Tag: USA

  • Twitter ನಲ್ಲಿ ಮೋದಿ ಫಾಲೋ ಮಾಡ್ತಿರುವ ಮಸ್ಕ್‌ – ಭಾರತಕ್ಕೆ ಬರುತ್ತೆ ಟೆಸ್ಲಾ ಎಂದ ನೆಟ್ಟಿಗರು!

    Twitter ನಲ್ಲಿ ಮೋದಿ ಫಾಲೋ ಮಾಡ್ತಿರುವ ಮಸ್ಕ್‌ – ಭಾರತಕ್ಕೆ ಬರುತ್ತೆ ಟೆಸ್ಲಾ ಎಂದ ನೆಟ್ಟಿಗರು!

    ವಾಷಿಂಗ್ಟನ್‌: ಟೆಸ್ಲಾ (Tesla) ಮುಖ್ಯಸ್ಥ ಹಾಗೂ ಟ್ವಿಟ್ಟರ್‌ ಸಿಇಒ ಎಲೋನ್‌ ಮಸ್ಕ್‌ (Elon Musk) ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನ ಟ್ವಿಟ್ಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಈ ವಿಷಯ ಜಾಲತಾಣದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

    87.7 ಮಿಲಿಯನ್ ಫಾಲೋವರ್ಸ್​ಗಳನ್ನ ಹೊಂದಿರುವ ಪ್ರಧಾನಿ ಮೋದಿ ಅವರನ್ನು ಟ್ವಿಟರ್‌ನಲ್ಲಿ (Twitter) ಅತಿ ಹೆಚ್ಚು ಫಾಲೋ ಮಾಡುತ್ತಿರುವ ವಿಶ್ವ ನಾಯಕರಲ್ಲಿ ಒಬ್ಬರಾಗಿದ್ದಾರೆ. ಇದೀಗ ಮೋದಿಯನ್ನು ಟ್ವಿಟರ್​ ಸಿಇಒ ಎಲೋನ್ ಮಸ್ಕ್ ಫಾಲೋ ಮಾಡುತ್ತಿದ್ದಾರೆ. ಇದನ್ನೂಓದಿ: ಪೊಲೀಸರ ಬಂಧನದಿಂದ ಎಸ್ಕೇಪ್ ಆಗಿದ್ದ ಅಮೃತ್‌ಪಾಲ್ ಸಿಂಗ್‌ನ ಆಪ್ತ ಸಹಾಯಕ ಅರೆಸ್ಟ್ 

    ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಕೇವಲ 195 ಜನರನ್ನ ಮಾತ್ರ ಫಾಲೋ ಮಾಡುತ್ತಿರುವ ಎಲೋನ್ ಮಸ್ಕ್ 134.3 ಮಿಲಿಯನ್ ಫಾಲೋವರ್ಸ್​ಗಳನ್ನ ಹೊಂದಿದ್ದಾರೆ. ಮಾರ್ಚ್ ಕೊನೆಯಲ್ಲಿ ಮಸ್ಕ್, ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನ ಹಿಂದಿಕ್ಕಿ ಹೆಚ್ಚು ಫಾಲೋವರ್ಸ್​ಗಳನ್ನ ಹೊಂದಿದವರು ಎನಿಸಿಕೊಂಡಿದ್ದರು. ಇದೀಗ 87.7 ಮಿಲಿಯನ್ ಫಾಲೋವರ್ಸ್​ಗಳನ್ನ ಹೊಂದಿರುವ ಪ್ರಧಾನಿ ಮೋದಿ ಅವರನ್ನು ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿರುವ ಪ್ರಭಾವಿಗಳಲ್ಲಿ ಎಲೋನ್‌ ಮಸ್ಕ್‌ ಒಬ್ಬರಾಗಿದ್ದಾರೆ.

    ಈ ವಿಚಾರ ಇದೀಗ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಕೆಲವರು ಮಸ್ಕ್‌ ಮೋದಿಯನ್ನ ಫಾಲೋ ಮಾಡಲು ಕಾರಣವೇನು ಎಂದು ಪ್ರಶ್ನಿಸಿದ್ದು, ಮಸ್ಕ್, ಮೋದಿಯನ್ನ ಫಾಲೋ ಮಾಡ್ತಿದ್ದಾರೆ ಅಂದ್ರೆ ಶೀಘ್ರದಲ್ಲೇ ಟೆಸ್ಲಾ ಭಾರತಕ್ಕೆ ಬರುತ್ತೆ ಎಂದರ್ಥ ಎಂದು ಮತ್ತೊಬ್ಬರು ಟಾಂಗ್‌ ಕೊಟ್ಟಿದ್ದಾರೆ. ಇದನ್ನೂಓದಿ: ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ: ಅಮಿತ್ ಶಾ 

  • ಮಾನಹಾನಿ ಕೇಸ್‌ನಲ್ಲಿ ನೀಲಿಚಿತ್ರ ನಟಿಗೆ ಸೋಲು – 1 ಕೋಟಿ ಪಾವತಿಸುವಂತೆ ಕೋರ್ಟ್ ಆದೇಶ

    ಮಾನಹಾನಿ ಕೇಸ್‌ನಲ್ಲಿ ನೀಲಿಚಿತ್ರ ನಟಿಗೆ ಸೋಲು – 1 ಕೋಟಿ ಪಾವತಿಸುವಂತೆ ಕೋರ್ಟ್ ಆದೇಶ

    ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ವಿರುದ್ಧದ ಮಾನಹಾನಿ ಪ್ರಕರಣದಲ್ಲಿ ನೀಲಿಚಿತ್ರ ನಟಿ ಸ್ಟಾರ್ಮಿ ಡೇನಿಯಲ್ಸ್‌ಗೆ (Stormy Daniels) ಸೋಲಾಗಿದೆ. ಹೀಗಾಗಿ ಟ್ರಂಪ್ ಅವರ ವಕೀಲರಿಗೆ 121,000 ಡಾಲರ್ ಮೊತ್ತ (ಸುಮಾರು 1 ಕೋಟಿ ರೂ.) ಪಾವತಿಸುವಂತೆ ಕ್ಯಾಲಿಫೋರ್ನಿಯಾದ ಸರ್ಕ್ಯೂಟ್ ನ್ಯಾಯಾಲಯವು (Circuit Court) ಸೂಚಿಸಿದೆ.

