Tag: UT Khadar

  • ಅಂಡರ್‌ವರ್ಲ್ಡ್ ಸೇರಿ ಹಲವು ಕಡೆಗಳಿಂದ ಜೀವ ಬೆದರಿಕೆ ಬಂದಿದೆ – ಯುಟಿ ಖಾದರ್

    ಅಂಡರ್‌ವರ್ಲ್ಡ್ ಸೇರಿ ಹಲವು ಕಡೆಗಳಿಂದ ಜೀವ ಬೆದರಿಕೆ ಬಂದಿದೆ – ಯುಟಿ ಖಾದರ್

    ಬೀದರ್: ಈ ಹಿಂದೆ ಕೆಲವು ಬಾರಿ ಅಂಡರ್‌ವರ್ಲ್ಡ್ ಸೇರಿದಂತೆ ಹಲವು ಕಡೆಗಳಿಂದ ಜೀವ ಬೆದರಿಕೆ ಕರೆಗಳು ಬಂದಿವೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್  (UT Khadar) ಹೇಳಿದ್ದಾರೆ.

    ಪಿಎಫ್‌ಐನಿಂದ ಯುಟಿ ಖಾದರ್‌ಗೆ ಜೀವ ಬೆದರಿಕೆ ಬಂದಿದೆ ಎಂಬ ಅನುಪಮಾ ಶೆಣೈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನಗಾಗಿ ಮಂಗಳೂರಿನಲ್ಲಿ ಎನ್‌ಐಎ ಸ್ಥಾಪನೆ ಮಾಡುವುದು ಬೇಡ, ಜಿಲ್ಲೆಯ ಜನಕ್ಕಾಗಿ ಮಾಡುವುದಾದರೆ ಮಾಡಲಿ. ಎಲ್ಲಿ ಹುಟ್ಟಬೇಕು? ಎಲ್ಲಿ ಸಾಯಬೇಕು? ಅದನ್ನ ದೇವರು ಬರೆದಿದ್ದಾನೆ. ನೆಮ್ಮದಿಯಾಗಿ ಸಾಯುವ ಪರಿಸ್ಥಿತಿ ದೇವರು ಮಾಡಿಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ದೇವರು ಇಟ್ಟಂತೆ ಇರಲಿ, ನಮ್ಮ ಕೈಯಲ್ಲಿ ಏನು ಇಲ್ಲ ಎಂದು ಹೇಳಿದರು.ಇದನ್ನೂ ಓದಿ: ನಟಿ ಲಾಸ್ಯ ನಾಗರಾಜ್ ತಾಯಿ ಮೇಲೆ ಚಿಕ್ಕಮ್ಮನಿಂದ ಹಲ್ಲೆ

    ಇದೇ ವೇಳೆ ಪಹಲ್ಗಾಮ್ ದಾಳಿ ಖಂಡಿಸಿ ಮಾತನಾಡಿದ ಅವರು, ಕೃತ್ಯವನ್ನು ಈಗಾಗಲೇ ಎಲ್ಲರೂ ಖಂಡಿಸಿದ್ದಾರೆ. ದಾಳಿಕೋರರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವದರ ಜೊತೆಗೆ ಅದರ ಹಿಂದೆ ಯಾರಿದ್ದಾರೋ ಅವರನ್ನು ಮಟ್ಟ ಹಾಕುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು. ದೇಶದ ಜನರು ಮೋದಿಯವರಿಂದ ಇದನ್ನೇ ಅಪೇಕ್ಷೆ ಪಡುತ್ತಾರೆ. ದಾಳಿಗೊಳಗಾದ ಜನರಿಗೆ ಮಾತ್ರವಲ್ಲ, ಇಡಿ ದೇಶದ ಜನರಿಗೆ ನ್ಯಾಯಕೊಡುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು ಎಂದರು.

    ದೇಶದ ಸೌಹಾರ್ದತೆಯನ್ನು ಕದಡುವುದು ಭಯೋತ್ಪಾದಕ ಕೃತ್ಯದ ಉದ್ದೇಶವಾಗಿದ್ದು, ಜಾತ್ಯಾತೀತತೆಯನ್ನ ಹಾಳು ಮಾಡಿ, ದೇಶವನ್ನು ದುರ್ಬಲಗೊಳಿಸುವುದು ಅವರ ಗುರಿಯಾಗಿದೆ. ಈ ಕೃತ್ಯದ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಅದನ್ನೆಲ್ಲ ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು. ಯುದ್ಧ ಮಾಡಬೇಕಾ ಅಥವಾ ಬೇಡವಾ? ಎನ್ನುವುದು ಮೋದಿ ಹಾಗೂ ಸರ್ವಪಕ್ಷಗಳಿಗೆ ಬಿಟ್ಟಿದ್ದು ಎಂದರು.

    ಇನ್ನೂ ಕೇಂದ್ರದಿಂದ ಜನಗಣತಿ ಜೊತೆಗೆ ಜಾತಿಗಣತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದು ಕೇಂದ್ರ ಮತ್ತು ರಾಜ್ಯಕ್ಕೆ ಬಿಟ್ಟಿದ್ದು, ಆಡಳಿತ ಪಕ್ಷ, ಪ್ರತಿಪಕ್ಷಗಳಿಗೆ ಮಿತ್ರನಾಗಿ ನಾನು ಸ್ಪೀಕರ್ ಆಗಿದ್ದೇನೆ. ನನ್ನ ಬಾಯಿಗೆ ಈಗ ಬೀಗ ಹಾಕಿದ್ದು, ನನ್ನ ಪ್ರಕಾರ ನಾನೂ ಮಾತನಾಡಿದ್ದೇನೆ ಎಂದು ಹೇಳಿದರು.ಇದನ್ನೂ ಓದಿ: ಪಾಕಿಸ್ತಾನಕ್ಕೆ ಒಂದೇ ಒಂದು ಟೊಮ್ಯಾಟೊ ನೀಡಲ್ಲ – ಕೋಲಾರ ರೈತರ ಶಪಥ

  • ಗ್ರೇಟರ್ ಬೆಂಗಳೂರು ವರದಿ ಸಲ್ಲಿಕೆ | 7 ಪಾಲಿಕೆ ರಚಿಸಲು ಶಿಫಾರಸು – ವರದಿಯಲ್ಲಿ ಏನಿದೆ?

