Tag: US President

  • ಮಹಿಳಾ ಕ್ರೀಡೆಗಳಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ಆದೇಶಕ್ಕೆ ಟ್ರಂಪ್‌ ಸಹಿ

    ಮಹಿಳಾ ಕ್ರೀಡೆಗಳಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ಆದೇಶಕ್ಕೆ ಟ್ರಂಪ್‌ ಸಹಿ

    ವಾಷಿಂಗ್ಟನ್‌: ಮಹಿಳಾ ಕ್ರೀಡೆಗಳಲ್ಲಿ ತೃತೀಯಲಿಂಗಿ ಕ್ರೀಡಾಪಟುಗಳನ್ನು ನಿಷೇಧಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.

    ಮಹಿಳಾ ಕ್ರೀಡೆಗಳಿಂದ ಪುರುಷರನ್ನು ದೂರವಿಡುವುದು ಎಂಬ ಶೀರ್ಷಿಕೆಯ ಮೇಲೆ ಆದೇಶ ಹೊರಡಿಸಲಾಗಿದೆ. ಹುಟ್ಟಿನಿಂದ ಬಂದ ಲಿಂಗತ್ವವನ್ನು ಅಮೆರಿಕ ಸರ್ಕಾರ ಪರಿಗಣಿಸಿದೆ.

    ಮಹಿಳಾ ಕ್ರೀಡೆಗಳಲ್ಲಿ ತೃತೀಯಲಿಂಗಿಗಳು ಭಾಗವಹಿಸುವುದಕ್ಕೆ ಮಹಿಳಾ ಕ್ರೀಡಾಪಟುಗಳು ಆಕ್ಷೇಪ ವ್ಯಕ್ತಪಡಿಸಿದ್ದರು.

    ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಇದು ಆಡಳಿತದ ಶೀರ್ಷಿಕೆ IX ರ ವ್ಯಾಖ್ಯಾನಕ್ಕೆ ಅನುಗುಣವಾಗಿದೆ. ಹುಡುಗಿಯರು ಮತ್ತು ಮಹಿಳೆಯರ ಕ್ರೀಡೆಗಳಲ್ಲಿ ತೃತೀಯಲಿಂಗಿ ಕ್ರೀಡಾಪಟುಗಳು ಸ್ಪರ್ಧಿಸುವುದನ್ನು ನಿಷೇಧಿಸುತ್ತದೆ.

  • ಶತಾಯುಷಿ, ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್‌ ನಿಧನ

    ಶತಾಯುಷಿ, ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್‌ ನಿಧನ

    ವಾಷಿಂಗ್ಟನ್‌: ಡೆಮಾಕ್ರಟಿಕ್ ನಾಯಕ, ಅಮೆರಿಕ ಮಾಜಿ ಅಧ್ಯಕ್ಷ (Former US President) ಜಿಮ್ಮಿ ಕಾರ್ಟರ್‌ (100) ಜಾರ್ಜಿಯಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.

    ಮಾನವೀಯ ಕೆಲಸಕ್ಕಾಗಿ 2002 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದಿದ್ದ ಕಾರ್ಟರ್(Jimmy Carter) ಇಸ್ರೇಲ್ ಮತ್ತು ಈಜಿಪ್ಟ್ ಮಧ್ಯಸ್ಥಿತಿಕೆ ನಡೆಸಿ ಶಾಂತಿ ಮಾತುಕತೆ ನಡೆಸಿದ ಕೀರ್ತಿಗೆ ಪಾತ್ರರಾಗಿದ್ದರು.

    1977 ರಿಂದ 1981 ರವರೆಗೆ 39ನೇ ಅಮೆರಿಕದ ಅಧ್ಯಕ್ಷರಾಗಿ ಜಿಮ್ಮಿ ಕಾರ್ಟರ್ ಸೇವೆ ಸಲ್ಲಿಸಿದ್ದರು. 1980 ರ ಚುನಾವಣೆಯಲ್ಲಿ ನಟ, ರಾಜಕಾರಣಿ ರೊನಾಲ್ಡ್ ರೇಗನ್ ಅವರ ವಿರುದ್ಧ ಸೋತಿದ್ದರು.

    ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಮೂರನೇ ಅಧ್ಯಕ್ಷ ಕಾರ್ಟರ್‌.  ಇವರ ಗೌರವಾರ್ಥವಾಗಿ ಹರಿಯಾಣದ ಗ್ರಾಮಕ್ಕೆ ಕಾರ್ಟರ್‌ಪುರಿ ಎಂದು ಹೆಸರಿಡಲಾಗಿತ್ತು. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಸಜ್ಜಾದ ಕಾಫಿನಾಡು – ಹೋಂ ಸ್ಟೇ, ರೆಸಾರ್ಟ್ 90% ಭರ್ತಿ

    ಜಾಕ್, ಚಿಪ್, ಜೆಫ್, ಆ್ಯಮಿ ಎಂಬ ನಾಲ್ವರು ಮಕ್ಕಳನ್ನು ಅಗಲಿರುವ ಜಿಮ್ಮಿ ಅವರಿಗೆ 11 ಮಂದಿ ಮೊಮ್ಮಕ್ಕಳು, 14 ಮಂದಿ ಮರಿಮೊಮ್ಮಕ್ಕಳಿದ್ದಾರೆ.

