Tag: USA

  • India GDP – ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ

    India GDP – ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ

    ನವದೆಹಲಿ: ಅಂತಾರಾಷ್ಟ್ರೀಯ ಪ್ರತಿಕೂಲತೆಗಳ ನಡುವೆಯೂ 2022-23ರ ಹಣಕಾಸು ವರ್ಷದಲ್ಲಿ ದೇಶದ ಆಂತರಿಕ ಉತ್ಪನ್ನ (GDP) ದರ 7.2% ರಷ್ಟು ದಾಖಲಾಗಿದೆ. ಈ ಮೂಲಕ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತ (India) ಹೊರಹೊಮ್ಮಿದ್ದು ಒಂದನೇ ಸ್ಥಾನದಲ್ಲೇ ಮುಂದುವರಿದಿದೆ.

    ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಬುಧವಾರ ಜಿಡಿಪಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. 2023-24ರ ಹಣಕಾಸು ವರ್ಷದಲ್ಲಿ ಜಿಡಿಪಿ ದರ 6.5% ರಷ್ಟು ದಾಖಲಾಗಬಹುದು  ಎಂದು ಅಂದಾಜಿಸಿದೆ. 2021-22ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರ 8.7% ರಷ್ಟು ದಾಖಲಾಗಿತ್ತು. ಇದನ್ನೂ ಓದಿ: ಕಾಂಗ್ರೆಸ್‌ನ ಗ್ಯಾರಂಟಿಗಳು ದೇಶವನ್ನು ದಿವಾಳಿಗೆ ತಳ್ಳಬಹುದು: ಮೋದಿ ಎಚ್ಚರಿಕೆ

    ಜಾಗತಿಕ ಆರ್ಥಿಕ ಹಿಂಜರಿತ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಪರಿಸ್ಥಿತಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಂಡುಬರುವ ಏರಿಳಿತಗಳು ದೇಶದ ಬೆಳವಣಿಗೆ ದರದ ಮೇಲೆ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದೆ.

    ಯಾವ ತ್ರೈಮಾಸಿಕದಲ್ಲಿ ಎಷ್ಟು?
    Q1 – 13.5% (ಏಪ್ರಿಲ್‌-ಜೂನ್‌, 2022)
    Q2 – 6.3% (ಜುಲೈ- ಸೆಪ್ಟೆಂಬರ್‌, 2022)
    Q3 – 4.4% (ಅಕ್ಟೋಬರ್‌-ನವೆಂಬರ್‌, 2022)
    Q4 – 6.1% (ಜನವರಿ- ಮಾರ್ಚ್‌, 2023)

     
    ಯಾವ ದೇಶದ ಜಿಡಿಪಿ ಎಷ್ಟು?
    ಭಾರತ – 7.2%
    ಇಂಡೋನೇಷ್ಯಾ – 5.3%
    ಯುಕೆ – 4.1%
    ಮೆಕ್ಸಿಕೋ -3.1%
    ಚೀನಾ – 3%
    ಫ್ರಾನ್ಸ್‌ – 2.6%
    ಅಮೆರಿಕ – 2.1%

    2021-22 ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರ 8.7% ದಾಖಲಾಗಿದ್ದರೆ ಚೀನಾ 8.1%, ಯುಕೆ 7.4% ರಷ್ಟು ದಾಖಲಾಗಿತ್ತು.

  • ನಂಬಿದ್ರೆ ನಂಬಿ… ಒಂದು ವರ್ಷಕ್ಕೆ 8.26 ಕೋಟಿ ಸಂಪಾದಿಸುತ್ತೆ ಈ ನಾಯಿ

    ನಂಬಿದ್ರೆ ನಂಬಿ… ಒಂದು ವರ್ಷಕ್ಕೆ 8.26 ಕೋಟಿ ಸಂಪಾದಿಸುತ್ತೆ ಈ ನಾಯಿ

    ವಾಷಿಂಗ್ಟನ್‌: ಜನರು ನಾಯಿಗಳನ್ನ (Dog) ಸಾಕುಪ್ರಾಣಿಗಳನ್ನಾಗಿ ಸಾಕಲು ಇಷ್ಟಪಡುತ್ತಾರೆ. ಬಹುತೇಕರು ತಮ್ಮ ಮನೆ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿ ನೋಡಿಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬರು ಮಹಿಳೆ ನಾಯಿಯನ್ನು ನೋಡಿಕೊಳ್ಳುವುದಕ್ಕಾಗಿಯೇ ಇದ್ದ ಸಿವಿಲ್‌ ಎಂಜಿನಿಯರ್‌ (Civil Enginee) ಕೆಲಸ ತೊರೆದಿದ್ದರು. ಈಗ ಅದೇ ನಾಯಿಯಿಂದ ವರ್ಷಕ್ಕೆ 8 ಕೋಟಿ ಗಿಂತಲೂ ಅಧಿಕ ಹಣ ಸಂಪಾದಿಸುತ್ತಿದ್ದಾರೆ. ಅದು ಹೇಗೆ ಅಂತೀರಾ ಮುಂದೆ ನೋಡಿ…

    ಇತ್ತೀಚೆಗೆ ಹೆಚ್ಚಿನ ಯುವಜನ ಸಾಮಾಜಿಕ ಮಾಧ್ಯಮವನ್ನೇ ಬಳಸಿಕೊಂಡು ಹಣ ಗಳಿಸುತ್ತಿದ್ದಾರೆ. ಅದೇ ರೀತಿ ದಂಪತಿಯೊಬ್ಬರು ತಾವು ಸಾಕಿದ ಟಕ್ಕರ್‌ ಹೆಸರಿನ ಗೋಲ್ಡನ್‌ ರಿಟ್ರೈವರ್‌ (Golden Retriever) ಶ್ವಾನದಿಂದ ವರ್ಷಕ್ಕೆ 1 ಮಿಲಿಯನ್‌ ಡಾಲರ್‌ (8.26 ಕೋಟಿ ರೂ.) ಗಳಿಸುತ್ತಿದ್ದು, ನೆಟ್ಟಿಗರನ್ನ ಬೆರಗಾಗುವಂತೆ ಮಾಡಿದೆ. ಇದನ್ನೂ ಓದಿ: ಸಾಂಪ್ರದಾಯಿಕ ಸ್ವಾಗತ ಕೊಟ್ಟು ಮೋದಿಯನ್ನು ʻಬಾಸ್‌ʼ ಎಂದು ಕರೆದ ಆಸ್ಟ್ರೇಲಿಯಾ ಪ್ರಧಾನಿ

    ಪೋರ್ಟ್ರೇಟ್ ಕಂಪನಿ ಪ್ರಿಂಟೆಡ್ ಪೆಟ್ ಮೆಮೊರೀಸ್‌ನ ಸಂಶೋಧನೆಯ ಪ್ರಕಾರ, ವರ್ಷಕ್ಕೆ 8.26 ಕೋಟಿ ರೂ. ಗಳಿಸುವ ಈ ಗೋಲ್ಡನ್‌ ರಿಟ್ರೈವರ್‌ ವಿಶ್ವದ ನಂ.1 ಸಾಮಾಜಿಮ ಮಾಧ್ಯಮ ಪ್ರಭಾವಶಾಲಿಗಳಲ್ಲಿ ಒಂದಾಗಿದೆ. ಜೊತೆಗೆ ಯೂಟ್ಯೂಬ್‌ನಲ್ಲಿ ಪ್ರತಿ 30 ನಿಮಿಷದ ಪ್ರೀ ರೋಲ್‌ಗೆ 40 ಸಾವಿರ ಡಾಲರ್‌ (33 ಲಕ್ಷ ರೂ.) ನಿಂದ 60 ಸಾವಿರ ಡಾಲರ್‌ (49.61 ಲಕ್ಷ ರೂ.) ಸಂಪಾದಿಸಿಕೊಡುತ್ತೆ. ಇನ್ಸ್ಟಾಗ್ರಾಮ್‌ನಲ್ಲಿ ಪ್ರತಿ 3 ರಿಂದ 8 ಸ್ಟೋರಿಗಳಿಗೆ 20 ಸಾವಿರ ಡಾಲರ್‌ (16.54 ಲಕ್ಷ ರೂ.) ಸಂಪಾದಿಸಿಕೊಡುತ್ತೆ ಎಂದು ಟಕ್ಕರ್‌ನ ಮಾಲೀಕ ಕರ್ಟ್ನಿ ಬಡ್ಜಿನ್ ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ಗಿಂತಲೂ ಭಯಾನಕ – ಮುಂದಿನ ಸಾಂಕ್ರಾಮಿಕ ಎದುರಿಸಲು ಸಿದ್ಧರಾಗಿ: WHO ಎಚ್ಚರಿಕೆ