    ಗ್ರೇಟರ್ ಬೆಂಗಳೂರು ವರದಿ ಸಲ್ಲಿಕೆ | 7 ಪಾಲಿಕೆ ರಚಿಸಲು ಶಿಫಾರಸು – ವರದಿಯಲ್ಲಿ ಏನಿದೆ?

    ಬೆಂಗಳೂರು: ಬಿಜೆಪಿ ವಿರೋಧದ ನಡುವೆಯೇ ಗ್ರೇಟರ್ ಬೆಂಗಳೂರು ವಿಧೇಯಕ ಸಂಬಂಧಿಸಿದಂತೆ ಜಂಟಿ ಸದನ ಸಮಿತಿ ವರದಿ ಸಲ್ಲಿಕೆಯಾಗಿದೆ. ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆಯ ವಿಧಾನಮಂಡಲ ಜಂಟಿ ಸದನ ಸಮಿತಿಯ ಸ್ಪೀಕರ್ ಯು.ಟಿ ಖಾದರ್ (UT Khadar) ಅವರಿಗೆ ವರದಿ ಸಲ್ಲಿಕೆ ಮಾಡಿದರು. ಸಮಿತಿ ಕೆಲವೊಂದು ಮಹತ್ವದ ಶಿಫಾರಸು ಮಾಡಿದೆ.

    ವರದಿ ಸ್ವೀಕರಿಸಿ ಮಾತನಾಡಿದ ಸ್ಪೀಕರ್ ಯು.ಟಿ ಖಾದರ್, ಗ್ರೇಟರ್ ಬೆಂಗಳೂರು ಮಸೂದೆ ವಿಧಾನಸಭೆಯಲ್ಲಿ ಜುಲೈನಲ್ಲಿ ಮಂಡನೆ ಮಾಡಿದ ಬಳಿಕ ಸದನದಲ್ಲಿ ಚರ್ಚೆ ಆಗಿತ್ತು. ಸಾಧಕ-ಬಾಧಕಗಳ ಚರ್ಚೆ ಉದ್ದೇಶದಿಂದ ಜಂಟಿ ಸದನ ಸಮಿತಿ ರಚನೆ ಮಾಡಲಾಗಿತ್ತು. ಇದೀಗ ಸಮಿತಿ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ಮುಂದಿನ ಅಧಿವೇಶನದಲ್ಲಿ ವರದಿ ಮಂಡಿಸಲಾಗುವುದು ಎಂದರು.ಇದನ್ನೂ ಓದಿ: ದಲಿತ ಸಿಎಂ ಆಗಲೇಬೇಕು – ಜ್ಞಾನಪ್ರಕಾಶ ಸ್ವಾಮೀಜಿ ಆಗ್ರಹ

    ಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ ಮಾತಾಡಿ, ಐದು ತಿಂಗಳಲ್ಲಿ ಈ ಮಸೂದೆ ಸಂಬಂಧ ಸಭೆ ನಡೆಸಿದ್ದೇವೆ. ಕಾನೂನು ತಜ್ಞರ ಜೊತೆ ಸಭೆ ಮಾಡಿದ್ದೇವೆ. ಸಾರ್ವಜನಿಕರು, ಸಂಘಟನೆಗಳಿಂದ, ತಜ್ಞರಿಂದ ಸಲಹೆ ಪಡೆದು ವರದಿ ಸಿದ್ಧ ಮಾಡಲಾಗಿದೆ. ಮುಂದಿನ ಅಧಿವೇಶನದಲ್ಲಿ ವರದಿ ಮಂಡನೆ ಆಗಲಿದೆ ಎಂದು ತಿಳಿಸಿದರು.

    ಗ್ರೇಟರ್ ಬೆಂಗಳೂರು ಸಮಿತಿ ವರದಿ ಪ್ರಮುಖಾಂಶಗಳು:
    > ಬಿಬಿಎಂಪಿ ಬದಲಾಗಿ ಗರಿಷ್ಠ 7 ನಗರ ಪಾಲಿಕೆಗಳನ್ನ ರಚನೆ ಮಾಡಲು ಶಿಫಾರಸು ಮಾಡಲಾಗಿದೆ. ಈಗಲೇ 7 ಪಾಲಿಕೆ ಮಾಡಬೇಕು ಅಂತ ಇಲ್ಲ. ಎಷ್ಟು ಪಾಲಿಕೆ ಮಾಡಬೇಕು ಅಂತ ಸರ್ಕಾರ ತೀರ್ಮಾನ ಮಾಡಲಿ ಎಂದು ಸಮಿತಿ ಹೇಳಿದೆ.

    > BMRCL, BWSSB ಸೇರಿ ಒಂದು ಏಜೆನ್ಸಿಯಿಂದ ಇನ್ನೊಂದು ಏಜೆನ್ಸಿ ಜೊತೆ ಹೊಂದಾಣಿಕೆ ಇಲ್ಲ. ಹೀಗಾಗಿ ಇವೆಲ್ಲ ಹೊಂದಾಣಿಕೆಯಿAದ ಕೆಲಸ ಮಾಡಲು, ಗ್ರೇಟರ್ ಬೆಂಗಳೂರು ಅಥಾರಿಟಿ ಮಾಡಲು ಸಲಹೆ ನೀಡಲಾಗಿದೆ.

