ವಾಷಿಂಗ್ಟನ್: 13 ವರ್ಷದ ಅಮೆರಿಕದ ಬಾಲಕನೊಬ್ಬ ಬಿಎಂಡಬ್ಲ್ಯು ಕಾರನ್ನು ಕದ್ದು ತನ್ನ ಗರ್ಲ್ ಫ್ರೆಂಡ್ ಮನೆಗೆ ಹೋಗುವಾಗ ತನ್ನ ತಾಯಿಯ ಕೈಗೆ ಸಿಕ್ಕಿ ಹಾಕಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟೆಕ್ಸಾಸ್ ನ ಎಲ್ ಪಾಸೋ ನಗರದ 13 ವರ್ಷದ ಆರೋನ್ ತನ್ನ ತಾಯಿಯ ಬಿಎಂಡಬ್ಲ್ಯು ಕಾರನ್ನ ಕದ್ದು, ತನ್ನ ಗರ್ಲ್ ಫ್ರೆಂಡ್ ಮನೆಗೆ ಹೋಗುತ್ತಿರುತ್ತಾನೆ. ಕಾರ್ ಕದ್ದಿರುವ ವಿಷಯ ತಿಳಿದ ತಾಯಿ ತನ್ನ ಮಗನನ್ನು ಹಿಂಬಾಲಿಸಿ ಆತನನ್ನು ಕಾರಿನಿಂದ ಹೊರತಂದು ಬೆಲ್ಟಿನಿಂದ ಹೊಡೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
My 13 year old brother disconnected the WiFi so my mom wouldn’t be able to see her cameras and took her brand new bmw to his gf’s house 🤦🏼♀️ I shouldn’t be laughing but damn 😂😂😂
— mrs never do no wrong ✨ (@LilaaBites) October 12, 2018
ಆರೋನ್ ಅಕ್ಕ ಲಿಜಾ ಟ್ವಿಟ್ಟರ್ ನಲ್ಲಿ ಈ ದೃಶ್ಯವನ್ನ ಹಂಚಿಕೊಂಡಿದ್ದು, “ನನ್ನ ತಮ್ಮ ಆರೋನ್, ನನ್ನ ತಾಯಿ ಕ್ಯಾಮೆರಾ ನೋಡಬಾರದು ಎಂದು ನಮ್ಮ ಮನೆಯ ವೈಫೈ ಕನೆಕ್ಷನ್ ಅನ್ನು ಕಡಿತಗೊಳಿಸಿ, ಹೊಸ ಬಿಎಂಡಬ್ಲ್ಯು ಕಾರ್ ಅನ್ನು ಕದ್ದಿದ್ದಾನೆ” ಎಂದು ಟ್ವೀಟ್ ಮಾಡಿದ್ದಳು. ಈ ವಿಡಿಯೋವನ್ನು 1.4 ಲಕ್ಷ ಜನರು ಲೈಕ್ ಮಾಡಿದ್ದು, 43 ಸಾವಿರ ಜನರು ರೀ ಟ್ವೀಟ್ ಮಾಡಿದ್ದಾರೆ.
ತಾಯಿ ಮಗನನ್ನು ಹಿಂಬಾಲಿಸುತ್ತಿರುವ ವಿಡಿಯೋಗೆ ಜನರು ಹೆಚ್ಚು ಲೈಕ್ ಮತ್ತು ರೀ ಟ್ವೀಟ್ ಮಾಡಿದ್ದು, ಆ ತಾಯಿಯನ್ನ ಹೊಗಳಿ, ನಮ್ಮ ಮನೆಯಲ್ಲಿ ಹೀಗೇನಾದರು ನಡೆದರೆ ಪೊಲೀಸರ ಬದಲಿಗೆ ನಿಮ್ಮನ್ನೇ ಕರೆಯುತ್ತೇವೆ ಎಂದು ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://twitter.com/LilaaBites/status/1050843628585738240












