ಲಿವರ್ ಮೋರ್‌ನ ಶಿವವಿಷ್ಣು ದೇವಾಲಯ ಅಮೆರಿಕದ ಬೃಹತ್ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದ ನಿರ್ಮಾಣ ಕಾರ್ಯ 1985ರಲ್ಲಿ ಆರಂಭವಾಗಿ 1992ರಲ್ಲಿ ಪೂರ್ಣಗೊಂಡಿತು.
ದೇವಾಲಯದ ವಾಸ್ತುನಿರ್ಮಾಣದಲ್ಲಿ ಉತ್ತರ ಮತ್ತು ದಕ್ಷಿಣ ಭಾರತೀಯ ವಾಸ್ತುಶೈಲಿಗಳು ಸುಂದರವಾಗಿ ಸೇರಿಕೊಂಡಿವೆ. ಗರ್ಭಗುಡಿಯಲ್ಲಿ ಶಿವಲಿಂಗ ಪ್ರತಿಷ್ಠಾಪನೆಯಾಗಿದೆ. ದೇವಾಲಯದ ಅಂಗಣದ ಸುತ್ತ ಗಣೇಶ, ಲಕ್ಷ್ಮೀದೇವಿ, ದುರ್ಗೆ, ಅಯ್ಯಪ್ಪ ಸ್ವಾಮಿ ಗುಡಿಗಳಿವೆ. ಇಲ್ಲಿಗೆ ಹೆಚ್ಚಿನ ವಿಗ್ರಹಗಳನ್ನು 1985ರಲ್ಲಿ ತಮಿಳುನಾಡು ಸರ್ಕಾರ ಕಾಣಿಕೆಯ ರೂಪದಲ್ಲಿ ನೀಡಿತ್ತು. ಅಸಂಖ್ಯ ಭಕ್ತರನ್ನು ಆಕರ್ಷಿಸುವ ಈ ದೇವಾಲಯದಲ್ಲಿ ಎಲ್ಲ ಸಮುದಾಯಗಳ ಜನರಿಗೂ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಇದೆ. ಪ್ರತಿ ವರ್ಷವೂ ಇಲ್ಲಿ ಶಿವರಾತ್ರಿ ಹಬ್ಬದ ದಿನ ವಿಶೇಷ ಪೂಜಾ ಕೈಂಕರ್ಯ, ವಿವಿಧ ಅಭಿಷೇಕಗಳನ್ನು ನೆರವೇರಿಸಲಾಗುತ್ತದೆ.
ಅಮೆರಿಕದಲ್ಲಿ ಇನ್ನೂ ಹಲವು ಶಿವದೇವಾಲಯಗಳಿವೆ. ಡೆನ್ವರ್ (ಕೊಲರಾಡೋ)ನ ಶಿವ ದೇವಾಲಯ ಹದಿನೈದು ವರ್ಷಗಳಷ್ಟು ಹಳೆಯದು. ನಾರ್ತ್ ಕೆರೋಲಿನಾದ ಮೌಂಟ್ ಸೋಮ ಎಂಬ ಪರ್ವತದಲ್ಲಿ ಶ್ರೀಸೋಮೇಶ್ವರ ದೇವಾಲಯ ಇದೆ. ಇದನ್ನು ʻಪಶ್ಚಿಮದ ಕೈಲಾಸ’ ಎಂದು ಕರೆಯಲಾಗುತ್ತದೆ. ವಾಷಿಂಗ್ಟನ್ ಡಿಸಿ ಮತ್ತು ದಕ್ಷಿಣ ಫ್ಲೋರಿಡಾದಲ್ಲಿ ಶಿವ-ವಿಷ್ಣು ದೇವಾಲಯಗಳಿವೆ.
ವಾಷಿಂಗ್ಟನ್: ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ (USAID) ಮೂಲಕ ಭಾರತದ ಚುನಾವಣೆ (Indian Election) ಮೇಲೆ ಪ್ರಭಾವ ಬೀರಲು ಹಣ ಪಡೆಯಲಾಗಿದೆ ಎಂಬ ವಿವಾದ ಕೋಲಾಹಲ ಎಬ್ಬಿಸಿದ ಹೊತ್ತಿನಲ್ಲೇ ಟ್ರಂಪ್ (Donald Trump) ಸರ್ಕಾರ ಮಹತ್ವದ ಹೆಜ್ಜೆಯನ್ನಿರಿಸಿದೆ. ಯುಎಸ್‌ಏಡ್‌ನ 1,600ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ಘೋಷಣೆ ಮಾಡಿದೆ.
ಈ ಸಂಬಂಧ ಕೆಲವರಿಗೆ ಇ-ಮೇಲ್‌ಗಳನ್ನು ಕಳುಹಿಸಲಾಗಿದೆ. ಈ ಸೂಚನೆ ಪಡೆದುಕೊಂಡ ಎಲ್ಲರನ್ನು ಏಪ್ರಿಲ್ 24ರಿಂದ ಫೆಡರಲ್ ಸೇವೆಯಿಂದ ಕೈಬಿಡಲಾಗುವುದು ಎಂದು ಉಲ್ಲೇಖಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ವಾಷಿಂಗ್ಟನ್: ಸದ್ಯ ಭಾರತದ ಚುನಾವಣೆ ಮೇಲೆ ಪ್ರಭಾವ ಬೀರಲು ಹಿಂದಿನ ಜೋ ಬೈಡನ್ ಸರ್ಕಾರವು ಯುಎಸ್‌ಏಡ್ ನೆಪದಲ್ಲಿ 180 ಕೋಟಿ ರೂ. ನೀಡಿತ್ತು ಎಂಬ ಆರೋಪ ಭಾರೀ ಕೋಲಾಹಲ ಎಬ್ಬಿಸಿದೆ. ಈ ನಡುವೆ ಭಾರತ ಮತ್ತು ಚೀನಾದಂತಹ ದೇಶಗಳ ಮೇಲೆ ಅಮೆರಿಕ ಸುಂಕ (Tariffs) ವಿಧಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಪುನರುಚ್ಚರಿಸಿದ್ದಾರೆ.
ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಟ್ರಂಪ್, ಶೀಘ್ರದಲ್ಲೇ ಸುಂಕ ವಿಧಿಸುತ್ತೇವೆ. ಅವರೂ ನಮಗೆ ಸುಂಕ ವಿಧಿಸುತ್ತಾರೆ, ನಾವು ವಿಧಿಸುತ್ತೇವೆ. ಹಾಗಾಗಿ ಇದೊಂದು ಸರಣ ಕ್ರಮ ಅಷ್ಟೇ. ಈ ಬಗ್ಗೆ ಯಾರೂ ನನ್ನೊಂದಿಗೆ ವಾದ ಮಾಡಲು ಸಾಧ್ಯವಿಲ್ಲ, ನಾವಿದನ್ನು ಮಾಡೇ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಬೋನಿ ದಾಖಲೆ ಮುರಿಯಲು ಸಜ್ಜಾದ ಸ್ನೇಹಿತೆ – 1,000 ಪುರುಷರೊಟ್ಟಿಗೆ ಸೆಕ್ಸ್ ಮಾಡಲು ಅನ್ನಿ ನೈಟ್ ತಯಾರಿ
ನಾನು ಭಾರತದ ಪ್ರಧಾನಿ ಮೋದಿ ಅವರಿಗೆ ಹೇಳಿದೆ.. ನೀವು ಏನೇ ಶುಲ್ಕ ವಿಧಿಸಿದರೂ ಪ್ರತಿಯಾಗಿ ನಾವೂ ಸುಂಕ ವಿಧಿಸುತ್ತೇವೆ ಎಂದು ಹೇಳಿದೆ. ಅದ್ರೆ ಅವರು ನನ್ನ ಸಲಹೆಯನ್ನು ಒಪ್ಪಲಿಲ್ಲ. ಇದು ನನಗೆ ಇಷ್ಟವಿಲ್ಲ ಅಂತ ಹೇಳಿದರು. ಸದ್ಯ ನಾವು ಭಾರತವೊಂದಕ್ಕೆ ಸುಂಕ ವಿಧಿಸುತ್ತಿಲ್ಲ, ಚೀನಾದಂತೆ ಅನೇಕ ದೇಶಗಳಿಗೆ ಸುಂಕ ವಿಧಿಸುತ್ತೇವೆ. ಈ ಬಗ್ಗೆ ಯಾರೂ ನನ್ನೊಂದಿಗೆ ವಾದ ಮಂಡಿಸೋದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಏಪ್ರಿಲ್ ಒಳಗೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಟೆಸ್ಲಾ ಪ್ಲ್ಯಾನ್ – ಆರಂಭಿಕ ಬೆಲೆ ಎಷ್ಟು?
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಕಾಶ್ ಪಟೇಲ್ (Kash Patel) ಅವರಿಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI)ನ 9ನೇ ನಿರ್ದೇಶಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಶೇಷವೆಂದರೆ ಅಮೆರಿಕದಲ್ಲೂ ಹಿಂದೂ ಸಂಸ್ಕೃತಿ ಮರೆಯದ ಕಾಶ್ ಪಟೇಲ್ ಭಗವದ್ಗೀತೆ (Bhagavad Gita) ಮೇಲೆ ಕೈಯಿಟ್ಟು ಪ್ರಮಾಣ ಮಾಡಿದ್ದಾರೆ.
????????President Trump gives praise to Kash Patel saying he will go down as the BEST FBI Director:
“One of the reasons I loved Kash and wanted to put him in was the respect the agents had for him. I think he’ll go down as the best ever at that position.”
ಪಟೇಲ್ ಪ್ರಮಾಣ ವಚನ ಸ್ವೀಕರಿಸುವಾಗ ಅವರ ಗೆಳತಿ ಮತ್ತು ಕುಟುಂಬ ಸದಸ್ಯರು ಅವರ ಪಕ್ಕದಲ್ಲಿ ನಿಂತಿದ್ದರು ಮತ್ತು ಕುಟುಂಬ ಇತರ ಸದಸ್ಯರು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಇದೀಗ ಎಫ್‌ಬಿಐನ ನಿರ್ಗಮಿತ ನಿರ್ದೇಶಕ ಕ್ರಿಸ್ಟೋಫರ್ ವ್ರೇ ಅವರ ನಂತರ ಎಫ್‌ಬಿಐನ 9ನೇ ನಿರ್ದೇಶಕರಾಗಿ ಕಾಶ್ ಪಟೇಲ್ ಮುಂದುವರಿಯಲಿದ್ದಾರೆ.
ಟ್ರಂಪ್ ಶ್ಲಾಘನೆ:
ಇನ್ನೂ ಕಾಶ್ ಪಟೇಲ್ ಅವರ ನೇಮಕಾತಿಯನ್ನು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ. ನಾನು ಕಾಶ್ ಪಟೇಲ್‌ರನ್ನ ಗೌರವಿಸುತ್ತೇನೆ. ಎಫ್‌ಬಿಐನ ಸಿಬ್ಬಂದಿ ಅವರ ಮೇಲೆ ಗೌರವ ಹೊಂದಿದ್ದರಿಂದಲೇ, ಹಾಗಾಗಿಯೇ ಅವರ ಆಯ್ಕೆಯನ್ನು ಸಮ್ಮತಿಸಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತುಂಬಾ ಅನ್ಯಾಯ: ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಟ್ರಂಪ್ ಅಪಸ್ವರ
ಪ್ರಮಾಣ ಸ್ವೀಕಾರಕ್ಕೂ ಮುನ್ನವೇ ಬಿಗ್ ವಾರ್ನಿಂಗ್:
ಎಫ್‌ಬಿಐ ನಿರ್ದೇಶಕರಾಗಿ ನೇಮಕ ಮಾಡಿ ಟ್ರಂಪ್ ಆದೇಶದ ಬೆನ್ನಲ್ಲೇ ಕಾಶ್ ಪಟೇಲ್ ತಮ್ಮ ಎಕ್ಸ್ ಖಾತೆಯಲ್ಲಿ ಎಚ್ಚರಿಕೆಯೊಂದನ್ನ ನೀಡಿದ್ದರು. ಎಫ್‌ಬಿಐ ಒಂದು ಪರಂಪರೆಯನ್ನು ಹೊಂದಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ನಮ್ಮ ನ್ಯಾಯ ವ್ಯವಸ್ಥೆಯು ಸಾರ್ವಜನಿಕ ನಂಬಿಕೆಯನ್ನು ಕಳೆದುಕೊಂಡಿದೆ, ಈ ಬೆಳವಣಿಗೆ ಇಂದೇ ಕೊನೆಗೊಳ್ಳಬೇಕು. ಅಮೆರಿಕನ್ನರು (American people) ಹೆಮ್ಮೆ ಪಡುವಂತೆ ಎಫ್‌ಬಿಐ ಅನ್ನು ಮರುನಿರ್ಮಾಣ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸಂಕಲ್ಪ ಮಾಡೋಣ. ಅಲ್ಲದೇ ಇದನ್ನು ನಮ್ಮ ಎಚ್ಚರಿಕೆ ಎಂದೇ ಭಾವಿಸಿ ಅಮೆರಿಕನ್ನರಿಗೆ ಹಾನಿ ಮಾಡಲು ಬಯಸುವವರು ಯಾವುದೇ ಮೂಲೆಯಲ್ಲಿದ್ದರೂ ಹುಡುಕಿ ಬೇಟೆಯಾಡುತ್ತೇವೆ ಎಂದು ಎಚ್ಚರಿಸಿದ್ದರು.
