Tag: USD

  • ಟೆಸ್ಟ್‌ ಕ್ರಿಕೆಟ್‌ ಉತ್ತೇಜಕ್ಕೆ 125 ಕೋಟಿ ಮೊತ್ತದ ನಿಧಿ ಸ್ಥಾಪನೆಗೆ ಐಸಿಸಿ ನಿರ್ಧಾರ – ಭಾರತ, ಆಸೀಸ್‌ಗಿಲ್ಲ ಲಾಭ ಏಕೆ?

    ಟೆಸ್ಟ್‌ ಕ್ರಿಕೆಟ್‌ ಉತ್ತೇಜಕ್ಕೆ 125 ಕೋಟಿ ಮೊತ್ತದ ನಿಧಿ ಸ್ಥಾಪನೆಗೆ ಐಸಿಸಿ ನಿರ್ಧಾರ – ಭಾರತ, ಆಸೀಸ್‌ಗಿಲ್ಲ ಲಾಭ ಏಕೆ?

    ಅಭುದಾಬಿ: ಇತ್ತೀಚಿನ ದಿನಗಳಲ್ಲಿ ಟೆಸ್ಟ್‌ ಕ್ರಿಕೆಟ್‌ನತ್ತ ಆಟಗಾರರ ಆಸಕ್ತಿ ಕಡಿಮೆಯಾಗುತ್ತಿದೆ. ಆದ್ದರಿಂದ ಟೆಸ್ಟ್ ಕ್ರಿಕೆಟ್‌ಗೆ (Test Cricket) ಉತ್ತೇಜನ ನೀಡುವ ಸಲುವಾಗಿ, ಯುವ ಕ್ರಿಕೆಟಿಗರನ್ನು ಸೆಳೆಯವ ನಿಟ್ಟಿನಲ್ಲಿ ಐಸಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. 125 ಕೋಟಿ ರೂ. (15 ಮಿಲಿಯನ್ USD) ಮೊತ್ತದ ನಿಧಿ ಮೀಸಲಿಡಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ICC) ನಿರ್ಧರಿಸಿದೆ.

    ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ (Cricket Australia) ಐಸಿಸಿಗೆ ಈ ಪ್ರಸ್ತಾವನೆ ಸಲ್ಲಿಸಿದೆ. ಈಗಾಗಲೇ ಐಸಿಸಿ ಟೆಸ್ಟ್‌ ಕ್ರಿಕೆಟ್‌ ಉತ್ತೇಜಿಸಲು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿ ಆಯೋಜಿಸಿದೆ. 2019 ರಿಂದ 2023ರ ವರೆಗೆ ಎರಡು ಆವೃತ್ತಿಗಳೂ ಕಳೆದು, ಇದೀಗ 3ನೇ ಆವೃತ್ತಿಗೆ ಕಾಲಿಟ್ಟಿದೆ. ಈ ನಡುವೆ ಐಸಿಸಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: Ind vs Eng Test | 2025ರ ಭಾರತ – ಇಂಗ್ಲೆಂಡ್ ವೇಳಾಪಟ್ಟಿ ಬಿಡುಗಡೆಗೊಳಿಸಿದ ಬಿಸಿಸಿಐ

    ಈ ನಿಧಿಯ ಮೂಲಕ ಟೆಸ್ಟ್ ಕ್ರಿಕೆಟ್ ಆಡಲಿರುವ ಆಟಗಾರರ ಪಂದ್ಯದ ಕನಿಷ್ಠ ಸಂಭಾವನೆಯನ್ನು ಹೆಚ್ಚಿಸುವ ಜೊತೆಗೆ ವಿದೇಶಿ ಸರಣಿಗಳಿಗೆ ತಂಡಗಳನ್ನು ಕಳುಹಿಸುವ ತಂಡದ ಪ್ರವಾಸ ಶುಲ್ಕದ ಜೊತೆಗೆ ಟೆಸ್ಟ್ ಕ್ರಿಕೆಟ್ ಆಡಲಿರುವ ಪ್ರತಿ ಆಟಗಾರರರಿಗೆ ಕನಿಷ್ಠ 8 ಲಕ್ಷ ರೂ. ಸಂಭಾವನೆ ನೀಡಲು ಇದು ನೆರವಾಗಲಿದೆ. ಇದನ್ನೂ ಓದಿ: ಮಾಜಿ ಪ್ರಧಾನಿ ಶೇಖ್‌ ಹಸೀನಾ, ಬಾಂಗ್ಲಾದ ಆಲ್‌ರೌಂಡರ್‌ ಶಕೀಬ್‌ ವಿರುದ್ಧ ಕೊಲೆ ಪ್ರಕರಣ ದಾಖಲು

