ವಾಷಿಂಗ್ಟನ್: ಇತ್ತೀಚೆಗೆ ಸೂರ್ಯಗ್ರಹಣದ ಬಗ್ಗೆ ಆತಂಕಗೊಂಡಿದ್ದ ಅಮೆರಿಕದ ಜೊತಿಷ್ಯ ಪ್ರಭಾವಿ ಮಹಿಳೆಯೊಬ್ಬಳು (Astrology Influencer) ತನ್ನ ಸಂಗಾತಿ, ಮಕ್ಕಳನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತನ್ನ ಸಂಗಾತಿಯನ್ನ ಇರಿದು ಕೊಂದಿರುವ ಮಹಿಳೆ ಬಳಿಕ ಚಲಿಸುತ್ತಿದ್ದ ಕಾರಿನಿಂದ ಹೊರಕ್ಕೆ ತಳ್ಳಿ ಮಕ್ಕಳನ್ನ ಕೊಂದಿದ್ದಾಳೆ. ನಂತರ ದೊಡ್ಡದೊಂದು ಮರಕ್ಕೆ ಕಾರನ್ನು ಗುದ್ದಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಘಟನೆಯು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ (Los Angeles) ನಡೆದಿದ್ದು, ಮಹಿಳೆಯನ್ನ ಡೇನಿಯಲ್ ಜಾನ್ಸನ್ ಎಂದು ಗುರುತಿಸಲಾಗಿದೆ.
ತನ್ನ ವೆಬ್‌ಸೈಟ್ಸ್‌ನಲ್ಲಿ ಅಂದು ರಾಶಿ-ಭವಿಷ್ಯ (Astrology) ಪ್ರಕಟಿಸಿ, ವಾಚನಗೋಷ್ಠಿಯನ್ನೂ ನೀಡಿದ್ದ ಡೇನಿಯಲ್ ಜಾನ್ಸನ್, ಈ ಬಾರಿಯ ಸಂಪೂರ್ಣ ಸೂರ್ಯಗ್ರಹಣವು ಆಧ್ಯಾತ್ಮಿಕ ಯುದ್ಧದ ಸಾರಾಂಶವಾಗಿದೆ ಎಂದು ಅನುಯಾಯಿಗಳಿಗೆ ಹೇಳಿದ್ದಳು. ಅಲ್ಲದೇ ನಿಮ್ಮ ರಕ್ಷಣೆಗೆ ಅಗತ್ಯ ಕ್ರಮ ವಹಿಸಿ, ನಿಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಿ. ಪ್ರಪಂಚವು ಇದೀಗ ಬಹಳ ಸ್ಪಷ್ಟವಾಗಿ ಬದಲಾಗುತ್ತಿದೆ. ನೀವು ಯಾವುದಾದರೂ ಒಂದು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಿ, ನಿಮ್ಮ ಜೀವನದಲ್ಲಿ ಸರಿಯಾದ ಆಯ್ಕೆ ಮಾಡಿಕೊಳ್ಳುವ ಕಾಲ ಈಗ ಬಂದಿದೆ ಎಂದು ಸಹ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಳು.
ಗ್ರಹಣ ಸಂಭವಿಸುವ ದಿನ ಮುಂಜಾನೆ ತನ್ನ ಇಬ್ಬರು ಮಕ್ಕಳು ಹಾಗೂ ಪತಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಮಹಿಳೆ ತನ್ನ ಸಂಗಾತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ. ಬಳಿಕ ಮಕ್ಕಳನ್ನ ಕಾರಿನಿಂದ ಹೊರಕ್ಕೆ ತಳ್ಳಿ ಹತ್ಯೆಗೈದಿದ್ದಾಳೆ. ಬಳಿಕ ಗಂಟೆಗೆ 160 ಕಿಮೀ ವೇಗದಲ್ಲಿ ಕಾರು ಓಡಿಸಿ ದೊಡ್ಡ ಮರಕ್ಕೆ ಡಿಕ್ಕಿ ಹೊಡೆದು ತಾನೂ ಸಾವನ್ನಪ್ಪಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಆಕೆಯ ಒಂದು ಮಗುವಿಗೆ 8 ತಿಂಗಳು ವಯಸ್ಸಾಗಿದ್ದರೆ, ಮತ್ತೊಂದು ಮಗುವಿಗೆ 9 ವರ್ಷ ವಯಸ್ಸು, ಆಕೆಯ ಪತಿ ಅಮೆರಿಕದ ವಾಯುಪಡೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಎಲ್ಲೆಲ್ಲಿ ಗ್ರಹಣ ಗೋಚರ?
ವರ್ಷದ ಮೊದಲ ಸೂರ್ಯಗ್ರಹಣವು ಸೋಮವಾರ (ಏ.8) ಗೋಚರವಾಗಿತ್ತು. ಮೆಕ್ಸಿಕೊ, ಕೆನಡಾ ಹಾಗೂ ಅಮೆರಿಕದಂತಹ ದೇಶಗಳಲ್ಲಿ ಸೂರ್ಯಗ್ರಹಣ (Solar Eclipse) ಗೋಚರವಾಗಿದೆ. ಒಕ್ಲಹೋಮ, ಅರ್ಕಾನ್ಸಾಸ್, ಮಿಸೌರಿ, ಇಲಿನಾಯ್ಸ್, ಕೆಂಟುಕಿ, ಇಂಡಿಯಾನಾ, ಓಹಿಯೋ, ಪೆನ್ಸಿಲ್ವೇನಿಯಾ, ನ್ಯೂಯಾರ್ಕ್, ವಮೊರ್ಂಟ್, ನ್ಯೂ ಹ್ಯಾಂಪ್‍ಶೈರ್ ಮತ್ತು ಮೈನೆ ಮೊದಲಾದ ರಾಜ್ಯಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗಿತ್ತು. ಅಮೆರಿಕದ ಲಾಸ್ ಏಂಜಲೀಸ್‌ನಲ್ಲೂ ಭಾಗಶಃ ಗ್ರಹಣ ಗೋಚರವಾಗಿತ್ತು. ಇನ್ನೂ 2044ರ ವರೆಗೆ ಅಮೆರಿಕದಲ್ಲಿ ಸೂರ್ಯಗ್ರಹಣ ಗೋಚರ ಆಗುವುದಿಲ್ಲ ಎಂದು ನಾಸಾದ ವಿಜ್ಞಾನಿಗಳು ತಿಳಿಸಿದ್ದಾರೆ.
ನವದೆಹಲಿ: ವರ್ಷದ ಮೊದಲ ಸೂರ್ಯಗ್ರಹಣವು ಸೋಮವಾರ (ಏ.8) ಗೋಚರವಾಗಿದೆ. ಮೆಕ್ಸಿಕೊ, ಕೆನಡಾ ಹಾಗೂ ಅಮೆರಿಕದಂತಹ ದೇಶಗಳಲ್ಲಿ ಸೂರ್ಯಗ್ರಹಣ (Solar Eclipse) ಗೋಚರವಾಗಿದೆ. ಅಲ್ಲದೇ ನ್ಯೂಯಾರ್ಕ್‌ನಲ್ಲಿ (New York) ಶತಮಾನಗಳ ಬಳಿಕ ಮೊದಲಬಾರಿಗೆ ಸಂಪೂರ್ಣವಾಗಿ ಗೋಚರವಾಗಿರುವ ಸೂರ್ಯಗ್ರಹಣವಿದು ಎಂದು ಹೇಳಲಾಗಿದೆ.
The total solar #eclipse is now sweeping across Indianapolis.
This is the first time in more than 800 years that the city is experiencing this celestial event! pic.twitter.com/jZuKx4nUAb
ಈ ಕುರಿತ ವಿಶೇಷ ವೀಡಿಯೋಗಳನ್ನು ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಸಂಪೂರ್ಣತೆಯ ಹಾದಿಯಾಗಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಚುವ ದೃಶ್ಯಗಳು ಈ ಚಿತ್ರಪಟ ಹಾಗೂ ವೀಡಿಯೋದಲ್ಲಿ ಕಂಡುಬಂದಿದೆ. ಆದ್ರೆ ಇದು ಭಾರತದಲ್ಲಿ ಗೋಚರವಾಗಿಲ್ಲ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು – ಈ ವರ್ಷದಲ್ಲಿ 10ನೇ ಪ್ರಕರಣ
ನಾಸಾ ವೀಕ್ಷಕರಿಗಾಗಿ ತನ್ನ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಅಧಿಕೃತ ನೇರ ಪ್ರಸಾರ ಸಹ ಹಮ್ಮಿಕೊಂಡಿತ್ತು. ಈ ಕುರಿತ ವೀಡಿಯೋಗಳನ್ನು ಈಗ ಹಂಚಿಕೊಂಡಿದೆ. ಕಳೆದ ಒಂದು ಶತಮಾನದಲ್ಲಿ ಇದೇ ಮೊದಲಬಾರಿಗೆ ನ್ಯೂಯಾರ್ಕ್ ರಾಜ್ಯದ ಪಶ್ಚಿಮ ಮತ್ತು ಉತ್ತರ ದೇಶದ ಜನರು ಸಂಪೂರ್ಣ ಗ್ರಹಣ ಕಣ್ತುಂಬಿಕೊಂಡಿದ್ದಾರೆ ಎಂದು ನಾಸಾ ಮೂಲಗಳು ತಿಳಿಸಿವೆ.