    ನಾಯಿ ನೋಡಿಕೊಳ್ಳೋದಕ್ಕೆ ಎಂಜಿನಿಯರ್‌ ಕೆಲಸ ಬಿಟ್ಟರು:
    ಕರ್ಟ್ನಿ ಬಡ್ಜಿನ್‌ನ ಪತ್ನಿ ಮೈಕ್‌ ವೃತ್ತಿಯಲ್ಲಿ ಸಿವಿಲ್‌ ಎಂಜಿನಿಯರ್‌ ಆಗಿದ್ದರು. ಈಕೆ ತಾನು ಸಾಕುತ್ತಿದ್ದ ಟಕ್ಕರ್‌ ಮತ್ತು ಟಾಡ್‌ ನಾಯಿಮರಿಗಳನ್ನ ನೋಡಿಕೊಳ್ಳುವ ಸಲುವಾಗಿಯೇ ಇದ್ದ ಕೆಲಸವನ್ನ ಬಿಟ್ಟರು. 2018ರ ಜೂನ್‌ನಲ್ಲಿ ಟಕ್ಕರ್‌ 8 ವಾರಗಳ ಪುಟ್ಟ ಮರಿಯಾಗಿದ್ದಾಗ ಟಕ್ಕರ್‌ ಹೆಸರಿನಲ್ಲಿ ಇನ್ಸ್ಟಾಗ್ರಾಮ್‌ ಪುಟವೊಂದನ್ನ ತೆರೆದರು. ಬಳಿಕ ಟಕ್ಕರ್‌ನ ಮೊದಲ ವೀಡಿಯೋ ಸಖತ್‌ ಸದ್ದು ಮಾಡಿತ್ತು. ಟಕ್ಕರ್‌ಗೆ 6 ತಿಂಗಳು ತುಂಬುವುದರೊಳಗೆ ಫಾಲೋವರ್ಸ್‌ಗಳ ಸಂಖ್ಯೆ 60 ಸಾವಿರಕ್ಕೆ ತಲುಪಿತ್ತು.

    ಇದೀಗ‌ ವಿಶ್ವದಾದ್ಯಂತ ವಿವಿಧೆಡೆ ಫೇಮಸ್‌ ಆಗಿರುವ ಟಕ್ಕರ್‌ ಟಿಕ್‌ಟಾಕ್‌ನಲ್ಲಿ 1.10 ಕೋಟಿ, ಯೂಟ್ಯೂಬ್‌ನಲ್ಲಿ 51 ಲಕ್ಷ, ಫೇಸ್‌ ಬುಕ್‌ನಲ್ಲಿ 43 ಲಕ್ಷ, ಇನ್ಸ್ಟಾಗ್ರಾಮ್‌ನಲ್ಲಿ 34 ಲಕ್ಷ ಹಾಗೂ ಟ್ವಿಟ್ಟರ್‌ನಲ್ಲಿ 62,400 ಫಾಲೋವರ್ಸ್‌ಗಳನ್ನ ಹೊಂದಿದೆ.

  • ಟ್ವಿಟ್ಟರ್‌ಗೆ ಹೊಸ CEO ನೇಮಿಸಿದ ಎಲೋನ್‌ ಮಸ್ಕ್‌ – ಯಾರು ಅನ್ನೋದು ಸಸ್ಪೆನ್ಸ್‌

    ಟ್ವಿಟ್ಟರ್‌ಗೆ ಹೊಸ CEO ನೇಮಿಸಿದ ಎಲೋನ್‌ ಮಸ್ಕ್‌ – ಯಾರು ಅನ್ನೋದು ಸಸ್ಪೆನ್ಸ್‌

    ವಾಷಿಂಗ್ಟನ್‌: ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ 44 ಶತಕೋಟಿ ಡಾಲರ್‌ಗೆ ಟ್ವಿಟ್ಟರ್‌ ಅನ್ನು ಖರೀದಿಸಿದ್ದ ಟೆಸ್ಲಾ (Tesla) ಮುಖ್ಯಸ್ಥ ಎಲೋನ್‌ ಮಸ್ಕ್ (Elon Musk) ಅಂತಿಮವಾಗಿ ಟ್ವಿಟರ್‌ಗೆ ಹೊಸ ಸಿಇಒ (Twitter CEO) ಅನ್ನು ನೇಮಿಸಿಕೊಂಡಿದ್ದಾರೆ. ಈ ಮಾಹಿತಿಯನ್ನು ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಟ್ವಿಟರ್‌ ಮುನ್ನಡೆಸಲು ಮಹಿಳೆಯೊಬ್ಬರು ಬರುತ್ತಾರೆ ಎಂದು ತಿಳಿಸಿದ್ದಾರೆ.

    ನಾನು ಟ್ವಿಟರ್‌ಗೆ ಹೊಸ ಸಿಇಒ ಅನ್ನು ನೇಮಕ ಮಾಡಿದ್ದೇನೆ ಎಂದು ತಿಳಿಸಲು ಉತ್ಸುಕನಾಗಿದ್ದೇನೆ. ಅವರು ಇನ್ನು 6 ವಾರಗಳಲ್ಲಿ ಸಿಇಒ ಸ್ಥಾನ ಅಲಂಕರಿಸಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಆದ್ರೆ ಆಕೆ ಯಾರು ಏನು? ಎಂಬುದನ್ನ ಅವರು ತಿಳಿಸಿಲ್ಲ. ಆದರೆ 6 ವಾರಗಳಲ್ಲಿ ಹೊಸ ಸಿಇಒ ಬರುತ್ತಾರೆ ಎಂಬ ಅಂಶ ಮಾತ್ರ ಟ್ವಿಟರ್‌ನಲ್ಲಿದೆ. ಎನ್‌ಬಿಸಿ ಯುನಿವರ್ಸಲ್‌ನ ಜಾಹೀರಾತು ವಿಭಾಗದ ಮುಖ್ಯಸ್ಥೆ ಲಿಂಡಾ ಯಾಕರಿನೊ (Linda Yaccarino) ಟ್ವಿಟರ್‌ನ ಹೊಸ ಸಿಇಒ ಆಗಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

    ಟ್ವಿಟ್ಟರ್‌ಗೆ ಹೊಸ ಸಿಇಒ ಬಂದ ನಂತರ ಮಸ್ಕ್‌ ಕಾರ್ಯನಿರ್ವಾಹಕ ಅಧ್ಯಕ್ಷ್ಯ ಹಾಗೂ ಸಿಟಿಒ (ಚೀಫ್‌ ಟೆಕ್ನಾಲಜಿ ಆಫೀಸರ್‌) ಆಗಿ ಮುಂದುವರಿಯಲಿದ್ದಾರೆ. ಭವಿಷ್ಯದಲ್ಲಿ ಸ್ಟಾಫ್‌ವೇರ್‌ ಹಾಗೂ ಇತರ ವ್ಯವಹಾರ ನೋಡಿಕೊಳ್ಳುವುದಾಗಿ ಮಸ್ಕ್‌ ಘೋಷಿಸಿದ್ದಾರೆ. ಇದನ್ನೂ ಓದಿ: ಮಲಗಿದ್ದಾಗಲೂ ಮೈಕ್ರೋಫೋನ್ ಆನ್! – ವಾಟ್ಸಪ್‌ನ ನಂಬಬೇಡಿ ಎಂದ ಮಸ್ಕ್

    ಮಸ್ಕ್ ಅವರು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಟ್ವಿಟರ್‌ಗೆ ಹೊಸ ಸಿಇಒ ಹುಡುಕಲು ಯೋಜಿಸುತ್ತಿದ್ದಾರೆ ಎಂದು ಸುಮಾರು 6 ತಿಂಗಳಿನಿಂದ ಹೇಳುತ್ತಿದ್ದರು. ನಾನು ಟ್ವಿಟರ್‌ನಲ್ಲಿ ನನ್ನ ಸಮಯ ಕಡಿಮೆ ಮಾಡುತ್ತೇನೆ ಮತ್ತು ಕಾಲಾನಂತರದಲ್ಲಿ ಟ್ವಿಟರ್ ಅನ್ನು ಚಲಾಯಿಸಲು ಬೇರೆಯವರನ್ನ ಹುಡುಕುತ್ತೇನೆ ಎಂದು ಹೇಳಿದ್ದರು.