    ನನ್ನ ತಂದೆ ನನಗೆ ಮಾತ್ರವಲ್ಲ, ಶಾಂತಿ, ಮಾನವ ಹಕ್ಕುಗಳು ಮತ್ತು ನಿಸ್ವಾರ್ಥ ಪ್ರೀತಿಯನ್ನು ನಂಬುವ ಪ್ರತಿಯೊಬ್ಬರಿಗೂ ಹೀರೋ ಆಗಿದ್ದರು ಎಂದು ಚಿಪ್ ಕಾರ್ಟರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಇಂದು ಅಮೆರಿಕ ಮತ್ತು ಜಗತ್ತು ಅಸಾಧಾರಣ ನಾಯಕ, ರಾಜಕಾರಣಿ ಮತ್ತು ಮಾನವತಾವಾದಿಯನ್ನು ಕಳೆದುಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

     

  • ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದಿದ್ಯಾಕೆ? – ಕಾರಣ ಬಿಚ್ಚಿಟ್ಟ ಜೋ ಬೈಡೆನ್‌

    ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದಿದ್ಯಾಕೆ? – ಕಾರಣ ಬಿಚ್ಚಿಟ್ಟ ಜೋ ಬೈಡೆನ್‌

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ (US President Election) ಹಿಂದೆ ಸರಿದ ಬಗ್ಗೆ ಅಧ್ಯಕ್ಷ ಜೋ ಬೈಡೆನ್‌ (Joe Biden) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೊಸ ಪೀಳಿಗೆಯನ್ನು ಬೆಳಕಿಗೆ ತರುವುದು ಮುಖ್ಯ ಎಂದು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

    ಪಕ್ಷ ಮತ್ತು ದೇಶವನ್ನು ಒಗ್ಗೂಡಿಸಲು 2024ರ ಚುನಾವಣೆಯಿಂದ ಹೊರಗುಳಿದಿರುವುದಾಗಿ ಬೈಡೆನ್‌ ಹೇಳಿದ್ದಾರೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಅದರ ರಕ್ಷಣೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಯಾವುದೇ ನಿರ್ಧಾರವು ಮುಖ್ಯವಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಒಲಿಂಪಿಕ್ಸ್‌ ಕ್ರೀಡಾಕೂಟ ವೀಕ್ಷಣೆಗೆ ಬಂದಿದ್ದ ಆಸ್ಟ್ರೇಲಿಯಾ ಮಹಿಳೆ ಮೇಲೆ ಗ್ಯಾಂಗ್‌ ರೇಪ್‌!

    ಹೊಸ ಪೀಳಿಗೆಯನ್ನು ಬೆಳಕಿಗೆ ತರಬೇಕಿದೆ ಎಂದು ನಾನು ನಿರ್ಧರಿಸಿದ್ದೇನೆ. ಅದು ನಮ್ಮ ರಾಷ್ಟ್ರವನ್ನು ಒಂದುಗೂಡಿಸಲು ಉತ್ತಮ ಮಾರ್ಗ ಎಂದು ಬೈಡೆನ್‌ ತಿಳಿಸಿದ್ದಾರೆ.

    ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದ್ದಂತೆ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಹೆಚ್ಚು ಸಕ್ರಿಯರಾಗಿದ್ದಾರೆ. ಆದರೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ವಯಸ್ಸು ಮತ್ತು ಮಾನಸಿಕ ಸಾಮರ್ಥ್ಯದ ಬಗ್ಗೆ ಪಕ್ಷದೊಳಗಡೆಯೇ ಅಸಮಾಧಾನ ಎದ್ದಿತ್ತು. ಈ ಹಿನ್ನೆಲೆಯಲ್ಲಿ ಅವರು ಅಧ್ಯಕ್ಷೀಯ ಚುನಾವಣಾ ರೇಸ್‌ನಿಂದ ಹೊರಗುಳಿದಿದ್ದಾರೆ. ಇದನ್ನೂ ಓದಿ: Nepal Plane Crash; ಟೇಕಾಫ್‌ ವೇಳೆ ವಿಮಾನ ಪತನ – 18 ಮಂದಿ ದಾರುಣ ಸಾವು

    ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಭಾರತ ಸಂಜಾತೆ ಕಮಲಾ ಹ್ಯಾರೀಸ್‌ ಅವರ ಹೆಸರನ್ನು ಘೋಷಿಸಲಾಗಿದೆ. ಬೈಡೆನ್‌ ನಿರ್ಧಾರಕ್ಕೆ ಪಕ್ಷದ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ದೇವರು ನನ್ನನ್ನು ಕಾಪಾಡಿದ: ಹಂತಕನ ಗುಂಡೇಟಿನಿಂದ ಬಚಾವಾದ ಟ್ರಂಪ್‌ ಮಾತು

    ದೇವರು ನನ್ನನ್ನು ಕಾಪಾಡಿದ: ಹಂತಕನ ಗುಂಡೇಟಿನಿಂದ ಬಚಾವಾದ ಟ್ರಂಪ್‌ ಮಾತು

    ವಾಷಿಂಗ್ಟನ್‌: ದೇವರು ನನ್ನನ್ನು ಕಾಪಾಡಿದ ಎಂದು ತಮ್ಮ ಹತ್ಯೆ ಯತ್ನದ ಕುರಿತು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಕ್ರಿಯಿಸಿದ್ದಾರೆ.

