Tag: USA

  • ಅಲ್‌ಖೈದಾ ಮುಖ್ಯಸ್ಥನ ಹತ್ಯೆಗೆ ಬಳಸಿದ್ದು ಬ್ಲೇಡ್ ಬಾಂಬ್ – ಇದು ಸ್ಫೋಟಿಸಲ್ಲ, ಛಿದ್ರಿಸುತ್ತೆ!

    ಅಲ್‌ಖೈದಾ ಮುಖ್ಯಸ್ಥನ ಹತ್ಯೆಗೆ ಬಳಸಿದ್ದು ಬ್ಲೇಡ್ ಬಾಂಬ್ – ಇದು ಸ್ಫೋಟಿಸಲ್ಲ, ಛಿದ್ರಿಸುತ್ತೆ!

    ವಾಷಿಂಗ್ಟನ್: ಅಫ್ಘಾನಿಸ್ತಾನದ ಕಾಬೂಲ್‌ನ ತನ್ನ ಮನೆಯ ಬಾಲ್ಕನಿಯಲ್ಲಿ ನಿಂತಿದ್ದ ಝವಾಹಿರಿಯನ್ನು ಕೊಲ್ಲಲು ಅಮೆರಿಕ ಬಳಸಿದ ಕಪಣಿ ಸ್ಫೋಟಿಸಿಲ್ಲ. ಆತನ ಮನೆಯವರಿಗೂ ಯಾವುದೇ ಹಾನಿಯಾಗಿಲ್ಲ. ಏಕೆಂದರೆ ಇದು ಸಾಮಾನ್ಯ ಕ್ಷಿಪಣಿಯಲ್ಲ. ಅಮೆರಿಕದ ಅತ್ಯಂತ ನೆಚ್ಚಿನ, ಸ್ಫೋಟಗೊಳ್ಳದ ಬ್ಲೇಡ್ ಕ್ಷಿಪಣಿ.

    ನೂರಾರು ಜನರ ಮಧ್ಯೆಯಿದ್ದರು, ತನ್ನ ನಿರ್ದಿಷ್ಟ ಗುರಿಯನ್ನು ತಲುಪಿ ಹೊಡೆದು ಛಿದ್ರ ಛಿದ್ರ ಮಾಡುತ್ತದೆ. ಅಕ್ಕ ಪಕ್ಕದಲ್ಲಿರುವವರಿಗೆ ಒಂದಿಷ್ಟು ಹಾನಿ ಮಾಡುವುದಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ:  ಹರೀಶ್ ರಾಜ್ ಸಿನಿಪಯಣಕ್ಕೆ ಬೆಳ್ಳಿಹಬ್ಬದ ಸಂಭ್ರಮ: ಅಭಿಮಾನಿಗಳಿಗೆ ಋಣಿ ಎಂದ ನಟ

    `ಹೆಲ್‌ಫೈರ್ ಆರ್-9 ಎಕ್ಸ್’ ಎಂಬ ಈ ಕ್ಷಿಪಣಿ ಅಣ್ವಸ್ತ್ರ ಸಿಡಿತಲೆಯನ್ನು ಹೊಂದಿಲ್ಲ. 5 ಅಡಿ ಉದ್ದ, 15 ಕೆಜಿ ತೂಕದ ಇದು ತನ್ನ ಒಡಲಿನಲ್ಲಿ ಆರು ರೇಜರ್ ನಂತರ ಬ್ಲೇಡ್‌ಗಳನ್ನು ಹೊಂದಿರುತ್ತದೆ. ತನ್ನ ಗುರಿ ಸಮೀಪಿಸುತ್ತಿದ್ದಂತೆ ಆ ಬ್ಲೇಡ್‌ಗಳು ತೆರೆದುಕೊಂಡು ನಿರ್ದಿಷ್ಟ ವ್ಯಕ್ತಿಯನ್ನ ನಿರ್ದಿಷ್ಟ ಜಾಗದಲ್ಲೇ ಕತ್ತರಿಸಿ ಹಾಕಿಬಿಡುತ್ತವೆ. ಇದನ್ನೂ ಓದಿ: ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಯ್ತು ‘ವಿಜಯಾನಂದ’ ಟ್ರೈಲರ್

    2017ರಲ್ಲಿ ಅಲ್‌ಖೈದಾ ನಾಯಕ ಅಬು ಆಲ್ ಖಯರ್ ಅಲ್ ಮಸ್ತಿಯನ್ನು ಕೊಲ್ಲಲು ಅಮೆರಿಕ ಇದೇ ಕ್ಷಿಪಣಿ ಬಳಸಲಾಗಿತ್ತು. ಸಿರಿಯಾದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅಬುವನ್ನು ಗುರಿಯಾಗಿಸಿ, `R9X Hellfire‘ ಉಡಾವಣೆ ಮಾಡಲಾಗಿತ್ತು. ಆ ಕಾರಿನ ಹಿಂಭಾಗ ಹಾಗೂ ಮುಂಭಾಗಕ್ಕೆ ಏನೂ ಆಗಿರಲಿಲ್ಲ. ಆದರೆ ಕಾರಿನ ಚಾವಣಿ, ಒಳಾಂಗಣ, ಕಾರಿನೊಳಗಿದ್ದವರು ಸಂಪೂರ್ಣ ಛಿದ್ರ-ಛಿದ್ರವಾಗಿದ್ದರು. ಈಗ ಈ ಕ್ಷಿಪಣಿಯ ಬಗ್ಗೆ ಭಾರೀ ಚರ್ಚೆಯಾಗಿತ್ತು. ಇದೇ ಕ್ಷಿಪಣಿಯನ್ನು ಅಲ್‌ಖೈದಾ ಮುಖ್ಯಸ್ಥನ ಹತ್ಯೆಗೆ ಬಳಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • 2026ರ ಫಿಫಾ ವಿಶ್ವಕಪ್‌ಗೆ ಮೂರು ರಾಷ್ಟ್ರಗಳ ಆತಿಥ್ಯ – 32 ರಾಷ್ಟ್ರಗಳ 48 ತಂಡಗಳು ಭಾಗಿ

    2026ರ ಫಿಫಾ ವಿಶ್ವಕಪ್‌ಗೆ ಮೂರು ರಾಷ್ಟ್ರಗಳ ಆತಿಥ್ಯ – 32 ರಾಷ್ಟ್ರಗಳ 48 ತಂಡಗಳು ಭಾಗಿ

    ವಾಷಿಂಗ್ಟನ್: 2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಇದೇ ಮೊದಲ ಬಾರಿಗೆ ಮೂರು ರಾಷ್ಟ್ರಗಳ ಆತಿಥ್ಯದಲ್ಲಿ ನಡೆಯಲಿದೆ. ಈಗಾಗಲೇ ಫಿಫಾ ಅಧ್ಯಕ್ಷ ಗಿಲಾನಿ ಇನ್ ಫ್ಯಾಂಟಿನೊ 2026ರ ವಿಶ್ವಕಪ್ ಟೂರ್ನಿಗೆ ಸಿದ್ಧತೆಗಳನ್ನು ಆರಂಭಿಸುವಂತೆ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊಗೆ ಸೂಚಿಸಿದ್ದಾರೆ.

