Tag: USA

  • ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಡೇಟಿಂಗ್ ಮಾಡಿ – ಪ್ರಮೋದ್ ಮುತಾಲಿಕ್

    ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಡೇಟಿಂಗ್ ಮಾಡಿ – ಪ್ರಮೋದ್ ಮುತಾಲಿಕ್

    ಧಾರವಾಡ: ಇತ್ತೀಚೆಗೆ ದೆಹಲಿಯಲ್ಲಿ (NewDelihi) ನಡೆದ ಭೀಕರ ಘಟನೆ ತಾಲಿಬಾನ್ (Taliban) ಕೃತ್ಯಕ್ಕಿಂತಲೂ ಕೆಟ್ಟದಾಗಿದೆ. ಆದ್ದರಿಂದ ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಪಾಠ ಕಲಿಯಬೇಕು. ಪ್ರೀತಿ (Love) ಮಾಡುವಾಗ, ಡೇಟಿಂಗ್ (Dating) ಮಾಡುವಾಗ ವಿಚಾರ ಮಾಡಿ ಮಾಡಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಸಲಹೆ ನೀಡಿದ್ದಾರೆ.

    ಧಾರವಾಡದಲ್ಲಿಂದು (Darwad) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ದೆಹಲಿಯಲ್ಲಿ ಲಿವಿಂಗ್ ಟುಗೆದರ್‌ನಲ್ಲಿದ್ದ (Live In RelationShip) ಗೆಳತಿಯನ್ನು 35 ಪೀಸ್‌ಗಳಾಗಿ ಮಾಡಿ ಹತ್ಯೆಮಾಡಿರುವ ಘಟನೆ ತಾಲಿಬಾನಿಗಳ (Taliban) ಕೃತ್ಯಕ್ಕಿಂತೂ ಕೆಟ್ಟದಾದದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೆನ್ನಾರ್ ನದಿ ನೀರು ಹಂಚಿಕೆ ವಿವಾದ – ನ್ಯಾಯಧಿಕರಣ ರಚನೆಗೆ ಕೇಂದ್ರದ ಒಲವು

    ಲವ್ ಜಿಹಾದ್‌ಗೆ (Love Jihad) ಬಲಿಯಾಗುವ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ನಾನು 15 ವರ್ಷಗಳಿಂದಲೂ ಎಚ್ಚರಿಕೆ ಕೊಡುತ್ತಲೇ ಬಂದಿದ್ದೇನೆ. ಇಷ್ಟೆಲ್ಲಾ ಎಚ್ಚರಿಕೆ ಕೊಟ್ಟರೂ ದೆಹಲಿಯಲ್ಲಿ ನಡೆದ ಇದೊಂದು ಘಟನೆ ದೊಡ್ಡ ದುರಂತವೇ ಸರಿ ಎಂದಿದ್ದಾರೆ. ಇದನ್ನೂ ಓದಿ: ಅಫ್ತಾಬ್‌ಗೆ ಮಂಪರು ಪರೀಕ್ಷೆ – ಪೊಲೀಸರಿಗೆ ಕೋರ್ಟ್‌ ಅನುಮತಿ

    ಹಿಂದೂ ಹುಡುಗಿಯರು ಇದರಿಂದ ಎಚ್ಚರಿಕೆಯ ಪಾಠ ಕಲಿಯಬೇಕು, ಯಾರ ಜೊತೆ ಪ್ರೀತಿ ಮಾಡುತ್ತಿದ್ದೇನೆ, ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಎಂಬ ಅರಿವಿರಬೇಕು. ದೆಹಲಿಯ ಘಟನೆಯ ನಂತರ ಆ ಯುವಕ ಮತ್ತೆ ನಾಲ್ಕು ಜನ ಹಿಂದೂ ಹುಡುಗಿಯರ ಜೊತೆ ಸುತ್ತಾಡಿದ್ದಾನೆ. ಅವನಿಗೆ ಗಲ್ಲು ಶಿಕ್ಷೆಯೇ ಅಂತಿಮ, ಕೋರ್ಟ್ ಸಹ ವಿಳಂಬ ಮಾಡದೆ, ಒಂದೇ ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿಸಿ ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಮೇಲಿಂದ ಮೇಲೆ ಮತಾಂತರ ಪ್ರಕ್ರಿಯೆ ನಡೆಯುತ್ತಿದೆ. ಈ ಹಿಂದೆ ಎರಡು ಪ್ರಕರಣಗಳು ನಡೆದಿದ್ದವು. ಇದೀಗ ಚಿಕ್ಕಲಗೇರಿ ಎನ್ನುವ ಸಣ್ಣ ಬಡ ಕುಟುಂಬದ ಮೇಲೆ ಮತಾಂತರ ಆಗಿದೆ. ಪತಿ, ಪತ್ನಿಯರಿಗೆ ಜಗಳ ಹಚ್ಚಿ ಪತ್ನಿಯನ್ನು ಮತಾಂತರ ಮಾಡಿದ್ದಾರೆ. ಪತ್ನಿಯ ಮೂಲಕ ಗಂಡನಿಗೆ ಒತ್ತಾಯ ಮಾಡುವ ಪ್ರಕ್ರಿಯೆ ನಡೆದಿದೆ. ಈ ಜಗಳ ವಿಕೋಪಕ್ಕೆ ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಮತ್ತೆ ಸಮರ ಸಾರಿದ ರಷ್ಯಾ – ಒಂದೇ ಬಾರಿಗೆ 100 ಕ್ಷಿಪಣಿ ಉಡಾವಣೆ

    ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಈ ರೀತಿ ನಡೆಯುತ್ತಲೇ ಇದೆ. ಈ ನಿರ್ಲಕ್ಷ್ಯ ಸರ್ಕಾರದ್ದು, ಕೇವಲ ಕಾನೂನು ಮಾಡುವುದಲ್ಲ, ಅದನ್ನು ಜಾರಿ ಮಾಡಬೇಕು. ಕ್ರಿಶ್ಚಿಯನ್ ಮತಾಂತರ ಎನ್ನುವುದು ಬಹಳ ದೊಡ್ಡ ಗಂಡಾಂತರ, ಇದನ್ನು ತಡೆಯದೇ ಇದ್ದರೆ ದೇಶಕ್ಕೆ ದೊಡ್ಡ ಅಪಾಯ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡೀಲ್ ಮುಗಿಯುವ ಮುನ್ನವೇ ಟ್ವಿಟ್ಟರ್ ಚೀಫ್ ಎಂದು ಘೋಷಿಸಿಕೊಂಡ ಮಸ್ಕ್

    ಡೀಲ್ ಮುಗಿಯುವ ಮುನ್ನವೇ ಟ್ವಿಟ್ಟರ್ ಚೀಫ್ ಎಂದು ಘೋಷಿಸಿಕೊಂಡ ಮಸ್ಕ್

    ವಾಷಿಂಗ್ಟನ್: ಟೆಸ್ಲಾ (Tesla) ಮುಖ್ಯಸ್ಥ ಎಲಾನ್ ಮಸ್ಕ್ (Elon Musk), 44 ಶತಕೋಟಿ ಡಾಲರ್ ಮೊತ್ತದ ಟ್ವೀಟ್ ಖರೀದಿ ಪ್ರಕ್ರಿಯೆ ಮುಗಿಯುವ ಮೊದಲೇ ತಮ್ಮನ್ನು ತಾವು ಟ್ವಿಟರ್ (Twitter) ಮುಖ್ಯಸ್ಥ ಎಂದು ಘೋಷಿಸಿಕೊಂಡಿದ್ದು, ಟ್ವಿಟ್ಟರ್ ಬಯೋ ಬದಲಿಸಿದ್ದಾರೆ.