    ಟ್ರಂಪ್ ವಿರುದ್ಧ ಯಾವುದೇ ಆರೋಪ ಮಾಡದಂತೆ ಟ್ವಿಟ್ಟರ್‌ನಲ್ಲಿ ಅನಾಮಿಕ ವ್ಯಕ್ತಿ ಬೆದರಿಕೆ ಹಾಕಿದ್ದ. ತನ್ನ ವಿರುದ್ಧ ಟ್ರಂಪ್ ಕಡೆಯವರೇ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸ್ಟಾರ್ಮಿ ಡೇನಿಯಲ್ಸ್ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಸಾಬೀತಾಗದ ಹಿನ್ನೆಲೆಯಲ್ಲಿ ಕೋರ್ಟ್ ಸ್ಟಾರ್ಮಿ ಡೇನಿಯಲ್ಸ್‌ಗೆ ದಂಡ ವಿಧಿಸಿದೆ.

    ಸ್ಟಾರ್ಮಿ ಡೇನಿಯಲ್ಸ್ ಹಾಗೂ ಟ್ರಂಪ್ ನಡುವಿನ ಸಂಬಂಧ ಮರೆಮಾಚಲು ಆಕೆಗೆ ಹಣ ಪಾವತಿಸಲಾಗಿತ್ತು ಎಂಬ ಪ್ರಕರಣದಲ್ಲಿ ಬಂಧಿಸಿ, ವಿಚಾರಣೆ ಬಳಿಕ ಬಿಡುಗಡೆ ಮಾಡಲಾಗಿತ್ತು. ಮ್ಯಾನ್ ಹಾಟನ್ ಜಿಲ್ಲಾ ಅಟಾರ್ನಿಯ ಕೋರ್ಟ್ ಸಭಾಂಗಣದಲ್ಲಿ ಟ್ರಂಪ್ ಶರಣಾದರು. ಬಳಿಕ ಅವರನ್ನು ಬಂಧಿಸಿದ ಪೊಲೀಸರು ಬಿಗಿ ಭದ್ರತೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ವಿಚಾರಣೆ ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು.

    ಈ ವೇಳೆ ಟ್ರಂಪ್ ವಿರುದ್ಧ ಲೈಂಗಿಕ ಪ್ರಕರಣ ಮುಚ್ಚಿಡಲು ಹಣ ನೀಡಿದ್ದು, ಸೇರಿದಂತೆ ಹಣ ವಂಚನೆಯ 34 ದೋಷಾರೋಪಗಳನ್ನು ಹೊರಿಸಲಾಗಿತ್ತು. ಕಾನೂನು ಸಲಹಾ ಸಿಬ್ಬಂದಿ ಜೊತೆ ಬಂದಿದ್ದ ಟ್ರಂಪ್, ನಾನು ತಪ್ಪು ಮಾಡಿಲ್ಲ. 34 ಆರೋಪಗಳಲ್ಲಿ ನಾನು ನಿರಪರಾಧಿ ಎಂದು ವಾದಿಸಿದ್ದರು. ಇದನ್ನೂ ಓದಿ: ನೀಲಿಚಿತ್ರ ನಟಿಗೆ ಹಣ ವರ್ಗಾವಣೆ – ಡೊನಾಲ್ಡ್ ಟ್ರಂಪ್ ಬಂಧನ

    ಸುಮಾರು ಒಂದು ಗಂಟೆ ಕಾಲ ವಿಚಾರಣೆ ನಡೆಯಿತು. ವಿಚಾರಣೆಯ ನಂತರ ಟ್ರಂಪ್, ತಮ್ಮ ವಾಹನದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದರು. ಈ ಮೂಲಕ ಅಮೆರಿಕದ ಇತಿಹಾಸದಲ್ಲೇ ಕ್ರಿಮಿನಲ್ ಆರೋಪ ಪ್ರಕರಣದ ವಿಚಾರಣೆ ಎದುರಿಸಿ ಬಂಧನಕ್ಕೆ ಒಳಗಾದ ಮೊದಲ ಅಮೆರಿಕದ ಮಾಜಿ ಅಧ್ಯಕ್ಷರಾಗಿದ್ದಾರೆ.

    ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿರುದ್ಧ ವಾಗ್ದಾಳಿ ನಡೆಸಿರುವ ಟ್ರಂಪ್, ದೇಶಕ್ಕೆ ಇಂತಹ ಪರಿಸ್ಥಿತಿ ಬರುತ್ತೆ ಎಂದು ನಾನೆಂದು ಭಾವಿಸಿರಲಿಲ್ಲ. ದೇಶವಿಂದು ಕತ್ತಲಿನಲ್ಲಿದೆ, ದೇಶದ ಶಕ್ತಿ ಕ್ಷೀಣಿಸುತ್ತಿದೆ. ಜಗತ್ತು ಅಮೆರಿಕದತ್ತ ನೋಡಿ ನಗುತ್ತಿದೆ. ಆಫ್ಘನ್‌ನಿಂದ ಪಡೆಗಳ ವಾಪಸ್ ನಿರ್ಧಾರ ನಗೆಪಾಟಲಿಗೀಡಾಗಿದೆ. ದೇಶಾದ್ಯಂತ ಇರುವ ಅತಿವಾದ ಎಡಪಂಥೀಯ ಶಕ್ತಿಗಳು ನನ್ನ ದಮನಕ್ಕೆ ಪ್ರಯತ್ನಿಸ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: PlayBoyಗೆ ಪೋಸ್‌ ಕೊಟ್ಟ ಫ್ರೆಂಚ್‌ ಸಚಿವೆ ನಡೆಗೆ ವ್ಯಾಪಕ ವಿರೋಧ

    ಏನಿದು ಕಳ್ಳ ಸಂಬಂಧ ಕೇಸ್?
    ಟ್ರಂಪ್ ಅವರು ಈ ಹಿಂದೆ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ (ನಿಜವಾದ ಹೆಸರು ಸ್ಟೆಫನಿ ಕ್ಲಿಫರ್ಡ್) ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. 2016ರ ಚುನಾವಣೆ ವೇಳೆ ಈ ಸಂಬಂಧ ಬಹಿರಂಗಪಡಿಸುವುದನ್ನು ತಡೆಯಲು ಟ್ರಂಪ್ ಆಕೆಗೆ 1,30,000 ಡಾಲರ್ (ಸುಮಾರು 1,07,00,000 ರೂ.) ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ.

  • ಮೆಕ್ಸಿಕೋ ವಲಸಿಗರ ಕೇಂದ್ರದಲ್ಲಿ ಭೀಕರ ಅಗ್ನಿ ದುರಂತ – 39 ಮಂದಿ ಸಾವು

    ಮೆಕ್ಸಿಕೋ ವಲಸಿಗರ ಕೇಂದ್ರದಲ್ಲಿ ಭೀಕರ ಅಗ್ನಿ ದುರಂತ – 39 ಮಂದಿ ಸಾವು

    ವಾಷಿಂಗ್ಟನ್‌: ಉತ್ತರ ಮೆಕ್ಸಿಕೋದ (Northern Mexico) ಸಿಯುಡಾಡ್ ಜುವಾರೆಜ್‌ನಲ್ಲಿರುವ ಸರ್ಕಾರಿ ವಲಸಿಗರ ಕೇಂದ್ರದಲ್ಲಿ (Migration Facility Center) ಸೋಮವಾರ ರಾತ್ರಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಘಟನೆಯಲ್ಲಿ 39 ಮಂದಿ ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ.