    ಮೂರು ರಾಷ್ಟ್ರಗಳ ಆತಿಥ್ಯದಲ್ಲಿ ನಡೆಯುವುದರಿಂದ ಈ ಬಾರಿ ವಿಶ್ವಕಪ್ ಟೂರ್ನಿಯ ತಂಡಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಈ ಬಾರಿ 32 ರಾಷ್ಟ್ರಗಳಿಂದ 48 ತಂಡಗಳು ಪಾಲ್ಗೊಳ್ಳಲಿದ್ದು, 1994ರ ಫೈನಲಿಸ್ಟ್ ಉತ್ತರ ಅಮೆರಿಕ ತಂಡ ಇದೇ ಮೊದಲ ಬಾರಿ ವಿಶ್ವಕಪ್ ಅಖಾಡಕ್ಕೆ ಇಳಿಯಲಿದೆ. ಇದನ್ನೂ ಓದಿ: ಏಕದಿನ ಕ್ರಿಕೆಟ್‍ನಲ್ಲಿ ದಾಖಲೆಯ 498 ರನ್ ಸಿಡಿಸಿದ ಇಂಗ್ಲೆಂಡ್ – ಮೈದಾನದೆಲ್ಲೆಡೆ ಸಿಕ್ಸರ್, ಬೌಂಡರಿಗಳ ಅಬ್ಬರ

    ಅಮೆರಿಕದ 11, ಮೆಕ್ಸಿಕೊದ 3, ಕೆನಡಾದ 2 ಮೈದಾನಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಒಟ್ಟಾರೆ 80 ಪಂದ್ಯಗಳ ಪೈಕಿ 60 ಪಂದ್ಯಗಳು ಅಮೆರಿಕದಲ್ಲಿ, ಮೆಕ್ಸಿಕೊ ಹಾಗೂ ಕೆನಡಾದಲ್ಲಿ ತಲಾ 10 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಫೈನಲ್, ಸೆಮಿಫೈನಲ್ ಮತ್ತು ಕ್ವಾರ್ಟರ್ ಫೈನಲ್ ಪಂದ್ಯಗಳೂ ಸೇರಿವೆ.

    Live Tv

  • 5 ರಾಜ್ಯಗಳಲ್ಲಿ ಕೋವಿಡ್ ಹೆಚ್ಚಳ- ಭಾರತಕ್ಕೆ 4ನೇ ಅಲೆಯ ಮುನ್ಸೂಚನೆ

    ನವದೆಹಲಿ: ಈಗಾಗಲೇ ಚೀನಾ ದೇಶದ ಶಾಂಘೈನಗರದಲ್ಲಿ ಕೋವಿಡ್ ಹೆಚ್ಚಳವಾಗಿದ್ದು ಹಿರಿಯ ನಾಗರಿಕರ ಸರಣಿ ಸಾವುಗಳು ಸಂಭವಿಸುತ್ತಿದೆ. ಕೊರೊನಾ ನಿಯಂತ್ರಿಸಲು ಚೀನಾ ಸರ್ಕಾರವೂ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಇದೀಗ ಭಾರತದಲ್ಲೇ 5 ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗಿರುವುದು ನಾಲ್ಕನೇ ಅಲೆಯ ಮುನ್ಸೂಚನೆ ನೀಡಿದಂತಾಗಿದೆ. ‌

    CORONA CHINA

    ಚೀನಾ, ಅಮೆರಿಕ ಮತ್ತು ಯೂರೋಪ್‌ನ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಕೊರೊನಾ ವೈರಸ್‌ನ ರೂಪಾಂತರ ತಳಿಯಾದ ಓಮೈಕ್ರಾನ್‌ನ ಉಪ ತಳಿಯಾದ XE ತಳಿಯೂ ಸಹ ಭಾರತದಲ್ಲಿ 2 ಪ್ರಕರಣಗಳು ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಭಾರತದ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಇದನ್ನೂ ಓದಿ: XE ರೂಪಾಂತರಿ ಮಾರಣಾಂತಿಕವಲ್ಲ: ಮಹಾರಾಷ್ಟ್ರ ಸಚಿವ

    ದೇಶದ ಕೇರಳ, ಹರಿಯಾಣ, ಮಹಾರಾಷ್ಟ್ರ ದೆಹಲಿ ಹಾಗೂ ಮಿಜೋರಾಂಗಳಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರವು ಆಯಾ ರಾಜ್ಯ ಸರ್ಕಾರಗಳಿಗೆ ಸೂಚಿಸಿ ಪತ್ರ ಬರೆದಿದೆ. ಕೋವಿಡ್ ಹೆಚ್ಚಳದ ಬಗ್ಗೆ ನಿಗಾ ವಹಿಸಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಪ್ರದೇಶಗಳಲ್ಲಿ ನಿಯಂತ್ರಣಾ ಕ್ರಮ ಕೈಗೊಳ್ಳಬೇಕು ಎಂದೂ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ:  26 ಮಿಲಿಯನ್ ಜನರ ಕೋವಿಡ್ ಪರೀಕ್ಷೆಗೆ ಸಾವಿರಾರು ಮಿಲಿಟರಿ, ವೈದ್ಯರನ್ನು ಶಾಂಘೈಗೆ ಕಳುಹಿಸಿದ ಚೀನಾ

    covid

    ಭಾರತದಲ್ಲಿ ವರದಿಯಾದ ಒಟ್ಟು ಹೊಸ ಪ್ರಕರಣಗಳಲ್ಲಿ ಶೇ 31.8ರಷ್ಟು. ಕೋವಿಡ್ ಪಾಸಿಟಿವಿಟಿ ದರ ಅಲ್ಲಿ ಶೇ.13.45 ರಿಂದ 15.53ಕ್ಕೆ ಹೆಚ್ಚಾಗಿದೆ. ಅಲ್ಲದೆ ಕಳೆದ ವಾರ ಕೇರಳದಲ್ಲಿ 2321 ಹೊಸ ಪ್ರಕರಣಗಳು ವರದಿಯಾಗಿವೆ. ಏ.1ಕ್ಕೆ ಅಂತ್ಯಗೊAಡ ಒಂದು ವಾರ ದೆಹಲಿಯಲ್ಲಿ 724ಪ್ರಕರಣಗಳು ವರದಿಯಾಗಿದ್ದವು. ಆದರೆ ಏಪ್ರಿಲ್ 8ರ ಹೊತ್ತಿಗೆ 826 ಹೊಸ ಪ್ರಕರಣಗಳು ವರದಿಯಾಗಿವೆ. ಪಾಸಿಟಿವಿಟಿ ದರದಲ್ಲಿ ಶೇ 0.51 ರಿಂದ 1.25ರಷ್ಟು ಹೆಚ್ಚಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

    ಭಾನುವಾರವೂ ಸಹ ಭಾರತದಾದ್ಯಂತ 1,054 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 29 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