    ಟೆಸ್ಟ್ ಕ್ರಿಕೆಟ್‌ಗೆ ಆದ್ಯತೆ ನೀಡುವ ಜೊತೆಗೆ ಆಟಗಾರರನ್ನು ಪ್ರೋತ್ಸಾಹಿಸಲು ಬಿಸಿಸಿಐ ಹೊಸ ಯೋಜನೆಯ ಅಡಿಯಲ್ಲಿ ಈಗಾಗಲೇ ಭಾರತದ ಟೆಸ್ಟ್ ಕ್ರಿಕೆಟಿಗರಿಗೆ ಬೋನಸ್ ರೂಪದಲ್ಲಿ ಹೆಚ್ಚಿನ ಸಂಭಾವನೆ ನೀಡುತ್ತಿದೆ. ವಾರ್ಷಿಕ ಶೇ.75 ಟೆಸ್ಟ್ ಪಂದ್ಯಗಳಲ್ಲಿ ಭಾರತದ ತಂಡವನ್ನು ಪ್ರತಿನಿಧಿಸಲಿರುವ ಆಟಗಾರರಿಗೆ ಪ್ರತಿ ಪಂದ್ಯಕ್ಕೆ ತಲಾ 45 ಲಕ್ಷ ರೂ. ಜೊತೆಗೆ ಪಂದ್ಯದ ಶುಲ್ಕ 15 ಲಕ್ಷ ರೂ. ನೀಡಲಿದ್ದು, ಶೇ.50-70 ಪಂದ್ಯಗಳನ್ನು ಆಡಲಿರುವ ಆಟಗಾರರು ಪ್ರತಿ ಪಂದ್ಯಕ್ಕೆ ತಲಾ 30 ಲಕ್ಷ ಬೋನಸ್ ಪಡೆದುಕೊಳ್ಳಲಿದ್ದಾರೆ.

    ಭಾರತಕ್ಕೆ ಈ ಲಾಭವಿಲ್ಲ?
    ಐಸಿಸಿಯ ಈ ನಿಧಿ ಯೋಜನೆಯ ಲಾಭ, ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ದೇಶಗಳಿಗೆ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ರಾಷ್ಟ್ರಗಳು ಈಗಾಗಲೇ ತಮ್ಮ ತಂಡದ ಆಟಗಾರರಿಗೆ ಉತ್ತಮ ಸಂಭಾವನೆ ನೀಡುತ್ತಿದೆ. ಜೊತೆಗೆ ಶ್ರೀಮಂತ ಕ್ರಿಕೆಟ್‌ ಸಂಸ್ಥೆಗಳೆಂದು ಗುರುತಿಸಿಕೊಂಡಿವೆ. ಆದ್ದರಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವೆಸ್ಟ್ ಇಂಡೀಸ್, ಪಾಕಿಸ್ತಾನ ಕ್ರಿಕೆಟ್ ಮಂಡಳಿಯಂತಹ ಸಂಸ್ಥೆಗಳ ಚೇತರಿಕೆ ಈ ನಿಧಿ ಸಹಕಾರಿಯಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಅಂತಾರಾಷ್ಟ್ರೀಯ, ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಶಿಖರ್‌ ಧವನ್‌

