ನ್ಯೂಯಾರ್ಕ್: ಕುತೂಹಲ ಮೂಡಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ (US Presidential Election) ಮತದಾನ ಇಂದು ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 11:30 ಕ್ಕೆ ಅಂತ್ಯವಾಗಲಿದೆ. ಇಲ್ಲಿವರೆಗೆ ಲಭ್ಯವಿರುವ ಮಾಹಿತಿ ಪ್ರಕಾರ, ರಿಪಬ್ಲಿಕನ್‌ನ ಡೊನಾಲ್ಡ್ ಟ್ರಂಪ್ (Donald Trump) 10 ರಾಜ್ಯಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್‌ನ ಕಮಲಾ ಹ್ಯಾರಿಸ್ ಅವರು 7 ಸ್ವಿಂಗ್ ರಾಜ್ಯಗಳಲ್ಲಿ ತಲಾ ಎರಡು ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅರಿಜೋನಾ, ಜಾರ್ಜಿಯಾ, ಮಿಚಿಗನ್, ನೆವಾಡಾ, ಉತ್ತರ ಕೆರೊಲಿನಾ, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ ರಾಜ್ಯಗಳಲ್ಲಿನ ಗೆಲುವೇ ನಿರ್ಣಾಯಕವಾಗಿದೆ.
ಡೊನಾಲ್ಡ್ ಟ್ರಂಪ್ 177 ಸ್ಥಾನಗಳಲ್ಲಿ ಮುಂದಿದ್ದರೆ, ಕಮಲಾ ಹ್ಯಾರಿಸ್ (Kamala Harris) 99 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಪಶ್ಚಿಮ ವರ್ಜೀನಿಯಾದಲ್ಲಿ ಟ್ರಂಪ್ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಮಿಸ್ಸಿಸ್ಸಿಪ್ಪಿ, ಅಲಬಾಮಾ, ಒಕ್ಲಹೋಮ, ಟೆನ್ನೆಸ್ಸೀ, ದಕ್ಷಿಣ ಕೆರೊಲಿನಾ ಮತ್ತು ಅರ್ಕಾನ್ಸಾಸ್‌ನಲ್ಲಿ ಟ್ರಂಪ್ ಜಯಗಳಿಸಿದ್ದಾರೆ. ಇದನ್ನೂ ಓದಿ: Kamala, you’re fired – ಮಧ್ಯರಾತ್ರಿ 2:15 ಕ್ಕೆ ಕೊನೆಯ ಪ್ರಚಾರದಲ್ಲಿ ಗುಡುಗಿದ ಟ್ರಂಪ್
ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆ (US Presidential Election) ಅಂತಿಮ ಘಟ್ಟ ತಲುಪಿದೆ. ಇಡೀ ಜಗತ್ತೇ ಕುತೂಹಲದಿಂದ ಎದುರು ನೋಡ್ತಿರುವ ಮತದಾನ ಇಂದು ನಡೆಯಲಿದೆ. ಭಾರತೀಯ ಕಾಲಮಾನ ಇಂದು ರಾತ್ರಿಯಿಂದ ನಾಳೆಯವರೆಗೆ ಮತದಾನ ನಡೆಯಲಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಾನಾ ನೀನಾ ಎನ್ನುವಂತೆ ಫೈಟ್ ಮಾಡ್ತಿದ್ದಾರೆ.