  • ರಷ್ಯಾ, ಉಕ್ರೇನ್ ಯುದ್ದ – ಚೀನಾದ ಮಿಲಿಟರಿ ನೆರವು ಕೇಳಿದ ರಷ್ಯಾ

    ರಷ್ಯಾ, ಉಕ್ರೇನ್ ಯುದ್ದ – ಚೀನಾದ ಮಿಲಿಟರಿ ನೆರವು ಕೇಳಿದ ರಷ್ಯಾ

    ವಾಷಿಂಗ್ಟನ್: ಉಕ್ರೇನ್ ವಿರುದ್ಧ ದಾಳಿ ನಡೆಸುತ್ತಿರುವ ರಷ್ಯಾ ತನ್ನ ಯುದ್ಧವನ್ನು ಮುಂದುವರಿಸಲು ಡ್ರೋನ್‍ಗಳು ಸೇರಿದಂತೆ ಮಿಲಿಟರಿ ನೆರವು ನೀಡುವಂತೆ ರಷ್ಯಾ ಚೀನಾವನ್ನು ಕೇಳಿದೆ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ್ದರಿಂದ ಅಮೆರಿಕ ಮತ್ತು ಯುರೋಪಿಯನ್ ಮಿತ್ರರಾಷ್ಟ್ರಗಳು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ರಷ್ಯಾದ ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ರಷ್ಯಾದ ಹಲವಾರು ಪ್ರಮುಖ ಬ್ಯಾಂಕ್‍ಗಳ ಮೇಲೆ ನಿರ್ಬಂಧ ಹೇರಿತು. ಜೊತೆಗೆ ರಷ್ಯಾವನ್ನು SWIFT ಹಣಕಾಸು ವ್ಯವಸ್ಥೆಯಿಂದ ಹೊರಹಾಕಿದೆ.

    ಸದ್ಯ ವಾಷಿಂಗ್ಟನ್‍ನಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರ ಲಿಯು ಪೆಂಗ್ಯು ರಷ್ಯಾಕ್ಕೆ ಸಹಾಯ ಮಾಡಲು ಚೀನಾ ಸಿದ್ಧವಾಗಿರುವ ಬಗ್ಗೆ ಯಾವುದೇ ಮಾಹಿತಿಗಳು ತನಗೆ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.  ಇದನ್ನೂ ಓದಿ: ಜಮ್ಮು, ಕಾಶ್ಮೀರ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

    ನನಗೆ ಈ ಬಗ್ಗೆ ಯಾವುದು ಸಹ ತಿಳಿದಿಲ್ಲ. ಉಕ್ರೇನ್ ಪರಿಸ್ಥಿತಿ ನಿಜಕ್ಕೂ ಅಸ್ತವ್ಯಸ್ತವಾಗಿದೆ. ಚೀನಾ ಉಕ್ರೇನ್‍ಗೆ ಮಾನವೀಯ ನೆರವು ನೀಡುತ್ತಿದೆ ಅದನ್ನು ಮುಂದುವರಿಸುತ್ತದೆ. ಈಗ ಹೆಚ್ಚಿನ ಆದ್ಯತೆ ಉದ್ವಿಗ್ನ ಪರಿಸ್ಥಿತಿಯನ್ನು ಉಲ್ಬಣಗೊಳಿಸುವುದಾಗಿದೆ. ಚೀನಾವು ಸಂಯಮದಿಂದ ಮಾನವೀಯತೆಯನ್ನು ತೋರಿಸುವಂತೆ ಕರೆ ನೀಡುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಭಗವಂತ್ ಮಾನ್

  • ಉಕ್ರೇನ್‌ಗೆ ಸಹಕಾರ ನೀಡುತ್ತೇವೆ ಎಂದಿದ್ದ ಅಮೆರಿಕ ಸೇನೆಯನ್ನು ಕಳುಹಿಸಿಲ್ಲ ಯಾಕೆ?

    ಉಕ್ರೇನ್‌ಗೆ ಸಹಕಾರ ನೀಡುತ್ತೇವೆ ಎಂದಿದ್ದ ಅಮೆರಿಕ ಸೇನೆಯನ್ನು ಕಳುಹಿಸಿಲ್ಲ ಯಾಕೆ?

    ವಾಷಿಂಗ್ಟನ್‌: ಉಕ್ರೇನ್‌ ಜೊತೆ ನಾವಿದ್ದೇವೆ ಎಂದು ಭಾಷಣ ಮೂಲಕ ಧೈರ್ಯ ತುಂಬಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ತನ್ನ ಸೈನ್ಯವನ್ನು ಯಾಕೆ ಕಳುಹಿಸಿಲ್ಲ ಎಂಬ ವಿಚಾರ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

    ತನ್ನ ಎದುರಾಳಿಯಿಂದ ಬೇರೊಂದು ದೇಶಕ್ಕೆ ಅಪಾಯವಾದಾಗ ಕೂಡಲೇ ಸೈನ್ಯವನ್ನು ಕಳುಹಿಸಿ ಬೆದರಿಕೆ ಹುಟ್ಟಿಸುತ್ತಿದ್ದ ವಿಶ್ವದ ದೊಡ್ಡಣ್ಣ ಅಮೆರಿಕ ರಷ್ಯಾ ಉಕ್ರೇನ್‌ ವಿಚಾರದಲ್ಲಿ ಬಹಳ ಎಚ್ಚರಿಕೆ ಹೆಜ್ಜೆಯನ್ನು ಇಡುತ್ತಿದೆ. ಆರ್ಥಿಕವಾಗಿ ರಷ್ಯಾಗೆ ದಿಗ್ಭಂದನ ಹೇರಿದ ಅಮೆರಿಕ ಇಂದು 350 ಮಿಲಿಯನ್ ಡಾಲರ್ ನೆರವನ್ನು ಉಕ್ರೇನ್‌ಗೆ ನೀಡುವುದಾಗಿ ಘೋಷಿಸಿದೆ. ಇದನ್ನೂ ಓದಿ: ಉಕ್ರೇನ್‌ಗೆ 4,503 ಕೋಟಿ ರೂ. ಭದ್ರತಾ ನೆರವು ಘೋಷಿಸಿದ ಅಮೆರಿಕ

     

    ಯಾಕೆ ಸೈನ್ಯ ಕಳುಹಿಸಲ್ಲ?
    ಅಮೆರಿಕ ಏನೇ ಮಾಡಿದರೂ ಅದರಿಂದ ತನಗೇನು ಲಾಭ ಎಂದು ನೋಡುತ್ತದೆ. ಎಷ್ಟು ಬಿಸಿನೆಸ್‌ ಆಗುತ್ತದೆ ಎಂಬ ಲೆಕ್ಕಾಚಾರ ಹಾಕುತ್ತದೆ. ಆದರೆ ಈಗಾಗಲೇ ಹಲವು ದೇಶಗಳಲ್ಲಿ ಸೈನಿಕ ಕಾರ್ಯಾಚರಣೆಗಳನ್ನು ಮಾಡಿ ಕೈಸುಟ್ಟಿಕೊಂಡಿರುವ ಅಮೆರಿಕ ಈಗ ರಷ್ಯಾ ವಿಚಾರದಲ್ಲಿ ಬಹಳ ಆಲೋಚನೆ ಮಾಡಿ ನಿರ್ಧಾರ ಪ್ರಕಟಿಸುತ್ತದೆ.