    ಯಾರಾದರೂ ಮೂರ್ಖತನ ಹೊಂದಿದವರು ಟ್ವಿಟರ್‌ ಸಿಇಒ ಹುದ್ದೆ ವಹಿಸಿಕೊಂಡ ತಕ್ಷಣ ನಾನು ರಾಜೀನಾಮೆ ನೀಡುತ್ತೇನೆ’ ಎಂದೂ ತಿಳಿಸಿದ್ದರು. ಇದನ್ನೂ ಓದಿ: ಬೆಂಗಳೂರು ಬಳಿ ಭಾರೀ ಮೊತ್ತಕ್ಕೆ ಜಾಗ ಖರೀದಿಸಿದ ಆಪಲ್‌ ಐಫೋನ್‌ ತಯಾರಕ ಫಾಕ್ಸ್‌ಕಾನ್‌

    ಮಸ್ಕ್‌ ಟ್ವಿಟ್ಟರ್‌ ಸಿಇಒ ಆದ ನಂತರ ಹಲವು ಬದಲಾವಣೆಗಳನ್ನ ತಂದಿದ್ದರು. ಉದ್ಯೋಗ ಕಡಿತಗೊಳಿಸಿದ್ದಲ್ಲದೇ, ಉದ್ಯೋಗ ಸಮಯ ಹೆಚ್ಚಿಸಿದ್ದರು. ಜೊತೆಗೆ ಬ್ಲೂ ಟಿಕ್‌ ಪಡೆಯಲು ಹಣ ಪಾವತಿಸುವ ಕ್ರಮ ಜಾರಿಗೆ ತಂದರು. ಇದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

  • ಪುರುಷರನ್ನ ಆಕರ್ಷಿಸಬೇಕಂತ ಕೋಟಿ ಕೋಟಿ ಖರ್ಚು ಮಾಡಿ 200 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ

    ಪುರುಷರನ್ನ ಆಕರ್ಷಿಸಬೇಕಂತ ಕೋಟಿ ಕೋಟಿ ಖರ್ಚು ಮಾಡಿ 200 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ

    ವಾಷಿಂಗ್ಟನ್‌: ಇತ್ತೀಚಿನ ದಿನಗಳಲ್ಲಿ ಮೇಕಪ್‌ (Makeup) ಮಾಡಿಕೊಳ್ಳದ ಮಹಿಳೆಯರೇ ಇಲ್ಲ. ಕೆಲವರಂತೂ ಮುಖಕ್ಕೆ ಬಣ್ಣ ಬಳಿದುಕೊಳ್ಳದೇ ಮೆನಯಿಂದಾಚೆ ಕಾಲಿಡೋದೆ ಇಲ್ಲ. ಒಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕಾದರೂ ಒಂದು ಗಂಟೆ ಮೇಕಪ್‌ ಮಾಡಿಯೇ ತೀರುತ್ತಾರೆ. ಆದ್ರೆ ಇಲ್ಲೊಬ್ಬಳು ಮಹಿಳೆ (Women) ತಾನು ಶಾಶ್ವತವಾಗಿ ಸೌಂದರ್ಯವತಿಯಾಗಿ ಕಾಣಬೇಕೆಂದು 200ಕ್ಕೂ ಹೆಚ್ಚು ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ.

    6 ಮಕ್ಕಳ ತಾಯಿಯಾಗಿರುವ 55 ವರ್ಷದ ಮಹಿಳೆ ಲೇಸಿ ತನ್ನನ್ನ ತಾನು ‘ಮಿಲಿಯನ್ ಡಾಲರ್ ಬಾರ್ಬಿ’ ಎಂದು ಕರೆದುಕೊಂಡಿದ್ದಾಳೆ. ಈಕೆ ಶಸ್ತ್ರಚಿಕಿತ್ಸೆ (Surgeries) ಮಾಡಿಸಿಕೊಳ್ಳಲು ಬರೋಬ್ಬರಿ 8 ಕೋಟಿ ರೂ. ಖರ್ಚು ಮಾಡಿದ್ದಾಳೆ. ಇದೀಗ ಹರೆಯದ ಹುಡುಗಿಯಂತೆ ಕಾಣುತ್ತಿರುವ ಆಕೆಯನ್ನ ನೋಡಿ ಅನೇಕರು ಹಿಂದೆ ಬಿದ್ದಿದ್ದಾರಂತೆ, ಈಕೆಯೊಂದಿಗೆ ಡೇಟ್‌ ಮಾಡಲು ಬಯಸುತ್ತಿದ್ದಾರಂತೆ. ಇದನ್ನೂ ಓದಿ: 276 ದಿನ ಕಕ್ಷೆಯಲ್ಲಿದ್ದು ಭೂಮಿಗೆ ವಾಪಸ್‌ ಆಯ್ತು ಚೀನಾ ಬಾಹ್ಯಾಕಾಶ ನೌಕೆ!

    ಸ್ಥಳೀಯ ಮಾಧ್ಯಮಗಳ ಪ್ರಕಾರ, ಲೇಸಿಯ ನಿಜವಾದ ಹೆಸರು ಪೌಲಾ ಥೆಬರ್ಟ್‌. ಈಕೆಗೆ ಇನ್ಮುಂದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದಂತೆ ಎಚ್ಚರಿಕೆ ವೈದ್ಯರು ನೀಡಿದ್ದಾರೆ. ಈ ರೀತಿಯ ಜೀವನ ಶೈಲಿಯಿಂದ ಮಹಿಳೆಯರು ದೂರವಿರುವಂತೆಯೂ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಭಯೋತ್ಪಾದನೆಗೆ ಹಣಕಾಸು ನೆರವು ನಿಲ್ಲಿಸಬೇಕು – ಬಹಿರಂಗ ಸಭೆಯಲ್ಲೇ ಪಾಕ್‌ ಸಚಿವನಿಗೆ ಪಂಚ್‌ಕೊಟ್ಟ ಜೈಶಂಕರ್‌

    ಲೇಸಿ (55) ಅಮೆರಿಕದ ವರ್ಜೀನಿಯಾದ ನಿವಾಸಿ. ತಾನು ಪುರುಷರನ್ನ ಆಕರ್ಷಿಕಸಬೇಕು ಅಂತಾ ಬಯಸುತ್ತಾಳೆ. ಅದಕ್ಕಾಗಿ 200ಕ್ಕೂ ಹೆಚ್ಚು ಬಾರಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಈಗ ಆಕೆಯ ಸೌಂದರ್ಯ ನೋಡಿದವರೆಲ್ಲರೂ ಡೇಟ್‌ ಮಾಡಲು ಬಯಸುತ್ತಾರೆ. ಅಲ್ಲದೇ ತನಗೆ 30 ವರ್ಷ ವಯಸ್ಸಿನ ಮಗನಿದ್ದು, ಅವನೂ ಈಕೆಯ ಸೌಂದರ್ಯಕ್ಕೆ ಮಾರುಹೋಗಿದ್ದಾನೆ ಎಂದು ಆಕೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

  • ಭಾರತ ಮೂಲದ ಅಜಯ್ ಬಂಗಾಗೆ ವಿಶ್ವಬ್ಯಾಂಕ್ ಅಧ್ಯಕ್ಷ ಪಟ್ಟ

    ಭಾರತ ಮೂಲದ ಅಜಯ್ ಬಂಗಾಗೆ ವಿಶ್ವಬ್ಯಾಂಕ್ ಅಧ್ಯಕ್ಷ ಪಟ್ಟ

    ವಾಷಿಂಗ್ಟನ್‌/ನವದೆಹಲಿ:‌ ಮಾಸ್ಟರ್ ಕಾರ್ಡ್‍ನ ಮಾಜಿ ಸಿಇಒ ಭಾರತೀಯ ಮೂಲದ ಅಜಯ್ ಬಂಗಾ (Ajay Banga) ಅವರು ಮುಂದಿನ ವಿಶ್ವಬ್ಯಾಂಕ್‌ (World Bank) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ವಿಶ್ವಬ್ಯಾಂಕ್‌ ಬುಧವಾರ ದೃಢಪಡಿಸಿದೆ. ಮುಂದಿನ 5 ವರ್ಷಗಳ ಅವಧಿಗೆ ಬಂಗಾ ವಿಶ್ವಬ್ಯಾಂಕ್‌ನ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

    187 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಬಂಗಾ ಅವರು ಆಯ್ಕೆಯಾಗಿದ್ದು, ಈ ಹುದ್ದೆ ಅಲಂಕರಿಸಿದ ಪ್ರಥಮ ಅನಿವಾಸಿ ಭಾರತೀಯ (NRI) ಎನಿಸಿಕೊಂಡಿದ್ದಾರೆ. ಟ್ರಂಪ್ ಆಡಳಿತದಲ್ಲಿ ನೇಮಕಗೊಂಡ ಹಾಲಿ ವಿಶ್ವಬ್ಯಾಂಕ್‌ ಅಧ್ಯಕ್ಷ ಡೇವಿಡ್ ಮಲ್ಪಾಸ್ (David Malpass) ಅವರ ಅವಧಿ ಜೂನ್‌ 2ಕ್ಕೆ ಅಂತ್ಯಗೊಳ್ಳಲಿದೆ. ನಂತರ ಬಂಗಾ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಇದನ್ನೂ ಓದಿ: Russia-Ukraine War: ಡ್ರೋನ್‌ ಅಟ್ಯಾಕ್‌ – ರಷ್ಯಾ ಅಧ್ಯಕ್ಷ ಪುಟಿನ್‌ ಹತ್ಯೆಗೆ ಸ್ಕೆಚ್‌

    ಯಾರು ಈ ಅಜಯ್‌ ಬಂಗಾ?
    ಮಹಾರಾಷ್ಟ್ರದ ಪುಣೆಯಲ್ಲಿ 1959ರ ನವೆಂಬರ್ 10 ರಂದು ಜನಿಸಿದ ಅಜಯ್‌ ಬಂಗಾ ಅವರ ತಂದೆ ಹರ್ಭಜನ್ ಸಿಂಗ್ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದನ್ನೂ ಓದಿ: ಅಕ್ರಮ ಆಸ್ತಿ ಸಂಪಾದನೆ – ಕೇಂದ್ರದ ಮಾಜಿ ನೌಕರ ಅರೆಸ್ಟ್‌

    ದೆಹಲಿಯ ಸೇಂಟ್‌ ಸ್ಟೀಫನ್ಸ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಅವರು ಮುಂದೆ ಅಹಮದಾಬಾದ್‌ನ ಐಐಎಂನಲ್ಲಿ ಎಂಬಿಎ ಓದಿದ್ದಾರೆ. ಶಿಕ್ಷಣದ ಬಳಿಕ ನೆಸ್ಲೆಇಂಡಿಯಾ ಹಾಗೂ ಸಿಟಿಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದ್ದ ಇವರು 1996ರಲ್ಲಿ ಅಮೆರಿಕಕ್ಕೆ ತೆರಳಿ ಪೆಪ್ಸಿಕೋ ಕಂಪನಿಯಲ್ಲಿ 13 ವರ್ಷ ಸೇವೆ ಸಲ್ಲಿಸಿದ್ದರು. 2009ರಲ್ಲಿ ಅಧ್ಯಕ್ಷರಾಗಿ ಮಾಸ್ಟರ್‌ಕಾರ್ಡ್‌ ಕಂಪನಿ ಸೇರಿ ಬಳಿಕ ಅದರ ಸಿಇಒ ಆದರು. 2016ರಲ್ಲಿ ಮೋದಿ ನೇತೃತ್ವದ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

    ಪ್ರಸ್ತುತ ಜನರಲ್ ಅಟ್ಲಾಂಟಿಕ್‍ ಕಂಪನಿಯ ಉಪಾಧ್ಯಕ್ಷರಾಗಿರುವ ಅಜಯ್‌ ಬಂಗಾ ಅವರು ಒಟ್ಟು 30 ವರ್ಷಗಳ ವ್ಯಾಪಾರ ಅನುಭವವನ್ನು ಹೊಂದಿದ್ದಾರೆ. ಬಂಗಾ ಅವರು ಸತತ 12 ವರ್ಷಗಳ ಕಾಲ ಮಾಸ್ಟರ್ ಕಾರ್ಡ್‍ನಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸಿ 2021ನೇ ಡಿಸೆಂಬರ್‌ನಲ್ಲಿ ಹುದ್ದೆಯಿಂದ ಕೆಳಗಿಳಿದಿದ್ದರು. ಸಾಕಷ್ಟು ಪರಿಣತಿ ಹೊಂದಿರುವ ಬಂಗಾ ಅವರು ಅಮೆರಿಕ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ. ಫೆಬ್ರವರಿ 2015ರಲ್ಲಿ ವ್ಯಾಪಾರ ನೀತಿ ಮತ್ತು ಮಾತುಕತೆಗಳ ಸಲಹಾ ಮಂಡಳಿಯ ಅಧ್ಯಕ್ಷರನ್ನಾಗಿ ಅಂದಿನ ಅಧ್ಯಕ್ಷ ಬರಾಕ್‌ ಒಬಾಮಾ ನೇಮಿಸಿದ್ದರು.

  • ಪ್ರವಾಸಕ್ಕೆ ತೆರಳಿದ್ದ ಮೂವರು ಯುವತಿಯರ ಭೀಕರ ಹತ್ಯೆ – ಈಕ್ವೆಡಾರ್‌ ಬೀಚ್‌ನಲ್ಲಿ ನಡೆದಿದ್ದೇನು?

    ಪ್ರವಾಸಕ್ಕೆ ತೆರಳಿದ್ದ ಮೂವರು ಯುವತಿಯರ ಭೀಕರ ಹತ್ಯೆ – ಈಕ್ವೆಡಾರ್‌ ಬೀಚ್‌ನಲ್ಲಿ ನಡೆದಿದ್ದೇನು?

    ವಾಷಿಂಗ್ಟನ್‌: ಪ್ರವಾಸಕ್ಕೆ ತೆರಳಿದ್ದ ಮೂವರು ಯುವತಿಯರು ಅಮೆರಿಕದ (USA) ಈಕ್ವೆಡಾರ್‌ ಬೀಚ್‌ನಲ್ಲಿ (Ecuador Beach) ಭೀಕರ ಹತ್ಯೆಗೀಡಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ನಂತರ ಸಂತ್ರಸ್ತರು ಕಳುಹಿಸಿದ್ದ ಸಂದೇಶ ಬಹಿರಂಗವಾಗಿದೆ.

    ಪ್ರವಾಸಕ್ಕೆಂದು ತೆರಳಿದ್ದ ಡೆನಿಸ್ ರೆಯ್ನಾ (19) ಯುಲಿಯಾನಾ ಮಾಸಿಯಾಸ್ (21) ಹಾಗೂ ನಯೆಲಿ ತಫಿಯಾ (22) ಯುವತಿಯರು ಏಪ್ರಿಲ್‌ 4ರಂದು ನಾಪತ್ತೆಯಾಗಿ, ಏಪ್ರಿಲ್‌ 5 ರಂದು ಹತ್ಯೆಗೀಡಾಗಿದ್ದರು. ಆದ್ರೆ ಅದಕ್ಕೂ ಮುನ್ನ ತಮ್ಮ ಆಪ್ತರಿಗೆ ʻಇಲ್ಲೇನಾದರು ಘಟನೆ ಸಂಭವಿಸಬಹುದು ಅನ್ನಿಸುತ್ತಿದೆʼ ಅಂತಾ ಸಂದೇಶ ಕಳುಹಿಸಿರುವುದು ಇದೀಗ ಬೆಳಕಿಗೆ ಬಂದಿದೆ.

    ಹತ್ಯೆಯಾವದರಲ್ಲಿ ಮಾಸಿಯಾಸ್ ಗಾಯಕಿಯಾಗಿದ್ದರು, ಮೃತ ನಯೆಲಿ ತಫಿಯಾ ತಾಯಿ ಹಾಗೂ ಡೆನಿಸ್‌ ರೆಯ್ನಾ ಕೃಷಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾಗಿದ್ದರು (Agricultural Engineering Student). ಇದನ್ನೂ ಓದಿ: ನಮ್ಮದು ವೈಭವೀಕರಿಸಿದ ಕಾರ್ಯಕರ್ತರ ಸಂಘಟನೆಯಲ್ಲ: ಟ್ವಿಟ್ಟರ್‌ 6 ಸಾವಿರ ಉದ್ಯೋಗ ಕಡಿತಕ್ಕೆ ಮಸ್ಕ್‌ ಸ್ಪಷ್ಟನೆ

    ಮಾಹಿತಿ ಪ್ರಕಾರ, ಇದೇ ಏಪ್ರಿಲ್‌ 5 ರಂದು ಮೂವರು ಯುವತಿಯರನ್ನ ಚಿತ್ರಹಿಂಸೆ ನೀಡಿ ಯಾರೋ ಹತ್ಯೆ ಮಾಡಿದ್ದಾರೆ. ನಂತರ ಈಕ್ವೆಡಾರ್‌ನ ಕ್ವಿನಿಂಡೆ ಬಳಿಯ ಎಸ್ಮೆರಾಲ್ಡಾಸ್ ನದಿಯ ಬಳಿ ಹೂತುಹಾಕಿದ್ದಾರೆ. ಈ ಸ್ಥಳದಲ್ಲಿ ನಾಯಿಯೊಂದು ದುರ್ವಾಸನೆ ಹೊರಬರುತ್ತಿರುವುದನ್ನು ಗುರುತಿಸಿದೆ. ಇದನ್ನು ಕಂಡ ಮೀನುಗಾರರ ಗುಂಪು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆ. ಇದನ್ನೂ ಓದಿ: ಸುಡಾನ್ ಸೈನಿಕರ ಸಂಘರ್ಷ – 200ಕ್ಕೆ ಏರಿದ ಸಾವಿನ ಸಂಖ್ಯೆ, ಸಾವಿರಾರು ಜನರಿಗೆ ಗಾಯ

    ಸಾವಿಗೂ ಮುನ್ನ ಏಪ್ರಿಲ್‌ 4ರಂದು ಸಂತ್ರಸ್ತೆ ತಫಿಯಾ ತನ್ನ ಸಹೋದರನಿಗೆ ತಾನಿರುವ ಲೈವ್‌ ಲೊಕೇಶನ್‌ ನೊಂದಿಗೆ ಸುಮ್ಮನೆ ಕಳುಹಿಸಿರುವುದಾಗಿ ವಾಟ್ಸಪ್‌ ಸಂದೇಶ ಕಳುಹಿಸಿದ್ದಾಳೆ. ಮೃತ ರೇನಾ ಸಹ ತಾನು ನಾಪತ್ತೆಯಾಗುವ ಗಂಟೆಗಳಿಗೂ ಮೊದಲು ತನ್ನ ಸ್ನೇಹಿತನಿಗೆ ʻಇಲ್ಲೇನೋ ಆಗಲಿದೆ ಅಂತಾ ಅನಿಸುತ್ತಿದೆ. ನನಗೆ ಏನಾದ್ರೂ ಸಂಭವಿಸಬಹುದು. ಆದ್ರೆ ನೆನಪಿರಲಿ ನಾನು ನಿನ್ನನ್ನ ತುಂಬಾ ಪ್ರೀತಿಸುತ್ತೇನೆʼ ಅಂತಾ ಸಂದೇಶ ಕಳುಹಿಸಿದ್ದಾಳೆ. ಇದು ಆಕೆಯ ಹತ್ಯೆಯ ನಂತರ ಬೆಳಕಿಗೆ ಬಂದಿದೆ.

    ಅವರನ್ನ ಸಮಾಧಿ ಮಾಡಿ ಹೂತುಹಾಕುವುದಕ್ಕೂ ಮುನ್ನ ಬಾಯಿಗೆ ಬಟ್ಟೆ ತುರುಕಲಾಗಿತ್ತು. ಅವರು ಮೃತಪಟ್ಟ ಸ್ಥಳದಲ್ಲಿ ಅವರ ಬೀಚ್ ಉಡುಪುಗಳು, ಸ್ನಾನದ ಸೂಟ್‌ಗಳು, ಲಘು ಉಡುಪುಗಳು, ಶಾರ್ಟ್ಸ್‌ಗಳನ್ನ ಕ್ವಿನಿಂಡೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಮೂವರ ಮೊಬೈಲ್‌ ಫೋನ್‌ಗಳು ಪೊಲೀಸರಿಗೆ ಲಭ್ಯವಾಗಿದ್ದು, ತನಿಖೆ ಮುಂದುವರಿದಿದೆ.

  • ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಸೆಕ್ಸ್‌ – 6 ಮಂದಿ US ಶಿಕ್ಷಕಿಯರು ಅರೆಸ್ಟ್‌

    ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಸೆಕ್ಸ್‌ – 6 ಮಂದಿ US ಶಿಕ್ಷಕಿಯರು ಅರೆಸ್ಟ್‌

    ವಾಷಿಂಗ್ಟನ್‌: ವಿವಿಧ ಪ್ರಕರಣಗಳಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಯುಎಸ್‌ನ 6 ಮಂದಿ ಶಿಕ್ಷಕಿಯರನ್ನ (US Female Teachers) ಪೊಲೀಸರು (US Police) ಬಂಧಿಸಿರುವ ಆಘಾತಕಾರಿ ಘಟನೆ ಅಮೆರಿಕದಲ್ಲಿ ನಡೆದಿದೆ.

    ಅನೇಕ ಸಮಯದಿಂದ ವಿದ್ಯಾರ್ಥಿಗಳನ್ನ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಎರಡು ದಿನಗಳ ಅವಧಿಯಲ್ಲಿ ಒಟ್ಟು 6 ಮಂದಿ ಶಿಕ್ಷಕಿಯರನ್ನ ಬಂಧಿಸಿ ಜೈಲಿಗಟ್ಟಲಾಗಿದೆ. ಇದನ್ನೂ ಓದಿ: ಉಕ್ರೇನ್ ವಸತಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ – 8 ಸಾವು, 21 ಮಂದಿಗೆ ಗಾಯ

    6 ಶಿಕ್ಷಕಿಯರ ಪೈಕಿ ಡ್ಯಾನ್‌ವಿಲ್ಲೆ ಪಟ್ಟಣದ ಎಲ್ಲೆನ್ ಶೆಲ್ (38) ಎಂಬಾಕೆ ತಾನು ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ 16 ವರ್ಷದ ಇಬ್ಬರು ಹುಡುಗರೊಂದಿಗೆ ಮೂರು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಇದು ಆಕೆಯ ವಿರುದ್ಧ 3ನೇ ಬಾರಿ ಕೇಳಿ ಬರುತ್ತಿರುವ ಅತ್ಯಾಚಾರದ ಆರೋಪ ಎಂದು ಎಫ್‌ಐಆರ್‌ನಲ್ಲಿ (FIR) ದಾಖಲಿಸಲಾಗಿದೆ. ಸದ್ಯ ಆಕೆಯನ್ನ ಗ್ಯಾರಾರ್ಡ್ ಕೌಂಟಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದನ್ನೂ ಓದಿ: ಚೀನಾದಲ್ಲಿ H3N8 ಡೆಡ್ಲಿ ವೈರಸ್‌ ಪತ್ತೆ – ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತಂತೆ ಈ ವೈರಸ್‌!

    ವುಡ್‌ಲಾನ್ ಎಲಿಮೆಂಟರಿ ಶಾಲೆಯಲ್ಲಿ ಸಹಾಯಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಎಲ್ಲೆನ್ ಶೆಲ್, ಅದಕ್ಕೂ ಮುನ್ನ ಲ್ಯಾಂಕಾಸ್ಟರ್ ಎಲಿಮೆಂಟರಿ ಶಾಲೆಯಲ್ಲಿ ಉದ್ಯೋಗಿಯಾಗಿದ್ದರು. ಎಲ್ಲೆನ್ ಶೆಲ್ ಕೃತ್ಯದ ಬಗ್ಗೆ ಬೋಯ್ಲ್ ಕೌಂಟಿ ಶಾಲೆಯ ಅಧಿಕಾರಿಗಳು ಆಕೆಯ ಪೋಷಕರಿಗೆ ಪತ್ರವೊಂದನ್ನ ಕಳುಹಿಸಿದ್ದು, ಬಂಧನದ ಬಗ್ಗೆ ಎಚ್ಚರಿಸಿದ್ದಾರೆ. ಈಕೆ ವಿರುದ್ಧ ಲೈಂಗಿಕ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಎಲ್ಲೆನ್ ಶೆಲ್‌ರನ್ನ ಶಾಲಾ ಸಂಸ್ಥೆ ರಜೆಯ ಮೇಲೆ ಕಳಿಸಿತ್ತು ಎನ್ನಲಾಗಿದೆ.

    ಇದೊಂದೇ ಪ್ರಕರಣವಲ್ಲದೇ, ಮಕ್ಕಳನ್ನ ಲೈಂಗಿಕವಾಗಿ ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಯುಎಸ್‌ನಲ್ಲಿ 6 ಮಂದಿ ಶಿಕ್ಷಕಿಯರ ಮೇಲೆ ಪ್ರಕರಣಗಳು ದಾಖಲಾಗಿವೆ. ಅರ್ಕಾನ್ಸಾಸ್ ಶಿಕ್ಷಣತಜ್ಞೆ 32 ವರ್ಷದ ಹೀದರ್ ಹೇರ್ ಎಂಬಾಕೆಯ ಮೇಲೆ ಹದಿಹರೆಯದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಆರೋಪ ಕೇಳಿ ಬಂದಿದೆ.

    ಮತ್ತೊಂದೆಡೆ ತನ್ನ ಶಾಲಾ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಒಕ್ಲಹೋಮಾದ ಎಮಿಲಿ ಹ್ಯಾನ್‌ಕಾಕ್ (26) ಎಂಬ ಶಿಕ್ಷಕಿ ವಿರುದ್ಧ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಆಕೆಯನ್ನು ಕಳೆದ ಗುರುವಾರ ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಅಂತೆಯೇ, ಲಿಂಕನ್ ಕೌಂಟಿಯ ಅರೆಕಾಲಿಕ ಶಿಕ್ಷಕಿಯೊಬ್ಬಳು 15 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಆರೋಪ ಕೇಳಿ ಬಂದಿದೆ. ಎಮ್ಮಾ ಡೆಲಾನಿ ಎಂಬಾಕೆ ಬದಲಿ ಶಿಕ್ಷಕಿಯಾಗಿ ಹ್ಯಾನ್‌ಕಾಕ್ ವೆಲ್‌ಸ್ಟನ್ ಪಬ್ಲಿಕ್ ಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಆಕೆ ಶಾಲೆಯಲ್ಲೇ ವಿದ್ಯಾರ್ಥಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಇದಕ್ಕೆ ಪೂರಕವಾಗಿ ಆಕೆ ಸ್ನಾಪ್‌ಚಾಟ್‌ ಆ್ಯಪ್‌ನಲ್ಲಿ ಸಂಭಾಷಣೆ ನಡೆಸಿರುವ ದಾಖಲೆಗಳೂ ದೊರೆತಿವೆ ಎಂದು ಪೊಲೀಸರಿಂದ ತಿಳಿದುಬಂದಿದೆ.

    CRIME

    ಅಯೋವಾದ ಡೆಸ್ ಮೊಯಿನ್ಸ್‌ನಲ್ಲಿರುವ ಕ್ಯಾಥೋಲಿಕ್ ಹೈಸ್ಕೂಲ್‌ನಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿರುವ ಕ್ರಿಸ್ಟನ್ ಗ್ಯಾಂಟ್ (36) ಎಂಬಾಕೆ ಹದಿ ಹರೆಯದ ವಿದ್ಯಾರ್ಥಿಯೊಂದಿಗೆ ಶಾಲೆಯ ಒಳಗೆ ಮತ್ತು ಹೊರಗೆ 5ಕ್ಕೂ ಹೆಚ್ಚು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದು, ಈಕೆಯನ್ನ ಶುಕ್ರವಾರ ಬಂಧಿಸಲಾಗಿದೆ.

    ಜೇಮ್ಸ್ ಮ್ಯಾಡಿಸನ್ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿ ಕರ್ತವ್ಯ ಮಾಡುತ್ತಿದ್ದ 33 ವರ್ಷದ ಅಲಿಹ್ ಖೇರದ್‌ಮಂಡ್ ಎಂಬಾಕೆಯ ವಿರುದ್ಧವೂ ಲೈಂಗಿಕ ದುರುಪಯೋಗದ ಪ್ರಕರಣ ದಾಖಲಾಗಿದ್ದು, ಹಲವಾರು ತಿಂಗಳುಗಳ ಕಾಲ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವ ಆರೋಪ ಕೇಳಿ ಬಂದಿದೆ.

    CRIME 2

    ಪೆನ್ಸಿಲ್ವೇನಿಯಾದಲ್ಲಿ ಜಾವೆಲಿನ್ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದ ಶಿಕ್ಷಕಿಯ ವಿರುದ್ಧವೂ ಇಂತಹದ್ದೇ ಆರೋಪ ಕೇಳಿ ಬಂದಿದ್ದು, ತನ್ನ ಬಳಿ ಜಾವೆಲಿನ್ ತರಬೇತಿಗೆ ಬರುತ್ತಿದ್ದ 17 ವರ್ಷದ ಹುಡುಗನ ಜೊತೆ ಹಲವು ಬಾರಿ ಲೈಂಗಿಕ ಸಂಪರ್ಕ ನಡೆಸಿರುವುದಾಗಿ ದೂರು ದಾಖಲಾಗಿದೆ.

    ಇನ್ನೂ 26 ವರ್ಷದ ಹನ್ನಾ ಮಾರ್ತ್ ಎಂಬ ಶಿಕ್ಷಕಿಯನ್ನ ಪೊಲೀಸರು ಬಂಧನ ಮಾಡಿದ್ದು, ನಾರ್ಥಾಂಪ್ಟನ್ ಏರಿಯಾ ಹೈಸ್ಕೂಲ್‌ನ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧದಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ.

  • US ಜೈಲಿನಲ್ಲಿ ಕೈದಿಯನ್ನ ಜೀವಂತವಾಗಿ ತಿಂದುಮುಗಿಸಿದ ಕೀಟಗಳು!

    US ಜೈಲಿನಲ್ಲಿ ಕೈದಿಯನ್ನ ಜೀವಂತವಾಗಿ ತಿಂದುಮುಗಿಸಿದ ಕೀಟಗಳು!

    ವಾಷಿಂಗ್ಟನ್: ಡೇಂಜರಸ್ ಫಾರೆಸ್ಟ್‌ನಂತಹ (Dangerous Forest) ಸಿನಿಮಾಗಳಲ್ಲಿ ವಿವಿಧ ರೀತಿಯ ಕೀಟಗಳು ಮನುಷ್ಯನನ್ನು ಭೀಕರವಾಗಿ ತಿಂದು ಹತ್ಯೆ ಮಾಡುತ್ತವೆ. ಹಾಗೆಯೇ ಸಿನಿಮೀಯ ಮಾದರಿಯಲ್ಲಿ ಕೀಟಗಳು ಮತ್ತು ತಿಗಣೆ ಕೈದಿಯೊಬ್ಬನನ್ನ ಜೀವಂತವಾಗಿ ತಿಂದುಹಾಕಿರುವ ಭಯಾನಕ ಘಟನೆ ನಡೆದಿದೆ.

    ಅಮೆರಿಕದ ಅಟ್ಲಾಂಟಾದ ಜೈಲಿನಲ್ಲಿದ್ದ (US Atlanta Jail) 35 ವರ್ಷದ ಕೈದಿಯೊಬ್ಬನನ್ನು ಕೀಟಗಳು ಮತ್ತು ತಿಗಣೆ ತಿಂದು ಹಾಕಿವೆ ಎಂದು ಸಂತ್ರಸ್ತರ ಕುಟುಂಬದ ವಕೀಲರು ಆರೋಪಿಸಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ಕನ್ನಡದಲ್ಲೂ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ ಪರೀಕ್ಷೆ ಬರೆಯಬಹುದು

    ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಮೃತ ವ್ಯಕ್ತಿಯ ಕುಟುಂಬವು ಈಗ ಅವರ ಸಾವಿನ ಬಗ್ಗೆ ಕ್ರಿಮಿನಲ್ ತನಿಖೆಗೆ ಒತ್ತಾಯಿಸಿದ್ದು, ಜೈಲನ್ನು ಮುಚ್ಚಬೇಕು ಮತ್ತು ಅಲ್ಲಿನ ಕೈದಿಗಳನ್ನ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದೆ.

    ಯುಎಸ್ ಪೊಲೀಸರ (US Police) ಪ್ರಕಾರ, 2022ರ ಜೂನ್ 12 ರಂದು ಲಾಶಾನ್ ಥಾಂಪ್ಸನ್ ಎಂಬ ವ್ಯಕ್ತಿಯನ್ನ ಅಟ್ಲಾಂಟಾದಲ್ಲಿ ಬಂಧಿಸಿ, ಫುಲ್ಟನ್ ಕೌಂಟಿ ಜೈಲಿಗೆ ಕರೆದೊಯ್ಯಲಾಗಿತ್ತು. ಆದರೆ ವಿಚಾರಣೆಯ ನಂತರ ಆತನನ್ನ ಮಾನಸಿಕ ಅಸ್ವಸ್ಥ ಎಂದು ಪರಿಗಣಿಸಿ ಮನೋವೈದ್ಯಕೀಯ ವಿಭಾಗದಲ್ಲಿರಿಸಲಾಗಿತ್ತು. ಈ ನಡುವೆ ಪೊಲೀಸರು ಸಿಆರ್‌ಪಿಸಿ ಅನ್ವಯ ತನಿಖೆ ಪ್ರಕ್ರಿಯೆ ಆರಂಭಿಸಿದ್ದರು. ಆತನ ಹೇಳಿಕೆ ಪಡೆಯಲು 2022ರ ಸೆಪ್ಟೆಂಬರ್ 13ರಂದು ಹೋದಾಗ ಥಾಂಪ್ಸನ್ ಪ್ರತಿಕ್ರಿಯಿಸಲಿಲ್ಲ. ಅದಾದ 3 ತಿಂಗಳ ನಂತರ ಆತ ಕೊಠಡಿಯಲ್ಲೇ ಮೃತಪಟ್ಟಿರುವುದು ಕಂಡುಬಂದಿತು.

    jail

    ಈ ಕುರಿತು ಪ್ರತಿಕ್ರಿಯಿಸಿರುವ ಸಂತ್ರಸ್ತ ಕುಟುಂಬ ಪರ ವಕೀಲರು, ಥಾಂಪ್ಸನ್ ಅವರನ್ನ ಕೊಳಕು ತುಂಬಿದ ಕೋಣೆಯಲ್ಲಿ ಇರಿಸಲಾಗಿತ್ತು. ಹಾಗಾಗಿ ತಾನು ಮಲಗುತ್ತಿದ್ದ ಹಾಸಿಗೆಯಲ್ಲಿ ಕೀಟಗಳು ಹೆಚ್ಚಾಗಿ, ಮೂರು ತಿಂಗಳ ನಂತರ ಕೀಟಗಳಿಂದ ಜೀವಂತವಾಗಿ ತಿನ್ನಲ್ಪಟ್ಟಿದ್ದಾರೆ. ಇದಕ್ಕೆ ಯಾರು ಹೊಣೆಗಾರರು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯ – ಯುವತಿ ನೇಣು ಬಿಗಿದು ಆತ್ಮಹತ್ಯೆ

    ಮರಣೋತ್ತರ ಪರೀಕ್ಷಾ ವರದಿ ಸಹ ಅವರ ದೇಹದಲ್ಲಿ ಗಾಯಗಳಿಲ್ಲ ಹಾಗೂ ರೋಗ ಲಕ್ಷಣಗಳೂ ಇರಲಿಲ್ಲ ಎಂಬುದನ್ನು ತಿಳಿಸಿದೆ. ಫುಲ್ಟನ್ ಕೌಂಟಿ ಜೈಲಿನ ಅನೈರ್ಮಲ್ಯ ಪರಿಸ್ಥಿತಿಯೇ ಥಾಂಪ್ಸನ್ ಸಾವಿಗೆ ಕಾರಣ. ಜೈಲಿನ ಕೊಠಡಿಗಳ ಶುಚಿತ್ವ ಗಮನಿಸಿದರೂ ಯಾರೊಬ್ಬರೂ ಸಹಾಯ ಮಾಡಿಲ್ಲ. ಜೈಲಿನೊಳಗೆ ತೆಗೆದ ಚಿತ್ರಗಳನ್ನು ನೋಡಿದ್ರೆ ಎಷ್ಟು ಕೊಳಕು ತುಂಬಿಕೊಂಡಿತ್ತು ಅನ್ನೋದು ಅರ್ಥವಾಗುತ್ತೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಈ ಬಗ್ಗೆ ಉನ್ನತ ಮೂಲದ ಅಧಿಕಾರಿಗಳು ಪೂರ್ಣ ಸಂಬಂಧಪಟ್ಟ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಎಲ್ಲಾ ಕೈದಿಗಳಿಗೂ ಹಾಸಿಗೆ ಹಾಗೂ ಇತರ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಸೂಚನೆ ನೀಡಿದ್ದು, ಅದಕ್ಕಾಗಿ 5 ಲಕ್ಷ ಡಾಲರ್ (ಸುಮಾರು 4 ಕೋಟಿ ರೂ) ಗಳನ್ನ ಮಂಜೂರು ಮಾಡಲಾಗಿದೆ. ಜೊತೆಗೆ ಜೈಲಿನಲ್ಲಿರುವ ಕೈದಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಆದೇಶಿಸಿದೆ.

    ವೈದ್ಯರು ಹೇಳಿದ್ದೇನು?
    ಹಾಸಿಗೆಯಲ್ಲಿರುವ ಕೀಟಗಳು ಕಚ್ಚುವುದರಿಂದ ಮರಣ ಸಂಭವಿಸುವುದಿಲ್ಲ. ಆದರೆ ಕೆಲವೊಂದು ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಕೀಟಗಳು ಮುತ್ತಿಕೊಂಡಾಗ, ಅದೇ ಸ್ಥಿತಿಯಲ್ಲಿ ದೀರ್ಘಕಾಲದ ವರೆಗೆ ಮುಂದುವರಿದರೇ ತೀವ್ರವಾಗಿ ರಕ್ತಹೀನತೆ ಉಂಟಾಗುತ್ತದೆ. ಕಾಲಮಿತಿಯಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದರೆ ಬೇಗನೆ ಸಾವು ಸಂಭವಿಸುತ್ತದೆ ಎಂದು ಕೆಂಟುಕಿ ವಿಶ್ವವಿದ್ಯಾಲಯದ ಕೀಟಶಾಸ್ತ್ರಜ್ಞ ಮೈಕೆಲ್ ಪಾಟರ್ ತಿಳಿಸಿದ್ದಾರೆ.

  • ಅಬ್ಬಾ! 25 ವರ್ಷಗಳ ಹಳೆಯ ಶೂ 18 ಕೋಟಿಗೆ ಹರಾಜು

    ಅಬ್ಬಾ! 25 ವರ್ಷಗಳ ಹಳೆಯ ಶೂ 18 ಕೋಟಿಗೆ ಹರಾಜು

    ವಾಷಿಂಗ್ಟನ್‌: ಬಾಸ್ಕೆಟ್‌ಬಾಲ್ ದಂಥಕತೆ ಅಮೆರಿಕದ ಮೈಕಲ್ ಜೋರ್ಡನ್ (Michael Jordan) ಅವರು 1998ರ ಎನ್‌ಬಿಎ ಟೂರ್ನಿಯ ಫೈನಲ್ (NBA Finals) ಪಂದ್ಯದಲ್ಲಿ ಧರಿಸಿದ್ದ ಶೂ (Shoes) ಹರಾಜಿನಲ್ಲಿ ದಾಖಲೆಯ 18 ಕೋಟಿ ರೂ.ಗೆ ಮಾರಾಟವಾಗಿದೆ.

    ಎನ್‌ಬಿಎ ಜೋರ್ಡನ್ ಅವರ ವೃತ್ತಿಜೀವನದ ಕೊನೆಯ ಟೂರ್ನಿ ಆಗಿತ್ತು. ಷಿಕಾಗೊ ಬುಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಅವರು ಯೂಟಾ ಜಾಝ್ ತಂಡದ ವಿರುದ್ಧದ ಫೈನಲ್‌ನಲ್ಲಿ 37 ಪಾಯಿಂಟ್ಸ್ ಕಲೆಹಾಕಿದ್ದರು. ಇದರಿಂದ ಬುಲ್ಸ್ ತಂಡ 93-88 ಪಾಯಿಂಟ್ಸ್‌ಗಳಿಂದ ಜಯಿಸಿತ್ತು. ಇದನ್ನೂ ಓದಿ: IPL 2023: ಕೊನೆಯವರೆಗೂ ಹೋರಾಡಿ ಸೋತ ಚೆನ್ನೈ – ರಾಜಸ್ಥಾನ್‌ ರಾಯಲ್ಸ್‌ಗೆ 3 ರನ್‌ಗಳ ರೋಚಕ ಜಯ

    ಆ ಪಂದ್ಯದಲ್ಲಿ ಜೋರ್ಡನ್ ವಿವಿಧ ಶೂಗಳನ್ನೂ ಧರಿಸಿದ್ದರು. ಅವರು ಕೊನೆಯದಾಗಿ ಧರಿಸಿದ್ದ ಶೂಗಳನ್ನ ಹರಾಜಿಗೆ ಇಡಲಾಗಿತ್ತು ಎಂದು ನ್ಯೂಯಾರ್ಕ್‌ನ ಸೋದೆಬೀಸ್ ಹರಾಜು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಮ್ಯಾಜಿಕ್‌ ಮಹಿಗೆ 200ರ ಸಂಭ್ರಮ – ಕೊನೆಯ IPLನಲ್ಲಿ ವಿಶೇಷ ಸಾಧನೆ ಮಾಡಿದ ಧೋನಿ!

