Tag: USA

  • ಲಾಸ್‌ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು – 57,000 ಕಟ್ಟಡ, 1.66 ಲಕ್ಷ ಮಂದಿಗೆ ಕಾದಿದೆ ಆಪತ್ತು

    ಲಾಸ್‌ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು – 57,000 ಕಟ್ಟಡ, 1.66 ಲಕ್ಷ ಮಂದಿಗೆ ಕಾದಿದೆ ಆಪತ್ತು

    – ಸಾವಿನ ಸಂಖ್ಯೆ 13ಕ್ಕೆ ಏರಿಕೆ

    ವಾಷಿಂಗ್ಟನ್‌: ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಹಬ್ಬಿರುವ ಕಾಡಿಚ್ಚು‌‌ (Los Angeles wildfire) ದಿನೇ ದಿನೇ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಈವರೆಗೆ 13 ಜೀವಗಳು ಬಲಿಯಾಗಿದ್ದು, 12,000 ಕಟ್ಟಡಗಳು ಸುಟ್ಟು ಕರಕಲಾಗಿವೆ. ಅಗ್ನಿ ನರ್ತನ ಮುಂದುವರಿದಿರುವ ಕಾರಣ ಇನ್ನೂ 57,000 ಕಟ್ಟಡ (structures) ಸುಟ್ಟು ಭಸ್ಮವಾಗುವ, 1.66 ಲಕ್ಷ ಮಂದಿ ಸ್ಥಳಾಂತರವಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹೌದು. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಸತತ ಪ್ರಯತ್ನದಲ್ಲಿ ತೊಡಗಿದೆ. ಆದ್ರೆ ಮತ್ತೊಂದೆಡೆ 100 ಕಿಮೀ ವೇಗದಲ್ಲಿ ಬೀಸುತ್ತಿರುವ ಸಾಂಟಾ ಅನಾ ಚಂಡಮಾರುತ ಗಾಳಿಯು ಬೆಂಕಿ ಕೆನ್ನಾಲಿಗೆಯನ್ನು ಮತ್ತಷ್ಟು ಚಾಚಿಸುತ್ತಲೇ ಇದೆ. ಹೀಗಾಗಿ ಇನ್ನೂ ಸಾವಿರಾರು ಮನೆಗಳು ಹಾನಿಗೀಡಾಗುವ ಸಾಧ್ಯತೆಗಳಿವೆ. ಜೊತೆಗೆ ಇನ್ನೂ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಬೇಕಾಗಬಹುದು ಎಂದು ಮಾಹಿತಿ ನೀಡಿದ್ದಾರೆ.

    ಕಾಡ್ಗಿಚ್ಚು ಕದನ – ಪ್ರಮುಖ ಬೆಳವಣಿಗೆ

    • ಕ್ಯಾಲಿಫೋರ್ನಿಯಾದ ಪಾಲಿಸೇಡ್ಸ್‌ ಪ್ರದೇಶವೊಂದರಲ್ಲೇ 22,000ಕ್ಕೂ ಅಧಿಕ ಎಕರೆ ಭೂಪ್ರದೇಶ ಸುಟ್ಟು ಭಸ್ಮವಾಗಿದೆ. 426 ಮನೆಗಳೂ ಸೇರಿದಂತೆ 5,000ಕ್ಕೂ ಹೆಚ್ಚು ಕಟ್ಟಡಗಳು ನಾಶವಾಗಿದೆ. ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಶ್ವಾನದಳದ ಮೂಲಕ ಶವಗಳ ಹುಟುಕಾಟ ಕಾರ್ಯನಡೆದಿದೆ.
    • ಜ.7ರಂದು ಹೊತ್ತಿಕೊಂಡ ಕಾಡ್ಗಿಚ್ಚಿನಿಂದ ಈವರೆಗೆ 39,000 ಎಕರೆ ಭೂಪ್ರದೇಶ ಹಾನಿಯಾಗಿದೆ. ಅಂದಾಜು 150 ಶತಕೋಟಿ ಡಾಲರ್‌ನಷ್ಟು ಆರ್ಥಿಕ ನಷ್ಟ ಉಂಡಾಗಿದೆ.
    • ಬಿಸಿ ಗಾಳಿ, ಫೈರ್ನಾಡೋ (ಅಗ್ನಿ ಜ್ವಾಲೆ)ಗಳು ಮುಗಿಲೆತ್ತರಕ್ಕೆ ಚಿಮ್ಮುತ್ತಿದ್ದು, ವ್ಯಾಪ್ತಿಯನ್ನು ವಿಸ್ತರಿಸುತ್ತಲೇ ಇದೆ. ಅಮೆರಿಕದ ಇತಿಹಾಸದಲ್ಲೇ ಇದು ಕಂಡೂ ಕೇಳರಿಯದ ಕಾಡ್ಗಿಚ್ಚು ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ.
    • ಈಗಾಗಲೇ 1.53 ಲಕ್ಷ ಮಂದಿಯನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ. ಅಲ್ಲದೇ ಇನ್ನೂ 57,000 ಕಟ್ಟಡಗಳು ಅಪಾಯದಲ್ಲಿವೆ. 1.66 ಲಕ್ಷ ಮಂದಿ ಸ್ಥಳಾಂತರಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ತಿಳಿದುಬಂದಿದೆ.
    • ಈ ಮಧ್ಯೆ ಕೆನಡಾ ಹಾಗೂ ಮೆಕ್ಸಿಕೋ ದೇಶಗಳು ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ನಂದಿಸಲು ನೆರವು ಚಾಚಿವೆ.

  • ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು – 15,000 ಎಕ್ರೆ ಪ್ರದೇಶಕ್ಕೆ ಬೆಂಕಿ, ಐವರು ಸಜೀವ ದಹನ

    ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು – 15,000 ಎಕ್ರೆ ಪ್ರದೇಶಕ್ಕೆ ಬೆಂಕಿ, ಐವರು ಸಜೀವ ದಹನ

    – 50 ಶತಕೋಟಿ ಡಾಲರ್‌ ಸಂಪತ್ತು ಬೆಂಕಿಗಾಹುತಿ, 1 ಲಕ್ಷ ಮಂದಿ ಸ್ಥಳಾಂತರ

    ವಾಷಿಂಗ್ಟನ್‌: ದಕ್ಷಿಣ ಕ್ಯಾಲಿಫೋರ್ನಿಯಾದ (South California) ಆಕರ್ಷಕ ನಗರವಾದ ಲಾಸ್‌ ಏಂಜಲೀಸ್‌ನಲ್ಲಿ ಭೀಕರ ಕಾಡ್ಗಿಚ್ಚು (Los Angeles Wildfires) ಹೊತ್ತಿಕೊಂಡಿದೆ. ಬೆಂಕಿ ನಿಯಂತ್ರಣಕ್ಕೆ ಬಾರದೇ ಕನಿಷ್ಠ 5 ಮಂದಿ ಸಜೀವ ದಹನವಾಗಿದ್ದಾರೆ.