    ಮೆಕ್ಸಿಕೋ ಮತ್ತು ಅಮೆರಿಕ (USA) ಸಂಪರ್ಕಿಸುವ ಸ್ಟಾಂಟನ್-ಲೆಡ್ರೆ ಸೇತುವೆಯ ಬಳಿ ಇರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಮೈಗ್ರೇಷನ್ ಕಚೇರಿಯಲ್ಲಿ (INM) ರಾತ್ರಿ 10 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ. ಘಟನೆಗೂ ಮುನ್ನ ನಗರದಿಂದ 71 ವಲಸಿಗರನ್ನು ಕೇಂದ್ರಕ್ಕೆ ಕರೆತರಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ಶಾಲೆಯಲ್ಲಿ ಗುಂಡಿನ ದಾಳಿ – ಮೂವರು ಮಕ್ಕಳು ಸೇರಿ 6 ಜನ ಸಾವು

    ಸದ್ಯ ಘಟನೆಯ ದೃಶ್ಯಾವಳಿಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಂಬುಲೆನ್ಸ್‌ ಹಾಗೂ ತುರ್ತು ಸೇವೆಗಳ ಸೌಲಭ್ಯ ಕಲ್ಪಿಸಲಾಗಿದ್ದು, ಗಾಯಗೊಂಡವರನ್ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ – 20 ಹಜ್ ಯಾತ್ರಾರ್ಥಿಗಳ ಸಾವು

    ಮೂಲಗಳ ಪ್ರಕಾರ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಮೈಗ್ರೇಷನ್ ಕಚೇರಿ ಸಿಬ್ಬಂದಿ ನಗರದಲ್ಲಿದ್ದ ವಲಸಿಗರನ್ನು ಕೇಂದ್ರಕ್ಕೆ ತರುವ ಕಾರ್ಯಾಚರಣೆ ಕೈಗೊಂಡಿದ್ದರು. ಈ ವಿಚಾರದಲ್ಲಿ ವಲಸಿಗರು ಮತ್ತು ಸಿಬ್ಬಂದಿ ನಡುವೆ ಉದ್ವಿಗ್ನತೆ ಉಂಟಾಗಿತ್ತು ಎಂದು ತಿಳಿದುಬಂದಿದೆ. ಘಟನೆಯ ನಂತರ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

  • ಅಮೆರಿಕದಲ್ಲಿ ಭೀಕರ ಸುಂಟರಗಾಳಿಗೆ 23 ಮಂದಿ ಬಲಿ

    ಅಮೆರಿಕದಲ್ಲಿ ಭೀಕರ ಸುಂಟರಗಾಳಿಗೆ 23 ಮಂದಿ ಬಲಿ

    ವಾಷಿಂಗ್ಟನ್‌: ಅಮೆರಿಕದ (USA) ಪಶ್ಚಿಮ ಮಿಸಿಸಿಪ್ಪಿಯ (Mississippi) 200 ಜನರಿರುವ ಪಟ್ಟಣವಾದ ಸಿಲ್ವರ್ ಸಿಟಿ ಹಾಗೂ ಅಲ್ಬಾಮಾ ಪ್ರಾಂತ್ಯಗಳಲ್ಲಿ ಸಂಭವಿಸಿದ ಭೀಕರ ಸುಂಟರಗಾಳಿಗೆ (Tornado) ಕನಿಷ್ಠ 23 ಮಂದಿ ಬಲಿಯಾಗಿದ್ದಾರೆ. ನಾಲ್ವರು ಕಾಣೆಯಾಗಿದ್ದು, ರಕ್ಷಣಾ ಕಾರ್ಯಾಚಾರಣೆ ನಡೆಯುತ್ತಿದೆ.

    ಭೀಕರ ಗಾಳಿಯ ಹೊಡೆತಕ್ಕೆ ಅನೇಕ ದೈತ್ಯ ಕಟ್ಟಡಗಳು ಧರೆಗುರುಳಿದ್ದು, ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಮಿಸಿಸಿಪ್ಪಿ ಪ್ರಾಂತ್ಯದ ಗ್ರಾಮೀಣ ಪ್ರದೇಶವಾದ ಸಿಲ್ವಿರ್‌ ಸಿಟಿ ಮತ್ತು ರೋಲಿಂಗ್‌ ಫೋರ್ಕ್‌ ಪಟ್ಟಣ ಹಾಗೂ ಜಾಕ್ಸನ್‌ ನಗರದ ಈಶಾನ್ಯ ಪ್ರದೇಶದಲ್ಲಿ ಹಲವು ಕಟ್ಟಡಗಳು ನೆಲಸಮಗೊಂಡಿವೆ. ಗಂಟೆಗೆ 100 ಮೈಲುಗಳಿಗಿಂತ ಹೆಚ್ಚು (160 ಕಿಮೀ) ವೇಗದಲ್ಲಿ ಗಾಳಿ ಬೀಸಿದ್ದು, ಸಾಕಷ್ಟು ಹಾನಿಯುಂಟುಮಾಡಿದೆ ಎಂದು ರಾಜ್ಯದ ತುರ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

    ಬದುಕುಳಿದವರಿಗಾಗಿ ರಕ್ಷಣಾ ತಂಡಗಳು ಹುಡುಕಾಟ ನಡೆಸುತ್ತಿವೆ ಎಂದು ಮಿಸ್ಸಿಸ್ಸಿಪ್ಪಿ ತುರ್ತು ನಿರ್ವಹಣಾ ಸಂಸ್ಥೆ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದೆ. 1,700 ಜನರಿರುವ ಪಟ್ಟಣವಾದ ರೋಲಿಂಗ್ ಫೋರ್ಕ್‌ನಲ್ಲಿಯೂ ಹಾನಿಯುಂಟಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

  • ನೀರಿನಲ್ಲೂ ಶತ್ರುಸೈನ್ಯ ನಾಶಮಾಡುವ ನ್ಯೂಕ್ಲಿಯರ್ ಡ್ರೋನ್ ಪರೀಕ್ಷೆ ಯಶಸ್ವಿ – ಸಾಮರ್ಥ್ಯ ಎಷ್ಟಿದೆ ಗೊತ್ತಾ?