    > ಗ್ರೇಟರ್ ಬೆಂಗಳೂರು ಅಥಾರಿಟಿಗೆ ಮುಖ್ಯಮಂತ್ರಿಗಳು ಅಧ್ಯಕ್ಷರು, ಬೆಂಗಳೂರು ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ.

    > ಪ್ರತಿ ಕಾರ್ಪೋರೇಷನ್ ಇಂಟ್ರನಲ್ ಆಡಿಟ್ ಮಾಡಲು ಸಲಹೆ. ಭ್ರಷ್ಟಾಚಾರ ಕಡಿವಾಣಕ್ಕೆ ವಿಜಿಲಿನ್ಸ್ ಸ್ಥಾಪನೆಗೆ ಸಲಹೆ.

    > ಮೇಯರ್ ಅವಧಿ 30 ತಿಂಗಳು ಅಂದರೆ 2.5 ವರ್ಷ ಅವಧಿ ಇರಬೇಕು ಅಂತ ವರದಿ ಹೇಳಿದೆ. ಆದಾಯ, ಜನಸಂಖ್ಯೆ ಅನುಗುಣವಾಗಿ ಕಾರ್ಪೋರೇಷನ್‌ಗಳನ್ನ ವಿಂಗಡಣೆ ಮಾಡಬೇಕು.

    > ವಿಂಗಡಣೆ ಮಾಡಿದ ಕಾರ್ಪೋರೇಷನ್‌ಗೆ ಹಣ ಕಡಿಮೆ ಆದರೆ ಸರ್ಕಾರವೇ ನೀಡಬೇಕು. ಪ್ರತಿ ಕಾರ್ಪೋರೇಷನ್‌ಗೆ ಬೆಂಗಳೂರು ನಾರ್ಥ್, ಈಸ್ಟ್, ವೆಸ್ಟ್, ಸೌಥ್ ಅಂತಾನೇ ಹೆಸರು ಇಡಬೇಕು.

    > ಹೊಸ ಕಾರ್ಪೋರೇಷನ್‌ಗಳಿಗೆ ಬೇರೆ ಜಿಲ್ಲೆ ಸೇರಿಸೋದಿಲ್ಲ. ಕೆಎಂಸಿ ಆಕ್ಟ್ನಲ್ಲಿ ಇರುವ ನಿಯಮದಲ್ಲಿ ಕಾರ್ಪೋರೇಷನ್‌ಗಳು ನಿರ್ಮಾಣ ಆಗಲಿದೆ.

    > ಪಾಲಿಕೆ ಜೋಡಿಸಿದಂತೆ ಅಭಿವೃದ್ಧಿ ಆಗಿರುವ ಗ್ರಾಮ ಪಂಚಾಯತಿಗಳನ್ನ ಕಾರ್ಪೋರೇಷನ್‌ಗೆ ಸೇರ್ಪಡೆ ಮಾಡಿಕೊಳ್ಳಬಹುದು.

    > ಜನಸಂಖ್ಯೆ ಮತ್ತು ಆದಾಯವನ್ನು ಇಟ್ಟುಕೊಂಡು ಕಾರ್ಪೋರೇಷನ್ ವಿಂಗಡಣೆ ಮಾಡಲು ಸಲಹೆ.

    > ಗ್ರೇಟರ್ ಬೆಂಗಳೂರು ಅಥಾರಿಟಿ ಪ್ರತಿ 3 ತಿಂಗಳಿಗೊಮ್ಮೆ ಸಭೆ ಕಡ್ಡಾಯವಾಗಿ ಮಾಡಬೇಕು.

    > ಎಕ್ಸಿಕ್ಯುಟಿವ್ ಕಮಿಟಿಯೂ ಪ್ರತಿ ತಿಂಗಳು ಕಡ್ಡಾಯವಾಗಿ ಸಭೆ ಸೇರಬೇಕು ಅಂತ ಸಲಹೆ ನೀಡಬೇಕು.ಇದನ್ನೂ ಓದಿ: ಬೆಂಗಳೂರಿನಲ್ಲಿ 12 ಎಕ್ರೆ ಜಾಗ ಗುತ್ತಿಗೆ, 29 ವರ್ಷಗಳಿಂದ ಕೋಟ್ಯಂತರ ಲಾಭ – ರಾಹುಲ್‌ ಆಪ್ತ ಪಿತ್ರೋಡಾ ವಿರುದ್ಧ ಬೃಹತ್‌ ಭೂ ಹಗರಣ ಆರೋಪ

  • ಶಿವಮೊಗ್ಗ ಪ್ರಕರಣ ದುರದೃಷ್ಟಕರ – ಯುವಕನ ಹತ್ಯೆಗೆ ಯು.ಟಿ.ಖಾದರ್ ಆಕ್ರೋಶ

    ಶಿವಮೊಗ್ಗ ಪ್ರಕರಣ ದುರದೃಷ್ಟಕರ – ಯುವಕನ ಹತ್ಯೆಗೆ ಯು.ಟಿ.ಖಾದರ್ ಆಕ್ರೋಶ

    ಶಿವಮೊಗ್ಗ: ಶಿವಮೊಗ್ಗ ಪ್ರಕರಣ ದುರದೃಷ್ಟಕರ. ಸರ್ಕಾರ ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.

