Tag: Ustad Bhagat Singh

  • ಪವನ್ ಕಲ್ಯಾಣ್, ಶ್ರೀಲೀಲಾ ನಟನೆಯ ಸಿನಿಮಾ ನಿಂತು ಹೋಗಿಲ್ಲ- ಸ್ಪಷ್ಟನೆ ನೀಡಿದ ನಿರ್ಮಾಪಕ

    ಪವನ್ ಕಲ್ಯಾಣ್, ಶ್ರೀಲೀಲಾ ನಟನೆಯ ಸಿನಿಮಾ ನಿಂತು ಹೋಗಿಲ್ಲ- ಸ್ಪಷ್ಟನೆ ನೀಡಿದ ನಿರ್ಮಾಪಕ

    ಟಾಲಿವುಡ್ ನಟ ಪವನ್ ಕಲ್ಯಾಣ್ (Pawan Kalyan) ಈಗ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಅರ್ಧಕ್ಕೆ ಶೂಟಿಂಗ್ ಮಾಡಿದ್ದ ಪವನ್ ಕಲ್ಯಾಣ್ ಮತ್ತು ಶ್ರೀಲೀಲಾ (Sreeleela) ನಟನೆಯ ಸಿನಿಮಾ ನಿಂತು ಹೋಗಿದ್ಯಾ? ಎಂಬೆಲ್ಲಾ ವದಂತಿಗೆ ಚಿತ್ರತಂಡದ ಕಡೆಯಿಂದಲೇ ಉತ್ತರ ಸಿಕ್ಕಿದೆ. ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ನಿಂತು ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:ಫ್ಯಾಮಿಲಿ ಫೋಟೋ ಹಂಚಿಕೊಂಡ ದರ್ಶನ್ ಪತ್ನಿ- ಯಾರ ಕಣ್ಣು ನಿಮ್ಮೇಲೆ ಬೀಳದಿರಲಿ ಎಂದ ಫ್ಯಾನ್ಸ್

    ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯ ‘ರಾಬಿನ್‌ಹುಡ್’ (Robinhood) ಚಿತ್ರದ ಪ್ರಚಾರದ ವೇಳೆ, ಪವನ್ ಹಾಗೂ ಶ್ರೀಲೀಲಾ ನಟನೆಯ ‘ಉಸ್ತಾದ್ ಭಗತ್ ಸಿಂಗ್’ (Ustad Bhagat Singh) ಸಿನಿಮಾ ಬಗ್ಗೆ ಕೇಳಲಾಗಿದೆ. ಈ ಸಿನಿಮಾ ನಿಂತು ಹೋಗಿದ್ಯಾ? ಎಂದು ಕೇಳಲಾಗಿದೆ. ಈ ಚಿತ್ರ ಖಂಡಿತ ನಿಂತು ಹೋಗಿಲ್ಲ. ಇದನ್ನು ನಾವು ಪೂರ್ಣಗೊಳಿಸುತ್ತೇವೆ. ನಾವು ಪವನ್ ಕಲ್ಯಾಣ್ ಅವರ ಡೇಟ್ಸ್‌ಗಾಗಿ ಕಾಯುತ್ತಿದ್ದೇವೆ. ಇದೇ ವರ್ಷ ಈ ಚಿತ್ರದ ಶೂಟಿಂಗ್ ಅನ್ನು ಪೂರ್ಣಗೊಳಿಸಲಿದ್ದೇವೆ. ಮುಂದಿನ ಚಿತ್ರ ರಿಲೀಸ್ ಮಾಡುತ್ತೇವೆ. ನಮ್ಮ ನಿರ್ದೇಶಕ ಹ್ಯಾರಿಸ್ ಅದ್ಭುತ ಕತೆಯನ್ನು ಮಾಡಿಕೊಂಡಿದ್ದಾರೆ ಎಂದು ನಿರ್ಮಾಪಕ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಇದನ್ನೂ ಓದಿ:ಉದ್ಯಮಿ ಮಗಳೊಂದಿಗೆ ಪ್ರಭಾಸ್‌ ಮದುವೆ ವಿಚಾರ ಸುಳ್ಳು- ಆಪ್ತರಿಂದ ಸ್ಪಷ್ಟನೆ

