Tag: USA

  • ಇರಾನ್‌-ಇಸ್ರೇಲ್‌ ಯುದ್ಧದ ಬಳಿಕ ನೆತನ್ಯಾಹು-ಟ್ರಂಪ್‌ ಫಸ್ಟ್‌ ಮೀಟ್‌ – ಜು.7ರಂದು ವೈಟ್‌ಹೌಸ್‌ನಲ್ಲಿ ಮಹತ್ವದ ಭೇಟಿ

    ಇರಾನ್‌-ಇಸ್ರೇಲ್‌ ಯುದ್ಧದ ಬಳಿಕ ನೆತನ್ಯಾಹು-ಟ್ರಂಪ್‌ ಫಸ್ಟ್‌ ಮೀಟ್‌ – ಜು.7ರಂದು ವೈಟ್‌ಹೌಸ್‌ನಲ್ಲಿ ಮಹತ್ವದ ಭೇಟಿ

    ವಾಷಿಂಗ್ಟನ್‌: ಇರಾನ್‌-ಇಸ್ರೇಲ್‌ ಯುದ್ಧದ ಬಳಿಕ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ. ಜು.7ರಂದು (ಸೋಮವಾರ) ಶ್ವೇತಭವನದಲ್ಲಿ ನೆತನ್ಯಾಹು ಟ್ರಂಪ್‌ ಅವರನ್ನು ಭೇಟಿ ಮಾಡಲಿದ್ದಾರೆ.

    ಭೇಟಿ ವೇಳೆ ಗಾಜಾ ಪಟ್ಟಿಯಲ್ಲಿ (Gaza Strip) ಕದನ ವಿರಾಮ, ಇರಾನ್‌ಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಈ ಸಭೆ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಎಂದು ತಜ್ಞರು ಅಂದಾಜಿಸಿರುವುದಾಗಿ ವರದಿಗಳು ತಿಳಿಸಿವೆ.

    ಇಸ್ರೇಲ್‌-ಇರಾನ್‌ ನಡುವಿನ ಕದನ ವಿರಾಮದ ಬಳಿಕ ಟ್ರಂಪ್‌ ಗಾಜಾ ಪಟ್ಟಿಯಲ್ಲಿ ಕದನ ವಿರಾಮಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ಶ್ವೇತಭವನದ (White House) ಸಭೆಯಲ್ಲಿ ಉಭಯ ನಾಯಕರ ನಡುವಿನ ಪ್ರಮುಖ ಚರ್ಚಾ ವಿಷಯ ಇದೇ ಆಗಿರಲಿದೆ ಎಂದು ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಷನಲ್ ಸ್ಟಡೀಸ್ (CSIS) ನ ಹಿರಿಯ ಸಲಹೆಗಾರ್ತಿ ಮೋನಾ ಯಾಕೌಬಿಯನ್ ಹೇಳಿದ್ದಾರೆ.

    ಅಲ್ಲದೇ ಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ಹಮಾಸ್‌ ಕೂಡ ಸಹಮತ ಸೂಚಿಸಿದೆ. ಒತ್ತೆಯಾಳುಗಳ ಬಿಡುಗಡೆ ಮತ್ತು ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಮಾತುಕತೆಗೆ ಸಿದ್ಧವಿರುವುದಾಗಿ ಹಮಾಸ್‌ ಹೇಳಿದೆ ಎಂದು ತಿಳಿಸಿದ್ದಾರೆ.

    ಇರಾನ್‌ ಬಗ್ಗೆಯೂ ಮಹತ್ವದ ಚರ್ಚೆ
    ಮುಂದುವರಿದು ಮಾತನಾಡಿರುವ ಯಾಕೌಬಿಯನ್, ಟ್ರಂಪ್‌ ಮತ್ತು ನೆತನ್ಯಾಹು ಇರಾನ್‌ ಬಗೆಗೆ ಒಂದೇ ರೀತಿಯ ಅಭಿಪ್ರಾಯ ಹೊಂದಿದ್ದಾರೆ. ಇತ್ತೀಚೆಗೆ ಇರಾನ್‌ ಮೇಲಿನ ಜಂಟಿ ಮಿಲಿಟರಿ ಕಾರ್ಯಾಚರಣೆ ಇದಕ್ಕೆ ನಿದರ್ಶನವಾಗಿದೆ. ಹೀಗಾಗಿ ಭವಿಷ್ಯದ ಕಾರ್ಯತಂತ್ರಗಳ ಬಗ್ಗೆ ಉಭಯ ನಾಯಕರು ಒಗ್ಗಟಿನ ನಿಲುವು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

  • ಟ್ರಂಪ್ ಬಿಗ್ ಬ್ಯೂಟಿಫುಲ್ ಬಿಲ್‌ಗೆ ಒಪ್ಪಿಗೆ – ಭಾರತೀಯರಿಗೂ ಕಾದಿದೆ ಆಘಾತ

    ಟ್ರಂಪ್ ಬಿಗ್ ಬ್ಯೂಟಿಫುಲ್ ಬಿಲ್‌ಗೆ ಒಪ್ಪಿಗೆ – ಭಾರತೀಯರಿಗೂ ಕಾದಿದೆ ಆಘಾತ

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮಹತ್ವಾಕಾಂಕ್ಷಿ ಪ್ರಮುಖ ತೆರಿಗೆ ಮಸೂದೆ ಒನ್ ಬಿಗ್ ಬ್ಯೂಟಿಫುಲ್ ಬಿಲ್ (One Big Beautiful Bill) ಅಮೆರಿಕ ಸಂಸತ್ತು ಕಾಂಗ್ರೆಸ್‌ನಲ್ಲಿ ಅಂಗೀಕಾರಗೊಂಡಿದೆ. ಈ ಮೂಲಕ ಟ್ರಂಪ್ ಗೆಲುವಿನ ನಗೆ ಬೀರಿದ್ದಾರೆ.

    ಅಮೆರಿಕದ ಕಾಂಗ್ರೆಸ್ ಅತ್ಯಲ್ಪ ಅಂತರದಿಂದ ಪ್ರಮುಖ ತೆರಿಗೆ ಮಸೂದೆಯನ್ನು ಪಾಸ್ ಮಾಡಿದೆಯಾದರೂ ಈ ಬೆಳವಣಿಗೆ ಟ್ರಂಪ್‌ಗೆ ಪ್ರಮುಖ ರಾಜಕೀಯ ಗೆಲವು ಸಿಕ್ಕಿದೆ ಎಂದು ವಿಶ್ಲೇಷಿಸಲಾಗುತ್ತದೆ. ಇದೂವರೆಗೆ ಸಹಿ ಮಾಡಲಾದ ಮಸೂದೆಗಳ ಪೈಕಿ ಇದು ಅತಿದೊಡ್ಡ ಮಸೂದೆಯಾಗಿದೆ ಅಂತ ಟ್ರಂಪ್ ಬಣ್ಣಿಸಿದ್ದಾರೆ.

    ಅಮೆರಿಕವು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿದ್ದು, ನಾವು ಇದನ್ನು ಮತ್ತಷ್ಟು ಶಕ್ತಿಶಾಲಿಯನ್ನಾಗಿ ಮಾಡುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಶ್ವೇತಭವನ ಕೂಡ ಪ್ರತಿಕ್ರಿಯಿಸಿದ್ದು, ಅಮೆರಿಕದ ಸುವರ್ಣಯುಗ ಆರಂಭವಾಗಿದ್ದು, ಒನ್ ಬಿಗ್ ಬ್ಯೂಟಿಫುಲ್ ಬಿಲ್ ಅಧ್ಯಕ್ಷರ ಸಹಿಗಾಗಿ ಶೀಘ್ರದಲ್ಲೇ ವೈಟ್‌ಹೌಸ್‌ಗೆ ಬರಲಿದೆ ಎಂದಿದೆ. ಇದನ್ನೂ ಓದಿ: ಟ್ರಿನಿಡಾಡ್‌ನ ಸಾಂಪ್ರದಾಯಿಕ ಸೊಹರಿ ಎಲೆಯಲ್ಲಿ ಭೋಜನ ಸವಿದ ಪ್ರಧಾನಿ ಮೋದಿ

    ಮಸೂದೆಯಲ್ಲಿ ಏನಿದೆ?
    ಅಮೆರಿಕ ಸರ್ಕಾರದ ಬೊಕ್ಕಸ ತುಂಬಿಸುವ ಮಸೂದೆಯಾಗಿದ್ದು ಸರ್ಕಾರಿ ವೆಚ್ಚ ಇಳಿಸುವ ಉದ್ದೇಶ ಹೊಂದಿದೆ. ಟ್ರಂಪ್ ಅವಧಿಯಲ್ಲಿ ಉದ್ಯಮ ತೆರೆದವರಿಗೆ ತೆರಿಗೆ ಕಡಿತ ಮಾಡಲಾಗುತ್ತದೆ. ಆರೋಗ್ಯ ವಿಮೆ ಹೆಚ್ಚಿಸ್ತಿದ್ದು, 11.8 ಕೋಟಿ ಅಮೆರಿಕನ್ನರಿಗೆ ಸಂಕಷ್ಟವಾಗುವ ಸಾಧ್ಯತೆಯಿದೆ