    ನಗರದಲ್ಲಿ ಅನ್ಯಕೋಮಿನ ಗುಂಪೊಂದು ಯುವಕನೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ವಿಚಾರವಾಗಿ ಪಬ್ಲಿಕ್ ಟಿ.ವಿ ಜೊತೆಗೆ ಮಾತನಾಡಿದ ಅವರು, ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಪ್ರಕರಣದ ಆರೋಪಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಿ ಬಂಧಿಸಬೇಕು. ಸರ್ಕಾರಕ್ಕೆ ಇದು ನಾಚಿಕೆಗೇಡಿನ ವಿಚಾರ. ರಾಜ್ಯದ ಮಾಜಿ ಮುಖ್ಯಮಂತ್ರಿ, ಗೃಹ ಸಚಿವರು, ಹಿರಿಯ ಸಚಿವರೆಲ್ಲರೂ ಇರುವ ಪ್ರದೇಶದಲ್ಲಿ ಹಾಡಹಗಲಿನಲ್ಲಿಯೇ ಈ ಘಟನೆ ನಡೆದಿದೆ ಎಂದರೆ ಈ ಕಿಡಿಗೇಡಿಗಳಿಗೆ ಎಷ್ಟು ಧೈರ್ಯವಿದೆ. ಸರ್ಕಾರ ಹಾಗೂ ಕಾನೂನಿನ ಭಯವಿಲ್ಲ. ಇದು ದುರದೃಷ್ಟಕರ ಸಂಗತಿಯಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಯುವಕನ ಬರ್ಬರ ಹತ್ಯೆ – ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿ

    ಯಾರೋ ಮಾಡಿದ ಕೃತ್ಯಕ್ಕೆ ಯಾರನ್ನೊ ಕೊಂದು ಗಲಾಟೆ ಮಾಡುತ್ತಿದ್ದಾರೆ. ಸರ್ಕಾರ ನಷ್ಟ ಮಾಡಲು ಬಿಡಬಾರದು. ಯಾರು ಶಾಂತಿಗೆಡಿಸಲು ಪ್ರಯತ್ನಿಸುತ್ತಾರೆ ಅವರ ವಿರುದ್ಧ ಸೂಕ್ತವಾದ ಕ್ರಮಕೈಗೊಳ್ಳಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಆಡಳಿತ ಪಕ್ಷಕ್ಕೆ ನಾವು ಎಲ್ಲ ರೀತಿಯ ಕಾನೂನು ಸುವ್ಯವಸ್ಥೆಯನ್ನು ಜಾರಿಗೊಳಿಸಲು ಸಹಕಾರ ನೀಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಮುಸಲ್ಮಾನ ಗೂಂಡಾಗಳಿಂದ ಬಿಜೆಪಿ ಕಾರ್ಯಕರ್ತನ ಕೊಲೆ: ಈಶ್ವರಪ್ಪ

  • ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ಕೇಂದ್ರ ಸರ್ಕಾರ ತೆರಿಗೆ ಭಯೋತ್ಪಾದನೆ ನಡೆಸುತ್ತಿದೆ: ಖಾದರ್

    ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ಕೇಂದ್ರ ಸರ್ಕಾರ ತೆರಿಗೆ ಭಯೋತ್ಪಾದನೆ ನಡೆಸುತ್ತಿದೆ: ಖಾದರ್

    ಮಂಗಳೂರು: ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮೂಲಕ ಕೇಂದ್ರ ಸರ್ಕಾರ ತೆರಿಗೆ ಭಯೋತ್ಪಾದನೆ ನಡೆಸುತ್ತಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಇತಿಹಾಸದಲ್ಲಿ ನೋಡದ ಸಾಧನೆ ಈ ಮೂಲಕ ಆಗಿದೆ. ಪೆಟ್ರೋಲ್ ಡಿಸೇಲ್ ನಲ್ಲಿ ಶತಕ ಬಾರಿಸುವ ಮೂಲಕ ಕೇಂದ್ರ ಸರ್ಕಾರ ಸಾಧನೆಯನ್ನು ಮಾಡಿದೆ ಎಂದು ವ್ಯಂಗ್ಯವಾಡಿದರು.

    ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾದ ಆರ್ಥಿಕ ನೀತಿ ಇಲ್ಲ, ಪೆಟ್ರೋಲ್ ಟ್ಯಾಕ್ಸ್ ಮೂಲಕ ಖಜಾನೆ ತುಂಬುತ್ತಿದ್ದಾರೆ. ಪೆಟ್ರೋಲ್ ಡಿಸೇಲ್ ಖರೀದಿಸಲು ಜನ ಕೆಲಸಕ್ಕೆ ಹೋಗುವಂತಾಗಿದೆ ಎಂದು ಕಿಡಿಕಾರಿದರು.

  • ಕೋವಿಡ್ ಕಷ್ಟ ಕಾಲದಲ್ಲೂ ಬಿಜೆಪಿ ಅಧಿಕಾರಕ್ಕಾಗಿ ಕಚ್ಚಾಟ: ಖಾದರ್

    ಕೋವಿಡ್ ಕಷ್ಟ ಕಾಲದಲ್ಲೂ ಬಿಜೆಪಿ ಅಧಿಕಾರಕ್ಕಾಗಿ ಕಚ್ಚಾಟ: ಖಾದರ್

    ಮಂಗಳೂರು: ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆಗೆ ಕಚ್ಚಾಟ ನಡೆಸುತ್ತಿರುವುದು ಕೇವಲ ಅಧಿಕಾರಕ್ಕಾಗಿ, ಇದು ರಾಜ್ಯದ ಜನರಿಗೆ ಮಾಡುತ್ತಿರುವ ಅನ್ಯಾಯ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು.

    ನಗರದಲ್ಲಿ ಮಾತನಾಡಿದ ಅವರು, ರಾಜ್ಯದ ಜನ ಕೋವಿಡ್ ಭಯದಿಂದ ದಿನ ಕಳೆಯುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರಕ್ಕೆ ಜನರ ನೋವು, ಕಷ್ಟದ ಬಗ್ಗೆ ಕರುಣೆ ಇಲ್ಲ, ಅಧಿಕಾರ ಕಚ್ಚಾಟಕ್ಕೆ ಸಭೆ ಸೇರಿದರೆ ಇವರಿಗೆ ಕೋವಿಡ್ ನಿಯಮ ಅನ್ವಯ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

    ಬಿಜೆಪಿಯ ಈ ಕಚ್ಚಾಟದಿಂದ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಗೌರವ, ಘನತೆಗೆ ಧಕ್ಕೆಯಾಗಿದೆ. ರಾಜಕೀಯ ಜಂಜಾಟವನ್ನು ಒಂದು ತಿಂಗಳು ಮುಂದೆ ಹಾಕಲಿ. ಈಗ ಕೊರೊನಾ ಸಮಯ, ಜನರ ಪ್ರಾಣ ಉಳಿಸುವತ್ತ ಚಿತ್ತ ಹರಿಸಲಿ ಎಂದರು.