  • ಮಾನಹಾನಿ ಕೇಸ್‌ನಲ್ಲಿ ನೀಲಿಚಿತ್ರ ನಟಿಗೆ ಸೋಲು – 1 ಕೋಟಿ ಪಾವತಿಸುವಂತೆ ಕೋರ್ಟ್ ಆದೇಶ

    ಮಾನಹಾನಿ ಕೇಸ್‌ನಲ್ಲಿ ನೀಲಿಚಿತ್ರ ನಟಿಗೆ ಸೋಲು – 1 ಕೋಟಿ ಪಾವತಿಸುವಂತೆ ಕೋರ್ಟ್ ಆದೇಶ

    ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ವಿರುದ್ಧದ ಮಾನಹಾನಿ ಪ್ರಕರಣದಲ್ಲಿ ನೀಲಿಚಿತ್ರ ನಟಿ ಸ್ಟಾರ್ಮಿ ಡೇನಿಯಲ್ಸ್‌ಗೆ (Stormy Daniels) ಸೋಲಾಗಿದೆ. ಹೀಗಾಗಿ ಟ್ರಂಪ್ ಅವರ ವಕೀಲರಿಗೆ 121,000 ಡಾಲರ್ ಮೊತ್ತ (ಸುಮಾರು 1 ಕೋಟಿ ರೂ.) ಪಾವತಿಸುವಂತೆ ಕ್ಯಾಲಿಫೋರ್ನಿಯಾದ ಸರ್ಕ್ಯೂಟ್ ನ್ಯಾಯಾಲಯವು (Circuit Court) ಸೂಚಿಸಿದೆ.

    ಟ್ರಂಪ್ ವಿರುದ್ಧ ಯಾವುದೇ ಆರೋಪ ಮಾಡದಂತೆ ಟ್ವಿಟ್ಟರ್‌ನಲ್ಲಿ ಅನಾಮಿಕ ವ್ಯಕ್ತಿ ಬೆದರಿಕೆ ಹಾಕಿದ್ದ. ತನ್ನ ವಿರುದ್ಧ ಟ್ರಂಪ್ ಕಡೆಯವರೇ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸ್ಟಾರ್ಮಿ ಡೇನಿಯಲ್ಸ್ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಸಾಬೀತಾಗದ ಹಿನ್ನೆಲೆಯಲ್ಲಿ ಕೋರ್ಟ್ ಸ್ಟಾರ್ಮಿ ಡೇನಿಯಲ್ಸ್‌ಗೆ ದಂಡ ವಿಧಿಸಿದೆ.

    ಸ್ಟಾರ್ಮಿ ಡೇನಿಯಲ್ಸ್ ಹಾಗೂ ಟ್ರಂಪ್ ನಡುವಿನ ಸಂಬಂಧ ಮರೆಮಾಚಲು ಆಕೆಗೆ ಹಣ ಪಾವತಿಸಲಾಗಿತ್ತು ಎಂಬ ಪ್ರಕರಣದಲ್ಲಿ ಬಂಧಿಸಿ, ವಿಚಾರಣೆ ಬಳಿಕ ಬಿಡುಗಡೆ ಮಾಡಲಾಗಿತ್ತು. ಮ್ಯಾನ್ ಹಾಟನ್ ಜಿಲ್ಲಾ ಅಟಾರ್ನಿಯ ಕೋರ್ಟ್ ಸಭಾಂಗಣದಲ್ಲಿ ಟ್ರಂಪ್ ಶರಣಾದರು. ಬಳಿಕ ಅವರನ್ನು ಬಂಧಿಸಿದ ಪೊಲೀಸರು ಬಿಗಿ ಭದ್ರತೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ವಿಚಾರಣೆ ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು.