    ಟೆಸ್ಲಾ ಕಂಪನಿಯ ಸಿಇಒ (CEO) ಎಲಾನ್ ಮಸ್ಕ್ ಸ್ಯಾನ್‌ಫ್ರಾನ್ಸಿಸ್ಕೊ (San Francisco) ನಗರದಲ್ಲಿರುವ ಟ್ವಿಟರ್ ಕಂಪನಿಯ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಕೈ ಕೈತೊಳೆಯುವ ಸಿಂಕ್ ಒಂದನ್ನು ಹಿಡಿದುಕೊಂಡು ಕಚೇರಿಗೆ ತಂದರು. ಟ್ವಿಟ್ಟರ್ (Twitter) ಕಚೇರಿಗೆ ಹೋಗುತ್ತಿದ್ದೇನೆ. ಅದು ನನ್ನೊಂದಿಗೆ ಬೆರೆತುಕೊಳ್ಳಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 3.36 ಲಕ್ಷ ಕೋಟಿಗೆ ಟ್ವಿಟ್ಟರ್‌ ಡೀಲ್‌ ಮಾಡಿದ ಎಲಾನ್‌ ಮಸ್ಕ್‌

    _Elon Musk

    ಮಸ್ಕ್ ಭೇಟಿಗೂ ಮುನ್ನ ಟ್ವಿಟ್ಟರ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ, ಲೆಸ್ಲಿ ಬರ್‌ಲೆಂಡ್ ಎಲ್ಲ ಸಿಬ್ಬಂದಿಗೂ ಕಳಿಸಿದ್ದ ಇಮೇಲ್‌ನಲ್ಲಿ ವಹಿವಾಟು ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಟ್ವಿಟ್ಟರ್‌ನ ಸ್ಯಾನ್‌ಫ್ರಾನ್ಸಿಸ್ಕೊ ಕಚೇರಿಗೆ ಮಸ್ಕ್ ಬರಲಿದ್ದಾರೆ ಎಂದು ಹೇಳಿದ್ದರು. ಟ್ವಿಟ್ಟರ್ ಖರೀದಿ ಪ್ರಕ್ರಿಯೆಯು ಕಳೆದ ಏಪ್ರಿಲ್ ತಿಂಗಳಿಂದ ಚರ್ಚೆಯಲ್ಲಿದೆ. ಹಲವು ನಾಟಕೀಯ ಬೆಳವಣಿಗೆಗಳೂ ನಡೆದವು. ನಕಲಿ ಖಾತೆಗಳು ನಿಯಂತ್ರಣಕ್ಕೆ ಸಿಗುತ್ತಿಲ್ಲ, ನಕಲಿ ಖಾತೆಗಳ ಸಂಖ್ಯೆಯ ಬಗ್ಗೆ ಟ್ವಿಟರ್‌ನ ಉನ್ನತ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿ ಮಸ್ಕ್ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು.

    ಇದನ್ನು ವಿರೋಧಿಸಿ ಟ್ವಿಟ್ಟರ್‌ ಮಸ್ಕ್ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿತ್ತು. ಖರೀದಿ ಒಪ್ಪಂದ ಉಲ್ಲಂಘಿಸಲು ಮಸ್ಕ್ ನಕಲಿ ಖಾತೆಗಳ ನೆಪ ಹೇಳುತ್ತಿದ್ದಾರೆ ಎಂದು ಟ್ವಿಟರ್ ಆರೋಪಿಸಿತ್ತು. ಇದನ್ನೂ ಓದಿ: ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ – 10 ಕೋಟಿಗೆ ಬೇಡಿಕೆ ಇಟ್ಟಿತ್ತಾ ಮಹಿಳೆ ಆ್ಯಂಡ್ ಟೀಂ?

    ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರು ಅಕ್ಟೋಬರ್ 28ಕ್ಕೆ ಮುಂದೂಡಿ, ಅಷ್ಟರಲ್ಲಿ ವಹಿವಾಟು ಅಂತಿಮ ಘಟ್ಟಕ್ಕೆ ಬರಬೇಕು ಎಂದಿದ್ದರು. ಟ್ವಿಟರ್ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಮಸ್ಕ್ ಅವರಿಗೆ ಇನ್ನು ಕೇವಲ ಒಂದು ದಿನದ ಅವಕಾಶವಿದೆ ಎಂದು ಹೇಳಿತ್ತು. ಹಾಗಾಗಿ ಮಸ್ಕ್ ಟ್ವಿಟ್ಟರ್ ಕಚೇರಿಗೆ ಭೇಟಿ ನೀಡಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ಮಸ್ಕ್ ಟ್ವಿಟ್ಟರ್ ಮುಖ್ಯಸ್ಥರಾಗುತ್ತಿದ್ದಂತೆ ಸುಮಾರು ಒಂದು ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುವುದು ಎಂದು ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ಏರೋಪ್ಲೇನ್ ಕದ್ದು ಹಾರಾಟ ನಡೆಸಿದ ಪೈಲಟ್ – ವಾಲ್‌ಮಾರ್ಟ್‌ಗೆ ಗುದ್ದುತ್ತೇನೆಂದು ಬೆದರಿಕೆ

    ಏರೋಪ್ಲೇನ್ ಕದ್ದು ಹಾರಾಟ ನಡೆಸಿದ ಪೈಲಟ್ – ವಾಲ್‌ಮಾರ್ಟ್‌ಗೆ ಗುದ್ದುತ್ತೇನೆಂದು ಬೆದರಿಕೆ

    ವಾಷಿಂಗ್ಟನ್: ಅಮೆರಿಕದ ಟುಪೆಲೋ ವಿಮಾನ ನಿಲ್ದಾಣದಿಂದ ಪೈಲಟ್ ಒಬ್ಬ ಏರೋಪ್ಲೇನ್ ಕದ್ದು ಅದರಿಂದ ಅಮೆರಿಕದ ವಾಲ್‌ಮಾರ್ಟ್ಗೆ ಅಪ್ಪಳಿಸುವುದಾಗಿ ಬೆದರಿಕೆ ಹಾಕಿದ್ದಾನೆ.

    ಟುಪೆಲೋ ವಿಮಾನ ನಿಲ್ದಾಣದಿಂದ ಬೀಚ್‌ಕ್ರಾಫ್ಟ್ ಕಿಂಗ್ ಏರ್-90 ಸಣ್ಣ ಏರೋಪ್ಲೇನ್ ಅನ್ನು ಕದ್ದೊಯ್ದಿದ್ದು, ಉದ್ದೇಶ ಪೂರ್ವಕವಾಗಿ ಮಿಸ್ಸಿಸ್ಸಿಪ್ಪಿಯ ವಾಲ್‌ಮಾರ್ಟ್ಗೆ ಅಪ್ಪಳಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಸಹ ಕೆಟ್ಟ ಸಂಬಂಧ ಹೊಂದಿದ್ದೆ ಎಂದ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ

    ಬೆದರಿಕೆ ಬಂದ ಬೆನ್ನಲ್ಲೇ ವಾಲ್‌ಮಾರ್ಟ್ ಹಾಗೂ ಸುತ್ತಮುತ್ತಲಿನ ಪ್ರದೇಶದ ಅಂಗಡಿ ಮುಂಗಟ್ಟುಗಳನ್ನು ಸ್ಥಳಾಂತರಿಸಲಾಗಿದೆ. ಪೈಲಟ್‌ನೊಂದಿಗೆ ನೇರವಾಗಿ ಮಾತುಕತೆ ನಡೆಸಲು ಪ್ರಯತ್ನಿಸಲಾಗುತ್ತಿದೆ. ಇದರೊಂದಿಗೆ ಭದ್ರತೆಯ ದೃಷ್ಟಿಯಿಂದ ವಾಲ್‌ಮಾರ್ಟ್ ಪ್ರದೇಶದ ವ್ಯಾಪ್ತಿಯ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ.

