Tag: US supreme court

  • Mumbai Attack | ರಾಣಾ ವಿರುದ್ಧ ಸಾಕ್ಷಿಗಾಗಿ ನಿಗೂಢ ಮಹಿಳೆಯ ಹಿಂದೆ ಬಿದ್ದ ಎನ್‌ಐಎ

    Mumbai Attack | ರಾಣಾ ವಿರುದ್ಧ ಸಾಕ್ಷಿಗಾಗಿ ನಿಗೂಢ ಮಹಿಳೆಯ ಹಿಂದೆ ಬಿದ್ದ ಎನ್‌ಐಎ

    – ತಹವ್ವೂರ್‌ ರಾಣಾಗೆ ಎನ್‌ಐಎ ಕೇಳಿದ ಆ 18 ಪ್ರಶ್ನೆಗಳು ಯಾವುವು?
    – ಭಾರತ ಹಸ್ತಾಂತರ ತಡೆಯಲು 32 ಆರೋಗ್ಯ ಸಮಸ್ಯೆ ಕಾರಣ ನೀಡಿದ್ದ ರಾಣಾ ಪರ ವಕೀಲ

    ನವದೆಹಲಿ: 2008ರ ಮುಂಬೈ ದಾಳಿ (Mumbai Attack) ಪ್ರಕರಣದ ಉಗ್ರ ತಹವ್ವೂರ್ ಹುಸೇನ್ ರಾಣಾ (Tahawwur Hussain Rana) ವಿಚಾರಣೆ ಆರಂಭಿಸಿರುವ ರಾಷ್ಟ್ರೀಯ ತನಿಖಾ ದಳ (NIA) ಸಾಕ್ಷ್ಯ ಕಲೆಹಾಕಲು ನಿಗೂಢ ಮಹಿಳೆಯ ಹಿಂದೆ ಬಿದ್ದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ರಾಣಾ ಭಾರತದಲ್ಲಿದ್ದ ವೇಳೆ ಆತನ ಜೊತೆಗಿದ್ದ ಮಹಿಳೆಯನ್ನು ಪತ್ತೆಹಚ್ಚಲು ಎನ್‌ಐಎ ತನಿಖಾಧಿಕಾರಿಗಳ ತಂಡ ಮುಂದಾಗಿದೆ. ಆಕೆಯ ಗುರುತು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ಈ ಮಹಿಳೆ ರಾಣಾ ನಡೆಸಿದ ಪಿತೂರಿಯ ಭಾಗವಾಗಿರಬಹುದು ಅಥವಾ ರಾಣಾ ಸಂಪರ್ಕದ ಬಗ್ಗೆ ಪ್ರಮುಖ ಮಾಹಿತಿಯನ್ನೂ ಹೊಂದಿರಬಹುದು ಶಂಕಿಸಲಾಗಿದೆ. ಆ ಮಹಿಳೆ ರಾಣಾ ಭಾರತದಲ್ಲಿ ಇದ್ದಷ್ಟು ದಿನ ಅವನ ಪತ್ನಿ ಎಂದೇ ಹೇಳಿಕೊಂಡಿದ್ದಳು. ಈಕೆಯನ್ನ ಪತ್ತೆಹಚ್ಚಿದ್ರೆ, ಇನ್ನಷ್ಟು ರಹಸ್ಯಗಳನ್ನ ಬಯಲಿಗೆಳೆಯಬಹುದು ಎಂದು ಅಧಿಕಾರಿಗಳು ಮಹಿಳೆಯ ಹುಡುಕಾಟಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

    ರಾಣಾಗೆ 18ರ ಕಂಟಕ
    ಈಗಾಗಲೇ ಮೊದಲ ಸುತ್ತಿನ ವಿಚಾರಣೆ ನಡೆಸಿರುವ ಎನ್‌ಐಎ ರಾಣಾಗೆ 18 ಪ್ರಮುಖ ಪ್ರಶ್ನೆಗಳನ್ನ ಕೇಳಿದೆ. ವಿಚಾರಣೆ ವೇಳೆ ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ಹಾಗೂ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಬಗ್ಗೆ ಹಲವು ರಹಸ್ಯಗಳನ್ನ ಬಾಯ್ಬಿಟ್ಟಿದ್ದಾನೆ. ಈ ಪ್ರಶ್ನೆಗಳು ಮಾಧ್ಯಮಗಳಿಗೆ‌ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಎನ್‌ಐಎ ಕೇಳಿದ 18 ಪ್ರಶ್ನೆಗಳು ಯಾವುದು ಅಂತ ನೋಡೋದಾದ್ರೆ..