    ನೀರಿನಲ್ಲೂ ಶತ್ರುಸೈನ್ಯ ನಾಶಮಾಡುವ ನ್ಯೂಕ್ಲಿಯರ್ ಡ್ರೋನ್ ಪರೀಕ್ಷೆ ಯಶಸ್ವಿ – ಸಾಮರ್ಥ್ಯ ಎಷ್ಟಿದೆ ಗೊತ್ತಾ?

    ಪೋಂಗ್ಯಾಂಗ್: ನೀರಿನಲ್ಲೂ ದಾಳಿ ಮಾಡಿ ಶತ್ರುಸೈನ್ಯವನ್ನು ನಾಶಮಾಡಬಲ್ಲ ಅಣು ಸಾಮರ್ಥ್ಯದ ಅಂಡರ್ ವಾಟರ್ ಡ್ರೋನ್ (Underwater Attack Drone) `ಹೈಲ್’ (Haeil) ಪ್ರಯೋಗ ಯಶಸ್ವಿಯಾಗಿದೆ ಎಂದು ಉತ್ತರ ಕೋರಿಯಾ ಹೇಳಿಕೊಂಡಿದೆ. ಈ ಮೂಲಕ ಉತ್ತರ ಕೊರಿಯಾ (North Korea) ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಅಮೆರಿಕ-ದಕ್ಷಿಣ ಕೊರಿಯಾದ ಜಂಟಿ ಮಿಲಿಟರಿ ಸಮರಾಭ್ಯಾಸ ನಿಲ್ಲಿಸಬೇಕೆಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ.

    ಹೈಲ್ ಡ್ರೋನ್ ಮೂಲಕ ಭಾರೀ ಸುನಾಮಿಯನ್ನೇ ಸೃಷ್ಟಿಸಿ ತೀರ ಪ್ರದೇಶದ ನೌಕಾನೆಲೆ, ಸಮುದ್ರದ ಮಧ್ಯೆ ಇರುವ ಶತ್ರುಸ್ಥಾವರಗಳನ್ನ ನಾಶ ಮಾಡುವ ಶಕ್ತಿಯೂ ತಮ್ಮ ದೇಶಕ್ಕೆ ಸಿದ್ಧಿಸಿದೆ ಎಂದು ಉತ್ತರ ಕೋರಿಯಾ ಹೇಳಿಕೊಂಡಿದೆ.

    ಉತ್ತರ ಕೊರಿಯಾದ ಪಶ್ಚಿಮ ಭಾಗದಲ್ಲಿ ಜಲಾಂತರ್ಗಾಮಿ ಮೂಲಕ ನ್ಯೂಕ್ಲಿಯರ್ ಡ್ರೋನ್ ಅನ್ನು 80 ರಿಂದ 150 ಮೀಟರ್ ನಷ್ಟು (260 ರಿಂದ 500 ಅಡಿ ಆಳ) ಸಾಗರದ ಆಳಕ್ಕೆ ಕಳುಹಿಸಲಾಗಿತ್ತು. ಸುಮಾರು 59 ಗಂಟೆಗಳ ಕಾಲ ಈ ಪರೀಕ್ಷೆ ನಡೆಯಿತು ಎಂದು ತಿಳಿದುಬಂದಿದೆ. ಇದನ್ನೂ ಓದಿ: PublicTV Explainer: ನಿತ್ಯಾನಂದನ ಕೈಲಾಸದಲ್ಲಿರಲು ಈ ರೂಲ್ಸ್ ಫಾಲೋ ಮಾಡ್ಲೇಬೇಕಂತೆ

    ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ವಿಶ್ಲೇಷಕರೊಬ್ಬರು, ಉತ್ತರ ಕೊರಿಯಾ ನಡೆಸುತ್ತಿರುವ ವಿವಿಧ ರೀತಿಯ ನ್ಯೂಕ್ಲಿಯರ್ ಪರೀಕ್ಷೆಗಳು ಕೇವಲ ಪ್ರದರ್ಶನವಷ್ಟೇ. ಇದರಿಂದಾಗಿ ಅಮೆರಿಕ ಮತ್ತು ದಕ್ಷಿಣ ಕೊರಿಯಾಕ್ಕೆ ಒತ್ತಡ ಹೆಚ್ಚುತ್ತದೆಯೇ ಹೊರತು, ಈ ಜಲಾಂತರ್ಗಾಮಿ ನ್ಯೂಕ್ಲಿಯರ್ ಡ್ರೋನ್‌ನನ್ನು ಕಾರ್ಯಾಚರಣೆಗೆ ಉತ್ತರ ಕೊರಿಯಾ ಬಳಸುವುದು ಸಂಶಯಾಸ್ಪದ ಎಂದಿದ್ದಾರೆ.

    ಈ ಕುರಿತು ದಕ್ಷಿಣ ಕೊರಿಯಾದ ಸೇನಾ ಅಧಿಕಾರಿಯೊಬ್ಬರು `ಉತ್ತರ ಕೊರಿಯಾ ನಡೆಸಿದೆ ಎನ್ನಲಾದ ಈ ಪರೀಕ್ಷೆಯ ಸತ್ಯಾಸತ್ಯತೆ ತಿಳಿಯಲಾಗುವುದು’ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧಕ್ಕೆ ರಷ್ಯಾದಲ್ಲಿ ಮತ್ತೆ 4 ಲಕ್ಷ ಸೈನಿಕರ ನೇಮಕ?

    ಹೈಲ್ ವಿಶೇಷತೆ ಏನು?
    `ಹೈಲ್’ ಅಥವಾ ಸುನಾಮಿ ಎಂದೇ ಕರೆಯಲ್ಪಡುವ ಈ ಡ್ರೋನ್ ವ್ಯವಸ್ಥೆಯು ನೀರಿನಲ್ಲಿಯೂ ಶತ್ರುಗಳ ಸುಳಿವನ್ನು ಪತ್ತೆಹಚ್ಚುತ್ತದೆ. ಜೊತೆಗೆ ನೀರಿನಲ್ಲೂ ಸ್ಫೋಟಿಸುವ ಮೂಲಕ ಸೂಪರ್ ಸ್ಕೇಲ್ ವಿಕಿರಣ ತರಂಗಗಳನ್ನ ಸೃಷ್ಟಿಸಿ ಪ್ರಮುಖ ಕಾರ್ಯಾಚರಣೆಯ ಬಂದರುಗಳನ್ನು ನಾಶಪಡಿಸುತ್ತದೆ. ಶತ್ರು ಸೈನ್ಯಕ್ಕೆ ಸುಲಭವಾಗಿ ಮಣ್ಣುಮುಕ್ಕಿಸಲು ಸಹಕಾರಿಯಾಗುತ್ತದೆ. ಮಾಹಿತಿ ಪ್ರಕಾರ ಈ ಕ್ಷಿಪಣಿಗಳು ಸುಮಾರು 1,500 ರಿಂದ 1,800 ಕಿಮೀ (930-1,120 ಮೈಲಿ) ದೂರಗಳವರೆಗೆ ದಾಳಿ ಮಾಡುವ ಸಾಮರ್ಥ್ಯ ಹೊಂದಿವೆ ಎಂದು ಹೇಳಲಾಗಿದೆ.

