Tag: UT Khadar

  • ಬೂತ್‍ಗಳಿಗೆ ಹಣ ನೀಡಿಲ್ಲ- ಸಚಿವರ ಕೊಠಡಿಯಲ್ಲೇ ಕಿತ್ತಾಡಿಕೊಂಡ ಕೈ ಮುಖಂಡರು

    ಬೂತ್‍ಗಳಿಗೆ ಹಣ ನೀಡಿಲ್ಲ- ಸಚಿವರ ಕೊಠಡಿಯಲ್ಲೇ ಕಿತ್ತಾಡಿಕೊಂಡ ಕೈ ಮುಖಂಡರು

    ಬಳ್ಳಾರಿ: ಲೋಕಸಭಾ ಉಪಚುನಾವಣೆಯಲ್ಲಿ ಬೂತ್‍ಗಳಿಗೆ ಹಣ ನೀಡಿಲ್ಲವೆಂದು ವಸತಿ ಸಚಿವ ಯು.ಟಿ.ಖಾದರ್ ತಂಗಿದ್ದ ರೂಮಿನಲ್ಲೇ ಕಾಂಗ್ರೆಸ್ ಮುಖಂಡರು ಪರಸ್ಪರ ಕಿತ್ತಾಡಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಹೌದು, ಬಳ್ಳಾರಿ ಲೋಕಸಭೆಯ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವೇ ಅಖಾಡಕ್ಕೆ ಧುಮುಕಿದ್ದು, ಸರ್ಕಾರದ ಸಚಿವರು ಭಾರೀ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಚಾರದ ಹಿನ್ನೆಲೆ ಹಾಗೂ ಬಳ್ಳಾರಿ ನಗರದ ಉಸ್ತುವಾರಿಯನ್ನು ಹೊಂದಿದ್ದ ಯುಟಿ ಖಾದರ್ ನಕ್ಷತ್ರ ಹೋಟೆಲ್‍ನ ಕೊಠಡಿ ಸಂಖ್ಯೆ 401ರಲ್ಲಿ ತಂಗಿದ್ದರು.

    ಇಂದು ಸಚಿವರು ತಂಗಿದ್ದ ಕೊಠಡಿಗೆ ಆಗಮಿಸಿದ ಜಿಲ್ಲಾ ಕಾಂಗ್ರೆಸ್ ಮುಖಂಡರು ಖಾದರ್ ಸಮ್ಮುಖದಲ್ಲೇ ಕಿತ್ತಾಡಿಕೊಂಡಿದ್ದಾರೆ. ಬೂತ್‍ಗಳಿಗೆ ಸರಿಯಾಗಿ ಹಣ ನೀಡಿಲ್ಲ ಎನ್ನುವ ಕಾರಣಕ್ಕೆ ಪರಸ್ಪರ ಕೈ ಮುಖಂಡರು ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಕೈ ಕೈ ಮಿಲಾಯಿಸಲು ಸಹ ಮುಂದಾಗಿದ್ದರು. ಒಬ್ಬರಿಗೊಬ್ಬರು ರಿವೇಂಜ್ ತೆಗೆದುಕೊಳ್ಳುವ ಮಟ್ಟಕ್ಕೆ ಜಗಳ ತಾರಕಕ್ಕೇರಿತ್ತು. ಸಿಟ್ಟಿಗೆದ್ದ ಮುಖಂಡರನ್ನು ಸಮಾಧಾನಪಡಿಸಲು ಕೈ ನಾಯಕರ ಹರಸಾಹಸವನ್ನು ಪಟ್ಟಿದ್ದರು. ಪ್ರಮುಖವಾಗಿ ಮಹಿಳಾ ಮುಖಂಡರು ಹೆಚ್ಚಿನ ಅಸಮಾಧಾನವನ್ನು ಹೊರಹಾಕಿದ್ದರು ಎಂದು ಹೇಳಲಾಗುತ್ತಿದೆ.

    ಇದರ ನಡುವೆ ಜಿಲ್ಲಾಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿರುವ ಮೀನಾಕ್ಷಿ ಎಂಬವರು, ಕಾಂಗ್ರೆಸ್ ಪರ ಕೆಲಸ ಮಾಡಲು ಹಣ ಪಡೆಯಲು ಸಚಿವರ ಕೊಠಡಿಯಲ್ಲಿ ಇದ್ದರು ಎನ್ನಲಾಗುತ್ತಿದೆ. ಸರ್ಕಾರಿ ನೌಕರರಿಗೆ ಸಚಿವ ಯು ಟಿ ಖಾದರ್ ರೂಮ್ ನಲ್ಲಿಯೇನು ಕೆಲಸ? ಎಂಬ ಮಾತುಗಳ ಸಹ ಕೇಳಿಬರುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಸಾಯಿಖಾನೆಗೆ ಹಣ ಕೊಟ್ಟಿದ್ದು ಯಾಕೆ: ಕಟೀಲ್‍ಗೆ ಸವಾಲು ಎಸೆದು ಸಮರ್ಥನೆ ಕೊಟ್ಟ ಖಾದರ್

