Tag: Usain Bolt

  • ಕರಾವಳಿಯ ಉಸೇನ್ ಬೋಲ್ಟ್ ಖ್ಯಾತಿಯ ಕಂಬಳ ಓಟಗಾರ ಶ್ರೀನಿವಾಸ್ ಗೌಡ ವಿರುದ್ಧ ಪ್ರಕರಣ ದಾಖಲು

    ಕರಾವಳಿಯ ಉಸೇನ್ ಬೋಲ್ಟ್ ಖ್ಯಾತಿಯ ಕಂಬಳ ಓಟಗಾರ ಶ್ರೀನಿವಾಸ್ ಗೌಡ ವಿರುದ್ಧ ಪ್ರಕರಣ ದಾಖಲು

    ಉಡುಪಿ: ಕರಾವಳಿಯ ಉಸೇನ್ ಬೋಲ್ಟ್ ಎಂದು ಕಂಬಳ ಕ್ಷೇತ್ರದಲ್ಲಿ ಹೆಸರವಾಸಿಯಾಗಿದ್ದ ಶ್ರೀನಿವಾಸ್ ಗೌಡ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿರುವ ಆರೋಪದಡಿ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ.

    ಕಂಬಳ ಓಟಗಾರ ಶ್ರೀನಿವಾಸ ಗೌಡ, ಕಂಬಳ ಹಿರಿಯ ತೀರ್ಪುಗಾರ ಗುಣಪಾಲ್ ಕಡಂಬ ಮತ್ತು ಲೇಸರ್ ಬೀಮ್ ಮಾಲಕ ರತ್ನಾಕರ್ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಿರುವ ಆರೋಪ ಹೊರಿಸಿ ಕಂಬಳ ಕೋಣಗಳ ಯಜಮಾನ ಲೋಕೇಶ್ ಶೆಟ್ಟಿ ಮುಚ್ಚೂರು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಸಿನಿಮಾಗಾಗಿ ಕಂಬಳದ ಕೋಣ ಓಡಿಸಿದ ರಿಯಲ್ ಹೀರೋ ಶ್ರೀನಿವಾಸ್ ಗೌಡ

    ತೀರ್ಪುಗಾರ ಗುಣಪಾಲ್ ಕಡಂಬ ಸ್ವಾರ್ಥ ಸಾಧನೆಗೆ ಕಂಬಳ ದುರುಪಯೋಗ ಮಾಡಿದ್ದಾರೆ. ಸ್ವಂತ ಲಾಭಕ್ಕಾಗಿ ಜಿಲ್ಲಾ ಕಂಬಳ ಸಮಿತಿಯಲ್ಲಿ ಆಕ್ರಮ ಪ್ರವೇಶ ಮಾಡಿದ್ದಾರೆ. ಕಂಬಳ ಕೂಟದ ಸಭೆಗಳಲ್ಲಿ ಮೈಕ್ ಹಿಡಿದು ತಾನೋರ್ವ ಮಹಾಸಾಧಕ, ನನ್ನಿಂದಲೇ ಕಂಬಳ ಉಳಿದಿದೆ ಎಂದು ಸಾರ್ವಜನಿಕರಲ್ಲಿ ಬಿಂಬಿಸಿ ಇದನ್ನು ತಮ್ಮ ಸ್ವಾರ್ಥ ಸಾಧನೆಗೆ ಬಳಸುತ್ತಿದ್ದಾರೆ. ಉಸೇನ್ ಬೋಲ್ಟ್ ದಾಖಲೆ ಉಡೀಸ್ ಅಂತಾ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಇದನ್ನೇ ನೆಪವಾಗಿ ಸಾರ್ವಜನಿಕ ಹಾಗೂ ಸರ್ಕಾರದ ಹಣ ವಂಚಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸದೇ ಇದ್ದರೆ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಚಾಕ್ಲೆಟ್ ಕವರ್ ನುಂಗಿ 6 ವರ್ಷದ ಬಾಲಕಿ ಸಾವು