  • 5,70,000ಕ್ಕೂ ಹೆಚ್ಚು ಕಾರುಗಳನ್ನ ಹಿಂಪಡೆದ ಹುಂಡೈ, ಕಿಯಾ

    5,70,000ಕ್ಕೂ ಹೆಚ್ಚು ಕಾರುಗಳನ್ನ ಹಿಂಪಡೆದ ಹುಂಡೈ, ಕಿಯಾ

    ವಾಷಿಂಗ್ಟನ್‌: ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹುಂಡೈ ಮೋಟರ್ಸ್‌ (Hyundais Motors) ಮತ್ತು ಕಿಯಾ ಕಾರ್ಪೋರೇಷನ್‌ (Kia Corporation) ಕಂಪನಿಗಳು 5.70 ಲಕ್ಷಕ್ಕೂ ಹೆಚ್ಚು ಕಾರುಗಳನ್ನ ಹಿಂಪಡೆದಿವೆ. ಆದರೆ ಇದು ಭಾರತದಲ್ಲಿ ಅಲ್ಲ ಅಮೆರಿಕದಲ್ಲಿ.

    ವಾಹನಗಳಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಕಾರುಗಳನ್ನ ಆಫ್‌ ಮಾಡಿದ ಸಂದರ್ಭದಲ್ಲೂ ಈ ಸಮಸ್ಯೆ ಎದುರಾಗುತ್ತಿರುವುದರಿಂದ ವಾಹನ ಹೊಂದಿರುವ ಗ್ರಾಹಕರು ಮನೆಯಿಂದ ಸ್ವಲ್ಪ ದೂರದಲ್ಲಿ ಅಥವಾ ಹೊರಗಡೆ ಪಾರ್ಕಿಂಗ್‌ ಮಾಡುವಂತೆ ಯುಎಸ್ ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ಆಡಳಿತ (NHTSA) ತಿಳಿಸಿದೆ.

    ಅಲ್ಲದೇ ಹುಂಡೈ ಕಾರುಗಳನ್ನು ಹೊಂದಿರುವ ಗ್ರಾಹಕರು ಉಚಿತವಾಗಿ ರಿಪೇರಿ ಮಾಡಿಸಿಕೊಳ್ಳಲು ಬಯಸುವವರು ಕೂಡಲೇ ಸ್ಥಳೀಯ ಹುಂಡೈ ಹಾಗೂ ಕಿಯಾ ಡೀಲರ್‌ಶಿಪ್‌ಗಳನ್ನ ಸಂಪರ್ಕಿಸುವಂತೆ ಕಂಪನಿಗಳು ಸಲಹೆ ನೀಡಿವೆ. ಇದನ್ನೂ ಓದಿ: ವಾಣಿಜ್ಯ ವಾಹನಗಳ ಖರೀದಿದಾರರಿಗೆ Tata Motors ಶಾಕ್‌ – ಏಪ್ರಿಲ್‌ 1ರಿಂದ ಬೆಲೆ ಏರಿಕೆ

    ಇದೇ ಸಮಸ್ಯೆಯಿಂದ 2022ರ ಆಗಸ್ಟ್‌ ತಿಂಗಳಲ್ಲಿ 2.45 ಲಕ್ಷ ಕಾರುಗಳನ್ನು ಹುಂಡೈ ಹಿಂಪಡೆದಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಬೋಲ್ಟ್ ಬಿಗಿಯಿಲ್ಲವೆಂದು 3,470 ಕಾರುಗಳನ್ನು ಹಿಂದಕ್ಕೆ ಪಡೆದ ಟೆಸ್ಲಾ

    ಇತ್ತೀಚೆಗಷ್ಟೇ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯ ಬೈಕ್‌ನಲ್ಲಿ ಬ್ರೇಕ್‌ ಸಮಸ್ಯೆಯಿಂದಾಗಿ 5 ಸಾವಿರ ಬೈಕ್‌ಗಳನ್ನು ಕಂಪನಿ ಹಿಂದಕ್ಕೆ ಪಡೆದಿತ್ತು. ಇದಕ್ಕೂ ಮುನ್ನ ಸೀಟ್‌ಬ್ಯಾಕ್ ಫ್ರೇಮ್‌ಗಳನ್ನು ಭದ್ರಪಡಿಸುವ ಬೋಲ್ಟ್‌ಗಳು ಸುರಕ್ಷಿತವಾಗಿ ಮತ್ತು ಬಿಗಿಯಾಗಿ ಇಲ್ಲವೆಂದು ಕಾರಣ ನೀಡಿ ಟೆಸ್ಲಾ ಕಂಪನಿ 3,470 ಕಾರುಗಳನ್ನ ಹಿಂದಕ್ಕೆ ಪಡೆದಿತ್ತು.

  • ಫಸ್ಟ್‌ ಟೈಂ ನೇರ ಮುಖಾಮುಖಿ – ಅಮೆರಿಕ ಡ್ರೋನ್‍ಗೆ ರಷ್ಯಾದ ಯುದ್ಧ ವಿಮಾನ ಡಿಕ್ಕಿ

    ಫಸ್ಟ್‌ ಟೈಂ ನೇರ ಮುಖಾಮುಖಿ – ಅಮೆರಿಕ ಡ್ರೋನ್‍ಗೆ ರಷ್ಯಾದ ಯುದ್ಧ ವಿಮಾನ ಡಿಕ್ಕಿ

    ವಾಷಿಂಗ್ಟನ್‌/ ಮಾಸ್ಕೋ: ಉಕ್ರೇನ್‌ (Ukraine) ವಿರುದ್ಧ ಯುದ್ಧ ಆರಂಭವಾದ ಬಳಿಕ ಮೊದಲ ಬಾರಿಗೆ ಅಮೆರಿಕ (USA) ಮತ್ತು ರಷ್ಯಾ (Russia) ಮುಖಾಮುಖಿಯಾಗಿದೆ. ರಷ್ಯಾದ Su-27 ಜೆಟ್ ಫೈಟರ್ ಕಪ್ಪು ಸಮುದ್ರದ ಮೇಲೆ ಅಮೆರಿಕದ MQ-9 ರೀಪರ್ (MQ-9 Reaper) ಡ್ರೋನ್‍ಗೆ ಡಿಕ್ಕಿ ಹೊಡೆದಿದೆ ಎಂದು ಯುಎಸ್ ಮಿಲಿಟರಿಯ ಯುರೋಪಿಯನ್ ಕಮಾಂಡ್ ತಿಳಿಸಿದೆ.

