Tag: USA

  • ಅಮೆರಿಕಗೆ ತೆರಳಲು ನೋ ಕ್ಲಿಯರೆನ್ಸ್ – ಪ್ರಿಯಾಂಕ್ ಖರ್ಗೆಗೆ ಬಿಗ್‌ ಶಾಕ್‌

    ಅಮೆರಿಕಗೆ ತೆರಳಲು ನೋ ಕ್ಲಿಯರೆನ್ಸ್ – ಪ್ರಿಯಾಂಕ್ ಖರ್ಗೆಗೆ ಬಿಗ್‌ ಶಾಕ್‌

    ಬೆಂಗಳೂರು: ಪ್ಯಾರಿಸ್ (Paris) ಪ್ರವಾಸ ಮುಗಿಸಿ ಅಮೆರಿಕಗೆ (USA) ತೆರಳಬೇಕಿದ್ದ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆಗೆ (Priyank Kharge) ಶಾಕ್ ಸಿಕ್ಕಿದೆ. ಕ್ಲಿಯರೆನ್ಸ್‌ ಸಿಗದ ಕಾರಣ ಅಮೆರಿಕದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಿದ್ದ ಪ್ರಿಯಾಂಕ್ ಖರ್ಗೆಗೆ ನಿರಾಸೆಯಾಗಿದೆ.

    ಅಮೆರಿಕ ಭೇಟಿಗೆ ಕ್ಲಿಯರೆನ್ಸ್ ಸಿಗದ ಬಗ್ಗೆ ಪ್ರಿಯಾಂಕ್ ಖರ್ಗೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕ್ಲಿಯರೆನ್ಸ್ ನಿರಾಕರಣೆ ಮಾಡಿದ್ದು ಯಾರು ಎಂಬುದರ ಬಗ್ಗೆ ಗೊಂದಲ ಇದೆ.

    ಭಾರತದಿಂದ ಕ್ಲಿಯರೆನ್ಸ್ ಸಿಕ್ಕಿಲ್ಲವೋ? ಅಥವಾ ಅಮೆರಿಕದಿಂದ ಸಿಕ್ಕಿಲ್ಲವಾ ಎಂಬ ಬಗ್ಗೆ ಗೊಂದಲದಲ್ಲಿದ್ದು, ಕರ್ನಾಟಕಕ್ಕೆ ವಾಪಸ್ ಆದ ಬಳಿಕ ಪ್ರಿಯಾಂಕ್ ಖರ್ಗೆ ಮಹತ್ವದ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಯಿದೆ.

    ಐಟಿ ಬಿಟಿಗೆ ಸಂಬಂಧಪಟ್ಟಂತೆ ಪ್ರಿಯಾಂಕ್ ಖರ್ಗೆ ಬೋಸ್ಟನ್, ಸ್ಯಾನ್‌ಫ್ರಾನ್ಸಿಸ್ಕೋ ನಗರಗಳಲ್ಲಿ ಆಯೋಜನೆಗೊಂಡಿದ್ದ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಬೇಕಿತ್ತು. ಪ್ರಿಯಾಂಕ್‌ ಜೊತೆ ತೆರಳಿದ್ದ ಐಎಎಸ್ ಅಧಿಕಾರಿಗೆ ಅಮೆರಿಕಗೆ ತೆರಳಲು ಕ್ಲಿಯರೆನ್ಸ್ ಸಿಕ್ಕಿದೆ.  ಪ್ಯಾರಿಸ್‌ ಏರ್‌ ಶೋನಲ್ಲಿ ಭಾಗಿಯಾಗಿದ್ದಪ್ರಿಯಾಂಕ್ ಖರ್ಗೆ ಗುರುವಾರ ಬೆಂಗಳೂರಿಗೆ ಮರಳಲಿದ್ದಾರೆ.

  • ಭಾರತದ ಬಳಿಯಿರುವಂತೆ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆ ನಮಗೂ ಕೊಡಿ – ಅಮೆರಿಕಕ್ಕೆ ಪಾಕ್‌ ಬೇಡಿಕೆ

    ಭಾರತದ ಬಳಿಯಿರುವಂತೆ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆ ನಮಗೂ ಕೊಡಿ – ಅಮೆರಿಕಕ್ಕೆ ಪಾಕ್‌ ಬೇಡಿಕೆ

    – ಮಿಲಿಟರಿ ಪ್ರಯೋಜನದ ಬಗ್ಗೆ ಶೆಹಬಾಜ್‌ ಸರ್ಕಾರ ಸುಳ್ಳು ಹಬ್ಬಿಸುತ್ತಿದೆ; ತಪ್ಪೊಪ್ಪಿಗೆ
    – ಭಾರತ 80 ಫೈಟರ್‌ ಜೆಟ್‌ಗಳಿಂದ 400 ಕ್ಷಿಪಣಿ ಹಾರಿಸಿತ್ತು
    – ಚೀನಾ ನಂಬಿ ಕೆಟ್ಟು ಈಗ ಅಮೆರಿಕದ ಬಳಿ ಭಿಕ್ಷೆ

    ಇಸ್ಲಾಮಾಬಾದ್‌: ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತದ (India) ಅಸ್ತ್ರಗಳನ್ನು ಭೇದಿಸಲು ವಿಫಲವಾದ ಪಾಕಿಸ್ತಾನ ಇದೀಗ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಗಾಗಿ (Air Defence System) ಅಮೆರಿಕದ ಬಳಿ ಬೇಡಿಕೊಂಡಿದೆ.

    ಹೌದು. ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತವು ಪಾಕಿಸ್ತಾನದ (Pakistan) ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದ 9 ಉಗ್ರರ ಅಡಗು ತಾಣಗಳನ್ನು ಧ್ವಂಸಗೊಳಿಸಿತು. ಅಲ್ಲದೇ ಪಾಕ್‌ ದಾಳಿಗೆ ಪ್ರತೀಕಾರವಾಗಿ 11 ವಾಯುನೆಲೆಗಳನ್ನೂ ಧ್ವಂಸಗೊಳಿಸಿತ್ತು. ಇದಕ್ಕೂ ಮುನ್ನ ಪಾಕ್‌ ಭಾರತದ ಮೇಲೆ ನಡೆಸಿದ ದಾಳಿಗಳನ್ನೆಲ್ಲ ಎಸ್‌-400 ವಾಯುರಕ್ಷಣಾ ವ್ಯವಸ್ಥೆ ವಿಫಲಗೊಳಿಸಿತು. ಒಟ್ಟಿನಲ್ಲಿ ಭಾರತದ ಎದುರು ಮಂಡಿಯೂರಿದ ಪಾಕ್‌ ಕಾಡಿ ಬೇಡಿ ಕದನ ವಿರಾಮ ಮಾಡಿಕೊಂಡಿತು. ಭಾರತದ ಈ ಪರಾಕ್ರಮ ಕಂಡು ದಂಗಾಗಿರುವ ಪಾಕಿಸ್ತಾನ ಈಗ ತನಗೂ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆ ಮತ್ತು ಫೈಟರ್‌ ಜೆಟ್‌ಗಳನ್ನು ಕಲ್ಪಿಸುವಂತೆ ಅಮೆರಿಕದ (America) ಬಳಿ ಬೇಡಿಕೊಂಡಿದೆ.

    ಶೆಹಬಾಜ್‌ ಸರ್ಕಾರ ಸುಳ್ಳು ಹಬ್ಬಿಸುತ್ತಿದೆ
    ಪಾಕಿಸ್ತಾನದ 13 ಸದಸ್ಯರ ನಿಯೋಗದ ಭಾಗವಾಗಿರುವ ಪಾಕ್‌ ಸಚಿವ ಮುಸಾದಿಕ್ ಮಲಿಕ್ ವಾಷಿಂಗ್ಟನ್‌ನಲ್ಲಿ ಮಾತನಾಡಿದ್ದಾರೆ. ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ ಮತ್ತು ಯುದ್ಧ ವಿಮಾನಗಳನ್ನು ತನಗೆ ಮಾರಾಟ ಮಾಡುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ಶೆಹಬಾಜ್‌ (Shehbaz Sharif) ಸರ್ಕಾರವು ತನ್ನ ಜನತೆಗೆ ಭಾರತಕ್ಕಿಂತ ಹೆಚ್ಚಿನ ಮಿಲಿಟರಿ ಪ್ರಯೋಜನ ಹೊಂದಿರುವುದಾಗಿ ಸುಳ್ಳು ಹಬ್ಬಿಸುತ್ತಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲೂ ವೈರಲ್‌ ಆಗಿದೆ.

