Tag: US man

  • ಆಸ್ಪತ್ರೆ ಬಿಲ್‌ ಕಟ್ಟಲು ಹಣವಿಲ್ಲ ಅಂತಾ ರೋಗಿ ಪತ್ನಿಯನ್ನೇ ಕೊಂದ ಪತಿ

    ಆಸ್ಪತ್ರೆ ಬಿಲ್‌ ಕಟ್ಟಲು ಹಣವಿಲ್ಲ ಅಂತಾ ರೋಗಿ ಪತ್ನಿಯನ್ನೇ ಕೊಂದ ಪತಿ

    ವಾಷಿಂಗ್ಟನ್‌: ಆಸ್ಪತ್ರೆ ಬಿಲ್‌ ಕಟ್ಟಲು ಹಣವಿಲ್ಲ ಎಂದು ಕಾಯಿಲೆ ಬಿದ್ದು ಆಸ್ಪತ್ರೆ ಸೇರಿದ್ದ ಹೆಂಡತಿ ಕತ್ತು ಹಿಸುಕಿ ಪತಿ ಹತ್ಯೆ ಮಾಡಿರುವ ಘಟನೆ ಅಮೆರಿಕದಲ್ಲಿ (America) ನಡೆದಿದೆ.

    ರೋನಿ ವಿಗ್ಸ್‌ ಎಂಬಾತ ಪತ್ನಿಗೆ ಚಿಕಿತ್ಸೆ ಕೊಡಿಸಿದ್ದಕ್ಕೆ ವೈದ್ಯಕೀಯ ಬಿಲ್‌ಗಳನ್ನು ಭರಿಸಲು ಸಾಧ್ಯವಿಲ್ಲವೆಂದು ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮಿಸೌರಿಯ ಇಂಡಿಪೆಂಡೆನ್ಸ್‌ನಲ್ಲಿರುವ ಸೆಂಟರ್‌ಪಾಯಿಂಟ್ ಮೆಡಿಕಲ್ ಸೆಂಟರ್‌ನಲ್ಲಿ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ಹೆಚ್ಚಿದ ಪ್ರವಾಹ ತೀವ್ರತೆ – ಸಾವಿನ ಸಂಖ್ಯೆ 78ಕ್ಕೆ ಏರಿಕೆ, 105 ಮಂದಿ ನಾಪತ್ತೆ!

    ಐಸಿಯುನಲ್ಲಿದ್ದ ರೋಗಿ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಕರ್ತವ್ಯನಿರತ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿದ್ದಾರೆ. ರೋಗಿ ತನ್ನ ಹಾಸಿಗೆಯಲ್ಲಿ ಮಲಗಿದ್ದಾಗ, ಮೊದಲು ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಪತಿ ಮುಂದಾಗಿದ್ದ.

    ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ರೋಗಿ ಮೃತಪಟ್ಟಿರುವುದು ಗೊತ್ತಾಗಿದೆ. ನನ್ನ ಪತ್ನಿಯನ್ನು ನಾನೇ ಕೊಂದೆ ಎಂದು ವ್ಯಕ್ತಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಗುಂಡಿಕ್ಕಿ ಈಕ್ವೆಡರ್‌ ಬ್ಯೂಟಿ ಹತ್ಯೆ – ಇನ್‌ಸ್ಟಾಗ್ರಾಮ್‌ ಫಾಲೋ ಮಾಡಿ ಸ್ಕೆಚ್‌ ಹಾಕಿದ್ದ ಹಂತಕರು!

    ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದೆ. ಪತ್ನಿಯ ವೈದ್ಯಕೀಯ ವೆಚ್ಚ ಭರಿಸಲು ಹಣವಿರಲಿಲ್ಲ. ಹೀಗಾಗಿ ಈ ಕೃತ್ಯ ಎಸಗಿದೆ ಎಂದು ಆರೋಪಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