    ನಮ್ಮ MQ-9 ಡ್ರೋನ್‌ ಅಂತಾರಾಷ್ಟ್ರೀಯ ವಾಯುಪ್ರದೇಶದಲ್ಲಿ ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿತ್ತು. ಅದನ್ನು ರಷ್ಯಾದ ಜೆಟ್ ತಡೆಹಿಡಿದು ಹೊಡೆದುರುಳಿಸಿದೆ. ಇದರ ಪರಿಣಾಮವಾಗಿ ಡ್ರೋನ್‌ ಪತನಗೊಂಡಿದೆ ಎಂದು ಅಮೆರಿಕ ಹೇಳಿದೆ.

     

    ಬ್ರಸೆಲ್ಸ್‌ನಲ್ಲಿರುವ ನ್ಯಾಟೋ ರಾಜತಾಂತ್ರಿಕರು ಘಟನೆಯನ್ನು ದೃಢಪಡಿಸಿದ್ದಾರೆ. ಕಣ್ಗಾವಲು ಮಾಡಲು ಅಮೆರಿಕ MQ-9 ಬಳಸುತ್ತಿದೆ. ರಷ್ಯಾದ ನೌಕಾ ಪಡೆಗಳ ಮೇಲೆ ಕಣ್ಣಿಟ್ಟು ಕಪ್ಪು ಸಮುದ್ರದ ಮೇಲೆ ದೀರ್ಘಕಾಲ ಕಾರ್ಯನಿರ್ವಹಿಸುತ್ತಿತ್ತು. ಇದನ್ನೂ ಓದಿ: ಅಮೆರಿಕನ್ ಬ್ಯಾಂಕ್ ದಿವಾಳಿ – ಮಾಧ್ಯಮಗಳ ಪ್ರಶ್ನೆ ನಿರ್ಲಕ್ಷಿಸಿ ಹೊರನಡೆದ ಬೈಡನ್

    ಅಮೆರಿಕದ ಆರೋಪವನ್ನು ರಷ್ಯಾ ತಿರಸ್ಕರಿಸಿದೆ. MQ-9 ಡ್ರೋನ್‌ ರಷ್ಯಾದ ಗಡಿಯ ಬಳಿ ಹಾರಾಟ ನಡೆಸುತ್ತಿತ್ತು. ಈ ಹಿನ್ನೆಲೆಯಲ್ಲಿ ನಾವು ಎಚ್ಚರಿಕೆ ನೀಡಿದೆವು. ಈ ವೇಳೆ ಡ್ರೋನ್‌ ಎತ್ತರದಲ್ಲಿ ಸಂಚರಿಸುತ್ತಿದ್ದ ಕಾರಣ ನಿಯಂತ್ರಣ ಮಾಡಲು ಸಾಧ್ಯವಾಗದೇ ಪತನಗೊಂಡು ನೀರಿನ ಮೇಲೆ ಬಿದ್ದಿದೆ ಎಂದು ತಿಳಿಸಿದೆ.

    ಏನಿದು MQ-9 ರೀಪರ್?
    MQ-9 ರೀಪರ್ ಒಂದು ದೊಡ್ಡ ಮಾನವರಹಿತ ವಿಮಾನವಾಗಿದ್ದು ಇದನ್ನು ಇಬ್ಬರು ವ್ಯಕ್ತಿಗಳು ದೂರದಿಂದಲೇ ನಿರ್ವಹಿಸಬಹುದು. ಇದು ನೆಲದ ನಿಯಂತ್ರಣ ಕೇಂದ್ರ ಮತ್ತು ಉಪಗ್ರಹ ಉಪಕರಣಗಳನ್ನು ಒಳಗೊಂಡಿದೆ ಮತ್ತು 66-ಅಡಿ (20-ಮೀಟರ್) ರೆಕ್ಕೆಗಳನ್ನು ಹೊಂದಿದೆ.

    ಇರಾಕ್ ಮತ್ತು ಅಫ್ಘಾನಿಸ್ತಾನದ ಯುದ್ಧಗಳ ಸಮಯದಲ್ಲಿ ಇದನ್ನು ಕಣ್ಗಾವಲು ಇಡಲು ಬಳಸಲಾಗಿತ್ತು. ಎಂಟು ಲೇಸರ್-ನಿರ್ದೇಶಿತ ಕ್ಷಿಪಣಿಗಳನ್ನು ಸಾಗಿಸಬಲ್ಲದು ಮತ್ತು ಸುಮಾರು 24 ಗಂಟೆಗಳ ಕಾಲ ಹಾರಾಟ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

    36 ಅಡಿ ಉದ್ದ, 12 ಅಡಿ ಎತ್ತರ ಮತ್ತು ಸುಮಾರು 4,900 ಪೌಂಡ್ (11 ಮೀಟರ್ ಉದ್ದ, 4 ಮೀಟರ್ ಎತ್ತರ ಮತ್ತು 2,200 ಕಿಲೋಗ್ರಾಂ) ತೂಗುತ್ತದೆ. ಇದು 50,000 ಅಡಿ (15 ಕಿಲೋಮೀಟರ್) ಎತ್ತರದಲ್ಲಿ ಹಾರಬಲ್ಲದು ಮತ್ತು ಸುಮಾರು 1,400 ನಾಟಿಕಲ್ ಮೈಲುಗಳ (2,500 ಕಿಲೋಮೀಟರ್) ವ್ಯಾಪ್ತಿಯನ್ನು ಹೊಂದಿದೆ.

    2007 ರಲ್ಲಿ ಮೊದಲ ಬಾರಿಗೆ ರೀಪರ್‌ ಕಾರ್ಯನಿರ್ವಹಿಸಲು ಆರಂಭಿಸಿತು. ಪ್ರತಿ ರೀಪರ್ ಸುಮಾರು 32 ಮಿಲಿಯನ್ ಡಾಲರ್‌( ಅಂದಾಜು 263 ಕೋಟಿ ರೂ.) ವೆಚ್ಚವಾಗುತ್ತದೆ.

