Tag: US

  • ಬರಕ್‌ ಒಬಾಮಾ ಬಂಧಿಸುವ ಎಐ ಆಧಾರಿತ ವೀಡಿಯೋ ಹಂಚಿಕೊಂಡ ಟ್ರಂಪ್‌

    ಬರಕ್‌ ಒಬಾಮಾ ಬಂಧಿಸುವ ಎಐ ಆಧಾರಿತ ವೀಡಿಯೋ ಹಂಚಿಕೊಂಡ ಟ್ರಂಪ್‌

    – ಕಾನೂನಿಗಿಂತ ಯಾರೂ ದೊಡ್ಡವರಲ್ಲ ಅಂತ ಮಾಜಿ ಅಧ್ಯಕ್ಷರಿಗೆ ಹಾಲಿ ಅಧ್ಯಕ್ಷ ಟಾಂಗ್‌

    ವಾಷಿಂಗ್ಟನ್‌: ಅಮೆರಿಕ ಮಾಜಿ ಅಧ್ಯಕ್ಷ ಬರಕ್‌ ಒಬಾಮಾ (Donald Trump) ಅವರನ್ನು ಬಂಧಿಸುವ ಎಐ (ಕೃತಕ ಬುದ್ದಿಮತ್ತೆ) ಆಧಾರಿತ ವೀಡಿಯೋವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಯಾರೊಬ್ಬರೂ ಕಾನೂನಿಗಿಂತ ದೊಡ್ಡವರಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ.

    ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊ, ‘ಒಬಾಮಾ ಕಾನೂನಿಗಿಂತ ಮೇಲಿದ್ದಾರೆ’ ಎಂದು ಹೇಳುವುದರೊಂದಿಗೆ ಪ್ರಾರಂಭವಾಗುತ್ತದೆ. ನಂತರ ಇದು ಅನೇಕ ಅಮೆರಿಕನ್ ರಾಜಕಾರಣಿಗಳು ‘ಯಾರೂ ಕಾನೂನಿಗಿಂತ ಮೇಲಲ್ಲ’ ಎಂದು ಹೇಳುವುದನ್ನು ಒಳಗೊಂಡಿದೆ. ನಂತರದ ಕ್ಲಿಪ್, ಒಬಾಮಾ ಅವರು ಒಮ್ಮೆ ಅಧ್ಯಕ್ಷರಾಗಿದ್ದ ಅದೇ ಕಚೇರಿಯಲ್ಲಿ ಇಬ್ಬರು ಎಫ್‌ಬಿಐ ಏಜೆಂಟ್‌ಗಳಿಂದ ಕೈಕೋಳ ಹಾಕಿರುವ AI ಆಧಾರಿತ ವೀಡಿಯೊಗೆ ಬದಲಾಗುತ್ತದೆ. ಬಂಧನದ ಸಮಯದಲ್ಲಿ ಟ್ರಂಪ್ ನಗುತ್ತಾ ಕುಳಿತಿರುವುದು ವೀಡಿಯೋದಲ್ಲಿದೆ. ಇದನ್ನೂ ಓದಿ: ತಿರುಪತಿ-ಹೈದರಾಬಾದ್ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ – 40 ನಿಮಿಷ ಆಕಾಶದಲ್ಲೇ ಗಿರಕಿ ಹೊಡೆದ ಫ್ಲೈಟ್

    ಈ ನಕಲಿ ವಿಡಿಯೋ ಒಬಾಮಾ ಜೈಲಿನೊಳಗೆ ಕಿತ್ತಳೆ ಬಣ್ಣದ ಜಂಪ್‌ಸೂಟ್ ಧರಿಸಿ ಕುಳಿತಿರುವ ದೃಶ್ಯಕ್ಕೆ ಕೊನೆಗೊಳ್ಳುತ್ತದೆ. ಒಬಮಾ ವಿರುದ್ಧ ಟ್ರಂಪ್‌ ವಾಗ್ದಾಳಿ ನಡೆಸಿದ ವಾರದ ನಂತರ ಈ ವೀಡಿಯೋ ಬಂದಿದೆ.

    2016 ರ ಅಮೆರಿಕದ ಅಧ್ಯಕ್ಷೀಯ ಗೆಲುವಿನಲ್ಲಿ ರಷ್ಯಾದ ಪ್ರಭಾವವಿದೆ ಎಂಬ ಆರೋಪಗಳ ಮೇಲೆ ಒಬಾಮಾ ಆಡಳಿತವನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಹೇಳಿಕೆ ನೀಡಿದ್ದರು. ಅದಾದ, ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ, ಪ್ರವಾಹ, ಭೂಕುಸಿತ – 17 ಮಂದಿ ಸಾವು

  • 14ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ಟ್ರಂಪ್‌ ಸುಂಕ; ಭಾರತ ಬಚಾವ್‌ ಆಗಿದ್ದು ಯಾಕೆ?

    14ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ಟ್ರಂಪ್‌ ಸುಂಕ; ಭಾರತ ಬಚಾವ್‌ ಆಗಿದ್ದು ಯಾಕೆ?

    ನ್ನ ದೇಶದ ವ್ಯಾಪಾರ ಸುಧಾರಿಸುವ ದೃಷ್ಟಿಯಲ್ಲಿ ಹಲವು ದೇಶಗಳ ಮೇಲ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸುಂಕ ಸಮರ ಸಾರಿದ್ದಾರೆ. ಕೆನಡಾ, ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ 15ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ಸುಂಕು ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಒಂದರ ಮೇಲೆ ಒಂದರಂತೆ ವಿವಿಧ ದೇಶಗಳ ಮೇಲೆ ಸುಂಕ ಹೇರಿಕೆ ಸಂಬಂಧ ಆದೇಶ ಪತ್ರಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಟ್ರಂಪ್ ಟ್ಯಾರಿಫ್‌ನಿಂದ ಸದ್ಯ ಭಾರತ ತಪ್ಪಿಸಿಕೊಂಡಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಅದೇನು ಅಂತ ಇಲ್ಲಿ ವಿವರಿಸಲಾಗಿದೆ.

    ಭಾರತ ಸೇರಿ ಹಲವು ದೇಶಗಳ ಮೇಲೆ ಟ್ಯಾರಿಫ್ ಸಮರ
    ಏಪ್ರಿಲ್ ತಿಂಗಳಲ್ಲಿ ಡೊನಾಲ್ಡ್ ಟ್ರಂಪ್ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಟ್ಯಾರಿಫ್ (Tariff) ಹಾಕಿದ್ದರು. ಮೋದಿ ನನ್ನ ಆತ್ಮೀಯ ಸ್ನೇಹಿತ ಎನ್ನುತ್ತಲೇ ಭಾರತಕ್ಕೆ ಶೇ.26 ಪ್ರತಿಸುಂಕ ವಿಧಿಸುವುದಾಗಿ ಘೋಷಿಸಿದ್ದರು. ಅದಾಗ್ಯೂ, ನಂತರ 90 ದಿನಗಳ ವರೆಗೆ ತಮ್ಮ ಆದೇಶವನ್ನು ಅಮಾನತಿನಲ್ಲಿಟ್ಟರು. ಆಗಲೂ ಭಾರತ ಪ್ರತಿಸುಂಕದಿಂದ ತಪ್ಪಿಸಿಕೊಂಡಿತು. ಇದಾದ ಬಳಿಕ ಭಾರತದಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಯಾಯಿತು. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸೋ ದೇಶಗಳ ಮೇಲೆ 500% ಸುಂಕ – ಭಾರತ, ಚೀನಾಗೆ ಟ್ರಂಪ್‌ ಶಾಕ್‌?

    ಭಾರತ-ಪಾಕ್ ಸಂಘರ್ಷ; ಟ್ರಂಪ್ ಹೇಳಿದ್ದೇನು?
    ಕಾಶ್ಮೀರದ ಪಹಲ್ಗಾಮ್ ಮೇಲೆ ಉಗ್ರರು ನಡೆಸಿದ ದಾಳಿಗೆ 26 ಪ್ರವಾಸಿಗರು ಬಲಿಯಾದರು. ದಾಳಿಗೆ ಪ್ರತೀಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕ್‌ನಲ್ಲಿ ಉಗ್ರರ ತಾಣಗಳನ್ನು ಗುರಿಯಾಗಿಸಿ ಭಾರತ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿತು. ಇದರ ಬೆನ್ನಲ್ಲೇ ಪಾಕ್ ಮತ್ತು ಭಾರತ ನಡುವೆ ಯುದ್ಧ ಸನ್ನಿವೇಶ ಸೃಷ್ಟಿಯಾಯಿತು. ಉಭಯ ದೇಶಗಳು ಪರಸ್ಪರ ವೈಮಾನಿಕ ದಾಳಿ ನಡೆಸಿದವು. ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಬಹುದು ಎಂಬುದನ್ನರಿತ ಟ್ರಂಪ್ ಭಾರತ-ಪಾಕ್ ನಡುವೆ ಕದನ ವಿರಾಮಕ್ಕೆ ಒತ್ತಾಯಿಸಿದರು. ಮಾತುಕತೆ ಬಳಿಕ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಮೊದಲು ಟ್ರಂಪ್ ಘೋಷಿಸಿದರು. ನಾವು ವ್ಯಾಪಾರ ಒಪ್ಪಂದಕ್ಕಾಗಿ ಸಂಘರ್ಷ ತಡೆದಿದ್ದೇವೆ. ನೀವಿಬ್ಬರು ಯುದ್ಧ ಮುಂದುವರಿಸಿದರೆ, ನಾವು ನಿಮ್ಮೊಂದಿಗೆ ವ್ಯವಹರಿಸುವುದಿಲ್ಲ ಎಂದು ಎಚ್ಚರಿಸಿದ್ದಾಗಿ ಟ್ರಂಪ್ ತಿಳಿಸಿದ್ದರು. ಅದಾದ ಬಳಿಕ, ಈಚೆಗೆ ಭಾರತದ ಜೊತೆ ಬಿಗ್‌ ಡೀಲ್ ಇದೆ ಎಂದು ಟ್ರಂಪ್‌ ಸುಳಿವು ಕೊಟ್ಟಿದ್ದರು. ಅದೇನಂತ ಕಾದುನೋಡಬೇಕಿದೆ.

    14 ದೇಶಗಳ ಮೇಲೆ ಹೊಸ ಸುಂಕ
    ಏಟಿಗೆ ಎದುರೇಟು ಎಂಬಂತೆ ಜಗತ್ತಿನ 14 ದೇಶಗಳ ಮೇಲೆ ಡೊನಾಲ್ಡ್ ಟ್ರಂಪ್ ಹೊಸ ಸುಂಕ ವಿಧಿಸಿದ್ದಾರೆ. ಈ ಪಟ್ಟಿಯಲ್ಲಿ ಭಾರತವನ್ನು ಹೊರಗಿಟ್ಟಿದ್ದಾರೆ. ಆಗಸ್ಟ್ 1 ರಿಂದಲೇ ಹೊಸ ಸುಂಕ ಜಾರಿಗೆ ಬರಲಿದೆ. ನಿಮ್ಮ ದೇಶಗಳೊಂದಿಗಿನ ನಮ್ಮ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಸುಂಕದ ಪ್ರಮಾಣವನ್ನು ಮಾರ್ಪಡಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷರು ತಿಳಿಸಿದ್ದಾರೆ. ಹೊಸ ಸುಂಕಗಳಿಂದ ಯಾವ ದೇಶಗಳು ಹೆಚ್ಚು ಹಾನಿಗೊಳಗಾಗುತ್ತವೆ? ಯಾವ ದೇಶಗಳನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ? ಇಲ್ಲಿಂದ ಮುಂದಿನ ಹಾದಿ ಏನು ಎಂಬುದಕ್ಕೆ ವಿವರ ಇಲ್ಲಿದೆ.

    AI ಚಿತ್ರ
    AI ಚಿತ್ರ

    ಯಾವ ದೇಶಕ್ಕೆ ಎಷ್ಟು ಸುಂಕ?
    ಬಾಂಗ್ಲಾದೇಶ 35%, ಬೋಸ್ನಿಯಾ ಮತ್ತು ಹರ್ಜೆಗೋವಿನಾ 30%, ಕಾಂಬೋಡಿಯಾ 36, ಇಂಡೋನೇಷಿಯಾ 32, ಜಪಾನ್ 25, ಕಜಕಿಸ್ತಾನ್ 25, ಲಾವೋಸ್ 40, ಮಲೇಷ್ಯಾ 25, ಮ್ಯಾನ್ಮಾರ್ 40, ಸೆರ್ಬಿಯಾ 35, ದಕ್ಷಿಣ ಆಫ್ರಿಕಾ 30, ದಕ್ಷಿಣ ಕೊರಿಯಾ 25, ಥೈಲ್ಯಾಂಡ್ 36, ಟುನೀಶಿಯಾಗೆ 25% ಸುಂಕವನ್ನು ವಿಧಿಸಲಾಗಿದೆ. ಗಮನಿಸಬೇಕಾದ ಅಂಶವೆಂದರೆ, ಅಮೆರಿಕದ ಪ್ರಮುಖ ವ್ಯಾಪಾರ ಪಾಲುದಾರರು ಮತ್ತು ಮಿತ್ರರಾಷ್ಟ್ರಗಳಾದ ಜಪಾನ್ & ದಕ್ಷಿಣ ಕೊರಿಯಾಗಳ ಮೇಲೆ ಶೇ.25 ಸುಂಕ ವಿಧಿಸಲಾಗಿದೆ. ಮ್ಯಾನ್ಮಾರ್ ಮತ್ತು ಲಾವೋಸ್‌ಗೆ ಅತಿ ಹೆಚ್ಚು ಸುಂಕ ಹೇರಲಾಗಿದೆ. ಇದನ್ನೂ ಓದಿ: ಕೆನಡಾ ಮೇಲೆ 35% ಸುಂಕ ವಿಧಿಸಿದ ಟ್ರಂಪ್ – ಪ್ರತೀಕಾರಕ್ಕೆ ಮುಂದ್ರಾದ್ರೆ ಇನ್ನಷ್ಟು ಸುಂಕ ವಿಧಿಸುವುದಾಗಿ ವಾರ್ನಿಂಗ್‌

    ಯುಎಸ್ ಪತ್ರ ರವಾನೆ
    ಟ್ಯಾರಿಫ್ ಹೇರಲ್ಪಟ್ಟ ದೇಶಗಳಿಗೆ ಅಮೆರಿಕ ಪತ್ರಗಳನ್ನು ಬರೆದಿದೆ. ಅಮೆರಿಕವು ತಮ್ಮೊಂದಿಗಿನ ವ್ಯಾಪಾರ ಕೊರತೆಯನ್ನು ಸರಿಪಡಿಸಲು ಬಯಸುತ್ತದೆ. ಯುಎಸ್ ರಫ್ತು ಮಾಡುವುದಕ್ಕಿಂತ ಈ ದೇಶಗಳಿಂದ ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ, ಹೊಸ ದರದಲ್ಲಿ ತೆರಿಗೆ ವಿಧಿಸುತ್ತದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಇದು ಅಮೆರಿಕ ಘೋಷಿಸಿರುವ ವಲಯ ಸುಂಕಗಳಿಂದ (ಆಟೋಮೊಬೈಲ್, ಉಕ್ಕು ಇತ್ಯಾದಿ..) ಪ್ರತ್ಯೇಕವಾಗಿದೆ. ಟ್ರಾನ್ಸ್ಶಿಪ್ ಮಾಡಲಾದ ಸರಕುಗಳು ಸಹ ಆ ಹೆಚ್ಚಿನ ಸುಂಕಕ್ಕೆ ಒಳಪಟ್ಟಿರುತ್ತವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಟ್ರಾನ್ಸ್ಶಿಪ್‌ಮೆಂಟ್ ಎಂದರೆ, ಹೆಚ್ಚಿನ ಸುಂಕಗಳನ್ನು ಎದುರಿಸುತ್ತಿರುವ ದೇಶಗಳು ಕಡಿಮೆ ಸುಂಕಗಳನ್ನು ಎದುರಿಸುತ್ತಿರುವ ಮೂರನೇ ದೇಶದ ಮೂಲಕ ತಮ್ಮ ಸರಕುಗಳನ್ನು ಯುಎಸ್‌ಗೆ ಸಾಗಿಸಬಹುದು.