  • ರಸ್ತೆಯಲ್ಲಿ ಕಾದು ಕುಳಿತ ಸೋಂಕಿತ- ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಶಾಸಕ ಯು.ಟಿ.ಖಾದರ್

    ರಸ್ತೆಯಲ್ಲಿ ಕಾದು ಕುಳಿತ ಸೋಂಕಿತ- ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಶಾಸಕ ಯು.ಟಿ.ಖಾದರ್

    ಮಂಗಳೂರು: ಅಂಬುಲೆನ್ಸ್ ನಲ್ಲಿ ಅರ್ಧ ಗಂಟೆ ಕಾದು ಕೂತಿದ್ದ ಕೊರೊನಾ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಶಾಸಕ ಯು.ಟಿ ಖಾದರ್ ಮಾನವೀಯತೆ ಮೆರೆದಿದ್ದಾರೆ.

    ಮಂಗಳೂರು ಹೊರವಲಯದ ದೇರಳಕಟ್ಟೆ ಎಂಬಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ತಂದು ನಂತರ ಜಿಲ್ಲಾಡಳಿತ ಅನುಮತಿ ಇರದ ಕಾರಣ ಪ್ರವೇಶ ನಿರಾಕರಣೆ ಮಾಡಲಾಗಿತ್ತು. ಹೀಗಾಗಿ ಕೋವಿಡ್-19 ಸೋಂಕಿತ ಕರೆತಂದ ಆಂಬ್ಯುಲೆನ್ಸ್‍ನಲ್ಲೇ ಅರ್ಧ ಗಂಟೆಯಿಂದ ಬಾಕಿಯಾಗಿದ್ದ. ಈ ವೇಳೆ ಇದೇ ಮಾರ್ಗವಾಗಿ ಬರುತ್ತಿದ್ದ ಮಾಜಿ ಸಚಿವ ಯು.ಟಿ.ಖಾದರ್ ಅಂಬುಲೆನ್ಸ್ ನೋಡಿ ಕಾರ್ ನಿಲ್ಲಿಸಿ ವಿಚಾರಿಸಿದ್ದಾರೆ.

    ಈ ವೇಳೆ ಕೋವಿಡ್-19 ರೋಗಿಯನ್ನು ಚಿಕಿತ್ಸೆಗೆ ದಾಖಲಿಸಲು ಹಿಂದೇಟು ಹಾಕುತ್ತಿದ್ದ ವಿಚಾರ ತಿಳಿದು, ಸ್ವತಃ ತಾವೇ ಮುಂದೆ ನಿಂತು ಸೋಂಕಿತನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಕೋವಿಡ್-19 ವಿಭಾಗಕ್ಕೆ ದಾಖಲು ಮಾಡಿದ್ದಾರೆ. ಖಾದರ್ ಅವರ ಉತ್ತಮ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

  • ಸಂಬಳ ನೀಡದೆ ಕೊರೊನಾ ವಾರಿಯರ್ಸ್‍ಗೆ ಸರ್ಕಾರ ಅವಮಾನಿಸಿದೆ: ಯು.ಟಿ.ಖಾದರ್

    ಸಂಬಳ ನೀಡದೆ ಕೊರೊನಾ ವಾರಿಯರ್ಸ್‍ಗೆ ಸರ್ಕಾರ ಅವಮಾನಿಸಿದೆ: ಯು.ಟಿ.ಖಾದರ್

    ಮಂಗಳೂರು: ವೈದ್ಯರು ಹಾಗೂ ನರ್ಸ್ ಗಳಿಗೆ ಎರಡು ತಿಂಗಳಿನಿಂದ ಸಂಬಳ ಆಗಿಲ್ಲ. ಕೊರೊನಾ ಸಂದರ್ಭದಲ್ಲೇ ವೇತನ ನೀಡದೆ ಸತಾಯಿಸಿದ್ದಾರೆ ಎಂದು ಮಾಜಿ ಸಚಿವ ಯುಟಿ ಖಾದರ್ ಆರೋಪಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವಾರಿಯರ್ಸ್‍ಗೆ ಸಂಬಳ ನೀಡದೆ ಸರ್ಕಾರ ನಿರ್ಲಕ್ಷಿಸಿದೆ. ವಾರಿಯರ್‍ಗಳಿಗೇ ಸಂಬಳ ನೀಡಿಲ್ಲ ಎಂದಮೇಲೆ ರಾಜ್ಯದಲ್ಲಿ ಕೊರೋನಾ ರೋಗಿಗಳ ಸ್ಥಿತಿ ಹೇಗಿರಬೇಡ ಎಂದು ಪ್ರಶ್ನಿಸಿದ ಅವರು, ತಕ್ಷಣ ಸಂಬಳ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