    ಉಕ್ರೇನ್‌ಗೆ ಸೇನೆ ಕಳುಹಿಸಿದರೆ ರಾಷ್ಟ್ರೀಯ ಪ್ರಯೋಜನಗಳಿಲ್ಲ. ಬೇರೆ ದೇಶದಲ್ಲಿ ಸೈನ್ಯ ಹೋರಾಡಿದರೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎನ್ನುವ ಪಾಠವನ್ನು ಅಮೆರಿಕ ಈಗಾಗಲೇ ಕಲಿತುಕೊಂಡಿದೆ. ಒಂದು ವೇಳೆ ತಾನು ಯುದ್ಧಕ್ಕೆ ಕೈ ಹಾಕಿದರೆ ರಷ್ಯಾ ಮತ್ತಷ್ಟು ಆಕ್ರಮಣಕಾರಿಯಾಗಬಹುದು ಎನ್ನುವುದು ಅಮೆರಿಕಕ್ಕೆ ಗೊತ್ತಿದೆ. ರಷ್ಯಾ ಬಳಿ ಇರುವ ಶಸ್ತ್ರಾಸ್ತ್ರಗಳ ಅರಿವು ಅಮೆರಿಕಕ್ಕೆ ತಿಳಿದಿದೆ. ಉಕ್ರೇನ್ ನ್ಯಾಟೋ ಸದಸ್ಯ ದೇಶವಲ್ಲ ಅಷ್ಟೇ ಅಲ್ಲದೇ ಯಾವುದೇ ಒಪ್ಪಂದಗಳು ಇಲ್ಲ.  ಇದನ್ನೂ ಓದಿ: Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?

    ತಾಲಿಬಾನ್‌ ಹಿಮ್ಮೆಟ್ಟಿಸುವುದಾಗಿ ಶಪಥಗೈದ ಅಮೆರಿಕ ಕೊನೆಗೆ ತಾಲಿಬಾನ್‌ ಜೊತೆಗೆ ಮಾತುಕತೆ ನಡೆಸಿ ಸೈನ್ಯವನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ಪಡೆದುಕೊಂಡಿದೆ. ಸೈನ್ಯವನ್ನು ಕಳುಹಿಸಿ ರಷ್ಯಾ ವಿರುದ್ಧ ಗೆದ್ದರೂ ಉಕ್ರೇನ್‌ನಲ್ಲಿ ಮತ್ತೆ ಅಮೆರಿಕ ಯೋಧರು ಇರಲೇಬೇಕಾಗುತ್ತದೆ. ಈಗಾಗಲೇ ಕೋವಿಡ್‌ನಿಂದಾಗಿ ಅಮೆರಿಕದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಹೀಗಿರುವಾಗ ಮತ್ತೆ ಸಮಸ್ಯೆ ಎದುರಿಸಲು ಅಮೆರಿಕಕ್ಕೆ ಇಷ್ಟವಿಲ್ಲ.

  • Russia Ukraine War – ಯಾವ ರಾಷ್ಟ್ರದ ಬೆಂಬಲ ಯಾರಿಗೆ?

    Russia Ukraine War – ಯಾವ ರಾಷ್ಟ್ರದ ಬೆಂಬಲ ಯಾರಿಗೆ?

    ರಡನೇ ಜಾಗತಿಕ ಯುದ್ಧದ ಬಳಿಕ ನಡೆದ ಶೀತಲ ಸಮರದಲ್ಲಿ ಜಗತ್ತು ಎರಡು ಭಾಗಗಳಾಗಿ ವಿಭಜನೆಗೊಂಡಿತ್ತು. ಒಂದು ಗುಂಪಿಗೆ ಅಮೆರಿಕ ನಾಯಕತ್ವ ವಹಿಸಿದರೆ ಮತ್ತೊಂದಕ್ಕೆ ಸೋವಿಯತ್ ಯೂನಿಯನ್ ನಾಯಕತ್ವ ವಹಿಸಿತ್ತು. ಯುಎಸ್‍ಎಸ್‍ಆರ್‌ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು 1949ರಲ್ಲಿ ಅಮೆರಿಕ, ಕೆನಡಾ ಸೇರಿ 12 ದೇಶಗಳು ನಾರ್ತ್ ಅಟ್ಲಾಂಟಿಕ್ ಟ್ರೀಟಿ(ನ್ಯಾಟೋ) ಆರಂಭಿಸಿದವು. ಸದ್ಯ ನ್ಯಾಟೋ ಸದಸ್ಯ ರಾಷ್ಟ್ರಗಳ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.

    ಈ ಪೈಕಿ ಯಾವುದೇ ದೇಶದ ಮೇಲೆ ದಾಳಿ ನಡೆದರೂ ಅದು ನನ್ನ ಸಂಸ್ಥೆ ಮೇಲಿನ ದಾಳಿ ಎಂದು ಭಾವಿಸಲಾಗುತ್ತದೆ ಎಂದು ಆರಂಭದಲ್ಲಿಯೇ ನ್ಯಾಟೋ ಘೋಷಿಸಿತ್ತು. ಆದರೆ 1991ರ ಡಿಸೆಂಬರ್‌ನಲ್ಲಿ ಯುಎಸ್‍ಎಸ್‍ಆರ್ ಛಿದ್ರವಾದಾಗ ಪರಿಸ್ಥಿತಿ ಬದಲಾಯಿತು. ಅಮೆರಿಕ ವಿಶ್ವದ ದೊಡ್ಡಣ್ಣನಾಗಿ ಅವತರಿಸಿತು.

    ರಷ್ಯಾ ಪರ ದೇಶಗಳು
    ಭಾರತ
    ರಷ್ಯಾಗೆ ಬಹಿರಂಗವಾಗಿ ಬೆಂಬಲ ಘೋಷಿಸಿಲ್ಲ. ಆದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾದ ನಿಲುವನ್ನು ಖಂಡಿಸಿಲ್ಲ. ಉಕ್ರೇನ್ ಸಾರ್ವಭೌಮತ್ವದ ಬಗ್ಗೆ ಮಾತನಾಡಿಲ್ಲ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎನ್ನುತ್ತಿದೆ. 2014ರಲ್ಲಿ ರಷ್ಯಾ ಕ್ರಿಮಿಯಾವನ್ನು ವಶಕ್ಕೆ ಪಡೆದಾಗಲೂ ಭಾರತ ವಿರೋಧಿಸಿರಲಿಲ್ಲ. ಭಾರತದ ಸ್ಥಿತಿ ಹೇಗಿದೆ ಎಂದರೆ ಅಮೆರಿಕ ಜೊತೆ ನಿಲ್ಲುತ್ತಿಲ್ಲ. ರಷ್ಯಾ ಜೊತೆಗೂ ಬಹಿರಂಗವಾಗಿ ಕೈಜೋಡಿಸುತ್ತಿಲ್ಲ. ಯಾರನ್ನು ಬಿಟ್ಟುಕೊಡುವ ಸ್ಥಿತಿಯಲ್ಲಿ ಭಾರತ ಇಲ್ಲ.  ಇದನ್ನೂ ಓದಿ: ಮೆಟ್ರೋ ಸುರಂಗದಲ್ಲಿ ಅವಿತಿದ್ದಾರೆ ಕನ್ನಡಿಗರು!

