Tag: US House

  • ಸಲಿಂಗ ವಿವಾಹಕ್ಕೆ ರಕ್ಷಣೆ – ಮಸೂದೆ ಅಂಗೀಕರಿಸಿದ ಯುಎಸ್‌ ಹೌಸ್‌

    ಸಲಿಂಗ ವಿವಾಹಕ್ಕೆ ರಕ್ಷಣೆ – ಮಸೂದೆ ಅಂಗೀಕರಿಸಿದ ಯುಎಸ್‌ ಹೌಸ್‌

    ವಾಷಿಂಗ್ಟನ್: ಸಲಿಂಗ ವಿವಾಹ ಮಾನ್ಯತೆಯನ್ನು ರಕ್ಷಿಸುವ ಮಸೂದೆಯನ್ನು ಯುಎಸ್‌ ಹೌಸ್‌ ರೆಪ್ರೆಸೆಂಟೇಟಿವ್ಸ್‌ ಅಂಗೀಕರಿಸಿದೆ.

    ರೆಸ್ಪೆಕ್ಟ್‌ ಫಾರ್‌ ಮ್ಯಾರೇಜ್‌ ಆ್ಯಕ್ಟ್ (ವಿವಾಹ‌ ಕಾಯ್ದೆಗೆ ಗೌರವ) ಶೀರ್ಷಿಕೆಯಡಿ ಪ್ರಸ್ತಾಪಿಸಲಾಗಿದೆ ಮಸೂದೆಗೆ ಯುಎಸ್‌ ಹೌಸ್‌ ಬಹುಮತದೊಂದಿಗೆ ಅಂಗೀಕಾರ ನೀಡಿದೆ. ಮಸೂದೆಗೆ 47 ರಿಪಬ್ಲಿಕನ್ನರು ಸಹ ಡೆಮಾಕ್ಟ್ರಾಟ್ಸ್‌ ಜೊತೆಗೆ ಒಪ್ಪಿಗೆ ಸೂಚಿಸಿದರು. ಇದನ್ನೂ ಓದಿ: ಬ್ರಿಟಿಷ್ ಪ್ರಧಾನಿ ಹುದ್ದೆಗೆ ಸುನಾಕ್ ಇನ್ನೂ ಹತ್ತಿರ – 4 ನೇ ಸುತ್ತಿನ ಮತದಾನದಲ್ಲೂ ಜಯ

    ಮಸೂದೆಯು ಈಗ ಮತಕ್ಕಾಗಿ ಸೆನೆಟ್‌ಗೆ ಹೋಗುತ್ತದೆ. 100 ಸದಸ್ಯರ ಸೆನೆಟ್‌ನಲ್ಲಿ ಡೆಮಾಕ್ರಾಟ್‌ಗಳು 50 ಸ್ಥಾನಗಳನ್ನು ಹೊಂದಿದ್ದಾರೆ. ಈ ಕಾನೂನು ಜಾರಿಗೆ 10 ರಿಪಬ್ಲಿಕನ್ ಮತಗಳು ಬೇಕಾಗುತ್ತದೆ.

    ಕಳೆದ ವಾರ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಗರ್ಭಪಾತ ಕ್ರಮವನ್ನು ರಕ್ಷಿಸಲು ಸದನವು ಎರಡು ಮಸೂದೆಗಳನ್ನು ಅಂಗೀಕರಿಸಿತು. ಇದನ್ನೂ ಓದಿ: ರೂಪಾಯಿ ಮೌಲ್ಯ ಪಾತಾಳಕ್ಕೆ – 1 ಡಾಲರ್ = 80.13 ರೂ.

    ತಮ್ಮ ಇಷ್ಟದಂತೆ ಬದುಕನ್ನು ರೂಪಿಸಿಕೊಳ್ಳಲು ವಿವಾಹವಾಗುವವರಿಗೆ ಸರ್ಕಾರ ಗೌರವ ಕೊಡುತ್ತದೆ. ಅವರ ವಿವಾಹವನ್ನೂ ಪರಿಗಣಿಸುತ್ತದೆ ಎಂದು ಮಸೂದೆ ಅಂಗೀಕಾರಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ರೆಪ್. ಜೆರ್ರಿ ನಾಡ್ಲರ್ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಷ್ಯಾದಿಂದ ಭಾರತ ಖರೀದಿಸುತ್ತಿರುವ S-400 ಕ್ಷಿಪಣಿಗೆ ಎದುರಾಗಿದ್ದ ಕಾಟ್ಸಾ ಭೀತಿ ದೂರ

    ರಷ್ಯಾದಿಂದ ಭಾರತ ಖರೀದಿಸುತ್ತಿರುವ S-400 ಕ್ಷಿಪಣಿಗೆ ಎದುರಾಗಿದ್ದ ಕಾಟ್ಸಾ ಭೀತಿ ದೂರ

    ವಾಷಿಂಗ್ಟನ್: ರಷ್ಯಾದಿಂದ ಎಸ್-400 ಕ್ಷಿಪಣಿ ಖರೀದಿಸಿದ್ದಕ್ಕೆ ಪ್ರತಿಯಾಗಿ ಕಾಟ್ಸಾ ಕಾಯ್ದೆಯಡಿ ಭಾರತದ ಮೇಲೆ ಯಾವುದೇ ದಿಗ್ಬಂಧನ ವಿಧಿಸದಿರುವುದಕ್ಕೆ ಅಮೆರಿಕ ಪ್ರತಿನಿಧಿಗಳ ಸಭೆ ಒಪ್ಪಿಗೆ ಸೂಚಿಸಿದೆ.

    ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಇಂಡೋ ಅಮೆರಿಕನ್ ಸದಸ್ಯ ರೋ ಖನ್ನಾ ಅಮೆರಿಕ ಪ್ರತಿನಿಧಿಗಳ ಸಭೆಯಲ್ಲಿ ಮಂಡಿಸಿದ್ರು. ಇದಕ್ಕೆ ಮೇಜುಕುಟ್ಟುವ ಮೂಲಕ ಅಮೆರಿಕಾದ ಕೆಳಸಭೆ ಅನುಮೋದನೆ ನೀಡಿದೆ. 2014ರಲ್ಲಿ ಕ್ರಿಮಿಯಾವನ್ನು ರಷ್ಯಾ ಆಕ್ರಮಿಸಿದ್ದಕ್ಕೆ ಮತ್ತು 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಮೂಗು ತೂರಿಸಿದ್ದಕ್ಕೆ ಪ್ರತಿಯಾಗಿ 2017ರಲ್ಲಿ ಅಮೆರಿಕ ಕಾಟ್ಸಾ ಕಾಯ್ದೆಯನ್ನು ಜಾರಿ ಮಾಡಿತ್ತು. ರಷ್ಯಾದ ಸೇನೆ ಮತ್ತು ಗೂಢಚರ್ಯೆ ಪಡೆಗಳ ಜೊತೆ ವ್ಯವಹಾರ ಹೊಂದಿರುವ ದೇಶಗಳ ಮೇಲೆ ಶಿಕ್ಷಾತ್ಮಕ ದಿಗ್ಬಂಧನ ವಿಧಿಸುವುದು ಕಾಟ್ಸಾ ಕಾಯ್ದೆಯ ಉದ್ದೇಶವಾಗಿದೆ. ಇದನ್ನೂ ಓದಿ: ಜ್ಞಾನವಾಪಿ ವಿವಾದ – ಹಿಂದೂಗಳಿಗೆ ಪೂಜೆ ಮಾಡಲು ಅನುಮತಿ ನೀಡುವಂತೆ ಕೋರಿ ಸುಪ್ರೀಂಗೆ ಅರ್ಜಿ

    ಈ ತಿದ್ದುಪಡಿ ಕಾಯ್ದೆಯು ಚೀನಾದಂತಹ ಆಕ್ರಮಣಕಾರರನ್ನು ತಡೆಯಲು ಸಹಾಯ ಮಾಡುವ ನಿಟ್ಟಿನಲ್ಲಿ ವಿನಾಯಿತಿಯನ್ನು ಭಾರತಕ್ಕೆ ಒದಗಿಸಲು ಬೈಡನ್ ಆಡಳಿತ ಅನುವು ಮಾಡಿಕೊಟ್ಟಿದೆ. ಚೀನಾದಂತಹ ಆಕ್ರಮಣಕಾರರನ್ನು ತಡೆಯಲು ನೆರವಾಗಲು ರಷ್ಯಾದಿಂದ ಭಾರತ ಖರೀದಿಸುತ್ತಿರುವ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಕಾಟ್ಸಾ ಕಾಯ್ದೆಯಿಂದ ವಿನಾಯಿತಿ ನೀಡುವ ತಿದ್ದುಪಡಿ ಮಸೂದೆಗೆ ಅಮೆರಿಕದ ಪ್ರತಿನಿಧಿ ಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರ ಸಿಕ್ಕಿದೆ. ಇದನ್ನೂ ಓದಿ: ಭಗತ್‌ ಸಿಂಗ್‌ ಒಬ್ಬ ಭಯೋತ್ಪಾದಕ: ಶಿರೋಮಣಿ ಅಕಾಲಿ ದಳ ಸಂಸದ ವಿವಾದಾತ್ಮಕ ಹೇಳಿಕೆ

    ಅಮೆರಿಕ ಮಾಡಿರುವ ತಿದ್ದುಪಡಿಯು ಅತ್ಯಂತ ಮಹತ್ವದ್ದಾಗಿದ್ದು, ಇದರಿಂದ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಬಹುದಾಗಿದೆ. ಅಕ್ಟೋಬರ್ 2018ರಲ್ಲಿ ಎಸ್-400 ವಾಯು ರಕ್ಷಣಾ ಕ್ಷಿಪಣಿ ಐದು ಘಟಕಗಳನ್ನು ಖರೀದಿಸಲು ಭಾರತ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಬಳಿಕ ಭಾರತದ ಮೇಲೆ ಅಮೆರಿಕ ಕಾಟ್ಸಾ ಕಾಯ್ದೆಯ ಮೂಲಕ ಕ್ರಮ ಕೈಗೊಳ್ಳುವ ಸಾಧ್ಯತೆ ಹೆಚ್ಚಿತ್ತು.

    Live Tv
    [brid partner=56869869 player=32851 video=960834 autoplay=true]