    1. 2008ರ ನವೆಂಬರ್‌ 26ರಂದು ನೀವು ಎಲ್ಲಿದ್ರಿ?
    2. ನೀವು ಭಾರತದಲ್ಲಿದ್ದ ಸಮಯದಲ್ಲಿ ಯಾರ‍್ಯಾರನ್ನ ಎಲ್ಲೆಲ್ಲಿ ಭೇಟಿ ಮಾಡಿದ್ದೀರಿ?
    3. ಡೇವಿಡ್ ಕೋಲ್ಮನ್ ಹೆಡ್ಲಿ ನಿಮಗೆ ಎಷ್ಟು ದಿನಗಳಿಂದ ಗೊತ್ತು? ನಕಲಿ ವೀಸಾ ನೀಡಿ ಭಾರತಕ್ಕೆ ಕಳುಹಿಸಿದ್ದು ಏಕೆ?
    4. ಹೆಡ್ಲಿಯನ್ನ ಭಾರತದಲ್ಲಿ ಭೇಟಿ ನೀಡಿದ ಸ್ಥಳಗಳ ಬಗ್ಗೆ ನಿಮಗೆ ಏನು ಹೇಳಿದರು?
    5. ಮುಂಬೈ ದಾಳಿಯಲ್ಲಿ ನಿಮ್ಮ ಮತ್ತು ಹೆಡ್ಲಿಯ ಪಾತ್ರವೇನು?
    6. ಡೇವಿಡ್ ಕೋಲ್ಮನ್ ಹೆಡ್ಲಿಗೆ ಭಾರತೀಯ ವೀಸಾ ಪಡೆಯಲು ನೀವು ಹೇಗೆ ಸಹಾಯ ಮಾಡಿದ್ದೀರಿ?
    7. ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ನಿಮಗೆ ಹೇಗೆ ಗೊತ್ತು? ನೀವು ಯಾವಾಗ ಮತ್ತು ಎಲ್ಲಿ ಅವನನ್ನ ಮೊದಲ ಬಾರಿಗೆ ಭೇಟಿ ಮಾಡಿದ್ರಿ?
    8. ಹಫೀಜ್ ಸಯೀದ್ ಜೊತೆಗೆ ನಿಮ್ಮ ನಂಟೇನು?
    9. ಲಷ್ಕರ್-ಎ-ತೈಬಾಗೆ ನೀವು ಹೇಗೆ ಸಹಾಯ ಮಾಡಿದ್ದೀರಿ? ನಿನ್ನ ಸಹಾಯಕ್ಕೆ ಪ್ರತಿಯಾಗಿ ಲಷ್ಕರ್ ನಿನಗೆ ಏನು ಕೊಟ್ಟನು?
    10. ಲಷ್ಕರ್-ಎ-ತೊಯ್ಬಾದಲ್ಲಿ ಎಷ್ಟು ಜನರಿದ್ದಾರೆ? ಅದರ ರಚನೆ ಹೇಗಿದೆ? ನೇಮಕಾತಿ ಹೇಗೆ ನಡೆಯುತ್ತದೆ? ಯಾರು ಮಾಡುತ್ತಾರೆ?
    11. ಲಷ್ಕರ್ ನಡೆಸಲು ನಿಧಿ ಎಲ್ಲಿಂದ ಬರುತ್ತದೆ? ಹೆಚ್ಚು ನಿಧಿ ಸಂಗ್ರಹ ಮಾಡುವವರು ಯಾರು?
    12. ಶಸ್ತ್ರಾಸ್ತ್ರಗಳನ್ನು ಯಾರು ಪೂರೈಸುತ್ತಾರೆ? ನೀವು ಯಾವ ದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಪಡೆಯುತ್ತೀರಿ?
    13. ಪಾಕಿಸ್ತಾನಿ ಸೇನೆ ಮತ್ತು ISI ನಿಮಗೆ ಹೇಗೆ ಸಹಾಯ ಮಾಡುತ್ತದೆ?
    14. ದಾಳಿ ಮಾಡಲು ನೀವು ಗುರಿಗಳನ್ನು ಹೇಗೆ ಆರಿಸುತ್ತೀರಿ? ಗುರಿಯ ಮೇಲೆ ದಾಳಿ ಮಾಡಲು ISI ನಿಮಗೆ ಸೂಚನೆಗಳನ್ನು ನೀಡುತ್ತದೆಯೇ?
    15. ISIಯ ಯೋಜನೆ ಏನು? ಭಾರತದ ನಿಮ್ಮ ಗುರಿ ಸಾಧಿಸಲು ಸಾಧ್ಯವಾಗಲಿಲ್ಲವೇ?
    16. ಐಎಸ್‌ಐ ಹೊರತಾಗಿ ಪಾಕಿಸ್ತಾನ ಸರ್ಕಾರಕ್ಕೂ ಭಯೋತ್ಪಾದಕ ದಾಳಿಯ ಮಾಹಿತಿ ಸಿಗುತ್ತದೆಯೇ?
    17. ದಾಳಿಯ ಸಮಯದಲ್ಲಿ ಭಯೋತ್ಪಾದಕರಿಗೆ ಯಾರು ಸೂಚನೆಗಳನ್ನು ನೀಡುತ್ತಾರೆ?
    18. ಆತ್ಮಹತ್ಯಾ ದಾಳಿಗಳಿಗೆ ಹುಡುಗರನ್ನು ಹೇಗೆ ಸಿದ್ಧಪಡಿಸ್ತಾರೆ, ಅವರಿಗೆ ಏನು ಉಪದೇಶ ಕೊಡ್ತಾರೆ?