    ಮಿಲ್ವಾಕೀಯಲ್ಲಿ ನಡೆದ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪಾಲ್ಗೊಂಡಿದ್ದರು. ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ದುಷ್ಕರ್ಮಿಯ ಗುಂಡೇಟಿನಿಂದ ಪೆಟ್ಟಾಗಿದ್ದ ಬಲ ಕಿವಿಯ ಮೇಲೆ ಬ್ಯಾಂಡೇಜ್ ಧರಿಸಿದ ಟ್ರಂಪ್ ಆಗಮಿಸಿದ್ದರು. ಗಾಡ್ ಬ್ಲೆಸ್ ಅಮೆರಿಕಾ ಎಂಬ ಗೀತೆಯನ್ನು ಹಾಡುತ್ತಿದ್ದಂತೆ ‘ಯುಎಸ್‌ಎ, ಯುಎಸ್‌ಎ’ ಎಂಬ ಘೋಷಣೆಯೊಂದಿಗೆ ಟ್ರಂಪ್‌ ವೇದಿಕೆ ಪ್ರವೇಶಿಸಿದರು.

    ಯುನೈಟೆಡ್‌ ಸ್ಟೇಟ್ಸ್‌ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ. 4 ತಿಂಗಳಲ್ಲಿ ನಾವು ನಂಬಲಾಗದ ವಿಜಯವನ್ನು ಸಾಧಿಸುತ್ತೇವೆ. ಎಲ್ಲಾ ಧರ್ಮಗಳು, ಜನರು ಶಾಂತಿ ಮತ್ತು ಸಮೃದ್ಧಿಯ ಹೊಸ ಯುಗವನ್ನು ಪ್ರಾರಂಭಿಸುತ್ತೇವೆ ಎಂದು ಟ್ರಂಪ್‌ ತಿಳಿಸಿದ್ದಾರೆ.

    ರ‍್ಯಾಲಿಯಲ್ಲಿ ಹತ್ಯೆಯ ಪ್ರಯತ್ನದ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತು ಪ್ರೀತಿ ತೋರಿದ ಅಮೆರಿಕದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ದೇವರು ಇದ್ದುದರಿಂದ ನಾನು ಸುರಕ್ಷಿತವಾಗಿರುತ್ತೇನೆ. ಗುಂಡುಗಳು ನಮ್ಮ ಮೇಲೆ ಹಾರುತ್ತಿದ್ದವು. ಆದರೆ ಸಾರ್ವಜನಿಕರು ನನ್ನನ್ನು ಪ್ರೀತಿಸುತ್ತಾರೆ. ನಾವು ಎಂದಿಗೂ ಹಿಂದೆ ಸರಿಯುವುದಿಲ್ಲ. ನಾನು ಈ ರಾಷ್ಟ್ರದ ಅಭಿವೃದ್ಧಿಗೆ ಪ್ರತಿಜ್ಞೆ ಮಾಡುತ್ತೇನೆ ಎಂದು ಹೇಳಿದ್ದಾರೆ.

  • ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ಕೋವಿಡ್‌ ದೃಢ

    ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ಕೋವಿಡ್‌ ದೃಢ

    ವಾಷಿಂಗ್ಟನ್:‌ ಯುಎಸ್ ಅಧ್ಯಕ್ಷ (US President) ಜೋ ಬೈಡೆನ್ (Joe Biden) ಅವರಿಗೆ ಕೋವಿಡ್‌-19 ಪಾಸಿಟಿವ್‌ ಇರುವುದು ದೃಢಪಟ್ಟಿದೆ. ರೋಗನಿರ್ಣಯದ ನಂತರ ಲಾಸ್‌ ವೇಗಾಸ್‌ಗೆ ಪ್ರಚಾರ ಪ್ರವಾಸವನ್ನು ಕಡಿತಗೊಳಿಸಿದ್ದಾರೆ.

    ಶೀತ, ಕೆಮ್ಮು, ಅಸ್ವಸ್ಥತೆಯಿಂದ ಬೈಡೆನ್‌ ಬಳಲುತ್ತಿದ್ದಾರೆ. ಕೋವಿಡ್ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಬೈಡೆನ್‌, ನಾನು ಚೆನ್ನಾಗಿದ್ದೇನೆ ಎಂದು ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಎನ್‌ಕೌಂಟರ್‌ಗೆ 12 ನಕ್ಸಲರು ಬಲಿ

    ರೋಗನಿರ್ಣಯದ ಕಾರಣ ಬೈಡೆನ್ ಭಾಷಣ ರದ್ದುಗೊಳಿಸಿದ ನಂತರ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್, ಯುಎಸ್ ಅಧ್ಯಕ್ಷರಿಗೆ ಕೋವಿಡ್‌ ಇರುವುದನ್ನು ಘೋಷಿಸಿದ್ದಾರೆ.

    ಅಮೆರಿಕ ಅಧ್ಯಕ್ಷೀಯ ಚುನಾವಣೆ ದಿನ ಸಮೀಪಿಸುತ್ತಿದೆ. ಪ್ರಚಾರ ಸಮಾವೇಶವೊಂದರಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೊಲೆಗೆ ಯತ್ನ ನಡೆದಿತ್ತು. ದಾಳಿಯನ್ನು ಬೈಡೆನ್‌ ಖಂಡಿಸಿದ್ದರು. ಚುನಾವಣೆ ಹೊತ್ತಿನಲ್ಲಿ ಅಮೆರಿಕ ಅಧ್ಯಕ್ಷರಿಗೆ ಕೋವಿಡ್‌ ದೃಢಪಟ್ಟಿದೆ. ಇದನ್ನೂ ಓದಿ: ಒಮಾನ್‌ ಕರಾವಳಿಯಲ್ಲಿ ಮುಳುಗಿದ ತೈಲ ಟ್ಯಾಂಕರ್‌ – 13 ಭಾರತೀಯ ಸಿಬ್ಬಂದಿ ನಾಪತ್ತೆ