    ಅಂದಹಾಗೆ, ‘ಹರಿಹರ ವೀರ ಮಲ್ಲು’ ಸಿನಿಮಾವನ್ನು ಇತ್ತೀಚೆಗೆ ಪವನ್ ಕಲ್ಯಾಣ್ ಮುಗಿಸಿಕೊಟ್ಟಿದ್ದಾರೆ. ‘ಓಜಿ’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಚಿತ್ರಗಳು ಇನ್ನೂ ಪೂರ್ಣಗೊಳ್ಳಬೇಕಿದೆ.

  • ಸಕ್ಸಸ್‌ಗಾಗಿ ದಿಟ್ಟ ನಿರ್ಧಾರ ಕೈಗೊಂಡ ಶ್ರೀಲೀಲಾ

    ಸಕ್ಸಸ್‌ಗಾಗಿ ದಿಟ್ಟ ನಿರ್ಧಾರ ಕೈಗೊಂಡ ಶ್ರೀಲೀಲಾ

    ನ್ನಡತಿ, ತೆಲುಗಿನ ಬಹಿಬೇಡಿಕೆಯ ನಟಿ ಶ್ರೀಲೀಲಾ (Sreeleela) ಇದೀಗ ಕೆರಿಯರ್ ಸಕ್ಸಸ್‌ಗಾಗಿ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಕಳೆದ ವರ್ಷ ಶ್ರೀಲೀಲಾ ಭರ್ತಿ ಅರ್ಧ ಡಜನ್ ತೆಲುಗು ಸಿನಿಮಾ ಮಾಡಿದ್ದಾರೆ. ಆದರೆ ಯಾವುದೂ ಹಿಟ್ ಆಗಲಿಲ್ಲ ಅನ್ನೋದೇ ದುರಂತ. ಅದಕ್ಕೀಗ ಶ್ರೀಲೀಲಾ ನಯಾ ಸಂಕಲ್ಪ ಮಾಡಿದ್ದಾರೆ.

    ತೆಲುಗು ಇಂಡಸ್ಟ್ರಿಯಲ್ಲಿ ಸಮಕಾಲಿನ ನಟಿಯರಿಗೆ ಠಕ್ಕರ್ ಕೊಟ್ಟು ಜಾಗ ಮಾಡ್ಕೊಂಡಿರುವವರು ಶ್ರೀಲೀಲಾ. ವರ್ಷವೊಂದಕ್ಕೆ ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದರು. ಬಗೆ ಬಗೆಯ ಪಾತ್ರ, ಸ್ಟಾರ್ ನಟರ ಚಿತ್ರ. ಎಲ್ಲಾ ಭಾಗ್ಯ ಶ್ರೀಲೀಲಾಗೆ ಒದಗಿ ಬಂತು. ಆದರೆ ಅದ್ಯಾವ ಚಿತ್ರಗಳೂ ಆರಕ್ಕೇರಲಿಲ್ಲ. ಬ್ಲಾಕ್‌ಬಸ್ಟರ್ ಎಂದು ಕರೆಸಿಕೊಳ್ಳಲಿಲ್ಲ. ಅದಕ್ಕೀಗ ಮುಂದಿನ ದಿನಗಳಲ್ಲಿ ಶ್ರೀಲೀಲಾ ಬಂದಿರುವ ಎಲ್ಲಾ ಪ್ರಾಜೆಕ್ಟ್ ಒಪ್ಪಿಕೊಳ್ಳದಿರುವ ತೀರ್ಮಾನಕ್ಕೆ ಬಂದಿದ್ದಾರೆ.

