Tag: US

  • H-1B Visa ಹೊಂದಿರುವವರು 24 ಗಂಟೆಯೊಳಗೆ ಅಮೆರಿಕಗೆ ವಾಪಸ್‌ ಬನ್ನಿ: ಮೆಟಾ, ಮೈಕ್ರೋಸಾಫ್ಟ್‌ ಸೂಚನೆ

    H-1B Visa ಹೊಂದಿರುವವರು 24 ಗಂಟೆಯೊಳಗೆ ಅಮೆರಿಕಗೆ ವಾಪಸ್‌ ಬನ್ನಿ: ಮೆಟಾ, ಮೈಕ್ರೋಸಾಫ್ಟ್‌ ಸೂಚನೆ

    – ಹೆಚ್‌-1ಬಿ ವೀಸಾ ವಾರ್ಷಿಕ ಶುಲ್ಕ 1 ಲಕ್ಷ ಡಾಲರ್‌ಗೆ ಹೆಚ್ಚಳ ಬೆನ್ನಲ್ಲೇ ಪ್ರಮುಖ ಕಂಪನಿಗಳು ಅಲರ್ಟ್‌

    ವಾಷಿಂಗ್ಟನ್: ಅಮೆರಿಕದಿಂದ ಹೊರಗಿರುವ ಹೆಚ್‌-1ಬಿ ವೀಸಾ (H-1B Visa) ಹೊಂದಿರುವ ತಮ್ಮ ಉದ್ಯೋಗಿಗಳಿಗೆ 24 ಗಂಟೆಯೊಳಗೆ ಯುಎಸ್‌ಗೆ ವಾಪಸ್‌ ಬನ್ನಿ ಎಂದು ಮೆಟಾ (Meta), ಮೈಕ್ರೋಸಾಫ್ಟ್‌ನಂತಹ (Microsoft) ಪ್ರಮುಖ ಕಂಪನಿಗಳು ಸೂಚನೆ ನೀಡಿವೆ.

    ವಲಸಿಗರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಹೆಚ್‌-1ಬಿ ವೀಸಾ ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಿಸಿ ಆದೇಶ ಹೊರಡಿಸಿದ್ದಾರೆ. ಘೋಷಣೆ ಅಮೆರಿಕ ಕಂಪನಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಹೆಚ್‌-1ಬಿ ವೀಸಾ ಹೊಂದಿರುವ ತಮ್ಮ ಉದ್ಯೋಗಿಗಳಿಗೆ ಯುಎಸ್‌ಗೆ ತಕ್ಷಣ ಮರಳುವಂತೆ ಸೂಚಿಸಿವೆ. ಇದನ್ನೂ ಓದಿ: ಭಾರತೀಯ ಉದ್ಯೋಗಿಗಳಿಗೆ ಶಾಕ್‌; H-1B ವೀಸಾ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿದ ಟ್ರಂಪ್‌

    ಪ್ರಸ್ತುತ ಅಮೆರಿಕದ ಹೊರಗೆ ವಾಸಿಸುತ್ತಿರುವ ತಮ್ಮ ಉದ್ಯೋಗಿಗಳಿಗೆ ಮರುಪ್ರವೇಶ ನಿರಾಕರಣೆಯನ್ನು ತಪ್ಪಿಸಲು 24 ಗಂಟೆಗಳ ಒಳಗೆ ದೇಶಕ್ಕೆ ಮರಳುವಂತೆ ಒತ್ತಾಯಿಸಿವೆ. ಎಲ್ಲಾ H-1B ವೀಸಾ ಹೊಂದಿರುವವರು ಕನಿಷ್ಠ 14 ದಿನಗಳ ವರೆಗೆ ಅಮೆರಿಕವನ್ನು ತೊರೆಯದಂತೆ ಒತ್ತಾಯಿಸಿವೆ. ಉತ್ತಮ ಭವಿಷ್ಯಕ್ಕಾಗಿ ನಮ್ಮ ನಿರ್ದೇಶನಗಳನ್ನು ಪಾಲಿಸಿ ಎಂದು ವಿದೇಶಿ ಉದ್ಯೋಗಿಗಳಿಗೆ ಸಲಹೆ ನೀಡಿವೆ.

    H-1B ವೀಸಾ ಮತ್ತು H4 ಸ್ಥಾನಮಾನ ಹೊಂದಿರುವವರು, ಅಮೆರಿಕ ಸರ್ಕಾರದ ಹೊಸ ನಿಯಮಗಳು ಏನೆಂದು ತಿಳಿಯುವವರೆಗೆ ಕನಿಷ್ಠ ಎರಡು ವಾರಗಳ ಕಾಲ ಅಮೆರಿಕದಲ್ಲಿಯೇ ಇರಬೇಕು. ಪ್ರಸ್ತುತ ದೇಶದಿಂದ ಹೊರಗೆ ಇರುವವರು 24 ಗಂಟೆಗಳ ಒಳಗೆ ಹಿಂತಿರುಗಬೇಕು ಎಂದು ಮೆಟಾ ತನ್ನ ಉದ್ಯೋಗಿಗಳಿಗೆ ತಿಳಿಸಿದೆ. ಇದನ್ನೂ ಓದಿ: ಪಾಕಿಸ್ತಾನ ನನ್ನ ಮನೆಯಂತೆ ಭಾಸವಾಗುತ್ತೆ, ಭಾರತ ಶಾಂತಿ ಮಾತುಕತೆ ನಡೆಸಬೇಕು: ಸ್ಯಾಮ್ ಪಿತ್ರೋಡಾ ಹೇಳಿಕೆ ವಿವಾದ

    ವಿಶೇಷ ವೃತ್ತಿ, ತಂತ್ರಜ್ಞಾನ ಕ್ಷೇತ್ರದಲ್ಲಿರುವ ನುರಿತರಿಗೆ ಅಮೆರಿಕದ ಹೆಚ್‌-1ಬಿ ವೀಸಾ ಮೀಸಲಾಗಿದೆ. ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಟೆಕ್ ಪ್ರೋಗ್ರಾಂ ವ್ಯವಸ್ಥಾಪಕರು ಮತ್ತು ಇತರ ಐಟಿ ವೃತ್ತಿಪರರನ್ನು ಈ ವೀಸಾ ಒಳಗೊಂಡಿರುತ್ತದೆ. ಅವು ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತವೆ. ಇನ್ನೂ ಮೂರು ವರ್ಷಗಳವರೆಗೆ ನವೀಕರಿಸಬಹುದು.

  • ಭಾರತೀಯ ಉದ್ಯೋಗಿಗಳಿಗೆ ಶಾಕ್‌; H-1B ವೀಸಾ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿದ ಟ್ರಂಪ್‌

    ಭಾರತೀಯ ಉದ್ಯೋಗಿಗಳಿಗೆ ಶಾಕ್‌; H-1B ವೀಸಾ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿದ ಟ್ರಂಪ್‌

    ವಾಷಿಂಗ್ಟನ್: ಹೆಚ್‌-1ಬಿ ವೀಸಾಗಳ (H-1B Visa) ಮೇಲಿನ ವಾರ್ಷಿಕ ಶುಲ್ಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು 1 ಲಕ್ಷ ಡಾಲರ್‌ಗೆ ಏರಿಕೆ ಮಾಡಿದ್ದಾರೆ. ಈ ನಿಯಮವು ಭಾರತೀಯ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ.