    ಕಸಾಯಿಖಾನೆಗೆ ಹಣ ಕೊಟ್ಟಿದ್ದು ಯಾಕೆ: ಕಟೀಲ್‍ಗೆ ಸವಾಲು ಎಸೆದು ಸಮರ್ಥನೆ ಕೊಟ್ಟ ಖಾದರ್

    ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯ 15 ಕೋಟಿ ರೂಪಾಯಿ ಅನುದಾನವನ್ನು ಮಂಗಳೂರಿನ ಕಸಾಯಿಖಾನೆಗೆ ನೀಡಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಸಮರ್ಥನೆ ನೀಡಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕುದ್ರೋಳಿಯಲ್ಲಿರುವ ಕಸಾಯಿಖಾನೆ ಬಹಳ ಹಳೆಯದ್ದಾಗಿದೆ. ಕಸಾಯಿಖಾನೆ ಅಭಿವೃದ್ಧಿಗೆ ಜನ ಬೇಡಿಕೆಯನ್ನಿಟ್ಟಿದ್ದರು. ಈ ವಿಚಾರ ಬಿಜೆಪಿಯವರಿಗೂ ಗೊತ್ತಿದೆ. ಸ್ಮಾರ್ಟ್ ಸಿಟಿಯಿಂದ ಹಣ ಬರೋದು ಸ್ವಚ್ಛತೆಗಾಗಿ. ಹೀಗಾಗಿ ಘನ ತಾಜ್ಯ ನಿಯಂತ್ರಣ ಬರಬೇಕಾದರೆ ಕಸಾಯಿಖಾನೆಯ ಅಭಿವೃದ್ಧಿ ಆಗಬೇಕಿದೆ. ಬಿಜೆಪಿಯವರು ಈ ವಿಚಾರದಲ್ಲಿ ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರಕ್ಕೆ ಪತ್ರ ಬರೆದು ಅನುದಾನ ನಿಲ್ಲಿಸಲಿ ಅಂತ ಯುಟಿ ಖಾದರ್ ಸವಾಲು ಹಾಕಿದ್ದಾರೆ. ಇದನ್ನು ಓದಿ: ಸ್ಮಾರ್ಟ್ ಸಿಟಿಯ 15 ಕೋಟಿ ರೂ. ಕಸಾಯಿಖಾನೆಗೆ ನೀಡಿದ್ರು ಸಚಿವ ಖಾದರ್!

    ಮಂಗಳೂರಿನ ಸ್ವಚ್ಛತೆಗೆ ಕಸಾಯಿಖಾನೆಗೆ 15 ಕೋಟಿ ರೂ ನೀಡಲಾಗಿದೆ. ಕಸಾಯಿಖಾನೆಯಲ್ಲಿ ಡಾಕ್ಟರ್‍ಗಳಿಗೆ ಕೂರುವ ವ್ಯವಸ್ಥೆ ಇಲ್ಲ. ಘನತಾಜ್ಯದ ವಿಲೇವಾರಿಗೆ ವ್ಯವಸ್ಥೆ ಇರಲಿಲ್ಲ. ಹೀಗಾಗಿ 15 ಕೋಟಿ ರೂಪಾಯಿ ನೀಡಲಾಗಿದೆ. ಬಿಜೆಪಿಯವರಿಗೆ ಆಡಳಿತದ ಅನುಭವ ಕಡಿಮೆ ಇದೆ ಎಂದು ತಿರುಗೇಟು ನೀಡಿದರು.