    ಈ ವೇಳೆ ಟ್ರಂಪ್ ವಿರುದ್ಧ ಲೈಂಗಿಕ ಪ್ರಕರಣ ಮುಚ್ಚಿಡಲು ಹಣ ನೀಡಿದ್ದು, ಸೇರಿದಂತೆ ಹಣ ವಂಚನೆಯ 34 ದೋಷಾರೋಪಗಳನ್ನು ಹೊರಿಸಲಾಗಿತ್ತು. ಕಾನೂನು ಸಲಹಾ ಸಿಬ್ಬಂದಿ ಜೊತೆ ಬಂದಿದ್ದ ಟ್ರಂಪ್, ನಾನು ತಪ್ಪು ಮಾಡಿಲ್ಲ. 34 ಆರೋಪಗಳಲ್ಲಿ ನಾನು ನಿರಪರಾಧಿ ಎಂದು ವಾದಿಸಿದ್ದರು. ಇದನ್ನೂ ಓದಿ: ನೀಲಿಚಿತ್ರ ನಟಿಗೆ ಹಣ ವರ್ಗಾವಣೆ – ಡೊನಾಲ್ಡ್ ಟ್ರಂಪ್ ಬಂಧನ

    ಸುಮಾರು ಒಂದು ಗಂಟೆ ಕಾಲ ವಿಚಾರಣೆ ನಡೆಯಿತು. ವಿಚಾರಣೆಯ ನಂತರ ಟ್ರಂಪ್, ತಮ್ಮ ವಾಹನದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದರು. ಈ ಮೂಲಕ ಅಮೆರಿಕದ ಇತಿಹಾಸದಲ್ಲೇ ಕ್ರಿಮಿನಲ್ ಆರೋಪ ಪ್ರಕರಣದ ವಿಚಾರಣೆ ಎದುರಿಸಿ ಬಂಧನಕ್ಕೆ ಒಳಗಾದ ಮೊದಲ ಅಮೆರಿಕದ ಮಾಜಿ ಅಧ್ಯಕ್ಷರಾಗಿದ್ದಾರೆ.

    ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿರುದ್ಧ ವಾಗ್ದಾಳಿ ನಡೆಸಿರುವ ಟ್ರಂಪ್, ದೇಶಕ್ಕೆ ಇಂತಹ ಪರಿಸ್ಥಿತಿ ಬರುತ್ತೆ ಎಂದು ನಾನೆಂದು ಭಾವಿಸಿರಲಿಲ್ಲ. ದೇಶವಿಂದು ಕತ್ತಲಿನಲ್ಲಿದೆ, ದೇಶದ ಶಕ್ತಿ ಕ್ಷೀಣಿಸುತ್ತಿದೆ. ಜಗತ್ತು ಅಮೆರಿಕದತ್ತ ನೋಡಿ ನಗುತ್ತಿದೆ. ಆಫ್ಘನ್‌ನಿಂದ ಪಡೆಗಳ ವಾಪಸ್ ನಿರ್ಧಾರ ನಗೆಪಾಟಲಿಗೀಡಾಗಿದೆ. ದೇಶಾದ್ಯಂತ ಇರುವ ಅತಿವಾದ ಎಡಪಂಥೀಯ ಶಕ್ತಿಗಳು ನನ್ನ ದಮನಕ್ಕೆ ಪ್ರಯತ್ನಿಸ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: PlayBoyಗೆ ಪೋಸ್‌ ಕೊಟ್ಟ ಫ್ರೆಂಚ್‌ ಸಚಿವೆ ನಡೆಗೆ ವ್ಯಾಪಕ ವಿರೋಧ

    ಏನಿದು ಕಳ್ಳ ಸಂಬಂಧ ಕೇಸ್?
    ಟ್ರಂಪ್ ಅವರು ಈ ಹಿಂದೆ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ (ನಿಜವಾದ ಹೆಸರು ಸ್ಟೆಫನಿ ಕ್ಲಿಫರ್ಡ್) ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. 2016ರ ಚುನಾವಣೆ ವೇಳೆ ಈ ಸಂಬಂಧ ಬಹಿರಂಗಪಡಿಸುವುದನ್ನು ತಡೆಯಲು ಟ್ರಂಪ್ ಆಕೆಗೆ 1,30,000 ಡಾಲರ್ (ಸುಮಾರು 1,07,00,000 ರೂ.) ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ.