  • ಶಸ್ತ್ರಾಸ್ತ್ರ ಆಮದು : ವಿಶ್ವದಲ್ಲೇ ಭಾರತ ನಂ.1, ಪ್ರಮಾಣ ಶೇ.11 ಇಳಿಕೆ

    ಶಸ್ತ್ರಾಸ್ತ್ರ ಆಮದು : ವಿಶ್ವದಲ್ಲೇ ಭಾರತ ನಂ.1, ಪ್ರಮಾಣ ಶೇ.11 ಇಳಿಕೆ

    ನವದೆಹಲಿ: ಶಸ್ತ್ರಾಸ್ತ್ರಗಳ (Arms) ಆಮದಿನಲ್ಲಿ ಭಾರತ (India) ಈಗಲೂ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

    ಸ್ಟಾಕ್‌ಹೋಮ್‌ ಇಂಟರ್‌ನ್ಯಾಷನಲ್‌ ಪೀಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ (SIPRI) ಈ ವರದಿ ಪ್ರಕಟಿಸಿದೆ. 2013-17ರ ಅವಧಿಗೆ ಹೋಲಿಸಿದರೆ 2018–22ರ ಅವಧಿಯಲ್ಲಿ ಭಾರತದ ಶಸ್ತ್ರಾಸ್ತ್ರ ಆಮದಿನಲ್ಲಿ ಶೇ.11ರಷ್ಟು ಇಳಿದಿದೆ ಎ೦ದು ತಿಳಿಸಿದೆ.

    ಆಮದು: ಯಾವ ದೇಶದ ಪಾಲು ಎಷ್ಟು?
    ಭಾರತ ಶೇ.11, ಸೌದಿ ಅರೇಬಿಯಾ ಶೇ.6, ಕತಾರ್‌ ಶೇ.6.4, ಆಸ್ಟ್ರೇಲಿಯಾ ಶೇ.4.7, ಚೀನಾ ಶೇ.4.6, ಈಜಿಪ್ಟ್‌ ಶೇ.4.5, ದಕ್ಷಿಣ ಕೊರಿಯಾ ಶೇ.3.7, ಪಾಕಿಸ್ತಾನ ಶೇ.3.7, ಜಪಾನ್‌ ಶೇ.3.5, ಅಮೆರಿಕ ಶೇ.2.7, ಇತರೇ ಶೇ.45 ರಷ್ಟು ಪಾಲನ್ನು ಹೊಂದಿದೆ.  ಇದನ್ನೂ ಓದಿ: ಭಗವಾನ್ ಶ್ರೀಕೃಷ್ಣನನ್ನೇ ವರಿಸಿದ ಎಲ್‍ಎಲ್‍ಬಿ ಪದವೀಧರೆ!

    ರಫ್ತು: ಯಾವ ದೇಶದ ಪಾಲು ಎಷ್ಟು?
    ಅಮೆರಿಕ ಶೇ.40, ರಷ್ಯಾ ಶೇ.16, ಫ್ರಾನ್ಸ್‌ ಶೇ.11, ಚೀನಾ ಶೇ.5.2, ಜರ್ಮನಿ ಶೇ.4.2, ಇಟಲಿ ಶೇ.3.8, ಇಂಗ್ಲೆಂಡ್‌ ಶೇ.3.2, ಸ್ಪೇನ್‌ ಶೇ.2.6, ದಕ್ಷಿಣ ಕೊರಿಯಾ ಶೇ.2.4, ಇಸ್ರೇಲ್‌ ಶೇ.2.3, ಇತರೇ ಶೇ.9.4 ಪಾಲನ್ನು ಹೊಂದಿದೆ.

  • UK ಸಿಲಿಕಾನ್ ವ್ಯಾಲಿ ಬ್ಯಾಂಕ್ ಘಟಕವನ್ನು 99 ರೂ.ಗೆ ಖರೀದಿದ HSBC

    UK ಸಿಲಿಕಾನ್ ವ್ಯಾಲಿ ಬ್ಯಾಂಕ್ ಘಟಕವನ್ನು 99 ರೂ.ಗೆ ಖರೀದಿದ HSBC

    ಲಂಡನ್: ಸ್ಟಾರ್ಟ್ಅಪ್‌ಗಳಿಗೆ ಸಾಲ ನೀಡಲು ಹೆಸರುವಾಸಿಯಾಗಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅಮೆರಿಕದಲ್ಲಿ (USA) ದಿವಾಳಿಯಾಗಿರುವ ಬೆನ್ನಲ್ಲೇ ಸಿಲಿಕಾನ್ ವ್ಯಾಲಿ ಬ್ಯಾಂಕಿನ ಬ್ರಿಟನ್ ಘಟಕವನ್ನು ಹೆಚ್‌ಎಸ್‌ಬಿಸಿ (HSBC) ಕೇವಲ 1 ಪೌಂಡ್‌ಗೆ (99.86 ರೂಪಾಯಿ) ಖರೀದಿಸಿದೆ.

    ಮಾರ್ಚ್ 10ರ ಹೊತ್ತಿಗೆ ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank) ಯುಕೆ ಘಟಕವು ಸುಮಾರು 5.5 ಬಿಲಿಯನ್ ಪೌಂಡ್ ಸಾಲಗಳನ್ನು ಮತ್ತು ಸುಮಾರು 6.7 ಬಿಲಿಯನ್ ಪೌಂಡ್ ಠೇವಣಿ ಹೊಂದಿದೆ. ಜೊತೆಗೆ ಒಟ್ಟು 8.8 ಶತಕೋಟಿ ಪೌಂಡ್‌ಗಳಷ್ಟು ಬ್ಯಾಲೆನ್ಸ್ ಶೀಟ್ ಗಾತ್ರವನ್ನು ಹೊಂದಿದೆ. ಇದೀಗ ಹೂಡಿಕೆದಾರರಲ್ಲಿ ಮತ್ತಷ್ಟು ಉತ್ಸಾಹ ತುಂಬಲು ಹೆಚ್‌ಎಸ್‌ಬಿಸಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಸಿಲಿಕಾನ್ ವ್ಯಾಲಿ ಬಳಿಕ ಅಮೆರಿಕದ ಮತ್ತೊಂದು ಬ್ಯಾಂಕ್ ದಿವಾಳಿ

    Silicon Valley Bank

    ಬ್ಯಾಂಕ್‌ನ ಬ್ರಿಟನ್ (UK) ವ್ಯವಹಾರಕ್ಕೆ ಇದು ಅತ್ಯುತ್ತಮ ಕಾರ್ಯತಂತ್ರದ ಅರ್ಥ ನೀಡುವ ಜೊತೆಗೆ ವಾಣಿಜ್ಯ ಬ್ಯಾಂಕಿಂಗ್ ಅನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲದೆ ಬ್ರಿಟನ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನ ಹಾಗೂ ಜೀವ-ವಿಜ್ಞಾನ ಕ್ಷೇತ್ರಗಳನ್ನು ಒಳಗೊಂಡಂತೆ ನವೀನ ಮತ್ತು ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಗಳಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಬ್ರಿಟನ್‌ನ ಬ್ಲೂ-ಚಿಪ್ FTSC 100 ಷೇರುಗಳ ಸೂಚ್ಯಂಕವು ಆರಂಭಿಕ ವಹಿವಾಟಿನಲ್ಲಿ ಶೇ.1ರಷ್ಟು ಕಡಿಮೆಯಾಗಿದೆ. ಸಿಲಿಕಾನ್ ವ್ಯಾಲಿಬ್ಯಾಂಕ್ ಮೌಲ್ಯ ಕುಸಿತದಿಂದ ಎಚ್‌ಎಸ್‌ಬಿಸಿ ಷೇರುಗಳು ಶೇ.1.7ರಷ್ಟು ಕುಸಿದಿವೆ ಎಂದು ಎನ್ನಲಾಗಿದೆ. ಇದನ್ನೂ ಓದಿ: 