    ಈ ದೇಶಗಳನ್ನೇ ಆಯ್ಕೆ ಮಾಡಿದ್ದೇಕೆ?
    ಏಪ್ರಿಲ್‌ನಲ್ಲಿ ಟ್ರಂಪ್ ಹಲವು ದೇಶಗಳ ಮೇಲೆ ಪ್ರತಿಸುಂಕ ವಿಧಿಸಿದ್ದರು. ಅದರ ಬೆನ್ನಲ್ಲೇ 90 ದಿನಗಳ ಗಡುವು ವಿಧಿಸಿ ತಮ್ಮ ಪ್ರತಿಸುಂಕ ಆದೇಶವನ್ನು ಅಮಾನತಿನಲ್ಲಿಟ್ಟರು. ಈ ಅವಧಿಯಲ್ಲಿ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವಂತೆ ದೇಶಗಳಿಗೆ ಸೂಚಿಸಿದ್ದರು. ಈ 90 ದಿನಗಳ ಗಡುವು ಮುಕ್ತಾಯವಾಗಿದೆ. ಆದರೆ, ಯುಕೆ ಮತ್ತು ವಿಯೆಟ್ನಾಂನೊಂದಿಗೆ ಕೇವಲ 2 ಅಸ್ಪಷ್ಟ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ನಂತರದ ದಿನಗಳಲ್ಲಿ ಕೆನಡಾ ಕೂಡ ಈ ಲಿಸ್ಟ್‌ಗೆ ಸೇರಿದೆ.

    ಈ 14 ದೇಶಗಳನ್ನೇ ಏಕೆ ಆರಿಸಿಕೊಂಡೆ ಎಂಬುದನ್ನು ಅಮೆರಿಕ ಸರ್ಕಾರ ಇನ್ನೂ ಬಹಿರಂಗಪಡಿಸಿಲ್ಲ. ಆದಾಗ್ಯೂ, ಮಾತುಕತೆಗಳಲ್ಲಿನ ನಿಧಾನಗತಿಯ ಪ್ರಗತಿಗಾಗಿ ಟ್ರಂಪ್ ಇತ್ತೀಚೆಗೆ ಜಪಾನ್ ಅನ್ನು ಟೀಕಿಸುತ್ತಿದ್ದರು. ‘ನಾವು ಜಪಾನ್‌ನೊಂದಿಗೆ ವ್ಯವಹರಿಸಿದ್ದೇವೆ. ನಾವು ಒಪ್ಪಂದ ಮಾಡಿಕೊಳ್ಳುತ್ತೇವೆಯೇ ಎಂದು ನನಗೆ ಖಚಿತವಿಲ್ಲ. ಜಪಾನ್‌ನೊಂದಿಗೆ ನನಗೆ ಅನುಮಾನವಿದೆ. ಅವರು ತುಂಬಾ ಕಠಿಣರು. ಅವರು ತುಂಬಾ ಹಾಳಾಗಿದ್ದಾರೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಭಾರತದಂತೆಯೇ ಜಪಾನ್ ಕೂಡ ತನ್ನ ಕೃಷಿ ವಲಯವನ್ನು ಅಮೆರಿಕದ ಆಮದುಗಳಿಗೆ ತೆರೆಯಲು ಬಯಸುವುದಿಲ್ಲ’ ಎಂದು ಟ್ರಂಪ್ ಹೇಳಿದ್ದರು. ಇದನ್ನೂ ಓದಿ: ತಾಮ್ರದ ಮೇಲೆ 50%, ಔಷಧ ಆಮದಿನ ಮೇಲೆ 200% ಸುಂಕದ ಎಚ್ಚರಿಕೆ – ಭಾರತದ ಮೇಲೆ ಏನು ಪರಿಣಾಮ?

    ಅದೇ ರೀತಿ, ದಕ್ಷಿಣ ಕೊರಿಯಾದೊಂದಿಗಿನ ಒಪ್ಪಂದವೂ ಪ್ರಗತಿಯಲ್ಲಿಲ್ಲ. ಈ ದೇಶಗಳು ಅಮೆರಿಕಕ್ಕೆ ದೊಡ್ಡ ವ್ಯಾಪಾರ ಪಾಲುದಾರರಾಗಿದ್ದರೂ, ಕಾರುಗಳಂತಹ ನಿರ್ದಿಷ್ಟ ವಲಯಗಳಲ್ಲಿ ವಿನಾಯಿತಿಗಳನ್ನು ಬಯಸಿದ್ದವು. ಅಮೆರಿಕವು ಆಟೋಮೊಬೈಲ್‌ಗಳ ದೊಡ್ಡ ಆಮದುದಾರರಾಗಿದ್ದರೆ, ದೇಶೀಯ ಕಾರು ಉತ್ಪಾದನಾ ಉದ್ಯಮವು ತನ್ನ ಕಳೆದುಹೋದ ಪ್ರಾಬಲ್ಯವನ್ನು ಮರಳಿ ಪಡೆಯಬೇಕೆಂದು ಟ್ರಂಪ್ ಬಯಸುತ್ತಾರೆ. ‘ಅಮೆರಿಕದ ಆಮದುಗಳಿಗೆ ಕೊರಿಯಾದ ಬಹುತೇಕ ಎಲ್ಲಾ ಸುಂಕಗಳು ಶೂನ್ಯದಲ್ಲಿವೆ. ಇದರಿಂದಾಗಿ ಅವರು ಭಾರತ ಅಥವಾ ವಿಯೆಟ್ನಾಂಗಿಂತ ಹೆಚ್ಚಿನ ಸುಂಕಗಳೊಂದಿಗೆ ಅಮೆರಿಕಕ್ಕೆ ನೀಡಲು ಕಡಿಮೆ ಅವಕಾಶವನ್ನು ಹೊಂದಿದ್ದಾರೆ’ ಎಂದು ಏಷ್ಯಾ ಸೊಸೈಟಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಉಪಾಧ್ಯಕ್ಷ ಮತ್ತು ದಕ್ಷಿಣ ಕೊರಿಯಾ-ಯುಎಸ್ ಮುಕ್ತ ವ್ಯಾಪಾರ ಒಪ್ಪಂದದ ಮಾಜಿ ಸಮಾಲೋಚಕ ವೆಂಡಿ ಕಟ್ಲರ್ ಹೇಳಿದ್ದಾರೆ.

    ಚೀನಾ ಫ್ರೆಂಡ್ಸ್‌ಗೆ ಶಾಕ್!
    ಟ್ರಂಪ್ ಟ್ಯಾರಿಫ್ ಹಾಕಿರುವ 14 ದೇಶಗಳಲ್ಲಿ ಆರು (ಮ್ಯಾನ್ಮಾರ್, ಲಾವೋಸ್, ಇಂಡೋನೇಷ್ಯಾ, ಕಾಂಬೋಡಿಯಾ, ಮಲೇಷ್ಯಾ, ಥೈಲ್ಯಾಂಡ್) ಚೀನಾದೊಂದಿಗೆ ನಿಕಟ ಸಂಬಂಧ ಹೊಂದಿರುವ ಆಸಿಯಾನ್ ಗುಂಪಿನ ಸದಸ್ಯರಾಗಿದ್ದಾರೆ. ರಫ್ತು ಮತ್ತು ಆಮದು ವಿಚಾರದಲ್ಲಿ ಹಲವು ದೇಶಗಳು ಲಾಭವನ್ನು ಪಡೆದುಕೊಳ್ಳುತ್ತಿವೆ. ಅಮೆರಿಕ ಜೊತೆಗಿನ ವ್ಯಾಪಾರದಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿವೆ. ಹೀಗಾಗಿ, ಹೊಸ ಸುಂಕದ ಅಸ್ತ್ರ ಪ್ರಯೋಗಿಸಲಾಗುತ್ತಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

    ಮುಂದೇನು?
    ಟ್ರಂಪ್ ಆಗಾಗ್ಗೆ ತಪ್ಪುಗಳನ್ನು ಮಾಡುವುದರಿಂದ ಮತ್ತು ಈ ಸುಂಕಗಳನ್ನು ಮೊದಲು ವಿಧಿಸುವ ಅವರ ಅಧಿಕಾರವು ಅಮೆರಿಕದಲ್ಲಿ ಕಾನೂನು ಸವಾಲನ್ನು ಎದುರಿಸುತ್ತಿರುವುದರಿಂದ ಇದು ಸ್ಪಷ್ಟವಾಗಿಲ್ಲ. ಆದಾಗ್ಯೂ, ಸುಂಕಗಳು ಇತರ ದೇಶಗಳು ಅಮೆರಿಕದೊಂದಿಗೆ ಒಪ್ಪಂದಗಳನ್ನು ವೇಗವಾಗಿ ತೀರ್ಮಾನಿಸಲು ಪ್ರೇರೇಪಿಸುವ ಸಾಧ್ಯತೆಯಿದೆ. ಸುಂಕಕ್ಕೆ ಗುರಿಯಾಗಿಸಿಕೊಂಡ ದೇಶಗಳು ಮಾತುಕತೆಗಳನ್ನು ಮುಂದುವರಿಸಲು ಇಚ್ಛೆ ವ್ಯಕ್ತಪಡಿಸಿವೆ. ಇದನ್ನೂ ಓದಿ: ಟ್ರಂಪ್‌ 25% ಸುಂಕ ಹೇರಿದ್ರೂ ಭಾರತದ ಐಫೋನ್‌ ಚೀಪ್‌ – ಅಮೆರಿಕದ್ದು ದುಬಾರಿ

    ಸುಂಕಗಳು ಎಂದರೆ ದೇಶದ ಹೊರಗಿನಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವ ವ್ಯಾಪಾರಿಗಳು ಪಾವತಿಸುವ ಹೆಚ್ಚುವರಿ ತೆರಿಗೆಗಳು. ಹೆಚ್ಚಿನವು ಈ ಹೆಚ್ಚಿದ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆ. ಎಲ್ಲಾ ಸುಂಕಗಳು ಜಾರಿಗೆ ಬಂದರೆ, ಅಮೆರಿಕದ ಗ್ರಾಹಕರು ಇತರ ದೇಶಗಳಿಂದ ಅಮೆರಿಕಕ್ಕೆ ಹೋಗುವ ಹಲವಾರು ಸರಕುಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ನಂತರ ಅವರು ಆ ಸರಕುಗಳನ್ನು ಖರೀದಿಸದಿರಲು ಅಥವಾ ಕಡಿಮೆ ಪ್ರಮಾಣದಲ್ಲಿ ಖರೀದಿಸಲು ಮುಂದಾಗಬಹುದು. ಇದು ರಫ್ತುದಾರರಿಗೆ ನಷ್ಟಕ್ಕೆ ಕಾರಣವಾಗಬಹುದು. ಬಾಂಗ್ಲಾದೇಶದಂತಹ ರಫ್ತು-ಚಾಲಿತ ಆರ್ಥಿಕತೆಗಳನ್ನು ಹೊಂದಿರುವ ದೇಶಗಳು ಈ ಸುಂಕಗಳಿಂದಾಗಿ ತೀವ್ರವಾಗಿ ಪರಿಣಾಮ ಬೀರುತ್ತವೆ. ಇತರ ರಾಷ್ಟ್ರಗಳಿಗೆ ಸ್ವಲ್ಪ ಪರಿಣಾಮ ಬೀರಬಹುದು.

  • ರಷ್ಯಾದಿಂದ ತೈಲ ಖರೀದಿಸೋ ದೇಶಗಳ ಮೇಲೆ 500% ಸುಂಕ – ಭಾರತ, ಚೀನಾಗೆ ಟ್ರಂಪ್‌ ಶಾಕ್‌?

    ರಷ್ಯಾದಿಂದ ತೈಲ ಖರೀದಿಸೋ ದೇಶಗಳ ಮೇಲೆ 500% ಸುಂಕ – ಭಾರತ, ಚೀನಾಗೆ ಟ್ರಂಪ್‌ ಶಾಕ್‌?

    ವಾಷಿಂಗ್ಟನ್‌: ರಷ್ಯಾದಿಂದ ತೈಲ, ಅನಿಲ ಅಥವಾ ಯುರೇನಿಯಂನಂತಹ ಇಂಧನ ಉತ್ಪನ್ನಗಳನ್ನು ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ 500% ಸುಂಕ (Tariff) ವಿಧಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಗಂಭೀರವಾಗಿ ಪರಿಗಣಿಸಿದ್ದಾರೆ.

    ಒಂದು ವೇಳೆ ಇದನ್ನು ಜಾರಿಗೊಳಿಸಿದರೆ, ಭಾರತ ಮತ್ತು ಚೀನಾದಂತಹ ಪ್ರಮುಖ ಆಮದುದಾರರನ್ನು ನೇರವಾಗಿ ಟಾರ್ಗೆಟ್‌ ಮಾಡಿದಂತಾಗುತ್ತದೆ. ರಷ್ಯಾದ ಇಂಧನ ಆದಾಯವನ್ನು ಕುಂಠಿತಗೊಳಿಸುವುದು ಮತ್ತು ಉಕ್ರೇನ್‌ನಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲೆ ಒತ್ತಡ ಹೇರುವ ಉದ್ದೇಶ ಇದಾಗಿದೆ. ಇದನ್ನೂ ಓದಿ: ಕೆನಡಾ ಮೇಲೆ 35% ಸುಂಕ ವಿಧಿಸಿದ ಟ್ರಂಪ್ – ಪ್ರತೀಕಾರಕ್ಕೆ ಮುಂದ್ರಾದ್ರೆ ಇನ್ನಷ್ಟು ಸುಂಕ ವಿಧಿಸುವುದಾಗಿ ವಾರ್ನಿಂಗ್‌

    ಸೆನೆಟರ್ ಲಿಂಡ್ಸೆ ಗ್ರಹಾಂ ಅವರಂತಹ ಪ್ರಭಾವಿ ವ್ಯಕ್ತಿಗಳು ಈ ಪ್ರಸ್ತಾಪವನ್ನು ಬೆಂಬಲಿಸಿದ್ದಾರೆ. ‘ನೀವು ರಷ್ಯಾದಿಂದ ಇಂಧನವನ್ನು ಖರೀದಿಸುತ್ತಿದ್ದರೆ ಮತ್ತು ಉಕ್ರೇನ್‌ಗೆ ಸಹಾಯ ಮಾಡದಿದ್ದರೆ, ಅಮೆರಿಕದಲ್ಲಿರುವ ನಿಮ್ಮ ಸರಕುಗಳಿಗೆ 500% ಸುಂಕ ವಿಧಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದರು.

    ಒಂದು ವೇಳೆ ಈ ನಿರ್ಣಯ ಅಂಗೀಕಾರವಾದರೆ, ಜಾಗತಿಕ ನಿರ್ಬಂಧಗಳ ಸಮಯದಲ್ಲಿ ರಷ್ಯಾದ ತೈಲ ಮತ್ತು ಅನಿಲದ ಆಮದನ್ನು ಹೆಚ್ಚಿಸಿರುವ ಭಾರತ ಮತ್ತು ಚೀನಾದಂತಹ ದೇಶಗಳು, ಅಮೆರಿಕದ ಮಾರುಕಟ್ಟೆಗೆ ಪ್ರವೇಶಿಸುವ ತಮ್ಮ ಉತ್ಪನ್ನಗಳ ಮೇಲೆ 500% ವರೆಗಿನ ಅಭೂತಪೂರ್ವ ಸುಂಕವನ್ನು ಎದುರಿಸಬೇಕಾಗುತ್ತದೆ. ಈ ಕ್ರಮವು ವ್ಯಾಪಾರ ಸಂಬಂಧಗಳಲ್ಲಿ, ವಿಶೇಷವಾಗಿ ಪ್ರಮುಖ ಕಾರ್ಯತಂತ್ರದ ಪಾಲುದಾರ ಭಾರತದೊಂದಿಗೆ ಉದ್ವಿಗ್ನತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ತಾಮ್ರದ ಮೇಲೆ 50%, ಔಷಧ ಆಮದಿನ ಮೇಲೆ 200% ಸುಂಕದ ಎಚ್ಚರಿಕೆ – ಭಾರತದ ಮೇಲೆ ಏನು ಪರಿಣಾಮ?

    ಈಚೆಗೆ 14 ದೇಶಗಳ ಮೇಲೆ ಹೊಸ ಸುಂಕ ವಿಧಿಸಿ ಟ್ರಂಪ್‌ ಆದೇಶ ಹೊರಡಿಸಿದ್ದರು. ರಷ್ಯಾದ ಇಂಧನ ಆಮದುದಾರರ ಮೇಲಿನ 500% ತೆರಿಗೆ ಸೇರಿದಂತೆ ಹೊಸ ಸುಂಕಗಳು 2025ರ ಆಗಸ್ಟ್‌ 1ರಿಂದ ಜಾರಿಗೆ ಬರಲಿವೆ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.

  • ಅಮೆರಿಕ ಪಾರ್ಟಿ; ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ ಎಲಾನ್‌ ಮಸ್ಕ್‌

    ಅಮೆರಿಕ ಪಾರ್ಟಿ; ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ ಎಲಾನ್‌ ಮಸ್ಕ್‌

    ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಮಾಜಿ ಮಿತ್ರ ಎಲಾನ್ ಮಸ್ಕ್ ಶನಿವಾರ ‘ಅಮೆರಿಕ ಪಾರ್ಟಿ’ (America Party) ಎಂಬ ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದ್ದಾರೆ.

    ಅಧ್ಯಕ್ಷ ಟ್ರಂಪ್ ‘ಒನ್ ಬಿಗ್, ಬ್ಯೂಟಿಫುಲ್ ಬಿಲ್’ಗೆ ಸಹಿ ಹಾಕಿದ ನಂತರ, ಟೆಕ್ ದೈತ್ಯ ಎಲಾನ್‌ ಮಸ್ಕ್ (Elon Musk) ‘ಅಮೆರಿಕ ಪಾರ್ಟಿ’ ಘೋಷಿಸುವ ನಿರ್ಧಾರ ಹೊರಬಿದ್ದಿತ್ತು. 2024 ರ ಚುನಾವಣೆಯಲ್ಲಿ ಟ್ರಂಪ್‌ಗೆ ಬೆಂಬಲವಾಗಿ ಮಸ್ಕ್‌ ನಿಂತಿದ್ದರು. ಇದನ್ನೂ ಓದಿ: ಟ್ರಂಪ್ ಬಿಗ್ ಬ್ಯೂಟಿಫುಲ್ ಬಿಲ್‌ಗೆ ಒಪ್ಪಿಗೆ – ಭಾರತೀಯರಿಗೂ ಕಾದಿದೆ ಆಘಾತ

    ತೆರಿಗೆ ಮತ್ತು ಖರ್ಚು ಮಸೂದೆ ಜಾರಿಗೊಂಡರೆ ಉದ್ಯಮಿ ಎಲಾನ್‌ ಮಸ್ಕ್‌ ಅವರು ಎಲೆಕ್ಟ್ರಿಕ್‌ ವಾಹನಗಳ ಸಬ್ಸಿಡಿಗಿಂತ ಹೆಚ್ಚಿನದನ್ನು ಕಳೆದುಕೊಳ್ಳುವರು ಎಂದು ಟ್ರಂಪ್‌ ಎಚ್ಚರಿಸಿದ್ದಾರೆ.

    ಖರ್ಚು ಮತ್ತು ವೆಚ್ಚ ಮಸೂದೆ (ಡಿಒಜಿಇ) ವಿರೋಧಿಸಿ ರಿಪಬ್ಲಿಕನ್‌ ಸದಸ್ಯರ ವಿರುದ್ಧವೇ ಮಸ್ಕ್‌ ಸಿಡಿದೆದ್ದಿದ್ದಾರೆ. ಅಮೆರಿಕ ಸಂಸತ್‌ ಮುಂದೆ ಇರುವ ಮಸೂದೆ ಕುರಿತಂತೆ ಮಸ್ಕ್‌ ಟೀಕೆಗಳ ಬಳಿಕ ಇಬ್ಬರ ನಡುವೆ ಬಿರುಕು ಮೂಡಿತ್ತು. ಇದನ್ನೂ ಓದಿ: ಅರ್ಜೆಂಟೀನಾದಲ್ಲಿ ಪ್ರಧಾನಿ ಮೋದಿಗೆ ಹಲೋ ಹೇಳಲು 400 ಕಿಮೀ ಪ್ರಯಾಣಿಸಿದ ಭಾರತೀಯ

  • ಪತ್ನಿಯನ್ನು ಎತ್ತಿ ಮುದ್ದಾಡಿದ ಯಶ್

    ಪತ್ನಿಯನ್ನು ಎತ್ತಿ ಮುದ್ದಾಡಿದ ಯಶ್

    ತಿ ಜೊತೆ ಅತ್ಯಂತ ರೊಮ್ಯಾಂಟಕ್ ಫೋಟೋವನ್ನ ಪತ್ನಿ ರಾಧಿಕಾ ಪಂಡಿತ್ (Radhika Pandit) ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಹಲವು ದಿನಗಳಿಂದ ರಾಧಿಕಾ ಪಂಡಿತ್ ಅಮೆರಿಕಾದಲ್ಲಿದ್ದರು. ನಿನ್ನೆಯಷ್ಟೇ ಯಶ್ (Yash) ಮುಂಬೈನಿಂದ ತೆರಳಿ ಪತ್ನಿಯನ್ನ ಭೇಟಿಯಾಗಿದ್ದಾರೆ. ಪತ್ನಿ ಮಕ್ಕಳೊಂದಿಗೆ ಸಮಯ ಕಳೆಯಲು ಅಮೆರಿಕಾಗೆ ಯಶ್ ತೆರಳಿದ್ದಾರೆ. ಯಶ್ ಆಗಮಿಸಿದ ಖುಷಿಯಲ್ಲಿ ರಾಧಿಕಾ ಯಶ್ ಸೊಂಟದ ಮೇಲೆ ಹತ್ತಿ ಕುಳಿತಿದ್ದಾರೆ. ಫೋಟೋ ಅತ್ಯಂತ ರೊಮ್ಯಾಂಟಿಕ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.‌ ಇದನ್ನೂ ಓದಿ: ಚಾಮುಂಡಿ ತಾಯಿಗೆ ಶಿವಣ್ಣ ದಂಪತಿ ಪೂಜೆ

     

    View this post on Instagram

     

    A post shared by Radhika Pandit (@iamradhikapandit)

    ಚಿತ್ರೀಕರಣದಲ್ಲಿ ಬ್ಯುಸಿ ಇದ್ದಿದ್ರಿಂದ ಯಶ್ ರಾಧಿಕಾ ಹಾಗೂ ಮಕ್ಕಳ ಜೊತೆ ಅಮೆರಿಕಾಗೆ ತೆರಳಲು ಸಾಧ್ಯವಾಗಿರಲಿಲ್ಲ. ಇದೀಗ ರಾಮಾಯಣ ಹಾಗೂ ಟಾಕ್ಸಿಕ್ ಚಿತ್ರದ ಶೂಟಿಂಗ್ ಮುಗಿಸಿ ಮಂಗಳವಾರ ಯಶ್ ರಾಧಿಕಾರನ್ನ ಸೇರಿಕೊಂಡಿದ್ದಾರೆ. ಹಲವು ದಿನಗಳ ಕಾಲ ಯಶ್ ಫ್ಯಾಮಿಲಿ ಅಮೆರಿಕ ವೆಕೇಶನ್‌ನಲ್ಲಿ ಇರುತ್ತಾರೆ.

    ಪ್ರೀತಿಸಿ ಮದುವೆಯಾದ ಯಶ್ ರಾಧಿಕಾ ಜೋಡಿ ಯಾವತ್ತಿದ್ರೂ ಮಾದರಿ ಕಪಲ್ ಎಂದೇ ಕರೆಸಿಕೊಳ್ತಿದ್ದಾರೆ. ಇದೀಗ ರಾಧಿಕಾ ಪೋಸ್ಟ್ ಮಾಡಿರುವ ಇಬ್ಬರ ರೊಮ್ಯಾಂಟಿಕ್ ಫೋಟೋ ಮುದ್ದಾಗಿದ್ದು, ಜೋಡಿಯ ಅನ್ಯೂನ್ಯತೆ ತೋರಿಸುತ್ತಿದೆ. ಇದನ್ನೂ ಓದಿ: ಉದಯಪುರದಲ್ಲಿ ಭರ್ಜರಿ ಡೆವಿಲ್ ಮೇಕಿಂಗ್!

  • Israel-Iran tensions: ರಷ್ಯಾ, ಅಮೆರಿಕದಿಂದ ತೈಲ ಆಮದು ಹೆಚ್ಚಿಸಿದ ಭಾರತ

    Israel-Iran tensions: ರಷ್ಯಾ, ಅಮೆರಿಕದಿಂದ ತೈಲ ಆಮದು ಹೆಚ್ಚಿಸಿದ ಭಾರತ

    ನವದೆಹಲಿ: ಇರಾನ್ ಮೇಲೆ ಇಸ್ರೇಲ್ (Iran-Israel War) ನಡೆಸಿದ ದಾಳಿಯಿಂದ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದ್ದು, ಭಾರತವು ಜೂನ್‌ನಲ್ಲಿ ರಷ್ಯಾದ (Russia) ತೈಲ ಖರೀದಿಯನ್ನು ಹೆಚ್ಚಿಸಿದೆ. ಸೌದಿ ಅರೇಬಿಯಾ ಮತ್ತು ಇರಾಕ್‌ನಂತಹ ಮಧ್ಯಪ್ರಾಚ್ಯ ಪೂರೈಕೆದಾರರಿಂದ ಒಟ್ಟು ಪ್ರಮಾಣಕ್ಕಿಂತ ಹೆಚ್ಚಿನ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.

    ಜೂನ್ 13 ರಂದು ಮೊದಲು ಇರಾನಿನ ಪರಮಾಣು ತಾಣಗಳ ಮೇಲೆ ದಾಳಿ ಮಾಡಿದ ಇಸ್ರೇಲ್‌ಗೆ ನೇರ ಬೆಂಬಲ ನೀಡಿರುವ ಅಮೆರಿಕ (US), ಇರಾನ್‌ನಲ್ಲಿರುವ ಮೂರು ಪರಮಾಣು ತಾಣಗಳ ಮೇಲೆ ದಾಳಿ ಮಾಡಿದೆ. ಇದನ್ನೂ ಓದಿ: America Strikes | ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಬೆಂಬಲಿಸಿದ್ದ ಪಾಕ್‌ನಿಂದ ಇರಾನ್‌ ಮೇಲಿನ ದಾಳಿ ಖಂಡನೆ

    ಜೂನ್‌ನಲ್ಲಿ, ಭಾರತೀಯ ಸಂಸ್ಕರಣಾಗಾರಗಳು ದಿನಕ್ಕೆ 2-2.2 ಮಿಲಿಯನ್ ಬ್ಯಾರೆಲ್ ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುವ ನಿರೀಕ್ಷೆಯಿದೆ. ಇದು ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚಿನದ್ದಾಗಲಿದೆ. ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್‌ನಿಂದ ಖರೀದಿಸಿದ ಒಟ್ಟು ಪ್ರಮಾಣಕ್ಕಿಂತ ಹೆಚ್ಚಾಗಿದೆ ಎಂದು ಜಾಗತಿಕ ವ್ಯಾಪಾರ ವಿಶ್ಲೇಷಣಾ ಸಂಸ್ಥೆ ಕೆಪ್ಲರ್‌ ತಿಳಿಸಿದ್ದಾರೆ.

    ಮೇ ತಿಂಗಳಲ್ಲಿ ರಷ್ಯಾದಿಂದ ಭಾರತದ (India) ತೈಲ ಆಮದು ದಿನಕ್ಕೆ 1.96 ಮಿಲಿಯನ್ ಬ್ಯಾರೆಲ್‌ಗಳಷ್ಟಿತ್ತು (bpd). ಇದಲ್ಲದೆ, ಜೂನ್‌ನಲ್ಲಿ ಅಮೆರಿಕದಿಂದ ಆಮದು ದಿನಕ್ಕೆ 4.39 ಲಕ್ಷ ಬ್ಯಾರೆಲ್‌ಗೆ ಏರಿದೆ. ಇದು ಹಿಂದಿನ ತಿಂಗಳಲ್ಲಿ ಖರೀದಿಸಲಾದ 2.80 ಲಕ್ಷ ಬ್ಯಾರೆಲ್‌ಗಳಿಂದ ಭಾರಿ ಜಿಗಿತವಾಗಿದೆ. ಇದನ್ನೂ ಓದಿ: America Strikes In Iran | ಕಚ್ಚಾ ತೈಲ, ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಸಾಧ್ಯತೆ – ಆರ್ಥಿಕ ತಜ್ಞರ ಕಳವಳ

    ಜೂನ್‌ನಲ್ಲಿ ಮಧ್ಯಪ್ರಾಚ್ಯದಿಂದ ಆಮದು ಮಾಡಿಕೊಳ್ಳುವ ಅಂದಾಜುಗಳು ದಿನಕ್ಕೆ ಸುಮಾರು 2 ಮಿಲಿಯನ್ ಬ್ಯಾರೆಲ್‌ಗಳಷ್ಟಿದ್ದು, ಮೇ ತಿಂಗಳ ಖರೀದಿಗಿಂತ ಕಡಿಮೆಯಾಗಿದೆ ಎಂದು ಕೆಪ್ಲರ್ ತಿಳಿಸಿದೆ.

    ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ಮತ್ತು ಬಳಕೆಯ ರಾಷ್ಟ್ರವಾಗಿದೆ. ಇದು ಸುಮಾರು 5.1 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿದೆ. ಇದನ್ನು ಸಂಸ್ಕರಣಾಗಾರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಇಂಧನಗಳಾಗಿ ಪರಿವರ್ತಿಸಲಾಗುತ್ತದೆ. ಇದನ್ನೂ ಓದಿ: ಶಾಂತಿ ಸ್ಥಾಪಿಸಿ, ಇಲ್ಲದಿದ್ರೆ ಭವಿಷ್ಯದಲ್ಲಿ ಬೆಲೆ ತೆರಬೇಕಾಗುತ್ತೆ – ಇರಾನ್‌ಗೆ ಟ್ರಂಪ್ ಖಡಕ್ ವಾರ್ನಿಂಗ್

    2022ರ ಫೆಬ್ರವರಿಯಲ್ಲಿ ಉಕ್ರೇನ್ ಆಕ್ರಮಣದ ನಂತರ ಭಾರತವು ಹೆಚ್ಚಿನ ಪ್ರಮಾಣದ ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿತು. ದೇಶವು ಸಾಂಪ್ರದಾಯಿಕವಾಗಿ ಮಧ್ಯಪ್ರಾಚ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಪಾಶ್ಚಿಮಾತ್ಯ ನಿರ್ಬಂಧಗಳು ಮತ್ತು ಕೆಲವು ಯುರೋಪಿಯನ್ ದೇಶಗಳು ಖರೀದಿಗಳನ್ನು ತಿರಸ್ಕರಿಸಿದ್ದರಿಂದ ಇತರ ಅಂತರರಾಷ್ಟ್ರೀಯ ಮಾನದಂಡಗಳಿಗೆ ಹೋಲಿಸಿದರೆ, ತೈಲವು ಗಮನಾರ್ಹ ರಿಯಾಯಿತಿಯಲ್ಲಿ ಲಭ್ಯವಿದ್ದ ಕಾರಣ ರಷ್ಯಾದ ಆಮದು ಹೆಚ್ಚಾಗಿದೆ.

  • ಕೈಕೋಳ ಹಾಕಿ, ನೆಲಕ್ಕೆ ಕೆಡವಿ, ಹಿಂಸೆ ಕೊಟ್ಟು ಅಮೆರಿಕದಿಂದ ಭಾರತೀಯ ವಿದ್ಯಾರ್ಥಿ ಗಡೀಪಾರು

    ಕೈಕೋಳ ಹಾಕಿ, ನೆಲಕ್ಕೆ ಕೆಡವಿ, ಹಿಂಸೆ ಕೊಟ್ಟು ಅಮೆರಿಕದಿಂದ ಭಾರತೀಯ ವಿದ್ಯಾರ್ಥಿ ಗಡೀಪಾರು

    ವಾಷಿಂಗ್ಟನ್‌: ಭಾರತೀಯ ವಿದ್ಯಾರ್ಥಿ (Indian Student) ಕೈಗೆ ಕೋಳ ಹಾಕಿ, ನೆಲಕ್ಕೆ ಕೆಡವಿ, ಹಿಂಸೆ ಕೊಟ್ಟು ಅಮೆರಿಕದಿಂದ (America) ಗಡೀಪಾರು ಮಾಡಿರುವ ಘಟನೆ ನಡೆದಿದೆ.

    ನ್ಯೂಜೆರ್ಸಿಯ ನ್ಯೂವಾರ್ಕ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಗಡೀಪಾರು ಮಾಡುವ ಮೊದಲು ಅಧಿಕಾರಿಗಳು ಕೈಕೋಳ ಹಾಕಿ ನೆಲಕ್ಕೆ ಒತ್ತುವ ವೀಡಿಯೊಗಳು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಭಾರತ-ಪಾಕ್‌ ಯುದ್ಧ; ಪಾಕಿಸ್ತಾನಕ್ಕೇ ಹೆಚ್ಚು ಬೆಂಬಲ ನೀಡಿತ್ತು ಅಮೆರಿಕ – ಇತಿಹಾಸ ಹೇಳೋದೇನು?

    ಸಾಕ್ಷಿ ಮತ್ತು ಭಾರತೀಯ-ಅಮೆರಿಕನ್ ಉದ್ಯಮಿ ಕುನಾಲ್ ಜೈನ್ ಎಂಬವರು ವೀಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ, ಅಧಿಕಾರಿಗಳು ವಿದ್ಯಾರ್ಥಿಯನ್ನು ಅಪರಾಧಿಯಂತೆ ನಡೆಸಿಕೊಳ್ಳುತ್ತಿರುವುದನ್ನು ತೋರಿಸಲಾಗಿದೆ.

    ಈ ಮನಕಲಕುವ ದೃಶ್ಯಾವಳಿಯಲ್ಲಿ ಅಮೆರಿಕದ ಪೊಲೀಸರು ವಿದ್ಯಾರ್ಥಿಯನ್ನು ನೆಲಕ್ಕೆ ಒತ್ತುತ್ತಿರುವುದು ಕಂಡುಬಂದಿದೆ. ನಾಲ್ವರು ಅಧಿಕಾರಿಗಳು ಆತನನ್ನು ಹಿಡಿದಿಟ್ಟುಕೊಂಡಿದ್ದಾರೆ. ಅವರಲ್ಲಿ ಇಬ್ಬರು ತಮ್ಮ ಮೊಣಕಾಲುಗಳನ್ನು ವಿದ್ಯಾರ್ಥಿ ಬೆನ್ನಿನ ಮೇಲೆ ಇಟ್ಟುಕೊಂಡಿದ್ದಾರೆ. ವಿದ್ಯಾರ್ಥಿಯ ಕಾಲುಗಳು ಮತ್ತು ಕೈಗಳನ್ನು ಕಟ್ಟಿ ಹಾಕಿದ್ದಾರೆ. ಇದನ್ನೂ ಓದಿ: ಕೇರಳ ಸೀಫುಡ್ ಆತಂಕ – ಕಾರ್ಗೋ ಶಿಪ್ ಮುಳುಗಿದ ಮೇಲೆ ಆಗಿದ್ದೇನು?

    ನಿನ್ನೆ ರಾತ್ರಿ ನ್ಯೂವಾರ್ಕ್ ವಿಮಾನ ನಿಲ್ದಾಣದಿಂದ ಯುವ ಭಾರತೀಯ ವಿದ್ಯಾರ್ಥಿಯನ್ನು ಗಡೀಪಾರು ಮಾಡುವುದನ್ನು ನಾನು ನೋಡಿದೆ. ಕೈಕೋಳ ಹಾಕಿ ಆತನನ್ನು ಅಪರಾಧಿಯಂತೆ ನಡೆಸಿಕೊಂಡಿದ್ದಾರೆ. ಆತ ಕನಸುಗಳನ್ನು ಹೊತ್ತು ಬಂದಿದ್ದ. ಒಬ್ಬ ಅನಿವಾಸಿ ಭಾರತೀಯನಾಗಿ, ನಾನು ಅಸಹಾಯಕನಾದೆ. ಇದು ಮಾನವ ದುರಂತ ಎಂದು ಜೈನ್ X ನಲ್ಲಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.

    ಈ ವಿಷಯದ ಬಗ್ಗೆ ತನಿಖೆ ಮಾಡಲು ಮತ್ತು ವಿದ್ಯಾರ್ಥಿಗೆ ಸಹಾಯ ಮಾಡಲು ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಜೈನ್‌ ಮನವಿ ಮಡಿಕೊಂಡಿದ್ದಾರೆ.

  • ಭಾರತ-ಪಾಕ್‌ ಯುದ್ಧ; ಪಾಕಿಸ್ತಾನಕ್ಕೇ ಹೆಚ್ಚು ಬೆಂಬಲ ನೀಡಿತ್ತು ಅಮೆರಿಕ – ಇತಿಹಾಸ ಹೇಳೋದೇನು?

    ಭಾರತ-ಪಾಕ್‌ ಯುದ್ಧ; ಪಾಕಿಸ್ತಾನಕ್ಕೇ ಹೆಚ್ಚು ಬೆಂಬಲ ನೀಡಿತ್ತು ಅಮೆರಿಕ – ಇತಿಹಾಸ ಹೇಳೋದೇನು?

    ವ್ಯಾಪಾರದ ವಿಚಾರಗಳನ್ನು ಮುಂದಿಟ್ಟುಕೊಂಡು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಅಮೆರಿಕ ಮತ್ತೆ ಎಂಟ್ರಿ ಕೊಟ್ಟಿದೆ. ಜಮ್ಮು-ಕಾಶ್ಮೀರದ (Jammu & Kashmir) ಪಹಲ್ಗಾಮ್‌ನಲ್ಲಿ (Pahalgam) ಈಚೆಗೆ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ತಾಣಗಳನ್ನು ಭಾರತ ಧ್ವಂಸಗೊಳಿಸಿತು. ಇದು ಭಾರತ-ಪಾಕ್ ನಡುವಿನ ಸಂಘರ್ಷ ಉದ್ವಿಗ್ನತೆಗೆ ಕಾರಣವಾಯಿತು. ಪರಸ್ಪರ ದೇಶಗಳು ದಾಳಿ-ಪ್ರತಿದಾಳಿ ನಡೆಸಿದವು. ಯುದ್ಧದ ಕಾರ್ಮೋಡ ಕವಿದಿದ್ದ ಹೊತ್ತಲ್ಲೇ ಮಧ್ಯಪ್ರವೇಶಿಸಿದ ಅಮೆರಿಕ ಉಭಯ ದೇಶಗಳ ನಡುವೆ ಸಂಧಾನಕ್ಕೆ ಒತ್ತಾಯಿಸಿತು.

    ಭಾರತ ಮತ್ತು ಪಾಕಿಸ್ತಾನ (India-Pakistan War) ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಸ್ಪಷ್ಟಪಡಿಸಿದರು. ಅದರ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ಕೂಡ ಮಾತುಕತೆ ವಿಚಾರವನ್ನು ಬಹಿರಂಗಪಡಿಸಿದವು. ಅಮೆರಿಕ ವಹಿಸಿದ ಪಾತ್ರದ ಬಗ್ಗೆ ಹಲವು ಸಭೆಗಳಲ್ಲಿ ಟ್ರಂಪ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸಂಘರ್ಷ ಕೊನೆಗಾಣಿಸುವ ನಿಟ್ಟಿನಲ್ಲಿ ಯುಎಸ್ ಪಾತ್ರ ಫಲಕೊಟ್ಟಿದೆ ಎಂದು ಪ್ರತಿಪಾದಿಸಿದರು. ಹೀಗೆ ಟ್ರಂಪ್ ಆಡಿರುವ ಮಾತೊಂದು ಕುತೂಹಲಕಾರಿಯಾಗಿದೆ. ‘ವ್ಯಾಪಾರ ಮಾತುಕತೆಗಳನ್ನು ದಾಳವಾಗಿ ಬಳಸಿಕೊಂಡು ಭಾರತ ಮತ್ತು ಪಾಕ್ ನಡುವಿನ ಸಂಘರ್ಷ ನಿಲ್ಲಿಸಿದೆವು’ ಎಂದು ಟ್ರಂಪ್ ಹೇಳಿದ್ದಾರೆ. ‘ನಾವು ವ್ಯಾಪಾರದ ಬಗ್ಗೆ ಮಾತನಾಡುತ್ತೇವೆ. ಪರಸ್ಪರ ಗುಂಡು ಹಾರಿಸುವ ಮತ್ತು ಸಂಭಾವ್ಯವಾಗಿ ಪರಮಾಣ ಶಸ್ತ್ರಾಸ್ತ್ರಗಳನ್ನು ಬಳಸುವ ಜನರೊಂದಿಗೆ ನಾವು ವ್ಯಾಪಾರ ಮಾಡಲು ಸಾಧ್ಯವಿಲ್ಲ’ ಎಂದು ಟ್ರಂಪ್ ಒತ್ತಿ ಹೇಳಿದ್ದಾರೆ. ಆದರೆ, ಪಾಕ್ ಜೊತೆಗಿನ ದ್ವಿಪಕ್ಷೀಯ ಮಾತುಕತೆ ವಿಚಾರದಲ್ಲಿ ಅಮೆರಿಕದ ವ್ಯಾಪಾರ ಲೆಕ್ಕಾಚಾರ ಸೇರಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ವಿಶ್ವದ ದೊಡ್ಡ ಕಂಟೇನರ್‌ ಹಡಗು ವಿಳಿಂಜಂ ಬಂದರಿಗೆ ಆಗಮನ

    ಟ್ರಂಪ್ ಅಸಾಧಾರಣ ಹೇಳಿಕೆಗಳನ್ನು ನೀಡುವುದಕ್ಕೆ ಹೆಸರುವಾಸಿ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಭಾವ್ಯ ಪರಮಾಣು ಯುದ್ಧವನ್ನು ನಿಲ್ಲಿಸಿದ್ದೇವೆಂಬ ಅವರ ಹೇಳಿಕೆಗಳು ಭಾರತವನ್ನು ಮತ್ತಷ್ಟು ಕೆರಳಿಸಿದೆ. ಪಾಕಿಸ್ತಾನದೊಂದಿಗಿನ ತನ್ನ ಸಮಸ್ಯೆಗಳಿಗೆ 3ನೇ ವ್ಯಕ್ತಿಯ ಹಸ್ತಕ್ಷೇಪದ ಅಗತ್ಯವಿಲ್ಲದೇ ದ್ವಿಪಕ್ಷೀಯವಾಗಿ ಪರಿಹರಿಸಬೇಕು ಎಂಬ ಭಾರತದ ಸ್ಥಾಪಿತ ನಿಲುವಿಗೆ ಟ್ರಂಪ್ ಅವರ ಮಾತುಗಳು ವಿರುದ್ಧವಾಗಿವೆ. ಭಾರತದ ಈ ನಿಲುವಿಗೂ ಒಂದು ಕಾರಣವಿದೆ. ಉಭಯ ದೇಶಗಳ ಸಂಘರ್ಷದ ಸನ್ನಿವೇಶದಲ್ಲಿ ಮೂರನೇ ವ್ಯಕ್ತಿಯಾಗಿ ಅಮೆರಿಕವು ಹಲವು ಸಂದರ್ಭಗಳಲ್ಲಿ ಭಾರತಕ್ಕಿಂತ ಪಾಕ್ ಹಿತಾಸಕ್ತಿಗೆ ಅನುಗುಣವಾಗಿ ವರ್ತಿಸಿದೆ.

    ಪಾಕ್-ಭಾರತದ ನಡುವಿನ ಸಂಘರ್ಷವೇನು? ಮೂರನೇಯವರಾಗಿ ಅಮೆರಿಕ ಹಸ್ತಕ್ಷೇಪ ಮಾಡುವುದನ್ನು ಪಾಕ್ ಯಾಕೆ ವಿರೋಧಿಸುತ್ತದೆ? ಈ ಹಿಂದಿನ ಭಾರತ-ಪಾಕ್ ನಡುವಿನ ಯುದ್ಧದ ಸಂದರ್ಭಗಳಲ್ಲಿ ಅಮೆರಿಕದ ಪಾತ್ರವೇನು ಎಂಬ ಪ್ರಶ್ನೆಗಳು ಮೂಡುವುದು ಸಹಜ. ವಿವರ ಇಲ್ಲಿದೆ.

    ವಿಶ್ವಸಂಸ್ಥೆಯಲ್ಲಿ ದ್ರೋಹ
    ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಕೇವಲ 2 ತಿಂಗಳಲ್ಲಿ ಪಾಕಿಸ್ತಾನದಿಂದ ಬಂದ ನುಸುಳುಕೋರರು ಜಮ್ಮು & ಕಾಶ್ಮೀರದ ಮೇಲೆ ದಾಳಿ ಮಾಡಿದರು. ವೈಸ್ರಾಯ್ ಲಾರ್ಡ್ ಲೂಯಿಸ್ ಮೌಂಟ್ ಬ್ಯಾಟನ್ ಭಾರತಕ್ಕೆ ವಿಶ್ವಸಂಸ್ಥೆ ಮೊರೆ ಹೋಗುವಂತೆ ಸಲಹೆ ನೀಡಿದರು. 1948ರ ಜನವರಿ 1ರಂದು ಭಾರತ ವಿಶ್ವಸಂಸ್ಥೆ ಕದ ತಟ್ಟಿತು. ಕಾನೂನು ಬದ್ಧವಾಗಿ ತನಗೆ ಸೇರಿರುವ ಪ್ರದೇಶದ ಮೇಲಿನ ತನ್ನ ಹಕ್ಕಗಳನ್ನು ವಿಶ್ವಸಂಸ್ಥೆಯಲ್ಲಿ ಗೌರವಿಸಲಾಗುತ್ತದೆಂಬ ನಿರೀಕ್ಷೆಯನ್ನು ಭಾರತ ಹೊಂದಿತ್ತು. ಆದರೆ, ಬ್ರಿಟಿಷರು ಭಾರತವನ್ನು ಬೆಂಬಲಿಸಲಿಲ್ಲ. ನಿಜಕ್ಕೂ ಈ ನಡೆ ಭಾರತದ ಬಗೆದ ದ್ರೋಹವಾಯಿತು. ಜಾಗತಿಕವಾಗಿ ಭಾರತವು ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮುವ ಆತಂಕದಲ್ಲಿ ವಿಶ್ವಸಂಸ್ಥೆಯು ಹಿಂದೇಟು ಹಾಕಿತು. ಈ ಹೊತ್ತಲ್ಲೇ, ಪಾಕಿಸ್ತಾನವು ಕಾಶ್ಮೀರ ಸಮಸ್ಯೆಯನ್ನು ಅಂತರಾಷ್ಟ್ರೀಕರಣಗೊಳಿಸಲು ಆದ್ಯತೆ ನೀಡಿತು. ಇದನ್ನೂ ಓದಿ: ಮೋದಿ 3.0 ಸರ್ಕಾರಕ್ಕೆ ಒಂದು ವರ್ಷ

    ಶೀತಲ ಸಮರದ ವರ್ಷಗಳಲ್ಲಿ ಯುಎಸ್ ನೇತೃತ್ವದ ಪಶ್ಚಿಮವು ಪಾಕಿಸ್ತಾನವನ್ನು ಸೋವಿಯತ್ ಒಕ್ಕೂಟದೊಂದಿಗಿನ ಜಗಳದಲ್ಲಿ ನಿರ್ಣಾಯಕ ಮಿತ್ರನಾಗಿ ನೋಡಿತು. ಆದರೆ, ಅಲಿಪ್ತ ನೀತಿ ಧೋರಣೆ ತಳೆದ ಭಾರತವನ್ನು ವಿಶ್ವಾಸಾರ್ಹ ಎಂದು ಪರಿಗಣಿಸಲಿಲ್ಲ. ಅಫ್ಘಾನಿಸ್ತಾನದಲ್ಲಿನ ಯುದ್ಧ ಮತ್ತು ಅಮೆರಿಕದ ‘ಭಯೋತ್ಪಾದನೆಯ ವಿರುದ್ಧದ ಯುದ್ಧ’ವು ಯುಎಸ್ ಮತ್ತು ಪಶ್ಚಿಮಕ್ಕೆ ಪಾಕಿಸ್ತಾನದ ಪ್ರಾಮುಖ್ಯತೆಯನ್ನು ಖಚಿತಪಡಿಸಿತು. ಇದು ಭಾರತಕ್ಕೆ ಅನನುಕೂಲವಾಯಿತು. ಆದರೂ, ಜಾಗತಿಕ ದಕ್ಷಿಣದ ನಾಯಕನಾಗಿ ಹೊರಹೊಮ್ಮುವ ಸಾಮರ್ಥ್ಯ ಹೊಂದಿರುವ ಭಾರತವು ತನ್ನ ಸಮಸ್ಯೆಗಳನ್ನು ಪರಿಹರಿಸಲು ದೊಡ್ಡ ಶಕ್ತಿಗಳ ಮೇಲೆ ಅವಲಂಬಿಸಬೇಕೆಂದು ಎಂದೂ ಭಾವಿಸಿಲ್ಲ.

    ಅಮೆರಿಕ ಪಾತ್ರ ಏನು?
    ಭಾರತ ಮತ್ತು ಪಾಕಿಸ್ತಾನ ನಡುವೆ ನಾಲ್ಕು ಯುದ್ಧಗಳು ನಡೆದಿದೆ. ಈ ಸಂದರ್ಭದಲ್ಲಿ ಅಮೆರಿಕದ ಪಾತ್ರವೇನು ಎಂಬುದನ್ನು ನೋಡಬೇಕಿದೆ. ಪಾಕಿಸ್ತಾನ ವಿಷಯ ಹೊರತುಪಡಿಸಿಯೂ, ಭಾರತ ಮತ್ತು ಅಮೆರಿಕ ಸ್ವತಂತ್ರವಾದ ದ್ವಿಪಕ್ಷೀಯ ಸಂಬಂಧವನ್ನು ಹೊಂದಿವೆ.

    1947ರ ಭಾರತ-ಪಾಕಿಸ್ತಾನ ಯುದ್ಧ
    ಟ್ರಂಪ್ ಈಗ ಮಾಡುತ್ತಿರುವುದಕ್ಕೆ ತದ್ವಿರುದ್ಧವಾಗಿ, 1947ರಲ್ಲಿ ಭಾರತ ಮತ್ತು ಪಾಕಿಸ್ತಾನ ತಮ್ಮ ಸಮಸ್ಯೆಗಳನ್ನು ದ್ವಿಪಕ್ಷೀಯವಾಗಿ ಪರಿಹರಿಸಿಕೊಳ್ಳಬೇಕೆಂದು ಅಮೆರಿಕ ಬಯಸಿತ್ತು. ಭಾರತ ಮತ್ತು ಪಾಕಿಸ್ತಾನ ನೇರ ಮಾತುಕತೆಯ ಮೂಲಕ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೆಂದು ನಾವು ಹೆಚ್ಚು ಬಯಸುತ್ತೇವೆ. ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಣೆಯನ್ನು ಮೇಲ್ವಿಚಾರಣೆ ಮಾಡಲು ವಿಶ್ವಸಂಸ್ಥೆಯನ್ನು ವಿನಂತಿಸುವ ನಿರ್ಣಯವನ್ನು ಭಾರತ ಅಥವಾ ಪಾಕಿಸ್ತಾನ ಮಂಡಿಸಿ, ಅದನ್ನು ಯುನೈಟೆಡ್ ಕಿಂಗ್‌ಡಮ್ ಬೆಂಬಲಿಸಿದರೆ ಯುನೈಟೆಡ್ ಸ್ಟೇಟ್ಸ್ ನಿಯೋಗವು ಸಹ ನಿರ್ಣಯವನ್ನು ಬೆಂಬಲಿಸಬೇಕು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಭಾರತದಲ್ಲಿನ ರಾಯಭಾರ ಕಚೇರಿಗೆ ಕಳುಹಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

    1962ರ ಭಾರತ-ಚೀನಾ ಯುದ್ಧ
    ಈ ಯುದ್ಧದಲ್ಲಿ, ಅಮೆರಿಕವು ಭಾರತಕ್ಕೆ ಸಹಾಯ ಮಾಡಿತು. ಮಿಲಿಟರಿ ಸರಬರಾಜುಗಳನ್ನು ವಿಮಾನದ ಮೂಲಕ ಸಾಗಿಸಿತು. ಆದಾಗ್ಯೂ, ಈ ರೀತಿಯಾಗಿ ಸೃಷ್ಟಿಯಾದ ಸೌಹಾರ್ದತೆಯನ್ನು ಬಳಸಿಕೊಂಡು ಅದು ಯುಕೆ ಜೊತೆ ಸೇರಿ ಭಾರತವನ್ನು ಪಾಕಿಸ್ತಾನದೊಂದಿಗೆ ಮಾತುಕತೆಗೆ ಒತ್ತಡ ಹೇರಿತು. ಆರು ಸುತ್ತಿನ ಮಾತುಕತೆಗಳು ನಡೆದವು. ಆದರೆ ಯಾವುದೇ ಪ್ರಗತಿಯಾಗಲಿಲ್ಲ. ಆಗ ಉಭಯ ದೇಶಗಳ ನಡುವೆ ಹೆಚ್ಚಿನ ಸಂಘರ್ಷ ಆಗದಂತೆ ಯುಎಸ್ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ತಡೆದರು.

    ಯುದ್ಧದ ಸಮಯದಲ್ಲಿ ಪಾಕಿಸ್ತಾನದ ತಟಸ್ಥತೆಗೆ ಕಾಶ್ಮೀರದಲ್ಲಿ ಭಾರತದಿಂದ ಪರಿಹಾರ ಬೇಕೆಂದು ಆಗ ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್, ಕೆನಡಿಗೆ ಹೇಳಿದರು. ಅಂತಹ ಯಾವುದೇ ಪರಿಹಾರವನ್ನು ಸಹಿಸಲಾಗುವುದಿಲ್ಲ. ಹಿಮಾಲಯ ಯುದ್ಧದಲ್ಲಿ ಪಾಕಿಸ್ತಾನದ ಹಸ್ತಕ್ಷೇಪವನ್ನು ಅಮೆರಿಕ ಪ್ರತಿಕೂಲ ಕೃತ್ಯವೆಂದು ನೋಡುತ್ತದೆ ಎಂದು ಕೆನಡಿ ಅಯೂಬ್‌ಗೆ ಸ್ಪಷ್ಟಪಡಿಸಿದರು.

    1971ರ ಭಾರತ-ಪಾಕಿಸ್ತಾನ ಯುದ್ಧ
    ಅಮೆರಿಕವು ಪಾಕಿಸ್ತಾನವನ್ನು ಅತ್ಯಂತ ಬಲವಾಗಿ ಮತ್ತು ಸಾರ್ವಜನಿಕವಾಗಿ ಬೆಂಬಲಿಸಿದ ಸಂದರ್ಭ ಇದಾಗಿತ್ತು. ಬಂಗಾಳ ಕೊಲ್ಲಿಯ ಕಡೆಗೆ ಯುದ್ಧನೌಕೆಗಳನ್ನು ಸಹ ರವಾನಿಸಿತ್ತು. ಅಮೆರಿಕ ವಿದೇಶಾಂಗ ಇಲಾಖೆಯು ಇತಿಹಾಸಕಾರರ ಕಚೇರಿ ಎಂಬ ವೆಬ್‌ಸೈಟ್ ಅನ್ನು ಹೊಂದಿದೆ. 1971ರ ಯುದ್ಧದ ಕುರಿತಾದ ಅದರ ಲೇಖನದಲ್ಲಿ, ಪಾಕಿಸ್ತಾನವು ಅಮೆರಿಕ ಮತ್ತು ಚೀನಾ ರಾಜತಾಂತ್ರಿಕ ಸಂಬಂಧಗಳನ್ನು ಪ್ರಾರಂಭಿಸಲು ಸಹಾಯ ಮಾಡಿದೆ. ಹೀಗಾಗಿ, ಅಮೆರಿಕವು ಭಾರತದ ವಿರುದ್ಧ ಪಾಕಿಸ್ತಾನವನ್ನು ಬೆಂಬಲಿಸಲು ನಿರ್ಧರಿಸಿತು ಎಂದು ಹೇಳುತ್ತದೆ.

    1999ರ ಕಾರ್ಗಿಲ್ ಯುದ್ಧ
    ಹಿಂದಿನ ಯುದ್ಧದಲ್ಲಿ ಅಮೆರಿಕ ಪಾಕಿಸ್ತಾನಕ್ಕೆ ಹತ್ತಿರವಾಗಿತ್ತು. ಆದರೆ, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತದೊಂದಿಗಿನ ತನ್ನ ಸಂಬಂಧವನ್ನು ಮರು ವ್ಯಾಖ್ಯಾನಿಸಿತು. ಪಾಕಿಸ್ತಾನವು ಕಾರ್ಗಿಲ್ ಬಳಿ ನಿಯಂತ್ರಣ ರೇಖೆಯನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದೆ ಎಂದು ಅಮೆರಿಕ ಹೇಳಿತು. ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್, ಪಾಕಿಸ್ತಾನವು ಯುದ್ಧವನ್ನು ಎದುರಿಸುವ ಅಪಾಯವನ್ನುಂಟುಮಾಡಿದೆ ಎಂದು ದೂಷಿಸಲು ಕೂಡ ಹಿಂಜರಿಯಲಿಲ್ಲ. ಮೊದಲ ಬಾರಿಗೆ, ಅಮೆರಿಕದ ಆಡಳಿತವು ಪಾಕಿಸ್ತಾನದ ಆಕ್ರಮಣದ ವಿರುದ್ಧ ಭಾರತದ ಪರವಾಗಿ ಸಾರ್ವಜನಿಕವಾಗಿ ನಿಂತಿದ ಸಂದರ್ಭ ಇದಾಗಿತ್ತು. ಪಾಕಿಸ್ತಾನವನ್ನು ಐಔಅ ಹಿಂದೆ ಸರಿಯುವಂತೆ ಮಾಡುವಲ್ಲಿ ಕ್ಲಿಂಟನ್ ಪ್ರಮುಖ ಪಾತ್ರ ವಹಿಸಿದರು. ಇದರ ನಂತರ, 2000 ರಲ್ಲಿ ಕ್ಲಿಂಟನ್ ಉಪಖಂಡಕ್ಕೆ ಭೇಟಿ ನೀಡಿದರು. 20 ವರ್ಷಗಳಿಗೂ ಹೆಚ್ಚು ಅವಧಿಯಲ್ಲಿ ಭಾರತಕ್ಕೆ ಬಂದ ಮೊದಲ ಅಮೆರಿಕ ಅಧ್ಯಕ್ಷರು ಅವರು. ಈ ಯುದ್ಧಗಳಲ್ಲದೆ, 2001 ರ ಸಂಸತ್ತಿನ ದಾಳಿ ಮತ್ತು 2008 ರ ಮುಂಬೈ ಭಯೋತ್ಪಾದಕ ದಾಳಿಯ ನಂತರ ಉದ್ವಿಗ್ನತೆಯನ್ನು ಶಮನಗೊಳಿಸಲು ಅಮೆರಿಕ ಕೆಲಸ ಮಾಡಿದೆ.

  • ನಾಲ್ಕೂ ಅಲ್ಲ, ಐದೂ ಅಲ್ಲ; ಭಾರತ ವಿಶ್ವದ 3ನೇ ಅತಿ ದೊಡ್ಡ ಆರ್ಥಿಕತೆಯೇ?- ಆರ್ಥಿಕ ತಜ್ಞರು ಹೇಳೋದೇನು?

    ನಾಲ್ಕೂ ಅಲ್ಲ, ಐದೂ ಅಲ್ಲ; ಭಾರತ ವಿಶ್ವದ 3ನೇ ಅತಿ ದೊಡ್ಡ ಆರ್ಥಿಕತೆಯೇ?- ಆರ್ಥಿಕ ತಜ್ಞರು ಹೇಳೋದೇನು?

    ಭಾರತದ (India) ಜಾಗತಿಕ ಆರ್ಥಿಕತೆಯಲ್ಲಿ ಪ್ರಮುಖ ಸ್ಥಾನವೊಂದನ್ನು ಪಡೆದುಕೊಂಡಿದೆ. ಹಲವು ಬಲಿಷ್ಠ ರಾಷ್ಟ್ರಗಳನ್ನೂ ಹಿಂದಿಕ್ಕಿ ಸಾಧನೆ ಮಾಡಿದೆ. ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಭಾರತವು ಬಡತನ ಮತ್ತು ಆರ್ಥಿಕ ಬಿಕ್ಕಟ್ಟಿನಂತಹ ಸಮಸ್ಯೆಗಳನ್ನು ಎದುರಿಸಿತ್ತು. ಇದೆಲ್ಲವನ್ನೂ ಮೆಟ್ಟಿನಿಂತು ಆರ್ಥಿಕ ಪ್ರಗತಿಯತ್ತ ಹೆಜ್ಜೆ ಇಟ್ಟಿತು. ದೇಶದ ನಾಯಕರು ಹಲವಾರು ಸುಧಾರಣಾ ನೀತಿಗಳನ್ನು ಜಾರಿಗೊಳಿಸಿದರು. ಖಾಸಗೀಕರಣ, ಜಾಗತೀಕರಣದಂತಹ ದಿಟ್ಟ ಹೆಜ್ಜೆಗಳು ದೇಶದ ಆರ್ಥಿಕ ಪ್ರಗತಿ ದಿಕ್ಕನ್ನೇ ಬದಲಿಸಿದವು. ‘ವಿಕಸಿತ ಭಾರತ’ದಂತಹ ಪರಿಕಲ್ಪನೆಯೂ ದೇಶದ ಆರ್ಥಿಕತೆಗೆ ಬೂಸ್ಟ್ ನೀಡಿತು. ಭಾರತವು ಈಗ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ. ಮುಂದಿನ ವರ್ಷಗಳಲ್ಲಿ ಜನಸಂಖ್ಯಾ ಲಾಭಾಂಶವನ್ನು ಗಮನದಲ್ಲಿಟ್ಟುಕೊಂಡು ಆರ್ಥಿಕವಾಗಿ ಮತ್ತಷ್ಟು ಪ್ರಗತಿ ಹೊಂದುವ ಗುರಿಯನ್ನು ಭಾರತ ಹೊಂದಿದೆ.

    ಜಾಗತಿಕ ಆರ್ಥಿಕತೆಯಲ್ಲಿ (Economy) ಜಪಾನ್ (Japan) ದೇಶವನ್ನೂ ಹಿಂದಿಕ್ಕಿ ಭಾರತ ಈಗ ನಾಲ್ಕನೇ ಸ್ಥಾನಕ್ಕೇರಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಇತ್ತೀಚಿನ ದತ್ತಾಂಶವನ್ನು ಉಲ್ಲೇಖಿಸಿ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ತಿಳಿಸಿದ್ದಾರೆ. ಆದರೆ, ಇವರ ಹೇಳಿಕೆಯು ವಿಭಿನ್ನ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಒಂದೆಡೆ ಜಪಾನ್ ಹಿಂದಿಕ್ಕಿ ಭಾರತ ಮಾಡಿರುವ ಸಾಧನೆಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಮತ್ತೊಂದೆಡೆ, ಭಾರತ ಇನ್ನೂ ನಾಲ್ಕನೇ ಸ್ಥಾನದಲ್ಲಿದೆಯಾ? ಅಥವಾ 3ನೇ ಸ್ಥಾನದಲ್ಲಿದೆಯಾ? ಎಂಬ ಪ್ರಶ್ನೆ ವ್ಯಕ್ತವಾಗಿದೆ. ಈ ಬಗ್ಗೆ ಆರ್ಥಿಕ ತಜ್ಞರು ಹೇಳೋದೇನು?

    ಭಾರತ 3ನೇ ಅತಿದೊಡ್ಡ ಆರ್ಥಿಕತೆ!
    ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದೆ. ವಾಸ್ತವವೆಂದರೆ, ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ದಿನಗಳಿಂದಲೂ ಅದು ಹಾಗೆಯೇ ಇದೆ. 2009ರಲ್ಲಿ ದೇಶವು 3ನೇ ಅತಿದೊಡ್ಡ ಆರ್ಥಿಕತೆಯಾಯಿತು. ಕುತೂಹಲವೆಂದರೆ, ಆಗಲೇ ಜಪಾನ್ ಅನ್ನು ಭಾರತ ಹಿಂದಿಕ್ಕಿದೆ. ಮತ್ತೊಂದು ಗಮನಿಸಬೇಕಾದ ವಿಷಯವೆಂದರೆ, 2016ರಲ್ಲಿ ಅಮೆರಿಕವನ್ನು ಚೀನಾ ಹಿಂದಿಕ್ಕಿ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಆ ವರ್ಷ ನಿರ್ಣಾಯವಾದದ್ದು. ಏಕೆಂದರೆ, ಡೊನಾಲ್ಡ್ ಟ್ರಂಪ್ ಅವರು ಅದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ವರ್ಷವಾಗಿತ್ತು. ಟ್ರಂಪ್ ಮತ್ತು ಜೋ ಬೈಡೆನ್ ಅವರ ಅವಧಿಯಲ್ಲಿ ಚೀನಾ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ದೇಶವಾಗಿದೆ. ಅದನ್ನು ನಿಯಂತ್ರಿಸಲು ಅಮೆರಿಕ ಹಲವಾರು ನೀತಿಗಳನ್ನು ಅನುಸರಿಸುತ್ತಿದೆ. ಇದನ್ನೂ ಓದಿ: ಜಪಾನ್‌ ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾದ ಭಾರತ

    2009ರ ಆರಂಭದಲ್ಲಿಯೇ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಗುತ್ತಿದೆ ಎಂದು ತೋರಿಸುವ ಈ ನಿರ್ದಿಷ್ಟ ಲೆಕ್ಕಾಚಾರವನ್ನು ಹೇಗೆ ಮಾಡಲಾಗುತ್ತದೆ ಎಂದು ಅನೇಕರು ಪ್ರಶ್ನಿಸಬಹುದು. ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು, ಆರ್ಥಿಕ ಶ್ರೇಯಾಂಕಗಳ ಅರ್ಥಶಾಸ್ತ್ರ ಮತ್ತು ರಾಜಕೀಯ ಎರಡನ್ನೂ ಅರಿಯಬೇಕಿದೆ.

    ಉದಾಹರಣೆಗೆ: ನೀವು ಮತ್ತು ನಿಮ್ಮ ಸಹಪಾಠಿ ಇಬ್ಬರೂ ಒಂದೇ ರೀತಿಯ ಕೆಲಸವನ್ನು ಪಡೆಯುತ್ತೀರಿ ಎಂದು ಭಾವಿಸೋಣ. ಇಬ್ಬರೂ ಸರಿಸುಮಾರು ಒಂದೇ ರೀತಿಯ ಸಂಬಳವನ್ನು ಪಡೆಯುತ್ತೀರಿ. ನೀವು ತಿಂಗಳಿಗೆ 50,000 ರೂ. ಪಡೆಯುತ್ತೀರಿ. ನಿಮ್ಮ ಸ್ನೇಹಿತನಿಗೆ 45,000 ರೂ. ಸಿಗುತ್ತದೆ. ಹೀಗಿದ್ದಾಗ, ನಿಮ್ಮ ಪ್ರಕಾರ ಯಾರು ಉತ್ತರವಾಗಿ ಕೆಲಸ ಮಾಡುತ್ತಿದ್ದಾರೆ? ಈಗ ಮತ್ತೊಂದು ಅಂಶವನ್ನು ಗಮನಿಸೋಣ. ನಿಮ್ಮ ಕೆಲಸ ಮುಂಬೈ ಅಥವಾ ಬೆಂಗಳೂರಿನಲ್ಲಿದೆ. ಆದರೆ, ನಿಮ್ಮ ಸ್ನೇಹಿತನ ಕೆಲಸ ಪಾಟ್ನಾ ಅಥವಾ ಲಕ್ನೋದಲ್ಲಿದೆ. ಈಗ ಯಾರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ?

    ನಿಮ್ಮ ಉತ್ತರವು ನಿಮ್ಮ ಸ್ನೇಹಿತ ಉತ್ತಮವಾಗಿದ್ದಾನೆ ಎಂದಾದರೆ, ನೀವು ‘ಜೀವನ ನಿರ್ವಹಣೆ ವೆಚ್ಚ’ ಎಂಬ ಅಂಶವನ್ನು ಮುಖ್ಯವಾಗಿಟ್ಟುಕೊಂಡು ಹೇಳುತ್ತೀರಿ. ಇದು ‘ಹಣದುಬ್ಬರ’ದಿಂದ ಭಿನ್ನವಾಗಿದೆ. ಜೀವನ ನಿರ್ವಹಣಾ ವೆಚ್ಚವು ನಿಮ್ಮ ಸಂಬಳದ ಕೊಳ್ಳುವ ಶಕ್ತಿಯನ್ನು ಆಧರಿಸಿರುತ್ತದೆ. ನೀವು ಅದೇ ಪ್ರಮಾಣದ ಹಣದಲ್ಲಿ ಏನು ಖರೀದಿಸಬಹುದು? ಇದನ್ನೂ ಓದಿ: ಪಾಕ್‌ಗೆ ಆಪರೇಷನ್ ಸಿಂಧೂರದ ಸೂಕ್ಷ್ಮ ಮಾಹಿತಿ ಹಂಚಿಕೆ – ಪಂಜಾಬ್ ವ್ಯಕ್ತಿ ಅರೆಸ್ಟ್

    ನೀವು ಮುಂಬೈನಲ್ಲಿದ್ದರೆ, ಅಲ್ಲಿನ ಅಪಾರ್ಟ್ಮೆಂಟ್ ಬಾಡಿಗೆಯು ಪಾಟ್ನಾದಲ್ಲಿರುವ ನಿಮ್ಮ ಸ್ನೇಹಿತನ ಬಾಡಿಗೆಗೂ ವ್ಯತ್ಯಾಸವಿರುತ್ತದೆ. ಒಂದು ವೇಳೆ ಬಾಡಿಗೆ ಒಂದೇ ಆದರೆ, ನಿಮ್ಮ ಸ್ನೇಹಿತನಿಗೆ ಸಮಸ್ಯೆಯಾಗಬಹುದು. ಬೆಲೆಗಳು ಎಲ್ಲದಕ್ಕೂ ಬದಲಾಗದಿರಬಹುದು. ಎರಡೂ ನಗರಗಳಲ್ಲಿ ಮೋಟಾರ್ ಬೈಕ್ ಬೆಲೆ ಒಂದೇ ರೀತಿ ಇರುತ್ತದೆ. ಆದರೆ, ಮುಂಬೈನಲ್ಲಿ ನಿಮ್ಮ ಪ್ರಯಾಣಕ್ಕೆ ಮೋಟಾರ್ ಬೈಕ್ ಸಹಕಾರಿ ಎನಿಸಲ್ಲ. ಆದರೆ, ಪಾಟ್ನಾದಲ್ಲಿರುವ ನಿಮ್ಮ ಸ್ನೇಹಿತರಿಗೆ ಅದು ಸಾಕಾಗುವ ಸಾಧ್ಯತೆಯಿದೆ. ಖರೀದಿ ಶಕ್ತಿ ಎರಡೂ ಕಾಲಾನಂತರದಲ್ಲಿ ಬದಲಾಗುತ್ತದೆ. ಮೇಲಿನ ಉದಾಹರಣೆ ಗಮನದಲ್ಲಿಟ್ಟುಕೊಂಡು, ನಿಮ್ಮ ಪೋಷಕರು ಅಥವಾ ಅಜ್ಜರ ಕಾಲದಲ್ಲಿ 100 ರೂ. ಅಥವಾ 10 ರೂ.ಗಳಿಗೆ ಎಷ್ಟು ಖರೀದಿಸಬಹುದಿತ್ತು ಎಂಬುದನ್ನು ನೆನಪಿಸಿಕೊಳ್ಳಿ.

    ಫ್ರಾನ್ಸ್ ಅಥವಾ ಜಪಾನ್ ಭಾರತಕ್ಕಿಂತ ದೊಡ್ಡ ಮತ್ತು ಉತ್ತಮ ಆರ್ಥಿಕತೆ ಎಂದು ನಮಗೆ ಹೇಗೆ ಗೊತ್ತು? ಒಂದು ವಿಧಾನವೆಂದರೆ ನಾಮಮಾತ್ರ ಜಿಡಿಪಿಯನ್ನು ನೋಡುವುದು: ಅಂದರೆ ಒಂದು ವರ್ಷದಲ್ಲಿ ಆರ್ಥಿಕತೆಯ ಭೌಗೋಳಿಕ ಗಡಿಗಳಲ್ಲಿ ಉತ್ಪಾದಿಸುವ ಎಲ್ಲಾ ಸರಕುಗಳು ಮತ್ತು ಸೇವೆಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ಸೇರಿಸುವುದು. ಪರ್ಯಾಯವಾಗಿ, ಆರ್ಥಿಕತೆಯಲ್ಲಿರುವ ಪ್ರತಿಯೊಬ್ಬರಿಗೂ ಸಂಗ್ರಹವಾಗುವ ಪ್ರಸ್ತುತ ಆದಾಯವನ್ನು ನೀವು ಸೇರಿಸಬಹುದು. ನಾಮಮಾತ್ರ ಜಿಡಿಪಿ ಪ್ರಸ್ತುತ ವಿವಾದವನ್ನು ಆಧರಿಸಿದೆ.

    ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಭಾರತವು ನಾಮಮಾತ್ರ ಜಿಡಿಪಿ ಪರಿಭಾಷೆಯಲ್ಲಿ ಯುಕೆಯನ್ನು ಹೇಗೆ ಹಿಂದಿಕ್ಕಿತು ಎಂಬುದನ್ನು ಇದು ತೋರಿಸುತ್ತದೆ. ಆ ಸಮಯದಲ್ಲಿ ಜರ್ಮನಿ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಜಪಾನ್ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿತ್ತು ಎಂಬುದು ಗಮನಾರ್ಹ.

    2024 ರ ಅಂತ್ಯದ ವೇಳೆಗೆ ಭಾರತ ಇನ್ನೂ ಜಪಾನ್ ಮತ್ತು ಜರ್ಮನಿ ಎರಡರ ಹಿಂದೆ ಇತ್ತು ಎಂದು ಚಾರ್ಟ್-2 ಮತ್ತಷ್ಟು ತೋರಿಸುತ್ತದೆ. ಆದರೆ ಅಷ್ಟೇ ಮುಖ್ಯವಾಗಿ, ಐಎಂಎಫ್‌ನ ಪ್ರಕ್ಷೇಪಗಳು (ಚುಕ್ಕೆಗಳ ರೇಖೆ) ಭಾರತವು ಜಪಾನ್ ಮತ್ತು ಜರ್ಮನಿಯನ್ನು ಹಿಂದಿಕ್ಕುವುದು ಕೇವಲ ಸಮಯದ ವಿಷಯವಾಗಿದೆ ಎಂದು ತೋರಿಸುತ್ತದೆ. ಇಲ್ಲಿ ನೆನಪಿಡಬೇಕಾದ ನಿರ್ಣಾಯಕ ವಿಷಯವೆಂದರೆ ಚಾಪ್ಟರ್ 2 ರಲ್ಲಿ ಇಲ್ಲಿ ಯೋಜಿಸಲಾದ ನಾಮಮಾತ್ರ ಜಿಡಿಪಿ ಯುಎಸ್ ಡಾಲರ್ ಪರಿಭಾಷೆಯಲ್ಲಿದೆ. ಇದು ಎರಡು ನೇರ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಇದನ್ನೂ ಓದಿ: ಅಸ್ಸಾಂನಲ್ಲಿ ಭೀಕರ ಪ್ರವಾಹ – ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾಗೆ ಮೋದಿ ಕರೆ

    ಭಾರತದ ಜಿಡಿಪಿಯನ್ನು ಭಾರತೀಯ ರೂಪಾಯಿಗಳಲ್ಲಿ ಎಣಿಸಿದಾಗಲೂ ಹಲವಾರು ಪರಿಷ್ಕರಣೆಗಳಿಗೆ ಒಳಗಾಗುತ್ತದೆ. ಭಾರತೀಯ ಜಿಡಿಪಿಯನ್ನು ರೂಪಾಯಿಗಳಿಂದ ಯುಎಸ್ ಡಾಲರ್‌ಗಳಿಗೆ ಪರಿವರ್ತಿಸಲು ವಿನಿಮಯ ದರದ ಅಗತ್ಯವಿದೆ. ಈ ವಿನಿಮಯ ದರವು ಕಾಲಾನಂತರದಲ್ಲಿ ಏರಿಳಿತವಾಗಿದೆ. ಭಾರತೀಯ ರೂಪಾಯಿ ಯುಎಸ್ ಡಾಲರ್ ವಿರುದ್ಧ ದುರ್ಬಲಗೊಂಡರೆ ಮತ್ತು ಜಪಾನಿನ ಯೆನ್ ಡಾಲರ್ ವಿರುದ್ಧ ಬಲಗೊಂಡರೆ, ಭಾರತ ಮತ್ತು ಜಪಾನ್‌ನ ಆಧಾರವಾಗಿರುವ ಜಿಡಿಪಿ ಒಂದು ಘಟಕದಿಂದ ಬದಲಾಗದಿದ್ದರೂ ಸಹ ಸಾಪೇಕ್ಷ ಸ್ಥಾನಗಳು ಬದಲಾಗಬಹುದು. ಆದರೆ, ನಾಮಮಾತ್ರ ಜಿಡಿಪಿ ಹೋಲಿಕೆಗಳಲ್ಲಿರುವ ದೊಡ್ಡ ಸಮಸ್ಯೆಯೆಂದರೆ ಅವು ಕೊಳ್ಳುವ ಶಕ್ತಿಯ ಅಂಶವನ್ನು ಕಳೆದುಕೊಳ್ಳುವುದರಿಂದ ಅವು ಅರ್ಥಪೂರ್ಣವಾಗಿಲ್ಲ. ಈ ಕಾರಣಕ್ಕಾಗಿಯೇ ಐಎಂಎಫ್ ಖರೀದಿ ಶಕ್ತಿಯ ಸಮಾನತೆ (ಪಿಪಿಪಿ) ಎಂಬ ಆಧಾರದ ಮೇಲೆ ಜಿಡಿಪಿಯನ್ನು ಲೆಕ್ಕಾಚಾರ ಮಾಡುತ್ತದೆ.

    ಪಿಪಿಪಿ ಎಂದರೇನು?
    ಈಗ ಎಲ್ಲವೂ ತಲೆಕೆಳಗಾಗಲಿದೆ. ನಿಮ್ಮ ಕೆಲಸ ಇನ್ನೂ ದೆಹಲಿಯಲ್ಲಿರುವಾಗ ನಿಮ್ಮ ಸ್ನೇಹಿತ ಪಾಟ್ನಾದಿಂದ ಪ್ಯಾರಿಸ್‌ಗೆ ಸ್ಥಳಾಂತರಗೊಳ್ಳುತ್ತಾನೆ ಎಂದುಕೊಳ್ಳೋಣ. ನೀವು ಅವನ ಸಂಬಳವನ್ನು ವಿನಿಮಯ ದರದಿಂದ ಪರಿವರ್ತಿಸಿದಾಗ ಅವನು ನಿಮಗಿಂತ ಹೆಚ್ಚು ಗಳಿಸುತ್ತಾನೆ. ಆದರೆ ಇಲ್ಲಿ ಗಮನಾರ್ಹ ಅಂಶವಿರುತ್ತದೆ. ಅವನು ಭಾರತಕ್ಕೆ ಭೇಟಿ ನೀಡಿದಾಗ ಮೊಬೈಲ್ ಫೋನ್‌ಗಳನ್ನು ಖರೀದಿಸುತ್ತಾನೆ, ಕ್ಷೌರ ಮತ್ತು ದಂತ ತಪಾಸಣೆ ಮಾಡಿಸಿಕೊಳ್ಳುತ್ತಾನೆ. ತನ್ನ ಮಕ್ಕಳಿಗೆ ಕಥೆ ಪುಸ್ತಕಗಳನ್ನು ಖರೀದಿಸುತ್ತಾನೆ. ಕೆಲವೊಮ್ಮೆ ಫ್ರಾನ್ಸ್‌ಗೆ ಭಾರತದಿಂದ ಆಹಾರ ಪದಾರ್ಥಗಳನ್ನು ಸಹ ಖರೀದಿಸುತ್ತಾನೆ. ಅವನು ಹಾಗೆ ಮಾಡುವುದು ಸಮಂಜಸವಾಗಿದೆ. ಏಕೆಂದರೆ ಅವನ ನಾಮಮಾತ್ರ ಸಂಬಳ (ಭಾರತೀಯ ರೂಪಾಯಿಗಳಾಗಿ ಪರಿವರ್ತಿಸಿದಾಗ) ನಿಮ್ಮದಕ್ಕಿಂತ ಹೆಚ್ಚಿದ್ದರೂ, ಕೊಳ್ಳುವ ಶಕ್ತಿ ನಿಮ್ಮದಕ್ಕಿಂತ ಹೆಚ್ಚಿಲ್ಲದಿರಬಹುದು.

    ಕೊಳ್ಳುವ ಶಕ್ತಿಯನ್ನು ಅರ್ಥಮಾಡಿಕೊಳ್ಳಲು ಇನ್ನೊಂದು ಮಾರ್ಗ ಇಲ್ಲಿದೆ. ಭಾರತೀಯ ನಗರಗಳಲ್ಲಿ ಸೇವಕಿಯರು ಒದಗಿಸುವ ಅಡುಗೆ ಮತ್ತು ಶುಚಿಗೊಳಿಸುವ ಸೇವೆಗಳ ಬೆಲೆ ಭಾರತೀಯ ರೂಪಾಯಿಗಳಲ್ಲಿ ಮತ್ತು ಇನ್ನೂ ಹೆಚ್ಚು ಯೂರೋ ಅಥವಾ ಡಾಲರ್ ಪರಿಭಾಷೆಯಲ್ಲಿ ಬಹಳ ಕಡಿಮೆ. ಅದೇ ಸೌಲಭ್ಯವನ್ನು ವಿದೇಶದಲ್ಲಿ ಪಡೆಯಬೇಕೆಂದರೆ, ನಿಮ್ಮ ಸ್ನೇಹಿತ ನೀವು ಭಾರತದಲ್ಲಿರುವುದಕ್ಕಿಂತ ಹೆಚ್ಚು ಶ್ರೀಮಂತರಾಗಿರಬೇಕು.

    ಜಿಡಿಪಿಯ ಅರ್ಥಪೂರ್ಣ ಅಂತರರಾಷ್ಟ್ರೀಯ ಹೋಲಿಕೆಗಾಗಿ, ಐಎಂಎಫ್ ಅಂತರರಾಷ್ಟ್ರೀಯ ಹೋಲಿಕೆ ಕಾರ್ಯಕ್ರಮ (ಐಸಿಪಿ) ಒದಗಿಸಿದ ಪಿಪಿಪಿ ಅಂದಾಜುಗಳನ್ನು ಬಳಸುತ್ತದೆ. ಪಿಪಿಪಿ-ಆಧಾರಿತ ಜಿಡಿಪಿ ಅಂದಾಜಿನ ಪ್ರಕಾರ ಭಾರತವು 2009 ರಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದನ್ನೂ ಓದಿ: RCB ಇಂಪ್ಯಾಕ್ಟ್ ಪ್ಲೇಯರ್ ಆಗಿ ಸಿಂಧನೂರಿನ ಮನೋಜ್ ಬಾಂಡಗೆ – ಕುಟುಂಬಸ್ಥರಿಂದ ಗೆಲುವಿನ ಶುಭಹಾರೈಕೆ

    ರಾಜಕೀಯ ಲೆಕ್ಕಾಚಾರ
    ನಾಮಮಾತ್ರ ಜಿಡಿಪಿ ಪರಿಭಾಷೆಯಲ್ಲಿ (ಚಾಪ್ಟರ್ 2), ಭಾರತೀಯ ಆರ್ಥಿಕತೆಯು ಕೆಲವು ದೊಡ್ಡ ಆರ್ಥಿಕತೆಗಳನ್ನು ಹಿಂದಿಕ್ಕುವಲ್ಲಿ ದೊಡ್ಡ ಹೆಜ್ಜೆಯನ್ನು ಇಟ್ಟಿದೆ. 2004 ರಿಂದ ಸರಾಸರಿ 6% ರಿಂದ 7% ರಷ್ಟು ಬೆಳವಣಿಗೆ ಕಂಡಿರುವ ಭಾರತದ ಆರ್ಥಿಕತೆಗೆ ಶ್ರೇಯಸ್ಸು ಸಲ್ಲುತ್ತದೆ. ಆದರೆ ಸಂಪೂರ್ಣ ಚಿತ್ರಣವನ್ನು ಪಡೆಯಲು ಭಾರತವು ಹಿಂದಿಕ್ಕಿರುವ ಅಥವಾ ಹಿಂದಿಕ್ಕುವ ಪ್ರಕ್ರಿಯೆಯಲ್ಲಿರುವ ಆರ್ಥಿಕತೆಗಳ ಪಥವನ್ನು ಸಹ ನೋಡಬೇಕು.

    ಅಮೆರಿಕ ಮತ್ತು ಚೀನಾ ಹೊರತುಪಡಿಸಿ, ಬಹುತೇಕ ಎಲ್ಲಾ ಪಾಶ್ಚಿಮಾತ್ಯ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳು 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಹೆಚ್ಚಾಗಿ ಸ್ಥಗಿತಗೊಂಡಿವೆ. ಜಪಾನ್ ನೋಡುವುದಾದರೆ, 2025 ರಲ್ಲಿ ಅದರ ವಾರ್ಷಿಕ ಜಿಡಿಪಿ 1995 ರಲ್ಲಿ 30 ವರ್ಷಗಳ ಹಿಂದೆ ಇದ್ದಕ್ಕಿಂತ ಕಡಿಮೆಯಿರುತ್ತದೆ ಎಂದು ಅಂದಾಜಿಸಲಾಗಿದೆ. ಯಾವುದೇ ಸರ್ಕಾರವು ನಾಮಮಾತ್ರ ಜಿಡಿಪಿ ನಿಯಮಗಳ ಮೇಲೆ ಕ್ರೆಡಿಟ್ ಪಡೆಯುವುದು ತುಂಬಾ ಸುಲಭ. ಆದರೆ ಪಿಪಿಪಿ ಪರಿಭಾಷೆಯಲ್ಲಿ, ವರ್ಷಗಳಲ್ಲಿ ಭಾರತವು ತನ್ನ ಮಟ್ಟದಲ್ಲಿ ಸುಧಾರಿಸಿದ್ದರೂ, ಅದರ ಶ್ರೇಣಿ ಅಥವಾ ಸಾಪೇಕ್ಷ ಸ್ಥಾನವು ಬದಲಾಗಿಲ್ಲ. ಪ್ರಸ್ತುತ ಸರ್ಕಾರವು (ಎನ್‌ಡಿಎ) ಅಧಿಕಾರ ವಹಿಸಿಕೊಳ್ಳುವ ಮೊದಲೇ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿತ್ತು.

    ಭಾರತೀಯರು ರಾಜಕೀಯ ವಿಭಜನೆಯಾದ್ಯಂತ ಸಣ್ಣ ಅಂಕಗಳ ಅಂಕಗಳನ್ನು ಮೀರಿ ನೋಡಿದರೆ, ನಕಲಿ ಸಮೃದ್ಧಿಯನ್ನು ಪ್ರಯತ್ನಿಸುವ ಮೊದಲು ಭಾರತೀಯ ಆರ್ಥಿಕತೆಯು ಬಹಳ ದೂರ ಸಾಗಬೇಕಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಚಾರ್ಟ್ 3 ಇದನ್ನು ತಲಾ ನಾಮಮಾತ್ರ ಜಿಡಿಪಿಯನ್ನು ನಕ್ಷೆ ಮಾಡುವ ಮೂಲಕ ಬಹಿರಂಗಪಡಿಸುತ್ತದೆ. ಒಟ್ಟಾರೆ ನಾಮಮಾತ್ರ ಜಿಡಿಪಿ ಪರಿಭಾಷೆಯಲ್ಲಿ ಭಾರತ 2021 ರಲ್ಲಿ ಯುಕೆಯನ್ನು ಹಿಂದಿಕ್ಕಿತು ಆದರೆ ತಲಾ ಜಿಡಿಪಿಗೆ ಏನಾಯಿತು ಎಂಬುದನ್ನು ನೋಡಿ. ಇದನ್ನೂ ಓದಿ: 18ನೇ ಐಪಿಎಲ್‌, 18ನೇ ಸಂಖ್ಯೆಗೆ ನಂಟು – 2013 ರಿಂದ ಆರ್‌ಸಿಬಿ ಪರ 18 ಟ್ರೆಂಡಿಂಗ್‌!

    2021 ರಲ್ಲಿ, ಭಾರತದ ನಾಮಮಾತ್ರ ತಲಾ ಜಿಡಿಪಿ 2,250 ಡಾಲರ್ ಮತ್ತು ಯುಕೆಯ ತಲಾ ಜಿಡಿಪಿ 46,115 ಡಾಲರ್ ಆಗಿತ್ತು. ಅದು ಭಾರತದ 20 ಪಟ್ಟು ಹೆಚ್ಚು. ಅಂದಿನಿಂದ ಭಾರತದ ಒಟ್ಟಾರೆ ನಾಮಮಾತ್ರ ಜಿಡಿಪಿ ಪ್ರತಿ ವರ್ಷ ಯುಕೆಗಿಂತ ಹೆಚ್ಚಾಗಿದೆ. ಆದರೆ 2025 ರ ಅಂತ್ಯದ ವೇಳೆಗೆ (ಸುಬ್ರಹ್ಮಣ್ಯಂ ಭಾರತ ಜಪಾನ್ ಅನ್ನು ಹಿಂದಿಕ್ಕಿದೆ ಎಂದಿರುವ ಅಂಕಿಅಂಶ), ಯುಕೆಯ ನಾಮಮಾತ್ರ ತಲಾ ಜಿಡಿಪಿ 54,949 ಡಾಲರ್ ಆಗಿದ್ದರೆ, ಭಾರತದ ತಲಾ ಜಿಡಿಪಿ 2,879 ಡಾಲರ್‌ಗೆ ಏರುತ್ತಿತ್ತು.

    ಬೇರೆ ರೀತಿಯಲ್ಲಿ ಹೇಳುವುದಾದರೆ, ಭಾರತದ ಒಟ್ಟಾರೆ ನಾಮಮಾತ್ರ ಜಿಡಿಪಿ ಯುಕೆಗಿಂತ ಕ್ರಮೇಣ ಹೆಚ್ಚಿದ್ದರೂ ಸಹ, 2021 ಮತ್ತು 2025 ರ ನಡುವೆ ಯುಕೆಯಲ್ಲಿ ತಲಾ ಆದಾಯವು 8,000 ಡಾಲರ್‌ಗಿಂತ ಹೆಚ್ಚಾಗಿದೆ (ಅದು ಭಾರತದ ಸರಾಸರಿ ಜಿಡಿಪಿಗಿಂತ ನಾಲ್ಕು ಪಟ್ಟು ಹೆಚ್ಚು). ಭಾರತದ ತಲಾ ಆದಾಯವು 600 ಡಾಲರ್ ರಷ್ಟು ಹೆಚ್ಚಾಗಿದೆ. ಇನ್ನೊಂದು ದೃಷ್ಟಿಕೋನವನ್ನು ಒದಗಿಸಬೇಕಾದ ಸಂಖ್ಯೆ ಎಂದರೆ ಭಾರತೀಯ ಕರೆನ್ಸಿಯಲ್ಲಿ ಭಾರತದ ನಾಮಮಾತ್ರ ಜಿಡಿಪಿ ವಾರ್ಷಿಕ 2.3 ಲಕ್ಷ ರೂ.

    ಪಿಪಿಪಿ ಆಧಾರಿತ ತಲಾ ಜಿಡಿಪಿಯ ವಿಷಯದಲ್ಲಿಯೂ ಸಹ, ಭಾರತವು ವಿಶ್ವ ಸರಾಸರಿಗಿಂತ ಬಹಳ ಕೆಳಗಿದೆ. ವಿಶ್ವ ಸರಾಸರಿ 100 ಆಗಿದ್ದರೆ, ಪಿಪಿಪಿ ಆಧಾರಿತ ತಲಾ ಜಿಡಿಪಿಯ ವಿಷಯದಲ್ಲಿ ಭಾರತವು 40% ರಷ್ಟಿದೆ. .

  • ಭಯೋತ್ಪಾದನೆ ತೊಡೆದು ಹಾಕಲು ನಾವು ಸಿದ್ಧ: ಪಾಕ್‌ ವಿರುದ್ಧ ಅಮೆರಿಕದಲ್ಲಿ ಗುಡುಗಿದ ಶಶಿ ತರೂರ್‌

    ಭಯೋತ್ಪಾದನೆ ತೊಡೆದು ಹಾಕಲು ನಾವು ಸಿದ್ಧ: ಪಾಕ್‌ ವಿರುದ್ಧ ಅಮೆರಿಕದಲ್ಲಿ ಗುಡುಗಿದ ಶಶಿ ತರೂರ್‌

    ನ್ಯೂಯಾರ್ಕ್‌: 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಪಾಕ್‌ನಲ್ಲಿರುವ ಉಗ್ರರ ನೆಲೆಗಳನ್ನು ಭಾರತ ಉಡೀಸ್‌ ಮಾಡಿದ ಕ್ರಮಗಳ ಬಗ್ಗೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ತಿಳಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಜಗತ್ತು ಒಟ್ಟಾಗಿ ಸೇರಬೇಕೆಂದು ಕರೆ ಕೊಟ್ಟಿದ್ದಾರೆ.

    9/11 ಸ್ಮಾರಕಕ್ಕೆ ಸರ್ವಪಕ್ಷ ನಿಯೋಗದ ಸದಸ್ಯರು ಭೇಟಿ ನೀಡಿದರು. ಬಳಿಕ ಭಾರತೀಯ ಕಾನ್ಸುಲೆಟ್‌ನಲ್ಲಿ ಶಶಿ ತರೂರ್‌ ಅವರು ಭಾರತದ ಮೇಲೆ ಉಗ್ರರ ದಾಳಿಗಳ ಕುರಿತು ತಿಳಿಸಿದ್ದಾರೆ.

    ಪಹಲ್ಗಾಮ್‌ ಉಗ್ರರ ದಾಳಿಯು ನಮಗೆ ಭಾವನಾತ್ಮಕ ವಿಚಾರ. ನಮ್ಮ ದೇಶದಲ್ಲಿ ಕ್ರೂರ ಭಯೋತ್ಪಾದಕ ದಾಳಿಯ ಗಾಯಗಳನ್ನು ಇನ್ನೂ ಹೊಂದಿರುವ ನಗರದಲ್ಲಿ ನಾವಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಾವು ಹೋಗುತ್ತಿರುವ ಪ್ರತಿಯೊಂದು ದೇಶದಲ್ಲೂ ಸಾರ್ವಜನಿಕ ಮತ್ತು ರಾಜಕೀಯ ಅಭಿಪ್ರಾಯದ ವಿವಿಧ ವರ್ಗಗಳೊಂದಿಗೆ ಮಾತನಾಡುವುದು ನಮ್ಮ ಆಲೋಚನೆಯಾಗಿದೆ. ಭಯೋತ್ಪಾದನಾ ಕೃತ್ಯಗಳು ಜಗತ್ತಿನಾದ್ಯಂತ ಜನತೆಗೆ ತೊಂದರೆಯಾಗಿದೆ. ಮೂಲಭೂತ ಸಮಸ್ಯೆ ಉಳಿದಿದೆ ಎಂದು ಹೇಳಿದ್ದಾರೆ.

    ಜನರ ಧರ್ಮವನ್ನು ಕೇಳಿ ಉಗ್ರರು ಗುಂಡಿಕ್ಕಿ ಜನರನ್ನು ಕೊಂದಿದ್ದಾರೆ. ಮೃತರಲ್ಲಿ ಹೆಚ್ಚಿನವರು ಹಿಂದೂಗಳಾಗಿದ್ದಾರೆ. ಈ ದುಷ್ಕೃತ್ಯ ನಡೆದ ಒಂದು ಗಂಟೆಯೊಳಗೆ, ರೆಸಿಸ್ಟೆನ್ಸ್ ಫ್ರಂಟ್ ಎಂಬ ಗುಂಪು ಇದಕ್ಕೆ ಕಾರಣ ಎಂದು ಹೇಳಿಕೊಂಡಿತ್ತು. ರೆಸಿಸ್ಟೆನ್ಸ್ ಫ್ರಂಟ್ ಕೆಲವು ವರ್ಷಗಳಿಂದ ನಿಷೇಧಿತ ಲಷ್ಕರ್ ಇ ತೈಬಾ ಸಂಘಟನೆಯ ಭಾಗ ಎಂದು ತಿಳಿದುಬಂದಿದೆ. ಇದನ್ನು ಅಮೆರಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ ಎಂದು ಉಲ್ಲೇಖಿಸಿದ್ದಾರೆ.

    9 ನಿರ್ದಿಷ್ಟ ಭಯೋತ್ಪಾದಕ ನೆಲೆಗಳು, ಪ್ರಧಾನ ಕಚೇರಿಗಳು ಮತ್ತು ಲಾಂಚ್‌ಪ್ಯಾಡ್‌ಗಳ ಮೇಲೆ ನಿಖರವಾದ ಭಾರತ ನಿಖರವಾದ ದಾಳಿ ನಡೆಸಿದೆ. ಭಯೋತ್ಪಾದನೆ ವಿರುದ್ಧ ಭಾರತ ಸ್ಪಷ್ಟ ಸಂದೇಶ ರವಾನಿಸಿದೆ. ಇದು ದೀರ್ಘಾವಧಿಯ ಯುದ್ಧದಲ್ಲಿ ಆರಂಭಿಕ ದಾಳಿಯಲ್ಲ, ಬದಲಾಗಿ ಕೇವಲ ಪ್ರತೀಕಾರದ ಕ್ರಮವಾಗಿದೆ. ಆ ಕೃತ್ಯವನ್ನು ನಿಲ್ಲಿಸಲು ನಾವು ಸಿದ್ಧರಿದ್ದೇವೆ ಎಂಬ ಸಂದೇಶವನ್ನು ರವಾನಿಸಿದೆ ಎಂದು ತರೂರ್‌ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.