    ನಾವೇ ನಾಶವಾಗಿಬಿಡ್ತಿದ್ವಿ
    ಮುಂದುವರಿದು… ಭಾರತ 80 ವಿಮಾನಗಳೊಂದಿಗೆ 400 ಕ್ಷಿಪಣಿಗಳನ್ನ ಹಾರಿಸಿತ್ತು. ಯುದ್ಧದ ವೇಳೆ ನಮಗೆ ಏನಾಯ್ತು ಅನ್ನೋದನ್ನ ನೀವು ನೋಡಿರಬೇಕು, ನಾವೇ ನಾಶವಾಗಿಬಿಡುತ್ತಿದ್ದೆವು. ನಮ್ಮಲ್ಲಿ ಸೂಕ್ತ ವಾಯು ರಕ್ಷಣಾ ವ್ಯವಸ್ಥೆಗಳಿಲ್ಲದಿರುವುದೇ ಇದಕ್ಕೆ ಕಾರಣ. ಭಾರತ ಬಳಸುತ್ತಿದ್ದ ತಂತ್ರಜ್ಞಾನವು ಅತ್ಯಾಧುನಿಕವಾದುದು, ತುಂಬಾ ಮುಂದುವರಿದಿದೆ. ಆದ್ದರಿಂದ ಆ ರೀತಿಯ ತಂತ್ರಜ್ಞಾನವನ್ನ ನಮಗೆ ಕೊಡಿ. ನಾವು ಖರೀದಿಸಲು ಉತ್ಸುಕವಾಗಿದ್ದೇವೆ ಎಂದು ಸಹ ಪಾಕ್‌ ಸಚಿವ ಹೇಳಿದ್ದಾರೆ.

    ಜೈಶ್‌ ಉಗ್ರ ಸಂಘಟನೆ ವಿರುದ್ಧ ಕ್ರಮ ತಗೊಳ್ಳಿ
    ಓಂದು ದಿನದ ಹಿಂದೆಯಷ್ಟೇ ಅಮೆರಿಕ ಸಂಸದ ಬ್ರಾಡ್‌ ಶೆರ್ಮನ್ (Brad Sherman) ಜೈಶ್‌ ಎ ಮೊಹಮ್ಮದ್‌ (Jaish-e-Mohammed) ಭಯೋತ್ಪಾದಕ ಸಂಘಟನೆ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ಪಾಕ್‌ಗೆ ಬಲವಾದ ಸಂದೇಶ ನೀಡಿದ್ದರು. 2002 ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್‌ನ ಪತ್ರಕರ್ತ ಡೇನಿಯಲ್ ಪರ್ಲ್ (Daniel Pearl) ಅವರ ಹತ್ಯೆ ಸೇರಿದಂತೆ ಅನೇಕ ಘೋರ ಅಪರಾಧಗಳಿಗೆ ಈ ಗುಂಪು ಕಾರಣವಾಗಿದೆ. ಹಾಗಾಗಿ ಈ ಉಗ್ರ ಸಂಘಟನೆಯನ್ನು ಬುಡಸಮೇತ ನಿರ್ಮೂಲನೆ ಮಾಡಬೇಕು. ಭಯೋತ್ಪಾದನೆ ವಿರುದ್ಧ ಬಲವಾದ ಹೋರಾಟ ನಡೆಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಪಾಕಿಸ್ತಾನ ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದ್ದರು.

    ಭಾರತದ ಐಡಿಯಾ ಕಾಪಿ
    ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಪಾಕ್‌ ಪ್ರಾಯೋಜಿತ ಮುಖವಾಡವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಬಯಲು ಮಾಡಲು ಭಾರತ 7 ಸರ್ವಪಕ್ಷಗಳ ನಿಯೋಗವನ್ನು ವಿದೇಶಗಳಿಗೆ ಕಳುಹಿಸಿದೆ. ಇದೇ ಐಡಿಯಾ ಕಾಪಿ ಮಾಡಿರುವ ಪಾಕಿಸ್ತಾನ ಸಹ ತನ್ನ ದೇಶದ ನಿಯೋಗವನ್ನ ವಿದೇಶಗಳಿಗೆ ಕಳುಹಿಸಿದೆ. ಆದ್ರೆ ಪಾಕ್‌ ನಿಲುವಿಗೆ ವಿದೇಶಗಳಿಂದಲೂ ವಿರೋಧ ವ್ಯಕ್ತವಾಗುತ್ತಿದೆ.

  • ಭಯೋತ್ಪಾದನೆ ನಿರ್ಮೂಲನೆ ಮಾಡಿ, ಜೈಶ್‌ ಉಗ್ರ ಸಂಘಟನೆ ವಿರುದ್ಧ ಕ್ರಮ ತಗೊಳ್ಳಿ – ಪಾಕ್‌ಗೆ ಅಮೆರಿಕ ವಾರ್ನಿಂಗ್‌

    ಭಯೋತ್ಪಾದನೆ ನಿರ್ಮೂಲನೆ ಮಾಡಿ, ಜೈಶ್‌ ಉಗ್ರ ಸಂಘಟನೆ ವಿರುದ್ಧ ಕ್ರಮ ತಗೊಳ್ಳಿ – ಪಾಕ್‌ಗೆ ಅಮೆರಿಕ ವಾರ್ನಿಂಗ್‌

    ಇಸ್ಲಾಮಾಬಾದ್‌/ವಾಷಿಂಗ್ಟನ್‌: ಜೈಶ್‌ ಎ ಮೊಹಮ್ಮದ್‌ (Jaish-e-Mohammed) ಭಯೋತ್ಪಾದಕ ಸಂಘಟನೆ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ಅಮೆರಿಕ ಸಂಸದ ಬ್ರಾಡ್‌ ಶೆರ್ಮನ್ (Brad Sherman) ಪಾಕಿಸ್ತಾನಕ್ಕೆ ಬಲವಾದ ಸಂದೇಶ ನೀಡಿದ್ದಾರೆ. ಅಲ್ಲದೇ ಜೈಶ್‌ ಸಂಘಟನೆಯ ನೀಚ ಕೃತ್ಯಗಳನ್ನು ಪಾಕಿಸ್ತಾನದ ಮಾಜಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ವರದಿಯಾಗಿದೆ.

    ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ಪಾಕಿಸ್ತಾನಿ ನಿಯೋಗವನ್ನು (Pakistani delegation) ವಾಷಿಂಗ್ಟನ್‌ನಲ್ಲಿ ಭೇಟಿಯಾದ ಶೆರ್ಮನ್, ಜೆಇಎಂನ ನೀಚ ಕೃತ್ಯಗಳ ಬಗ್ಗೆ ತಿಳಿಸಿದ್ದಾರೆ. 2002 ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್‌ನ ಪತ್ರಕರ್ತ ಡೇನಿಯಲ್ ಪರ್ಲ್ (Daniel Pearl) ಅವರ ಹತ್ಯೆ ಸೇರಿದಂತೆ ಅನೇಕ ಘೋರ ಅಪರಾಧಗಳಿಗೆ ಈ ಗುಂಪು ಕಾರಣವಾಗಿದೆ. ಹಾಗಾಗಿ ಈ ಉಗ್ರ ಸಂಘಟನೆಯನ್ನು ಬುಡಸಮೇತ ನಿರ್ಮೂಲನೆ ಮಾಡಬೇಕು. ಭಯೋತ್ಪಾದನೆ ವಿರುದ್ಧ ಬಲವಾದ ಹೋರಾಟ ನಡೆಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಪಾಕಿಸ್ತಾನ ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿಗೆ ಖಂಡನೆ – ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ʻಬ್ರಿಕ್ಸ್‌ʼ ಸದಸ್ಯ ರಾಷ್ಟ್ರಗಳ ಬೆಂಬಲ

    Bilawal Bhutto Zardari

    ಪಾಕ್‌ ಮುಖವಾಡ ಬಯಲು ಮಾಡಲು ಭಾರತ ಕಳುಹಿಸಿರುವ ಸಂಸದ ಶಶಿ ತರೂರ್‌ ನೇತೃತ್ವದ ಸರ್ವಪಕ್ಷ ನಿಯೋಗ ಸಹ ವಾಷಿಂಗ್ಟನ್‌ನಲ್ಲಿದ್ದು, ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಹಾಗೂ ಪಾಕ್‌ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಹಫೀಜ್ ಅಬ್ದುರ್ ರೌಫ್ ಉಗ್ರನಲ್ಲ, ಧರ್ಮಗುರು – ವಿಶ್ವಸಂಸ್ಥೆಯಲ್ಲಿ ಪಾಕ್‌ ಮಾಜಿ ಸಚಿವನ ಮೊಂಡುವಾದ