    ನ್ಯಾಷನಲ್ ಹೆಲ್ತ್ ಮಿಷನ್ ಅಡಿಯಲ್ಲಿ ಬರುವ ವೈದ್ಯರು, ನರ್ಸ್, ಲ್ಯಾಬ್ ಟೆಕ್ನೀಷಿಯನ್ಸ್ ಗೂ ಸಂಬಳ ಆಗಿಲ್ಲ. ಅಂದರೆ ರಾಜ್ಯದಲ್ಲಿ ಒಟ್ಟು 26 ಸಾವಿರ ಮಂದಿಗೆ ಸರ್ಕಾರ ಸಂಬಳ ನೀಡಿಲ್ಲ. ಎರಡು ತಿಂಗಳು ಬಿಡುವಿಲ್ಲದೆ ವೈದ್ಯರು ಕೆಲಸ ಮಾಡಿದ್ದಾರೆ. ಪಿಎಂ ಕೇರ್ ನಲ್ಲಿ ಸಂಗ್ರಹವಾದ ಹಣವನ್ನು ಕೊಡಲಿ. ಜೊತೆಗೆ ಪಿಎಂ ಫಂಡ್ ನಲ್ಲಿ ಸಂಗ್ರಹವಾದ ಹಣದ ಲೆಕ್ಕ ಕೊಡಲಿ. ಯಾವುದಕ್ಕೆ ಖರ್ಚು ಮಾಡಿದ್ದಾರೆ ಎಂದು ಬಹಿರಂಗಪಡಿಸಲಿ. ಸರ್ಕಾರ ತಕ್ಷಣ ವೈದ್ಯರಿಗೆ ಸಂಬಳ ನೀಡದಿದ್ದರೆ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.

  • ಕರೆಂಟ್ ಬಿಲ್ ಕೇಳಲು ಬಂದ ಲೈನ್‍ಮ್ಯಾನ್ ಮೇಲೆ ಖಾದರ್ ಆಪ್ತನ ಗೂಂಡಾಗಿರಿ

    ಕರೆಂಟ್ ಬಿಲ್ ಕೇಳಲು ಬಂದ ಲೈನ್‍ಮ್ಯಾನ್ ಮೇಲೆ ಖಾದರ್ ಆಪ್ತನ ಗೂಂಡಾಗಿರಿ

    -ಸಿಎಎ, ಎನ್‌ಆರ್‌ಸಿ ದಾಖಲೆ ಕೇಳಲು ಬಂದಿದ್ದೀರಾ ಎಂದು ಹಲ್ಲೆ

    ಮಂಗಳೂರು: ಮಾಜಿ ಸಚಿವ ಯು.ಟಿ ಖಾದರ್ ಆಪ್ತ ವಿದ್ಯುತ್ ಬಿಲ್ ಪಾವತಿಸದೇ, ಮೀಟರ್‍ನಲ್ಲೂ ಗೋಲ್ ಮಾಲ್ ಮಾಡಿದ್ದಾನೆಂದು ಮಾಹಿತಿ ತಿಳಿದಿದ್ದ ಮೆಸ್ಕಾಂ ಸಿಬ್ಬಂದಿ ಪರಿಶೀಲಿಸಲು ಮನೆಗೆ ಹೋದಾಗ ಲೈನ್‍ಮ್ಯಾನ್ ಮೇಲೆಯೇ ಆತ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ದೇರಳಕಟ್ಟೆಯಲ್ಲಿ ನಡೆದಿದೆ.

    ಯು.ಟಿ ಖಾದರ್ ಆಪ್ತ, ಕಾಂಗ್ರೆಸ್ ಮುಖಂಡ ಅಮೀರ್ ಹಸನ್ ತುಂಬೆ ಲೈನ್‍ಮ್ಯಾನ್ ಮೇಲೆ ಹಲ್ಲೆ ನಡೆಸಿದ್ದಾನೆ. ಮಂಗಳೂರು ಹೊರವಲಯದ ದೇರಳಕಟ್ಟೆ ಬಳಿ ಅಮೀರ್ ತುಂಬೆ ಮನೆಯಿದ್ದು, ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ದಕ್ಕೆ ಹಾಗೂ ಮೀಟರ್ ನಲ್ಲೂ ಗೋಲ್ ಮಾಲ್ ನಡೆಸಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಮೀಟರ್ ಪರಿಶೀಲಿಸಲು ಮೆಸ್ಕಾಂ ಲೈನ್ ಮ್ಯಾನ್ ಅಮೀರ್ ಮನೆಗೆ ಬಂದಿದ್ದರು. ಅಲ್ಲದೆ ಬಿಲ್ ಬಾಕಿ ಉಳಿಸಿಕೊಂಡಿದ್ದ ಕಾರಣಕ್ಕೆ ಫ್ಯೂಸ್ ತೆಗೆಯಲು ಮುಂದಾಗಿದ್ದರು. ಇದರಿಂದ ರೊಚ್ಚಿಗೆದ್ದ ಅಮೀರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಮೆಸ್ಕಾಂ ಸಿಬ್ಬಂದಿ ರಂಗನಾಥ್ ಮುಖಕ್ಕೆ ಉಗುಳಿದ್ದು, ಸಂದೇಶ್ ಕುಮಾರ್ ಹಾಗೂ ಮಧುನಾಯ್ಕ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ.

    ಮನೆಗೆ ಬಂದಿದ್ದ ಮೂರು ಸಿಬ್ಬಂದಿಗೂ ಕುತ್ತಿಗೆ ಹಿಡಿದು ಹೊರಕ್ಕೆ ದೂಡಿದ್ದಾನೆ. ಕಾಂಗ್ರೆಸ್ ಮುಖಂಡನ ರೌಡಿಸಂ ಬಗ್ಗೆ ಹಲ್ಲೆಗೊಳಗಾದ ಸಿಬ್ಬಂದಿ ಮಧು ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಜಾಮೀನು ರಹಿತ ಎಫ್‍ಐಆರ್ ದಾಖಲಾಗಿದೆ. ಸಚಿವರ ಆಪ್ತನೆಂಬ ಕಾರಣಕ್ಕೆ ಅಮೀರ್ ರೌಡಿಸಂ ತೋರಿದ್ದಾನೆ ಎನ್ನಲಾಗುತ್ತಿದ್ದು, ಅಮೀರ್ ತುಂಬೆ ಹಲ್ಲೆ ಮಾಡಿದ ದೃಶ್ಯವನ್ನು ಹಲ್ಲೆಗೊಳಗಾದ ಮೆಸ್ಕಾಂ ಸಿಬ್ಬಂದಿ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.

