Tag: US women

  • ಇನ್‌ಸ್ಟಾ ಲವ್ವರ್‌ ಮದುವೆಯಾಗಲು ಭಾರತದ ಹಳ್ಳಿಗೆ ಬಂದ ಅಮೆರಿಕ ಮಹಿಳೆ

    ಇನ್‌ಸ್ಟಾ ಲವ್ವರ್‌ ಮದುವೆಯಾಗಲು ಭಾರತದ ಹಳ್ಳಿಗೆ ಬಂದ ಅಮೆರಿಕ ಮಹಿಳೆ

    ವಾಷಿಂಗ್ಟನ್‌: ಇನ್‌ಸ್ಟಾಗ್ರಾಂ (Instagram) ಲವ್ವರ್‌ ಮದುವೆಯಾಗಲು ಅಮೆರಿಕದ ಮಹಿಳೆಯೊಬ್ಬರು ಭಾರತಕ್ಕೆ ಆಗಮಿಸಿದ್ದಾರೆ. ಪ್ರೇಮಿಗಾಗಿ ಅಮೆರಿಕದಿಂದ (America) ಸಾವಿರಾರು ಮೈಲುಗಳಷ್ಟು ದೂರ ಪ್ರಯಾಣಿಸಿ ಆಂಧ್ರಪ್ರದೇಶದ ಹಳ್ಳಿಗೆ ಬಂದು ತಲುಪಿಸಿದ್ದಾರೆ.

    ಛಾಯಾಗ್ರಾಹಕಿ ಜಾಕ್ಲಿನ್ ಫೊರೆರೊ ಎಂಬಾಕೆಗೆ ಭಾರತದ ಚಂದನ್ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಿತರಾದರು. ಚಂದನ್‌ ಸರಳತೆಗೆ ಆಕರ್ಷಿತಳಾಗಿದ್ದರು. ನಂತರ ಪರಸ್ಪರರು ಪ್ರೀತಿಯಲ್ಲಿ ಬಿದ್ದಿದ್ದರು. ಇದನ್ನೂ ಓದಿ: ದೇಶ ತೊರೆಯಿರಿ ಅಥವಾ ಜೈಲು ಶಿಕ್ಷೆ ಅನುಭವಿಸಿ: ವಿದೇಶಿ ಭಯೋತ್ಪಾದಕರಿಗೆ ಅಮೆರಿಕ ಎಚ್ಚರಿಕೆ

     

    View this post on Instagram

     

    A post shared by Jaclyn Forero (@jaclyn.forero)

    ಇನ್‌ಸ್ಟಾದಲ್ಲಿ ‘ಹಾಯ್‌’ ಎಂದು ಪರಿಚಿತರಾದ ಇವರು, ಸತತ 14 ತಿಂಗಳು ಚಾಟ್‌ ಮಾಡಿಕೊಂಡಿದ್ದರು. ಹೃದಯಸ್ಪರ್ಶಿ ಸಂಭಾಷಣೆಯೊಂದಿಗೆ ಪ್ರೀತಿಯಲ್ಲಿ ಬಿದ್ದರು. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು.

    ಸಂಗೀತ, ಕಲೆ ಮತ್ತು ಛಾಯಾಗ್ರಹಣದಲ್ಲಿ ಚಂದನ್‌ಗೆ ಇದ್ದ ಉತ್ಸಾಹಕ್ಕೆ ನಾನು ಆಕರ್ಷಿತಳಾದೆ. 8 ತಿಂಗಳ ಕಾಲ ಆನ್‌ಲೈನ್‌ನಲ್ಲಿ ಡೇಟಿಂಗ್ ಮಾಡಿದ್ದೆವು. ನನ್ನ ತಾಯಿಯ ಅನುಮತಿ ಪಡೆದು ನಾನು ಭಾರತಕ್ಕೆ ಬಂದಿದ್ದೇನೆ ಎಂದು ಫೊರೆರೊ ತಿಳಿಸಿದ್ದಾರೆ. ಇದನ್ನೂ ಓದಿ: ನೈಟ್‌ಕ್ಲಬ್‌ನ ಛಾವಣಿ ಕುಸಿದು 79 ಮಂದಿ ದುರ್ಮರಣ

    ಈ ಜೋಡಿ ಈಗ ಅಮೆರಿಕದಲ್ಲಿ ತಮ್ಮ ಜೀವನವನ್ನು ಒಟ್ಟಿಗೆ ಪ್ರಾರಂಭಿಸಲು ಚಂದನ್ ವೀಸಾಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ದೊಡ್ಡ ಸಾಹಸಗಳೊಂದಿಗೆ ಹೊಸ ಅಧ್ಯಾಯಕ್ಕಾಗಿ ನಾವಿಬ್ಬರೂ ಉತ್ಸುಕರಾಗಿದ್ದೇವೆಂದು ಹೇಳಿಕೊಂಡಿದ್ದಾರೆ.