    ಕಳೆದ ವರ್ಷ 6 ಸಿನಿಮಾಗಳಲ್ಲಿ ನಟಿಸಿದ್ದರು. ಯಾವುದು ಹೇಳಿಕೊಳ್ಳುವಂತೆ ಹಿಟ್ ಆಗ್ಲಿಲ್ಲ. ಆಫರ್‌ಗಳೇನೂ ಬರುತ್ತಿದೆ. ಆದರೆ ಸೂಕ್ತ ಸಿಗುತ್ತಿಲ್ಲ. ಹೀಗಾಗಿ ಕಾದು ನೋಡ್ತಿದ್ದಾರೆ ಶ್ರೀಲೀಲಾ. ಕ್ವಾಂಟಿಟಿ ಬಿಟ್ಟು ಕ್ವಾಲಿಟಿ ಕಡೆ ಗಮನ ಕೊಡ್ತಿದ್ದಾರಂತೆ. ಹೀಗಾಗಿ ಹಿಂದೆ ಒಪ್ಪಿಕೊಂಡ ಪ್ರಾಜೆಕ್ಟ್ ಕಡೆ ಗಮನ ಕೊಡ್ತಿದ್ದಾರೆ. ಪವನ್ ಕಲ್ಯಾಣ್ (Pawan Kalyan) ಜೊತೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಈ ಚಿತ್ರದ ನಂತರ ‘ಕಿಸ್’ ಬೆಡಗಿಯ ಅದೃಷ್ಟ ಬದಲಾಗುತ್ತಾ? ಕಾಯಬೇಕಿದೆ.

    ಈ ಚಿತ್ರದ ರಿಲೀಸ್ ಆದ್ಮೇಲೆಯೇ ಮುಂದಿನ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡೋದು ಶ್ರೀಲೀಲಾ ಪ್ಲ್ಯಾನ್ ಅನ್ನೋದು ಟಾಲಿವುಡ್ ಗಲ್ಲಿಯಿಂದ ಬಂದ ಸಮಾಚಾರ. ಇದನ್ನೂ ಓದಿ:‘ಮ್ಯಾಕ್ಸ್’ ಸಿನಿಮಾ ಮೇ ತಿಂಗಳಲ್ಲಿ ರಿಲೀಸ್ ಎಂದ ಸುದೀಪ್

    ಅಂದಹಾಗೆ, ಕನ್ನಡದ ಕಿಸ್, ಭರಾಟೆ, ಬೈಟು ಲವ್ ಚಿತ್ರಗಳಲ್ಲಿ ನಟಿಸಿದ ಮೇಲೆ ತೆಲುಗಿನ ‘ಪೆಳ್ಳಿ ಸಂದಡಿ’ ಚಿತ್ರದ ಮೂಲಕ ಟಾಲಿವುಡ್‌ಗೆ ನಟಿ ಲಗ್ಗೆ ಇಟ್ಟರು.