    ಈ ನಡುವೆ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಬ್ರಾಡ್‌ ಶೆರ್ಮನ್‌, ಭಯೋತ್ಪಾದನೆ ವಿರುದ್ಧದ ಹೋರಾಟದ ಮಹತ್ವದನ್ನು ನಾನು ಪಾಕಿಸ್ತಾನಿ ನಿಯೋಗಕ್ಕೆ ತಿಳಿಸಿದ್ದೇನೆ. ಅದರಲ್ಲೂ ಮುಖ್ಯವಾಗಿ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ವಿರುದ್ಧ ನಿರ್ಣಾಯಕ ಕ್ರಮಕ್ಕೆ ಸೂಚಿಸಿದ್ದೇನೆ. 2002ರಲ್ಲಿ ಜೈಶ್ ಉಗ್ರರು ನನ್ನ ಕ್ಷೇತ್ರದ ನಿವಾಸಿಯೂ ಆಗಿರುವ ಪತ್ರಕರ್ತ ಡೇನಿಯಲ್ ಪರ್ಲ್‌ರನ್ನ ಹತ್ಯೆಗೈದಿದ್ದರು. ಅವರ ಕುಟುಂಬ ಇನ್ನೂ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದೆ. ಡೇನಿಯಲ್ ಪರ್ಲ್ ಅಪಹರಣ ಮತ್ತು ಕೊಲೆಯಲ್ಲಿ ಭಯೋತ್ಪಾದಕ ಒಮರ್ ಸಯೀದ್ ಶೇಖ್ ಶಿಕ್ಷೆಗೊಳಗಾಗಿದ್ದಾನೆ ಎಂದು ವಿವರಿಸಿದ್ದಾರೆ.

    ಜೈಶ್ ಸಂಘಟನೆ ಪಾತ್ರ ಏನು?
    ಜೈಶ್-ಎ-ಮೊಹಮ್ಮದ್ ಅನ್ನು ವಿಶ್ವಸಂಸ್ಥೆ ಈಗಾಗಲೇ ನಿಷೇಧಿತ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. 2019ರ ಪುಲ್ವಾಮಾ ದಾಳಿಯಂತಹ ಅನೇಕ ದಾಳಿಗಳಿಗೆ ಈ ಸಂಘಟನೆ ಕಾರಣವಾಗಿದೆ ಎಂದು ನಂಬಲಾಗಿದೆ. ಇದನ್ನೂ ಓದಿ: ಟ್ರಂಪ್‌ ಉಚ್ಚಾಟನೆಗೆ ಕರೆ ಕೊಟ್ಟ ಬೆನ್ನಲ್ಲೇ ಮಸ್ಕ್‌ ಕಂಪನಿಗಳಿಗೆ ಶಾಕ್‌!

    ಅಲ್ಪಸಂಖ್ಯಾತರ ಬಗ್ಗೆ ಕಳವಳ
    ಭಯೋತ್ಪಾದನೆಯ ನಿರ್ಮೂಲನೆ ಬಗ್ಗೆ ಬಲವಾದ ಸಂದೇಶ ನೀಡಿರುವ ಶೆರ್ಮನ್‌, ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಸ್ಥಿತಿಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದಲ್ಲಿರುವ ಕ್ರಿಶ್ಚಿಯನ್ನರು, ಹಿಂದೂಗಳು ಮತ್ತು ಅಹ್ಮದೀಯ ಮುಸ್ಲಿಮರು ತಮ್ಮ ನಂಬಿಕೆಯನ್ನು ಆಚರಿಸಲು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಯವಿಲ್ಲದಂತೆ ಸ್ವತಂತ್ರರಾಗಿರುವಂತೆ ನೋಡಿಕೊಳ್ಳಬೇಕು ಅಂತಲೂ ಸೂಚಿಸಿದ್ದಾರೆ. ಇದನ್ನೂ ಓದಿ: ಭಾರತ ಭಾರೀ ನಷ್ಟದಲ್ಲಿರೋದ್ರಿಂದ ಮತ್ತೆ ಸಂಘರ್ಷ ಮರುಕಳಿಸೋ ಸಾಧ್ಯತೆ ಕಡಿಮೆ: ಪಾಕ್‌ ಸಚಿವ ಇಶಾಕ್‌ ದಾರ್‌

  • ಟ್ರಂಪ್‌ ಉಚ್ಚಾಟನೆಗೆ ಕರೆ ಕೊಟ್ಟ ಬೆನ್ನಲ್ಲೇ ಮಸ್ಕ್‌ ಕಂಪನಿಗಳಿಗೆ ಶಾಕ್‌!

    ಟ್ರಂಪ್‌ ಉಚ್ಚಾಟನೆಗೆ ಕರೆ ಕೊಟ್ಟ ಬೆನ್ನಲ್ಲೇ ಮಸ್ಕ್‌ ಕಂಪನಿಗಳಿಗೆ ಶಾಕ್‌!

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸ್ನೇಹಿತ ಎಲೋನ್‌ ಮಸ್ಕ್‌ (Elon Musk) ಅವರ ಜಗಳ ಮತ್ತಷ್ಟು ಹೆಚ್ಚಾಗಿದೆ. ಬೀದಿ ಜಗಳ ಹೆಚ್ಚಾಗುತ್ತಿದ್ದಂತೆ ಟೆಸ್ಲಾ (Tesla) ಷೇರುಗಳ ಮೌಲ್ಯ ಭಾರೀ ಇಳಿಕೆಯಾಗಿದೆ.

    ಮಸ್ಕ್‌ ಅವರು ಟ್ರಂಪ್‌ (Donald Trump) ಅವರನ್ನು ಉಚ್ಚಾಟಿಸಿ ಉಪಾಧ್ಯಕ್ಷ ಜೆಡಿ ವಾನ್ಸ್‌ (JD Vance) ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಹೇಳಿದ ಬೆನ್ನಲ್ಲೇ ಟ್ರಂಪ್‌ ಮಸ್ಕ್‌ ಕಂಪನಿ ಜೊತೆ ಮಾಡಿಕೊಂಡಿದ್ದ ಸರ್ಕಾರಿ ಒಪ್ಪಂದಗಳನ್ನು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಸರ್ಕಾರದಿಂದ ಹೊರ ಬಂದ ಬೆನ್ನಲ್ಲೇ ಟ್ರಂಪ್‌ ವಿರುದ್ಧ ಮಸ್ಕ್‌ ಕೆಂಡಾಮಂಡಲ

    ಮಸ್ಕ್‌ ಅವರು ಟ್ರಂಪ್ ಅವರ ತೆರಿಗೆ ಕಡಿತ ಮತ್ತು ಖರ್ಚಿಗೆ ಸಂಬಂಧಿಸಿದ ಮಸೂದೆಯನ್ನು ಖಂಡಿಸಿ ಎಕ್ಸ್‌ನಲ್ಲಿ ನಿರಂತರ ಪೋಸ್ಟ್‌ ಮಾಡುತ್ತಿದ್ದರು. ಈ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದ ಟ್ರಂಪ್‌ ಈಗ ಮೊದಲ ಬಾರಿಗೆ ಪ್ರತಿಕ್ರಿಯಿಸಿ ಹಳಸಿದ ಸಂಬಂಧಕ್ಕೆ ವಿಷಾದ ವ್ಯಕ್ತಪಡಿದ್ದಾರೆ.