  • ಪತಿ, ಕೈತುಂಬ ಸಂಬಳ ಸಿಗುತ್ತಿದ್ದ ಕೆಲಸ ಬಿಟ್ಟ ಬಳಿಕ ಬರೋಬ್ಬರಿ 45 ಕೆಜಿ ತೂಕ ಇಳಿಸಿಕೊಂಡ ಮಹಿಳೆ

    ಪತಿ, ಕೈತುಂಬ ಸಂಬಳ ಸಿಗುತ್ತಿದ್ದ ಕೆಲಸ ಬಿಟ್ಟ ಬಳಿಕ ಬರೋಬ್ಬರಿ 45 ಕೆಜಿ ತೂಕ ಇಳಿಸಿಕೊಂಡ ಮಹಿಳೆ

    ವಾಷಿಂಗ್ಟನ್‌: ಪತಿ ಹಾಗೂ ಕೆಲಸವನ್ನು ತೊರೆದ ಬಳಿ ಅಮೆರಿಕದ ಮಹಿಳೆಯೊಬ್ಬರು ಬರೋಬ್ಬರಿ 45 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ತಾವು ತೂಕ ಇಳಿಸಿಕೊಂಡ ಜರ್ನಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

    2020ರ ವರೆಗೂ ರೋಡ್‌ ಐಲೆಂಡ್‌ನ ಕೋನಿ ಸ್ಟೋವರ್ಸ್‌ ಅವರು ಪತಿ ಹಾಗೂ ಮಗಳೊಂದಿಗೆ ಪರಿಪೂರ್ಣ ಜೀವನ ನಡೆಸುತ್ತಿದ್ದರು. ಕೈತುಂಬಾ ಸಂಬಳ ಪಡೆಯುವ ಕೆಲಸದಲ್ಲೂ ಇದ್ದರು. ಸುಂದರವಾದ ಮನೆ ಕೂಡ ಇತ್ತು.

    ಕಾಲಾನಂತರದಲ್ಲಿ ಸಂಸಾರ ಮತ್ತು ಕೆಲಸದ ಬಗ್ಗೆ ಅತೃಪ್ತಿ ಹೊಂದಲು ಶುರುಮಾಡಿದರು. ಮಾನಸಿಕ ನೆಮ್ಮದಿಗಾಗಿ ಮದ್ಯದ ಚಟಕ್ಕೆ ಬಿದ್ದರು. ಆರೋಗ್ಯಕರವಲ್ಲದ ಆಹಾರ ಪದ್ಧತಿ ರೂಢಿಸಿಕೊಂಡರು. ಇದು ಅವರ ದೇಹದ ತೂಕ ಹೆಚ್ಚಲು ಕಾರಣವಾಯಿತು. ಬದಲಾದ ಜೀವನಶೈಲಿಯಿಂದ ಅವರ ತೂಕ ಬರೋಬ್ಬರಿ 136 ಕೆಜಿಗೆ ಹೆಚ್ಚಿತು.

    2021 ರಲ್ಲಿ ಸ್ಟೋವರ್ಸ್ ತನ್ನ ಪತಿಯಿಂದ ದೂರವಾದರು. ಕೆಲಸಕ್ಕೂ ವಿದಾಯ ಹೇಳಿದರು. ಸ್ವಂತ ವ್ಯವಹಾರ ಆರಂಭಿಸಿದರು. ದೇಹದ ತೂಕ ಇಳಿಸಿಕೊಳ್ಳಲು ರೋಲರ್-ಸ್ಕೇಟಿಂಗ್‌ ಮೊರೆ ಹೋದರು.

    ನಾಲ್ಕು ವರ್ಷಗಳ ಹಿಂದೆ, ನನ್ನ ಜೀವನ ಹೊರಗಿನಿಂದ ಚೆನ್ನಾಗಿ ಕಾಣುತ್ತಿತ್ತು. ನನಗೆ ಉತ್ತಮ ಸಂಬಳದ ಕೆಲಸ, ಮದುವೆ, ಸುಂದರ ಮಗಳು, ಮನೆ. ನಾನು ಬಯಸಬೇಕಾದ ಎಲ್ಲವೂ ಇತ್ತು. ಆದರೆ ನಾನು ಜಂಜಾಟಕ್ಕೆ ಸಿಲುಕಿದಂತೆ ಭಾಸವಾಯಿತು. ಕೊನೆಗೆ ನಾನು ಬದಲಾವಣೆಗೆ ತೆರೆದುಕೊಂಡೆ. ಪತಿಯನ್ನು ತೊರೆಯುವುದು ಕಷ್ಟದ ಕೆಲಸವಾಗಿತ್ತು. ಆದರೂ, ಜೀವನದಲ್ಲಿ ಬದಲಾವಣೆ ಬೇಕು ಎಂದು ದೃಢ ನಿರ್ಧಾರ ಕೈಗೊಂಡೆ. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿಸಿಕೊಂಡೆ. ದೇಹದ ತೂಕ ಇಳಿಸಿಕೊಳ್ಳಲು ರೋಲರ್‌-ಸ್ಕೇಟಿಂಗ್‌ ಆಯ್ಕೆ ಮಾಡಿಕೊಂಡೆ ಎಂದು ಸ್ಟೋವರ್ಸ್‌ ತಿಳಿಸಿದ್ದಾರೆ.