  • ವಿಮಾನದ ತುರ್ತು ನಿರ್ಗಮನ ದ್ವಾರ ತೆರೆಯಲು ಯತ್ನ – ಪ್ರಯಾಣಿಕ ಅರೆಸ್ಟ್‌

    ವಿಮಾನದ ತುರ್ತು ನಿರ್ಗಮನ ದ್ವಾರ ತೆರೆಯಲು ಯತ್ನ – ಪ್ರಯಾಣಿಕ ಅರೆಸ್ಟ್‌

    ವಾಷಿಂಗ್ಟನ್: ಯುನೈಟೆಡ್‌ ಏರ್‌ಲೈನ್ಸ್‌ ವಿಮಾನದಲ್ಲಿ (United Airlines Flight) ತುರ್ತು ನಿರ್ಗಮನದ ದ್ವಾರ (Plane’s Emergency Door) ತೆರೆಯಲು ಪ್ರಯತ್ನಿಸಿದ ಪ್ರಯಾಣಿಕನನ್ನು ಬಂಧಿಸಲಾಗಿದೆ.

    ಯುನೈಟೆಡ್‌ ಏರ್‌ಲೈನ್ಸ್‌ ವಿಮಾನವು ಲಾಸ್‌ ಏಂಜಲೀಸ್‌ನಿಂದ ಬೋಸ್ಟನ್‌ಗೆ ಹೊರಟಿತ್ತು. ಈ ವೇಳೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ತುರ್ತು ನಿರ್ಗಮನದ ದ್ವಾರ ತೆರೆಯಲು ಯತ್ನಿಸಿದ್ದ. ಅಲ್ಲದೇ ವಿಮಾನದ ಸಿಬ್ಬಂದಿ ಮೇಲೆ ಹಲ್ಲೆಗೂ ಮುಂದಾಗಿದ್ದ. ಪ್ರಯಾಣಿಕ ಟೊರೆಸ್‌ ಎಂಬಾತನನ್ನು ಬೋಸ್ಟನ್ ಲೋಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಇದನ್ನೂ ಓದಿ: 115 ವರ್ಷದ ಇತಿಹಾಸದಲ್ಲಿ ಸ್ವಿಸ್‌ ಬ್ಯಾಂಕ್‌ಗೆ ಭಾರೀ ನಷ್ಟ

    ವಿಮಾನದ ಲ್ಯಾಂಡಿಂಗ್‌ಗೆ 45 ನಿಮಿಷಗಳು ಇರುವ ಮುಂಚೆಯೇ, ವಿಮಾನದ ಸಿಬ್ಬಂದಿಗೆ ಕಾಕ್‌ಪಿಟ್‌ನಲ್ಲಿ ಎಚ್ಚರಿಕೆಯ ಶಬ್ದ ಕೇಳಿಬಂತು. ವಿಮಾನದ ಮೊದಲ ದರ್ಜೆ ಮತ್ತು ಕೋಚ್ ವಿಭಾಗಗಳ ನಡುವೆ ಇರುವ ಸ್ಟಾರ್‌ಬೋರ್ಡ್ ಬದಿಯ ಬಾಗಿಲನ್ನು ತೆಗೆಯಲು ಪ್ರಯಾಣಿಕ ಪ್ರಯತ್ನಿಸಿದ್ದನ್ನು ಗಗನಸಖಿ ಕಂಡಿದ್ದರು.

    ಈ ವಿಚಾರವನ್ನು ಸಿಬ್ಬಂದಿ ಫ್ಲೈಟ್ ಅಟೆಂಡೆಂಟ್ ಕ್ಯಾಪ್ಟನ್‌ಗೆ ತಿಳಿಸಿದ್ದಾರೆ. ನಂತರ ಟೊರೆಸ್‌ನನ್ನು ಪ್ರಶ್ನಿಸಿದಾಗ, ಸಿಬ್ಬಂದಿ ಮೇಲೆಯೇ ಅಪಾಯಕಾರಿ ಆಯುಧ ಬಳಸಿ ಹಲ್ಲೆಗೆ ಮುಂದಾಗಿದ್ದಾನೆ. ಆತನನ್ನು ಪೊಲೀಸರ ವಶಕ್ಕೆ ನೀಡಲಾಯಿತು. ನ್ಯಾಯಾಲಯವು ಮಾ.9ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಅಲ್ಲಿಯವರೆಗೆ ಪ್ರಯಾಣಿಕ ಟೊರೆಸ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ – 9 ಪೊಲೀಸರು ಸಾವು