    ಈಗ ಟ್ರಂಪ್‌ ಅವರು ಮಸ್ಕ್ ಅವರ ಇಂಟರ್ನೆಟ್ ಕಂಪನಿ ಸ್ಟಾರ್‌ಲಿಂಕ್ ಮತ್ತು ರಾಕೆಟ್ ಕಂಪನಿ ಸ್ಪೇಸ್‌ಎಕ್ಸ್‌ನ ಆದಾಯಕ್ಕೆ ಕೊಕ್ಕೆ ಹಾಕುವುದಾಗಿ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ನಮ್ಮ ಬಜೆಟ್‌ನಲ್ಲಿ ಹಣವನ್ನು ಉಳಿಸಲು ಸುಲಭವಾದ ಮಾರ್ಗವೆಂದರೆ ಮಸ್ಕ್‌ ಜೊತೆ ಮಾಡಿಕೊಂಡಿದ್ದ ಸರ್ಕಾರಿ ಸಬ್ಸಿಡಿಗಳು ಮತ್ತು ಒಪ್ಪಂದಗಳನ್ನು ರದ್ದುಗೊಳಿಸುತ್ತೇನೆ. ಹಿಂದಿನ ಅಧ್ಯಕ್ಷ ಜೋ ಬೈಡನ್‌ ಈ ನಿರ್ಧಾರ ಕೈಗೊಳ್ಳದೇ ಇರುವುದು ನನಗೆ ಆಶ್ಚರ್ಯವ ಉಂಟು ಮಾಡಿದೆ ಎಂದಿದ್ದಾರೆ.

    ಈ ಮಸೂದೆಯ ಬಗ್ಗೆ ಬಹುತೇಕ ಎಲ್ಲರಿಗೆ ಚೆನ್ನಾಗಿ ತಿಳಿದಿದೆ. ಈ ಮಸೂದೆ ಆರಂಭದಲ್ಲಿ ಅವರಿಗೆ ಯಾವುದೇ ಕಾಣಲಿಲ್ಲ. ಆದರೆ ಈಗ ಅವರಿಗೆ ಇದ್ದಕ್ಕಿದ್ದಂತೆ ಸಮಸ್ಯೆ ಕಾಣಿಸಿದೆ ಎಂದು ಟ್ರಂಪ್‌ ಟೀಕಿಸಿದರು.

    ಇಬ್ಬರ ಬೀದಿ ಜಗಳ ಹೆಚ್ಚಾಗುತ್ತಿದ್ದಂತೆ ಟೆಸ್ಲಾ ಷೇರು ಮೌಲ್ಯ ದಾಖಲೆಯ 14%ರಷ್ಟು ಕುಸಿತವಾಗಿದೆ. ಗುರುವಾರ ಒಂದೇ ದಿನ ಒಂದು ಷೇರಿನ ಮೌಲ್ಯ 47 ಡಾಲರ್‌ ಇಳಿದಿದೆ. ಕಳೆದ 5 ದಿನಗಳಲ್ಲಿ 70 ಡಾಲರ್‌ ಇಳಿಕೆಯಾಗಿದೆ.

  • ಸರ್ಕಾರದಿಂದ ಹೊರ ಬಂದ ಬೆನ್ನಲ್ಲೇ ಟ್ರಂಪ್‌ ವಿರುದ್ಧ ಮಸ್ಕ್‌ ಕೆಂಡಾಮಂಡಲ

    ಸರ್ಕಾರದಿಂದ ಹೊರ ಬಂದ ಬೆನ್ನಲ್ಲೇ ಟ್ರಂಪ್‌ ವಿರುದ್ಧ ಮಸ್ಕ್‌ ಕೆಂಡಾಮಂಡಲ

    ವಾಷಿಂಗ್ಟನ್‌: ಅಮೆರಿಕ ಸರ್ಕಾರದಿಂದ (US Govt) ಹೊರಬಂದ ಬೆನ್ನಲ್ಲೇ ಎಲೋನ್‌ ಮಸ್ಕ್‌ (Elon Musk) ಅವರು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

    ಟ್ರಂಪ್‌ ಅವರ ಕನಸಿನ ತೆರಿಗೆ ಬಿಲ್‌ಗೆ ಸಂಬಂಧಿಸಿದಂತೆ ಉಂಟಾದ ಭಿನ್ನಭಿಪ್ರಾಯದಿಂದ DOGE ಹುದ್ದೆಯನ್ನು ಮಸ್ಕ್‌ ತೊರೆದಿದ್ದರು. ಈಗ ಅದೇ ವಿಚಾರವನ್ನು ಇಟ್ಟುಕೊಂಡು ಟ್ರಂಪ್‌ ನೀತಿಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದಾರೆ.

    ಕ್ಷಮಿಸಿ, ಇನ್ನು ಮುಂದೆ ನಾನು ಸಹಿಸಲಾರೆ. ಈ ಅತಿರೇಕದ ಮಸೂದೆಯು ಅಸಹ್ಯಕರವಾಗಿದೆ. ಇದಕ್ಕೆ ಮತ ಹಾಕಿದವರಿಗೆ ನಾಚಿಕೆಯಾಗಬೇಕು. ನೀವು ತಪ್ಪು ಮಾಡಿದ್ದೀರಿ ಎನ್ನುವುದು ನಿಮಗೆ ತಿಳಿದಿದೆ. ಈ ಮಸೂದೆ 2.5 ಟ್ರಿಲಿಯನ್ ಡಾಲರ್‌ ಬಜೆಟ್‌ ಕೊರತೆಯನ್ನು ಹೆಚ್ಚಿಸುತ್ತದೆ ಮತ್ತು ಅಮೆರಿಕ ಜನರ ಮೇಲೆ ಭಾರೀ ಪ್ರಮಾಣದ ಸಾಲದ ಹೊರೆಯನ್ನು ಹೊರಿಸುತ್ತದೆ ಎಂದು ಎಕ್ಸ್‌ನಲ್ಲಿ ಖಾರವಾಗಿ ಬರೆದು ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಕೃಷಿ ಬೆಳೆಯನ್ನೇ ಧ್ವಂಸ ಮಾಡೋ ಅಪಾಯಕಾರಿ ಶಿಲೀಂಧ್ರ ಕಳ್ಳ ಸಾಗಾಣೆ-ಅಮೆರಿಕದಲ್ಲಿ ಇಬ್ಬರು ಚೀನಿಯರು ಅರೆಸ್ಟ್‌

    ಡೊನಾಲ್ಡ್‌ ಟ್ರಂಪ್‌ ಅವರ ತೆರಿಗೆ ನೀತಿಯನ್ನು ಟೀಕಿಸಿದ ಒಂದು ದಿನದ ಬಳಿಕ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್‌ ಮಸ್ಕ್ (Elon Musk) ಅವರು ಅಮೆರಿಕದ ಸರ್ಕಾರಿ ದಕ್ಷತೆ ಇಲಾಖೆಯ (DOGE) ಮುಖ್ಯಸ್ಥ ಹುದ್ದೆಯಿಂದ ಕಳೆದ ವಾರ ಕೆಳಗೆ ಇಳಿದಿದ್ದರು.  ಇದನ್ನೂ ಓದಿ: ಕೊಹ್ಲಿಗೆ ಎಚ್ಚರಿಕೆ ನೀಡದ ಅಂಪೈರ್‌ ವಿರುದ್ಧ ಗವಾಸ್ಕರ್ ಗರಂ

    ಆದಾಯಕ್ಕಿಂತ ಖರ್ಚು ಹೆಚ್ಚಾದರೆ ಡಿಒಜಿಇ ದಕ್ಷತೆಯ ಮೇಲೆ ಪರಿಣಾಮ ಬೀರಲಿದ್ದು ಇಲಾಖೆಯನ್ನು ದುರ್ಬಲಗೊಳಿಸಲಿದೆ ಎಂದು ಮಸ್ಕ್ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

    ಡೊನಾಲ್ಡ್‌ ಟ್ರಂಪ್‌ ಅವರು ವೆಚ್ಚ ಕಡಿತಗೊಳಿಸಲು ಬಿಗ್‌ ಬ್ಯುಟಿಫುಲ್‌ ಮಸೂದೆಯನ್ನು ಪರಿಚಯಿಸಿದ್ದರು. ಈ ಮಸೂದೆಯ ಬಗ್ಗೆ ಅಮೆರಿಕದ ಆರ್ಥಿಕ ತಜ್ಞರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಮಸ್ಕ್‌, ಈ ಮಸೂದೆ ಬಜೆಟ್‌ ಕೊರತೆಯನ್ನು ಹೆಚ್ಚಿಸುತ್ತದೆ. ಮಸೂದೆ ದೊಡ್ಡದಾಗಿರಬಹುದು ಅಥವಾ ಸುಂದರವಾಗಿರಬಹುದು. ಆದರೆ ಅದು ಎರಡೂ ಆಗಬಹುದೇ ಎಂದು ನನಗೆ ತಿಳಿದಿಲ್ಲ. ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದರು.

    ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಸ್ಕ್‌ ಅವರು ಡೊನಾಲ್ಡ್‌ ಟ್ರಂಪ್‌ ಪರ ಮತಯಾಚನೆ ಮಾಡಿದ್ದರು. ನಂತರ ಟ್ರಂಪ್‌ DOGE ಮುಖ್ಯಸ್ಥರನ್ನಾಗಿ ಮಸ್ಕ್‌ ಅವರನ್ನು ನೇಮಿಸಿದ್ದರು. ನೇಮಿಸಿದ ನಂತರ ಹಲವಾರು ಸರ್ಕಾರಿ ಇಲಾಖೆಗಳನ್ನು ಮುಚ್ಚಿದ್ದರು. ಉದ್ಯೋಗಿಗಳನ್ನು ಮನೆಗೆ ಕಳುಹಿಸಿದರು. ಅಮೆರಿಕದ ಹಲವು ದೇಶಗಳಿಗೆ ನೀಡುತ್ತಿದ್ದ USAID ನಿಲ್ಲಿಸಿದ್ದರು. ಇದರಿಂದಾಗಿ ಸರ್ಕಾರಿ ಇಲಾಖೆಯ ಕೆಂಗಣ್ಣಿಗೆ ಮಸ್ಕ್‌ ಗುರಿಯಾಗಿದ್ದರು.

    ಟ್ರಂಪ್‌ ಆಡಳಿತದಲ್ಲಿ ಮಸ್ಕ್‌ ಅವರ ಪಾತ್ರ ಹೆಚ್ಚಾಗುತ್ತಿದ್ದಂತೆ ಅಮೆರಿಕದ ಹಲವು ಕಡೆ ಟೆಸ್ಲಾ ಶೋರೂಂ ಮೇಲೆ ದಾಳಿಗಳು ಆಗುತ್ತಿತ್ತು. ಇದರಿಂದಾಗಿ ಟೆಸ್ಲಾ ಕಂಪನಿಗೆ ಭಾರೀ ನಷ್ಟವಾಗಿತ್ತು.

  • ಕೃಷಿ ಬೆಳೆಯನ್ನೇ ಧ್ವಂಸ ಮಾಡೋ ಅಪಾಯಕಾರಿ  ಶಿಲೀಂಧ್ರ ಕಳ್ಳ ಸಾಗಾಣೆ-ಅಮೆರಿಕದಲ್ಲಿ ಇಬ್ಬರು ಚೀನಿಯರು ಅರೆಸ್ಟ್‌

    ಕೃಷಿ ಬೆಳೆಯನ್ನೇ ಧ್ವಂಸ ಮಾಡೋ ಅಪಾಯಕಾರಿ ಶಿಲೀಂಧ್ರ ಕಳ್ಳ ಸಾಗಾಣೆ-ಅಮೆರಿಕದಲ್ಲಿ ಇಬ್ಬರು ಚೀನಿಯರು ಅರೆಸ್ಟ್‌

    ವಾಷಿಂಗ್ಟನ್‌: ಕೃಷಿ ಬೆಳೆಯನ್ನೇ ಹಾಳು ಮಾಡಬಹುದಾದ ಅಪಾಯಕಾರಿ ಶಿಲೀಂಧ್ರವನ್ನು ಕಳ್ಳ ಸಾಗಾಣೆ ಮಾಡಿದ ಆರೋಪದ ಅಡಿ ಇಬ್ಬರು ಚೀನೀ ಪ್ರಜೆಗಳನ್ನು (China Citizen) ಅಮೆರಿಕದಲ್ಲಿ (USA) ಬಂಧಿಸಲಾಗಿದೆ

    ಎಫ್‌ಬಿಐ (FBI) ನಿರ್ದೇಶಕ ಕಾಶ್ ಪಟೇಲ್ (Kash Patel) ಮಂಗಳವಾರ ಇಬ್ಬರು ಚೀನಿ ಸಂಶೋಧಕರನ್ನು(Chinese Researcher) ಬಂಧಿಸಿದ್ದನ್ನು ದೃಢಡಪಡಿಸಿದ್ದಾರೆ. ಎಕ್ಸ್‌ ಖಾತೆಯಲ್ಲಿ ವಿವರವಾದ ಪೋಸ್ಟ್‌ ಪ್ರಕಟಿಸಿ ಇಬ್ಬರ ಕೃತ್ಯವನ್ನು ಬಹಿರಂಗಪಡಿಸಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ದೇಶಕ್ಕೆ ಅಪಾಯಕಾರಿ ಜೈವಿಕ ರೋಗಕಾರಕವನ್ನು (Hazardous Biological Pathogen) ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ  ಚೀನಿ ಸಂಶೋಧಕಿಯನ್ನು ಎಫ್‌ಬಿಐ ಬಂಧಿಸಿದೆ.

     

    ಯುನ್‌ಕಿಂಗ್ ಜಿಯಾನ್ “ಫ್ಯುಸಾರಿಯಮ್ ಗ್ರಾಮಿನೇರಮ್” ಎಂಬ ಅಪಾಯಕಾರಿ ಶಿಲೀಂಧ್ರವನ್ನು ತಾನು ಕೆಲಸ ಮಾಡುವ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗಾಗಿ ಅಮೆರಿಕಕ್ಕೆ ಕಳ್ಳಸಾಗಣೆ ಮಾಡಿದ್ದಾಳೆ. ಈ ಶಿಲೀಂಧ್ರವು ಗೋಧಿ, ಬಾರ್ಲಿ, ಜೋಳ ಮತ್ತು ಭತ್ತ ಬೆಳೆಗೆ ಬರುವ ಹೆಡ್ ಬ್ಲೈಟ್(ಏಕದಳ ಬೆಳೆಗಳ ಮೇಲೆ ಪರಿಣಾಮ ಬೀರುವ ಶಿಲೀಂಧ್ರ ರೋಗ. ಈ ರೋಗ ಬಂದರೆ ಇಳುವರಿ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ) ರೋಗಕ್ಕೆ ಕಾರಣವಾಗಬಹುದು. ಈ ಬೆಳೆಯನ್ನು ಸೇವಿಸಿದರೆ ಜನರ ಮತ್ತು ಜಾನುವಾರುಗಳ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಈ ಅಪಾಯಕಾರಿ ಶಿಲೀಂಧ್ರದಿಂದಾಗಿ ಪ್ರತಿ ವರ್ಷ ವಿಶ್ವಾದ್ಯಂತ ಶತಕೋಟಿ ಡಾಲರ್‌ ಆರ್ಥಿಕ ನಷ್ಟವಾಗುತ್ತಿದೆ.

    ಚೀನೀ ಕಮ್ಯುನಿಸ್ಟ್ ಪಕ್ಷಕ್ಕೆ ತಾನು ನಿಷ್ಠೆಯನ್ನು ಹೊಂದಿರುವುದಾಗಿ ಜಿಯಾನ್ ಹೇಳಿದ್ದಾಳೆ. ಚೀನಾದಲ್ಲಿ ಈ ರೋಗಕಾರಕದ ಮೇಲೆ ಇದೇ ರೀತಿಯ ಕೆಲಸಕ್ಕಾಗಿ ಚೀನಾ ಸರ್ಕಾರದಿಂದ ಹಣವನ್ನು ಪಡೆದಿದ್ದಕ್ಕೆ  ಈಕೆಯ ಬಳಿ ಪುರಾವೆಗಳು ಸಿಕ್ಕಿದೆ. ಇದನ್ನೂ ಓದಿ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಉಪ್ಪಿನ ಬಿಕ್ಕಟ್ಟು – ಕಾರಣ ಏನು?

    ಹೆಡ್ ಬ್ಲೈಟ್ ರೋಗಕ್ಕೆ ತುತ್ತಾದ ಗೋಧಿ ಬೆಳೆ

    ಜಿಯಾನ್‌ ಗೆಳೆಯ ಜುನ್ಯೊಂಗ್ ಲಿಯು ಇದೇ ರೋಗಕಾರಕದ ಬಗ್ಗೆ ಸಂಶೋಧನೆ ನಡೆಸುವ ಚೀನೀ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾನೆ. ಆರಂಭದಲ್ಲಿ ತನ್ನ ಮೇಲೆ ಬಂದ ಆರೋಪಗಳನ್ನು ಅಲ್ಲಗೆಳೆದಿದ್ದ. ನಂತರ ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಮಿಚಿಗನ್ ವಿಶ್ವವಿದ್ಯಾಲಯಲ್ಲಿ ಸಂಶೋಧನೆ ನಡೆಸಲು ಡೆಟ್ರಾಯಿಟ್ ಮೆಟ್ರೋಪಾಲಿಟನ್ ವಿಮಾನ ನಿಲ್ದಾಣದ ಮೂಲಕ ಅಮೆರಿಕಕ್ಕೆ ಫ್ಯುಸಾರಿಯಮ್ ಗ್ರಾಮಿನೇರಮ್ ಅನ್ನು ಕಳ್ಳಸಾಗಣೆ ಮಾಡಿರುವುದಾಗಿ ಹೇಳಿದ್ದಾನೆ.