  • G-20 Summitː ಶಿಷ್ಟಾಚಾರ ಉಲ್ಲಂಘನೆ – ಜೋ ಬೈಡನ್ ಬೆಂಗಾವಲು ವಾಹನ ಚಾಲಕ ವಶಕ್ಕೆ

    G-20 Summitː ಶಿಷ್ಟಾಚಾರ ಉಲ್ಲಂಘನೆ – ಜೋ ಬೈಡನ್ ಬೆಂಗಾವಲು ವಾಹನ ಚಾಲಕ ವಶಕ್ಕೆ

    ನವದೆಹಲಿ: ಜಿ20 ಶೃಂಗಸಭೆಯ (G20 Summit) ಹಿನ್ನೆಲೆ ಭಾರತಕ್ಕೆ ಆಗಮಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಅವರ ಬೆಂಗಾವಲು ವಾಹನ ಪಡೆಯ ಚಾಲಕನೊಬ್ಬ ಶಿಷ್ಟಾಚಾರ (ಪ್ರೋಟೋಕಾಲ್) ಉಲ್ಲಂಘಿಸಿದ್ದರಿಂದಾಗಿ ದೆಹಲಿಯಲ್ಲಿ ವಶಕ್ಕೆ ಪಡೆಯಲಾಯಿತು.

    G-20 ಶೃಂಗಸಭೆ ಹಿನ್ನೆಲೆಯಲ್ಲಿ UAE ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ತಂಗಿದ್ದ ತಾಜ್ ಹೋಟೆಲ್‌ಗೆ ಅಮೆರಿಕ ಅಧ್ಯಕ್ಷರ ಬೆಂಗಾವಲು ಪಡೆಯ ಕಾರು ಪ್ರವೇಶಿಸಿದ ನಂತರ ಈ ಘಟನೆ ನಡೆದಿದೆ. ವಾಹನ ಚಾಲನೆ ವೇಳೆ ನಿರ್ಲಕ್ಷ್ಯ ತೋರಿದ್ದರಿಂದಾಗಿ ಚಾಲಕನನ್ನ ವಶಕ್ಕೆ ಪಡೆಯಲಾಗಿತ್ತು. ವಿಚಾರಣೆಯ ನಂತರ ಆತನನ್ನ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Aditya-L1: ಮತ್ತೊಂದು ಎತ್ತರದ ಕಕ್ಷೆ ಸೇರಿದ ಆದಿತ್ಯ ನೌಕೆ – ಸೂರ್ಯನಿಗೆ ಇನ್ನಷ್ಟು ಹತ್ತಿರ

    ಬೆಂಗಾವಲು ವಾಹನದಲ್ಲಿ ಹಲವು ಸ್ಟಿಕರ್‌ಗಳಿರುವುದಾಗಿಯೂ ಭದ್ರತಾ ಸಿಬ್ಬಂದಿ ಸಂದೇಶ ರವಾನಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಕಾರು ಚಾಲಕನು ಜೋ ಬೈಡನ್ ತಂಗಿದ್ದ ಐಟಿಸಿ ಮೌರ್ಯ ಹೋಟೆಲ್‌ಗೆ ಬೆಳಗ್ಗೆ 9:30ಕ್ಕೆ ಬರಬೇಕಿತ್ತು. ಆದರೆ ಚಾಲಕ ಲೋಧಿ ಎಸ್ಟೇಟ್ ಪ್ರದೇಶದಿಂದ ಬಂದ ಉದ್ಯಮಿಯನ್ನ ತಾಜ್‌ಗೆ ಬಿಡಬೇಕಾಗಿದ್ದರಿಂದ ತಾಜ್ ಹೋಟೆಲ್‌ಗೆ ಅದೇ ಕಾರಿನಲ್ಲಿ ಬಂದಿದ್ದ. ಆತನಿಗೆ ಪ್ರೋಟೋಕಾಲ್ (ಶಿಷ್ಟಾಚಾರ) (Protocol) ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಆತನನ್ನ ವಿಚಾರಣೆ ನಡೆಸಿದ ನಂತರ ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ: G20 Summit: ವಿಶ್ವ ನಾಯಕರಿಂದ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ

    ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಮತ್ತು ಇತರ ನಾಯಕರು, ಪ್ರತಿನಿಧಿಗಳು ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಟೇಜ್‌ನಲ್ಲೇ ಎಡವಿ ಬಿದ್ದ US ಅಧ್ಯಕ್ಷ ಜೋ ಬೈಡನ್‌ – ವೀಡಿಯೋ ವೈರಲ್‌

    ಸ್ಟೇಜ್‌ನಲ್ಲೇ ಎಡವಿ ಬಿದ್ದ US ಅಧ್ಯಕ್ಷ ಜೋ ಬೈಡನ್‌ – ವೀಡಿಯೋ ವೈರಲ್‌

    ವಾಷಿಂಗ್ಟನ್‌: ಅಮೆರಿಕದ ಕೊಲೊರಾಡೋ ಸ್ಪ್ರಿಂಗ್ಸ್‌ನಲ್ಲಿ ನಡೆದ ಏರ್‌ಫೋರ್ಸ್‌ ಅಕಾಡೆಮಿಯ ಪದವಿ ಪ್ರದಾನ ಸಮಾರಂಭದಲ್ಲಿ (Air Force Academy Graduation) ಭಾಗವಹಿಸಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ (Joe Biden) ವೇದಿಕೆಗೆ ಆಗಮಿಸುತ್ತಿದ್ದಂತೆ ಸ್ಟೇಜ್‌ ಮೇಲೆ ಎಡವಿ ಬಿದ್ದಿದ್ದಾರೆ. ಈ ಕುರಿತ ವೀಡಿಯೋ ತುಣುಕು ಜಾಲತಾಣದಲ್ಲಿ (Social Media) ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