    ಚೀನಾ
    ನ್ಯಾಟೋ ವಿಸ್ತರಣೆ ಚೀನಾಗೂ ಇಷ್ಟವಿಲ್ಲ. ಇದನ್ನು ಬಹಿರಂಗವಾಗಿ ರಷ್ಯಾ ಜೊತೆ ಸೇರಿ ಘೋಷಿಸಿದೆ. ಈಗ ನಡೆಯುತ್ತಿರುವ ಯುದ್ಧವನ್ನು ಯುದ್ಧ ಎಂದೇ ಚೀನಾ ಪರಿಗಣಿಸಿಲ್ಲ.

    ಪಾಕಿಸ್ತಾನ
    ರಷ್ಯಾ ಪ್ರವಾಸದಲ್ಲಿ ಇಮ್ರಾನ್ ಇದ್ದಾರೆ. ಯುದ್ಧ ಶುರುವಾಗಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಎಂಥಾ ಟೈಮಲ್ಲಿ ಬಂದಿದ್ದೇನೆ.. ಸಿಕ್ಕಾಪಟ್ಟೆ ಎಕ್ಸೈಟ್ ಆಗ್ತಿದೆ ಎಂದು ಇಮ್ರಾನ್ ಹೇಳಿದ್ದಾರೆ.

    ಕ್ರೊವೇಷಿಯಾ
    2009ರಲ್ಲಿಯೇ ನ್ಯಾಟೋವನ್ನು ಸೇರಿದೆ. ಆದರೆ ಗಡಿ ಭದ್ರತೆ ವಿಚಾರದಲ್ಲಿ ಕ್ರೊವೇಷಿಯಾ ರಷ್ಯಾ ಪರವಾಗಿದೆ. ಜೊತೆಗೆ ಮೊನ್ನೆ ವಿಶ್ವಸಂಸ್ಥೆಯಲ್ಲಿ, ಉಕ್ರೇನ್ ದೇಶವನ್ನು ಮೂರು ಭಾಗ ಮಾಡಿದ ರಷ್ಯಾ ನಿಲುವನ್ನು ಖಂಡಿಸಿದೆ.

    ಅಜರ್‌ಬೈಜನ್‌
    ಅಜರ್ ಬೈಜಾನ್ ಅಧ್ಯಕ್ಷರು ರಷ್ಯಾ ಪ್ರವಾಸದಲ್ಲಿದ್ದು, ರಷ್ಯಾದ ಎಲ್ಲಾ ಕ್ರಮಗಳಿಗೆ ಭೇಷರತ್ ಬೆಂಬಲ ನೀಡಿದೆ. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿದ ಉಕ್ರೇನ್

    ಉಕ್ರೇನ್ ಪರ ದೇಶಗಳು
    ಅಮೆರಿಕ, ಬ್ರಿಟನ್, ಜರ್ಮನಿ, ಆಸ್ಟ್ರೇಲಿಯಾ, ಫ್ರಾನ್ಸ್, ರೋಮೆನಿಯಾ, ಬಲ್ಗೇರಿಯಾ, ಸ್ಲೋವೇಕಿಯಾ, ಲಾಟ್ವೀಯಾ, ಎಸ್ಟೋನಿಯಾ,ಲಿಥುವೇನಿಯಾ, ಆಲ್ಬೇನಿಯಾ

  • ಒಂದೇ ವೇದಿಕೆಯಲ್ಲಿ ನವರಸ ನಾಯಕ ಹಾಗೂ ವಿದೇಶಿ ಕನ್ನಡಿಗರು: ಗ್ರ್ಯಾಂಡ್ ಸಕ್ಸಸ್ ಕಂಡ ವರ್ಚ್ಯುಯಲ್ ಕಾರ್ಯಕ್ರಮ..!!

    ಒಂದೇ ವೇದಿಕೆಯಲ್ಲಿ ನವರಸ ನಾಯಕ ಹಾಗೂ ವಿದೇಶಿ ಕನ್ನಡಿಗರು: ಗ್ರ್ಯಾಂಡ್ ಸಕ್ಸಸ್ ಕಂಡ ವರ್ಚ್ಯುಯಲ್ ಕಾರ್ಯಕ್ರಮ..!!

    ವರಸ ನಾಯಕ ಜಗ್ಗೇಶ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ‘ತೋತಾಪುರಿ’ ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ಸಿಕ್ಕಾಗಿದೆ, ಸಾಕಷ್ಟು ಕ್ರೇಜ್ ಕೂಡ ಸೃಷ್ಟಿಯಾಗಿದೆ. ಅದರ ಜೊತೆಗೆ ಬಾಗ್ಲು ತೆಗಿ ಮೇರಿ ಜಾನ್ ಸೂಪರ್ ಡೂಪರ್ ಹಿಟ್ ಆಗಿದೆ. ಈ ಖುಷಿಯನ್ನು ಸೆಲೆಬ್ರೇಟ್ ಮಾಡಲು ಅನಿವಾಸಿ ಕನ್ನಡಿಗರು ನವರಸ ನಾಯಕನ ಜೊತೆ ಒಟ್ಟಾಗಿದ್ದು ಈಗ ನಯಾ ಸಮಾಚಾರ. ಎಸ್, ವಿದೇಶದಲ್ಲಿರುವ ಕನ್ನಡಿಗರು, ಜಗ್ಗೇಶ್ ಅಭಿಮಾನಿಗಳು ಇಂದು ಗ್ರ್ಯಾಂಡ್ ವರ್ಚ್ಯುಯಲ್ ಕಾಮಿಡಿ ಕಾರ್ಯಕ್ರಮ ಹಮ್ಮಿಕೊಂಡು ನವರಸ ನಾಯಕ ಜಗ್ಗೇಶ್ ಜೊತೆ ಮಾತುಕತೆ ನಡೆಸಿದ್ದಾರೆ.

    ‘ಗ್ರ್ಯಾಂಡ್ ವರ್ಚ್ಯುಯಲ್ ಕಾಮಿಡಿ’ ಹೆಸರಿಗೆ ತಕ್ಕಂತೆ ಸಖತ್ ಅದ್ಧೂರಿಯಾಗಿ ನೆರವೇರಿದ್ದು, ಬೃಹತ್ ಸೆಟ್ ನಲ್ಲಿ ಅರಳಿದ ಎಲ್ ಇ ಡಿ ಪರದೆ ಮೇಲೆ ಒಂದು ಕಡೆ ನವರಸ ನಾಯಕ ಜಗ್ಗೇಶ್ ತಮ್ಮ ಸಿನಿ ಜರ್ನಿಯ ಅದ್ಭುತ ಘಟನೆಗಳನ್ನು ಅಭಿಮಾನಿಗಳ ಮುಂದೆ ತೆರೆದಿಡಲು ಸಜ್ಜಾಗಿದ್ರೆ, ಇತ್ತ ವಿವಿಧ ದೇಶಗಳ ಕನ್ನಡ ಮನಸ್ಸುಗಳು ಖ್ಯಾತ ನಟನ ಸಿನಿ ಜರ್ನಿಯ ಬಗ್ಗೆ ತಿಳಿದುಕೊಳ್ಳಲು ಕಾತರರಾಗಿದ್ರು. ಸುಮಾರು ಮೂರು ಗಂಟೆಗಳ ಕಾಲ ನಡೆದ ಈ ವರ್ಚ್ಯುಯಲ್ ಕಾರ್ಯಕ್ರಮದಲ್ಲಿ ಜಗ್ಗೇಶ್ ತೋತಾಪುರಿ ಸಿನಿಮಾ, ತಮ್ಮ ಫ್ಯಾಮಿಲಿ, ಕನ್ನಡ ಭಾಷೆ, ಹೋರಾಟ, ಡಾ.ರಾಜ್‌ಕುಮಾರ್‌ ಅವರೊಂದಿಗಿನ ಒಡನಾಟ, ಪುನೀತ್ ರಾಜ್ ಕುಮಾರ್ ಜೊತೆ ಸಾಗಿದ ದಿನಗಳನ್ನು ಮೆಲುಕು ಹಾಕಿದರು.