    ಇಬ್ಬರ ಮೇಲೆ ಪಿತೂರಿ, ವಸ್ತುಗಳ ಕಳ್ಳ ಸಾಗಾಣೆ, ಸುಳ್ಳು ಹೇಳಿಕೆ ಮತ್ತು ವೀಸಾ ವಂಚನೆ ಎಸಗಿದ ಆರೋಪವನ್ನು ಹೊರಿಸಲಾಗಿದೆ. ಅಮೆರಿಕದ ಆಹಾರ ಪೂರೈಕೆ ವ್ಯವಸ್ಥೆಯನ್ನು ಹಾಳು ಮಾಡಲು ಚೀನಾ ತನ್ನ ಕಾರ್ಯಕರ್ತರು ಮತ್ತು ಸಂಶೋಧಕರನ್ನು ನಿಯೋಜಿಸಿರುವುದು ಈ ಪ್ರಕರಣದಿಂದ ಬೆಳಕಿಗೆ ಬಂದಿದೆ. ಅಮರಿಕದ ಜನರು ಮತ್ತು ಆರ್ಥಿಕತೆಯನ್ನು ಗುರಿಯಾಗಿಸಿಕೊಂಡು ಚೀನಾ ಕೆಲಸ ಮಾಡುತ್ತಿದೆ. ಈ ಪ್ರಕರಣವನ್ನು ಬಯಲಿಗೆಳೆಯುವ ಮೂಲಕ ನಮ್ಮ ಎಫ್‌ಬಿಐ ತಂಡ ಅತ್ಯುತ್ತಮ ಕೆಲಸ ಮಾಡಿದೆ.

  • ಬಾಂಗ್ಲಾದೇಶವನ್ನ ಅಮೆರಿಕಕ್ಕೆ ಮಾರಾಟ ಮಾಡಿದ್ದಾರೆ – ಯೂನಸ್ ವಿರುದ್ಧ ಶೇಖ್ ಹಸೀನಾ ಬಾಂಬ್‌

    ಬಾಂಗ್ಲಾದೇಶವನ್ನ ಅಮೆರಿಕಕ್ಕೆ ಮಾರಾಟ ಮಾಡಿದ್ದಾರೆ – ಯೂನಸ್ ವಿರುದ್ಧ ಶೇಖ್ ಹಸೀನಾ ಬಾಂಬ್‌

    ಢಾಕಾ: ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ (Muhammad Yunus) ಬಾಂಗ್ಲಾದೇಶವನ್ನ ಅಮೆರಿಕಕ್ಕೆ ಮಾರಾಟ ಮಾಡಿದ್ದಾರೆ ಅಂತ ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ ಹಸೀನಾ (Sheikh Hasina) ಗಂಭೀರ ಆರೋಪ ಮಾಡಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವಾಮಿ ಲೀಗ್ ಪಕ್ಷದ ಮೇಲಿನ ನಿಷೇಧವನ್ನ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಇದು ಸಂವಿಧಾನ ಬಾಹಿರ ಎಂದು ಹೇಳಿದ್ದಾರೆ.

    ಮುಂದುವರಿದು… ಸರ್ಕಾರದ ಮುಖ್ಯಸ್ಥ ಯೂನಸ್‌ ಉಗ್ರಗಾಮಿ ಗುಂಪುಗಳ ಸಹಾಯದಿಂದ ಬಾಂಗ್ಲಾದೇಶ ಸರ್ಕಾರವನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ನಮ್ಮ ಸರ್ಕಾರ ಅಂದು ಭಯೋತ್ಪಾದಕರ ನಿಯಂತ್ರಣಕ್ಕೆ ಹೋರಾಡಿತ್ತು. ಆದರಿಂದು ಭಯೋತ್ಪಾದಕರಿಗೆ ಸರ್ಕಾರದ ನಿಯಂತ್ರಣವನ್ನ ಯೂನಸ್‌ ಆಡಳಿತ ನೀಡಿದೆ. ಈ ಹಿಂದೆ ನನ್ನ ತಂದೆ ಸೇಂಟ್ ಮಾರ್ಟಿನ್ ದ್ವೀಪಕ್ಕಾಗಿ ಅಮೆರಿಕದ ಡಿಮ್ಯಾಂಡ್‌ಗಳನ್ನ ಒಪ್ಪಿರಲಿಲ್ಲ. ಅದಕ್ಕಾಗಿ ತಮ್ಮ ಪ್ರಾಣವನ್ನೇ ಬಿಟ್ಟರು ಹೊರತು ಅಧಿಕಾರಕ್ಕಾಗಿ ದೇಶವನ್ನು ಮಾರುವ ಬಗ್ಗೆ ಯೋಚಿಸಿರಲಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಇದೇ ವೇಳೆ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಇಡೀ ದೇಶ ತಮ್ಮ ತಂದೆಯವರೊಂದಿಗೆ ಶಸ್ತ್ರಾಸ್ತ್ರ ಹಿಡಿದು ಹೋರಾಟ ನಡೆಸಿದ ಕ್ಷಣಗಳನ್ನು ಹಸೀನಾ ನೆನಪಿಸಿಕೊಂಡರು. ಆ ದೇಶದ ಒಂದಿಂಚು ಮಣ್ಣನ್ನೂ ಬಿಟ್ಟುಕೊಡುವ ಉದ್ದೇಶ ಯಾರೊಬ್ಬರಿಗೂ ಇರಲಿಲ್ಲ. ಆದರೆ ಇಂದಿನ ಸ್ಥಿತಿ ನಿಜಕ್ಕೂ ದುರದೃಷ್ಟಕರ, ದೇಶವನ್ನೇ ಮಾರಾಟ ಮಾಡುವ ವ್ಯಕ್ತಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.

    ಅಂದು ನಮ್ಮ ಸರ್ಕಾರ ಬಾಂಗ್ಲಾದೇಶದ ಜನರ ರಕ್ಷಣೆಗೆ ನಿಂತಿತ್ತು. ಒಂದೇ ಒಂದು ಉಗ್ರರ ದಾಳಿಯ ನಂತರ ಕಠಿಣ ಕ್ರಮ ತೆಗೆದುಕೊಂಡಿದ್ದೆವು. ಹಲವರನ್ನು ಬಂಧಿಸಿ ಜೈಲಿಗಟ್ಟಿದ್ದೆವು. ಆದರಿಂದು ದೇಶದ ಜೈಲುಗಳು ಖಾಲಿಯಾಗಿವೆ. ಬಂಧನದಲ್ಲಿದ್ದ ಉಗ್ರರನ್ನ ಬಿಡುಗಡೆ ಮಾಡಲಾಗಿದೆ. ಹಾಗಾಗಿ ಬಾಂಗ್ಲಾ ಸರ್ಕಾರದಲ್ಲಿ ಈಗ ಉಗ್ರರ ಆಳ್ವಿಕೆ ಶುರುವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

  • ಟ್ರಂಪ್‌ 25% ಸುಂಕ ಹೇರಿದ್ರೂ ಭಾರತದ ಐಫೋನ್‌ ಚೀಪ್‌ – ಅಮೆರಿಕದ್ದು ದುಬಾರಿ

    ಟ್ರಂಪ್‌ 25% ಸುಂಕ ಹೇರಿದ್ರೂ ಭಾರತದ ಐಫೋನ್‌ ಚೀಪ್‌ – ಅಮೆರಿಕದ್ದು ದುಬಾರಿ

    ನವದೆಹಲಿ: ಭಾರತದಲ್ಲಿ ಉತ್ಪಾದನೆಯಾದ ಐಫೋನ್‌ಗಳಿಗೆ (iPhone) ಡೊನಾಲ್ಡ್‌ ಟ್ರಂಪ್‌ 25% ತೆರಿಗೆ ವಿಧಿಸಿದರೂ ಅಮೆರಿಕದಲ್ಲಿ (USA) ಉತ್ಪಾದನೆಯಾದ ಐಫೋನ್‌ಗಳಿಗೆ ಹೋಲಿಕೆ ಮಾಡಿದರೆ ದರ ಕಡಿಮೆ ಇರಲಿದೆ ಎಂದು ಗ್ಲೋಬಲ್‌ ಟ್ರೇಡ್‌ ರಿಸರ್ಚ್‌ ಇನಿಶಿಟೇಟಿವ್‌ (GTRI) ಹೇಳಿದೆ.