    ಯುಎಸ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ಭಾಷಣ ಮಾಡಿದ ನಂತರ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಕೆಡೆಟ್‌ಗಳೊಂದಿಗೆ ಹಸ್ತಲಾಘವ ಮಾಡಿದರು. ಬಳಿಕ ಮುಂದಿನ ಹೆಜ್ಜೆ ಇಟ್ಟ ತಕ್ಷಣ ಕಾಲು ತಡವರಿಸಿ ಬಿದ್ದಿದ್ದಾರೆ, ಕೂಡಲೇ ಏರ್‌ಫೋರ್ಸ್‌ ಅಧಿಕಾರಿಗಳು ಎದ್ದೇಳಲು ಸಹಕರಿಸಿದ್ದಾರೆ. ಎಡವಿ ಬಿದ್ದ 80 ವರ್ಷದ ಬೈಡನ್‌ ಬಳಿಕ ಡಿಪ್ಲೊಮಾ ಕೆಡೆಟ್‌ಗಳಿಗೆ ಪದವಿ ಪ್ರದಾನಮಾಡಿ, ವೇದಿಕೆಯಿಂದ ಹೊರಗುಳಿದಿದ್ದಾರೆ. ನಂತರ ಅಲ್ಲಿಂದ ಕ್ಷೇಮವಾಗಿ ನಡೆದುಕೊಂಡು ಶ್ವೇತ ಭವನಕ್ಕೆ ತೆರಳಿದರು. ಸದ್ಯ ಅಧ್ಯಕ್ಷರು ಗಾಯಗೊಂಡಿಲ್ಲ, ಫಿಟ್‌ ಆಗಿದ್ದಾರೆ ಎಂಬುದಾಗಿ ಶ್ವೇತಭವನದ ಸಂವಹನ ವಿಭಾಗದ ನಿರ್ದೇಶಕ ಬೆನ್ ಲಾಬೋಲ್ಟ್ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಸಂಸದ ಸ್ಥಾನದಿಂದ ಅನರ್ಹತೆ ಜನ ಸೇವೆಗೆ ಸಿಕ್ಕ ಅವಕಾಶ: ರಾಹುಲ್ ಗಾಂಧಿ

    ಬೈಡನ್‌ ಇತ್ತೀಚೆಗೆ ಜಪಾನ್‌ನಲ್ಲಿ ನಡೆದ G7 ಶೃಂಗಸಭೆಯಲ್ಲೂ ಎಡವಿದ್ದರು, ಹಿರೋಷಿಮಾದ ಇಟ್ಸುಕುಶಿಮಾ ದೇಗುಲದಲ್ಲಿ ಸಣ್ಣ ಮೆಟ್ಟಿಲುಗಳಲ್ಲಿ ಅವಸರದಿಂದ ಹೋಗುತ್ತಿದ್ದಾಗಲೂ ಎಡವಿ ಬಿದ್ದಿದ್ದರು. ಆದ್ರೆ ಸ್ವತಃ ಮೇಲೆದ್ದಿದ್ದರು. ಇದೀಗ 3ನೇ ಬಾರಿ ಬೈಡನ್‌ ಎಡವಿ ಬಿದ್ದ ಈ ದೃಶ್ಯ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೆಲವರು ಟ್ರೋಲಿಗೆಳೆದಿದ್ದಾರೆ, ಇನ್ನೂ ಕೆಲವರು ಅದು ಕೆಟ್ಟ ಸ್ಥಳವಾಗಿತ್ತೆಂದು ಭಾವಿಸುತ್ತೇವೆ. ಯಾವುದಕ್ಕೂ ನೀವು ಹುಷಾರಾಗಿರಿ ಅಂತಾ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಭಾರತ, ಚೀನಾ ಗಡಿ ವಿವಾದ – ಮಾತುಕತೆಗೆ ಮುಂದಾದ ಉಭಯ ರಾಷ್ಟ್ರಗಳು

    ಬೈಡನ್‌ ಅಧ್ಯಕ್ಷರ ಅವಧಿ ಇನ್ನೊಂದು ವರ್ಷ ಬಾಕಿಯಿದ್ದು, 2ನೇ ಅವಧಿಗೆ 2024ರಲ್ಲಿ ಮತ್ತೊಮ್ಮೆ ಅಧ್ಯಕ್ಷನ ಪಟ್ಟಕ್ಕೇರಲು ಸಿದ್ಧತೆಯಲ್ಲಿ ತೊಡಗಿದ್ದಾರೆ.