  • 18 ವರ್ಷ ತುಂಬುವುದು ಇಷ್ಟವಿಲ್ಲ ಅಂತ ಹುಟ್ಟುಹಬ್ಬಕ್ಕೂ ಮುನ್ನವೇ ಮಗನನ್ನು ಕೊಂದ ಮಹಿಳೆ

    18 ವರ್ಷ ತುಂಬುವುದು ಇಷ್ಟವಿಲ್ಲ ಅಂತ ಹುಟ್ಟುಹಬ್ಬಕ್ಕೂ ಮುನ್ನವೇ ಮಗನನ್ನು ಕೊಂದ ಮಹಿಳೆ

    ವಾಷಿಂಗ್ಟನ್‌: 18 ವರ್ಷ ತುಂಬಲು ಇಷ್ಟವಿಲ್ಲದ ಕಾರಣ ಹುಟ್ಟುಹಬ್ಬಕ್ಕೂ ಮುನ್ನವೇ ಅಮೆರಿಕದ ಮಹಿಳೆಯೊಬ್ಬರು ತನ್ನ ಮಗನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.

    ಮಿಚಿಗನ್‌ನ ಮಹಿಳೆ ಕೇಟೀ ಲೀ (39) ತನ್ನ ಮಗನ 18 ನೇ ಹುಟ್ಟುಹಬ್ಬದ ಮುನ್ನಾ ದಿನದಂದು ಆತನನ್ನು ಕೊಲೆ ಮಾಡಿದ್ದಾಳೆ. ತನ್ನ ಜೀವನವನ್ನು ತಾನೇ ಕೊನೆಗೊಳಿಸಲು ಪುತ್ರ ಬಯಸಿದ್ದ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.

    ಕೊನೆ ನಡೆದಿರುವ ವಿಚಾರ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಆರೋಪಿ ಮಹಿಳೆ ಕೇಟೀ ಲೀ ಮನೆಯಲ್ಲಿ ತನ್ನ ಮಗನನ್ನು ಹತ್ಯೆ ಮಾಡಿ ಚಾಕು ಹಿಡಿದು ನಿಂತಿದ್ದಳು. ಅಪಾರ್ಟ್‌ಮೆಂಟ್‌ ಒಳಗೆ ಪೊಲೀಸರಿಗೆ ಆರೋಪಿ ಲೀ ಅವರ ಮಗ 17 ವರ್ಷದ ಆಸ್ಟಿನ್ ಡೀನ್ ಪಿಕಾರ್ಟ್ ಶವ ಸಿಕ್ಕಿದೆ.

    ಸಾಯುವುದಕ್ಕಾಗಿ ನಾನು ಮತ್ತು ಮಗ ಇಬ್ಬರೂ ಅತಿಯಾಗಿ ಮಾತ್ರೆ ಸೇವಿಸಿದ್ದೆವು ಎಂದು ಮಹಿಳೆ ತಿಳಿಸಿದ್ದಾರೆ. ದೂರಿನ ಪ್ರಕಾರ, ಮಗ ಪ್ರಜ್ಞೆ ತಪ್ಪಿದ್ದಾಗ ಚಾಕುವಿನಿಂದ ಆತನ ಗಂಟಲು ಮತ್ತು ತೋಳಿನ ಭಾಗವನ್ನು ಚಾಕುವಿನಿಂದ ಆಕೆ ಕೊಯ್ದಿದ್ದಳು ಎಂದು ವರದಿಯಾಗಿದೆ.

    ನಾನು ನನ್ನ ಮಗನ ಜೊತೆ ಇರಬೇಕು. ನನ್ನನ್ನೂ ಕೊಂದುಬಿಡಿ ಎಂದು ಆರೋಪಿ ಮಹಿಳೆ ಪೊಲೀಸರ ಮುಂದೆ ದುಃಖಿಸಿರುವ ಪ್ರಸಂಗವೂ ನಡೆದಿದೆ.

  • 10 ವರ್ಷದ ಮಗನ ಮೇಲೆ 5 ನಿಮಿಷ ಕುಳಿತು ಹತ್ಯೆ ಮಾಡಿದ 154 ಕೆಜಿ ತೂಕದ ತಾಯಿ

    10 ವರ್ಷದ ಮಗನ ಮೇಲೆ 5 ನಿಮಿಷ ಕುಳಿತು ಹತ್ಯೆ ಮಾಡಿದ 154 ಕೆಜಿ ತೂಕದ ತಾಯಿ

    ವಾಷಿಂಗ್ಟನ್‌: 154 ಕೆಜಿಗಿಂತಲೂ ಹೆಚ್ಚು ತೂಕವಿರುವ ಮಹಿಳೆಯೊಬ್ಬರು ತನ್ನ 10 ವರ್ಷದ ಮಗನ ಮೇಲೆ ಕುಳಿತು ಕೊಂದಿರುವ ಘಟನೆ ಅಮೆರಿಕದ ಇಂಡಿಯಾನಾ ರಾಜ್ಯದಲ್ಲಿ ನಡೆದಿದೆ.

    ಡಕೋಟಾ ಲೆವಿ ಸ್ಟೀವನ್ಸ್‌ (10) ಕೊಲೆಯಾದ ಬಾಲಕ. ಜೆನ್ನಿಫರ್‌ ಲೀ ವಿಲ್ಸನ್‌ (48) ಹತ್ಯೆ ಮಾಡಿದ ಮಹಿಳೆ. ಪುತ್ರನನ್ನು ಕೊಂದಿದ್ದಕ್ಕೆ ಆಕೆಗೆ 6 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಕ್ಟೋಬರ್‌ನಲ್ಲಿ 5 ನಿಮಿಷಗಳ ಕಾಲ ಮಗುವಿನ ಮೇಲೆ ಕುಳಿತು ಕೊಲೆ ಮಾಡಿದ್ದಾಳೆ.

    ಸ್ಟೀವನ್ಸ್ 4 ಅಡಿ 10 ಇಂಚು ಎತ್ತರ ಮತ್ತು 40 ಕೆಜಿ ತೂಕವಿದ್ದ. ಆತನ ತಾಯಿ ವಿಲ್ಸನ್ 4 ಅಡಿ 11 ಇಂಚು ಎತ್ತರ ಮತ್ತು 154 ಕೆಜಿ ತೂಕವಿದ್ದಳು. ಆಕೆ ಮಗನ ಮೇಲೆ ಕುಳಿತಿದ್ದರಿಂದ ಆತನಿಗೆ ಉಸಿರುಗಟ್ಟಿದೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

    ಬಾಲಕನ ಮುಖದ ಮೇಲೆ ಗಾಯದ ಗುರುತಿರುವುದು ಕಂಡುಬಂದಿದೆ. ಪ್ರಕರಣ ಸಂಬಂಧ ಆರೋಪಿ ತಾಯಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ಆಕೆ ತಪ್ಪೊಪ್ಪಿಕೊಂಡಿದ್ದಾಳೆ.

  • ಮಹಿಳೆಗೆ ಮುತ್ತಿಟ್ಟು, ಪೊಲೀಸ್‌ ಕಾರಿನಲ್ಲೇ ರೊಮ್ಯಾನ್ಸ್‌ – US ಅಧಿಕಾರಿ ಅಮಾನತು

    ಮಹಿಳೆಗೆ ಮುತ್ತಿಟ್ಟು, ಪೊಲೀಸ್‌ ಕಾರಿನಲ್ಲೇ ರೊಮ್ಯಾನ್ಸ್‌ – US ಅಧಿಕಾರಿ ಅಮಾನತು

    ವಾಷಿಂಗ್ಟನ್‌: ಕರ್ತವ್ಯ ಸಮಯದಲ್ಲಿ ಮಹಿಳೆಯನ್ನ ತಬ್ಬಿಕೊಂಡು ಚುಂಬಿಸುತ್ತಿದ್ದ, ನಂತರ ಕಾರಿನ ಹಿಂಬದಿ ಸೀಟಿನಲ್ಲಿ ಅದೇ ಮಹಿಳೆಯೊಂದಿಗೆ (US Women) ರೊಮ್ಯಾನ್ಸ್‌ ಮಾಡ್ತಿದ್ದ ಅಮೆರಿಕದ ಪೊಲೀಸ್‌ ಅಧಿಕಾರಿಯನ್ನ (US Police Officer) ಅಮಾನತುಗೊಳಿಸಲಾಗಿದೆ.

    ಪ್ರಿನ್ಸ್ ಜಾರ್ಜ್‌ನ ಕೌಂಟಿ ಪೊಲೀಸ್ (County Police) ಅಧಿಕಾರಿಯನ್ನ ಫ್ರಾನ್ಸೆಸ್ಕೊ ಮಾರ್ಲೆಟ್ ಎಂದು ಗುರುತಿಸಲಾಗಿದೆ. ಈತ ಪಾರ್ಕ್‌ನಲ್ಲಿ ಮಹಿಳೆಯನ್ನ ತಬ್ಬಿಕೊಂಡು ಚುಂಬಿಸಿದ್ದಾನೆ. ಬಳಿಕ ಆಕೆಯನ್ನ ಪೊಲೀಸ್‌ ಇಲಾಖೆಯ ಕಾರಿನ ಹಿಂಬದಿ ಸೀಟಿನಲ್ಲಿ ಕೂರಿಸಿಕೊಂಡಿದ್ದಾನೆ. ಆಕೆಯೊಂದಿಗೆ ರೊಮ್ಯಾನ್ಸ್‌ ಮಾಡಿದ್ದಾನೆ ಎಂಬ ಆರೋಪಗಳು ಕೇಳಿಬಂದಿವೆ. ಇದನ್ನೂ ಓದಿ: ಜಿ20 ಶೃಂಗಸಭೆಗೆ ಅಮೆರಿಕ ಅಧ್ಯಕ್ಷರ ಪ್ರವಾಸ – ಬೈಡನ್ ಪ್ರವಾಸಕ್ಕೂ ಮುನ್ನ ಜಿಲ್ ಬೈಡನ್‍ಗೆ ಕೊರೊನಾ ಸೋಂಕು

    ಮೂಲಗಳ ಪ್ರಕಾರ ಆಕ್ಸನ್ ಹಿಲ್ ಪ್ರೌಢಶಾಲೆ ಪಕ್ಕದಲ್ಲಿರುವ ಕಾರ್ಸನ್ ಪಾರ್ಕ್‌ನಲ್ಲಿ (Park) ಈ ಘಟನೆ ನಡೆದಿದೆ. ಬೋರೆಕ್ಯೂರ್ ಹೆಸರಿನ ಟ್ವಿಟ್ಟರ್‌ (X) ಖಾತೆಯು ಈ ಕುರಿತ ವೀಡಿಯೋ ತುಣುಕನ್ನು ಹಂಚಿಕೊಂಡಿದ್ದು, ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. 47 ಸೆಕೆಂಡುಗಳ ವೀಡಿಯೋದಲ್ಲಿ ಪೊಲೀಸ್‌ ಅಧಿಕಾರಿ ಪಾರ್ಕ್‌ನಲ್ಲಿ ಮಹಿಳೆಯನ್ನ ತಬ್ಬಿಕೊಂಡು ಚುಂಬಿಸಿದ್ದಾನೆ. ಬಳಿಕ ಆಕೆಯನ್ನ ಕಾರಿನ ಹಿಂಬದಿ ಸೀಟಿನಲ್ಲಿ ಕೂರಿಸಿಕೊಂಡು ಅಸಭ್ಯ ವರ್ತನೆ ತೋರಿದ್ದಾನೆ. ಸುಮಾರು 40 ನಿಮಿಷಗಳ ಕಾಲ ಕಾರಿನಲ್ಲೇ ಇದ್ದರು ಎನ್ನಲಾಗಿದೆ.

    ಮಾರ್ಲೆಟ್ ಮತ್ತು ವಿಡಿಯೋದಲ್ಲಿರುವ ಮಹಿಳೆಯ ನಡುವಿನ ಸಂಬಂಧ ಏನು ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದ್ರೆ ಪೊಲೀಸ್‌ ಅಧಿಕಾರಿ ಕರ್ತವ್ಯದಲ್ಲಿದ್ದ ಎಂಬ ಕಾರಣಕ್ಕೆ ಆತನನ್ನ ಅಮಾನತುಗೊಳಿಸಿದ್ದು, ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಸಿಂಗಾಪುರ ಅಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ಷಣ್ಮುಗರತ್ನಂಗೆ ಮೋದಿ ಅಭಿನಂದನೆ – ಯಾರಿವರು?

    ಮಾರ್ಲೆಟ್‌ ಮೇಲಿನ ಆರೋಪ ಇದೇ ಮೊದಲೇನಲ್ಲ ಈ ಹಿಂದೆಯೂ ಮಾಜಿ ಗೆಳತಿಯಿಂದ ಮಗು ಪಡೆದಿದ್ದ, ನಂತರ ಆಕೆಯನ್ನ ದುರುಪಯೋಗ ಪಡಿಸಿಕೊಂಡಿದ್ದಕ್ಕಾಗಿ ಕೌಟುಂಬಿಕ ಹಿಂಸಾಚಾರ ಆರೋಪದ ಮೇಳೆ ಒಂದು ತಿಂಗಳು ವೇತನ ರಹಿತವಾಗಿ ಅಮಾನತುಗೊಳಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 20 ನಿಮಿಷದಲ್ಲಿ 2 ಲೀಟರ್‌ ನೀರು ಕುಡಿಯಲು ಹೋಗಿ ಮಹಿಳೆ ಸಾವು

    20 ನಿಮಿಷದಲ್ಲಿ 2 ಲೀಟರ್‌ ನೀರು ಕುಡಿಯಲು ಹೋಗಿ ಮಹಿಳೆ ಸಾವು

    ನ್ಯೂಯಾರ್ಕ್: ಕೇವಲ 20 ನಿಮಿಷದಲ್ಲಿ 2 ಲೀಟರ್‌ ನೀರು ಕುಡಿಯಲು ಹೋಗಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಅಮೆರಿಕದಲ್ಲಿ (America) ನಡೆದಿದೆ.

    ಇಂಡಿಯಾನಾದ ಆಶ್ಲೇ ಸಮ್ಮರ್ಸ್ ಮೃತಪಟ್ಟ ಮಹಿಳೆ. ಆಕೆಯ ಸಹೋದರ ಡೆವೊನ್ ಮಿಲ್ಲರ್, ತನ್ನ ಸಹೋದರಿ ಸಾವಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಅಮೃತ್ ಭಾರತ್; ರಾಜ್ಯದ 13 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ – ಮೋದಿಯಿಂದ ಇಂದು ಚಾಲನೆ

    ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಕುಡಿಲು ಆಶ್ಲೇ ಮುಂದಾಗಿದ್ದಳು. ಈ ವೇಳೆ ಆಕೆ ಕುಸಿದು ಬಿದ್ದಳು. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ರಕ್ತದಲ್ಲಿನ ಸೋಡಿಯಂ ಪ್ರಮಾಣವು ಅಸಹಜವಾಗಿ ಕಡಿಮೆ ಆಗಿರುವಾಗ ಉಂಟಾಗುವ ನೀರಿನ ವಿಷತ್ವ ಎಂದು ಕರೆಯಲ್ಪಡುವ ಹೈಪೋನಾಟ್ರೀಮಿಯಾದಿಂದ ಆಕೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದರು.

    ನೀರಿನ ವಿಷತ್ವದ ಬಗ್ಗೆ ವೈದ್ಯರು ಮಾತನಾಡುವಾಗ ನಮಗೆ ಆಘಾತವಾಯಿತು. ಹೀಗೂ ಸಮಸ್ಯೆಗಳು ಎದುರಾಗುತ್ತವೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡಿತು ಎಂದು ಆಶ್ಲೇ ಸಹೋದರ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ 5.8 ತೀವ್ರತೆಯ ಪ್ರಬಲ ಭೂಕಂಪನ – ದೆಹಲಿ, ಪಂಜಾಬ್​ನಲ್ಲೂ ನಡುಗಿದ ಭೂಮಿ

    ಅಪರೂಪದ ಸಂದರ್ಭದಲ್ಲಿ ನೀರಿನ ವಿಷತ್ವವು ಮಾರಕವಾಗಬಹುದು. ಕಡಿಮೆ ಸಮಯದಲ್ಲಿ ಹೆಚ್ಚು ನೀರು ಸೇವಿಸಿದಾಗ ಅಥವಾ ಆರೋಗ್ಯ ಪರಿಸ್ಥಿತಿಗಳಿಂದಾಗಿ ಮೂತ್ರಪಿಂಡಗಳು ಹೆಚ್ಚು ನೀರನ್ನು ಹಿಡಿದಿಟ್ಟುಕೊಂಡರೆ ಇದು ಸಂಭವಿಸುತ್ತದೆ. ನೀರಿನ ವಿಷತ್ವದ ಲಕ್ಷಣಗಳೆಂದರೆ ಸಾಮಾನ್ಯವಾಗಿ ಅಸ್ವಸ್ಥತೆ, ಸ್ನಾಯು ಸೆಳೆತ, ನೋವು, ವಾಕರಿಕೆ ಮತ್ತು ತಲೆನೋವು ಎಂದು ವೈದ್ಯರು ವಿವರಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪುರುಷರನ್ನ ಆಕರ್ಷಿಸಬೇಕಂತ ಕೋಟಿ ಕೋಟಿ ಖರ್ಚು ಮಾಡಿ 200 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ

    ಪುರುಷರನ್ನ ಆಕರ್ಷಿಸಬೇಕಂತ ಕೋಟಿ ಕೋಟಿ ಖರ್ಚು ಮಾಡಿ 200 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆ

    ವಾಷಿಂಗ್ಟನ್‌: ಇತ್ತೀಚಿನ ದಿನಗಳಲ್ಲಿ ಮೇಕಪ್‌ (Makeup) ಮಾಡಿಕೊಳ್ಳದ ಮಹಿಳೆಯರೇ ಇಲ್ಲ. ಕೆಲವರಂತೂ ಮುಖಕ್ಕೆ ಬಣ್ಣ ಬಳಿದುಕೊಳ್ಳದೇ ಮೆನಯಿಂದಾಚೆ ಕಾಲಿಡೋದೆ ಇಲ್ಲ. ಒಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕಾದರೂ ಒಂದು ಗಂಟೆ ಮೇಕಪ್‌ ಮಾಡಿಯೇ ತೀರುತ್ತಾರೆ. ಆದ್ರೆ ಇಲ್ಲೊಬ್ಬಳು ಮಹಿಳೆ (Women) ತಾನು ಶಾಶ್ವತವಾಗಿ ಸೌಂದರ್ಯವತಿಯಾಗಿ ಕಾಣಬೇಕೆಂದು 200ಕ್ಕೂ ಹೆಚ್ಚು ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ.

    6 ಮಕ್ಕಳ ತಾಯಿಯಾಗಿರುವ 55 ವರ್ಷದ ಮಹಿಳೆ ಲೇಸಿ ತನ್ನನ್ನ ತಾನು ‘ಮಿಲಿಯನ್ ಡಾಲರ್ ಬಾರ್ಬಿ’ ಎಂದು ಕರೆದುಕೊಂಡಿದ್ದಾಳೆ. ಈಕೆ ಶಸ್ತ್ರಚಿಕಿತ್ಸೆ (Surgeries) ಮಾಡಿಸಿಕೊಳ್ಳಲು ಬರೋಬ್ಬರಿ 8 ಕೋಟಿ ರೂ. ಖರ್ಚು ಮಾಡಿದ್ದಾಳೆ. ಇದೀಗ ಹರೆಯದ ಹುಡುಗಿಯಂತೆ ಕಾಣುತ್ತಿರುವ ಆಕೆಯನ್ನ ನೋಡಿ ಅನೇಕರು ಹಿಂದೆ ಬಿದ್ದಿದ್ದಾರಂತೆ, ಈಕೆಯೊಂದಿಗೆ ಡೇಟ್‌ ಮಾಡಲು ಬಯಸುತ್ತಿದ್ದಾರಂತೆ. ಇದನ್ನೂ ಓದಿ: 276 ದಿನ ಕಕ್ಷೆಯಲ್ಲಿದ್ದು ಭೂಮಿಗೆ ವಾಪಸ್‌ ಆಯ್ತು ಚೀನಾ ಬಾಹ್ಯಾಕಾಶ ನೌಕೆ!

    ಸ್ಥಳೀಯ ಮಾಧ್ಯಮಗಳ ಪ್ರಕಾರ, ಲೇಸಿಯ ನಿಜವಾದ ಹೆಸರು ಪೌಲಾ ಥೆಬರ್ಟ್‌. ಈಕೆಗೆ ಇನ್ಮುಂದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದಂತೆ ಎಚ್ಚರಿಕೆ ವೈದ್ಯರು ನೀಡಿದ್ದಾರೆ. ಈ ರೀತಿಯ ಜೀವನ ಶೈಲಿಯಿಂದ ಮಹಿಳೆಯರು ದೂರವಿರುವಂತೆಯೂ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಭಯೋತ್ಪಾದನೆಗೆ ಹಣಕಾಸು ನೆರವು ನಿಲ್ಲಿಸಬೇಕು – ಬಹಿರಂಗ ಸಭೆಯಲ್ಲೇ ಪಾಕ್‌ ಸಚಿವನಿಗೆ ಪಂಚ್‌ಕೊಟ್ಟ ಜೈಶಂಕರ್‌

    ಲೇಸಿ (55) ಅಮೆರಿಕದ ವರ್ಜೀನಿಯಾದ ನಿವಾಸಿ. ತಾನು ಪುರುಷರನ್ನ ಆಕರ್ಷಿಕಸಬೇಕು ಅಂತಾ ಬಯಸುತ್ತಾಳೆ. ಅದಕ್ಕಾಗಿ 200ಕ್ಕೂ ಹೆಚ್ಚು ಬಾರಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಈಗ ಆಕೆಯ ಸೌಂದರ್ಯ ನೋಡಿದವರೆಲ್ಲರೂ ಡೇಟ್‌ ಮಾಡಲು ಬಯಸುತ್ತಾರೆ. ಅಲ್ಲದೇ ತನಗೆ 30 ವರ್ಷ ವಯಸ್ಸಿನ ಮಗನಿದ್ದು, ಅವನೂ ಈಕೆಯ ಸೌಂದರ್ಯಕ್ಕೆ ಮಾರುಹೋಗಿದ್ದಾನೆ ಎಂದು ಆಕೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

  • ಮಹಿಳೆಗೆ ಕೊರೊನಾ – ಚಲಿಸುತ್ತಿದ್ದ ವಿಮಾನದ ಟಾಯ್ಲೆಟ್‌ನಲ್ಲೇ 3 ಗಂಟೆ ಕ್ವಾರಂಟೈನ್‌

    ನ್ಯೂಯಾರ್ಕ್‌: ಕೋವಿಡ್-‌19 ದೃಢಪಟ್ಟ ಹಿನ್ನೆಲೆಯಲ್ಲಿ ಅಮೆರಿಕ ಮಹಿಳೆಯೊಬ್ಬರು ಚಲಿಸುತ್ತಿದ್ದ ವಿಮಾನದ ಟಾಯ್ಲೆಟ್‌ನಲ್ಲೇ 3 ಗಂಟೆಗಳ ಕಾಲ ಕ್ವಾರಂಟೈನ್‌ನಲ್ಲಿ ಪ್ರಸಂಗ ನಡೆದಿದೆ.

    ಮಿಚಿಗನ್‌ ಮೂಲದ ಶಿಕ್ಷಕಿ ಮಾರಿಸಾ ಫೋಟಿಯೊ ಎಂಬ ಮಹಿಳೆ ಚಿಕಾಗೊದಿಂದ ಐಸ್‌ಲ್ಯಾಂಡ್‌ಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ವಿಮಾನ ಸಾಗುತ್ತಿದ್ದ ವೇಳೆ ಅವರಿಗೆ ಗಂಟಲು ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ರ‍್ಯಾಪಿಡ್‌ ಕೋವಿಡ್‌ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ಪರಿಣಾಮವಾಗಿ ಅವರನ್ನು ವಿಮಾನದ ಟಾಯ್ಲೆಟ್‌ನಲ್ಲಿ ಐಸೊಲೇಟ್‌ ಮಾಡಲಾಗಿತ್ತು. ಇದನ್ನೂ ಓದಿ: ಓಮಿಕ್ರಾನ್ ಸೋಂಕಿತ ಹೃದಯಾಘಾತದಿಂದ ಸಾವು

    ವಿಮಾನ ಪ್ರಯಾಣಕ್ಕೂ ಮುನ್ನ ಆರ್‌ಟಿ-ಪಿಸಿಆರ್‌ ಹಾಗೂ ಐದು ಬಾರಿ ರ‍್ಯಾಪಿಡ್‌ ಪರೀಕ್ಷೆ ಮಾಡಿಸಿದಾಗ ವರದಿಯಲ್ಲಿ ನೆಗೆಟಿವ್‌ ಬಂದಿತ್ತು. ಆದರೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಗಂಟಲು ನೋವು ಕಾಣಿಸಿಕೊಂಡಿತು. ಈ ವೇಳೆ ರ‍್ಯಾಪಿಡ್‌ ಪರೀಕ್ಷೆ ಮಾಡಿಸಿದಾಗ ಕೋವಿಡ್‌ ಪಾಸಿಟಿವ್‌ ದೃಢಪಟ್ಟಿದೆ ಎಂದು ಮಹಿಳೆ ಪ್ರತಿಕ್ರಿಯಿಸಿದ್ದಾರೆ.

    ಚಲಿಸುತ್ತಿದ್ದ ವಿಮಾನದಲ್ಲಿದ್ದಾಗ ನನಗೆ ಕೋವಿಡ್‌ ತಗುಲಿರುವ ವಿಚಾರ ತಿಳಿದು ಅಳು ಬಂತು. ವಿಮಾನ ಪ್ರಯಾಣಕ್ಕೂ ಮುನ್ನ ನನ್ನ ಕುಟುಂಬದವರೊಂದಿಗೆ ಊಟ ಮಾಡಿದ್ದೆ. ವಿಮಾನದಲ್ಲಿ ಹಲವರ ಪ್ರಯಾಣ ಬೆಳೆಸುತ್ತಿದ್ದೇನೆ. ಈ ಎಲ್ಲಾ ವಿಷಯಗಳನ್ನು ನೆನೆದು ನನಗೆ ಭಯವಾಯಿತು ಎಂದು ಸೋಂಕಿತೆ ಹೇಳಿಕೊಂಡಿದ್ದಾರೆ.

    ಮಾರಿಸಾ ಅವರು ಕೋವಿಡ್‌ ಲಸಿಕೆಯ ಎರಡು ಡೋಸ್‌ ಹಾಗೂ ಬೂಸ್ಟರ್‌ ಡೋಸ್‌ ಕೂಡ ಪಡೆದುಕೊಂಡಿದ್ದಾರೆ. ಆದರೆ ಲಸಿಕೆ ಪಡೆಯದವರ ಸಂಪರ್ಕ ಹೊಂದಿದ್ದ ಕಾರಣದಿಂದಾಗಿ ಅವರಿಗೆ ಸೋಂಕು ತಗುಲಿದೆ. ಇದನ್ನೂ ಓದಿ: ವಿದೇಶದಿಂದ ಬೆಂಗಳೂರಿಗೆ ಬಂದ 9 ಮಂದಿಗೆ ಕೊರೊನಾ

    ಮಹಿಳೆಗೆ ಕೋವಿಡ್‌ ಸೋಂಕು ದೃಢಪಟ್ಟಾಗ ಅವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು. ಆದರೆ ವಿಮಾನದಲ್ಲಿ ಪ್ರಯಾಣಿಕರು ತುಂಬಿದ್ದರು. ಆ ಆಸನದಲ್ಲಿ ಕೂರಲು ಸಾಧ್ಯವಾಗುತ್ತಿಲ್ಲ ಎಂದ ಸೋಂಕಿತೆಯನ್ನು ಅನಿವಾರ್ಯವಾಗಿ ಟಾಯ್ಲೆಟ್‌ನಲ್ಲಿ ಐಸೊಲೇಟ್‌ ಆಗುವಂತೆ ನೋಡಿಕೊಳ್ಳಬೇಕಾಯಿತು ಎಂದು ವಿಮಾನದ ಸಿಬ್ಬಂದಿ ತಿಳಿಸಿದ್ದಾರೆ.