    ಐಫೋನ್‌ ಉತ್ಪಾದನಾ ವೆಚ್ಚ ಅಮೆರಿಕಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿ (India) ಬಹಳ ಕಡಿಮೆಯಿದೆ ಎಂದು ತಿಳಿಸಿದೆ.

    ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಭಾರತದಲ್ಲಿ ಉತ್ಪಾದನೆಯಾದ ಐಫೋನ್‌ಗಳನ್ನು ಅಮೆರಿಕದಲ್ಲಿ ಮಾರಾಟ ಮಾಡಿದರೆ 25% ತೆರಿಗೆ ವಿಧಿಸುವುದಾಗಿ ಆಪಲ್‌ ಕಂಪನಿ ಎಚ್ಚರಿಕೆ ನೀಡಿದ್ದಾರೆ. ಆಪಲ್‌ ಚೀನಾದಲ್ಲಿ ಐಫೋನ್‌ ಘಟಕ ತೆಗೆದ ಬಳಿಕ ಚೀನಾ ಅಭಿವೃದ್ಧಿಯಾಗಿದೆ. ಭಾರತದಲ್ಲಿ ತಮ್ಮ ಆಪಲ್‌ ಉದ್ಯಮವನ್ನು ವಿಸ್ತರಿಸುವುದಕ್ಕೆ ನನ್ನ ಆಕ್ಷೇಪವಿದೆ. ಭಾರತವು ತನ್ನನ್ನು ತಾನು ನೋಡಿಕೊಳ್ಳುವ ದೇಶವಾಗಿದೆ. ನೀವ್ಯಾಕೆ ಅಮೆರಿಕದಲ್ಲಿ ಘಟಕವನ್ನು ತೆರೆಯಬಾರದು ಎಂದು ಸಿಇಒ ಟಿಮ್‌ ಕುಕ್‌ ಅವರನ್ನು ಟ್ರಂಪ್‌ ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ಅಮೆರಿಕಕ್ಕೆ ಭಾರತದಿಂದ 5 ವಿಮಾನ ಭರ್ತಿ ಐಫೋನ್‌ ಕಳುಹಿಸಿದ ಆಪಲ್‌

    ಭಾರತದಲ್ಲಿ ವೆಚ್ಚ ಕಡಿಮೆ ಯಾಕೆ?
    ಭಾರತದಲ್ಲಿ ಫೋನ್‌ ಬಿಡಿ ಭಾಗಗಳಲ್ಲಿ ಜೋಡಿಸುವರಿಗೆ ತಿಂಗಳಿಗೆ 230 ಡಾಲರ್‌ (ಅಂದಾಜು 20 ಸಾವಿರ ರೂ.) ವೇತನ ಇದೆ. ಆದರೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇದೇ ಕೆಲಸ ಮಾಡುವವರಿಗೆ ತಿಂಗಳಿಗೆ 2,900 ಡಾಲರ್‌ ವೇತನ (2.46 ಲಕ್ಷ ರೂ.)ಪಾವತಿಸಬೇಕಾಗುತ್ತದೆ.

    ಭಾರತದಲ್ಲಿ ಒಂದು ಐಫೋನ್‌ ಜೋಡಣೆಗೆ ಅಂದಾಜು 30 ಡಾಲರ್‌ (2,500 ರೂ.) ಖರ್ಚಾದರೆ ಅಮೆರಿಕದಲ್ಲಿ ಒಂದು ಐಫೋನ್‌ ಜೋಡನೆಗೆ 390 ಡಾಲರ್‌ (33,200 ರ.) ವೆಚ್ಚವಾಗಲಿದೆ. ಅಷ್ಟೇ ಅಲ್ಲದೇ ಭಾರತ ಸರ್ಕಾರ Production Linked Incentive (PLI) ಅಡಿ ಹಲವು ರಿಯಾಯಿತಿಗಳು ಸಹ ಸಿಗುತ್ತಿದೆ.

    ಒಂದು ವೇಳೆ ಆಪಲ್‌ ತನ್ನ ಐಫೋನ್ ಜೋಡಣೆಯನ್ನು ಅಮೆರಿಕಕ್ಕೆ ಸ್ಥಳಾಂತರಿಸಿದರೆ, ಪ್ರತಿ ಐಫೋನ್‌ನ ಲಾಭವು ಪ್ರತಿ ಯೂನಿಟ್‌ಗೆ 450 ಡಾಲರ್‌ನಿಂದ ಕೇವಲ 60 ಡಾಲರ್‌ಗೆ ಇಳಿಯಲಿದೆ. ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾದರೆ ಐಫೋನ್‌ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಬೇಕಾಗುತ್ತದೆ.

    ಭಾರತಕ್ಕೆ ಎಷ್ಟು ಹಣ ಸಿಗುತ್ತೆ?
    1,000 ಡಾಲರ್‌ ಮೌಲ್ಯದ ಒಂದು ಐಫೋನ್‌ನಿಂದಾಗಿ ಹಲವು ದೇಶಗಳಿಗೆ ಆದಾಯ ಸಿಗುತ್ತದೆ. ಆಪಲ್‌ ಕಂಪನಿ 450 ಡಾಲರ್‌ ಲಾಭ ಪಡೆದರೆ ಅಮೆರಿಕದ ಕ್ವಾಲ್ಕಾಮ್ ಮತ್ತು ಬ್ರಾಡ್‌ಕಾಮ್ ಸುಮಾರು 80 ಡಾಲರ್‌ ಪಡೆಯುತ್ತದೆ. ಚಿಪ್ ತಯಾರಿಕೆಯಿಂದ ತೈವಾನ್‌ಗೆ 150 ಡಾಲರ್‌, OLED ಪರದೆಗಳು ಮತ್ತು ಮೆಮೊರಿ ಚಿಪ್‌ಗಳಿಂದಾಗಿ ದಕ್ಷಿಣ ಕೊರಿಯಾಗೆ 90 ಡಾಲರ್‌, ಕ್ಯಾಮೆರಾ ಲೆನ್ಸ್‌ನಿಂದಾಗಿ ಜಪಾನ್‌ 85 ಡಾಲರ್‌ ಪಡೆಯುತ್ತದೆ.

    ಭಾರತ ಮತ್ತು ಚೀನಾ ಜೋಡಿಸುವ ಪ್ರತಿ ಯೂನಿಟ್‌ಗೆ ಸುಮಾರು 30 ಡಾಲರ್‌ (2,500 ರೂ.) ಗಳಿಸುತ್ತವೆ. ಇದು ಐಫೋನ್‌ನ ಚಿಲ್ಲರೆ ಮೌಲ್ಯದ 3% ಕ್ಕಿಂತ ಕಡಿಮೆ. ಆದರೆ ಐಫೋನ್ ಜೋಡಣೆಯಿಂದಾಗಿ ಭಾರತದಲ್ಲಿ ಸುಮಾರು 60,000 ಉದ್ಯೋಗ ಸೃಷ್ಟಿಯಾದರೆ ಚೀನಾದಲ್ಲಿ 3,00,000 ಉದ್ಯೋಗ ಸೃಷ್ಟಿಯಾಗಿದೆ.

  • ಭಾರತದಲ್ಲಿ ಐಫೋನ್‌ ತಯಾರಿಸಿದರೆ 25% ಸುಂಕ – ಆಪಲ್‌ಗೆ ಟ್ರಂಪ್‌ ವಾರ್ನಿಂಗ್‌

    ಭಾರತದಲ್ಲಿ ಐಫೋನ್‌ ತಯಾರಿಸಿದರೆ 25% ಸುಂಕ – ಆಪಲ್‌ಗೆ ಟ್ರಂಪ್‌ ವಾರ್ನಿಂಗ್‌

    ವಾಷಿಂಗ್ಟನ್‌: ಭಾರತ (India) ಅಥವಾ ಬೇರೆ ಎಲ್ಲಿಯಾದರೂ ಐಫೋನ್‌ (iPhone) ತಯಾರಿಸಿದರೆ 25% ಸುಂಕವನ್ನು ವಿಧಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಆಪಲ್‌ ಕಂಪನಿಗೆ ಎಚ್ಚರಿಕೆ ನೀಡಿದ್ದಾರೆ.

