಅಮಾನತು ಹಿಂಪಡೆಯುವ ಬಗ್ಗೆ ನಿರ್ಧಾರ ಮಾಡಿದ್ದೇವೆ: ಯುಟಿ ಖಾದರ್

    ಬಿಜೆಪಿ ಶಾಸಕರ ಅಮಾನತು ಹಿಂಪಡೆಯುವ ಬಗ್ಗೆ ನಿರ್ಧಾರ ಮಾಡಿದ್ದೇವೆ: ಯುಟಿ ಖಾದರ್

    ಬೆಂಗಳೂರು: ಬಿಜೆಪಿ ಶಾಸಕರ ಅಮಾನತು (BJP MLA’s Suspension) ಹಿಂಪಡೆಯುವ ಬಗ್ಗೆ ನಿರ್ಧಾರ ಮಾಡಿದ್ದೇವೆ ಎಂದು ಸ್ಪೀಕರ್ ಯುಟಿ ಖಾದರ್ (UT Khader) ತಿಳಿಸಿದ್ದಾರೆ.

    ಬಿಜೆಪಿ ಅಮಾನತ್ತಾದ ಶಾಸಕರ ಬಗ್ಗೆ ಸಂಜೆ ಸಭೆ ಹಿನ್ನೆಲೆ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿವೇಶನ ನಡೆಯುವ ಸಂಧರ್ಭದಲ್ಲಿ ಸಂವಿಧಾನ ಪೀಠಕ್ಕೆ ಅಗೌರವ ತೋರಿಸಿದ್ದರು. ಅದರ ಬಗ್ಗೆ ಕ್ರಮ ತೆಗೆದುಕೊಂಡಿದ್ದೆವು. ಈ ಮಧ್ಯೆ ಅಮಾನತು ಆದೇಶ ವಾಪಸ್ ಪಡೆಯುವಂತೆ ವಿಪಕ್ಷ ನಾಯಕರು, ನಾಯಕರ ಬೇಡಿಕೆ ಇತ್ತು. ಚರ್ಚೆ ಸಂಧರ್ಭದಲ್ಲಿ ಘಟನೆ ನಡೆದಿದೆ ಎಂದಿದ್ದರು. ಇದರ ಬಗ್ಗೆ ಇಂದು ಚರ್ಚೆ ಇದೆ. ಚರ್ಚೆ ಬಳಿಕ ನಿರ್ಧಾರ ಆಗಲಿದೆ ಎಂದರು. ಇದನ್ನೂ ಓದಿ: ಟೆಸ್ಟ್‌ ನಿವೃತ್ತಿ ಬಳಿಕ ಟೆಂಪಲ್‌ ರನ್‌; ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ವಿರುಷ್ಕಾ ದಂಪತಿ ಭೇಟಿ

    ಸಿಎಂ, ವಿಪಕ್ಷ ನಾಯಕ ಎಲ್ಲರೂ ಸಭೆಯಲ್ಲಿ ಇರುತ್ತಾರೆ. ಅಂದು ಆದ ಘಟನೆಯನ್ನ ವಿಧಾನಸಭೆಯಲ್ಲಿ ಚರ್ಚೆ ಮಾಡಿ, ತೀರ್ಮಾನ ಮಾಡಲಾಯಿತು. ಬಹುಮತ ಇರುವ ಶಾಸಕರ ನಿರ್ಣಯದ ಮೇಲೆ ತೆಗೆದುಕೊಂಡ ಕ್ರಮ ಅದು. ಅಮಾನತು ಮಾಡಿ ಎರಡು ತಿಂಗಳಾಗಿದೆ. ಹೆಚ್ಚು ಕಡಿಮೆ ಆದೇಶ ವಾಪಸ್ ಆಗಲಿದೆ. ಶಾಸಕ ಮಿತ್ರರು ನಮ್ಮವರೇ, ಸಕರಾತ್ಮಕ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನಟ ಮಡೆನೂರು ಮನು ರೇಪ್ ಕೇಸ್ – 31 ತಿಂಗಳ ವಾಟ್ಸಾಪ್ ಚಾಟ್ ಪಡೆದಿರೋ ಪೊಲೀಸರು

    ವಿಧಾನಸೌಧ ಗೈಡೆಡ್ ಟೂರ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗೈಡೆಡ್ ಟೂರ್ ಮೂಲಕ ವಿಧಾನಸೌಧದ ಪರಂಪರೆ, ಭವ್ಯತೆ, ಇತಿಹಾಸ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಉದ್ದೇಶವಿದೆ. ವಿಧಾನಸೌಧ ನಮ್ಮದು ಎಂಬ ಭಾವನೆ ಜನರಿಗೆ ಬರಬೇಕು. ಗೈಡೆಡ್ ಟೂರ್ ಬಗ್ಗೆ ಸಿಎಂ ಜೊತೆ ಚರ್ಚಿಸಿ ಆರಂಭಿಸಲಾಗಿದೆ. ಈ ಪ್ರವಾಸದ ಹೊಣೆ ಪ್ರವಾಸೋದ್ಯಮ ಇಲಾಖೆಗೆ ವಹಿಸಲಾಗಿದೆ. ಗೈಡೆಡ್ ಟೂರ್ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಉಳಿದಂತೆ ಪ್ರತಿಯೊಬ್ಬರಿಗೂ ತಲಾ 50 ರೂ. ನಿಗದಿಪಡಿಸಲಾಗಿದೆ. ಯಾಕೆ 50 ರೂ. ಅಂತ ಕೆಲವರು ಕೇಳುತ್ತಾರೆ. ಯಾರ ಬಳಿ ಫೋನ್ ಇರಲ್ವೋ ಅವರಿಂದ 50 ರೂ. ಪಡೆಯಲ್ಲ ಎಂದು ತಮಾಷೆ ಮಾಡಿದರು. ಇದನ್ನೂ ಓದಿ: ಸಕಲೇಶಪುರ | ಭಾರೀ ಗಾಳಿ ಮಳೆಗೆ ಹೋಟೆಲ್ ಗೋಡೆ ಕುಸಿತ – ನಾಲ್ವರಿಗೆ ಗಾಯ