    ಇತ್ತೀಚೆಗೆ ಮಂಗಳೂರಿನ ಅಡ್ಯಾರ್ ನಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ಆಯೋಜಿಸಿದ್ದ ಸಿಎಎ ವಿರೋಧಿಸಿ ನಡೆದ ಪ್ರತಿಭಟನಾ ಗುಂಪಿನಲ್ಲಿ ಮುಂಚೂಣಿಯಲ್ಲಿದ್ದ ಅಮೀರ್, ಇನ್ನೂ ಅದೇ ಗುಂಗಿನಲ್ಲಿದ್ದು ಮುಸ್ಲಿಂ ಅನ್ನುವ ಕಾರಣಕ್ಕೆ ಮೆಸ್ಕಾಂ ಲೈನ್‍ಮ್ಯಾನ್ ತನ್ನನ್ನು ಟಾರ್ಗೆಟ್ ಮಾಡಿದ್ದಾರೆಂದು ಹೇಳಿಕೊಂಡು ಹಲ್ಲೆ ನಡೆಸಿದ್ದಾನೆ. ಸಿಎಎ ಹಾಗೂ ಎನ್‌ಆರ್‌ಸಿಯ ದಾಖಲೀಕರಣಕ್ಕೆ ಬಂದು ಮುಸ್ಲಿಂಮರನ್ನು ಟಾರ್ಗೆಟ್ ಮಾಡುತ್ತಿದ್ದೀರಾ ಎಂದು ಹೇಳಿಕೊಂಡು ಹಲ್ಲೆ ನಡೆಸಿದ್ದಾನೆ.

    ಇದೀಗ ಈತ ಹಲ್ಲೆ ನಡೆಸಿದ ವೀಡಿಯೋ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಮೀರ್ ತುಂಬೆ ಬಂಧನಕ್ಕೆ ಬಲೆ ಬೀಸಿದ್ದು, ಆತ ತಲೆ ಮರೆಸಿಕೊಂಡಿದ್ದಾನೆ.

  • ರಾಕ್ಷಸರು ಯಾರು, ಪುಣ್ಯಕೋಟಿ ಯಾರಂತ ಜನರೇ ತೀರ್ಮಾನ ಮಾಡಿದ್ದಾರೆ: ಖಾದರ್

    ರಾಕ್ಷಸರು ಯಾರು, ಪುಣ್ಯಕೋಟಿ ಯಾರಂತ ಜನರೇ ತೀರ್ಮಾನ ಮಾಡಿದ್ದಾರೆ: ಖಾದರ್

    ಬೆಂಗಳೂರು: ರಾಕ್ಷಸರು ಯಾರು, ಪುಣ್ಯಕೋಟಿ ಯಾರು ಅಂತ ಉಪಚುನಾವಣೆಯಲ್ಲಿ ಬಳ್ಳಾರಿ ಜನ ಉತ್ತರ ಕೊಟ್ಟಿದ್ದಾರೆಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಗಾಲಿ ಜನಾರ್ದನ ರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಜೈಲಿನಿಂದ ಬಿಡುಗಡೆಯಾಗಿರುವ ಗಾಲಿ ಜನಾರ್ದನ ರೆಡ್ಡಿ ನೀಡಿದ್ದ ಹೇಳಿಕೆಗೆ, ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಬಳ್ಳಾರಿ ಜನ ರಾಕ್ಷಸರು ಯಾರು, ಪುಣ್ಯ ಕೋಟಿ ಯಾರೆಂದು ಉಪ ಚುನಾವಣೆಯಲ್ಲೇ ಉತ್ತರ ಕೊಟ್ಟಿದ್ದಾರೆ. ಅಲ್ಲದೇ ನಾನು ಸುಮ್ಮನೆ ಇರುವುದಿಲ್ಲವೆಂದು ಹೇಳಿದ್ದಾರೆ. ಅವರು ಏನು ಮಾಡುತ್ತಾರೆ ಎನ್ನುವುದನ್ನು ನಾವೂ ನೋಡುತ್ತೇವೆಂದು ಗುಡುಗಿದ್ದಾರೆ.

    ಇದೇ ವೇಳೆ ಶಿರಾಡಿಘಾಟ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕುರಿತು ಮಾತನಾಡಿ, ಬೆಂಗಳೂರಿನಿಂದ ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ ರಸ್ತೆಯ ದುರಸ್ಥಿ ಕಾರ್ಯ ಸಂಪೂರ್ಣ ಮುಗಿದಿದೆ. ದುರಸ್ಥಿ ಇದ್ದ ಕಾರಣ ಇಷ್ಟು ದಿನ, ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಇದೀಗ ಎಲ್ಲಾ ಕಾರ್ಯ ಪೂರ್ಣಗೊಂಡಿದೆ. ಹೀಗಾಗಿ ಎಲ್ಲಾ ವಾಹನಗಳ ಸಂಚಾರಕ್ಕೆ ಇಂದು ಬೆಳಗ್ಗೆಯಿಂದ ಅವಕಾಶ ಮಾಡಿಕೊಡಲಾಗಿದೆ. ಮಧ್ಯಮ ಹಾಗೂ ಭಾರೀ ಗಾತ್ರದ ಎಲ್ಲಾ ವಾಹನಗಳ ಚಾಲಕರು ಸಹಕರಿಸಬೇಕು. ತಿರುವುಗಳಲ್ಲಿ ಓವರ್ ಟೇಕ್ ಮಾಡದೇ, ನಿಧಾನವಾಗಿ ವಾಹನ ಚಾಲಯಿಸಬೇಕೆಂದು ಹೇಳಿದ್ದಾರೆ.