    ಕಳೆದ ಒಂದು ವಾರದಲ್ಲಿ ಟ್ರಂಪ್‌ ಭಾರತದಲ್ಲಿ ಐಫೋನ್‌ ಫ್ಯಾಕ್ಟರಿ ತೆರೆಯಬೇಡಿ ಎಂದು ಟ್ರಂಪ್‌ ಹೇಳುತ್ತಿರುವುದು ಇದು ಎರಡನೇ ಬಾರಿ. ಭಾರತ ಅಥವಾ ಬೇರೆಲ್ಲಿಯಾದರೂ ತಯಾರಿಸಿದ ಐಫೋನ್‌ಗಳನ್ನು ಅಮೆರಿಕದಲ್ಲಿ ಮಾರಾಟ ಮಾಡಿದರೆ 25% ಸುಂಕವನ್ನು ಎದುರಿಸಬೇಕಾಗುತ್ತದೆ. ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳನ್ನು ಅಮೆರಿಕದಲ್ಲಿ ತಯಾರಾಗಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಜೈಶಂಕರ್‌ ಕರೆ ಬೆನ್ನಲ್ಲೇ ತಾಲಿಬಾನ್‌ ವಿದೇಶಾಂಗ ಸಚಿವರನ್ನೇ ಬೀಜಿಂಗ್‌ಗೆ ಕರೆಸಿ ಪಾಕ್‌ ಜೊತೆ ಕೈ ಕುಲುಕಿಸಿದ ಚೀನಾ!

    ನಾನು ಆಪಲ್‌ ಸಿಇಒ ಟಿಮ್ ಕುಕ್‌ಗೆ ಬಹಳ ಹಿಂದೆಯೇ ತಿಳಿಸಿದ್ದೇನೆ. ಆಪಲ್‌ ಫೋನ್‌ಗಳು ಅಮೆರಿಕದಲ್ಲೇ ತಯಾರಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

    ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧ ಹಾಳಾಗುತ್ತಿದ್ದ ಬೆನ್ನಲ್ಲೇ ಆಪಲ್‌ ಭಾರತದಲ್ಲಿ ಐಫೋನ್‌ ಉತ್ಪಾದನಾ ಘಟಕಗಳನ್ನು ತೆರೆಯಲು ಸಿದ್ಧತೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಟ್ರಂಪ್‌ ಹೇಳಿಕೆ ನೀಡಿರುವುದು ಮಹತ್ವ ಪಡೆದಿದೆ. ಇದನ್ನೂ ಓದಿ: ಜೈಶಂಕರ್‌ ಕರೆ ಬೆನ್ನಲ್ಲೇ ತಾಲಿಬಾನ್‌ ವಿದೇಶಾಂಗ ಸಚಿವರನ್ನೇ ಬೀಜಿಂಗ್‌ಗೆ ಕರೆಸಿ ಪಾಕ್‌ ಜೊತೆ ಕೈ ಕುಲುಕಿಸಿದ ಚೀನಾ!

    ಈ ಹಿಂದೆ ಟ್ರಂಪ್‌, ಭಾರತ ಮತ್ತೊಂದು ಚೀನಾ ಆಗುವುದು ಬೇಡ. ಆಪಲ್‌ ಭಾರತದಲ್ಲಿ ಹೂಡಿಕೆ ಮಾಡುವ ಅಗತ್ಯವಿಲ್ಲ. ಆಪಲ್‌ ಅಮೆರಿಕದಲ್ಲಿ ಹೂಡಿಕೆ ಮಾಡಬೇಕು. ಇಲ್ಲಿನ ಜನರಿಗೆ ಉದ್ಯೋಗ ನೀಡಬೇಕು ಎಂದು ಹೇಳಿದ್ದರು.

  • ಅಮೆರಿಕದಲ್ಲಿ ಶೂಟೌಟ್‌ – ಇಸ್ರೇಲ್‌ ರಾಯಭಾರ ಕಚೇರಿ ಅಧಿಕಾರಿಗಳ ಹತ್ಯೆ

    ಅಮೆರಿಕದಲ್ಲಿ ಶೂಟೌಟ್‌ – ಇಸ್ರೇಲ್‌ ರಾಯಭಾರ ಕಚೇರಿ ಅಧಿಕಾರಿಗಳ ಹತ್ಯೆ

    ವಾಷಿಂಗ್ಟನ್: ಇಸ್ರೇಲ್‌ ರಾಯಭಾರ (Israel Embassy) ಕಚೇರಿಯ ಇಬ್ಬರು ಅಧಿಕಾರಿಗಳನ್ನು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಅಮೆರಿಕದ (USA) ರಾಜಧಾನಿ ವಾಷಿಂಗ್ಟನ್ ಡಿ.ಸಿಯಲ್ಲಿ (Washington DC) ನಡೆದಿದೆ.

    ವಾಷಿಂಗ್ಟನ್ ಡಿ.ಸಿಯ ವಾಯವ್ಯ ಭಾಗದಲ್ಲಿರುವ ಜೆವೀಶ್ ಮ್ಯೂಸಿಯಂ ಮುಂದೆ ಬುಧವಾರ ರಾತ್ರಿ ನಡೆದ ದಾಳಿಯಲ್ಲಿ ರಾಯಭಾರ ಕಚೇರಿಯ ಪುರುಷ ಅಧಿಕಾರಿ ಹಾಗೂ ಮಹಿಳಾ ಅಧಿಕಾರಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮನೆಯ ಒಳಗಡೆ ನುಗ್ಗಿ ಅಪರಿಚಿತ ವ್ಯಕ್ತಿಯಿಂದ ಲಷ್ಕರ್‌ ಉಗ್ರನಿಗೆ ಗುಂಡೇಟು!

    ಜೆವೀಶ್ ಮ್ಯೂಸಿಯಂ ಮುಂದೆ ಬುಧವಾರ ರಾತ್ರಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೊರಡುತ್ತಿದ್ದಾಗ ಗುಂಡಿನ ದಾಳಿಯಾಗಿದೆ. ಇದನ್ನೂ ಓದಿ: ಜೈಶಂಕರ್‌ ಕರೆ ಬೆನ್ನಲ್ಲೇ ತಾಲಿಬಾನ್‌ ವಿದೇಶಾಂಗ ಸಚಿವರನ್ನೇ ಬೀಜಿಂಗ್‌ಗೆ ಕರೆಸಿ ಪಾಕ್‌ ಜೊತೆ ಕೈ ಕುಲುಕಿಸಿದ ಚೀನಾ!

    ಚಿಕಾಗೋದ 30 ವರ್ಷದ ಎಲಿಯಾಸ್ ರೊಡ್ರಿಗಸ್ ಎಂಬಾತನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಗುಂಡು ಹಾರಿಸುವ ಮೊದಲು ಆತ ಮ್ಯೂಸಿಯಂ ಬಳಿ ಓಡಾಡುತ್ತಿದ್ದ. ಲಿಯಾಸ್ ರೊಡ್ರಿಗಸ್ ಫ್ರೀ ಪ್ಯಾಲೆಸ್ತೀನ್‌ ಎಂದು ಘೋಷಣೆ ಕೂಗುತ್ತಿರುವ ದೃಶ್ಯ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಇಸ್ರೇಲಿ ರಾಯಭಾರಿ ಯೆಚಿಯಲ್ ಲೀಟರ್ ಅವರು ಪ್ರತಿಕ್ರಿಯಿಸಿ ಹತ್ಯೆಯಾದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಹತ್ಯೆಯಾದ ಪುರುಷ ಅಧಿಕಾರಿ ಮುಂದಿನ ವಾರ ಜೆರುಸಲೆಮ್‌ನಲ್ಲಿ ಪ್ರಪೋಸ್ ಮಾಡುವ ಉದ್ದೇಶದಿಂದ ಉಂಗುರವನ್ನು ಖರೀದಿಸಿದ್ದರು ಎಂದು ಹೇಳಿದರು.

    ಈ ಘಟನೆಯನ್ನು ಖಂಡಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದ್ವೇಷ ಮತ್ತು ಮೂಲಭೂತವಾದಕ್ಕೆ ಅಮೆರಿಕದಲ್ಲಿ ಸ್ಥಾನವಿಲ್ಲ ಎಂದು ಹೇಳಿದ್ದಾರೆ.