    32 ಆರೋಗ್ಯ ಸಮಸ್ಯೆ ಕಾರಣ ನೀಡಿದ್ದ ರಾಣಾ:
    ಇನ್ನೂ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯಲು ರಾಣಾ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡಿದ್ದ ಅನ್ನೋ ಹೊಸ ವಿಚಾರ ಸಹ ಬೆಳಕಿಗೆ ಬಂದಿದೆ. ಈ ಮಾಹಿತಿಯು ಅಮೆರಿಕ ತನಿಖಾ ಏಜೆನ್ಸಿಗಳಿಗೆ ನೀಡಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

    ರಾಣಾನನ್ನ ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯಲು ರಾಣಾ ಪರ ವಕೀಲ ಅಮೆರಿಕದ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ 32 ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿದ್ದರು. ಅಲ್ಲದೇ ತನ್ನ ಕಕ್ಷಿಗಾರನಿಗೆ ಭಾರತದ ಜೈಲುಗಳಲ್ಲಿ ಚಿತ್ರಹಿಂಸೆ ನೀಡಬಹುದು, ಇದರಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ರಾಣಾ ಜೀವನ ಬೇಗ ಅಂತ್ಯವಾಗಲಿದೆ. ಆದ್ದರಿಂದ ಭಾರತಕ್ಕೆ ಹಸ್ತಾಂತರಿಸದಂತೆ ಕೋರ್ಟ್‌ಗೆ ಮನವಿ ಮಾಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

  • 6 ವಾರಗಳ ಗರ್ಭಿಣಿಯಾಗಿದ್ದ 10ರ ಬಾಲಕಿಗೆ ಇಂಡಿಯಾನದಲ್ಲಿ ಗರ್ಭಪಾತ

    6 ವಾರಗಳ ಗರ್ಭಿಣಿಯಾಗಿದ್ದ 10ರ ಬಾಲಕಿಗೆ ಇಂಡಿಯಾನದಲ್ಲಿ ಗರ್ಭಪಾತ

    ವಾಷಿಂಗ್ಟನ್: ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಅಮೆರಿಕದ ಸುಪ್ರೀಂ ಕೋರ್ಟ್ ಈಚೆಗಷ್ಟೇ ರದ್ದುಗೊಳಿಸಿದೆ. ಈ ನಡುವೆ ಒಹಿಯೋ ರಾಜ್ಯದಲ್ಲಿ ಅತ್ಯಾಚಾರಕ್ಕೆ ಬಲಿಯಾಗಿ ಗರ್ಭಿಣಿಯಾಗಿದ್ದ 10 ವರ್ಷದ ಬಾಲಕಿಯನ್ನು ಗರ್ಭಪಾತ ಚಿಕಿತ್ಸೆಗಾಗಿ ಇಂಡಿಯಾನಕ್ಕೆ ಕರೆದೊಯ್ಯಲು ಒತ್ತಾಯಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ.