    ಒಟ್ಟು 5 ಟ್ರಿಲಿಯನ್ ಡಾಲರ್ ರಾಷ್ಟ್ರೀಯ ಸಾಲದ ಯೋಜನೆ ಇದಾಗಿದ್ದು ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಇತರೆ ದೇಶಗಳಿಗೆ ಅಮೆರಿಕದ ಸಹಾಯಧನ ಕಡಿತ ಆಗಲಿದೆ. ಆಹಾರ, ಆರೋಗ್ಯ, ಶಿಕ್ಷಣಕ್ಕೆ ನೀಡುವ ನೆರವಿಗೆ ಕತ್ತರಿ ಬೀಳಲಿದೆ. ಇದನ್ನೂ ಓದಿ: ಟ್ರಿನಿಡಾಡ್ ಪ್ರಧಾನಿಗೆ ಮಹಾಕುಂಭದ ಜಲ, ರಾಮಮಂದಿರದ ಪ್ರತಿಕೃತಿ ಉಡುಗೊರೆಯಾಗಿ ನೀಡಿದ ಮೋದಿ

    ಭಾರತೀಯರಿಗೂ ಅಘಾತ
    ಅಮೆರಿಕದಲ್ಲಿದ್ದು ಭಾರತಕ್ಕೆ (India) ಹಣ ಕಳಿಸಿದ್ರೆ 3.5% ಹೆಚ್ಚು ತೆರಿಗೆ ವಿಧಿಸಲಾಗುತ್ತಿದ್ದು ಅಂದಾಜು 10-12 ಲಕ್ಷ ಭಾರತೀಯರ ಮೇಲೆ ಪರಿಣಾಮ ಬೀರಲಿದೆ. ಶಿಕ್ಷಣಕ್ಕೆ ಅಮೆರಿಕಗೆ ಹೋದರೂ ಹೆಚ್ಚುವರಿ ತೆರಿಗೆ ಕಟ್ಟಬೇಕಾಗುತ್ತದೆ. ಭಾರತವಷ್ಟೇ ಅಲ್ಲ ಇತರೆ ದೇಶದ ವಲಸಿಗರಿಗೂ ಸಂಕಷ್ಟ ಆಗಲಿದೆ.

  • ಇಸ್ರೇಲ್‌ ನಿಲ್ಲಿಸಿದರೆ ಮಾತ್ರ ದಾಳಿ ನಿಲ್ಲಿಸುತ್ತೇವೆ: ಕದನ ವಿರಾಮ ಒಪ್ಪದ ಇರಾನ್‌

    ಇಸ್ರೇಲ್‌ ನಿಲ್ಲಿಸಿದರೆ ಮಾತ್ರ ದಾಳಿ ನಿಲ್ಲಿಸುತ್ತೇವೆ: ಕದನ ವಿರಾಮ ಒಪ್ಪದ ಇರಾನ್‌

    ಟೆಹ್ರಾನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಇಸ್ರೇಲ್‌ (Israel) ತನ್ನ ಆಕ್ರಮಣವನ್ನು ನಿಲ್ಲಿಸಿದರೆ ಮಾತ್ರ ತಾನೂ ದಾಳಿ ಮಾಡುವುದನ್ನು ನಿಲ್ಲಿಸುತ್ತೇನೆ ಎಂದು ಇರಾನ್‌ (Iran) ಹೇಳಿದೆ.

    ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಕದನ ವಿರಾಮ ಘೋಷಣೆಯಾಗಿದೆ ಎಂದು ಹೇಳಿದ್ದರೂ ಎರಡು ದೇಶಗಳು ಅಧಿಕೃತವಾಗಿ ದಾಳಿ ನಿಲ್ಲಿಸುತ್ತೇವೆ ಎಂದು ಹೇಳಿಲ್ಲ. ಇದನ್ನೂ ಓದಿ: ಇರಾನ್‌, ಇಸ್ರೇಲ್‌ ಸಂಘರ್ಷ – ಭಾರತದ ಬಂದರುಗಳಲ್ಲಿ ಉಳಿದ 1 ಲಕ್ಷ ಟನ್ ಬಾಸ್ಮತಿ ಅಕ್ಕಿ


    ಮೊದಲು ನಮ್ಮ ಮೇಲೆ ದಾಳಿ ನಡೆಸಿದ್ದು ಇಸ್ರೇಲ್‌. ಹೀಗಾಗಿ ಇಸ್ರೇಲ್‌ ಟೆಹ್ರಾನ್‌ ಮೇಲೆ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸಿದರೆ ನಾವು ದಾಳಿ ನಿಲ್ಲಿಸುವುದಾಗಿ ಇರಾನ್‌ ತಿಳಿಸಿದೆ. ಇದನ್ನೂ ಓದಿ: ಖಮೇನಿ ಕೈ ಬೆರಳಲ್ಲಿರೋ ನೀಲಿ ಕಲ್ಲಿನ ಉಂಗುರದ ರಹಸ್ಯವೇನು? ಇದು ಇರೋವರೆಗೂ ಸೋಲೇ ಇಲ್ವಾ?


    ಈ ಸಂಬಂಧ ಇರಾನ್‌ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಪ್ರತಿಕ್ರಿಯಿಸಿ, ಇಸ್ರೇಲ್‌ನ ಆಕ್ರಮಣಕ್ಕೆ ಶಿಕ್ಷೆ ವಿಧಿಸಲು ನಮ್ಮ ಪ್ರಬಲ ಸಶಸ್ತ್ರ ಪಡೆಗಳ ಮಿಲಿಟರಿ ಕಾರ್ಯಾಚರಣೆಗಳು ಕೊನೆಯ ನಿಮಿಷದವರೆಗೆ, ಅಂದರೆ ಬೆಳಿಗ್ಗೆ 4 ಗಂಟೆಯವರೆಗೆ ಮುಂದುವರೆದವು. ಕೊನೆಯ ರಕ್ತದ ಹನಿಯವರೆಗೂ ಎಲ್ಲಾ ಇರಾನಿಯನ್ನರ ರಕ್ಷಿಸಲು ನಾವು ಸಿದ್ಧರಾಗಿದ್ದೇವೆ. ಶತ್ರುಗಳ ಯಾವುದೇ ದಾಳಿಗೆ ಕೊನೆಯ ಕ್ಷಣದವರೆಗೂ ಪ್ರತಿಕ್ರಿಯಿಸುವ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

  • ಇಸ್ರೇಲ್‌- ಇರಾನ್‌ ಯುದ್ಧ ಮುಕ್ತಾಯ | ಕದನ ವಿರಾಮ ಘೋಷಿಸಿದ ಟ್ರಂಪ್‌

    ಇಸ್ರೇಲ್‌- ಇರಾನ್‌ ಯುದ್ಧ ಮುಕ್ತಾಯ | ಕದನ ವಿರಾಮ ಘೋಷಿಸಿದ ಟ್ರಂಪ್‌

    ವಾಷಿಂಗ್ಟನ್‌: ಕಳೆದ 12 ದಿನಗಳಿಂದ ಇಸ್ರೇಲ್‌ ಮತ್ತು ಇರಾನ್‌ ಮಧ್ಯೆ (Israel-Iran conflict) ನಡೆಯುತ್ತಿದ್ದ ಸಂಘರ್ಷಕ್ಕೆ ಕದನ ವಿರಾಮ ಘೋಷಣೆಯಾಗಿದೆ.

    ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಸಾಮಾಜಿಕ ಜಾಲತಾಣದಲ್ಲಿ ಯುದ್ಧ ಅಧಿಕೃತವಾಗಿ ಅಂತ್ಯಗೊಂಡಿದೆ. ಎರಡೂ ದೇಶಗಳು ಕದನ ವಿರಾಮಕ್ಕೆ (Ceasefire) ಒಪ್ಪಿಗೆ ನೀಡಿವೆ ಎಂದು ಘೋಷಣೆ ಮಾಡಿವೆ. ಇದನ್ನೂ ಓದಿ: ಕತಾರ್‌ನಲ್ಲಿರುವ ಅಮೆರಿಕ ಸೇನಾ ನೆಲೆಯ ಮೇಲೆ ಇರಾನ್ ಪ್ರತೀಕಾರದ ದಾಳಿ

    ಟ್ರಂಪ್‌ ಹೇಳಿದ್ದೇನು?
    ಕದನ ವಿರಾಮಕ್ಕೆ ಇರಾನ್‌ ಮತ್ತು ಇಸ್ರೇಲ್‌ ಒಪ್ಪಿಕೊಂಡಿದೆ. 12 ನೇ ದಿನದ ಯುದ್ಧದ ಅಧಿಕೃತ ಅಂತ್ಯವನ್ನು ಜಗತ್ತು ಸ್ವಾಗತಿಸುತ್ತದೆ. ಕದನ ವಿರಾಮದ ಸಮಯದಲ್ಲಿ ಎರಡು ದೇಶಗಳು ಶಾಂತಿ ಮತ್ತು ಗೌರವದಿಂದ ಇರಬೇಕು.