    2020ರ ಫೆ.1 ರಂದು ದಕ್ಷಿಣ ಕನ್ನಡ ಜಿಲ್ಲೆಯ ಐಕಳದಲ್ಲಿ ನಡೆದ ಕಂಬಳದ ಓಟದಲ್ಲಿ 145.5 ಮೀ. ದೂರವನ್ನು 13.63 ಸೆಕೆಂಡ್‍ಗಳಲ್ಲಿ ಕ್ರಮಿಸುವ ಮೂಲಕ ಶ್ರೀನಿವಾಸ್‌ ಗೌಡ ಕೂಟ ದಾಖಲೆ ಬರೆದಿದ್ದರು. ಈ ಸಾಧನೆ ದೇಶದ ಗಮನ ಸೆಳೆದಿತ್ತು. ಅಲ್ಲದೆ ಕಂಬಳ ಗದ್ದೆಯಲ್ಲಿ ಕೋಣಗಳೊಂದಿಗೆ 100 ಮೀ. ದೂರವನ್ನು 9.55 ಸೆಕೆಂಡ್‍ಗಳಲ್ಲಿ ಕ್ರಮಿಸುವ ಮೂಲಕ ದಾಖಲೆ ಬರೆದಿದ್ದರು. ಈ ಸಾಧನೆಯಿಂದ ಉಸೇನ್ ಬೋಲ್ಟ್ ಅವರ 100 ಮೀ. ಓಟದ ದಾಖಲೆ 9.58 ಉಡೀಸ್ ಆಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಅವಳಿ ಮಕ್ಕಳಿಗೆ ತಂದೆಯಾದ ಉಸೇನ್ ಬೋಲ್ಟ್

    ಅವಳಿ ಮಕ್ಕಳಿಗೆ ತಂದೆಯಾದ ಉಸೇನ್ ಬೋಲ್ಟ್

    ಜಮೈಕಾ: ವಿಶ್ವದ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ತಾನು ಅವಳಿ ಗಂಡು ಮಕ್ಕಳಿಗೆ ತಂದೆಯಾಗಿರುವ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನೀವೂ ಮಾಡಿ ಚಿಕನ್ ಕಟ್ಲೆಟ್

    ನನ್ನ ಪತ್ನಿ ಬೆನೆಟ್ ಅವಳಿ ಗಂಡು ಮಕ್ಕಳಿಗೆ ಜನ್ನ ನೀಡಿದ್ದಾಳೆ. ಒಬ್ಬ ಥಂಡರ್ ಬೋಲ್ಟ್, ಮತ್ತೂಬ್ಬ ಸೆಂಟ್ ಲಿಯೋ ಬೋಲ್ಟ್ ಎಂದು ಮಕ್ಕಳ ಹೆಸರಾಗಿದೆ ಎಂದು ಬರೆದುಕೊಂಡು ಮಕ್ಕಳ ಜೊತೆಗೆ ಕುಳಿತಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Usain St.Leo Bolt (@usainbolt)

    ಬೋಲ್ಟ್ ದಂಪತಿಗೆ ಒಲಿಂಪಿಯಾ ಲೈಟ್ನಿಂಗ್ ಬೋಲ್ಟ್ ಹೆಸರಿನ ಮಗಳೂ ಇದ್ದಾಳೆ. ಇದೀಗ ಉಸೇನ್ ಅವಳಿ ಗಂಡು ಮಕ್ಕಳಿಗೆ ತಂದೆಯಾದ ಬೆನ್ನಲ್ಲೇ ಸಾಮಾಜಿ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನೆಟ್ಟಿಗರು ಸಖತ್ ಫನ್ನಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. 2040ರ ಒಲಂಪಿಕ್ಸ್ ನಲ್ಲಿ ಓಟದಲ್ಲಿ ಉಸೇನ್ ಬೋಲ್ಟ್ ಅವಳಿ ಗಂಡು ಟ್ರ್ಯಾಕ್‍ನಲ್ಲಿ ಓಡುವುದನ್ನು ಕಲ್ಪಸಿಕೊಳ್ಳಿ ಎಂದು ನೆಟ್ಟಿಗರು ಕಮೆಂಟ್ ಮಡುತ್ತಿದ್ದಾರೆ.