    ವಿದೇಶಿ ಕೆಲಸಗಾರರಿಗೆ ವಾರ್ಷಿಕ 1,00,000 ಡಾಲರ್ ವೀಸಾ ಶುಲ್ಕವನ್ನು ವಿಧಿಸುವ ಘೋಷಣೆಗೆ ಟ್ರಂಪ್‌ ಸಹಿ ಹಾಕಿದ್ದಾರೆ. ಶ್ರೀಮಂತ ವ್ಯಕ್ತಿಗಳಿಗೆ US ಪೌರತ್ವವನ್ನು ಪಡೆಯುವ ಮಾರ್ಗವಾಗಿ 1 ಮಿಲಿಯನ್ ಡಾಲರ್‌ ‘ಗೋಲ್ಡ್ ಕಾರ್ಡ್’ ವೀಸಾವನ್ನು ಜಾರಿಗೆ ತಂದಿದ್ದಾರೆ. ಇದನ್ನೂ ಓದಿ: ಭಾರತ ನಮ್ಮ ಶಿಬಿರವನ್ನ ನಾಶಮಾಡಿದೆ – ಜೈಶ್ ಬಳಿಕ ಆಪರೇಷನ್ ಸಿಂಧೂರ ಸತ್ಯ ಒಪ್ಪಿಕೊಂಡ ಲಷ್ಕರ್ ಉಗ್ರ

    ಹೆಚ್‌-1ಬಿ ವೀಸಾ ಶುಲ್ಕ ಏರಿಕೆ ಮಾಡಿ ಭಾರತೀಯ ಉದ್ಯೋಗಿಗಳಿಗೆ ಟ್ರಂಪ್‌ ಶಾಕ್‌ ಕೊಟ್ಟಿದ್ದಾರೆ. ಅಮೆರಿಕ ಉದ್ಯೋಗಿಗಳ ರಕ್ಷಣೆಗೆ ಹೊಸ ಕ್ರಮಕ್ಕೆ ಅಮೆರಿಕ ಸರ್ಕಾರ ಬದ್ಧವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

    H-1B ವೀಸಾಗಳು ವಿದೇಶಿಯರನ್ನು ಉನ್ನತ ಕೌಶಲ್ಯದ ಉದ್ಯೋಗಗಳಿಗೆ ಅಮೆರಿಕಗೆ ಕರೆತರಲು ಉದ್ದೇಶಿಸಿವೆ. ಅಮೆರಿಕ ಉದ್ಯೋಗಿಗಳಿಗೆ ಹೆಚ್ಚಿನ ಸಂಬಳ ಕೊಟ್ಟು ನೇಮಿಸಿಕೊಳ್ಳುವುದು ಟೆಕ್‌ ಕಂಪನಿಗಳಿಗೆ ಕಷ್ಟ. ಹೀಗಾಗಿ, ಕಡಿಮೆ ಸಂಬಳಕ್ಕೆ ನುರಿತ, ಕೌಶಲಪೂರ್ಣ ವಿದೇಶಿ ಉದ್ಯೋಗಿಗಳನ್ನು ಕರೆತಂದು ಕೆಲಸ ನೀಡುತ್ತಿವೆ. ಅದಕ್ಕಾಗಿ ಹೆಚ್‌-1ಬಿ ವೀಸಾ ಕ್ರಮ ಅಮೆರಿಕದಲ್ಲಿ ಜಾರಿಯಲ್ಲಿದೆ. ಈಗ, ಈ ವೀಸಾ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿರುವುದರಿಂದ ಇತರೆ ದೇಶಗಳಿಂದ ನುರಿತರನ್ನು ಕರೆತರಲು ಅರ್ಜಿ ಸಲ್ಲಿಸುವ ಕಂಪನಿಗಳು ವಾರ್ಷಿಕವಾಗಿ ಪ್ರತಿ ವೀಸಾಕ್ಕೆ 1,00,000 ಡಾಲರ್‌ ಪಾವತಿಸಬೇಕಾಗುತ್ತದೆ. ಇದನ್ನೂ ಓದಿ: ಪಾಕಿಸ್ತಾನ ನನ್ನ ಮನೆಯಂತೆ ಭಾಸವಾಗುತ್ತೆ, ಭಾರತ ಶಾಂತಿ ಮಾತುಕತೆ ನಡೆಸಬೇಕು: ಸ್ಯಾಮ್ ಪಿತ್ರೋಡಾ ಹೇಳಿಕೆ ವಿವಾದ

  • ಪ್ರಧಾನಿ ಮೋದಿಗೆ 75ರ ಸಂಭ್ರಮ – ಫೋನ್‌ ಕರೆ ಮಾಡಿ ಬರ್ತ್‌ಡೇ ವಿಶ್‌ ಮಾಡಿದ ಟ್ರಂಪ್‌

    ಪ್ರಧಾನಿ ಮೋದಿಗೆ 75ರ ಸಂಭ್ರಮ – ಫೋನ್‌ ಕರೆ ಮಾಡಿ ಬರ್ತ್‌ಡೇ ವಿಶ್‌ ಮಾಡಿದ ಟ್ರಂಪ್‌

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಗೆ ಇಂದು (ಸೆ.17) 75ನೇ ಹುಟ್ಟುಹಬ್ಬದ ಸಂಭ್ರಮ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಫೋನ್‌ ಕರೆ ಮಾಡಿ ಮೋದಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

    ಟ್ರಂಪ್‌ ಶುಭಾಶಯಕ್ಕೆ ಮೋದಿ ಧನ್ಯವಾದ ತಿಳಿಸಿದ್ದಾರೆ. ಭಾರತ-ಅಮೆರಿಕ ಸಂಬಂಧಗಳನ್ನು ಉತ್ತಮಗೊಳಿಸುವ ಬದ್ಧತೆ ಮತ್ತು ಉಕ್ರೇನ್ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುವ ನಿಟ್ಟಿನಲ್ಲಿ ಅಮೆರಿಕದ ನಿಲುವಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ಪ್ರಧಾನಿ ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಚೀನಾ ಮೇಲೆ 50-100% ಸುಂಕ ವಿಧಿಸಲು ಟ್ರಂಪ್‌ ಕರೆ