ಅಲ್ಲದೇ ಮೆಕ್ಸಿಕನ್ ಬೀಚ್‌ಸೈಡ್ ರೆಸಾರ್ಟ್ ಪಟ್ಟಣವಾದ ಮಜಟ್ಲಾನ್ ಉತ್ತರ ಅಮೆರಿಕಾದಲ್ಲಿಯೂ ಜನ ಗ್ರಹಣ ಕೌತುಕವನ್ನ ವೀಕ್ಷಿಸಿದ್ದಾರೆ. ದಕ್ಷಿಣ ಟೆಕ್ಸಾಸ್, ಮೆಕ್ಸಿಕೊದ ದಕ್ಷಿಣ ಗಡಿಯಲ್ಲಿರುವ ಈಗಲ್ ಪಾಸ್ ಭಾಗಶಃ ಗ್ರಹಣವು ಗೋಚರವಾಗಿದೆ. 2024ರ ಸಂಪೂರ್ಣ ಗ್ರಹಣವು ಐತಿಹಾಸಿಕ ಮಹತ್ವವನ್ನು ಗಳಿಸಿಕೊಂಡಿದೆ. ಏಕೆಂದರೆ ಮುಂದೆ 2044ರ ವರೆಗೆ ಮತ್ತೆ ಯುಎಸ್ ದೇಶಾದ್ಯಂತ ಗ್ರಹಣ ಗೋಚರವಾಗುವುದಿಲ್ಲ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Taiwan Earthquake – 7.4 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ
ಅಲ್ಲದೆ ಒಕ್ಲಹೋಮ, ಅರ್ಕಾನ್ಸಾಸ್, ಮಿಸೌರಿ, ಇಲಿನಾಯ್ಸ್, ಕೆಂಟುಕಿ, ಇಂಡಿಯಾನಾ, ಓಹಿಯೋ, ಪೆನ್ಸಿಲ್ವೇನಿಯಾ, ನ್ಯೂಯಾರ್ಕ್, ವಮೊರ್ಂಟ್, ನ್ಯೂ ಹ್ಯಾಂಪ್‍ಶೈರ್ ಮತ್ತು ಮೈನೆ ಮೊದಲಾದ ರಾಜ್ಯಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗಿದೆ.
ವಾಷಿಂಗ್ಟನ್: ಹದಿಹರೆಯದ ಹುಡುಗರನ್ನೇ ಟಾರ್ಗೆಟ್ ಮಾಡಿ, ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದಕ್ಕಾಗಿ 14 ವರ್ಷದ ಹುಡುಗಿಯಂತೆ ನಟಿಸಿದ್ದ 23 ವರ್ಷದ ಮಹಿಳೆಯನ್ನು (US Woman) ಬಂಧಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಬಂಧಿತ ಮಹಿಳೆಯನ್ನು ಅಲಿಸ್ಸಾ ಆನ್ ಜಿಂಗರ್ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಈಕೆಯ ಮಾಯಾಜಾಲಕ್ಕೆ ಬಲಿಯಾದ ಹುಡುಗರಲ್ಲಿ ನಾಲ್ವರು ಮುಂದೆ ಬಂದು ದೂರು ನೀಡಿದ್ದಾರೆ. ಬಳಿಕ ನ್ಯೂಯಾರ್ಕ್‌ನ ಟ್ಯಾಂಪಾ ಪೊಲೀಸರು (Tampa Police) ಮಹಿಳೆಯನ್ನ ಬಂಧಿಸಿದ್ದಾರೆ. ಈಕೆಯ ಮಾಯಾಜಾಲಕ್ಕೆ ಇನ್ನೂ ಅನೇಕ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.
NEW: 23-year-old Alyssa Ann Zinger hit with s*x charges for posing as a teenager to have s*x with 12-15 year old boys.
Zinger was arrested last November for allegedly engaging in at least 30 s*xual acts with a middle school student.
ಮಾಯಗಾತಿ ಸಿಕ್ಕಿಬಿದ್ದದ್ದು ಹೇಗೆ?
ಕಿರಿಯ ವಯಸ್ಸಿನ ಹುಡುಗರೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಬಯಸುತ್ತಿದ್ದ ಈಕೆ, ಕಳೆದ ವರ್ಷ ನವೆಂಬರ್‌ನಲ್ಲಿ ಕನಿಷ್ಠ 30 ಬಾರಿ ಒಬ್ಬ ಹುಡುಗನೊಂದಿಗೆ (ವಿದ್ಯಾರ್ಥಿಯೂ ಹೌದು) ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಇನ್ನೂ ಹೆಚ್ಚಿನ ಹುಡಗರಿಗೆ ಕಾಮ ಪ್ರಚೋದನೆ ಮಾಡುವಂತಹ ವೀಡಿಯೋ ಕಳುಹಿಸಿದ್ದಾಳೆ. ಈ ಸಾಕ್ಷ್ಯಾಧಾರಗಳು ಬೆಳಕಿಗೆ ಬಂದ ನಂತರ ಆಕೆಯನ್ನ ಬಂಧಿಸಲಾಗಿದೆ ಎಂದು ಟ್ಯಾಂಪಾ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು – ಈ ವರ್ಷದಲ್ಲಿ 10ನೇ ಪ್ರಕರಣ
ಜಿಂಗರ್‌ನನ್ನ ಬಂಧಿಸಿದ ಬಳಿಕ ಟ್ಯಾಂಪಾ ಪೊಲೀಸ್ ಅಧಿಕಾರಿಗಳು, ವಂಚನೆಗೊಳಗಾದವರಿಗೆ ನ್ಯಾಯ ಕೊಡಿಸುವುದಾಗಿ ಕರೆ ನೀಡಿದ್ದರು. ಈಕೆಯ ಮೋಸದ ಜಾಲಕ್ಕೆ ಯಾರೆಲ್ಲಾ ಬಲಿ ಆಗಿದ್ದೀರಿ, ಅವರು ಮುಂದೆ ಬಂದು ತಮ್ಮ ದೂರು ಸಲ್ಲಿಸಬಹುದು. ನಮ್ಮ ಪೊಲೀಸ್ ಇಲಾಖೆ ದೂರು ನೀಡುವವರಿಗೆ ರಕ್ಷಣೆ ಒದಗಿಸುತ್ತದೆ ಎಂದು ಹೇಳಿದ್ದರು. ಪೊಲೀಸ್ ಪ್ರಕಟಣೆ ಬಳಿಕ ನಾಲ್ವರು ಹುಡುಗರು ದೂರು ನೀಡಲು ಮುಂದೆ ಬಂದರು, ಬಳಿಕೆ ಆಕೆಯ ಮೇಲಿನ ಅಪರಾಧವನ್ನು ದೃಢೀಕರಿಸಲಾಯಿತು. ಇದನ್ನೂ ಓದಿ: ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನು ಕೊಲ್ಲುತ್ತೇವೆಂದ ರಕ್ಷಣಾ ಸಚಿವರ ಹೇಳಿಕೆಗೆ ಪಾಕ್ ಖಂಡನೆ
ಮಾಯಗಾತಿಯ ಪ್ಲ್ಯಾನ್ ಹೇಗಿತ್ತು?
ಕಿರಿಯ ಹುಡುಗರೊಂದಿಗೆ ಸೆಕ್ಸ್ ಮಾಡಲು ಬಯಸಿದ್ದ ಮಹಿಳೆ 14 ವರ್ಷದ ಹುಡುಗಿಯಂತೆ ನಟಿಸುತ್ತಿದ್ದಳು. ಮೊದಲ ಹುಡುಗನೊಂದಿಗೆ ಅನೇಕ ಬಾರಿ ಸೆಕ್ಸ್ ನಡೆಸಿದ್ದಳು. ಇನ್ನೂ ಹೆಚ್ಚಿನ ಹುಡುಗರನ್ನು ತನ್ನ ಬಲೆಗೆ ಬೀಳಿಸಿಕೊಳ್ಳಲು ಸೋಶಿಯಲ್ ಮೀಡಿಯಾ ಅಪ್‌ವೊಂದರ ಮೂಲಕ ಹುಡುಗರಿಗೆ ಅಶ್ಲೀಲ ವೀಡಿಯೋಗಳನ್ನ ಕಳುಹಿಸಿ ಕಾಮಕ್ಕೆ ಪ್ರಚೋದನೆ ನೀಡುತ್ತಿದ್ದಳು. ಬಳಿಕ ಹುಡುಗರನ್ನು ಪುಸಲಾಯಿಸಿ ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ತಾನೂ ಸಹ ವಿದ್ಯಾರ್ಥಿನಿ ಎಂದು ಹುಡುಗರೊಂದಿಗೆ ನಾಟಕವಾಡಿದ್ದಳು, ನಂತರ ಅವರೊಂದಿಗೆ ಸೆಕ್ಸ್‌ನಲ್ಲಿ ತೊಡಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಈಕೆಯ ಮಾಯಾಜಾಲಕ್ಕೆ ಸಿಲುಕಿದ್ದ ಬಲಿಪಶುಗಳ ವಯಸ್ಸು 12 ರಿಂದ 15 ವರ್ಷ ಇದೆ. ಓರ್ವನಿಗೆ ಮಾತ್ರ 18 ವರ್ಷ ವಯಸ್ಸಾಗಿದೆ. ಸದ್ಯ ಆಕೆ ವಿರುದ್ಧ 11 ಪ್ರಕರಣಗಳ ಅಡಿ ಕೇಸ್ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.
ವಾಷಿಂಗ್ಟನ್: ಕಾರ್ಗೋ ಹಡಗೊಂದು (Cargo Ship) ಡಿಕ್ಕಿ ಹೊಡೆದ ಪರಿಣಾಮ ಸೇತುವೆ ಮುರಿದು ಬಿದ್ದ ಘಟನೆ ಅಮೆರಿಕದ ಬಾಲ್ಟಿಮೋರ್‌ನಲ್ಲಿ (USA Baltimore) ನಡೆದಿದೆ.
ಸೇತುವೆಗೆ ಕಾರ್ಗೋ ಹಡಗು ಬಂದು ಗುದ್ದುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದೆ. ಅಗ್ನಿಶಾಮಕ ದಳ, ಪೊಲೀಸರು ಈಗ ರಕ್ಷಣೆಯಲ್ಲಿ ತೊಡಗಿದ್ದಾರೆ. ನೀರಿಗೆ ಬಿದ್ದ ಕಾರಿನಲ್ಲಿದ್ದ ಹಲವು ಮಂದಿ ನಾಪತ್ತೆಯಾಗಿದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಪಾಕಿಸ್ತಾನದ 2ನೇ ಅತಿ ದೊಡ್ಡ ನೌಕಾ ವಿಮಾನ ನಿಲ್ದಾಣದ ಮೇಲೆ ದಾಳಿ
ಸಿಂಗಾಪುರ ಮೂಲದ ಸರಕು ಸಾಗಾಣೆ ಹಡಗು ಗುದ್ದಿದ್ದು, 20ಕ್ಕೂ ಹೆಚ್ಚು ಕಾರುಗಳು ನೀರಿಗೆ ಬಿದ್ದಿವೆ ಎಂದು ವರದಿಯಾಗಿದೆ. ತಾಂತ್ರಿಕ ವೈಫಲ್ಯದಿಂದ ಘಟನೆ ನಡೆದಿದ್ಯಾ ಅಥವಾ ಉಗ್ರರ ಕೃತ್ಯ ಇರಬಹುದೇ ಈ ಕೋನದಲ್ಲಿ ಈಗ ಅಮೆರಿಕ ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ಪತ್ನಿಯ ಕಿರುಕುಳಕ್ಕೆ ಬೇಸತ್ತು ಗೋಡೆ ಮೇಲೆ ಡೆತ್‍ನೋಟ್ ಬರೆದು ಟೆಕ್ಕಿ ಆತ್ಮಹತ್ಯೆ
ಟಾಪ್ಸ್ಕೋ ನದಿಗೆ ಒಟ್ಟು 2.6 ಕಿ.ಮೀ ಉದ್ದದ ಸೇತುವೆಯನ್ನು ಕಟ್ಟಲಾಗಿದೆ. 1977 ರಲ್ಲಿ ಸೇತುವೆ ಉದ್ಘಾಟನೆಯಾಗಿದ್ದು ವಾರ್ಷಿಕ 1.1 ಕೋಟಿಗೂ ಅಧಿಕ ವಾಹನಗಳು ಸಂಚರಿಸುತ್ತಿವೆ. ಬಾಲ್ಟಿಮೋರ್ ಅಮೆರಿಕ ಪ್ರಮುಖ ಕೈಗಾರಿಕಾ ನಗರವಾಗಿದ್ದು ಈ ಸೇತುವೆಯನ್ನು ಒಳಗೊಂಡ ರಸ್ತೆ ಮಾರ್ಗ ಅಮೆರಿಕ ರಾಜಧಾನಿ ವಾಷಿಂಗ್ಟನ್ ಸಂಪರ್ಕಿಸುತ್ತದೆ.
ವಾಷಿಂಗ್ಟನ್: ಮಾಸ್ಕೋದಲ್ಲಿ ನಡೆದ ಉಗ್ರರ ದಾಳಿಯ (Moscow Attack) ಬಗ್ಗೆ ಅಮೆರಿಕ ಮೊದಲೇ ರಷ್ಯಾಗೆ ಎಚ್ಚರಿಸಿತ್ತು. ಮಾರ್ಚ್ ತಿಂಗಳ ಆರಂಭದಲ್ಲಿಯೇ ರಷ್ಯಾದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿತ್ತು ಎಂದು ಶ್ವೇತಭವನದ (White House) ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಅಡ್ರಿಯೆನ್ ವ್ಯಾಟ್ಸನ್ ತಿಳಿಸಿದ್ದಾರೆ.
We strongly condemn the heinous terrorist attack in Moscow. Our thoughts and prayers are with the families of the victims. India stands in solidarity with the government and the people of the Russian Federation in this hour of grief.
ಮಾಸ್ಕೋದಲ್ಲಿ ಶುಕ್ರವಾರ ತಡರಾತ್ರಿ ನಡೆದ ಉಗ್ರರ ದಾಳಿಯಲ್ಲಿ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 115ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ವೇತಭವನದ ವಕ್ತಾರ, ಯುಎಸ್ ಸರ್ಕಾರಕ್ಕೆ ಮಾಸ್ಕೋದಲ್ಲಿ ನಡೆದ ಯೋಜಿತ ಉಗ್ರರ ದಾಳಿಯ ಬಗ್ಗೆ ಒಂದು ತಿಂಗಳ ಮೊದಲೇ ಗೊತ್ತಿತ್ತು. ಈ ಮಾಹಿತಿಯನ್ನು ರಷ್ಯಾದ ಸರ್ಕಾರದೊಂದಿಗೆ (Russia Government) ಹಂಚಿಕೊಳ್ಳಲಾಗಿತ್ತು. ದೇಶದ ಅನೇಕ ಜನರನ್ನು ಕೊಲ್ಲುವ ಅಥವಾ ಅಪಹರಿಸುವ ಬಗ್ಗೆ ಗುಪ್ತಚರ ಮಾಹಿತಿಯನ್ನು ರವಾನಿಸಿತ್ತು ಎಂದು ವ್ಯಾಟ್ಸನ್ ತಿಳಿಸಿದ್ದಾರೆ. ಅಲ್ಲದೇ ಈ ಕೃತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ಸ್‌ಗಳ (Islamic State) ಕೈವಾಡವಿದೆ ಎಂದು ಹೇಳಿದ್ದಾರೆ.
ಕನ್ಸರ್ಟ್ ಹಾಲ್‌ನಲ್ಲಿ ಏನಾಯಿತು?
4 ಮಂದಿ ಭಯೋತ್ಪಾದಕರ ಗುಂಪು ಮಾಸ್ಕೋದ ಕ್ರೋಕಸ್ ಸಿಟಿ ಕನ್ಸರ್ಟ್ ಹಾಲ್‌ಗೆ ನುಗ್ಗಿತು ಮತ್ತು ಅಲ್ಲಿ ನೆರೆದಿದ್ದ ಸಭಿಕರ ಮೇಲೆ ಗುಂಡಿನ ದಾಳಿ ನಡೆಸಿತು. ಇದರಿಂದ ಜನ ಗಾಬರಿಯಾಗಿ ದಿಕ್ಕಾಪಾಲಾಗಿ ಓಡಲು ಶುರುಮಾಡಿದಾಗ ಕಾಲ್ತುಳಿತ ಕೂಡ ಉಂಟಾಯಿತು, ಇದೇ ಸಂದರ್ಭದಲ್ಲಿ ಉಗ್ರರು ಗ್ರೆನೇಡ್‌ಗಳನ್ನು ಸ್ಫೋಟಿಸಿದರು. ದಾಳಿಕೋರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದರು. ಗ್ರೆನೇಡ್‌ಗಳನ್ನು ಎಸೆದಿದ್ದರಿಂದ ಬೆಂಕಿ ಹೊತ್ತಿಕೊಂಡು ಉರಿಯತೊಡಗಿತು. ಈ ವೇಳೆ ದಾಳಿಕೋರರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ನಡೆದ ಭೀಕರ ದಾಳಿ ಖಂಡಿಸಿದ ಪ್ರಧಾನಿ ಮೋದಿ
ಭಾರತ ತೀವ್ರ ಖಂಡನೆ:
ಮಾಸ್ಕೋದ ಮೇಲಿನ ಈ ದಾಳಿಯನ್ನು ಭಾರತ, ಐರೋಪ್ಯ ರಾಷ್ಟ್ರಗಳ ಒಕ್ಕೂಟ, ಫ್ರಾನ್ಸ್, ಸ್ಪೇನ್ ಮತ್ತು ಇಟಲಿ ಮತ್ತಿತರ ದೇಶಗಳು ದಾಳಿಯನ್ನು ಖಂಡಿಸಿವೆ. ಅಮೆರಿಕ ಈ ದಾಳಿಯನ್ನು ಭಯಾನಕ ಎಂದು ಕರೆದಿದೆ. ಅಲ್ಲದೇ ಉಕ್ರೇನ್ ಮೇಲಿನ ರಷ್ಯಾ ದಾಳಿಗೂ ಇದಕ್ಕೂ ಯಾವುದೇ ಸಂಬಂಧ ಕಂಡುಬರುತ್ತಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ರಷ್ಯಾದಲ್ಲಿ ಉಗ್ರರ ಅಟ್ಟಹಾಸ- 70ಕ್ಕೂ ಹೆಚ್ಚು ಮಂದಿ ದುರ್ಮರಣ
ವಾಷಿಂಗ್ಟನ್: ಕಳೆದ ಒಂದು ತಿಂಗಳಲ್ಲಿ ವಿವಿಧ ಕಾರಣಗಳಿಂದ ಮೂರ್ನಾಲ್ಕು ಮಂದಿ ನೀಲಿ ತಾರೆಯರು ಸಾವನ್ನಪ್ಪಿದ್ದಾರೆ. ಇದೀಗ ಅಮೆರಿಕದ ನೀಲಿ ತಾರೆ ಎಲಿಮಿ ವಿಲ್ಲಿಸ್ (Emily Willis) ಹೃದಯ ಸ್ತಂಭನದಿಂದ (Cardiac Arrest) ಕೋಮಾಗೆ ತಲುಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಎಮಿಲಿ ವಿಲ್ಲಿಸ್ ಕೋಮಾಗೆ (Coma) ತಲುಪಿದ ಸುದ್ದಿ ಹರಿದಾಡುತ್ತಿದ್ದಂತೆ ಪೋರ್ನ್ ಚಿತ್ರರಂಗದಲ್ಲಿ ಭಾರೀ ಚರ್ಚೆಗಳು ಹುಟ್ಟಿಕೊಂಡಿವೆ. ಕಳೆದ ಕೆಲ ದಿನಗಳಲ್ಲಿ ನೀಲಿ ತಾರೆಯರು ವಿವಿಧ ರೀತಿಯ ಅನಾರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದೆ. ಕಳೆದ ಒಂದು ತಿಂಗಳಲ್ಲಿ ಸೋಫಿಯಾ ಲಿಯೋನ್ (Sophia Leone), ಕಾಗ್ನಿ ಲೀ, ಜೆಸ್ಸಿ ಜೆನ್ ಖ್ಯಾತ ನೀಲಿ ತಾರೆಯರು ನಿಧನರಾಗಿದ್ದಾರೆ. ಇದೀಗ ಕೋಮಾ ಸ್ಥಿತಿಗೆ ತಲುಪಿರುವ ಎಮಿಲಿ ವಿಲ್ಲಿಸ್ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇದನ್ನೂ ಓದಿ: 26ನೇ ವಯಸ್ಸಿಗೆ ನೀಲಿ ತಾರೆ ಸೋಫಿಯಾ ಲಿಯೋನ್ ನಿಧನ
ಎಮಿಲಿ ವಿಲ್ಲಿಸ್ ಯಾರು?
25 ವರ್ಷ ವಯಸ್ಸಿನ ನೀಲಿ ತಾರೆ ಎಮಿಲಿ ವಿಲ್ಲಿಸ್ ಸೋಶಿಯಲ್ ಮೀಡಿಯಾದಲ್ಲೂ ಅಷ್ಟೇ ಜನಪ್ರಿಯರಾಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ (Instagram) 20 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನ ಹೊಂದಿದ್ದಾರೆ. ಎಮಿಲಿ ಅರ್ಜೆಂಟೀನಾದಲ್ಲಿ ಜನಿಸಿದರೂ ತನ್ನ ಜೀವನದ ಬಹುಪಾಲು ಸಮಯ ಕಳೆದಿದ್ದು ಮಾತ್ರ ಅಮೆರಿಕದಲ್ಲಿ (USA). ಕೆಲ ವರ್ಷಗಳ ಕಾಲ ಪೋರ್ನ್ ಚಿತ್ರೋದ್ಯಮದಲ್ಲಿ ಕೆಲಸ ಮಾಡಿದ ಎಮಿಲಿ, ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಪೋರ್ನ್ ಚಿತ್ರರಂಗವನ್ನು ತೊರೆದಿದ್ದರು. ಬೇರೆ ಮನರಂಜನಾ ಉದ್ಯಮಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಮುಂದಾಗಿದ್ದರು. ಇದನ್ನೂ ಓದಿ: ದಾನ ಮಾಡಿದ್ರೆ ನನ್ನ ನಗ್ನ ಚಿತ್ರ ಬಹುಮಾನ ಕೊಡ್ತೀನಿ – ಫ್ಯಾನ್ಸ್‌ಗೆ ಬಂಪರ್ ಆಫರ್ ಕೊಟ್ಟ ನೀಲಿ ತಾರೆ
ಲಘು ಹೃದಯ ಸ್ತಂಭನದಿಂದ ಬಳಲುತ್ತಿದ್ದ ಎಮಿಲಿ ಕಾರ್ಲಿಫೋನಿಯಾದ ಥೌಸಂಡ್ ಓಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಕೋಮಾಗೆ ಜಾರಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಖ್ಯಾತ ನೀಲಿತಾರೆ ಕೆನಿ ಲಿನ್ ಕಾರ್ಟರ್ ಆತ್ಮಹತ್ಯೆಗೆ ಶರಣು
ಅತಿಯಾದ ಮಾದಕ ವಸ್ತು ಸೇವನೆ ಕಾರಣವಾ?
ಕುಟುಂಬಸ್ಥರ ಸಂಶಯದ ಮೇರೆಗೆ ತನಿಖೆ ಆರಂಭಿಸಿದ್ದ ಯುಎಸ್ ಪೊಲೀಸರು ಎಮಿಲಿ ವಿಲ್ಲಿಸ್ ಈ ಸ್ಥಿತಿಗೆ ಮಾದಕ ವಸ್ತುವಿನ ಮಿತಿಮೀರಿದ ಸೇವೆನೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಆದ್ರೆ ಈ ಆರೋಪವನ್ನು ಕುಟುಂಬಸ್ಥರು ತಿರಸ್ಕರಿಸಿದ್ದಾರೆ. ಇದನ್ನೂ ಓದಿ: ನೀಲಿ ಚಿತ್ರಗಳ ತಾರೆ ಬಾಯ್‌ಫ್ರೆಂಡ್ ಜೊತೆ ಶವವಾಗಿ ಪತ್ತೆ
ನ್ಯೂಯಾರ್ಕ್: ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆಥಿತ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ (T20 World Cup 2024) ಟೂರ್ನಿ ಆರಂಭಕ್ಕೆ ಇನ್ನೂ ಮೂರು ತಿಂಗಳು ಬಾಕಿ ಇದೆ. ಈಗಾಗಲೇ ಟಿಕೆಟ್ ಖರೀದಿಗೆ ಐಸಿಸಿ ಅವಕಾಶ ನೀಡಿದ್ದು, ಸೋಮವಾರ ಎರಡು ಪಂದ್ಯಗಳಿಗೆ ಟಿಕೆಟ್ (World Cup Ticket) ಮಾರಾಟವಾಗಿದೆ.
ಭಾರತ Vs ಪಾಕಿಸ್ತಾನ (Ind vs Pak) ಹಾಗೂ ಭಾರತ Vs ಕೆನಡಾ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟಿಕೆಟ್ ಸಂಪೂರ್ಣ ಸೋಲ್ಡ್ ಔಟ್‌ಆಗಿದೆ. ಅದರಲ್ಲೂ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಪಂದ್ಯಕ್ಕೆ ದುಬಾರಿ ಬೆಲೆ ನಿಗದಿಯಾಗಿದೆ. ಅತಿಹೆಚ್ಚಿನ ಜನ ಸೇರುವ ಹಿನ್ನೆಲೆಯಲ್ಲಿ ಟಿಕೆಟ್ ದರಕ್ಕೆ ಮೂರ್ನಾಲ್ಕು ಪಟ್ಟು ಹೆಚ್ಚಳವಾಗಿ ಮಾರಾಟವಾಗಿದೆ. ನಿಜಕ್ಕೂ ಟಿಕೆಟ್ ಬೆಲೆ ಕೇಳಿದ್ರೆ ಒಂದು ಕ್ಷಣ ತಲೆತಿರುಗುವಂತೆ ಮಾಡುತ್ತೆ. ಇದನ್ನೂ ಓದಿ: ಚೆನ್ನೈ ತಂಡದ ಆರಂಭಿಕ ಆಟಗಾರ ಐಪಿಎಲ್‌ನಿಂದ ಔಟ್ – ಸಿಎಸ್‌ಕೆಗೆ ಭಾರೀ ಆಘಾತ
ಇದೇ ಮಾರ್ಚ್ 22 ರಿಂದ ಭಾರತದಲ್ಲಿ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್(IPL 2024) ಟೂರ್ನಿ ಆರಂಭವಾಗಲಿದೆ. ಈ ಶ್ರೀಮಂತ ಟೂರ್ನಿ ಮುಗಿದ ಕೆಲವೇ ದಿನಗಳಲ್ಲಿ ಐಸಿಸಿ ವಿಶ್ವಕಪ್ ಹಬ್ಬ ಆರಂಭವಾಗಲಿದೆ. ಜೂನ್ 1ರಿಂದ ಮೆಗಾ ಟೂರ್ನಿಗೆ ಚಾಲನೆ ಸಿಗಲಿದ್ದು, ಜೂನ್ 9ರಂದು ಇಂಡೋ-ಪಾಕ್ ಫೈಟ್ ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ದೇಶಗಳ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಮೈದಾನದಲ್ಲೇ ಪಂದ್ಯ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
ಭಾರತ-ಪಾಕಿಸ್ತಾನ ಪಂದ್ಯ ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳ ಟಿಕೆಟ್ ಬೆಲೆ 6 ಡಾಲರ್ ನಿಂದ ಅಂದರೆ (497 ರೂ.) ಗಳಿಗೆ ಮಾರಾಟವಾಗುತ್ತಿವೆ. ಆದ್ರೆ ವಿಐಪಿ ಮತ್ತು ಪ್ರೀಮಿಯಂ ಟಿಕೆಟ್ಗಳು 33.15 ಲಕ್ಷ ರೂ.ಗಳಷ್ಟಿದೆ. ತೆರಿಗೆ ಸೇರಿಸಿದ್ರೆ 41.44 ಲಕ್ಷ ರೂ.ಗಳಷ್ಟಿದೆ. ಆದ್ರೆ ಭಾರತ-ಪಾಕಿಸ್ತಾನ ಪಂದ್ಯಕ್ಕೆ ತೆರಿಗೆ, ಪ್ಲಾಟ್‌ಫಾರ್ಮ್ ಹಾಗೂ ಇತರೇ ಶುಲ್ಕ ಸೇರಿ 1.86 ಕೋಟಿ ರೂ.ಗಳಷ್ಟಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 20 ಕೋಟಿಯ ಸರದಾರ ಪ್ಯಾಟ್ ಕಮ್ಮಿನ್ಸ್ ಈಗ ಸನ್‌ರೈಸರ್ಸ್ ನಾಯಕ
ಟಿಕೆಟ್ ಬೆಲೆ ಕೇಳಿದವರು ಪಂದ್ಯವನ್ನು ಮನೆಯಲ್ಲೇ ಅಥವಾ ಮೊಬೈಲ್ನಲ್ಲೇ ನೋಡುತ್ತೇವೆ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಇಷ್ಟೊಂದು ಹಣ ಸಿಕ್ಕರೆ, ನಮ್ಮ ಲೈಫ್ ಸೆಟಲ್ ಎಂದು ಹೇಳುತ್ತಿದ್ದಾರೆ. ಆದ್ರೆ ಕೆಲ ಅಭಿಮಾನಿಗಳು ಎಷ್ಟು ಹಣ ಆದ್ರೂ ಪರ್ವಾಗಿಲ್ಲ. ಪಂದ್ಯವನ್ನು ನೋಡಿಯೇ ನೋಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: WTC – ಮತ್ತೆ ನಂ.1 ಸ್ಥಾನಕ್ಕೆ ಜಿಗಿದ ಭಾರತ – ಹಿಟ್‌ಮ್ಯಾನ್ ನಾಯಕತ್ವಕ್ಕೆ ಮೆಚ್ಚುಗೆ
ಜೂನ್ 1 ರಿಂದ ಜೂನ್ 29ರ ವರೆಗೆ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಬಾರಿ 16 ರಿಂದ 20ಕ್ಕೆ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, ಒಟ್ಟು 4 ಗುಂಪುಗಳಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೇ ಸೂಪರ್-12 ಹಂತವನ್ನು ಸೂಪರ್-8ಗೆ ಇಳಿಸಲಾಗಿದೆ. ಸೂಪರ್-8 ಗುಂಪಿನಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಜೂನ್ 1 ರಿಂದ 18ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ. ಜೂನ್ 19 ರಿಂದ 24ರ ವರೆಗೆ ಸೂಪರ್-8 ಪಂದ್ಯಗಳು, ಜೂನ್ 26 ಮತ್ತು ಜೂನ್ 27 ರಂದು ಸೆಮಿಫೈನಲ್ ಪಂದ್ಯಗಳು ನಡಯೆಲಿದ್ದು, ಜೂನ್ 29ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಮುಂಬೈ: ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ (T20 World Cup 2024) ಟೂರ್ನಿಗೆ ತಂಡಗಳನ್ನು ಪ್ರಕಟಿಸಲು ಅಂತಿಮ ದಿನಾಂಕ ನಿಗದಿಯಾಗಿದೆ. ಹೀಗಾಗಿ ಶೀಘ್ರದಲ್ಲೇ ಬಿಸಿಸಿಐ (BCCI) ಭಾರತ ತಂಡವನ್ನು ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.
ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಈಗಾಗಲೇ ಹೇಳಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲಲಿದೆ, ಹಾರ್ದಿಕ್ ಪಾಂಡ್ಯ ಉಪನಾಯಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡಿದ್ದು, ವೆಸ್ಟ್ ಇಂಡೀಸ್ (West Indies) ಮತ್ತು ಅಮೆರಿಕದ (USA) ಆತಿಥ್ಯದಲ್ಲಿ ಜೂನ್ 1 ರಿಂದ ಜೂನ್ 29ರ ವರೆಗೆ ನಡೆಯಲಿದೆ. ಈ ಬಾರಿ ತಂಡಗಳ ಅಂಖ್ಯೆಯನ್ನು 16 ರಿಂದ 20ಕ್ಕೆ ತಂಡಗಳ ಹೆಚ್ಚಿಸಿದ್ದು, ಒಟ್ಟು 4 ಗುಂಪುಗಳಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ. ಸೂಪರ್-12 ಹಂತವನ್ನು ಸೂಪರ್-8ಗೆ ಇಳಿಸಲಾಗಿದೆ. ಸೂಪರ್-8 ಗುಂಪಿನಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ಜೂನ್ 1 ರಿಂದ 18ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ. ಜೂನ್ 19 ರಿಂದ 24ರ ವರೆಗೆ ಸೂಪರ್-8 ಪಂದ್ಯಗಳು, ಜೂನ್ 26 ಮತ್ತು ಜೂನ್ 27 ರಂದು ಸೆಮಿಫೈನಲ್ ಪಂದ್ಯಗಳು ನಡಯೆಲಿದ್ದು, ಜೂನ್ 29ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಇದನ್ನೂ ಓದಿ: WPL 2024: ಆರ್‌ಸಿಬಿಯಲ್ಲಿ ಲೇಡಿ ʻಎಬಿಡಿʼ – ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡ್!
ಯಾವ ಗುಂಪಿನಲ್ಲಿ-ಯಾವ ತಂಡಗಳು? ಗುಂಪು-ಎ: ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಯುಎಸ್‌ಎ
ಗ್ರೂಪ್-ಬಿ: ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್‌ಲೆಂಡ್, ಒಮನ್
ಗ್ರೂಪ್-ಸಿ: ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಉಗಾಂಡ, ಪಪುವಾ ನ್ಯೂ ಗಿನಿಯಾ
ಗ್ರೂಪ್-ಡಿ: ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್, ನೇಪಾಳ
ವಿಜ್ಞಾನ-ತಂತ್ರಜ್ಞಾನ (Science And Technology) ಬೆಳೆದಂತೆ ಮನುಷ್ಯ ಹೊಸ ಹೊಸ ಆವಿಷ್ಕಾರಗಳಿಗೆ ಮುಂದಾಗುತ್ತಿರುವುದು ಅಚ್ಚರಿಯೇನಲ್ಲ. ವೈದ್ಯಕೀಯ ಲೋಕದಲ್ಲೂ ಹೊಸ ಹೊಸ ಆವಿಷ್ಕಾರಗಳು ಹಾಗೂ ತಂತ್ರಜ್ಞಾನ ಅಳವಡಿಕೆಯಿಂದಾಗಿ ಮನುಷ್ಯ ತನ್ನ ಜೀವಿತಾವಧಿಯನ್ನ ಹೆಚ್ಚಿಸಿಕೊಳ್ಳುತ್ತಿದ್ದಾನೆ. ಅಂದ್ರೆ 60 ವರ್ಷ ಜೀವಿತಾವಧಿ ಹೊಂದಿದ ಮನುಷ್ಯ ಕನಿಷ್ಠ ಐದತ್ತು ವರ್ಷ ಆರೊಗ್ಯದಲ್ಲಿ ಸುಧಾರಣೆ ಕಾಣಬಹುಗಿದೆ.
ಈ ಹಿಂದೆ ಹಲವಾರು ಮಾರಣಾಂತಿಕ ಕಾಯಿಲೆಗಳು ವಿಶ್ವವನ್ನು ಕಾಡಿವೆ. ಅದರಲ್ಲಿ ಪೋಲಿಯೋ (Polio) ಸಹ ಒಂದು. ಈಗಿನ ಮಟ್ಟಿಗೆ ಪೋಲಿಯೋಗೆ ಲಸಿಕೆ ಲಭ್ಯವಿದ್ದರೂ ಈ ಹಿಂದೆ ಜನರನ್ನ ಬಲಿ ಪಡೆದ ಉದಾಹರಣೆಯೂ ಇದೆ.
ಪೋಲೀಯೋ ಸಾಮಾನ್ಯ ಲಕ್ಷಣ ಹೊಂದಿದವರು ಸಾಮಾನ್ಯವಾಗಿ 1-2 ವಾರಗಳಲ್ಲಿ ಗುಣಮುಖರಾಗುತ್ತಾರೆ. ಕೆಲವೊಮ್ಮೆ ಪೋಲಿಯೋ ಪೀಡಿತರು ನಿರ್ದಿಷ್ಟ ಕಾಲಾವಧಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳದೇ ಇದ್ದರೆ, 30-40 ವರ್ಷಗಳ ನಂತರ ಅಂಗವೈಕಲ್ಯ ಕಾಣಿಸಿಕೊಳ್ಳಬಹುದು ಎಂದು ಈ ಹಿಂದೆಯೇ ತಜ್ಞರು ಹೇಳಿದ್ದಾರೆ. ಇದರ ಮರಣ ಪ್ರಮಾಣ ಮಕ್ಕಳಲ್ಲಿ 15% ರಿಂದ 30% ವರೆಗೆ ಇರುತ್ತದೆ. 1940 ಮತ್ತು 1950ರ ನಡುವೆ ಪೋಲಿಯೋ ಮರಣ ಪ್ರಮಾಣ ಹೆಚ್ಚಾಗಿ ಕಂಡುಬಂದಿತ್ತು. ಈ ಸಮಯದಲ್ಲಿ ಪ್ರತಿ ವರ್ಷ ಸರಿ ಸುಮಾರು 5 ಲಕ್ಷ ಜನ ಪೋಲಿಯೋಗೆ ತುತ್ತಾಗುತ್ತಿದ್ದರು, ಕೆಲವರು ಪೋಲಿಯೋದಿಂದ ಅಂಗವೈಕಲ್ಯ ಅನುಭವಿಸಿದ್ರೆ ಇನ್ನೂ ಕೆಲವರು ಸಾವನ್ನಪ್ಪುತ್ತಿದ್ದರು. 1916ರಲ್ಲಿ ನ್ಯೂಯಾರ್ಕ್‌ನಲ್ಲಿ 2,000 ಮಂದಿ, 1952ರಲ್ಲಿ ಅಮೆರಿಕದಾದ್ಯಂತ ಒಟ್ಟು 3,000 ಮಂದಿ ಸಾವನ್ನಪ್ಪಿದ್ದರು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಆದ್ರೆ ಅಮೆರಿಕದ ವ್ಯಕ್ತಿಯೊಬ್ಬರು ಚಿಕ್ಕ ವಯಸ್ಸಿನಲ್ಲೇ ಪೋಲಿಯೋಗೆ ತುತ್ತಾಗಿ ಅಂಗಾಗ ಸ್ವಾಧೀನ ಕಳೆದುಕೊಂಡರೂ ಕಬ್ಬಿಣದ ಶ್ವಾಸಕೋಶದ (Iron Lungs) ಮೂಲಕ ಉಸಿರಾಡುತ್ತಾ, ಪವಾಡವನ್ನೇ ಸೃಸ್ಟಿಸಿದ್ದಾರೆ. ಹೌದು. ಅಮೆರಿಕದ ಟೆಕ್ಸಾಸ್ ನಿವಾಸಿ ಪೌಲ್ ಅಲೆಕ್ಸಾಂಡರ್ ಎಂಬವರು ಅವರು ತನ್ನ 6ನೇ ವಯಸ್ಸಿನಲ್ಲಿಯೇ ಪೋಲಿಯೋಗೆ ತುತ್ತಾದರು. ಈ ಕಾರಣದಿಂದಾಗಿ, 1952 ರಿಂದ ಅವರ ದೇಹದ ಒಂದೊಂದೇ ಭಾಗ ಸ್ವಾಧೀನ ಕಳೆದುಕೊಳ್ಳಲಾರಂಭಿಸಿತು. ಕುಟುಂಬಸ್ಥರು ಅವರನ್ನು ವೈದ್ಯರ ಬಳಿ ಕರೆದೊಯ್ದರು. ನಂತರ ಅಲ್ಲಿನ ವೈದ್ಯರು ಅವರಿಗೆ ‘ಟ್ರಾಕಿಯೊಸ್ಟೊಮಿ’ ಎಂಬ ಆಪರೇಷನ್ ಮಾಡಿದರು. ಆಗ ಪಾಲ್ ಅಲೆಕ್ಸಾಂಡರ್‌ಗೆ ಸಿಲಿಂಡರ್ ಆಕಾರದ ‘ಕಬ್ಬಿಣದ ಶ್ವಾಸಕೋಶ’ವನ್ನು ಅಳವಡಿಸಲಾಯಿತು. ಸದ್ಯ ಇಂದಿಗೂ ಅವರು ಇದೇ ಕಬ್ಬಿಣದ ಶ್ವಾಸಕೋಶವನ್ನು ಬಳಸಿಕೊಂಡು ಉಸಿರಾಡುತ್ತಿದ್ದಾರೆ.
ಅಷ್ಟಕ್ಕೂ ಏನಿದು ಕಬ್ಬಿಣದ ಶ್ವಾಸಕೋಶ, ಹೇಗೆ ಕಾರ್ಯ ನಿರ್ವಹಿಸುತ್ತದೆ? ಇಂದಿಗೂ ಅದು ಯಾವ ದೇಶದಲ್ಲಿ ಬಳಕೆಯಲ್ಲಿದೆ ಎಂಬುದನ್ನ ತಿಳಿಯುವ ಮುನ್ನ ಪೋಲಿಯೋ ಎಂದರೇನು? ಅದಕ್ಕೆ ಚಿಕಿತ್ಸೆ ಏನು? ಮಾನವನ ಶ್ವಾಸಕೋಶ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ…..
ಪೋಲಿಯೋ ಎಂದರೇನು?
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪೋಲಿಯೋ ಅಥವಾ ಪೋಲಿಯೋಮೈಲಿಟಿಸ್ ಅನ್ನು ಹೆಚ್ಚು ಸಾಂಕ್ರಾಮಿಕ ವೈರಲ್ ಕಾಯಿಲೆಯೆಂದು ವ್ಯಾಖ್ಯಾನಿಸುತ್ತದೆ, ಇದು ವ್ಯಕ್ತಿಯಿಂದ ವ್ಯಕ್ತಿಗೆ ಮುಖ್ಯವಾಗಿ ಮಲ-ಮೌಖಿಕ ಮಾರ್ಗದ ಮೂಲಕ ಮತ್ತು ಕೆಲವೊಮ್ಮೆ ಕಲುಷಿತ ನೀರು ಆಹಾರದ ಮೂಲಕ ಹರಡುತ್ತದೆ. ಸೋಂಕು ಹೆಚ್ಚಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ನಂತರದಲ್ಲಿ ಇದು ಮಕ್ಕಳ ಅಂಗವಿಕಲತೆಗೆ ಕಾರಣವಾಗುತ್ತದೆ.
ಪೊಲೀಯೋಗೆ ಚಿಕಿತ್ಸೆ ಏನು?
ವೈರಸ್ ಸೋಂಕು ಎಂದಿಗೂ ಬೇರು ಬಿಡದಂತೆ ತಡೆಯಲು ಪೋಲಿಯೋ ಲಸಿಕೆಯನ್ನು ಮಕ್ಕಳಿಗೆ ನೀಡಲಾಗುತ್ತದೆ. ಪೋಲಿಯೋಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲದ ಕಾರಣ, ಲಸಿಕೆ ಪಡೆಯದಿದ್ದರೆ ಚಿಕಿತ್ಸೆಯು ಇತರ ವೈರಲ್ ಸೋಂಕುಗಳಿಗೆ ಹೋಲುತ್ತದೆ. ಇದರರ್ಥ ಜ್ವರ ಮತ್ತು ದೇಹದ ನೋವು ಕಡಿಮೆ ಮಾಡಲು ನೋವು ನಿವಾರಕಗಳು ಮತ್ತು ಔಷಧಿಗಳನ್ನು ತೆಗೆದುಕೊಳ್ಳುವುದು, ದ್ರವಗಳ ಹೆಚ್ಚಳ, ಸೌಮ್ಯ ಜ್ವರ ತರಹದ ರೋಗಲಕ್ಷಣಗಳನ್ನು ನಿರ್ವಹಿಸಲು ಬೆಡ್ ರೆಸ್ಟ್ ಮತ್ತು ಅಂಗವೈಕಲ್ಯ ಮತ್ತು ಪಾರ್ಶ್ವವಾಯು ಅಪಾಯದಲ್ಲಿರುವವರಲ್ಲಿ ಸ್ನಾಯುವಿನ ಚಲನಶೀಲತೆಯನ್ನು ಸುಧಾರಿಸಲು ದೈಹಿಕ ಚಿಕಿತ್ಸೆ. ಉಸಿರಾಡಲು ತೊಂದರೆ ಇರುವವರಿಗೆ ವೆಂಟಿಲೇಶನ್‌ನ ಅಗತ್ಯ ಬೀಳಬಹುದು.
ಶ್ವಾಸಕೋಶ ಎಂದರೇನು?
ಶ್ವಾಸಕೋಶ ಎನ್ನುವುದು ಮನುಷ್ಯನ ದೇಹಕ್ಕೆ ಉಸಿರಾಟ ಪೂರೈಸುವ ಪ್ರಮುಖವಾದ ಅಂಗ. ಇದು ವಾತಾವರಣದಿಂದ ಮಾನವನ ದೇಹಕ್ಕೆ ಆಮ್ಲಜನಕವನ್ನು ಪೂರೈಸುವ ಜೊತೆಗೆ ಮಾನವನ ದೇಹದಲ್ಲಿರುವ ಇಂಗಾಲದ ಡೈ ಆಕ್ಸೈಡ್ ಅನ್ನು ವಾತಾವರಣಕ್ಕೆ ಹೊರಸೂಸುತ್ತದೆ. ಇದರ ಕಾರ್ಯ ಚಟುವಟಿಕೆ ಚೆನ್ನಾಗಿದ್ದರೆ, ಮನುಷ್ಯ ಕೂಡ ಆರೋಗ್ಯವಾಗಿ ಇರುತ್ತಾನೆ.
ಕಬ್ಬಿಣದ ಶ್ವಾಸಕೋಶ ಎಂದರೇನು?
ಹೆಸರೇ ಹೇಳುವಂತೆ ಶವ ಪೆಟ್ಟಿಗೆಯನ್ನೇ ಹೋಲುವ ಹಾಗೂ ಕಬ್ಬಿಣದಿಂದ ಸಿದ್ಧಪಡಿಸಲಾದ ಒಂದು ಸಾಧನ. 1955ರಲ್ಲಿ ಪೊಲೀಯೋ ಲಸಿಕೆ ಕಂಡು ಹಿಡಿಯುವ ಮೊದಲು ಪೊಲೀಯೋ ಅಮೆರಿಕದಲ್ಲಿ ಸಾವಿರಾರು ಜನರನ್ನ ಬಲಿ ಪಡೆದಿತ್ತು. ಜನರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು, ಅಂದಿನ ಪರಿಸ್ಥಿತಿ ಊಹಿಸುವುದಕ್ಕೂ ಕಷ್ಟಕರವಾಗಿತ್ತು. ಜ್ವರದ ಲಕ್ಷಣಗಳೊಂದಿಗೆ ಸ್ನಾಯು ಬಿಗಿತ, ಪಾರ್ಶ್ವವಾಯು (ಸ್ಟ್ರೋಕ್) ಉಂಟು ಮಾಡುತ್ತಿತ್ತು ಎಂದು ತಜ್ಞರು ಹೇಳುತ್ತಾರೆ. ಪೋಲಿಯೋ ರೋಗಪೀಡಿತರಲ್ಲಿ ಹೆಚ್ಚಿನವರು ಮಕ್ಕಳೇ ಆಗಿರುತ್ತಿದ್ದರು. ಅದಕ್ಕೆ ಚಿಕಿತ್ಸೆ ಫಲಿಸದೇ ಇದ್ದಾಗ ಅದು ವಯಸ್ಕರಾದವರಿಗೂ ತಗುಲುತ್ತಿತ್ತು. ಹಾಗಾಗಿ ಸ್ನಾಯು ಶಕ್ತಿ ಕಳೆದುಕೊಳ್ಳುತ್ತಿದ್ದರು. ಇದರ ಚೇತರಿಕೆಗಾಗಿ ಕನಿಷ್ಠ ಎರಡು ವಾರಗಳ ವರೆಗೆ ದೀರ್ಘ ಉಸಿರಾಟದ ಅವಶ್ಯಕತೆಯಿತ್ತು. ಅದನ್ನು ಪೂರೈಸಲು ಕಂಡುಹಿಡಿದಿದ್ದೇ ಈ ಐರಲ್ ಲಂಗ್ಸ್ (ಕಬ್ಬಿಣದ ಶ್ವಾಸಕೋಶ).
ಕಬ್ಬಿಣದ ಶ್ವಾಸಕೋಶವು ಹೇಗೆ ಕೆಲಸ ಮಾಡುತ್ತದೆ?
ಕಬ್ಬಿಣದ ಶ್ವಾಸಕೋಶವನ್ನು 1927ರಲ್ಲಿ ಫಿಲಿಪ್ ಡ್ರಿಂಕರ್ ಅಮೆರಿಕದಲ್ಲಿ ಅಭಿವೃದ್ಧಿಪಡಿಸಿದರು. ಮೊದಲಬಾರಿಗೆ 1928ರಲ್ಲಿ ಕ್ಲಿನಿಕಲ್ ಪ್ರಯೋಗಕ್ಕೆ ಬಳಸಲಾಯಿತು, ಈ ವಿಧಾನದಿಂದ ಒಂದು ಹುಡುಗಿಯ ಜೀವವೂ ಉಳಿಯಿತು. ನಂತರ ತಜ್ಞರು ಪೋಲಿಯೋ ಪೀಡಿತರಿಗೆ ಕೃತಕ ಉಸಿರಾಟ ಕಲಿಸಲು ಇದು ಸಹಾಯಕವಾಗಲಿದೆ ಎಂಬುದನ್ನು ಕಂಡುಕೊಂಡರು.
ರೋಗಿಯನ್ನು ಇದರೊಳಗೆ ಇರಿಸಲು ಉಕ್ಕಿನಿಂದ ಸಿದ್ಧಪಡಿಸಲಾದ ಗಾಳಿಯಾಡದ ಕೋಣೆ ಒಳಗೊಂಡಿರುತ್ತದೆ. ಎಲೆಕ್ಟ್ರಿಕ್ ಮೋಟಾರ್ ಹಾಗೂ ವ್ಯಾಕ್ಯೂಮ್ ಕ್ಲೀನರ್‌ನಂತಹ ಏರ್‌ಪಂಪ್‌ಗಳಿಂದ ಚಾಲಿತವಾಗಿರುತ್ತದೆ. ಮುಂಭಾಗದಲ್ಲಿರುವ ದ್ವಾರವನ್ನು ರಬ್ಬರ್ ಡಾಲರ್ ಎಂದು ಕರೆಯಲಾಗುತ್ತದೆ. ತಲೆ ಭಾಗವನ್ನು ಹೊರತುಪಡಿಸಿ ಉಳಿದೆಲ್ಲ ಭಾಗವನ್ನು ಈ ದ್ವಾರ ಮುಚ್ಚಿಕೊಳ್ಳುತ್ತದೆ. ವ್ಯಕ್ತಿಯನ್ನು ಇದರ ಒಳಗೆ ಇರಿಸಿ, ಚಾಲನೆ ಮಾಡಿದಾಗ ಇದು ಇಂಭಾಗದ ರಬ್ಬರ್ ಅನ್ನು ಪಂಪ್ ಮಾಡುವ ಮೂಲಕ ವ್ಯಕ್ತಿಯ ದೇಹಕ್ಕೆ ಕೃತಕ ಉಸಿರಾಟ ಕಲ್ಪಿಸುತ್ತದೆ. ಬಳಿಕ ಬರುವ ಗಾಳಿಯನ್ನು ವ್ಯಕ್ತಿಯ ದೇಹ ಹೀರಿಕೊಂಡು ಶ್ವಾಸಕೋಶಕ್ಕೆ ಆಮ್ಲಜನಕ ಸಿಗುವಂತೆ ಮಾಡುತ್ತದೆ. ಇದರಿಂದ ರೋಗಿಯ ಅಂಗಾಗಗಳು ಸ್ವಾಧೀನ ಕಳೆದುಕೊಂಡಿದ್ದರೂ ಶ್ವಾಸಕೋಶಕ್ಕೆ ಉಸಿರಾಟ ಪೂರೈಕೆ ಮಾಡಲಿದ್ದು, ರೋಗಿಯನ್ನೂ ಜೀವಂತವಾಗಿರಿಸಬಹುದು ಎಂದು ತಜ್ಞರ ವರದಿ ಹೇಳಿದೆ.
ಈಗ ಬಳಕೆಯಲ್ಲಿದೆಯೇ?
ಸದ್ಯ ಇದು ಭಾರತದಲ್ಲಿ ಬಳಕೆಯಲ್ಲಿರುವ ಬಗ್ಗೆ ಮಾಹಿತಿ ಇಲ್ಲ. ಆದ್ರೆ ಅಮೆರಿಕದಲ್ಲಿ ಬಳಕೆಯಲ್ಲಿದೆ. ಪಾಲ್ ಅಲೆಕ್ಸಾಂಡರ್ ಅವರು ಬದುಕುಳಿಯಲು ಕಬ್ಬಿಣದ ಶ್ವಾಸಕೋಶ ಬಳಸಿಕೊಂಡಿದ್ದಾರೆ. ಇದು ಆಧುನಿಕ ವೆಂಟಿಲೇಟರ್‌ಗಳಿಗಿಂತಲೂ ಉತ್ತಮ ಚಿಕಿತ್ಸಾ ಸೌಕರ್ಯಗಳನ್ನು ನೀಡುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಾಷಿಂಗ್ಟನ್: ಇರಾನ್ ಬೆಂಬಲಿತ ಹೌತಿ (Houthi) ಬಂಡುಕೋರರ ವಿರುದ್ಧ ಸಿಟ್ಟಿಗೆದ್ದಿರುವ ಅಮೆರಿಕ ಉಗ್ರರ ವಿರುದ್ಧ ಸಮರ ಸಾರಿದೆ. ಅಮೆರಿಕ ಮತ್ತು ಬ್ರಿಟನ್ ಜಂಟಿಯಾಗಿ ಶನಿವಾರ ಯೆಮೆನ್‌ನಲ್ಲಿರುವ (Yemen) ಸರಿಸುಮಾರು 36 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿವೆ.
ಕಳೆದ ಜನವರಿ 28 ರಂದು ಜೋರ್ಡಾನ್‌ನಲ್ಲಿ US ಮೂವರು ಸೈನಿಕರ ಹತ್ಯೆಗೆ ಪ್ರತಿಕ್ರಿಯೆಯಾಗಿ ಇರಾಕ್ ಮತ್ತು ಸಿರಿಯಾದಲ್ಲಿರುವ ಹೌತಿ ನೆಲೆಗಳ ಮೇಲೆ ಅಮೆರಿಕದ ಏಕಪಕ್ಷೀಯ ದಾಳಿ ನಡೆಸಿತ್ತು. ಅದಾದ ಒಂದು ದಿನದ ಬಳಿಕ ಯೆಮೆನ್ನಲ್ಲಿ ಜಂಟಿ ವಾಯು ದಾಳಿಗಳು ನಡೆದಿವೆ ಎಂದು ವರದಿಯಾಗಿವೆ.
ಅಂತಾರಾಷ್ಟ್ರೀಯ ಮತ್ತು ವಾಣಿಜ್ಯ ಹಡಗುಗಳು ಹಾಗೂ ಕೆಂಪು ಸಮುದ್ರದಲ್ಲಿ ಸಾಗುವ ನೌಕೆಗಳ ವಿರುದ್ಧ ಹೌತಿಗಳ ನಿರಂತರ ದಾಳಿಗೆ ಪ್ರತಿಕ್ರಿಯೆಯಾಗಿ ಯೆಮೆನ್‌ನ 13 ಸ್ಥಳಗಳಲ್ಲಿರುವ 36 ಹೌತಿ ನೆಲೆಗಳ ಮೇಲೆ ಈ ದಾಳಿ ನಡೆದಿದೆ ಎಂದು ಕಾರ್ಯಾಚರಣೆಗೆ ಬೆಂಬಲ ನೀಡಿದ ಯುನೈಟೆಡ್ ಸ್ಟೇಟ್ಸ್, ಬ್ರಿಟನ್ ಮತ್ತು ಇತರ ದೇಶಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿವೆ. ಇದನ್ನೂ ಓದಿ: ಕಾನೂನುಬಾಹಿರ ವಿವಾಹ – ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ದಂಪತಿಗೆ 7 ವರ್ಷ ಜೈಲು
ಜಾಗತೀಕ ವ್ಯಾಪಾರ ಮತ್ತು ಮುಗ್ಧ ನಾವಿಕರ ಜೀವಕ್ಕೆ ಹೌತಿ ಬಂಡುಕೋರರು ಬೆದರಿಕೆ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೌತಿ ಉಗ್ರರ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಹೌತಿ ಉಗ್ರರ ಶಸ್ತ್ರಾಸ್ತ್ರ ಸಂಗ್ರಹಣಾ ಸೌಲಭ್ಯಗಳು, ಕ್ಷಿಪಣಿ ವ್ಯವಸ್ಥೆಗಳು ಮತ್ತು ಲಾಂಚರ್ಗಳ ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ರಾಡಾರ್ಗೆ ಸಂಬಂಧಿಸಿದ ತಾಣಗಳನ್ನು ಗುರಿಯಾಗಿಸಿ ಜಂಟಿ ದಾಳಿ ನಡೆದಿದೆ.
ಕಳೆದ ಜನವರಿ 28ರಂದು ಸಿರಿಯಾ ಗಡಿ (Syrian Border) ಸಮೀಪದಲ್ಲಿರುವ ಈಶಾನ್ಯ ಜೋರ್ಡಾನ್‌ನಲ್ಲಿ ಅಮೆರಿಕ ಸೇನೆಯ ಮೇಲೆ ಡ್ರೋನ್ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಮೂರು ಸೈನಿಕರು (American Soldiers) ಸಾವನ್ನಪ್ಪಿದ್ದರು. ಈ ನಂತರ ಅಮೆರಿಕ ಪ್ರತೀಕಾರ ತೀರಿಸಿಕೊಳ್ಳೋದಾಗಿ ಸವಾಲು ಹಾಕಿತ್ತು.