  • ಅಮೆರಿಕನ್ ಬ್ಯಾಂಕ್ ದಿವಾಳಿ – ಮಾಧ್ಯಮಗಳ ಪ್ರಶ್ನೆ ನಿರ್ಲಕ್ಷಿಸಿ ಹೊರನಡೆದ ಬೈಡನ್

    ಅಮೆರಿಕನ್ ಬ್ಯಾಂಕ್ ದಿವಾಳಿ – ಮಾಧ್ಯಮಗಳ ಪ್ರಶ್ನೆ ನಿರ್ಲಕ್ಷಿಸಿ ಹೊರನಡೆದ ಬೈಡನ್

    ವಾಷಿಂಗ್ಟನ್: ಅಮೆರಿಕದಲ್ಲಿ (America) ಬ್ಯಾಂಕ್‌ಗಳು ದಿವಾಳಿಯಾಗುತ್ತಿರುವ (Bankrupt) ಹಿನ್ನೆಲೆ ಅಧ್ಯಕ್ಷ ಜೋ ಬೈಡನ್‌ಗೆ (Joe Biden) ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಈ ಕುರಿತು ಪ್ರಶ್ನೆಯನ್ನು ಕೇಳಿದ್ದರು. ಆದರೆ ಯುಎಸ್ ಅಧ್ಯಕ್ಷ ಅವರ ಪ್ರಶ್ನೆಗಳನ್ನು ನಿರ್ಲಕ್ಷಿಸಿ ಹೊರನಡೆದಿದ್ದಾರೆ. ಇದರಿಂದ ಬೈಡನ್ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

    ಬೈಡನ್ ಸುದ್ದಿಗೋಷ್ಠಿಯಲ್ಲಿ ಕೊನೆಯದಾಗಿ ಚೇತರಿಸಿಕೊಳ್ಳುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿರ್ವಹಿಸುವುದು ಹಾಗೂ ನಮ್ಮ ಐತಿಹಾಸಿಕ ಚೇತರಿಕೆಯನ್ನು ರಕ್ಷಿಸುವಲ್ಲಿ ಕೆಲಸ ಮಾಡುವುದಾಗಿ ತಿಳಿಸಿ ಮಾತನ್ನು ಮುಗಿಸಿದ್ದಾರೆ. ಈ ವೇಳೆ ವರದಿಗಾರರೊಬ್ಬರು, ಬ್ಯಾಂಕ್‌ಗಳು ಏಕೆ ದಿವಾಳಿಯಾಗುತ್ತಿದೆ? ನೀವು ಇನ್ನು ಮುಂದೆ ಈ ರೀತಿ ಬ್ಯಾಂಕ್‌ಗಳು ದಿವಾಳಿಯಾಗುವುದಿಲ್ಲ ಎಂದು ಅಮೆರಿಕನ್ನರಿಗೆ ಭರವಸೆ ನೀಡಬಹುದೇ ಎಂದು ಪ್ರಶ್ನಿಸಿದ್ದಾರೆ.

    ಅಮೆರಿಕ ಅಧ್ಯಕ್ಷ ವರದಿಗಾರರ ಪ್ರಶ್ನೆಗೆ ಉತ್ತರಿಸದೇ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದೇ ವೇಳೆ ಮತ್ತೊಬ್ಬ ವರದಿಗಾರರು ಈಗಾಗಲೇ ದಿವಾಳಿಯಾಗಿರುವ ಬ್ಯಾಂಕುಗಳಂತೆ ಇತರ ಬ್ಯಾಂಕುಗಳ ಸ್ಥಿತಿಯೂ ಆಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಆದರೆ ಬೈಡನ್ ವರದಿಗಾರರೆಡೆ ಕಣ್ಣು ಹಾಯಿಸದೇ ಸುದ್ದಿಗೋಷ್ಠಿ ನಡೆಯುತ್ತಿದ್ದ ಕೊಠಡಿಯನ್ನು ತೊರೆದಿದ್ದಾರೆ. ಇದನ್ನೂ ಓದಿ: Bengaluru Mysuru Expressway- ಟೋಲ್ ಸಂಗ್ರಹ ಪ್ರಾರಂಭವಾದ ಮೊದಲ ದಿನವೇ ತಾಂತ್ರಿಕ ದೋಷ

    ಇದೀಗ ಬೈಡನ್ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸದೇ ಅಲ್ಲಿಂದ ಜಾಗ ಖಾಲಿ ಮಾಡಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಅಮೆರಿಕದಲ್ಲಿ ಬ್ಯಾಂಕುಗಳು ದಿವಾಳಿಯಾಗುತ್ತಿರುವ ಬಗ್ಗೆ ಅಧ್ಯಕ್ಷರು ಜನರಿಗೆ ಯಾವುದೇ ರೀತಿಯ ಭರವಸೆ ನೀಡುತ್ತಿಲ್ಲ ಎಂದು ಟೀಕಿಸಿದ್ದಾರೆ.

    ಕಳೆದ ವಾರ ಸಿಲಿನಾನ್ ವ್ಯಾಲಿ ಬ್ಯಾಂಕ್ (Silicon Valley Bank) ದಿವಾಳಿಯಾದ ಬೆನ್ನಲ್ಲೇ ಅಮೆರಿಕದ ಅಧಿಕಾರಿಗಳು ಮತ್ತೊಂದು ಟೆಕ್ ಸ್ನೇಹಿ ಸಿಗ್ನೇಚರ್ ಬ್ಯಾಂಕ್ ಅನ್ನು ಮುಚ್ಚಿದ್ದಾರೆ. ಬ್ಯಾಂಕ್‌ಗಳ ಠೇವಣಿದಾರರು ಹಾಗೂ ಹೂಡಿಕೆದಾರರು ಬೃಹತ್ ಮೊತ್ತದ ಹಣವನ್ನು ಹಿಂಪಡೆದಿರುವ ಪರಿಣಾಮವಾಗಿ ಬ್ಯಾಂಕ್‌ನ ನಗದು ವ್ಯವಹಾರದಲ್ಲಿ ಕೊರತೆ ಕಂಡುಬಂದಿದೆ. ಈ ಹಿನ್ನೆಲೆ ಈ ಬ್ಯಾಂಕ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಫುಲ್ ಡಿಮ್ಯಾಂಡ್: ಹಿಂದೆ ಎಷ್ಟಿತ್ತು? ಈಗ ಎಷ್ಟು ಹೆಚ್ಚಾಗಿದೆ?

  • ಬೈಡನ್‌ಗಿದ್ದ ಕ್ಯಾನ್ಸರ್ ತೆಗೆದುಹಾಕಿದ ವೈದ್ಯರು – ಅಮೆರಿಕ ಅಧ್ಯಕ್ಷ ಈಗ ಸಂಪೂರ್ಣ ಗುಣಮುಖ

    ಬೈಡನ್‌ಗಿದ್ದ ಕ್ಯಾನ್ಸರ್ ತೆಗೆದುಹಾಕಿದ ವೈದ್ಯರು – ಅಮೆರಿಕ ಅಧ್ಯಕ್ಷ ಈಗ ಸಂಪೂರ್ಣ ಗುಣಮುಖ

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್‌ಗೆ (Joe Biden) ಇದ್ದ ಕ್ಯಾನ್ಸರ್ ಅನ್ನು ತೆಗೆದುಹಾಕಲಾಗಿದೆ. ಅವರು ಇದೀಗ ಗುಣಮುಖರಾಗಿದ್ದು, ಹೆಚ್ಚಿನ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಶ್ವೇತಭವನದ ವೈದ್ಯ ಕೆವಿನ್ ಓ’ಕಾನರ್ ಶುಕ್ರವಾರ ತಿಳಿಸಿದ್ದಾರೆ.

    80 ವರ್ಷ ಪ್ರಾಯದ ಅಮೆರಿಕ ಅಧ್ಯಕ್ಷರಿಗೆ (US President) ಎದೆಯಲ್ಲಿ ಚರ್ಮದ ಗಾಯದ ರೂಪದಲ್ಲಿ ಕ್ಯಾನ್ಸರ್ (Cancer) ಇದ್ದಿದ್ದು, ಅದನ್ನು ಫೆಬ್ರವರಿ ತಿಂಗಳಿನಲ್ಲಿ ತೆಗೆದುಹಾಕಲಾಗಿದೆ. ಬೈಡನ್‌ಗೆ ಇದ್ದಿದ್ದ ಎಲ್ಲಾ ಕ್ಯಾನ್ಸರ್ ಅಂಗಾಂಶಗಳನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ. ಅವರ ಆರೋಗ್ಯದ ರಕ್ಷಣೆಯ ಭಾಗವಾಗಿ ಕಣ್ಗಾವಲು ಮುಂದುವರಿಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಅಲೆಸ್ ಬಿಲಿಯಾಟ್ಸ್ಕಿಗೆ 10 ವರ್ಷ ಜೈಲು

    Joe Biden

    ಫೆಬ್ರವರಿ 16ರಂದು ಬೈಡನ್ ಅವರ ವಾರ್ಷಿಕ ವೈದ್ಯಕೀಯ ತಪಾಸಣೆಯ ವೇಳೆ ಎದೆಯ ಮೇಲಿದ್ದ ಗಾಯವನ್ನು ತೆಗೆದುಹಾಕಲಾಗಿತ್ತು. ಬಳಿಕ ಅವರು ಕರ್ತವ್ಯಕ್ಕೆ ಯೋಗ್ಯ ಎಂದು ಘೋಷಿಸಲಾಗಿತ್ತು.

    ಬೈಡನ್ 2024ರಲ್ಲಿ 2ನೇ ಬಾರಿ ಅಧ್ಯಕ್ಷರಾಗುವ ನಿರೀಕ್ಷೆಯಲ್ಲಿ ತಯಾರಿ ನಡೆಸುತ್ತಿದ್ದಾರೆ. ಆದರೂ ಅವರ ಪತ್ನಿ ಜಿಲ್ ಬೈಡನ್ ಸ್ಪರ್ಧಿಸಲು ಯೋಜಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗೆಗಿನ ನಿರ್ಧಾರವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿಲ್ಲ. ಇದನ್ನೂ ಓದಿ: ಶಾಸಕರ ದಾವಣಗೆರೆಯ ಮನೆ ಮೇಲೂ ರೇಡ್- ಇಂದು ಬೇನಾಮಿ ಆಸ್ತಿ ಮೇಲೂ ದಾಳಿ ಸಾಧ್ಯತೆ

  • ಭೀಕರ ಸುನಾಮಿಗೆ 60 ಮಂದಿ ಬಲಿ – 15 ಸಾವಿರ ವಿಮಾನಗಳ ಸಂಚಾರ ರದ್ದು

    ಭೀಕರ ಸುನಾಮಿಗೆ 60 ಮಂದಿ ಬಲಿ – 15 ಸಾವಿರ ವಿಮಾನಗಳ ಸಂಚಾರ ರದ್ದು

    ವಾಷಿಂಗ್ಟನ್: ಅಮೆರಿಕಾದಲ್ಲಿ (US) ಹಿಮ ಸುನಾಮಿ (Bomb Cyclone) ಭೀಭತ್ಸ ಸೃಷ್ಟಿಸಿದೆ. ತೀವ್ರ ಶೀತಗಾಳಿಗೆ ಉಷ್ಣಾಂಶ ದೊಡ್ಡ ಪ್ರಮಾಣದಲ್ಲಿ ಬಿದ್ದುಹೋಗ್ತಿದೆ. ಮೈನಸ್ 50 ಡಿಗ್ರಿವರೆಗೂ ತಾಪಮಾನ ಕುಸಿದಿದೆ. ನಿನ್ನೆಯಷ್ಟೇ 38 ಇದ್ದ ಸಾವಿನ ಪ್ರಮಾಣ ಇಂದು ಏಕಾ-ಏಕಿ 60ರ ಗಡಿ ದಾಟಿದೆ.