  • ಆಂಧ್ರದಲ್ಲಿ ಬಿರುಗಾಳಿ ಎಬ್ಬಿಸಿದ ‘ಉಸ್ತಾದ್ ಭಗತ್ ಸಿಂಗ್’ ಟೀಸರ್

    ಆಂಧ್ರದಲ್ಲಿ ಬಿರುಗಾಳಿ ಎಬ್ಬಿಸಿದ ‘ಉಸ್ತಾದ್ ಭಗತ್ ಸಿಂಗ್’ ಟೀಸರ್

    ಲೋಕಸಭಾ ಚುನಾವಣಾ ಹೊತ್ತಲ್ಲಿ ಪವನ್ ಕಲ್ಯಾಣ್ ನಟಿಸಿರುವ ಉಸ್ತಾದ್ ಭಗತ್ ಸಿಂಗ್ (Ustad Bhagat Singh) ಸಿನಿಮಾದ ಟೀಸರ್ ರಿಲೀಸ್ (Teaser) ಆಗಿದೆ. ಪವನ್ ಕಲ್ಯಾಣ್ ಸಿನಿಮಾಗಳೆಂದರೆ, ಅಲ್ಲಿ ಬೆಂಕಿ ಬಿರುಗಾಳಿ ಎರಡೂ ಇರುತ್ತೆ. ಈ ಟೀಸರ್ ನಲ್ಲೂ ಎಲ್ಲವೂ ಇದೆ. ಜೊತೆಗೆ ಡೈಲಾಗ್ ಮೂಲಕ ಎದುರಾಳಿಗಳಿಗೆ ಸಖತ್ ಟಾಂಗ್ ಕೊಟ್ಟಿದ್ದಾರಂತೆ ಪವನ್. ಹಾಗಾಗಿ ಟೀಸರ್ ಬಗ್ಗೆ ಪರ ಮತ್ತು ವಿರೋಧದ ಮಾತುಗಳು ಕೇಳಿ ಬಂದಿವೆ.

    ಪವನ್ ಕಲ್ಯಾಣ್ ಲೋಕಸಭಾ ಚುನಾವಣೆಯಲ್ಲಿ ಸಕ್ರೀಯರಾಗಿದ್ದಾರೆ. ಭರ್ಜರಿ ಪ್ರಚಾರವನ್ನೂ ಆರಂಭಿಸಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಈ ಟೀಸರ್ ಬಳಕೆ ಆಗುತ್ತಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಚುನಾವಣಾ ಆಯೋಗಕ್ಕೂ ದೂರು ನೀಡುವ ಮಾತುಗಳಲ್ಲಿ ಅಲ್ಲಿನ ರಾಜಕಾರಣಿಗಳು ಆಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರತ್ತೋ ಕಾದು ನೋಡಬೇಕು.

    ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಶುರುವಾದ ದಿನದಿಂದ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿದೆ ಚಿತ್ರತಂಡ. ಪವನ್ ಕಲ್ಯಾಣ್ ((Pawan Kalyan) ಮುಂದೆ ತಮಿಳು ನಟ ಪಾರ್ಥಿಬನ್ (Parthiban) ಅಬ್ಬರಿಸಲಿದ್ದಾರೆ. ಈಗಾಗಲೇ ಪಾರ್ಥಿಬನ್ ಶೂಟಿಂಗ್ ನಲ್ಲೂ ಪಾಲ್ಗೊಂಡಿದ್ದಾರೆ.

     

    ಜೊತೆಗೆ ಕನ್ನಡದ ಬ್ಯೂಟಿ ಶ್ರೀಲೀಲಾ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆ ಡ್ಯುಯೇಟ್ ಹಾಡ್ತಿದ್ದಾರೆ. ಅಲ್ಲದೇ, ಸಿನಿಮಾಗೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದೆ. ‌

  • ಕೆರಿಯರ್‌ ಶುರುವಿನಲ್ಲೇ ಶ್ರೀಲೀಲಾ ಸಿನಿಮಾಗೆ ಬಿತ್ತು ಬ್ರೇಕ್

    ಕೆರಿಯರ್‌ ಶುರುವಿನಲ್ಲೇ ಶ್ರೀಲೀಲಾ ಸಿನಿಮಾಗೆ ಬಿತ್ತು ಬ್ರೇಕ್

    ರಾಟೆ ಬ್ಯೂಟಿ ಶ್ರೀಲೀಲಾ (Sreeleela) ಅವರು ತೆಲುಗಿನ ಸಾಲು ಸಾಲು ಸಿನಿಮಾಗಳಿಗೆ ಹೀರೋಯಿನ್ ಆಗುವ ಮೂಲಕ ಟಾಲಿವುಡ್ ಸಿನಿರಸಿಕರ ಮನಗೆದ್ದಿದ್ದಾರೆ. ರಶ್ಮಿಕಾ(Rashmika), ಕೃತಿ ಶೆಟ್ಟಿ(Kriti Shetty), ಪೂಜಾ ಹೆಗ್ಡೆಗೆ (Pooja Hegde) ಟಕ್ಕರ್ ಕೊಡುತ್ತಾ ತೆಲುಗು ಅಂಗಳದಲ್ಲಿ ನಟಿಯಾಗಿ ಬೆಳೆಯುತ್ತಿದ್ದಾರೆ. ಹೀಗಿರುವಾಗ ಕೆರಿಯರ್‌ನ ಶುರುವಿನಲ್ಲೇ ನಟಿಗೆ ವಿಘ್ನವೊಂದು ಎದುರಾಗಿದೆ.