    ಕೊಡಗಿನ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ವಿಚಾರದ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, ಕೊಡಗು ಜಿಲ್ಲೆಯಲ್ಲಿ ಮಾಡೆಲ್ ಮನೆ ಕಟ್ಟಲು ಚಿಂತನೆ ನಡೆಸಲಾಗಿದೆ. ಅಲ್ಲದೇ ಈಗಿದ್ದ ಸಿಂಗಲ್ ಬೆಡ್ ರೂಮಿನ ಬದಲಾಗಿ ಡಬ್ಬಲ್ ಬೆಡ್ ರೂಮಿನ ಮನೆಯಾಗಿ ಕಟ್ಟಲು ಮಾತುಕತೆ ನಡೆಸಿದ್ದೇವೆ. ಈ ನಿಟ್ಟಿನಲ್ಲಿ ಅನುದಾನ ನೀಡುವ ಕುರಿತು ಸಿಎಂ ಕುಮಾರಸ್ವಾಮಿಯವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಅನುದಾನ ಸಿಗುವ ಕುರಿತಾದ ಪ್ರಸ್ತಾವನೆಯನ್ನು ಮುಂದಿನ ಸಂಪುಟಕ್ಕೆ ಕಳುಹಿಸುತ್ತೇವೆ. ಎಲ್ಲಾ ಮಾಡೆಲ್ ಮನೆಗಳ ಒಟ್ಟು ವೆಚ್ಚ 101 ಕೋಟಿ ರೂಪಾಯಿ ಆಗಲಿದ್ದು, ಪ್ರತಿ ಮಾಡೆಲ್ ಮನೆಗೆ 9.45 ಲಕ್ಷ ರೂ. ವೆಚ್ಚ ಬೀಳಲಿದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬಾವಿಯಲ್ಲಿ ಪೆಟ್ರೋಲ್ ಪತ್ತೆ-ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಉಸ್ತುವಾರಿ ಸಚಿವ

    ಬಾವಿಯಲ್ಲಿ ಪೆಟ್ರೋಲ್ ಪತ್ತೆ-ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಉಸ್ತುವಾರಿ ಸಚಿವ

    ಮಂಗಳೂರು: ಬಾವಿಯಲ್ಲಿ ಪೆಟ್ರೋಲ್ ಅಂಶ ಕಂಡುಬಂದಿದ್ದ ದೇರಳಕಟ್ಟೆಯ ಕಾನಕೆರೆ ಪ್ರದೇಶಕ್ಕೆ ವಸತಿ ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಮಾಧ್ಯಮಗಳಲ್ಲಿ ಬಾವಿಯಲ್ಲಿ ಪೆಟ್ರೋಲ್ ರೀತಿಯ ಅಂಶ ಪತ್ತೆಯಾಗಿರುವ ಸುದ್ದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾ ಉಸ್ತುವಾರಿ ಸಚಿವರು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯರು ಬಾವಿಯ ನೀರನ್ನು ಮೇಲೆತ್ತಿ, ಅದಕ್ಕೆ ಬೆಂಕಿ ಹಚ್ಚಿ ತೋರಿಸಿದರು. ಬಾವಿಯ ನೀರು ಈ ಪರಿ ಹೊತ್ತಿಕೊಳ್ಳುವುದನ್ನು ಕಂಡು ಸಚಿವರೂ ಸಹ ಅಚ್ಚರಿ ಪಟ್ಟಿದ್ದಾರೆ. ಅಲ್ಲದೇ ಇದು ಕೇವಲ ಪೆಟ್ರೋಲ್ ಪಂಪ್ ಲೀಕೇಜ್ ಕಾರಣಕ್ಕೆ ಆಗುತ್ತಿರುವಂತೆ ಕಾಣುತ್ತಿಲ್ಲ. ಬೇರೆ ಏನೋ ಕಾರಣ ಇದ್ದಿರಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದರು.

    ಈ ಕುರಿತು ಮಾತನಾಡಿದ ಯು.ಟಿ.ಖಾದರ್, ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸೂಚನೆ ನೀಡಿದ್ದೇನೆ. ಈಗಾಗಲೇ ಎಂಆರ್‍ಪಿಎಲ್ ಮುಖ್ಯಸ್ಥರ ಜೊತೆ ಮಾತನಾಡಿದ್ದೇನೆ. ನೀರಿನ ಮಾದರಿಯನ್ನು ಉನ್ನತ ಮಟ್ಟದ ಪರಿಶೀಲನೆಗೆ ಕಳಿಸಿಕೊಡುತ್ತೇವೆ. ತಾತ್ಕಾಲಿಕವಾಗಿ ಸ್ಥಳೀಯ ಸಂತ್ರಸ್ತ ಮನೆಯವರಿಗೆ, ಗ್ರಾಮ ಪಂಚಾಯತಿನಿಂದ ನೀರು ಪೂರೈಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

    ಕಳೆದ ಒಂದು ವಾರದಿಂದ ದೇರಳಕಟ್ಟೆಯ ಕಾನಕೆರೆ ಎಂಬ ಪ್ರದೇಶದಲ್ಲಿ ಮೂರು ಬಾವಿಗಳಲ್ಲಿ ನೀರು ಪೆಟ್ರೋಲ್ ವಾಸನೆ ಬರುತ್ತಿದ್ದು, ಬೆಂಕಿ ತಾಗಿದರೆ ಧಗ ಧಗನೆ ಉರಿಯುತ್ತಿರುವುದು ಸ್ಥಳೀಯರಲ್ಲಿ ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ: ಬೆಂಕಿ ಹಚ್ಚಿದರೆ ಉರಿಯುತ್ತಿದೆ ಬಾವಿ ನೀರು!

    https://youtu.be/uE3r9qZoJWk

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews