Tag: USA

  • 31 MQ-9B ಡ್ರೋನ್‌ ಖರೀದಿಗೆ ಅಮೆರಿಕ ಗ್ರೀನ್‌ ಸಿಗ್ನಲ್‌ – ಭಾರತಕ್ಕೆ ಆನೆ ಬಲ – ಡೆಡ್ಲಿ ಡ್ರೋನ್‌ ವಿಶೇಷತೆ ಏನು?

    31 MQ-9B ಡ್ರೋನ್‌ ಖರೀದಿಗೆ ಅಮೆರಿಕ ಗ್ರೀನ್‌ ಸಿಗ್ನಲ್‌ – ಭಾರತಕ್ಕೆ ಆನೆ ಬಲ – ಡೆಡ್ಲಿ ಡ್ರೋನ್‌ ವಿಶೇಷತೆ ಏನು?

    ನವದೆಹಲಿ: ಭಾರತಕ್ಕೆ 31 ʻMQ9B ಡ್ರೋನ್ʼ (MQ-9B Sea Guardian Drones) ಹಾಗೂ ಸಂಬಂಧಿತ ಮಿಲಿಟರಿ ಉಪಕರಣಗಳನ್ನು ಮಾರಾಟ ಮಾಡಲು ಅಮೆರಿಕ ಅನುಮೋದಿಸಿದೆ. US ರಕ್ಷಣಾ ಸಚಿವಾಲಯದ ಭದ್ರತಾ ಸಹಕಾರ ಏಜೆನ್ಸಿಯು ಸಂಭವನೀಯ ಉಪಕರಣಗಳ ಮಾರಾಟದ ಕುರಿತು ಅಮೆರಿಕ ಸಂಸತ್ತಿಗೆ (US Congress) ಸರ್ಕಾರ ತಿಳಿಸಿದೆ.

    ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದ ವೇಳೆ ಭಾರತ 31 MQ-9B ಸ್ಕೈ ಗಾರ್ಡಿಯನ್ ಡ್ರೋನ್‌ಗಳನ್ನು ಖರೀದಿಸಲು ಪ್ರಸ್ತಾಪಿಸಲಾಗಿತ್ತು. ಭಾರತ ಖರೀದಿಸಲಿರುವ 31 ಡ್ರೋನ್‌ಗಳನ್ನು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಬಳಸಲಿದ್ದು, ಇದರ ಅಂದಾಜು ವೆಚ್ಚ 3.99 ಶತಕೋಟಿ ಡಾಲರ್‌ ನಷ್ಟು ಆಗಲಿದೆ. ಇದನ್ನೂ ಓದಿ: ಎಲೆಕ್ಷನ್ ಬಜೆಟ್‌ನಲ್ಲಿ ಪುಕ್ಕಟೆ ಯೋಜನೆಗಳಿಲ್ಲ – ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ? ಕಳೆದ ವರ್ಷ ಎಷ್ಟಿತ್ತು?

    ಭಾರತ ಸರ್ಕಾರವು 31 MQ-9B ಸ್ಕೈ ಗಾರ್ಡಿಯನ್ ಡ್ರೋನ್ ಖರೀದಿಸಲು ವಿನಂತಿಸಿದೆ. ಇದರೊಂದಿಗೆ 161 ಎಂಬೆಡೆಡ್ ಗ್ಲೋಬಲ್ ಪೊಸಿಷನಿಂಗ್ ಮತ್ತು ಇನರ್ಷಿಯಲ್ ನ್ಯಾವಿಗೇಷನ್ ಸಿಸ್ಟಮ್ಸ್ (EGIs), 35 L3 RIO ಗ್ರಾಂಡೆ ಕಮ್ಯುನಿಕೇಷನ್ಸ್ ಇಂಟೆಲಿಜೆನ್ಸ್ ಸೆನ್ಸರ್ ಸೂಟ್ಸ್‌, 170 AGM-114R ಹೆಲ್‌ಫೈರ್ ಕ್ಷಿಪಣಿಗಳು, 16 M36E9 ಹೆಲ್ಫೈರ್ ಕ್ಯಾಪ್ಟಿವ್ ಏರ್ ಟ್ರೈನಿಂಗ್ ಕ್ಷಿಪಣಿಗಳು (CATM), ಲೈವ್ ಫ್ಯೂಜ್‌ ಜೊತೆಗೆ 310 ಜಿಬಿಯು-39B/B ಲೇಸರ್ ಸಣ್ಣ ವ್ಯಾಸದ ಬಾಂಬ್‌ಗಳು (LSDB) ಸೇರಿದಂತೆ ಬಿಡಿ ಭಾಗಗಳು ಸೇರಿದಂತೆ ಹಲವು, ದುರಸ್ತಿ ಉಪಕರಣಗಳನ್ನ ಖರೀದಿಸಲು ಮುಂದಾಗಿದೆ. ಇದಕ್ಕೆ ಸರಿಸುಮಾರು 3.99 ಶತಕೋಟಿ ಡಾಲರ್‌ನಷ್ಟು ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದೆ.

    ಈ ಉದ್ದೇಶಿತ ಮಾರಾಟವು ಯುಸ್‌ ಹಾಗೂ ಭಾರತೀಯ ಕಾರ್ಯತಂತ್ರದ ಸಂಬಂಧವನ್ನು ಬಲಪಡಿಸಲು ಸಹಾಯಕವಾಗಲಿದೆ ಹಾಗೂ ರಾಜಕೀಯ ಸ್ಥಿರತೆ ಕಾಯ್ದುಕೊಳ್ಳಬಹುದಾಗಿದೆ. ಯುನೈಟೆಡ್ ಸ್ಟೇಟ್ಸ್‌ನ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತಾ ಉದ್ದೇಶಗಳನ್ನು ಬೆಂಬಲಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜ್ಞಾನವಾಪಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮಸೀದಿ ಸಮಿತಿ

    ಆಕ್ರಮಣಕಾರಿ ಡ್ರೋನ್‌ ವಿಶೇಷತೆ ಏನು?
    ವಿಶ್ವದಾದ್ಯಂತ ಆಕ್ರಮಣಕಾರಿ ಕಾರ್ಯಾಚರಣೆಗೆ ಈ ಡ್ರೋನ್‌ ಹೆಸರು ವಾಸಿಯಾಗಿದೆ. ಲೇಸರ್-ನಿರ್ದೇಶಿತ ನಾಲ್ಕು ಹೆಲ್‌ಫೈರ್ ಕ್ಷಿಪಣಿಗಳು ಮತ್ತು 450 ಕೆಜಿ ಬಾಂಬ್‌ಗಳನ್ನು ಸಹ ಸಾಗಿಸಬಲ್ಲದು. ಭಾರತ ಮತ್ತು ಚೀನಾದ ಗಡಿ ರೇಖೆ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ಜೊತೆಗೆ ಹಿಂದೂ ಮಹಾ ಸಾಗರ ಪ್ರದೇಶಗಳಲ್ಲಿ ಇದು ಸಮರ್ಥವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ಶತ್ರು ಸೇನೆಗಳ ಆಕ್ರಮಣದ ಬಗ್ಗೆ ಎಚ್ಚರಿಸುತ್ತದೆ. ಸತತ 40 ಗಂಟೆ ಹಾರಾಡುವ ಸಾಮರ್ಥ್ಯ ಹೊಂದಿದೆ.

    ಭಾರತಕ್ಕೆ ಏನು ಪ್ರಯೋಜನ?
    MQ9B ಡ್ರೋನ್ ಖರೀದಿಯಿಂದ ಭಾರತ ತನ್ನ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳಲಿದೆ. ಸಮುದ್ರ ಮಾರ್ಗಗಳಲ್ಲಿ ಮಾನವ ರಹಿತ ಗಸ್ತು ಸಕ್ರೀಯಗೊಳಿಸುತ್ತದೆ. ಮಿಲಿಟರಿ ವ್ಯವಸ್ಥೆಯಲ್ಲಿ ಮತ್ತಷ್ಟು ಆಧುನಿಕತೆ ತರಲಿದೆ. ಸಶಸ್ತ್ರ ಪಡೆಗಳ ಬಲ ಮತ್ತಷ್ಟು ಹೆಚ್ಚಾಗಲಿದೆ.

    ಭಾರತೀಯ ನೌಕಾಪಡೆಯು, 2020 ರಲ್ಲಿ, ಹಿಂದೂ ಮಹಾಸಾಗರದಲ್ಲಿ ಕಣ್ಗಾವಲು ಕಾರ್ಯಾಚರಣೆಗಳನ್ನು ಕೈಗೊಳ್ಳಲು ಯುಎಸ್‌ನಿಂದ ಎರಡು MQ-9B ಸೀ-ಗಾರ್ಡಿಯನ್ ಡ್ರೋನ್‌ಗಳನ್ನು ಒಂದು ವರ್ಷಕ್ಕೆ ಗುತ್ತಿಗೆಗೆ ತೆಗೆದುಕೊಂಡಿತ್ತು. ನಂತರ ಗುತ್ತಿಗೆ ಅವಧಿಯನ್ನು ವಿಸ್ತರಿಸಲಾಯಿತು. MQ-9B ಡ್ರೋನ್‌ಗಳಲ್ಲಿ ಎರಡು ರೂಪಾಂತರಗಳಿವೆ ಸೀಗಾರ್ಡಿಯನ್ ಮತ್ತು ಸ್ಕೈಗಾರ್ಡಿಯನ್. ಇವು ಯುಎಸ್‌ನ ಜನರಲ್‌ ಅಟಾಮಿಕ್ಸ್‌ ಏರೊನಾಟಿಕಲ್‌ ಸಂಸ್ಥೆಯು ಈ ಡ್ರೋನ್‌ಗಳನ್ನು ತಯಾರಿಸಲಿದೆ. ಇದನ್ನೂ ಓದಿ: ಅಮೆರಿಕದಿಂದ ಇರಾನ್ ಸೇನಾಧಿಕಾರಿ ಹತ್ಯೆ- ಡೆಡ್ಲಿ ಡ್ರೋನ್ ವಿಶೇಷತೆ ಏನು? ಬೆಲೆ ಎಷ್ಟು?- ವಿಡಿಯೋ ನೋಡಿ

  • ಜ.22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ – ವಿಶ್ವದ ದೊಡ್ಡಣ್ಣ ಅಮೆರಿಕದಲ್ಲೂ ನೇರಪ್ರಸಾರ

    ಜ.22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ – ವಿಶ್ವದ ದೊಡ್ಡಣ್ಣ ಅಮೆರಿಕದಲ್ಲೂ ನೇರಪ್ರಸಾರ

    ವಾಷಿಂಗ್ಟನ್‌: ಇದೇ ಜನವರಿ 22ರಂದು ಐತಿಹಾಸಿಕ ರಾಮಮಂದಿರ ಉದ್ಘಾಟನೆ ನೆರವೇರಲಿದೆ. ಜೊತೆಗೆ ರಾಮಮಂದಿರದ ಗರ್ಭಗುಡಿಯಲ್ಲಿ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆ (Shri Ramalalla Pran-Pratishtha) ನಡೆಯಲಿದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾದುಕುಳಿತಿದೆ.

    ಅಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದಂತೆ ಗಣ್ಯಾತಿಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ವಿದೇಶಗಳಲ್ಲೂ ನೇರ ಪ್ರಸಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೆರಿಕ (USA) ಸಹ ನ್ಯೂಯಾರ್ಕ್ ನಗರದ ಐಕಾನಿಕ್ ಟೈಮ್ಸ್ ಸ್ಕ್ವೇರ್‌ನಲ್ಲಿ (Times Square) ಲೈವ್‌ಸ್ಟ್ರೀಮ್ ಮಾಡಲಿದೆ. ಜೊತೆಗೆ ಅಮೆರಿಕದಲ್ಲಿರುವ ವಿವಿಧ ಭಾರತೀಯ ರಾಯಭಾರಿ ಕಚೇರಿಗಳು ನೇರಪ್ರಸಾರ ಮಾಡುವ ಮೂಲಕ ಶ್ರೀರಾಮನ ಕೀರ್ತಿಯನ್ನು ಪಸರಿಸಲು ಸಜ್ಜಾಗಿವೆ ಎಂದು ಮೂಲಗಳು ತಿಳಿಸಿವೆ.

    ಥೈಲ್ಯಾಂಡ್‌ನಲ್ಲೂ ನೇರ ಪ್ರಸಾರ:
    ಅಯೋಧ್ಯೆಯಲ್ಲಿ (Ayodhya) ಶ್ರೀರಾಮನ ಪ್ರತಿಷ್ಠಾಪನೆಗೆ ಸಾಕ್ಷಿಯಾಗುವ 51 ದೇಶಗಳನ್ನು ಗುರುತಿಸಲಾಗಿದೆ. ಈ ಪೈಕಿ ಥೈಲ್ಯಾಂಡ್‌ ಸಹ ಒಂದಾಗಿದ್ದು, ಇಲ್ಲಿನ ರಾಜಧಾನಿ ಬ್ಯಾಂಕಾಕ್‌ನಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ಥೈಲ್ಯಾಂಡ್‌ ರಾಜಧಾನಿ ಬ್ಯಾಂಕಾಕ್ ಶ್ರೀಮಂತ ಹಿಂದೂ ಸಾಂಸ್ಕೃತಿಕ ಪರಂಪರೆಗೆ ನೆಲೆಯಾಗಿದೆ. ಭಾರತ ಮತ್ತು ಥೈಲ್ಯಾಂಡ್ ಬಲವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧಗಳನ್ನು ಹೊಂದಿವೆ. ಥೈಲ್ಯಾಂಡ್‌ನ ಹಲವಾರು ರಾಜರು ರಾಮನ ವಂಶಸ್ಥರ ಭಾಗವಾಗಿದ್ದಾರೆ ಎಂದೇ ಹೇಳಲಾಗುತ್ತದೆ. ಇಲ್ಲಿರುವ ಪ್ರತಿಯೊಬ್ಬ ರಾಜನಿಗೂ ಅವರ ಹೆಸರಿನಲ್ಲಿ ರಾಮನ ಬಿರುದು ಇದೆ, ಇದು ಇಲ್ಲಿನ ಹಳೆಯ ಸಂಪ್ರದಾಯವಾಗಿದೆ ಎಂದು ವಿಶ್ವ ಹಿಂದೂ ಫೌಂಡೇಶನ್ ಸ್ಥಾಪಕ ಮತ್ತು ಜಾಗತಿಕ ಅಧ್ಯಕ್ಷರಾದ ಸ್ವಾಮಿ ವಿಜ್ಞಾನಾನಂದ ತಿಳಿಸಿದ್ದಾರೆ.

    ಉತ್ತರ ಪ್ರದೇಶದ ಜೈಲುಗಳಲ್ಲಿ ನೇರಪ್ರಸಾರ:
    ಉತ್ತರ ಪ್ರದೇಶದ (Uttar Pradesh) ಎಲ್ಲಾ ಜೈಲುಗಳಲ್ಲಿಯೂ ಜನವರಿ 22 ರಂದು ರಾಮಮಂದಿರ ಉದ್ಘಾಟನೆ ಸಮಾರಂಭದ ನೇರಪ್ರಸಾರ ಮಾಡಲಾಗುವುದು ಎಂದು ಸಚಿವ ಧರ್ಮವೀರ್ ಪ್ರಜಾಪತಿ ತಿಳಿಸಿದ್ದಾರೆ. ಕೈದಿಗಳು ಸಹ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಲು ಸಾಧ್ಯವಾಗುತ್ತದೆ. ಸದ್ಯ ರಾಜ್ಯದಲ್ಲಿ 1.05 ಲಕ್ಷಕ್ಕೂ ಹೆಚ್ಚು ಕೈದಿಗಳಿದ್ದಾರೆ. ಅವರೂ ಈ ದೇಶದ ಪ್ರಜೆಗಳು. ಅವರು ಈ ಸಂದರ್ಭದಿಂದ ದೂರ ಉಳಿಯದಂತೆ ನೋಡಿಕೊಳ್ಳಲು, ರಾಜ್ಯದ ಎಲ್ಲಾ ಜೈಲುಗಳಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

  • T20 World Cup 2024 ವೇಳಾಪಟ್ಟಿ ಬಿಡುಗಡೆ; ಜೂ.9ಕ್ಕೆ ನ್ಯೂಯಾರ್ಕ್‌ನಲ್ಲಿ ಇಂಡೋ-ಪಾಕ್‌ ಕದನ

    T20 World Cup 2024 ವೇಳಾಪಟ್ಟಿ ಬಿಡುಗಡೆ; ಜೂ.9ಕ್ಕೆ ನ್ಯೂಯಾರ್ಕ್‌ನಲ್ಲಿ ಇಂಡೋ-ಪಾಕ್‌ ಕದನ

    ವಾಷಿಂಗ್ಟನ್‌: ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2024) ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. 2023ರ ಏಕದಿನ ವಿಶ್ವಕಪ್‌ ಟೂರ್ನಿ ಬಳಿಕ ಭಾರತ ಮತ್ತು ಪಾಕಿಸ್ತಾನ ತಂಡಗಳು ಜೂನ್‌ 9ರಂದು ನ್ಯೂಯಾರ್ಕ್‌ನಲ್ಲಿ ಮುಖಾಮುಖಿಯಾಗಲಿವೆ.

    2024ರ ಟಿ20 ವಿಶ್ವಕಪ್‌ ಟೂರ್ನಿಯು ವೆಸ್ಟ್ ಇಂಡೀಸ್ (West Indies) ಮತ್ತು ಅಮೆರಿಕದ (USA) ಆತಿಥ್ಯದಲ್ಲಿ ಜೂನ್‌ 1 ರಿಂದ ಜೂನ್‌ 29ರ ವರೆಗೆ ನಡೆಯಲಿದೆ. ಈ ಬಾರಿ 16 ರಿಂದ 20ಕ್ಕೆ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, ಒಟ್ಟು 4 ಗುಂಪುಗಳಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೇ ಸೂಪರ್‌-12 ಹಂತವನ್ನು ಸೂಪರ್‌-8ಗೆ ಇಳಿಸಲಾಗಿದೆ. ಸೂಪರ್‌-8 ಗುಂಪಿನಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಇದನ್ನೂ ಓದಿ: ಕ್ರಿಕೆಟ್‌ ದೇವರನ್ನು ಆಕಸ್ಮಿಕವಾಗಿ ಭೇಟಿಯಾದ ಸಿಎಂ – ಒಂದೇ ಫ್ರೇಮ್‌ನಲ್ಲಿ ಸಚಿನ್‌, ಸಿದ್ದು

    ಜೂನ್‌ 1 ರಿಂದ 18ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ. ಜೂನ್‌ 19 ರಿಂದ 24ರ ವರೆಗೆ ಸೂಪರ್‌-8 ಪಂದ್ಯಗಳು, ಜೂನ್‌ 26 ಮತ್ತು ಜೂನ್‌ 27 ರಂದು ಸೆಮಿಫೈನಲ್‌ ಪಂದ್ಯಗಳು ನಡಯೆಲಿದ್ದು, ಜೂನ್‌ 29ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಭಾರತವನ್ನು ನಂ.1 ಪಟ್ಟದಿಂದ ಕೆಳಗಿಳಿಸಿದ ಆಸ್ಟ್ರೇಲಿಯಾ – ಪ್ಯಾಟ್‌ ಕಮ್ಮಿನ್ಸ್‌ ನಾಯಕತ್ವಕ್ಕೆ ಮೆಚ್ಚುಗೆ!

    ಗುಂಪು ಹಂತದಲ್ಲಿ ಭಾರತ ಎದುರಿಸುವ 4 ಪಂದ್ಯಗಳ ಪೈಕಿ ಮೂರು ಪಂದ್ಯಗಳು ನ್ಯೂಯಾರ್ಕ್‌ ನಗರದಲ್ಲಿ, ಒಂದು ಪಂದ್ಯ ಫ್ಲೋರಿಡಾ ನಗರದಲ್ಲಿ ನಡೆಯಲಿದೆ. ಗುಂಪು ಹಂತದಲ್ಲಿ ಜೂನ್‌ 5 ರಂದು ಐರ್ಲೆಂಡ್‌ ವಿರುದ್ಧ, ಜೂನ್‌ 12 ರಂದು ಯುಎಸ್‌ಎ ವಿರುದ್ಧ, ಜೂನ್‌ 15 ರಂದು ಕೆನಡಾ ವಿರುದ್ಧ ಭಾರತ ತಂಡ ಸೆಣಸಲಿದೆ. ಇನ್ನೂ ಬಹು ನಿರೀಕ್ಷಿತ ಹೈವೋಲ್ಟೇಜ್‌ ಕದನದಲ್ಲಿ ಜೂನ್‌ 9 ರಂದು ಪಾಕಿಸ್ತಾನ ವಿರುದ್ಧ ನ್ಯೂಯಾರ್ಕ್‌ನ ಅಂಗಳದಲ್ಲಿ ಭಾರತ ಸೆಣಸಲಿದೆ. ಇದನ್ನೂ ಓದಿ: ಧೋನಿಗೆ 15 ಕೋಟಿ ರೂ. ದೋಖಾ – ಮಾಜಿ ಪಾಲುದಾರರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿದ ಮಹಿ

    ಯಾವ ಗುಂಪಿನಲ್ಲಿ-ಯಾವ ತಂಡಗಳು?
    ಗುಂಪು-ಎ:
    ಭಾರತ, ಪಾಕಿಸ್ತಾನ, ಐರ್ಲೆಂಡ್‌, ಕೆನಡಾ, ಯುಎಸ್‌ಎ

    ಗ್ರೂಪ್‌-ಬಿ:
    ಇಂಗ್ಲೆಂಡ್‌, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್‌ಲೆಂಡ್‌, ಒಮನ್‌

    ಗ್ರೂಪ್‌-ಸಿ:
    ನ್ಯೂಜಿಲೆಂಡ್‌, ವೆಸ್ಟ್‌ ಇಂಡೀಸ್‌, ಅಫ್ಘಾನಿಸ್ತಾನ, ಉಗಾಂಡ, ಪಪುವಾ ನ್ಯೂ ಗಿನಿಯಾ

    ಗ್ರೂಪ್‌-ಡಿ:
    ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್‌, ನೇಪಾಳ

  • ಕ್ರೀಡಾ ವಿದ್ಯಾರ್ಥಿಯೊಂದಿಗೆ ಕಾರಿನಲ್ಲಿ ಸೆಕ್ಸ್‌ – ಶಿಕ್ಷಕಿಯನ್ನ ರೆಡ್‌ಹ್ಯಾಂಡಾಗಿ ಹಿಡಿದು ಪೊಲೀಸರಿಗೊಪ್ಪಿಸಿದ ತಾಯಿ

    ಕ್ರೀಡಾ ವಿದ್ಯಾರ್ಥಿಯೊಂದಿಗೆ ಕಾರಿನಲ್ಲಿ ಸೆಕ್ಸ್‌ – ಶಿಕ್ಷಕಿಯನ್ನ ರೆಡ್‌ಹ್ಯಾಂಡಾಗಿ ಹಿಡಿದು ಪೊಲೀಸರಿಗೊಪ್ಪಿಸಿದ ತಾಯಿ

    ವಾಷಿಂಗ್ಟನ್‌: ಕ್ರೀಡಾ ಅಭ್ಯಾಸದಲ್ಲಿ ತೊಡಗಿದ್ದ ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯೊಬ್ಬಳು (US Teacher) ಲೈಂಗಿಕ ಕ್ರಿಯೆ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿಯ ತಾಯಿ ರೆಡ್‌ಹ್ಯಾಂಡಾಗಿ ಹಿಡಿದು ಶಿಕ್ಷಿಯನ್ನ ಪೊಲೀಸರಿಗೆ (US Police) ಒಪ್ಪಿಸಿರುವ ಘಟನೆ ಅಮೆರಿಕದ ಕೌಂಟಿಯಲ್ಲಿ ನಡೆದಿದೆ.

    2008ರಲ್ಲಿ ಪರಿಚಯಿಸಲಾದ ಲೈಫ್‌360 ಅಪ್ಲಿಕೇಷನ್‌ (Life360 Tracking App) ಬಳಿಸಿ ಅಮೆರಿಕದ ಮಹಿಳೆಯೊಬ್ಬರು ತನ್ನ ಮಗ ಶಿಕ್ಷಕಿಯೊಂದಿಗೆ ಅನೈಕ ಸಂಬಂಧ ಇಟ್ಟುಕೊಂಡಿರುವುದನ್ನ ಪತ್ತಹೆಚ್ಚಿದ್ದಾರೆ. 2008ರಲ್ಲಿ ಪರಿಚಯಿಸಲಾದ ಈ ಆ್ಯಪ್‌ ಫ್ಯಾಮಿಲಿ ಸೋಶಿಯಲ್‌ ನೆಟ್‌ವರ್ಕಿಂಗ್‌ ಅಪ್ಲಿಕೇಶನ್‌ ಆಗಿದ್ದು. ಮತ್ತೊಬ್ಬ ವ್ಯಕ್ತಿಯ ಇರುವಿಕೆಯನ್ನು ಗುರುತಿಸುತ್ತದೆ. ಜೊತೆಗೆ ವ್ಯಕ್ತಿ ಎಲ್ಲಿದ್ದಾರೆ? ಯಾರ ಜೊತೆ ಇದ್ದಾರೆ ಎಂಬುದನ್ನ ತಿಳಿಯುವುದಕ್ಕೂ ಅನುವು ಮಾಡಿಕೊಡುತ್ತದೆ. ಈ ಅಪ್ಲಿಕೇಶನ್‌ ಸಹಾಯದಿಂದಲೇ ತನ್ನ ಮಗನೊಟ್ಟಿಗೆ ಲೈಂಗಿಕ ಸಂಪರ್ಕ ಹೊಂದಿದ್ದ ಶಿಕ್ಷಕಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸಿನಲ್ಲೇ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

    18 ವರ್ಷದ ವಿದ್ಯಾರ್ಥಿ ಸೌತ್ ಮೆಕ್ಲೆನ್‌ಬರ್ಗ್ ಹೈಸ್ಕೂಲ್‌ನ 26 ವರ್ಷದ ಶಿಕ್ಷಕಿ ಗೇಬ್ರಿಯೆಲಾ ಕಾರ್ಟಯಾಳ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದನು. ರಗ್ಬಿ ಕ್ರೀಡಾಭ್ಯಾಸ ನಡೆಸುತ್ತಿದ್ದ ವಿದ್ಯಾರ್ಥಿ ಪ್ರತಿದಿನವೂ ತಡವಾಗಿ ಬರುತ್ತಿದ್ದನು. ಇದರಿಂದ ಅನುಮಾನಗೊಂಡ ತಾಯಿ ಆತನನ್ನು ಹಿಂಬಾಲಿಸಲು ಶುರು ಮಾಡಿದಳು. ಅಂದೊಂದು ದಿನ ಕೌಂಟಿ ನಗರದ ಉದ್ಯಾನವೊಂದರಲ್ಲಿ ಶಿಕ್ಷಕ್ಷಿ ಜೊತೆ ಕಾರಿನಲ್ಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನು. ಈ ವೇಳೆ ಲೈಫ್‌360 ಅಪ್ಲಿಕೇಷನ್‌ ಬಳಿಸಿ ಹಿಂಬಾಲಿಸಿಕೊಂಡು ಬಂದಿದ್ದ ತಾಯಿ ರೆಡ್‌ಹ್ಯಾಂಡಾಗಿ ಹಿಡಿದು ಶಿಕ್ಷಕಿಯನ್ನ ಪೊಲೀಸರಿಗೆ ಒಪ್ಪಿದ್ದಾರೆ. ಇದನ್ನೂ ಓದಿ: Vijay Diwas: 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲ್ಲಿಸಿದ ವೀರಯೋಧರಿಗೆ ಮೋದಿ ನಮನ

    ಬಳಿಕ ಶಿಕ್ಷಕಿ ಹಿನ್ನೆಲೆಯನ್ನು ಪರಿಶೀಲಿಸಿದಾಗ ಅಂದು ಆಕೆ ಥ್ಯಾಂಕ್ಸ್‌ಗಿವಿಂಗ್‌ ವಿಶೇಷ ಸಂದರ್ಭದ ರಜೆ ತೆಗೆದುಕೊಂಡಿದ್ದಳು. ಈ ವೇಳೆ ವಿದ್ಯಾರ್ಥಿ ಜೊತೆಗೆ ಅನುಚಿತ ವರ್ತನೆಯಲ್ಲಿ ತೊಡಗಿದ್ದಳು ಎಂದು ತಿಳಿದುಬಂದಿದೆ. ಅಪರಾಧ ಸಾಬೀತಾದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: KSRTC ಟ್ರೇಡ್‍ಮಾರ್ಕ್ ಉಳಿಸಿಕೊಂಡ ಕರ್ನಾಟಕ- ಕಾನೂನು ಸಮರ ಸೋತ ಕೇರಳ 

  • ಗಾಜಾ ಸುರಂಗಗಳಲ್ಲಿ ಮಹಾ ಪ್ರವಾಹ ಸೃಷ್ಟಿಸಲು ಇಸ್ರೇಲ್‌ ಪ್ಲ್ಯಾನ್‌

    ಗಾಜಾ ಸುರಂಗಗಳಲ್ಲಿ ಮಹಾ ಪ್ರವಾಹ ಸೃಷ್ಟಿಸಲು ಇಸ್ರೇಲ್‌ ಪ್ಲ್ಯಾನ್‌

    ಟೆಲ್‌ ಅವೀವ್‌: ಇಸ್ರೇಲ್‌-ಹಮಾಸ್‌ ನಡುವಿನ ಯುದ್ಧ (Israel Hamas War) ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಎರಡೂ ಸೇನೆಗಳೂ ತಂತ್ರ-ಪ್ರತಿತಂತ್ರ ನಡೆಸುತ್ತಲೇ ಇವೆ. ಆದರೀಗ ಹಮಾಸ್‌ ಉಗ್ರರು ಗಾಜಾಪಟ್ಟಿಯಲ್ಲಿ ಬಳಸಿದ ಸುರಂಗಗಳನ್ನ ಕೃತಕ ಪ್ರವಾಹ (Flood Tunnels) ಸೃಷ್ಟಿಸುವ ಮೂಲಕ ಧ್ವಂಸಗೊಳಿಸಲು ಇಸ್ರೇಲ್‌ ಸೇನೆ (Israel Army) ಪ್ಲ್ಯಾನ್‌ ಮಾಡಿದೆ ಎಂದು ವರದಿಯಾಗಿದೆ.

    ಹಮಾಸ್‌ ಉಗ್ರರ ವಿರುದ್ಧ ಸಮರ ಸಾರಿಸುವ ಇಸ್ರೇಲ್‌ ಸುರಂಗಗಳಲ್ಲಿ ಪ್ರವಾಸ ಸೃಷ್ಟಿ ಉಗ್ರರನ್ನು ಮಟ್ಟಹಾಕಲು ಕೆಲ ದಿನಗಳ ಹಿಂದೆಯೇ ಪ್ಲ್ಯಾನ್‌ ಮಾಡಿದಂತಿದೆ. ಏಕೆಂದರೆ ಕಳೆದ ನವೆಂಬರ್‌ ಮಧ್ಯದಲ್ಲಿಯೇ ಇಸ್ರೇಲ್‌ ಸೇನೆಯು ಅಲ್-ಶಾತಿ ನಿರಾಶ್ರಿತರ ಶಿಬಿರದ ಉತ್ತರಕ್ಕೆ ಕನಿಷ್ಠ ಒಂದು ಮೈಲಿಯಷ್ಟು ದೂರಕ್ಕೆ 5 ಪಂಪ್‌ಗಳನ್ನ ನಿರ್ಮಿಸಿದೆ. ಈ ಪಂಪ್‌ಗಳ ಮೂಲಕ ಗಂಟೆಗೆ ಸಾವಿರಾರು ಘನ ಮೀಟರ್‌ಗಳಷ್ಟು ನೀರನ್ನು ಚಿಮ್ಮಿಸಬಹುದು. ಕನಿಷ್ಠ ಒಂದೇ ವಾರದಲ್ಲಿ ಸುರಂಗಗಳಲ್ಲಿ ನೀರು ತುಂಬಿಕೊಂಡು ಪ್ರವಾಹ ಸೃಷ್ಟಿಬಹುದು ಅನ್ನೋದು ಇಸ್ರೇಲ್‌ನ ಮಾಸ್ಟರ್‌ ಪ್ಲ್ಯಾನ್‌.

    ಮಾಹಿತಿ ಪ್ರಕಾರ, ಹಮಾಸ್‌ ಸುರಕ್ಷಿತ ಸ್ಥಳಗಳಾಗಿದ್ದ ಸುರಂಗಗಳಲ್ಲಿ ಒತ್ತೆಯಾಳುಗಳನ್ನ ಬಂಧಿಸಿ ಮರೆಮಾಚಿತ್ತು. ಅದಕ್ಕಾಗಿ ಇಸ್ರೇಲ್‌ ಸುರಂಗಗಳಲ್ಲಿ ಪ್ರವಾಹ ಸೃಷ್ಟಿಸಲು ಯೋಜನೆ ರೂಪಿಸಿದೆ. ಆದ್ರೆ ಹಮಾಸ್‌-ಇಸ್ರೇಲ್‌ ನಡುವೆ ಕದನ ವಿರಾಮ ಏರ್ಪಟ್ಟಿದ್ದು, ಪರಸ್ಪರ ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಂದವಾಗಿದೆ. ಇಂತಹ ಸಂದರ್ಭದಲ್ಲಿ ಇಸ್ರೇಲ್‌ ಪ್ರವಾಹ ಸೃಷ್ಟಿಸುವ ಕೆಲಸಕ್ಕೆ ಮುಂದಾಗುತ್ತದೆಯೇ ಅನ್ನೋದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ಚಂದ್ರನ ಕಕ್ಷೆಯಿಂದ ಭೂಮಿ ಕಕ್ಷೆಗೆ ಮತ್ತೆ ಮರಳಿದ ಚಂದ್ರಯಾನ-3 ಪ್ರೊಪಲ್ಷನ್‌ ಮಾಡ್ಯೂಲ್‌

    ಯುಸ್‌ ಅಧಿಕಾರಿಯೊಬ್ಬರನ್ನು ಈ ಬಗ್ಗೆ ಕೇಳಿದಾಗ ಇಸ್ರೇಲ್‌ ಸುರಂಗಗಳನ್ನ ನಿಷ್ಕ್ರಿಯಗೊಳಿಸುವುದು ಸರಿಯಾದ ನಿರ್ಧಾರ. ಅದಕ್ಕಾಗಿ ಇಸ್ರೇಲ್‌ ಹಲವಾರು ಮಾರ್ಗಗಳನ್ನ ಅನ್ವೇಷಿಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Lokayukta Raid: ತಿಮ್ಮರಾಜಪ್ಪ ಒಡೆತನದ ಬಂಗಲೆಗಳನ್ನು ನೋಡಿ ಅಧಿಕಾರಿಗಳೇ ದಂಗಾದ್ರು!

    ಇಸ್ರೇಲ್‌ ರಕ್ಷಣಾ ಪಡೆ ಈವರೆಗೆ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ. ವಿವಿಧ ಮಿಲಿಟರಿ ಮತ್ತು ಸಾಂತ್ರಿಕ ಸಾಧನಗಳನ್ನು ಬಳಸಿಕೊಂಡು ಸಾಮರ್ಥ್ಯಗಳನ್ನ ಬಳಸಿಕೊಂಡೇ ಸುರಂಗಗಳನ್ನು ಕೆಡವುವ ಬಗ್ಗೆ ಕಾರ್ಯನಿರ್ವಹಿಸುತ್ತಿದೆ ಎಂದು ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಆರೋಪ ಸತ್ಯಕ್ಕೆ ದೂರವಾದದ್ದು: ಚನ್ನರಾಜ ಹಟ್ಟಿಹೊಳಿ

  • ಸೋವಿಯತ್‌ ಒಕ್ಕೂಟದಂತೆ ಅಮೆರಿಕವೂ ನಾಶವಾಗುತ್ತದೆ – ಹಮಾಸ್‌ ಎಚ್ಚರಿಕೆ

    ಸೋವಿಯತ್‌ ಒಕ್ಕೂಟದಂತೆ ಅಮೆರಿಕವೂ ನಾಶವಾಗುತ್ತದೆ – ಹಮಾಸ್‌ ಎಚ್ಚರಿಕೆ

    ಬೈರುತ್‌: ಒಂದಲ್ಲ ಒಂದುದಿನ ಸೋವಿಯತ್‌ ಒಕ್ಕೂಟದಂತೆ (USSR) ಅಮೆರಿಕ ಕೂಡ ನಾಶವಾಗುತ್ತದೆ ಎಂದು ಹಮಾಸ್‌ ಹಿರಿಯ ಅಧಿಕಾರಿ ಅಲಿ ಬರಾಕಾ (Ali Baraka) ಎಚ್ಚರಿಕೆ ನೀಡಿದ್ದಾರೆ.

    ಲೆಬನಾನ್‌ ಯುಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಲಿ ಬರಾಕಾ, ಅಮೆರಿಕದ (America) ಎಲ್ಲಾ ಶತ್ರುಗಳು ಸಮಾಲೋಚನೆ ನಡೆಸುತ್ತಿದ್ದಾರೆ ಮತ್ತು ಹತ್ತಿರವಾಗುತ್ತಿದ್ದಾರೆ. ಅವರೆಲ್ಲರೂ ಒಟ್ಟಿಗೇ ಒಂದು ದಿನ ಯುದ್ಧ ಮಾಡಬಹುದು. ಆಗ ಅಮೆರಿಕ ಶಕ್ತಿಯುತ ರಾಷ್ಟ್ರವಾಗಿ ಉಳಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪಾಕ್‌ ವಾಯುನೆಲೆ ಮೇಲೆ ಆತ್ಮಹತ್ಯಾ ಬಾಂಬರ್‌ಗಳ ದಾಳಿ – ಮೂವರು ಉಗ್ರರ ಹತ್ಯೆ

    ಇದೇ ವೇಳೆ ಉತ್ತರ ಕೊರಿಯಾದ (North Korea) ಸಾಮರ್ಥ್ಯವನ್ನು ಶ್ಲಾಘಿಸಿರುವ ಬರಾಕಾ, ನಮಗೆ ತಿಳಿದಿರುವಂತೆ ವಿಶ್ವದಲ್ಲಿ ಅಮೆರಿಕವನ್ನು ಹೊಡೆದುರುಳಿಸುವ ಸಾಮರ್ಥ್ಯ ಇರುವುದು ಉತ್ತರ ಕೊರಿಯಾಕ್ಕೆ. ಶೀಘ್ರದಲ್ಲೇ ಇಸ್ರೇಲ್‌ ಹಮಾಸ್‌ ಯುದ್ಧದ (Israel Hamas War) ನಡುವೆ ಉತ್ತರ ಕೊರಿಯಾ ಮಧ್ಯಪ್ರವೇಶಿಸುವ ದಿನ ಬರಬಹುದು. ಇರಾನ್‌ ಅಮೆರಿಕವನ್ನು ಹೊಡೆಯುವ ಸಾಮರ್ಥ್ಯ ಹೊಂದಿಲ್ಲ. ಒಂದು ವೇಳೆ ಇರಾನ್‌ ಯುದ್ಧದ ನಡುವೆ ಮಧ್ಯಪ್ರವೇಶಿಸಿದರೆ, ಅದು ಝಿಯೋನಿಸ್ಟ್ ಘಟಕ ಮತ್ತು ಈ ಪ್ರದೇಶದಲ್ಲಿನ ಅಮೆರಿಕಾದ ನೆಲೆಗಳನ್ನು ಹೊಡೆಯಬಹುದ ಅಷ್ಟೇ ಎಂದು ತಿಳಿಸಿದ್ದಾರೆ.

    ಇಸ್ರೇಲ್‌ಗೆ ಒಂದು ಲಕ್ಷ ಕೋಟಿ ನೆರವು: ಹಮಾಸ್‌ ಬಂಡುಕೋರರ ವಿರುದ್ಧ ಸಮರ ನಡೆಸುತ್ತಿರುವ ಇಸ್ರೇಲ್‌ ಬೆನ್ನಿಗೆ ಬೆಂಬಲವಾಗಿ ನಿಂತಿರುವ ಅಮೆರಿಕ ಸರ್ಕಾರ ಈಗ 14.5 ಬಿಲಿಯನ್‌ ಅಮೆರಿಕನ್‌ ಡಾಲರ್‌ (1.19 ಲಕ್ಷ ಕೋಟಿ ರೂ.) ನೆರವು ಘೋಷಣೆ ಮಾಡಿದೆ. ಅಧ್ಯಕ್ಷ ಜೋ ಬೈಡನ್‌ ಆಡಳಿತ ಇಸ್ರೇಲ್‌ಗೆ ಮಿಲಿಟರಿ ನೆರವು ನೀಡುವ ಸಂಬಂಧ ಹೌಸ್‌ ಆಫ್‌ ರೆಪ್ರೆಸೆಂಟಿಟಿವ್ಸ್ ಸಭೆಯಲ್ಲಿ ಮಂಡಿಸಿದ ವಿಧೇಯಕ ಅಂಗೀಕಾರಗೊಂಡಿದೆ. ಸ್ಪೀಕರ್‌ ಮೈಕ್‌ ಜಾನ್ಸನ್‌ ಮಂಡಿಸಿದ ಪ್ರಸ್ತಾವಕ್ಕೆ ರಿಪಬ್ಲಿಕನ್‌ ಪಕ್ಷದ ಹಿಡಿತದಲ್ಲಿರುವ ಜನಪ್ರತಿನಿಧಿ ಸಭೆ ಅಂಗೀಕಾರದ ಮುದ್ರೆ ಒತ್ತಿದೆ.

    ಜನ ಪ್ರತಿನಿಧಿ ಸಭೆಯಲ್ಲಿ 226-196 ಮತಗಳಿಂದ ವಿಧೇಯಕ ಅಂಗೀಕಾರಗೊಂಡಿದ್ದು, ಡೆಮಾಕ್ರಟಿಕ್‌ ಪಕ್ಷ ಬಹುಮತ ಹೊಂದಿರುವ ಸೆನೆಟ್‌ ಆರ್ಥಿಕ ನೆರವು ನೀಡುವ ಉದ್ದೇಶದ ವಿಧೇಯಕಕ್ಕೆ ಅಂಗೀಕಾರ ನೀಡಬೇಕಿದೆ. ಸೆನೆಟ್‌ ವಿಧೇಯಕಕ್ಕೆ ಅನುಮೋದನೆ ನೀಡದಿದ್ದರೆ ‘ವಿಟೋ’ ಅಧಿಕಾರ ಬಳಸಬೇಕಾಗುತ್ತದೆ ಎಂದು ಅಧ್ಯಕ್ಷ ಬೈಡನ್‌ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: Nepal Earthquake: ಭೀಕರ ಭೂಕಂಪನಕ್ಕೆ ಬೆಚ್ಚಿಬಿದ್ದ ನೇಪಾಳ- 70 ಮಂದಿ ದುರ್ಮರಣ

    ಯುದ್ಧ ಮುಂದುವರಿಸಲು ಇಸ್ರೇಲ್‌ ರಕ್ಷಣಾ ಪಡೆಗೆ ಅಗತ್ಯವಿರುವ ಶಸ್ತ್ರಾಸ್ತ್ರ ಬಲ ನೀಡಲು ನಿರ್ಧರಿಸಲಾಗಿದೆ. ಇಸ್ರೇಲ್‌ನ ಐರನ್‌ ಡೋಮ್‌ (ಶತ್ರು ದೇಶಗಳ ಕ್ಷಿಪಣಿ ಪತ್ತೆ ಹಚ್ಚುವ ರಕ್ಷಣಾ ವ್ಯವಸ್ಥೆ) ಬಲಪಡಿಸಲು 4 ಮಿಲಿಯನ್‌ ಡಾಲರ್‌ ಹಣ ವಿನಿಯೋಗಿಸಲು ಒಪ್ಪಿಗೆ ನೀಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಾಜಾ ಮೇಲೆ ಅಣ್ವಸ್ತ್ರ ಪ್ರಯೋಗವಾಗಬೇಕು ಎಂದ ಇಸ್ರೇಲ್‌ ಸಂಸದೆ – ಅಮೆರಿಕಕ್ಕೆ ಟರ್ಕಿ ಎಚ್ಚರಿಕೆ: 3ನೇ ಮಹಾಯುದ್ಧ ನಡೆಯುತ್ತಾ?

    ಗಾಜಾ ಮೇಲೆ ಅಣ್ವಸ್ತ್ರ ಪ್ರಯೋಗವಾಗಬೇಕು ಎಂದ ಇಸ್ರೇಲ್‌ ಸಂಸದೆ – ಅಮೆರಿಕಕ್ಕೆ ಟರ್ಕಿ ಎಚ್ಚರಿಕೆ: 3ನೇ ಮಹಾಯುದ್ಧ ನಡೆಯುತ್ತಾ?

    ಟೆಲ್‌ ಅವೀವ್‌: ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಿಂದ ಪಶ್ಚಿಮ ಏಷ್ಯಾ ರಣಾಂಗಣವಾಗಿ ಮಾರ್ಪಟ್ಟಿದ್ದು, ದಿನೇ ದಿನೇ ಯುದ್ಧದ ತೀವ್ರತೆ ಅಧಿಕವಾಗುತ್ತಿದೆ. ಈಗಾಗಲೇ ಗಾಜಾಪಟ್ಟಿಗೆ (Gaza Strip) ಅಷ್ಟದಿಗ್ಬಂಧನ ವಿಧಿಸಿರುವ ಇಸ್ರೇಲ್ (Israel) ಗಾಜಾ ನಗರದ ಮೇಲೆ ವೈಮಾನಿಕ ದಾಳಿ ಮೂಲಕ ಮುಗಿಬಿದ್ದಿದೆ.

    ಹಮಾಸ್ (Hamas) ಕೂಡ ನಿರಂತರವಾಗಿ ಇಸ್ರೇಲ್ ಕಡೆ ರಾಕೆಟ್ ದಾಳಿ ನಡೆಸುತ್ತಲೇ ಇದೆ. ಮತ್ತೊಂದು ಕಡೆ ಸಿರಿಯಾ, ಲೆಬನಾನ್ ಕಡೆಯಿಂದ ಉಗ್ರರು ಇಸ್ರೇಲ್ ಮೇಲೆ ಮುಗಿಬೀಳುತ್ತಿದ್ದಾರೆ. ಹೀಗಾಗಿ ಇಸ್ರೇಲ್‌ನಲ್ಲಿ ಸೈರನ್ ಮೊರೆತ ನಿಲ್ಲುತ್ತಲೇ ಇಲ್ಲ. ಇದರಿಂದ ಯುದ್ಧದ ಸ್ವರೂಪ ಮತ್ತು ವ್ಯಾಪ್ತಿ ಇನ್ನಷ್ಟು ವಿಸ್ತರಣೆ ಆಗುವ ಆತಂಕ ಎದುರಾಗಿದೆ.

    https://twitter.com/Israel/status/1712456473303826874

    ಇಸ್ರೇಲ್-ಪ್ಯಾಲೆಸ್ಟೈನ್‌ (Israel Palestine) ಯುದ್ಧದಲ್ಲಿ ಇತರರು ಮೂಗು ತೂರಿಸಬಾರದು ಎಂದು ಅಮೆರಿಕ (USA) ನೀಡುತ್ತಿರುವ ಎಚ್ಚರಿಕೆಯನ್ನು ಅರಬ್ ದೇಶಗಳು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಯಾರು ಮಧ್ಯಪ್ರವೇಶ ಮಾಡಬಾರದು ಎನ್ನುವ ಅಮೆರಿಕ ಸ್ವತಃ ಇಸ್ರೇಲ್‌ಗೆ ಒಂದು ವಿಮಾನ ಭರ್ತಿ ಶಸ್ತಾಸ್ತ್ರ ಕಳಿಸಿದೆ. ಅಷ್ಟೇ ಅಲ್ಲದೇ ಇಂದು ಟೆಲ್ ಅವೀವ್‌ಗೆ ಅಮೆರಿಕ ಮತ್ತು ಬ್ರಿಟನ್ ವಿದೇಶಾಂಗ ಮಂತ್ರಿ ಭೇಟಿ ನೀಡಿದ್ದಾರೆ.

    ಒಫಾಕಿಮ್‌ನಲ್ಲಿ ಕೇಳಿಬಂದ ಸೈರನ್ ಸದ್ದು ಮತ್ತು ರಾಕೆಟ್ ನುಗ್ಗಿ ಬಂದಿದ್ದನ್ನು ನೋಡಿ ಬ್ರಿಟನ್ ಮಂತ್ರಿ ಜೇಮ್ಸ್ ಪ್ರಾಣಭಯದಿಂದ ದಿಕ್ಕೆಟ್ಟು ಓಡಿದ್ದಾರೆ. ಈ ಮೂಲಕ ಇಸ್ರೇಲ್ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ಇಸ್ರೇಲ್‌ನಲ್ಲಿ ಸರ್ವಪಕ್ಷ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.  ಇದನ್ನೂ ಓದಿ: ಹೊಸಪೇಟೆಯಲ್ಲಿ ಹಮಾಸ್ ಉಗ್ರರ ಪರ ಸ್ಟೇಟಸ್ ಹಾಕಿದ್ದ ಯುವಕ ವಶಕ್ಕೆ

    ಇಸ್ರೇಲ್ ಸಂಸದೆ ತಾಲಿ ಗಾಟ್ಲಿಟ್ ಟ್ವೀಟ್ ಮಾಡಿ, ಗಾಜಾ ಮೇಲೆ ಅಣ್ವಸ್ತ್ರ ಪ್ರಯೋಗ ಆಗ್ಬೇಕು ಅಂತಿದ್ದಾರೆ. ಪ್ರಳಯವನ್ನು ಸೃಷ್ಟಿಸುವ ಆಯುಧವನ್ನು ವಿನಿಯೋಗಿಸಬೇಕು. ಈಗ ಡೂಮ್ಸ್ ಡೇಯನ್ನು ಮುದ್ದಾಡುವ ಸಮಯ ಬಂದಿದೆ. ದೇವರೇ ನಮ್ಮ ಶಕ್ತಿಯನ್ನು ಕಾಪಾಡು ಎಂದು ಟ್ವೀಟ್‌ ಮಾಡಿದ್ದಾರೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಈ ಯುದ್ಧ ಮೂರನೇ ಮಹಾ ಯುದ್ಧಕ್ಕೆ ದಾರಿ ಮಾಡಿಕೊಡಬಹುದಾ ಎಂಬ ಚರ್ಚೆಗಳು ಶುರುವಾಗಿವೆ.

     

    ಮೂರನೇ ಮಹಾ ಯುದ್ಧ ನಡೆಯುತ್ತಾ?
    ಇಸ್ರೇಲ್ ಮೇಲೆ ಪ್ಯಾಲೆಸ್ಟೈನ್‌, ಸಿರಿಯಾ, ಲೆಬನಾನ್ ಕಡೆಯಿಂದ ದಾಳಿ ಆರಂಭವಾಗಿದೆ. ಪ್ಯಾಲೆಸ್ಟೈನ್‌ ಬೆಂಬಲಕ್ಕೆ ಇರಾನ್, ಸೌದಿ, ಕತಾರ್‌, ಕುವೈತ್, ದಕ್ಷಿಣ ಆಫ್ರಿಕಾ ಬೆಂಬಲ ನೀಡಿದೆ. ಇಸ್ರೇಲ್ ಬೆಂಬಲಕ್ಕೆ ಅಮೆರಿಕ, ಐರೋಪ್ಯ ಒಕ್ಕೂಟ, ಬ್ರಿಟನ್, ಭಾರತ, ಆಸ್ಟ್ರೇಲಿಯಾ ನಿಂತಿದೆ.

    ಅಮೆರಿಕ ಯುದ್ಧ ವಿಮಾನ, ಯುದ್ಧನೌಕೆ ಕಳಿಸಿದ್ದಕ್ಕೆ ಟರ್ಕಿ ಗರಂ ಆಗಿದ್ದು ಮಾರಣಕಾಂಡಕ್ಕೆ ದಾರಿ ಆಗಲಿದೆ ಎಂದು ಎಚ್ಚರಿಕೆ ನೀಡಿದೆ. ಅಮೆರಿಕದ ಸ್ಥಾವರಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ ಇರಾಕ್‌ನ ಉಗ್ರ ಸಂಘಟನೆ ಕತೈಬ್ ಹೆಜ್ಬುಲ್ಲಾ ಮಿಲಿಷಿಯಾ. ಇಸ್ರೇಲ್-ಪ್ಯಾಲೆಸ್ಟೈನ್‌ ಯುದ್ಧ ತಡೆಯುವ ಸಂಬಂಧ ಇರಾನ್-ಸೌದಿ ನಾಯಕರು ಮಾತುಕತೆ ನಡೆಸಿದ್ದಾರೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 1 ವರ್ಷದ ಬಳಿಕ ಕಚ್ಚಾ ತೈಲದ ದರ ಭಾರೀ ಏರಿಕೆ

    1 ವರ್ಷದ ಬಳಿಕ ಕಚ್ಚಾ ತೈಲದ ದರ ಭಾರೀ ಏರಿಕೆ

    ಲಂಡನ್‌/ ನವದೆಹಲಿ: ಕಚ್ಚಾ ತೈಲದ (Crude Oil) ಉತ್ಪಾದನೆ ಹಾಗೂ ರಫ್ತು ಕಡಿತವನ್ನು ಈ ವರ್ಷದ ಅಂತ್ಯದವರೆಗೆ ಮುಂದುವರಿಸಲು ರಷ್ಯಾ (Russia) ಮತ್ತು ಸೌದಿ ಅರೇಬಿಯಾ (Saudi Arabia) ತೀರ್ಮಾನಿಸಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಏರಿಕೆಯಾಗಿದೆ.

    ಭಾರತಕ್ಕೆ (India) ಪೂರೈಕೆ ಆಗುತ್ತಿರುವ ಬ್ರೆಂಟ್‌ ಕಚ್ಚಾ ತೈಲದ ಬೆಲೆ 1.05% ಏರಿಕೆಯಾಗಿದ್ದು ಒಂದು ಬ್ಯಾರೆಲ್‌ ಕಚ್ಚಾ ತೈಲದ ಬೆಲೆ ಈಗ 97.56 ಡಾಲರ್‌ (ಅಂದಾಜು 8,110 ರೂ.) ತಲುಪಿದೆ.

    ಒಂದು ಬ್ಯಾರೆಲ್‌ ಅಮೆರಿಕದ ವೆಸ್ಟ್‌ ಟೆಕ್ಸಸ್‌ ಇಂಟರ್‌ಮಿಡಿಯೇಟ್‌ ತೈಲದ ಬೆಲೆ 95.03 ಡಾಲರ್‌ಗೆ (ಅಂದಾಜು 7,900 ರೂ.) ಏರಿಕೆಯಾಗಿದೆ. ಈ ಹಿಂದೆ ಆಗಸ್ಟ್‌ 2022ರಲ್ಲಿ 94.61 ಡಾಲರ್‌ಗೆ ತಲುಪಿತ್ತು. ಇದನ್ನೂ ಓದಿ: Karnataka Bandh:ಶಾಲಾ, ಕಾಲೇಜುಗಳಿಗೆ ರಜೆ ನೀಡೋ ಅಧಿಕಾರ ಡಿಸಿಗಳಿಗೆ ಬಿಟ್ಟ ಶಿಕ್ಷಣ ಇಲಾಖೆ

    OIL 2

    ಎಷ್ಟು ಕಡಿತ?
    ಒಪೆಕ್‌+ ಒಕ್ಕೂಟದಲ್ಲಿ ಅತಿ ಹೆಚ್ಚು ತೈಲ ಉತ್ಪಾದನೆ ಮಾಡುವ ಸೌದಿ ಅರೇಬಿಯಾ ಈ ವರ್ಷದ ಅಂತ್ಯದ ವರೆಗೆ 1 ದಶಲಕ್ಷ ಬಿಪಿಡಿ (ಬ್ಯಾರೆಲ್‌ ಪರ್‌ ಡೇ) ತೈಲವನ್ನು ಕಡಿತ ಮಾಡುವುದಾಗಿ ಹೇಳಿದೆ. ಈ ನಿರ್ಧಾರದಿಂದ ಸೌದಿ ಈಗ ಪ್ರತಿ ದಿನ 9 ದಶಲಕ್ಷ ಬಿಪಿಡಿ ತೈಲವನ್ನು ಉತ್ಪಾದನೆ ಮಾಡುತ್ತಿದೆ. ರಷ್ಯಾವೂ ಈ ವರ್ಷದ ಅಂತ್ಯದವರೆಗೆ 3 ಲಕ್ಷ ಬಿಪಿಡಿ ತೈಲವನ್ನು ಕಡಿತ ಮಾಡುವುದಾಗಿ ಘೋಷಿಸಿದೆ.

    ಭಾರತಕ್ಕೆ ಪೂರೈಕೆಯಾಗುವ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಆಗಸ್ಟ್‌ನಲ್ಲಿ ಸರಾಸರಿ 86.43 ಡಾಲರ್ ಇದ್ದರೆ ಈಗ ಇದು 97 ಡಾಲರ್‌ ಗಡಿಯನ್ನು ದಾಟಿದೆ. ಮೇ ಮತ್ತು ಜೂನ್‌ನಲ್ಲಿ ಸರಾಸರಿ ಬೆಲೆಯು 73ರಿಂದ 75 ಡಾಲರ್ ನಡುವೆ ಇತ್ತು.

     

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • HAL ಜೊತೆಗೂಡಿ ಫೈಟರ್‌ ಜೆಟ್‌ ಎಂಜಿನ್‌ ತಯಾರಿಕೆ & ನಾಗರಿಕ ಪರಮಾಣು ತಂತ್ರಜ್ಞಾನದ ಬಗ್ಗೆ ಮೋದಿ-ಬೈಡನ್ ಚರ್ಚೆ

    HAL ಜೊತೆಗೂಡಿ ಫೈಟರ್‌ ಜೆಟ್‌ ಎಂಜಿನ್‌ ತಯಾರಿಕೆ & ನಾಗರಿಕ ಪರಮಾಣು ತಂತ್ರಜ್ಞಾನದ ಬಗ್ಗೆ ಮೋದಿ-ಬೈಡನ್ ಚರ್ಚೆ

    ನವದೆಹಲಿ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ನಡುವಿನ ದ್ವಿಪಕ್ಷೀಯ ಮಾತುಕತೆಗಳಲ್ಲಿ ಜಿಇ ಜೆಟ್ ಎಂಜಿನ್‌ಗಳು (Fighter Jet Engines) ಮತ್ತು ನಾಗರಿಕ ಪರಮಾಣು ತಂತ್ರಜ್ಞಾನದ ಹಂಚಿಕೆಯಲ್ಲಿ ಅರ್ಥಪೂರ್ಣ ಪ್ರಗತಿಯನ್ನು ಶ್ವೇತಭವನ ನಿರೀಕ್ಷಿಸುತ್ತದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ತಿಳಿಸಿದ್ದಾರೆ.

    ಈ ವರ್ಷದ ಆರಂಭದಲ್ಲಿ, ಅಮೆರಿಕ ಜನರಲ್ ಎಲೆಕ್ಟ್ರಿಕ್ಸ್‌ನ ಏರೋಸ್ಪೇಸ್ ಆರ್ಮ್ (GE Aerospace) ಘಟಕವು ಭಾರತದ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್‌ (HAL) ಜೊತೆಗೂಡಿ ಎಂಜಿನ್‌ ತಯಾರಿಸುವ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಘೋಷಿಸಿತ್ತು. ಭಾರತೀಯ ವಾಯುಪಡೆಗೆ ಫೈಟರ್ ಜೆಟ್‌ಗಳಿಗೆ ಶಕ್ತಿ ನೀಡಲು ಭಾರತದಲ್ಲಿ ಜಂಟಿಯಾಗಿ ಎಂಜಿನ್‌ಗಳನ್ನು ತಯಾರಿಸಲು ತೀರ್ಮಾನಿಸಿತ್ತು. ಇದನ್ನೂ ಓದಿ: ಫೈಟರ್ ಜೆಟ್ ಎಂಜಿನ್ ತಯಾರಿಕೆ – HAL ಜೊತೆಗೆ USನ GE ಏರೋಸ್ಪೇಸ್ ಒಪ್ಪಂದ

    ಭಾರತ ಮತ್ತು ಯುಎಸ್ ನಡುವಿನ ರಕ್ಷಣಾ ಸಹಕಾರ ಒಪ್ಪಂದ ಒಂದು ದೊಡ್ಡ ಮೈಲುಗಲ್ಲು. ಜೊತೆಗೆ ಉಭಯ ದೇಶಗಳ ರಕ್ಷಣಾ ಸಹಕಾರ ಬಲಪಡಿಸಲು ಇದು ಪ್ರಮುಖ ಹೆಜ್ಜೆಯಾಗಿರಲಿದೆ. ಜಿಇ ಏರೋಸ್ಪೇಸ್‌ನ F414 ಎಂಜಿನ್‌ಗಳನ್ನ ಭಾರತದಲ್ಲಿ ಜಂಟಿಯಾಗಿ ಉತ್ಪಾದಿಸುವ ಅಂಶ ಒಪ್ಪಂದದಲ್ಲಿದೆ. ಇದಕ್ಕಾಗಿ ಅಗತ್ಯ ರಫ್ತು ಮಾನ್ಯತೆಯನ್ನ ಪಡೆಯಲು ಯುಎಸ್ ಸರ್ಕಾರದೊಂದಿಗೆ ಜಿಇ ಏರೋಸ್ಪೇಸ್ ಕೆಲಸ ಮಾಡಲಿದೆ. ಈ ಪ್ರಯತ್ನವು ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ ಎಂಕೆ2 ಕಾರ್ಯಕ್ರಮದ ಭಾಗವಾಗಿದೆ ಎಂದು ಜಿಇ ಏರೋಸ್ಪೇಸ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿತ್ತು. ಇದನ್ನೂ ಓದಿ: G-20 ಶೃಂಗಸಭೆ ಹಿನ್ನೆಲೆ ಸೆ.14ರ ವರೆಗೆ ಚೀನಾ-ಪಾಕ್ ಗಡಿಯಲ್ಲಿ ಡ್ರಿಲ್ಲಿಂಗ್ ಕಾರ್ಯಾಚರಣೆ ಸ್ಥಗಿತ

    ಶುಕ್ರವಾರ (ಇಂದು) ಸಂಜೆ ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಭಾರತಕ್ಕೆ ಆಗಮಿಸಲಿದ್ದು G20 ಶೃಂಗಸಭೆಗೂ ಮುನ್ನ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬಳಿಕ ಎರಡು ದಿನದ ಸಭೆಯಲ್ಲಿ ಭಾಗಿಯಾಗಲಿರುವ ಅಮೆರಿಕಾ ಅಧ್ಯಕ್ಷರು ಬಳಿಕ ವಿಯೆಟ್ನಾಂಗೆ ತೆರಳಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಿಡಿಪಿ ಬೆಳವಣಿಗೆಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದ ಭಾರತ – ಯಾವ ದೇಶದ್ದು ಎಷ್ಟು?

    ಜಿಡಿಪಿ ಬೆಳವಣಿಗೆಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದ ಭಾರತ – ಯಾವ ದೇಶದ್ದು ಎಷ್ಟು?

    ನವದೆಹಲಿ: ಏಪ್ರಿಲ್-ಜೂನ್ ಮೊದಲ ತ್ರೈಮಾಸಿಕದಲ್ಲಿ ಭಾರತ (India) 7.8% ರಷ್ಟು ಬೆಳವಣಿಗೆ ದಾಖಲಿಸುವ ಮೂಲಕ ಈ ಬಾರಿಯೂ ಚೀನಾವನ್ನು (China) ಹಿಂದಿಕ್ಕಿದೆ.

    ಕೃಷಿ, ರಿಯಲ್‌ ಎಸ್ಟೇಟ್‌ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಉತ್ತಮ ಬೆಳವಣಿಗೆ ಸಾಧಿಸಿದ ಪರಿಣಾಮ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯಲ್ಲಿ (World Fastest Economic Growth) ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಇದನ್ನೂ ಓದಿ: ಗೃಹಬಳಕೆಯ ಬೆನ್ನಲ್ಲೇ ವಾಣಿಜ್ಯ ಬಳಕೆಯ LPG ಬೆಲೆ 158 ರೂ. ಇಳಿಕೆ

    2022-23ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ13.1% ಜಿಡಿಪಿ (GDP) ದಾಖಲಾಗಿತ್ತು. ಇದಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. 2023ರ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ 6.1% ರಷ್ಟು ಜಿಡಿಪಿ ದಾಖಲಾಗಿತ್ತು. ಹಣಕಾಸು, ರಿಯಲ್ ಎಸ್ಟೇಟ್ ವಲಯ 12.2% ಬೆಳವಣಿಗೆ ಸಾಧಿಸಿದೆ. ಕೃಷಿ 3.5%, ಉತ್ಪಾದನಾ ವಲಯ 4.7%, ನಿರ್ಮಾಣ 7.9%, ವ್ಯಾಪಾರ ಕ್ಷೇತ್ರ 9.2% ಬೆಳವಣಿಗೆಯಾಗಿದೆ.  ಇದನ್ನೂ ಓದಿ: ಜಪಾನ್‌ ಹಿಂದಿಕ್ಕಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತಾ ಭಾರತ?

    ಯಾವ ದೇಶದ್ದು ಎಷ್ಟು?
    ಏಪ್ರಿಲ್‌-ಜೂನ್‌ ಅವಧಿಯಲ್ಲಿ ಭಾರತ 7.8%, ಚೀನಾ 6.3%, ಇಂಡೋನೇಷ್ಯಾ 5.17%, ರಷ್ಯಾ 4.9%, ಅಮೆರಿಕ 2.1%, ಜಪಾನ್‌ 2%, ದಕ್ಷಿಣ ಕೊರಿಯಾ 0.9%, ಯುಕೆ 0.4%, ಜರ್ಮನಿ -0.2%, ನೆದರ್‌ಲ್ಯಾಂಡ್‌ -0.3% ಜಿಡಿಪಿ ದಾಖಲಿಸಿದೆ.

    ಜಿಡಿಪಿ ಎಂದರೇನು?
    ಜಿಡಿಪಿ ಅಂದರೆ ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಷನ್ ಅಥವಾ ಒಟ್ಟು ರಾಷ್ಟ್ರೀಯ ಉತ್ಪನ್ನ ಅಂತ ಅರ್ಥ. ಅಂದರೆ ಒಂದು ದೇಶದ ಅರ್ಥವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪತ್ತಿಯಾಗುವ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ವಾಲ್ಯುಯೇಶನ್. ಅಂದ್ರೆ ಕೃಷಿ ಉತ್ಪನ್ನ, ಕೈಗಾರಿಕಾ ಉತ್ಪನ್ನ, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿನ ವಹಿವಾಟು, ಜನರ ಸಂಬಳ, ಆಮದು ರಫ್ತು ಎಲ್ಲವೂ ಸೇರಿ ಲೆಕ್ಕ ಹಾಕಿದಾಗ ಜಿಡಿಪಿ ಎಷ್ಟು ಅಂತ ಲೆಕ್ಕ ಹಾಕಲಾಗುತ್ತದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]