  • ಆಧಾರ್ ಇರುವ ಪ್ರತಿಯೊಬ್ಬರು ಟ್ವಿಟ್ಟರ್ ಬ್ಲೂಟಿಕ್ ಖಾತೆ ಪಡೆಯಬೇಕು – ಮಸ್ಕ್ ನಿರ್ಧಾರಕ್ಕೆ ಕಂಗನಾ ಬೆಂಬಲ

    ಆಧಾರ್ ಇರುವ ಪ್ರತಿಯೊಬ್ಬರು ಟ್ವಿಟ್ಟರ್ ಬ್ಲೂಟಿಕ್ ಖಾತೆ ಪಡೆಯಬೇಕು – ಮಸ್ಕ್ ನಿರ್ಧಾರಕ್ಕೆ ಕಂಗನಾ ಬೆಂಬಲ

    ನವದೆಹಲಿ: ಟ್ವಿಟ್ಟರ್‌ನಲ್ಲಿ (Twitter) ಬ್ಲೂ ಟಿಕ್ ಪರಿಶೀಲಿಸಿದ ಖಾತೆ (Verified Accounts) ಪಡೆಯಲು ತಿಂಗಳಿಗೆ 8 ಡಾಲರ್ (USD) ಪಾವತಿಸಬೇಕೆನ್ನುವ ಟ್ವಿಟ್ಟರ್ ಮಾಲೀಕ ಎಲೋನ್ ಮಸ್ಕ್ (Elon Musk) ನಿರ್ಧಾರಕ್ಕೆ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಬೆಂಬಲ ವ್ಯಕ್ತಪಡಿಸಿದ್ದಾರೆ.

    ಸಾಮಾಜಿಕ ಮಾಧ್ಯಮ (Social Media) ವೇದಿಕೆಯನ್ನು ಬೌದ್ಧಿಕವಾಗಿ ಮತ್ತು ಸೈದ್ಧಾಂತಿಕವಾಗಿ ಪ್ರೇರೇಪಿಸುವುದರಿಂದ ಈ ನಿರ್ಧಾರ ಉತ್ತಮವಾಗಿದೆ. ಆಧಾರ್ ಕಾರ್ಡ್ (Aadhar Card) ಹೊಂದಿರುವ ಯಾರಾದರೂ ಪರಿಶೀಲಿಸಿದ ಬ್ಲೂ ಟಿಕ್ ಖಾತೆಯನ್ನು ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಟ್ವಿಟ್ಟರ್‌ನಲ್ಲಿ ಬ್ಲೂ ಟಿಕ್ ಬೇಕೆಂದ್ರೆ ತಿಂಗಳಿಗೆ ದುಡ್ಡು ಕೊಡಬೇಕು

    ಮುಂದುವರಿದು, ಟ್ವಿಟ್ಟರ್ ಅತ್ಯುತ್ತಮ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ. ಇದು ನಮ್ಮ ದೃಷ್ಟಿಕೋನ ಅಥವಾ ಜೀವನ ಶೈಲಿಯನ್ನು ಬೌದ್ಧಿಕವಾಗಿ ಮತ್ತು ಸೈದ್ಧಾಂತಿಕವಾಗಿ ಪ್ರೇರೇಪಿಸುತ್ತದೆ. ಕೆಲವರು ಬ್ಲೂಟಿಕ್ ಪರಿಶೀಲಿಸಿದ ಖಾತೆಯನ್ನು ಪಡೆಯುವಾಗಲೂ ನನಗೆ ಈ ಪರಿಕಲ್ಪನೆ ಅರ್ಥವಾಗಿರಲಿಲ್ಲ. ಉದಾಹರಣೆಗೆ ನಾನು ಪರಿಶೀಲಿಸಿದ ಖಾತೆ ಪಡೆದಿರುತ್ತೇನೆ. ಆದರೆ ನನ್ನ ತಂದೆ ಬ್ಲೂಟಿಕ್ ಪಡೆದಿಲ್ಲವೆಂದಾದರೆ ಅದು ಅನಧಿಕೃತ ಖಾತೆ ಎಂದು ತಳ್ಳಿಹಾಕುತ್ತಾರೆ. ಆದ್ದರಿಂದ ಆಧಾರ್‌ಕಾರ್ಡ್ (Aadhar Card) ಹೊಂದಿರುವ ಪ್ರತಿಯೊಬ್ಬರೂ ಪರಿಶೀಲಿಸಿದ ಖಾತೆ ಪಡೆಯುಬೇಕು, ಅದು ತುಂಬಾ ಸರಳ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಸ್ಕ್ ಪಾಲಾಗುತ್ತಿದ್ದಂತೆ ಪರ್ಯಾಯ ಆಪ್ ರಚನೆಯಲ್ಲಿ ತೊಡಗಿದ ಟ್ವಿಟ್ಟರ್ ಸಂಸ್ಥಾಪಕ

    Elon Musk twitter 1

    ಟೆಸ್ಲಾ ಕಂಪೆನಿ ಮುಖ್ಯಸ್ಥ ಎಲೋನ್ ಮಸ್ಕ್ (Elon Musk) ಟ್ವಿಟ್ಟರ್ ಮಾಲೀಕರಾದ ನಂತರ ಹಲವು ಬದಲಾವಣೆಗಳನ್ನ ತಂದಿದ್ದಾರೆ. ಅದರಲ್ಲಿ ಪ್ರಮುಖವಾಗಿ ಪರಿಶೀಲಿಸಿದ ಬ್ಲೂಟಿಕ್ ಖಾತೆ ಪಡೆಯಬೇಕಾದರೆ ತಿಂಗಳಿಗೆ 8 ಡಾಲರ್ (655 ರೂಪಾಯಿ) ಪಾವತಿಸುವ ನಿಯಮ ಜಾರಿಗೆ ತಂದಿದ್ದಾರೆ. ಈ ನಿರ್ಧಾರಕ್ಕೆ ಕಂಗನಾ ರಣಾವತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಾಕ್ ಬೆಂಬಲಕ್ಕೆ ಸೌದಿ ಅರೇಬಿಯಾ – 8 ಸಾವಿರ ಕೋಟಿ ಹೂಡಿಕೆ ಮಾಡೋದಾಗಿ ಘೋಷಣೆ

    ಪಾಕ್ ಬೆಂಬಲಕ್ಕೆ ಸೌದಿ ಅರೇಬಿಯಾ – 8 ಸಾವಿರ ಕೋಟಿ ಹೂಡಿಕೆ ಮಾಡೋದಾಗಿ ಘೋಷಣೆ

    ಇಸ್ಲಾಮಾಬಾದ್: ರಾಜಕೀಯ ಏರಿಳಿತದೊಂದಿಗೆ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದ ಬೆಂಬಲಕ್ಕೆ ಇಸ್ಲಾಮಿಕ್ ರಾಷ್ಟ್ರವಾದ ಸೌದಿ ಅರೇಬಿಯಾ ನಿಂತಿದೆ. ಪಾಕಿಸ್ತಾನದಲ್ಲಿ 100 ಕೋಟಿ ಅಮೆರಿಕನ್ ಡಾಲರ್ (ಸುಮಾರು 8 ಸಾವಿರ ಕೋಟಿ ರೂಪಾಯಿ) ಹೂಡಿಕೆ ಮಾಡುವುದಾಗಿ ಸೌದಿ ಅರೇಬಿಯಾ ಘೋಷಿಸಿದೆ.

    Shehbaz Sharif

    ಈ ಕುರಿತಂತೆ ಸೌದಿ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಬಿನ್ ಅಬ್ದುಲ್ಲಾ ಹಾಗೂ ಅವರ ಪಾಕಿಸ್ತಾನಿ ಸಹವರ್ತಿ ಬಿಲಾವಲ್ ಭುಟ್ಟೋ ಜರ್ದಾರಿ ನಡುವೆ ದೂರವಾಣಿಯಲ್ಲಿ ಮಾತುಕತೆ ನಡೆದಿದೆ. ಇದೇ ವೇಳೆ ಪಾಕಿಸ್ತಾನ ಹಾಗೂ ಸೌದಿ ಅರೇಬಿಯಾದ ಅಂತಾರಾಷ್ಟ್ರೀಯ ಸಂಬಂಧಗಳನ್ನೂ ಗಟ್ಟಿಗೊಳಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಇದನ್ನೂ ಓದಿ: ಭಾರತದೊಂದಿಗಿನ ಶಾಶ್ವತ ಶಾಂತಿಗೆ ಯುದ್ಧವೊಂದೇ ಆಯ್ಕೆಯಾಗಿಲ್ಲ: ಪಾಕ್ ಪ್ರಧಾನಿ

    ಪಾಕಿಸ್ತಾನದ ಆರ್ಥಿಕತೆ ಅಭಿವೃದ್ಧಿಪಡಿಸುವ ಜೊತೆಗೆ ತಮ್ಮ ಬೆಂಬಲ ದೃಢೀಕರಿಸುವ ಸಲುವಾಗಿ ಪಾಕಿಸ್ತಾನದಲ್ಲಿ 1 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡುವುದಾಗಿ ಹೇಳಿದೆ. ಸೌದಿ ಅರೇಬಿಯಾದ ಈ ನಿರ್ಧಾರವನ್ನೂ ವಿದೇಶಾಂಗ ಸಚಿವರು ಸ್ವಾಗತಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನಕ್ಕೆ ಮಿತ್ರ ರಾಷ್ಟ್ರಗಳು 4 ಶತಕೋಟಿ ಡಾಲರ್‌ಗಳಷ್ಟು ಹಣಕಾಸಿನ ನೆರವನ್ನು ಸ್ವೀಕರಿಸಿದ ನಂತರ ಸೌದಿ ಅರೇಬಿಯಾದ ಹೂಡಿಕೆಯ ಕುರಿತು ಪ್ರಕಟಣೆಯಲ್ಲಿ ತಿಳಿಸಿದೆ.

    ಪಾಕಿಸ್ತಾನವು ಮುಂದೂಡಲ್ಪಟ್ಟ ತೈಲ ಸೌಲಭ್ಯದ ಅಡಿಯಲ್ಲಿ ಕತಾರ್‌ನಿಂದ 2 ಶತಕೋಟಿ ಯುಎಸ್ ಡಾಲರ್, ಸೌದಿ ಅರೇಬಿಯಾದಿಂದ 1 ಶತಕೋಟಿ ಯುಎಸ್ ಡಾಲರ್‌ನಷ್ಟು ಹಾಗೂ ವಿವಿಧ ಕ್ಷೇತ್ರಗಳಲ್ಲಿ 1 ಕೋಟಿ ಯುಎಸ್ ಡಾಲರ್ ಹೂಡಿಕೆಗಳನ್ನು ಪಡೆಯಲಿದೆ ಎಂದು ತನ್ನ ಪ್ರಕಟಣೆಯಲ್ಲಿ ಹೇಳಿದೆ.

    ಪಾಕಿಸ್ತಾನವು ಮತ್ತೆ ಆರ್ಥಿಕ ಕುಸಿತದ ಅಂಚಿನಲ್ಲಿದ್ದು, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ದೇಶದ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾ ಅವರು ಸೌದಿಗೆ ಭೇಟಿ ನೀಡಿ ಮಾತುಕತೆ ನಡೆಸಿದ ನಂತರ ಸೌದಿಯು 100 ಶತಕೋಟಿ ಡಾಲರ್‌ಗಳಷ್ಟು ಹೂಡಿಕೆ ಮಾಡಲು ಒಪ್ಪಿಕೊಂಡಿದೆ. ಇದು ಪಾಕಿಸ್ತಾನದ ಆರ್ಥಿಕ ಪುನಶ್ಚೇತನಕ್ಕೆ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]