  • ವಿಶ್ವದ ಅತಿ ವೇಗದ ಓಟಗಾರ ಉಸೈನ್ ಬೋಲ್ಟ್‌ಗೆ ಕೊರೊನಾ ಸೋಂಕು

    ವಿಶ್ವದ ಅತಿ ವೇಗದ ಓಟಗಾರ ಉಸೈನ್ ಬೋಲ್ಟ್‌ಗೆ ಕೊರೊನಾ ಸೋಂಕು

    – ಹುಟ್ಟುಹಬ್ಬ ಆಚರಿಸಿಕೊಂಡ ಕೆಲವೇ ದಿನಗಳ ಬಳಿಕ ಸೋಂಕು ಪತ್ತೆ
    – ಪಾರ್ಟಿಯಲ್ಲಿ ಕ್ರಿಸ್ ಗೇಲ್, ರಹೀಮ್ ಸ್ಟೆರ್ಲಿಂಗ್ ಸಹ ಭಾಗಿ

    ಲಂಡನ್: ವಿಶ್ವದ ಅತೀ ವೇಗದ ಓಟಗಾರ, ಒಲಿಂಪಿಕ್‍ನಲ್ಲಿ 8 ಬಾರಿ ಚಿನ್ನದ ಪದಕ ತನ್ನದಾಗಿಸಿಕೊಂಡಿರುವ ಉಸೈನ್ ಬೋಲ್ಟ್‌ಗೆ ತನ್ನ 34ನೇ ಹುಟ್ಟುಹಬ್ಬ ಆಚರಿಸಿಕೊಂಡ ಕೆಲವೇ ದಿನಗಳ ಬಳಿಕ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.

    ಈ ಕುರಿತು ಸ್ವತಃ ಬೋಲ್ಟ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಎಲ್ಲರಿಗೂ ಶುಭೋದಯ, ನನಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಶನಿವಾರ ನಾನು ಪರೀಕ್ಷೆ ಮಾಡಿಸಿದ್ದೆ. ಹೀಗಾಗಿ ಮನೆಯಲ್ಲೇ ಐಸೋಲೇಶನ್‍ಗೆ ಒಳಗಾಗಿದ್ದೇನೆ. ನನಗೆ ಯಾವುದೇ ರೀತಿಯ ರೋಗ ಲಕ್ಷಣಗಳಿಲ್ಲ. ಆದರೆ ಸುರಕ್ಷತೆ ದೃಷ್ಟಿಯಿಂದ ನನ್ನ ಸ್ನೇಹಿತರಿಂದ ದೂರವಿದ್ದೇನೆ. ಸೆಲ್ಫ್ ಕ್ವಾರಂಟೈನ್‍ಗೆ ಒಳಗಾಗಿದ್ದೇನೆ ಎಂದಿದ್ದಾರೆ.