    ಸೋದೆಬೀಸ್‌ ಸಂಸ್ಥೆ ನಡೆಸಿದ ಹರಾಜಿನಲ್ಲಿ ಶೂಗಳು ಇಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು ಇದೇ ಮೊದಲು. ಅಮೆರಿಕದ ಗಾಯಕ ಕಾವ್ಯ ವೆಸ್ಟ್ ಅವರ ಶೂಗಳು 2021ರ ಹರಾಜಿನಲ್ಲಿ 14.74 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗಿದ್ದು ದಾಖಲೆಯಾಗಿತ್ತು.

    ಜೋರ್ಡನ್ ಅವರು 1998ರ ಫೈನಲ್‌ನಲ್ಲಿ ಧರಿಸಿದ್ದ ಜೆರ್ಸಿ 2022ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಹರಾಜಿನಲ್ಲಿ 82 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗಿತ್ತು.

  • ಚೀನಾದಲ್ಲಿ H3N8 ಡೆಡ್ಲಿ ವೈರಸ್‌ ಪತ್ತೆ – ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತಂತೆ ಈ ವೈರಸ್‌!

    ಚೀನಾದಲ್ಲಿ H3N8 ಡೆಡ್ಲಿ ವೈರಸ್‌ ಪತ್ತೆ – ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತಂತೆ ಈ ವೈರಸ್‌!

    ಬೀಜಿಂಗ್‌: ವೈರಸ್‌ಗಳ ಆಗರ ಎಂದೇ ಕರೆಸಿಕೊಳ್ಳುವ ಚೀನಾದಲ್ಲಿ (China) ಮತ್ತೊಂದು ಡೆಡ್ಲಿ ವೈರಸ್‌ ಪತ್ತೆಯಾಗಿದೆ.

    ಕಳೆದ ಮಾರ್ಚ್‌ 27 ರಂದು ಏವಿಯನ್‌ ಇನ್ಫ್ಲುಯೆನ್ಸಾ-ಎ (H3N8 Virus – ಹಕ್ಕಿಜ್ವರದ ರೀತಿಯ ವೈರಸ್‌) ವೈರಸ್‌ನಿಂದ ಬಳಲುತ್ತಿದ್ದ ಮಹಿಳೆ ಸಾವನ್ನಪ್ಪಿರುವುದು ಕಂಡುಬಂದಿದೆ. ಈ ಬಗ್ಗೆ ಪರಿಶೀಲಿಸಾಗ ಈವರೆಗೆ ಮೂರು ಪ್ರಕರಣಗಳು ಚೀನಾದಿಂದಲೇ ವರದಿಯಾಗಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

    ಪ್ರಾಥಮಿಕ ಮಾಹಿತಿಗಳ ಪ್ರಕಾರ ಈ ವೈರಸ್‌ ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುವ ಸಾಮರ್ಥ್ಯ ಹೊಂದಿಲ್ಲ. ಜೊತೆಗೆ ವೈರಸ್‌ ನಿಂದ ಹರಡುವಿಕೆಯಲ್ಲಿ ಅಪಾಯದ ಪ್ರಮಾಣವೂ ಕಡಿಮೆ ಎಂದು ಪರಿಗಣಿಸಲಾಗಿದೆ.

    ನ್ಯೂಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ 56ರ ಮಹಿಳೆ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಗೆ ದಾಖಲಾದ ಒಂದು ತಿಂಗಳ ನಂತರ ಅವರು ನಿಧನರಾದರು. ಈ ಕುರಿತು ಮಾಹಿತಿ ಪಡೆದ ನಂತರ ವಿಶ್ವ ಆರೋಗ್ಯ ಸಂಸ್ಥೆ (WHO) ಕೋಳಿಗೆ ತಗುಲುವ ರೋಗಲಕ್ಷಣಗಳು (ಹಕ್ಕಿಜ್ವರದ ಲಕ್ಷಣಗಳು) ಮಹಿಳೆಯಲ್ಲಿ ಕಂಡುಬಂದಿದೆ ಎಂದು ಹೇಳಿದೆ. ಇದನ್ನೂ ಓದಿ: ದೃಷ್ಟಿ ಮಂಜಾಗ್ತಿದೆ, ಕೈ-ಕಾಲು ಸ್ವಾಧೀನ ಕಳೆದುಕೊಳ್ತಿದೆ – ಪುಟಿನ್‌ ಆರೋಗ್ಯದಲ್ಲಿ ಬಿಗ್‌ ಅಪ್ಡೇಟ್ಸ್‌

    ಏನಿದು H3N8 ವೈರಸ್?
    ಉತ್ತರ ಅಮೆರಿಕದ ಜಲಪಕ್ಷಿಗಳಲ್ಲಿ ಕಂಡುಬಂದಿದ್ದ ಈ H3N8 ವೈರಸ್‌ 2002ರಿಂದ ಇತರ ದೇಶಗಳಿಗೆ ವ್ಯಾಪಿಸಿತು. ಈ ವೈರಸ್‌ ಕುದುರೆ, ನಾಯಿ ಹಾಗೂ ಸೀಲ್‌ನಂತಹ ಜಲಚರ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಕೋಳಿಯಂತಹ ಸಾಮಾನ್ಯ ಪಕ್ಷಿಗಳಲ್ಲೂ ಕಂಡುಬರುತ್ತದೆ. ಜೊತೆಗೆ ಪ್ರಾಣಿಗಳಿಂದ ಮನುಷ್ಯರಿಗೂ ಹರಡುತ್ತದೆ. ಆದರೆ ವೇಗವಾಗಿ ಹರಡುವುದಿಲ್ಲ. ನಿರ್ದಿಷ್ಟ ಸನ್ನಿವೇಶಗಳಲ್ಲಿ ಹರಡುತ್ತದೆ ಎಂದು ಹೇಳಲಾಗಿದೆ.

    ಈ ವೈರಸ್‌ ಝೂನೋಟಿಕ್ ಇನ್ಫ್ಲುಯೆನ್ಸಾ ಸೋಂಕು ಆಗಿರುವುದರಿಂದ ಲಕ್ಷಣ ರಹಿತವಾಗಿ ರೋಗವನ್ನು ಉಂಟುಮಾಡಬಹುದು. ಸೌಮ್ಯ ಜ್ವರ, ತೀವ್ರತರಹದ ಉಸಿರಾಟ, ಜಠರ ಅಥವಾ ನರಗಳಲ್ಲಿ ಸಮಸ್ಯೆ ಉಂಟುಮಾಡುವ ರೋಗಲಕ್ಷಣಗಳ ಮೂಲಕ ವೈರಸ್‌ ನ್ಯೂನತೆಯನ್ನು ಉಂಟುಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.

    H3N8 ವೈರಸ್‌ಗೆ ಲಸಿಕೆ ಇದೆಯೇ?
    H3N8 ಇನ್ಫ್ಲುಯೆನ್ಸಾ-ಎ ವೈರಸ್‌ಗೆ ಈವರೆಗೂ ಲಸಿಕೆ ಕಂಡುಹಿಡಿದಿಲ್ಲ. ಹಾಗಾಗಿ ಇದರಿಂದ ಸಾರ್ವಜನಿಕರ ಆರೋಗ್ಯಕ್ಕೆ ಆಗುವ ಅಪಾಯದ ಪ್ರಮಾಣವನ್ನು ತಿಳಿಯಲು ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿದೆ.

    ಮುನ್ನೆಚ್ಚರಿಕೆ ಕ್ರಮಗಳೇನು?
    * ಯಾವುದೇ ವಸ್ತುವನ್ನು ಮುಟ್ಟುವ ಮುನ್ನ ಕೈಗಳನ್ನು ಶುಚಿಯಾಗಿ ತೊಳೆದುಕೊಳ್ಳಬೇಕು.
    * ಆಲ್ಕೋಹಾಲ್‌ ಆಧಾರಿತ ಹ್ಯಾಂಡ್‌ ಸ್ಯಾನಿಟೈಸರ್‌ ಅನ್ನು ಬಳಸಬೇಕು.
    * ಮಾರುಕಟ್ಟೆ, ಫಾರ್ಮ್‌, ಪೌಲ್ಟ್ರಿ‌ಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು.