Tag: US Open

  • ಸೋಲಿನೊಂದಿಗೆ ಟೆನಿಸ್‍ಗೆ ವಿದಾಯ ಹೇಳಿದ ಸೆರೆನಾ ವಿಲಿಯಮ್ಸ್

    ಸೋಲಿನೊಂದಿಗೆ ಟೆನಿಸ್‍ಗೆ ವಿದಾಯ ಹೇಳಿದ ಸೆರೆನಾ ವಿಲಿಯಮ್ಸ್

    ವಾಷಿಂಗ್ಟನ್: ಯುಎಸ್ ಓಪನ್‍ನ ಮೂರನೇ ಸುತ್ತಿನಲ್ಲಿ ಸೋಲುವ ಮೂಲಕ ಅಮೆರಿಕದ ಟೆನಿಸ್ ಲೆಜೆಂಡ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಟೆನಿಸ್‍ಗೆ ವಿದಾಯ ಹೇಳಿದ್ದಾರೆ.

    ಯುಎಸ್ ಓಪನ್ ಟೂರ್ನಿ ಆರಂಭಕ್ಕೂ ಮುನ್ನ ಇದು ನನ್ನ ಕೊನೆಯ ಟೆನಿಸ್ ಟೂರ್ನಿಯಾಗಿದ್ದು, ಈ ಟೂರ್ನಿಯ ಬಳಿಕ ನಿವೃತ್ತಿ ಘೋಷಿಸುವುದಾಗಿ ಈ ಹಿಂದೆಯೇ ಸೆರೆನಾ ಘೋಷಿಸಿದ್ದರು. ಇದನ್ನೂ ಓದಿ: 1.5 ಕೋಟಿ ರೂ. ನೀಡಿ ನೀರಜ್ ಚೋಪ್ರಾರ ಜಾವೆಲಿನ್ ಖರೀದಿಸಿದ ಬಿಸಿಸಿಐ

    ಯುಎಸ್ ಓಪನ್ 3ನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ಆಜ್ಞಾ ಟೊಮಿಲ್ಲಾನೋವಿಕ್ ವಿರುದ್ಧ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದರು. ಇದರೊಂದಿಗೆ ವಿಶ್ವ ಟೆನಿಸ್ ಪ್ರಿಯರ ಮನಗೆದ್ದಿದ್ದ ಲೆಜೆಂಡ್ ಆಟಗಾರ್ತಿ ಭಾವುಕರಾಗಿ ಟೆನಿಸ್ ಅಂಗಳಕ್ಕೆ ಗುಡ್‍ಬೈ ಹೇಳಿದ್ದಾರೆ.

    24ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲುವ ಕನಸಿನೊಂದಿಗೆ ಕಣಕ್ಕಿಳಿದಿದ್ದ 40ರ ಹರೆಯದ ಸೆರೆನಾ ಆಸ್ಟ್ರೇಲಿಯಾದ ಅಜ್ಞಾ ಟೊಮಿಲ್ಲಾನೋವಿಕ್ ವಿರುದ್ಧ ಬರೋಬ್ಬರಿ 3 ಗಂಟೆ 5 ನಿಮಿಷಗಳ ಕಾಲ ಹೋರಾಟ ನಡೆಸಿ ಕೊನೆಗೆ ಸೋಲೊಪ್ಪಿಕೊಂಡರು. ಮೊದಲ ಸೆಟ್ ಗೆದ್ದ ಸೆರೆನಾ ಬಳಿಕ ಎರಡು ಸೆಟ್‍ಗಳನ್ನು ಸತತವಾಗಿ ಸೋತು ಟೂರ್ನಿಗೆ ಗುಡ್‍ಬೈ ಘೋಷಿಸಿದ್ದಾರೆ. 7-5, 6-7, 6-1 ಸೆಟ್‍ಗಳಿಂದ ಗೆದ್ದ ಆಜ್ಞಾ ಟೊಮಿಲ್ಲಾನೋವಿಕ್ ಮುಂದಿನ ಹಂತಕ್ಕೆ ತೇರ್ಗಡೆಗೊಂಡರು. ಇದನ್ನೂ ಓದಿ: ಪರ್ಫಾರ್ಮ್ಯಾಕ್ಸ್ ಬ್ರ್ಯಾಂಡ್‌ಗೆ ಜಸ್ಪ್ರೀತ್‌ ಬುಮ್ರಾ ಬ್ರ್ಯಾಂಡ್‌ ಅಂಬಾಸಿಡರ್‌

    ಟೆನಿಸ್ ಅಂಗಳದಲ್ಲಿ ಮಿಂಚಿನ ಪಾದ ಚಲನೆ ಮೂಲಕ ಅದೆಷ್ಟೋ ಅಗ್ರಗಣ್ಯ ಆಟಗಾರ್ತಿಯರನ್ನು ಸೋಲಿಸಿ ವಿಶ್ವದ ಗಮನಸೆಳೆದಿದ್ದ ಸೆರೆನಾ ತನ್ನ 27 ವರ್ಷಗಳ ವೃತ್ತಿಜೀವನದಲ್ಲಿ 23 ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿರುವ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಿಟರ್ನ್ ಟಿಕೆಟ್ ಬುಕ್ ಮಾಡಿದ್ದ ಎಮ್ಮಾ ರಾಡುಕಾನು ಯುಎಸ್ ಓಪನ್ ಚಾಂಪಿಯನ್

    ರಿಟರ್ನ್ ಟಿಕೆಟ್ ಬುಕ್ ಮಾಡಿದ್ದ ಎಮ್ಮಾ ರಾಡುಕಾನು ಯುಎಸ್ ಓಪನ್ ಚಾಂಪಿಯನ್

    ನ್ಯೂಯಾರ್ಕ್: ಯಎಸ್ ಓಪನ್ ಅರ್ಹತಾ ಸುತ್ತಿನಲ್ಲಿ ಆಡಲು ನ್ಯೂಯಾರ್ಕ್‍ಗೆ ಆಗಮಿಸಿದ್ದ ಎಮ್ಮಾ ರಾಡುಕಾನು, ತಾನು ಪ್ರಶಸ್ತಿ ಸುತ್ತಿಗೇರುತ್ತೇನೆ ಎಂಬ ವಿಶ್ವಾಸವಿಲ್ಲದೆ ಮೊದಲೇ ರಿಟರ್ನ್ ಟಿಕೆಟ್ ಬುಕ್ ಮಾಡಿದ್ದರು. ಆದರೆ ಟೂರ್ನಿಯುದ್ದಕ್ಕೂ ಅದ್ಭುತ ಸಾಧನೆ ತೋರಿ ಯುಎಸ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಮಹಿಳಾ ಸಿಂಗಲ್ಸ್ ಚಾಂಪಿಯನ್ ಆಗುವ ಮೂಲಕ ರಾಡುಕಾನು ಹೊಸ ತಾರೆಯಾಗಿ ಹೊರಹೊಮ್ಮಿದ್ದಾರೆ.

    18ರ ಹರೆಯದ ಎಮ್ಮಾ ರಾಡುಕಾನು ಫೈನಲ್‍ನಲ್ಲಿ ಕೆನಡಾದ 19 ವರ್ಷದ ಲೈಲಾ ಆ್ಯನಿ ಫರ್ನಾಂಡೆಜ್ ವಿರುದ್ಧ 6-4, 6-3 ಸೆಟ್‍ಗಳ ಗೆಲುವಿನೊಂದಿಗೆ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಬ್ರಿಟನ್‍ನ ಯುವತಾರೆ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್‍ಗೆ ಅಚ್ಚರಿಯಾಗಿ ಆಯ್ಕೆಗೊಂಡ ಆಟಗಾರರಿವರು

    ಫೈನಲ್‍ನಲ್ಲಿ ಎದುರಾಳಿಯಾಗಿ ಆಡಿದ ಈ ಇಬ್ಬರು ಆಟಗಾರ್ತಿಯರು ಕೂಡ 3 ವರ್ಷಗಳ ಹಿಂದೆ ವಿಂಬಲ್ಡನ್ ಕಿರಿಯರ ನಡುವಿನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಇದೀಗ ಯುಎಸ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ನಲ್ಲಿ ಎದುರಾಳಿಯಾಗಿ ಆಡಿ ಎಮ್ಮಾ ರಾಡುಕಾನು, ಲೈಲಾ ಆ್ಯನಿ ಫರ್ನಾಂಡೆಜ್ ವಿರುದ್ಧ ಗೆದ್ದು ಬೀಗಿದ್ದಾರೆ. ರೋಚಕವಾಗಿ ಸಾಗಿದ ಫೈನಲ್ ಪಂದ್ಯಾಟ 1 ಗಂಟೆ 51 ನಿಮಿಷಗಳ ಕಾಲ ನಡೆಯಿತು. ಇಬ್ಬರು ಆಟಗಾರ್ತಿಯರು ಕೂಡ ಜಿದ್ದಾಜಿದ್ದಿಯಲ್ಲಿ ಕಾದಾಡಿ ಪ್ರೇಕ್ಷಕರನ್ನು ರಂಜಿಸಿದರು.

    ದಾಖಲೆಗಳ ಒಡತಿ ರಾಡುಕಾನು
    ರಾಡುಕಾನು ಗ್ರ್ಯಾಂಡ್ ಸ್ಲ್ಯಾಮ್ ಗೆಲುವಿನೊಂದಿಗೆ ಹಲವು ದಾಖಲೆಗಳ ಒಡತಿಯಾಗಿದ್ದಾರೆ. ಅರ್ಹತಾ ಸುತ್ತಿನಲ್ಲಿ ಆಡಿ ಗೆದ್ದು, ಪ್ರಶಸ್ತಿ ಸುತ್ತಿಗೇರಿ ವಿಜಯಿಯಾದ ಮೊದಲ ಆಟಗಾರ್ತಿ ಎಂಬ ನೂತನ ದಾಖಲೆ ಬರೆದರು. ಈ ಮೊದಲು 150ನೇ ರ್ಯಾಕಿಂಗ್ ಹೊಂದಿದ್ದ ರಾಡುಕಾನು ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಬಳಿಕ ವಿಶ್ವ ರ‍್ಯಾಕಿಂಗ್ ನಲ್ಲಿ 23ನೇ ಸ್ಥಾನಕ್ಕೇರಿದ್ದು, 1977ರಲ್ಲಿ ವರ್ಜೀನಿಯಾ ವೇಡ್ ಬಳಿಕ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಬ್ರಿಟನ್‍ನ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ತಂದೆ-ತಾಯಿಯನ್ನ ವಿಮಾನದಲ್ಲಿ ಕರೆದೊಯ್ದ ಚಿನ್ನದ ಹುಡುಗ

    https://twitter.com/usopen/status/1436815112778567681?ref_src=twsrc%5Etfw%7Ctwcamp%5Etweetembed%7Ctwterm%5E1436815112778567681%7Ctwgr%5E%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2Fusopen%2Fstatus%2F1436815112778567681%3Fref_src%3Dtwsrc5Etfw

    2004ರ ಬಳಿಕ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಅತೀ ಕಿರಿಯ ಆಟಗಾರ್ತಿಯಾಗಿದ್ದು, 2004ರಲ್ಲಿ ರಷ್ಯಾದ ಮರಿಯಾ ಶರಪೋವಾ 17ನೇ ವಯಸ್ಸಿನಲ್ಲಿ ವಿಂಬಲ್ಡನ್ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದು ದಾಖಲೆ ನಿರ್ಮಿಸಿದ್ದರು. ರಾಡುಕಾನು ಅರ್ಹತಾ ಸುತ್ತಿನಿಂದ ಹಿಡಿದು ಪ್ರಶಸ್ತಿ ಸುತ್ತಿನ ವರೆಗೂ ತಮ್ಮ ಅಜೇಯ ಓಟವನ್ನು ಮುಂದುವರಿಸಿ ಒಂದು ಸೆಟ್‍ಗಳನ್ನು ಸೋಲದೇ 10 ಪಂದ್ಯಗಳನ್ನು ಗೆದ್ದು 18.38 ಕೋಟಿ ರೂ. ಬಹುಮಾನದ ಒಡತಿಯಾದರು.

  • ಕೊರೊನಾ ಎಫೆಕ್ಟ್‌ನಿಂದಾಗಿ ಕ್ರೀಡಾ ಜಗತ್ತಿಗೆ 1.21 ಲಕ್ಷ ಕೋಟಿ ನಷ್ಟ

    ಕೊರೊನಾ ಎಫೆಕ್ಟ್‌ನಿಂದಾಗಿ ಕ್ರೀಡಾ ಜಗತ್ತಿಗೆ 1.21 ಲಕ್ಷ ಕೋಟಿ ನಷ್ಟ

    – ಭಾರತದ ಕ್ರೀಡಾ ಉದ್ಯಮಕ್ಕೂ 4,700 ಕೋಟಿ ಲಾಸ್

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿ ಕ್ರೀಡಾಕೂಟ, ಆರ್ಥಿಕ ಚಟುವಟಿಕೆ ಹೀಗೆ ಎಲ್ಲವನ್ನೂ ಸ್ತಬ್ಧಗೊಳಿಸಿದೆ. ಕೊರೊನಾ ಆರ್ಭಟದ ಎದುರು ಕ್ರೀಡಾ ಉದ್ಯಮ ಭಾರೀ ನಷ್ಟವನ್ನೇ ಅನುಭವಿಸಿದೆ.

    ಕೊರೊನಾ ಎಫೆಕ್ಟ್‌ನಿಂದಾಗಿ ವಿಶ್ವ ಕ್ರೀಡಾ ಉದ್ಯಮವು 1.21 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದರೆ, ಭಾರತದ ಕ್ರೀಡಾ ಉದ್ಯಮಕ್ಕೂ 4,700 ಕೋಟಿ ರೂ. ಕಳೆದುಕೊಂಡಿದೆ. ಸದ್ಯ ವಿವಿಧ ದೇಶಗಳಲ್ಲಿ ಖಾಲಿ ಮೈದಾನದಲ್ಲೇ ಫುಟ್ಬಾಲ್ ಸೇರಿದಂತೆ ಕೆಲ ಟೂರ್ನಿಗಳು ಪ್ರಾರಂಭಗೊಂಡಿವೆ.

    ಸದ್ಯ ಆರಂಭವಾಗಿರುವ ಎಲ್ಲಾ ಟೂರ್ನಿ, ಲೀಗ್‍ಗಳನ್ನು ಪ್ರೇಕ್ಷಕರಿಲ್ಲದೆ ಆಡಬೇಕಾಗಿದೆ. ಪಂದ್ಯದಲ್ಲಿ ಪ್ರೇಕ್ಷಕರು ಇಲ್ಲದಿದ್ದಾಗ ಆಡುವ ಪ್ರಯೋಜನವೇನು ಎನ್ನುವ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ ಇದಕ್ಕೆ ಸರಳವಾದ ಉತ್ತರವೆಂದರೆ ಕ್ರೀಡಾ ಉದ್ಯಮದ ಆದಾಯದ ಬಹುಪಾಲು ಭಾಗವು ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರಿಂದ ಬರುವುದಿಲ್ಲ. ಹೊರತಾಗಿ ಪ್ರಸಾರ ಮತ್ತು ಕ್ರೀಡೆಗಳಿಗೆ ಸಂಬಂಧಿಸಿದ ವಿವಿಧ ವ್ಯವಹಾರಗಳಿಂದ ಹೆಚ್ಚಿನ ಹಣ ಹರಿದುಬರುತ್ತದೆ.

    ಪ್ರಪಂಚದಾದ್ಯಂತದ ಅನೇಕ ದೇಶಗಳು ಈಗ ಪ್ರೇಕ್ಷಕರಿಲ್ಲದೆ ಟೂರ್ನಿಗಳನ್ನು ಆರಂಭಿಸಿ ಕ್ರೀಡಾ ಚಟುವಟಿಕೆಯನ್ನು ಚುರುಕುಗೊಳಿಸುತ್ತಿರುವುದು ಇದೇ ಕಾರಣಕ್ಕೆ ಎಂದು ಹೇಳಬಹುದು. ಈ ಮೂಲಕ ಪ್ರೇಕ್ಷಕರಿಂದ ಬರುವ ಹಣವನ್ನು ಹೊರತುಪಡಿಸಿ ಬೇರೆ ಬೇರೆ ಮೂಲಗಳಿಂದ ಪಡೆಯಲು ಆಡಳಿತ ಮಂಡಳಿಗಳು ಪ್ಲಾನ್ ರೂಪಿಸುತ್ತಿವೆ.

    ಕ್ರೀಡಾ ಮಾಧ್ಯಮದ ವರದಿಯ ಪ್ರಕಾರ, ಈ ವರ್ಷ ಕೋವಿಡ್-19ನಿಂದಾಗಿ ವಿಶ್ವ ಕ್ರೀಡಾ ಉದ್ಯಮವು 1.21 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಿನ ನಷ್ಟವನ್ನು ಅನುಭಸಲಿದೆ. ಈ ಪೈಕಿ ಅಮೆರಿಕವೊಂದೇ 9 ಸಾವಿರ ಕೋಟಿ ರೂ. ನಷ್ಟವನ್ನು ಅನುಭವಿಸಲಿದೆ. ಭಾರತದಲ್ಲಿ ಕ್ರೀಡೆ ಮತ್ತು ಸಂಬಂಧಿತ ಉದ್ಯಮಗಳು 30 ಸಾವಿರ ಕೋಟಿ ರೂ. ನಷ್ಟದ ಸುಳಿಗೆ ಸಿಲುಕಲಿವೆ. ಕ್ರೀಡಾ ವ್ಯವಹಾರ ಮತ್ತು ಮಾರುಕಟ್ಟೆಗೆ ಸಂಬಂಧಿಸಿದ ತಜ್ಞರ ಪ್ರಕಾರ, ಭಾರತದ ಕ್ರೀಡಾ ಸರಕು ಉದ್ಯಮವು 4,700 ಕೋಟಿ ರೂ. ನಷ್ಟವನ್ನು ತೆರಲಿದೆ ಎಂದು ಹೇಳಲಾಗಿದೆ.

    ಪ್ರೊ ಕಬಡ್ಡಿ ಲೀಗ್:
    ಈ ವರ್ಷದ ಏಪ್ರಿಲ್‍ನಲ್ಲಿ ಪ್ರೊ ಕಬಡ್ಡಿ ಲೀಗ್‍ಗಾಗಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಈವರೆಗೂ ಹರಾಜು ಪ್ರಕ್ರಿಯೆ ಆರಂಭವಾಗಿಲ್ಲ. ಟೂರ್ನಿ ಜುಲೈನಲ್ಲಿ ಪ್ರಾರಂಭವಾಗಬೇಕಿತ್ತಾದರೂ ಯಾವುದೇ ಚಟುವಟಿಕೆ ಕಾಣಿಸಿಕೊಂಡಿಲ್ಲ. ಈ ಲೀಗ್‍ನಿಂದ ಸಂಘಟಕರು ಪ್ರತಿವರ್ಷ ಪಂದ್ಯಾವಳಿಯಿಂದ ಸುಮಾರು 500 ಕೋಟಿ ರೂ. ಗಳಿಸುತ್ತಾರೆ. ಒಂದು ವೇಳೆ ಪ್ರೊ ಕಬಡ್ಡಿ ನಡೆಯದಿದ್ದಲ್ಲಿ ಆಟಗಾರರು, ಫ್ರಾಂಚೈಸಿಗಳು ಹಾಗೂ ಆಡಳಿತ ಮಂಡಳಿಗಳಿಗೆ ಆದಾಯವೇ ನಿಲ್ಲುತ್ತದೆ.

    ಒಲಿಂಪಿಕ್:
    ಜಗತ್ತಿನ ಪ್ರಮುಖ ಕ್ರೀಡಾಕೂಟಗಳಲ್ಲಿ ಒಂದಾದ ಒಲಿಂಪಿಕ್ ಆಥಿತ್ಯವನ್ನು ಜಪಾನ್ ವಹಿಸಿಕೊಂಡಿತ್ತು. ಆದರೆ ಕೊರೊನಾ ಭೀತಿ ಹಿನ್ನೆಲೆ ಕ್ರೀಡಾಕೂಟವನ್ನು ಮುಂದೂಡಲಾಗಿದೆ. ಪರಿಣಾಮ ಈ ವರ್ಷ ಜಪಾನ್ 56 ಸಾವಿರ ಕೋಟಿ ರೂ. ನಷ್ಟ ಉಂಟಾಗಿಎ.

    ಜಪಾನ್‍ನ ಮಾಧ್ಯಮಗಳ ಪ್ರಕಾರ, ಒಲಿಂಪಿಕ್ ಕ್ರೀಡಾಕೂಟವನ್ನು ಮುಂದೂಡಿದ್ದರಿಂದ ಸಂಘಟಕರು ನಷ್ಟವನ್ನು ಸರಿದೂಗಿಸಲು ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ 20 ಕೋಟಿ ರೂ. ವೆಚ್ಚವನ್ನು ಕಡಿತಗೊಳಿಸುವ ಯೋಜನೆಯನ್ನು ಸಹ ಸಿದ್ಧಪಡಿಸಿದ್ದಾರೆ. ಒಲಿಂಪಿಕ್ ಸಂಘಟನಾ ಸಮಿತಿಯ ಅಧ್ಯಕ್ಷ ಯೋಶಿರೋ ಮೋರಿ ಇದನ್ನು ಖಚಿತಪಡಿಸಿದ್ದಾರೆ.

    ಬಿಸಿಸಿಐ 5,000 ಕೋಟಿ ಲಾಸ್:
    ಐಪಿಎಲ್ ನಡೆಸಲು ಸಾಧ್ಯವಿರುವ ಎಲ್ಲ ಆಯ್ಕೆಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕಳೆದ ಗುರುವಾರ ಹೇಳಿದ್ದರು. ಈ ನಿಟ್ಟಿನಲ್ಲಿ ಟೂರ್ನಿಯನ್ನು ಪ್ರೇಕ್ಷಕರು ಇಲ್ಲದೆ ನಡೆಸಬಹುದು. ಏಕೆಂದರೆ ಬಿಸಿಸಿಐಗೆ ವಾರ್ಷಿಕ ಆದಾಯದ ಬಹುಪಾಲು ಭಾಗ ಐಪಿಎಲ್‍ನಿಂದ ಬರುತ್ತದೆ. ಐಪಿಎಲ್‍ನ ಬ್ರಾಂಡ್ ಮೌಲ್ಯ 47,500 ಕೋಟಿ ರೂ. ಆಗಿದೆ. ಈ ಬಾರಿ ಐಪಿಎಲ್ ನಡೆಯದಿದ್ದರೆ ಭಾರತೀಯ ಕ್ರಿಕೆಟ್ ಮಂಡಳಿಗೆ 5,000 ಕೋಟಿ ರೂ. ನಷ್ಟವನ್ನು ಅನುಭವಿಸಬೇಕಾಗುತ್ತದೆ.

    ಫುಟ್ಬಾಲ್:
    ಯುರೋಪಿಯನ್ ಫುಟ್ಬಾಲ್ ಉದ್ಯಮವು 2018-19ರಲ್ಲಿ 25 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ನಡೆಸಿತ್ತು. ಇಂಗ್ಲಿಷ್ ಪ್ರೀಮಿಯರ್ ಲೀಗ್ ಕ್ಲಬ್‍ಗಳ ಆದಾಯ 505 ಕೋಟಿ ರೂ. ಆಗಿತ್ತು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಈ ವರ್ಷ ಪ್ರೀಮಿಯರ್ ಲೀಗ್ ಕ್ಲಬ್‍ಗಳ ಆದಾಯವು ಸುಮಾರು 8,500 ಕೋಟಿ ರೂ.ನಷ್ಟು ಕಡಿಮೆ ಮಾಡಬಹುದು ಎನ್ನಲಾಗಿದೆ.

    ಆದಾಯದ ದೃಷ್ಟಿಯಿಂದ ನೋಡುವುದಾದರೆ ಸ್ಪ್ಯಾನಿಷ್ ಫುಟ್ಬಾಲ್ ಲೀಗ್ ಯುರೋಪಿನ ಎರಡನೇ ಅತಿದೊಡ್ಡ ಲೀಗ್ ಆಗಿದೆ. ಹಿಂದಿನ ಆವೃತ್ತಿಯಲ್ಲಿ ಈ ಲೀಗ್ ಸುಮಾರು 38,363 ಕೋಟಿ ರೂ. ಗಳಿಸಿತ್ತು. ಈ ಆವೃತ್ತಿಯು 1.85 ಲಕ್ಷ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ.

    ಯುಎಸ್ ಓಪನ್: ಆಗಸ್ಟ್ 24ರಿಂದ ಅಮೆರಿಕ ಓಪನ್ ಪ್ರಾರಂಭವಾಗುತ್ತದೆ. ಈ ಲೀಗ್ ಕೂಡ ಪ್ರೇಕ್ಷಕರಿಲ್ಲದೆ ನಡೆಯಬಹುದು. ಹಾಗೆ ನಡೆದಲ್ಲಿ ಯುಎಸ್ ಓಪನ್ ಆಯೋಜಕರು 760 ಕೋಟಿ ರೂ. ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.