    ನ್ಯೂಯಾರ್ಕ್ ಸಿಟಿ (Newyork City) ಒಂದರಲ್ಲೇ 27 ಮಂದಿ ಸೇರಿದಂತೆ ದೇಶಾದ್ಯಂತ ಸುಮಾರು 60 ಮಂದಿ ಮೃತಪಟ್ಟಿದ್ದಾರೆ. ಅತಿಯಾದ ಹಿಮದಿಂದಾಗಿ ಕಾರು, ಬಸ್, ಅಂಬುಲೆನ್ಸ್ ಹಾಗೂ ಟ್ರಕ್‌ಗಳು ಹಿಮದಲ್ಲಿ ಹೂತು ಹೋಗಿವೆ. ಇದರಿಂದ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವುದು ಕಷ್ಟ ಸಾಧ್ಯವಾಗಿದೆ. ಇಂದು ಬೆಳಗ್ಗೆಯಿಂದ ಭಾರೀ ಪ್ರಮಾಣದಲ್ಲಿ ಹಿಮ ಸುರಿಯುತ್ತಿದೆ. ಪಶ್ಚಿಮ ನ್ಯೂಯಾರ್ಕ್ನಲ್ಲಿ ಸುಮಾರು 9 ಇಂಚು (23 ಸೆಂ.ಮೀ.) ಪ್ರಮಾಣದಲ್ಲಿ ಹಿಮ ಬೀಳುತ್ತಿದೆ. ಇದನ್ನೂ ಓದಿ: ಹಿಮ ಸುನಾಮಿಗೆ ಅಮೆರಿಕ, ಕೆನಡಾ ತಲ್ಲಣ – ಫ್ರಿಡ್ಜ್‌ನಂತಾದ ವಾಹನಗಳು, 38 ಮಂದಿ ಸಾವು

    15 ಸಾವಿರ ವಿಮಾನ (Airlines) ಸಂಚಾರ ರದ್ದು: ಕುಡಿಯುವ ನೀರಿಗೂ ಜನ ಪರದಾಡುವಂತಾಗಿದೆ. 15 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸರಬರಾಜು ಬಂದ್ ಆಗಿದ್ದು, ಜನ ಕತ್ತಲಲ್ಲಿ ಕೊಳೆಯುವಂತಾಗಿದೆ. ಅಂದಾಜು 20 ಕೋಟಿ ಮಂದಿ ಸಂತ್ರಸ್ತರಾಗಿದ್ದಾರೆ. ಕನಿಷ್ಠ 17 ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ಕಳೆದ ಮೂರ್ನಾಲ್ಕು ದಿನಗಳಿಂದ ಸುಮಾರು 15 ಸಾವಿರ ವಿಮಾನ ಸಂಚಾರ ರದ್ದಾಗಿದೆ. ಇದನ್ನೂ ಓದಿ: ಜನಾಂಗೀಯ ದಾಳಿ – ಫ್ರಾನ್ಸ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ, ಕಾರುಗಳಿಗೆ ಬೆಂಕಿ ಹಚ್ಚಿ ಆಕ್ರೋಶ

    ಅಮೆರಿಕ-ಕೆನಡಾ ಮಧ್ಯೆ ಆರ್ಕಟಿಕ್ ಬ್ಲಾಸ್ಟ್ ಹೋಗಿ ಬಾಂಬ್ ಸೈಕ್ಲೋನ್ (Bomb Cyclone) ಆಗಿದೆ. ಅಮೆರಿಕ-ಕೆನಡಾ ನಡುವೆ ಹಿಮರಾಶಿ ಹರಡುತ್ತಲೇ ಇದೆ. ಟೆಕ್ಸಾಸ್‌ನಿಂದ ಕ್ಯೂಬೆಕ್‌ವರೆಗೆ ಸುಮಾರು 3,200 ಕಿ.ಮೀ.ವರೆಗೆ ಹಿಮ ಆವರಿಸಿದೆ. ನ್ಯೂಯಾರ್ಕ್, ಬಫೆಲೋ ಮಿಚಿಗನ್, ಒರ್ಲಾಂಡೋ, ಡೆನ್ವರ್, ದಲ್ಲಾಸ್, ನಾಶ್‌ವಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಹೆದ್ದಾರಿಗಳಲ್ಲಿ ದಾರಿ ಕಾಣದೆ ಸರಣಿ ಅಪಘಾತಗಳಾಗಿವೆ. ಎಲ್ಲೆಂದರಲ್ಲೇ ಜನ, ವಾಹನಗಳು ಫ್ರೀಜ್ ಆಗುತ್ತಿದ್ದಾರೆ. ಭಾರೀ ಪ್ರಮಾಣದಲ್ಲಿ ಹಿಮ ಸುರಿಯುತ್ತಿರುವ ಕಾರಣ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ. ಓಹಿಯೋದಲ್ಲಿ ಹಿಮ ತೂಫಾನ್ ಕಾರಣದಿಂದ 50 ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ.

    Live Tv
    [brid partner=56869869 player=32851 video=960834 autoplay=true]