ಅಮೆರಿಕಾದ 50 ರಾಜ್ಯಗಳ ಪೈಕಿ ಬಹುತೇಕ ರಾಜ್ಯಗಳು ಯಾವ ಪಕ್ಷವನ್ನು ಬೆಂಬಲಿಸುತ್ತವೆ ಎಂಬ ಬಗ್ಗೆ ಸ್ಪಷ್ಟತೆ ಇದೆ. ಆದರೆ, ಪೆನ್ಸಿಲ್ವೇನಿಯಾ, ಮಿಚಿಗನ್, ನಾರ್ತ್ ಕರೋಲಿನಾ, ಜಾರ್ಜಿಯಾ, ನೆವಡಾ, ಅರಿಜೋನ ಸೇರಿ ಏಳು ರಾಜ್ಯಗಳ ಮೂಡ್ ಮಾತ್ರ ಯಾವ ಪಕ್ಷದತ್ತ ಇರುತ್ತೆ ಎನ್ನುವುದು ಗೊತ್ತಾಗಲ್ಲ. ಈ ರಾಜ್ಯಗಳಲ್ಲಿ ಪ್ರಚಾರಕ್ಕೆ ಅಭ್ಯರ್ಥಿಗಳು ಹೆಚ್ಚು ಆದ್ಯತೆ ನೀಡ್ತಾರೆ. ಈ ರಾಜ್ಯಗಳ ಎಲೆಕ್ಟೋರಲ್ ಮತಗಳ ಸಂಖ್ಯೆ 93. ಈ ಪೈಕಿ ಹೆಚ್ಚು ಮತ ಗಳಿಸುವ ಅಭ್ಯರ್ಥಿಗಳು ಅಧ್ಯಕ್ಷ ಪೀಠವನ್ನು ಏರುತ್ತಾರೆ. ಅಂದ ಹಾಗೇ, ಈಗಾಗಲೇ 6.8 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
538 ಎಲೆಕ್ಚರ್ಸ್ ಅಮೆರಿಕಾದ ಅಧ್ಯಕ್ಷರ ಭವಿಷ್ಯ ನಿರ್ಧರಿಸಲಿವೆ. ಅಮೆರಿಕ ಅಧ್ಯಕ್ಷರಾಗಲು ಕನಿಷ್ಠ 270 ಮತಗಳ ಅಗತ್ಯವಿದೆ. ಜನರು ಇಲ್ಲಿ ನೇರವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುವುದಿಲ್ಲ. ಪ್ರತಿಯೊಂದು ರಾಜ್ಯವು ಜನ ಸಂಖ್ಯೆಗೆ ಅನುಗುಣವಾಗಿ ನಿರ್ದಿಷ್ಟ ಸಂಖ್ಯೆಯ ಜನಪ್ರತನಿಧಿಗಳನ್ನು ಒಳಗೊಂಡಿದೆ. ಕ್ಯಾಲಿಫೋರ್ನಿಯಾ 54 ಸ್ಥಾನಗಳೊಂದಿಗೆ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಹೊಂದಿದೆ. ನಂತರ ಟೆಕ್ಸಾಸ್ (40) ಮತ್ತು ಫ್ಲೋರಿಡಾ (30). ಮತ್ತೊಂದೆಡೆ, ಉತ್ತರ ಡಕೋಟಾ, ದಕ್ಷಿಣ ಡಕೋಟಾ, ಡೆಲವೇರ್ ಮತ್ತು ವರ್ಮೊಂಟ್‌ನಂತಹ ರಾಜ್ಯಗಳು ಕನಿಷ್ಠ 3 ಸ್ಥಾನಗಳನ್ನು ಹೊಂದಿವೆ. ಇದನ್ನೂ ಓದಿ: US Election 2024 | ಮತ ಎಣಿಕೆ ಯಾವಾಗ? ಸಂಖ್ಯೆ 270ಕ್ಕೆ ಯಾಕೆ ಮಹತ್ವ?
ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಲಿ ಡೆಮಾಕ್ರಟಿಕ್ ಪಕ್ಷದಿಂದ ಅಭ್ಯರ್ಥಿಯಾಗಿದ್ದು, ಅವರು ಯುಎಸ್‌ನ ಮೊದಲ ಮಹಿಳೆ ಎಂಬ ಇತಿಹಾಸವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದಾರೆ. ಅವರು ಆಯ್ಕೆಯಾದರೆ, ಯುನೈಟೆಡ್ ಸ್ಟೇಟ್ಸ್‌ನ ಮೊದಲ ಭಾರತೀಯ ಮೂಲದ ಅಧ್ಯಕ್ಷರೂ ಆಗುತ್ತಾರೆ. ಮತ್ತೊಂದೆಡೆ, ರಿಪಬ್ಲಿಕನ್ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020 ರಲ್ಲಿ ಕಹಿ ನಿರ್ಗಮನದ ನಂತರ ಶ್ವೇತಭವನಕ್ಕೆ ಐತಿಹಾಸಿಕ ಪುನರಾಗಮನವನ್ನು ಬಯಸಿದ್ದಾರೆ.