    ವಿಮಾನದ ಅಪಾಯ ವಲಯವು ಹೆಚ್ಚಿನದ್ದಾಗಿರುವುದರಿಂದ ರಾಜ್ಯ ಕಾನೂನು ಜಾರಿ ಮತ್ತು ತುರ್ತು ನಿರ್ವಾಹಕರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಗರದ ಸುತ್ತಲೂ ಪೊಲೀಸ್, ಅಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳನ್ನು ನಿಯೋಜನೆಗೊಳಿಸಲಾಗಿದೆ. ಎಲ್ಲಾ ತುರ್ತು ಸೇವೆಗಳೂ ಫುಲ್ ಅಲರ್ಟ್ ಆಗಿವೆ. ಇದನ್ನೂ ಓದಿ: ತ್ಯಾಜ್ಯ ವಿಲೇವಾರಿಯಲ್ಲಿ ಎಡವಟ್ಟು – ಮಮತಾ ಸರ್ಕಾರಕ್ಕೆ 3,500 ಕೋಟಿ ದಂಡ

    ಸಾಂದರ್ಭಿಕ ಚಿತ್ರ

    ವರದಿಯ ಪ್ರಕಾರ, ಏರೋಪ್ಲೇನ್ ಬೆಳಿಗ್ಗೆ 5 ಗಂಟೆಯಿಂದಲೇ ಸುತ್ತಲು ಪ್ರಾರಂಭಿಸಿದೆ. ಇದೇ ವೇಳೆ ಪೈಲಟ್ 911ಗೆ ಕರೆ ಮಾಡಿ ಉದ್ದೇಶಪೂರ್ವಕವಾಗಿ ವೆಸ್ಟ್ಮೇನ್ ನಲ್ಲಿರುವ ವಾಲ್-ಮಾರ್ಟ್ಗೆ ಅಪ್ಪಳಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 400 ಚಿನೂಕ್‌ ಹೆಲಿಕಾಪ್ಟರ್‌ಗಳ ಸೇವೆ ದಿಢೀರ್‌ ಬಂದ್‌ – ಅಮೆರಿಕದ ಶಾಕಿಂಗ್‌ ನಿರ್ಧಾರ, ಆತಂಕದಲ್ಲಿ ಭಾರತ

    400 ಚಿನೂಕ್‌ ಹೆಲಿಕಾಪ್ಟರ್‌ಗಳ ಸೇವೆ ದಿಢೀರ್‌ ಬಂದ್‌ – ಅಮೆರಿಕದ ಶಾಕಿಂಗ್‌ ನಿರ್ಧಾರ, ಆತಂಕದಲ್ಲಿ ಭಾರತ

    ನವದೆಹಲಿ: ಸೈನಿಕರ ರವಾನೆಯಲ್ಲಿ ಮಹತ್ವದ ಪಾತ್ರ ವಹಿಸುವ ಚಿನೂಕ್ ಹೆಲಿಕಾಪ್ಟರ್‌ಗಳ ಸೇವೆಯನ್ನು ಅಮೆರಿಕ ಸೇನೆ ದಿಢೀರ್ ಬಂದ್ ಮಾಡಿದೆ.

    ಬರೋಬ್ಬರಿ 400 ಚಿನೂಕ್ ಹೆಲಿಕಾಪ್ಟರ್‌ಗಳನ್ನು ಅಮೆರಿಕದ ಸೇನೆ ಹೊರಗಿಟ್ಟಿದೆ. ಎಂಜಿನ್‍ನಲ್ಲಿ ಕಂಡು ಬಂದಿರುವ ತಾಂತ್ರಿಕ ದೋಷದ ಕಾರಣ ಅಮೆರಿಕ ಸೇನೆಯ ಮೆಟಿರಿಯಲ್ ಕಮಾಂಡ್ ಈ ನಿರ್ಣಯ ತೆಗೆದುಕೊಂಡಿದೆ.

    ಈ ಬೆಳವಣಿಗೆ ಭಾರತೀಯ ವಾಯುಸೇನೆಯನ್ನು ಆತಂಕಕ್ಕೆ ತಳ್ಳಿದೆ. ಭಾರತ 15 ಚಿನೂಕ್ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡುತ್ತಿರುವ ಕಾರಣ ವಿವರಣೆ ನೀಡುವಂತೆ ಕೋರಿ ಅಮೆರಿಕಗೆ ಪತ್ರ ಬರೆದಿದೆ. ಇದನ್ನೂ ಓದಿ: ನಿತೀಶ್‌ ಭೇಟಿ ಬೆನ್ನಲ್ಲೇ ಬಿಜೆಪಿ ಮುಕ್ತ ಭಾರತಕ್ಕೆ ಕರೆ ನೀಡಿದ ಕೆಸಿಆರ್‌

    ಈ ಬಗ್ಗೆ ಪ್ರತಿಕ್ರಿಯೆ ನೀಡಲು ಬೋಯಿಂಗ್ ಸಂಸ್ಥೆ ನಿರಾಕರಿಸಿದೆ. ಸಮಸ್ಯೆ ಇತ್ಯರ್ಥ ಮಾಡಲು ಅಮೆರಿಕ ಜೊತೆಗೂಡಿ ಕೆಲಸ ಮಾಡುತ್ತೇವೆ ಎಂದು ಚಿನೂಕ್‍ಗೆ ಎಂಜಿನ್ ಒದಗಿಸಿರುವ ಹನಿವೆಲ್ ಸಂಸ್ಥೆ ತಿಳಿಸಿದೆ. ಈ ಹಿಂದೆ ಹಲವು ಬಾರಿ ಚಿನೂಕ್ ಹೆಲಿಕಾಪ್ಟರ್‌ಗಳ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡು ಸಣ್ಣ ಸಣ್ಣ ಅವಘಡ ನಡೆದಿತ್ತು. ಆದರೆ ಈವರೆಗೂ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ.

    2015ರ ಸೆಪ್ಟೆಂಬರ್‌ನಲ್ಲಿ ಭಾರತ 8,048 ಕೋಟಿ ರೂ. ಒಪ್ಪಂದ ಮಾಡಿಕೊಂಡಿತ್ತು. 2019-20 ರಲ್ಲಿ 15 ಚಿನೂಕ್‌ ಹೆಲಿಕಾಪ್ಟರ್‌ಗಳು ಸೇನೆಗೆ ಸೇರಿತ್ತು. ಚಿನೂಕ್‌ ಹೆಲಿಕಾಪ್ಟರ್‌ಗಳು ಕಳೆದ ಮೂರು ವರ್ಷಗಳಿಂದ ಲಡಾಖ್‌ ಎಲ್‌ಎಸಿ ಬಳಿ ಹಾರಾಡುತ್ತಿವೆ.