    ಅಮರಿಕದ ಒಹಿಯೋದಲ್ಲಿ ಅತ್ಯಾಚಾರಕ್ಕೆ ಬಲಿಯಾಗಿ 6 ವಾರಗಳ ಗರ್ಭಿಣಿಯಾಗಿದ್ದ 10 ವರ್ಷದ ಬಾಲಕಿಯೊಬ್ಬಳನ್ನು ಗರ್ಭಪಾತಕ್ಕಾಗಿ ಇಂಡಿಯಾನಕ್ಕೆ ಕಳುಹಿಸುವಂತೆ ಒತ್ತಾಯಿಸಲಾಗಿದೆ. ಅಮೆರಿಕದಲ್ಲಿ ಗರ್ಭಪಾತ ಹಕ್ಕನ್ನು ನಿಷೇಧಿಸಿದ ನಂತರ ಜೂನ್ 24ರಂದು ಒಹಿಯೋದಲ್ಲಿ ಅಧಿಕೃತವಾಗಿ ಜಾರಿಗೆ ತರಲಾಯಿತು. ಹಾಗಾಗಿ ಗರ್ಭಪಾತ ಮಾಡಿಸಲು ಅವಕಾಶವಿಲ್ಲದಿದ್ದರಿಂದ ಇಂಡಿಯಾನ ರಾಜ್ಯಕ್ಕೆ ಕಳುಹಿಸುವಂತೆ ಒತ್ತಾಯಿಸಲಾಯಿತು. ಇದನ್ನೂ ಓದಿ: ಅಮೆರಿಕದಲ್ಲಿ ಗರ್ಭಪಾತ ಹಕ್ಕು ನಿಷೇಧ: ಆಸ್ಟ್ರೇಲಿಯಾದಲ್ಲಿ ಹೋರಾಟದ ಕಿಚ್ಚು

    ಇಂಡಿಯಾನದ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ಡಾ.ಕೈಟ್ಲಿನ್ ಬರ್ನಾರ್ಡ್ ಅವರು ಅತ್ಯಾಚಾರಕ್ಕೆ ಒಳಗಾಗಿದ್ದ ಮಗುವಿಕೆ ಚಿಕಿತ್ಸೆ ನೀಡುವಂತೆ ಸಹಾಯ ಕೋರಿದ್ದರು. ಇದನ್ನೂ ಓದಿ: ಕೋಮಾದಲ್ಲಿರುವ ಮಗನ ಜೀವ ಉಳಿಸಲು ದೇವರ ಮೊರೆ ಹೋದ ತಾಯಿ – ಮಗು ಚೇತರಿಕೆ!

    ಇಂಡಿಯಾನಾ ರಾಜ್ಯದಲ್ಲಿ ಗರ್ಭಪಾತವು ಇನ್ನೂ ಕಾನೂನು ಬಾಹಿರವಾಗಿಲ್ಲ. ಆದರೆ ಇಲ್ಲಿನ ಶಾಸಕರು ಇದೇ ತಿಂಗಳ ಕೊನೆಯಲ್ಲಿ ಅಧಿವೇಶನ ಕರೆಯಲಿದ್ದು, ಕಾರ್ಯವಿಧಾನವನ್ನು ನಿಷೇಧಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

    ಏನಿದು ಘಟನೆ?
    ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಅಮೆರಿಕದ ಸುಪ್ರೀಂ ಕೋರ್ಟ್ ಕಳೆದ ವಾರ ರದ್ದುಗೊಳಿಸಿತು. ಗರ್ಭಪಾತಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಹಕ್ಕು ಎಂದು ಘೋಷಿಸಲಾಗಿದ್ದ 1973ರ ತೀರ್ಪನ್ನು ಅಮೆರಿಕ ಸುಪ್ರೀಂ ಕೋರ್ಟ್ ಕಳೆದ ಶುಕ್ರವಾರ ರದ್ದುಗೊಳಿಸಿತು. ಈ ನಿರ್ಧಾರವನ್ನು ವಿರೋಧಿಸಿ ದೇಶದ ಪ್ರಮುಖ ನಗರಗಳಲ್ಲಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.