    ಅಲ್ಲದೆ ಆರೋಗ್ಯ ಸಚಿವಾಲಯದ ನಿಯಮದ ಪ್ರಕಾರ ನಾನು ಹೇಗೆ ಇತರರಿಂದ ದೂರ ಇರಬಹುದು ಎಂಬುದನ್ನು ತಿಳಿಯುತ್ತೇನೆ. ಸದ್ಯ ಸುರಕ್ಷತೆ ದೃಷ್ಟಿಯಿಂದ ನಾನು ಪ್ರತ್ಯೇಕವಾಗಿದ್ದೇನೆ. ಅಲ್ಲದೆ ಕೊರೊನಾ ವೈರಸ್‍ನ್ನು ಸುಲಭವಾಗಿ ತೆಗೆದುಕೊಂಡಿದ್ದೇನೆ. ನೀವು ಸುರಕ್ಷಿತವಾಗಿರಿ, ಆಲ್‍ರೈಟ್ ಕೂಲ್ ಎಂದು ಟ್ವಿಟ್ಟರ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ಇತ್ತೀಚೆಗಷ್ಟೇ ಉಸೈನ್ ಬೋಲ್ಟ್ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಸ್ನೇಹಿತರೊಂದಿಗೆ ಭರ್ಜರಿ ಪಾರ್ಟಿ ಮಾಡಿದ್ದಾರೆ. ಇದರಲ್ಲಿ ಕ್ರಿಕೆಟ್ ಆಟಗಾರ ಕ್ರಿಸ್ ಗೇಲ್, ಫುಟ್‍ಬಾಲ್ ಆಟಗಾರ ರಹೀಮ್ ಸ್ಟೆರ್ಲಿಂಗ್ ಸೇರಿದಂತೆ ಹಲವು ಗಣ್ಯರು ಸಹ ಭಾಗಿಯಾಗಿದ್ದರು. ಪಾರ್ಟಿ ವೇಳೆ ಗಣ್ಯರು ಕುಣಿದು ಕುಪ್ಪಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು ಎಂದು ವರದಿಯಾಗಿದೆ.

  • ಉಸೇನ್ ಬೋಲ್ಟ್ ದಾಖಲೆ ಮುರಿದ ತುಳುನಾಡ ಕಂಬಳ ಓಟಗಾರ ಶ್ರೀನಿವಾಸ್

    ಉಸೇನ್ ಬೋಲ್ಟ್ ದಾಖಲೆ ಮುರಿದ ತುಳುನಾಡ ಕಂಬಳ ಓಟಗಾರ ಶ್ರೀನಿವಾಸ್

    ಮಂಗಳೂರು: ಉಸೇನ್ ಬೋಲ್ಟ್ ಜಗತ್ತಿನ ಅತೀ ವೇಗದ ಓಟಗಾರ. ಮಿಂಚಿನಂತೆ ಕ್ಷಣ ಮಾತ್ರದಲ್ಲಿ ಗುರಿತಲುಪುವ ಸಾಧಕ. ಉಸೇನ್ ಬೋಲ್ಟ್‌ನ ದಾಖಲೆಗಳನ್ನು ಬ್ರೇಕ್ ಮಾಡೋಕೆ ಸಾಧ್ಯನೇ ಇಲ್ಲ ಅಂತ ತಿಳಿದುಕೊಂಡವರಿಗೆ ಮಾತ್ರ ಇದು ಶಾಕಿಂಗ್ ನ್ಯೂಸ್. ಹೌದು ವೇಗದಲ್ಲಿ ಉಸೇನ್ ಬೋಲ್ಟ್ ದಾಖಲೆಯನ್ನು ಹಿಂದಿಕ್ಕಿ ಕರ್ನಾಟಕದ ಕರಾವಳಿಯ ಕಂಬಳ ಕೋಣಗಳ ಓಟಗಾರ ಶ್ರೀನಿವಾಸ್ ಹೊಸ ದಾಖಲೆ ಬರೆದಿದ್ದಾರೆ.

    ಸದೃಢ ಮೈಕಟ್ಟು, ಜಿಮ್‍ಗೆ ಹೋಗದೆ ಬೆಳೆದ ನ್ಯಾಚುರಲ್ ಸಿಕ್ಸ್ ಪ್ಯಾಕ್, ಕಂಬಳದ ಗದ್ದೆಗೆ ಇಳಿದರೆ ಸಾಕು ಚಿರತೆಯನ್ನೇ ನಾಚಿಸುವಂತಹ ವೇಗದಲ್ಲಿ ಓಡುವ ಶ್ರೀನಿವಾಸ ಗೌಡ ಈಗ ಕರಾವಳಿಯಲ್ಲಿ ಸಖತ್ ಫೆಮಸ್ ಆಗಿಬಿಟ್ಟಿದ್ದಾರೆ. ಕಂಬಳ ಕ್ರೀಡೆಯಲ್ಲಿ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಎಂದೇ ಇವರು ಹೆಸರುವಾಸಿ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಅಶ್ವಥಪುರ ನಿವಾಸಿ ಕಂಬಳ ಕೋಣದ ಓಟಗಾರ ಶ್ರೀನಿವಾಸ ಗೌಡ ಈಗ ಹೊಸ ದಾಖಲೆಯನ್ನು ಬರೆದಿದ್ದಾರೆ.