    ಜೂನ್ 14ರಂದು ಶ್ರೀಲೀಲಾ ಅವರ ಹುಟ್ಟುಹಬ್ಬವಾಗಿದ್ದು, ಅಂದು ತಾವು ನಟಿಸುವ ಸಿನಿಮಾಗಳ ಪೋಸ್ಟರ್‌ಗಳನ್ನ ಅಧಿಕೃತವಾಗಿ ಹಂಚಿಕೊಂಡಿದ್ದರು. ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಶ್ರೀಲೀಲಾ ಪೈಪೋಟಿ ನೀಡಿದ್ದರು. ಪವನ್ ಕಲ್ಯಾಣ್ (Pawan Kalyan) ನಟನೆಯ ಬಹುನಿರೀಕ್ಷಿತ ಸಿನಿಮಾ ಉಸ್ತಾದ್ ಭಗತ್ ಸಿಂಗ್ ಚಿತ್ರಕ್ಕೆ ‘ಧಮಾಕʼ (Dhamaka) ಬ್ಯೂಟಿ ನಾಯಕಿಯಾಗಿರೋದು ಗೊತ್ತೆಯಿದೆ. ಈಗ ಚಿತ್ರಕ್ಕೆ ಚಾಲನೆ ಸಿಕ್ಕಿರುವ ಹೊತ್ತಿನಲ್ಲೇ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ.

    ಟಾಲಿವುಡ್ ಸ್ಟಾರ್ ನಟ ಪವನ್ ಕಲ್ಯಾಣ್ ಚಿತ್ರಗಳಿಗೆ ಬಂಡವಾಳ ಹೂಡಲು ನಿರ್ಮಾಪಕರ ಸಾಲೇ ಕಾಯುತ್ತಿದೆ. ಇನ್ನು ಈ ಹಿಂದೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದ ಪವನ್ ಕಲ್ಯಾಣ್ ತಮ್ಮದೇ ಆದ ಸ್ವಂತ ರಾಜಕೀಯ (Politics) ಪಕ್ಷವನ್ನು ಸ್ಥಾಪಿಸಿದ ಬಳಿಕ ಸಿನಿಮಾದಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿಲ್ಲ. ರಾಜಕೀಯ ಸಮಾವೇಶಗಳು ಹಾಗೂ ಕೆಲಸಗಳ ನಿಮಿತ್ತ ಹೆಚ್ಚಾಗಿ ಬ್ಯುಸಿ ಇರುವ ಪವನ್ ಕಲ್ಯಾಣ್ ಆಗೊಂದು ಹೀಗೊಂದು ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ.

    ಬ್ರೋ, ಹರಿಹರ ವೀರಮಲ್ಲು, ಓಜಿ ಹಾಗೂ ಉಸ್ತಾದ್ ಭಗತ್ ಸಿಂಗ್ ಚಿತ್ರಗಳಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. ಒಂದೆಡೆ ರಾಜಕೀಯದ ಕೆಲಸಗಳು ಹಾಗೂ ಇತ್ತ ನಾಲ್ಕು ಚಿತ್ರಗಳಲ್ಲಿ ಒಟ್ಟಿಗೆ ನಟನೆ ಮಾಡುವ ಸಾಹಸವನ್ನು ಪವನ್ ಕಲ್ಯಾಣ್ ಮಾಡಿದ್ದರು. ಆದರೆ ಇದು ಯಾಕೋ ಕೆಲಸ ಮಾಡಿದಂತೆ ಕಾಣುತ್ತಿಲ್ಲ. ಒತ್ತಡ ಹೆಚ್ಚಾದ ಕಾರಣ ಇದೀಗ ಪವನ್ ಕಲ್ಯಾಣ್, ಉಸ್ತಾದ್ ಭಗತ್ ಸಿಂಗ್ ಚಿತ್ರಕ್ಕೆ ಬ್ರೇಕ್ ನೀಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ರಿಲೀಸ್‌ಗೂ ಮುನ್ನವೇ ಬರೋಬ್ಬರಿ 32 ಕೋಟಿಗೆ ಸೇಲ್ ಆಯ್ತು ರಶ್ಮಿಕಾ ಮಂದಣ್ಣ ಸಿನಿಮಾ