    ಡ್ರೀಮ್ ಮೀಡಿಯಾ ಕೆನಡ ಆಯೋಜಿಸಿದ್ದ ಈ ವರ್ಚ್ಯುಯಲ್ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದ್ದು ಕಾರ್ಯಕ್ರಮದಲ್ಲಿ ಸಿಂಚನ ಕನ್ನಡ ಬಳಗ, ಕಸ್ತೂರಿ ಕನ್ನಡ ಅಸೋಸಿಯೇಷನ್, ಹ್ಯಾರಿಸ್ಬರ್ಗ್ ಕನ್ನಡ ಕಸ್ತೂರಿ, ಮಲ್ಲಿಗೆ ಇಂಡಿಯಾಪೊಲೀಸ್, ನವೋದಯ, ಬೃಂದಾವನ ಕನ್ನಡ ಕೂಟ-ನ್ಯೂ ಜೆರ್ಸಿ, ಧನಿ ಮೀಡಿಯಾ, ನ್ಯೂಯಾರ್ಕ್ ಕನ್ನಡ ಕೂಟ, ಅಟ್ಲಾಂಟಾದ ನೃಪತುಂಗ, ಸಾಕ್ರಮೆಂಟೋ ಕನ್ನಡ ಸಂಘ ಸೇರಿದಂತೆ ಹಲವಾರು ಕನ್ನಡಿಗರು ನವರಸ ನಾಯಕನ ಜೊತೆ ಮಾತುಕತೆ ನಡೆಸಿ ಸಂತಸಪಟ್ಟಿದ್ದಾರೆ.

    ವಿಜಯಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬರ್ತಿರೋ ‘ತೋತಾಪುರಿ’ ಸಿನಿಮಾ ಬಿಡುಗಡೆಗೆ ಸಕಲ ತಯಾರಿಯಲ್ಲಿದ್ದು, ಈ ನಡುವೆ ಈ ಚಿತ್ರದ ಬಾಗ್ಲು ತೆಗಿ ಮೇರಿ ಜಾನ್ ಸಾಂಗ್ ಆರು ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡು ಸಖತ್ ವೈರಲ್ ಕೂಡ ಆಗಿದೆ. ಸಾಂಗ್ ಭರ್ಜರಿ ಸಕ್ಸಸ್ ಆಗಿರೋದು, ಈ ಖುಷಿಯನ್ನು ವಿದೇಶಿ ಕನ್ನಡಿಗರು ಸೆಲೆಬ್ರೇಟ್ ಮಾಡಿರೋದು ಇಡೀ ಟೀಂಗೆ ಹೊಸ ಎನರ್ಜಿ ನೀಡಿದೆ. ನಿರ್ಮಾಪಕ ಕೆ.ಎ. ಸುರೇಶ್ ಮೋನಿಫ್ಲಿಕ್ಸ್ ಸ್ಟುಡಿಯೋಸ್ ಹಾಗೂ ಸುರೇಶ್ ಆರ್ಟ್ಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣ ಮಾಡಿದ್ದು, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಚಿತ್ರದಲ್ಲಿ ನಾಯಕ ನಟಿಯಾಗಿ ಅದಿತಿ ಪ್ರಭುದೇವ ಮಿಂಚಿದ್ದಾರೆ. ಡಾಲಿ ಧನಂಜಯ್, ಸುಮನ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಚಿತ್ರದ ತಾರಾ ಬಳಗವೇ ಇದೆ.

  • ಮನೆಯ ಮೇಲೆ ಲ್ಯಾಂಡಿಂಗ್‌ – ಅಮೆರಿಕ ಸೇನೆಗೆ ಹೆದರಿ ಐಸಿಸ್‌ ಮುಖ್ಯಸ್ಥ ಆತ್ಮಾಹುತಿ

    ಮನೆಯ ಮೇಲೆ ಲ್ಯಾಂಡಿಂಗ್‌ – ಅಮೆರಿಕ ಸೇನೆಗೆ ಹೆದರಿ ಐಸಿಸ್‌ ಮುಖ್ಯಸ್ಥ ಆತ್ಮಾಹುತಿ

    ಅಟ್ಮೆ​ಹ್‌​: ಅಮೆರಿಕ ಸೇನೆಯ ಭಾರೀ ಕಾರ್ಯಾಚರಣೆಗೆ ಹೆದರಿ ಐಸಿಸ್‌(ISIS) ಮುಖ್ಯಸ್ಥ ಅಬು ಇಬ್ರಾಹಿಂ ಅಲ್ ಹಾಶಿಮಿ ಅಲ್ ಖುರೈಶಿ (Abu Ibrahim al Hashimi al Qurayshi) ಆತ್ಮಾಹುತಿ ಮಾಡಿಕೊಂಡು ಸಾವನ್ನಪ್ಪಿದ್ದಾನೆ.

    ಈ ಹಿಂದೆ 2011 ರಲ್ಲಿ ಪಾಕಿಸ್ತಾನದ ಅಬೋಟಾಬಾದ್ ನಗರಕ್ಕೆ ರಹಸ್ಯವಾಗಿ ನುಗ್ಗಿ ಅಲ್‌ಖೈದಾ ಮುಖ್ಯಸ್ಥ ಒಸಾಮಾ ಬಿನ್‌ ಲಾಡೆನ್‌ ಹತ್ಯೆಯನ್ನು ಹೇಗೆ ಮಾಡಲಾಗಿತ್ತೋ ಅದೇ ರೀತಿಯ ಕಾರ್ಯಾಚರಣೆಯನ್ನು ಅಮೆರಿಕ ಸೇನೆ ಮತ್ತೊಮ್ಮೆ ನಡೆಸಿದೆ. ಈ ಕಾರ್ಯಾಚರಣೆಗೆ ಹೆದರಿ ಅಲ್‌ ಖುರೈಶಿ ಆತ್ಮಹತ್ಯೆ ಮಾಡಿಕೊಂಡಿದ್ದು ಮಾತ್ರವಲ್ಲದೇ ತನ್ನ ಕುಟುಂಬ ಸದಸ್ಯರನ್ನೂ ಸಾಯಿಸಿದ್ದಾನೆ. ಇದನ್ನೂ ಓದಿ: ಚೀನಾ ಒಲಿಂಪಿಕ್ಸ್‌ಗೆ ಭಾರತ ಬಹಿಷ್ಕಾರ – ದಿಟ್ಟ ನಿರ್ಧಾರ ತೆಗೆದುಕೊಂಡ ಭಾರತೀಯ ವಿದೇಶಾಂಗ ಇಲಾಖೆ

    ನಡೆದಿದ್ದು ಏನು?
    ಸಿರಿಯಾದ(Syria) ಇದ್ಲಿಬ್‌ ಪ್ರಾಂತ್ಯದ ಅಟ್ಮೇಹ್‌ ನಗರದ ಮನೆಯೊಂದರಲ್ಲಿ ಇಬ್ರಾಹಿಂ ಅಡಗಿದ್ದಾನೆ ಎಂಬ ಖಚಿತ ಮಾಹಿತಿ ಅಮೆರಿಕ ಸೇನೆಗೆ ಸಿಕ್ಕಿತ್ತು. ಈ ಮಾಹಿತಿ ಆಧಾರಿಸಿ ವಿಶೇಷ ಪಡೆಗಳೊಂದಿಗೆ ಬುಧವಾರ ರಾತ್ರಿ ರಹಸ್ಯವಾಗಿ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ದಾಳಿ ನಡೆಸಿದೆ.

    ಆಲಿವ್‌ ಮರಗಳಿಂದ ಸುತ್ತುವರೆದ 2 ಅಂತಸ್ತಿನ ಮನೆಯ ಮೇಲೆ ಹೆಲಿಕಾಪ್ಟರ್‌ನಲ್ಲಿ ಇಳಿದ ಅಮೆರಿಕ ಯೋಧರು ಶರಣಾಗುವಂತೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಆತನ ಅಂಗರಕ್ಷಕರು ಅಮೆರಿಕ ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಯೋಧರು ದಾಳಿ ನಡೆಸಿದ್ದು ಸುಮಾರು 2 ಗಂಟೆ ಗುಂಡಿನ ಚಕಮಕಿ ನಡೆದಿದೆ. ಇದನ್ನೂ ಓದಿ: Galwan Clash ಚೀನಾದ ಸುಳ್ಳು ಬಯಲು – 38 ಪಿಎಲ್‌ಎ ಯೋಧರು ಸಾವು

    ತಾನು ಸಿಕ್ಕಿಬೀಳುವುದು ಖಚಿತ ಎನ್ನುವುದು ತಿಳಿಯುತ್ತಿದ್ದಂತೆ ಇಬ್ರಾಹಿಂ ತನ್ನ ಕುಟುಂಬ ಸದಸ್ಯರೊಂದಿಗೆ ಬಾಂಬ್‌ ಸ್ಫೋಟಿಸಿಕೊಂಡು ಸಾವನ್ನಪ್ಪಿದ್ದಾನೆ.

    ಈ ವಿಚಾರದ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಶ್ವೇತ ಭವನದಲ್ಲಿ ಪ್ರತಿಕ್ರಿಯಿಸಿ, ಕಾರ್ಯಾಚರಣೆ ನಡೆಸಿ ಐಸಿಸ್‌ ಮುಖ್ಯಸ್ಥ ಅಬು ಇಬ್ರಾ​ಹಿಂನನ್ನು ಕೊಂದು ಹಾಕಿ​ದ್ದೇವೆ. ಈ ದಾಳಿಯಲ್ಲಿ ನಾಲ್ವರು ಮಹಿಳೆಯರು ಮತ್ತು 6 ಮಕ್ಕಳು ಸೇರಿ 13 ಮಂದಿ ಬಲಿ​ಯಾ​ಗಿದ್ದಾರೆ. ನಮ್ಮ ಸೇನೆಯ ಒಬ್ಬ ಯೋಧ ಸಹ ಗಾಯ​ಗೊಂಡಿಲ್ಲ. ಈ ಕಾರ್ಯಾ​ಚ​ರ​ಣೆ​ಯಲ್ಲಿ ತೊಡ​ಗಿದ್ದ ಯೋಧ​ರೆ​ಲ್ಲರೂ ಸುರ​ಕ್ಷಿ​ತ​ವಾಗಿ ಮರಳಿದ್ದಾರೆ ಎಂದು ತಿಳಿಸಿದ್ದಾರೆ.

    ಸಿರಿಯಾ ಕಾರ್ಯಾಚರಣೆ ವಿಶ್ವಾದ್ಯಂತ ಇರುವ ಭಯೋತ್ಪಾದಕರಿಗೆ ಬಲವಾದ ಸಂದೇಶವನ್ನು ರವಾನಿಸಿದೆ. ನಿಮ್ಮ ಹಿಂದೆ ಬಂದು ನಿಮ್ಮನ್ನು ಹೊಸಕಿ ಹಾಕುತ್ತೇವೆ. ನಾನು ಅಮೇರಿಕದ ಪ್ರಜೆಗಳನ್ನು ಭಯೋತ್ಪಾದಕ ಬೆದರಿಕೆಗಳಿಂದ ರಕ್ಷಿಸಲು ಪ್ರಯತ್ನಿಸುತ್ತೇನೆ. ಅಮೆರಿಕ ಪಡೆಗಳು ಯಾವಾಗಲೂ ಸನ್ನದ್ಧವಾಗಿರುತ್ತದೆ ಎಂದು ಬೈಡನ್‌ ತಿಳಿಸಿದರು.

    ಯಾರು ಈ ಇಬ್ರಾಹಿಂ?: ಐಸಿಸ್‌ ಮುಖ್ಯಸ್ಥನಾಗಿದ್ದ ಅಬು​ಬ​ಕರ್‌ ಅಲ್‌-ಬಗ್ದಾ​ದಿ​ಯನ್ನು 2019ರಲ್ಲಿ ಅಮೆರಿಕ ಸೇನೆ ಸಿರಿಯಾದಲ್ಲಿ ಹತ್ಯೆ ಮಾಡಿತ್ತು. ನಂತರ ಇಬ್ರಾಹಿಂ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದ.

  • ಪತಿ ಕಾಣೆಯಾಗಿದ್ದಾನೆಂದು ಅಂಧ ಮಹಿಳೆಯಿಂದ ಪೊಲೀಸರಿಗೆ ದೂರು – ಬೆಡ್‌ ಮೇಲೆಯೇ ಪತಿ ಶವ ಪತ್ತೆ!

    ಪತಿ ಕಾಣೆಯಾಗಿದ್ದಾನೆಂದು ಅಂಧ ಮಹಿಳೆಯಿಂದ ಪೊಲೀಸರಿಗೆ ದೂರು – ಬೆಡ್‌ ಮೇಲೆಯೇ ಪತಿ ಶವ ಪತ್ತೆ!

    ವಾಷಿಂಗ್ಟನ್: ಪತಿ ಕಾಣೆಯಾಗಿದ್ದಾನೆಂದು ಅಂಧ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಬೆಡ್ ಮೇಲೆಯೇ ಪತಿ ಶವವಾಗಿ ಪತ್ತೆಯಾಗಿರುವ ಪ್ರಸಂಗ ಅಮೆರಿಕದಲ್ಲಿ ನಡೆದಿದೆ.

    76 ವರ್ಷದ ವ್ಯಕ್ತಿಯೋರ್ವ ಗುಂಡಿನ ದಾಳಿಗೆ ಒಳಗಾಗಿ ಬೆಡ್ ಮೇಲೆ ಸಾವನ್ನಪ್ಪಿದ್ದಾನೆ. ಆದರೆ ಈ ವಿಚಾರ ಅಂಧ ಪತ್ನಿಗೆ ಗೊತ್ತಾಗಿಲ್ಲ. ತನ್ನ ಪತಿ ಕಾಣೆಯಾಗಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮನೆಗೆ ಬಂದು ನೋಡಿದಾಗಲೇ ತನ್ನ ಪತಿ ಕೊಲೆಯಾಗಿದ್ದಾನೆ ಎಂದು ಅಂಧ ಪತ್ನಿಗೆ ತಿಳಿದುಬಂದಿದೆ. ಇದನ್ನೂ ಓದಿ:  ಬಿಹಾರ್‌ ಸಿಎಂ ಪುತ್ರ ತನ್ನ ತಂದೆಗಿಂತಲೂ 5 ಪಟ್ಟು ಹೆಚ್ಚು ಶ್ರೀಮಂತ

    ದೂರು ಆಧರಿಸಿ ಪೊಲೀಸರು ಕಳೆದ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಅಮೆರಿಕಾದ ಲೂಸಿಯಾನದ ಲೀವಿ ರಸ್ತೆಯಲ್ಲಿರುವ ದಂಪತಿ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಕಾರು ಅಲ್ಲೇ ಇರುವುದನ್ನು ಗಮನಿಸಿದ ಪೊಲೀಸರು ನಂತರ ಮನೆಯನ್ನು ಪರಿಶೀಲಿಸಿದಾಗ ಕಿಟಕಿ ಗಾಜು ಒಡೆದು ಹೋಗಿರುವುದು ಕಂಡುಬಂದಿದೆ. ಆರೋಪಿಗಳು ಅನೇಕ ಬಾರಿ ಗುಂಡು ಹಾರಿಸಿರುವುದರಿಂದ ವ್ಯಕ್ತಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ನೀಡದಿದ್ದಕ್ಕೆ ಅಖಿಲೇಶ್‌ ಯಾದವ್‌ ಮೊದಲು ಕ್ಷಮೆಯಾಚಿಸಲಿ: ಯೋಗಿ ಆದಿತ್ಯನಾಥ್

    ಈ ಪ್ರಕರಣ ಸಂಬಂಧ ಇದೀಗ ತನಿಖೆ ಆರಂಭಿಸಲಾಗಿದೆ ಎಂದು ನಾಚಿಟೋಚೆಸ್ ಪ್ಯಾರೀಷ್ ಶೆರಿಫ್ ಕಚೇರಿ ತಿಳಿಸಿದೆ. ಆದರೆ ಇದುವರೆಗೂ ಯಾರನ್ನು ಸಹ ಬಂಧಿಸಲಾಗಿಲ್ಲ.

  • ಅಮೇರಿಕಾದಲ್ಲಿ ಓಮಿಕ್ರಾನ್ ಮೊದಲ ಪ್ರಕರಣ ಪತ್ತೆ – ದಕ್ಷಿಣ ಆಫಿಕ್ರಾದಿಂದ ಬಂದ ವ್ಯಕ್ತಿಗೆ ಸೋಂಕು

    ಅಮೇರಿಕಾದಲ್ಲಿ ಓಮಿಕ್ರಾನ್ ಮೊದಲ ಪ್ರಕರಣ ಪತ್ತೆ – ದಕ್ಷಿಣ ಆಫಿಕ್ರಾದಿಂದ ಬಂದ ವ್ಯಕ್ತಿಗೆ ಸೋಂಕು

    ವಾಷಿಂಗ್ಟನ್: ಅಮೇರಿಕಾದಲ್ಲಿ ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ದೃಢಪಟ್ಟ ಮೊದಲ ಪ್ರಕರಣ ವರದಿಯಾಗಿದೆ.

    ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಕ್ಯಾಲಿಫೋರ್ನಿಯಾಗೆ ಹಿಂತಿರುಗಿದ್ದ ಪ್ರಯಾಣಿಕ ಎರಡು ಡೋಸ್ ಲಸಿಕೆ ಪಡೆದಿದ್ದರೂ ಸಹ ಆತನಲ್ಲಿ ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ಪತ್ತೆಯಾಗಿದೆ. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಓಮಿಕ್ರಾನ್‌ ಮೊದಲ ಪ್ರಕರಣ ಪತ್ತೆ- ಉತ್ತರ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಸೋಂಕು!

    ಈ ಕುರಿತಂತೆ ಯುನೈಟೆಡ್ ಸ್ಟೇಟ್ಸ್‌ನ ದೇಶದ ಉನ್ನತ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೋನಿ ಫೌಸಿ ಸಂಶೋಧನೆ ನಡೆಸುವುದಾಗಿ ವೈಟ್ ಹೌಸ್‍ನಲ್ಲಿ ಘೋಷಿಸಿದ್ದಾರೆ. ಸೋಂಕಿತ ವ್ಯಕ್ತಿ ನವೆಂಬರ್ 22 ರಂದು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದು, ಈತನಿಗೆ ಕೊಂಚ ಸೋಂಕಿನ ರೋಗಲಕ್ಷಣಗಳು ಕಾಣಿಸಿಕೊಂಡಿದೆ.

    ಹೀಗಾಗಿ ಸೋಮವಾರ ಕೋವಿಡ್-19 ಪರೀಕ್ಷೆಗೆ ವ್ಯಕ್ತಿ ಒಳಗಾಗಿದ್ದಾರೆ. ಈ ವೇಳೆ ಕೊರೊನಾ ಸೋಂಕು ದೃಢಪಟ್ಟಿದೆ. ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಮಂಗಳವಾರ ಸಂಜೆ ರೋಗಿಯ ಮಾದರಿಯನ್ನು ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: OMICRON ಭೀತಿ- 30,000 ಬೆಡ್ ಸಜ್ಜು ಮಾಡಿದ ದೆಹಲಿ ಸರ್ಕಾರ

    ಆಂಥೋನಿ ಫೌಸಿ ಮತ್ತು ಇತರ ವೈದ್ಯಕೀಯ ತಜ್ಞರು ಅಮೆರಿಕನ್ನರಿಗೆ ಲಸಿಕೆಯನ್ನು ಪಡೆಯುವುದನ್ನು ಮುಂದುವರಿಸಬೇಕು ಮತ್ತು ಎರಡು ಡೋಸ್ ಲಸಿಕೆಯನ್ನು ಪಡೆಯುವಂತೆ ಒತ್ತಾಯಿಸಿದ್ದಾರೆ. ಲಸಿಕೆ ಪಡೆಯುವುದರಿಂದ ಅನಾರೋಗ್ಯ ಒಳಗಾಗುವ ಮತ್ತು ಸಾವಿನ ಅಪಾಯದಿಂದ ಪಾರಾಗಲು ಸಹಾಯಕವಾಗಿರುವುದಲ್ಲದೇ, ಓಮಿಕ್ರಾನ್ ರೂಪಾಂತರದ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ತಿಳಿಸಿದ್ದಾರೆ.