    ವಿಶ್ವದ ಫಾಸ್ಟೆಸ್ಟ್ ರನ್ನರ್ ಉಸೇನ್ ಬೋಲ್ಟ್‌ನ ದಾಖಲೆಯನ್ನು ಪುಡಿಪುಡಿ ಮಾಡಿ ಹೊಸ ಭಾಷ್ಯ ಬರೆದಿದ್ದಾರೆ. ಉಸೇನ್ ಬೋಲ್ಟ್ 100 ಮೀ. ಓಟವನ್ನು ಕೇವಲ 9.58 ಸೆಕೆಂಡ್ ಅವಧಿಯಲ್ಲಿ ಕ್ರಮಿಸಿದರೆ, ಶ್ರೀನಿವಾಸ ಗೌಡ ಕಂಬಳ ಗದ್ದೆಯ ಕೆಸರಿನಲ್ಲಿ ಕೋಣಗಳ ಜೊತೆ 100 ಮೀಟರ್‍ನ್ನು ಕೇವಲ 9.55 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ದಾಖಲೆ ಬರೆದಿದ್ದಾರೆ.

    ಫೆಬ್ರವರಿ 1ರಂದು ಮಂಗಳೂರು ಸಮೀಪದ ಐಕಳದಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡ 142.50 ಮೀಟರ್ ದೂರವನ್ನು ಕೇವಲ 13.62 ಸೆಕೆಂಡಲ್ಲಿ ಕ್ರಮಿಸಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದೆ. ಶ್ರೀನಿವಾಸ ಗೌಡ ಗುರಿ ತಲುಪಲು ತೆಗೆದುಕೊಂಡ ಸಮಯವನ್ನು 100 ಮೀ. ಓಟದೊಂದಿಗೆ ತಾಳೆ ಹಾಕಿದರೆ 9.55 ಸೆಕೆಂಡ್‍ನಲ್ಲಿ ಓಟ ಪೂರ್ಣಗೊಳಿಸಿ ಬೋಲ್ಟ್ ದಾಖಲೆಯನ್ನು ಉಡಾಯಿಸಿದ್ದಾರೆ.

    ಸಿಂಥೆಟಿಕ್ ಟ್ರ್ಯಾಕ್ ಮೇಲೆ ಓಡಿ ಉಸೇನ್ ಬೋಲ್ಟ್ ಮಾಡಿದ ದಾಖಲೆಯನ್ನು ಶ್ರೀನಿವಾಸಗೌಡ ಕಾಲು ಹೂತು ಹೋಗುವ ಕಂಬಳದ ಕೆಸರುಗದ್ದೆಯಲ್ಲಿ ಓಡಿ ಮುರಿದಿದ್ದಾರೆ. ಈ ಮೂಲಕ ಎಲ್ಲರನ್ನೂ ಆಶ್ಚರ್ಯ ಚಕಿತಗೊಳಿಸಿದ್ದಾರೆ.

    ಕಂಬಳದ ಗದ್ದೆಯಲ್ಲಿ ಮೊಣಕಾಲಿನವರೆಗೆ ಕೆಸರು ತುಂಬಿದ್ದು, ಒಂದು ಕೈಯಲ್ಲಿ ಕೋಣಗಳ ಹಗ್ಗ ಮತ್ತೊಂದು ಕೈಯಲ್ಲಿ ಬಾರುಕೋಲು ಹಿಡಿದು, ಸಮಚಿತ್ತದಿಂದ ಓಡಬೇಕಾಗುತ್ತದೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಓಡುವ ಶ್ರೀನಿವಾಸ ಗೌಡ ಅವರೇ ಬೋಲ್ಟಿಗಿಂತ ಕೂದಲೆಳೆಯ ಅಂತರದಲ್ಲಿ ಮುಂದಿದ್ದಾರೆ.