    ಇರಾನ್ ಮೊದಲು ಕದನ ವಿರಾಮವನ್ನು ಪ್ರಾರಂಭಿಸುತ್ತದೆ. 12 ಗಂಟೆಗಳ ನಂತರ ಇಸ್ರೇಲ್ ಕದನ ವಿರಾಮವನ್ನು ಪ್ರಾರಂಭಿಸುತ್ತದೆ. 24 ಗಂಟೆಗಳ ನಂತರ, 12 ದಿನಗಳ ಯುದ್ಧವು ಅಧಿಕೃತವಾಗಿ ಕೊನೆಗೊಳ್ಳುತ್ತದೆ.

    ಈ ಯುದ್ಧ ವರ್ಷಗಳ ಕಾಲ ನಡೆಯುತ್ತಿತ್ತು ಮತ್ತು ಇಡೀ ಮಧ್ಯಪ್ರಾಚ್ಯವನ್ನು ನಾಶಮಾಡಬಹುದಿತ್ತು. ಈ ರೀತಿ ಆಗಲಿಲ್ಲ ಮತ್ತು ಎಂದಿಗೂ ಈ ರೀತಿ ಆಗುವುದು ಇಲ್ಲ. ದೇವರು ಇಸ್ರೇಲ್ ಮತ್ತು ಇರಾನ್ ಅನ್ನು ಆಶೀರ್ವದಿಸಲಿ, ದೇವರು ಮಧ್ಯಪ್ರಾಚ್ಯವನ್ನು ಆಶೀರ್ವದಿಸಲಿ, ದೇವರು ಅಮೆರಿಕವನ್ನು ಆಶೀರ್ವದಿಸಲಿ ಮತ್ತು ದೇವರು ಜಗತ್ತನ್ನು ಆಶೀರ್ವದಿಸಲಿ. ಎಲ್ಲರಿಗೂ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

  • ಭಾರತದ ವಾಯುಸೀಮೆಯನ್ನು ಅಮೆರಿಕ ಬಳಸಿ ಇರಾನ್‌ ಮೇಲೆ ದಾಳಿ ಮಾಡಿತ್ತಾ? – ಉತ್ತರ ನೀಡಿದ ಪಿಐಬಿ

    ಭಾರತದ ವಾಯುಸೀಮೆಯನ್ನು ಅಮೆರಿಕ ಬಳಸಿ ಇರಾನ್‌ ಮೇಲೆ ದಾಳಿ ಮಾಡಿತ್ತಾ? – ಉತ್ತರ ನೀಡಿದ ಪಿಐಬಿ

    ನವದೆಹಲಿ: ಇರಾನ್‌ನಲ್ಲಿ (Iran) ಪರಮಾಣು ನೆಲೆಗಳ ಮೇಲೆ ನಡೆಸಿದ ದಾಳಿಗೆ ಅಮೆರಿಕ (USA) ಭಾರತದ ವಾಯುಸೀಮೆಯನ್ನು ಬಳಸಿಲ್ಲ ಎಂದು ಪಿಐಬಿ ಹೇಳಿದೆ.


    ಸಾಮಾಜಿಕ ಜಾಲತಾಣದಲ್ಲಿ ಭಾರತದ ವಾಯುಸೀಮೆಯನ್ನು ಬಳಸಿ ಇರಾನ್‌ ದಾಳಿ ನಡೆಸಿದೆ ಎಂದು ಸುದ್ದಿಗಳು ಹರಿದಾಡುತ್ತಿದ್ದಂತೆ ಪಿಐಬಿ ಸ್ಟಷ್ಟನೆ ನೀಡಿದೆ. ಇದನ್ನೂ ಓದಿ: ಕಿಲ್ಲರ್‌ ಲೇಡಿಯಿಂದ ಇರಾನ್‌ ನಾಶ – ಇಸ್ರೇಲ್‌ ನಿಖರ ದಾಳಿ ಹಿಂದಿದ್ದಾಳೆ ಸುಂದರಿ!

    ಬಿ2 ಯುದ್ಧ ವಿಮಾನ ಅಟ್ಲಾಂಟಿಕ್‌ ಸಮುದ್ರ ನಂತರ ಮೆಡಿಟೆರಿಯನ್‌ ಸಮುದ್ರ ಬಳಸಿ ಇರಾನಿನ ಮೂರು ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಅಮೆರಿಕ ಸೇನೆ ಸುದ್ದಿಗೋಷ್ಠಿ ನಡೆಸಿದ ಲಿಂಕ್‌ ಹಾಕಿ ಈ ಸುದ್ದಿ ಸುಳ್ಳು ಎಂದು ತಿಳಿಸಿದೆ.

    ಅಮೆರಿಕ ಬಹಳ ಎಚ್ಚರಿಕೆಯಿಂದ ಈ ದಾಳಿಯನ್ನು ನಡೆಸಿತ್ತು. ಜೂನ್‌ 21 ರಂದು ಎರಡು ಬಿ2 ಯುದ್ಧ ವಿಮಾನಗಳು ಮೊನೊ, ವೈಟ್‌ಮನ್ ಏರ್ ಫೋರ್ಸ್ ಬೇಸ್‌ನಿಂದ ಪಶ್ಚಿಮಕ್ಕೆ ಟೇಕಾಫ್‌ ಆಗಿ ಗುವಾಮ್‌ಗೆ ಬಂದಿತ್ತು. ಈ ವಿಮಾನಗಳು ಹಾರಿದ್ದರಿಂದ ಗುವಾಮ್‌ನಿಂದ ಅಮರಿಕ ಇರಾನ್‌ ಮೇಲೆ ದಾಳಿ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಉದ್ದೇಶಪೂರ್ವಕವಾಗಿ ತಮ್ಮ ಕಾರ್ಯಾಚರಣಾ ತಂತ್ರ ಸೋರಿಕೆ ಆಗದೇ ಇರಲು ಮಾಧ್ಯಮಗಳು ಮತ್ತು ಜನರ ದಿಕ್ಕು ತಪ್ಪಿಸಲು ಎರಡು ಯುದ್ಧವಿಮಾನಗಳನ್ನು ಗುವಾಮ್‌ಗೆ ಅಮೆರಿಕ ಕಳುಹಿಸಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.  ಇದನ್ನೂ ಓದಿ: ಬಾಂಬ್‌ ಹಾಕಿದ ಬೆನ್ನಲ್ಲೇ ಇರಾನ್‌ಗೆ MIGA ಘೋಷಿಸಿದ ಟ್ರಂಪ್‌

  • ಇರಾನ್‌ ನಿರ್ಧಾರದಿಂದ ಕಚ್ಚಾ ತೈಲ ದರ ದಿಢೀರ್‌ ಭಾರೀ ಏರಿಕೆ

    ಇರಾನ್‌ ನಿರ್ಧಾರದಿಂದ ಕಚ್ಚಾ ತೈಲ ದರ ದಿಢೀರ್‌ ಭಾರೀ ಏರಿಕೆ

    ನವದೆಹಲಿ: ಅಮೆರಿಕದ (USA) ದಾಳಿಗೆ ಪ್ರತಿಯಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್‌ (Iran) ಘೋಷಣೆ ಮಾಡಿದ ಬೆನ್ನಲ್ಲೇ ಕಚ್ಚಾ ತೈಲದ ದರ 5 ತಿಂಗಳ ನಂತರ ಭಾರೀ ಏರಿಕೆಯಾಗಿದೆ.

    ಒಂದು ಬ್ಯಾರೆಲ್‌ (159 ಲೀಟರ್‌) ಕಚ್ಚಾ ತೈಲ ಜನವರಿ ನಂತರ ಏರಿಕೆ ಕಂಡಿದೆ. ಇಂದು 1 ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದ (Crude Oil Price) ಬೆಲೆ 1.92 ಡಾಲರ್‌ ಅಥವಾ 2.49 % ಏರಿಕೆಯಾಗಿ 78.93 ಡಾಲರ್(6,847 ರೂ.) ತಲುಪಿದೆ.

    ಅಮೆರಿಕದ ವೆಸ್ಟ್‌ ಟೆಕ್ಸಾಸ್‌ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲವು 1.89 ಡಾಲರ್‌ ಅಥವಾ 2.56% ಏರಿಕೆಯಾಗಿ 75.73 ಡಾಲರ್(6,570‌ ರೂ.) ತಲುಪಿದೆ.  ಇದನ್ನೂ ಓದಿ: ಬಾಂಬ್‌ ಹಾಕಿದ ಬೆನ್ನಲ್ಲೇ ಇರಾನ್‌ಗೆ MIGA ಘೋಷಿಸಿದ ಟ್ರಂಪ್‌

    ಇರಾನಿನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ದಾಳಿ ನಡೆಸಿ ನಾಶ ಮಾಡಿದೆ. ಅಮೆರಿಕ ದಾಳಿಯ ಬೆನ್ನಲ್ಲೇ ಇರಾನ್‌ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮುಚ್ಚುವುದಾಗಿ ಘೋಷಿಸಿದೆ. ಇದನ್ನೂ ಓದಿ: ಇರಾನ್‌ಗೆ ಅಣ್ವಸ್ತ್ರ ನೀಡಲು ಮುಂದೆ ಬಂದ ಹಲವು ದೇಶಗಳು!