    ನಿಮ್ಮಂತೆಯೇ ನಾನು ಕೂಡ ಭಾರತ-ಯುಎಸ್ ಸಮಗ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಎತ್ತರಕ್ಕೆ ಕೊಂಡೊಯ್ಯಲು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರದತ್ತ ನಿಮ್ಮ ಉಪಕ್ರಮಗಳನ್ನು ನಾವು ಬೆಂಬಲಿಸುತ್ತೇವೆ ಎಂದು ಪ್ರಧಾನಿ ಮೋದಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಇದಕ್ಕೆ ಪ್ರತಿಕ್ರಿಯೆಯಾಗಿ ಟ್ರಂಪ್ ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ, ಪ್ರಧಾನಿ ಮೋದಿಯವರೊಂದಿಗೆ ಸಂಭಾಷಣೆ ಅದ್ಭುತವಾಗಿತ್ತು. ಉಕ್ರೇನ್-ರಷ್ಯಾ ಯುದ್ಧವನ್ನು ಪರಿಹರಿಸುವಲ್ಲಿ ಅಮೆರಿಕದ ಉಪಕ್ರಮಗಳಿಗೆ ಭಾರತದ ಬೆಂಬಲಕ್ಕಾಗಿ ಮೋದಿ ಅವರನ್ನು ಶ್ಲಾಘಿಸುತ್ತೇನೆಂದು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದ ತೈಲ ಖರೀದಿ ರಾಷ್ಟ್ರಗಳ ಮೇಲೆ ಸುಂಕ ವಿಧಿಸಲು G7 ದೇಶಗಳಿಗೆ ಅಮೆರಿಕ ಕರೆ

    ಭಾರತದ ಮೇಲೆ ಅಮೆರಿಕವು ಭಾರೀ ವ್ಯಾಪಾರ ಸುಂಕಗಳನ್ನು ವಿಧಿಸಿರುವ ಹೊತ್ತಿನಲ್ಲೇ ಪ್ರಧಾನಿ ಮೋದಿ ಅವರಿಂದ ಈ ಸಂದೇಶ ಬಂದಿದೆ. ಭಾರತದ ಆಮದುಗಳ ಮೇಲೆ ಶೇ.50 ರಷ್ಟು ಸುಂಕವನ್ನು ವಿಧಿಸಲಾಗಿದೆ. ರಷ್ಯಾದ ತೈಲ ಖರೀದಿ ಹಿನ್ನೆಲೆ ಶೇ.25 ರಷ್ಟು ಸುಂಕವನ್ನು ಭಾರತಕ್ಕೆ ಅಮೆರಿಕ ವಿಧಿಸಿದೆ. ಇದು ವಿಶ್ವದ ಯಾವುದೇ ದೇಶದ ಮೇಲೆ ವಿಧಿಸಲಾದ ಅತ್ಯಧಿಕ ಸುಂಕಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲದೇ, ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರು, ಅಮೆರಿಕದಲ್ಲಿ ಬೆಳೆದ ಜೋಳವನ್ನು ಖರೀದಿಸಲು ನಿರಾಕರಿಸಿದರೆ ಭಾರತವು ಅಮೆರಿಕ ಮಾರುಕಟ್ಟೆಗೆ ತನ್ನ ಪ್ರವೇಶವನ್ನು ಕಳೆದುಕೊಳ್ಳಬಹುದು ಎಂದು ಎಚ್ಚರಿಸಿದ್ದಾರೆ.

    ಮುಂಬರುವ ದಿನಗಳಲ್ಲಿ ಮೋದಿಯವರೊಂದಿಗೆ ಮಾತನಾಡಲು ಎದುರು ನೋಡುತ್ತಿರುವುದಾಗಿ ಅಮೆರಿಕದ ಅಧ್ಯಕ್ಷ ತಿಳಿಸಿದ್ದಾರೆ. ಎರಡೂ ಕಡೆಯವರು ಪ್ರಸ್ತಾವಿತ ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಚಾರ್ಲಿ ಕಿರ್ಕ್‌ ಹತ್ಯೆಯ ಶಂಕಿತ ಆರೋಪಿ ಬಂಧನ: ಡೊನಾಲ್ಡ್‌ ಟ್ರಂಪ್‌

    ಚಾರ್ಲಿ ಕಿರ್ಕ್‌ ಹತ್ಯೆಯ ಶಂಕಿತ ಆರೋಪಿ ಬಂಧನ: ಡೊನಾಲ್ಡ್‌ ಟ್ರಂಪ್‌

    ವಾಷಿಂಗ್ಟನ್: ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ (Charlie Kirk) ಹತ್ಯೆಯ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಿಳಿಸಿದ್ದಾರೆ.

    ಈ ಕುರಿತು ಫಾಕ್ಸ್‌ ನ್ಯೂಸ್‌ಗೆ ಲೈವ್‌ ಸ್ಟುಡಿಯೋ ಸಂದರ್ಶನದಲ್ಲಿ ಟ್ರಂಪ್‌, ಶಂಕಿತ ಆರೋಪಿ ಸಿಕ್ಕಿಬಿದ್ದಿದ್ದಾನೆಂದು ನಾನು ಖಚಿತವಾಗಿ ಹೇಳಬಲ್ಲೆ. ಆರೋಪಿಗೆ ಹತ್ತಿರವಿದ್ದವರೇ ಆತನನ್ನು ಹಿಡಿದು ಒಪ್ಪಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕ್ಯಾಂಪಸ್‌ನಲ್ಲಿ ಬಂದೂಕು ಸಂಸ್ಕೃತಿ ವಿರೋಧಿಸಿ ಮಾತನಾಡುವಾಗಲೇ ಟ್ರಂಪ್‌ ಸ್ನೇಹಿತ, ಉದ್ಯಮಿ ಗುಂಡೇಟಿಗೆ ಬಲಿ

    ಬುಧವಾರ ಉತಾಹ್‌ನಲ್ಲಿ ಭಾಷಣ ಮಾಡುತ್ತಿದ್ದಾಗ ಅನಾಮಿಕನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕಿರ್ಕ್ ಸಾವನ್ನಪ್ಪಿದ್ದರು. ಅಲ್ಲಿನ ಗವರ್ನರ್ ಇದನ್ನು ರಾಜಕೀಯ ಪ್ರೇರಿತ ಹತ್ಯೆ ಎಂದು ಕರೆದಿದ್ದಾರೆ. ಟ್ರಂಪ್ ಅವರ ಆಪ್ತ ಮತ್ತು ಕಟ್ಟಾ ಬಲಪಂಥೀಯ ಕಾರ್ಯಕರ್ತ ಕಿರ್ಕ್, ‘ಟರ್ನಿಂಗ್ ಪಾಯಿಂಟ್ USA’ ರಾಜಕೀಯ ಸಂಸ್ಥೆಯ ಸಹಸಂಸ್ಥಾಪಕರಾಗಿದ್ದರು.