    Live Tv
    [brid partner=56869869 player=32851 video=960834 autoplay=true]

  • ಜೇಮ್ಸ್‌ವೆಬ್‌ ಕಣ್ಣಲ್ಲಿ ಗುರು ಗ್ರಹದ ರಹಸ್ಯ

    ಜೇಮ್ಸ್‌ವೆಬ್‌ ಕಣ್ಣಲ್ಲಿ ಗುರು ಗ್ರಹದ ರಹಸ್ಯ

    ವಾಷಿಂಗ್ಟನ್: ಇತ್ತೀಚೆಗಷ್ಟೇ ತನ್ನ ಕಾರ್ಯಾಚರಣೆ ಆರಂಭಿಸಿರುವ ಜಗತ್ತಿನ ಅತ್ಯಂತ ದೊಡ್ಡ ಮತ್ತು ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕ `ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್’ ಮತ್ತೊಂದು ಮೋಡಿಮಾಡುವಂತಹ ಚಿತ್ರವನ್ನು ಸೆರೆಹಿಡಿದಿದೆ.

    ಕೆಲ ದಿನಗಳ ಹಿಂದೆಯಷ್ಟೇ ಬ್ರಹ್ಮಾಂಡ ಹುಟ್ಟಿದಾಗಿನ ಮೊದಲ ನಕ್ಷತ್ರಪುಂಜದ ಚಿತ್ರವನ್ನು ಸೆರೆ ಹಿಡಿದು ತನ್ನ ಬ್ಲಾಗ್‌ನಲ್ಲಿ ಪ್ರಕಟಿಸಿತ್ತು. ಇದೀಗ ಗುರು ಗ್ರಹದ ಚಿತ್ರಗಳನ್ನು ಸೆರೆ ಹಿಡಿದು ಅಚ್ಚರಿ ಮೂಡಿಸಿದೆ. ಅಲ್ಲದೇ ವಿಜ್ಞಾನಿಗಳಿಗೆ ಗುರುಗ್ರಹದ ಒಳನೋಟಗಳ ಬಗ್ಗೆ ತನ್ನ ಬ್ಲಾಗ್‌ಪೋಸ್ಟ್ನಲ್ಲಿ ಮಾಹಿತಿ ನೀಡುವುದಾಗಿ ಹೇಳಿದೆ. ಇದನ್ನೂ ಓದಿ: ಧರ್ಮ ನಿಂದನೆ ಆರೋಪ – ಹಿಂದೂ ವ್ಯಕ್ತಿ ಅಪಾರ್ಟ್ಮೆಂಟ್ ಸುತ್ತ ಜನವೋ ಜನ

    ಈಗ ಸೆರೆಹಿಡಿದಿರುವ ಗುರುಗ್ರಹದ ಚಿತ್ರದಲ್ಲಿ ಅಲಂಕಾರಿಕಾ ವಿನ್ಯಾಸಗಳನ್ನೂ ತೋರಿಸಿದೆ. ಜೊತೆಗೆ ಉತ್ತರ ಮತ್ತು ದಕ್ಷಿಣ ಧ್ರುವಗಳ ಮೇಲೆ ನೈಸರ್ಗಿಕ ಬೆಳಕಿನ ಪ್ರದರ್ಶನ(ಆರೋರಾ) ನೋಟವನ್ನೂ ಕಾಣುವಂತೆ ಗುರುತಿಸಿದೆ.

    ಇದರಿಂದ ಗುರು ಗ್ರಹ ಇಷ್ಟು ಉತ್ತಮ ಸ್ಥಿತಿಯಲ್ಲಿದೆ ಎಂದು ಊಹಿಸಿರಲಿಲ್ಲ ಎಂಬುದಾಗಿ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಎಮೆರಿಟಾ ಹಾಗೂ ಗ್ರಹಗಳ ಖಗೋಳಶಾಸ್ತ್ರಜ್ಞ ಇಮ್ಕೆ ಡಿ ಪಾಟರ್ ಪ್ರಶಂಸೆ ವ್ಯಕ್ತಪಡಿಸಿರುವುದಾಗಿ ನಾಸಾ ಉಲ್ಲೇಖಿಸಿದೆ. ಇದನ್ನೂ ಓದಿ: ಭಾರತದಲ್ಲಿ ಆತ್ಮಾಹುತಿ ದಾಳಿಗೆ ಸ್ಕೆಚ್ ಹಾಕಿದ್ದ ISIS ಭಯೋತ್ಪಾದಕ ರಷ್ಯಾದಲ್ಲಿ ಅರೆಸ್ಟ್

    ಗುರುಗ್ರಹದ ಸುತ್ತಲೂ ಇರುವ ಉಂಗುರಗಳು, ಸಣ್ಣ-ಸಣ್ಣ ಉಪಗ್ರಹಗಳು ಹಾಗೂ ಗೆಲಾಕ್ಸಿಗಳನ್ನು ಒಂದೇ ಚಿತ್ರದಲ್ಲಿ ಬರುವಂತೆ ಸೆರೆ ಹಿಡಿಯಲಾಗಿದೆ. ಜೇಮ್ಸ್ ವೆಬ್ ವೀಕ್ಷಣಾಲಯದ ನಿಯರ್-ಇನ್‌ಫ್ರಾರೆಡ್ ಕ್ಯಾಮೆರಾ ಗ್ರಹದ ವಿವರಗಳನ್ನು ಪ್ರದರ್ಶಿಸುವ ವಿಶೇಷ ಫಿಲ್ಟರ್‌ಗಳನ್ನೂ ಹೊಂದಿದೆ.

    ಗ್ರಹದ ಸುತ್ತಲೂ ಹೊಳೆಯುವ ಅರೋರಾ (ನೈಸರ್ಗಿಕ ಬೆಳಕಿನ ಪ್ರದರ್ಶನ) ಇದು ಮೋಡಗಳ ಮೇಲಿನ ಮಬ್ಬುಗಳನ್ನು ಸರಿಸಿ ಪ್ರತಿಫಲಿಸುವ ಬೆಳಕನ್ನು ತೋರಿಸುತ್ತದೆ. ಉತ್ತರ ಹಾಗೂ ದಕ್ಷಿಣ ದ್ರುವಗಳಲ್ಲಿ ಹೊಳೆಯುವ ಬೆಳಕನ್ನೂ ಗುರುತಿಸಿದೆ.

    ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ನು 2021 ರಲ್ಲಿ ಫ್ರೆಂಚ್ ಗಯಾನಾದಿಂದ ಏರಿಯನ್ 5 ರಾಕೆಟ್ ಮೇಲೆ ಉಡಾವಣೆ ಮಾಡಲಾಯಿತು.

    Live Tv
    [brid partner=56869869 player=32851 video=960834 autoplay=true]

  • US ಏವಿಯೇಷನ್ ಮ್ಯೂಸಿಯಂನಲ್ಲಿ ಸ್ಥಾನ ಪಡೆದ ಭಾರತದ ಮೊದಲ ಮಹಿಳಾ ಪೈಲಟ್

    US ಏವಿಯೇಷನ್ ಮ್ಯೂಸಿಯಂನಲ್ಲಿ ಸ್ಥಾನ ಪಡೆದ ಭಾರತದ ಮೊದಲ ಮಹಿಳಾ ಪೈಲಟ್

    ವಾಷಿಂಗ್ಟನ್/ನವದೆಹಲಿ: ಉತ್ತರಧ್ರುವದಲ್ಲಿ ವಿಮಾನ ಹಾರಿಸಿ ವಿಶೇಷ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಪೈಲಟ್ ಅಮೆರಿಕದ ಏವಿಯೇಷನ್ ವಸ್ತು ಸಂಗ್ರಹಾಲಯದಲ್ಲಿ ಸ್ಥಾನ ಪಡೆದು ದಾಖಲೆ ನಿರ್ಮಿಸಿದ್ದಾರೆ.

    ಏರ್ ಇಂಡಿಯಾದ ಹಿರಿಯ ಪೈಲಟ್ (ಬೋಯಿಂಗ್-777 ವಿಮಾನ) ಕ್ಯಾಪ್ಟನ್ ಜೋಯಾ ಅಗರ್ವಾಲ್ ಅವರು, ಉತ್ತರ ಧ್ರುವ (ಉತ್ತರ ಗೋಳಾರ್ಧದಲ್ಲಿ ಭೂಮಿಯ ತಿರುಗುವಿಕೆಯ ಅಕ್ಷವು ಅದರ ಮೇಲ್ಮೈಯನ್ನು ಸಂಧಿಸುವ ಬಿಂದು)ದ ಮೇಲೆ ವಿಮಾನ ಹಾರಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. 16,000 ಕಿಮೀ ಕ್ರಮಿಸಿ ದಾಖಲೆ ನಿರ್ಮಿಸಿದ್ದು, SFO ಏವಿಯೇಷನ್ ಮ್ಯೂಸಿಯಂನಲ್ಲಿ ಸ್ಥಾನ ಗಳಿಸಿದ್ದಾರೆ. ಇದನ್ನೂ ಓದಿ: 11 ರಾಜ್ಯಗಳಲ್ಲಿ ಮಹಿಳೆಯರೇ ಹೆಚ್ಚು ಸೆಕ್ಸ್ ಪಾಲುದಾರರನ್ನು ಹೊಂದಿದ್ದಾರೆ: ವರದಿ

    ಜೋಯಾ ಅಗರ್ವಾಲ್ ನೇತೃತ್ವದ ಏರ್ ಇಂಡಿಯಾದ ಮಹಿಳಾ ಪೈಲಟ್ ತಂಡವು 2021 ರಲ್ಲಿ ಮೊದಲ ಬಾರಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿರುವ ಸ್ಯಾನ್ ಫ್ರಾನ್ಸಿಸ್ (SFO) ನಿಂದ ಭಾರತದ ಬೆಂಗಳೂರು ನಗರಕ್ಕೆ ವಿಶ್ವದ ಅತಿ ಉದ್ದದ ವಿಮಾನ ಮಾರ್ಗವನ್ನು ಕ್ರಮಿಸಿತ್ತು. ಏರ್‌ಇಂಡಿಯಾ ಮಹಿಳೆಯರ ಈ ಸಾಧನೆಯಿಂದ ಪ್ರಭಾವಿತವಾದ ಯುಎಸ್ ಮೂಲದ ಏವಿಯೇಷನ್ ತನ್ನ ಮ್ಯೂಸಿಯಂನಲ್ಲಿ ಸ್ಥಾನ ನೀಡಿದೆ. ಇದನ್ನೂ ಓದಿ: ಫಿನ್‌ಲ್ಯಾಂಡ್ ಪ್ರಧಾನಿಯ ಖಾಸಗಿ ವೀಡಿಯೋ ಲೀಕ್ – ಮುಚ್ಚಿಡಲು ಏನೂ ಇಲ್ಲವೆಂದ ಮರಿನ್

    ಈ ಸಂತಸವನ್ನು ಹಂಚಿಕೊಂಡಿರುವ ಕ್ಯಾಪ್ಟನ್ ಜೋಯಾ ಅಗರ್ವಾಲ್, ಯುಎಸ್‌ನ ಮ್ಯೂಸಿಯಂನಲ್ಲಿ ನಾನೊಬ್ಬಳೇ ಅಲ್ಲಿರುವ ಏಕೈಕ ಜೀವಂತ ವಸ್ತು. ಅದನ್ನು ಕಂಡು ನನಗೆ ಆಶ್ಚರ್ಯವಾಯಿತು. ಸದ್ಯ ಯುಸ್‌ನ ಪ್ರತಿಷ್ಟಿತ ವಾಯುಯಾನ ಮ್ಯೂಸಿಯಂನ ಭಾಗವಾಗಿದ್ದೇನೆ. ನಾನು ಅದಕ್ಕೆ ಪ್ರಾಮಾಣಿಕಳಾಗಿರುತ್ತೇನೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮನೆ ಬಾಡಿಗೆ ವೇಳೆ `ಸೆಕ್ಸ್ ಒಪ್ಪಂದ’ಕ್ಕೆ ಸಹಿ ಹಾಕಿದ ಮಹಿಳೆ- ಮುಂದೇನಾಯ್ತು..?

    ಮನೆ ಬಾಡಿಗೆ ವೇಳೆ `ಸೆಕ್ಸ್ ಒಪ್ಪಂದ’ಕ್ಕೆ ಸಹಿ ಹಾಕಿದ ಮಹಿಳೆ- ಮುಂದೇನಾಯ್ತು..?

    ವಾಷಿಂಗ್ಟನ್: ಸಾಮಾನ್ಯವಾಗಿ ಮನೆ ಬಾಡಿಗೆ ಪಡೀಬೇಕಾದ್ರೆ ಬಾಡಿಗೆದಾರರು ಕೆಲವು ಒಪ್ಪಂದಗಳಿಗೆ ಸಹಿ ಮಾಡಿಸಿಕೊಳ್ತಾರೆ. `ಕೆಲವರು ನೋ ಪಾರ್ಟಿ, ನೋ ಸ್ಮೋಕಿಂಗ್, ನೋ ಶೌಟಿಂಗ್’ ಹೀಗೆ ಏನೇನೋ ಕಾರಣಗಳನ್ನ ನೀಡಿ, ತಮಗೂ ತೊಂದರೆಯಾದಂತೆ ನೋಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಾಲೀಕ ಮನೆ ಬಾಡಿಗೆ ನೀಡಬೇಕಾದ್ರೆ `ಲೈಂಗಿಕ ಸಂಭೋಗ- ಸೆಕ್ಸ್’ ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

    ಅಮೆರಿಕದ ನೆವಾಡಾದ ಲಾಸ್ ವೇಗಸ್‌ನಲ್ಲಿರುವ ವ್ಯಕ್ತಿಯೊಬ್ಬ ಸ್ಥಳೀಯ ಮಹಿಳೆಗೆ ಬಾಡಿಗೆ ನೀಡಲು ಮಾಲೀಕ `ಸೆಕ್ಸ್ ಒಪ್ಪಂದಕ್ಕೆ’ ದಾಖಲೆಗಳ ಮೇಲೆ ಸಹಿ ಮಾಡಿಸಿಕೊಂಡಿದ್ದಾನೆ. ಕೆಲ ದಿನಗಳ ನಂತರ ಮನೆಯ ಮಾಲೀಕನ ವಿರುದ್ಧ ಸ್ಥಳೀಯ ಫೆಡರಲ್ ನ್ಯಾಯಾಲಯಲ್ಲಿ ವಿಚಾರಣೆ ಬಂದಾಗ ದಾಖಲೆಗಳನ್ನು ನೀಡಿದ್ದು, ವಿಚಾರ ಬಹಿರಂಗಗೊಂಡಿದೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ನಿಲ್ಲದ ವೀಲ್ಹಿಂಗ್ ಪುಂಡರ ಹಾವಳಿ – ಪೊಲೀಸರಿಗೂ ಡೋಂಟ್‌ ಕೇರ್‌