ಕಾಶ್ ಪಟೇಲ್ ಯಾರು?
ಕಾಶ್ ಪಟೇಲ್ ತಂದೆ-ತಾಯಿ ಗುಜರಾತ್ ಮೂಲದವರು. ಪಟೇಲ್ ಪೋಷಕರು ಅಮೆರಿಕದಲ್ಲಿ ನೆಲೆಸುವುದಕ್ಕಿಂತ ಮೊದಲು ಉಗಾಂಡದಲ್ಲಿದ್ದರು. ಅಲ್ಲಿಂದ ಕೆನಡಾಗೆ ಬಂದರು. ಈ ವೇಳೆ ಕಾಶ್ ಪಟೇಲ್ ತಂದೆಗೆ ಅಮೆರಿಕ ವಿಮಾನಯಾನ ಸಂಸ್ಥೆಯಲ್ಲಿ ಹಣಕಾಸು ಅಧಿಕಾರಿ ಕೆಲಸ ಸಿಕ್ಕಿದ್ದರಿಂದ ಅವರು ಕುಟುಂಬ ಸಮೇತರಾಗಿ ಅಮೆರಿಕಾಗೆ ಬಂದು ನೆಲೆಸಿದರು.
ನ್ಯೂಯಾರ್ಕ್‌ನ ಗಾರ್ಡನ್ ಸಿಟಿಯಲ್ಲಿ 1980ರಲ್ಲಿ ಕಾಶ್ ಪಟೇಲ್ ಜನಿಸಿದರು. ಇಲ್ಲಿಯೇ ಅವರು ಕಾಲೇಜು ಶಿಕ್ಷಣ ಪಡೆದರು. ನಂತರ ರಿಚ್ಚಂಡ್ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಕ್ರಿಮಿನಲ್ ಜಸ್ಟೀಸ್ ನಲ್ಲಿ ಪದವಿ ಪಡೆದರು. ಸಾರ್ವಜನಿಕ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಅವರು ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳಲ್ಲಿ ಕೆಲಸ ಮಾಡಿದರು. ಇದನ್ನೂ ಓದಿ: ಬೋನಿ ದಾಖಲೆ ಮುರಿಯಲು ಸಜ್ಜಾದ ಸ್ನೇಹಿತೆ – 1,000 ಪುರುಷರೊಟ್ಟಿಗೆ ಸೆಕ್ಸ್ ಮಾಡಲು ಅನ್ನಿ ನೈಟ್ ತಯಾರಿ
ಕಾಶ್ ಪಟೇಲ್ ಒಬ್ಬ ಪ್ರತಿಭಾವಂತ ವಕೀಲ, ತನಿಖಾಧಿಕಾರಿ ಹಾಗೂ ಅಮೆರಿಕದ ಹೋರಾಟಗಾರ. ಭ್ರಷ್ಟಾಚಾರವನ್ನು ಬಯಲಿಗೆಳೆಯಲು, ನ್ಯಾಯ ರಕ್ಷಿಸಲು ಹಾಗೂ ಅಮೆರಿಕದ ಜನರ ಪರವಾಗಿ ತಮ್ಮ ಜೀವನ ಸವೆಸಿ ಸುದೀರ್ಘ ಹೋರಾಟ ನಡೆಸಿದ್ದಾರೆ. ಪಟೇಲ್ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ (ಎನ್‌ಎಸ್‌ಸಿ) ಭಯೋತ್ಪಾದನಾ ನಿಗ್ರಹದ ಹಿರಿಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಹಲವಾರ ಉಗ್ರಗಾಮಿ ಸಂಘಟನೆಗಳ ಭಯೋತ್ಪಾದಕರ ಹತ್ಯೆ ಸೇರಿದಂತೆ ಅಮೆರಿಕದ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದಿದ್ದಾರೆ.
ವಾಷಿಂಗ್ಟನ್: ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯುರೋ ಆಫ್ ಇನ್‌ವೆಸ್ಟಿಗೇಷನ್ (FBI) ನಿರ್ದೇಶಕರಾಗಿ ಭಾರತ ಮೂಲದ ಕಾಶ್ ಪಟೇಲ್ ನೇಮಕಗೊಂಡಿದ್ದಾರೆ. ಎಫ್‌ಬಿಐನ 9ನೇ ನಿರ್ದೇಶಕರಾಗಿ ಕಾಶ್ ಪಟೇಲ್ ಅವರನ್ನು ನೇಮಕಗೊಳಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಮಾಹಿತಿಯನ್ನು ಶ್ವೇತಭವನದ ಅಧಿಕಾರಿ ಡಾನ್ ಸ್ಕ್ಯಾವಿನೋ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Moments ago in the Oval Office.
Congratulations to the Ninth Director of the Federal Bureau of Investigation, Kash Patel.
President Trump has officially signed the commission…
ಆದೇಶದ ಬೆನ್ನಲ್ಲೇ ಭಾರತೀಯ ಮೂಲದ (Indian-origin) ಕಾಶ್ ಪಟೇಲ್, ಟ್ರಂಪ್ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ಎಫ್‌ಬಿಐನ 9ನೇ ನಿರ್ದೇಶಕನಾಗಿದ್ದಕ್ಕೆ ನನಗೆ ಗೌರವವಿದೆ. ನಿಮ್ಮ ಅಚಲವಾದ ವಿಶ್ವಾಸ ಮತ್ತು ಬೆಂಬಲಕ್ಕಾಗಿ ಟ್ರಂಪ್ ಹಾಗೂ ಅಟಾರ್ನಿ ಜನರಲ್ ಬೋಂಡಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತುಂಬಾ ಅನ್ಯಾಯ: ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಟ್ರಂಪ್ ಅಪಸ್ವರ
I am honored to be confirmed as the ninth Director of the Federal Bureau of Investigation.
Thank you to President Trump and Attorney General Bondi for your unwavering confidence and support.
The FBI has a storied legacy—from the “G-Men” to safeguarding our nation in the wake of…
ಮುಂದುವರಿದು.. ಎಫ್‌ಬಿಐ ಒಂದು ಪರಂಪರೆಯನ್ನು ಹೊಂದಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ನಮ್ಮ ನ್ಯಾಯ ವ್ಯವಸ್ಥೆಯು ಸಾರ್ವಜನಿಕ ನಂಬಿಕೆಯನ್ನು ಕಳೆದುಕೊಂಡಿದೆ, ಈ ಬೆಳವಣಿಗೆ ಇಂದೇ ಕೊನೆಗೊಳ್ಳಬೇಕು. ಅಮೆರಿಕನ್ನರು (American people) ಹೆಮ್ಮೆ ಪಡುವಂತೆ ಎಫ್‌ಬಿಐ ಅನ್ನು ಮರುನಿರ್ಮಾಣ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸಂಕಲ್ಪ ಮಾಡೋಣ. ಅಲ್ಲದೇ ಇದನ್ನು ನಮ್ಮ ಎಚ್ಚರಿಕೆ ಎಂದೇ ಭಾವಿಸಿ ಅಮೆರಿಕನ್ನರಿಗೆ ಹಾನಿ ಮಾಡಲು ಬಯಸುವವರು ಯಾವುದೇ ಮೂಲೆಯಲ್ಲಿದ್ದರೂ ಹುಡುಕಿ ಬೇಟೆಯಾಡುತ್ತೇವೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಕಾಶ್ ಪಟೇಲ್ ಯಾರು?
ಕಾಶ್ ಪಟೇಲ್ ತಂದೆ-ತಾಯಿ ಗುಜರಾತ್ ಮೂಲದವರು. ಪಟೇಲ್ ಪೋಷಕರು ಅಮೆರಿಕದಲ್ಲಿ ನೆಲೆಸುವುದಕ್ಕಿಂತ ಮೊದಲು ಉಗಾಂಡದಲ್ಲಿದ್ದರು. ಅಲ್ಲಿಂದ ಕೆನಡಾಗೆ ಬಂದರು. ಈ ವೇಳೆ ಕಾಶ್ ಪಟೇಲ್ ತಂದೆಗೆ ಅಮೆರಿಕ ವಿಮಾನಯಾನ ಸಂಸ್ಥೆಯಲ್ಲಿ ಹಣಕಾಸು ಅಧಿಕಾರಿ ಕೆಲಸ ಸಿಕ್ಕಿದ್ದರಿಂದ ಅವರು ಕುಟುಂಬ ಸಮೇತರಾಗಿ ಅಮೆರಿಕಾಗೆ ಬಂದು ನೆಲೆಸಿದರು. ಇದನ್ನೂ ಓದಿ: ಎಫ್‌ಬಿಐ ನಿರ್ದೇಶಕನಾಗಿ ಭಾರತೀಯ ಮೂಲದ ಕಶ್ಯಪ್ ನಾಮನಿರ್ದೇಶನ
ನ್ಯೂಯಾರ್ಕ್‌ನ ಗಾರ್ಡನ್ ಸಿಟಿಯಲ್ಲಿ 1980ರಲ್ಲಿ ಕಾಶ್ ಪಟೇಲ್ ಜನಿಸಿದರು. ಇಲ್ಲಿಯೇ ಅವರು ಕಾಲೇಜು ಶಿಕ್ಷಣ ಪಡೆದರು. ನಂತರ ರಿಚ್ಚಂಡ್ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಕ್ರಿಮಿನಲ್ ಜಸ್ಟೀಸ್ ನಲ್ಲಿ ಪದವಿ ಪಡೆದರು. ಸಾರ್ವಜನಿಕ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಅವರು ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳಲ್ಲಿ ಕೆಲಸ ಮಾಡಿದರು.
ಕಾಶ್ ಪಟೇಲ್ ಒಬ್ಬ ಪ್ರತಿಭಾವಂತ ವಕೀಲ, ತನಿಖಾಧಿಕಾರಿ ಹಾಗೂ ಅಮೆರಿಕದ ಹೋರಾಟಗಾರ. ಭ್ರಷ್ಟಾಚಾರವನ್ನು ಬಯಲಿಗೆಳೆಯಲು, ನ್ಯಾಯ ರಕ್ಷಿಸಲು ಹಾಗೂ ಅಮೆರಿಕದ ಜನರ ಪರವಾಗಿ ತಮ್ಮ ಜೀವನ ಸವೆಸಿ ಸುದೀರ್ಘ ಹೋರಾಟ ನಡೆಸಿದ್ದಾರೆ. ಪಟೇಲ್ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ (ಎನ್‌ಎಸ್‌ಸಿ) ಭಯೋತ್ಪಾದನಾ ನಿಗ್ರಹದ ಹಿರಿಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಹಲವಾರ ಉಗ್ರಗಾಮಿ ಸಂಘಟನೆಗಳ ಭಯೋತ್ಪಾದಕರ ಹತ್ಯೆ ಸೇರಿದಂತೆ ಅಮೆರಿಕದ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದಿದ್ದಾರೆ. ಇದನ್ನೂ ಓದಿ: ಪನಾಮದಲ್ಲಿ ಬಂಧಿಯಾಗಿರುವ ಭಾರತೀಯ ವಲಸಿಗರು ಸೇಫ್ – ರಾಯಭಾರ ಕಚೇರಿ ಮಾಹಿತಿ
ಇದಕ್ಕೂ ಮುನ್ನ ಫ್ಲೋರಿಡಾದಲ್ಲಿ ವಕೀಲರಾಗಿ ಕೆಲಸ ಮಾಡಿದ್ದರು, ರಾಜ್ಯ ಮತ್ತು ಫೆಡರಲ್ ನ್ಯಾಯಾಲಯಗಳಲ್ಲಿ ಗ್ರಾಹಕರನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿದರು. ನಂತರ ನ್ಯಾಯಾಂಗ ಇಲಾಖೆಯ ಪ್ರಾಸಿಕ್ಯೂಟರ್ ಆಗಿ ಸೇರಿಕೊಂಡರು. ಪೂರ್ವ ಆಫ್ರಿಕಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ನಡೆಯುತ್ತಿದ್ದ ಅಂತರರಾಷ್ಟ್ರೀಯ ಭಯೋತ್ಪಾದನೆ ಪ್ರಕರಣಗಳನ್ನು ನಿರ್ವಹಿಸಿದ್ದರು.
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸರ್ಕಾರದ ಅಕ್ರಮ ವಲಸೆ ವಿರುದ್ಧದ ಕಾರ್ಯಾಚರಣೆಯಲ್ಲಿ ಅಮೆರಿಕದಿಂದ ಗಡೀಪಾರು ಮಾಡಲಾದ ಭಾರತೀಯರೂ ಸೇರಿದಂತೆ ಸುಮಾರು 300 ಅಕ್ರಮ ವಲಸಿಗರ ಗುಂಪನ್ನು ಪನಾಮದ (Panama) ಡೇರಿಯನ್ ಅರಣ್ಯ ಪ್ರದೇಶದ ಹೋಟೆಲ್‌ನಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಈ ಬೆನ್ನಲ್ಲೇ ಭಾರತ ರಾಯಭಾರ ಕಚೇರಿ ಪನಾಮ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದೆ.
Panamanian authorities have informed us that a group of Indians have reached Panama from US
They are safe and secure at a
Hotel with all essential facilities
— India in Panama, Nicaragua, Costa Rica (@IndiainPanama) February 20, 2025
ಹೌದು. ಮುಖ್ಯವಾಗಿ ಭಾರತ (India), ನೇಪಾಳ, ಶ್ರೀಲಂಕಾ, ಇರಾನ್, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಚೀನಾ ಸೇರಿದಂತೆ ಏಷ್ಯಾದ ದೇಶಗಳಿಂದ ಬಂದ ವಲಸಿಗರು ಅಲ್ಲಿ ಬಂಧಿಯಾಗಿದ್ದಾರೆ. ಈ ಕುರಿತ ಚಿತ್ರಗಳು ಜಾಲತಾಣದಲ್ಲಿ ಸದ್ದು ಮಾಡಿದ ಬೆನ್ನಲ್ಲೇ ಭಾರತದ ರಾಯಭಾರ ಕಚೇರಿ (Indian Embassy) ಪನಾಮದಲ್ಲಿನ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಸಾಧಿಸಿದೆ. ಈ ಕುರಿತ ಮಾಹಿತಿಯನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲೂ ಹಂಚಿಕೊಂಡಿದೆ.
ಭಾರತೀಯರ ಗುಂಪು ಅಮೆರಿಕದಿಂದ ಪನಾಮ ತಲುಪಿದೆ ಅಂತ ಪನಾಮ ಅಧಿಕಾರಿಗಳು ನಮಗೆ ಮಾಹಿತಿ ನೀಡಿದ್ದಾರೆ. ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹೋಟೆಲ್‌ನಲ್ಲಿ ಸುರಕ್ಷಿತವಾಗಿದ್ದಾರೆ. ಅವರ ಯೋಗಕ್ಷೇಮ ಖಚಿತಪಡಿಸಿಕೊಳ್ಳಲು ನಾವು ಅಲ್ಲಿನ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಪನಾಮ ರಾಯಭಾರ ಕಚೇರಿ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಅಕ್ರಮ ವಲಸಿಗರ ಕೈಗೆ, ಕಾಲಿಗೆ ಸರಪಳಿ ಹಾಕಿ ದೇಶದಿಂದ ಹೊರದಬ್ಬುತ್ತಿದೆ ಅಮೆರಿಕ -ವಿಡಿಯೋ ನೋಡಿ
ಏನಾಗಿತ್ತು?
ಅಕ್ರಮ ವಲಸಿಗರ ವಿರುದ್ಧದ ಕಾರ್ಯಾಚರಣೆಯಲ್ಲಿ ಅಮೆರಿಕದಿಂದ ಗಡೀಪಾರು ಮಾಡಲಾದ ಭಾರತೀಯರು ಸೇರಿದಂತೆ ಸುಮಾರು 300 ಅಕ್ರಮ ವಲಸಿಗರ ಗುಂಪನ್ನು ಪನಾಮದ ಡೇರಿಯನ್ ಅರಣ್ಯ ಪ್ರದೇಶದ ಹೋಟೆಲ್‌ನಲ್ಲಿ ಬಂಧಿಸಲಾಗಿದೆ. ಮುಖ್ಯವಾಗಿ ಭಾರತ, ನೇಪಾಳ, ಶ್ರೀಲಂಕಾ, ಇರಾನ್, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಚೀನಾ ಸೇರಿದಂತೆ ಏಷ್ಯಾದ ದೇಶಗಳಿಂದ ಬಂದ ವಲಸಿಗರು ಅಲ್ಲಿ ಬಂಧಿಯಾಗಿದ್ದಾರೆ ಎಂದು ವರದಿಯಾಗಿತ್ತು. ಇದನ್ನೂ ಓದಿ: ಏಪ್ರಿಲ್ ಒಳಗೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಟೆಸ್ಲಾ ಪ್ಲ್ಯಾನ್ – ಆರಂಭಿಕ ಬೆಲೆ ಎಷ್ಟು?
ವಲಸಿಗರನ್ನು ಬಂಧಿಸಿಟ್ಟಿರುವ ಹೋಟೆಲ್‌ನಿಂದ ಹೊರಹೋಗಲು ಅನುಮತಿಸುತ್ತಿಲ್ಲ. ಆದರೆ, ಪನಾಮ ಸರ್ಕಾರವು ಅಂತಾರಾಷ್ಟ್ರೀಯ ಅಧಿಕಾರಿಗಳ ಮೂಲಕ ತಮ್ಮ ದೇಶಗಳಿಗೆ ಮರಳಲು ವ್ಯವಸ್ಥೆ ಮಾಡಲು ಕಾಯುತ್ತಿದೆ. ಯುಎಸ್ ಮತ್ತು ಪನಾಮ ನಡುವಿನ ಒಪ್ಪಂದದ ಪ್ರಕಾರ, ಅಕ್ರಮ ವಲಸಿಗರು ವೈದ್ಯಕೀಯ ಚಿಕಿತ್ಸೆ ಮತ್ತು ಆಹಾರವನ್ನು ಪಡೆಯುತ್ತಿದ್ದಾರೆ ಎನ್ನಲಾಗಿತ್ತು. ಇದರಲ್ಲಿ ಆಶ್ರಯ ಪಡೆಯುತ್ತಿದ್ದ ಕೆಲವರು ಹೋಟೆಲ್ ಒಳಗಿನಿಂದ ಗಾಜಿನ ಗೋಡೆಗಳ ಮೇಲೆ ʻಸಹಾಯʼ ಮಾಡುವಂತೆ ಬರೆದು ಪ್ಲೇಟ್‌ಕಾರ್ಡ್ ಪ್ರದರ್ಶಿಸುತ್ತಿದ್ದರು. ಈ ಬೆನ್ನಲ್ಲೇ ಎಚ್ಚೆತ್ತ ಪನಾಮ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದೆ. ಆದ್ರೆ ವರದಿಗಳ ಹೊರತಾಗಿಯೂ ಪನಾಮ ಅಕ್ರಮವಾಗಿ ಬಂಧನದಲ್ಲಿರಿಸಿದೆ ಎನ್ನುವ ಆರೋಪಗಳನ್ನು ತಳ್ಳಿಹಾಕಿದೆ. ಇದನ್ನೂ ಓದಿ: ಅವರು ಯಾರನ್ನಾದರೂ ಆಯ್ಕೆ ಮಾಡಲು ಪ್ರಯತ್ನಿಸುತ್ತಿದ್ದರು: ಭಾರತದ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪದ ಬಗ್ಗೆ ಟ್ರಂಪ್ ಸುಳಿವು
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪನಾಮದ ಭದ್ರತಾ ಸಚಿವ ಫ್ರಾಂಕ್ ಅಬ್ರೆಗೊ, ಪನಾಮ ಮತ್ತು ಅಮೆರಿಕ ನಡುವಿನ ವಲಸೆ ಒಪ್ಪಂದದ ಭಾಗವಾಗಿ ಯುಎಸ್‌ನಿಂದ ಬಂದ ಅಕ್ರಮ ವಲಸಿಗರು ಹೋಟೆಲ್‌ನಲ್ಲಿ ವೈದ್ಯಕೀಯ ಆರೈಕೆ ಮತ್ತು ಆಹಾರ ಸೌಲಭ್ಯದೊಂದಿಗೆ ಆಶ್ರಯ ಪಡೆಯುತ್ತಿದ್ದಾರೆ. ಅವರನ್ನು ತಮ್ಮ ಮೂಲ ದೇಶಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ನಡೆಯುವಾಗ ಯಾರನ್ನೂ ಹೊರಗೆ ಬಿಡಲು ಅನುಮತಿಸಲಾಗುವುದಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬೋನಿ ದಾಖಲೆ ಮುರಿಯಲು ಸಜ್ಜಾದ ಸ್ನೇಹಿತೆ – 1,000 ಪುರುಷರೊಟ್ಟಿಗೆ ಸೆಕ್ಸ್ ಮಾಡಲು ಅನ್ನಿ ನೈಟ್ ತಯಾರಿ
ವಾಷಿಂಗ್ಟನ್: ಭಾರತದ ಚುನಾವಣೆಗೆ (India Election) ವಿದೇಶದಿಂದ ಪಿತೂರಿ ನಡೆದಿದೆ ಎಂದು ಬಿಜೆಪಿ (BJP) ಆರೋಪಿಸುತ್ತಿರುವ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ (Donald Trump) ಬೈಡನ್ (Joe Biden) ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮಿಯಾಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಮತದಾರರ ಮತದಾನದ ಪ್ರಮಾಣಕ್ಕಾಗಿ ನಾವು 21 ಮಿಲಿಯನ್ ಡಾಲರ್(180 ಕೋಟಿ ರೂ.) ಖರ್ಚು ಮಾಡಬೇಕೇ? ಅವರು ಬೇರೆಯವರನ್ನು ಆಯ್ಕೆ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ನಾನು ಭಾವಿಸುತ್ತೇನೆ. ಈ ವಿಚಾರವನ್ನು ನಾವು ಭಾರತ ಸರ್ಕಾರಕ್ಕೆ ಹೇಳಬೇಕಾಗಿದೆ ಎಂದು ತಿಳಿಸಿದ್ದಾರೆ.
#WATCH | Miami, Florida | Addressing the FII PRIORITY Summit, US President Donald Trump says, “… Why do we need to spend $21 million on voter turnout in India? I guess they were trying to get somebody else elected. We have got to tell the Indian Government… This is a total… pic.twitter.com/oxmk6268oW
ಟ್ರಂಪ್ ಸರ್ಕಾರ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಿಗೆ ಅಮೆರಿಕ ನೀಡುತ್ತಿದ್ದ USAID ಅನುದಾನವನ್ನು ಸ್ಥಗಿತಗೊಳಿಸಿದೆ. ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆಯ (ಡಿಒಜಿಇ) ಉಸ್ತುವಾರಿ ಎಲಾನ್ ಮಸ್ಕ್ (Elon Musk) ಅವರು ವೆಚ್ಚ ನಿಯಂತ್ರಣದ ಭಾಗವಾಗಿ ಕೈಗೊಂಡ ಈ ಕ್ರಮವನ್ನು ಟ್ರಂಪ್ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಏಪ್ರಿಲ್ ಒಳಗೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಟೆಸ್ಲಾ ಪ್ಲ್ಯಾನ್ – ಆರಂಭಿಕ ಬೆಲೆ ಎಷ್ಟು?
ನಾವು ಭಾರತಕ್ಕೆ 21 ಮಿಲಿಯನ್ ಡಾಲರ್‌ಗಳನ್ನು ಏಕೆ ನೀಡುತ್ತಿದ್ದೇವೆ? ಅವರ ಬಳಿ ಹೆಚ್ಚು ಹಣವಿದೆ. ವಿಶ್ವದಲ್ಲಿ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಭಾರತ ಒಂದು. ಅವರ ಸುಂಕಗಳು ತುಂಬಾ ಹೆಚ್ಚಿರುವುದರಿಂದ ನಮ್ಮ ವಸ್ತುಗಳು ಅಲ್ಲಿಗೆ ಹೋಗುವುದು ಕಷ್ಟ ಎಂದು ಹೇಳಿದ್ದಾರೆ. ಭಾರತದ ಬಳಿ ಸಾಕಷ್ಟು ಹಣ ಇರುವಾಗ ನಾವು ಯಾಕೆ ಅವರಿಗೆ ದುಡ್ಡು ನೀಡಬೇಕು. ನನಗೆ ಭಾರತ ಮತ್ತು ಪ್ರಧಾನ ಮಂತ್ರಿಯ ಬಗ್ಗೆ ತುಂಬಾ ಗೌರವವಿದೆ. ಆದರೆ ಮತದಾರರ ಮತದಾನಕ್ಕಾಗಿ (Voter Turnout) 21 ಮಿಲಿಯನ್ ಡಾಲರ್ ಯಾಕೆ ನೀಡಬೇಕು ಎಂದು ಕೇಳಿದ್ದಾರೆ.
ಭಾರತದಲ್ಲಿ ಮತದಾನವನ್ನು ಪ್ರೋತ್ಸಾಹಿಸುವ ಸಲುವಾಗಿ ಅಮೆರಿಕ ನೀಡುತ್ತಿದ್ದ 182 ಕೋಟಿ ಅನುದಾನವನ್ನು ಟ್ರಂಪ್ ಸರ್ಕಾರ ಕಳೆದ ವಾರ ಕಡಿತಗೊಳಿಸಿತ್ತು.
ವಾಷಿಂಗ್ಟನ್: ಟ್ರಂಪ್ (Donald Trump) ಸರ್ಕಾರ ಅಕ್ರಮ ವಲಸಿಗರ (Illegal Migrants) ಕೈಗೆ ಮತ್ತು ಕಾಲಿಗೆ ಸರಪಳಿ ತೊಡಿಸಿ ಅಮೆರಿಕದಿಂದ (USA) ಹೊರದಬ್ಬುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ.
ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನದ (White House) ಖಾತೆಯಿಂದಲೇ ವಿಡಿಯೋ ಬಿಡುಗಡೆ ಮಾಡುವ ಮೂಲಕ ಅಕ್ರಮ ವಲಸಿಗರಿಗೆ ಎಚ್ಚರಿಕೆ ನೀಡಿದೆ.
ವಿಮಾನದಲ್ಲಿ ಗಡಿಪಾರು ಮಾಡುವ ಸಂದರ್ಭದಲ್ಲಿ ವಲಸಿಗರ ಮನಸ್ಥಿತಿ ಯಾವ ರೀತಿ ಇರುತ್ತದೆ ಎಂದು ಹೇಳಲು ಬರುವುದಿಲ್ಲ. ಉಳಿದವರ ಮೇಲೆ ಹಲ್ಲೆ ಅಥವಾ ವಿಮಾನದಲ್ಲೇ ಅಡ್ಡಾದಿಡ್ಡಿ ಓಡುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ವಲಸಿಗರ ಕೈಗೆ ಮತ್ತು ಕಾಲಿಗೆ ಸರಪಳಿ ತೊಡಿಸಿ ಗಡಿಪಾರು ಮಾಡಲಾಗುತ್ತಿದೆ. ಇದನ್ನೂ ಓದಿ: ಭಾರತದ ಬಳಿ ಸಾಕಷ್ಟು ಹಣ ಇರುವಾಗ ನಾವು ಯಾಕೆ ದುಡ್ಡು ನೀಡಬೇಕು: ಟ್ರಂಪ್
ಅಮೆರಿಕ ಚುನಾವಣೆಯಲ್ಲಿ ಟ್ರಂಪ್ ಅವರು ಅಕ್ರಮ ವಲಸಿಗರನ್ನು ದೇಶದಿಂದ ಹೊರದಬ್ಬುತ್ತೇವೆ. ದೇಶದಲ್ಲಿ ಅಪರಾಧ ಚಟುವಟಿಕೆ ಹೆಚ್ಚಾಗಲು ಅಕ್ರಮ ವಲಸಿಗರೇ ಕಾರಣ ಎಂದು ದೂರಿದ್ದರು.
ವಾಷಿಂಗ್ಟನ್: ಭಾರತ (India) ಬಳಿ ಸಾಕಷ್ಟು ಹಣ ಇರುವಾಗ ನಾವು ಯಾಕೆ ಅವರಿಗೆ ದುಡ್ಡು ನೀಡಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಪ್ರಶ್ನಿಸಿದ್ದಾರೆ.
ಫ್ಲೋರಿಡಾದಲ್ಲಿರುವ ತನ್ನ ನಿವಾಸ ಮಾರ್-ಎ-ಲಾಗೊದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಭಾರತಕ್ಕೆ 21 ಮಿಲಿಯನ್ ಡಾಲರ್‌ಗಳನ್ನು ಏಕೆ ನೀಡುತ್ತಿದ್ದೇವೆ? ಅವರ ಬಳಿ ಹೆಚ್ಚು ಹಣವಿದೆ. ವಿಶ್ವದಲ್ಲಿ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಭಾರತ ಒಂದು. ಅವರ ಸುಂಕಗಳು ತುಂಬಾ ಹೆಚ್ಚಿರುವುದರಿಂದ ನಮ್ಮ ವಸ್ತುಗಳು ಅಲ್ಲಿಗೆ ಹೋಗುವುದು ಕಷ್ಟ ಎಂದು ಹೇಳಿದ್ದಾರೆ.
ನನಗೆ ಭಾರತ ಮತ್ತು ಪ್ರಧಾನ ಮಂತ್ರಿಯ ಬಗ್ಗೆ ತುಂಬಾ ಗೌರವವಿದೆ. ಆದರೆ ಮತದಾರರ ಮತದಾನಕ್ಕಾಗಿ (Voter Turnout) 21 ಮಿಲಿಯನ್ ಡಾಲರ್ ಯಾಕೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ.
#WATCH | US President Donald Trump says, “Why are we giving $21 million to India? They have a lot more money. They are one of the highest taxing countries in the world in terms of us; we can hardly get in there because their tariffs are so high. I have a lot of respect for India… pic.twitter.com/W26OEGEejT
ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆಯ (ಡಿಒಜಿಇ) ಉಸ್ತುವಾರಿ ಎಲಾನ್ ಮಸ್ಕ್ ಅವರು ವೆಚ್ಚ ನಿಯಂತ್ರಣದ ಭಾಗವಾಗಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದರು. ಕಾರ್ಯದಕ್ಷತಾ ಇಲಾಖೆಯ ನಿರ್ಧಾರವನ್ನು ಟ್ರಂಪ್ ಅವರು ಈಗ ಸಮರ್ಥಿಸಿಕೊಂಡಿದ್ದಾರೆ.
ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ತನಿಖೆ ನಡೆಸಬೇಕೆಂದು ಬಿಜೆಪಿ ಆಗ್ರಹಿಸಿದೆ. ಭಾರತದ ಚುನಾವಣೆಯಲ್ಲಿ ಅಮೆರಿಕ ಯಾಕೆ ಆಸಕ್ತಿ ಹೊಂದಿದೆ ಎಂದು ಪ್ರಶ್ನಿಸಿದೆ. ಈ ವಿಚಾರದ ಬಗ್ಗೆ ಮಾಜಿ ಚುನಾವಣಾ ಆಯುಕ್ತ ಎಸ್ ವೈ ಖುರೇಷಿ ಪ್ರತಿಕ್ರಿಯಿಸಿ, ಚುನಾವಣಾ ಆಯೋಗವು USAID ತಿಳುವಳಿಕೆ ಪತ್ರ (MoU) ಮಾಡಿಕೊಂಡಿತ್ತು. ಆದರೆ ಯಾವುದೇ ಹಣಕಾಸಿನ ನೆರವು ಒಳಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ನವದೆಹಲಿ: ಅಮೆರಿಕದಿಂದ ಗಡೀಪಾರಾದ ಭಾರತೀಯರನ್ನು ಹೊತ್ತ ಮೂರನೇ ವಿಮಾನವು ಭಾನುವಾರ ತಡರಾತ್ರಿ ಅಮೃತಸರಕ್ಕೆ ಬಂದಿಳಿದಿದೆ. ಈ ಬಾರಿ ತಮ್ಮದ ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 112 ಭಾರತೀಯರನ್ನು ಡೊನಾಲ್ಡ್ ಟ್ರಂಪ್ ಸರ್ಕಾರ ಗಡಿಪಾರು ಮಾಡಿದೆ. 2ನೇ ಹಂತದಲ್ಲಿ 119 ಮಂದಿ ಅಕ್ರಮ ವಲಸಿಗರನ್ನು ಭಾರತಕ್ಕೆ ಗಡಿಪಾರು ಮಾಡಿದ ಬೆನ್ನಲ್ಲೇ 3ನೇ ಹಂತದಲ್ಲಿ 112 ಮಂದಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡಿದೆ.
ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕ ವಾಯುಪಡೆಯ ವಿಶೇಷ ವಿಮಾನ C17 ಗ್ಲೋಬ್‌ಮಾಸ್ಟರ್-III ಇಂದು (ಫೆ.16 ರಂದು) ತಡರಾತ್ರಿ ಅಮೃತಸರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಅಮೆರಿಕದಿಂದ ಗಡಿಪಾರು ಮಾಡಲಾದ 112 ಜನರಲ್ಲಿ ಪಂಜಾಬ್‌ನ 31, ಹರಿಯಾಣದ 44, ಗುಜರಾತ್‌ನ 33, ಉತ್ತರ ಪ್ರದೇಶದ ಇಬ್ಬರು ಮತ್ತು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಿಂದ ತಲಾ ಒಬ್ಬರು ಇದ್ದಾರೆ ಉನ್ನತ ಮೂಲಗಳು ತಿಳಿಸಿವೆ.
ಅಕ್ರಮವಾಗಿ ದೇಶವನ್ನು ಪ್ರವೇಶಿಸಿದ ಅಥವಾ ವೀಸಾ ಅವಧಿ ಮೀರಿದ ನಂತರ ಅಲ್ಲಿಯೇ ಉಳಿದುಕೊಂಡ ವ್ಯಕ್ತಿಗಳ ಮೇಲೆ ಟ್ರಂಪ್ ಸರ್ಕಾರ ನಡೆಸುತ್ತಿರುವ ಕಾರ್ಯಾಚರಣೆಯ ಭಾಗ ಇದಾಗಿದೆ.