    ಸುಮಾರು 15,832 ಎಕರೆ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದ್ದು, 1,000 ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಸುಮಾರು 1 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಇನ್ನೂ ಕೆಲವೆಡೆ ಅಸಂಖ್ಯಾತ ಐಷಾರಾಮಿ ಮನೆಗಳು ಬೆಂಕಿ ಹೊತ್ತಿಕೊಳ್ಳುವ ಭೀತಿಯಲ್ಲಿವೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: `ನಾಪತ್ತೆ’ಯಾಗಿದ್ದ ಅತುಲ್ ಸುಭಾಷ್ ಪುತ್ರ ಹರ್ಯಾಣ ಬೋರ್ಡಿಂಗ್ ಸ್ಕೂಲ್‌ನಲ್ಲಿ – ಖಚಿತಪಡಿಸಿದ ಫರಿದಾಬಾದ್ ಶಾಲೆ

    ಸಣ್ಣ ಪ್ರಮಾಣದಲ್ಲಿ ಹೊತ್ತಿಕೊಡ್ಡಿಂದ್ದ ಕಾಡ್ಗಿಚ್ಚು ಮಂಗಳವಾರದ ವೇಳೆಗೆ ಜನನಿಬಿಡ ಪ್ರದೇಶಗಳಿಗೆ ವ್ಯಾಪಿಸಿದೆ. ನಿಯಂತ್ರಣಕ್ಕೆ ಬಾರದ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸಮರೋಪಾದಿ ಕಾರ್ಯಾಚರಣೆ ನಡೆಸುತ್ತಿದೆ. ಬುಧವಾರ ಅಗ್ನಿಶಾಮಕ ದಳದ ಬೆಂಕಿ ನಂದಿಸುವ ಕಾರ್ಯ ಬಹುತೇಕ ಯಶಸ್ವಿಯಾಗುವ ಸಾಧ್ಯತೆಗಳಿತ್ತು. ಈ ವೇಳೆ ಚಂಡಮಾರುತ ಗಾಳಿ ಬೀಸಿದ್ದರಿಂದ ಬೆಂಕಿ ಕೆನ್ನಾಲಿಗೆ ಮತ್ತಷ್ಟು ವ್ಯಾಪಿಸಿತು ಎಂದು ವರದಿ ಹೇಳಿದೆ. ಇದನ್ನೂ ಓದಿ: ತಿರುಪತಿಯಲ್ಲಿ ದುರಂತ – ಕಾಲ್ತುಳಿತಕ್ಕೆ ಮೂಲ ಕಾರಣ ಏನು? ದಿಢೀರ್‌ ಗೇಟ್‌ ಓಪನ್‌ ಮಾಡಿದ್ದು ಯಾಕೆ?

    50 ಶತಕೋಟಿ ಡಾಲರ್‌ ಸಂಪತ್ತು ನಷ್ಟ:
    ಇನ್ನೂ ಲಾಸ್‌ ಏಂಜಲೀಸ್‌ನಲ್ಲಿ ಹಬ್ಬಿದ ಕಾಡ್ಗಿಚ್ಚಿನಿಂದ ಸುಮಾರು 50 ಶತಕೋಟಿ ಡಾಲರ್‌ (42,000 ಕೋಟಿ ರೂ.) ಸಂಪತ್ತು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: 20 ವರ್ಷಗಳಿಂದ ಪಾಳುಬಿದ್ದಿದ್ದ ಮನೆಯ ಫ್ರಿಡ್ಜ್‌ನಲ್ಲಿತ್ತು ಮಾನವನ ತಲೆಬುರುಡೆ, ಅಸ್ಥಿಪಂಜರ!

  • ಟ್ರಂಪ್‌ ಪ್ರಮಾಣವಚನ ಸಮಾರಂಭ – 8.57 ಕೋಟಿ ದೇಣಿಗೆ ನೀಡಲಿದ್ದಾರೆ ಟಿಮ್‌ ಕುಕ್‌

    ಟ್ರಂಪ್‌ ಪ್ರಮಾಣವಚನ ಸಮಾರಂಭ – 8.57 ಕೋಟಿ ದೇಣಿಗೆ ನೀಡಲಿದ್ದಾರೆ ಟಿಮ್‌ ಕುಕ್‌

    ವಾಷಿಂಗ್ಟನ್‌: ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಅದ್ದೂರಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಪಲ್ ಸಿಇಒ (Apple CEO) ಟಿಮ್ ಕುಕ್ (Tim Cook) ವೈಯಕ್ತಿಕವಾಗಿ 1 ಮಿಲಿಯನ್‌ ಡಾಲರ್‌ (ಅಂದಾಜು 8.57 ಕೋಟಿ ರೂ.) ಹಣವನ್ನು ದೇಣಿಗೆ ನೀಡಲಿದ್ದಾರೆ.

    ಜ.20 ರಂದು ನಡೆಯಲಿರುವ ಈ ಕಾರ್ಯಕ್ರಮಕ್ಕೆ ಕುಕ್‌ ವೈಯಕ್ತಿಕವಾಗಿ ದೇಣಿಗೆ (Donation) ನೀಡುತ್ತಿದ್ದಾರೆ ಹೊರತು ಆಪಲ್‌ ಕಂಪನಿಯಿಂದ ಯಾವುದೇ ದೇಣಿಗೆ ಬರುವ ನಿರೀಕ್ಷೆಯಿಲ್ಲ ಎಂದು ಮಾಧ್ಯಮ ವರದಿ ಮಾಡಿದೆ. ಇದನ್ನೂ ಓದಿ: ಐಫೋನ್‌ನಿಂದ ಭಾರತದ ಕಾನೂನು ಉಲ್ಲಂಘನೆ – ಆಪಲ್‌ಗೆ ಸಿಸಿಐ ಬಿಸಿ

    ಟಿಮ್‌ ಕುಕ್‌ ಡಿಸೆಂಬರ್ 13 ರಂದು ಫ್ಲೋರಿಡಾದಲ್ಲಿರುವ ಟ್ರಂಪ್‌ ಅವರ ಮಾರ್-ಎ-ಲಾಗೊ ರೆಸಾರ್ಟ್‌ಗೆ ಆಗಮಿಸಿ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು.

    ಡೊನಾಲ್ಡ್ ಟ್ರಂಪ್ ಅವರ ಪದಗ್ರಹಣ ಸಮಾರಂಭಕ್ಕೆ ಈಗಾಗಲೇ ಹಲವಾರು ಉದ್ಯಮಿಗಳು ದೇಣಿಗೆ ನೀಡಿದ್ದಾರೆ. ಓಪನ್ ಎಐನ ಸ್ಯಾಮ್ ಆಲ್ಟ್‌ಮ್ಯಾನ್, ಮೆಟಾದ ಮಾರ್ಕ್ ಜುಕರ್‌ಬರ್ಗ್ ಮತ್ತು ಅಮೆಜಾನ್‌ನ ಜೆಫ್ ಬೆಜೋಸ್ ದೇಣಿಗೆ ನೀಡಿದ್ದಾರೆ. ಈಗಾಗಲೇ ಮೆಟಾ ಪ್ಲಾಟ್‌ಫಾರ್ಮ್‌ಗಳು ಮತ್ತು ಅಮೆಜಾನ್ 1 ಮಿಲಿಯನ್‌ ಡಾಲರ್‌ ಹಣವನ್ನು ಉದ್ಘಾಟನಾ ನಿಧಿಗೆ ದೇಣಿಗೆ ನೀಡಿವೆ ಎಂದು ವರದಿಯಾಗಿದೆ.

    ಈ ಹಿಂದೆ ಡೊನಾಲ್ಡ್‌ ಟ್ರಂಪ್‌ ಯುರೋಪಿಯನ್‌ ಒಕ್ಕೂಟ ಆಪಲ್‌ ಕಂಪನಿಗೆ 14.34 ಶತಕೋಟಿ ಡಾಲರ್‌ ದಂಡ ವಿಧಿಸಿದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಆಪಲ್‌ ಅಮೆರಿಕದ ಆರ್ಥಿಕತೆ ದೊಡ್ಡ ಕೊಡುಗೆ ನೀಡುತ್ತಿದೆ ಅಷ್ಟೇ ಅಲ್ಲದೇ ಜಾಗತಿಕವಾಗಿಯೂ ದೊಡ್ಡ ತೆರಿಗೆ ಕಂಪನಿಯಾಗಿದೆ.

     

  • ದೊಡ್ಡ ಜಯ| ಮುಂಬೈ ದಾಳಿಕೋರನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಕೋರ್ಟ್‌ ಆದೇಶ

    ದೊಡ್ಡ ಜಯ| ಮುಂಬೈ ದಾಳಿಕೋರನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಕೋರ್ಟ್‌ ಆದೇಶ

    ನವದೆಹಲಿ: ಹೊಸ ವರ್ಷದಂದೇ ಭಾರತಕ್ಕೆ (India) ದೊಡ್ಡ ಯಶಸ್ಸು ಸಿಕ್ಕಿದೆ. ಮುಂಬೈ ಉಗ್ರ ದಾಳಿ (2008 Mumbai Attacks) ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾಗಿದ್ದ ಪ್ರಮುಖ ಆರೋಪಿ ತಹವ್ವುರ್ ಹುಸೇನ್ ರಾಣಾನನ್ನು (Tahawwur Hussain Rana) ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ನ್ಯಾಯಾಲಯ (US Court) ಆದೇಶ ಪ್ರಕಟಿಸಿದೆ.

    2008ರ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಹುಸೇನ್ ರಾಣಾನನ್ನು ಸ್ಥಳಾಂತರ ಮಾಡುವಂತೆ ಭಾರತ ಬಹಳ ಪ್ರಯತ್ನ ನಡೆಸುತ್ತಿತ್ತು.

    ಈಗ ಅಮೆರಿಕದ ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರ ಸಮಿತಿ ರಾಣಾನನ್ನು ಹಸ್ತಾಂತರಿಸುವಂತೆ ಆದೇಶಿಸಿರುವುದರಿಂದ ಸದ್ಯ ಜೈಲಿನಲ್ಲಿರುವ ಪಾಕಿಸ್ತಾನಿ (Pakistan) ಮೂಲದ ಕೆನಡಾ ಉದ್ಯಮಿ ತಹವ್ವುರ್ ರಾಣಾನನ್ನು ಶೀಘ್ರವೇ ಭಾರತಕ್ಕೆ ಕರೆ ತರುವ ಸಾಧ್ಯತೆಯಿದೆ. ಇದನ್ನೂ ಓದಿ: ಮೊದಲ ಕ್ಯಾಬಿನೆಟ್‌ ರೈತರಿಗೆ ಅರ್ಪಿಸಿದ ಮೋದಿ – ಡಿಎಪಿ ಗೊಬ್ಬರಕ್ಕೆ ಸಬ್ಸಿಡಿ

    ಕೋರ್ಟ್‌ ಆದೇಶ ಬಳಿಕ ಆತನನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತಕ್ಕೆ ಕರೆತರುವ ಪ್ರಕ್ರಿಯೆಯನ್ನು ರಾಷ್ಟ್ರೀಯ ತನಿಖಾ ದಳ (NIA) ಆರಂಭಿಸಿದೆ.

    2008 ರಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ನಡೆಸಿದ 26/11 ಮುಂಬೈ ದಾಳಿಯಲ್ಲಿ ರಾಣಾನ ಪಾತ್ರದ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ. ಉಭಯ ದೇಶಗಳ ನಡುವಿನ ಹಸ್ತಾಂತರ ಒಪ್ಪಂದದ ಅಡಿಯಲ್ಲಿ ರಾಣಾನನ್ನು ಭಾರತಕ್ಕೆ ಕಳುಹಿಸಬಹುದು ಎಂದು ಯುಎಸ್ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

     

  • ಶಿವಣ್ಣನ ಮನೆ ನಾಯಿ ʻನೀಮೋʼ ನಿಧನ – ಕರುಳು ಹಿಂಡುವ ಪತ್ರ ಬರೆದ ಗೀತಾ ಶಿವರಾಜ್‌ಕುಮಾರ್

    ಶಿವಣ್ಣನ ಮನೆ ನಾಯಿ ʻನೀಮೋʼ ನಿಧನ – ಕರುಳು ಹಿಂಡುವ ಪತ್ರ ಬರೆದ ಗೀತಾ ಶಿವರಾಜ್‌ಕುಮಾರ್

    ಬೆಂಗಳೂರು: ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ (ShivaRajkumar) ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಅಮೆರಿಕದಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಈ ಹೊತ್ತಿನಲ್ಲೇ ಅವರ ಮನೆ ನಾಯಿ ನೀಮೋ ನಿಧನ ಹೊಂದಿದೆ.

    ಶಿವಣ್ಣ ಅವರ ದೊಡ್ಡ ಮಗಳು ನಿರುಪಮಾ ಪತಿ ಮದುವೆಗೆ ಮೊದಲು ಆ ನಾಯಿಯನ್ನು ಗಿಫ್ಟ್ ಆಗಿ ಕೊಟ್ಟಿದ್ದರು. ನಿರುಪಮಾ ಅವರು ಡಾಕ್ಟರ್ ಆಗಿರುವ ಕಾರಣಕ್ಕೆ ಅದನ್ನು ಸಮಯಕ್ಕೆ ಸರಿಯಾಗಿ ನೋಡಿಕೊಳ್ಳಲು ಆಗೋದಿಲ್ಲ ಎಂಬ ಕಾರಣಕ್ಕೆ ಅದು ಶಿವಣ್ಣ ಅವರ ಮನೆಯಲ್ಲೇ ಇತ್ತು. ಆದ್ರೆ ಇಂದು ನಾಯಿ ʻನೀಮೋʼ ಚಿರನಿದ್ರೆಗೆ ಜಾರಿದೆ. ಈ ಬಗ್ಗೆ ಅಮೆರಿಕದಲ್ಲಿರುವ ಗೀತಾ ಶಿವರಾಜ್‌ಕುಮಾರ್ (Geetha Shivarajkumar) ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪತ್ರವೊಂದನ್ನು ಬರೆದು ಪೋಸ್ಟ್‌ ಮಾಡಿದ್ದಾರೆ.

    ನಟ ಶಿವಣ್ಣ ಅವರು ಕಳೆದ ವಾರ ಅಮೆರಿಕಾಗೆ ಚಿಕಿತ್ಸೆಗೆ ಹೊರಡುವ ವೇಳೆ ನಾಯಿ ನೀಮೋ ಅವರ ಜೊತೆಯಲ್ಲೇ ಇದ್ದು ಬೀಳ್ಕೊಟ್ಟಿದೆ. ಆದರೆ, ಅಲ್ಲಿ ಶಿವಣ್ಣ ಅವರು ಸರ್ಜರಿ ಮುಗಿಸಿಕೊಂಡು ವಿಶ್ರಾಂತಿಯಲ್ಲಿ ಇರುವಾಗ ನೀಮೋ ಮೃತಪಟ್ಟಿದೆ. ಆ ನಾಯಿ ಬಗ್ಗೆ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್ ಸೇರಿದಂತೆ ಎಲ್ಲರಿಗೂ ಬಹಳಷ್ಟು ಅಟ್ಯಾಚ್‌ಮೆಂಟ್ ಇತ್ತು ಎಂಬುದು ಗೀತಾ ಅವರ ಪತ್ರದಿಂದ ತಿಳಿದುಬರುತ್ತಿದೆ. ಆ ಪತ್ರದಲ್ಲಿ ಆ ನಾಯಿ ನೀಮೋ ಮನೆಯಲ್ಲಿ ಹೇಗಿರುತ್ತಿತ್ತು, ಗೀತಾ ಅವರನ್ನು ಅದೆಷ್ಟು ಇಷ್ಟಪಡುತ್ತಿತ್ತು ಎಂಬ ಗೀತಾ ಅವರು ಬರೆದುಕೊಂಡಿದ್ದಾರೆ.

    ಗೀತಾ ಶಿವರಾಜ್‌ಕುಮಾರ್‌ ಅವರು ಬರೆದಿರುವ ಭಾವುಕ ಪತ್ರ ಈ ಕೆಳಕಂಡಂತಿದೆ….

  • ಉಕ್ರೇನ್‌ ಯುದ್ಧ ಸಂಬಂಧ ಟ್ರಂಪ್‌ ಜೊತೆ ಮಾತುಕತೆಗೆ ಸಿದ್ಧ: ಪುಟಿನ್‌

    ಉಕ್ರೇನ್‌ ಯುದ್ಧ ಸಂಬಂಧ ಟ್ರಂಪ್‌ ಜೊತೆ ಮಾತುಕತೆಗೆ ಸಿದ್ಧ: ಪುಟಿನ್‌

    ಮಾಸ್ಕೋ: ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್‌ (Donald Trump) ಅವರೊಂದಿಗೆ ಉಕ್ರೇನ್ ಯುದ್ಧ ಸಂಬಂಧ ಮಾತುಕತೆ ನಡೆಸಲು ರಷ್ಯಾ ಸಿದ್ಧವಾಗಿದೆ ಎಂದು ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ (Vladimir Putin) ತಿಳಿಸಿದ್ದಾರೆ.

    ವರ್ಷಾಂತ್ಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುಟಿನ್‌ ಟ್ರಂಪ್‌ ಅವರೊಂದಿಗೆ ಎಂದಾದರೂ ಚರ್ಚೆ ನಡೆಸಲು ಅವಕಾಶ ಸಿಕ್ಕರೆ ಖಂಡಿತವಾಗಿಯೂ ಉಕ್ರೇನ್ (Ukraine) ಒಪ್ಪಂದದ ಕುರಿತು ಮಾತುಕತೆ ನಡೆಸಲಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮಮಂದಿರ ಕಟ್ಟೋದ್ರಿಂದ ಹಿಂದೂ ನಾಯಕನಾಗಲು ಸಾಧ್ಯವಿಲ್ಲ: ಮೋಹನ್‌ ಭಾಗವತ್‌

    ನಾನು ಟ್ರಂಪ್ ಅವರನ್ನು ಯಾವಾಗ ಭೇಟಿಯಾಗಲಿದ್ದೇನೆ ಎಂಬುದು ತಿಳಿದಿಲ್ಲ. ಅವರು ಕೂಡ ಯಾವುದಕ್ಕೂ ಖಚಿತಪಡಿಸಿಲ್ಲ. ಕಳೆದ 4 ವರ್ಷಗಳಿಂದ ಅವರ ಜೊತೆ ಮಾತುಕತೆ ನಡೆಸಿಲ್ಲ. ಆದರೆ ಯಾವಾಗ ಬೇಕಾದರೂ ಭೇಟಿಯಾಗಲು ಸಿದ್ಧವಿದ್ದೇನೆ, ಜೊತೆಗೆ ಉಕ್ರೇನ್‌ ಯುದ್ಧದ ಸಂಬಂದು ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಹೇಳಿಕೊಂಡಿದ್ದಾರೆ.

    ಮುಂದಿನ ವರ್ಷ ಜನವರಿಯಲ್ಲಿ ಅಮೆರಿಕ ಅಧ್ಯಕ್ಷರಾಗಿ ಟ್ರಂಪ್‌ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಲ್ಲದೆ ʻನರಮೇಧʼ ಕೊನೆಗೊಳಿಸಲು ಪುಟಿನ್ ಹಾಗೂ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಸಿಟಿ ರವಿ ಹೇಳಿಕೆ ಸತ್ಯಶೋಧನೆ ಆಗುವ ಮೊದಲು ಯಾವ್ದೇ ನಿರ್ಧಾರಕ್ಕೆ ಬರೋದು ತಪ್ಪು: ಬೊಮ್ಮಾಯಿ

    ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಮೇಲುಗೈ ಸಾಧಿಸಿದೆ. ಆದ್ರೆ ಬಹಳ ಹಿಂದೆಯೇ ಪೂರ್ಣ ಪ್ರಮಾಣದ ಆಕ್ರಮಣ ಆರಂಭಿಸದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಜೊತೆಗೆ ಈಗ ಏನಾಗುತ್ತಿದೆ ಎಂದು ಗಮನಿಸಿದಾಗ ಆ ನಿರ್ಧಾರ ಹಿಂದೆಯೇ ತೆಗೆದುಕೊಳ್ಳಬೇಕಿತ್ತು ಎಂದೂ ಸಹ ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿ ಕೋರ್ಟ್ ಹಾಲ್‌ನಲ್ಲಿ ಕಣ್ಣೀರಿಟ್ಟ ಸಿ.ಟಿ ರವಿ – ಜಾಮೀನಿಗೆ ವಕೀಲರ ಮನವಿ, ಆದೇಶ ಕಾಯ್ದಿರಿಸಿದ ಕೊರ್ಟ್

  • ವಿಶ್ವದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಶಿವಣ್ಣಗೆ ಚಿಕಿತ್ಸೆ – 1 ತಿಂಗಳ ಬಳಿಕ ರಿಟರ್ನ್‌

    ವಿಶ್ವದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಶಿವಣ್ಣಗೆ ಚಿಕಿತ್ಸೆ – 1 ತಿಂಗಳ ಬಳಿಕ ರಿಟರ್ನ್‌

    ಬೆಂಗಳೂರು: ನಟ ಶಿವರಾಜ್ ಕುಮಾರ್ (Shivaraj Kumar) ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಗೆ ಬುಧವಾರ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಅಮೆರಿಕಗೆ (USA) ಪ್ರಯಾಣ ಬೆಳೆಸಿದ್ದ ಶಿವರಾಜ್‌ಕುಮಾರ್‌ಗೆ, ಪತ್ನಿ ಗೀತಾ ಶಿವರಾಜ್‌ಕುಮಾರ್, ಪುತ್ರಿ ನಿವೇದಿತಾ ಸಾಥ್ ನೀಡಿದರು.

    ಡಿಸೆಂಬರ್ 24ರಂದು ಫ್ಲೋರಿಡಾ ರಾಜ್ಯದ ಮಿಯಾಮಿಯಲ್ಲಿರುವ ಮಿಯಾಮಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ (MCI) ಆಸ್ಪತ್ರೆಯಲ್ಲಿ ಶಿವರಾಜ್‌ಕುಮಾರ್ ಅವರಿಗೆ ಸರ್ಜರಿ ನಡೆಯಲಿದೆ. ಡಾಕ್ಟರ್ ಮುರುಗೇಶ್ ನೇತೃತ್ವದಲ್ಲಿ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಬರೋಬ್ಬರಿ ಒಂದು ತಿಂಗಳು ಕಾಲ ಅಮೆರಿಕದಲ್ಲೇ ಶಿವರಾಜ್‌ಕುಮಾರ್ ಉಳಿದುಕೊಳ್ಳಲಿದ್ದಾರೆ.

    ಜನವರಿ 25ರಂದು ಅಮೆರಿಕದಿಂದ ಶಿವರಾಜ್‌ಕುಮಾರ್ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರು ಬಿಡುವ ಮುನ್ನ ಶಿವಣ್ಣ ಭಾವುಕರಾಗಿದ್ದರು. ಒಂದು ತಿಂಗಳ ಕಾಲ ಭಾರತವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

     

    ಪ್ರತಿಷ್ಠಿತ ಕ್ಯಾನ್ಸರ್‌ ಆಸ್ಪತ್ರೆ:
    ಮಿಯಾಮಿ ಕ್ಯಾನ್ಸರ್ ಇನಿಸ್ಟಿಟ್ಯೂಟ್‌ (Miami Cancer Institute) ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ (Operation) ದಾಖಲಾಗಲಿರುವ ಶಿವರಾಜ್‌ಕುಮಾರ್‌ಗೆ ಅಲ್ಲಿ ಭಾರತ ಮೂಲದ ಮುರುಗೇಶ್ ನೇತೃತ್ವದ ತಜ್ಞವೈದ್ಯರ ತಂಡದಿಂದ ಚಿಕಿತ್ಸೆ ನಡೆಯಲಿದೆ.  ಇದನ್ನೂ ಓದಿ: ಶಿವಣ್ಣ ಫೈಟರ್, ಅವರು ಯಾವತ್ತೂ ಕುಗ್ಗಿಲ್ಲ, ಕುಗ್ಗೋದು ಇಲ್ಲ: ಸುದೀಪ್

    ಮಿಯಾಮಿ ಕ್ಯಾನ್ಸರ್ ಇನಿಸ್ಟಿಟ್ಯೂಟ್‌ ನೆಕ್ಷ್ಟ್‌ ಜನರೇಶನ್ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯಾಗಿದ್ದು, ವೈದ್ಯಕೀಯ ಆರೈಕೆ, ಸಂಶೋಧನೆ, ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ.

    ವಿಶ್ವಮಾನ್ಯತೆ ಪಡೆದ ಆಂಕೋಲಾಜಿಸ್ಟ್‌ಗಳೆಂದು ಕರೆಯಲಾಗುವ ತಜ್ಞ ವೈದ್ಯರ ತಂಡ ಇದೆ. ಇವರು ಜಗತ್ತಿನ ಉನ್ನತ ಕ್ಯಾನ್ಸರ್ ಕೇಂದ್ರಗಳಿಂದ ನೇಮಕಗೊಂಡ ವೈದ್ಯರುಗಳಾಗಿದ್ದು, ಇಲ್ಲಿ ಶಸ್ತ್ರ ಚಿಕಿತ್ಸೆಯಿಂದ ಗುಣವಾಗುವ ಪ್ರಮಾಣ ಹೆಚ್ಚಿದೆ. ಈ ಕಾರಣಕ್ಕೆ ಹಲವು ದೇಶಗಳಿಂದ ಚಿಕಿತ್ಸೆಗೆ ಇಲ್ಲಿಗೆ ಆಗಮಿಸುತ್ತಿದ್ದಾರೆ.

    ಅತ್ಯಾಧುನಿಕ ಸುಧಾರಿತ ಲೇಸರ್ ತಂತ್ರಜ್ಞಾನ ಒಂದೇ ಸ್ಥಳದಲ್ಲಿ ಲಭ್ಯವಿದ್ದು ಪ್ರತಿಯೊಂದು ವಿಧದ ಕ್ಯಾನ್ಸರ್ ಚಿಕಿತ್ಸೆಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ಕಾರಣಕ್ಕೆ ಶಿವರಾಜ್ ಕುಮಾರ್ ಭರ್ತಿ ಒಂದು ತಿಂಗಳುಗಳ ಕಾಲ ಅಲ್ಲೇ ಚಿಕಿತ್ಸೆ ಪಡೆದು ಸ್ವದೇಶಕ್ಕೆ ಮರಳಲಿದ್ದಾರೆ.

  • ಟ್ರಂಪ್‌ ರೆಸಾರ್ಟ್‌ನಲ್ಲಿ ಆಪಲ್‌ ಸಿಇಒ ಟಿಮ್‌ ಕುಕ್‌, ಡಿನ್ನರ್‌ನಲ್ಲಿ ಭಾಗಿ

    ಟ್ರಂಪ್‌ ರೆಸಾರ್ಟ್‌ನಲ್ಲಿ ಆಪಲ್‌ ಸಿಇಒ ಟಿಮ್‌ ಕುಕ್‌, ಡಿನ್ನರ್‌ನಲ್ಲಿ ಭಾಗಿ

    ವಾಷಿಂಗ್ಟನ್‌: ಅಧಿಕೃತವಾಗಿ ಅಮೆರಿಕದ ಅಧ್ಯಕ್ಷ ಪಟ್ಟವನ್ನು ಅಲಂಕರಿಸುವ ಮೊದಲೇ ಡೊನಾಲ್ಡ್‌ ಟ್ರಂಪ್‌ (Donald Trump) ಉದ್ಯಮಿಗಳು, ಕಂಪನಿಗಳ ಮುಖ್ಯಸ್ಥರ ಜೊತೆ ಸಭೆ ನಡೆಸಲು ಆರಂಭಿಸಿದ್ದಾರೆ.

    ಆಪಲ್ ಸಿಇಒ ಟಿಮ್ ಕುಕ್ (Apple CEO Tim Cook) ಫ್ಲೋರಿಡಾದ ಮಾರ್-ಎ-ಲಾಗೊ ರೆಸಾರ್ಟ್‌ನಲ್ಲಿ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಭೋಜನ ಕೂಟದಲ್ಲಿ ಭಾಗಿಯಾಗಿದ್ದಾರೆ.

    ಚುನಾವಣೆಯಲ್ಲಿ ಜಯಗಳಿಸಿದ ನಂತರ ಟ್ರಂಪ್‌ ಅವರ ಜೊತೆಗಿನ ಮೊದಲ ಭೇಟಿ ಇದಾಗಿದೆ. ಮೊದಲ ಅವಧಿಯಲ್ಲಿ ಟ್ರಂಪ್‌ ಉದ್ಯಮಿಗಳ ಜೊತೆ ನೇರ ಸಂಬಂಧ ಹೊಂದಿದ್ದರು. ತನ್ನ ಎರಡನೇ ಅವಧಿಯಲ್ಲೂ ಟ್ರಂಪ್‌ ಉದ್ಯಮಿಗಳ ಜೊತೆ ಉತ್ತಮ ಸಂಬಂಧ ಹೊಂದುವ ಭಾಗವಾಗಿ ಈ ಭೇಟಿ ನಡೆದಿದೆ ಎಂದು ವರದಿಯಾಗಿದೆ.

    ನವೆಂಬರ್‌ನಲ್ಲಿ ಟ್ರಂಪ್‌ ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಅವರನ್ನು ಭೇಟಿಯಾಗಿದ್ದರೆ ಮುಂದಿನ ವಾರ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಟ್ರಂಪ್‌ ಅವರನ್ನು ಭೇಟಿಯಾಗಲಿದ್ದಾರೆ.

    ಮೆಟಾ, ಅಮೆಜಾನ್‌, OpenAI ಸೇರಿದಂತೆ ಹಲವು ಟೆಕ್‌ ಕಂಪನಿಗಳು ಮತ್ತು ನಾಯಕರು ಟ್ರಂಪ್‌ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ 1 ಮಿಲಿಯನ್‌ ಡಾಲರ್‌ ನೀಡುವುದಾಗಿ ಘೋಷಿಸಿವೆ.

  • ಉಗ್ರರು ಕೈವಶ ಮಾಡಿದ ಬೆನ್ನಲ್ಲೇ ಸಿರಿಯಾದ ಮೇಲೆ ಅಮೆರಿಕ ವಾಯು ದಾಳಿ

    ಉಗ್ರರು ಕೈವಶ ಮಾಡಿದ ಬೆನ್ನಲ್ಲೇ ಸಿರಿಯಾದ ಮೇಲೆ ಅಮೆರಿಕ ವಾಯು ದಾಳಿ

    ವಾಷಿಂಗ್ಟನ್‌: ಉಗ್ರರು ಕೈವಶ ಮಾಡಿದ ಬೆನ್ನಲ್ಲೇ ಅಮೆರಿಕ(USA) ಸಿರಿಯಾದ (Syria) ಮೇಲೆ ವೈಮಾನಿಕ ದಾಳಿ (Airstrikes) ನಡೆಸಿದೆ.

    ಸಿರಿಯಾ ಸರ್ವಾಧಿಕಾರಿ ಬಶರ್ ಅಲ್ ಅಸ್ಸಾದ್ (Bashar al-Assad) ಅವರ ಆಡಳಿತ ಕೊನೆಗೊಂಡ ಬೆನ್ನಲ್ಲೇ ಅಮೆರಿಕ ಐಸಿಸ್‌ (ISIS) ಉಗ್ರ ಸಂಘಟನೆಯ ನೆಲೆಯ ಮೇಲೆ ದಾಳಿ ನಡೆಸಿದೆ. ಮಧ್ಯ ಸಿರಿಯಾದಲ್ಲಿರುವ 75ಕ್ಕೂ ಹೆಚ್ಚು ನೆಲೆಗಳ ಮೇಲೆ ಬಾಂಬ್‌ ದಾಳಿ ನಡೆಸಿದೆ.

    ಸರ್ವಾಧಿಕಾರಿ ಅಸ್ಸಾದ್‌ ದೇಶ ತೊರೆದ ನಂತರ ಹಯಾತ್ ತಹ್ರೀರ್ ಅಲ್-ಶಾಮ್ ನೇತೃತ್ವದ ಉಗ್ರರು ಸಿರಿಯಾವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಘಟನೆ ವಶಪಡಿಸಿಕೊಂಡರೂ ಅಲ್ಲಿ ಐಸಿಸ್‌ ಉಗ್ರರು ಇನ್ನೂ ಇದ್ದಾರೆ. ಮುಂದಿನ ದಿನಗಳಲ್ಲಿ ಐಸಿಸ್‌ ಉಗ್ರರು ಚಿಗುರಿ ಮತ್ತೆ ಹೋರಾಟಕ್ಕೆ ಇಳಿಯಬಾರದು ಎಂಬ ಕಾರಣಕ್ಕೆ ಅಮೆರಿಕ ಏರ್‌ಸ್ಟ್ರೈಕ್‌ ನಡೆಸಿದೆ. ಇದನ್ನೂ ಓದಿ: ಕಣ್ಮರೆಯಾಗಿದ್ದ ವಿಮಾನ ಮಾಸ್ಕೋದಲ್ಲಿ ಲ್ಯಾಂಡ್‌ – ಪದಚ್ಯುತ ಸಿರಿಯಾ ಅಧ್ಯಕ್ಷ ಅಸ್ಸಾದ್‌ಗೆ ಪುಟಿನ್‌ ರಾಜಾಶ್ರಯ

    ಪೂರ್ವ ಸಿರಿಯಾದಲ್ಲಿ ಅಮೆರಿಕ ಸುಮಾರು 900 ಪಡೆಗಳನ್ನು ಹೊಂದಿದೆ. ಈ ಸೈನಿಕರು ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸ್‌ನೊಂದಿಗೆ ಕೆಲಸ ಮಾಡುತ್ತಿದ್ದಾರೆ.

    ದಾಳಿಯ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಪ್ರತಿಕ್ರಿಯಿಸಿ, ಸಿರಿಯಾದಲ್ಲಿ ಸೃಷ್ಟಿಯಾಗಿರುವ ನಿರ್ವಾತದ ಲಾಭವನ್ನು ಪಡೆಯಲು ಐಸಿಸ್‌ ಪ್ರಯತ್ನಿಸುತ್ತಿದೆ. ಐಸಿಸ್‌ ಮೇಲೆ ಅಮೆರಿಕ ಕಣ್ಣಿಟ್ಟು ಅವರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿಸಿದರು.

    ಅಸ್ಸಾದ್ ಅಸ್ಸಾಂ ಆಡಳಿತದ ಪತನದಿಂದ ಜನತೆಗೆ ನ್ಯಾಯ ಸಿಕ್ಕಿದೆ. ಇದು ಸಿರಿಯಾದಲ್ಲಿ ದೀರ್ಘಕಾಲದಿಂದ ಬಳಲುತ್ತಿರುವ ಜನರಿಗೆ ಸಿಕ್ಕಿದ ಐತಿಹಾಸಿಕ ಕ್ಷಣ ಎಂದು ಹೇಳಿದರು.

    ಇಸ್ರೇಲ್‌ನಿಂದಲೂ ದಾಳಿ:
    ಇನ್ನೊಂದು ಕಡೆ ಇಸ್ರೇಲ್‌ ಸಿರಿಯಾದ ಮೇಲೆ ವಾಯು ದಾಳಿ ನಡೆಸಿದೆ. ಸೇನೆಯ ಕೇಂದ್ರ ಕಚೇರಿ, ಗುಪ್ತಚರ ಸಂಸ್ಥೆ ಮತ್ತು ಕಸ್ಟಮ್ಸ್‌ನ ಕಚೇರಿಗಳನ್ನು ಒಳಗೊಂಡ ಕಟ್ಟಡದ ಮೇಲೆ ದಾಳಿ ನಡೆದಿದೆ. ಇರಾನ್‌ನ ವಿಜ್ಞಾನಿಗಳು ಈ ಸಂಕೀರ್ಣದಲ್ಲಿ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದ್ದರು ಎಂದು ಇಸ್ರೇಲ್‌ ಈ ಹಿಂದೆ ಹೇಳಿಕೊಂಡಿತ್ತು.

  • ಅಮೇರಿಕ ರಾಯಭಾರ ಕಚೇರಿ| 20ನೇ ನೆಕ್ಸಸ್ ಬ್ಯುಸಿನೆಸ್ ಇನ್‌ಕ್ಯುಬೇಟರ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

    ಅಮೇರಿಕ ರಾಯಭಾರ ಕಚೇರಿ| 20ನೇ ನೆಕ್ಸಸ್ ಬ್ಯುಸಿನೆಸ್ ಇನ್‌ಕ್ಯುಬೇಟರ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

    ಚೆನ್ನೈ: ನವದೆಹಲಿಯಲ್ಲಿನ ಯು.ಎಸ್. ರಾಯಭಾರ (US Embassy) ಕಚೇರಿಯು ಅಲ್ಲಿನ ಅಮೇರಿಕನ್ ಸೆಂಟರ್‌ನಲ್ಲಿ ಉದ್ಯಮಿಗಳ ಮಾರ್ಗದರ್ಶನಕ್ಕಾಗಿ ಪ್ರತಿಷ್ಠಿತ ನೆಕ್ಸಸ್ ಕಾರ್ಯಕ್ರಮ ಆಯೋಜಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಒಂಭತ್ತು ವಾರಗಳ ಈ ತರಬೇತಿಯು ಮುಂದಿನ ವರ್ಷ ಫೆಬ್ರವರಿ 2 ರಿಂದ ಆರಂಭವಾಗಲಿದ್ದು, ನೆಕ್ಸಸ್‌ ಸರಣಿಯಲ್ಲಿ ಇದು 20ನೇ ಕಾರ್ಯಕ್ರಮವಾಗಿದೆ.

    ನೆಕ್ಸಸ್‌ ಕಾರ್ಯಕ್ರಮದಲ್ಲಿ ಭಾರತದ (India) 15 ನವೋದ್ಯಮಗಳಿಗೆ ಭಾರತೀಯ ಮತ್ತು ಅಮೇರಿಕನ್‌ ತಜ್ಞರಿಂದ ತರಬೇತಿ ಪಡೆಯುವ ಅವಕಾಶ ದೊರೆಯಲಿದೆ. ಈಗಿನ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸಲು, ಮಾರುಕಟ್ಟೆಯ ನಾಡಿಮಿಡಿತ ಅರಿಯಲು ಮತ್ತು ಗುರಿ ನಿಗದಿ ಪಡಿಸಿಕೊಳ್ಳಲು ಈ ತಜ್ಞರು ನೆರವಾಗಲಿದ್ದಾರೆ. ನವೋದ್ಯಮಗಳ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವ ಮತ್ತು ಉದ್ಯಮಿಗಳ ಮಾನಸಿಕ ಆರೋಗ್ಯದ ಮಹತ್ವದ ಕುರಿತು ಚರ್ಚಿಸಲಾಗುತ್ತದೆ.

    ಆರಂಭಿಕ ಒಂಭತ್ತು ವಾರಗಳ ತರಬೇತಿ ಕಾರ್ಯಕ್ರಮದ ನಂತರ ನಾಲ್ಕು ಕಂಪನಿಗಳಿಗೆ ಹೆಚ್ಚಿನ ಬೆಂಬಲಕ್ಕಾಗಿ ನೆಕ್ಸಸ್ ನಲ್ಲಿ ಉಳಿಯಲು ಆಹ್ವಾನಿಸಲಾಗುತ್ತದೆ. ಈ ಕಂಪನಿಗಳಿಗೆ ಹೆಚ್ಚುವರಿ ಎಂಟು ತಿಂಗಳವರೆಗೆ ಇನ್ಕ್ಯುಬೇಟರ್ ಸೌಲಭ್ಯಗಳು ಮತ್ತು ನೆಟ್‌ವರ್ಕ್‌ ಸೌಲಭ್ಯವನ್ನು ನೀಡುವುದಕ್ಕಾಗಿ ಪೂರ್ಣ ಪ್ರಮಾಣದಲ್ಲಿ ಅವಕಾಶವನ್ನು ನೀಡಲಾಗುತ್ತದೆ. ಈ ಸಮಯದಲ್ಲಿ, ನೆಕ್ಸಸ್ ತಜ್ಞರ ತಂಡವು ಅವರ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು, ಅವರ ಗ್ರಾಹಕ ಮತ್ತು ಆದಾಯದ ಮೂಲಗಳನ್ನು ಹೆಚ್ಚಿಸಲು ಹಾಗೂ ಸೂಕ್ತವಾದಲ್ಲಿ ಅವರ ಕಾರ್ಯಾಚರಣೆಗಳ ಮೌಲ್ಯಮಾಪನಕ್ಕಾಗಿ ಹಣವನ್ನು ಪಡೆಯಲು ಸಹಾಯ ಮಾಡುವ ಮೂಲಕ ಅವರ ಕಂಪನಿಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅವರೊಂದಿಗೆ ಕೆಲಸ ಮಾಡುತ್ತದೆ.  ಇದನ್ನೂ ಓದಿ: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನಿಯಮ ಸಡಿಲ – ಶೇ.25ರಷ್ಟು ವಿದ್ಯಾರ್ಥಿಗಳಿದ್ದರೂ ಮಾನ್ಯತೆ!

    ಈ ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳು ಜನವರಿ 5, 2025 ರೊಳಗಾಗಿ www.startupnexus.in  ಅರ್ಜಿ ಸಲ್ಲಿಸಬೇಕು. ಆಯ್ಕೆಯಾದವರಿಗೆ ಜನವರಿ 17, 2025 ರೊಳಗೆ ಸೂಚಿಸಲಾಗುವುದು.

    ನೆಕ್ಸಸ್ʼನ 20 ನೇ ಕಾರ್ಯಕ್ರಮದಲ್ಲಿ ತರಬೇತಿ ನೀಡಲು, ಯು.ಎಸ್. ರಾಯಭಾರ ಕಚೇರಿಯು ಕನೆಕ್ಟಿಕಟ್ ವಿಶ್ವವಿದ್ಯಾಲಯದ (ಯುಕಾನ್) ಜಾಗತಿಕ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆ (ಜಿಟಿಡಿಐ) ನೊಂದಿಗೆ ಪಾಲುದಾರಿಕೆ ಹೊಂದಿದೆ. ನವದೆಹಲಿಯಲ್ಲಿರುವ ಯು.ಎಸ್. ರಾಯಭಾರ ಕಚೇರಿ ಮತ್ತು ಯು.ಎಸ್. ಡಿಪಾರ್ಟ್‌ಮೆಂಟ್‌ ಆಫ್‌ ಸ್ಟೇಟ್‌ ಈ ಕಾರ್ಯಕ್ರಮಕ್ಕೆ ಅನುದಾನ ನೀಡಿವೆ. ಅಮೇರಿಕ ಮತ್ತು ಭಾರತದ ನಡುವಿನ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧಗಳನ್ನು ಉತ್ತೇಜಿಸುವ ಸಂದರ್ಭದಲ್ಲಿ ಸುಸ್ಥಿರ ಸಮುದಾಯ ಅಭಿವೃದ್ಧಿಯನ್ನು ಸಕ್ರಿಯಗೊಳಿಸುವುದು ಪಾಲುದಾರಿಕೆಯ ಗುರಿಯಾಗಿದೆ.

    2017 ರಲ್ಲಿ ಮೊದಲ ಒಕ್ಕೂಟವನ್ನು ಪ್ರಾರಂಭಿಸಿದಾಗಿನಿಂದ, 230 ಭಾರತೀಯ ವಾಣಿಜ್ಯೋದ್ಯಮಿಗಳು ಮತ್ತು ಕಳೆದ 19 ನೆಕ್ಸಸ್ ಕಾರ್ಯಕ್ರಮಗಳು ಒಟ್ಟಾರೆಯಾಗಿ 90 ಮಿಲಿಯನ್ ಡಾಲರ್‌ ಬಾಹ್ಯ ಹೂಡಿಕೆ ಸಂಗ್ರಹಿಸಿವೆ.