    ಈ ವಿಚಾರವಾಗಿ ಬೋರ್ಡ್ ಮೀಟಿಂಗ್ ನಲ್ಲಿ ತೀರ್ಮಾನಿಸಿ ನಿರ್ಧಾರ ಮಾಡಲಾಗಿದೆ. ಬೋರ್ಡ್ ಮೀಟಿಂಗ್ ನಲ್ಲಿ ಬಿಜೆಪಿಯವರೂ ಇದ್ದಾರೆ. ಮೀಟಿಂಗ್ ನಲ್ಲಿ ಯಾಕೆ ಬಿಜೆಪಿಯವರು ಚಕಾರ ಎತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದೆ. ಬಿಜೆಪಿಯವರು ಬೇಕಿದ್ದರೆ ಪ್ರಸ್ತಾವನೆ ನಿಲ್ಲಿಸಲಿ. ಕೇಂದ್ರ ಸರ್ಕಾರಕ್ಕೆ ಅನುದಾನ ಕಡಿತಗೊಳಿಸುವಂತೆ ಪತ್ರ ಬರೆಯಿರಿ. ವಿರುದ್ಧ ಮಾತನಾಡಿದ ಎಲ್ಲಾ ಬಿಜೆಪಿ ನಾಯಕರು ಪತ್ರ ಬರೆದು ಅನುದಾನ ನಿಲ್ಲಿಸಲಿ. ಗೋಶಾಲೆಗಳಿಗೆ ಅನುದಾನ ನೀಡಲು ಕೇಂದ್ರಕ್ಕೆ ಪತ್ರ ಬರೆಯಲಿ. ಬಿಜೆಪಿಯವರು ಪತ್ರ ಬರೆಯುದಿಲ್ಲ ಎಂದರೆ ಛೀಮಾರಿ ಹಾಕುತ್ತಾರೆ ಎಂದು ಪತ್ರ ಬರೆಯುತ್ತಿಲ್ಲ. ಕೇಂದ್ರ ಅನುದಾನ ಕೊಟ್ಟರೆ ಗೋಶಾಲೆಗೆ ಎರಡು ಪಟ್ಟು ಜಾಸ್ತಿ ಹಣ ನೀಡುತ್ತೇವೆ ಎಂದರು. ಇದನ್ನು ಓದಿ: ಸಚಿವ ಖಾದರ್‌ಗೆ ಸ್ಮಾರ್ಟ್ ಸಿಟಿಗಿಂತ ಕಸಾಯಿಖಾನೆಯೇ ಮುಖ್ಯ: ಸುನೀಲ್ ಕುಮಾರ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶೀಘ್ರದಲ್ಲೇ ಮನೆ ರಿಪೇರಿ, ಸಂಪೂರ್ಣ ಕುಸಿದ ಮನೆಗೆ ಹೆಚ್ಚಿನ ಅನುದಾನ – ಯು.ಟಿ ಖಾದರ್

    ಶೀಘ್ರದಲ್ಲೇ ಮನೆ ರಿಪೇರಿ, ಸಂಪೂರ್ಣ ಕುಸಿದ ಮನೆಗೆ ಹೆಚ್ಚಿನ ಅನುದಾನ – ಯು.ಟಿ ಖಾದರ್

    ಮಡಿಕೇರಿ: ಪ್ರಕೃತಿಯ ವಿಕೋಪಕ್ಕೆ ಕೊಡಗು ಬಲಿಯಾಗಿದೆ. ಜಿಲ್ಲೆಯ ಜನ ನೋವಿನಲಿದ್ದಾರೆ. ರಾಜ್ಯ ಸರ್ಕಾರ ಕೊಡಗಿನ ಪರ ಇದ್ದು, ಮನೆ ರಿಪೇರಿಗೆ ಅನುದಾನವನ್ನು ಶೀಘ್ರದಲ್ಲೇ ನೀಡುತ್ತೇವೆ ಎಂದು ವಸತಿ ಸಚಿವ ಯು.ಟಿ ಖಾದರ್ ಭರವಸೆ ನೀಡಿದ್ದಾರೆ.

    ಮಡಿಕೇರಿ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರೀ ಮಳೆಯಿಂದ ಪ್ರವಾಹ ಹಾಗೂ ಭೂಕುಸಿತ ಉಂಟಾದ ಪರಿಣಾಮ ಕೊಡಗಿನ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಸರ್ಕಾರ ಜಿಲ್ಲಾಡಳಿತ ಮೂಲಕ ಸಮರ್ಪಕ ಅನುದಾನ ನೀಡುತ್ತದೆ. ಮನೆ ರಿಪೇರಿಗೆ ಅನುದಾನ ಹಾಗೂ ಸಂಪೂರ್ಣ ಕುಸಿದ ಮನೆಗೆ ಹೆಚ್ಚಿನ ಅನುದಾನ ನೀಡುತ್ತೇವೆ ಅಂತ ಹೇಳಿದ್ರು.

    ಅವೈಜ್ಞಾನಿಕ ಮನೆ ನಿರ್ಮಿಸಬೇಡಿ:
    ಜಾಗ ಕಳೆದುಕೊಂಡವರಿಗೆ ಜಾಗ ಒದಗಿಸುವ ಯೋಜನೆ ಇದೆ. 7 ಕಡೆ ಜಾಗ ಗುರುತು ಮಾಡಲಾಗಿದೆ. ಹೌಸಿಂಗ್ ಕಾರ್ಪೋರೇಶನ್ ತಾತ್ಕಾಲಿಕವಾಗಿ ಜಿಲ್ಲೆಗೆ ಬರಲಿದೆ. ನೂತನ ತಂತ್ರಜ್ಞಾನದ ಮೂಲಕ ಮನೆ ಕಟ್ಟಲಾಗುವುದು. ಕುಶಾಲನಗರ ಭಾಗದಲ್ಲಿ ಜಾಗ ಗುರುತು ಮಾಡಲಾಗಿದೆ. ಮನೆ ಕಳೆದುಕೊಂಡವರ ಸಮೀಕ್ಷೆ ನಡೆಸಲಾಗುವುದು. ಕುಶಾಲನಗರದಲ್ಲಿ ಮನೆ ಕಳೆದುಕೊಂಡವರ 836 ಅರ್ಜಿಗಳು ಬಂದಿವೆ. ನಿಯಮಗಳನ್ನು ಕೂಡ ಜನ ಪಾಲಿಸಬೇಕು. ಜನ ಮನೆ ಕಟ್ಟುವ ಮುನ್ನ ಯೋಚನೆ ಮಾಡಬೇಕು. ಅವೈಜ್ಞಾನಿಕ ಮನೆ ನಿರ್ಮಾಣ ಮಾಡಬಾರದು ಅಂದ್ರು.

    ಕೊಡಗಿನ ಮರುನಿರ್ಮಾಣ:
    ಕಷ್ಟಕಾಲದಲ್ಲಿ ಮಾನವೀಯತೆಯನ್ನು ಮನುಕುಲ ಪ್ರದರ್ಶಿಸಿದೆ. ಕೊಡಗಿಗೆ ಜನಸಾಮಾನ್ಯರು ಸಹಾಯ ಮಾಡಿದ್ದಾರೆ. ಸಮಸ್ಯೆಯನ್ನು ವೈಜ್ಞಾನಿಕ ಪರಿಹಾರಿಸುತ್ತೇವೆ. ನಿರೀಕ್ಷೆಗಿಂತ ಉತ್ತಮವಾಗಿ ಕೊಡಗನ್ನು ಮರು ನಿರ್ಮಾಣ ಮಾಡ್ತೇವೆ ಅಂತ ಖಾದರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=KYPt_BTDW7s

  • ಧರ್ಮಸ್ಥಳಕ್ಕೆ ಸಚಿವ ಯು.ಟಿ ಖಾದರ್ ಭೇಟಿ

    ಧರ್ಮಸ್ಥಳಕ್ಕೆ ಸಚಿವ ಯು.ಟಿ ಖಾದರ್ ಭೇಟಿ

    ದಕ್ಷಿಣಕನ್ನಡ: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇಂದು ಧರ್ಮಸ್ಥಳಕ್ಕೆ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ ಖಾದರ್ ಭೇಟಿ ನೀಡಿದ್ದಾರೆ.

    ದೇವಸ್ಥಾನದ ಒಳಗೆ ಹೋಗದೆ ಹುಂಡಿಗೆ ಕಾಣಿಕೆ ಹಾಕಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಖಾದರ್ ಅವರನ್ನು ವೀರೇಂದ್ರ ಹೆಗ್ಗಡೆಯವರು ಸನ್ಮಾನಿಸಿ ಗೌರವಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್ ಸಚಿವರ ಜೊತೆಗಿದ್ದರು.

    ನಂತರ ಧರ್ಮಸ್ಥಳ ಕ್ಷೇತ್ರದ ಸಮೀಪದಲ್ಲಿರುವ ಕನ್ಯಾಡಿ ಕ್ಷೇತಕ್ಕೆ ಭೇಟಿ ನೀಡಿದ ಸಚಿವರು ಶ್ರೀರಾಮನಿಗೆ ನಮಿಸಿದರು. ಇದೇ ವೇಳೆ ಮಾತನಾಡಿದ ಸಚಿವರು, ರಾಜ್ಯದ ಜನ ಯಾವುದೇ ಪಕ್ಷಕ್ಕೆ ಸಂಪೂರ್ಣ ಬಹುಮತ ಕೊಟ್ಟಿಲ್ಲದ ಕಾರಣ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮುಂದಿನ 5 ವರ್ಷಗಳ ಕಾಲ ಜನ ಸಾಮಾನ್ಯರ ಕೆಲಸ ಮತ್ತು ರಾಜ್ಯದ ಅಭಿವೃದ್ಧಿಯ ದೃಷ್ಟಿಯನ್ನಿಟ್ಟುಕೊಂಡು ಸರ್ಕಾರ ಕೆಲಸ ಮಾಡುತ್ತದೆ ಎಂದು ಹೇಳಿದರು.

    ಸರ್ಕಾರದಲ್ಲಿ ಯು.ಟಿ ಖಾದರ್ ಅವರಿಗೆ ನಗರಾಭಿವೃದ್ಧಿ ಹಾಗೂ ವಸತಿ ಖಾತೆಯನ್ನು ನೀಡಲಾಗಿದೆ. ಈ ಖಾತೆಗಳಿಗೆ ಸಂಬಂಧಿಸಿದಂತೆ ಜನಸಾಮನ್ಯರ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.