    ಸಂತ್ರಸ್ತ ಮಹಿಳೆಗೆ ಮನೆ ಬಾಡಿಗೆ ಪಡೆಯುವ ಸಂದರ್ಭದಲ್ಲಿ ತನ್ನ ಮಕ್ಕಳಿಗಾಗಿ ಮನೆ ಅವಶ್ಯವಿತ್ತು. ಇದೇ ಕಾರಣದಿಂದಾಗಿ ಮನೋ ವಿಕೃತಿ ಮೆರೆದಿರುವ ಮಾಲೀಕ ಅಲನ್ ರೋಥ್‌ಸ್ಟೈನ್ ಮನೆಯ ಬಾಡಿಗೆ ಪಡೆಯುವ ಸಲುವಾಗಿ ಲೈಂಗಿಕ ಬೇಡಿಕೆಗಳಿಗೆ ಸಹಿ ಮಾಡಿಸಿರುತ್ತಾನೆ. ನಂಬಲು ಅಸಾಧ್ಯವಾದರೂ ಒಪ್ಪಂದಕ್ಕೆ ಒಳಪಟ್ಟಿರುವುದು ದಾಖಲೆಗಳಲ್ಲಿ ಸಾಬೀತಾಗಿದೆ. ಇದು ವಂಚನೆ ಹಾಗೂ ಕಿರುಕುಳಕ್ಕೆ ಸಮನಾಗಿದೆ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಯುವತಿ ಮೇಲೆ ಗೆಳತಿಯ ಸಹೋದರನಿಂದ್ಲೆ ಅತ್ಯಾಚಾರ- ಮದ್ವೆ ಕ್ಯಾನ್ಸಲ್ ಭಯದಿಂದ ಆತ್ಮಹತ್ಯೆಗೆ ಯತ್ನ

    ನ್ಯಾಯಾಲಯದ ದಾಖಲೆಗಳ ಪ್ರಕಾರ, ನವೆಂಬರ್ 2018 ರಲ್ಲಿ ಲಾಸ್ ವೇಗಸ್ ಬೌಲೆವಾರ್ಡ್ ಮತ್ತು ಸೇಂಟ್ ರೋಸ್ ಪಾರ್ಕ್ವೇಗೆ ಸಮೀಪವಿರುವ ವೆಡ್ಜ್‌ಬ್ರೂಕ್ ಸ್ಟ್ರೀಟ್‌ನಲ್ಲಿ 4 ಬೆಡ್‌ರೂಮ್ ಮನೆಯನ್ನು ಬಾಡಿಗೆಗೆ ಪಡೆಯುವ ಸಲುವಾಗಿ ಆತ ವಿಕೃತಿ ಮೆರಿದ್ದಾನೆ. ಸಂಭಾವ್ಯ ಬಾಡಿಗೆದಾರರಿಂದ ಸಹಿ ಮಾಡಿಸಿ ಬಲಿಪಶುಗಳನ್ನಾಗಿ ಮಾಡಿದ್ದಾನೆ ಎಂದು ಹೇಳಲಾಗಿದೆ.

    ಸದ್ಯ ವಿಚಾರಣೆ ನಂತರ ಬಾಡಿಗೆ ಪರವಾನಗಿಗಳನ್ನು ನಿಷೇಧಿಸಲಾಗಿದ್ದು, ಈ ಹಿಂದಿನ ಹಿಡುವಳಿದಾರನಿಂದ ಮೊಕದ್ದಮೆ ಹೂಡಲ್ಪಟ್ಟಿದೆ. ಒಂದು ವೇಳೆ ನ್ಯಾಯಾಧೀಶರು ಫೇರ್ ಹೌಸಿಂಗ್ ಆಕ್ಟ್ ಅನ್ನು ಉಲ್ಲಂಘಿಸಿದ್ದಾರೆಂದು ಪರಿಗಣಿಸಿದರೆ ಕಾನೂನು ಕ್ರಮವಾಗುತ್ತದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • 18ರ ಯುವತಿ ಆರ್ಯ ವಾಲ್ವೇಕರ್‌ಗೆ ಮಿಸ್ ಇಂಡಿಯಾ USA-2022 ಕಿರೀಟ; ಈಕೆ ಯಾರು ಗೊತ್ತಾ?

    18ರ ಯುವತಿ ಆರ್ಯ ವಾಲ್ವೇಕರ್‌ಗೆ ಮಿಸ್ ಇಂಡಿಯಾ USA-2022 ಕಿರೀಟ; ಈಕೆ ಯಾರು ಗೊತ್ತಾ?

    ವಾಷಿಂಗ್ಟನ್: ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ 40ನೇ ವಾರ್ಷಿಕೋತ್ಸವ ಸ್ಪರ್ಧೆಯಲ್ಲಿ ವರ್ಜೀನಿಯಾದ 18ರ ಯುವತಿ (ಭಾರತೀಯ ಅಮೆರಿಕನ್) ಆರ್ಯ ವಾಲ್ವೇಕರ್ `ಮಿಸ್ ಇಂಡಿಯಾ USA-2022′ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

    ಯುಎಸ್‌ನ 30 ರಾಜ್ಯಗಳಿಂದ 74 ಸ್ಪರ್ಧಿಗಳು ಮಿಸ್ ಇಂಡಿಯಾ ಯುಎಸ್‌ಎ, ಮಿಸೆಸ್ ಇಂಡಿಯಾ ಯುಎಸ್‌ಎ ಹಾಗೂ ಮಿಸ್ ಟೀನ್ ಇಂಡಿಯಾ ಯುಎಸ್‌ಎ ವಿಭಾಗಗಳಲ್ಲಿ ಭಾಗವಹಿಸಿದ್ದರು. ವಾಷಿಂಗ್ಟನ್‌ನ ಅಕ್ಷಿ ಜೈನ್ ಮಿಸೆಸ್ ಇಂಡಿಯಾ ಯುಎಸ್‌ಎ, ನ್ಯೂಯಾರ್ಕ್ನ ತನ್ವಿ ಗ್ರೂವರ್ ಮಿಸ್ ಟೀನ್ ನ್ಯೂಯಾರ್ಕ್ ಕಿರೀಟ ಧರಿಸಿದರೆ ಭಾರತೀಯ ಅಮೆರಿಕನ್ನರಾದ ವಾಲ್ಟೇಕರ್ ಮಿಸ್ ಇಂಡಿಯಾ ಕಿರೀಟ ಧರಿಸಿದ್ದಾರೆ. ಇದನ್ನೂ ಓದಿ: 9 ವರ್ಷಗಳ ಹಿಂದೆ ಕಿಡ್ನ್ಯಾಪ್‌ ಆಗಿದ್ದ ಬಾಲಕಿ ಪೋಸ್ಟರ್ ಸಹಾಯದಿಂದ ಹೆತ್ತವರ ಮಡಿಲಿಗೆ