    ಬುಧವಾರ ಚಾರ್ಲಿ ಕಿರ್ಕ್ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿ ಸ್ಥಳದಿಂದ ಪರಾರಿಯಾಗುತ್ತಿರುವ ದೃಶ್ಯಗಳು ಮತ್ತು ಫೋಟೋಗಳ ಸರಣಿಯನ್ನು ಎಫ್‌ಬಿಐ ಬಿಡುಗಡೆ ಮಾಡಿತ್ತು. ಇದನ್ನೂ ಓದಿ: ನೇಪಾಳದ ಪ್ರಧಾನಿ ರೇಸ್‌ನಲ್ಲಿ ಬೆಂಗ್ಳೂರು ನಂಟಿನ ಬಲೇನ್ ಶಾ ಹೆಸರು ಮುನ್ನಲೆಗೆ

  • ಭಾರತ ಇನ್ನೆರಡು ತಿಂಗಳಲ್ಲಿ ಟ್ರಂಪ್‌ ಕ್ಷಮೆಯಾಚಿಸುತ್ತೆ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ

    ಭಾರತ ಇನ್ನೆರಡು ತಿಂಗಳಲ್ಲಿ ಟ್ರಂಪ್‌ ಕ್ಷಮೆಯಾಚಿಸುತ್ತೆ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ

    ವಾಷಿಂಗ್ಟನ್: ಭಾರತ ಇನ್ನೆರಡು ತಿಂಗಳಲ್ಲಿ ನಮಗೆ ಕ್ಷಮೆಯಾಚಿಸುತ್ತದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೂವಾರ್ಡ್‌ ಲುಟ್ನಿಕ್‌ ಹೇಳಿಕೆ ನೀಡಿದ್ದಾರೆ.

    ರಷ್ಯಾದ ತೈಲವನ್ನು ಖರೀದಿಸದಂತೆ ಅಮೆರಿಕದ ಒತ್ತಡಕ್ಕೆ ಭಾರತ ಮಣಿದಿಲ್ಲ. ಆದರೂ, ಕೆಲವೇ ತಿಂಗಳುಗಳಲ್ಲಿ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಭಾರತ ಮತ್ತೆ ಬರುತ್ತದೆ ಎಂದು ಲುಟ್ನಿಕ್‌ ತಿಳಿಸಿದ್ದಾರೆ. ಇದನ್ನೂ ಓದಿ: ಟೆಕ್‌ ದಿಗ್ಗಜರಿಗೆ ಟ್ರಂಪ್‌ ಡಿನ್ನರ್‌ – ಭಾರತೀಯ ಮೂಲದ ಐವರು ಸಿಇಒಗಳು ಭಾಗಿ

    ಒಂದು ಅಥವಾ ಎರಡು ತಿಂಗಳಲ್ಲಿ ಭಾರತ ಮಾತುಕತೆಗೆ ಬರಲಿದೆ ಎಂದು ನಾನು ಭಾವಿಸುತ್ತೇನೆ. ಕ್ಷಮಿಸಿ ಅಂತ ಕೇಳುತ್ತಾರೆ. ಡೊನಾಲ್ಡ್ ಟ್ರಂಪ್ ಜೊತೆ ಒಪ್ಪಂದ ಮಾಡಿಕೊಳ್ಳಲು ಮತ್ತೆ ಪ್ರಯತ್ನಿಸುತ್ತಾರೆಂದು ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

    ಒಂದು ವೇಳೆ ಅಮೆರಿಕವನ್ನು ಬೆಂಬಲಿಸದಿದ್ದರೆ, ರಫ್ತಿನ ಮೇಲೆ ಶೇ.50 ರಷ್ಟು ಸುಂಕವನ್ನು ಭಾರತ ಪಾವತಿಸಬೇಕಾಗುತ್ತದೆ. ಭಾರತವು ತನ್ನ ಮಾರುಕಟ್ಟೆಯನ್ನು ತೆರೆಯಲು, ರಷ್ಯಾದ ತೈಲ ಖರೀದಿ ನಿಲ್ಲಿಸಲು ಮತ್ತು ಬ್ರಿಕ್ಸ್‌ನ ಭಾಗವಾಗುವುದನ್ನು ನಿಲ್ಲಿಸಲು ಬಯಸುವುದಿಲ್ಲ. ನೀವು ರಷ್ಯಾ ಮತ್ತು ಚೀನಾ ನಡುವೆ ಸೇತುವೆಯಾಗಲು ಬಯಸಿದರೆ, ಹೋಗಿ. ಆದರೆ ಡಾಲರ್ ಅನ್ನು ಬೆಂಬಲಿಸಿ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕವನ್ನು ಬೆಂಬಲಿಸಿ. ನಿಮ್ಮ ಅತಿದೊಡ್ಡ ಕ್ಲೈಂಟ್ ಅನ್ನು ಬೆಂಬಲಿಸಿ. ಇಲ್ಲದಿದ್ದರೆ, 50% ಸುಂಕಗಳನ್ನು ಪಾವತಿಸಿ. ಇದು ಎಷ್ಟು ಕಾಲ ಇರುತ್ತದೆ ಎಂದು ನೋಡೋಣ ಎಂದಿದ್ದಾರೆ.

    ರಷ್ಯಾದ ಕಚ್ಚಾತೈಲವು ನಿಜಕ್ಕೂ ಅಗ್ಗವಾಗಿದೆ. ತೈಲ ಖರೀದಿಗೆ ರಷ್ಯನ್ನರು ಜನರನ್ನು ಹುಡುಕುತ್ತಿದ್ದಾರೆ. ಅಗ್ಗವಾದ ತೈಲ ಖರೀದಿಸಿ ಹಣ ಸಂಪಾದಿಸೋಣ ಅಂತ ಭಾರತ ತೀರ್ಮಾನಿಸಿದೆ ಎಂದು ಲುಟ್ನಿಕ್‌ ಮಾತನಾಡಿದ್ದಾರೆ. ಇದನ್ನೂ ಓದಿ: ನಾವು ಭಾರತ, ರಷ್ಯಾವನ್ನು ಚೀನಾಗೆ ಬಿಟ್ಟು ಕೊಟ್ಟಿದ್ದೇವೆ: ಟ್ರಂಪ್‌

  • ಪ್ರಧಾನಿ ಮೋದಿ ಜೊತೆಗಿನ ಟ್ರಂಪ್‌ ವೈಯಕ್ತಿಕ ಬಾಂಧವ್ಯ ಈಗ ಇಲ್ಲ: ಅಮೆರಿಕ ಮಾಜಿ ಅಧಿಕಾರಿ

    ಪ್ರಧಾನಿ ಮೋದಿ ಜೊತೆಗಿನ ಟ್ರಂಪ್‌ ವೈಯಕ್ತಿಕ ಬಾಂಧವ್ಯ ಈಗ ಇಲ್ಲ: ಅಮೆರಿಕ ಮಾಜಿ ಅಧಿಕಾರಿ

    – ಅಮೆರಿಕದ ನಡೆ ಮೋದಿಯನ್ನು ರಷ್ಯಾ & ಚೀನಾಗೆ ಹತ್ತಿರವಾಗಿಸಿದೆ: ಬೋಲ್ಟನ್‌ ಬೇಸರ

    ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದಿದ್ದರು. ಆದರೆ, ಈಗ ಅದು ಇಲ್ಲವಾಗಿದೆ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅಭಿಪ್ರಾಯಪಟ್ಟಿದ್ದಾರೆ.

    ಎರಡು ದಶಕಗಳಲ್ಲಿ ಭಾರತ-ಅಮೆರಿಕ ಸಂಬಂಧಗಳಲ್ಲಿ ಬಹುಶಃ ಅತ್ಯಂತ ಕೆಟ್ಟ ಹಂತದ ಹಿನ್ನೆಲೆಯಲ್ಲಿ ಬೋಲ್ಟನ್ ಈ ಹೇಳಿಕೆ ನೀಡಿದ್ದಾರೆ. ಟ್ರಂಪ್ ಅವರ ಸುಂಕ ನೀತಿ ಮತ್ತು ಭಾರತದ ಮೇಲಿನ ನಿರಂತರ ಟೀಕೆಗಳಿಂದ ಈ ಬಿಕ್ಕಟ್ಟು ಎದುರಾಗಿದೆ.

    ಟ್ರಂಪ್‌ ಅಂತರರಾಷ್ಟ್ರೀಯ ಸಂಬಂಧಗಳನ್ನು ನಾಯಕರೊಂದಿಗಿನ ತಮ್ಮ ವೈಯಕ್ತಿಕ ಬಾಂಧವ್ಯದ ಮೂಲಕವೇ ನೋಡುತ್ತಾರೆ. ಪುಟಿನ್‌ ಜೊತೆ ಟ್ರಂಪ್‌ ಉತ್ತಮ ಸಂಬಂಧ ಹೊಂದಿದ್ದರೆ, ಅಮೆರಿಕದೊಂದಿಗೆ ರಷ್ಯಾ ಉತ್ತಮ ಬಾಂಧವ್ಯದಲ್ಲಿದೆ ಎಂದರ್ಥ. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ ಎಂದು ತಿಳಿಸಿದ್ದಾರೆ.

    ಈ ಮೊದಲ ಟ್ರಂಪ್ ಆಡಳಿತದಲ್ಲಿ NSA ಆಗಿ ಬೋಲ್ಟನ್ ಸೇವೆ ಸಲ್ಲಿಸಿದ್ದರು. ಈಗ ಟ್ರಂಪ್‌ ಅವರನ್ನೇ ನೇರವಾಗಿ ಟೀಕಿಸುತ್ತಿದ್ದಾರೆ. ಟ್ರಂಪ್ ಅವರು ಮೋದಿ ಅವರೊಂದಿಗೆ ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದಿದ್ದರು. ಅದು ಈಗ ಇಲ್ಲವಾಗಿದೆ. ಇದು ಎಲ್ಲರಿಗೂ ಒಂದು ಪಾಠವಾಗಿದೆ. ಉದಾಹರಣೆಗೆ (ಯುಕೆ ಪ್ರಧಾನಿ) ಕೀರ್ ಸ್ಟಾರ್ಮರ್, ಒಳ್ಳೆಯ ವೈಯಕ್ತಿಕ ಸಂಬಂಧವು ಕೆಲವೊಮ್ಮೆ ಸಹಾಯ ಮಾಡಬಹುದು. ಆದರೆ ಅದು ನಿಮ್ಮನ್ನು ಕೆಟ್ಟದ್ದರಿಂದ ರಕ್ಷಿಸುವುದಿಲ್ಲ ಎಂದು ಟ್ರಂಪ್‌ಗೆ ಎಚ್ಚರಿಕೆ ಕೂಡ ನೀಡಿದ್ದಾರೆ.

    ಟ್ರಂಪ್ ಸೆಪ್ಟೆಂಬರ್ 17 ರಿಂದ 19 ರವರೆಗೆ ಯುಕೆಗೆ ಭೇಟಿ ನೀಡಲಿದ್ದಾರೆ. ಭಾರತದ ಸಂಬಂಧವನ್ನು ಯುಎಸ್‌ ದಶಕಗಳ ಹಿಂದಕ್ಕೆ ತಳ್ಳಿದೆ. ಈ ನಡೆ ಮೋದಿಯನ್ನು ರಷ್ಯಾ ಮತ್ತು ಚೀನಾಕ್ಕೆ ಹತ್ತಿರವಾಗಿಸಿದೆ. ಯುಎಸ್ ಮತ್ತು ಡೊನಾಲ್ಡ್ ಟ್ರಂಪ್‌ಗೆ ಪರ್ಯಾಯವಾಗಿ ತನ್ನನ್ನು ತಾನು ಚೀನಾ ಬಿಂಬಿಸಿಕೊಂಡಿದೆ ಎಂದು ವಿಶ್ಲೇಷಿಸಿದ್ದಾರೆ.

  • ಮುಂದುವರಿದ ಅಮೆರಿಕ ಸುಂಕ ಸಮರ; ತೈಲ ಖರೀದಿಗೆ ಭಾರತಕ್ಕೆ ದೊಡ್ಡ ಡಿಸ್ಕೌಂಟ್‌ ಕೊಟ್ಟ ರಷ್ಯಾ

    ಮುಂದುವರಿದ ಅಮೆರಿಕ ಸುಂಕ ಸಮರ; ತೈಲ ಖರೀದಿಗೆ ಭಾರತಕ್ಕೆ ದೊಡ್ಡ ಡಿಸ್ಕೌಂಟ್‌ ಕೊಟ್ಟ ರಷ್ಯಾ

    ನವದೆಹಲಿ: ಟ್ಯಾರಿಫ್‌ (Tariff) ವಿಚಾರವಾಗಿ ಅಮೆರಿಕದ (US) ಮುನಿಸಿನ ನಡುವೆ ಭಾರತಕ್ಕೆ (India) ಹೆಚ್ಚಿನ ರಿಯಾಯಿತಿಯಲ್ಲಿ ತೈಲ ಪೂರೈಸಲು ರಷ್ಯಾ ಮುಂದಾಗಿದೆ.

    ಅಮೆರಿಕದ ಸುಂಕದ ಹೊರೆಯನ್ನು ಭಾರತ ಇನ್ನೂ ಎದುರಿಸುತ್ತಿದೆ. ಇದನ್ನು ಮನಗಂಡಿರುವ ರಷ್ಯಾದ (Russia) ತೈಲ ಬೆಲೆ ಭಾರತಕ್ಕೆ ಪ್ರತಿ ಬ್ಯಾರಲ್‌ಗೆ 3 ರಿಂದ 4 ಡಾಲರ್‌ ನಷ್ಟು ಕಡಿಮೆಯಾಗಿದೆ. ಸೆಪ್ಟೆಂಬರ್ ಅಂತ್ಯ ಮತ್ತು ಅಕ್ಟೋಬರ್‌ನಲ್ಲಿ ಲೋಡ್ ಆಗುವ ಸರಕುಗಳಿಗೆ ರಷ್ಯಾದ ಉರಲ್ ದರ್ಜೆಯ ಬೆಲೆಯನ್ನು ಕಡಿಮೆಗೆ ನೀಡಲಾಗುತ್ತಿದೆ. ಇದನ್ನೂ ಓದಿ: ಭಾರತ ಈಗ ಸುಂಕ ಕಡಿಮೆ ಮಾಡೋಕೆ ಮುಂದಾಗಿದೆ – ಭಾರತದ ಜೊತೆಗಿನ ಸಂಬಂಧವನ್ನ ವಿಪತ್ತು ಎಂದ ಟ್ರಂಪ್‌

    ರಷ್ಯಾದ ತೈಲವನ್ನು ಖರೀದಿಸಿ ಉಕ್ರೇನ್ ಯುದ್ಧಕ್ಕೆ ಉತ್ತೇಜನ ನೀಡಿದ್ದಕ್ಕಾಗಿ ಶಿಕ್ಷಿಸಲು ಟ್ರಂಪ್ ಆಡಳಿತ ಕಳೆದ ವಾರ ಭಾರತದ ಮೇಲಿನ ಸುಂಕವನ್ನು ಶೇ.50 ಕ್ಕೆ ದ್ವಿಗುಣಗೊಳಿಸಿತು. 2022 ರಲ್ಲಿ, ರಷ್ಯಾ-ಉಕ್ರೇನ್ ಯುದ್ಧದ ಆರಂಭದಲ್ಲಿ ಭಾರತವು ರಷ್ಯಾದ ಕಚ್ಚಾ ತೈಲದ ಪ್ರಮುಖ ಆಮದುದಾರನಾಗಿತ್ತು. ಇದೀಗ ಅಮೆರಿಕದಿಂದ ಪದೇ ಪದೇ ಟೀಕೆಗೊಳಗಾದ ನಂತರ, ಭಾರತವು ಸಂಬಂಧದಲ್ಲಿ ರಷ್ಯಾ ಮತ್ತು ಚೀನಾಗೆ ಮತ್ತಷ್ಟು ಹತ್ತಿರವಾಗಿದೆ.

    ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿಯೂ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಮತ್ತು ಭಾರತ ವಿಶೇಷ ಸಂಬಂಧವನ್ನು ಹಂಚಿಕೊಳ್ಳುತ್ತವೆ ಎಂದು ಹೇಳಿದ್ದರು. ಅದೇ ರೀತಿ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಸಹ ಭೇಟಿಯಾದರು. ಎರಡೂ ದೇಶಗಳು ಪ್ರತಿಸ್ಪರ್ಧಿಗಳಲ್ಲ, ಪಾಲುದಾರರಾಗಲು ಪ್ರತಿಜ್ಞೆ ಮಾಡಿವೆ. ಇದನ್ನೂ ಓದಿ: ಭಯೋತ್ಪಾದನೆ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್‌ ಸರಿಯಲ್ಲ: ಪಾಕ್ ಪ್ರಧಾನಿ ಮುಂದೆಯೇ ಪಹಲ್ಗಾಮ್ ದಾಳಿ ವಿಚಾರ ಪ್ರಸ್ತಾಪಿಸಿದ ಮೋದಿ

    ಪುಟಿನ್ ಉಕ್ರೇನ್ ಮೇಲೆ ಆಕ್ರಮಣ ಮಾಡುವ ಮೊದಲು ಭಾರತವು ರಷ್ಯಾದ ತೈಲವನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಖರೀದಿಸುತ್ತಿತ್ತು. ಈಗ ಏನಾಯಿತು? ರಷ್ಯಾದ ಸಂಸ್ಕರಣಾಗಾರರು ರಿಯಾಯಿತಿಗಳನ್ನು ನೀಡುತ್ತಾರೆ. ಭಾರತ ಅದನ್ನು ಸಂಸ್ಕರಿಸುತ್ತದೆ. ನಂತರ ಯುರೋಪ್, ಆಫ್ರಿಕಾ ಮತ್ತು ಏಷ್ಯಾಕ್ಕೆ ಪ್ರೀಮಿಯಂನಲ್ಲಿ ಮಾರಾಟ ಮಾಡುತ್ತದೆ. ಇದು ರಷ್ಯಾದ ಯುದ್ಧ ತಂತ್ರವನ್ನು ಉತ್ತೇಜಿಸಿದಂತಿದೆ ಎಂದು ಶ್ವೇತಭವನದ ಸಲಹೆಗಾರ ಪೀಟರ್ ನವರೊ ಭಾರತದ ವಿರುದ್ಧ ಕಟುವಾದ ಟೀಕೆಯನ್ನು ಮಾಡಿದ್ದರು.

  • ಆಮದು ಸುಂಕ ಕಾನೂನುಬಾಹಿರ: ಟ್ರಂಪ್‌ಗೆ ಯುಎಸ್‌ ಕೋರ್ಟ್‌ನಿಂದಲೇ ಛೀಮಾರಿ

    ಆಮದು ಸುಂಕ ಕಾನೂನುಬಾಹಿರ: ಟ್ರಂಪ್‌ಗೆ ಯುಎಸ್‌ ಕೋರ್ಟ್‌ನಿಂದಲೇ ಛೀಮಾರಿ

    – ಭಾರತ ಸೇರಿ ಹಲವು ದೇಶಗಳ ಮೇಲೆ ಮಿತಿ ಮೀರಿದ ಟ್ಯಾರಿಫ್ ಹೇರಿರುವ ಟ್ರಂಪ್

    ವಾಷಿಂಗ್ಟನ್: ಆಮದು ಸುಂಕ (Tariff) ಕಾನೂನು ಬಾಹಿರ ಎಂದು ಯುಎಸ್‌ ಕೋರ್ಟ್‌ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ನಿರ್ಧಾರಕ್ಕೆ ಕೋರ್ಟ್‌ ಛೀಮಾರಿ ಹಾಕಿದೆ.

    ಟ್ರಂಪ್‌ ನಿರ್ಧಾರಕ್ಕೆ ವಾಷಿಂಗ್ಟನ್‌ನ ಫೆಡರಲ್ ಮೇಲ್ಮನವಿ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಕೆಳ ನ್ಯಾಯಾಲಯದ ತೀರ್ಪನ್ನು ನ್ಯಾಯಾಲಯವು ಅನುಮೋದಿಸಿದ್ದು, ಟ್ರಂಪ್ ವಿಧಿಸಿರುವ ಹೆಚ್ಚಿನ ಆಮದು ಸುಂಕಗಳು ಕಾನೂನುಬಾಹಿರ ಎಂದು ಹೇಳಿದೆ. ಈ ಸಂದರ್ಭದಲ್ಲಿ ಈ ಅಧಿಕಾರವನ್ನು ಬಳಸಲು ಅಧ್ಯಕ್ಷರ ಅಧಿಕಾರವನ್ನು ನ್ಯಾಯಾಲಯವು ಪ್ರಶ್ನಿಸಿದೆ.

    ಫೆಡರಲ್ ಮೇಲ್ಮನವಿ ನ್ಯಾಯಾಲಯವು ಅಮೆರಿಕ ಅಧ್ಯಕ್ಷರು ತುರ್ತು ಅಧಿಕಾರಗಳ ದುರುಪಯೋಗದ ಬಗ್ಗೆ ಮಾತನಾಡಿದೆ. 11 ನ್ಯಾಯಾಧೀಶರ ಪೀಠದಲ್ಲಿ, 7 ನ್ಯಾಯಾಧೀಶರು ಟ್ರಂಪ್ ಅವರ ಸುಂಕ ವಿಧಿಸುವ ನಿರ್ಧಾರವನ್ನು ಕಾನೂನುಬಾಹಿರವೆಂದು ಘೋಷಿಸಿದರೆ, 4 ನ್ಯಾಯಾಧೀಶರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಆದೇಶ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಶ್ವೇತ ಭವನ ನಿರ್ಧರಿಸಿದೆ.

    ಇತರೆ ದೇಶಗಳ ಮೇಲೆ ವಿಧಿಸಿರುವ ಎಲ್ಲಾ ಸುಂಕಗಳು ಜಾರಿಯಲ್ಲಿರುತ್ತವೆ. ಒಂದು ವೇಳೆ ಟ್ಯಾರಿಫ್‌ ತೆಗೆದುಹಾಕಿದರೆ, ದೇಶಕ್ಕೆ ಹಾನಿಕಾರಕ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುನರುಚ್ಚರಿಸಿದ್ದಾರೆ. ‌ಟ್ರಂಪ್ ಅವರ ಹಲವು ಸುಂಕಗಳು ಕಾನೂನುಬಾಹಿರ ಎಂದು ಯುಎಸ್ ನ್ಯಾಯಾಲಯ ತೀರ್ಪು ನೀಡಿದ ಬೆನ್ನಲ್ಲೇ ಟ್ರಂಪ್‌ ಪ್ರತಿಕ್ರಿಯಿಸಿದ್ದಾರೆ.

    ಎಲ್ಲಾ ಸುಂಕಗಳು ಇನ್ನೂ ಜಾರಿಯಲ್ಲಿವೆ. ಇಂದು ಅತ್ಯಂತ ಪಕ್ಷಪಾತದ ಮೇಲ್ಮನವಿಗೆ ನ್ಯಾಯಾಲಯವು ನಮ್ಮ ಸುಂಕಗಳನ್ನು ತೆಗೆದುಹಾಕಬೇಕು ಎಂದು ತಪ್ಪಾಗಿ ಹೇಳಿದೆ. ಆದರೆ, ಕೊನೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಗೆಲ್ಲುತ್ತದೆ ಎಂದು ಅವರಿಗೆ ತಿಳಿದಿದೆ. ಈ ಸುಂಕಗಳು ಎಂದಾದರೂ ರದ್ದಾದರೆ, ಅದು ದೇಶಕ್ಕೆ ವಿಪತ್ತು. ಅದು ನಮ್ಮನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತದೆ. ನಾವು ಬಲಿಪಶು ಆಗಬೇಕಾಗುತ್ತದೆ ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.

    ನಮ್ಮ ತಯಾರಕರು, ರೈತರು ಮತ್ತು ಎಲ್ಲರನ್ನೂ ದುರ್ಬಲಗೊಳಿಸುವ ಅನ್ಯಾಯದ ಸುಂಕಗಳನ್ನು ನಾವು ಒಪ್ಪಲ್ಲ. ಇತರ ದೇಶಗಳು, ಅವರು ಮಿತ್ರರಾಗಿರಲಿ ಅಥವಾ ವೈರಿಯಾಗಿರಲಿ ವಿಧಿಸುವ ಸುಂಕೇತರ ವ್ಯಾಪಾರ ಅಡೆತಡೆಗಳನ್ನು ಅಮೆರಿಕ ಇನ್ಮುಂದೆ ಸಹಿಸುವುದಿಲ್ಲ. ಒಂದು ವೇಳೆ ಈ ನಿರ್ಧಾರವನ್ನು (ಟ್ಯಾರಿಫ್) ತಡೆಯಲು ಮುಂದಾದರೆ, ಅಕ್ಷರಶಃ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ನಾಶಪಡಿಸಿದಂತೆ ಎಂದು ಟ್ರಂಪ್‌ ಹೇಳಿದ್ದಾರೆ.

    ಸುಂಕಗಳು ಕಾರ್ಮಿಕರಿಗೆ ಸಹಾಯ ಮಾಡಲು ಮತ್ತು ‘ಮೇಡ್ ಇನ್ ಅಮೆರಿಕ’ ಉತ್ಪನ್ನಗಳನ್ನು ಉತ್ಪಾದಿಸುವ ಕಂಪನಿಗಳನ್ನು ಬೆಂಬಲಿಸಲು ಅತ್ಯುತ್ತಮ ಸಾಧನವಾಗಿದೆ ಎಂದು ಟ್ರಂಪ್‌ ನಿಲುವು.

    ಹಲವು ವರ್ಷಗಳಿಂದ ಕಾಳಜಿಯಿಲ್ಲದ ಮತ್ತು ಅವಿವೇಕದ ರಾಜಕಾರಣಿಗಳು ಸುಂಕಗಳನ್ನು ನಮ್ಮ ವಿರುದ್ಧವೇ ಬಳಸಲು ಅನುಮತಿಸಿದ್ದರು. ಈಗ ಯುನೈಟೆಡ್ ಸ್ಟೇಟ್ಸ್ ಸುಪ್ರೀಂ ಕೋರ್ಟ್ ಸಹಾಯದಿಂದ, ಅವುಗಳನ್ನು ನಮ್ಮ ರಾಷ್ಟ್ರದ ಪ್ರಯೋಜನಕ್ಕಾಗಿ ಬಳಸುತ್ತೇವೆ. ಅಮೆರಿಕವನ್ನು ಮತ್ತೆ ಶ್ರೀಮಂತ, ಬಲಿಷ್ಠ ಮತ್ತು ಶಕ್ತಿಶಾಲಿಯನ್ನಾಗಿ ಮಾಡುತ್ತೇವೆ ಎಂದು ಟ್ರಂಪ್‌ ಪ್ರತಿಜ್ಞೆ ಮಾಡಿದ್ದಾರೆ.

  • ಅಮೆರಿಕದೊಂದಿಗಿನ ಸುಂಕ ಭಿನ್ನಾಭಿಪ್ರಾಯ ಪರಿಹಾರಕ್ಕೆ ಪ್ರಯತ್ನ: ಕೇಂದ್ರ ಸರ್ಕಾರ

    ಅಮೆರಿಕದೊಂದಿಗಿನ ಸುಂಕ ಭಿನ್ನಾಭಿಪ್ರಾಯ ಪರಿಹಾರಕ್ಕೆ ಪ್ರಯತ್ನ: ಕೇಂದ್ರ ಸರ್ಕಾರ

    ನವದೆಹಲಿ: ಟ್ಯಾರಿಫ್‌ (Tariff) ವಿಚಾರವಾಗಿ ಅಮೆರಿಕದೊಂದಿಗಿನ (US) ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪ್ರಯತ್ನ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

    ಭಾರತವು ರಷ್ಯಾದ ತೈಲ ಖರೀದಿಗೆ ದಂಡವಾಗಿ ಹೆಚ್ಚುವರಿಯಾಗಿ ಶೇ.25 ರಷ್ಟು ಸುಂಕವನ್ನು ಬುಧವಾರ ಜಾರಿಗೆ ತಂದಿದೆ. ಭಾರತ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಭಿನ್ನಾಭಿಪ್ರಾಯವನ್ನು ಪರಿಹರಿಸಲು ಪ್ರಯತ್ನಗಳು ನಡೆಯುತ್ತಿವೆ. ಎರಡೂ ದೇಶಗಳ ನಡುವಿನ ದೀರ್ಘಕಾಲೀನ ಸಂಬಂಧದಲ್ಲಿ ಪ್ರಸ್ತುತ ಪರಿಸ್ಥಿತಿ ತಾತ್ಕಾಲಿಕ ಅಷ್ಟೇ ಎಂದು ಕೇಂದ್ರ ಭರವಸೆ ವ್ಯಕ್ತಪಡಿಸಿದೆ. ಇದನ್ನೂ ಓದಿ: ಉಕ್ರೇನ್ ರಷ್ಯಾ ಯುದ್ಧವನ್ನು ಮೋದಿ ಯುದ್ಧ ಎಂದು ಕರೆದ ಅಮೆರಿಕ

    ಅಮೆರಿಕದ ಸುಂಕಗಳ ಪರಿಣಾಮ ತೀವ್ರವಾಗಿರುವುದಿಲ್ಲ. ಹೀಗಾಗಿ, ರಫ್ತುದಾರರು ಭಯಭೀತರಾಗುವ ಅಗತ್ಯವಿಲ್ಲ. ಭಾರತದ ವೈವಿಧ್ಯಮಯ ರಫ್ತು ನೆಲೆಯೇ ಇದಕ್ಕೆ ಕಾರಣ. ಭಾರತದ ಮೇಲಿನ ಒಟ್ಟು ಸುಂಕಗಳು ಈಗ ಶೇ.50 ರಷ್ಟು ತಲುಪಿದೆ ಎಂದು ಹೇಳಿದೆ.

    ಯುಎಸ್ ಟ್ರೆಷರಿ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಭಾರತ-ಯುಎಸ್ ಸಂಬಂಧಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ನಾನು ಭಾವಿಸುತ್ತೇನೆ. ಯುಎಸ್ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿದೆ. ಮತ್ತೆ ನಾವು ಒಂದಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಒಂದಲ್ಲ, 4 ಬಾರಿ ಟ್ರಂಪ್‌ ಕರೆ ಮಾಡಿದ್ರೂ ಉತ್ತರಿಸದ ಮೋದಿ!

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಬೆಸೆಂಟ್ ತಿಳಿಸಿದ್ದಾರೆ.

  • ಆ.25 ರಿಂದ ಅಮೆರಿಕಗೆ ಅಂಚೆ ಸೇವೆ ಸ್ಥಗಿತಗೊಳಿಸಿದ ಭಾರತ

    ಆ.25 ರಿಂದ ಅಮೆರಿಕಗೆ ಅಂಚೆ ಸೇವೆ ಸ್ಥಗಿತಗೊಳಿಸಿದ ಭಾರತ

    ನವದೆಹಲಿ: ಟ್ರಂಪ್ (Donald Trump) ಸುಂಕ ಕ್ರಮಗಳ ನಂತರ ಆಗಸ್ಟ್ 25 ರಿಂದ ಭಾರತ, ಅಮೆರಿಕಕ್ಕೆ (America) ಅಂಚೆ ಸೇವೆಗಳನ್ನು ಸ್ಥಗಿತಗೊಳಿಸಲಿದೆ.

    ಈ ತಿಂಗಳ ಕೊನೆಯಲ್ಲಿ ಜಾರಿಗೆ ಬರಲಿರುವ ಯುಎಸ್ ಕಸ್ಟಮ್ಸ್ ನಿಯಮಗಳಲ್ಲಿನ ಬದಲಾವಣೆಗಳನ್ನು ಉಲ್ಲೇಖಿಸಿ, ಆ.25 ರಿಂದ ಅಮೆರಿಕಕ್ಕೆ ಎಲ್ಲಾ ಅಂಚೆ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಅಂಚೆ ಇಲಾಖೆ ಶನಿವಾರ ಪ್ರಕಟಿಸಿದೆ. ಇದನ್ನೂ ಓದಿ: ರಷ್ಯಾ ತೈಲ ಖರೀದಿಸಲು ಸಾಧ್ಯವಾಗದಿದ್ರೆ ಭಾರತಕ್ಕಿರೋ ಆಯ್ಕೆಗಳೇನು? – ಅಮೆರಿಕಗೆ ಭಾರತವೇ ಯಾಕೆ ಟಾರ್ಗೆಟ್?‌

    ಈ ನಿರ್ಧಾರವು ಜು.30 ರಂದು US ಆಡಳಿತವು ಹೊರಡಿಸಿದ ಕಾರ್ಯನಿರ್ವಾಹಕ ಆದೇಶ ಸಂಖ್ಯೆ 14324 ಅನ್ನು ಅನುಸರಿಸುತ್ತದೆ. ಇದು 800 ಡಾಲರ್ ವರೆಗಿನ ಸರಕುಗಳಿಗೆ ಸುಂಕ-ಮುಕ್ತ ಡಿ ಮಿನಿಮಿಸ್ ವಿನಾಯಿತಿಯನ್ನು ಹಿಂತೆಗೆದುಕೊಳ್ಳುತ್ತದೆ.‌

    ವ್ಯಾಪಾರ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂಚೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಭಾರತದ ಮೇಲೆ ಶೇ. 25 ರಷ್ಟು ಸುಂಕವನ್ನು ವಿಧಿಸಿದ್ದರು. ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕ ಹೇರಿದರು. ಒಟ್ಟು ಸುಂಕದ ಹೊರೆ ಶೇ.50 ಕ್ಕೆ ಹೆಚ್ಚಳವಾಯಿತು. ಇದನ್ನೂ ಓದಿ: ಚೀನಾವನ್ನ ಎದುರಿಸಬೇಕಾದ್ರೆ ಭಾರತ-ಅಮೆರಿಕ ಸಂಬಂಧವನ್ನ ಹಳಿಗೆ ತನ್ನಿ – ಟ್ರಂಪ್‌ಗೆ ನಿಕ್ಕಿ ಹ್ಯಾಲಿ ಮತ್ತೆ ಎಚ್ಚರಿಕೆ

    ಆ.29 ರಿಂದ ಜಾರಿಗೆ ಬರುವಂತೆ, ಯುಎಸ್ಎಗೆ ಉದ್ದೇಶಿಸಲಾದ ಎಲ್ಲಾ ಅಂತರರಾಷ್ಟ್ರೀಯ ಅಂಚೆ ವಸ್ತುಗಳು, ಅವುಗಳ ಮೌಲ್ಯವನ್ನು ಲೆಕ್ಕಿಸದೆ, ದೇಶ-ನಿರ್ದಿಷ್ಟ ಅಂತರರಾಷ್ಟ್ರೀಯ ತುರ್ತು ಆರ್ಥಿಕ ಶಕ್ತಿ ಕಾಯ್ದೆ (ಐಇಇಪಿಎ) ಸುಂಕ ಚೌಕಟ್ಟಿನ ಪ್ರಕಾರ ಕಸ್ಟಮ್ಸ್ ಸುಂಕಗಳಿಗೆ ಒಳಪಟ್ಟಿರುತ್ತವೆ ಎಂದು ಅಂಚೆ ಇಲಾಖೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.