    ಈಗ ಅಮೆರಿಕದಲ್ಲಿರುವಂತೆ ಆಸ್ಟ್ರೇಲಿಯಾದ ರಾಜ್ಯಗಳೂ ಗರ್ಭಪಾತದ ಕಾನೂನುಗಳನ್ನು ಹೊರಡಿಸಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಮಹಿಳೆಯರೂ ಪ್ರತಿಭಟನೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಮೆರಿಕದಲ್ಲಿ ಗರ್ಭಪಾತ ಹಕ್ಕು ನಿಷೇಧ: ಆಸ್ಟ್ರೇಲಿಯಾದಲ್ಲಿ ಹೋರಾಟದ ಕಿಚ್ಚು

    ಅಮೆರಿಕದಲ್ಲಿ ಗರ್ಭಪಾತ ಹಕ್ಕು ನಿಷೇಧ: ಆಸ್ಟ್ರೇಲಿಯಾದಲ್ಲಿ ಹೋರಾಟದ ಕಿಚ್ಚು

    ಕಾನ್ಬೆರಾ: ಗರ್ಭಪಾತದ ಹಕ್ಕನ್ನು ನಿಷೇಧಿಸಿರುವ ಅಮೆರಿಕ ಸರ್ಕಾರದ ವಿರುದ್ಧ ಹೋರಾಟ ಭುಗಿಲೆದ್ದಿದೆ. ಅಮೆರಿಕ ಮಹಿಳೆಯರ ಹೋರಾಟ ಬೆಂಬಲಿಸಿ ಆಸ್ಟ್ರೇಲಿಯನ್ನರೂ ತಮ್ಮ ದೇಶದಲ್ಲಿ ಹೋರಾಟ ನಡೆಸುತ್ತಿದ್ದಾರೆ.

    ಗರ್ಭಪಾತ ಹಕ್ಕು ನಿಷೇಧವನ್ನು ಖಂಡಿಸಿ ಆಸ್ಟ್ರೇಲಿಯಾದ ಮೆಲ್ಬರ್ನ್ ಸುಮಾರು 15,000ಕ್ಕೂ ಹೆಚ್ಚು ಮಂದಿ ಘೋಷಣಾ ಫಲಕಗಳನ್ನು ಹಿಡಿದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಇದನ್ನೂ ಓದಿ: 48 ವರ್ಷಗಳ ಹಿಂದೆ ಹೀಗಿತ್ತು ನನ್ನ ರೆಸ್ಯೂಮ್ – ಉದ್ಯೋಗಾಕಾಂಕ್ಷಿಗಳಿಗೆ ಆತ್ಮವಿಶ್ವಾಸ ತುಂಬಿದ ಬಿಲ್‌ಗೇಟ್ಸ್

    ನಾವು ಆಸ್ಟ್ರೇಲಿಯಾದ ಮಹಿಳೆಯರು ಮಾತ್ರವಲ್ಲ ವಿಶ್ವದಾದ್ಯಂತ ಇರುವ ಮಹಿಳೆಯರ ಹಕ್ಕುಗಳ ರಕ್ಷಣೆಗೂ ನಿಲ್ಲುತ್ತೇವೆ. ಅಮೆರಿದಲ್ಲಿ ಲಕ್ಷಾಂತರ ಮಹಿಳೆಯರು ತಮ್ಮ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಇದರಿಂದ ನಾವೂ ಕೋಪಗೊಂಡಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೋಮಾದಲ್ಲಿರುವ ಮಗನ ಜೀವ ಉಳಿಸಲು ದೇವರ ಮೊರೆ ಹೋದ ತಾಯಿ – ಮಗು ಚೇತರಿಕೆ!

    ಈಗ ಅಮೆರಿಕದಲ್ಲಿರುವಂತೆ ಆಸ್ಟ್ರೇಲಿಯಾದ ರಾಜ್ಯಗಳೂ ಗರ್ಭಪಾತದ ಕಾನೂನುಗಳನ್ನು ಹೊರಡಿಸಲು ಮುಂದಾಗಿವೆ. ದೇಶದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ನ್ಯೂ ಸೌತ್‌ವೆಲ್ 2019ರಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸಿದೆ. ಅದುವೇ ಕಾನೂನು ಮಾಡಿದ ಕೊನೆಯ ರಾಜ್ಯ. ಇದೀಗ ಅಮೆರಿಕದಲ್ಲಿ ಕಾನೂನು ಅನುಷ್ಟಾನಗೊಂಡ ಬೆನ್ನಲ್ಲೇ ಆಸ್ಟ್ರೇಲಿಯಾದಲ್ಲಿಯೂ ಕಾನೂನು ಜಾರಿಗೊಳಿಸಲಾಗುತ್ತಿದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.