    ಯಾವ ತರಬೇತಿಯನ್ನೂ ಪಡೆಯದೆ ಶ್ರೀನಿವಾಸ ಗೌಡ ತಮ್ಮ ಸ್ವಂತ ಆಸಕ್ತಿಯಿಂದ ಕಂಬಳ ಕ್ಷೇತ್ರದಲ್ಲಿ ತೊಡಗಿಸಿಕೊಂಡು ದಾಖಲೆ ಮಾಡಿದ್ದಾರೆ. ಈ ಋತುವಿನ ಕಂಬಳ ಕ್ರೀಡಾಕೂಟದಲ್ಲಿ ಅತೀ ಹೆಚ್ಚು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಕಂಬಳ ಕೂಟದ ಚಿನ್ನದ ಓಟಗಾರನಾಗಿ ಪ್ರಸಿದ್ಧಿಯಾಗಿದ್ದಾರೆ.

  • ಭೂಮಿ ಅಷ್ಟೇ ಅಲ್ಲ, ಅಂತರಿಕ್ಷದಲ್ಲಿಯೂ ಬೋಲ್ಟ್ ವೇಗದ ಓಟಗಾರ- ವಿಡಿಯೋ ವೈರಲ್

    ಭೂಮಿ ಅಷ್ಟೇ ಅಲ್ಲ, ಅಂತರಿಕ್ಷದಲ್ಲಿಯೂ ಬೋಲ್ಟ್ ವೇಗದ ಓಟಗಾರ- ವಿಡಿಯೋ ವೈರಲ್

    ನವದೆಹಲಿ: ಭೂಮಿಯ ಮೇಲೆ ಅತ್ಯಂತ ವೇಗವಾಗಿ ಓಡುವ ವ್ಯಕ್ತಿ ಎನ್ನುವ ಖ್ಯಾತಿ ಪಡೆದಿರುವ ಉಸೇನ್ ಬೋಲ್ಟ್, ಈಗ ಅಂತರಿಕ್ಷದಲ್ಲಿಯೂ ಅತಿ ವೇಗವಾಗಿ ಓಡಬಲ್ಲರು ಎನ್ನುವುದನ್ನು ಸಾಬೀತು ಮಾಡಿದ್ದಾರೆ.

    ಎಂಟು ಬಾರಿ ಒಲಿಂಪಿಕ್ ಚಾಂಪಿಯನ್ ಆಗಿರುವ ಉಸೇನ್ ಬೋಲ್ಟ್, ಗುರುತ್ವಾಕರ್ಷನೆ ಇರದ ಏರ್ ಬಸ್ಸಿನಲ್ಲಿ ಓಡಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ವಿಡಿಯೋದಲ್ಲಿ ಏನಿದೆ?
    ಗುರುತ್ವಾಕರ್ಷನೆ ಇಲ್ಲದ ಬಸ್ಸಿನಲ್ಲಿ ತಮ್ಮೊಂದಿಗೆ ಇದ್ದ ಇಬ್ಬರು ಪ್ರಯಾಣಿಕರ ಜೊತೆಗೆ ಓಟದ ಸ್ಪರ್ಧೆಗೆ ಇಳಿಯುತ್ತಾರೆ. ಓಟ ಆರಂಭಸಿದ ಬೋಲ್ಟ್ ನೆಲಕ್ಕೆ ಕಾಲು ತಾಕಿಸಲು ಕಷ್ಟಪಡಬೇಕಾಯಿತು. ತಮ್ಮ ಎದುರಿಗೆ ಇರುವ ಗೋಡೆಯನ್ನು ಮುಟ್ಟುವ ಮೊದಲೇ ಬೋಲ್ಟ್ ಜಾರಿ ಕೆಳಗೆ ಬೀಳುತ್ತಾರೆ. ತಕ್ಷಣವೇ ಪಲ್ಟಿ ಹೊಡೆದು ಗೋಡೆಯನ್ನು ಮುಟ್ಟಿ ವಾಪಾಸ್ ಆಗುತ್ತಾರೆ. ಮರಳಿ ಗುರಿಯತ್ತ ಬರುವಾಗ ಸ್ಪರ್ಧಿಗಳು ಬಹುದೂರವೇ ಉಳಿದಿರುತ್ತಾರೆ. ಈ ಮೂಲಕ ಗುರುತ್ವಾಕರ್ಷನೆ ಇಲ್ಲದ ಪ್ರದೇಶದಲ್ಲಿಯೂ ಬೋಲ್ಟ್ ವೇಗವಾಗಿ ಓಡಬಲ್ಲರು ಎನ್ನುವುದನ್ನು ಸಾಬೀತು ಮಾಡಿದ್ದಾರೆ.