    ರಾಜಕೀಯ ಕೆಲಸಗಳು ಹಾಗೂ ಸಾಲು ಸಾಲು ಚಿತ್ರಗಳಲ್ಲಿ ನಟಿಸುವುದು ಕಷ್ಟದ ಕೆಲಸವಾದ ಕಾರಣ ‘ಉಸ್ತಾದ್ ಭಗತ್ ಸಿಂಗ್’ (Ustad Bhagat Singh) ಚಿತ್ರದ ಶೂಟಿಂಗ್ ಅನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಈ ಚಿತ್ರದ ಚಿತ್ರೀಕರಣ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟ ಕಾರಣ ಇದೀಗ ನಿರ್ದೇಶಕ ಹರೀಶ್ ಶಂಕರ್ ರವಿತೇಜಾಗೆ ಮತ್ತೊಂದು ಚಿತ್ರ ಮಾಡಲು ಮುಂದಾಗಿದ್ದಾರೆ ಎಂಬ ಸುದ್ದಿಗಳು ತೆಲುಗು ಸಿನಿ ಅಡ್ಡಾದಲ್ಲಿ ಹರಿದಾಡುತ್ತಿದೆ. ಕೆರಿಯರ್ ಶುರುವಿನಲ್ಲೇ ಶ್ರೀಲೀಲಾ ನಟನೆಯ ಚಿತ್ರಕ್ಕೆ ಬ್ರೇಕ್ ಬಿದ್ದಿರೋದ್ದಕ್ಕೆ ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ. ಪವನ್ ಕಲ್ಯಾಣ್- ಶ್ರೀಲೀಲಾ ಜೋಡಿಯನ್ನ ತೆರೆಯ ಮೇಲೆ ನೋಡಬೇಕು ಎಂದುಕೊಂಡವರಿಗೆ ನಿರಾಸೆಯಾಗಿದೆ.

    ಮಹೇಶ್ ಬಾಬು ಜೊತೆ ಗುಂಟೂರು ಕಾರಂ, ಅಲ್ಲು ಅರ್ಜುನ್ ಜೊತೆಗಿನ ಸಿನಿಮಾ, ನಿತಿನ್ & ವಿಜಯ್ ದೇವರಕೊಂಡ ಜೊತೆಗಿನ ಸಿನಿಮಾ ಸೇರಿದಂತೆ ೮ಕ್ಕೂ ಹೆಚ್ಚು ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪವನ್ ಕಲ್ಯಾಣ್ ವಿರುದ್ಧ ಗರಂ ಆದ ನಟಿ ಪೂನಂ ಕೌರ್

    ಪವನ್ ಕಲ್ಯಾಣ್ ವಿರುದ್ಧ ಗರಂ ಆದ ನಟಿ ಪೂನಂ ಕೌರ್

    ವನ್ ಕಲ್ಯಾಣ್ (Pawan Kalyan) ನಟನೆಯ ‘ಉಸ್ತಾದ್ ಭಗತ್ ಸಿಂಗ್’ (Ustad Bhagat Singh) ಚಿತ್ರದ ಫಸ್ಟ್ ಟೀಸರ್ (Teaser) ನಿನ್ನೆ ರಿಲೀಸ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ. ಟೀಸರ್ ನಲ್ಲಿ ಪವನ್ ಕಲ್ಯಾಣ್ ಹೊಡೆದ ಡೈಲಾಗ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಗಬ್ಬರ್ ಸಿಂಗ್ ರೀತಿಯಲ್ಲೇ ಈ ಸಿನಿಮಾ ಕೂಡ ಹಿಟ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಗಬ್ಬರ್ ಸಿಂಗ್ ನಂತರ ನಿರ್ದೇಶಕ ಹರೀಶ್ ಶಂಕರ್ ಮತ್ತು ಪವನ್ ಕಲ್ಯಾಣ್ ಒಟ್ಟಾಗಿರುವುದರಿಂದ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.

    ‘ಧರ್ಮಕ್ಕೆ ತೊಂದರೆಯಾದಾಗ, ಅಧರ್ಮ ಹೆಚ್ಚಾದ ಸಮಯದಲ್ಲಿ ನಾನು ಅವತಾರ ಎತ್ತಿ ಬರುತ್ತೇನೆ ಎನ್ನುವ ಶ್ರೀಕೃಷ್ಣನ ಮಾತನ್ನು ಅಳವಡಿಸಿ ಗ್ಲಿಂಪ್ಸ್ ಮಾಡಲಾಗಿದೆ. ನಂತರ ಪವನ್ ಕಲ್ಯಾಣ್ ಖಡಕ್ ಡೈಲಾಗ್ ಹೊಡೆಯುತ್ತಾರೆ. ಭಗತ್ ಸಿಂಗ್ ಪಾತಬಸ್ತಿ ಎನ್ನುವ ಶಬ್ದವೇ ಅಭಿಮಾನಿಗಳಿಗೆ ಕಿಕ್ ಕೊಡುತ್ತದೆ.

    ಅಭಿಮಾನಿಗಳು ಪವನ್ ಕಲ್ಯಾಣ್ ಮ್ಯಾನರಿಸಂ ಮತ್ತು ಲುಕ್ ಗೆ ಫಿದಾ ಆಗಿದ್ದರೆ, ನಟಿ ಪೂನಂ ಕೌರ್ (Poonam Kaur) ಚಿತ್ರದ ಪೋಸ್ಟರ್ ಕಂಡು ಗರಂ ಆಗಿದ್ದಾರೆ. ಈ ಸಿನಿಮಾ ಟೀಮ್ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಗೆ ಅವಮಾನ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರನ ಹೆಸರಿನ ಮೇಲೆ ಪವನ್ ಕಲ್ಯಾಣ್ ಕಾಲಿಟ್ಟಿದ್ದಾರೆ ಎಂದು ನಟಿ ಕೋಪವನ್ನು ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:‘ಕಸ್ಟಡಿ’ ಸಿನಿಮಾ ತೆರೆಗೆ- ಕಾನ್ಸ್‌ಟೇಬಲ್ ಪಾತ್ರದಲ್ಲಿ ನಾಗ ಚೈತನ್ಯ

    ನಟನ ಕಾಲ ಕೆಳಗೆ ಮಹಾತ್ಮನ ಹೆಸರು ಹಾಕಿರುವುದು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವಂಥದ್ದು ಅಲ್ಲ ಎಂದು ಪೂನಂ ಕಾಮೆಂಟ್ ಮಾಡುತ್ತಿದ್ದಂತೆಯೇ ಪರ ವಿರೋಧದ ಕಾಮೆಂಟ್ ಗಳು ರಾಶಿ ರಾಶಿ ಬಿದ್ದಿವೆ. ಪವನ್ ಕಲ್ಯಾಣ್ ಫ್ಯಾನ್ಸ್ ಪೂನಂ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಸಿನಿಮಾವನ್ನು ಸಿನಿಮಾ ರೀತಿಯಲ್ಲೇ ನೋಡಿ ಎಂದು ತಿರುಗೇಟು ನೀಡಿದ್ದಾರೆ.