ಮತದಾನದ ಸಮಯದಲ್ಲಿ ಪ್ರತಿ ರಾಜ್ಯಕ್ಕೂ ಸಮಯದಲ್ಲಿ ಬದಲಾವಣೆ ಇರುತ್ತದೆ. ಅಮೆರಿಕ ಕಾಲಮಾನದ ಪ್ರಕಾರ, ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆ ವರೆಗೆ ಮತದಾನ ನಡೆಯುತ್ತದೆ.
ಮೊದಲ ಮತದಾನವು ಜಾರ್ಜಿಯಾ ಸೇರಿದಂತೆ ಆರು ರಾಜ್ಯಗಳಲ್ಲಿ ಸುಮಾರು 7 pm ET (5:30 am ಭಾರತೀಯ ಸಮಯ) ಕ್ಕೆ ಮುಕ್ತಾಯಗೊಳ್ಳಲಿದೆ. ಅಂತಿಮ ಮತದಾನವು ನೀಲಿ ರಾಜ್ಯವಾದ ಹವಾಯಿಯಲ್ಲಿ ಮತ್ತು ಕೆಂಪು ರಾಜ್ಯವಾದ ಅಲಾಸ್ಕಾದಲ್ಲಿ 12 am ET (10:30 am ಭಾರತೀಯ ಕಾಲಮಾನ) ಕ್ಕೆ ಮುಕ್ತಾಯಗೊಳ್ಳುತ್ತದೆ. 1 pm ET (11:30 am ಭಾರತೀಯ ಕಾಲಮಾನ) ಕ್ಕೆ ಮತದಾನ ಮುಕ್ತಾಯಗೊಳ್ಳಲಿದ್ದು, ನಂತರ ಮತ ಎಣಿಕೆ ಪ್ರಾರಂಭವಾಗಲಿದೆ. ಇದನ್ನೂ ಓದಿ: ಅಮೆರಿಕಾ ಚುನಾವಣೆಯಲ್ಲೂ ಹಿಂದೂ ಅಸ್ತ್ರ ಪ್ರಯೋಗ – ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿದ ಟ್ರಂಪ್
ಸ್ವಿಂಗ್ ರಾಜ್ಯಗಳೇ ನಿರ್ಣಾಯಕ
ಅಮೆರಿಕ ಅಧ್ಯಕ್ಷ ಭವಿಷ್ಯವನ್ನು ಸ್ವಿಂಗ್ ರಾಜ್ಯಗಳು ನಿರ್ಧರಿಸಲಿವೆ. ಒಟ್ಟು 50 ರಾಜ್ಯಗಳಿದ್ದರೂ ಈ ಏಳು ರಾಜ್ಯಗಳ ಮೇಲೆಯೇ ಸ್ಪರ್ಧಿಗಳ ಕಣ್ಣಿರುತ್ತದೆ. ಏಳು ರಾಜ್ಯಗಳು ಹೊರತುಪಡಿಸಿ ಬಾಕಿ ರಾಜ್ಯಗಳಲ್ಲಿ ಎರಡು ಪಕ್ಷಗಳಿಗೆ ಸಾಂಪ್ರದಾಯಿಕ ಮತಗಳು ಇವೆ. ಉತ್ತರ ಕೆರೊಲಿನಾ, ಅರಿಜೋನಾ, ಜಾರ್ಜಿಯಾ, ನೆವಾಡಾ, ಮಿಷಿಗನ್, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ ನಿರ್ಣಾಯಕ ರಾಜ್ಯಗಳಾಗಿವೆ. ಪ್ರತಿ ಬಾರಿಯೂ ಇಲ್ಲಿ ಜನರು ಪಕ್ಷದ ಆಯ್ಕೆ ಬದಲಿಸುತ್ತಾರೆ. ಈ ರಾಜ್ಯಗಳನ್ನು ಯಾರು ಗೆಲ್ಲುತ್ತಾರೋ ಅವರು ಅಧ್ಯಕ್ಷ ಸ್ಥಾನಕ್ಕೇರಲಿದ್ದಾರೆ.