    ಈ ವೇಳೆ ತನ್ನ ಖುಷಿಯನ್ನು ಹಂಚಿಕೊಂಡಿರುವ ವಾಲ್ಟೇಕರ್, `ನನ್ನನ್ನು ಬೆಳ್ಳಿ ತೆರೆಯಲ್ಲಿ ನೋಡುವುದು, ಚಲನಚಿತ್ರ ಹಾಗೂ ಟಿವಿಯಲ್ಲಿ ಕೆಲಸ ಮಾಡುವುದು ನನ್ನ ಕನಸಾಗಿತ್ತು’ ಎಂದು ಅವರು ಹೇಳಿಕೊಂಡಿದ್ದಾರೆ. ಈ ಕುರಿತ ಫೋಟೋಗಳನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

    ಪ್ರಪಂಚದಾದ್ಯಂತ ಇರುವ ಭಾರತೀಯ ಸಮುದಾಯಕ್ಕೆ, ಅವರು ನೀಡಿದ ಸಹಕಾರಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: CWG 2022: ಟ್ರಿಪಲ್ ಜಂಪ್‍ನಲ್ಲಿ ಡಬಲ್ ಧಮಾಕ – ಎಲ್ದೋಸ್ ಪೌಲ್‍ಗೆ ಚಿನ್ನ, ಅಬ್ದುಲ್ಲಾ ಅಬೂಬಕರ್‌ಗೆ ಕಂಚು

    ಯಾರಿದು ವಾಲ್ಟೇಕರ್?
    ವರ್ಜೀನಿಯಾದ ಬ್ರಿಯಾರ್ ವುಡ್ಸ್ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿನಿ ಆರ್ಯ ವಾಲ್ವೇಕರ್ 18 ವರ್ಷದ ಯುವತಿ. ಈಕೆ ವಿವಿಧ ಜಾಗೃತಿ ಅಭಿಯಾನಗಳನ್ನ ಮಾಡಿದ್ದು, ಟಿಇಡಿಎಕ್ಸ್ ಕಾರ್ಯಕ್ರಮಗಳಲ್ಲಿ ಆರೋಗ್ಯಕರ ಮರುಚಿಂತನೆಯ ಉಪನ್ಯಾಸ ನೀಡಿದ್ದಾರೆ. ಯುಫೋರಿಯಾ ಡ್ಯಾನ್ಸ್ ಸ್ಟುಡಿಯೋದ ಸಂಸ್ಥಾಪಕರಾಗಿರುವ ವಾಲ್ವೇಕರ್, ಸ್ಥಳೀಯ ಮಕ್ಕಳಿಗೆ ಕಡಿಮೆ ಶುಲ್ಕದಲ್ಲೇ ನೃತ್ಯ ಹೇಳಿಕೊಡುತ್ತಿದ್ದಾರೆ.

    18 ವರ್ಷದ ವಾಲ್ವೇಕರ್ ಶಾಲೆ ಮತ್ತು ಸಮುದಾಯ ರಂಗಭೂಮಿ ಚಟುವಟಿಕೆಗಳಲ್ಲೂ ಭಾಗವಹಿಸಿದ್ದಾರೆ. ಮಕ್ಕಳ ನಾಟಕಗಳಿಗೆ ನಿರ್ದೇಶಕರಾಗಿ ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದಾರೆ. ಅಡುಗೆ ಮಾಡುವುದು, ಚರ್ಚೆ ಮಾಡುವುದು ಇವರ ಹವ್ಯಾಸವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ಮನಬಂದಂತೆ ಗುಂಡಿನ ದಾಳಿ- ಕಿರಾತಕನ ಗುಂಡೇಟಿಗೆ ನಾಲ್ವರು ಬಲಿ, ಆರೋಪಿ ಪರಾರಿ

    ಮನಬಂದಂತೆ ಗುಂಡಿನ ದಾಳಿ- ಕಿರಾತಕನ ಗುಂಡೇಟಿಗೆ ನಾಲ್ವರು ಬಲಿ, ಆರೋಪಿ ಪರಾರಿ

    ವಾಷಿಂಗ್ಟನ್: ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದ್ದು, ವ್ಯಕ್ತಿಯೊಬ್ಬ ನಾಲ್ವರ ಮೇಲೆ ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ.  ಓಹಿಯೋದ ಬಟ್ಲರ್ ಟೌನ್‍ಶಿಪ್‍ನಲ್ಲಿ ಗುಂಡೇಟಿಗೆ ನಾಲ್ವರು ಬಲಿಯಾಗಿದ್ದು, ಪೊಲೀಸರು ಈಗ ಆರೋಪಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಬಟ್ಲರ್ ಟೌನ್‍ಶಿಪ್ ಪೊಲೀಸ್ ಮುಖ್ಯಸ್ಥ ಜಾನ್ ಪೋರ್ಟರ್ ಮಾತನಾಡಿದ್ದು, ಡೇಟನ್‍ನ ಉತ್ತರದಲ್ಲಿರುವ ಸಣ್ಣ ಓಹಿಯೋ ಪಟ್ಟಣದಲ್ಲಿ ಈ ಗುಂಡಿನ ದಾಳಿ ನಡೆದಿದೆ. ಸ್ಟೀಫನ್ ಮಾರ್ಲೋನನ್ನು ಆರೋಪಿ ಎಂದು ಗುರುತಿಸಲಾಗಿದೆ. ಆತ ಅಪಾಯಕಾರಿ ಆಯುಧಗಳನ್ನು ಇಟ್ಟುಕೊಂಡಿದ್ದು, ಯಾವ ಉದ್ದೇಶಕ್ಕೆ ಗುಂಡಿನ ದಾಳಿ ಮಾಡುತ್ತಿದ್ದಾನೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿಲ್ಲವೆಂದಿದ್ದಾರೆ. ಇದನ್ನೂ ಓದಿ: ‘ಚಿಕನ್ ಕಥಿ’ ಆಯ್ತು.. ಇಂದು ‘ಚಿಕನ್ ಕಾಲು ಸೂಪ್’ ಮಾಡಿ ಸವಿಯಿರಿ

    ಮಾರ್ಲೋ ಓಹಿಯೋದಿಂದ ಪಲಾಯನ ಮಾಡಿದ್ದಾನೆ. ಆತ ಲೆಕ್ಸಿಂಗ್ಟನ್, ಕೆಂಟುಕಿ, ಇಂಡಿಯಾನಾಪೊಲಿಸ್ ಮತ್ತು ಚಿಕಾಗೋದೊಂದಿಗೆ ಸಂಬಂಧವನ್ನು ಹೊಂದಿದ್ದಾನೆ. ಪ್ರಸ್ತುತ ಆತನ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಈ ಸುತ್ತಮುತ್ತ ಇದೇ ಮೊದಲ ಹಿಂಸಾತ್ಮಕ ಕೃತ್ಯವೆಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಲೇಷ್ಯಾಗೆ 18 ತೇಜಸ್‌ ವಿಮಾನ – ಅಮೆರಿಕ ಸೇರಿದಂತೆ 6 ರಾಷ್ಟ್ರಗಳಿಂದ ಖರೀದಿಗೆ ಆಸಕ್ತಿ

    ಮಲೇಷ್ಯಾಗೆ 18 ತೇಜಸ್‌ ವಿಮಾನ – ಅಮೆರಿಕ ಸೇರಿದಂತೆ 6 ರಾಷ್ಟ್ರಗಳಿಂದ ಖರೀದಿಗೆ ಆಸಕ್ತಿ

    ನವದೆಹಲಿ: ಭಾರತವು ಮಲೇಷ್ಯಾಕ್ಕೆ 18 ತರಬೇತಿ ʼತೇಜಸ್‌ʼ ಲಘು ಯುದ್ಧ ವಿಮಾನ (ಎಲ್‌ಸಿಎ) ಮಾರಾಟ ಮಾಡಲು ಮುಂದಾಗಿದೆ.