    ಇರಾನ್‌ ಮತ್ತು ಒಮಾನ್‌ ನಡುವಿನ 40 ಕಿ.ಮೀ ಅಗಲದ ಸಮುದ್ರದಲ್ಲಿ ಹಡಗುಗಳು ಸಂಚರಿಸುತ್ತವೆ. ಹಡಗುಗಳು ಸಂಚರಿಸುವ ಈ ಜಾಗಕ್ಕೆ ಹಾರ್ಮುಜ್ ಜಲಸಂಧಿ ಎಂದು ಕರೆಯಲಾಗುತ್ತದೆ.

    ಒಂದು ತಿಂಗಳಿನಲ್ಲಿ 3 ಸಾವಿರಕ್ಕೂ ಅಧಿಕ ಕಾರ್ಗೋ ಶಿಪ್‌ಗಳು ಈ ಜಲಸಂಧಿಯನ್ನು ಬಳಸುತ್ತಿದೆ. ಇರಾನ್‌ ಈಗ ಈ ಜಲಸಂಧಿಯನ್ನೇ ಬಂದ್‌ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರಿಂದ ಕಚ್ಚಾ ತೈಲ ದರ ದಿಢೀರ್‌ ಏರಿಕೆಯಾಗಿದೆ. ಇದನ್ನೂ ಓದಿ: ಲೇಡಿ ಕಿಲ್ಲರ್‌ನಿಂದ ಇರಾನ್‌ ನಾಶ – ಇಸ್ರೇಲ್‌ ನಿಖರ ದಾಳಿ ಹಿಂದಿದ್ದಾಳೆ ಸುಂದರಿ!

    ಇರಾಕ್‌, ಸೌದಿ ಅರೇಬಿಯಾ, ಯುಎಇ, ಕತಾರ್‌ನಿಂದ ಬರುವ ಕಚ್ಚಾ ತೈಲ, ಎಲ್‌ಎನ್‌ಜಿ ಹೊತ್ತುಕೊಡು ಬರುವ ಹಡಗುಗಳು ಹಾರ್ಮುಜ್ ಜಲಸಂಧಿಯಿಂದಲೇ ಬರಬೇಕು.

  • ಕೇಂದ್ರದಿಂದ ಯೂಟರ್ನ್‌ – ಅಮೆರಿಕ ಭೇಟಿಗೆ ಅವಕಾಶ ಸಿಕ್ಕಿದ ಬೆನ್ನಲ್ಲೇ MEA ವಿರುದ್ಧ ಪ್ರಿಯಾಂಕ್‌ ಖರ್ಗೆ ಕೆಂಡಾಮಂಡಲ

    ಕೇಂದ್ರದಿಂದ ಯೂಟರ್ನ್‌ – ಅಮೆರಿಕ ಭೇಟಿಗೆ ಅವಕಾಶ ಸಿಕ್ಕಿದ ಬೆನ್ನಲ್ಲೇ MEA ವಿರುದ್ಧ ಪ್ರಿಯಾಂಕ್‌ ಖರ್ಗೆ ಕೆಂಡಾಮಂಡಲ

    – ವಿದೇಶಾಂಗ ಇಲಾಖೆಗೆ ಸರಣಿ ಪ್ರಶ್ನೆ ಕೇಳಿದ ಪ್ರಿಯಾಂಕ್‌
    – ಕೇಂದ್ರ ಸರ್ಕಾರ ದೊಡ್ಡ ದೊಡ್ಡ ವಿಷನ್‌ ಹಾಕುತ್ತದೆ
    – ವಿಷನ್‌ ಸಾಕಾರಗೊಳಿಸಲು ಅನುಮತಿ ನೀಡದೇ ನಿರ್ಬಂಧಿಸುತ್ತದೆ

    ಬೆಂಗಳೂರು: ಕೇಂದ್ರ ಸರ್ಕಾರ ತನ್ನ ಹಿಂದಿನ ನಿರ್ಧಾರಗಳನ್ನು ರದ್ದುಗೊಳಿಸಿ ಅಮೆರಿಕ (USA) ಭೇಟಿಗೆ ನನಗೆ ಅನುಮತಿ ನೀಡಲು ನಿರ್ಧರಿಸಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಹೇಳಿದ್ದಾರೆ.

    ಅಮೆರಿಕ ಭೇಟಿಗೆ ಅನುಮತಿ ನೀಡಿದ ಬೆನ್ನಲ್ಲೇ ಎಕ್ಸ್‌ನಲ್ಲಿ ದೀರ್ಘ ಪೋಸ್ಟ್‌ ಹಾಕಿ ಕೇಂದ್ರ ಸರ್ಕಾರಕ್ಕೆ ಪ್ರಿಯಾಂಕ್‌ ಖರ್ಗೆ (Union Govt) ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಜೂನ್ 14 ರಿಂದ 27 ರವರೆಗೆ ಕರ್ನಾಟಕ ಸರ್ಕಾರವನ್ನು ಎರಡು ಪ್ರಮುಖ ಜಾಗತಿಕ ವೇದಿಕೆಗಳಲ್ಲಿ ಪ್ರತಿನಿಧಿಸಲು ಮತ್ತು ಸಹಯೋಗ ಮತ್ತು ಹೂಡಿಕೆಗಳಿಗಾಗಿ ಉನ್ನತ ಕಂಪನಿಗಳು, ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳೊಂದಿಗೆ 25ಕ್ಕೂ ಹೆಚ್ಚು ಅಧಿಕೃತ ಸಭೆಗಳನ್ನು ನಡೆಸಲು ನಾನು ಮೇ 15 ರಂದು ವಿದೇಶಾಂಗ ಇಲಾಖೆಯ ಬಳಿ ಅನುಮತಿ ಕೋರಿದ್ದೆ.

    ಸಚಿವರು + ಅಧಿಕಾರಿಗಳ ನಿಯೋಗಕ್ಕಾಗಿ ಮೇ 15 ರಂದು ಸಲ್ಲಿಸಿದ್ದ ಅರ್ಜಿಯನ್ನು ಜೂನ್ 4 ರಂದು ತಿರಸ್ಕರಿಸಲಾಗಿತ್ತು. ಸಚಿವರಿಲ್ಲದೆ ಅಧಿಕಾರಿಗಳ ನಿಯೋಗಕ್ಕಾಗಿ ಜೂನ್ 6 ರಂದು ಹಾಕಿದ ಅರ್ಜಗೆ ಜೂನ್ 11 ರಂದು ಅನುಮತಿ ನೀಡಲಾಗಿತ್ತು. ಜೂನ್‌ 12 ರಂದು ಹಾಕಿದ್ದ ಕಿಯೋನಿಕ್ಸ್ ಅಧ್ಯಕ್ಷರ ಅರ್ಜಿಗೆ ಜೂನ್ 14 ರಂದು ಅನುಮತಿ ಸಿಕ್ಕಿತ್ತು. ಆದರೆ ಯಾವುದೇ ಅಧಿಕೃತ ವಿವರಣೆ ನೀಡದೇ ನನ್ನ ಅರ್ಜಿಯನ್ನು ನಿರಾಕರಿಸಲಾಗಿತ್ತು. ಇದನ್ನೂ ಓದಿ: ಅಮೆರಿಕಗೆ ತೆರಳಲು ನೋ ಕ್ಲಿಯರೆನ್ಸ್ – ಪ್ರಿಯಾಂಕ್ ಖರ್ಗೆಗೆ ಬಿಗ್‌ ಶಾಕ್‌

     

    ಜೂನ್ 19 ರಂದು ನಾನು ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸಿ ರಾಜಕೀಯ ಹಸ್ತಕ್ಷೇಪದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೆ. ಈ ವಿಷಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಕಟವಾಯಿತು. ಅದೇ ದಿನದ ಸಂಜೆಯ ವೇಳೆಗೆ ವಿದೇಶಾಂಗ ಸಚಿವಾಲಯವು ತನ್ನ ಹಿಂದಿನ ನಿರಾಕರಣೆಯನ್ನು ರದ್ದುಗೊಳಿಸಿ ಜೂನ್ 19 ರಂದು ನಿರಾಕ್ಷೇಪಣಾ ಅನುಮತಿಯನ್ನು ನೀಡಿದೆ.