    ಆರ್ಥಿಕ ಹಿಂಜರಿತದ ಭೀತಿಯ ನಡುವೆ ಅಮೆದಿಕದ ದೊಡ್ಡ-ದೊಡ್ಡ ಬ್ಯಾಂಕ್‌ಗಳು ದಿವಾಳಿ ಹಂತ ತಲುಪಿತ್ತಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ಒಂದು ದಿನದ ಅಂತರದಲ್ಲಿ ಎರಡು ಬ್ಯಾಂಕ್‌ಗಳು ಬಾಗಿಲುಮುಚ್ಚಿವೆ. ಠೇವಣಿದಾರರು ದೊಡ್ಡ ಮಟ್ಟದಲ್ಲಿ ಹೂಡಿಕೆ ಹಿಂಪಡೆದ ಕಾರಣ ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿ ಎದ್ದಿದೆ. ಎಸ್‌ವಿಬಿ ವೈಫಲ್ಯದ ಕಾರಣ ಇದರಲ್ಲಿ ಡೆಪಾಸಿಟ್ ಮಾಡಿದ 10,000 ಚಿಕ್ಕ ಚಿಕ್ಕ ವಾಣಿಜ್ಯ ಸಂಸ್ಥೆಗಳು ತಮ್ಮ 2 ಲಕ್ಷ ಉದ್ಯೋಗಿಗಳಿಗೆ ವೇತನ ನೀಡಲಾಗದ ಸ್ಥಿತಿ ನಿರ್ಮಾಣವಾಗಿದೆ.

    Signature Bank

    ಹಣದುಬ್ಬರ ನಿಯಂತ್ರಿಸಲು ಅಮೆರಿಕಾದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ವಿಪರೀತವಾಗಿ ಹೆಚ್ಚಿಸಿರುವುದೇ ಎಸ್‌ವಿಬಿ ಪತನಕ್ಕೆ ಕಾರಣ ಎನ್ನಲಾಗುತ್ತಿದೆ. ಇದು ಬೇರೆ ದೇಶಗಳಲ್ಲಿನ ಎಸ್‌ವಿಬಿ ಬ್ಯಾಂಕ್‌ಗಳ ಮೇಲೆಯೂ ಪರಿಣಾಮ ಬೀರಿದೆ…

  • ಬೋಲ್ಟ್ ಬಿಗಿಯಿಲ್ಲವೆಂದು 3,470 ಕಾರುಗಳನ್ನು ಹಿಂದಕ್ಕೆ ಪಡೆದ ಟೆಸ್ಲಾ

    ಬೋಲ್ಟ್ ಬಿಗಿಯಿಲ್ಲವೆಂದು 3,470 ಕಾರುಗಳನ್ನು ಹಿಂದಕ್ಕೆ ಪಡೆದ ಟೆಸ್ಲಾ

    ವಾಷಿಂಗ್ಟನ್: ಸೀಟ್‌ಬ್ಯಾಕ್ ಫ್ರೇಮ್‌ಗಳನ್ನು ಭದ್ರಪಡಿಸುವ ಬೋಲ್ಟ್‌ಗಳು ಸುರಕ್ಷಿತವಾಗಿ (Loose Bolts) ಮತ್ತು ಬಿಗಿಯಾಗಿಲ್ಲ ಎಂದು ಕಾರಣ ನೀಡಿ ಟೆಸ್ಲಾ (Tesla) ಕಂಪನಿ 3,470 ಕಾರುಗಳನ್ನ ಹಿಂದಕ್ಕೆ ಪಡೆದಿದೆ.

    ಅಮೆರಿಕದಲ್ಲಿ ಬಿಡುಗಡೆ ಮಾಡಿದ `ಮಾಡೆಲ್ ವೈ’ (Model Y) 2ನೇ ಸಾಲಿನಲ್ಲಿರುವ ಸೀಟ್ ಬ್ಯಾಕ್ ಫ್ರೇಮ್‌ಗಳನ್ನು ಭದ್ರಪಡಿಸುವ ಬೋಲ್ಟ್‌ಗಳು ಸುರಕ್ಷಿತವಾಗಿಲ್ಲ ಎಂದು ಶನಿವಾರ ಹೇಳಿದೆ. ಇದನ್ನೂ ಓದಿ: ಮತ್ತೆ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಸ್ಥಾನಕ್ಕೇರಿದ ಎಲೋನ್ ಮಸ್ಕ್

    ನ್ಯಾಷನಲ್ ಹೈವೇ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ (NHTSA) ಈ ಬಗ್ಗೆ ಪ್ರತಿಕ್ರಿಯಿಸಿ, ಸಡಿಲವಾದ ಸೀಟ್ ಫ್ರೇಮ್ ಬೋಲ್ಟ್, ಸೀಟ್ ಬೆಲ್ಟ್ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಕಡಿಮೆಮಾಡುತ್ತದೆ. ಜೊತೆಗೆ ಅಪಘಾತದ ಸಮಯದಲ್ಲಿ ಗಾಯ ಹಾಗೂ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಓಲಾದಿಂದ 7,614 ಕೋಟಿ ಹೂಡಿಕೆ- ಸಿಎಂ ಸ್ಟಾಲಿನ್‌ ಸಹಿ

    Elon Musk

    ಈ ಬಗ್ಗೆ ಪರಿಶೀಲಿಸುವುದಾಗಿ ಟೆಸ್ಲಾ ಹೇಳಿದೆ. 2ನೇ ಸಾಲಿನ ಡ್ರೈವರ್ ಸೈಡ್ ಮತ್ತು ಪ್ಯಾಸೆಂಜರ್ ಸೈಡ್ ಸೀಟ್ ಬ್ಯಾಕ್ ಫ್ರೇಮ್‌ಗಳ ಬೋಲ್ಟ್ಗಳನ್ನು ಪರಿಶೀಲಿಸಲಾಗುತ್ತದೆ. ಅಗತ್ಯವಿದ್ದರೆ ಅವುಗಳನ್ನು ಸುರಕ್ಷಿತಗೊಳಿಸುವ (ಬಿಗಿಗೊಳಿಸುವ) ಕೆಲಸ ಮಾಡುತ್ತದೆ ಎಂದು ತಿಳಿಸಿದೆ.