    ಅರ್ಜೆಂಟೀನಾ, ಆಸ್ಟ್ರೇಲಿಯಾ, ಈಜಿಪ್ಟ್, ಅಮೆರಿಕ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಕೂಡ ಸಿಂಗಲ್‌ ಎಂಜಿನ್‌ ಹೊಂದಿರುವ ಯುದ್ಧ ವಿಮಾನವನ್ನು ಖರೀದಿಸಲು ಆಸಕ್ತಿ ತೋರಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

    ಕಳೆದ ವರ್ಷ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ 83 ತೇಜಸ್‌ ವಿಮಾನ ನಿರ್ಮಾಣ ಸಂಬಂಧ 6 ಶತಕೋಟಿ ಡಾಲರ್‌ ಮೌಲ್ಯದ ಗುತ್ತಿಗೆಯನ್ನು ನೀಡಿತ್ತು. 2023ಕ್ಕೆ ಎಚ್‌ಎಎಲ್‌ ವಿಮಾನವನ್ನು ವಿತರಿಸಲಿದೆ.

    1983ರಲ್ಲಿ ಅನುಮೋದನೆಗೊಂಡ ನಾಲ್ಕು ದಶಕಗಳ ನಂತರ ಈಗ ಎಚ್‌ಎಎಲ್‌ ಎಲ್‌ಸಿಎ ತೇಜಸ್‌ ವಿಮಾನವನ್ನು ಮಾರಾಟ ಮಾಡುತ್ತಿದೆ.

    ವಿದೇಶಿ ರಕ್ಷಣಾ ಸಾಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮೋದಿ ಸರ್ಕಾರ ಜೆಟ್‌ ವಿಮಾನಗಳನ್ನು ರಫ್ತು ಮಾಡಲು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡುತ್ತಿದೆ. ಈ ಹಿಂದೆ ವಿನ್ಯಾಸ ಮತ್ತು ತೂಕದ ಕಾರಣ ನೀಡಿ ಭಾರತೀಯ ನೌಕಾಪಡೆ ತೇಜಸ್‌ ವಿಮಾನವನ್ನು ತಿರಸ್ಕರಿಸಿತ್ತು. ಬಳಿಕ ತಾಂತ್ರಿಕತೆ, ಏವಿಯಾನಿಕ್ಸ್‌ಗಳಲ್ಲಿ ಬದಲಾವಣೆ ಮಾಡಿದ್ದು ಈಗ ವಿದೇಶಕ್ಕೆ ಮಾರಾಟ ಮಾಡಲು ಮುಂದಾಗುತ್ತಿರುವುದು ವಿಶೇಷ.

    ಕಳೆದ ವರ್ಷ ಅಕ್ಟೋಬರ್‌ನಲ್ಲಿ 18 ಜೆಟ್‌ ಖರೀದಿ ಸಂಬಂಧ ರಾಯಲ್ ಮಲೇಷಿಯನ್ ಏರ್ ಪ್ರಸ್ತಾವನೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಕೇಳಲಾದ ಲಿಖಿತ ಪ್ರಶ್ನೆಗೆ ರಕ್ಷಣ ಇಲಾಖೆ ಪ್ರತಿಕ್ರಿಯಿಸಿದ್ದು, ತೇಜಸ್‌ನ ವಿಮಾನಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಮಿಗ್ 29 ಬದಲಿಸಲು ಮಲೇಷ್ಯಾದ ಮೊದಲ ಆಯ್ಕೆ ಭಾರತದ ತೇಜಸ್ ಯಾಕೆ? 

    ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್‌ ಭಟ್‌, ಅರ್ಜೆಂಟೀನಾ, ಆಸ್ಟ್ರೇಲಿಯಾ, ಈಜಿಪ್ಟ್, ಯುಎಸ್‌ಎ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಎಲ್‌ಸಿಎ ಖರೀದಿಸಲು ಆಸಕ್ತಿ ತೋರಿಸಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

    ದೇಶವು ಫೈಟರ್ ಜೆಟ್ ತಯಾರಿಸುವ ಕೆಲಸ ಮಾಡುತ್ತಿದೆ ಎಂದ ಅವರು ರಾಷ್ಟ್ರೀಯ ಭದ್ರತೆಯ ಕಾಳಜಿಯನ್ನು ಉಲ್ಲೇಖಿಸಿ ಟೈಮ್‌ಲೈನ್ ನೀಡಲು ನಿರಾಕರಿಸಿದರು.

    ತನ್ನದೇ ಆದ ಯುದ್ಧ ವಿಮಾನಗಳನ್ನು ನಿರ್ಮಿಸುವ ಭಾರತದ ನಡೆಯನ್ನು ಬೆಂಬಲಿಸುವುದಾಗಿ ಬ್ರಿಟನ್ ಏಪ್ರಿಲ್‌ನಲ್ಲಿ ಹೇಳಿತ್ತು. ಭಾರತದ ವಾಯುಸೇನೆಯಲ್ಲಿ ಪ್ರಸ್ತುತ ರಷ್ಯಾ, ಬ್ರಿಟಿಷ್ ಮತ್ತು ಫ್ರೆಂಚ್ ಯುದ್ಧ ವಿಮಾನಗಳಿವೆ.

    ಕಾರ್ಯನಿರ್ವಹಿಸುತ್ತಿರುವಾಗಲೇ ಪತನ ಹೊಂದುತ್ತಿರುವ ಕಾರಣ ʼಹಾರುವ ಶವಪೆಟ್ಟಿಗೆʼ ಎಂದೇ ಕುಖ್ಯಾತಿ ಪಡೆದಿರುವ ರಷ್ಯಾದಿಂದ ಖರೀದಿಸಲಾಗಿರುವ ಎಲ್ಲ ಮಿಗ್‌ ವಿಮಾನಗಳಿಗೆ 2025ರ ವೇಳೆಗೆ ನಿವೃತ್ತಿ ಹೇಳಲು ವಾಯುಸೇನೆ ಮುಂದಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಯುದ್ಧ ವಿಮಾನ ತೇಜಸ್‍ನಲ್ಲಿ ರಾಜನಾಥ್ ಸಿಂಗ್ ಹಾರಾಟ

    ಭಾರತದ ಸಿಂಗಲ್ ಎಂಜಿನ್ ಫೈಟರ್ ಜೆಟ್ ತೇಜಸ್ ಮಲೇಷ್ಯಾದ ಮೊದಲ ಆದ್ಯತೆಯಾಗಿದ್ದು, ಅದು ತನ್ನ ಹಳೆಯ ಮಿಗ್-29 ಅನ್ನು ಬದಲಿಸಲು ಯೋಜಿಸುತ್ತಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಹೆಚ್‌ಎಎಲ್)ನ ಅಧ್ಯಕ್ಷ ಆರ್. ಮಾಧವನ್ ಕಳೆದ ತಿಂಗಳು ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]