    ನನ್ನ ಮೂಲ ಅರ್ಜಿಯ 36 ದಿನಗಳ ನಂತರ ಅಧಿಕೃತ ನಿರಾಕರಣೆಯ 15 ದಿನಗಳ ಬಳಿಕ ಮತ್ತು ನಾನು ನಿಗದಿತ ನಿರ್ಗಮನದ 5 ದಿನಗಳ ನಂತರ ವಿದೇಶಾಂಗ ಇಲಾಖೆ ತನ್ನ ನಿರ್ಧಾರವನ್ನು ರದ್ದುಗೊಳಿಸಿದೆ. ಈ ನಿರ್ಧಾರ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

    ಮೊದಲನೆಯದಾಗಿ ಅನುಮತಿಯನ್ನು ನಿರಾಕರಿಸಿದ್ದು ಯಾಕೆ? ವಿಷಯವು ಸಾರ್ವಜನಿಕವಾಗಿ ಬಹಿರಂಗವಾದ ನಂತರ ಹೊಣೆಗಾರಿಕೆಯನ್ನು ತಪ್ಪಿಸಲು ಹಿಂದಿನ ಆದೇಶವನ್ನು ಈಗ ರದ್ದುಗೊಳಿಸಲಾಗಿದೆಯೇ? ಮುಖ್ಯ ಕಾರ್ಯಕ್ರಮಗಳು ಮುಗಿದ ನಂತರ ಅಥವಾ ಪೂರ್ಣಗೊಳ್ಳುವ ಹಂತದಲ್ಲಿದ್ದ ನಂತರ ಅನುಮತಿ ನೀಡುವುದರ ಅರ್ಥವೇನು? ತಡವಾಗಿ ಅನುಮೋದನೆಯನ್ನು ತೋರಿಸುವ ಮೂಲಕ ವಿದೇಶಾಂಗ ಸಚಿವಾಲಯವು ಈಗ ಮೂಲ ನಿರ್ಧಾರವನ್ನು ವಿವರಿಸುವುದನ್ನು ತಪ್ಪಿಸುತ್ತದೆಯೇ? ಇದನ್ನೂ ಓದಿ: ವಿದೇಶದಿಂದ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿಗೆ ವಾಪಸ್ – ಬರ್ತಿದ್ದಂತೆ ಕೇಂದ್ರದ ವಿರುದ್ಧ ವಾಗ್ದಾಳಿ

    ಕೇಂದ್ರವು ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ನ್ಯಾಷನಲ್ ಕ್ವಾಂಟಮ್ ಮಿಷನ್ ಮತ್ತು ಇಂಡಿಯಾ ಎಐ ಮಿಷನ್ ನಂತಹ ಘೋಷಣೆಗಳನ್ನು ನಮಗೆ ನೀಡುತ್ತಿದ್ದರೂ ಈ ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ನಿಜವಾದ ಕೆಲಸ ಕರ್ನಾಟಕದಲ್ಲಿ ನಡೆಯುತ್ತಿದೆ. ಕೇಂದ್ರ ಸರ್ಕಾರ ದೊಡ್ಡ ದೊಡ್ಡ ವಿಷನ್‌ಗಳನ್ನು ಪ್ರಕಟಿಸುತ್ತದೆ. ಆದರೆ ನಾವು ಹೂಡಿಕೆಗಳನ್ನು ತರಲು ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಭಾರತವನ್ನು ಜಾಗತಿಕ ನಾಯಕನಾಗಿ ರೂಪಿಸಲು ಕೆಲಸ ಮಾಡಲು ಮುಂದಾದಾಗ ನಮ್ಮನ್ನು ನಿರ್ಬಂಧಿಸಲಾಗುತ್ತದೆ.

    ಪ್ರಧಾನಿ ಒಮ್ಮೆ MAGA + MIGA = MEGA ಎಂದು ಹೇಳಿದ್ದರು. ಆದರೆ ಭಾರತದ ತಂತ್ರಜ್ಞಾನ ಮತ್ತು ನಾವೀನ್ಯತೆ ಎಂಜಿನ್ ಅನ್ನು ಚಾಲನೆ ಮಾಡುವ ರಾಜ್ಯಕ್ಕೆ ಅಗತ್ಯವಿರುವ ಬೆಂಬಲ ನಿರಾಕರಿಸಲ್ಪಟ್ಟಾಗ ಈ ವಿಷನ್‌ಗಳ ಅರ್ಥವೇನು? ಈ ಪ್ರಶ್ನೆಗಳಿಗೆ ತುರ್ತು ಪ್ರತಿಕ್ರಿಯೆ ಬೇಕು. ಕರ್ನಾಟಕವು ಉತ್ತರಗಳಿಗೆ ಅರ್ಹವಾಗಿದೆ.

  • Air India Plane crash | ಡೇಟಾ ರಿಕವರಿಗಾಗಿ ಬ್ಲ್ಯಾಕ್‌ ಬಾಕ್ಸ್ ಅಮೆರಿಕಕ್ಕೆ ರವಾನೆ

    Air India Plane crash | ಡೇಟಾ ರಿಕವರಿಗಾಗಿ ಬ್ಲ್ಯಾಕ್‌ ಬಾಕ್ಸ್ ಅಮೆರಿಕಕ್ಕೆ ರವಾನೆ

    ಅಹಮದಾಬಾದ್‌: ಇಲ್ಲಿನ ಮೇಘನಿ ನಗರದಲ್ಲಿ ಪತನವಾದ ಏರ್‌ ಇಂಡಿಯಾ (Air India) ಬೋಯಿಂಗ್-787 ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಅನ್ನು ಡೇಟಾ ರಿಕವರಿಗಾಗಿ ಅಮೆರಿಕಕ್ಕೆ ಕಳುಹಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ವಿಮಾನದ ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ (DFDR)ಗೆ ಬೆಂಕಿ ಬಿದ್ದು ಬಾಹ್ಯವಾಗಿ ಹಾನಿಯಾದ ಹಿನ್ನೆಲೆ ಅಮೆರಿಕಕ್ಕೆ ಕಳುಹಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ: ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಬೆಂಕಿ ಬಿದ್ದರೂ ಸುಟ್ಟು ಹೋಗಿಲ್ಲ ಯಾಕೆ?

    ಜೂನ್‌ 13ರಂದು ಬಿಜೆ ಮೆಡಿಕಲ್‌ ಹಾಸ್ಟೆಲಿನ ಮೇಲ್ಛಾವಣಿಯಲ್ಲಿದ್ದ ಏರ್‌ ಇಂಡಿಯಾ ವಿಮಾನದ ಬ್ಲ್ಯಾಕ್‌ ಬಾಕ್ಸ್‌ (Black Box) ಅನ್ನು‌ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ವಶಪಡಿಸಿಕೊಂಡಿತ್ತು. ಆದ್ರೆ ಬ್ಲ್ಯಾಕ್‌‌ ಬಾಕ್ಸ್‌ಗೆ ಬೆಂಕಿ ಬಿದ್ದು ಬಾಹ್ಯವಾಗಿ ಹಾನಿಯಾಗಿದೆ. ಇದರಿಂದ ಸ್ಥಳೀಯ ತನಿಖಾಧಿಕಾರಿಗಳಿಂದ ಮಾಹಿತಿ ಹೊರ ತೆಗೆಯಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಡೇಟಾ ರಿಕವರಿಗಾಗಿ ಬ್ಲ್ಯಾಕ್‌ಬಾಕ್ಸ್‌ ಅನ್ನು ಅಮೆರಿಕಾಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ – ಏನಿದು ಬ್ಲ್ಯಾಕ್‌ಬಾಕ್ಸ್‌? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    2ನೇ ಬ್ಲ್ಯಾಕ್‌ ಬಾಕ್ಸ್‌ ಪರಿಶೀಲನೆ
    ಏರ್‌ ಇಂಡಿಯಾ ಬೋಯಿಂಗ್-787 ವಿಮಾನದ 2ನೇ ಬ್ಲ್ಯಾಕ್‌ ಬಾಕ್ಸ್‌ (ಡಿಜಿಟಲ್‌ ಫ್ಲೈಟ್‌ ಡೇಟಾ ರೆಕಾರ್ಡರ್) ಕಳೆದ ಭಾನುವಾರ ಪತ್ತೆಯಾಗಿತ್ತು. ಇದು ʻಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ʼ ಆಗಿದ್ದು, ವಿಮಾನದಲ್ಲಿ ಪ್ರತಿ ಸೆಕೆಂಡ್‌ನಲ್ಲಿ ಏನಾಯ್ತು ಎಂಬುದನ್ನ ಅರ್ಥಮಾಡಿಕೊಳ್ಳಲು ಸಹಾಯಕವಾಗಲಿದೆ. ಇದು ಕಾಕ್‌ಪಿಟ್‌ ಮತ್ತು ವಿಮಾನ ವ್ಯವಸ್ಥೆಯಲ್ಲಿ ಏನಾಯ್ತು ಎಂಬುದರ ಕುರಿತು ವಸ್ತುನಿಷ್ಠ ಮಾಹಿತಿಯನ್ನು ನೀಡುತ್ತದೆ. ಎಲ್ಲಾ ಕಾಕ್‌ಪಿಟ್ ಆಡಿಯೋ, ಪೈಲಟ್ ಸಂಭಾಷಣೆಗಳು, ರೇಡಿಯೋ ಪ್ರಸರಣಗಳು ಹಾಗೂ ಇತರೇ ಯಾಂತ್ರಿಕ ಶಬ್ಧಗಳ ಮಾಹಿತಿಯನ್ನು ಸಂಗ್ರಹಿಸಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹಿರಿಯ ಸಹಾಯಕ ಪಿ.ಕೆ. ಮಿಶ್ರಾ ತಿಳಿಸಿದ್ದರು. ಸದ್ಯ 2ನೇ ಬ್ಲ್ಯಾಕ್‌ಬಾಕ್ಸ್‌ ಅನ್ನು ಭಾರತದಲ್ಲೇ ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ ತನಿಖೆಗೆ ಉನ್ನತ ಮಟ್ಟದ ಸಮಿತಿ – 3 ತಿಂಗಳ ಡೆಡ್‌ಲೈನ್: ಸಚಿವ ರಾಮಮೋಹನ್ ನಾಯ್ಡು

    ಏನಿದು ಬ್ಲ್ಯಾಕ್‌ ಬಾಕ್ಸ್‌?
    ವಿಮಾನದಲ್ಲಿ ಧ್ವನಿಗ್ರಹಣಕ್ಕೆ ಬಳಸಲಾಗುವ ಎರಡು ಸಾಧನಗಳನ್ನು ತಾಂತ್ರಿಕ ಭಾಷೆಯಲ್ಲಿ ‘ಬ್ಲ್ಯಾಕ್ ಬಾಕ್ಸ್’ ಎಂದು ಕರೆಯಲಾಗುತ್ತದೆ. ಬ್ಲ್ಯಾಕ್ ಬಾಕ್ಸ್ ಅನ್ನು ‘ಫ್ಲೈಟ್ ಡಾಟಾ ರೆಕಾರ್ಡರ್’ ಎಂದೂ ಕರೆಯುತ್ತಾರೆ. ಬ್ಲ್ಯಾಕ್ ಬಾಕ್ಸ್ ಹಾರಾಟದ ಸಮಯದಲ್ಲಿನ ವಿಮಾನದ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುತ್ತದೆ. ಎಲ್ಲ ರೀತಿಯ ವಿಮಾನಗಳಲ್ಲಿ ಬ್ಲ್ಯಾಕ್‌ ಬಾಕ್ಸ್‌ ಅನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ. ಇದನ್ನೂ ಓದಿ: ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿದೆ ವಿಮಾನ ದುರಂತದ ರಹಸ್ಯ – ನಾಳೆಯೊಳಗೆ ಅಪಘಾತಕ್ಕೆ ಅಸಲಿ ಕಾರಣ ಸಿಗುತ್ತಾ?

    ವಿಮಾನ ಅಪಘಾತವಾದಾಗ ಅದಕ್ಕೆ ಕಾರಣ ಪತ್ತೆ ಹಚ್ಚಲು ನೆರವಾಗಲೆಂದೇ 5 ಕೆಜಿ ತೂಕದ ರೆಕಾರ್ಡಿಂಗ್ ಸಾಧನವನ್ನು ಅಳವಡಿಸಲಾಗುತ್ತದೆ. ಭದ್ರತೆಯ ದೃಷ್ಟಿಯಿಂದ ಕಪ್ಪು ಪೆಟ್ಟಿಗೆಯನ್ನು ಸಾಮಾನ್ಯವಾಗಿ ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಈ ಪೆಟ್ಟಿಗೆಯನ್ನು ಟೈಟಾನಿಯಂ ಲೋಹದಿಂದ ಮಾಡಲಾಗಿದ್ದು, ಟೈಟಾನಿಯಂ ಪೆಟ್ಟಿಗೆಯಲ್ಲಿ ಸುತ್ತುವರಿಯಲಾಗಿದೆ. ಇದು ಎಷ್ಟು ಶಕ್ತಿಶಾಲಿಯೆಂದರೆ ಸಮುದ್ರದಲ್ಲಿ ಬಿದ್ದರೆ, ಸುತ್ತಲೂ ಬೆಂಕಿ ಇದ್ದರೂ ಅಥವಾ ಎತ್ತರದಿಂದ ಬಿದ್ದರೂ ಯಾವುದೇ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ.

    ಅಪಘಾತದ ಸಂಭವಿಸಿದಾಗ ಹಿಂಭಾಗದಲ್ಲಿ ಅದರಲ್ಲೂ ಬಾಲದ ಕಡೆ ಪೆಟ್ಟು ಬೀಳುವುದು ಕಡಿಮೆ. ಯಾಕೆಂದರೆ ಬಾಲ ಎತ್ತರದಲ್ಲಿರುತ್ತದೆ. ಈ ಕಾರಣಕ್ಕೆ ಬಾಲದಲ್ಲಿ ಅಳವಡಿಸಲಾಗಿರುತ್ತದೆ. ವಿಮಾನದ ಎಂಜಿನ್‌ಗೆ ಜೋಡಿಸಲಾದ ಜನರೇಟರ್ ನಿಂದ ಬ್ಲ್ಯಾಕ್ ಬಾಕ್ಸ್ ಚಾರ್ಜ್ ಆಗುತ್ತದೆ.

  • ವಿದೇಶದಿಂದ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿಗೆ ವಾಪಸ್ – ಬರ್ತಿದ್ದಂತೆ ಕೇಂದ್ರದ ವಿರುದ್ಧ ವಾಗ್ದಾಳಿ

    ವಿದೇಶದಿಂದ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿಗೆ ವಾಪಸ್ – ಬರ್ತಿದ್ದಂತೆ ಕೇಂದ್ರದ ವಿರುದ್ಧ ವಾಗ್ದಾಳಿ

    – ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಯಶಸ್ಸನ್ನ ಕಟ್ಟಿಹಾಕ್ತಿದೆ ಎಂದು ಆಕ್ಷೇಪ
    – ಕರ್ನಾಟಕ ದೇಶದ ಆರ್ಥಿಕತೆಯ ಎಂಜಿನ್‌ ಅಂತ ಬಣ್ಣನೆ

    ಬೆಂಗಳೂರು: ಬೋಸ್ಟನ್, ಸ್ಯಾನ್‌ಫ್ರಾನ್ಸಿಸ್ಕೋ ನಗರಗಳಲ್ಲಿ ಆಯೋಜನೆಗೊಂಡಿದ್ದ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ವಿದೇಶಕ್ಕೆ ತೆರಳಿದ್ದ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಅಮೆರಿಕಗೆ (USA) ಕ್ಲಿಯರೆನ್ಸ್‌ ಸಿಗದ ಹಿನ್ನೆಲೆ ಇಂದು ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ. ಬರ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bengaluru Airport) ಬಂದಿಳಿದ ಪ್ರಿಯಾಂಕ್‌ ಖರ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಯಶಸ್ಸನ್ನ ಕಟ್ಟಿಹಾಕುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಮೆರಿಕಗೆ ತೆರಳಲು ನೋ ಕ್ಲಿಯರೆನ್ಸ್ – ಪ್ರಿಯಾಂಕ್ ಖರ್ಗೆಗೆ ಬಿಗ್‌ ಶಾಕ್‌

    ಅಮೆರಿಕ ಭೇಟಿಗೆ ಕೇಂದ್ರದಿಂದ ಕ್ಲಿಯರೆನ್ಸ್ ಸಿಗದ ಕುರಿತು ಮಾತನಾಡಿ, ತಿರಸ್ಕಾರ ಮಾಡಲಿ, ಆದ್ರೆ ಅದಕ್ಕೆ ಕಾರಣ ಕೊಡಬೇಕು. ʻಮೇಕ್ ಇನ್ ಇಂಡಿಯಾʼ ಅಂತಾ ದೊಡ್ಡ ದೊಡ್ಡ ಮಾತುಗಳು ಹೇಳ್ತಾರೆ. ಯಾವುದೇ ಘೋಷಣೆ ಕೊಟ್ಟರೂ ಅದು ಪ್ರಾರಂಭವಾಗಬೇಕಿರೋದು ಕರ್ನಾಟಕದಿಂದ್ಲೇ. ನಮ್ಮಲ್ಲಿ ಅಷ್ಟೊಂದು ಮಾನವ ಸಂಪನ್ಮೂಲ ಹಾಗೂ ಅರ್ಹತೆ ಇದೆ. ಡೆಲಿಗೇಷನ್‌ಗೆ ಮೊದಲು ತಿರಸ್ಕಾರ ಮಾಡಿದ್ರು ನಂತರ, ಡೆಲಿಗೇಷನ್‌ಗೆ ಅನುಮತಿ ಕೊಟ್ರು ಅದ್ರೆ ನಮಗೆ ತಿರಸ್ಕಾರ ಮಾಡಿದ್ರು ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡ | ಅರಬ್ಬಿ ಸಮುದ್ರದಲ್ಲಿ ಭಾರೀ ಅಲೆ ಸಾಧ್ಯತೆ – ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

    ಕರ್ನಾಟಕ ದೇಶದ ಅರ್ಥಿಕತೆಯ ಎಂಜಿನ್‌
    ನಾವು ಆಟ ಅಡೋದಕ್ಕೆ ಅಲ್ಲಿಗೆ ಹೋಗ್ತಿಲ್ಲ, ಜನರಿಗೆ ಉದ್ಯೋಗ ಸೃಷ್ಟಿ ಮಾಡೋದು ನಮ್ಮ ಕರ್ತವ್ಯ. ಬಂಡವಾಳ ತರೋದು ಕೂಡ ನಮ್ಮ ಕರ್ತವ್ಯವಾಗಿದೆ. ಕರ್ನಾಟಕಕ್ಕೆ ಒಳ್ಳೆದಾದ್ರೆ ನಮ್ಮ ರಾಷ್ಟ್ರಕ್ಕೆ ತಾನೆ ಒಳ್ಳೆದು, ಕರ್ನಾಟಕ ದೇಶದ ಅರ್ಥಿಕತೆಯ ಎಂಜಿನ್‌. ವಿನಾಃ ಕಾರಣ ಸಾರಸಾಗಟಾಗಿ ತಿರಸ್ಕಾರ ಮಾಡೋದು ಸರಿಯಲ್ಲ. ಹೋದ ಬಾರಿ ನಾವು ಎಂ.ಬಿ ಪಾಟೀಲ್ ಅವರು ಅಮೆರಿಕಗೆ ಹೋಗಿದ್ವಿ. ಆಗ 35 ರಿಂದ 40 ಸಾವಿರ ಕೋಟಿ ಲೆಟರ್ ಆಫ್ ಇಂಟೆಂಟ್ ಹಾಗೂ ಎಂಓಯೂ ಗಳಾಗಿದ್ವು. ಅದನ್ನ ಇನ್ವೆಸ್ಟ್ ಕರ್ನಾಟಕದಲ್ಲಿ ಸಾಲಿಡಿಫೈ ಮಾಡಿದ್ವಿ. ಮೊನ್ನೆ ಸೆಮಿಕಂಡಕ್ಟರ್ ಮತ್ತೆ ಎಲೆಕ್ಟ್ರಾನಿಕ್ಸ್ ಮ್ಯಾನಿಫಾಕ್ಚರ್‌ಗೆ ಸುಮಾರು 20 ಸಾವಿರ ಕೋಟಿ ರೂ ಅನುಮೋದನೆ ಕೊಟ್ಟಿದ್ದೀವಿ. ಇದರ ಪ್ರತಿಫಲವಾಗಿ ಕರ್ನಾಟಕ ಎಲೆಕ್ಟ್ರಾನಿಕ್ಸ್ ಹಬ್ ಹಾಗೂ ಏರೋಸ್ಪೇಸ್ ಹಬ್ ಆಗಿದೆ. ನವೋದ್ಯಮದಲ್ಲಿ ಅಗ್ರಸ್ಥಾನ ಪಡೆದು ಕೊಳ್ಳಲು ಕರ್ನಾಟಕಕ್ಕೆ ಸಾಧ್ಯವಾಗುತ್ತಿದೆ ಎಂದು ರಾಜ್ಯ ಸರ್ಕಾರದ ಕಾರ್ಯಕ್ಷಮತೆಯನ್ನ ವಿವರಿಸಿದ್ದಾರೆ.

    ಕಳೆದ 1 ವರ್ಷದಲ್ಲಿ ಇಷ್ಟೆಲ್ಲ ಮಾಡಿದ್ರು ಯಾಕೆ ರಿಜೆಕ್ಟ್ ಮಾಡಿದ್ರು ಗೊತ್ತಿಲ್ಲ. ಇವೆಲ್ಲದರ ಬಗ್ಗೆ ಏನೇನು ಮಾಹಿತಿಯಿದೆ ಅದನ್ನ ಮುಖ್ಯಮಂತ್ರಿಗೆ ಮೊದಲು ತಿಳಿಸ್ತೀನಿ. ಆಮೇಲೆ ಮಾಧ್ಯಮಗಳ ಮುಂದೆ ಬರ್ತೀನಿ ಕೇಂದ್ರ ಸರ್ಕಾರದ ನಡೆ ಸರಿಯಿಲ್ಲ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಜ್ವಾಲಾಮುಖಿ ಸ್ಫೋಟ – ದೆಹಲಿಯಿಂದ ಬಾಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ವಾಪಸ್

    ಏನಾಗಿತ್ತು?
    ಐಟಿ ಬಿಟಿಗೆ ಸಂಬಂಧಪಟ್ಟಂತೆ ಪ್ರಿಯಾಂಕ್ ಖರ್ಗೆ ಬೋಸ್ಟನ್, ಸ್ಯಾನ್‌ಫ್ರಾನ್ಸಿಸ್ಕೋ ನಗರಗಳಲ್ಲಿ ಆಯೋಜನೆಗೊಂಡಿದ್ದ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಬೇಕಿತ್ತು. ಪ್ರಿಯಾಂಕ್‌ ಜೊತೆ ತೆರಳಿದ್ದ ಐಎಎಸ್ ಅಧಿಕಾರಿಗೆ ಅಮೆರಿಕಗೆ ತೆರಳಲು ಕ್ಲಿಯರೆನ್ಸ್ ಸಿಕ್ಕಿದೆ. ಆದ್ರೆ ಪ್ಯಾರಿಸ್‌ ಪ್ರವಾಸದ ಬಳಿಕ ಅಮೆರಿಕಗೆ ತೆರಳಬೇಕಿದ್ದ ಐಟಿ ಬಿಟಿ ಸಚಿವರಿಗೆ ಕ್ಲಿಯರೆನ್ಸ್‌ ಸಿಗದ ಹಿನ್ನೆಲೆ ಅವರಿಂದು ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ.

  • ಇರಾನಿನ ಪರಮಾಣು ಘಟಕದ ಮೇಲೆ ಅಮೆರಿಕ 14 ಸಾವಿರ ಕೆಜಿ ತೂಕದ ಬಾಂಬ್‌ ಹಾಕುತ್ತಾ?

    ಇರಾನಿನ ಪರಮಾಣು ಘಟಕದ ಮೇಲೆ ಅಮೆರಿಕ 14 ಸಾವಿರ ಕೆಜಿ ತೂಕದ ಬಾಂಬ್‌ ಹಾಕುತ್ತಾ?

    – ಸದ್ಯದ ವಿಶ್ವದ ಅತ್ಯಂತ ಶಕ್ತಿಶಾಲಿ ಬಾಂಬ್‌ ಎಂದೇ ಪ್ರಸಿದ್ಧಿ
    – ಬಿ2 ಯುದ್ಧ ವಿಮಾನದಿಂದ ಬಾಂಬ್‌ ದಾಳಿ

    ವಾಷಿಂಗ್ಟನ್‌: ಇಸ್ರೇಲ್‌- ಇರಾನ್‌ (Isreal-Iran) ಮಧ್ಯೆ ನಡೆಯುತ್ತಿರುವ ಕಾದಾಟಕ್ಕೆ ಅಮೆರಿಕ (USA) ಈಗಾಗಲೇ ಅಧಿಕೃತವಾಗಿ ಎಂಟ್ರಿಯಾಗಿದೆ. ಈಗ ಇರಾನ್‌ನ ಫೋರ್ಡೋ ಪರಮಾಣು ಘಟಕ (Fordo Nuclear Facility) ಮೇಲೆ ದಾಳಿ ಮಾಡಲು ಅಮೆರಿಕ 14,000 ಕೆಜಿ ತೂಕದ ಬಾಂಬ್‌ ಹಾಕುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಹೌದು, ಇರಾನಿನ ಪರಮಾಣು ಘಟಕಗಳ ಮೇಲೆ ಇಸ್ರೇಲ್‌ ದಾಳಿ ಮಾಡಿದರೂ ಸಂಪೂರ್ಣ ಯಶಸ್ಸು ಸಿಕಿಲ್ಲ. ಇರಾನಿನ ಶಕ್ತಿ ಯಾವುದು ಎಂದರೆ ಅದು ಫೋರ್ಡೋ ಪರಮಾಣು ಘಟಕ. ಈ ಘಟಕದ ಮೇಲೆ ದಾಳಿ ಮಾಡುವುದು ಅಷ್ಟು ಸುಲಭವಲ್ಲ.

    ಇರಾನ್‌ನ ಫೋರ್ಡೋ ಪರಮಾಣು ಘಟಕ

    ಇರಾನ್‌ ರಾಜಧಾನಿ ತೆಹ್ರಾನ್‌ನಿಂದ 100 ಕಿ.ಮೀ ದೂರದಲ್ಲಿರುವ ಫೋರ್ಡೋ ಘಟಕವನ್ನು ಬೆಟ್ಟದ ಮೇಲೆ ಸ್ಥಾಪನೆ ಮಾಡಲಾಗಿದೆ. ಫೋರ್ಡೊ ಅತ್ಯಂತ ರಹಸ್ಯ ಮತ್ತು ಬಿಗಿ ಭದ್ರತೆಯ ಸೌಲಭ್ಯವಾಗಿದ್ದು 2009 ರಲ್ಲಿ ಈ ವಿಚಾರ ಸಾರ್ವಜನಿಕವಾಗಿ ಬೆಳಕಿಗೆ ಬಂದಿತ್ತು.

    ಇರಾನ್‌ನ ಪವಿತ್ರ ನಗರವಾದ ಕೋಮ್‌ಗೆ ಹತ್ತಿರದಲ್ಲಿ ನಿರ್ಮಾಣವಾಗಿರುವ ಈ ಘಟಕದ ನಿಜವಾದ ಗಾತ್ರ ಮತ್ತು ಒಳಗಡೆ ಯಾವೆಲ್ಲ ಸಂಶೋಧನೆಗಳು ನಡೆಯುತ್ತಿದೆ ಎನ್ನುವುದು ಇನ್ನೂ ಊಹಾಪೋಹಗಳ ವಿಷಯವಾಗಿದೆ. ಹೀಗಿದ್ದರೂ ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್‌ ಕೆಲ ವರ್ಷಗಳ ಹಿಂದೆ ಕದ್ದ ಇರಾನಿನ ದಾಖಲೆಗಳಿಂದ ಕೆಲವು ವಿವರಗಳು ಬಹಿರಂಗವಾಗಿದೆ. ಇದನ್ನೂ ಓದಿ: ಎಲ್ಲಿ ಅಡಗಿರೋದು ಗೊತ್ತಿದೆ – ಈಗ ಹತ್ಯೆ ಮಾಡಲ್ಲ, ಖಮೇನಿ ಶರಣಾಗಬೇಕು: ಟ್ರಂಪ್‌ ವಾರ್ನಿಂಗ್‌

    ಈ ಘಟಕದ ಮುಖ್ಯ ಸಭಾಂಗಣವು ನೆಲದಡಿಯಲ್ಲಿ ಸುಮಾರು 80 ರಿಂದ 90 ಮೀಟರ್ (295 ಅಡಿ) ಆಳದಲ್ಲಿದೆ. ಇಷ್ಟು ಅಡಿ ಆಳದಲ್ಲಿರುವ ಈ ಘಟಕವನ್ನು ಇಸ್ರೇಲ್ ಹೊಂದಿರುವ ಯಾವುದೇ ವೈಮಾನಿಕ ಬಾಂಬ್‌ನಿಂದ ಧ್ವಂಸ ಮಾಡಲು ಸಾಧ್ಯವಿಲ್ಲ.

    ಇಷ್ಟು ಆಳದಲ್ಲಿ ನಿರ್ಮಾಣವಾಗಿರುವ ಪರಮಾಣು ಘಟಕವನ್ನು ಧ್ವಂಸ ಮಾಡಬೇಕಾದರೆ ಅಮೆರಿಕ ನಿರ್ಮಿತ GBU-57A/B Massive Ordinance Penetrator ಬಾಂಬ್‌ನಿಂದ ಮಾತ್ರ ಸಾಧ್ಯ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    2011 ರಿಂದ ಈ ಬಾಂಬ್‌ ಅಮೆರಿಕ ವಾಯುಸೇನೆಯ ಬತ್ತಳಿಕೆಯಲ್ಲಿದೆ. 6.2 ಮೀಟರ್‌ ಉದ್ದದ ಈ ಬಾಂಬ್‌ 13,608 ಕೆಜಿ ತೂಕವನ್ನು ಹೊಂದಿದೆ. ಈ ಬಾಂಬ್‌ ಅನ್ನು ʼಬಂಕರ್‌ ಬಸ್ಟರ್‌ʼ ಬಾಂಬ್‌ ಎಂದೇ ಕರೆಯಲಾಗುತ್ತದೆ. ಅಂದಾಜು ಸುಮಾರು 200 ಮೀಟರ್‌ ಆಳದಲ್ಲಿರುವ ಗುರಿಯನ್ನು ಧ್ವಂಸ ಮಾಡುವ ಸಾಮರ್ಥ್ಯವನ್ನು ಈ ಬಾಂಬ್‌ ಹೊಂದಿದೆ. 2007 ರಲ್ಲಿ ಈ ಬಾಂಬ್‌ ಪ್ರಯೋಗ ನಡೆದು 2011 ರಲ್ಲಿ 16 ಬಂಕರ್‌ ಬಾಂಬ್‌ ಅಮೆರಿಕ ವಾಯುಸೇನೆಗೆ ಸೇರ್ಪಡೆಯಾಗಿತ್ತು.

    ಜಿಪಿಎಸ್‌ ಆಧಾರಿತ ಈ ಬಾಂಬ್‌ ವಿನ್ಯಾಸವನ್ನು ಬೋಯಿಂಗ್‌ ಕಂಪನಿ ಮಾಡಿದ್ದು ಅಮೆರಿಕ ವಾಯುಸೇನೆ ಈ ಉತ್ಪಾದನೆ ಮಾಡಿದೆ. ಅಮೆರಿಕದ ವಾಯುಪಡೆಯ ಬಳಿ ಇರುವ ಅತ್ಯಂತ ಶಕ್ತಿಶಾಲಿ ಪರಮಾಣು ರಹಿತ ಬಾಂಬ್ ಎಂದೇ ಇದನ್ನು ಕರೆಯಲಾಗುತ್ತದೆ. ಇದನ್ನೂ ಓದಿ: ಇರಾನ್‌ ವಾರ್‌ ಟೈಂ ಕಮಾಂಡರ್‌ ಹತ್ಯೆ – ಖಮೇನಿ ಹತ್ಯೆ ಬಳಿಕವಷ್ಟೇ ಯುದ್ಧಕ್ಕೆ ವಿರಾಮ ಎಂದ ಇಸ್ರೇಲ್‌

    ಈ ಬಾಂಬ್‌ ಅನ್ನು ಹಾಕಬೇಕಾದರೆ ಅಮರಿಕದ ಬಳಿ ಇರುವ ಶಕ್ತಿಶಾಲಿ Northrop B-2 Spirit ಯುದ್ಧವಿಮಾನದಿಂದ ಮಾತ್ರ ಸಾಧ್ಯ. ಬಾವಲಿಯಂತೆ ಕಾಣುವ ಈ ವಿಮಾನಕ್ಕೆ ಒಂದು ಬಾರಿ ಇಂಧನ ತುಂಬಿಸಿದರೆ 11 ಸಾವಿರ ಕಿ.ಮೀ ದೂರವನ್ನು ಕ್ರಮಿಸಬಲ್ಲದು. ಅಲ್ಲದೇ ನಿರಂತರವಾಗಿ 44 ಗಂಟೆಗಳ ಕಾಲ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನವು ದೀರ್ಘಾವಧಿಯ ಕಾರ್ಯಾಚರಣೆ ನಡೆಸುವುದರಿಂದ ಶೌಚಾಲಯ, ಹಾಸಿಗೆ ಜೊತೆಗೆ ಮೈಕ್ರೋವೇವ್ ಹೊಂದಿದೆ. ಇಬ್ಬರು ಪೈಲಟ್‌ ಪೈಕಿ ಒಬ್ಬರು ವಿಶ್ರಾಂತಿ ಪಡೆದರೆ ಇನ್ನೊಬ್ಬರು ವಿಮಾನವನ್ನು ಹಾರಿಸುತ್ತಿರುತ್ತಾರೆ. ಇದರಿಂದಾಗಿ ಕಾರ್ಯಾಚರಣೆಯು ಅಡಚಣೆಯಿಲ್ಲದೆ ಮುಂದುವರಿಯುತ್ತದೆ.

    2001 ರಲ್ಲಿ ಐದು ಬಿ-2 ವಿಮಾನಗಳು ಅಫ್ಘಾನಿಸ್ತಾನದ ಮೇಲೆ ನಿರಂತರ 44 ಗಂಟೆಗಳ ಕಾರ್ಯಾಚರಣೆ ನಡೆಸಿತ್ತು. ಇದು ಇತಿಹಾಸದಲ್ಲಿ ಅತಿ ಉದ್ದದ ವಾಯು ಯುದ್ಧ ಕಾರ್ಯಾಚರಣೆ ಎಂಬ ಹೆಸರನ್ನು ಪಡೆದಿದೆ.

    ಸದ್ಯ ಅಮೆರಿಕ ವಾಯುಸೇನೆ 19 ಬಿ-2 ಬಾಂಬರ್‌ ಯುದ್ಧ ವಿಮಾನಗಳನ್ನು ಹೊಂದಿದೆ. B-2 ಏಕಕಾಲದಲ್ಲಿ ಎರಡು MOP ಬಾಂಬ್‌ಗಳನ್ನು ಮಾತ್ರ ಸಾಗಿಸಬಲ್ಲದು. ಹೀಗಾಗಿ ಅಮೆರಿಕ ಈ ಬಾಂಬ್‌ ಹಾಕುವ ಮೂಲಕ ಇರಾನಿನ ಪರಮಾಣು ಘಟಕವನ್ನು ನಾಶ ಮಾಡುತ್ತಾ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗುವ ಸಾಧ್ಯತೆಯಿದೆ.