    ಫ್ರೆಂಚ್ ಗಗನಯಾತ್ರಿ ಜೀನ್ ಫ್ರಾಂಕೋಯಿಸ್ ಮತ್ತು ನೊವ್‍ಸ್ಪೇಸ್ ಓಕ್ಟಾವ್ ಡೆ ಗೌಲೆ ಬೋಲ್ಟ್ ಜೊತೆಗೆ ಸ್ಪರ್ಧಿಸಿದವರು. ಆದರೆ ಬೋಲ್ಟ್ ಅವರನ್ನು ಹಿಂದಿಕ್ಕಲು ವಿಫಲರಾಗಿದ್ದಾರೆ. ವಿಜಯದ ನಗೆ ಬೀರುತ್ತಿದ್ದಂತೆ ಬೋಲ್ಟ್ ತಮ್ಮ ಶೈಲಿಯಲ್ಲಿಯೇ ಎದೆಯನ್ನು ತಟ್ಟಿಕೊಂಡು ಸಂಭ್ರಮಿಸಿದ್ದಾರೆ. ‘ನಾನು ಸ್ವಲ್ಪ ಹೊತ್ತು ನಿಶಕ್ತನಾಗಿಬಿಟ್ಟಿದ್ದೇ. ಓ ದೇವರೇ ಏನಾಯಿತು ನನಗೆ ಎನ್ನುವ ಭಾವನೆ ಮೂಡಿತ್ತು. ಇದು ನನಗೆ ಉತ್ಸಾಹ (ಕ್ರೇಜ್) ತಂದುಕೊಟ್ಟಿದೆ ಎಂದು ಬೋಲ್ಟ್ ಹೇಳಿದ್ದಾರೆ.

    ಫುಟ್‍ಬಾಲ್ ಆಟದತ್ತ ಹೆಜ್ಜೆ ಹಾಕಿರುವ ಬೋಲ್ಟ್, ರಿಲ್ಯಾಕ್ಸ್ ಮೂಡ್‍ಗಾಗಿ ಇಂತಹ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಗುರುತ್ವಾಕರ್ಷನೆ ಇಲ್ಲದ ಬಸ್ಸಿನಲ್ಲಿ ನಾಲ್ಕು ನಿಮಿಷಗಳ ಕಾಲ ಜೀಗಿಯುತ್ತ ಹಾಗೂ ಹಾಸ್ಯ ಮಾಡುತ್ತ ಸಹ ಪ್ರಯಾಣಿಕರನ್ನು ರಂಜಿಸಿದ್ದಾರೆ. ವೃತ್ತಿಪರ ಫುಟ್‍ಬಾಲ್ ಆಟಗಾರರಾಗುವ ಉದ್ದೇಶದಿಂದ ಆಸ್ಟ್ರೇಲಿಯಾದ ಮ್ಯಾರಿನೆರ್ ನಲ್ಲಿ ಬೋಲ್ಟ್ ತರಬೇತಿ ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv