Tag: USA

  • 83,00,00,00,00,000 ಕ್ರಿಪ್ಟೋ ವಂಚನೆ – ಕೇರಳದಲ್ಲಿ ಸಿಬಿಐನಿಂದ ಲಿಥುವೇನಿಯಾದ ಪ್ರಜೆ ಅರೆಸ್ಟ್‌

    83,00,00,00,00,000 ಕ್ರಿಪ್ಟೋ ವಂಚನೆ – ಕೇರಳದಲ್ಲಿ ಸಿಬಿಐನಿಂದ ಲಿಥುವೇನಿಯಾದ ಪ್ರಜೆ ಅರೆಸ್ಟ್‌

    ನವದೆಹಲಿ: ಕ್ರಿಪ್ಟೋ ವಂಚನೆ (Crypto Fraud) ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಕ್ಕೆ (USA) ಬೇಕಾಗಿದ್ದ ಲಿಥುವೇನಿಯಾದ ಪ್ರಜೆಯನ್ನು ಕೇರಳದಲ್ಲಿ ಕೇಂದ್ರೀಯ ತನಿಖಾ ದಳ (CBI) ಬಂಧಿಸಿದೆ.

    ಅಮೆರಿಕದ ಸೀಕ್ರೆಟ್ ಸರ್ವೀಸ್‌ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ 46 ವರ್ಷದ ಲಿಥುವೇನಿಯಾದ ಅಲೆಕ್ಸೆಜ್ ಬೆಸಿಯೊಕೊವ್ (Aleksej Besciokov) ತನ್ನ ಕುಟುಂಬದೊಂದಿಗೆ ಕೇರಳಕ್ಕೆ ಬಂದಿದ್ದ. ಮಂಗಳವಾರ ಸಂಜೆ ವರ್ಕಲಾ ಪೊಲೀಸರ ಸಹಾಯದಿಂದ ಆತನನ್ನು ಬಂಧನ ಮಾಡಲಾಗಿದೆ.

    ಈ ವಾರದ ಆರಂಭದಲ್ಲಿ ಅಮೆರಿಕದ ಅಧಿಕಾರಿಗಳ ಕೋರಿಕೆಯ ಮೇರೆಗೆ ವಿದೇಶಾಂಗ ಸಚಿವಾಲಯವು ತಾತ್ಕಾಲಿಕ ಬಂಧನ ವಾರಂಟ್ ಪಡೆದಿತ್ತು. ನಂತರ ಸಿಬಿಐ ಮತ್ತು ಕೇರಳ ಪೊಲೀಸರ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ.

    ಅಲೆಕ್ಸೆಜ್ ಬೆಸಿಯೊಕೊವ್, ರಾನ್ಸಮ್‌ವೇರ್, ಕಂಪ್ಯೂಟರ್ ಹ್ಯಾಕಿಂಗ್ ಮತ್ತು ಮಾದಕವಸ್ತು ವಹಿವಾಟುಗಳಂತಹ ಅಪರಾಧ ಚಟುವಟಿಕೆಗಳ ಆದಾಯವನ್ನು ಅಕ್ರಮವಾಗಿ ವರ್ಗಾಯಿಸಲು ಗ್ಯಾರಂಟೆಕ್ಸ್ (Garantex) ಹೆಸರಿನಲ್ಲಿ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವನ್ನು ಸ್ಥಾಪಿಸಿದ್ದ.

    ಬೆಸಿಯೊಕೊವ್ ದೇಶದಿಂದ ಪಲಾಯನ ಮಾಡಲು ಯೋಜಿಸುತ್ತಿದ್ದಾಗ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಯುಎಸ್ ಸೀಕ್ರೆಟ್ ಸರ್ವಿಸ್ ದಾಖಲೆಗಳ ಪ್ರಕಾರ, ಬೆಸಿಯೊಕೊವ್ ಸುಮಾರು ಆರು ವರ್ಷಗಳ ಅವಧಿಯಲ್ಲಿ ಗ್ಯಾರಂಟೆಕ್ಸ್ ಅನ್ನು ನಿಯಂತ್ರಿಸಿದ್ದಾನೆ. ಭಯೋತ್ಪಾದನೆ ಸೇರಿದಂತೆ ಅಂತರರಾಷ್ಟ್ರೀಯ ಕ್ರಿಮಿನಲ್ ಸಂಘಟನೆಗಳಿಂದ ಕನಿಷ್ಠ 96 ಬಿಲಿಯನ್ ಡಾಲರ್‌ (8 ಲಕ್ಷ ಕೋಟಿ ರೂ.ಗೂ ಹೆಚ್ಚು) ಕ್ರಿಪ್ಟೋಕರೆನ್ಸಿ ವಹಿವಾಟು ಮೂಲಕ ವರ್ಗಾವಣೆಗೆ ಮಾಡಿರುವ ಆರೋಪ ಬೆಸಿಯೊಕೊವ್ ಮೇಲಿದೆ.

     

  • ರಷ್ಯಾ ಜೊತೆ ಅಮೆರಿಕ ಮಾತುಕತೆಗೆ ಸಿದ್ಧರೆ – ಈಗಾಗಲೇ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿರುವ ಉಕ್ರೇನ್

    ರಷ್ಯಾ ಜೊತೆ ಅಮೆರಿಕ ಮಾತುಕತೆಗೆ ಸಿದ್ಧರೆ – ಈಗಾಗಲೇ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿರುವ ಉಕ್ರೇನ್

    ಮಾಸ್ಕೋ/ವಾಷಿಂಗ್ಟನ್‌: ರಷ್ಯಾ-ಉಕ್ರೇನ್ (Ukraine Russia War) ನಡುವೆ ಸುದೀರ್ಘ ಅವಧಿಯಿಂದ ನಡೀತಿರೋ ಯುದ್ಧಕ್ಕೆ ಅಂತ್ಯವಾಡಲು ಎಲ್ಲಾ ಪ್ರಯತ್ನಗಳು ನಡೆದಿವೆ. ಸೌದಿಯಲ್ಲಿ ಉಕ್ರೇನ್-ಅಮೆರಿಕ ನಡುವೆ ಮಹತ್ವದ ಚರ್ಚೆ ನಡೆದಿದೆ. ಅಮೆರಿಕ ಪ್ರಸ್ತಾವದಂತೆ ರಷ್ಯಾ ಜೊತೆಗೆ 30 ದಿನಗಳ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲು ಸಿದ್ಧ ಎಂದು ಉಕ್ರೇನ್ ಘೋಷಿಸಿದೆ.

    ಈ ಬೆನ್ನಲ್ಲೇ, ಉಕ್ರೇನ್‌ಗೆ (Ukraine) ಮಿಲಿಟರಿ ನೆರವು ಸ್ಥಗಿತ ಆದೇಶವನ್ನು ಅಮೆರಿಕ ಹಿಂಪಡೆದಿದೆ. ಅಲ್ಲದೇ ಕದನ ವಿರಾಮಕ್ಕೆ ರಷ್ಯಾವನ್ನು ಒಪ್ಪಿಸಲು ಅಮೆರಿಕ ಪ್ರಯತ್ನ ನಡೆಸಿದೆ. ಪುಟಿನ್ ಜೊತೆ ಟ್ರಂಪ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಆದ್ರೆ, ಇದು ಅಂತಿಮ ಹಂತ ತಲುಪಿಲ್ಲ. ಕದನ ವಿರಾಮ ಸಂಬಂಧ ಪುಟಿನ್ ನಿರ್ಣಯ ಬಾಕಿಯಿದೆ. ಗುರುವಾರ (ಮಾ.13) ವ್ಲಾಡಿಮಿರ್‌ ಪುಟಿನ್‌ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವುದಾಗಿಯೂ ಎಂದು ಟ್ರಂಪ್ ತಿಳಿಸಿದ್ದಾರೆ.

    ಶ್ವೇತಭವನ ಮತ್ತು ಕೈವ್‌ನ ಜಂಟಿ ಹೇಳಿಕೆಯ ಪ್ರಕಾರ, 2 ಕಡೆಯವರೂ ಒಪ್ಪಿದರೆ ಮಾತ್ರವೇ ತಾತ್ಕಾಲಿಕವಾಗಿ 30 ದಿನಗಳ ವರೆಗೆ ಕದನ ವಿರಾಮ ಏರ್ಪಡಲಿದೆ ಎಂದು ಹೇಳಿದೆ. ಇನ್ನೂ ಟ್ರಂಪ್‌ 2ನೇ ಬಾರಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಮಹತ್ವದ ಹೆಜ್ಜೆಯಾಗಿದೆ.

  • ಅಮೆರಿಕದ ಮದ್ಯದ ಮೇಲೆ ಭಾರತ 150%, ಕೃಷಿ ಉತ್ಪನ್ನಗಳ ಮೇಲೆ 100% ತೆರಿಗೆ ವಿಧಿಸುತ್ತಿದೆ: ವೈಟ್‌ಹೌಸ್

    ಅಮೆರಿಕದ ಮದ್ಯದ ಮೇಲೆ ಭಾರತ 150%, ಕೃಷಿ ಉತ್ಪನ್ನಗಳ ಮೇಲೆ 100% ತೆರಿಗೆ ವಿಧಿಸುತ್ತಿದೆ: ವೈಟ್‌ಹೌಸ್

    – ಮತ್ತೆ ಭಾರತದ ವಿರುದ್ಧ ʻದೊಡ್ಡಣ್ಣʼ ಕೆಂಗಣ್ಣು

    ವಾಷಿಂಗ್ಟನ್‌: ಸದ್ಯ ವಿಶ್ವದ ದೊಡ್ಡಣ್ಣ ಅಮೆರಿಕ ಸುಂಕದ (tariff) ವಿಚಾರ ಬಿಡುವಂತೆ ಕಾಣುತ್ತಿಲ್ಲ. ಇಂದು ಶ್ವೇತಭವನ ನೀಡಿದ ಹೇಳಿಕೆ ಭಾರತದ ಮೇಲೆ ಕೆಂಗಣ್ಣು ಬೀರಿದಂತೆ ಕಾಣುತ್ತಿದೆ. ಹೌದು. ಭಾರತವು (India) ನಮ್ಮ ಉತ್ಪನ್ನಗಳ ಮೇಲೆ ಭಾರತ ಭಾರಿ ಸುಂಕ ವಿಧಿಸುತ್ತಿದೆ ಎಂದು ಶ್ವೇತಭವನ ಹೇಳಿದೆ.

    ಭಾರತವು ಅಮೆರಿಕದ ಮದ್ಯದ ಮೇಲೆ ಶೇ.150 ಹಾಗೂ ಕೃಷಿ ಉತ್ಪನ್ನಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸುತ್ತಿದೆ ಎಂದು ಹೇಳಿದೆ. ಅಮೆರಿಕದ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸುವ ಬಗ್ಗೆ ಯಾವುದೇ ಭರವಸೆ ನೀಡಿಲ್ಲ ಎಂದು ಭಾರತ ಸ್ಪಷ್ಟನೆ ನೀಡಿದ ಒಂದು ದಿನದ ಬಳಿಕ ಶ್ವೇತಭವನ (White House) ಈ ರೀತಿಯ ಪ್ರತಿಕ್ರಿಯೆ ನೀಡಿದೆ. ಇದನ್ನೂ ಓದಿ: ರಾಜಮನೆತನಕ್ಕೆ ಟಿಡಿಆರ್ ವರ್ಗಾಯಿಸದಂತೆ ಕೋರಿ ರಾಜ್ಯದಿಂದ ಸುಪ್ರೀಂಗೆ ಅರ್ಜಿ ಸಾಧ್ಯತೆ

    ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಏಪ್ರಿಲ್‌ 2ರಿಂದ ಜಾರಿಗೆ ಬರುವಂತೆ ಹೊಸ ಸುಂಕ ಪದ್ಧತಿಯನ್ನು ಘೋಷಿಸಿದ್ದಾರೆ. ವಿವಿಧ ದೇಶಗಳು ಅಮೆರಿಕದ ಉತ್ಪನ್ನಗಳಿಗೆ ವಿಧಿಸುವ ಸುಂಕದಷ್ಟೇ ಅಮೆರಿಕ ಕೂಡ ಆ ದೇಶದ ಉತ್ಪನ್ನಗಳ ಮೇಲೆ ಏಪ್ರಿಲ್‌ 2ರಿಂದ ಸುಂಕವನ್ನು ವಿಧಿಸಲಿದೆ. ಇದರ ಬೆನ್ನಲ್ಲೇ ಮಾತನಾಡಿದ್ದ ಡೊನಾಲ್ಡ್‌ ಟ್ರಂಪ್‌ ಭಾರತ ಸುಂಕವನ್ನು ಕಡಿತಗೊಳಿಸಲು ಒಪ್ಪಿಕೊಂಡಿದೆ ಎಂದು ಹೇಳಿದ್ದರು. ಆದರೆ, ಸುಂಕ ಕಡಿತದ ಬಗ್ಗೆ ತಾನೂ ಯಾವುದೇ ಭರವಸೆಯನ್ನು ನೀಡಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿತ್ತು.

    ಈ ಬೆನ್ನಲ್ಲೇ ವೈಟ್‌ ಹೌಸ್‌ನ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್‌ ಲೀವಿಟ್‌ (Karoline Leavitt) ಭಾರತ ವಿಧಿಸುತ್ತಿರುವ ಸುಂಕವನ್ನು ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದ್ದಾರೆ. ಈ ಹಿಂದೆ ಟ್ರಂಪ್‌ ಕೂಡ ಭಾರತದಲ್ಲಿ ಯಾವುದೇ ಉತ್ಪನ್ನ ಮಾರಾಟ ಮಾಡಲು ಆಗಲ್ಲ ಎಂದು ಟೀಕಿಸಿದ್ದರು. ಇದನ್ನೂ ಓದಿ: ಗ್ಯಾಂಗ್‌ಸ್ಟರ್‌ನನ್ನು ಪೊಲೀಸರ ವಶದಿಂದ ಬಿಡಿಸಲು ಯತ್ನ – ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಅಮನ್ ಸಾವೊ!

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೀವಿಟ್‌, ಡೊನಾಲ್ಡ್ ಟ್ರಂಪ್ ಅವರು ಭಾರತದ ಜೊತೆ ಉತ್ತಮ ಸಂಬಂಧ ಕಾಪಾಡಿಕೊಳ್ಳಲು ಬಯಸುತ್ತಿದ್ದಾರೆ. ಆದ್ರೆ ಅದಕ್ಕೆ ನ್ಯಾಯಯುತ ಮತ್ತು ಸಮತೋಲಿತ ವ್ಯಾಪಾರ ಪದ್ಧತಿಯು ಬೇಕೆಂಬುದು ಅವರ ವಾದ ಎಂದಿದ್ದಾರೆ.

    ಇದೇ ವೇಳೆ ಕೆನಡಾ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಕೆನಡಾ ಸಹ ಅಮೆರಿಕ ಉತ್ಪನ್ನಗಳ ಮೇಲೆ ವಿಧಿಸುತ್ತಿರುವ ಸುಂಕವು ದಶಕಗಳಿಂದ ಅಮೆರಿಕ ಹಾಗೂ ಅಮೆರಿಕನ್ನರ ಶ್ರಮವನ್ನು ಹಾಳು ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ತಡರಾತ್ರಿ ಮಟನ್ ಸಾರು ಮಾಡಲು ನಿರಾಕರಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ

  • ಆಮದು ಸುಂಕ ಕಡಿತದ ಬಗ್ಗೆ ಯಾವುದೇ ಭರವಸೆ ನೀಡಿಲ್ಲ – ಭಾರತದ ಸ್ಪಷ್ಟನೆ

    ಆಮದು ಸುಂಕ ಕಡಿತದ ಬಗ್ಗೆ ಯಾವುದೇ ಭರವಸೆ ನೀಡಿಲ್ಲ – ಭಾರತದ ಸ್ಪಷ್ಟನೆ

    ನವದೆಹಲಿ: ಅಮೆರಿಕದ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು (Tariffs) ಕಡಿತಗೊಳಿಸುವ ಬಗ್ಗೆ ಯಾವುದೇ ಭರವಸೆ ನೀಡಿಲ್ಲ ಎಂದು ಭಾರತ (India) ಸ್ಪಷ್ಟನೆ ನೀಡಿದೆ.

    ಅಮೆರಿಕದ ಉತ್ಪನ್ನಗಳ ಮೇಲಿನ ಆಮದು ಸುಂಕಗಳನ್ನು ಗಣನೀಯವಾಗಿ ಕಡಿತಗೊಳಿಸಲು ಭಾರತ ಒಪ್ಪಿಕೊಂಡಿದೆ ಎಂಬ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರ ಹೇಳಿಕೆಗೆ ಭಾರತ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಡೆವಿಲ್ ಚಿತ್ರೀಕರಣ ಶುರುವಾಗೋ ಹೊತ್ತಲ್ಲೇ ಆಪ್ತರನ್ನ ಇನ್‌ಸ್ಟಾದಿಂದ ಅನ್‌ಫಾಲೋ ಮಾಡಿದ ʻದಾಸʼ

    ಭಾರತ ಸರ್ಕಾರ (Indian Government) ಆಮದು ಸುಂಕಗಳನ್ನು ಕಡಿತಗೊಳಿಸಲು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಈ ವಿಚಾರದಲ್ಲಿ ಭಾರತ – ಅಮೆರಿಕ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಸ್ಪಷ್ಟನೆ ಎಂದು ಹೇಳಿದೆ. ಇದನ್ನೂ ಓದಿ: ನಗರಸಭೆ ವ್ಯಾಪ್ತಿಯಲ್ಲಿ ಪ್ರಸ್ತಾವನೆ ಬಂದ್ರೆ ಮಧ್ಯರಾತ್ರಿವರೆಗೂ ವ್ಯಾಪಾರಕ್ಕೆ ಅವಕಾಶ- ಭೈರತಿ ಸುರೇಶ್

    ಟ್ರಂಪ್‌ ಹೇಳಿದ್ದೇನು?
    ಭಾರತವು ಸ್ವತಃ ತೆರಿಗೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದಾರೆ. ಏಪ್ರಿಲ್ 2ರಿಂದ ಅನ್ವಯವಾಗುವಂತೆ ಅಮೆರಿಕಾವು ಭಾರತಕೆ ಪ್ರತಿಫಲ ತೆರಿಗೆಯನ್ನು (Reciprocal tariffs) ವಿಧಿಸಲಿದೆ. ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡಲು ಒಪ್ಪಿಕೊಂಡಿದೆ. ಭಾರತಕ್ಕೆ ತನ್ನ ದುಬಾರಿ ತೆರಿಗೆ ಪದ್ದತಿಯ ತಪ್ಪು ಅರಿವಾಗಿದೆ, ಕೊನೆಗೂ ಅದನ್ನು ಅವರು ಒಪ್ಪಿಕೊಂಡಿದ್ದಾರೆ. ಯಾರೋ ಅವರ ತೆರಿಗೆ ಪದ್ದತಿಯ ತಪ್ಪನ್ನು ಬಯಲಿಗೆ ಎಳೆದಿದ್ದಾರೆ. ಹಾಗಾಗಿ, ವಸ್ತುಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡಲು ಮೋದಿ ಸರ್ಕಾರ ಒಪ್ಪಿಕೊಂಡಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು.

    ಮುಂದುವರಿದು.. ಭಾರತವು ನಮ್ಮ ವಸ್ತುಗಳ ಮೇಲೆ ಶೇ.100ಕ್ಕಿಂತ ಹೆಚ್ಚು ತೆರಿಗೆಯನ್ನು ವಿಧಿಸುತ್ತಿದೆ. ಇದು, ಚೀನಾವು ನಮ್ಮ ಮೇಲೆ ವಿಧಿಸುವ ತೆರಿಗೆಗಿಂತ ಎರಡು ಪಟ್ಟು, ದಕ್ಷಿಣ ಕೊರಿಯಾಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ಹಾಗಾಗಿ, ನಾವು ಕೂಡಾ ಭಾರತಕ್ಕೆ ಹೊಸ ತೆರಿಗೆಯನ್ನು ಏಪ್ರಿಲ್ 2ರಿಂದ ಜಾರಿಗೆ ತರಲಿದ್ದೇವೆ ಎಂದು ಸಹ ತಿಳಿಸಿದ್ದರು. ಇದನ್ನೂ ಓದಿ: `ದೃಶ್ಯಂ’ ಸಿನಿಮಾ ಶೈಲಿಯಲ್ಲಿ ಮಹಿಳೆ ಕೊಲೆ ಮಾಡಿ ಸಾಕ್ಷ್ಯ ನಾಶ – 4 ತಿಂಗಳ ಬಳಿಕ ಆರೋಪಿ ಅರೆಸ್ಟ್

  • ಭಾರತಕ್ಕೂ ತೆರಿಗೆ ಶಾಕ್‌ – ಪ್ರತಿ ಸುಂಕದ ಘೋಷಣೆ ಮಾಡಿದ ಟ್ರಂಪ್

    ಭಾರತಕ್ಕೂ ತೆರಿಗೆ ಶಾಕ್‌ – ಪ್ರತಿ ಸುಂಕದ ಘೋಷಣೆ ಮಾಡಿದ ಟ್ರಂಪ್

    – ಅಮೆರಿಕ ಕಾಂಗ್ರೆಸ್‌ನಲ್ಲಿ ಭಾರೀ ಹೈಡ್ರಾಮಾ

    ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಟ್ರಂಪ್ (Donald Trump) ಬೀಸಿದ ಸುಂಕಾಸ್ತ್ರ (Tarrif war) ಈಗ ಭಾರತದ ಬುಡಕ್ಕೂ ಬಂದಿದೆ. ಚೀನಾ (China) ಜೊತೆ ಭಾರತಕ್ಕೂ ಟ್ರಂಪ್ (Donald Trump) ಹೆಚ್ಚುವರಿ ಸುಂಕದ ಶಾಕ್ ನೀಡಿದ್ದಾರೆ.

    ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ನಂತರ ಟ್ರಂಪ್ ಇದೇ ಮೊದಲ ಬಾರಿಗೆ ಅಮೆರಿಕಾ ಕಾಂಗ್ರೆಸ್‌ನ(ಅಮೆರಿಕ ಸಂಸತ್ತು) ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು.

    ಭಾರತ ನಮ್ಮ ಉತ್ಪನ್ನಗಳ ಮೇಲೆ 100% ಹೆಚ್ಚು ಆಟೋ ಟ್ಯಾರೀಫ್‌ ವಿಧಿಸುತ್ತಿದೆ. ಸದ್ಯದ ವ್ಯವಸ್ಥೆಯಿಂದ ಅಮೆರಿಕಾಗೆ ನ್ಯಾಯ ಸಿಗುತ್ತಿಲ್ಲ. ಅದಕ್ಕೆ ಏಪ್ರಿಲ್ 2ರಿಂದ ಆಯಾ ದೇಶಗಳ ಮೇಲೆ ನಾವು ಪ್ರತಿ ಸುಂಕ ವಿಧಿಸುತ್ತೇವೆ. ಅವರು ಎಷ್ಟು ಸುಂಕ ವಿಧಿಸುತ್ತಾರೋ ನಾವೂ ಅಷ್ಟೇ ವಿಧಿಸುತ್ತೇವೆ. ಇದರಿಂದ ಅಮೆರಿಕ ಮತ್ತಷ್ಟು ಶ್ರೀಮಂತ ಆಗಲಿದೆ ಎಂದು ಗುಡುಗಿದ್ದಾರೆ.

    ವಾಸ್ತವದಲ್ಲಿ ಏಪ್ರಿಲ್ ಒಂದರಿಂದಲೇ ಜಾರಿ ಮಾಡಬೇಕು ಎಂದಿದ್ದೆ. ಆದರೆ ಏಪ್ರಿಲ್ ಫೂಲ್ ಎಂಬ ಮಿಮ್ಸ್‌ಗೆ ತುತ್ತಾಗಬಾರದೆಂದು ಈ ನಿರ್ಣಯ ಮಾಡಿದ್ದೇನೆ ಎಂದು ಅಮೆರಿಕ ಕಾಂಗ್ರೆಸ್‌ನಲ್ಲಿ ಟ್ರಂಪ್ ಪ್ರಕಟಿಸಿದ್ದಾರೆ.

    ಟ್ರಂಪ್‌ ಹೇಳಿದ್ದೇನು?
    ನಾಲ್ಕೆಂಟು ವರ್ಷಗಳಲ್ಲಿ ಸಾಧಿಸದೇ ಇದ್ದುದನ್ನು ಬರೀ 43 ದಿನದಲ್ಲಿ ಸಾಧಿಸಿ ತೋರಿಸಿದ್ದೇನೆ. ಇದು ಕೇವಲ ಆರಂಭ ಮಾತ್ರ. ಅಮೆರಿಕದಲ್ಲಿ ಹಳೆಯ ದಿನಗಳು ಮರುಕಳಿಸಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮರು ಸ್ಥಾಪನೆಯಾಗಿದೆ. ಇನ್ನು ಎಚ್ಚೆತ್ತುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಜಗತ್ತಿನಲ್ಲಿ ಅಸಲಿ ವಾಣಿಜ್ಯ ಯುದ್ಧ ಆರಂಭ – ಅಮೆರಿಕ, ಚೀನಾ ನಡುವೆ ಸುಂಕ ಕದನ

    ಡ್ರಿಲ್ ಬೇಬಿ ಡ್ರಿಲ್ ಎಂಬ ಪದ ಬಳಕೆ ಮಾಡಿದ ಟ್ರಂಪ್, ತಮ್ಮ ಕಾಲಡಿಯಲ್ಲಿರುವ ದ್ರವರೂಪದ ಬಂಗಾರವನ್ನು ಹೆಚ್ಚೆಚ್ಚು ಹೊರತೆಗೆಯುವ ಘೋಷಣೆ ಮಾಡಿದರು. ಡೋಜ್ ಕಾರ್ಯವೈಖರಿ ಮತ್ತು ಮಸ್ಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಟ್ರಂಪ್‌ ಭಾಷಣಕ್ಕೆ ರಿಪಬ್ಲಿಕನ್ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಆದರೆ ಟ್ರಂಪ್ ಭಾಷಣಕ್ಕೆ ಡೆಮಾಕ್ರಟಿಕ್ ಪಕ್ಷದ ಅಲ್ ಗ್ರೀನ್ ಅಡ್ಡಿಪಡಿಸಲು ಯತ್ನಿಸಿದರು. ನಿಮಗೆ ಆದೇಶಿಸುವ ಹಕ್ಕಿಲ್ಲ. ವೈದ್ಯಕೀಯ ನೆರವು ಕಡಿಮೆ ಮಾಡಿ ಅಂತಾ ಆದೇಶ ಕೊಡೋಕೆ ಆಗಲ್ಲ ಎಂದು ಗುಡುಗಿದರು. ಈ ವೇಳೆ ರಿಪಬ್ಲಿಕನ್ನರು ಅಮೆರಿಕ… ಅಮೆರಿಕ.. ಎಂದು ಕೂಗಿದರು. ಇದರಿಂದ ಕೆಲ ಹೊತ್ತು ಗೊಂದಲದ ಸ್ಥಿತಿ ನಿರ್ಮಾಣ ಆಗಿತ್ತು. ಕಡೆಗೆ ಅಲ್ ಗ್ರೀನ್‌ರನ್ನು ಹೊರಗೆ ಕಳಿಸಲಾಯ್ತು. ಈ ಬೆನ್ನಲ್ಲೇ ಟ್ರಂಪ್ ಭಾಷಣವನ್ನು ಡೆಮಾಕ್ರಟಿಕ್‌ ಸದಸ್ಯರು ಬಹಿಷ್ಕರಿಸಿ ಸಭೆಯಿಂದ ಹೊರನಡೆದರು.

    ಚೀನಾ ಗರಂ:
    ಅಮೆರಿಕದ ಸುಂಕಾಸ್ತ್ರಕ್ಕೆ ಚೀನಾ ಗರಂ ಆಗಿದೆ. ನಿಮಗೆ ಯುದ್ಧವೇ ಬೇಕು ಎಂದರೆ ನಾವು ಸಿದ್ಧವಿದ್ದೇವೆ. ಕೊನೆಯವರೆಗೂ ಹೋರಾಡುತ್ತೇವೆ ಎಂದು ಚೀನಾ ಘೋಷಿಸಿದೆ.

    ಕೆನಡಾ ಸಹ ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ 25% ತೆರಿಗೆ ವಿಧಿಸುವುದಾಗಿ ಘೋಷಣೆ ಮಾಡಿದೆ. ಅಷ್ಟೇ ಅಲ್ಲದೇ ಮಸ್ಕ್ ನೇತೃತ್ವದ ಸ್ಟಾರ್‌ಲಿಂಕ್ ಜೊತೆಗಿನ ಒಪ್ಪಂದವನ್ನು ರದ್ದು ಮಾಡಿಕೊಂಡಿದೆ. ಅಮೆರಿಕಾಗೆ ವಿದ್ಯುತ್ ಕಡಿತದ ಎಚ್ಚರಿಕೆ ನೀಡಿದೆ.

     

  • ಜಗತ್ತಿನಲ್ಲಿ ಅಸಲಿ ವಾಣಿಜ್ಯ ಯುದ್ಧ ಆರಂಭ – ಅಮೆರಿಕ, ಚೀನಾ ನಡುವೆ ಸುಂಕ ಕದನ

    ಜಗತ್ತಿನಲ್ಲಿ ಅಸಲಿ ವಾಣಿಜ್ಯ ಯುದ್ಧ ಆರಂಭ – ಅಮೆರಿಕ, ಚೀನಾ ನಡುವೆ ಸುಂಕ ಕದನ

    ವಾಷಿಂಗ್ಟನ್‌/ ಬೀಜಿಂಗ್‌: ಜಗತ್ತಿನಲ್ಲಿ ಅಸಲಿ ವಾಣಿಜ್ಯ ಯುದ್ಧ (Trade War) ಈಗ ಆರಂಭವಾಗಿದೆ. ಚೀನಾದ (China) ಮೇಲೆ ವಾಣಿಜ್ಯ ಯುದ್ಧ ಸಾರಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ (Donald Trump) ಇದೀಗ ಆ ದೇಶದ ಉತ್ಪನ್ನಗಳ ಮೇಲಿನ ಸುಂಕದ ಪ್ರಮಾಣವನ್ನು ದಿಢೀರ್ ಎಂದು ಡಬಲ್ ಮಾಡಿದ್ದಾರೆ.

    10% ಇದ್ದ ಸುಂಕವನ್ನು 20% ಏರಿಸಿದ್ದಾರೆ. ಫೆಂಟನಿಲ್ ಡ್ರಗ್ಸ್ (Drugs) ಅಕ್ರಮ ಸಾಗಣೆ ತಡೆಯುವಲ್ಲಿ ಚೀನಾ ವಿಫಲವಾಗಿದೆ ಎಂಬ ಕಾರಣ ನೀಡಿ ಟ್ರಂಪ್ ಈ ನಿರ್ಣಯ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ಗೆ ಮಿಲಿಟರಿ ನೆರವು ನಿಲ್ಲಿಸಿದ ಟ್ರಂಪ್‌

    ಅಮೆರಿಕ (USA) ಸುಂಕ ಏರಿಸಿದ ಬೆನ್ನಲ್ಲೇ ಚೀನಾ ಸಹ ಅಮೆರಿಕದ ಉತ್ಪನ್ನಗಳ ಮೇಲೆ 10% ರಿಂದ 15% ರಷ್ಟು ಸುಂಕ ವಿಧಿಸುವುದಾಗಿ ಪ್ರಕಟಿಸಿದೆ. ಇದೇ ವೇಳೆ, ಐರೋಪ್ಯ ಒಕ್ಕೂಟದ ಜೊತೆಗಿನ ಬಂಧವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಚೀನಾ ಮುಂದಾಗಿದೆ. ಅಮೆರಿಕದ ಏಕಪಕ್ಷೀಯ ತೀರ್ಮಾನಗಳ ವಿರುದ್ಧ ಇಯು ಜೊತೆ ಕೆಲಸ ಮಾಡಲು ಸಿದ್ಧ ಇದ್ದೇವೆ ಎಂದು ಚೀನಾ ಘೋಷಿಸಿದೆ.

    ಕೆನಡಾ, ಮೆಕ್ಸಿಕೋ ಉತ್ಪನ್ನಗಳ ಮೇಲೆ ಟ್ರಂಪ್ ವಿಧಿಸಿದ್ದ 25% ಸುಂಕ ನೀತಿ ಇಂದಿನಿಂದ ಜಾರಿಯಾಗಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಮದ್ಯ, ಹಣ್ಣು ಸೇರಿ 107 ಬಿಲಿಯನ್ ಡಾಲರ್ ಉತ್ಪನ್ನಗಳ ಮೇಲೆ ಕೆನಡಾ ಸಹ 25% ಸುಂಕ ವಿಧಿಸಿದ್ದು, ಇಂದು ಸಂಜೆಯಿಂದ ಜಾರಿಗೆ ತಂದಿದೆ.

    ಸುಂಕದ ಯುದ್ಧದ ಪರಿಣಾಮ ವಿಶ್ವ ಮಾರುಕಟ್ಟೆ ಮೇಲಾಗಿದ್ದು ಷೇರು ಮಾರುಕಟ್ಟೆ ಪತನಗೊಂಡಿದೆ. ಸುಂಕದ ಹೆಸರಿನಲ್ಲಿ ಟ್ರಂಪ್ ಚೆಲ್ಲಾಟ ಆಡುತ್ತಿದ್ದಾರೆ ಎಂದು ದಿಗ್ಗಜ ಹೂಡಿಕೆದಾರ ವಾರೆನ್ ಬಫೆಟ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

     

  • ಪುಟಿನ್‌ಗಿಂತ ಅಕ್ರಮ ವಲಸೆಯೇ ಬಹುದೊಡ್ಡ ಸಮಸ್ಯೆ: ಡೊನಾಲ್ಡ್ ಟ್ರಂಪ್

    ಪುಟಿನ್‌ಗಿಂತ ಅಕ್ರಮ ವಲಸೆಯೇ ಬಹುದೊಡ್ಡ ಸಮಸ್ಯೆ: ಡೊನಾಲ್ಡ್ ಟ್ರಂಪ್

    ವಾಷಿಂಗ್ಟನ್‌: ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗಿಂತ (Vladimir Putin) ಅಕ್ರಮ ವಲಸೆಯೇ ಬಹುದೊಡ್ಡ ಸಮಸ್ಯೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (US President Donald Trump) ಹೇಳಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಅವರು, ನಾವು ಪುಟಿನ್ ಬಗ್ಗೆ ಚಿಂತೆ ಮಾಡುವುದನ್ನು ಕಡಿಮೆ ಮಾಡಬೇಕು. ಅಕ್ರಮ ವಲಸಿಗರಿಂದ (Illegal Immigrants) ಆಗುವ ಅತ್ಯಾಚಾರ, ಮಾದಕವಸ್ತುಗಳ ದೊರೆಗಳು, ಕೊಲೆಗುಡುಕರ ಬಗ್ಗೆ ಹೆಚ್ಚು ಚಿಂತೆ ಮಾಡಬೇಕಿದೆ. ಈ ವಿಚಾರದ ಬಗ್ಗೆ ಚಿಂತೆ ಮಾಡಿದರೆ ಯುರೋಪಿನಂತೆ (Europe) ನಮ್ಮ ದೇಶ ಹಾಳಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

     

    ನನ್ನ ಅಧಿಕಾರ ಅವಧಿ ಸ್ವೀಕರಿಸಿದ ಮೊದಲ ತಿಂಗಳಾದ ಫೆಬ್ರವರಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ದೇಶದ ಒಳಗೆ ಅಕ್ರಮ ವಲಸಿಗರು ನುಗ್ಗಲು ಪ್ರಯತ್ನಿಸಿದ್ದಾರೆ. ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ಗಡಿ ಗಸ್ತು ಪಡೆ ಕೇವಲ 8,326 ಅಕ್ರಮ ವಲಸಿಗರ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಅವರೆಲ್ಲರನ್ನೂ ನಮ್ಮ ರಾಷ್ಟ್ರದಿಂದ ಹೊರಹಾಕಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ:ಅಕ್ರಮವಾಗಿ ಇಸ್ರೇಲ್‌ ಪ್ರವೇಶಿಸಲು ಯತ್ನಿಸಿದ್ದ ಕೇರಳದ ವ್ಯಕ್ತಿ ಗುಂಡಿಗೆ ಬಲಿ

    ಅಧಿಕಾರ ಸ್ವೀಕರಿಸಿದ ಮೊದಲ ತಿಂಗಳಿನಲ್ಲೇ ಅಕ್ರಮ ವಲಸಿಗರ ಸಂಖ್ಯೆಯನ್ನು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಟ್ರಂಪ್‌ ಹೇಳಿದರು.

    ಜೋ ಬೈಡನ್‌ ಅವಧಿಯಲ್ಲಿ ಒಂದು ತಿಂಗಳಿನಲ್ಲಿ 3 ಲಕ್ಷ ಮಂದಿ ಅಕ್ರಮವಾಗಿ ದೇಶವನ್ನು ಪ್ರವೇಶಿಸುತ್ತಿದ್ದರು. ಈಗ ಎಲ್ಲಾ ಅಕ್ರಮ ವಲಸಿಗರಿಗೆ ಗಡಿಯನ್ನು ಮುಚ್ಚಲಾಗಿದೆ. ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಲು ಯಾರಾದರೂ ಪ್ರಯತ್ನಿಸಿದರೆ ಕ್ರಿಮಿನಲ್‌ ದಂಡದ ಜೊತೆ ತಕ್ಷಣದ ಗಡೀಪಾರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

     

  • ಅಮೆರಿಕಕ್ಕೆ ಕೃತಜ್ಞತೆ ಸಲ್ಲಿಸದ ದಿನವೇ ಇಲ್ಲ – ಟ್ರಂಪ್‌ ಜೊತೆ ವಾಗ್ವಾದದ ಬಳಿಕ ಝಲೆನ್ಸ್ಕಿ ವಿಡಿಯೋ ರಿಲೀಸ್‌

    ಅಮೆರಿಕಕ್ಕೆ ಕೃತಜ್ಞತೆ ಸಲ್ಲಿಸದ ದಿನವೇ ಇಲ್ಲ – ಟ್ರಂಪ್‌ ಜೊತೆ ವಾಗ್ವಾದದ ಬಳಿಕ ಝಲೆನ್ಸ್ಕಿ ವಿಡಿಯೋ ರಿಲೀಸ್‌

    ಕೈವ್‌: ಅಮೆರಿಕದ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಜೊತೆಗಿನ ವಾಗ್ವಾದದ ಬಳಿಕ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ವಿಡಿಯೋವೊಂದನ್ನ ಹಂಚಿಕೊಂಡಿದ್ದು, ಅಮೆರಿಕಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

    ಲಂಡನ್‌ನಲ್ಲಿ ಯುಕೆ ಪ್ರಧಾನಿ ಕೀರ್‌ ಸ್ಟಾಮರ್‌ ನೇತೃತ್ವದಲ್ಲಿ ಭಾನುವಾರ ಭದ್ರತಾ ಶೃಂಗಸಭೆ ನಡೆಯಿತು. ವೊಲೊಡಿಮಿರ್ ಝೆಲೆನ್ಸ್ಕಿ ಜೊತೆಗೆ ಫ್ರಾನ್ಸ್‌ನ ಎಮ್ಯಾನುಯೆಲ್ ಮ್ಯಾಕ್ರನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಸೇರಿದಂತೆ 18 ನಾಯಕರು ಪಾಲ್ಗೊಂಡಿದ್ದರು. ಈ ವೇಳೆ ರಷ್ಯಾ, ಉಕ್ರೇನ್‌ ನಡಿವಿನ ಯುದ್ಧ ನಿಲ್ಲಿಸಲು ಕದನ ವಿರಾಮ ಒಪ್ಪಂದಕ್ಕೆ ಸಂಪೂರ್ಣ ಸಹಮತ ಹೊಂದಿರುವುದಾಗಿ ಬ್ರಿಟನ್‌ ಹಾಗೂ ಫ್ರಾನ್ಸ್‌ ದೇಶಗಳು ಹೇಳಿದವು. ಅಲ್ಲದೇ ಇದರ ಬಗ್ಗೆ ಉಕ್ರೇನ್‌ ನಾಯಕರೊಂದಿಗೆ ಮಾತನಾಡುವುದಾಗಿ ಉಭಯ ನಾಯಕರು ಹೇಳಿದ್ದಾರೆ.

    ಲಂಡನ್‌ನಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಕುರಿತಾದ ಪ್ರಮುಖ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಝಲೆನ್ಸ್ಕಿ ವಿಡಿಯೋವೊಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಷ್ಯಾ ವಿರುದ್ಧ ಯುದ್ಧದಲ್ಲಿ ಅಮೆರಿಕ ನೀಡಿದ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸದ ದಿನವೇ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭದ್ರತಾ ಖಾತ್ರಿಯಿಲ್ಲದೇ ಕದನ ವಿರಾಮ ಸಾಧ್ಯವಿಲ್ಲ – ಟ್ರಂಪ್‌ಗೆ ಝಲೆನ್ಸ್ಕಿ ಖಡಕ್‌ ಪ್ರತಿಕ್ರಿಯೆ

    ಅಮೆರಿಕದ ಮಹತ್ವವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅವರು ನೀಡಿದ ಬೆಂಬಲಕ್ಕೆ ನಾವು ಕೃತಜ್ಞತೆ ಸಲ್ಲಿಸದ ಒಂದೂ ದಿನವೂ ಇಲ್ಲ. ಅಮೆರಿಕದೊಂದಿಗೆ ಮತ್ತೆ ಒಟ್ಟಾಗಿ ರಾಜತಾಂತ್ರಿಕ ಕೆಲಸ ಮಾಡಲು ಪ್ರಯತ್ನಿಸುತ್ತೇವೆ. ಶಾಂತಿಗಾಗಿ ರಾಜತಾಂತ್ರಿಕತೆ ಇರಲಿದೆ. ನಾವೆಲ್ಲರೂ ಒಟ್ಟಾಗಿ ಇರುವುದಕ್ಕಾಗಿ, ಐರೋಪ್ಯ ಒಕ್ಕೂಟ ಹಾಗೂ ಅಮೆರಿಕದೊಂದಿಗೆ ರಾಜತಾಂತ್ರಿಕತೆ ಇರಲಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಟ್ರಂಪ್-ಝೆಲೆನ್ಸ್ಕಿ ನಡ್ವೆ ಮಾತಿನ ಚಕಮಕಿಗೆ ಬೆಚ್ಚಿಬಿದ್ದ ವಿಶ್ವ – ನಿಮ್ಮಿಂದ 3ನೇ ಮಹಾಯುದ್ಧ ಎಂದ ಯುಎಸ್‌ ಅಧ್ಯಕ್ಷ

    ಝಲೆನ್ಸ್ಕಿ ಸ್ಪಷ್ಟನೆ ನೀಡಿದ್ದೇಕೆ?
    ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ವೊಲೊಡಿಮಿರ್ ಝೆಲೆನ್ಸ್ಕಿ, ಟ್ರಂಪ್‌ ಜೊತೆಗೆ ಮಾತುಕತೆ ನಡೆಸಿದ್ದರು. ಆರಂಭದಲ್ಲಿ ಅಮೆರಿಕ ಮತ್ತು ಉಕ್ರೇನ್‌ ನಡುವೆ ಖನಿಜ ಒಪ್ಪಂದಗಳ ನಡುವೆ ಮಾತುಕತೆ ಸಾಗಿತ್ತು. ಈ ವೇಳೆ ಭದ್ರತಾ ವಿಚಾರಗಳ ಕುರಿತು ಚರ್ಚಿಸಲು ಮುಂದಾದರು, ಆಗ ಟ್ರಂಪ್‌ ನಾನು ಭದ್ರತೆಯ ಬಗ್ಗೆ ಈಗ ಮಾತನಾಡಲು ಬಯಸುವುದಿಲ್ಲ. ಈಗ ಖನಿಜ ಒಪ್ಪಂದಗಳ ಬಗ್ಗೆ ಮಾತನಾಡಲು ಬಯಸುತ್ತೇನೆ ಎಂದರು. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ, ಟ್ರಂಪ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಶ್ವೇತಭವನದಿಂದ ಹೊರಹೋಗುವಂತೆ ಸೂಚಿಸಿದ್ದರು.

    ಇದಕ್ಕೆ ಪ್ರತ್ಯುತ್ತರ ನೀಡಿದ್ದ ಝಲೆನ್ಸ್ಕಿ, ನಾವು ಕದನ ವಿರಾಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ, ಏಕೆಂದರೆ ಅದು ಎಂದಿಗೂ ಪ್ರಯೋಜನಕಾರಿಯಾಗಲಿಲ್ಲ. ಪುಟಿನ್‌ ಅವರು 25 ಬಾರಿ ಕದನ ವಿರಾಮ ಘೋಷಿಸಿ, ಯುದ್ಧ ಮುಂದುವರಿಸಿದ್ದಾರೆ. ಭದ್ರತಾ ಖಾತ್ರಿಯಿಲ್ಲದೇ ಕದನ ವಿರಾಮ ಮುಂದುವರಿಸಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಅಲ್ಲದೇ ಪತ್ರಕರ್ತರ ಎದುರು ಈ ರೀತಿ ಮಾತನಾಡುವುದು ಶೋಭೆಯಲ್ಲ ಎಂದು ಟ್ರಂಪ್‌ಗೆ ಹೇಳಿದ್ದರು. ಈ ವೇಳೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್‌, ಅಮೆರಿಕ ಮಾಡಿರುವ ಸಹಾಯವನ್ನು ಸ್ಮರಿಸಿ ಮಾತನಾಡಬೇಕು ಎಂದು ಬೇಸರ ಹೊರಹಾಕಿದ್ದರು. ಇಂದು ಈ ಬಗ್ಗೆ ಝಲೆನ್ಸ್ಕಿ ಸ್ಪಷ್ಟನೆ ನೀಡಿದ್ದಾರೆ.

  • ಟ್ರಂಪ್-ಝೆಲೆನ್ಸ್ಕಿ ನಡ್ವೆ ಮಾತಿನ ಚಕಮಕಿಗೆ ಬೆಚ್ಚಿಬಿದ್ದ ವಿಶ್ವ – ನಿಮ್ಮಿಂದ 3ನೇ ಮಹಾಯುದ್ಧ ಎಂದ ಯುಎಸ್‌ ಅಧ್ಯಕ್ಷ

    ಟ್ರಂಪ್-ಝೆಲೆನ್ಸ್ಕಿ ನಡ್ವೆ ಮಾತಿನ ಚಕಮಕಿಗೆ ಬೆಚ್ಚಿಬಿದ್ದ ವಿಶ್ವ – ನಿಮ್ಮಿಂದ 3ನೇ ಮಹಾಯುದ್ಧ ಎಂದ ಯುಎಸ್‌ ಅಧ್ಯಕ್ಷ

    – ಭದ್ರತಾ ಖಾತ್ರಿಯಿಲ್ಲದೇ ಕದನವಿರಾಮ ಸಾಧ್ಯವಿಲ್ಲ: ಝೆಲೆನ್ಸ್ಕಿ

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜೊತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ನಡೆಸಿದ ಚರ್ಚೆ ಉದ್ವಿಗ್ನತೆ ಪಡೆದುಕೊಂಡಿದೆ, ಚರ್ಚೆ ವೇಳೆ ನಡೆದ ವಾಗ್ವಾದ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ.

    ಓವಲ್ ಕಚೇರಿಯಲ್ಲಿ ನಾಯರಿಬ್ಬರ ಭೇಟಿ ಸಮಯದಲ್ಲಿ ಈ ವಿದ್ಯಮಾನ ನಡೆದಿದೆ. ಆರಂಭದಲ್ಲಿ ಅಮೆರಿಕ ಮತ್ತು ಉಕ್ರೇನ್‌ ನಡುವೆ ಖನಿಜ ಒಪ್ಪಂದಗಳ ನಡುವೆ ಮಾತುಕತೆ ಸಾಗಿತ್ತು. ಈ ವೇಳೆ ಭದ್ರತಾ ವಿಚಾರಗಳ ಕುರಿತು ಚರ್ಚಿಸಲು ಮುಂದಾದರು, ಆಗ ಟ್ರಂಪ್‌ ನಾನು ಭದ್ರತೆಯ ಬಗ್ಗೆ ಈಗ ಮಾತನಾಡಲು ಬಯಸುವುದಿಲ್ಲ. ಈಗ ಖನಿಜ ಒಪ್ಪಂದಗಳ ಬಗ್ಗೆ ಮಾತನಾಡಲು ಬಯಸುತ್ತೇನೆ ಎಂದರು. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ, ಟ್ರಂಪ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಶ್ವೇತಭವನದಿಂದ ಹೊರಹೋಗುವಂತೆ ಸೂಚಿಸಿದರು.

    ಝೆಲೆನ್ಸ್ಕಿ ಉಕ್ರೇನ್‌ಗೆ ಯುಎಸ್ ಬೆಂಬಲವನ್ನು ಕೋರಿದರು. ಆದರೆ ಈ ಭೇಟಿ ಒಪ್ಪಂದಕ್ಕೆ ಸಹಿ ಹಾಕದೇ ಮತ್ತು ಜಂಟಿ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸುವುದರೊಂದಿಗೆ ಕೊನೆಗೊಂಡಿತು. ಝೆಲೆನ್ಸ್ಕಿ ಅಮೆರಿಕದ ಬೆಂಬಲಕ್ಕೆ ಕೃತಜ್ಞತೆ ತೋರಿಸದಿರುವುದು ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ರಾಜತಾಂತ್ರಿಕ ನಿಲುವನ್ನು ಚರ್ಚಿಸಲು ಪ್ರಯತ್ನಿಸಿದ್ದಕ್ಕೆ ಟ್ರಂಪ್ ಮತ್ತು ವ್ಯಾನ್ಸ್ ತೀವ್ರವಾಗಿ ಟೀಕಿಸಿದರು. ನೀವು ಇದೇ ರೀತಿ ನಡೆದುಕೊಂಡರೆ, ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ನಿಮ್ಮಿಂದ 3ನೇ ಮಹಾಯುದ್ಧ:
    ಝಲೆನ್ಸ್ಕಿ ಭದ್ರತಾ ವಿಚಾರಗಳ ಕುರಿತು ಚರ್ಚಿಸಲು ಮುಂದಾದಾಗ ನೀವು ಲಕ್ಷಾಂತರ ಜನರ ಜೀವಗಳೊಂದಿಗೆ ಆಟವಾಡುತ್ತಿದ್ದೀರಿ, 3ನೇ ಮಹಾಯುದ್ಧದೊಂದಿಗೆ (3rd World War) ಜೂಜಾಡುತ್ತಿದ್ದೀರಿ, ನಿಮ್ಮಿಂದ ಯುದ್ಧ ನಡೆಯಬಹುದು. ನೀವು ಹೀಗೆ ಮಾಡುತ್ತಿರುವುದು ಈ ದೇಶಕ್ಕೆ ತುಂಬಾ ಅಗೌರವವಾಗಿದೆ ಎಂದು ನೇರ ವಾಗ್ದಾಳಿ ನಡೆಸಿದರು.

    ಮುಂದುವರಿದು, ನೀವು ಧೈರ್ಯವಂತರಿರಬಹುದು, ಆದ್ರೂ ಖನಿಜ ಒಪ್ಪಂದಕ್ಕೆ ಸಹಿ ಹಾಕಲೇಬೇಕು. ಇಲ್ಲದಿದ್ರೆ ನಾವು ನಿಮಗೆ ಸಹಾಯ ಮಾಡುವುದಿಲ್ಲ. ನಾವು ಸಹಾಯ ಮಾಡದಿದ್ದರೆ, ನೀವು ಯುದ್ಧ ಮುಂದುವರಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ನೀವು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ರು. ಈ ವೇಳೆ ಝಲೆನ್ಸ್ಕಿ.. ಪತ್ರಕರ್ತರ ಎದುರು ನೀವು ಈ ರೀತಿ ಮಾತನಾಡುವುದು ಗೌರವ ತರುವುದಿಲ್ಲ ಎಂದು ಹೇಳಿದಕ್ಕೆ ಕೆಂಡವಾದ ಟ್ರಂಪ್‌ ನಿಮ್ಮ ನಡೆಯಿಂದ 3ನೇ ಮಹಾಯುದ್ಧ ಸಂಭವಿಸಬಹುದು. ಇದು ಇಡೀ ಜಗತ್ತು ಸಮಸ್ಯೆಗೆ ಸಿಲುಕಿಕೊಳ್ಳಬಹುದು ಎಂದು ಘರ್ಜಿಸಿದರು.

    ಈಗಾಗಲೇ ಉಕ್ರೇನ್‌ಗೆ ಫ್ರಾನ್ಸ್‌, ಬ್ರಿಟನ್‌ ಹಾಗೂ ಇತರ ದೇಶಗಳು ಭದ್ರತೆ ಒದಗಿಸುತ್ತಿವೆ ಎಂದು ನನಗೆ ತಿಳಿದಿದೆ. ಆದ್ರೆ ನಾವು ಯುದ್ಧವನ್ನು ಮುಂದುವರಿಸಲು ಸಿದ್ಧರಿಲ್ಲ. ಈ ಸಮಸ್ಯೆಯನ್ನು ಸಮಾಪ್ತಿ ಮಾಡಲು ಎದುರುನೋಡುತ್ತಿದ್ದೇವೆ. ಆದ್ರೆ ನಾವು ಉಕ್ರೇನ್‌ಗೆ ಬೇರೊಂದು ರೀತಿಯಲ್ಲಿ ಭದ್ರತೆ ನೀಡುತ್ತೇವೆ. ನಮ್ಮ ಕಾರ್ಮಿಕರು ಅಲ್ಲಿಯೇ ಇದ್ದು ಖನಿಜ ಸಂಪತ್ತನ್ನು ಹೊರ ತೆಗೆಯುತ್ತಾರೆ. ನಾವು ನಿಮ್ಮ ದೇಶದಲ್ಲಿ ಉತ್ತಮ ಉತ್ಪನ್ನಗಳನ್ನು ತಯಾರಿಸುತ್ತೇವೆ ಎಂದು ಟ್ರಂಪ್‌ ಆರ್ಥಿಕವಾಗಿ ಅಭಿವೃದ್ಧಿಪಡಿಸಿರುವ ಭರವಸೆ ನೀಡಿದರು.

    ಭದ್ರತಾ ಖಾತ್ರಿಯಿಲ್ಲದೇ ಕದನವಿರಾಮ ಸಾಧ್ಯವಿಲ್ಲ:
    ಇದೇ ವೇಳೆ ಪತ್ರಕರ್ತರಿಗೆ ಭದ್ರತೆಯ ಬಗ್ಗೆ ಝಲೆನ್ಸ್ಕಿ ಕೂಡ ಪ್ರತಿಕ್ರಿಯಿಸಿದರು. ನಾವೀಗ ಕದನ ವಿರಾಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ, ಏಕೆಂದರೆ ಅದು ಎಂದಿಗೂ ಪ್ರಯೋಜನಕಾರಿಯಾಗಲಿಲ್ಲ. ಪುಟಿನ್‌ ಅವರು 25 ಬಾರಿ ಕದನ ವಿರಾಮ ಘೋಷಿಸಿ, ಯುದ್ಧ ಮುಂದುವರಿಸಿದ್ದಾರೆ. ಭದ್ರತಾ ಖಾತ್ರಿಯಿಲ್ಲದೇ ಕದನ ವಿರಾಮ ಮುಂದುವರಿಸಲು ಸಾಧ್ಯವಿಲ್ಲ ಎಂದು ಉಕ್ರೇನ್‌ ಅಧ್ಯಕ್ಷ ಖಡಾಖಂಡಿತವಾಗಿ ಹೇಳಿದರು.

    ಟ್ರಂಪ್‌ ಈ ಯುದ್ಧ ನಿಲ್ಲಿಸುವ ಉದ್ದೇಶ ಹೊಂದಿರಬಹುದು. ಆದ್ರೆ ಅದಕ್ಕೆ ನಮ್ಮ ಬಳಿಯೂ ಬಲವಾದ ಸೈನ್ಯ ಇರಬೇಕು. ನಾವು ಬಲಿಷ್ಠವಾಗಿದ್ದರೆ ಮಾತ್ರ ಪುಟಿನ್‌ ಸೈನ್ಯವು ನಮಗೆ ಹೆಸರುತ್ತದೆ. ನಮ್ಮ ಸೈನ್ಯವು ಖಾಲಿಯಾಗಿದ್ದರೆ, ಪುಟಿನ್‌ ಸೇನೆ ನಮ್ಮ ಮೇಲೆ ಸವಾರಿ ಮಾಡುತ್ತದೆ. ಆಗ ನಮ್ಮನ್ನೂ ನಾವು ಉಳಿಸಿಕೊಳ್ಳು ಸಾಧ್ಯವಾಗಲ್ಲ ಎಂದು ಝಲೆನ್ಸ್ಕಿ ಕಳವಳ ವ್ಯಕ್ತಪಡಿಸಿದರು.

  • 43 ಕೋಟಿ ಕೊಟ್ರೆ ಅಮೆರಿಕದ ʻಗೋಲ್ಡ್‌ ಕಾರ್ಡ್‌ʼ – ಪೌರತ್ವ ಪಡೆಯಲು ಶ್ರೀಮಂತ ವಲಸಿಗರಿಗೆ ಟ್ರಂಪ್‌ ಆಫರ್‌

    43 ಕೋಟಿ ಕೊಟ್ರೆ ಅಮೆರಿಕದ ʻಗೋಲ್ಡ್‌ ಕಾರ್ಡ್‌ʼ – ಪೌರತ್ವ ಪಡೆಯಲು ಶ್ರೀಮಂತ ವಲಸಿಗರಿಗೆ ಟ್ರಂಪ್‌ ಆಫರ್‌

    ವಾಷಿಂಗ್ಟನ್:‌ ಈಗಾಗಲೇ ಕಠಿಣ ವಲಸೆ ನೀತಿಯಿಂದ ಅಕ್ರಮ ವಲಸಿಗರನ್ನು ದೇಶದಿಂದಲೇ ಹೊರಹಾಕುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump), ಇದೀಗ ಶ್ರೀಮಂತ ವಲಸಿಗರ ಮನವೋಲಿಕೆಗೆ ಹೊಸ ಯೋಜನೆಯೊಂದನ್ನ ಜಾರಿಗೆ ತರಲು ಮುಂದಾಗಿದ್ದಾರೆ. ಶ್ರೀಮಂತ ವಲಸಿಗರಿಗೆ ʻಗೋಲ್ಡ್ ಕಾರ್ಡ್‌ʼಗಳ (Gold Card) ಮೂಲಕ, ಅಮೆರಿಕನ್ ಪೌರತ್ವ ಪಡೆಯುವುದನ್ನು ಸುಲಭಗೊಳಿಸಲು ಟ್ರಂಪ್‌ ಪ್ಲ್ಯಾನ್‌ ಮಾಡುತ್ತಿದ್ದಾರೆ.‌

    ಈ ʻಗೋಲ್ಡ್‌ ಕಾರ್ಡ್‌ʼಗಳನ್ನು ಶ್ರೀಮಂತ ವಲಸಿಗರು 5 ಮಿಲಿಯನ್‌ ಡಾಲರ್‌ (43.54 ಕೋಟಿ) ರೂ. ಪಾವತಿಸಿ ಖರೀದಿಸಬಹುದಾಗಿದೆ.

    ಅಮೆರಿಕದಲ್ಲಿ (USA) ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಅಡುವ ವಿದೇಶಿ ಹೂಡಿಕೆದಾರರಿಗೆ ಮಾತ್ರ ಅಮೆರಿಕದ ಶಾಶ್ವತ ನಿವಾಸಿಗಳಾಗಲು ಅನುವು ಮಾಡಿಕೊಡುವ EB-5 ವೀಸಾ ಯೋಜನೆಯನ್ನು ಗೋಲ್ಡ್‌ ಕಾರ್ಡ್‌ನೊಂದಿಗೆ ಬದಲಾಯಿಸಲಾಗುವುದು ಎಂದು ಟ್ರಂಪ್‌ ಹೇಳಿದ್ದಾರೆ.  ಇದನ್ನೂ ಓದಿ: ವಿಳಂಬ ಸಾಕು, ಕಾರಣ ಬೇಡ, ಕಟಾಕಟ್ ಗ್ಯಾರಂಟಿ ಹಣ ವರ್ಗಾಯಿಸಿ: ಸರ್ಕಾರಕ್ಕೆ ನಿಖಿಲ್ ಆಗ್ರಹ

    ಈ ಗೋಲ್ಡ್ ಕಾರ್ಡ್‌ಗಳು ಈಗಾಗಲೇ ಅಸ್ತಿತ್ವದಲ್ಲಿರುವ ಗ್ರೀನ್ ಕಾರ್ಡ್ ನಿವಾಸಿಗಳು ಮತ್ತು ಹೊಸ ವಿದೇಶಿಯರಿಗೆ ಅಮೆರಿಕನ್ ಪೌರತ್ವದ ಮಾರ್ಗವನ್ನು ಮತ್ತಷ್ಟು ಸುಲಭಗೊಳಿಸಲಿದೆ. ಸುಮಾರು 1 ಮಿಲಿಯನ್ ಗೋಲ್ಡ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಉದ್ದೇಶವಿದ್ದು, ಈ ಉಪಕ್ರಮವು ರಾಷ್ಟ್ರೀಯ ಸಾಲವನ್ನು ತ್ವರಿತವಾಗಿ ತೀರಿಸಲು ಸಹಾಯ ಮಾಡಲಿದೆ ಎಂದು ಟ್ರಂಪ್‌ ವಿವರಿಸಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿ ಭದ್ರತಾ ಕಾರ್ಯ ನಿರ್ವಹಿಸಲು ನಿರಾಕರಣೆ – ಪಾಕ್‌ನ 100ಕ್ಕೂ ಹೆಚ್ಚು ಪೊಲೀಸರು ವಜಾ

    EB-5 ಯೋಜನೆಯು ಅಮೆರಿಕದ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ಭರವಸೆ ನೀಡುವ ವಿದೇಶಿಯರಿಗೆ, ಗ್ರೀನ್ ಕಾರ್ಡ್‌ಗಳನ್ನು ನೀಡುತ್ತದೆ. ನಾವು ಈಗ ಸುಮಾರು 5 ಮಿಲಿಯನ್‌ ಅಮೆರಿಕನ್‌ ಡಾಲರ್‌ ಮೊತ್ತದ ಗೋಲ್ಡ್ ಕಾರ್ಡ್‌ಗಳನ್ನು ಮಾರಾಟ ಮಾಡಲಿದ್ದೇವೆ. ಇದು ನಿಮಗೆ ಗ್ರೀನ್ ಕಾರ್ಡ್ ಸವಲತ್ತುಗಳನ್ನು ನೀಡುವುದರ ಜೊತೆಗೆ, ಅಮೆರಿಕನ್ ಪೌರತ್ವ ಪಡೆಯುವ ಮಾರ್ಗವನ್ನು ಸುಲಭಗೊಳಿಸಲಿದೆ ಯುಎಸ್‌ ಅಧ್ಯಕ್ಷರು ಆಶ್ವಾಸನೆ ನೀಡಿದ್ದಾರೆ.  ಇದನ್ನೂ ಓದಿ: ಡ್ರೈವಿಂಗ್ ಬಗ್ಗೆ ಚಾಲಕರಿಗೆ ಸರಿಯಾಗಿ ತರಬೇತಿ ಕೊಡಿ – ಸಾರ್ವಜನಿಕರಿಂದ ಬಿಎಂಟಿಸಿಗೆ ದೂರು