ವಾಷಿಂಗ್ಟನ್: ಮುಂದಿನ ವಾರ ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡುವುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಿಳಿಸಿದ್ದಾರೆ.
ಮೋದಿ ಅವರು ಮುಂದಿನ ವಾರ ನನ್ನನ್ನು ಭೇಟಿಯಾಗಲು ಬರುತ್ತಾರೆ ಎಂದು ಹೇಳಿದ್ದಾರೆ. ಆದರೆ ಅವರ ಭೇಟಿಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಪ್ರಧಾನಿ ಮೋದಿ ಅವರು ಸೆ.21 ರಿಂದ 23 ರವರೆಗೆ ಯುನೈಟೆಡ್ ಸ್ಟೇಟ್ಸ್‌ಗೆ ಭೇಟಿ ನೀಡಲಿದ್ದು, ಈ ಸಮಯದಲ್ಲಿ ಅವರು ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆ. ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಭವಿಷ್ಯದ ಶೃಂಗಸಭೆ’ಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನ ಧ್ವಂಸ
ಇದು ನಾಲ್ಕನೇ ಕ್ವಾಡ್ ಲೀಡರ್ಸ್ ಶೃಂಗಸಭೆಯಾಗಿದೆ. ಇದು ವಿಲ್ಮಿಂಗ್ಟನ್, ಡೆಲವೇರ್ನಲ್ಲಿ US ಅಧ್ಯಕ್ಷ ಜೋ ಬೈಡೆನ್ ಭಾಗವಹಿಸಲಿದ್ದಾರೆ. ಅವರು ಭಾನುವಾರ ನ್ಯೂಯಾರ್ಕ್‌ನಲ್ಲಿ ಭಾರತೀಯ ಸಮುದಾಯದ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಎಐ, ಕ್ವಾಂಟಮ್ ಕಂಪ್ಯೂಟಿಂಗ್, ಸೆಮಿಕಂಡಕ್ಟರ್‌ಗಳು ಮತ್ತು ಜೈವಿಕ ತಂತ್ರಜ್ಞಾನದ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವೆ ಹೆಚ್ಚಿನ ಸಹಯೋಗವನ್ನು ಬೆಳೆಸಲು ಪ್ರಧಾನ ಮಂತ್ರಿ ಯುಎಸ್ ಮೂಲದ ಪ್ರಮುಖ ಕಂಪನಿಗಳ ಸಿಇಒಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪಿಎಂ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಕೊನೆಯ ಬಾರಿಗೆ 2020 ರ ಫೆಬ್ರವರಿಯಲ್ಲಿ ಭೇಟಿಯಾಗಿದ್ದರು. ಆಗ ಯುಎಸ್ ಅಧ್ಯಕ್ಷರಾಗಿದ್ದ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದರು.
ವಾಷಿಂಗ್ಟನ್: ಅಮೆರಿಕದಲ್ಲಿ ಈ ಬಾರಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ (US presidential election) ಹಿನ್ನೆಲೆ ಹಾಲಿ ಅಧ್ಯಕ್ಷ ಜೋ ಬೈಡನ್ (Joe Biden) ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮುಖಾಮುಖಿಯಾಗಿ ಚರ್ಚೆ ನಡೆಸಿದ್ದಾರೆ.
ಈ ವೇಳೆ ಹಣದುಬ್ಬರ, ವಲಸಿಗರ ನಿಯಂತ್ರಣ, ಉಕ್ರೇನ್-ಇಸ್ರೇಲ್ ಯುದ್ಧಗಳ ಕುರಿತಂತೆ ಪರಸ್ಪರ ಪರ ವಿರೋಧ ಚರ್ಚೆ ನಡೆದಿದೆ. ಚರ್ಚೆ ಆರಂಭದಲ್ಲೇ ಟ್ರಂಪ್ ವಿರುದ್ಧ ಬೈಡನ್ ಅಕ್ರಮ ಲೈಂಗಿಕ ಆರೋಪಗಳ ಬಗ್ಗೆ ಮಾತಾಡಿದ್ದಾರೆ. ಬೈಡನ್ ಆಡಳಿತದ ಲೋಪಗಳನ್ನ ಒಂದೊಂದಾಗಿ ಎತ್ತಿ ತೋರಿಸುವ ಕೆಲಸವನ್ನ ಟ್ರಂಪ್ ಮಾಡಿದ್ದಾರೆ.
ಮಹಿಳೆಯೊಬ್ಬರಿಗೆ ಟ್ರಂಪ್ ಸಾರ್ವಜನಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಿಲಿಯನ್ ಡಾಲರ್ ಮೊತ್ತದ ದಂಡ ಪಾವತಿ ಮಾಡುವಂತೆ ಅಮೆರಿಕ ನ್ಯಾಯಾಲಯ ಆದೇಶಿಸಿತ್ತು. ಈ ಪ್ರಕರಣವನ್ನು ಬೈಡನ್ ಪ್ರಸ್ತಾಪ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಹೆಂಡತಿ ಗರ್ಭಿಣಿಯಾಗಿದ್ದಾಗ, ನೀಲಿಚಿತ್ರ ತಾರೆಯೊಂದಿಗೆ ಇಡೀ ರಾತ್ರಿ ಕಳೆದಿದ್ದೆ ಎಂದು ಟ್ರಂಪ್ ವಿರುದ್ಧ ವೈಯಕ್ತಿಕ ಮಟ್ಟದ ಟೀಕೆ ಮಾಡಿದ್ದಾರೆ. ಈ ವೇಳೆ `ನೀನೊಬ್ಬ ಚಾರಿತ್ರ್ಯವಿಲ್ಲದ ಬೀದಿ ಬೆಕ್ಕು’ ಎಂದು ಬೈಡನ್ ಆಕ್ರೋಶ ಹೊರಹಾಕಿದ್ದಾರೆ.
ಜೋ ಬೈಡನ್ ಉಕ್ರೇನ್ ದೇಶಕ್ಕೆ ನೂರಾರು ದಶಲಕ್ಷ ಡಾಲರ್ ನೀಡಿದ್ದಾರೆ ಎಂದು ಟ್ರಂಪ್ ಟೀಕಿಸಿದ್ದಾರೆ. ವೈಯಕ್ತಿಕ ಟೀಕೆ ಟಿಪ್ಪಣಿಗಳ ಬಳಿಕ ಉಭಯ ನಾಯಕರು ಅಮೆರಿಕದ ಆರ್ಥಿಕತೆ ಹಾಗೂ ಗರ್ಭಪಾತ ಕುರಿತಾದ ಕಾನೂನುಗಳು ಹಾಗೂ ಅಮೆರಿಕದ ತೆರಿಗೆ ಪದ್ಧತಿ ಕುರಿತಾಗಿ ಗಂಭೀರ ವಿಚಾರಗಳ ಕುರಿತಾಗಿಯೂ ಮಾತುಕತೆ ನಡೆಸಿದ್ದಾರೆ.
ವಾಷಿಂಗ್ಟನ್: ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ (US Presidential Election) ನಾನು ಆಯ್ಕೆಯಾಗದಿದ್ದರೆ ದೇಶದಲ್ಲಿ ರಕ್ತಪಾತವಾಗುತ್ತದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಎಚ್ಚರಿಕೆ ನೀಡಿದ್ದಾರೆ.
ಓಹಿಯೋದ ಡೇಟನ್ ಬಳಿ ರ‍್ಯಾಲಿಯಲ್ಲಿ ಮಾತನಾಡಿದ ಟ್ರಂಪ್, ಈ ಬಾರಿ ನಾನು ಚುನಾಯಿತನಾಗದಿದ್ದರೆ ರಕ್ತಪಾತವಾಗುತ್ತದೆ ಎಂದು ಮಾತನಾಡಿದ್ದಾರೆ. ತಾನು ಮರು ಆಯ್ಕೆಯಾದರೆ ಚೀನಾವು ಅಮೆರಿಕಕ್ಕೆ ಯಾವುದೇ ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಬೆಂಕಿ ಅವಘಡ – ಕೆನಡಾದಲ್ಲಿ ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಸಾವು
ಚುನಾವಣೆ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸುತ್ತಿದ್ದಾರೆ. ಬೈಡೆನ್ ಆಡಳಿತದ ಬಗ್ಗೆ ಟೀಕಾಪ್ರಹಾರ ನಡೆಸುತ್ತಿದ್ದಾರೆ.
ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮವಾಗಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಅಧ್ಯಕ್ಷೀಯ ನಾಮನಿರ್ದೇಶನಗಳನ್ನು ಪಡೆದುಕೊಂಡಿದ್ದಾರೆ. ಪರಸ್ಪರು ಅಧ್ಯಕ್ಷ ಸ್ಥಾನಕ್ಕಾಗಿ ಮತ್ತೆ ಫೈಟ್‌ಗೆ ಇಳಿದಿದ್ದಾರೆ. ಇದನ್ನೂ ಓದಿ: ಆಹಾರಕ್ಕಾಗಿ ಕಾಯುತ್ತಿದ್ದ ಸಂತ್ರಸ್ತರಿದ್ದ ಶೆಲ್ ಮೇಲೆ ದಾಳಿ – 20 ಮಂದಿ ಸಾವು
ಟ್ರಂಪ್ ಬುಧವಾರ ಬೆಳಗ್ಗೆ ಅಧ್ಯಕ್ಷರ ರಿಪಬ್ಲಿಕನ್ ನಾಮನಿರ್ದೇಶನ ಗೆದ್ದರು. ಬೈಡೆನ್ ಡೆಮಾಕ್ರಟಿಕ್ ಅನುಮೋದನೆಯನ್ನು ಪಡೆದುಕೊಂಡಿದ್ದಾರೆ.
ನವದೆಹಲಿ: ಭಾರತೀಯ-ಅಮೆರಿಕನ್ ವಾಣಿಜ್ಯೋದ್ಯಮಿ ವಿವೇಕ್ ರಾಮಸ್ವಾಮಿ (Vivek Ramaswamy) ಅವರು ಯುಎಸ್ ಅಧ್ಯಕ್ಷೀಯ (US Presidential Election) ರೇಸ್‌ನಿಂದ ಹೊರಗುಳಿದಿದ್ದಾರೆ. ಇದೇ ವರ್ಷ ಯುಎಸ್ ಅಧ್ಯಕ್ಷೀಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ತಮ್ಮ ನಿಲುವುಗಳ ಮೂಲಕ ರಿಪಬ್ಲಿಕನ್ ಮತದಾರರು ಮತ್ತು ಬೆಂಬಲಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅವರ ಪ್ರಚಾರ ಕಾರ್ಯತಂತ್ರವು ಮಾಜಿ ಅಧ್ಯಕ್ಷ ಟ್ರಂಪ್ ಅವರ ನೀತಿಯನ್ನು ನಿಕಟವಾಗಿ ಪ್ರತಿಬಿಂಬಿಸುತ್ತದೆ. ಹಿಂದಿನ ಚುನಾವಣೆಗಳಲ್ಲಿ ಟ್ರಂಪ್ ಅವರನ್ನು ಯಶಸ್ಸಿನತ್ತ ಮುನ್ನಡೆಸಿದ್ದ ಸಂಪ್ರದಾಯವಾದಿ ವಲಯದ ಗಮನ ಸೆಳೆಯಲು ರಾಮಸ್ವಾಮಿ ಪ್ರಯತ್ನಿಸಿದ್ದರು.