    ಏನಿದು ಘಟನೆ?: ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಅಮೆರಿಕದ ಸುಪ್ರೀಂ ಕೋರ್ಟ್ ಈಚೆಗಷ್ಟೇ ರದ್ದುಗೊಳಿಸಿತು. ಗರ್ಭಪಾತಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಹಕ್ಕು ಎಂದು ಘೋಷಿಸಲಾಗಿದ್ದ 1973ರ ತೀರ್ಪನ್ನು ಅಮೆರಿಕ ಸುಪ್ರೀಂ ಕೋರ್ಟ್ ಕಳೆದ ಶುಕ್ರವಾರ ರದ್ದುಗೊಳಿಸಿತು. ಈ ನಿರ್ಧಾರವನ್ನು ವಿರೋಧಿಸಿ ದೇಶದ ಪ್ರಮುಖ ನಗರಗಳಲ್ಲಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.

    Live Tv

  • ಸಾರ್ವಜನಿಕವಾಗಿ ಗನ್‌ ಒಯ್ಯುವುದು ಅಮೆರಿಕನ್ನರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್‌

    ಸಾರ್ವಜನಿಕವಾಗಿ ಗನ್‌ ಒಯ್ಯುವುದು ಅಮೆರಿಕನ್ನರ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್‌

    ವಾಷಿಂಗ್ಟನ್: ಅಮೆರಿಕನ್ನರು ಸಾರ್ವಜನಿಕವಾಗಿ ಬಂದೂಕುಗಳನ್ನು ಒಯ್ಯುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ ಎಂದು ಯುಎಸ್‌ ಸುಪ್ರೀಂ ಕೋರ್ಟ್‌ ಗುರುವಾರ ತೀರ್ಪು ನೀಡಿದೆ.

    ಅಮೆರಿಕದ ಶಾಲಾ-ಕಾಲೇಜುಗಳಲ್ಲಿ ಸಾರ್ವಜನಿಕವಾಗಿ ಗುಂಡಿನ ದಾಳಿ ನಡೆಸುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇಂತಹ ಸನ್ನಿವೇಶದಲ್ಲೇ ಸುಪ್ರೀಂ ಕೋರ್ಟ್‌ ತೀರ್ಪನ್ನು ಪ್ರಕಟಿಸಿದೆ. ಇದನ್ನೂ ಓದಿ: ಟಾನ್ಸಿಲ್ ಸರ್ಜರಿ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಬ್ರೆಜಿಲ್‌ ಮಾಜಿ ಸುಂದರಿ

    ವ್ಯಕ್ತಿ ಕಾನೂನುಬದ್ಧ ಸ್ವರಕ್ಷಣೆ ಅಗತ್ಯವಿದೆ ಎಂದು ಸಾಬೀತುಪಡಿಸಲು ಬಂದೂಕು ಪರವಾನಗಿಯನ್ನು ಪಡೆಯಬಹುದು. ಬಂದೂಕುಗಳನ್ನು ಹೊಂದಿರುವ ಜನರನ್ನು ನಿರ್ಬಂಧಿಸುವ ರಾಜ್ಯಗಳ ಕಾನೂನುಗಳಿಗೂ ಈ ತೀರ್ಪು ಬ್ರೇಕ್‌ ನೀಡಿದೆ.

    ಮೇ ತಿಂಗಳಲ್ಲಿ ಎರಡು ಸಾಮೂಹಿಕ ಗುಂಡಿನ ದಾಳಿಯ ನಂತರ ಬಂದೂಕುಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ನ್ಯಾಯಾಲಯ, US ಸಂವಿಧಾನವು ಬಂದೂಕುಗಳನ್ನು ಹೊಂದುವ ಮತ್ತು ಸಾರ್ವಜನಿಕವಾಗಿ ಜೊತೆಯಲ್ಲಿ ಒಯ್ಯುವ ಹಕ್ಕನ್ನು ಖಾತರಿಪಡಿಸುತ್ತದೆ ಎಂದು ವಾದಿಸಿದ ವಕೀಲರ ಪರವಾಗಿ ತೀರ್ಪು ನೀಡಿದೆ.

    2ನೇ ಮತ್ತು 14ನೇ ತಿದ್ದುಪಡಿಗಳು, ಮನೆಯ ಹೊರಗೆ ಆತ್ಮರಕ್ಷಣೆಗಾಗಿ ಬಂದೂಕು ಒಯ್ಯುವ ವ್ಯಕ್ತಿಯ ಹಕ್ಕನ್ನು ರಕ್ಷಿಸುತ್ತವೆ ಎಂದು ನ್ಯಾಯಮೂರ್ತಿ ಕ್ಲಾರೆನ್ಸ್ ಥಾಮಸ್ ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಬಿಕ್ಕಟ್ಟು; ಡೀಸೆಲ್‌ಗಾಗಿ ಬಂಕ್‌ನಲ್ಲಿ 5 ದಿನ ಕ್ಯೂನಲ್ಲಿ ನಿಂತಿದ್ದ ಟ್ರಕ್‌ ಡ್ರೈವರ್‌ ಸಾವು

    ನ್ಯೂಯಾರ್ಕ್‌ ಕಾನೂನು, ಸಂವಿಧಾನದ 14ನೇ ತಿದ್ದುಪಡಿಯನ್ನು ಉಲ್ಲಂಘಿಸುತ್ತದೆ. ಸಾಮಾನ್ಯ ಸ್ವರಕ್ಷಣೆ ಅಗತ್ಯತೆಗಳನ್ನು ಹೊಂದಿರುವ, ಕಾನೂನು ಪಾಲಿಸುವ ನಾಗರಿಕರು, 2ನೇ ತಿದ್ದುಪಡಿಯ ಹಕ್ಕನ್ನು ಸ್ವಯಂ ರಕ್ಷಣೆಗಾಗಿ ಬಂದೂಕನ್ನು ಸಾರ್ವಜನಿಕವಾಗಿ ಇರಿಸಿಕೊಳ್ಳಲು ಮತ್ತು ಒಯ್ಯುವುದನ್ನು ನಿರ್ಬಂಧಿಸುತ್ತದೆ ಎಂದು ಕೋರ್ಟ್‌ ತಿಳಿಸಿದೆ.

    ಪ್ರಕರಣ ಏನು?
    ಮೇ 14 ರಂದು, ನ್ಯೂಯಾರ್ಕ್‌ನ ಬಫಲೋದಲ್ಲಿನ ಸೂಪರ್‌ ಮಾರ್ಕೆಟ್‌ನಲ್ಲಿ 18 ವರ್ಷದ ಯುವಕ AR-15-ಟೈಪ್ ಅಸಾಲ್ಟ್ ರೈಫಲ್ ಅನ್ನು ಬಳಸಿ 10 ಆಫ್ರಿಕನ್-ಅಮೆರಿಕನ್ನರನ್ನು ಕೊಂದಿದ್ದ. ಇದಾದ ಎರಡು ವಾರಗಳ ನಂತರ ಟೆಕ್ಸಾಸ್‌ನ ಉವಾಲ್ಡೆಯ ಪ್ರಾಥಮಿಕ ಶಾಲೆಯಲ್ಲಿ ಬಾಲಕನೊಬ್ಬ ಗುಂಡಿನ ದಾಳಿ ನಡೆಸಿ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರನ್ನು ಕೊಂದಿದ್ದ. ಇದನ್ನೂ ಓದಿ: ಚರ್ಚ್‌ಗಳೂ ಸೇರಿ 4 ತಿಂಗಳಲ್ಲಿ 150ಕ್ಕೂ ಹೆಚ್ಚು ಸ್ಮಾರಕಗಳು ನೆಲಸಮ – ಯುನೆಸ್ಕೋ ವರದಿ

    ನ್ಯೂಯಾರ್ಕ್‌ ಕಾನೂನು ಏನು ಹೇಳುತ್ತೆ?
    ಯಾವುದೇ ವ್ಯಕ್ತಿ ಸಾರ್ವಜನಿಕವಾಗಿ ಬಂದೂಕು ಒಯ್ಯುವುದಾದರೆ, ಆತ್ಮರಕ್ಷಣೆಗಾಗಿ ಎಂಬುದನ್ನು ಸಾಬೀತುಪಡಿಸಬೇಕು ಎಂದು ನ್ಯೂಯಾರ್ಕ್‌ ಕಾನೂನು ಹೇಳುತ್ತದೆ.

    Live Tv